15.02.26    Avyakt Bapdada     Kannada Murli    22.02.2009     Om Shanti     Madhuban


“ಜನ್ಮದಿನದಂದು ತೀವ್ರವಾಗಿ ಹೋಗಿ ಮೊದಲನೇ (ಫಾಸ್ಟ್ ಸೊ ಫಸ್ಟ್) ಡಿವಿಜನ್ನಲ್ಲಿ ಬರುವಂತಹ ಉಡೊಗೊರೆ ತೆಗೆದುಕೊಳ್ಳಲು ಪ್ರತಿ ಶ್ವಾಸ, ಸಂಕಲ್ಪ ಸಮರ್ಥವಾಗಿರಲಿ, ಹೃದಯ ವಿಶಾಲ ಮತ್ತು ಸತ್ಯವಾಗಿರಲಿ ಆಗ ಪ್ರತಿಯೊಂದು ಅವಶ್ಯಕತೆಗಳು ಪೂರ್ಣ ಆಗುತ್ತದೆ”


ಈ ದಿನ ಜೀರೋ ತಂದೆ ತನ್ನ ಹೀರೋ ಮಕ್ಕಳ ಜೊತೆ ಮಿಲನ ಮಾಡಲು ಬಂದಿದ್ದಾರೆ. ಇಂದಿನ ದಿನ ತಾವೆಲ್ಲರೂ ತಂದೆಯ ಜೊತೆ ತಂದೆಯ ಮತ್ತು ತನ್ನ ಜನ್ಮ ದಿನವನ್ನು ಆಚರಿಸಲು ಬಂದಿದ್ದೀರಿ. ಬಾಪ್ದಾದಾ ಸರ್ವ ಮಕ್ಕಳಿಗೆ ಭಲೆ ಸನ್ಮುಖದಲ್ಲಿ ಕುಳಿತಿರಬಹುದು ಅಥವಾ ದೂರದಲ್ಲಿ ಕುಳಿತು ಹೃದಯಕ್ಕೆ ಸಮೀಪ ಕುಳಿತಿದ್ದಾರೆ, ನಾಲ್ಕಾರೂ ಕಡೆ ಇರುವಂತಹ ಮಕ್ಕಳಿಗೆ ಸರ್ವ ಸಂಬಂಧದ ಶುಭಾಶಯಗಳನ್ನು ಕೊಡುತ್ತಿದ್ದಾರೆ. ಅದರಲ್ಲಿಯೂ ವಿಶೇಷ ಮೂರು ಶುಭಾಶಯಗಳು ತಂದೆ, ಶಿಕ್ಷಕ ಮತ್ತು ಸದ್ಗುರುವಿನ ರೂಪದ ಮೂರು ಅಭಿನಂದನೆಗಳು, ಪಾಲನೆ, ಶಿಕ್ಷಣ ಮತ್ತು ವರದಾನಗಳನ್ನು ನಾಲ್ಕಾರು ಕಡೆ ಇರುವಂತಹ ಮಕ್ಕಳಿಗೆ ವಿಶೇಷವಾಗಿ ನೀಡುತ್ತಿದ್ದಾರೆ. ಸರ್ವ ಮಕ್ಕಳಿಗೆ ಶುಭಾಶಯಗಳು, ಶುಭಾಶಯಗಳು, ಶುಭಾಶಯಗಳು.

ಇಂದು ಈ ವಿಶೇಷ ಜನ್ಮ ದಿನವನ್ನು ಭಕ್ತರೂ ಆಚರಿಸುತ್ತಾರೆ ಆದರೆ ತಾವು ಮಕ್ಕಳು ತಿಳಿದುಕೊಂಡಿದ್ದೀರಿ, ಈ ಜನ್ಮ ದಿನ ತಂದೆ ಮತ್ತು ಮಕ್ಕಳ ಅವಿನಾಶಿ ಸ್ನೇಹದ ಜನ್ಮ ದಿನ. ಆದಿಯಿಂದ ಹಿಡಿದು ತಂದೆ ಮತ್ತು ಮಕ್ಕಳು ಜೊತೆಯಲ್ಲಿ ಇದ್ದಾರೆ, ವಿಶ್ವ ಪರಿವರ್ತನೆಯ ಕಾರ್ಯದಲ್ಲಿಯೂ ತಂದೆ ಮಕ್ಕಳ ಜೊತೆ ಇದ್ದಾರೆ ಏಕೆಂದರೆ ಬಹಳ-ಬಹಳ ತಂದೆ ಹಾಗೂ ಮಕ್ಕಳ ಸ್ನೇಹ ಇದೆ. ಈಗಲೂ ಸಹ ಜೊತೆಯಲ್ಲಿ ಇದ್ದಾರೆ ಮತ್ತು ತಮ್ಮ ಮನೆಗೆ ಹೋಗಬೇಕಾದರೂ ಜೊತೆಯಲ್ಲಿಯೇ ಹೋಗಬೇಕು. ತಂದೆ ಮಕ್ಕಳ ವಿನಃ ಹೋಗಲು ಸಾಧ್ಯವಿಲ್ಲ ಮತ್ತು ಮಕ್ಕಳು ತಂದೆಯ ವಿನಃ ಹೋಗಲು ಸಾಧ್ಯವಿಲ್ಲ ಏಕೆಂದರೆ ಹೃದಯದ ಸ್ನೇಹ ಜೊತೆ ಇದೆ. ಮನೆಯ ನಂತರ ರಾಜ್ಯದಲ್ಲಿ ಬಂದಾಗಲೂ ಬ್ರಹ್ಮಾ ತಂದೆಯ ಜೊತೆ-ಜೊತೆ ರಾಜ್ಯವನ್ನು ಮಾಡುತ್ತೀರಿ. ಅಂದಾಗ ಸರ್ವ ಜನ್ಮಗಳಿಗಿಂತ ಈ ಜನ್ಮ ಎಲ್ಲದಕ್ಕಿಂತಲೂ ಭಿನ್ನ ಹಾಗೂ ಪ್ರಿಯವಾಗಿದೆ. ಈ ಜನ್ಮಕ್ಕೆ ಯಾವ ಬೆಲೆ ಇದೆ ಅದು ಇಡೀ ಕಲ್ಪದಲ್ಲಿ 84 ಜನ್ಮದಲ್ಲಿ ಇರುವುದಿಲ್ಲ. ಇಂತಹ ಸ್ನೇಹಿ ಮತ್ತು ಜೊತೆಗಾರ ವಿಶೇಷ ಇದು ವಜ್ರ ಸಮಾನ ಜನ್ಮ ಆಗಿದೆ. ತಾವೆಲ್ಲರೂ ತಮ್ಮ ಜನ್ಮ ದಿನವನ್ನು ಆಚರಿಸಲು ಬಂದಿದ್ದೀರೋ ಅಥವಾ ತಂದೆಯ ಜನ್ಮ ದಿನವನ್ನು ಆಚರಿಸಲು ಬಂದಿದ್ದೀರೋ! ತಂದೆಯು ಮಕ್ಕಳ ಜನ್ಮ ದಿನವನ್ನು ಆಚರಿಸಲು ಬಂದಿದ್ದಾರೆ ಮತ್ತು ಮಕ್ಕಳು ತಂದೆಯ ಜನ್ಮ ದಿನವನ್ನು ಆಚರಿಸಲು ಬಂದಿದ್ದಾರೆ. ಎಲ್ಲಾ ಕಡೆಯ ಭಕ್ತರು ಶಿವ ಜಯಂತಿ ಅಥವಾ ಶಿವರಾತ್ರಿ ಎಂದು ಹೇಳಿ ಆಚರಿಸುತ್ತಾರೆ, ಬಹಳ ಪ್ರೀತಿಯಿಂದ ಆಚರಿಸುತ್ತಾರೆ, ಬಾಪ್ದಾದಾರವರು ಭಕ್ತರನ್ನು ನೋಡಿ ಭಕ್ತರಿಗೂ ಭಕ್ತಿಯ ಫಲವನ್ನು ಕೊಡುತ್ತಾರೆ. ಆದರೆ ನೀವು ಆಚರಿಸುವುದು ಮತ್ತು ಭಕ್ತರು ಆಚರಿಸುವುದರಲ್ಲಿ ವ್ಯತ್ಯಾಸ ಇದೆ. ಅವರು ರಾತ್ರಿಯನ್ನು ಆಚರಿಸುತ್ತಾರೆ ಮತ್ತು ತಾವು ಅಮೃತವೇಳೆಯನ್ನು ಆಚರಿಸುತ್ತೀರಿ. ಅಮೃತವೇಳೆ ಶ್ರೇಷ್ಠ ವೇಳೆಯಾಗಿದೆ. ಅಮೃತವೇಳೆಯೇ ಬಾಪ್ದಾದಾ ಪ್ರತಿಯೊಬ್ಬ ಮಗುವಿಗೆ ವರದಾನಗಳಿಂದ ಜೋಳಿಗೆಯನ್ನು ತುಂಬುತ್ತಾರೆ. ಎಲ್ಲರ ಜೋಳಿಗೆಯು ವರದಾನಗಳಿಂದ ತುಂಬಲ್ಪಟ್ಟಿದೆಯಲ್ಲವೇ. ಪ್ರತಿದಿನ ವರದಾನ ವರದಾತ ತಂದೆಯಿಂದ ಸಿಕ್ಕೇ ಸಿಗುತ್ತದೆ. ತಾವು ಒಬ್ಬೊಬ್ಬ ಮಕ್ಕಳಿಗೆ ಎಷ್ಟು ವರದಾನಗಳು ಬಾಪ್ದಾದಾರವರ ಮೂಲಕ ಸಿಕ್ಕಿವೆ ಆ ವರದಾನಗಳಿಂದ ಜೋಳಿಗೆಯೂ ತುಂಬಲ್ಪಟ್ಟಿದೆಯಲ್ಲವೇ. ಅಂದಾಗ ಎಲ್ಲರೂ ಬಹಳ ಒಲವು-ಉತ್ಸಾಹದಿಂದ ತಲುಪಿದ್ದೀರಿ. ಬಾಪ್ದಾದಾರವರೂ ಮಕ್ಕಳನ್ನು ನೋಡಿ ಬಹಳ-ಬಹಳ ಖುಷಿ ಪಡುತ್ತಾರೆ ಮತ್ತು ಗೀತೆಯನ್ನು ಹಾಡುತ್ತಿರುತ್ತಾರೆ ವಾಹ್! ಮಕ್ಕಳೇ ವಾಹ್! ಮಕ್ಕಳೂ ಸಹ ಹೇಳುತ್ತಾರೆ - ವಾಹ್! ಬಾಬಾ ವಾಹ್! ಮತ್ತು ತಂದೆಯು ಹೇಳುತ್ತಾರೆ ವಾಹ್! ಮಕ್ಕಳೇ ವಾಹ್! ಏಕೆಂದರೆ ಯಾರೆಲ್ಲಾ ತಂದೆಯ ಮಕ್ಕಳಾಗಿದ್ದಾರೆ ಅವರೆಲ್ಲರೂ ಕೋಟಿಯಲ್ಲಿ ಕೆಲವು ಆತ್ಮಗಳಾಗಿದ್ದಾರೆ, ವಿಶ್ವದಲ್ಲಿ ಎಷ್ಟು ಕೋಟಿ ಆತ್ಮರಿದ್ದಾರೆ ಆದರೆ ಅವರಲ್ಲಿ ತಾವು ಮಕ್ಕಳಿಗೆ ತಂದೆ ಲಕ್ಕಿ (ಅದೃಷ್ಟವಂತರು) ಹಾಗೂ ಲವಲೀ (ಪ್ರಿಯವಾದ) ಮಕ್ಕಳು ಎಂದು ಹೇಳುತ್ತಾರೆ. ಆ ಕೋಟಿಯಲ್ಲೂ ಕೆಲವರು ತಾವು ಮಕ್ಕಳಾಗಿದ್ದೀರಿ. ನಶೆ ಇದೆಯೇ? ನಾವು ಕಲ್ಪ-ಕಲ್ಪದ ಕೋಟಿಯಲ್ಲಿ ಕೆಲವು ಮಕ್ಕಳಾಗಿದ್ದೇವೆ, ಎಷ್ಟು ದೊಡ್ಡ-ದೊಡ್ಡ ಪದವಿವುಳ್ಳ ಆತ್ಮಗಳು ವರ್ತಮಾನ ಸಮಯದಲ್ಲೂ ಇದ್ದಾರೆ ಆದರೆ ತಂದೆಯನ್ನು ಅರಿತುಕೊಂಡು ತಂದೆಯ ಜನ್ಮ ದಿನವನ್ನು ಆಚರಿಸುವಂತಹವರು ನಾಲ್ಕಾರೂ ಕಡೆಯ ಅರಿತುಕೊಳ್ಳುವಂತಹ ಮಕ್ಕಳು ಕೋಟಿಯಲ್ಲೂ ಕೆಲವರಿದ್ದೀರಿ. ಈ ಖುಷಿ ಇದೆಯೇ? ನಾವು ಕೋಟಿಯಲ್ಲೂ ಕೆಲವರಾಗಿದ್ದೇವೆ ನಶೆ ಇದೆಯೇ! ಕೈ ಎತ್ತಿರಿ. ಅವಿನಾಶಿ ನಶೆ ಇದೆಯಲ್ಲವೇ! ಆಗಾಗ ನಶೆವುಳ್ಳವರಲ್ಲ ತಾನೇ. ಸದಾ ಇದೆ ಮತ್ತು ಸದಾ ಇರುತ್ತದೆ. ಮಾಯೆ ಪೇಪರ್ ಅಂತೂ ತೆಗೆದುಕೊಳ್ಳುತ್ತದೆ. ಅನುಭವ ಇದೆಯಲ್ಲವೇ. ಮಯೆಗೂ ಪರಮಾತ್ಮನ ಮಕ್ಕಳ ಜೊತೆ ಬಹಳ ಪ್ರೀತಿ ಇದೆ. ಆದರೆ ಮಕ್ಕಳು ಮಾಯೆಗೆ ಪರಮಾತ್ಮನ ಮಕ್ಕಳ ಜೊತೆ ಆದಿಯಿಂದ ಇದುವರೆಗೂ ಸಂಬಂಧವಿದೆ ಎಂದು ತಿಳಿದುಕೊಂಡಿದ್ದಾರೆ. ಮಾಯೆ ಮತ್ತು ಪರಮಾತ್ಮನ ಮಕ್ಕಳು ಇಬ್ಬರಿಗೂ ಪರಸ್ಪರ ಸಂಬಂಧವಿದೆ. ಮಾಯೆಯ ಕೆಲಸವಾಗಿದೆ ಬರುವುದು ಮತ್ತು ತಾವು ಮಕ್ಕಳ ಕೆಲಸ ಏನಾಗಿದೆ? ಮಾಯೆಯನ್ನು ದೂರದಿಂದಲೇ ಓಡಿಸುವುದು. ಬರಲು ಬಿಡಬೇಡಿ ಅಥವಾ ಬರಲು ಬಿಡುತ್ತೀರಾ? ಇಲ್ಲವೇ. ದೂರದಿಂದಲೇ ಓಡಿಸಿರಿ. ಬರಲು ಬಿಡುತ್ತೀರಿ ಅದಕ್ಕೂ ಬರುವಂತಹ ಅಭ್ಯಾಸ ಆಗಿ ಬಿಡುತ್ತದೆ, ಅದೂ ತಿಳಿದುಕೊಳ್ಳುತ್ತದೆ, ಬರಲು ಬಿಡುತ್ತಾರೆ ಹೋಗೋಣ ಎಂದು. ಆದರೆ ತಂದೆಯು ನೋಡುತ್ತಾರೆ, ಕೆಲವು ಮಕ್ಕಳು ಮಾಯೆಗೆ ಬರಲು ಬಿಡುತ್ತಾರೆ ಹಾಗೂ ಸತ್ಕಾರವನ್ನು ಮಾಡುತ್ತಾರೆ, ಟೀ, ನೀರನ್ನು ಕುಡಿಸುತ್ತಾರೆ, ಇದು ಗೊತ್ತಿದೆಯೇ? ಯಾವ ಸತ್ಕಾರ ಮಾಡುತ್ತೀರೆಂದು? ಮಾಯೆಯ ಪ್ರಭಾವದಲ್ಲಿ ಬಂದು ಈಗಂತೂ ಟೂ ಲೇಟ್ ಬೋರ್ಡ್ ಹಾಕಿಲ್ಲ, ಈಗಂತೂ ಬಹಳ ಸಮಯವಿದೆ, ಪುರುಷಾರ್ಥ ಮಾಡುತ್ತಿದ್ದೇವೆ, ತಲುಪಿ ಬಿಡುತ್ತೇವೆ ಎಂದು ಯೋಚಿಸುತ್ತಾರೆ. ಮಾಯೆಯು ತಿಳಿದುಕೊಳ್ಳುತ್ತದೆ, ಒಂದು ಬರಲು ಅವಕಾಶ ಕೊಟ್ಟರು, ಇವರು ನನಗೆ ಜೊತೆ ಕೊಡುತ್ತಿದ್ದಾರೆ, ಸತ್ಕಾರವನ್ನೂ ಸಹ ಮಾಡುತ್ತಿದ್ದಾರೆ ಅಂದಮೇಲೆ ಯಾರು ಮಾಯೆಯನ್ನು ಗುರುತಿಸಿ ಬಿಡುತ್ತಾರೆ ಮತ್ತೆ ಕೆಲವು ಮಕ್ಕಳು ಗುರಿತಿಸುವುದರಲ್ಲಿ ತಪ್ಪು ಮಾಡುತ್ತಾರೆ. ಮಾಯೆಯ ಮತವಾಗಿದೆಯೋ ಅಥವಾ ತಂದೆಯ ಮತವೋ ಎಂದು ಗುರುತಿಸದೆ ಇರುವ ಕಾರಣ ಮಾಯೆಯ ಪ್ರಭಾವದಲ್ಲಿ ಬಂದು ಬಿಡುತ್ತಾರೆ. ಆದರೆ ಬಾಪ್ದಾದಾ ತನ್ನ ಅದೃಷ್ಟ ಮಹಾವೀರ ವಿಜಯಿ ಮಕ್ಕಳಿಗೆ ಮಾಯೆಯನ್ನು ಬರಲು ಬಿಡಬೇಡಿ ಎಂದು ಹೇಳುತ್ತಾರೆ, ಈಗ ಬರುವುದು ಮತ್ತು ಪುನಃ ಓಡಿಸುತ್ತೀರಿ, ಇದರಲ್ಲಿ ಸಮಯವನ್ನು ತೊಡಗಿಸಬೇಡಿ ಏಕೆಂದರೆ ಸಮಯ ಕಡಿಮೆ ಇದೆ ಮತ್ತು ತಮ್ಮ ವಾಯಿದೆ ಆಗಿದೆ - ವಿಶ್ವ ಪರಿವರ್ತಕರಾಗಿ, ವಿಶ್ವ ಸೇವಕರಾಗಿ ವಿಶ್ವದ ಆತ್ಮರಿಗೆ ತಂದೆಯ ಪರಿಚಯ ಕೊಟ್ಟು ಮುಕ್ತಿಯ ಆಸ್ತಿಯನ್ನು ಕೊಡಿಸುತ್ತೇವೆ, ಈ ಕಾರ್ಯ ಇನ್ನೂ ಸಮಾಪ್ತಿ ಆಗಿಲ್ಲ. ಆ ಕಾರ್ಯವನ್ನು ಸಮಾಪ್ತಿ ಮಾಡುವುದರಲ್ಲಿ ಸಮಯವನ್ನು ತೊಡಗಿಸಿ. ಒಂದುವೇಳೆ ಮಾಯೆಯನ್ನು ಓಡಿಸುವುದರಲ್ಲಿ ಸಮಯವನ್ನು ತೊಡಗಿಸಿದ್ದೇ ಆದರೆ ವಿಶ್ವ ಪರಿವರ್ತಕರ ಯಾವ ವಾಯಿದೆ ಆಗಿದೆ ಅದನ್ನು ಹೇಗೆ ಪೂರ್ಣ ಮಾಡುತ್ತೀರಿ! ತಂದೆಯ ಜೊತೆಗಾರರಾಗಿದ್ದೀರಲ್ಲವೇ, ಜನ್ಮತಃ ವಾಯಿದೆಯನ್ನು ಮಾಡಿದ್ದೀರಿ, ಜೊತೆಯಲ್ಲಿಯೇ ಇರುತ್ತೇವೆ, ಈಗಲೂ ಜೊತೆಯಲ್ಲಿಯೇ ಇರುತ್ತೇವೆ, ಜೊತೆಯಲ್ಲಿಯೇ ಹೋಗುತ್ತೇವೆ..... ಆದ್ದರಿಂದ ಈಗ ತಂದೆಯಿಂದ ಯಾವ ಶಕ್ತಿಗಳು ಸಿಕ್ಕಿವೆ ಆ ಶಕ್ತಿಗಳ ಆಧಾರದಿಂದ ಮಾಯೆಯನ್ನು ದೂರದಿಂದಲೇ ಓಡಿಸಿ. ಇದರಲ್ಲಿ ಸಮಯವನ್ನು ಕೊಡಬೇಡಿ. ನೋಡಿ 70 ವರ್ಷ ಪುರುಷಾರ್ಥ ಮಾಡುತ್ತಿದ್ದೀರಿ, ಮಾಯೆ ಬರುವುದು ಮತ್ತು ಓಡಿಸುವುದು, ಈಗ ಈ ಸಮಯ ಅಲ್ಲ. ಏಕೆಂದರೆ ನಿಮಗೆ ಗೊತ್ತಿದೆ, ಜ್ಞಾನಪೂರ್ಣರಂತೂ ಆಗಿದ್ದೀರಲ್ಲವೇ. ಇಡೀ ಡ್ರಾಮಾದ ಜ್ಞಾನವಿದೆ ಆದ್ದರಿಂದ ಜ್ಞಾನ ಪೂರ್ಣ ಮಕ್ಕಳು ಈಗ ಸಮಯವನ್ನು ಯಾವುದರಲ್ಲಿ ತೊಡಗಿಸಬೇಕು? ಎರಡು ಖಜಾನೆಗಳನ್ನು ಬಹಳ ಜಮಾ ಮಾಡಿಕೊಳ್ಳಬೇಕು, ಆ ಎರಡು ಖಜಾನೆಗಳು ಯಾವುದು? ಒಂದು ಸಂಕಲ್ಪ ಇನ್ನೊಂದು ಸಮಯ. ಎರಡು ಖಜಾನೆ ಮಹಾನ್ ಆಗಿವೆ. ತಾವೆಲ್ಲರೂ ತಿಳಿದಿದ್ದೀರಿ ಏಕೆಂದರೆ ಜ್ಞಾನ ಪೂರ್ಣ ತಂದೆಯ ಜ್ಞಾನ ಪೂರ್ಣ ಮಕ್ಕಳಾಗಿದ್ದೀರಿ. ಮಾಸ್ಟರ್ ಜ್ಞಾನ ಪೂರ್ಣರು (ನಾಲೆಜ್ಫುಲ್) ಆಗಿದ್ದೀರಲ್ಲವೇ? ಕೇವಲ ಕೇಳುವುದಲ್ಲ, ಕೆಲವರು ಕೇವಲ ಕೇಳುತ್ತಾರೆ, ಜ್ಞಾನ ಪೂರ್ಣರಲ್ಲ. ತಾವು ಯಾರಾಗಿದ್ದೀರಿ? ಜ್ಞಾನ ಪೂರ್ಣ ಆಗಿದ್ದೀರಾ? ಕೈ ಎತ್ತಿ. ಜ್ಞಾನ ಪೂರ್ಣರಾಗಿದ್ದೀರೋ ಅಥವಾ ನಾಲೆಜ್ಪುಲ್ ಆಗಿದ್ದೀರೋ? ಎಲ್ಲರೂ ಜ್ಞಾನ ಪೂರ್ಣ ಆಗಿದ್ದೀರಾ? ಕೈ ಎತ್ತಿದ್ದೀರಿ ಒಳ್ಳೆಯದು. ವಾಹ್! ಪೂರ್ಣ ಜ್ಞಾನ ಬಂದು ಬಿಟ್ಟಿದೆ ಮಾಯೆಯನ್ನು ಓಡಿಸುವ ಜ್ಞಾನ ಇದೆಯೇ? ಹಿಂದೆ ಇರುವವರಿಗೆ ಇದೆಯೇ? ಒಳ್ಳೆಯದು ಬಾವುಟವನ್ನು ಅಲುಗಾಡಿಸುತ್ತಿದ್ದಾರೆ, ಮಾತೆಯರಿಗೆ ಇದೆಯೇ? ಮಾತೆಯರು ಜ್ಞಾನ ಪೂರ್ಣರಲ್ಲವೇ? ಡಬಲ್ ವಿದೇಶಿಗಳು ಬಾವುಟವನ್ನು ಅಲುಗಾಡಿಸುತ್ತಿದ್ದಾರೆ. ಒಳ್ಳೆಯದು. ನೋಡಿ ಎಷ್ಟೊಂದು ಒಳ್ಳೆಯ ದೃಶ್ಯವಾಗಿದೆ, ಬಾವುಟಗಳಂತೂ ಚೆನ್ನಾಗಿ ಕಾಣಿಸುತ್ತಿವೆ. ಜ್ಞಾನಪೂರ್ಣರು ಅರ್ಥಾತ್ ಮಾಯೆಯನ್ನು ದೂರದಿಂದಲೇ ಓಡಿಸುವಂತಹವರು. ಅಂದಾಗ ಈ ರೀತಿ ಇದ್ದೀರಾ? ಏಕೆಂದರೆ ಬಾಪ್ದಾದಾರವರು ಮೊದಲೇ ತಿಳಿಸಿದ್ದಾರೆ ಖಜಾನೆಗಳನ್ನು ಜಮಾ ಮಾಡಿಕೊಳ್ಳುವ ಬ್ಯಾಂಕ್ ಕೇವಲ ಈ ಸಮಯ ಸಂಗಮಯುಗವಾಗಿದೆ. ನಂತರ ಇಡೀ ಕಲ್ಪ ಜಮಾ ಮಾಡಿಕೊಳ್ಳುವ ಬ್ಯಾಂಕ್ ಸಿಗುವುದಿಲ್ಲ. ಯಾರು ಈಗ ಜಮಾ ಮಾಡಿಕೊಂಡಿದ್ದಾರೆ ಅದು ಕೆಲಸದಲ್ಲಿ ಉಪಯೋಗ ಆಗುತ್ತದೆ. ಆದರೆ ಜಮಾ ಮಾಡಿಕೊಳ್ಳುವ ಬ್ಯಾಂಕ್ ಈಗ ಸಂಗಮಯುಗದಲ್ಲಿ ತೆರೆಯುತ್ತದೆ, ಆದ್ದರಿಂದ ನೀವು ಏನು ಹೇಳುತ್ತೀರಿ? ಎಲ್ಲರಿಗೂ ಸಂದೇಶದಲ್ಲಿ ತಿಳಿಸುತ್ತೀರಲ್ಲವೇ? ಈಗಿಲ್ಲದಿದ್ದರೆ ಮತ್ತೆಂದಿಗೂ ಇಲ್ಲ. ಇದು ತಮ್ಮೆಲ್ಲರಿಗೂ ನೆನಪಿದೆಯಲ್ಲವೇ! ಈಗಿಲ್ಲದಿದ್ದರೆ ಮತ್ತೆಂದೂ ಇಲ್ಲ. ಇದು ಸದಾ ನೆನಪಿರುತ್ತದೆಯೇ? ಏಕೆಂದರೆ ಸಂಗಮಯುಗದ ಜನ್ಮ ಎಲ್ಲದಕ್ಕಿಂತಲೂ ಚಿಕ್ಕದು ಆದರೆ ಅಮೂಲ್ಯ ಜನ್ಮ. ಈ ಜನ್ಮದ ಮೌಲ್ಯ ಇಡೀ ಕಲ್ಪ ನಡೆಯುತ್ತದೆ. ಚೆಕ್ ಮಾಡಿಕೊಳ್ಳುತ್ತೀರಾ? ನಮ್ಮ ಜಮಾದ ಖಾತೆ ಎಷ್ಟಿದೆ? ಎಷ್ಟು ಬಯಸುತ್ತೀರೋ ಅಷ್ಟು ಜಮಾ ಇದೆಯೇ? ಏಕೆಂದರೆ ಬಾಪ್ದಾದಾರವರು ಮೊದಲೇ ತಿಳಿಸಿದ್ದಾರೆ, ಈಗ ನಡೆಯುವಂತಹ ಸಮಯ ಸಮಾಪ್ತಿ ಆಗಿದೆ. ಹಾರುವ ಸಮಯವಾಗಿದೆ. ಪುರುಷಾರ್ಥದ ಸಮಯ ಪೂರ್ತಿ ಆಗಿದೆ, ಈಗ ತೀವ್ರ ಪುರುಷಾರ್ಥದ ಸಮಯವಾಗಿದೆ, ಅದೂ ಸ್ವಲ್ಪವೇ ಇದೆ. ಆದ್ದರಿಂದ ಡಬಲ್ ವಿದೇಶಿಗಳಿಗೆ ಟೈಟಲ್ ಕೊಟ್ಟಿದ್ದಾರೆ ಡಬಲ್ ತೀವ್ರ ಪುರುಷಾರ್ಥಿ. ಹೇಳಿರಿ ಡಬಲ್ ತೀವ್ರ ಪುರುಷಾರ್ಥಿ ಆಗಿದ್ದೀರಲ್ಲವೇ, ಕೈ ಎತ್ತಿ, ಡಬಲ್ ತೀವ್ರ ಪುರುಷಾರ್ಥಿ ಪಾಸ್ ಆಗಿದ್ದೀರಿ, ಒಳ್ಳೆಯದು. ಬಾಪ್ದಾದಾರವರಿಗೆ ಜನ್ಮದ ಶುಭಾಶಯದ ಜೊತೆ ತಮಗೆ ಅಭಿನಂದನೆಗಳನ್ನು ನೀಡುತ್ತಾರೆ, ಪದಮಾ ಪದಮಾಗುಣ ಅಭಿನಂದನೆಗಳು, ಅಭಿನಂದನೆಗಳು, ಅಭಿನಂದನೆಗಳು.

ಬಾಪ್ದಾದಾರವರು ನೋಡಿದ್ದಾರೆ - ಬಾಪ್ದಾದಾ ಯಾವ ಹೋಂವರ್ಕ್ ಕೊಟ್ಟಿದ್ದರು ಓ.ಕೆ. ಅದರ ಬಗ್ಗೆ ಕೆಲವು ಮಕ್ಕಳು ಅಟೆನ್ಷನ್ ಕೊಟ್ಟಿದ್ದಾರೆ ಆದರೆ 100 ಅಂಕೆಗಳು ಬಹಳ ಕೆಲವರಿಗೆ ಮಾತ್ರ. 50%ನವರು ಹೆಚ್ಚು ಇದ್ದಾರೆ. ಆದರೆ ಬಾಪ್ದಾದಾರವರು ಇದೇ ಇಷ್ಟ ಪಡುತ್ತಾರೆ ಏನು ಇಷ್ಟಪಡುತ್ತಾರೆ ಎಂದು ತಿಳಿಸಲೇ? ಬಾಪ್ದಾದಾರವರಿಗೆ ಪ್ರತಿಯೊಂದು ಆಶಾ ದೀಪಗಳು ಆಸೆಗಳನ್ನು ಸಂಪನ್ನ ಮಾಡುವ ಮಹಾವೀರ ಮಕ್ಕಳ ಪ್ರತಿ ತಂದೆಯ ಆಸೆ ಆಗಿದೆ ಸಮಯದನುಸಾರ ಈಗಿನಿಂದ ಬಹಳ ಕಾಲದ ಚಾರ್ಟ್ ತೀವ್ರ ಪುರುಷಾರ್ಥದ ಜಮಾ ಮಾಡಿಕೊಂಡಿಲ್ಲವೆಂದರೆ ಮೂರು ಶಬ್ದಗಳನ್ನು ಸಮಯ ಪ್ರತಿ ಸಮಯ ನೆನಪು ತರಿಸಿದ್ದಾರೆ. ಒಂದು ಅಚಾನಕ್ ಎರಡನೆಯದು ಎವರ್ರೆಡಿ ಮತ್ತು ಮೂರನೆಯದು ಬಹಳ ಕಾಲದ ಜಮಾದ ಖಾತೆ ಏಕೆಂದರೆ ತಮ್ಮ ರಾಜ್ಯದಲ್ಲಿ ಖುಷಿ ಇದೆಯಲ್ಲವೇ ನಮ್ಮ ರಾಜ್ಯ ಬಂತು ಎಂದರೆ ಬಂದು ಬಿಟ್ಟಿದೆ ಇದನ್ನು ಬಾಪ್ದಾದಾರವರು ಬಯಸುತ್ತಾರೆ. ಈ ಸಂದೇಶವನ್ನು ಎಲ್ಲರಿಗೂ ಕೊಡುತ್ತೀರಿ, ತಮ್ಮ ಬಹಳ ಕಾಲದ ತೀವ್ರ ಪುರುಷಾರ್ಥ ಮಾಡಿಕೊಳ್ಳುವಂತಹವರು ತಮ್ಮ ರಾಜ್ಯದಲ್ಲಿ ಅಂತ್ಯದವರೆಗೆ ಮೊದಲನೇ ಜನ್ಮದಿಂದ 21 ಜನ್ಮಗಳು ಪೂರ್ಣ ರಾಜ್ಯಕ್ಕೆ ಅಧಿಕಾರಿ ಆಗುತ್ತಾರೆ. ಈ ಲೆಕ್ಕಾಚಾರ ಬಹಳ ಸಮಯದಿಂದ ಸ್ಮೃತಿಯಲ್ಲಿ ಇಟ್ಟುಕೊಳ್ಳಿ ಏಕೆಂದರೆ ಹೊಸ ಮನೆಯಲ್ಲಿ ಮಜಾ ಇರುತ್ತದೆ. ಒಂದುವೇಳೆ ಎರಡು ಮೂರು ಜನ್ಮದ ನಂತರ ಬಂದರೆ ಮನೆಗೆ ಎರಡು-ಮೂರು ತಿಂಗಳು ಆಗಿ ಬಿಟ್ಟರೆ ಏನು ಹೇಳುವಿರಿ, ಹೊಸದು ಎಂದು ಹೇಳುತ್ತೀರೋ ಅಥವಾ ಮೂರು ತಿಂಗಳು ಆಗಿ ಬಿಟ್ಟಿದೆ ಎಂದು ಹೇಳುತ್ತೀರೋ. ಬಾಪ್ದಾದಾರವರ ಒಬ್ಬೊಬ್ಬ ಮುದ್ದು ಮಕ್ಕಳು ವಾಹ್! ಮಕ್ಕಳೇ ವಾಹ್! ತಂದೆಯ ಹೃದಯ ಸಿಂಹಾಸನಾಧಿಕಾರಿ ಮಗು, ಮೊದಲನೇ ಜನ್ಮದಲ್ಲಿ ಬ್ರಹ್ಮಾ ತಂದೆಯ ಜೊತೆಗಾರರಾಗಿ ಬರಲಿ ಎಂದು ಬಾಪ್ದಾದಾರವರು ಇಚ್ಚಿಸುತ್ತಾರೆ. ಇಷ್ಟ ಇದೆಯೇ! ಇಷ್ಟ ಇದೆಯೇ? ಇಷ್ಟ ಇದೆಯೇ? ಒಳ್ಳೆಯದು. ಅಂದಾಗ ಏನು ಮಾಡಬೇಕಾಗಿದೆ? ಮಾಡಲೂ ಬೇಕಾಗುತ್ತದೆಯಲ್ಲವೇ. ಇಷ್ಟ ಅಂತೂ ಇದೆ, ತಂದೆಗೂ ಇಷ್ಟ ಇದೆ, ಆದರೆ ಏನು ಮಾಡಬೇಕಾಗುತ್ತದೆ? ಈಗಿನಿಂದ, ಕಳೆದು ಹೋಗಿದ್ದು ಕಳೆದು ಹೋಗಿತ್ತು, ಬಾಪ್ದಾದಾರವರು ಕಳೆದು ಹೋಗಿದ್ದನ್ನು ಕ್ಷಮಿಸಿ ಬಿಡುತ್ತಾರೆ. ಈಗಂತೂ ತಂದೆಗೆ ಜನ್ಮ ದಿನದ ಯಾವ ಉಡುಗೊರೆಯನ್ನು ಕೊಡುತ್ತೀರಿ? ತಂದೆಗೆ ಯಾವುದಾದರೂ ಉಡುಗೊರೆಯನ್ನು ಕೊಡುತ್ತೀರಲ್ಲವೇ. ತಂದೆಯ ಜನ್ಮ ದಿನವನ್ನು ಆಚರಿಸಲು ಬಂದಿದ್ದೀರಿ, ಅಂದಮೇಲೆ ತಂದೆಗೆ ಯಾವ ಉಡುಗೊರೆಯನ್ನು ಕೊಡುತ್ತೀರಿ? ತಂದೆಗೆ ಮಕ್ಕಳ ಮೇಲೆ ಕೊನೆಗೆ ಬಂದರೂ ತೀವ್ರವಾಗಿ ಮುಂದೆ ಹೋಗಬಹುದು ಎನ್ನುವ ಇಚ್ಛೆ ಇದೆ. ಒಳ್ಳೆಯದು.

ಬಾಪ್ದಾದಾರವರು ಕೊನೆಯಲ್ಲಿ ಬರುವಂತಹ ಎಲ್ಲಾ ಮಕ್ಕಳಿಗೆ ಮೊದಲನೇ ಬಾರಿ ಬಂದಿರುವುದಕ್ಕೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ, ಒಂದು ಭಾಗ್ಯವನ್ನು ತಿಳಿಸುತ್ತಿದ್ದಾರೆ, ಭಾಗ್ಯವನ್ನು ರೂಪಿಸಿಕೊಳ್ಳಲು ಅವಕಾಶವಿದೆ ಏಕೆಂದರೆ ಟೂ ಲೇಟ್ ಬೋರ್ಡ್ ಇನ್ನೂ ಹಾಕಲಿಲ್ಲ. ಒಂದುವೇಳೆ ಯಾರಾದರೂ ಕೊನೆಯಲ್ಲಿಯೂ ತೀವ್ರ ಪುರುಷಾರ್ಥ ಮಾಡಿದರೆ ಲಾಸ್ಟ್ ಸೋ ಫಾಸ್ಟ್ ಫಸ್ಟ್ ಡಿವಿಜಿನ್ನಲ್ಲಿ ಬರಬಹುದು. ಮೊದಲನೇ ನಂಬರ್ ಅಲ್ಲ, ಅವರಂತೂ ಪ್ರಸಿದ್ಧ ಆಗಿದ್ದಾರೆ ಆದರೆ ಫಸ್ಟ್ ಡಿವಿಜಿನ್ನಲ್ಲಿ ಬರಬಹುದು. ಒಪ್ಪಿಗೆ ಇದೆಯೇ? ಬಂದಿರುವಂತಹ ಹೊಸ ಮಕ್ಕಳಿಗೆ ಒಪ್ಪಿಗೆ ಇದೆಯೇ? ಅವಕಾಶವಂತೂ ಇದೆ, ಬಾಪ್ದಾದಾರವರು ಸೀಟ್ ಕೊಡುತ್ತಾರೆ, ಅದಕ್ಕಾಗಿ ಏನಾದರೂ ಮಾಡಲೇಬೇಕು. ಒಂದೊಂದು ಶ್ವಾಸ, ಒಂದೊಂದು ಸಂಕಲ್ಪದ ಬಗ್ಗೆ ಅಟೆನ್ಷನ್, ಪ್ರತಿಯೊಂದು ಶ್ವಾಸ, ಪ್ರತಿಯೊಂದು ಸಂಕಲ್ಪ ಸಮರ್ಥವಾಗಿರಲಿ. ವ್ಯರ್ಥ ಇರಬಾರದು, ಏಕೆಂದರೆ ಭಲೆ ಮೊದಲನೇ ಬಾರಿ ಬಂದಿರಬಹುದು ಅಥವಾ ಹಳಬರು ಇರಬಹುದು ತಮ್ಮೆಲ್ಲರ ಟೈಟಲ್ ಏನಾಗಿದೆ? ಸಮರ್ಥ ಮಕ್ಕಳು, ಬಲಹೀನ ಮಕ್ಕಳಲ್ಲ. ಬಾಪ್ದಾದಾ ಯಾವ ನೆನಪು-ಪ್ರೀತಿ ಕೊಡುತ್ತಾರೆ? ಪ್ರತಿದಿನ ಮುದ್ದು ಮಕ್ಕಳಿಗೆ ಬಹಳ ಕಾಲದಿಂದ ಅಗಲಿ ಹೋಗಿ ಮತ್ತೆ ಸಿಕ್ಕಿರುವ ಮಕ್ಕಳಿಗೆ ಹೃದಯ ಸಿಂಹಾಸನಾಧಾರಿ ಮಕ್ಕಳಿಗೆ ನೆನಪು-ಪ್ರೀತಿಯನ್ನು ಕೊಡುತ್ತಾರೆ. ಆದ್ದರಿಂದ ತಂದೆ ಈ ಸ್ವರ್ಣಿಮ ಅವಕಾಶವನ್ನು ಕೊಡುತ್ತಿದ್ದಾರೆ, ತಂದೆ ಅವಕಾಶವನ್ನು ಕೊಡುತ್ತಾರೆ ಏಕೆಂದರೆ ಬಂಧಿಸಲ್ಪಟ್ಟಿದ್ದಾರೆ. ಇಂತಹ ತೀವ್ರ ಪುರುಷಾರ್ಥಿಗಳು ಯಾರಾದರೂ ಇದ್ದೀರಾ? ಅವಕಾಶವಂತೂ ಇದೆ. ಟೂ ಲೇಟ್ನ ಬೋರ್ಡ್ ಬಂದು ಬಿಟ್ಟರೆ ನಂತರ ಎಲ್ಲವೂ ಸಮಾಪ್ತಿ ಆಗಿಬಿಡುತ್ತದೆ. ಆದರೆ ಬಾಪ್ದಾದಾರವರಿಗೆ ಜನ್ಮ ದಿನದ ಯಾವ ಉಡುಗೊರೆಯನ್ನು ಕೊಡುತ್ತೀರಿ? ಜನ್ಮೋತ್ಸವವನ್ನು ಆಚರಿಸಲು ಬಂದಿದ್ದೀರಲ್ಲವೇ! ಬಾಪ್ದಾದಾರವರು ತಮ್ಮೆಲ್ಲರ ಜನ್ಮ ದಿನದಂದು ತಾವೆಲ್ಲಾ ಮಕ್ಕಳಿಗೆ ವಿಶೇಷ ಉಡುಗೊರೆಯನ್ನು ಕೊಟ್ಟಿದ್ದಾರೆ. ಏನೆಂದರೆ 90% ತಮ್ಮ ತೀವ್ರ ಪುರುಷಾರ್ಥ ಇಂದಿನಿಂದ ಅಂತ್ಯದವರೆವಿಗೂ ಒಂದುವೇಳೆ ಇದ್ದಲ್ಲಿ 10% ಬಾಪ್ದಾದಾರವರು ಹೆಚ್ಚಿಸಿ ಬಿಡುತ್ತಾರೆ. ಒಪ್ಪಿಗೆ ಇದೆಯೇ? ಈಗ ವ್ಯರ್ಥ ಸಮಾಪ್ತಿ, ಹೇಗೆ ನೋಡಿ ಸತ್ಯಯುಗದ ದೇವತೆಗಳು ಬರುತ್ತಾರಲ್ಲವೇ. ಅವರಿಗೆ ಇಲ್ಲಿಯ ಭಾಷೆ ಏನು ಮಾತನಾಡುತ್ತಾರೆ ಎಂಬುದು ಗೊತ್ತಿಲ್ಲ. ಅವರಿಗೆ ನೀವು ಪುರುಷಾರ್ಥ ಎಂಬ ಶಬ್ದವನ್ನು ಹೇಳಿದರೆ ಅವರು ಪುರುಷಾರ್ಥ ಎಂದರೆ ಏನು? ಎಂದು ಕೇಳುತ್ತಾರೆ ಏಕೆಂದರೆ ದೇವತೆಗಳು ಪ್ರಾಲಬ್ದ ಸ್ವರೂಪರಾಗಿದ್ದಾರೆ, ಹೀಗೆ ತಾವು ತೀವ್ರ ಪುರುಷಾರ್ಥಿಗಳಿಗೆ ಸ್ವಪ್ನದಲ್ಲಿ ಹಾಗೂ ಸಂಕಲ್ಪದಲ್ಲಿ ಪ್ರಾಕ್ಟಿಕಲ್ ಕರ್ಮದಲ್ಲಿ ವ್ಯರ್ಥ ಎಂದರೆ ಹೇಗಿರುತ್ತದೆ ಅದು ಸಮಾಪ್ತಿ ಆಗಬೇಕು. ಧೈರ್ಯ ಇದೆಯೇ? 10% ಹೆಚ್ಚಿನ ಅಂಕೆಗಳನ್ನು ಕೊಡುತ್ತಾರೆ. ಒಪ್ಪಿಗೆ ಇದೆಯೇ. ಕೈ ಎತ್ತಿರಿ. ಎಷ್ಟು % ಪಕ್ಕಾ ಇದೆ? 100% ಇದೆಯೇ, ಅಥವಾ 101% ಇದೆಯೇ ಏಕೆಂದರೆ ಬಾಪ್ದಾದಾರವರಿಗೆ ಮಕ್ಕಳ ವಿನಃ, ಮಕ್ಕಳ ಜೊತೆಯ ವಿನಃ ಇಷ್ಟ ಆಗುವುದಿಲ್ಲ. ತಂದೆ ತಿಳಿದುಕೊಳ್ಳುತ್ತಾರೆ ಯಾವಾಗ ನನ್ನ ಬಾಬಾ ಎಂದು ಹೇಳಿದ್ದೀರಿ ಆಗ ಬಾಬಾರವರೂ ಸಹ ನನ್ನ ಮಕ್ಕಳು ಎಂದು ಹೇಳಿದರು, ಅಂದಮೇಲೆ ತಂದೆಯ ಸಮಾನರಂತೂ ಆಗಲೇಬೇಕಲ್ಲವೇ. ಈಗ ದೃಢ ಸಂಕಲ್ಪದ ಅವಶ್ಯಕತೆ ಇದೆ. ತಾವು ದೃಢತೆಯು ಸಫಲತೆಯ ಬೀಗದ ಕೈ ಆಗಿದೆ ಎನ್ನುವ ಪುಸ್ತಕವನ್ನು ಮುದ್ರಿಸಿದ್ದೀರಲ್ಲವೇ. ಸಾಧಾರಣವಾದ ಸಂಕಲ್ಪ ಇರಬಾರದು. ತಾವು ಯಾರು ಆಗಿದ್ದೀರಿ? ಒಂದುವೇಳೆ ಇಲ್ಲಿಯ ಪ್ರೆಸಿಡೆಂಟ್ ಸಾಧಾರಣ ಚಲನೆಯಿಂದ ನಡೆದರೆ ಚೆನ್ನಾಗಿರುತ್ತದೆಯೇ, ಮತ್ತು ತಾವು ಯಾರಾಗಿದ್ದೀರಿ? ತಾವಂತೂ ಮೂರು ಸಿಂಹಾಸನಕ್ಕೆ ಅಧಿಕಾರಿ ಆಗಿದ್ದೀರಿ. ಎಲ್ಲದಕ್ಕಿಂತ ದೊಡ್ಡ ಸಿಂಹಾಸನ ಬಾಪ್ದಾದಾರವರ ಹೃದಯ ಸಿಂಹಾಸನವಾಗಿದೆ, ಅಂದಮೇಲೆ ಹೃದಯ ಸಿಂಹಾಸನವುಳ್ಳಂತಹವರು ಮೊದಲನೇ ಜನ್ಮದ ಜೊತೆಗಾರರಾಗುತ್ತೀರಲ್ಲವೇ. ಭಲೆ ಸಿಂಹಾಸನದ ಮೇಲೆ ಒಬ್ಬರೇ ಕುಳಿತುಕೊಳ್ಳುತ್ತಾರೆ, ಆದರೆ ರಾಯಲ್ ಪರಿವಾರ ರಾಜ್ಯಾಧಿಕಾರಿಯಂತೂ ಆಗಬಹುದು. ಅಂದಾಗ ಜೊತೆಯನ್ನು ನಿಭಾಯಿಸುವಂತಹವರು ಮನೆಯವರೆವಿಗೂ ಜೊತೆಯಲ್ಲಿಯೇ ಹೋಗುತ್ತೀರಿ. ಬಾಪ್ದಾದಾರವರು ಹೇಗಾದರೂ ಕರೆದುಕೊಂಡು ಹೋಗುತ್ತಾರೆ, ವಯಾ (ಧರ್ಮರಾಜನ ಪುರಿಯ ಮೂಲಕ) ಆದರೂ ಸರಿ ಅಥವಾ ನೇರವಾಗಿ ಆದರೂ ಸರಿ ಮನೆಯವರೆವಿಗೂ ಕರೆದುಕೊಂಡು ಹೋಗುತ್ತಾರೆ. ನಂತರ ಮನೆಯಲ್ಲಿಯೇ ಕುಳಿತು ಬಿಡುತ್ತೀರಾ, ಬ್ರಹ್ಮಾ ತಂದೆ ಹೊರಟು ಹೋಗುತ್ತಾರೆ ಮತ್ತು ತಾವು ಕುಳಿತು ಬಿಟ್ಟರೆ, ಚೆನ್ನಾಗಿರುತ್ತದೆಯೇ? ರಾಜಯೋಗಿ ಆಗಿದ್ದೀರಲ್ಲವೇ? ತಮಗೆ ತಾವು ಯಾವ ಟೈಟಲ್ನ್ನು ಕೊಟ್ಟುಕೊಳ್ಳುವಿರಿ? ಮತ್ತೆ ಅನ್ಯರಿಗೆ ಏನು ಕಲಿಸುತ್ತೀರಿ? ರಾಜಯೋಗವೋ ಅಥವಾ ಪ್ರಜಾ ಯೋಗವೋ? ಭಲೆ ರಾಯಲ್ ಪ್ರಜೆಗಳೇ ಆಗಿರಬಹುದು ಆದರೆ ಪ್ರಜಾ ಯೋಗವಂತೂ ಅಲ್ಲ. ಪ್ರಜಾಯೋಗಿಯಂತೂ ಅಲ್ಲ ರಾಜಯೋಗಿ ಆಗಿದ್ದೀರಿ. ತಂದೆಯು ತಾವೆಲ್ಲಾ ಮಕ್ಕಳಿಗೆ ಕೊಟ್ಟಿರುವ ಉಡುಗೊರೆ ನೆನಪಿದೆಯೇ? ಎಲ್ಲಿಯ ತನಕ? ಅಂತ್ಯದವರೆಗೆ. ಪುರುಷಾರ್ಥವಂತೂ ಬಹಳ ಮಾಡುತ್ತಿರುವುದು ಬಾಪ್ದಾದಾರವರು ನೋಡಿದ್ದಾರೆ. ಮಕ್ಕಳು ಪರಿಶ್ರಮ ಪಡುವುದನ್ನು ನೋಡಿ ತಂದೆಗೆ ಇಷ್ಟ ಆಗುವುದಿಲ್ಲ, ಆದ್ದರಿಂದ ತಂದೆಯ ಪ್ರೀತಿಯಲ್ಲಿ ಇರಿ ಆಗ ಪರಿಶ್ರಮ ಸಮಾಪ್ತಿ ಆಗಿ ಬಿಡುತ್ತದೆ. ನನ್ನ ಬಾಬಾ ಎಂದಾಗ ಬೇರೆ ಎಲ್ಲಾ ನನ್ನದು ಎನ್ನುವುದು ಸಮಾಪ್ತಿ ಆಗುತ್ತದೆ. ನನ್ನ ತಂದೆ ಎಂದು ಹೇಳಿದಾಗ ಅನೇಕ ಪ್ರಕಾರ ನನ್ನದು ಎಂಬುದು ಸಮಾಪ್ತಿ ಆಯಿತಲ್ಲವೇ. ಒಂದು ಆಟದ ಗೊಂಬೆ ಇರುತ್ತದೆಯಲ್ಲವೇ, ಒಂದರಲ್ಲಿ ಇನ್ನೊಂದು, ಇನ್ನೊಂದರಲ್ಲಿ ಮತ್ತೊಂದು ಗೊಂಬೆ ಇರುತ್ತದೆ. ಒಂದರಲ್ಲಿ 10-12 ಗೊಂಬೆಗಳು ಸಮಾವೇಶವಾಗಿರುತ್ತವೆ. ಆಟದ ಗೊಂಬೆಯನ್ನು ಮಾಡುತ್ತೀರಲ್ಲವೇ. ಒಂದು ನನ್ನ ಬಾಬಾ, ನನ್ನ ಬಾಬಾ ಎಂದು ಹೇಳುವಂತಹವರಲ್ಲವೇ, ನನ್ನ ಬಾಬಾ ಆಗಿದ್ದಾರಲ್ಲವೇ, ಮಹಾರಥಿಗಳ ಬಾಬಾ ಅಂತೂ ಅಲ್ಲ, ನನ್ನ ಬಾಬಾ. ನನ್ನ ಬಾಬಾ ಎಂದಮೇಲೆ ಹದ್ದಿನ ನನ್ನದು ಎಂಬುದನ್ನು ನಿನ್ನದು ಎನ್ನುವುದರಲ್ಲಿ ಸಮಾವೇಶ ಮಾಡಿಕೊಳ್ಳಿ. ನನ್ನದು ಎಂಬುದಕ್ಕೆ ಬದಲಾಗಿ ನಿನ್ನದು ಎಂದು ಹೇಳಿರಿ, ಎಷ್ಟು ವ್ಯತ್ಯಾಸವಿದೆ. ನನ್ನದು ಮತ್ತು ನಿನ್ನದು ಎಂಬುದರಲ್ಲಿ ಎಷ್ಟೊಂದು ವ್ಯತ್ಯಾಸವಿದೆ. ನನ್ನದು ಮತ್ತು ನಿನ್ನದರಲ್ಲಿ ಒಂದು ಶಬ್ದದ ಅಂತರವಿದೆ. ನನ್ನ ಬಾಬಾ ಎಂದು ಪಕ್ಕಾ ಇದೆಯೇ? ಪಕ್ಕಾ ಇದೆಯೇ, ಎಷ್ಟು % ಇದೆ? 100% ಇದೆಯೇ ಅಥವಾ 101% ಇದೆಯೇ? ಈ ರೀತಿ ಒಂದು ಬೆರಳನ್ನು ಎತ್ತಿರಿ, ಯಾರು 101 ಹೇಳುತ್ತೀರಿ, ಅವರು ಕೈ ಎತ್ತಿರಿ. ಬಾಪ್ದಾದಾರವರು ನೋಡುತ್ತಿದ್ದಾರೆ, ಟಿ.ವಿ ಯಲ್ಲಿಯೂ ನೋಡುತ್ತಿದ್ದಾರೆ.

ಎಲ್ಲಾ ಕಡೆಯ ಬಾಪ್ದಾದಾರವರ ಹೃದಯ ಸಿಂಹಾಸನಾಧಿಕಾರಿ ಮಕ್ಕಳಿಗೆ, ಎಲ್ಲಾ ಕಡೆಯ ತೀವ್ರ ಪುರುಷಾರ್ಥಿ ಮಕ್ಕಳಿಗೆ, ಎಲ್ಲಾ ಕಡೆಯ ಬಾಪ್ದಾದಾರವರ ಯಾವ ಉಡುಗೊರೆ ಕೊಟ್ಟಿದ್ದಾರೆ ಆ ಉಡುಗೊರೆಯನ್ನು ಸ್ವೀಕಾರ ಮಾಡುವಂತಹ ಮತ್ತು ಯಾವ ಮಕ್ಕಳು ಬಾಪ್ದಾದಾರವರಿಗೆ ಉಡುಗೊರೆ ಕೊಟ್ಟಿದ್ದಾರೆ, ಸಂಕಲ್ಪದಿಂದ, ಆ ಸಂಕಲ್ಪವನ್ನು ದೃಢ ಮಾಡಿಕೊಳ್ಳುವ ತೀವ್ರ ಪುರುಷಾರ್ಥಿ, ಪ್ರತಿಜ್ಞೆಯನ್ನು ಪ್ರತ್ಯಕ್ಷತೆ ಮಾಡುವ ಸರ್ವ ಮಕ್ಕಳಿಗೆ ಬಾಪ್ದಾದಾರವರ ಹೃದಯದ ಆಸರೆ ಮತ್ತು ಹೃದಯದ ನೆನಪು, ಪ್ರೀತಿ ಸ್ವೀಕಾರವಾಗಲಿ ಮತ್ತು ಸರ್ವ ಮಕ್ಕಳಿಗೆ ಬಹಳ-ಬಹಳ ಅಭಿನಂದನೆಗಳು, ಅಭಿನಂದನೆಗಳು, ಅಭಿನಂದನೆಗಳು.

ವರದಾನ:
ಅತಿಥಿಯೆಂಬ ವೃತ್ತಿಯ ಮೂಲಕ ಪ್ರವೃತ್ತಿಯನ್ನು ಶ್ರೇಷ್ಠ, ಸ್ಥಿತಿಯನ್ನು ಶ್ರೇಷ್ಠ ಮಾಡಿಕೊಳ್ಳುವಂತಹ ಸದಾ ಉಪರಾಂ ಭವ.

ಯಾರು ಸ್ವಯಂನ್ನು ಅತಿಥಿಯೆಂದು ತಿಳಿದುಕೊಂಡು ನಡೆಯುತ್ತಾರೆಯೋ ಅವರು ತನ್ನ ದೇಹವೆಂಬ ಮನೆಯಿಂದಲೂ ನಿರ್ಮೋಹಿ ಆಗಿ ಬಿಡುತ್ತಾರೆ. ಅತಿಥಿಗೆ ತನ್ನದೇನೂ ಇರುವುದಿಲ್ಲ, ಕಾರ್ಯದಲ್ಲಿ ಎಲ್ಲಾ ವಸ್ತುಗಳನ್ನು ಉಪಯೋಗಿಸುತ್ತಾರೆ ಆದರೆ ನನ್ನದೆಂಬ ಭಾವವಿರುವುದಿಲ್ಲ. ಅವರು ಎಲ್ಲಾ ಸಾಧನಗಳನ್ನು ಉಪಯೋಗಿಸುತ್ತಿದ್ದರೂ, ಎಷ್ಟು ಭಿನ್ನವೋ ಅಷ್ಟು ತಂದೆಯ ಪ್ರಿಯರಾಗಿ ಇರುತ್ತಾರೆ. ಅವರು ಸಹಜವಾಗಿಯೇ ದೇಹ, ದೇಹದ ಸಂಬಂಧ ಮತ್ತು ವೈಭವಗಳಿಂದಲೂ ಉಪರಾಂ (ನಿರ್ಲಿಪ್ತ) ಆಗಿ ಬಿಡುತ್ತಾರೆ. ಅತಿಥಿಯೆಂಬ ವೃತ್ತಿ ಎಷ್ಟಿರುವುದೋ ಅಷ್ಟೇ ಶ್ರೇಷ್ಠ ಪ್ರವೃತ್ತಿ ಹಾಗೂ ಸ್ಥಿತಿಯೂ ಶ್ರೇಷ್ಠವಾಗಿ ಇರುತ್ತದೆ.

ಸ್ಲೋಗನ್:
ತಮ್ಮ ಸ್ವಭಾವವನ್ನು ನಿರ್ಮಲವನ್ನಾಗಿ ಮಾಡಿಕೊಳ್ಳುತ್ತೀರೆಂದರೆ, ಪ್ರತೀ ಹೆಜ್ಜೆಯಲ್ಲಿ ಸಫಲತೆಯು ಅಡಗಿರುತ್ತದೆ.

ಅವ್ಯಕ್ತ ಸೂಚನೆ:- ಏಕತೆ ಮತ್ತು ವಿಶ್ವಾಸದ ಗುಣ ಲಕ್ಷಣಗಳ ಮೂಲಕ ಸಫಲತಾ ಸಂಪನ್ನರಾಗಿರಿ.

ಪ್ರಪಂಚದ ಮುಂದೆ ಈಗ ಇದೇ ವಾಸ್ತವಿಕತೆ ಕಾಣಿಸಬೇಕು ನಾವೆಲ್ಲರೂ ಒಂದಾಗಿದ್ದೇವೆ, ಒಬ್ಬರವರಾಗಿದ್ದೇವೆ, ಏಕರಸ ಸ್ಥಿತಿಯುಳ್ಳವರಾಗಿದ್ದೇವೆ. ಒಬ್ಬರ ಲಗನಿನಲ್ಲಿ ಮಗ್ನರಾಗಿ ಒಬ್ಬರ ಹೆಸರು ಪ್ರತ್ಯಕ್ಷ ಮಾಡುವವರಾಗಿದ್ದೇವೆ, ಈಗ ಈ ಭಿನ್ನ ಮತ್ತು ಪ್ರಿಯ ಸ್ವರ್ಣಿಮ ಸ್ಥಿತಿಯ ಬಾವುಟವನ್ನು ಹಾರಿಸಿರಿ. ಚಿಕ್ಕವರಾಗಿರಲಿ ಅಥವಾ ದೊಡ್ಡವರಾಗಿರಲಿ, ಅನಾರೋಗ್ಯವಾಗಿರಲಿ ಅಥವಾ ಆರೋಗ್ಯವಾಗಿರಲಿ, ಮಹಾರಥಿಯಾಗಿರಲಿ ಅಥವಾ ಕುದರೆ ಸವಾರಿಯವರಾಗಿರಲಿ, ಎಲ್ಲರು ಏಕಮತರಾಗಿ ಸಹಯೋಗಿಯಾಗಿರಿ ಆಗ ಸಹಜ ಸಫಲತಾಮೂರ್ತರಾಗಿ ಬಿಡುವಿರಿ.