15.06.25 Avyakt Bapdada
Kannada
Murli 30.11.2005 Om Shanti Madhuban
“ಸಮಯದ ಸಮೀಪತೆಯ ಪ್ರಮಾಣ
ಸ್ವಯಂನ್ನು ಹದ್ದಿನ ಬಂಧನಗಳಿಂದ ಮುಕ್ತಮಾಡಿಕೊಂಡು ಸಂಪನ್ನ ಮತ್ತು ಸಮಾನರಾಗಿ”
ಇಂದು ನಾಲ್ಕಾರು ಕಡೆಯ
ಸಂಪನ್ನ-ಸಮಾನ ಮಕ್ಕಳನ್ನು ನೋಡುತ್ತಿದ್ದೇವೆ. ಸಮಾನ ಮಕ್ಕಳೇ ತಂದೆಯ ಹೃದಯದಲ್ಲಿ
ಸಮಾವೇಶವಾಗಿದ್ದಾರೆ. ಸಮಾನ ಮಕ್ಕಳ ವಿಶೇಷತೆ ಏನೆಂದರೆ - ಅವರು ಸದಾ ನಿರ್ವಿಘ್ನ, ನಿರ್ವಿಕಲ್ಪ,
ನಿರ್ಮಾನ ಮತ್ತು ನಿರ್ಮಲವಾಗಿರುತ್ತಾರೆ. ಇಂತಹ ಆತ್ಮಗಳು ಸದಾ ಸ್ವತಂತ್ರರಾಗಿರುತ್ತಾರೆ. ಯಾವುದೇ
ಪ್ರಕಾರದ ಹದ್ದಿನ ಬಂಧನದಲ್ಲಿ ಬಂಧಿತರಾಗಿರುವುದಿಲ್ಲ ಅಂದಾಗ ತಮ್ಮೊಂದಿಗೆ ತಾವು ಕೇಳಿಕೊಳ್ಳಿ - ಈ
ರೀತಿಯ ಬೇಹದ್ದಿನ ಸ್ವತಂತ್ರ ಆತ್ಮನಾಗಿದ್ದೇನೆಯೇ! ಎಲ್ಲದಕ್ಕಿಂತ ಮೊದಲ ಸ್ವಾತಂತ್ರ್ಯತೆಯಾಗಿದೆ -
ದೇಹಭಾನದಿಂದ ಸ್ವತಂತ್ರ. ಯಾವಾಗ ಬೇಕೋ ಆಗ ದೇಹದ ಆಧಾರವನ್ನು ತೆಗೆದುಕೊಳ್ಳುವುದು, ಯಾವಾಗ ಬೇಕೋ
ದೇಹದಿಂದ ಭಿನ್ನ ಆಗಿಬಿಡುವುದು. ದೇಹದ ಆಕರ್ಷಣೆಯಲ್ಲಿ ಬರಬಾರದು. ಎರಡನೆಯ ಮಾತೇನೆಂದರೆ ಸ್ವತಂತ್ರ
ಆತ್ಮನು ಯಾವುದೇ ಹಳೆಯ ಸ್ವಭಾವ ಮತ್ತು ಸಂಸ್ಕಾರದ ಬಂಧನದಲ್ಲಿಯೂ ಇರುವುದಿಲ್ಲ. ಹಳೆಯ ಸ್ವಭಾವ
ಮತ್ತು ಸಂಸ್ಕಾರದಿಂದ ಮುಕ್ತರಾಗಿರುತ್ತಾರೆ. ಜೊತೆಜೊತೆಗೆ ಯಾವುದೇ ದೇಹಧಾರಿ ಆತ್ಮನ
ಸಂಬಂಧ-ಸಂಪರ್ಕದಲ್ಲಿ ಆಕರ್ಷಿತರಾಗುವುದಿಲ್ಲ. ಸಂಬಂಧ-ಸಂಪರ್ಕದಲ್ಲಿ ಬರುತ್ತಾ ಭಿನ್ನ ಮತ್ತು
ಪ್ರಿಯರಾಗಿರುತ್ತಾರೆ ಅಂದಾಗ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ - ಯಾವುದೇ ಚಿಕ್ಕಕರ್ಮೇಂದ್ರಿಯವೂ
ಸಹ ಬಂಧನದಲ್ಲಿ ಬಂಧಿಸುತ್ತಿಲ್ಲವೇ? ತಮ್ಮ ಸ್ವಮಾನವನ್ನು ನೆನಪು ಮಾಡಿಕೊಳ್ಳಿ - ಮಾ||
ಸರ್ವಶಕ್ತಿವಂತರು, ತ್ರಿಕಾಲದರ್ಶಿಗಳು, ತ್ರಿನೇತ್ರಿ, ಸ್ವದರ್ಶನಚಕ್ರಧಾರಿ. ಇದೇ ಸ್ವಮಾನದ ಆಧಾರದ
ಮೇಲೆ ಸರ್ವಶಕ್ತಿವಂತನ ಮಕ್ಕಳನ್ನು ಯಾವುದೇ ಕರ್ಮೇಂದ್ರಿಯವು ಆಕರ್ಷಣೆ ಮಾಡಲು ಸಾಧ್ಯವೇ? ಏಕೆಂದರೆ
ಸಮಯದ ಸಮೀಪತೆಯನ್ನು ನೋಡುತ್ತಾ ತಮ್ಮನ್ನು ನೋಡಿಕೊಳ್ಳಿ - ಸೆಕೆಂಡಿನಲ್ಲಿ ಸರ್ವಬಂಧನಗಳಿಂದ
ಮುಕ್ತರಾಗಲು ಸಾಧ್ಯವೇ? ಯಾವುದೇ ಇಂತಹ ಬಂಧನವಂತೂ ಇಲ್ಲ ತಾನೆ? ಏಕೆಂದರೆ ಅಂತಿಮಪರೀಕ್ಷೆಯಲ್ಲಿ
ನಂಬರ್ವನ್ ಆಗುವ ಪ್ರತ್ಯಕ್ಷಪ್ರಮಾಣವಾಗಿದೆ - ಮನಸ್ಸು-ಬುದ್ಧಿಯನ್ನು ಸೆಕೆಂಡಿನಲ್ಲಿ ಹೇಗೆ, ಎಲ್ಲಿ
ತೊಡಗಿಸಬಯಸುವಿರೋ ಅಲ್ಲಿ ತೊಡಗಬೇಕು. ಏರುಪೇರಿನಲ್ಲಿ ಬರಬಾರದು. ಹೇಗೆ ಸ್ಥೂಲಶರೀರದ ಮೂಲಕ ಎಲ್ಲಿ
ಹೋಗಬಯಸುವಿರೋ ಅಲ್ಲಿಗೆ ಹೋಗುತ್ತೀರಲ್ಲವೆ. ಹಾಗೆ0iÉುೀ ಬುದ್ಧಿಯ ಮೂಲಕ ಯಾವ ಸ್ಥಿತಿಯಲ್ಲಿ
ಸ್ಥಿತರಾಗಬಯಸುವಿರೋ ಅದರಲ್ಲಿ ಸ್ಥಿತರಾಗಬಲ್ಲಿರಾ? ಹೇಗೆ ವಿಜ್ಞಾನದ ಮೂಲಕ ಲೈಟ್ಹೌಸ್ ಮೈಟ್ಹೌಸ್
ಇದೆ, ಸೆಕೆಂಡಿನಲ್ಲಿ ಸ್ವಿಚ್ ಆನ್ ಮಾಡುತ್ತಿದ್ದಂತೆಯೇ ಲೈಟ್ಹೌಸ್ ನಾಲ್ಕಾರುಕಡೆ ತನ್ನ ಲೈಟ್
ಮತ್ತು ಮೈಟ್ನ್ನು ಕೊಡತೊಡಗುತ್ತದೆ ಹಾಗೆಯೇ ತಾವು ಸ್ಮೃತಿಯ ಸಂಕಲ್ಪದ ಸ್ವಿಚ್ ಆನ್
ಮಾಡುತ್ತಿದ್ದಂತೆಯೇ ಲೈಟ್ಹೌಸ್ ಮೈಟ್ಹೌಸ್ ಆಗಿ ಆತ್ಮಗಳಿಗೆ ಲೈಟ್ಮೈಟ್ನ್ನು ಕೊಡಬಲ್ಲಿರಾ?
ಒಂದುಸೆಕೆಂಡಿನಲ್ಲಿ ಅಶರೀರಿಯಾಗಿಬಿಡಿ ಎಂದು ಆಜ್ಞೆ ಸಿಗುತ್ತಿದ್ದಂತೆಯೇ ಆಗಿಬಿಡುತ್ತೀರಲ್ಲವೆ!
ಅಥವಾ ಯುದ್ಧ ಮಾಡಬೇಕಾಗುತ್ತದೆಯೋ? ಈ ಬಹಳಕಾಲದ ಅಭ್ಯಾಸವೇ ಅಂತ್ಯದಲ್ಲಿ ಸಹಯೋಗಿಯಾಗುವುದು.
ಒಂದುವೇಳೆ ಬಹಳಕಾಲದ ಅಭ್ಯಾಸವಿಲ್ಲವೆಂದರೆ ಆ ಸಮಯದಲ್ಲಿ ಅಶರೀರಿಯಾಗಲು ಪರಿಶ್ರಮಪಡಬೇಕಾಗುವುದು.
ಆದ್ದರಿಂದ ಬಾಪ್ದಾದಾ ಇದೇ ಸೂಚನೆ ನೀಡುತ್ತಾರೆ - ಈ ಅಭ್ಯಾಸವನ್ನು ಇಡೀ ದಿನದಲ್ಲಿ ಕರ್ಮಮಾಡುತ್ತಲೂ
ಅಭ್ಯಾಸ ಮಾಡಿ. ಇದಕ್ಕಾಗಿ ಮನಸ್ಸಿನ ನಿಯಂತ್ರಣಶಕ್ತಿಯ ಅವಶ್ಯಕತೆಯಿದೆ. ಒಂದುವೇಳೆ ಮನಸ್ಸು
ನಿಯಂತ್ರಣದಲ್ಲಿ ಬಂದುಬಿಟ್ಟಿತೆಂದರೆ ಯಾವುದೇ ಕರ್ಮೇಂದ್ರಿಯವು ನಿಮ್ಮನ್ನು ವಶೀಭೂತ ಮಾಡಲು
ಸಾಧ್ಯವಿಲ್ಲ.
ಈಗ ಸರ್ವಆತ್ಮಗಳಿಗೆ
ತಮ್ಮ ಮೂಲಕ ಶಕ್ತಿಯ ವರದಾನ ಬೇಕಾಗಿದೆ. ಆತ್ಮಗಳಿಗೆ ತಾವು ಮಾ|| ಸರ್ವಶಕ್ತಿವಂತ ಆತ್ಮಗಳಪ್ರತಿ ಇದೇ
ಶುಭ ಇಚ್ಛೆಯಿದೆ - ಪರಿಶ್ರಮವಿಲ್ಲದೆ ವರದಾನದ ಮೂಲಕ, ದೃಷ್ಟಿಯ ಮೂಲಕ, ವೈಬ್ರೇಷನ್ ಮೂಲಕ ನಮ್ಮನ್ನು
ಮುಕ್ತಮಾಡಿ ಎಂದು. ಈಗ ಪರಿಶ್ರಮಪಟ್ಟು ಎಲ್ಲರೂ ಸುಸ್ತಾಗಿಬಿಟ್ಟಿದ್ದಾರೆ. ತಾವಂತೂ ಪರಿಶ್ರಮದಿಂದ
ಮುಕ್ತರಾಗಿಬಿಟ್ಟಿದ್ದೀರಲ್ಲವೆ! ಅಥವಾ ಈಗಲೂ ಪರಿಶ್ರಮಪಡಬೇಕಾಗುತ್ತದೆಯೇ? ಮೊದಲೇ ತಿಳಿಸಿದ್ದೆವು
- ಪರಿಶ್ರಮದಿಂದ ಮುಕ್ತರಾಗುವ ಸಹಜ ಸಾಧನವಾಗಿದೆ - ತಂದೆಯೊಂದಿಗೆ ಹೃದಯದಿಂದ
ಅತೀಸ್ನೇಹಿಯಾಗಿಬಿಡುವುದು. ತಾವು ಬ್ರಾಹ್ಮಣಆತ್ಮಗಳ ಜನ್ಮದ ಪ್ರತಿಜ್ಞೆಯಾಗಿದೆ - ಈ ಪ್ರತಿಜ್ಞೆಯು
ನೆನಪಿದೆಯೇ? ಯಾವಾಗ ತಂದೆಯು ತಮ್ಮವರನ್ನಾಗಿ ಮಾಡಿಕೊಂಡರು, ಬ್ರಾಹ್ಮಣ ಜೀವನವನ್ನು ಕೊಟ್ಟರು.
ಅಂದಾಗ ಬ್ರಾಹ್ಮಣ ಜೀವನದ ತಮ್ಮೆಲ್ಲರ ಪ್ರತಿಜ್ಞೆಯೇನಾಗಿದೆ? ಒಬ್ಬ ತಂದೆಯ ವಿನಃ ಬೇರೆ ಯಾರೂ ಇಲ್ಲ
- ಈ ಪ್ರತಿಜ್ಞೆಯು ನೆನಪಿದೆಯೇ? ನೆನಪಿದೆಯೇ? ತಲೆ ಅಲುಗಾಡಿಸಿ. ಕೈಯನ್ನು ಅಲುಗಾಡಿಸುತ್ತಿದ್ದಾರೆ.
ಒಳ್ಳೆಯದು. ಪಕ್ಕಾ ನೆನಪಿದೆಯೇ ಅಥವಾ ಕೆಲಕೆಲವೊಮ್ಮೆ ಮರೆತುಹೋಗುತ್ತದೆಯೇ? ನೋಡಿ, 63 ಜನ್ಮಗಳಂ
ಮರೆಯುವವರಾದಿರಿ. ಈಗ ಈ ಒಂದುಜನ್ಮದಲ್ಲಿ ಸ್ಮೃತಿಸ್ವರೂಪರಾಗಿದ್ದೀರಿ ಅಂದಾಗ ತಂದೆಯು ಮಕ್ಕಳೊಂದಿಗೆ
ಕೇಳುತ್ತಿದ್ದೇವೆ - ಬಾಲ್ಯದ ಪ್ರತಿಜ್ಞೆಯು ನೆನಪಿದೆಯೇ? ಎಷ್ಟು ಸಹಜ ಮಾಡಿಕೊಟ್ಟಿದ್ದೇವೆ - ಒಬ್ಬ
ತಂದೆಯಲ್ಲಿ ಸಂಸಾರವಿದೆ, ಒಬ್ಬ ತಂದೆಯೊಂದಿಗೆ ಸರ್ವಸಂಬಂಧಗಳಿವೆ. ಒಬ್ಬ ತಂದೆಯಿಂದ
ಸರ್ವಪ್ರಾಪ್ತಿಗಳಾಗಿವೆ, ಓದಿಸುವವರೂ ಒಬ್ಬರೇ ಆಗಿದ್ದಾರೆ ಮತ್ತು ಪಾಲನೆ ಮಾಡುವವರೂ ಅವರೇ
ಆಗಿದ್ದಾರೆ. ಎಲ್ಲದರಲ್ಲಿಯೂ ಒಬ್ಬರೇ ಆಗಿದ್ದಾರೆ. ಭಲೆ ಈಶ್ವರೀಯ ಪರಿವಾರವೂ ಇದೆ ಆದರೆ ಪರಿವಾರವು
ಒಬ್ಬ ತಂದೆಯದಾಗಿದೆ. ಬೇರೆ-ಬೇರೆ ತಂದೆಯ ಪರಿವಾರವಲ್ಲ, ಒಂದೇ ಪರಿವಾರವಾಗಿದೆ. ಪರಿವಾರದಲ್ಲಿಯೂ
ಪರಸ್ಪರ ಒಬ್ಬರು ಇನ್ನೊಬ್ಬರಲ್ಲಿ ಆತ್ಮಿಕ ಸ್ನೇಹವಿದೆ. ಕೇವಲ ಸ್ನೇಹವಲ್ಲ, ಆತ್ಮಿಕ ಸ್ನೇಹ. ಇಂದು
ಬಾಪ್ದಾದಾ ಜನ್ಮದ ಪ್ರತಿಜ್ಞೆಯನ್ನು ನೆನಪು ತರಿಸುತ್ತಿದ್ದೇವೆ. ಇನ್ನೇನು ಪ್ರತಿಜ್ಞೆ ಮಾಡಿದ್ದೀರಿ?
ಎಲ್ಲರೂ ಬಹಳ ಉಮ್ಮಂಗ-ಉತ್ಸಾಹದಿಂದ ತಂದೆಯ ಮುಂದೆ ಹೃದಯದಿಂದ ಹೇಳಿದಿರಿ - ಬಾಬಾ, ಇದೆಲ್ಲವೂ
ತಮ್ಮದಾಗಿದೆ. ತನು-ಮನ-ಧನ ಎಲ್ಲವೂ ತಮ್ಮದಾಗಿದೆ ಅಂದಾಗ ನೀವು ಕೊಟ್ಟಿರುವ ವಸ್ತುವನ್ನು ತಂದೆಯು
ಕೇವಲ ಸ್ವಲ್ಪ ಸಮಯಕ್ಕಾಗಿ, ಕಾರ್ಯದಲ್ಲಿ ಉಪಯೋಗಿಸುವುದಕ್ಕಾಗಿ ಪುನಃ ನಿಮಗೆ ಕೊಟ್ಟಿದ್ದಾರೆ. ತಾವು
ತಂದೆಗೆ ಕೊಟ್ಟುಬಿಟ್ಟಿದ್ದೀರಿ, ಕೊಟ್ಟಿದ್ದೀರಲ್ಲವೆ? ಅಥವಾ ಸ್ವಲ್ಪ-ಸ್ವಲ್ಪ
ಹಿಂತೆಗೆದುಕೊಳ್ಳುತ್ತೀರಾ? ಹಿಂತೆಗೆದುಕೊಳ್ಳುತ್ತೀರಿ ಅರ್ಥಾತ್ ಅದನ್ನು ಮತ್ತೆ ತನ್ನದೆಂದು
ಉಪಯೋಗಿಸುತ್ತೀರೆಂದರೆ ಅನ್ಯರು ಕೊಟ್ಟಿರುವ ವಸ್ತುವನ್ನು ತನ್ನದೆಂದು ತಿಳಿಯುವುದಾಗಿದೆ. ಕೆಲವು
ಮಕ್ಕಳು ಹೇಳುತ್ತಾರೆ, ವಾರ್ತಾಲಾಪ ಮಾಡುವಾಗ ಹೇಳುತ್ತಾರೆ - ನನ್ನ ಮನಸ್ಸು ಬಹಳ ಬೇಸರವಾಗುತ್ತದೆ
ಎಂದು. ಆದರೆ ನನ್ನ ಮನಸ್ಸು ಎಂಬುದು ಎಲ್ಲಿಂದ ಬಂದಿತು? ಯಾವಾಗ ನನ್ನದೆಲ್ಲವನ್ನು ನಿನ್ನದೆಂದು
ಅರ್ಪಣೆ ಮಾಡಿದಿರಿ ಅಂದಮೇಲೆ ಮತ್ತೆ ನನ್ನಮನಸ್ಸು ಎಂಬುದು ಎಲ್ಲಿಂದ ಬಂದಿತು? ತಾವೆಲ್ಲರೂ ಈಗ
ಕವಡೆಯಿಲ್ಲದಿದ್ದರೂ ಚಕ್ರವರ್ತಿಗಳಾದಿರಿ. ಈಗ ತಮ್ಮದೇನೂ ಉಳಿದಿಲ್ಲ, ಕವಡೆಯಷ್ಟೂ ಉಳಿದಿಲ್ಲ ಆದರೂ
ಚಕ್ರವರ್ತಿಗಳಾಗಿಬಿಟ್ಟಿರಿ - ಏಕೆ? ತಂದೆಯ ಖಜಾನೆಯು ತಮ್ಮ ಖಜಾನೆಯಾಯಿತು ಅಂದಮೇಲೆ
ಚಕ್ರವರ್ತಿಗಳಾಗಿಬಿಟ್ಟಿರಲ್ಲವೆ! ಪರಮಾತ್ಮನ ಖಜಾನೆಯು ಮಕ್ಕಳ ಖಜಾನೆಯಾಗಿದೆ ಆದ್ದರಿಂದ ಬಾಪ್ದಾದಾ
ಪ್ರತಿಜ್ಞೆಯನ್ನು ನೆನಪು ತರಿಸುತ್ತಿದ್ದೇವೆ. ನಿನ್ನದು ಎಂದು ಹೇಳಿದಮೇಲೆ ಮತ್ತೆ ನನ್ನದು ಎಂಬ
ಶಬ್ಧವನ್ನು ಉಪಯೋಗಿಸಬೇಡಿ. ಯಾವಾಗ ತಂದೆಯು ತಮ್ಮೆಲ್ಲರನ್ನು ಪರಮಾತ್ಮ ಖಜಾನೆಗಳಿಂದ ಸಂಪನ್ನ
ಮಾಡಿಬಿಟ್ಟರು ಅಂದಮೇಲೆ ಜವಾಬ್ದಾರಿ ಎಲ್ಲವನ್ನು ತಂದೆಯು ತೆಗೆದುಕೊಂಡರು, ಯಾವ ಶಬ್ಧಗಳಲ್ಲಿ?
ಮಕ್ಕಳೇ, ನೀವು ನನ್ನನ್ನು ನೆನಪು ಮಾಡಿದ್ದೇ ಆದರೆ ಸರ್ವಪ್ರಾಪ್ತಿಗಳಿಗೆ ಅಧಿಕಾರಿಯಾಗಿಬಿಡುತ್ತೀರಿ.
ಕೇವಲ ನೆನಪು ಮಾಡಿ ಮತ್ತು ತಾವು ಹೇಳಿದಿರಿ - ಬಾಬಾ, “ತಾವು ನಮ್ಮವರು, ನಾವು ನಿಮ್ಮವರು” ಈ
ಪ್ರತಿಜ್ಞೆಯಿದೆಯಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಖಜಾನೆಗಳನ್ನು ಸದಾ ಸ್ವಯಂನಪ್ರತಿ
ಮತ್ತು ಸರ್ವಆತ್ಮಗಳಪ್ರತಿ ಕಾರ್ಯದಲ್ಲಿ ತೊಡಗಿಸಿ. ಕಾರ್ಯದಲ್ಲಿ ಎಷ್ಟು ತೊಡಗಿಸುತ್ತೀರೋ ಅಷ್ಟೇ
ಖಜಾನೆಯು ವೃದ್ಧಿಯಾಗುವುದು. ಸರ್ವಶಕ್ತಿಗಳ ಖಜಾನೆ, ಸರ್ವಶಕ್ತಿಗಳನ್ನು ಕಾರ್ಯದಲ್ಲಿ ತೊಡಗಿಸಿ.
ಕೇವಲ ನಾನು ಸರ್ವಶಕ್ತಿವಂತನಾಗಿದ್ದೇನೆಂಬ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಡಿ ಆದರೆ
ಸರ್ವಶಕ್ತಿಗಳನ್ನು ಸಮಯಪ್ರಮಾಣ ಕಾರ್ಯದಲ್ಲಿ ತೊಡಗಿಸಿ ಮತ್ತು ಸೇವೆಯಲ್ಲಿ ತೊಡಗಿಸಿ.
ಬಾಪ್ದಾದಾ ಮೆಜಾರಿಟಿ
ಮಕ್ಕಳ ಚಾರ್ಟ್ನಲ್ಲಿ ನೋಡಿದೆವು - ಎರಡು ಶಕ್ತಿಗಳೂ ಒಂದುವೇಳೆ ಸದಾ ನೆನಪಿದ್ದರೆ ಮತ್ತು ಸಮಯದಲ್ಲಿ
ಕಾರ್ಯದಲ್ಲಿ ತೊಡಗಿಸಿದ್ದೇ ಆದರೆ ಸದಾ ನಿರ್ವಿಘ್ನರಾಗಿರುತ್ತೀರಿ. ತಮ್ಮಮುಂದೆ ವಿಘ್ನ ಬರಲು
ಅದಕ್ಕೆ ಶಕ್ತಿಯೇ ಇರುವುದಿಲ್ಲ. ಇದು ತಂದೆಯ ಗ್ಯಾರಂಟಿಯಾಗಿದೆ. ಹಾಗೆ ನೋಡಿದರೆ ಸರ್ವಶಕ್ತಿಗಳೂ
ಬೇಕು ಆದರೆ ಮೆಜಾರಿಟಿ ನೋಡಿದಾಗ ಸಹನಶಕ್ತಿ ಮತ್ತು ರಿಯಲೈಜೇಷನ್ ಶಕ್ತಿ ಬೇಕಾಗಿದೆ. ರಿಯಲೈಜ್
ಮಾಡುತ್ತೀರಿ ಆದರೆ ಅದನ್ನು ಪ್ರತ್ಯಕ್ಷಸ್ವರೂಪದಲ್ಲಿ ತರುವುದರಲ್ಲಿ ಗಮನ ಕಡಿಮೆಯಿದೆ ಆದ್ದರಿಂದ
ಕೇವಲ ಯಾವ ಸಮಯದಲ್ಲಿ ರಿಯಲೈಜ್ ಮಾಡುತ್ತೀರೋ ಆ ಸಮಯದಲ್ಲಿ ಚಲನೆ ಮತ್ತು ಚಹರೆಯು ಬದಲಾಗಿಬಿಡುತ್ತದೆ.
ಹೌದು, ರಿಯಲೈಜ್ ಮಾಡಿಕೊಂಡೆವು ಎಂದು ಬಹಳ ಒಳ್ಳೆಯ ಉಮ್ಮಂಗ-ಉತ್ಸಾಹದಲ್ಲಿ ಬರುತ್ತೀರಿ ಆದರೆ ನಂತರ
ಏನಾಗಿಬಿಡುತ್ತದೆ? ಎಲ್ಲರೂ ಅನುಭವಿಗಳಲ್ಲವೆ. ಹೇಳಿರಿ, ನಂತರ ಏನಾಗಿಬಿಡುತ್ತದೆ? ಆ
ರಿಯಲೈಜೇಷನ್ನ್ನು ಪ್ರತೀ ಸಮಯ ಸ್ವರೂಪದಲ್ಲಿ ತರುವುದರಲ್ಲಿ ಕೊರತೆಯಾಗಿಬಿಡುತ್ತದೆ ಏಕೆಂದರೆ ಇಲ್ಲಿ
ಸ್ವರೂಪರಾಗಬೇಕಾಗಿದೆ. ಕೇವಲ ಬುದ್ಧಿಯಿಂದ ತಿಳಿದುಕೊಳ್ಳುವುದು ಬೇರೆಮಾತು ಆದರೆ ಇಲ್ಲಿ ಅದನ್ನು
ಸ್ವರೂಪದಲ್ಲಿ ತರುವ ಅವಶ್ಯಕತೆಯಿದೆ. ಕೆಲಕೆಲವೊಮ್ಮೆ ಬಾಪ್ದಾದಾರವರಿಗೆ ಕೆಲಕೆಲವು ಮಕ್ಕಳಪ್ರತಿ
ದಯೆ ಬರುತ್ತದೆ. ತಂದೆಯು ತಿಳಿದುಕೊಳ್ಳುತ್ತಾರೆ - ಮಕ್ಕಳಿಂದ ಪರಿಶ್ರಮವು ಸಾಧ್ಯವಾಗುವುದಿಲ್ಲ
ಆದ್ದರಿಂದ ಮಕ್ಕಳ ಬದಲು ತಂದೆಯೇ ಮಾಡಿಬಿಡುವುದೆ ಎಂದು. ಆದರೆ ಡ್ರಾಮಾದ ರಹಸ್ಯವಾಗಿದೆ - ಯಾರು
ಮಾಡುವರೋ ಅವರು ಪಡೆಯುವರು ಆದ್ದರಿಂದ ಬಾಪ್ದಾದಾ ಸಹಯೋಗವನ್ನಂತೂ ಖಂಡಿತ ಕೊಡುತ್ತೇವೆ ಆದರೆ
ಮಾಡುವುದಂತೂ ನೀವು ಮಕ್ಕಳೇ ಮಾಡಬೇಕಾಗುತ್ತದೆ.
ಬಾಪ್ದಾದಾ ನೋಡಿದರು -
ಮಕ್ಕಳು ಬಹಳ ಒಳ್ಳೊಳ್ಳೆಯ ಸಂಕಲ್ಪಗಳನ್ನು ಮಾಡುತ್ತೀರಿ. ಅಮೃತವೇಳೆ ಬಾಪ್ದಾದಾರವರ ಬಳಿ ಬಹಳ
ಒಳ್ಳೊಳ್ಳೆಯ ಸಂಕಲ್ಪಗಳು, ಬಹಳಷ್ಟು ಮಾಲೆಗಳು ತಲುಪುತ್ತವೆ - ಬಾಬಾ, ಇದನ್ನು ಮಾಡುತ್ತೇವೆ,
ಇದನ್ನು ಮಾಡುತ್ತೇವೆ, ಇದನ್ನು ಮಾಡುತ್ತೇವೆ....., ಇದನ್ನು ಕೇಳಿ ಬಾಪ್ದಾದಾರವರಿಗೂ
ಖುಷಿಯಾಗಿಬಿಡುತ್ತದೆ - ವಾಹ್! ಮಕ್ಕಳೇ ವಾಹ್! ಎಂದು. ಆದರೆ ಅದನ್ನು ಕಾರ್ಯದಲ್ಲಿ ತರುವುದರಲ್ಲಿ
ಮಕ್ಕಳು ಏಕೆ ನಿರ್ಬಲರಾಗಿಬಿಡುತ್ತೀರಿ? ಇದಕ್ಕೆ ಕಾರಣವನ್ನು ನೋಡಲಾಯಿತು - ಬ್ರಾಹ್ಮಣ
ಪರಿವಾರದಲ್ಲಿ ಸಂಘಟನೆಯ ವಾಯುಮಂಡಲವು ಕಾರಣವಾಗಿದೆ. ಕೆಲವೊಂದುಕಡೆ ವಾಯುಮಂಡಲು ಬಲಹೀನವಾಗಿರುತ್ತದೆ.
ಬಹಳ ಬೇಗನೆ ಅದರ ಪ್ರಭಾವವಾಗಿಬಿಡುತ್ತದೆ. ನಂತರ ಅವರ ಭಾಷೆಯು ಹೇಗಿರುತ್ತದೆ ಎಂಬುದನ್ನು
ತಿಳಿಸುವುದೇ? ಅವರದು ಬಹಳ ಮಧುರಭಾಷೆಯಾಗಿರುತ್ತದೆ - ಇದಂತೂ ನಡೆದೇ ನಡೆಯುತ್ತದೆ, ಇದು ಆಗಿಯೇ
ಆಗುತ್ತದೆ..... ಅಂದಾಗ ಇಂತಹ ಸಮಯದಲ್ಲಿ ಯಾವ ಸಂಕಲ್ಪ ಮಾಡಬೇಕು? ಇದು ನಡೆಯುತ್ತದೆ, ಇದು
ಆಗುತ್ತದೆ ಎಂಬುದು ಹುಡುಗಾಟಿಕೆ (ಆಲಸ್ಯ) ಯನ್ನು ತರುತ್ತದೆ ಆದರೆ ಆ ಸಮಯದಲ್ಲಿ ಈ ಭಾಷೆಯನ್ನು
ಪರಿವರ್ತನೆ ಮಾಡಿಕೊಳ್ಳಿ ಮತ್ತು ಕೇಳಿಕೊಳ್ಳಿ - ತಂದೆಯ ಆಜ್ಞೆಯೇನಾಗಿದೆ? ತಂದೆಗೆ ಯಾವುದು
ಇಷ್ಟವಾಗುತ್ತದೆ? ತಂದೆಯು ಯಾವ ಮಾತನ್ನು ಇಷ್ಟಪಡುತ್ತಾರೆ? ತಂದೆಯು ಇದನ್ನು ಹೇಳಿದ್ದಾರೆಯೇ?
ಮಾಡಿದ್ದಾರೆಯೇ? ಒಂದುವೇಳೆ ತಂದೆಯ ನೆನಪು ಬಂದಿತೆಂದರೆ ಅಲ್ಲಿ ಹುಡುಗಾಟಿಕೆಯು ಸಮಾಪ್ತಿಯಾಗಿ
ಉಮ್ಮಂಗ-ಉತ್ಸಾಹವು ಬಂದುಬಿಡುತ್ತದೆ. ಹುಡುಗಾಟಿಕೆಯು ಕೆಲವೊಂದು ಪ್ರಕಾರಗಳಲ್ಲಿ ಬರುತ್ತದೆ. ತಾವು
ಪರಸ್ಪರ ಕ್ಲಾಸ್ ಮಾಡಿ, ಲಿಸ್ಟ್ ತೆಗೆಯಿರಿ, ಒಂದು ಸಾಧಾರಣ ಹುಡುಗಾಟಿಕೆಯಾಗಿದೆ, ಇನ್ನೊಂದು ರಾಯಲ್
ಹುಡುಗಾಟಿಕೆಯಾಗಿದೆ. ಅಂದಾಗ ಹುಡುಗಾಟಿಕೆಯು ಧೃಡತೆಯನ್ನು ತರುವುದಿಲ್ಲ ಮತ್ತು ಧೃಡತೆಯೇ ಸಫಲತೆಯ
ಸಾಧನವಾಗಿದೆ ಆದ್ದರಿಂದ ಕೇವಲ ಸಂಕಲ್ಪದವರೆಗೆ ಮಾತ್ರ ಉಳಿಯುತ್ತದೆ, ಅದು ಸ್ವರೂಪದಲ್ಲಿ
ಬರುವುದಿಲ್ಲ.
ಅಂದಾಗ ಇಂದು ಏನು
ಕೇಳಿದಿರಿ? ಪ್ರತಿಜ್ಞೆಯನ್ನು ನೆನಪು ತರಿಸಿದೆವಲ್ಲವೆ? ಇಷ್ಟು ಒಳ್ಳೊಳ್ಳೆಯ ಪ್ರತಿಜ್ಞೆಗಳನ್ನು
ಮಾಡುತ್ತೀರಿ, ಬಾಪ್ದಾದಾ ಈ ಪ್ರತಿಜ್ಞೆಗಳನ್ನು ಕೇಳುತ್ತಿದ್ದಂತೆಯೇ ಬಹಳ ಖುಷಿಯಾಗಿಬಿಡುತ್ತಾರೆ
ಆದರೆ ಎಷ್ಟು ಪ್ರತಿಜ್ಞೆ ಮಾಡುತ್ತೀರೋ ಅಷ್ಟು ಅದರ ಲಾಭವನ್ನು ತೆಗೆದುಕೊಳ್ಳುತ್ತಿಲ್ಲ ಆದ್ದರಿಂದ
ಬಾಪ್ದಾದಾ ಇದನ್ನೇ ಬಯಸುತ್ತೇವೆ, ತಂದೆಯು ನಮ್ಮಿಂದ ಏನನ್ನು ಬಯಸುತ್ತಾರೆ ಎಂದು ಕೇಳುತ್ತೀರಲ್ಲವೆ.
ಅಂದಾಗ ಬಾಪ್ದಾದಾ ಇದನ್ನೇ ಬಯಸುತ್ತೇವೆ - ಸಮಯಕ್ಕೆ ಮೊದಲೇ ಎಲ್ಲರೂ ಎವರೆಡಿಯಾಗಿಬಿಡಿ. ಸಮಯವು
ತಮಗೆ ಮಾಸ್ಟರ್ ಆಗದಿರಲಿ. ಸಮಯಕ್ಕೆ ತಾವು ಮಾಸ್ಟರ್ ಆಗಿದ್ದೀರಿ ಆದ್ದರಿಂದ ಬಾಪ್ದಾದಾ ಇದನ್ನೇ
ಬಯಸುತ್ತೇವೆ - ಸಮಯಕ್ಕೆ ಮೊದಲೇ ಸಂಪನ್ನರಾಗಿ, ವಿಶ್ವದ ಸ್ಟೇಜಿನ ಮೇಲೆ ತಂದೆಯ ಜೊತೆಜೊತೆಯಲ್ಲಿ
ತಾವು ಮಕ್ಕಳೂ ಪ್ರತ್ಯಕ್ಷವಾಗಬೇಕು. ಒಳ್ಳೆಯದು.
ಯಾರೆಲ್ಲಾ ಹೊಸ-ಹೊಸ
ಮಕ್ಕಳು ಮಿಲನ ಮಾಡಲು ಬಂದಿದ್ದೀರಿ, ಅವರು ಕೈಯೆತ್ತಿ. ಉದ್ದವಾಗಿ ಕೈಯೆತ್ತಿರಿ. ಒಳ್ಳೆಯದು.
ಬಾಪ್ದಾದಾರವರಿಗೆ ಹೊಸ-ಹೊಸ ಮಕ್ಕಳನ್ನು ನೋಡಿ ಖುಷಿಯಾಗುತ್ತದೆ - ಭಾಗ್ಯವಂತ ಮಕ್ಕಳು ತಮ್ಮ
ಭಾಗ್ಯವನ್ನು ಪಡೆಯಲು ಬಂದು ತಲುಪಿದ್ದೀರಿ ಆದ್ದರಿಂದ ಶುಭಾಷಯಗಳು, ಶುಭಾಷಯಗಳು. ಈಗ ಯಾರೆಲ್ಲಾ
ಹೊಸಮಕ್ಕಳು ಬಂದಿದ್ದೀರೋ ಅವರಲ್ಲಿ ಯಾರು ಕಮಾಲ್ ಮಾಡಿ ತೋರಿಸುತ್ತೀರೆಂದು ನೋಡೋಣ. ಭಲೆ ತಡವಾಗಿ
ಬಂದಿದ್ದೀರಿ ಆದರೆ ಎಲ್ಲರಿಗಿಂತ ಮೊದಲು ಹೋಗಿ ತೋರಿಸಿ. ಬಾಪ್ದಾದಾರವರ ಬಳಿ ಎಲ್ಲರ ಫಲಿತಾಂಶವು
ತಲುಪುತ್ತದೆ. ಒಳ್ಳೆಯದು.
ಡಬಲ್ ವಿದೇಶಿಯರೊಂದಿಗೆ:-
ಡಬಲ್ ವಿದೇಶಿಯರು
ಸ್ವಯಂನ ಮೇಲೆ ಹಾಗೂ ಸೇವೆಯ ಮೇಲೆ ಬಹಳ ಚೆನ್ನಾಗಿ ಗಮನ ಕೊಡುತ್ತಿದ್ದೀರಿ ಆದರೆ ಕೇವಲ ಇದರಲ್ಲಿ
ಒಂದು ಅಕ್ಷರವನ್ನು ಸೇರಿಸಬೇಕಾಗಿದೆ. ಅಂಡರ್ಲೈನ್ ಮಾಡಿಕೊಳ್ಳಬೇಕಾಗಿದೆ - ಯಾವ ಪರಿವರ್ತನೆಯ
ಸಂಕಲ್ಪ ಮಾಡುತ್ತೀರಿ ಮತ್ತು ಒಳ್ಳೆಯ ಉಮ್ಮಂಗ-ಉತ್ಸಾಹವನ್ನು ಸಾಹಸದಿಂದ ತೆಗೆದುಕೊಳ್ಳುತ್ತೀರಿ,
ಇದಕ್ಕೆ ಈಗ ಕೇವಲ ಅಂಡರ್ಲೈನ್ ಮಾಡಿಕೊಳ್ಳುತ್ತಾ ಹೋಗಬೇಕಾಗಿದೆ - ಮಾಡಲೇಬೇಕಾಗಿದೆ,
ಪರಿವರ್ತನೆಯಾಗಲೇಬೇಕಾಗಿದೆ. ನಾವು ಪರಿವರ್ತನೆಯಾಗಿ ವಿಶ್ವವನ್ನು ಪರಿವರ್ತಿಸಬೇಕಾಗಿದೆ. ಪದೇ-ಪದೇ
ಈ ಧೃಡತೆಯ ಅಂಡರ್ಲೈನ್ ಮಾಡಿಕೊಳ್ಳುತ್ತಾ ಹೋಗಿರಿ. ಬಾಕಿ ಬಾಪ್ದಾದಾರವರಿಗೆ ಖುಷಿಯಾಗಿದೆ.
ವೃದ್ಧಿಯನ್ನೂ ಮಾಡುತ್ತಿದ್ದೀರಿ ಮತ್ತು ಸೇವೆ ಹಾಗೂ ಸ್ವಯಂನ ಮೇಲೆ ಗಮನವೂ ಇದೆ ಆದರೆ ಟೆನ್ಶನ್
ಪೂರ್ಣವಾಗಿ ಹೋಗಿಲ್ಲ. ಅಟೆನ್ಶನ್ ಇದೆ ಅದರೆ ಮಧ್ಯಮಧ್ಯದಲ್ಲಿ ಸ್ವಲ್ಪ ಟೆನ್ಶನ್ ಕೂಡ ಇದೆ ಅದನ್ನು
ಸಮಾಪ್ತಿ ಮಾಡಲೇಬೇಕಾಗಿದೆ. ಉಳಿದಂತೆ ಸಾಹಸವು ಬಹಳ ಚೆನ್ನಾಗಿದೆ, ಸಾಹಸಕ್ಕೆ ಶುಭಾಷಯಗಳು.
ಯಾರೆಲ್ಲಾ ಕುಳಿತಿದ್ದಾರೆ ತಂದೆಯಸಹಿತ ತಮ್ಮ ಸಾಹಸಕ್ಕೆ ಶುಭಾಷಯಗಳನ್ನು ಕೊಡುತ್ತಿದ್ದೇವೆ.
ಚಪ್ಪಾಳೆ ತಟ್ಟಿರಿ. ಒಳ್ಳೆಯದು.
ತಾವಂತೂ ಇಲ್ಲಿ
ಕುಳಿತಿದ್ದೀರಿ ಆದರೆ ಬಾಪ್ದಾದಾರವರಿಗೆ ದೂರ-ದೂರದಲ್ಲಿ ಕುಳಿತಿರುವ ಅನೇಕಮಕ್ಕಳ ನೆನಪು, ಪ್ರೀತಿ
ಸಿಕ್ಕಿದೆ ಮತ್ತು ಬಾಪ್ದಾದಾ ಒಬ್ಬೊಬ್ಬ ಮಗುವನ್ನು ನಯನಗಳಲ್ಲಿ ಸಮಾವೇಶ ಮಾಡಿಕೊಳ್ಳುತ್ತಾ
ಬಹಳ-ಬಹಳ ಹೃದಯದ ಆಶೀರ್ವಾದಗಳನ್ನು ಕೊಡುತ್ತಿದ್ದೇವೆ. ಭಾರತದಿಂದ ಹಾಗೂ ವಿದೇಶದಿಂದ ಅನೇಕ ಮಕ್ಕಳ
ನೆನಪು ಬರುತ್ತಿದೆ, ಪತ್ರಗಳು ಬರುತ್ತಿವೆ, ಈ-ಮೇಲ್ಗಳೂ ಬಂದಿವೆ. ಎಲ್ಲವೂ ತಂದೆಯ ಬಳಿ
ತಲುಪಿಬಿಟ್ಟಿವೆ. ಒಳ್ಳೆಯದು.
ಬಾಪ್ದಾದಾ ಒಂದು
ಸೆಕೆಂಡಿನಲ್ಲಿ ಅಶರೀರಿಭವದ ಡ್ರಿಲ್ನ್ನು ನೋಡಲು ಬಯಸುತ್ತೇವೆ. ಒಂದುವೇಳೆ ಅಂತಿಮದಲ್ಲಿ
ಉತ್ತೀರ್ಣರಾಗಬೇಕೆಂದರೆ ಈ ಡ್ರಿಲ್ ಬಹಳ ಅವಶ್ಯಕವಾಗಿದೆ ಆದ್ದರಿಂದ ಈಗ ಇಷ್ಟು ದೊಡ್ಡ ಸಂಘಟನೆಯಲ್ಲಿ
ಕುಳಿತಿದ್ದರೂ ಒಂದುಸೆಕೆಂಡಿನಲ್ಲಿ ದೇಹಭಾನದಿಂದ ದೂರದ ಸ್ಥಿತಿಯಲ್ಲಿ ಸ್ಥಿತರಾಗಿಬಿಡಿ. ಯಾವುದೇ
ಆಕರ್ಷಣೆಯು ಆಕರ್ಷಿತ ಮಾಡದಿರಲಿ. (ಬಾಪ್ದಾದಾ ಡ್ರಿಲ್ ಮಾಡಿಸಿದರು) ಒಳ್ಳೆಯದು.
ನಾಲ್ಕಾರುಕಡೆಯ
ತೀವ್ರಪುರುಷಾರ್ಥಿ ಮಕ್ಕಳಿಗೆ, ಸದಾ ಸ್ವಪರಿವರ್ತನೆ ಮತ್ತು ವಿಶ್ವಪರಿವರ್ತನೆಯ ಸೇವೆಯಲ್ಲಿ
ತತ್ಫರರಾಗಿರುವ ವಿಶೇಷ ಆತ್ಮಗಳಿಗೆ, ಸದಾ ಬ್ರಹ್ಮಾತಂದೆಯ ಸಮಾನ ಕರ್ಮಯೋಗಿ,
ಕರ್ಮದ-ಕರ್ಮೇಂದ್ರಿಯಗಳ ಆಕರ್ಷಣೆಯಿಂದ ಮುಕ್ತ ಆತ್ಮಗಳಿಗೆ, ಸದಾ ಧೃಡತೆಯನ್ನು ಪ್ರತೀ ಸಂಕಲ್ಪ,
ಪ್ರತೀ ಮಾತು, ಪ್ರತೀ ಕರ್ಮದಲ್ಲಿ ಸ್ವರೂಪದಲ್ಲಿ ತರುವಂತಹ ತಂದೆಯ ಸಮೀಪ ಮತ್ತು ಸಮಾನ ಮಕ್ಕಳಿಗೆ
ಬಾಪ್ದಾದಾರವರ ಹೃದಯಪೂರ್ವಕ ಆಶೀರ್ವಾದಗಳು ಮತ್ತು ಹೃದಯದ ನೆನಪು ಮತ್ತು ಪ್ರೀತಿಯನ್ನು ಸ್ವೀಕಾರ
ಮಾಡಿರಿ ಹಾಗೂ ನಮಸ್ತೆ.
ದಾದೀಜಿಯವರೊಂದಿಗೆ:
ಆರೋಗ್ಯವಂತರಾಗಿಬಿಟ್ಟಿರಿ. ಈಗ ಖಾಯಿಲೆಯೆಲ್ಲವೂ ಹೊರಟುಹೋಯಿತು. ಕಾಯಿಲೆಗಳು ಮಹಾರಥಿಗಳಿಂದ
ಬೀಳ್ಕೊಡುಗೆಯನ್ನು ತೆಗೆದುಕೊಳ್ಳುವುದಕ್ಕಾಗಿಯೇ ಬರುತ್ತವೆ. ಒಳಗಿಂದೊಳಗೆ ಕರ್ಮಾತೀತರಾಗುವ
ರಿಹರ್ಸಲ್ ನಡೆಯುತ್ತಿದೆ. (ದಾದಿ ಜಾನಕಿಯವರು ಹೇಳುತ್ತಿದ್ದಾರೆ - ದಾದೀಜಿಯು ನಿಶ್ಚಿಂತ
ಚಕ್ರವರ್ತಿಯಾಗಿದ್ದಾರೆ)
ತಾವೇನು ಚಿಂತೆಯುಳ್ಳವರೇ?
ತಾವೂ ನಿಶ್ಚಿಂತರಲ್ಲವೆ. ಇಬ್ಬರೂ ಪಾತ್ರವನ್ನು ಚೆನ್ನಾಗಿ ಅಭಿನಯಿಸುತ್ತಿದ್ದೀರಿ. ನೋಡಿ,
ಎಲ್ಲದಕ್ಕಿಂತ ದೊಡ್ಡದಕ್ಕಿಂತ ದೊಡ್ಡ ಜವಾಬ್ದಾರಿಯ ಕಿರೀಟವನ್ನು ಧರಿಸಲು ನಿಮಿತ್ತರಾದಿರಲ್ಲವೆ.
ಇವರೆಲ್ಲರೂ ಜೊತೆಗಾರರಾಗಿದ್ದಾರೆ, ತಮ್ಮೆಲ್ಲರನ್ನು ನೋಡಿ ಉಮ್ಮಂಗ-ಉತ್ಸಾಹ ಬರುತ್ತದೆಯಲ್ಲವೆ. (ಬಾಬಾ,
ಈಗ ಯಾವ ನವೀನತೆಯನ್ನು ತರಬೇಕು? ಎಂಬುದಕ್ಕೆ ಪ್ರೇರಣೆ ಕೊಡಿ) ಬಾಪ್ದಾದಾ ತಿಳಿಸಿದೆವು, ಪ್ರತೀ
ವರ್ಗದಿಂದ ಇಂತಹ ಹೂಗುಚ್ಛವನ್ನು ತಯಾರು ಮಾಡಿ ಅವರು ಮೈಕ್ ಆಗಿರಲಿ ಮತ್ತು ಮೈಟ್ ಕೂಡ ಆಗಿರಲಿ.
ಕೇವಲ ಮೈಕ್ ಮತ್ತು ಸಂಪರ್ಕದಲ್ಲಿ ಬರುವವರಲ್ಲ, ಸಂಬಂಧದಲ್ಲಿಯೂ ಸಮೀಪ ಬರುವಂತವರಾಗಲಿ. ಇಂತಹ
ಹೂಗುಚ್ಛವನ್ನು ತಯಾರು ಮಾಡಿ. ನಂತರ ಆ ಗ್ರೂಪ್ ಸೇವೆ ಮಾಡಲು ನಿಮಿತ್ತನಾಗುವುದು. ಅವರು ಮೈಕ್
ಆಗುವರು ಮತ್ತು ತಾವು ಮೈಟ್ ಆಗುವಿರಿ. ಅವರ ಅಂತರಾಳದಿಂದ ಬಾಬಾ ಶಬ್ಧವು ಹೊರಡಲಿ ಆಗ
ಪ್ರಭಾವವಾಗುವುದು. ಅವರನ್ನು ಸಮೀಪ ಸಂಬಂಧದಲ್ಲಿ ತನ್ನಿ. ಕೆಲಕೆಲವೊಮ್ಮೆ ಮಾತ್ರ ತರುತ್ತೀರಿ
ಆದ್ದರಿಂದ ಅವರಿಗೆ ನಶೆಯು ಕಡಿಮೆಯಾಗಿಬಿಡುತ್ತದೆ. ಸಂಬಂಧ-ಸಂಪರ್ಕದಲ್ಲಿ ಎಲ್ಲಿಯೇ ಬಂದರೂ ಸಹ
ಅಲ್ಲಿ ಸಂಬಂಧ ಮತ್ತು ಸಂಪರ್ಕವಿರಲಿ ಆಗ ಸರಿಹೋಗುತ್ತಾರೆ. ಒಳ್ಳೆಯದು.
ವರದಾನ:
ಸದಾ ಶ್ರೇಷ್ಠ
ಹಾಗೂ ಹೊಸ ಪ್ರಕಾರದ ಸೇವೆಯ ಮೂಲಕ ವೃದ್ಧಿಗೊಳಿಸುವಂತಹ ಸಹಜ ಸೇವಾಧಾರಿ ಭವ
ಸಂಕಲ್ಪಗಳ ಮೂಲಕ
ಈಶ್ವರೀಯ ಸೇವೆಯನ್ನು ಮಾಡುವುದೂ ಸಹ ಸೇವೆಯ ಶ್ರೇಷ್ಠ ಹಾಗೂ ಹೊಸವಿಧಿ ಆಗಿದೆ, ಹೇಗೆ ಅಕ್ಕಸಾಲಿಗನು
ಪ್ರತಿನಿತ್ಯ ಮುಂಜಾನೆಯಲ್ಲಿ ತನ್ನ ಪ್ರತಿಯೊಂದು ರತ್ನಗಳನ್ನು ಈ ರೀತಿ ಪರಿಶೀಲನೆ ಮಾಡುತ್ತಾನೆ-
ಇದು ಸ್ವಚ್ಛವಾಗಿದೆಯೇ, ಹೊಳಪು ಸರಿಯಾಗಿದೆಯೇ, ಸರಿಯಾದ ಜಾಗದಲ್ಲಿ ಇಡುತ್ತಿದ್ದೇನೆಯೇ.... ಈ ರೀತಿ
ಪ್ರತಿನಿತ್ಯವೂ ಅಮೃತವೇಳೆಯಲ್ಲಿ ತಮ್ಮ ಸಂಪರ್ಕದಲ್ಲಿ ಬರುವಂತಹ ಆತ್ಮರ ಬಗ್ಗೆ, ಸಂಕಲ್ಪಗಳ ಮೂಲಕ
ದೃಷ್ಟಿಯನ್ನು ಹರಿದಾಡಿಸಿ, ಅವರುಗಳಿಗೆ ಸಂಕಲ್ಪದಿಂದ ತಾವೆಷ್ಟು ನೆನಪು ಮಾಡುತ್ತೀರಿ, ಆ
ಸಂಕಲ್ಪವಷ್ಟೇ ಅವರವರೆಗೆ ತಲುಪುವುದು..... ಈ ಪ್ರಕಾರದಲ್ಲಿ ಸೇವೆಯ ಹೊಸವಿಧಿಯನ್ನು ಉಪಯೋಗಿಸುತ್ತಾ
ವೃದ್ಧಿಗೊಳಿಸುತ್ತಾ ಸಾಗಿರಿ. ಆತ್ಮರನ್ನು ತಮ್ಮ ಸಹಜಯೋಗದ ಸೂಕ್ಷ್ಮಶಕ್ತಿಗಳು ತಮ್ಮ ಕಡೆಗೆ
ಸ್ವತಃವಾಗಿ ಆಕರ್ಷಿಸುತ್ತದೆ.
ಸ್ಲೋಗನ್:
ನೆಪಗಳನ್ನು(ಕಾರಣ) ಮರ್ಜ್ ಮಾಡಿರಿ ಮತ್ತು ಬೇಹದ್ದಿನ ವೈರಾಗ್ಯ ವೃತ್ತಿಯನ್ನು ಇಮರ್ಜ್ ಮಾಡಿಕೊಳ್ಳಿ.
ಅವ್ಯಕ್ತ ಸೂಚನೆಗಳು-
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಜ್ಞಾನವನ್ನು ಮನನ
ಮಾಡುವುದರ ಜೊತೆಗೆ ಶುಭಭಾವನೆ, ಶುಭಕಾಮನೆಯ ಸಂಕಲ್ಪ, ಸಕಾಶ ಕೊಡುವ ಅಭ್ಯಾಸ, ಈ ಮನಸ್ಸಿನ ಮೌನದ
ಅಥವಾ ಟ್ರಾಫಿಕ್ ಕಂಟ್ರೋಲ್ ಅಭ್ಯಾಸಕ್ಕಾಗಿ ಮಧ್ಯಮಧ್ಯದಲ್ಲಿ ದಿನವನ್ನು ನಿಗಧಿಗೊಳಿಸಿ. ಎಷ್ಟು
ಅಂತರ್ಮುಖತೆಯ ಕೋಣೆಯಲ್ಲಿ ಕುಳಿತುಕೊಂಡು ಸಂಶೋಧನೆ ಮಾಡುವಿರಿ ಅಷ್ಟು ಒಳ್ಳೆಯ ಟಚಿಂಗ್ ಆಗುವುದು
ಹಾಗೂ ಅದೇ ಟಚಿಂಗ್ ನಿಂದ ಅನೇಕ ಆತ್ಮಗಳಿಗೆ ಲಾಭವಾಗುವುದು.
ಸೂಚನೆ: ಇಂದು
ಅಂತರರಾಷ್ಟ್ರೀಯ ಯೋಗ ದಿನ ತಿಂಗಳಿನ ಮೂರನೇ ರವಿವಾರವಾಗಿದೆ, ಸಂಜೆ 6.30 ಯಿಂದ 7.30 ರವರೆಗೆ
ಎಲ್ಲಾ ಸಹೋದರ ಸಹೋದರಿಯರು ಸಂಘಟಿತ ರೂಪದಲ್ಲಿ ಒಟ್ಟಿಗೆ ಸೇರಿ ಯೋಗ ಅಭ್ಯಾಸದಲ್ಲಿ ಅನುಭವ ಮಾಡಿ
ನಾನು ಬೃಕುಟಿ ಆಸನದ ಮೇಲೆ ವಿರಾಜಮಾನ ಪರಮಾತ್ಮ ಶಕ್ತಿಗಳಿಂದ ಸಂಪನ್ನ ಸರ್ವ ಶ್ರೇಷ್ಠ ರಾಜಯೋಗಿ
ಆತ್ಮ ಕರ್ಮೇಂದ್ರಿಯಜೀತ್, ವಿಕರ್ಮಾಜೀತ್ನಾಗಿದ್ದೇನೆ. ಇಡೀ ದಿನ ಇದೇ ಸ್ವಮಾನದಲ್ಲಿರಿ ಇಡೀ
ಕಲ್ಪದಲ್ಲಿ ಹೀರೋ ಪಾತ್ರವನ್ನು ಅಭಿನಯಿಸುವಂತಹ ಸರ್ವ ಶ್ರೇಷ್ಠ ಮಹಾನ್ ಆತ್ಮನಾಗಿದ್ದೇನೆ.