15.08.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಬೆಳಗ್ಗೆ-ಬೆಳಗ್ಗೆ ಎದ್ದು ಇದೇ ಚಿಂತನೆ ಮಾಡಿ - ನಾನು ಇಷ್ಟು ಚಿಕ್ಕ ಆತ್ಮ ಎಷ್ಟು ದೊಡ್ಡ ಶರೀರವನ್ನು ನಡೆಸುತ್ತಿದ್ದೇನೆ. ನಾನಾತ್ಮದಲ್ಲಿ ಅವಿನಾಶಿ ಪಾತ್ರವು ನಿಗಧಿಯಾಗಿದೆ”.

ಪ್ರಶ್ನೆ:
ಶಿವ ತಂದೆಗೆ ಯಾವ ಅಭ್ಯಾಸವಿದೆ, ಯಾವುದಿಲ್ಲ?

ಉತ್ತರ:
ಆತ್ಮನನ್ನು ಜ್ಞಾನರತ್ನಗಳಿಂದ ಶೃಂಗಾರ ಮಾಡುವ ಅಭ್ಯಾಸವು ಶಿವ ತಂದೆಗಿದೆ ಆದರೆ ಶಿವ ತಂದೆಗೆ ಶರೀರಕ್ಕೆ ಶೃಂಗಾರ ಮಾಡುವ ಅಭ್ಯಾಸವಿಲ್ಲ. ಏಕೆಂದರೆ ತಂದೆಯು ತಿಳಿಸುತ್ತಾರೆ - ನನಗಂತೂ ನನ್ನದೇ ಆದ ಶರೀರವಿಲ್ಲ. ನಾನು ಭಲೆ ಇವರ ಶರೀರವನ್ನು ಬಾಡಿಗೆಯಾಗಿ ತೆಗೆದುಕೊಳ್ಳುತ್ತೇನೆ ಆದರೆ ಈ ಶರೀರದ ಶೃಂಗಾರವನ್ನು ಈ ಆತ್ಮವೇ (ಬ್ರಹ್ಮಾ) ಮಾಡಿಕೊಳ್ಳುತ್ತದೆ, ನಾನು ಮಾಡುವುದಿಲ್ಲ. ನಾನಂತೂ ಸದಾ ಅಶರೀರಿಯಾಗಿದ್ದೇನೆ.

ಗೀತೆ:
ಪ್ರಪಂಚವು ಬದಲಾದರೂ ನಾವು ಬದಲಾಗುವುದಿಲ್ಲ...............

ಓಂ ಶಾಂತಿ.
ಮಕ್ಕಳು ಈ ಗೀತೆಯನ್ನು ಕೇಳಿದಿರಿ, ಯಾರು ಕೇಳಿದರು? ಆತ್ಮವು ಈ ಶರೀರದ ಕಿವಿಗಳ ಮೂಲಕ ಕೇಳಿದಿರಿ. ಮಕ್ಕಳಿಗೂ ಸಹ ಇದು ಅರ್ಥವಾಗಿದೆ - ಆತ್ಮವು ಎಷ್ಟು ಚಿಕ್ಕದಾಗಿದೆ! ಆ ಆತ್ಮವು ಈ ಶರೀರದಲ್ಲಿ ಇಲ್ಲವೆಂದರೆ ಶರೀರವಂತೂ ಕೆಲಸಕ್ಕೆ ಬರುವುದಿಲ್ಲ. ಎಷ್ಟು ಚಿಕ್ಕ ಆತ್ಮನ ಆಧಾರದ ಮೇಲೆ ಎಷ್ಟು ದೊಡ್ಡ ಶರೀರವು ನಡೆಯುತ್ತದೆ! ಪ್ರಪಂಚದಲ್ಲಿ ಇದು ಯಾರಿಗೂ ತಿಳಿದಿಲ್ಲ - ಆತ್ಮವೆಂದರೇನು, ಯಾವುದು ಈ ರಥ (ಶರೀರ) ದಲ್ಲಿ ವಿರಾಜಮಾನವಾಗುತ್ತದೆ. ಅಕಾಲಮೂರ್ತಿ ಆತ್ಮನಿಗೆ ಇದು ಸಿಂಹಾಸನವಾಗಿದೆ. ಮಕ್ಕಳಿಗೂ ಸಹ ಈ ಜ್ಞಾನವು ಸಿಗುತ್ತದೆ. ಎಷ್ಟು ರಮಣೀಕ, ರಹಸ್ಯಯುಕ್ತವಾಗಿವೆ. ಯಾರಾದರೂ ಇಂತಹ ರಹಸ್ಯಯುಕ್ತ ಮಾತನ್ನು ಕೇಳಿದಾಗ ಚಿಂತನೆ ನಡೆಯುತ್ತದೆ. ನೀವು ಮಕ್ಕಳಿಗೂ ಸಹ ಇದೇ ಚಿಂತನೆ ನಡೆಯುತ್ತದೆ. ಇಷ್ಟು ಚಿಕ್ಕ ಆತ್ಮವು ಎಷ್ಟು ದೊಡ್ಡ ಶರೀರದಲ್ಲಿದೆ. ಆತ್ಮದಲ್ಲಿ 84 ಜನ್ಮಗಳ ಪಾತ್ರವು ನಿಗಧಿಯಾಗಿದೆ. ಶರೀರವಂತೂ ವಿನಾಶವಾಗಿ ಬಿಡುತ್ತದೆ. ಬಾಕಿ ಆತ್ಮವೇ ಉಳಿಯುತ್ತದೆ. ಇವು ಬಹಳ ವಿಚಾರ ಮಾಡುವ ಮಾತುಗಳಾಗಿವೆ. ಮುಂಜಾನೆ ಎದ್ದು ಈ ವಿಚಾರ ಮಾಡಬೇಕು. ಈಗ ಆತ್ಮಕ್ಕೆ ಸ್ಮೃತಿ ಬಂದಿದೆ - ಆತ್ಮವು ಎಷ್ಟು ಚಿಕ್ಕದಾಗಿದೆ, ಅದಕ್ಕೆ ಅವಿನಾಶಿ ಪಾತ್ರವು ಸಿಕ್ಕಿದೆ. ನಾನಾತ್ಮನು ಎಷ್ಟು ವಿಚಿತ್ರನಾಗಿದ್ದೇನೆ. ಇದು ಹೊಸ ಜ್ಞಾನವಾಗಿದೆ ಯಾವುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ತಂದೆಯೇ ಬಂದು ತಿಳಿಸುತ್ತಾರೆ ಅಂದಾಗ ಇದನ್ನು ಸ್ಮರಣೆ ಮಾಡಬೇಕಾಗಿದೆ. ನಾವು ಇಷ್ಟು ಸೂಕ್ಷ್ಮ ಆತ್ಮಗಳು ಹೇಗೆ ಪಾತ್ರವನ್ನಭಿನಯಿಸುತ್ತೇವೆ, ಶರೀರವು ಪಂಚತತ್ವಗಳಿಂದಾಗುತ್ತದೆ. ತಂದೆಗೆ ತಿಳಿಯುತ್ತದೆಯೇ! ಶಿವ ತಂದೆಯ ಆತ್ಮವು ಹೇಗೆ ಬರುತ್ತದೆ, ಹೋಗುತ್ತದೆ. ಸದಾ ಇವರಲ್ಲಿಯೇ (ಬ್ರಹ್ಮಾ) ಇರುವುದಿಲ್ಲ ಅಂದಮೇಲೆ ಇದೇ ಚಿಂತನೆ ಮಾಡಬೇಕಾಗಿದೆ. ನೀವು ಮಕ್ಕಳಿಗೆ ತಂದೆಯು ಇಂತಹ ಜ್ಞಾನವನ್ನು ಕೊಡುತ್ತಾರೆ, ಇದು ಎಂದೂ ಯಾರಿಗೂ ಸಿಗಲು ಸಾಧ್ಯವಿಲ್ಲ. ನಿಮಗೆ ಇದು ತಿಳಿದಿದೆ - ಅವಶ್ಯವಾಗಿ ಈ ಜ್ಞಾನವು ಇವರ (ಬ್ರಹ್ಮಾ) ಆತ್ಮನಲ್ಲಿರಲಿಲ್ಲ. ಅನ್ಯ ಸತ್ಸಂಗಗಳಲ್ಲಿ ಇಂತಹ ಮಾತುಗಳ ಮೇಲೆ ಯಾರಿಗೂ ಗಮನವಿರುವುದಿಲ್ಲ. ಆತ್ಮ ಮತ್ತು ಪರಮಾತ್ಮನ ಬಗ್ಗೆ ಅಂಶ ಮಾತ್ರವೂ ಜ್ಞಾನವಿಲ್ಲ. ನಾನಾತ್ಮನು ಶರೀರದ ಮೂಲಕ ಇವರಿಗೆ ಮಂತ್ರವನ್ನು ಕೊಡುತ್ತೇನೆ ಎಂದು ಯಾವುದೇ ಸಾಧು-ಸನ್ಯಾಸಿಗಳು ತಿಳಿಯುವುದಿಲ್ಲ. ಆತ್ಮವು ಶರೀರದ ಮೂಲಕ ಶಾಸ್ತ್ರವನ್ನು ಓದುತ್ತದೆ. ಯಾವ ಮನುಷ್ಯನೂ ಸಹ ಆತ್ಮಾಭಿಮಾನಿಯಾಗಿಲ್ಲ, ಯಾರಿಗೂ ಆತ್ಮದ ಜ್ಞಾನವಿಲ್ಲ ಅಂದಮೇಲೆ ತಂದೆಯ ಜ್ಞಾನವು ಹೇಗಿರುತ್ತದೆ! ನಾವಾತ್ಮಗಳಿಗೆ ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನೀವು ಎಷ್ಟು ಬುದ್ಧಿವಂತರಾಗುತ್ತಿದ್ದೀರಿ! ಈ ಶರೀರದಲ್ಲಿ ಯಾವ ಆತ್ಮವಿದೆಯೋ ಇದಕ್ಕೆ ಪರಮಪಿತ ಪರಮಾತ್ಮನು ಕುಳಿತು ಓದಿಸುತ್ತಾರೆ ಎಂದು ತಿಳಿದುಕೊಳ್ಳುವಂತಹ ಮನುಷ್ಯರು ಯಾರೊಬ್ಬರೂ ಇಲ್ಲ. ಎಷ್ಟು ತಿಳಿದುಕೊಳ್ಳುವ ಮಾತುಗಳಾಗಿವೆ. ಆದರೂ ಸಹ ಉದ್ಯೋಗ-ವ್ಯವಹಾರಗಳಲ್ಲಿ ಹೋದಾಗ ಇದು ಮರೆತು ಹೋಗುತ್ತದೆ. ಮೊಟ್ಟ ಮೊದಲನೆಯದಾಗಿ ತಂದೆಯು ಆತ್ಮದ ಜ್ಞಾನವನ್ನು ಕೊಡುತ್ತಾರೆ, ಇದು ಯಾವ ಮನುಷ್ಯ ಮಾತ್ರರಿಗೂ ಇಲ್ಲ. ಆತ್ಮಗಳು ಮತ್ತು ಪರಮಾತ್ಮನು ಬಹಳ ಕಾಲ ಅಗಲಿದ್ದರೆಂದು ಗಾಯನವಿದೆ. ಲೆಕ್ಕವಿದೆಯಲ್ಲವೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಆತ್ಮವೇ ಶರೀರದ ಮೂಲಕ ಮಾತನಾಡುತ್ತದೆ, ಆತ್ಮವೇ ಶರೀರದ ಮೂಲಕ ಒಳ್ಳೆಯ ಮತ್ತು ಕೆಟ್ಟ ಕೆಲಸವನ್ನು ಮಾಡುತ್ತದೆ. ತಂದೆಯು ಬಂದು ಆತ್ಮಗಳನ್ನು ಎಷ್ಟು ಪವಿತ್ರವನ್ನಾಗಿ ಮಾಡುತ್ತಾರೆ! ಮೊಟ್ಟ ಮೊದಲನೆಯದಾಗಿ ತಂದೆಯು ತಿಳಿಸುತ್ತಾರೆ - ಬೆಳಗ್ಗೆ-ಬೆಳಗ್ಗೆ ಎದ್ದು ಇದೇ ಅಭ್ಯಾಸ ಮತ್ತು ವಿಚಾರ ಮಾಡಿ - ಆತ್ಮವೆಂದರೇನು? ಅದು ಈ ಶರೀರದ ಮೂಲಕ ಕೇಳುತ್ತದೆ. ಆತ್ಮದ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ಅವರಿಗೆ ಪತಿತ-ಪಾವನ, ಜ್ಞಾನ ಸಾಗರನೆಂದು ಹೇಳುತ್ತಾರೆ. ಮತ್ತ್ಯಾವ ಮನುಷ್ಯರಿಗೂ ಸುಖದ ಸಾಗರ, ಶಾಂತಿಯ ಸಾಗರನೆಂದು ಹೇಳಲು ಹೇಗೆ ಸಾಧ್ಯ! ಲಕ್ಷ್ಮೀ-ನಾರಾಯಣರಿಗೂ ಸದಾ ಪವಿತ್ರತೆಯ ಸಾಗರನೆಂದು ಹೇಳಲಾಗುವುದೇ? ಇಲ್ಲ. ಒಬ್ಬ ತಂದೆಯೇ ಸದಾ ಪವಿತ್ರತೆಯ ಸಾಗರನಾಗಿದ್ದಾರೆ. ಮನುಷ್ಯರಂತೂ ಕೇವಲ ಭಕ್ತಿಮಾರ್ಗದ ಶಾಸ್ತ್ರಗಳನ್ನು ಕುಳಿತು ವರ್ಣನೆ ಮಾಡುತ್ತಾರೆ. ಪ್ರಾಕ್ಟಿಕಲ್ ಅನುಭವವಿಲ್ಲ. ನಾನಾತ್ಮನು ಈ ಶರೀರದಿಂದ ತಂದೆಯ ಮಹಿಮೆ ಮಾಡುತ್ತೇನೆ. ಅವರು ನಮ್ಮ ಮಧುರ ತಂದೆಯಾಗಿದ್ದಾರೆ, ಅವರೇ ಸುಖ ಕೊಡುವವರಾಗಿದ್ದಾರೆ. ಇದೇನನ್ನೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ಹೇ ಆತ್ಮಗಳೇ, ಈಗ ನನ್ನ ಮತದಂತೆ ನಡೆಯಿರಿ. ಈ ಅವಿನಾಶಿ ಆತ್ಮನಿಗೆ ಅವಿನಾಶಿ ತಂದೆಯ ಮೂಲಕ ಅವಿನಾಶಿ ಮತವು ಸಿಗುತ್ತದೆ. ಆ ವಿನಾಶಿ ಶರೀರಧಾರಿಗಳಿಗೆ ವಿನಾಶಿ ಶರೀರಧಾರಿಗಳ ಮತವೇ ಸಿಗುತ್ತದೆ. ಸತ್ಯಯುಗದಲ್ಲಂತೂ ನೀವು ಇಲ್ಲಿನ ಪ್ರಾಲಬ್ಧವನ್ನು ಪಡೆಯುತ್ತೀರಿ. ಅಲ್ಲೆಂದೂ ಉಲ್ಟಾ ಮತವು ಸಿಗುವುದಿಲ್ಲ. ಈಗಿನ ಶ್ರೀಮತವೇ ಅವಿನಾಶಿಯಾಗಿ ಬಿಡುತ್ತದೆ. ಅದು ಅರ್ಧಕಲ್ಪ ನಡೆಯುತ್ತದೆ. ಇದು ಹೊಸ ಜ್ಞಾನವಾಗಿದೆ. ಇದನ್ನು ಗ್ರಹಣ ಮಾಡಲು ಎಷ್ಟೊಂದು ಬುದ್ಧಿಯಿರಬೇಕು! ಮತ್ತು ಪಾತ್ರದಲ್ಲಿ ಬರಬೇಕು. ಯಾರು ಪ್ರಾರಂಭದಿಂದ ಭಕ್ತಿ ಮಾಡಿರುವರೋ ಅವರೇ ಚೆನ್ನಾಗಿ ಧಾರಣೆ ಮಾಡಿಕೊಂಡಿರುವರು. ಇದನ್ನು ತಿಳಿದುಕೊಳ್ಳಬೇಕು - ಒಂದುವೇಳೆ ನಮ್ಮ ಬುದ್ಧಿಯಲ್ಲಿ ಸರಿಯಾದ ರೀತಿಯಲ್ಲಿ ಧಾರಣೆ ಆಗುವುದಿಲ್ಲವೆಂದರೆ ಅವಶ್ಯವಾಗಿ ನಾವು ಆರಂಭದಿಂದ ಭಕ್ತಿ ಮಾಡಿಲ್ಲ. ತಂದೆಯು ಹೇಳುತ್ತಾರೆ - ಏನಾದರೂ ಅರ್ಥವಾಗದಿದ್ದರೆ ನನ್ನನ್ನು ಕೇಳಿ ಏಕೆಂದರೆ ನಾನು ಅವಿನಾಶಿ ತಜ್ಞನಾಗಿದ್ದೇನೆ. ತಂದೆಗೆ ಪರಮ ಆತ್ಮನೆಂತಲೂ ಹೇಳಲಾಗುತ್ತದೆ. ಆತ್ಮವು ಪವಿತ್ರವಾಗಿದ್ದಾಗ ಅದಕ್ಕೆ ಮಹಿಮೆಯಾಗುತ್ತದೆ. ಆತ್ಮದ ಮಹಿಮೆಯಿದ್ದಾಗ ಶರೀರಕ್ಕೂ ಮಹಿಮೆಯಾಗುತ್ತದೆ. ಆತ್ಮವು ತಮೋಪ್ರಧಾನವಾದಾಗ ಶರೀರಕ್ಕೂ ಮಹಿಮೆಯಿಲ್ಲ. ಈ ಸಮಯದಲ್ಲಿ ನೀವು ಮಕ್ಕಳಿಗೆ ಬಹಳ ಗುಹ್ಯಬುದ್ಧಿಯು ಸಿಗುತ್ತದೆ, ಆತ್ಮಕ್ಕೇ ಸಿಗುತ್ತದೆ. ಆತ್ಮವು ಎಷ್ಟೊಂದು ಮಧುರವಾಗಬೇಕು, ಎಲ್ಲರಿಗೆ ಸುಖವನ್ನೇ ಕೊಡಬೇಕು. ತಂದೆಯು ಎಷ್ಟು ಮಧುರರಾಗಿದ್ದಾರೆ! ಆತ್ಮಗಳನ್ನೂ ಸಹ ಬಹಳ ಮಧುರರನ್ನಾಗಿ ಮಾಡುತ್ತಾರೆ. ಆತ್ಮವು ಯಾವುದೇ ಅಕರ್ತವ್ಯ ಕಾರ್ಯವನ್ನು ಮಾಡದಿರಲಿ - ಈ ಅಭ್ಯಾಸ ಮಾಡಬೇಕಾಗಿದೆ. ಪರಿಶೀಲನೆ ಮಾಡಿಕೊಳ್ಳಿ - ನನ್ನಿಂದ ಯಾವುದೇ ಅಕರ್ತವ್ಯವು ಆಗುತ್ತಿಲ್ಲವೆ? ಶಿವ ತಂದೆಯು ಎಂದಾದರೂ ಅಕರ್ತವ್ಯ ಕಾರ್ಯವನ್ನು ಮಾಡುತ್ತಾರೆಯೇ? ಇಲ್ಲ. ಅವರು ಸರ್ವೋತ್ತಮ ಕಲ್ಯಾಣಕಾರಿ ಕಾರ್ಯವನ್ನು ಮಾಡಲು ಬರುತ್ತಾರೆ, ಎಲ್ಲರಿಗೆ ಸದ್ಗತಿ ನೀಡುತ್ತಾರೆ ಅಂದಾಗ ತಂದೆಯು ಯಾವ ಕರ್ತವ್ಯ ಮಾಡುವರೋ ಮಕ್ಕಳೂ ಅದನ್ನೇ ಮಾಡಬೇಕು. ಇದನ್ನೂ ಸಹ ತಿಳಿಸಿದ್ದಾರೆ - ಯಾರು ಆರಂಭದಿಂದ ಹಿಡಿದು ಬಹಳ ಭಕ್ತಿ ಮಾಡುತ್ತಾರೆಯೋ ಅವರಿಗೇ ಈ ಜ್ಞಾನವು ನಿಲ್ಲುವುದು. ಈಗಲೂ ಸಹ ದೇವತೆಗಳಿಗೆ ಅನೇಕ ಭಕ್ತರಿದ್ದಾರೆ. ತಮ್ಮ ತಲೆಯನ್ನು ತೆಗೆದಿಡುವುದಕ್ಕೂ ತಯಾರಿರುತ್ತಾರೆ. ಬಹಳ ಭಕ್ತಿ ಮಾಡುವವರ ಹಿಂದೆ ಕಡಿಮೆ ಭಕ್ತಿಮಾಡುವವರು ಅಲೆದಾಡುತ್ತಿರುತ್ತಾರೆ, ಅವರ ಮಹಿಮೆ ಮಾಡುತ್ತಾರೆ. ಅಲ್ಲಂತೂ ಎಲ್ಲವೂ ಸ್ಥೂಲವಾಗಿ ಕಂಡುಬರುತ್ತದೆ ಆದರೆ ಇಲ್ಲಿ ನೀವು ಗುಪ್ತವಾಗಿದ್ದೀರಿ. ನಿಮ್ಮ ಬುದ್ಧಿಯಲ್ಲಿ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಸಂಪೂರ್ಣ ಜ್ಞಾನವಿದೆ. ಇದೂ ಸಹ ಮಕ್ಕಳಿಗೆ ಅರ್ಥವಾಗಿದೆ - ತಂದೆಯು ನಮಗೆ ಓದಿಸಲು ಬಂದಿದ್ದಾರೆ. ಈಗ ಪುನಃ ನಾವು ಮನೆಗೆ ಹೋಗುತ್ತೇವೆ. ಎಲ್ಲಾ ಆತ್ಮರು ಎಲ್ಲಿಂದ ಬರುತ್ತಾರೆಯೋ ಅದು ನಮ್ಮ ಮನೆಯಾಗಿದೆ. ಅಲ್ಲಿ ಶರೀರವೇ ಇಲ್ಲವೆಂದರೆ ಶಬ್ಧವೆಲ್ಲಿಂದ ಬರಬೇಕು? ಆತ್ಮವಿಲ್ಲದಿದ್ದರೆ ಶರೀರವು ಜಡವಾಗಿ ಬಿಡುತ್ತದೆ. ಮನುಷ್ಯರ ಶರೀರದಲ್ಲಿ ಎಷ್ಟು ಮೋಹವಿರುತ್ತದೆ. ಆತ್ಮವು ಶರೀರದಿಂದ ಹೋಯಿತೆಂದರೆ ಉಳಿಯುವುದು ಪಂಚತತ್ವಗಳು (ಶರೀರ) ಅದರ ಮೇಲೂ ಎಷ್ಟೊಂದು ಪ್ರೀತಿಯಿರುತ್ತದೆ. ಸ್ತ್ರೀಯು ಪತಿಯ ಚಿತೆಯನ್ನು ಏರುವುದಕ್ಕೂ ತಯಾರಾಗಿ ಬಿಡುತ್ತಾಳೆ. ಶರೀರದಲ್ಲಿ ಎಷ್ಟೊಂದು ಮೋಹವಿರುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ. ಇಡೀ ಪ್ರಪಂಚದಿಂದ ನಷ್ಟಮೋಹ ಆಗಬೇಕಾಗಿದೆ. ಈ ಶರೀರವಂತೂ ಸಮಾಪ್ತಿಯಾಗುವುದಿದೆ ಅಂದಮೇಲೆ ಅದರೊಂದಿಗಿನ ಮೋಹವು ಕಳೆಯಬೇಕಲ್ಲವೆ ಆದರೆ ಬಹಳ ಮೋಹವಿರುತ್ತದೆ. ಬ್ರಾಹ್ಮಣರಿಗೆ ತಿನ್ನಿಸುತ್ತಾರೆ. ಇಂತಹವರದು ಇಂದು ಶ್ರಾದ್ಧವೆಂದು ತಿಳಿದುಕೊಳ್ಳುತ್ತಾರಲ್ಲವೆ. ಅವರೇನು ತಿನ್ನುತ್ತಾರೆಯೇ! ನೀವು ಮಕ್ಕಳಂತೂ ಈಗ ಇವೆಲ್ಲಾ ಮಾತುಗಳಿಂದ ಭಿನ್ನರಾಗಿ ಬಿಡಬೇಕು. ನಾಟಕದಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನಭಿನಯಿಸುತ್ತಾರೆ, ಈ ಸಮಯದಲ್ಲಿ ನಿಮಗೆ ಜ್ಞಾನವಿದೆ, ನಾವು ನಷ್ಟಮೋಹಿಗಳಾಗಬೇಕಾಗಿದೆ. ಮೋಹಜೀತ ರಾಜನ ಕಥೆಯೂ ಇದೆಯಲ್ಲವೆ. ಮತ್ತ್ಯಾವುದೇ ಮೋಹಜೀತ ರಾಜನಂತೂ ಇರುವುದಿಲ್ಲ. ಕೇವಲ ಈ ಕಥೆಗಳನ್ನು ಬರೆದಿದ್ದಾರೆ. ಅಲ್ಲಿ ಅಕಾಲ ಮೃತ್ಯುವಿರುವುದಿಲ್ಲ ಅಂದಾಗ ಕೇಳುವ ಮಾತೂ ಇರುವುದಿಲ್ಲ. ಈ ಸಮಯದಲ್ಲಿ ನಿಮ್ಮನ್ನು ಮೋಹಜೀತರನ್ನಾಗಿ ಮಾಡುತ್ತೇನೆ. ಸ್ವರ್ಗದಲ್ಲಿ ಮೋಹಜೀತ ರಾಜರಿದ್ದರು, ಯಥಾರಾಜ-ರಾಣಿ ತಥಾ ಪ್ರಜಾ. ಅದು ನಷ್ಟಮೋಹದ ರಾಜಧಾನಿಯಾಗಿದೆ. ರಾವಣ ರಾಜ್ಯದಲ್ಲಿ ಮೋಹವಿರುತ್ತದೆ ಆದರೆ ಸತ್ಯಯುಗದಲ್ಲಿ ವಿಕಾರವಿರುವುದಿಲ್ಲ. ರಾವಣ ರಾಜ್ಯವೇ ಇಲ್ಲ. ರಾವಣನ ರಾಜಧಾನಿಯು ಹೊರಟು ಹೋಗುತ್ತದೆ. ರಾಮ ರಾಜ್ಯದಲ್ಲಿ ಏನಿರುತ್ತದೆ ಎಂಬುದೇನೂ ತಿಳಿದಿಲ್ಲ. ಈ ಮಾತುಗಳನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು ಈ ಶರೀರದಲ್ಲಿದ್ದರೂ ದೇಹೀ-ಅಭಿಮಾನಿಯಾಗಿದ್ದಾರೆ. ಲೋನ್ ಅಥವಾ ಬಾಡಿಗೆಗೆ ಮನೆಯನ್ನೂ ತೆಗೆದುಕೊಳ್ಳುತ್ತಾರೆಂದರೆ ಅದರಲ್ಲಿಯೂ ಮೋಹವಿರುತ್ತದೆ. ಮನೆಯನ್ನು ಚೆನ್ನಾಗಿ ಫರ್ನೀಷ್ ಮಾಡುತ್ತಾರೆ, ಇವರಿಗಂತೂ (ಬ್ರಹ್ಮಾ) ಫರ್ನಿಷ್ ಮಾಡಬೇಕಾಗಿಲ್ಲ ಏಕೆಂದರೆ ತಂದೆಯು ಅಶರೀರಿಯಲ್ಲವೆ. ಇವರಿಗೆ ಯಾವುದೇ ಶೃಂಗಾರ ಇತ್ಯಾದಿಯನ್ನು ಮಾಡುವ ಅಭ್ಯಾಸವೇ ಇಲ್ಲ. ಇವರಿಗೆ ಅವಿನಾಶಿ ಜ್ಞಾನರತ್ನಗಳಿಂದ ಮಕ್ಕಳಿಗೆ ಶೃಂಗಾರ ಮಾಡುವ ಅಭ್ಯಾಸವಿದೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಶರೀರವಂತೂ ಅಪವಿತ್ರವಾಗಿದೆ, ಇದಕ್ಕೆ ಯಾವಾಗ ಇನ್ನೊಂದು ಹೊಸ ಶರೀರವು ಸಿಗುವುದು ಅದು ಪವಿತ್ರವಾಗಿರುತ್ತದೆ. ಈ ಸಮಯದಲ್ಲಿ ಇದು ಹಳೆಯ ಪ್ರಪಂಚವಾಗಿದೆ ಅಂದಾಗ ಇದು ಸಮಾಪ್ತಿಯಾಗಬೇಕಾಗಿದೆ. ಪ್ರಪಂಚದಲ್ಲಿ ಇದೂ ಸಹ ಯಾರಿಗೂ ತಿಳಿದಿಲ್ಲ. ನಿಧಾನ-ನಿಧಾನವಾಗಿ ಅರ್ಥವಾಗುವುದು. ಹೊಸ ಪ್ರಪಂಚದ ಸ್ಥಾಪನೆ ಮತ್ತು ಹಳೆಯ ಪ್ರಪಂಚದ ವಿನಾಶ - ಇದು ತಂದೆಯದೇ ಕೆಲಸವಾಗಿದೆ. ತಂದೆಯೇ ಬಂದು ಬ್ರಹ್ಮಾರವರ ಮೂಲಕ ಪ್ರಜೆಗಳನ್ನು ರಚಿಸಿ ಹೊಸ ಪ್ರಪಂಚದ ಸ್ಥಾಪನೆ ಮಾಡಿಸುತ್ತಿದ್ದಾರೆ. ನೀವೀಗ ಹೊಸ ಪ್ರಪಂಚದಲ್ಲಿದ್ದೀರಾ? ಇಲ್ಲ. ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ ಅಂದಾಗ ಬ್ರಾಹ್ಮಣರ ಶಿಖೆಯೂ ಸಹ ಶ್ರೇಷ್ಠವಾಗಿದೆ. ತಂದೆಯು ತಿಳಿಸಿದ್ದಾರೆ, ತಂದೆಯ ಸನ್ಮುಖದಲ್ಲಿ ಬರುತ್ತೀರೆಂದರೆ ಮೊದಲು ಇದನ್ನು ನೆನಪು ಮಾಡಿ - ನಾವು ಈಶ್ವರ ತಂದೆಯ ಸನ್ಮುಖದಲ್ಲಿ ಹೋಗುತ್ತೇವೆ. ಶಿವ ತಂದೆಯು ನಿರಾಕಾರನಾಗಿದ್ದಾರೆ ಅಂದಮೇಲೆ ಅವರ ಸನ್ಮುಖದಲ್ಲಿ ಹೇಗೆ ಹೋಗುವುದು ಆದ್ದರಿಂದ ಆ ತಂದೆಯನ್ನು ನೆನಪು ಮಾಡಿ ಮತ್ತೆ ಈ ತಂದೆಯ ಸನ್ಮುಖದಲ್ಲಿ ಬರಬೇಕಾಗಿದೆ. ಆ ತಂದೆಯೇ ಈ ರಥದಲ್ಲಿ ಕುಳಿತಿದ್ದಾರೆಂದು ನಿಮಗೆ ತಿಳಿದಿದೆ. ಈ ಶರೀರವಂತೂ ಪತಿತವಾಗಿದೆ, ಶಿವ ತಂದೆಯ ನೆನಪಿನಲ್ಲಿರದೆ ಯಾವುದೇ ಕೆಲಸವನ್ನು ಮಾಡುತ್ತೀರೆಂದರೆ ಪಾಪವಾಗಿಬಿಡುತ್ತದೆ. ನಾವು ಶಿವ ತಂದೆಯ ಬಳಿ ಹೋಗುತ್ತೇವೆ ಮತ್ತು ಇನ್ನೊಂದು ಜನ್ಮದಲ್ಲಿ ಬೇರೆ ಸಂಬಂಧಿಗಳು ಸಿಗುತ್ತಾರೆ. ಅಲ್ಲಿ ದೇವತೆಗಳ ಮಡಿಲಲ್ಲಿ ಹೋಗುತ್ತೀರಿ. ಈ ಈಶ್ವರನ ಮಡಿಲು ಒಂದೇ ಬಾರಿ ಸಿಗುತ್ತದೆ. ಬಾಯಿಂದ ಹೇಳುತ್ತಾರೆ - ಬಾಬಾ, ನಾವು ತಮ್ಮವರಾಗಿ ಬಿಟ್ಟೆವು. ಇಂತಹವರು ಅನೇಕರಿದ್ದಾರೆ ಯಾರು ಎಂದೂ ನೋಡಿಯೂ ಇರುವುದಿಲ್ಲ. ಹೊರಗಡೆ ಇರುತ್ತಾರೆ ಆದರೆ ಬಾಬಾ, ನಾವು ನಿಮ್ಮ ಮಡಿಲಿನ ಮಕ್ಕಳಾಗಿ ಬಿಟ್ಟಿದ್ದೇವೆ ಎಂದು ಬರೆಯುತ್ತಾರೆ ಏಕೆಂದರೆ ಬುದ್ಧಿಯಲ್ಲಿ ಜ್ಞಾನವಿದೆ. ಆತ್ಮವೇ ಹೇಳುತ್ತದೆ - ನಾವು ಶಿವ ತಂದೆಯ ಮಕ್ಕಳಾಗಿ ಬಿಟ್ಟೆವು, ಇದಕ್ಕೆ ಮೊದಲು ನಾವು ಪತಿತರ ಮಡಿಲಿನಲ್ಲಿದ್ದೆವು. ಭವಿಷ್ಯದಲ್ಲಿ ಪವಿತ್ರ ದೇವತಾ ಮಡಿಲಿನಲ್ಲಿ ಹೋಗುತ್ತೇವೆ. ಈ ಜನ್ಮವು ದುರ್ಲಭವಾಗಿದೆ. ನೀವು ವಜ್ರ ಸಮಾನವಾಗಿ ಇಲ್ಲಿ ಸಂಗಮಯುಗದಲ್ಲಿಯೇ ಆಗುತ್ತೀರಿ. ಸಂಗಮಯುಗವು ಯಾವುದೇ ಆ ನೀರಿನ ಸಾಗರ ಮತ್ತು ನದಿಗಳಿಗೆ ಹೇಳುವುದಿಲ್ಲ. ರಾತ್ರಿ-ದಿನದ ಅಂತರವಿದೆ. ಬ್ರಹ್ಮಾ ಪುತ್ರ ನದಿಯು ಎಲ್ಲದಕ್ಕಿಂತ ದೊಡ್ಡ ನದಿಯಾಗಿದೆ, ಯಾವುದು ಸಾಗರದಲ್ಲಿ ಮಿಲನವಾಗುತ್ತದೆ. ನದಿಗಳು ಹೋಗಿ ಸಾಗರದಲ್ಲಿ ಸೇರುತ್ತವೆ. ನೀವೂ ಸಹ ಸಾಗರನಿಂದ ಹೊರಟಿರುವ ಜ್ಞಾನ ನದಿಗಳಾಗಿದ್ದೀರಿ. ಜ್ಞಾನ ಸಾಗರ ಶಿವ ತಂದೆಯಾಗಿದ್ದಾರೆ. ಎಲ್ಲದಕ್ಕಿಂತ ದೊಡ್ದ ನದಿ ಬ್ರಹ್ಮಾ ಪುತ್ರ ನದಿಯಾಗಿದೆ. ಇವರ ಹೆಸರು ಬ್ರಹ್ಮಾನೆಂದಾಗಿದೆ. ಸಾಗರನಿಂದ ಇವರ ಎಷ್ಟೊಂದು ಮೇಳವಾಗುತ್ತದೆ! ನದಿಗಳು ಎಲ್ಲಿಂದ ಹೊರಡುತ್ತವೆ ಎಂದು ನಿಮಗೂ ತಿಳಿದಿದೆ. ಸಾಗರನಿಂದಲೇ ಹೊರ ಬರುತ್ತವೆ, ನಂತರ ಸಾಗರದಲ್ಲಿಯೇ ಸೇರುತ್ತವೆ. ಸಾಗರದಿಂದ ಸಿಹಿ ನೀರನ್ನು ತೆಗೆದುಕೊಳ್ಳುತ್ತೇವೆ. ಸಾಗರನ ಮಕ್ಕಳು ಮತ್ತೆ ಸಾಗರವನ್ನು ಹೋಗಿ ಸೇರುತ್ತೇವೆ. ನೀವೂ ಸಹ ಜ್ಞಾನ ಸಾಗರನಿಂದ ಹೊರಟಿದ್ದೀರಿ. ಮತ್ತೆ ಎಲ್ಲರೂ ಸಹ ಅಲ್ಲಿಯೇ ಹೋಗುತ್ತೀರಿ. ಇಲ್ಲಿ ತಂದೆಯು ಇರುತ್ತಾರೆ, ಅಲ್ಲಿ ನೀವಾತ್ಮಗಳೂ ಸಹ ಇರುತ್ತೀರಿ. ಜ್ಞಾನ ಸಾಗರನೇ ಬಂದು ನಿಮ್ಮನ್ನು ಪವಿತ್ರ, ಮಧುರರನ್ನಾಗಿ ಮಾಡುತ್ತಾರೆ, ಆತ್ಮವು ಈಗ ಉಪ್ಪಿನ ಸಮಾನ ಆಗಿ ಬಿಟ್ಟಿದೆ, ಅದನ್ನು ತಂದೆಯು ಮಧುರವನ್ನಾಗಿ ಮಾಡುತ್ತಾರೆ. ಇದರಿಂದ ಪಂಚ ವಿಕಾರಗಳ ಛೀ ಛೀ ಉಪ್ಪು ನಿಮ್ಮಿಂದ ಹೊರಟು ಹೋಗುತ್ತದೆ ಆಗ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ ಆದ್ದರಿಂದ ತಂದೆಯು ಬಹಳ ಪುರುಷಾರ್ಥ ಮಾಡಿಸುತ್ತಾರೆ. ನೀವು ಸ್ವರ್ಗದಲ್ಲಿದ್ದಾಗ ಎಷ್ಟು ಸತೋಪ್ರಧಾನರಾಗಿದ್ದಿರಿ, ಈಗಂತೂ ಸಂಪೂರ್ಣ ಕೊಳಕಾಗಿ ಬಿಟ್ಟಿದ್ದೀರಿ. ರಾವಣನು ನಿಮ್ಮನ್ನು ಹೇಗೆ ಮಾಡಿ ಬಿಟ್ಟಿದ್ದಾನೆ! ಇದು ವಜ್ರ ಸಮಾನ ಜನ್ಮವಾಗಿದೆ ಎಂಬುದು ಭಾರತದಲ್ಲಿಯೇ ಗಾಯನವಿದೆ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಕವಡೆಗಳ ಹಿಂದೆ ಏಕೆ ತಲೆ ಕೆಡಿಸಿಕೊಳ್ಳುತ್ತೀರಿ? ಕವಡೆಗಳೂ ಸಹ ನಿಮಗೆ ಹೆಚ್ಚಿಗೆ ಬೇಕಿಲ್ಲ. ಬಡವರೇ ಇದನ್ನು ಬಹು ಬೇಗನೆ ತಿಳಿದುಕೊಳ್ಳುತ್ತಾರೆ. ಸಾಹುಕಾರರಾದರೆ ನಮಗೆ ಇಲ್ಲಿಯೇ ಸ್ವರ್ಗವಿದೆಯೆಂದು ಹೇಳುತ್ತಾರೆ. ಆದರೆ ಮಕ್ಕಳಿಗೆ ತಿಳಿದಿದೆ - ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರದೂ ಈ ಸಮಯದಲ್ಲಿ ಕವಡೆಯ ಸಮಾನವಾದ ಜನ್ಮವಾಗಿದೆ. ನಾವೂ ಸಹ ಮೊದಲು ಅದೇರೀತಿ ಇದ್ದೆವು, ಈಗ ತಂದೆಯು ನಮ್ಮನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ! ಲಕ್ಷ್ಯವಂತೂ ಇದೆಯಲ್ಲವೆ, ನಾವು ನರನಿಂದ ನಾರಾಯಣನಾಗುತ್ತೇವೆ. ಭಾರತವು ಈಗ ಕವಡೆಯ ಸಮಾನ ಕಂಗಾಲಾಗಿದೆಯಲ್ಲವೆ. ಇದನ್ನು ಭಾರತವಾಸಿಗಳೇ ತಿಳಿದುಕೊಂಡಿಲ್ಲ. ನೀವಿಲ್ಲಿ ಎಷ್ಟು ಸಾಧಾರಣ ಅಬಲೆಯರಿದ್ದೀರಿ. ಯಾರಾದರೂ ಹಿರಿಯ ವ್ಯಕ್ತಿಗಳು ಬಂದರೆ ಅವರಿಗೆ ಇಲ್ಲಿ ಕುಳಿತುಕೊಳ್ಳುವುದಕ್ಕೂ ಇಷ್ಟವಾಗುವುದಿಲ್ಲ. ಎಲ್ಲಿ ದೊಡ್ಡ-ದೊಡ್ಡ ಗುರುಗಳು, ಸನ್ಯಾಸಿಗಳಿರುತ್ತಾರೆಯೋ ಅಲ್ಲಿಗೆ ಹೋಗಿ ಕುಳಿತುಕೊಳ್ಳುತ್ತಾರೆ ಆದ್ದರಿಂದ ತಂದೆಯೂ ಸಹ ಹೇಳುತ್ತಾರೆ - ನಾನು ಬಡವರ ಬಂಧುವಾಗಿದ್ದೇನೆ. ಭಗವಂತನು ಬಡವರ ರಕ್ಷಣೆ ಮಾಡುತ್ತಾರೆಂದು ಹೇಳುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಎಷ್ಟೊಂದು ಸಾಹುಕಾರರಾಗಿದ್ದೆವು! ಈಗ ಪುನಃ ಆಗುತ್ತೇವೆ. ತಂದೆಯೂ ಸಹ ಬರೆಯುತ್ತಾರೆ - ಮಕ್ಕಳೇ, ನೀವು ಪದಮಾಪದಮಪತಿಗಳಾಗುತ್ತೀರಿ, ಅಲ್ಲಿ ಯಾವುದೇ ಹೊಡೆದಾಟಗಳಿರುವುದಿಲ್ಲ. ಇಲ್ಲಿ ನೋಡಿ, ಹಣದ ಹಿಂದೆ ಎಷ್ಟೊಂದು ಹೊಡೆದಾಟಗಳಿವೆ, ಎಷ್ಟೊಂದು ಲಂಚ ತೆಗೆದುಕೊಳ್ಳುತ್ತಾರೆ. ಹಣವಂತೂ ಮನುಷ್ಯರಿಗೆ ಬೇಕಲ್ಲವೆ ಆದರೆ ನಿಮ್ಮ ಖಜಾನೆಯನ್ನು ಸಂಪನ್ನ ಮಾಡಿಬಿಡುತ್ತಾರೆ. ಅರ್ಧ ಕಲ್ಪಕ್ಕಾಗಿ ಎಷ್ಟು ಬೇಕೋ ಅಷ್ಟು ಹಣವನ್ನು ತೆಗೆದುಕೊಳ್ಳಿ ಆದರೆ ಸಂಪೂರ್ಣ ಪುರುಷಾರ್ಥ ಮಾಡಿ. ಇದರಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಫಾಲೋ ಫಾದರ್ ಎಂದು ಹೇಳಲಾಗುತ್ತದೆಯಲ್ಲವೆ. ನೀವು ತಂದೆಯನ್ನು ಅನುಸರಿಸಿದ್ದೇ ಆದರೆ ಹೋಗಿ ಈ ರೀತಿ ದೇವತೆಗಳಾಗುತ್ತೀರಿ. ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮೀ - ಇದು ಬಹಳ ದೊಡ್ಡ ಪರೀಕ್ಷೆಯಾಗಿದೆ. ಇದರಲ್ಲಿ ಸ್ವಲ್ಪವೂ ನಿರ್ಲಕ್ಷ್ಯ ಮಾಡಬಾರದು. ತಂದೆಯು ಶ್ರೀಮತವನ್ನು ಕೊಡುತ್ತಾರೆ ಅಂದಮೇಲೆ ಅದರ ಅನುಸಾರವಾಗಿ ನಡೆಯಬೇಕು. ಕಾಯಿದೆ-ಕಾನೂನಿನ ಉಲ್ಲಂಘನೆ ಮಾಡಬಾರದು. ಶ್ರೀಮತದಿಂದಲೇ ನೀವು ಶ್ರೇಷ್ಠರಾಗುತ್ತೀರಿ. ಇದು ಬಹಳ ದೊಡ್ಡ ಗುರಿಯಾಗಿದೆ. ತಮ್ಮ ಪ್ರತಿನಿತ್ಯದ ಖಾತೆಯನ್ನಿಡಿ, ಸಂಪಾದನೆಯಾಯಿತೇ ಅಥವಾ ನಷ್ಟವಾಯಿತೇ? ತಂದೆಯನ್ನು ಎಷ್ಟು ನೆನಪು ಮಾಡಿದೆನು? ಎಷ್ಟು ಜನರಿಗೆ ಮಾರ್ಗವನ್ನು ತಿಳಿಸಿದೆನು? ನೀವು ಮಕ್ಕಳು ಅಂಧರಿಗೆ ಊರುಗೋಲಾಗಿದ್ದೀರಲ್ಲವೆ. ನಿಮಗೆ ಈ ಜ್ಞಾನದ ಮೂರನೆಯ ನೇತ್ರವು ಸಿಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಹೇಗೆ ತಂದೆಯು ಮಧುರರಾಗಿದ್ದಾರೆ ಹಾಗೆಯೇ ಮಧುರರಾಗಿ ಎಲ್ಲರಿಗೆ ಸುಖ ಕೊಡಬೇಕಾಗಿದೆ. ಯಾವುದೇ ಅಕರ್ತವ್ಯ ಕಾರ್ಯವನ್ನು ಮಾಡಬಾರದು. ಸರ್ವಶ್ರೇಷ್ಠ ಕಲ್ಯಾಣದ ಕಾರ್ಯವನ್ನು ಮಾಡಬೇಕು.

2. ಕವಡೆಗಳ ಹಿಂದೆ ತಲೆ ಕೆಡಿಸಿಕೊಳ್ಳಬಾರದು. ಪುರುಷಾರ್ಥ ಮಾಡಿ ತಮ್ಮ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಬೇಕಾಗಿದೆ. ಇದರಲ್ಲಿ ನಿರ್ಲಕ್ಷ್ಯ ಮಾಡಬಾರದು.

ವರದಾನ:
ನಿಶ್ಚಯರೂಪಿ ಕಾಲನ್ನು ಅಚಲವಾಗಿಡುವಂತಹ ಸದಾ ನಿಶ್ಚಯ ಬುದ್ಧಿ, ನಿಶ್ಚಿಂತ ಭವ.

ಎಲ್ಲಕ್ಕಿಂತಲೂ ದೊಡ್ಡ ಖಾಯಿಲೆಯಾಗಿದೆ ಚಿಂತೆ. ಇದಕ್ಕೆ ಔಷಧಿ ವೈಧ್ಯರ ಬಳಿ ಸಹಾ ಇಲ್ಲ. ಚಿಂತೆ ಇರುವವರು ಎಷ್ಟು ಪ್ರಾಪ್ತಿಯ ಹಿಂದೆ ಓಡುವರೋ ಅಷ್ಟೂ ಆ ಪ್ರಾಪ್ತಿ ಮುಂದೆ ಓಡುತ್ತಿರುತ್ತೆ. ಆದ್ದರಿಂದ ನಿಶ್ಚಯದ ಕಾಲು ಸದಾ ಅಚಲವಾಗಿರಬೇಕು. ಸದಾ ಒಂದೇ ಬಲ ಒಂದೇ ಭರವಸೆ - ಇಲ್ಲಿ ಕಾಲು ಅಚಲವಾಗಿದ್ದಲ್ಲಿ ವಿಜಯ ನಿಶ್ಚಿತವಾಗಿದೆ. ನಿಶ್ಚಿತ ವಿಜಯ ಸದಾ ನಿಶ್ಚಿಂತ ವಾಗಿದೆ. ಮಾಯೆ ನಿಶ್ಚಯರೂಪಿ ಕಾಲನ್ನು ಅಲುಗಾಡಿಸಲೆಂದೇ ಭಿನ್ನ-ಭಿನ್ನ ರೂಪದಲ್ಲಿ ಬರುವುದು ಆದರೆ ಮಾಯೆ ಅಲುಗಾಡಲಿ - ನಿಮ್ಮ ನಿಶ್ಚಯರೂಪಿ ಕಾಲು ಅಲುಗಾಡದೇ ಇದ್ದರೆ ನಿಶ್ಚಿಂತವಾಗಿರುವ ವರದಾನ ಸಿಕ್ಕಿ ಬಿಡುವುದು.

ಸ್ಲೋಗನ್:
ಪ್ರತಿಯೊಬ್ಬರ ವಿಶೇಷತೆಯನ್ನು ನೋಡುತ್ತಾ ಹೋಗಿ ಆಗ ವಿಶೇಷ ಆತ್ಮ ಆಗಿ ಬಿಡುವಿರಿ.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ನೀವು ಗೋಪ-ಗೋಪಿಯರ ಚರಿತ್ರೆಯ ಗಾಯನವಿದೆ – ತಂದೆಯಿಂದ ಸರ್ವ ಸಂಬಂಧಗಳ ಸುಖ ತೆಗೆದುಕೊಳ್ಳುವುದು ಮತ್ತು ಮಗ್ನರಾಗುವುದು ಅಥವಾ ಸರ್ವ-ಸಂಬಂಧಗಳ ಪ್ರೀತಿಯಲ್ಲಿ ಲವಲೀನರಾಗುವುದು. ಯಾವಾಗ ಯಾರೇ ಅತೀ ಸ್ನೇಹದಿಂದ ಭೇಟಿಯಾದಾಗ ಆ ಸಮಯದಲ್ಲಿ ಸ್ನೇಹದ ಮಿಲನದ ಇದೇ ಶಬ್ದವಿರುತ್ತದೆ ಒಬ್ಬರಿನ್ನೊಬ್ಬರಲ್ಲಿ ಸಮಾವೇಶವಾಗಿ ಬಿಟ್ಟರು ಅಥವಾ ಇಬ್ಬರು ಸೇರಿ ಒಂದಾಗಿ ಬಿಟ್ಟರು. ತಂದೆಯ ಸ್ನೇಹದಲ್ಲಿ ಸಮಾವೇಶವಾಗಿ ಬಿಟ್ಟರು ಅರ್ಥಾತ್ ತಂದೆಯ ಸ್ವರೂಪರಾದರು.