15.04.25         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ತಮ್ಮ ಸ್ವಭಾವವನ್ನು ತಂದೆಯ ಸಮಾನ ಸರಳ ಮಾಡಿಕೊಳ್ಳಿ, ನಿಮ್ಮಲ್ಲಿ ಯಾವುದೇ ಅಹಂಕಾರವಿರಬಾರದು, ಜ್ಞಾನಯುಕ್ತ ಬುದ್ಧಿಯಲ್ಲಿ ಅಭಿಮಾನವು ಇರಬಾರದು

ಪ್ರಶ್ನೆ:
ಸೇವೆ ಮಾಡುತ್ತಿದ್ದರೂ ಸಹ ಕೆಲವು ಮಕ್ಕಳು ಮಕ್ಕಳಿಗಿಂತಲೂ ಚಿಕ್ಕಮಕ್ಕಳಾಗಿದ್ದಾರೆ- ಹೇಗೆ?

ಉತ್ತರ:
ಕೆಲವು ಮಕ್ಕಳು ಸರ್ವೀಸ್ ಮಾಡುತ್ತಿರುತ್ತಾರೆ ಅನ್ಯರಿಗೆ ಜ್ಞಾನವನ್ನು ತಿಳಿಸುತ್ತಾರೆ ಆದರೆ ತಂದೆಯನ್ನು ನೆನಪು ಮಾಡುವುದಿಲ್ಲ. ಬಾಬಾ, ನಿಮ್ಮ ನೆನಪು ಮರೆತುಹೋಗುತ್ತದೆಯೆಂದು ಹೇಳುತ್ತಾರೆ ಆದ್ದರಿಂದ ತಂದೆಯು ಅವರಿಗೆ ಮಕ್ಕಳಿಗಿಂತಲೂ ಚಿಕ್ಕಮಕ್ಕಳೆಂದು ಹೇಳುತ್ತಾರೆ ಏಕೆಂದರೆ ಮಕ್ಕಳೆಂದೂ ತಮ್ಮ ತಂದೆಯನ್ನು ಮರೆಯುವುದಿಲ್ಲ. ನಿಮ್ಮನ್ನು ಯಾವ ತಂದೆಯು ರಾಜಕುಮಾರ-ಕುಮಾರಿಯರನ್ನಾಗಿ ಮಾಡುತ್ತಾರೆಯೊ ಅವರನ್ನೇಕೆ ನೀವು ಮರೆತುಹೋಗುತ್ತೀರಿ? ಒಂದುವೇಳೆ ಮರೆಯುತ್ತೀರೆಂದರೆ ಆಸ್ತಿಯು ಹೇಗೆ ಸಿಗುವುದು! ನೀವು ಕೈಗಳಿಂದ ಕೆಲಸ ಮಾಡುತ್ತಲೂ ಬುದ್ಧಿಯಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ.

ಓಂ ಶಾಂತಿ.
ವಿದ್ಯೆಯ ಗುರಿ-ಉದ್ದೇಶವಂತೂ ಮಕ್ಕಳ ಸನ್ಮುಖದಲ್ಲಿದೆ. ಮಕ್ಕಳು ಇದನ್ನೂ ಸಹ ತಿಳಿದುಕೊಂಡಿದ್ದೀರಿ- ತಂದೆಯು ಸಾಧಾರಣ ತನುವಿನಲ್ಲಿದ್ದಾರೆ ಅದರಲ್ಲಿಯೂ ವೃದ್ಧ ತನುವಾಗಿದೆ. ಸತ್ಯಯುಗದಲ್ಲಂತೂ ಭಲೆ ವೃದ್ಧರಾಗಿರುತ್ತಾರೆ ಆದರೂ ಸಹ ನಾವೀಗ ಹೋಗಿ ಚಿಕ್ಕಮಗುವಾಗುತ್ತೇನೆಂದು ಖುಷಿಯಿರುತ್ತದೆ. ಅಂದಾಗ ಇವರಿಗೂ (ಬ್ರಹ್ಮಾ) ಸಹ ತಿಳಿದಿದೆ ಮತ್ತು ಈ ಖುಷಿಯಿದೆ- ನಾನು ಈ ಕೃಷ್ಣನಾಗುವವನಿದ್ದೇನೆ, ಹೀಗೆ ಹೇಳುತ್ತಿದ್ದಂತೆಯೇ ಅವರ ನಡತೆಯು ಮಗುವಿನಂತಾಗಿಬಿಡುತ್ತದೆ. ಮಕ್ಕಳಂತೂ ಸರಳವಾಗಿರುತ್ತಾರೆ, ಯಾವುದೇ ಅಹಂಕಾರವಿಲ್ಲ. ಜ್ಞಾನದ ಬುದ್ಧಿಯಿದೆ, ಹೇಗೆ ಇವರ ಬುದ್ದಿಯಿದೆಯೋ ಹಾಗೆಯೇ ನೀವು ಮಕ್ಕಳಿಗೂ ಇರಬೇಕು. ತಂದೆಯು ನಮಗೆ ಓದಿಸಲು ಬಂದಿದ್ದಾರೆ, ನಾವು ಈ ರೀತಿ ದೇವತೆಗಳಾಗಿದ್ದೇವೆ ಅಂದಾಗ ಮಕ್ಕಳಿಗೆ ಆಂತರ್ಯದಲ್ಲಿ ಈ ಖುಷಿಯಿರಬೇಕಲ್ಲವೆ- ನಾವು ಈ ಶರೀರವನ್ನು ಬಿಟ್ಟುಹೋಗಿ ಈ ರೀತಿಯಾಗುತ್ತೇವೆ, ರಾಜಯೋಗವನ್ನು ಕಲಿಯುತ್ತಿದ್ದೇವೆ. ಚಿಕ್ಕಮಕ್ಕಳು ಅಥವಾ ದೊಡ್ಡವರೆಲ್ಲರೂ ಸಹ ಶರೀರವನ್ನು ಬಿಡುತ್ತಾರೆ. ಎಲ್ಲರಿಗೂ ವಿದ್ಯೆಯು ಒಂದೇ ಆಗಿದೆ. ಇವರೂ ಸಹ ರಾಜಕುಮಾರ-ರಾಜಕುಮಾರಿಯರಾಗುತ್ತೇವೆಂದು ನೀವು ಸಹ ಹೇಳುತ್ತಿದ್ದೀರಿ. ರಾಜಕುಮಾರ-ಕುಮಾರಿಯರಾಗಲು ಓದುತ್ತಿದ್ದೀರಿ. ಅಂತ್ಯಮತಿ ಸೋ ಗತಿಯಾಗುವುದು. ನಾವು ಬಿಕಾರಿಗಳಿಂದ ರಾಜಕುಮಾರರಾಗುತ್ತೇವೆಂದು ಬುದ್ಧಿಯಲ್ಲಿ ನಿಶ್ಚಯವಿದೆ. ಈ ಕನಿಷ್ಟ ಪ್ರಪಂಚವೇ ಸಮಾಪ್ತಿಯಾಗುವುದು ಅಂದಾಗ ಮಕ್ಕಳಿಗೆ ಖುಷಿಯಿರಬೇಕು. ತಂದೆಯು ಮಕ್ಕಳನ್ನು ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ಶಿವತಂದೆಯು ತಿಳಿಸುತ್ತಾರೆ- ಮಕ್ಕಳೇ, ನಾನಂತೂ ರಾಜಕುಮಾರ-ರಾಜಕುಮಾರಿಯಾಗುವುದಿಲ್ಲ ಮತ್ತು ಬ್ರಹ್ಮಾತಂದೆಯು ತಿಳಿಸುತ್ತಾರೆ- ನಾನಂತೂ ರಾಜಕುಮಾರನಾಗುತ್ತೇನೆ. ನಾವು ಈ ರೀತಿಯಾಗಲು ಓದುತ್ತಿದ್ದೇವೆ, ರಾಜಯೋಗವಾಗಿದೆಯಲ್ಲವೆ. ರಾಜಕುಮಾರ-ರಾಜಕುಮಾರಿಯರಾಗುತ್ತೇವೆಂದು ನೀವು ಮಕ್ಕಳೂ ಸಹ ಹೇಳುತ್ತೀರಿ. ತಂದೆಯೂ ಸಹ ಹೇಳುತ್ತಾರೆ. ನಿಮ್ಮ ಮಾತು ಸರಿಯಾಗಿದೆ, ನಿಮ್ಮ ಬಾಯಲ್ಲಿ ಗುಲಾಬ್ ಜಾಮೂನ್ ಇದೆ. ಈ ಪರೀಕ್ಷೆಯೇ ರಾಜಕುಮಾರ-ಕುಮಾರಿಯರಾಗುವುದಾಗಿದೆ. ಜ್ಞಾನವು ಬಹಳ ಸಹಜವಾಗಿದೆ, ತಂದೆಯನ್ನು ನೆನಪು ಮಾಡಬೇಕು ಮತ್ತು ಭವಿಷ್ಯದ ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ಈ ನೆನಪು ಮಾಡುವುದರಲ್ಲಿಯೇ ಪರಿಶ್ರಮವಿದೆ. ನೆನಪಿನಲ್ಲಿರುತ್ತೀರೆಂದರೆ ಅಂತ್ಯಮತಿ ಸೋ ಗತಿಯಾಗುವುದು, ಸನ್ಯಾಸಿಗಳು ಒಂದು ಉದಾಹರಣೆಯನ್ನು ಕೊಡುತ್ತಾರೆ- ನಾನು ಕೋಣ ಆಗಿದ್ದೇನೆ, ಕೋಣ ಆಗಿದ್ದೇನೆ...... ಎಂದು ಹೇಳುತ್ತಾ ನಾನು ಕೋಣವೆಂದೇ ತಿಳಿಯತೊಡಗಿದರು ಅಂದರೆ ಅವೆಲ್ಲವೂ ವ್ಯರ್ಥಮಾತುಗಳಾಗಿವೆ ಆದರೆ ಇಲ್ಲಿ ಧರ್ಮದ ಮಾತಾಗಿದೆ ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಜ್ಞಾನವು ಬಹಳ ಸಹಜವಾಗಿದೆ, ನೆನಪಿನಲ್ಲಿಯೇ ಪರಿಶ್ರಮವಿದೆ. ತಂದೆಯು ಬಹಳಷ್ಟು ಹೇಳುತ್ತಾರೆ- ನೀವಿನ್ನು ಚಿಕ್ಕಮಕ್ಕಳಂತೆ ಇದ್ದೀರಿ. ನಾವೇನು ಚಿಕ್ಕಮಕ್ಕಳಾಗಿದ್ದೇವೆಯೇ ಎಂದು ಮಕ್ಕಳಿಂದ ದೂರು ಬರುತ್ತದೆ ಅದಕ್ಕೆ ತಂದೆಯು ತಿಳಿಸುತ್ತಾರೆ- ಹೌದು, ನೀವಿಲ್ಲಿ ಚಿಕ್ಕಮಕ್ಕಳಾಗಿದ್ದೀರಿ. ಜ್ಞಾನವು ಬಹಳ ಚೆನ್ನಾಗಿದೆ. ಪ್ರದರ್ಶನಿಯಲ್ಲಿ ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತೀರಿ. ಹಗಲು-ರಾತ್ರಿ ಸೇವೆಯಲ್ಲಿ ತೊಡಗಿರುತ್ತೀರಿ ಆದರೂ ಸಹ ನಿಮ್ಮನ್ನು ಬೇಬಿಗಳೆಂದೇ ಹೇಳುತ್ತೇನೆ. ಈ ಬ್ರಹ್ಮಾರವರೂ ಸಹ ಬೇಬಿಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ- ನೀವು ನನಗಿಂತಲೂ ದೊಡವರಾಗಿದ್ದೀರಿ. ಇವರಿಗಂತೂ ಬಹಳಷ್ಟು ಜವಾಬ್ದಾರಿಯಿರುತ್ತದೆ. ಎಲ್ಲಾ ವಿಚಾರಗಳು ತಲೆಯಲ್ಲಿರುತ್ತವೆ, ತಂದೆಯ ಬಳಿ ಎಷ್ಟೊಂದು ಸಮಾಚಾರಗಳು ಬರುತ್ತವೆ ಆದ್ದರಿಂದ ತಂದೆಯು ಮುಂಜಾನೆ ಬೇಗನೆ ಎದ್ದು ನೆನಪು ಮಾಡುವ ಪ್ರಯತ್ನ ಪಡುತ್ತಾರೆ. ಆಸ್ತಿಯಂತೂ ತಂದೆಯಿಂದಲೇ ಪಡೆಯಬೇಕಾಗಿದೆ ಅಂದಮೇಲೆ ತಂದೆಯನ್ನೇ ನೆನಪು ಮಾಡಬೇಕಲ್ಲವೆ. ಎಲ್ಲಾ ಮಕ್ಕಳಿಗೆ ನಿತ್ಯವೂ ತಿಳಿಸುತ್ತೇನೆ- ಮಧುರ ಮಕ್ಕಳೇ, ನೀವು ನೆನಪಿನ ಯಾತ್ರೆಯಲ್ಲಿ ಬಹಳ ನಿರ್ಬಲರಾಗಿದ್ದೀರಿ, ಜ್ಞಾನದಲ್ಲಿ ಭಲೆ ಚೆನ್ನಾಗಿದ್ದೀರಿ ಆದರೆ ಪ್ರತಿಯೊಬ್ಬರೂ ತಮ್ಮ ಹೃದಯದಿಂದ ಕೇಳಿಕೊಳ್ಳಿ- ನಾನು ಎಷ್ಟು ಸಮಯ ತಂದೆಯ ನೆನಪಿನಲ್ಲಿರುತ್ತೇನೆ. ಒಳ್ಳೆಯದು. ದಿನದಲ್ಲಿ ಬಹಳಷ್ಟು ಕೆಲಸದಲ್ಲಿ ಬ್ಯುಸಿಯಾಗಿರುತ್ತೀರಿ. ವಾಸ್ತವದಲ್ಲಿ ಕೆಲಸಕಾರ್ಯಗಳನ್ನು ಮಾಡುತ್ತಲೂ ನೆನಪಿನಲ್ಲಿರಲು ಸಾಧ್ಯತೆಯಿದೆ. ಗಾದೆಯೂ ಇದೆ- ಕೈಕೆಲಸ ಮಾಡಲಿ, ಬುದ್ಧಿಯು ನೆನಪು ಮಾಡುತ್ತಿರಲಿ..... ಹೇಗೆ ಭಕ್ತಿಮಾರ್ಗದಲ್ಲಿ ಭಲೆ ಪೂಜೆ ಮಾಡುತ್ತಿರುತ್ತಾರೆ ಆದರೆ ಬುದ್ಧಿಯು ಕಾರ್ಯ ವ್ಯವಹಾರಗಳ ಕಡೆ ಹೊರಟುಹೋಗುತ್ತದೆ. ಯಾರೊಂದಿಗೆ ಹೆಚ್ಚಿನ ಸಂಬಂಧವಿದೆಯೋ ಬುದ್ಧಿಯು ಅಲ್ಲಿಗೆ ಹೋಗುತ್ತದೆ. ಅಂದಾಗ ಮಕ್ಕಳು ಭಲೆ ಚೆನ್ನಾಗಿ ಸರ್ವೀಸ್ ಮಾಡುತ್ತೀರಿ ಆದರೂ ಸಹ ತಂದೆಯು ಬೇಬಿ ಬುದ್ಧಿಯವರೆಂದೇ ಹೇಳಲಾಗುತ್ತದೆ. ನಾವು ತಂದೆಯ ನೆನಪನ್ನು ಮರೆತು ಹೋಗುತ್ತೇವೆಂದು ಬಹಳ ಮಂದಿ ಮಕ್ಕಳು ಬರೆಯುತ್ತಾರೆ. ಅರೆ! ತನ್ನ ತಂದೆಯನ್ನು ಚಿಕ್ಕಮಗುವೂ ಸಹ ಮರೆಯುವುದಿಲ್ಲ. ಅಂದಾಗ ನೀವು ಬೇಬಿಗಳಿಗಿಂತಲೂ ಬೇಬಿಗಳಾಗಿದ್ದೀರಿ. ಯಾವ ತಂದೆಯಿಂದ ನೀವು ರಾಜಕುಮಾರ-ಕುಮಾರಿಯರಾಗುತ್ತೀರೋ ಅವರು ನಿಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ, ನೀವು ಅವರನ್ನೇ ಮರೆತುಹೋಗುತ್ತೀರಾ!

ಯಾವ ಮಕ್ಕಳು ತನ್ನ ಪೂರ್ಣಲೆಕ್ಕವನ್ನು ತಂದೆಗೆ ಕಳುಹಿಸುತ್ತಾರೆಯೋ ಅವರಿಗೇ ತಂದೆಯು ತಮ್ಮ ಸಲಹೆ ನೀಡುತ್ತಾರೆ. ನಾವು ತಂದೆಯನ್ನು ಹೇಗೆ ನೆನಪು ಮಾಡುತ್ತೇವೆ? ಯಾವಾಗ ನೆನಪು ಮಾಡುತ್ತೇವೆ? ಎಂಬ ಸಮಾಚಾರವನ್ನು ಮಕ್ಕಳು ತಿಳಿಸಬೇಕು. ಆಗ ಅದಕ್ಕೆ ತಂದೆಯು ಸಲಹೆ ಕೊಡುತ್ತಾರೆ. ಇವರು ಇಂತಹ ಸೇವೆ ಮಾಡುತ್ತಿದ್ದಾರೆ ಅದರನುಸಾರ ಇವರಿಗೆ ಎಷ್ಟು ಸಮಯವಿರುತ್ತದೆ ಎಂಬುದನ್ನು ತಂದೆಯು ಮಕ್ಕಳ ಸಮಾಚಾರದಿಂದಲೇ ತಿಳಿದುಕೊಳ್ಳುತ್ತಾರೆ. ಸರ್ಕಾರಿ ನೌಕರರಿಗಂತೂ ಬಹಳಷ್ಟು ಸಮಯವಿರುತ್ತದೆ. ಕೆಲಸವು ಕಡಿಮೆಯಾಯಿತೆಂದರೆ ತಂದೆಯನ್ನು ನೆನಪು ಮಾಡುತ್ತಾ ಇರಿ. ನಡೆದಾಡುತ್ತಾ, ತಿರುಗಾಡುತ್ತಾ ತಂದೆಯ ನೆನಪಿರಲಿ. ತಂದೆಯು ಸಮಯವನ್ನು ಕೊಡುತ್ತಾರೆ. ರಾತ್ರಿಯಲ್ಲಿ 9 ಗಂಟೆಗೆ ಮಲಗಿರಿ, ಮುಂಜಾನೆ 2 ಅಥವಾ 3 ಗಂಟೆಗೆ ಎದ್ದು ತಂದೆಯನ್ನು ನೆನಪು ಮಾಡಿ. ಇಲ್ಲಿ ಬಂದು ಕುಳಿತುಕೊಳ್ಳಿ ಆದರೆ ಕೇವಲ ಕುಳಿತುಕೊಂಡೇ ನೆನಪು ಮಾಡುವ ಹವ್ಯಾಸವನ್ನಿಟ್ಟುಕೊಳ್ಳಬಾರದು. ನಡೆದಾಡುತ್ತಾ-ತಿರುಗಾಡುತ್ತಲೂ ನೆನಪು ಮಾಡಬಹುದು, ಇಲ್ಲಂತೂ (ಮಧುಬನ) ಮಕ್ಕಳಿಗೆ ಬಹಳಷ್ಟು ಸಮಯವಿರುತ್ತದೆ. ಹೇಗೆ ಆರಂಭದಲ್ಲಿ ಏಕಾಂತದಲ್ಲಿ ಪರ್ವತಗಳ ಮೇಲೆ ಹೋಗಿ ಕುಳಿತುಕೊಳ್ಳುತ್ತಿದ್ದರು. ಹೇಗಾದರೂ ಮಾಡಿ ತಂದೆಯನ್ನು ನೆನಪು ಮಾಡಬೇಕಾಗಿದೆ, ಇಲ್ಲವೆಂದರೆ ವಿಕರ್ಮಗಳು ವಿನಾಶವಾಗುವುದಿಲ್ಲ. ತಂದೆಯನ್ನು ನೆನಪು ಮಾಡಲು ಆಗಲಿಲ್ಲವೆಂದರೆ ನೀವು ಬೇಬಿಗಳಿಗಿಂತಲೂ ಬೇಬಿಗಳಾದಿರಲ್ಲವೆ. ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಪತಿತ-ಪಾವನ ತಂದೆಯನ್ನು ನೆನಪು ಮಾಡುವುದರಲ್ಲಿಯೇ ಪರಿಶ್ರಮವಿದೆ, ಜ್ಞಾನವು ಬಹಳ ಸಹಜವಾಗಿದೆ. ನಿಮಗೆ ಇದು ಅರ್ಥವಾಗಿದೆ- ಕಲ್ಪದ ಹಿಂದೆ ಯಾರು ಬಂದಿದ್ದರೋ ಅವರೇ ಬಂದು ತಿಳಿದುಕೊಳ್ಳುತ್ತಾರೆ. ಮಕ್ಕಳಿಗೆ ಸಲಹೆಯಂತೂ ಸಿಗುತ್ತಿರುತ್ತದೆ. ಅಂದಾಗ ಇದೇ ಪ್ರಯತ್ನ ಪಡಬೇಕು- ನಾವು ಹೇಗೆ ತಮೋಪ್ರಧಾನರಿಂದ ಸತೋಪ್ರಧಾನರಾಗುವುದು? ಇದಕ್ಕಾಗಿ ತಂದೆಯ ನೆನಪಿನ ವಿನಃ ಮತ್ತ್ಯಾವುದೇ ಉಪಾಯವಿಲ್ಲ. ತಂದೆಗೆ ನೀವು ತಿಳಿಸಬಹುದು- ಬಾಬಾ, ನಮಗೆ ಇಂತಹ ಕೆಲಸವಿರುವ ಕಾರಣ ಅಥವಾ ಈ ವ್ಯವಹಾರವಿರುವ ಕಾರಣ ನಾನು ನೆನಪು ಮಾಡುತ್ತಿಲ್ಲ. ಹೀಗೆ ಹೇಳಿದಾಗ ಮಕ್ಕಳೇ, ಈ ರೀತಿಯಲ್ಲ ಈ ರೀತಿ ಮಾಡಿ ಎಂದು ತಂದೆಯು ಸಲಹೆ ನೀಡುತ್ತಾರೆ. ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಒಳ್ಳೊಳ್ಳೆಯ ಮಕ್ಕಳು ಜ್ಞಾನವನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ, ಅನ್ಯರನ್ನು ಖುಷಿಪಡಿಸುತ್ತಾರೆ ಆದರೆ ಯೋಗವಿಲ್ಲ. ತಂದೆಯನ್ನು ನೆನಪು ಮಾಡಬೇಕಾಗಿದೆ ಎಂಬುದನ್ನು ತಿಳಿದಿದ್ದರೂ ಸಹ ಮತ್ತೆ ಮರೆತುಹೋಗುತ್ತಾರೆ, ಇದರಲ್ಲಿಯೇ ಪರಿಶ್ರಮವಿದೆ. ನೆನಪು ಮಾಡುವುದರಿಂದ ಆಂತರ್ಯದಲ್ಲಿ ಖುಷಿಯಿರುವುದು- ನಾವು ತಂದೆಯಿಂದ ಭವಿಷ್ಯದಲ್ಲಿ ರಾಜಕುಮಾರ-ಕುಮಾರಿಯರಾಗುತ್ತಿದ್ದೇವೆ. ಮುಂಜಾನೆಯೆದ್ದು ಇಂತಹ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಿ. ಸುಸ್ತಾದರೆ ಮಲಗಿಕೊಂಡೇ ನೆನಪು ಮಾಡಿರಿ. ತಂದೆಯು ಯುಕ್ತಿಗಳನ್ನುತಿಳಿಸುತ್ತಾರೆ- ನಡೆದಾಡುತ್ತಾ-ತಿರುಗಾಡುತ್ತಾ ನೆನಪು ಮಾಡಲು ಸಾಧ್ಯವಾಗದಿದ್ದರೆ ರಾತ್ರಿಯಲ್ಲಿ ನೆನಪಿನಲ್ಲಿ ಕುಳಿತುಕೊಳ್ಳಿ. ಆಗ ನಿಮ್ಮ ಖಾತೆಯು ಜಮಾ ಆಗುವುದು ಆದರೆ ಒಂದೇ ಸ್ಥಳದಲ್ಲಿ ಕುಳಿತುಬಿಡುವುದು ಹಠಯೋಗವಾಗಿಬಿಡುತ್ತದೆ. ನಿಮ್ಮದು ಸಹಜ ಮಾರ್ಗವಾಗಿದೆ. ಭೋಜನವನ್ನು ಸ್ವೀಕರಿಸುವಾಗಲೂ ತಂದೆಯನ್ನು ನೆನಪು ಮಾಡಿ. ನಾವು ತಂದೆಯ ಮೂಲಕ ವಿಶ್ವದ ಮಾಲೀಕರಾಗುತ್ತಿದ್ದೇವೆ. ಹೀಗೆ ತಮ್ಮ ಜೊತೆ ಮಾತನಾಡಿಕೊಳ್ಳುತ್ತಾ ಇರಿ, ನಾನು ಈ ವಿದ್ಯೆಯಿಂದ ಈ ರೀತಿಯಾಗುತ್ತೇನೆ. ವಿದ್ಯೆಯ ಮೇಲೆ ಪೂರ್ಣ ಗಮನವನ್ನಿಡಬೇಕಾಗಿದೆ. ನಿಮ್ಮ ಸಬ್ಜೆಕ್ಟ್ ಬಹಳ ಚಿಕ್ಕದಾಗಿದೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ, ಯಾವುದೇ ಮಾತು ಅರ್ಥವಾಗದಿದ್ದರೆ ತಂದೆಯನ್ನು ಕೇಳಿ, ತಮ್ಮನ್ನು ಆತ್ಮವೆಂದು ತಿಳಿಯಿರಿ. ಈ ಶರೀರವು ಪಂಚಭೂತಗಳಿಂದಾಗಿದೆ, ನಾನು ಶರೀರವಾಗಿದ್ದೇನೆಂದು ಹೇಳುವುದೆಂದರೆ ತನ್ನನ್ನು ಭೂತವೆಂದು ತಿಳಿಯುವುದಾಗಿದೆ. ಇದು ಆಸುರೀ ಪ್ರಪಂಚ, ಸತ್ಯಯುಗವು ದೈವೀ ಪ್ರಪಂಚವಾಗಿದೆ. ಇಲ್ಲಿ ಎಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ಯಾರೂ ತಮ್ಮನ್ನು ಆತ್ಮವೆಂದು ಅರಿತುಕೊಂಡಿಲ್ಲ. ಸರಿ ಮತ್ತು ತಪ್ಪು ಎರಡೂ ಇರುತ್ತದೆಯಲ್ಲವೆ. ನಾನಾತ್ಮ ಅವಿನಾಶಿ ಎಂದು ತಿಳಿಯುವುದು ಸರಿಯಾಗಿದೆ. ತಮ್ಮನ್ನು ವಿನಾಶಿ ಶರೀರವೆಂದು ತಿಳಿಯುವುದು ತಪ್ಪಾಗಿದೆ. ಬಹಳಷ್ಟು ದೇಹದ ಅಹಂಕಾರವಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ದೇಹವನ್ನು ಮರೆಯಿರಿ, ಆತ್ಮಾಭಿಮಾನಿಯಾಗಿ. ಇದರಲ್ಲಿಯೇ ಪರಿಶ್ರಮವಿದೆ. 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ಈಗ ಮನೆಗೆ ಹೋಗಬೇಕಾಗಿದೆ. ನಿಮ್ಮದೇ 84 ಜನ್ಮಗಳಿವೆ, ನಿಮಗೇ ಸಹಜವೆನಿಸುತ್ತದೆ. ಸೂರ್ಯವಂಶಿ ದೇವತಾ ಧರ್ಮದವರಿಗೆ 84 ಜನ್ಮಗಳಿವೆ ಎಂಬುದನ್ನು ಸರಿಪಡಿಸಿ ಬರೆಯಬೇಕಾಗುತ್ತದೆ. ಮಕ್ಕಳು ಓದುತ್ತಾ ಹೋದಂತೆ ಜ್ಞಾನದಲ್ಲಿ ನವೀನತೆ ಬರುತ್ತಾ ಇರುವುದು. ಹೇಗೆ ಲೌಕಿಕ ವಿದ್ಯೆಯಲ್ಲಿಯೂ ನಂಬರ್ವಾರ್ ಇರುತ್ತಾರಲ್ಲವೆ. ಕಡಿಮೆ ಓದಿದರೆ ಕಡಿಮೆ ಸಂಬಳ ಸಿಗುವುದು. ಈಗ ನೀವು ಮಕ್ಕಳು ತಂದೆಯ ಬಳಿ ನರನಿಂದ ನಾರಾಯಣರಾಗುವ ಸತ್ಯಕಥೆಯನ್ನು ಕೇಳಲು ಬಂದಿದ್ದೀರಿ. ಈ ಮೃತ್ಯುಲೋಕವು ಈಗ ಸಮಾಪ್ತಿಯಾಗಲಿದೆ, ನಾವು ಅಮರಲೋಕದಲ್ಲಿ ಹೋಗಬೇಕಾಗಿದೆ. ಈಗ ನೀವು ಮಕ್ಕಳಿಗೆ ಇದು ಚಿಂತೆಯಾಗಬೇಕು- ನಾವು ತಮೋಪ್ರಧಾನರಿಂದ ಸತೋಪ್ರಧಾನರು, ಪತಿತರಿಂದ ಪಾವನರಾಗಬೇಕಾಗಿದೆ. ಪತಿತ-ಪಾವನ ತಂದೆಯು ಎಲ್ಲಾ ಮಕ್ಕಳಿಗೆ ಒಂದೇ ಯುಕ್ತಿಯನ್ನು ತಿಳಿಸುತ್ತಾರೆ- ತಂದೆಯನ್ನು ನೆನಪು ಮಾಡಿ, ಚಾರ್ಟ್ ಇಟ್ಟುಕೊಳ್ಳಿ ಆಗ ನಿಮಗೆ ಬಹಳ ಖುಷಿಯಿರುವುದು. ಈಗ ನಿಮಗೆ ಜ್ಞಾನವಿದೆ, ಪ್ರಪಂಚದವರಂತೂ ಘೋರ ಅಂಧಕಾರದಲ್ಲಿದ್ದಾರೆ. ಈಗ ನಿಮಗೆ ಪ್ರಕಾಶತೆಯು ಸಿಗುತ್ತದೆ. ನೀವು ತ್ರಿನೇತ್ರಿ, ತ್ರಿಕಾಲದರ್ಶಿಗಳಾಗುತ್ತಿದ್ದೀರಿ. ಬಹಳ ಮಂದಿ ಇಂತಹವರೂ ಇದ್ದಾರೆ. ಈ ಜ್ಞಾನವನ್ನು ಸತ್ಸಂಗಗಳಲ್ಲಿಯೂ ಹೇಳುತ್ತಾರೆ, ಇದೇನೂ ಹೊಸಮಾತಲ್ಲ ಎಂದು ಹೇಳುತ್ತಾರೆ. ಅರೆ! ಈ ಜ್ಞಾನವು ಯಾರಿಗೂ ಸಿಗುವುದಿಲ್ಲ. ಒಂದುವೇಳೆ ಅಲ್ಲಿ ಜ್ಞಾನವು ಸಿಕ್ಕಿದರೂ ಸಹ ಏನೂ ಮಾಡುವುದಿಲ್ಲ. ಯಾರಾದರು ನರನಿಂದ ನಾರಾಯಣನಾಗುವ ಪುರುಷಾರ್ಥ ಮಾಡುತ್ತಾರೆಯೇ? ಏನೂ ಇಲ್ಲ. ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಮುಂಜಾನೆಯ ಸಮಯವು ಬಹಳ ಒಳ್ಳೆಯದಾಗಿದೆ. ಬಹಳ ಆನಂದವಾಗುತ್ತದೆ, ಶಾಂತವಾಗಿಬಿಡುತ್ತೀರಿ. ವಾಯುಮಂಡಲವೂ ಚೆನ್ನಾಗಿರುತ್ತದೆ. 10 ಗಂಟೆಯಿಂದ 12 ಗಂಟೆಯವರೆಗೆ ಕೆಟ್ಟ ವಾಯುಮಂಡಲವಿರುತ್ತದೆ ಆದ್ದರಿಂದ ಮುಂಜಾನೆಯ ಸಮಯವು ಬಹಳ ಒಳ್ಳೆಯದಾಗಿದೆ. ರಾತ್ರಿಯಲ್ಲಿ ಬೇಗನೆ ಮಲಗಿ ಬೆಳಗ್ಗೆ 2-3 ಗಂಟೆಗೆ ಎದ್ದೇಳಿ, ಆರಾಮವಾಗಿ ಕುಳಿತುಕೊಳ್ಳಿ, ತಂದೆಯೊಂದಿಗೆ ಮಾತನಾಡಿ. ವಿಶ್ವದ ಚರಿತ್ರೆ-ಭೂಗೋಳವನ್ನು ನೆನಪು ಮಾಡಿ. ಶಿವತಂದೆಯ ತಿಳಿಸುತ್ತಾರೆ- ನನ್ನಲ್ಲಿ ರಚಯಿತ ಮತ್ತು ರಚನೆಯ ಜ್ಞಾನವಿದೆಯಲ್ಲವೆ. ನಾನು ನಿಮಗೆ ಶಿಕ್ಷಕನಾಗಿ ಓದಿಸುತ್ತೇನೆ. ನೀವಾತ್ಮಗಳು ತಂದೆಯನ್ನು ನೆನಪು ಮಾಡುತ್ತೀರಿ. ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ. ಯಾರ ಜೊತೆ ಯೋಗ? ಇದನ್ನೂ ಬರೆಯಬೇಕಾಗಿದೆ. ಪರಮಾತ್ಮನ ಜೊತೆ ಆತ್ಮದ ಯೋಗ ಅರ್ಥಾತ್ ನೆನಪಾಗಿದೆ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ- ನಾವು ಸರ್ವತೋಮುಖ ಪಾತ್ರಧಾರಿಗಳಾಗಿದ್ದೇವೆ. ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. ಇಲ್ಲಿ ಬ್ರಾಹ್ಮಣಕುಲದವರೇ ಬರುತ್ತಾರೆ. ನಾವು ಬ್ರಾಹ್ಮಣರಾಗಿದ್ದೇವೆ, ನಾವೀಗ ದೇವತೆಗಳಾಗುವವರಿದ್ದೇವೆ, ಸರಸ್ವತಿಯೂ ಸಹ ಮಗಳಾಗಿದ್ದಾರಲ್ಲವೆ. ಇವರು (ಬ್ರಹ್ಮಾ) ವೃದ್ಧನಾಗಿದ್ದರೂ ಸಹ ನಾನೀಗ ಹೋಗಿ ರಾಜನ ಮನೆಯಲ್ಲಿ ಜನ್ಮ ತೆಗೆದುಕೊಳ್ಳುತ್ತೇನೆ, ಈಗ ಓದುತ್ತಿದ್ದೇನೆ ಎಂದು ಬಹಳ ಖುಷಿಯಿರುತ್ತದೆ. ಇದು ನಿಮ್ಮೆಲ್ಲರ ಗುರಿ-ಧ್ಯೇಯವಾಗಿದೆ. ಅಂದಮೇಲೆ ಖುಷಿಯೇಕೆ ಇರುವುದಿಲ್ಲ. ಮನುಷ್ಯರು ಭಲೆ ಏನಾದರೂ ಹೇಳಲಿ ನಿಮ್ಮ ಖುಷಿಯೇಕೆ ಮರೆಯಾಗಬೇಕು! ತಂದೆಯನ್ನು ನೆನಪೇ ಮಾಡದಿದ್ದರೆ ನರನಿಂದ ನಾರಾಯಣರು ಹೇಗಾಗುತ್ತೀರಿ. ಶ್ರೇಷ್ಠರಾಗಬೇಕಲ್ಲವೆ. ಇಂತಹ ಪುರುಷಾರ್ಥವನ್ನು ಮಾಡಿ ತೋರಿಸಿ, ಏಕೆ ತಬ್ಬಿಬ್ಬಾಗುತ್ತೀರಿ? ಎಲ್ಲರೂ ರಾಜರಾಗಲು ಸಾಧ್ಯವೇ ಎಂದು ಏಕೆ ಹೃದಯವಿಧೀರ್ಣರಾಗುತ್ತೀರಿ? ಈ ವಿಚಾರವು ಬಂದರೆ ಅನುತ್ತೀರ್ಣರಾದರು. ಶಾಲೆಯಲ್ಲಿ ವಕೀಲ ವಿದ್ಯೆಯನ್ನು ಓದುತ್ತಾರೆ. ಎಲ್ಲರೂ ವಕೀಲರಾಗುತ್ತಾರೆಯೇ ಎಂದು ಅವರು ಹೇಳುವುದಿಲ್ಲ. ಯಾರು ಓದುವುದಿಲ್ಲವೋ ಅವರು ಅನುತ್ತೀರ್ಣರಾಗುತ್ತಾರೆ. 16,108ರ ಮಾಲೆಯೂ ಇದೆ. ಮೊಟ್ಟಮೊದಲಿಗೆ ಯಾರು ಬರುತ್ತಾರೆ? ಯಾರೆಷ್ಟು ಪುರುಷಾರ್ಥ ಮಾಡುತ್ತಾರೆಯೋ ಅದರಂತೆಯೇ ಬರುತ್ತಾರೆ. ಒಬ್ಬರು ಇನ್ನೊಬ್ಬರಿಗಿಂತಲೂ ತೀವ್ರ ಪುರುಷಾರ್ಥವನ್ನಂತೂ ಮಾಡುತ್ತಾರಲ್ಲವೆ. ನಾವೀಗ ಈ ಹಳೆಯ ಶರೀರವನ್ನು ಬಿಟ್ಟು ಮನೆಗೆ ಹೋಗಬೇಕೆಂದು ನೀವು ಮಕ್ಕಳ ಬುದ್ಧಿಯಲ್ಲಿದೆ. ಇಷ್ಟು ನೆನಪಿದ್ದರೂ ಸಹ ತೀವ್ರ ಪುರುಷಾರ್ಥವಾಗುವುದು. ಸರ್ವರ ಮುಕ್ತಿ-ಜೀವನ್ಮುಕ್ತಿದಾತನು ಒಬ್ಬ ತಂದೆಯಾಗಿದ್ದಾರೆ ಎಂದು ನೀವು ಮಕ್ಕಳ ಬುದ್ಧಿಯಲ್ಲಿರಲಿ. ಇಂದು ಪ್ರಪಂಚದಲ್ಲಿ ಕೋಟ್ಯಾಂತರ ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ನೀವು 9 ಲಕ್ಷ ಮಾತ್ರವೇ ಇರುತ್ತೀರಿ. ಇದೂ ಸಹ ಹೆಚ್ಚೆಂದೇ ಹೇಳಲಾಗುತ್ತದೆ. ಸತ್ಯಯುಗದಲ್ಲಿ ಮತ್ತೆಷ್ಟು ಮಂದಿ ಇರುತ್ತಾರೆ, ರಾಜಧಾನಿಯಲ್ಲಿ ವ್ಯಕ್ತಿಗಳಂತೂ ಬೇಕಲ್ಲವೆ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಬುದ್ಧಿಯು ಹೇಳುತ್ತದೆ- ಸತ್ಯಯುಗದಲ್ಲಿ ಬಹಳ ಸುಂದರವಾದ ಚಿಕ್ಕವೃಕ್ಷವಿರುತ್ತದೆ. ಹೆಸರೇ ಆಗಿದೆ- ಸ್ವರ್ಗ, ಪ್ಯಾರಡೈಸ್ ಮಕ್ಕಳ ಬುದ್ಧಿಯಲ್ಲಿ ಇಡೀ ಚಕ್ರವು ಸುತ್ತುತ್ತಿರುತ್ತದೆ. ಸದಾ ಇಷ್ಟು ನೆನಪಿದ್ದರೂ ಸಹ ಸಾಕು.

ಈ ಕೆಮ್ಮು ಇತ್ಯಾದಿಯೂ ಸಹ ಕರ್ಮಭೋಗವಾಗಿದೆ, ಇದು ಹಳೆಯ ಪಾದರಕ್ಷೆಯಾಗಿದೆ ಹೊಸದಂತೂ ಇಲ್ಲಿ ಸಿಗಲು ಸಾಧ್ಯವಿಲ್ಲ. ನಾನು (ಶಿವತಂದೆ) ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ, ನಾನು ಯಾವುದೇ ಗರ್ಭದಲ್ಲಿ ಬರುವುದಿಲ್ಲ, ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಇವರದು ವಾನಪ್ರಸ್ಥ ಸ್ಥಿತಿಯಾಗಿದೆ. ವಾಣಿಯಿಂದ ದೂರ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ಹೇಗೆ ರಾತ್ರಿಯಿಂದ ದಿನ, ದಿನದಿಂದ ರಾತ್ರಿಯು ಅವಶ್ಯವಾಗಿ ಆಗಬೇಕಾಗಿದೆಯೋ ಹಾಗೆಯೆ ಹಳೆಯ ಪ್ರಪಂಚವು ಅವಶ್ಯವಾಗಿ ವಿನಾಶವಾಗಬೇಕಾಗಿದೆ. ಈ ಸಂಗಮಯುಗವು ಪೂರ್ಣವಾಗಿ ಸತ್ಯಯುಗವು ಬರುವುದು. ಮಕ್ಕಳು ನೆನಪಿನ ಯಾತ್ರೆಯಲ್ಲಿ ಬಹಳ ಗಮನವನ್ನಿಡಬೇಕಾಗಿದೆ. ನೆನಪಿನ ಯಾತ್ರೆಯು ಬಹಳ ಕಡಿಮೆಯಿದೆ ಆದ್ದರಿಂದ ತಂದೆಯು ಬೇಬಿಗಳೆಂದು ಹೇಳುತ್ತಾರೆ, ಹುಡುಗಾಟಿಕೆಯನ್ನು ತೋರಿಸುತ್ತಾರೆ. ತಂದೆಯನ್ನು ನೆನಪು ಮಾಡಲು ಆಗುವುದಿಲ್ಲವೆಂದು ಹೇಳುತ್ತಾರೆಂದರೆ ಅಂತಹವರಿಗೆ ಬೇಬಿಗಳೆಂದೇ ಹೇಳುತ್ತಾರಲ್ಲವೆ. ತಂದೆಯನ್ನು ಮರೆಯಲು ನೀವೇನು ಚಿಕ್ಕ ಬೇಬಿಗಳೇ? ಮಧುರಾತಿ ಮಧುರ ತಂದೆ, ಶಿಕ್ಷಕ, ಸದ್ಗುರು ಅರ್ಧಕಲ್ಪದ ಪ್ರಿಯಾತಿಪ್ರಿಯ ತಂದೆಯನ್ನೇ ನೀವು ಮರೆತುಹೋಗುತ್ತೀರಾ! ಅರ್ಧಕಲ್ಪ ದುಃಖದಲ್ಲಿ ನೀವು ಅವರನ್ನು ಹೇ ಭಗವಂತ ಎಂದು ನೆನಪು ಮಾಡುತ್ತಾ ಬಂದಿದ್ದೀರಿ. ಆತ್ಮವು ಶರೀರದ ಮೂಲಕ ಹೇಳುತ್ತದೆಯಲ್ಲವೆ. ನಾನೀಗ ಬಂದಿದ್ದೇನೆ, ಆದ್ದರಿಂದ ಚೆನ್ನಾಗಿ ನೆನಪು ಮಾಡಿರಿ, ಅನೇಕರಿಗೆ ಮಾರ್ಗವನ್ನು ತಿಳಿಸಿ. ಮುಂದೆ ಹೋದಂತೆ ಬಹಳಷ್ಟು ವೃದ್ಧಿಯಾಗುತ್ತದೆ. ಧರ್ಮದ ವೃದ್ಧಿಯಾಗುತ್ತದೆಯಲ್ಲವೆ. ಅರವಿಂದ ಘೋಷರ ತರಹ. ಇಂದು ಅವರ ಸೇವಾಕೇಂದ್ರಗಳು ಎಷ್ಟೊಂದಿವೆ. ನೀವೀಗ ತಿಳಿದುಕೊಂಡಿದ್ದೀರಿ- ಅದೆಲ್ಲವೂ ಭಕ್ತಿಮಾರ್ಗವಾಗಿದೆ. ನಿಮಗೆ ಈಗ ಜ್ಞಾನವು ಸಿಗುತ್ತದೆ. ಇದು ಪುರುಷೋತ್ತಮರಾಗುವ ಜ್ಞಾನವಾಗಿದೆ. ನೀವು ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ತಂದೆಯು ಬಂದು ಎಲ್ಲಾ ಕೊಳಕಾದ ಬಟ್ಟೆಗಳನ್ನು ಸ್ವಚ್ಛ ಮಾಡುತ್ತಾರೆ. ಅವರಿಗೇ ಮಹಿಮೆಯಿದೆ. ಮುಖ್ಯವಾದುದು ನೆನಪಾಗಿದೆ, ಜ್ಞಾನವು ಬಹಳ ಸಹಜವಾಗಿದೆ. ಮುರುಳಿಯನ್ನು ಓದಿ ತಿಳಿಸಿ, ನೆನಪು ಮಾಡುತ್ತಾ ಇರಿ. ನೆನಪು ಮಾಡುತ್ತಾ-ಮಾಡುತ್ತಾ ಆತ್ಮವು ಪವಿತ್ರವಾಗುವುದು. ಪೆಟ್ರೋಲ್ ತುಂಬುತ್ತಾ ಹೋಗುವುದು. ಆಗ (ಪರಮಧಾಮಕ್ಕೆ) ಓಡುವಿರಿ. ಇದನ್ನು ಶಿವತಂದೆಯ ಮೆರವಣಿಗೆಯೆಂದಾದರೂ ಹೇಳಿ, ಮಕ್ಕಳೆಂದಾದರೂ ಹೇಳಿ. ತಂದೆಯು ತಿಳಿಸುತ್ತಾರೆ- ನಾನು ಬಂದಿದ್ದೇನೆ, ನಿಮ್ಮನ್ನು ಕಾಮಚಿತೆಯಿಂದ ಇಳಿಸಿ ಯೋಗದ ಚಿತೆಯ ಮೇಲೆ ಕುಳ್ಳರಿಸುತ್ತೇನೆ. ಯೋಗದಿಂದ ಆರೋಗ್ಯ, ಜ್ಞಾನದಿಂದ ಐಶ್ವರ್ಯವು ಸಿಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಗುರಿ-ಧ್ಯೇಯವನ್ನು ಸನ್ಮುಖದಲ್ಲಿಟ್ಟುಕೊಂಡು ಖುಷಿಯಲ್ಲಿರಬೇಕಾಗಿದೆ. ಎಂದೂ ಸಹ ಹೃದಯವಿಧೀರ್ಣರಾಗಿ ಎಲ್ಲರೂ ರಾಜರಾಗಲು ಸಾಧ್ಯವೇ? ಎಂಬ ಸಂಕಲ್ಪವು ಬರಬಾರದು. ಪುರುಷಾರ್ಥ ಮಾಡಿ ಶ್ರೇಷ್ಠಪದವಿಯನ್ನು ಪಡೆಯಬೇಕಾಗಿದೆ.

2. ಅತೀ ಪ್ರಿಯವಾದ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಇದರಲ್ಲಿ ಬೇಬಿಗಳಾಗಬಾರದು. ನೆನಪಿಗಾಗಿ ಮುಂಜಾನೆಯ ಸಮಯವು ಒಳ್ಳೆಯದಾಗಿದೆ, ಆರಾಮವಾಗಿ ಶಾಂತಿಯಲ್ಲಿ ಕುಳಿತು ನೆನಪು ಮಾಡಿ.

ವರದಾನ:
ಯಜ್ಞ ಸೇವೆಯ ಮೂಲಕ ಸರ್ವ ಪ್ರಾಪ್ತಿಗಳ ಪ್ರಸಾದವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಆಲ್ರೌಂಡ್ ಸೇವಾಧಾರಿ ಭವ

ಸಂಗಮಯುಗದಲ್ಲಿ ಆಲ್ರೌಂಡ್ ಸೇವೆಯ ಚಾನ್ಸ್ ಸಿಗುವುದು- ಇದೂ ಸಹ ಡ್ರಾಮಾದಲ್ಲಿ ಒಂದು ಲಿಫ್ಟ್ ಆಗಿದೆ. ಯಾರು ಪ್ರೀತಿಯಿಂದ ಯಜ್ಞದ ಆಲ್ರೌಂಡ್ ಸೇವೆ ಮಾಡುತ್ತಾರೆ ಅವರಿಗೆ ಸರ್ವ ಪ್ರಾಪ್ತಿಗಳ ಪ್ರಸಾದ ಸ್ವತಃ ಪ್ರಾಪ್ತಿಯಾಗಿಬಿಡುತ್ತದೆ. ಅವರು ನಿರ್ವಿಘ್ನರಾಗಿರುತ್ತಾರೆ. ಒಂದು ಬಾರಿ ಸೇವೆ ಮಾಡಿದರೆ ಸಾವಿರ ಬಾರಿ ಸೇವೆಯ ಫಲ ಪ್ರಾಪ್ತಿಯಾದ ಹಾಗೆ. ಸದಾ ಸ್ಥೂಲ, ಸೂಕ್ಷ್ಮ ಆಧಾರ ಹಾಕಿರುತ್ತದೆ. ಎಲ್ಲರನ್ನೂ ಸಂತುಷ್ಟಗೊಳಿಸುವುದು-ಇದು ಎಲ್ಲಕ್ಕಿಂತಲೂ ದೊಡ್ಡ ಸೇವೆಯಾಗಿದೆ. ಅತಿಥಿ ಸತ್ಕಾರ ಮಾಡುವುದು. ಇದು ಎಲ್ಲದಕ್ಕಿಂತ ದೊಡ್ಡ ಭಾಗ್ಯವಾಗಿದೆ.

ಸ್ಲೋಗನ್:
ಸ್ವಮಾನದಲ್ಲಿ ಸ್ಥಿತರಾಗಿರಿ ಆಗ ಅನೇಕ ಪ್ರಕಾರದ ಅಭಿಮಾನ ಸ್ವತಃ ಸಮಾಪ್ತಿಯಾಗಿಬಿಡುವುದು.


ಅವ್ಯಕ್ತ ಸೂಚನೆ: ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.

ಹೇಗೆ ಪ್ರಪಂಚದ ರಾಯಲ್ ಆತ್ಮರು ಎಂದೂ ಚಿಕ್ಕ-ಚಿಕ್ಕ ಮಾತುಗಳಲ್ಲಿ, ಚಿಕ್ಕ ವಸ್ತುವಿನಲ್ಲಿ ತಮ್ಮ ಬುದ್ಧಿ ಅಥವಾ ಸಮಯವನ್ನು ಕೊಡುವುದಿಲ್ಲ, ನೋಡುತ್ತಲೂ ನೋಡುವುದಿಲ್ಲ, ಕೇಳುತ್ತಲೂ ಕೇಳುವುದಿಲ್ಲ, ನೀವು ಇಂತಹ ಆತ್ಮಿಕ ಘನತೆಯುಳ್ಳ ಆತ್ಮರು ಎಂದೂ ಆತ್ಮದ ಚಿಕ್ಕ-ಚಿಕ್ಕ ಮಾತುಗಳಲ್ಲಿ, ಯಾವುದು ರಾಯಲ್ ಅಲ್ಲ ಅದರಲ್ಲಿ ತಮ್ಮ ಬುದ್ಧಿ ಅಥವಾ ಸಮಯವನ್ನು ಕೊಡುವುದಿಲ್ಲ. ಆತ್ಮಿಕ ಘನತೆಯುಳ್ಳ ಆತ್ಮರ ಮುಖದಿಂದ ಎಂದೂ ವ್ಯರ್ಥ ಅಥವಾ ಸಾಧಾರಣ ಮಾತುಗಳು ಬರಲು ಸಾಧ್ಯವಿಲ್ಲ.