15.07.25         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ತಾವೀಗ ಭವಿಷ್ಯ 21 ಜನ್ಮಗಳಿಗಾಗಿ ಇಲ್ಲಿಯೇ ವಿದ್ಯೆಯನ್ನು ಓದಬೇಕಾಗಿದೆ, ಮುಳ್ಳುಗಳಿಂದ ಸುಗಂಧಭರಿತ ಹೂಗಳಾಗಬೇಕಾಗಿದೆ. ದೈವೀಗುಣಗಳನ್ನು ಧಾರಣೆ ಮಾಡಿ ಅನ್ಯರಿಗೂ ಮಾಡಿಸಬೇಕಾಗಿದೆ

ಪ್ರಶ್ನೆ:
ಯಾವ ಮಕ್ಕಳ ಬುದ್ಧಿಯ ಬೀಗವು ನಂಬರ್ವಾರ್ ತೆರೆಯುತ್ತಾ ಹೋಗುತ್ತದೆ?

ಉತ್ತರ:
ಯಾರು ಶ್ರೀಮತದಂತೆ ನಡೆಯುತ್ತಾ ಇರುತ್ತಾರೆ, ಪತಿತ-ಪಾವನ ತಂದೆಯ ನೆನಪಿನಲ್ಲಿರುತ್ತಾರೆ, ವಿದ್ಯೆಯನ್ನು ಓದಿಸುವವರ ಜೊತೆಗೆ ಯಾರ ಬುದ್ಧಿಯೋಗವಿರುವುದೋ ಅವರ ಬುದ್ಧಿಯ ಬೀಗವು ತೆರೆಯುತ್ತಾ ಹೋಗುವುದು. ತಂದೆಯು ಹೇಳುತ್ತಾರೆ- ಮಕ್ಕಳೇ, ಅಭ್ಯಾಸ ಮಾಡಿರಿ, ನಾವಾತ್ಮರು ಸಹೋದರ-ಸಹೋದರರಾಗಿದ್ದೇವೆ, ತಂದೆಯಿಂದ ಕೇಳುತ್ತೇವೆ. ಆತ್ಮಾಭಿಮಾನಿಯಾಗಿ ಕೇಳಿರಿ ಹಾಗೂ ಅನ್ಯರಿಗೂ ಹೇಳಿರಿ ಆಗ ಬುದ್ಧಿಯ ಬೀಗವು ತೆರೆಯುತ್ತಾ ಹೋಗುವುದು.

ಓಂ ಶಾಂತಿ.
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಮಕ್ಕಳೇ, ಇಲ್ಲಿ ಕುಳಿತುಕೊಂಡಾಗ ಕೇವಲ ಶಿವತಂದೆಯ ನೆನಪಿನಲ್ಲಿರುವುದಲ್ಲ, ಅದು ಕೇವಲ ಶಾಂತಿಯಾಯಿತು ಆದರೆ ಸುಖವೂ ಬೇಕಾಗಿದೆ ಆದ್ದರಿಂದ ನೀವು ಶಾಂತಿಯಲ್ಲಿಯೂ ಇರಬೇಕು ಮತ್ತು ಸ್ವದರ್ಶನಚಕ್ರಧಾರಿಯಾಗಿ ರಾಜಧಾನಿಯನ್ನೂ ನೆನಪು ಮಾಡಬೇಕು. ನೀವು ನರನಿಂದ ನಾರಾಯಣ ಅಥವಾ ಮನುಷ್ಯರಿಂದ ದೇವತೆಗಳಾಗುವುದಕ್ಕಾಗಿ ಪುರುಷಾರ್ಥ ಮಾಡುತ್ತೀರಿ. ಇಲ್ಲಿ ಭಲೆ ಯಾರಲ್ಲಿ ಎಷ್ಟಾದರೂ ದೈವೀಗುಣಗಳಿರಲಿ ಆದರೂ ದೇವತೆಗಳೆಂದು ಹೇಳುವುದಿಲ್ಲ. ದೇವತೆಗಳಿರುವುದೇ ಸತ್ಯಯುಗದಲ್ಲಿ, ಈ ಪ್ರಪಂಚದಲ್ಲಿ ಮನುಷ್ಯರಿಗೆ ಸ್ವರ್ಗದ ಬಗ್ಗೆ ಗೊತ್ತಿಲ್ಲ. ನೀವು ತಿಳಿದುಕೊಂಡಿದ್ದೀರಿ- ಹೊಸಪ್ರಪಂಚಕ್ಕೆ ಸ್ವರ್ಗ, ಹಳೆಯ ಪ್ರಪಂಚಕ್ಕೆ ನರಕವೆಂದು ಹೇಳಲಾಗುತ್ತದೆ. ಇದೂ ಸಹ ಭಾರತವಾಸಿಗಳಿಗೇ ಗೊತ್ತಿದೆ. ಯಾವ ದೇವತೆಗಳು ಸತ್ಯಯುಗದಲ್ಲಿ ರಾಜ್ಯ ಮಾಡುತ್ತಿದ್ದರೋ ಅವರ ಚಿತ್ರಗಳು ಭಾರತದಲ್ಲಿಯೇ ಇದೆ. ಇವರು ಆದಿಸನಾತನ ದೇವಿ-ದೇವತಾಧರ್ಮದವರಾಗಿದ್ದಾರೆ. ಭಲೆ ಅವರ ಚಿತ್ರಗಳನ್ನು ಹೊರದೇಶಕ್ಕೆ ಪೂಜೆಗಾಗಿ ತೆಗೆದುಕೊಂಡು ಹೋಗುತ್ತಾರೆ. ವಿದೇಶಕ್ಕೆ ಎಲ್ಲಿಗೇ ಹೋಗುತ್ತಾರೆಂದರೆ ಹೋಗಿ ಮಂದಿರಗಳನ್ನು ಕಟ್ಟಿಸುತ್ತಾರೆ. ಪ್ರತಿಯೊಂದು ಧರ್ಮದವರು ಎಲ್ಲಿಗೇ ಹೋದರೂ ತಮ್ಮ ದೇಶದ ಚಿತ್ರಗಳನ್ನೇ ಪೂಜಿಸುತ್ತಾರೆ. ಯಾವ-ಯಾವ ಹಳ್ಳಿಗಳಲ್ಲಿ ವಿಜಯ ಪಡೆಯುವರೋ ಅಲ್ಲಿ ಚರ್ಚ್ಗಳನ್ನು ನಿರ್ಮಿಸುತ್ತಾರೆ. ಪ್ರತಿಯೊಂದು ಧರ್ಮದ ಚಿತ್ರವು ತಮ್ಮ-ತಮ್ಮ ಪೂಜೆಗಾಗಿ ಇಟ್ಟುಕೊಂಡಿರುತ್ತಾರೆ. ನಾವೇ ದೇವಿ-ದೇವತೆಗಳಾಗಿದ್ದೆವು ಎಂದು ಮೊದಲು ನಿಮಗೂ ತಿಳಿದಿರಲಿಲ್ಲ. ತಮ್ಮನ್ನು ಬೇರೆ ಎಂದು ತಿಳಿದು ಅವರ ಪೂಜೆ ಮಾಡುತ್ತಿದ್ದರು. ಅನ್ಯಧರ್ಮದವರು ಪೂಜೆ ಮಾಡುತ್ತಾರೆ, ನಮ್ಮ ಧರ್ಮಸ್ಥಾಪಕರು ಕ್ರಿಸ್ತನಾಗಿದ್ದಾರೆ, ನಾವು ಕ್ರಿಶ್ಚಿಯನ್ನರಾಗಿದ್ದೇವೆ, ಅಥವಾ ಬೌದ್ಧಿಯರಾಗಿದ್ದೇವೆ ಎಂದು ಅವರಿಗೆ ತಿಳಿದಿರುತ್ತದೆ ಆದರೆ ಹಿಂದೂಗಳು ಮಾತ್ರ ತನ್ನ ಧರ್ಮವನ್ನು ಅರಿತುಕೊಳ್ಳದಕಾರಣ ತಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ ಮತ್ತು ದೇವತೆಗಳನ್ನು ಪೂಜಿಸುತ್ತಾರೆ. ನಾವು ಆದಿಸನಾತನ ದೇವಿ-ದೇವತಾಧರ್ಮದವರು ಎಂಬುದೇ ತಿಳಿದುಕೊಂಡಿಲ್ಲ. ನಾವು ನಮ್ಮ ಹಿರಿಯರನ್ನು ಪೂಜಿಸುತ್ತೇವೆಂದು ಹೇಳುತ್ತಾರೆ. ಕ್ರಿಶ್ಚಿಯನ್ನರಾದರೆ ಒಬ್ಬ ಕ್ರೈಸ್ತನನ್ನು ಪೂಜಿಸುತ್ತಾರೆ ಆದರೆ ಭಾರತವಾಸಿಗಳಿಗೆ ಮಾತ್ರ ನಮ್ಮ ಧರ್ಮ ಯಾವುದು? ಅದನ್ನು ಯಾರು ಯಾವಾಗ ಸ್ಥಾಪನೆ ಮಾಡಿದ್ದರು? ಎಂಬುದೇನೂ ತಿಳಿದಿಲ್ಲ. ತಂದೆಯು ಹೇಳುತ್ತಾರೆ- ಈ ಭಾರತದ ಆದಿಸನಾತನ ದೇವಿ-ದೇವತಾಧರ್ಮವು ಪ್ರಾಯಃಲೋಪವಾದಾಗ ನಾನು ಪುನಃ ಸ್ಥಾಪನೆ ಮಾಡಲು ಬರುತ್ತೇನೆ. ಈ ಜ್ಞಾನವು ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ. ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ, ತಿಳಿದುಕೊಳ್ಳದೆಯೇ ಭಕ್ತಿಮಾರ್ಗದಲ್ಲಿ ಚಿತ್ರಗಳ ಪೂಜೆ ಮಾಡುತ್ತಿದ್ದಿರಿ, ಈಗ ನಿಮಗೆ ನಾವು ಭಕ್ತಿಮಾರ್ಗದಲ್ಲಿಲ್ಲವೆಂದು ತಿಳಿದಿದೆ. ಈಗ ನೀವು ಬ್ರಾಹ್ಮಣ ಕುಲಭೂಷಣರು ಹಾಗೂ ಶೂದ್ರಕುಲದವರಲ್ಲಿ ರಾತ್ರಿ-ಹಗಲಿನ ಅಂತರವಿದೆ. ಇದೂ ಸಹ ಈ ಸಮಯದಲ್ಲಿಯೇ ನೀವು ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ತಿಳಿದುಕೊಳ್ಳುವುದಿಲ್ಲ. ಈ ಸಮಯದಲ್ಲಿಯೇ ನಿಮಗೆ ತಿಳುವಳಿಕೆಯು ಸಿಗುತ್ತದೆ. ತಂದೆಯು ಆತ್ಮರಿಗೆ ತಿಳುವಳಿಕೆ ನೀಡುತ್ತಾರೆ. ಹಳೆಯ ಪ್ರಪಂಚ ಹಾಗೂ ಹೊಸಪ್ರಪಂಚದ ಬಗ್ಗೆ ನೀವು ಬ್ರಾಹ್ಮಣರಿಗೆ ಮಾತ್ರವೇ ತಿಳಿದಿದೆ. ಹಳೆಯ ಪ್ರಪಂಚದಲ್ಲಿ ಅನೇಕ ಮನುಷ್ಯರಿದ್ದಾರೆ. ಇಲ್ಲಂತೂ ಮನುಷ್ಯರು ಎಷ್ಟು ಹೊಡೆದಾಡುತ್ತಾ ಜಗಳವಾಡುತ್ತಿರುತ್ತಾರೆ. ಇದು ಮುಳ್ಳುಗಳ ಕಾಡಾಗಿದೆ. ನೀವು ತಿಳಿದುಕೊಂಡಿದ್ದೀರಿ- ನಾವೂ ಸಹ ಮುಳ್ಳುಗಳಾಗಿದ್ದೆವು, ಈಗ ತಂದೆಯು ನಮ್ಮನ್ನು ಹೂಗಳನ್ನಾಗಿ ಮಾಡುತ್ತಿದ್ದಾರೆ. ಮುಳ್ಳುಗಳಾದವರು ಈ ಸುಗಂಧಭರಿತ ಹೂಗಳಾದ ದೇವತೆಗಳಿಗೆ ನಮನ ಮಾಡುತ್ತಾರೆ. ಈ ರಹಸ್ಯವನ್ನೂ ನೀವು ಈಗ ತಿಳಿದಿದ್ದೀರಿ. ನಾವೇ ದೇವತೆಗಳಾಗಿದ್ದೆವು, ನಂತರ ಈಗ ಬಂದು ಸುಗಂಧಭರಿತ (ಬ್ರಾಹ್ಮಣ) ಹೂಗಳಾಗಿದ್ದೇವೆ. ತಂದೆಯು ತಿಳಿಸಿದ್ದಾರೆ, ಇದು ಡ್ರಾಮಾ ಆಗಿದೆ. ಮೊದಲು ಈ ಡ್ರಾಮಾ, ಸಿನಿಮಾ ಇತ್ಯಾದಿಗಳು ಇರಲಿಲ್ಲ, ಈಗ ಬಂದಿವೆ. ಏಕೆ ಬಂದಿವೆ? ಏಕೆಂದರೆ ತಂದೆಯು ನೀವು ಮಕ್ಕಳಿಗೆ ತಿಳಿಸಲು ಸಹಜವಾಗಲಿ ಎಂದು. ಈ ವಿಜ್ಞಾನವೂ ಸಹ ನೀವು ಮಕ್ಕಳೇ ಕಲಿಯಬೇಕಲ್ಲವೆ. ಬುದ್ಧಿಯಲ್ಲಿ ಇದೆಲ್ಲಾ ವೈಜ್ಞಾನಿಕ ಸಂಸ್ಕಾರಗಳನ್ನು ತೆಗೆದುಕೊಂಡು ಹೋಗುತ್ತೀರಿ. ಇದು ಸತ್ಯಯುಗಕ್ಕೆ ಕೆಲಸಕ್ಕೆ ಬರುತ್ತದೆ. ಪ್ರಪಂಚವೇನೂ ಒಂದೇಸಲ ಸಮಾಪ್ತಿಯಾಗುವುದಿಲ್ಲ. ಸಂಸ್ಕಾರವನ್ನು ತೆಗೆದುಕೊಂಡು ಹೋಗಿ ನಂತರ ಜನ್ಮ ಪಡೆಯುತ್ತಾರೆ. ವಿಮಾನಗಳನ್ನು ತಯಾರು ಮಾಡುತ್ತಾರೆ. ಯಾವುದು ಕೆಲಸಕ್ಕೆ ಬರುವ ವಸ್ತುಗಳಿವೆಯೋ ಅವೆಲ್ಲವೂ ತಯಾರಾಗುತ್ತವೆ. ಹಡಗನ್ನು ತಯಾರು ಮಾಡುವವರೂ ಇದ್ದಾರೆ, ಅಲ್ಲಿ ಹಡಗುಗಳು ಕೆಲಸಕ್ಕೆ ಬರುವುದಿಲ್ಲ. ಭಲೆ ಯಾರಾದರೂ ಹಡಗು ಮಾಡುವವರು ಜ್ಞಾನ ತೆಗೆದುಕೊಳ್ಳಲಿ, ತೆಗೆದುಕೊಳ್ಳದಿರಲಿ ಆದರೆ ಅವರ ಸಂಸ್ಕಾರ ಕೆಲಸಕ್ಕೆ ಬರುವುದಿಲ್ಲ. ಅಲ್ಲಿ ಹಡಗುಗಳ ಅವಶ್ಯಕತೆಯೇ ಇರುವುದಿಲ್ಲ. ಇದು ಡ್ರಾಮಾದಲ್ಲಿಲ್ಲ. ಹಾ! ವಿಮಾನ, ವಿದ್ಯುತ್ ಇತ್ಯಾದಿಗಳ ಅವಶ್ಯಕತೆಯಿರುವುದು. ಅದರ ಅನ್ವೇಷಣೆ ಮಾಡುತ್ತಾ ಇರುತ್ತಾರೆ. ಅಲ್ಲಿಂದ ಮಕ್ಕಳು ಕಲಿತುಕೊಂಡು ಬರುತ್ತಾರೆ. ಇವೆಲ್ಲಾ ಮಾತುಗಳು ಈಗ ನಿಮ್ಮ ಬುದ್ಧಿಯಲ್ಲಿ ಮಾತ್ರವೇ ಇದೆ.

ನಾವು ಹೊಸ ಪ್ರಪಂಚಕ್ಕಾಗಿ ಓದುತ್ತೇವೆ, ತಂದೆಯು ನಮಗೆ ಭವಿಷ್ಯ 21 ಜನ್ಮಗಳಿಗಾಗಿ ಓದಿಸುತ್ತಾರೆ. ನಾವು ಸ್ವರ್ಗವಾಸಿಗಳಾಗುವುದಕ್ಕಾಗಿ ಪವಿತ್ರರಾಗುತ್ತಿದ್ದೇವೆ. ಮೊದಲು ನರಕವಾಸಿಗಳಾಗಿದ್ದೆವು ಎಂದು ನಿಮಗೆ ತಿಳಿದಿದೆ. ಇಂತಹವರು ಸ್ವರ್ಗವಾಸಿಯಾದರೆಂದು ಮನುಷ್ಯರು ಹೇಳುತ್ತಾರೆ ಆದರೆ ನಾವು ನರಕದಲ್ಲಿದ್ದೇವೆ ಎಂದು ತಿಳಿದುಕೊಳ್ಳುವುದಿಲ್ಲ. ಬುದ್ಧಿಯ ಬೀಗ ತೆರೆಯುವುದಿಲ್ಲ. ನೀವು ಮಕ್ಕಳಿಗೆ ಈಗ ನಿಧಾನ-ನಿಧಾನವಾಗಿ ನಂಬರ್ವಾರ್ ಪುರುಷಾರ್ಥದನುಸಾರ ಬುದ್ಧಿಯ ಬೀಗವು ತೆರೆಯಲ್ಪಡುತ್ತದೆ. ಯಾರು ಶ್ರೀಮತದಂತೆ ನಡೆಯುವರೋ ಮತ್ತು ಪತಿತ-ಪಾವನ ತಂದೆಯನ್ನು ನೆನಪು ಮಾಡುವರೋ ಅವರ ಬುದ್ಧಿಯ ಬೀಗವು ತೆರೆಯಲ್ಪಡುವುದು. ತಂದೆಯು ಜ್ಞಾನವನ್ನೂ ಕೊಡುತ್ತಾರೆ ಮತ್ತು ನೆನಪನ್ನೂ ಕಲಿಸುತ್ತಾರೆ. ಶಿಕ್ಷಕರಲ್ಲವೆ. ಅಂದಮೇಲೆ ಶಿಕ್ಷಕರು ಅವಶ್ಯವಾಗಿ ಓದಿಸುತ್ತಾರೆ. ಎಷ್ಟು ಶಿಕ್ಷಕರು ಮತ್ತು ವಿದ್ಯೆಯೊಂದಿಗೆ ಯೋಗವಿದೆಯೋ ಅಷ್ಟು ಶ್ರೇಷ್ಠಪದವಿ ಪಡೆಯುತ್ತೀರಿ. ಆ ವಿದ್ಯೆಯಲ್ಲಂತೂ ಯೋಗವು ಇದ್ದೇ ಇರುತ್ತದೆ. ನಮಗೆ ಬ್ಯಾರಿಸ್ಟರ್ ಓದಿಸುತ್ತಾರೆಂದು ತಿಳಿದುಕೊಳ್ಳುತ್ತಾರೆ. ಇಲ್ಲಿ ತಂದೆಯೇ ಓದಿಸುತ್ತಾರೆ ಆದರೆ ಇದನ್ನೂ ಮರೆತುಹೋಗುತ್ತಾರೆ ಏಕೆಂದರೆ ಹೊಸಮಾತಲ್ಲವೆ. ದೇಹವನ್ನು ನೆನಪು ಮಾಡುವುದು ಬಹಳ ಸಹಜ. ಪದೇ-ಪದೇ ದೇಹವು ನೆನಪಿಗೆ ಬರುತ್ತದೆ. ನಾವಾತ್ಮರಾಗಿದ್ದೇವೆ ಎಂಬುದನ್ನು ಮರೆತುಹೋಗುತ್ತಾರೆ. ನಾವಾತ್ಮರಿಗೆ ತಂದೆಯು ತಿಳಿಸುತ್ತಾರೆ- ನಾವಾತ್ಮರು ಸಹೋದರ-ಸಹೋದರರಾಗಿದ್ದೇವೆ. ತಂದೆಯಂತೂ ತಿಳಿದುಕೊಂಡಿದ್ದಾರೆ- ನಾನು ಪರಮಾತ್ಮನಾಗಿದ್ದೇನೆ, ಆತ್ಮರಿಗೆ ಕಲಿಸುತ್ತೇನೆ- ತಾವು ತಮ್ಮನ್ನು ಆತ್ಮರೆಂದು ತಿಳಿದು ಅನ್ಯ ಆತ್ಮರಿಗೂ ಕಲಿಸಿರಿ. ಆತ್ಮವು ಕಿವಿಗಳಿಂದ ಕೇಳುತ್ತದೆ, ತಿಳಿಸುವವರು ಪರಮಪಿತ ಪರಮಾತ್ಮನಾಗಿದ್ದಾರೆ, ಅವರಿಗೆ ಪರಮ ಆತ್ಮನೆಂದು ಹೇಳುವರು. ನೀವು ಯಾರಿಗಾದರೂ ತಿಳಿಸುತ್ತೀರೆಂದರೆ ಇದು ಬುದ್ಧಿಯಲ್ಲಿ ಬರಬೇಕು- ನಾನಾತ್ಮದಲ್ಲಿ ಜ್ಞಾನವಿದೆ, ನಾನು ಆತ್ಮನಿಗೆ ಇದನ್ನು ತಿಳಿಸುತ್ತಿದ್ದೇನೆ. ನಾನು ತಂದೆಯಿಂದ ಹೇಳಿರುವುದನ್ನು ಆತ್ಮರಿಗೆ ತಿಳಿಸುತ್ತೇನೆ ಎಂದು ನೆನಪಿರಲಿ. ಇದು ಸಂಪೂರ್ಣ ಹೊಸಮಾತಾಗಿದೆ. ನೀವು ಅನ್ಯರಿಗೆ ಓದಿಸುತ್ತೀರೆಂದರೆ ದೇಹೀ-ಅಭಿಮಾನಿಯಾಗಿ ಓದಿಸುವುದಿಲ್ಲ. ಮರೆತುಹೋಗುತ್ತೀರಿ. ಇದು ಉನ್ನತ ಗುರಿಯಲ್ಲವೆ. ಬುದ್ಧಿಯಲ್ಲಿ ನೆನಪಿರಬೇಕು- ನಾನಾತ್ಮ ಅವಿನಾಶಿಯಾಗಿದ್ದೇನೆ. ನಾನಾತ್ಮನು ಈ ಕರ್ಮೇಂದ್ರಿಯಗಳ ಮೂಲಕ ಪಾತ್ರವನ್ನಭಿನಯಿಸುತ್ತೇನೆ. ನೀವಾತ್ಮರು ಶೂದ್ರಕುಲದಲ್ಲಿದ್ದಿರಿ, ಈಗ ಬ್ರಾಹ್ಮಣಕುಲದಲ್ಲಿದ್ದೀರಿ. ನಂತರ ದೇವತಾಕುಲದಲ್ಲಿ ಹೋಗುವಿರಿ. ಅಲ್ಲಿ ಪವಿತ್ರವಾದ ಶರೀರವು ಸಿಗುವುದು. ಆತ್ಮರು ಸಹೋದರ-ಸಹೋದರರಾಗಿದ್ದೀರಿ, ತಂದೆಯು ಮಕ್ಕಳಿಗೆ ಓದಿಸುತ್ತಾರೆ ನಂತರ ಮಕ್ಕಳು ಹೇಳುತ್ತೀರಿ- ನಾವಾತ್ಮಗಳು ಸಹೋದರರಾಗಿದ್ದೇವೆ, ಸಹೋದರರಿಗೆ ಓದಿಸುತ್ತೇವೆ. ಆತ್ಮರಿಗೇ ತಿಳಿಸಲಾಗುತ್ತದೆ- ಆತ್ಮವೇ ಶರೀರದ ಮೂಲಕ ಕೇಳಿಸಿಕೊಳ್ಳುತ್ತದೆ, ಇವು ಬಹಳ ಸೂಕ್ಷ್ಮಮಾತುಗಳಾಗಿವೆ. ಸ್ಮೃತಿಯಲ್ಲಿ ಬರುವುದಿಲ್ಲ. ಅರ್ಧಕಲ್ಪ ನೀವು ದೇಹಾಭಿಮಾನದಲ್ಲಿದ್ದಿರಿ, ಈ ಸಮಯದಲ್ಲಿ ದೇಹೀ-ಅಭಿಮಾನಿಯಾಗಿರಬೇಕಾಗಿದೆ. ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ. ಆತ್ಮನಿಶ್ಚಯ ಮಾಡಿಕೊಂಡು ಕುಳಿತುಕೊಳ್ಳಿ, ಆತ್ಮನಿಶ್ಚಯ ಮಾಡಿಕೊಂಡು ಕೇಳಿಸಿಕೊಳ್ಳಿ. ಪರಮಪಿತ ಪರಮಾತ್ಮನೇ ತಿಳಿಸುತ್ತಾರೆ ಆದ್ದರಿಂದಲೇ ಹೇಳಿಕೆಯಿದೆ. ಆತ್ಮರು ಪರಮಾತ್ಮನಿಂದ ಬಹುಕಾಲ ಅಗಲಿಹೋಗಿದ್ದರು.... ಪರಮಧಾಮದಲ್ಲಂತೂ ಓದಿಸುವುದಿಲ್ಲ, ಇಲ್ಲಿಯೇ ಬಂದು ಓದಿಸುತ್ತೇನೆ. ಮತ್ತೆಲ್ಲಾ ಆತ್ಮರಿಗೆ ತಮ್ಮ-ತಮ್ಮ ಶರೀರವಿದೆ. ಈ ತಂದೆಯಂತೂ ಪರಮ ಆತ್ಮನಾಗಿದ್ದಾರೆ, ಅವರಿಗೆ ಶರೀರವೇ ಇಲ್ಲ. ಅವರ ಆತ್ಮನ ಹೆಸರಾಗಿದೆ- ಶಿವ. ಈ ಶರೀರ ನನ್ನದಲ್ಲ, ನಾನು ಪರಮ ಆತ್ಮನಾಗಿದ್ದೇನೆ, ನನ್ನ ಮಹಿಮೆ ಬೇರೆಯಾಗಿದೆ ಎಂದು ತಂದೆಗೆ ಗೊತ್ತಿದೆ. ಪ್ರತಿಯೊಬ್ಬರ ಮಹಿಮೆಯು ಬೇರೆ-ಬೇರೆಯಾಗಿರುತ್ತದೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆಂದು ಗಾಯನವಿದೆಯಲ್ಲವೆ. ಅವರು ಜ್ಞಾನಸಾಗರ, ಮನುಷ್ಯಸೃಷ್ಟಿಯ ಬೀಜರೂಪನಾಗಿದ್ದಾರೆ. ಸತ್ಯ, ಚೈತನ್ಯ, ಆನಂದ, ಸುಖ-ಶಾಂತಿಯ ಸಾಗರನಾಗಿದ್ದಾರೆ. ಇದು ತಂದೆಯ ಮಹಿಮೆಯಾಗಿದೆ. ಮಕ್ಕಳಿಗೆ ತಂದೆಯ ಸಂಪತ್ತಿನ ಬಗ್ಗೆ ತಿಳಿದಿರುತ್ತದೆ- ನಮ್ಮ ತಂದೆಯ ಬಳಿ ಈ ಕಾರ್ಖಾನೆಯಿದೆ, ಮಿಲ್ ಇದೆ ಎಂದು ನಶೆಯಿರುತ್ತದೆಯಲ್ಲವೆ. ಮಗುವೇ ತಂದೆಯ ಆಸ್ತಿಗೆ ಮಾಲೀಕನಾಗುತ್ತಾನೆ. ಈ ಆಸ್ತಿಯಂತೂ ಒಂದೇಬಾರಿ ಸಿಗುತ್ತದೆ. ತಂದೆಯ ಬಳಿ ಯಾವ ಆಸ್ತಿಯಿದೆ ಎಂಬುದನ್ನು ಕೇಳಿದಿರಿ.

ನೀವಾತ್ಮರು ಅಮರರಾಗಿದ್ದೀರಿ. ಎಂದೂ ಮೃತ್ಯುಹೊಂದುವುದಿಲ್ಲ. ಪ್ರೇಮದ ಸಾಗರರೂ ಆಗುತ್ತೀರಿ. ಈ ಲಕ್ಷ್ಮೀ-ನಾರಾಯಣರು ಪ್ರೇಮಸಾಗರ ಆಗಿದ್ದಾರೆ, ಎಂದೂ ಪರಸ್ಪರ ಜಗಳವಾಡುವುದಿಲ್ಲ. ಇಲ್ಲಂತೂ ಎಷ್ಟೊಂದು ಜಗಳವಾಡುತ್ತಾರೆ, ಪ್ರೇಮದಲ್ಲಂತೂ ಇನ್ನೂ ದುಃಖವಿದೆ. ತಂದೆಯು ಬಂದು ವಿಕಾರವನ್ನು ಬಂಧ್ ಮಾಡಿಸುತ್ತಾರೆ ಆಗ ಎಷ್ಟೊಂದು ಪೆಟ್ಟು ತಿನ್ನಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಪಾವನರಾಗಿರಿ ಆಗ ಪಾವನ ಪ್ರಪಂಚದ ಮಾಲೀಕರಾಗುವಿರಿ, ಕಾಮ ಮಹಾಶತ್ರುವಾಗಿದೆ ಆದ್ದರಿಂದ ತಂದೆಯ ಬಳಿ ಬಂದಾಗ ತಂದೆಯು ಹೇಳುತ್ತಾರೆ- ಯಾವುದೆಲ್ಲಾ ವಿಕರ್ಮ ಮಾಡಿದ್ದಿರೋ ಅದನ್ನು ತಿಳಿಸಿಬಿಡಿ ಆಗ ಹಗುರವಾಗಿಬಿಡುವುದು. ಇದರಲ್ಲಿಯೂ ಮುಖ್ಯವಾದುದು ವಿಕಾರದ ಮಾತಾಗಿದೆ. ತಂದೆಯು ಮಕ್ಕಳ ಕಲ್ಯಾಣಾರ್ಥವಾಗಿ ಕೇಳುತ್ತಾರೆ. ಹೇ ಪತಿತ-ಪಾವನ ಬನ್ನಿ ಎಂದು ತಂದೆಗೇ ಹೇಳುತ್ತಾರೆ ಏಕೆಂದರೆ ವಿಕಾರದಲ್ಲಿ ಹೋಗುವವರಿಗೇ ಪತಿತರೆಂದು ಹೇಳಲಾಗುತ್ತದೆ. ಈ ಪ್ರಪಂಚವೂ ಪತಿತವಾಗಿದೆ, ಮನುಷ್ಯರೂ ಪತಿತರಾಗಿದ್ದಾರೆ. ಪಂಚತತ್ವಗಳೂ ಪತಿತವಾಗಿದೆ. ಸತ್ಯಯುಗದಲ್ಲಿ ನಿಮಗಾಗಿ ತತ್ವಗಳೂ ಪವಿತ್ರವಾಗಿರಬೇಕು, ಈ ಆಸುರೀ ಪೃಥ್ವಿಯಲ್ಲಿ ದೇವತೆಗಳ ಛಾಯೆಯೂ ಬೀಳುವುದಿಲ್ಲ. ಲಕ್ಷ್ಮಿಯ ಆಹ್ವಾನ ಮಾಡುತ್ತಾರೆ ಆದರೆ ಇಲ್ಲಿ ಬರಲು ಸಾಧ್ಯವೇ? ಬರಬೇಕೆಂದರೆ ಈ ಪಂಚತತ್ವಗಳೂ ಬದಲಾಗಬೇಕು. ಸತ್ಯಯುಗವು ಹೊಸಪ್ರಪಂಚ, ಇದು ಹಳೆಯ ಪ್ರಪಂಚವಾಗಿದೆ. ಇದು ಸಮಾಪ್ತಿಯಾಗುವ ಸಮಯವಾಗಿದೆ. ಇನ್ನೂ 40 ಸಾವಿರ ವರ್ಷಗಳಿದೆಯೆಂದು ಮನುಷ್ಯರು ತಿಳಿಯುತ್ತಾರೆ, ಅರೆ! ಕಲ್ಪದ ಆಯಸ್ಸೇ 5000 ವರ್ಷಗಳ ಅಂದಮೇಲೆ ಕೇವಲ ಒಂದು ಕಲಿಯುಗ 40 ಸಾವಿರ ವರ್ಷಗಳಿರಲು ಹೇಗೆ ಸಾಧ್ಯ! ಎಷ್ಟೊಂದು ಅಜ್ಞಾನ ಅಂಧಕಾರವಿದೆ, ಜ್ಞಾನವಿಲ್ಲ. ಭಕ್ತಿಯು ಬ್ರಾಹ್ಮಣರ ರಾತ್ರಿಯಾಗಿದೆ. ಜ್ಞಾನವು ಬ್ರಹ್ಮಾ ಹಾಗೂ ಬ್ರಾಹ್ಮಣರ ದಿನವಾಗಿದೆ. ಇದು ಈಗ ಪ್ರತ್ಯಕ್ಷದಲ್ಲಿ ನಡೆಯುತ್ತಿದೆ. ಏಣಿಯ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿ ತೋರಿಸಿದ್ದಾರೆ. ಹೊಸಪ್ರಪಂಚ ಮತ್ತು ಹಳೆಯ ಪ್ರಪಂಚಕ್ಕೆ ಅರ್ಧ-ಅರ್ಧ ಭಾಗವೆಂದು ಹೇಳಬಹುದು. ಹೊಸಪ್ರಪಂಚಕ್ಕೆ ಹೆಚ್ಚು ಸಮಯ ಹಳೆಯಪ್ರಪಂಚಕ್ಕೆ ಕಡಿಮೆ ಸಮಯ ಕೊಡುವುದಿಲ್ಲ. ಪೂರ್ಣ ಅರ್ಧ-ಅರ್ಧ ಭಾಗವಿರುವುದು. ಇದರಿಂದ ಕಾಲುಭಾಗವನ್ನು ಮಾಡಬಹುದು. ಒಂದುವೇಳೆ ಅರ್ಧ-ಅರ್ಧಭಾಗವೇ ಇಲ್ಲದಿದ್ದರೆ ಕಾಲುಭಾಗ ಮಾಡುವುದಕ್ಕೂ ಆಗುವುದಿಲ್ಲ. ಸ್ವಸ್ತಿಕದಲ್ಲಿ ನಾಲ್ಕುಭಾಗ ಮಾಡಿದ್ದಾರೆ. ನಾವು ಗಣೇಶನೆಂದು ಬರೆಯುತ್ತೇವೆಂದು ಹೇಳುತ್ತಾರೆ. ಈಗ ಮಕ್ಕಳಿಗೆ ತಿಳಿದಿದೆ- ಹಳೆಯ ಪ್ರಪಂಚವು ವಿನಾಶವಾಗುವುದಿದೆ, ನಾವು ಹೊಸಪ್ರಪಂಚಕ್ಕಾಗಿ ಓದುತ್ತಿದ್ದೇವೆ. ಹೊಸಪ್ರಪಂಚಕ್ಕಾಗಿ ನಾವು ನರನಿಂದ ನಾರಾಯಣರಾಗುತ್ತೇವೆ. ಕೃಷ್ಣನೂ ಸಹ ಹೊಸಪ್ರಪಂಚದವನಾಗಿದ್ದಾನೆ. ಕೃಷ್ಣನದೂ ಗಾಯನವಾಯಿತು, ಕೃಷ್ಣನಿಗೆ ಮಹಾತ್ಮನೆಂದು ಹೇಳುತ್ತಾರೆ ಏಕೆಂದರೆ ಚಿಕ್ಕಮಗುವಾಗಿದ್ದಾನಲ್ಲವೆ. ಚಿಕ್ಕಮಕ್ಕಳು ಪ್ರಿಯರೆನಿಸುತ್ತಾರೆ. ಕಿರಿಯರನ್ನು ಪ್ರೀತಿ ಮಾಡುವಷ್ಟು ಹಿರಿಯರನ್ನು ಮಾಡುವುದಿಲ್ಲ ಏಕೆಂದರೆ ಸತೋಪ್ರಧಾನ ಸ್ಥಿತಿಯಾಗಿರುತ್ತದೆ. ವಿಕಾರದ ದುರ್ಗಂಧವಿರುವುದಿಲ್ಲ. ದೊಡ್ಡವರಾದಾಗ ವಿಕಾರಗಳ ದುರ್ಗಂಧವಿರುತ್ತದೆ. ಮಕ್ಕಳಿಗೆಂದೂ ಕುದೃಷ್ಟಿ ಬರಲು ಸಾಧ್ಯವಿಲ್ಲ. ಈ ಕಣ್ಣುಗಳೇ ಮೋಸ ಮಾಡುವಂತದ್ದಾಗಿದೆ ಆದ್ದರಿಂದ ಕಥೆಗಳಲ್ಲಿ ತಮ್ಮ ಕಣ್ಣುಗಳನ್ನೇ ತೆಗೆದಿಟ್ಟರೆಂದು ಹೇಳುತ್ತಾರೆ. ಆದರೆ ಇಂತಹ ಯಾವುದೇ ಮಾತುಗಳಿಲ್ಲ. ಯಾರು ಹೀಗೆ ಕಣ್ಣುಗಳನ್ನು ತೆಗೆಯುವುದಿಲ್ಲ. ಈ ಸಮಯದಲ್ಲಿ ತಂದೆಯು ಎಲ್ಲಾ ಜ್ಞಾನದ ಮಾತುಗಳನ್ನು ತಿಳಿಸುತ್ತಾರೆ. ನಿಮಗಂತೂ ಜ್ಞಾನದ ಮೂರನೇನೇತ್ರ ಸಿಕ್ಕಿದೆ. ಆತ್ಮಕ್ಕೆ ಆಧ್ಯಾತ್ಮಿಕ ಜ್ಞಾನ ಸಿಗುತ್ತಿದೆ. ಆತ್ಮದಲ್ಲಿಯೇ ಜ್ಞಾನವಿದೆ, ನನ್ನಲ್ಲಿ ಜ್ಞಾನವಿದೆ ಎಂದು ತಂದೆಯು ಹೇಳುತ್ತಾರೆ. ಆತ್ಮಕ್ಕೇ ನಿರ್ಲೇಪವೆಂದು ಹೇಳಲು ಸಾಧ್ಯವಿಲ್ಲ. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತದೆ. ಆತ್ಮವು ಅವಿನಾಶಿಯಾಗಿದೆ, ಎಷ್ಟು ಚಿಕ್ಕದಾಗಿದೆ! ಅದರಲ್ಲಿ 84 ಜನ್ಮಗಳ ಪಾತ್ರವಿದೆ. ಈ ಮಾತನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಅವರಂತೂ ಆತ್ಮವೇ ನಿರ್ಲೇಪವೆಂದು ಹೇಳಿಬಿಡುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮೊದಲು ಆತ್ಮಾನುಭೂತಿ ಮಾಡಿಕೊಳ್ಳಿರಿ. ಪ್ರಾಣಿಗಳು ಎಲ್ಲಿ ಹೋಗುತ್ತವೆ ಎಂದು ಕೆಲವರು ಹೇಳುತ್ತಾರೆ. ಅರೆ! ಪ್ರಾಣಿಗಳ ಮಾತನ್ನು ಬಿಡಿ, ಮೊದಲು ಆತ್ಮಾನುಭೂತಿ ಮಾಡಿಕೊಳ್ಳಿರಿ. ನಾನಾತ್ಮ ಹೇಗಿದ್ದೇನೆ, ಯಾರಾಗಿದ್ದೇನೆ....? ತಂದೆಯು ಹೇಳುತ್ತಾರೆ- ತಮ್ಮನ್ನೇ ಆತ್ಮನೆಂದು ತಿಳಿದುಕೊಂಡಿಲ್ಲ ಅಂದಮೇಲೆ ನನ್ನನ್ನು ಹೇಗೆ ತಿಳಿದುಕೊಳ್ಳುವಿರಿ? ಇದೆಲ್ಲಾ ಸೂಕ್ಷ್ಮ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿದೆ. ಆತ್ಮದಲ್ಲಿ 84 ಜನ್ಮಗಳ ಪಾತ್ರವಿದೆ, ಅದನ್ನು ಅಭಿನಯಿಸುತ್ತಾ ಇರುತ್ತದೆ. ಕೆಲವರು ಹೇಳುತ್ತಾರೆ- ಡ್ರಾಮಾದಲ್ಲಿ ಎಲ್ಲವೂ ನಿಗಧಿಯಾಗಿದೆ ಅಂದಮೇಲೆ ನಾವು ಪುರುಷಾರ್ಥವಾದರೂ ಏಕೆ ಮಾಡಬೇಕು? ಅರೆ! ಪುರುಷಾರ್ಥವಿಲ್ಲದೆ ನೀರೂ ಸಿಗುವುದಿಲ್ಲ. ಡ್ರಾಮಾನುಸಾರ ಎಲ್ಲವೂ ತಾನಾಗಿಯೇ ಸಿಗುವುದು ಎಂದಲ್ಲ. ಕರ್ಮವನ್ನಂತೂ ಅವಶ್ಯವಾಗಿ ಮಾಡಬೇಕಾಗಿದೆ. ಒಳ್ಳೆಯ ಹಾಗೂ ಕೆಟ್ಟ ಕರ್ಮವಾಗುತ್ತದೆ, ಇದನ್ನು ಬುದ್ಧಿಯಿಂದ ತಿಳಿದುಕೊಳ್ಳಬಹುದು. ತಂದೆಯು ಹೇಳುತ್ತಾರೆ- ಇದು ರಾವಣರಾಜ್ಯವಾಗಿದೆ, ಇದರಲ್ಲಿ ನಿಮ್ಮ ಕರ್ಮಗಳು ವಿಕರ್ಮಗಳಾಗುತ್ತವೆ. ಸತ್ಯಯುಗದಲ್ಲಿ ವಿಕರ್ಮಗಳಾಗಲು ರಾವಣರಾಜ್ಯವೇ ಇರುವುದಿಲ್ಲ. ನಾನೇ ನಿಮಗೆ ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಿಳಿಸುತ್ತೇವೆ. ಅಲ್ಲಿ ನಿಮ್ಮ ಕರ್ಮಗಳು ಅಕರ್ಮಗಳಾಗುತ್ತವೆ. ರಾವಣರಾಜ್ಯದಲ್ಲಿ ಕರ್ಮವು ವಿಕರ್ಮವಾಗುತ್ತದೆ. ಗೀತಾಪಾಠಿಗಳೂ ಸಹ ಎಂದೂ ಇದರ ಅರ್ಥವನ್ನು ತಿಳಿಸುವುದಿಲ್ಲ. ಅವರು ಕೇವಲ ಓದಿಹೇಳುತ್ತಾರೆ. ಸಂಸ್ಕೃತದಲ್ಲಿ ಶ್ಲೋಕವನ್ನು ಓದಿ ಆಯಾ ಭಾಷೆಯಲ್ಲಿ ಅರ್ಥ ಹೇಳುತ್ತಾರೆ. ತಂದೆಯು ಹೇಳುತ್ತಾರೆ- ಕೆಲಕೆಲವು ಶಬ್ಧಗಳು ಸರಿಯಾಗಿದೆ. ಭಗವಾನುವಾಚ ಇದೆ ಆದರೆ ಭಗವಂತ ಎಂದು ಯಾರಿಗೆ ಹೇಳಲಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬೇಹದ್ದಿನ ತಂದೆಯ ಆಸ್ತಿಗೆ ನಾನಾತ್ಮನು ಮಾಲೀಕನಾಗಿದ್ದೇನೆ, ಹೇಗೆ ತಂದೆಯು ಶಾಂತಿ, ಪವಿತ್ರತೆ, ಆನಂದದ ಸಾಗರನಾಗಿದ್ದಾರೆ ಹಾಗೆಯೇ ನಾನಾತ್ಮನು ಮಾ||ಸಾಗರನಾಗಿದ್ದೇನೆ, ಇದೇ ನಶೆಯಲ್ಲಿರಬೇಕಾಗಿದೆ.

2. ಡ್ರಾಮಾ ಎಂದು ಪುರುಷಾರ್ಥ ಬಿಡಬಾರದು. ಕರ್ಮವನ್ನು ಅವಶ್ಯವಾಗಿ ಮಾಡಬೇಕಾಗಿದೆ. ಕರ್ಮ, ಅಕರ್ಮ, ವಿಕರ್ಮದ ಗತಿಯನ್ನು ತಿಳಿದು ಸದಾ ಶ್ರೇಷ್ಠಕರ್ಮವನ್ನೇ ಮಾಡಬೇಕಾಗಿದೆ.

ವರದಾನ:
ಸಮಯದ ಮಹತ್ವಿಕೆಯನ್ನು ತಿಳಿದು ಸ್ವಯಂ ಅನ್ನು ಸಂಪನ್ನರನ್ನಾಗಿ ಮಾಡುವಂತಹ ವಿಶ್ವದ ಆಧಾರಮೂರ್ತಿ ಭವ

ಇಡೀ ಕಲ್ಪದ ಸಂಪಾದನೆಯ, ಶ್ರೇಷ್ಠ ಕರ್ಮರೂಪಿ ಬೀಜವನ್ನು ಬಿತ್ತುವ, 5 ಸಾವಿರವರ್ಷದ ಸಂಸ್ಕಾರಗಳ ರಿಕಾರ್ಡ್ ತುಂಬುವ, ವಿಶ್ವ ಕಲ್ಯಾಣ ಅಥವಾ ವಿಶ್ವ ಪರಿವರ್ತನೆಯ ಈ ಸಮಯ ನಡೆಯುತ್ತಿದೆ. ಒಂದುವೇಳೆ ಸಮಯದ ಜ್ಞಾನವುಳ್ಳವರು ಸಹಾ ವರ್ತಮಾನ ಸಮಯವನ್ನು ಕಳೆದುಕೊಳ್ಳುತ್ತಾರೆ ಅಥವಾ ಬರುವಂತಹ ಸಮಯದ ಮೇಲೆ ಬಿಟ್ಟುಬಿಡುತ್ತಾರೆ ಆಗ ಸಮಯದ ಆಧಾರದಮೇಲೆ ಸ್ವಯಂನ ಪುರುಷಾರ್ಥ ಆಯಿತು. ಆದರೆ ವಿಶ್ವದ ಆಧಾರ ಮೂರ್ತಿ ಆತ್ಮರು ಯಾವುದೇ ಪ್ರಕಾರದ ಆಧಾರದ ಮೇಲೆ ನಡೆಯುವುದಿಲ್ಲ. ಅವರು ಒಂದೇ ಅವಿನಾಶಿ ಆಶ್ರಯದ ಆಧಾರದ ಮೇಲೆ ಕಲಿಯುಗಿ ಪತಿತ ಪ್ರಪಂಚದಿಂದ ದೂರ ಹೋಗಿ ಸ್ವಯಂ ಅನ್ನು ಸಂಪನ್ನವನ್ನಾಗಿ ಮಾಡಿಕೊಳ್ಳುವಂತಹ ಪುರುಷಾರ್ಥ ಮಾಡುತ್ತಾರೆ.

ಸ್ಲೋಗನ್:
ಸ್ವಯಂ ಅನ್ನು ಸಂಪನ್ನರನ್ನಾಗಿ ಮಾಡಿಕೊಂಡಿದ್ದೇ ಆದರೆ ವಿಶಾಲ ಕಾರ್ಯದಲ್ಲಿ ಸ್ವತಃ ಸಹಯೋಗಿಗಳಾಗುತ್ತಾರೆ.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ

ವರ್ತಮಾನ ಸಮಯದ ಪುರುಷಾರ್ಥದಲ್ಲಿ ಪ್ರತಿ ಸಂಕಲ್ಪವನ್ನು ಶಕ್ತಿಶಾಲಿಯನ್ನಾಗಿ ಮಾಡಬೇಕಾಗಿದೆ. ಸಂಕಲ್ಪವೇ ಜೀವನದ ಶ್ರೇಷ್ಠ ಖಜಾನೆ ಆಗಿದೆ. ಇಂತಹ ಖಜಾನೆಯ ಮೂಲಕ ಏನು ಬೇಕಾದರೂ, ಎಷ್ಟು ಬೇಕಾದರೂ ಪ್ರಾಪ್ತಿ ಮಾಡಿಕೊಳ್ಳಬಹುದು ಅದೇ ರೀತಿ ಶ್ರೇಷ್ಠ ಸಂಕಲ್ಪಗಳ ಮೂಲಕ ಸದಾಕಾಲಕ್ಕಾಗಿ ಶ್ರೇಷ್ಠ ಪ್ರಾಲಬ್ಧವನ್ನು ಪಡೆಯಬಹುದು. ಇದಕ್ಕಾಗಿ ಒಂದು ಚಿಕ್ಕ ಸ್ಲೋಗನ್ ಸ್ಮೃತಿಯಲ್ಲಿ ಇಟ್ಟುಕೊಳ್ಳಿ- ಯೋಚಿಸಿ ತಿಳಿದುಕೊಂಡು ಮಾಡಬೇಕು ಮತ್ತು ಮಾತನಾಡಬೇಕು ಆಗಲೇ ಸದಾ ಕಾಲಕ್ಕಾಗಿ ಶ್ರೇಷ್ಠ ಜೀವನವನ್ನು ಮಾಡಿಕೊಳ್ಳಬಹುದು.