15.06.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಅಮರ ತಂದೆಯು ನಿಮಗೆ ಜ್ಞಾನದ ಮೂರನೇ ನೇತ್ರವನ್ನು ಕೊಡಲು ಬಂದಿದ್ದಾರೆ, ನೀವೀಗ ಮೂರು ಕಾಲಗಳು ಮತ್ತು ಮೂರು ಲೋಕಗಳನ್ನು ಅರಿತುಕೊಂಡಿದ್ದೀರಿ”

ಪ್ರಶ್ನೆ:
ಆತ್ಮಿಕ ತಂದೆಯು ಆತ್ಮಗಳಿಗೆ ಆಸ್ತಿಯನ್ನು ಯಾವ ಆಧಾರದ ಮೇಲೆ ಕೊಡುತ್ತಾರೆ?

ಉತ್ತರ:
ವಿದ್ಯೆಯ ಆಧಾರದ ಮೇಲೆ. ಯಾವ ಮಕ್ಕಳು ಚೆನ್ನಾಗಿ ಓದುವರೋ, ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿರುವ ಪುರುಷಾರ್ಥ ಮಾಡುವರೋ ಅವರಿಗೇ ತಂದೆಯ ಆಸ್ತಿಯು ಸಿಗುತ್ತದೆ. ಲೌಕಿಕ ತಂದೆಯು ಕೇವಲ ಗಂಡು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ ಆದರೆ ಪಾರಲೌಕಿಕ ತಂದೆಯ ಸಂಬಂಧವು ಆತ್ಮಗಳೊಂದಿಗೆ ಇದೆ, ಆದ್ದರಿಂದ ಆತ್ಮಗಳಿಗೇ ಆಸ್ತಿಯನ್ನು ಕೊಡುತ್ತಾರೆ.

ಗೀತೆ:
ಭೋಲಾನಾಥನಿಗಿಂತ ಭಿನ್ನ.............

ಓಂ ಶಾಂತಿ.
ಆತ್ಮಿಕ ಮಕ್ಕಳೇ ಈ ಮೃತ್ಯುಲೋಕದಿಂದ ಅಮರ ಲೋಕದಲ್ಲಿ ಹೋಗುವುದಕ್ಕಾಗಿ ಆತ್ಮಿಕ ತಂದೆಯಿಂದ ಅಮರ ಕಥೆಯನ್ನು ಕೇಳುತ್ತಿದ್ದೀರಿ. ನಿರ್ವಾಣಧಾಮಕ್ಕೆ ಅಮರ ಲೋಕವೆಂದು ಹೇಳಲಾಗುವುದಿಲ್ಲ. ಅಮರ ಲೋಕವೆಂದರೆ ಎಲ್ಲಿ ನೀವು ಅಕಾಲ ಮೃತ್ಯುವನ್ನೇ ಪಡೆಯುವುದಿಲ್ಲ. ಆದ್ದರಿಂದ ಅದಕ್ಕೆ ಅಮರ ಲೋಕವೆಂದು ಹೇಳಲಾಗುತ್ತದೆ. ಆತ್ಮಿಕ ತಂದೆ ಯಾರಿಗೆ ಅಮರನಾಥನೆಂದು ಹೇಳಲಾಗುತ್ತದೆಯೋ ಅವರು ಅವಶ್ಯವಾಗಿ ಅಮರ ಲೋಕದಲ್ಲಿ ಕರೆದುಕೊಂಡು ಹೋಗಲು ಮೃತ್ಯುಲೋಕದಲ್ಲಿ ಕಥೆಯನ್ನು ತಿಳಿಸುತ್ತಾರೆ. ಮೂರು ಕಥೆಗಳು ಭಾರತದಲ್ಲಿಯೇ ಪ್ರಸಿದ್ಧವಾಗಿವೆ. ಅಮರ ಕಥೆ, ಸತ್ಯ ನಾರಾಯಣನ ಕಥೆ, ಮೂರನೇ ನೇತ್ರದ ಕಥೆ. ಭಕ್ತಿಮಾರ್ಗದಲ್ಲಿ ಮೂರನೇ ನೇತ್ರದ ಕಥೆಯನ್ನು ಯಾರೂ ತಿಳಿದುಕೊಂಡಿಲ್ಲ. ಜ್ಞಾನದ ಮೂರನೇ ನೇತ್ರವನ್ನು ಜ್ಞಾನ ಸಾಗರ ಅಮರ ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಉಳಿದಂತೆ ಎಲ್ಲವೂ ಸುಳ್ಳು ಕಥೆಗಳನ್ನು ತಿಳಿಸುತ್ತಾರೆ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ಈಗ ಅರಿತುಕೊಂಡಿದ್ದೀರಿ - ಈಗ ನಮಗೆ ಜ್ಞಾನದ ಮೂರನೇ ನೇತ್ರವು ಸಿಗುತ್ತಿದೆ. ಯಾವ ಮೂರನೇ ನೇತ್ರದಿಂದ ಮೂರೂ ಕಾಲಗಳು, ಮೂರು ಲೋಕಗಳನ್ನು ನೀವು ಅರಿತುಕೊಂಡಿದ್ದೀರಿ. ಮೂಲವತನ, ಸೂಕ್ಷ್ಮವತನ, ಸ್ಥೂಲವತನದ ಆದಿ-ಮಧ್ಯ-ಅಂತ್ಯವನ್ನೂ ತಿಳಿದುಕೊಂಡಿದ್ದೀರಿ ಆದ್ದರಿಂದ ಮಕ್ಕಳು ತಮ್ಮನ್ನು ತ್ರಿಕಾಲದರ್ಶಿಗಳೆಂದೂ ತಿಳಿದುಕೊಳ್ಳುತ್ತೀರಿ. ನೀವು ಮಧುರಾತಿ ಮಧುರ ಮಕ್ಕಳ ವಿನಃ ಸೃಷ್ಟಿಯಲ್ಲಿ ಮತ್ತ್ಯಾರೂ ತ್ರಿಕಾಲದರ್ಶಿಗಳಾಗುವುದಿಲ್ಲ. ಭಲೆ ಮೂಲವತನ, ಸೂಕ್ಷ್ಮವತನ, ಸ್ಥೂಲವತನದ ಬಗ್ಗೆ ತಿಳಿದುಕೊಂಡಿರಬಹುದು ಆದರೆ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರ್ಥಾತ್ ಮೂರೂ ಲೋಕಗಳನ್ನು ಯಾರೂ ಅರಿತುಕೊಂಡಿರುವುದಿಲ್ಲ. ಈಗ ಮಧುರಾತಿ ಮಧುರ ಆತ್ಮಿಕ ಮಕ್ಕಳು ಆತ್ಮಿಕ ತಂದೆಯಿಂದ ಕೇಳುತ್ತಿದ್ದೀರಿ. ನೀವು ಅವರ ಮಕ್ಕಳಾಗಿದ್ದೀರಿ, ಒಂದೇ ಬಾರಿ ನೀವು ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ಸಿಕ್ಕಿದ್ದಾರೆ. ತಂದೆಯು ನೀವಾತ್ಮರಿಗೆ ಓದಿಸುತ್ತಾರೆ, ಮತ್ತೆಲ್ಲರೂ ದೇಹಾಭಿಮಾನಿಗಳಾಗಿರುವ ಕಾರಣ ನಾನು ಇದನ್ನು ಓದುತ್ತೇನೆ, ನಾನು ಇದನ್ನು ಮಾಡುತ್ತೇನೆಂದು ಹೇಳುತ್ತಾರೆ. ದೇಹಾಭಿಮಾನವು ಬಂದು ಬಿಡುತ್ತದೆ. ಈಗ ಈ ಸಂಗಮದಲ್ಲಿ ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಹೇಳುತ್ತಾರೆ - ಮಕ್ಕಳೇ, ನೀವು ಚೆನ್ನಾಗಿ ಓದಿರಿ. ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ಮಗುವಿಗೂ ಅಧಿಕಾರವಿದೆ ಏಕೆಂದರೆ ಎಲ್ಲರೂ ಆತ್ಮಿಕ ಮಕ್ಕಳಲ್ಲವೆ. ಲೌಕಿಕ ಸಂಬಂಧದಲ್ಲಿ ಕೇವಲ ಮಗನು ಆಸ್ತಿಗೆ ಹಕ್ಕುದಾರನಾಗುತ್ತಾನೆ. ಈ ಪಾರಲೌಕಿಕ ಸಂಬಂಧದಲ್ಲಿ ಎಲ್ಲಾ ಮಕ್ಕಳು ಅರ್ಥಾತ್ ಆತ್ಮರಿಗೆ ಆಸ್ತಿಯು ಸಿಗುತ್ತದೆ. ಅಮರನಾಥನ ಕಥೆಯನ್ನೂ ಹೇಳುತ್ತಾರೆ, ಪಾರ್ವತಿಗೆ ಪರ್ವತಗಳ ಮೇಲೆ ಹೋಗಿ ಕಥೆಯನ್ನು ತಿಳಿಸಿದರೆಂದು ಹೇಳುತ್ತಾರೆ, ಇದು ತಪ್ಪಲ್ಲವೆ! ಯಾವುದು ಸತ್ಯ, ಯಾವುದು ಅಸತ್ಯ ಎಂಬುದನ್ನು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಸತ್ಯವನ್ನು ಅವಶ್ಯವಾಗಿ ಸತ್ಯ ತಂದೆಯೇ ತಿಳಿಸುತ್ತಾರೆ, ತಂದೆಯು ಒಂದೇ ಬಾರಿ ಸತ್ಯವನ್ನು ತಿಳಿಸಿ ಸತ್ಯ ಖಂಡದ ಮಾಲೀಕರನ್ನಾಗಿ ಮಾಡುತ್ತಾರೆ. ನಿಮಗೂ ತಿಳಿದಿದೆ - ಈ ಅಸತ್ಯ ಖಂಡಕ್ಕೆ ಬೆಂಕಿ ಬೀಳುವುದು, ಇಲ್ಲಿ ಏನೆಲ್ಲವೂ ಕಾಣುತ್ತಿದೆಯೋ ಇದೇನೂ ಉಳಿಯುವುದಿಲ್ಲ. ಇನ್ನು ಸ್ವಲ್ಪವೇ ಸಮಯವಿದೆ, ಇದು ಶಿವ ತಂದೆಯ ಜ್ಞಾನ ಯಜ್ಞವಾಗಿದೆ. ಹೇಗೆ ಲೌಕಿಕದಲ್ಲಿಯೂ ಕೆಲವರು ರುದ್ರ ಯಜ್ಞವನ್ನು ರಚಿಸುತ್ತಾರೆ, ಕೆಲವರು ಗೀತಾ ಯಜ್ಞ, ಕೆಲವರು ರಾಮಾಯಣ ಯಜ್ಞವನ್ನು ರಚಿಸುತ್ತಾರೆ. ಇದು ಶಿವ ತಂದೆಯ ಅಥವಾ ರುದ್ರನ ಜ್ಞಾನ ಯಜ್ಞವಾಗಿದೆ, ಇದು ಅಂತಿಮ ಯಜ್ಞವಾಗಿದೆ.

ನಾವೀಗ ಅಮರಪುರಿಗೆ ಹೋಗುತ್ತಿದ್ದೇವೆ, ಇನ್ನು ಕೆಲವೇ ನಿಮಿಷಗಳ ಮಾರ್ಗವಿದೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಿ. ಇದು ಯಾವುದೇ ಮನುಷ್ಯನಿಗೆ ತಿಳಿದಿಲ್ಲ. ಮೃತ್ಯುಲೋಕದಿಂದ ಅಮರ ಲೋಕದಲ್ಲಿ ಹೋಗಲು ಇನ್ನೂ 40 ಸಾವಿರ ವರ್ಷಗಳಿದೆ ಎಂದು ಮನುಷ್ಯರು ಹೇಳಿ ಬಿಡುತ್ತಾರೆ. ಸತ್ಯಯುಗಕ್ಕೆ ಅಮರ ಲೋಕವೆಂದು ಹೇಳಲಾಗುತ್ತದೆ. ನೀವು ಮಕ್ಕಳಿಗೆ ತಂದೆಯು ಈಗ ಸನ್ಮುಖದಲ್ಲಿ ಕುಳಿತು ಅಮರ ಕಥೆ, ಮೂರನೇ ನೇತ್ರದ ಕಥೆ, ಸತ್ಯ ನಾರಾಯಣನ ಕಥೆಯನ್ನು ತಿಳಿಸುತ್ತಿದ್ದಾರೆ. ಭಕ್ತಿಮಾರ್ಗದಲ್ಲಿ ಏನೇನಿರುತ್ತದೆ ಅದನ್ನಂತೂ ನೋಡಿದಿರಿ. ಭಕ್ತಿಮಾರ್ಗದ್ದು ಎಷ್ಟೊಂದು ವಿಸ್ತಾರವಿದೆ. ಹೇಗೆ ವೃಕ್ಷವು ಬಹಳ ವಿಸ್ತಾರವಾಗಿ ಬೆಳೆಯುತ್ತದೆ ಹಾಗೆಯೇ ಭಕ್ತಿಯದೂ ಸಹ ಬಹಳ ದೊಡ್ಡ ಕರ್ಮ ಕಾಂಡದ ವೃಕ್ಷವಾಗಿದೆ. ಯಜ್ಞ, ವ್ರತ-ನಿಯಮ, ಜಪ-ತಪ ಇತ್ಯಾದಿ ಎಷ್ಟೊಂದು ಮಾಡುತ್ತಾರೆ. ಈ ಜನ್ಮದ ಭಕ್ತರಂತೂ ಬಹಳಷ್ಟು ಮಂದಿ ಇದ್ದಾರೆ. ಮನುಷ್ಯರ ವೃದ್ಧಿಯಾಗುತ್ತಾ ಇರುತ್ತದೆ. ನೀವು ಭಕ್ತಿ ಮಾರ್ಗದಲ್ಲಿ ಬಂದಿದ್ದೀರಿ, ಆಗಿನಿಂದ ಅನ್ಯ ಧರ್ಮಗಳು ಸ್ಥಾಪನೆಯಾಗಿದೆ. ಅದರೊಂದಿಗೆ ನಮ್ಮ ಸಂಬಂಧವಿಲ್ಲ, ಪ್ರತಿಯೊಬ್ಬರಿಗೆ ತಮ್ಮ ಧರ್ಮದೊಂದಿಗೆ ಸಂಬಂಧವಿರುತ್ತದೆ. ಪ್ರತಿಯೊಬ್ಬರ ರೀತಿ-ನೀತಿಗಳೇ ಬೇರೆಯಾಗಿರುತ್ತವೆ. ಭಾರತವು ಅಮರ ಪುರಿಯಾಗಿತ್ತು, ಅದೇ ಈಗ ಮೃತ್ಯುಲೋಕವಾಗಿದೆ. ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ ಆದರೆ ಈಗ ಪತಿತರಾಗಿರುವ ಕಾರಣ ನೀವು ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನಾವೇ ದೇವತೆಗಳಾಗಿದ್ದೆವು ಎಂಬುದು ನಿಮಗೆ ಮರೆತು ಹೋಗಿದೆ. ಹೇಗೆ ಪ್ರಾಕ್ಟಿಕಲ್ನಲ್ಲಿ ಹೇಳುತ್ತಾರೆ - ಕ್ರಿಸ್ತನು ನಮ್ಮ ಧರ್ಮ ಸ್ಥಾಪನೆ ಮಾಡಿದರು ಆಗಿನಿಂದ ನಮ್ಮ ಕ್ರಿಶ್ಚಿಯನ್ನರು ನಡೆದು ಬಂದಿದ್ದಾರೆ. ಅವರು ಯುರೋಪಿಯನ್ ಧರ್ಮದವರೆಂದಲ್ಲ. ಹೇಗೆ ನೀವು ಹಿಂದೂಸ್ತಾನದಲ್ಲಿ ಇರುವವರು ಅಥವಾ ಭಾರತದಲ್ಲಿ ಇರುವವರು ದೇವಿ-ದೇವತಾ ಧರ್ಮದವರಾಗಿದ್ದೀರಿ, ಆದರೆ ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನಾವು ನೀಚರು, ಪಾಪಿಗಳು, ಕಂಗಾಲ ವಿಕಾರಿಗಳಾಗಿದ್ದೇವೆ ಎಂದು ನೀವು ತಿಳಿದುಕೊಳ್ಳುತ್ತೀರಿ. ಭಕ್ತಿ ಮಾರ್ಗದಲ್ಲಿ ಮನುಷ್ಯರು ದುಃಖಿಯಾದಾಗ ತಂದೆಯನ್ನೇ ಕರೆಯುತ್ತಾರೆ. ಇದನ್ನು ಕೇವಲ ನೀವು ಬ್ರಾಹ್ಮಣ ಮಕ್ಕಳೇ ತಿಳಿದುಕೊಂಡಿದ್ದೀರಿ - ಯಾವ ತಂದೆಯನ್ನು ಕರೆಯುತ್ತಾ ಬಂದೆವೋ ಅವರೇ ನಮಗೆ ಬೇಹದ್ದಿನ ಆಸ್ತಿಯನ್ನು ಕೊಡುವುದಕ್ಕಾಗಿ ಅಮರ ಕಥೆಯನ್ನು ತಿಳಿಸುತ್ತಿದ್ದಾರೆ. ನಾವು ಅಮರಪುರಿಯ ಮಾಲೀಕರಾಗುವವರಿದ್ದೇವೆ. ಅಮರ ಪುರಿಗೆ ಸ್ವರ್ಗವೆಂದು ಹೇಳಲಾಗುತ್ತದೆ, ನಾವು ಸ್ವರ್ಗವಾಸಿಗಳಾಗಲು ಪುರುಷಾರ್ಥ ಮಾಡುತ್ತಿದ್ದೇವೆಂದು ನೀವು ಹೇಳುತ್ತೀರಿ. ಕಲಿಯುಗದಲ್ಲಿ ಮನುಷ್ಯರು ಸಾವನ್ನಪ್ಪಿದರೆ ಸ್ವರ್ಗವಾಸಿಗಳಾದರೆಂದು ಹೇಳುತ್ತಾರೆ. ಅಂದಮೇಲೆ ಅವರು ಸ್ವರ್ಗದಲ್ಲಿ ಹೋಗಲು ಏನಾದರೂ ಸಾಧನೆ ಮಾಡಿದರೆ? ನೀವಂತೂ ಅಮರಪುರಿ, ವೈಕುಂಠದಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿದ್ದೀರಿ. ಪುರುಷಾರ್ಥ ಮಾಡಿಸುವವರು ಯಾರು? ಅಮರ ತಂದೆ. ಅವರಿಗೆ ಅಮರನಾಥನೆಂದೂ ಹೇಳಲಾಗುತ್ತದೆ. ಈ ಯಜ್ಞಕ್ಕೆ ಪಾಠಶಾಲೆಯೆಂದೂ ಹೇಳಲಾಗುತ್ತದೆ. ಅನ್ಯ ಯಾವುದೇ ಪಾಠಶಾಲೆಗೆ ಯಜ್ಞವೆಂದು ಹೇಳುವುದಿಲ್ಲ. ಯಜ್ಞಗಳನ್ನು ಪ್ರತ್ಯೇಕವಾಗಿ ರಚಿಸಲಾಗುತ್ತದೆ ಯಾವುದರಲ್ಲಿ ಬ್ರಾಹ್ಮಣರು ಕುಳಿತು ಮಂತ್ರಗಳನ್ನು ಓದುತ್ತಾರೆ. ತಂದೆಯು ಹೇಳುತ್ತಾರೆ - ನಿಮ್ಮದು ಇದು ಕಾಲೇಜು ಆಗಿದೆ, ಯಜ್ಞವೂ ಆಗಿದೆ. ಎರಡೂ ಒಟ್ಟಿಗೆಇದೆ. ನೀವು ತಿಳಿದುಕೊಂಡಿದ್ದೀರಿ - ಈ ಜ್ಞಾನ ಯಜ್ಞದಿಂದ ವಿನಾಶದ ಜ್ವಾಲೆಯು ಪ್ರಜ್ವಲಿತವಾಯಿತು. ಇದರಲ್ಲಿ ಇಡೀ ಪ್ರಪಂಚವೇ ಸ್ವಾಹಾ ಆಗುವುದು ಮತ್ತೆ ಹೊಸ ಪ್ರಪಂಚವು ಸ್ಥಾಪನೆಯಾಗುವುದು. ಇದರ ಹೆಸರೇ ಆಗಿದೆ - ಮಹಾಭಾರಿ ಮಹಾಭಾರತ ಯುದ್ಧ. ಇದರಂತಹ ಯುದ್ಧವು ಬೇರೆ ಯಾವುದೂ ಆಗುವುದಿಲ್ಲ. ಯುದ್ಧದಲ್ಲಿ ಅಣ್ವಸ್ತ್ರಗಳಿಂದ ಯುದ್ಧವಾಯಿತು ಎಂದು ಹೇಳುತ್ತಾರೆ. ನಿಮ್ಮ ಜೊತೆ ಯುದ್ಧವಂತೂ ಇಲ್ಲ ಆದರೆ ಇದಕ್ಕೆ ಮಹಾಭಾರತ ಯುದ್ಧವೆಂದು ಏಕೆ ಹೇಳುತ್ತಾರೆ? ಭಾರತದಲ್ಲಿ ಒಂದೇ ಧರ್ಮವಿರುತ್ತದೆಯಲ್ಲವೆ. ಮೃತ್ಯುವಂತೂ ಹೊರದೇಶದಲ್ಲಿ ಆಗುತ್ತಿದೆ. ಇಲ್ಲಿ ಯುದ್ಧದ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ನಿಮಗಾಗಿ ಹೊಸ ಪ್ರಪಂಚವು ಬೇಕು, ಆದ್ದರಿಂದ ಅವಶ್ಯವಾಗಿ ಹಳೆಯ ಪ್ರಪಂಚದ ವಿನಾಶವಾಗುವುದು. ನೀವು ಮಕ್ಕಳ ಬುದ್ಧಿಯಲ್ಲಿ ವಿರಾಟ ರೂಪದ ಸಂಪೂರ್ಣ ಜ್ಞಾನವಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ, ಯಾರು ಕಲ್ಪದ ಮೊದಲು ಬಂದಿದ್ದರೋ ದೇವತೆಗಳಾಗಲು ಅವರೇ ಬರುವರು. ಇದು ಬುದ್ಧಿಯ ಕೆಲಸವಾಗಿದೆ. ನಾವು ಎಷ್ಟು ಮಂದಿ ಬ್ರಾಹ್ಮಣರಾಗಿದ್ದೇವೆಯೋ ಅಷ್ಟೇ ಮಂದಿ ದೇವತೆಗಳಾಗುತ್ತೇವೆ. ಪ್ರಜಾಪಿತ ಬ್ರಹ್ಮಾನ ಗಾಯನವಿದೆ. ಪ್ರಜಾಪಿತ ಬ್ರಹ್ಮಾನ ಮೂಲಕ ಪರಮಪಿತ ಪರಮಾತ್ಮನು ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ ಆದ್ದರಿಂದ ಬ್ರಹ್ಮಾನಿಗೆ ಪ್ರಜಾಪಿತನೆಂದು ಹೇಳುತ್ತಾರೆ ಆದರೆ ಯಾವಾಗ ಹೇಗೆ ರಚಿಸುತ್ತಾರೆಂಬುದು ಯಾರೂ ತಿಳಿದುಕೊಂಡಿಲ್ಲ. ಆರಂಭದಲ್ಲಿ ರಚಿಸಲು ಮನುಷ್ಯರಿರಲಿಲ್ಲವೆ! ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಯಾವಾಗ ಮನುಷ್ಯರು ಪತಿತರಾಗುವರೋ ಆಗಲೇ ತಂದೆಯೂ ಬರುತ್ತಾರೆ. ಪ್ರಪಂಚವು ಪರಿವರ್ತನೆಯಾಗಬೇಕಾಗಿದೆ. ನಿಮ್ಮನ್ನು ತಂದೆಯು ಹೊಸ ಪ್ರಪಂಚಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ, ಈಗ ಎಲ್ಲರೂ ತಮೋಪ್ರಧಾನ ಹಳೆಯ ಪ್ರಪಂಚದಲ್ಲಿದ್ದೀರಿ. ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ. ತಂದೆಯು ತಿಳಿಸಿದ್ದಾರೆ - ಪ್ರತಿಯೊಬ್ಬ ಮನುಷ್ಯ ಮಾತ್ರನೂ, ಪ್ರತಿಯೊಂದು ವಸ್ತು ಸತೋ, ರಜೋ, ತಮೋದಲ್ಲಿ ಬರಬೇಕಾಗುತ್ತದೆ. ಪ್ರಪಂಚವು ಅವಶ್ಯವಾಗಿ ಹೊಸದರಿಂದ ಹಳೆಯದಾಗುತ್ತದೆ. ವಸ್ತ್ರಗಳನ್ನೂ ಸಹ ಹೊಸದಾಗಿ ಧರಿಸಿ ಸ್ವಲ್ಪ ದಿನಗಳು ಕಳೆದರೆ ಹಳೆಯದಾಗುತ್ತದೆ. ಈಗ ನಿಮಗೆ ಜ್ಞಾನ ಸಿಕ್ಕಿದೆ. ಸತ್ಯ ನಾರಾಯಣನ ಕಥೆಯನ್ನು ನೀವೀಗ ಕೇಳುತ್ತಿದ್ದೀರಿ. ಗೀತೆಯು ಸರ್ವ ಶಾಸ್ತ್ರಮಯಿ ಶಿರೋಮಣಿಯಾಗಿದೆ. ಉಳಿದೆಲ್ಲವೂ ಅದರ ಮಕ್ಕಳಾಗಿವೆ. ಹೇಗೆ ಬ್ರಹ್ಮಾನ ವಂಶಾವಳಿಯಿದೆಯೋ ಹಾಗೆ ಗೀತೆಯೂ ಮುಖ್ಯವಾಗಿದೆ. ಶ್ರೇಷ್ಠಾತಿ ಶ್ರೇಷ್ಠ ಮಾತಾಪಿತರಾಗಿದ್ದಾರೆ. ಉಳಿದೆಲ್ಲರೂ ಮಕ್ಕಳಾಗಿದ್ದಾರೆ. ಈಗ ಮಾತಾಪಿತರಿಂದ ಆಸ್ತಿಯು ಸಿಗುತ್ತದೆ, ಉಳಿದಂತೆ ಎಷ್ಟಾದರೂ ಶಾಸ್ತ್ರಗಳನ್ನು ಓದಲಿ, ಏನಾದರೂ ಮಾಡಲಿ, ಆಸ್ತಿಯು ಸಿಗಲು ಸಾಧ್ಯವಿಲ್ಲ. ಭಲೆ ಶಾಸ್ತ್ರಗಳನ್ನು ಓದುವವರಿಗೆ ಬಹಳ ಸಂಪಾದನೆಯಾಗಬಹುದು ಆದರೆ ಅದೂ ಸಹ ಅಲ್ಪಕಾಲಕ್ಕಾಗಿ. ಇಲ್ಲಿ ನೀವು ಮಕ್ಕಳು ಕೇಳಿಸಿಕೊಳ್ಳುತ್ತೀರಿ, ಇದರಿಂದ 21 ಜನ್ಮಗಳಿಗಾಗಿ ಸಂಪಾದನೆ ಮಾಡಿಕೊಳ್ಳುತ್ತೀರಿ. ವಿಚಾರ ಮಾಡಿ, ಅವರಾದರೆ ಒಬ್ಬರು ತಿಳಿಸುತ್ತಾರೆ, ಎಲ್ಲರೂ ಅವರಿಗೆ ಹಣ ಕೊಡುತ್ತಾರೆ. ಇಲ್ಲಿ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ ಯಾವುದರಿಂದ ನೀವು 21 ಜನ್ಮಗಳಿಗಾಗಿ ಎಷ್ಟೊಂದು ಸಾಹುಕಾರರಾಗುತ್ತೀರಿ. ಅಲ್ಲಿ ಯಾರು ಓದಿ ತಿಳಿಸುವರೋ ಅವರ ಜೇಬು ತುಂಬುತ್ತದೆ. ಭಕ್ತಿ ಇತ್ಯಾದಿಗಳನ್ನು ಮಾಡುವುದು ಪ್ರವೃತ್ತಿ ಮಾರ್ಗದವರ ಕೆಲಸವಾಗಿದೆ. ನೀವು ಪ್ರವೃತ್ತಿ ಮಾರ್ಗದವರಾಗಿದ್ದೀರಿ, ನಿಮಗೆ ತಿಳಿದಿದೆ – ಸ್ವರ್ಗ ಲೋಕದಲ್ಲಿ ನಾವು ಪೂಜ್ಯರಾಗಿದ್ದೆವು, ಇಲ್ಲವೆಂದರೆ 84 ಜನ್ಮಗಳ ಲೆಕ್ಕವು ಎಲ್ಲಿಂದ ಬರುವುದು? ಇದು ಆತ್ಮಿಕ ಜ್ಞಾನವಾಗಿದೆ. ಪರಮಾತ್ಮ ಜ್ಞಾನ ಸಾಗರನಿಂದಲೇ ಇದು ಸಿಗುತ್ತದೆ. ಪತಿತ-ಪಾವನ ತಂದೆಯು ಎಲ್ಲರ ಸದ್ಗತಿದಾತನಾಗಿದ್ದಾರೆ. ನಾವು ಮಕ್ಕಳಿಗೆ ಅಮರ ಕಥೆಯನ್ನು ತಿಳಿಸುತ್ತಿದ್ದಾರೆ. ಜನ್ಮ-ಜನ್ಮಾಂತರದಿಂದ ಅಸತ್ಯ ಕಥೆಗಳನ್ನು ಕೇಳುತ್ತಾ ಬಂದಿದ್ದೀರಿ, ಈಗ ಸತ್ಯ ಕಥೆಯನ್ನು ಕೇಳಿ ನೀವು 16 ಕಲಾ ಸಂಪೂರ್ಣರಾಗುತ್ತೀರಿ. ಚಂದ್ರನಿಗೆ 14 ಕಲಾ ಸಂಪೂರ್ಣನೆಂದು ಹೇಳಲಾಗುತ್ತದೆ, ಸೂರ್ಯನಿಗೆ ಈ ರೀತಿ ಹೇಳುವುದಿಲ್ಲ.

ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರು ಭವಿಷ್ಯದಲ್ಲಿ ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗುತ್ತೇವೆ. ಮತ್ತೆ ಅರ್ಧ ಕಲ್ಪದ ನಂತರ ಆತ್ಮದಲ್ಲಿ ತುಕ್ಕು ಬೀಳುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ಈಗ ಪುನಃ ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರು.... ಪುನಃ ದೇವತೆಗಳಾಗುತ್ತಿದ್ದೀರಿ. ನಾವಾತ್ಮರು ಮೊದಲು ನಮ್ಮ ಮನೆಗೆ ಹೋಗಿ ನಂತರ ಬಂದು ಶರೀರ ಧಾರಣೆ ಮಾಡಿ ದೇವತೆಗಳಾಗುತ್ತೇವೆ. ಆನಂತರ ಚಂದ್ರವಂಶಿ ಮನೆತನದಲ್ಲಿ ಬರುತ್ತೇವೆ, 84 ಜನ್ಮಗಳ ಲೆಕ್ಕವೂ ಬೇಕಲ್ಲವೆ. ಯಾವ ಯುಗದಲ್ಲಿ ಎಷ್ಟು ಜನ್ಮಗಳನ್ನು ತೆಗೆದುಕೊಂಡಿರಿ ಎಂದು ತಂದೆಯು 84 ಜನ್ಮಗಳ ಸತ್ಯ-ಸತ್ಯವಾದ ಕಥೆಯನ್ನೂ ಈಗ ತಿಳಿಸಿದ್ದಾರೆ. ನೀವು ಮಕ್ಕಳಿಗೇ ಹೇಳುತ್ತಾರೆ - ನೀವು ಭಾರತವಾಸಿಗಳು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ತಮ್ಮನ್ನು ಮೊದಲನೆಯದಾಗಿ ಬ್ರಾಹ್ಮಣರೆಂದು ತಿಳಿದುಕೊಳ್ಳಬೇಕಾಗಿದೆ. ಮಮ್ಮಾ-ಬಾಬಾ ಎಂದು ಹೇಳುತ್ತೀರಲ್ಲವೆ. ಆಸ್ತಿಯನ್ನು ಶಿವ ತಂದೆಯಿಂದ ಬ್ರಹ್ಮಾರವರ ಮೂಲಕ ತೆಗೆದುಕೊಳ್ಳುತ್ತೀರಿ. ಬ್ರಹ್ಮಾನೂ ಸಹ ತಂದೆಯವರಾದರು. ಬಹ್ಮಾನಿಂದ ಆಸ್ತಿಯು ಸಿಗಲು ಸಾಧ್ಯವಿಲ್ಲ ಏಕೆಂದರೆ ಅವರೂ ಸಹೋದರನಾಗಿದ್ದಾರೆ, ಶರೀರಧಾರಿಯಲ್ಲವೆ. ನೀವು ಎಲ್ಲಾ ಮಕ್ಕಳು ಆಸ್ತಿಯನ್ನು ಅವರಿಂದ ತೆಗೆದುಕೊಳ್ಳುತ್ತೀರಿ, ಈ ಬ್ರಹ್ಮಾನಿಂದಲ್ಲ. ಯಾರಿಂದ ಆಸ್ತಿಯನ್ನು ಪಡೆಯುವುದಿಲ್ಲವೋ ಅವರನ್ನು ನೆನಪು ಮಾಡಬಾರದು, ಒಬ್ಬ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಅವರಿಗೇ ನೀವು ಮಾತಾಪಿತಾ ನಾವು ನಿಮ್ಮ ಬಾಲಕರೆಂದು ಹೇಳುತ್ತಾರೆ. ನೀವು ಅವರ ಬಳಿ ಬರುತ್ತೀರಿ ಅಂದಾಗ ನಿಮ್ಮ ಬುದ್ಧಿಯಲ್ಲಿದೆ - ನಾವು ಶಿವ ತಂದೆಯ ಬಳಿ ಹೋಗುತ್ತೇವೆ. ಈಗ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಆತ್ಮವು ಬಿಂದುವಾಗಿದೆ, ಅದರಲ್ಲಿ 84 ಜನ್ಮಗಳ ಪಾತ್ರವು ನಿಗಧಿಯಾಗಿದೆ. ಆತ್ಮವು ಭೃಕುಟಿಯ ಮಧ್ಯದಲ್ಲಿರುತ್ತದೆ. ಆತ್ಮವು ಒಂದು ಸೆಕೆಂಡಿನಲ್ಲಿ ಹಾರುತ್ತದೆ. ನಾನಾತ್ಮನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ. ಹೋಗಿ ಭೃಕುಟಿಯ ಮಧ್ಯಭಾಗದಲ್ಲಿ ವಿರಾಜಮಾನನಾಗುತ್ತೇನೆ. ನಾನಾತ್ಮನು ಹೀಗಿದ್ದೇನೆಂದು ಬುದ್ಧಿಯಲ್ಲಿ ತಿಳುವಳಿಕೆ ಇದೆ. ಸತ್ಯಯುಗದಲ್ಲಿ ಯಾವುದೇ ಇಂತಹ ವಸ್ತುವನ್ನು ನೋಡುವ ಆಸೆಯಿರುವುದಿಲ್ಲ. ಆತ್ಮವನ್ನು ನೋಡಬಹುದಾಗಿದೆ ಆದರೆ ದಿವ್ಯ ದೃಷ್ಟಿಯಿಂದ. ಯಾರೂ ಈ ಕಣ್ಣುಗಳಿಂದ ನೋಡುವ ಮಾತಿಲ್ಲ. ಭಕ್ತಿಮಾರ್ಗದಲ್ಲಿಯೇ ಸಾಕ್ಷಾತ್ಕಾರ ಮಾಡುತ್ತಾರೆ. ಹೇಗೆ ರಾಮ ಕೃಷ್ಣರ ಶಿಷ್ಯ ವಿವೇಕಾನಂದನಾಗಿದ್ದರು, ಅವರು ತಿಳಿಸಿದ್ದಾರೆ - ನಾನು ಸನ್ಮುಖದಲ್ಲಿ ಕುಳಿತುಕೊಂಡಾಗ ಅವರ ಆತ್ಮವು ಬಂದು ನನ್ನಲ್ಲಿ ಪ್ರವೇಶವಾಯಿತು. ವಾಸ್ತವದಲ್ಲಿ ಈ ಮಾತು ಸಾಧ್ಯವಿಲ್ಲ, ಈ ರೀತಿ ಏನೂ ಆಗುವುದಿಲ್ಲ. ಆತ್ಮವು ಹೇಗೆ ಒಂದು ಶರೀರವನ್ನು ಬಿಟ್ಟು ಇನ್ನೊಂದರಲ್ಲಿ ಪ್ರವೇಶ ಮಾಡುತ್ತದೆ. ಇವೆಲ್ಲಾ ಮಾತುಗಳನ್ನು ನೀವು ಮಕ್ಕಳಿಗೆ ತಿಳಿಸಲಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ – ಅಮರ ಲೋಕದಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ, ನಾವು ಅಮರ ಲೋಕದಲ್ಲಿ ಜನ್ಮ ಪಡೆಯುತ್ತೇವೆ, ಅಲ್ಲಿ ನಾವು ಗರ್ಭ ಮಹಲಿನಲ್ಲಿರುತ್ತೇವೆ. ಇಲ್ಲಂತೂ ಗರ್ಭ ಜೈಲಿನಲ್ಲಿ ಬಹಳ ಅಯ್ಯೊ ಅಯ್ಯೊ ಎನ್ನುತ್ತಾರೆ. ಈಗ ಅರ್ಧ ಕಲ್ಪಕ್ಕಾಗಿ ತಂದೆಯು ನಿಮ್ಮನ್ನು ಎಲ್ಲಾ ದುಃಖಗಳಿಂದ ಬಿಡಿಸುತ್ತಾರೆ ಅಂದಮೇಲೆ ಎಷ್ಟು ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸ್ವಯಂನ್ನು ಆತ್ಮವೆಂದು ತಿಳಿದು ಆತ್ಮಿಕ ತಂದೆಯಿಂದ ವಿದ್ಯೆಯನ್ನು ಓದಿ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಸತ್ಯ ಖಂಡದ ಮಾಲೀಕರಾಗುವ ಸತ್ಯ ಕಥೆಯನ್ನು ಕೇಳಬೇಕು ಹಾಗೂ ಅನ್ಯರಿಗೂ ಹೇಳಬೇಕಾಗಿದೆ.

2. ಯಾವ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆಯೋ ಅವರನ್ನೇ ನೆನಪು ಮಾಡಬೇಕಾಗಿದೆ. ಯಾವುದೇ ದೇಹಧಾರಿಯನ್ನಲ್ಲ. ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳಲಿದೆ ಆದ್ದರಿಂದ ಇದನ್ನು ನೋಡಿಯೂ ನೋಡದಂತಿರಬೇಕಾಗಿದೆ.

ವರದಾನ:
ಶಾಂತಿಯ ಶಕ್ತಿಯ ಮೂಲಕ ತಮ್ಮ ರಿಜಿಸ್ಟರನ್ನು ಸ್ವಚ್ಛವಾಗಿಡುವ ಲೋಕ ಪ್ರಿಯ, ಪ್ರಭು ಪ್ರಿಯ ಭವ.

ಹೇಗೆ ವಿಜ್ಞಾನವು ಅಂತಹ ಅನ್ವೇಷಣೆ ಮಾಡಿದೆ, ಏನೆಲ್ಲವನ್ನೂ ಬರೆಯಲಾಗಿದೆಯೋ ಅದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ, ಗೊತ್ತೇ ಆಗುವುದಿಲ್ಲ. ಅದೇರೀತಿ ತಾವು ಶಾಂತಿಯ ಶಕ್ತಿಯಿಂದ ತಮ್ಮ ರಿಜಿಸ್ಟರನ್ನು ಪ್ರತಿನಿತ್ಯವೂ ಸ್ವಚ್ಛಗೊಳಿಸುತ್ತೀರೆಂದರೆ ಪ್ರಭು ಪ್ರಿಯ ಅಥವಾ ದೈವೀ ಲೋಕ ಪ್ರಿಯರು ಆಗಿ ಬಿಡುತ್ತೀರಿ. ಸತ್ಯತೆ-ಸ್ವಚ್ಛತೆಯನ್ನಂತು ಎಲ್ಲರೂ ಇಷ್ಟ ಪಡುತ್ತಾರೆ, ಆದ್ದರಿಂದ ಒಂದು ದಿನದಲ್ಲಿ ಮಾಡಿರುವ ವ್ಯರ್ಥ ಸಂಕಲ್ಪ ಅಥವಾ ವ್ಯರ್ಥ ಕರ್ಮವನ್ನು, ಇನ್ನೊಂದು ದಿನದಲ್ಲಿ ಲೀಕ್ ಆಗದಿರಲಿ. ಕಳೆದು ಹೋದದ್ದನ್ನು ಕಳೆದು ಬಿಂದುವನ್ನಿಡುತ್ತೀರೆಂದರೆ ರಿಜಿಸ್ಟರ್ ಸ್ವಚ್ಛವಾಗಿರುತ್ತದೆ ಹಾಗೂ ತಂದೆಯು ಖುಷಿಯಾಗಿ ಬಿಡುತ್ತಾರೆ.

ಸ್ಲೋಗನ್:
ವ್ಯರ್ಥ ಸಂಕಲ್ಪ ಮಾಡುವುದು ಅಥವಾ ಅನ್ಯರಲ್ಲಿ ವ್ಯರ್ಥ ಸಂಕಲ್ಪ ನಡೆಸಲು ನಿಮಿತ್ತರಾಗುವುದು -ಇದೂ ಸಹ ಅಪವಿತ್ರತೆಯಾಗಿದೆ.

ಅವ್ಯಕ್ತ ಸೂಚನೆಗಳು:- ಸದಾ ಹರ್ಷಿತರಾಗಿರಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿರಿ, ಸಹನಶೀಲರಾಗಿರಿ.

ಮನ, ವಾಣಿ, ಕರ್ಮದಲ್ಲಿ ಸರಳತೆ ಮತ್ತು ಸಹನಶೀಲತೆ ಎರಡು ಅವಶ್ಯಕತೆಯಿದೆ. ಒಂದುವೇಳೆ ಸರಳತೆಯಿದ್ದರೆ, ಸಹನಶೀಲತೆಯಿಲ್ಲವೆಂದರೂ ಶ್ರೇಷ್ಠವಲ್ಲ. ಸರಳತೆಯ ಜೊತೆ ಸಹನಶೀಲತೆಯಿದ್ದರೆ ಶಕ್ತಿ ಸ್ವರೂಪವೆಂದು ಹೇಳಲಾಗುತ್ತದೆ. ಶಕ್ತಿಗಳ ಚಿತ್ರಗಳಲ್ಲಿ ಸರಳತೆ ಮತ್ತು ಸಹನಶೀಲತೆ ಎರಡು ಗುಣಗಳು ಕಾಣಿಸುತ್ತವೆ. ಈಗಿನ ಫಲಿತಾಂಶದಲ್ಲಿ ಎಲ್ಲಿ ಸಹನಶೀಲತೆಯೆ ಹೆಚ್ಚಿದೆ, ಎಲ್ಲಿ ಸರಳತೆ ಹೆಚ್ಚಿದೆ. ಈಗ ಇವೆರಡನ್ನು ಸಮಾನ ಮಾಡಿರಿ.