16.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನಿಮ್ಮ
ಪ್ರೀತಿಯು ಒಬ್ಬ ತಂದೆಯ ಜೊತೆಯಿದೆ ಏಕೆಂದರೆ ನಿಮಗೆ ಬೇಹದ್ದಿನ ಆಸ್ತಿಯು ಸಿಗುತ್ತದೆ, ನೀವು ನನ್ನ
ಬಾಬಾ ಎಂದು ಪ್ರೀತಿಯಿಂದ ಹೇಳುತ್ತೀರಿ”
ಪ್ರಶ್ನೆ:
ಯಾವುದೇ ದೇಹಧಾರಿ
ಮನುಷ್ಯರ ಮಾತನ್ನು ತಂದೆಯೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ- ಏಕೆ?
ಉತ್ತರ:
ಏಕೆಂದರೆ ತಂದೆಯ
ಒಂದೊಂದು ಮಾತು ಮಹಾವಾಕ್ಯವಾಗಿದೆ. ಯಾರು ಮಹಾವಾಕ್ಯಗಳನ್ನು ಕೇಳುವವರು ಮಹಾನ್ ಅರ್ಥಾತ್
ಪುರುಷೋತ್ತಮರಾಗಿಬಿಡುತ್ತಾರೆ, ತಂದೆಯ ಮಹಾವಾಕ್ಯಗಳು ಹೂಗಳನ್ನಾಗಿ ಮಾಡುತ್ತದೆ. ಮನುಷ್ಯರ ಮಾತು
ಮಹಾವಾಕ್ಯವಲ್ಲ ಅದರಿಂದ ನಾವಿನ್ನೂ ಕೆಳಗಿಳಿಯುತ್ತಾ ಬಂದಿದ್ದೇವೆ.
ಗೀತೆ:
ಪ್ರಪಂಚ ಬದಲಾದರೂ
ನಾವು ಬದಲಾಗುವುದಿಲ್ಲ...........
ಓಂ ಶಾಂತಿ.
ಗೀತೆಯ ಮೊದಲನೇ ಸಾಲಿನಲ್ಲಿ ಸ್ವಲ್ಪ ಅರ್ಥವಿದೆ ಬಾಕಿ ಇಡೀ ಗೀತೆಯು ಏನೂ ಪ್ರಯೋಜನಕ್ಕಿಲ್ಲ. ಹೇಗೆ
ಗೀತೆಯಲ್ಲಿ ಭಗವಾನುವಾಚ ಮನ್ಮನಾಭವ, ಮಧ್ಯಾಜೀಭವ- ಈ ಅಕ್ಷರವು ಸರಿಯಾಗಿದೆ. ಇದಕ್ಕೆ ಹಿಟ್ಟಿನಲ್ಲಿ
ಉಪ್ಪಿನಷ್ಟು ಸರಿಯಿದೆ ಎಂದು ಹೇಳಲಾಗುತ್ತದೆ. ಈಗ ಭಗವಂತನೆಂದು ಯಾರಿಗೆ ಹೇಳಲಾಗುತ್ತದೆ? ಇದನ್ನು
ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಭಗವಂತನೆಂದು ಶಿವನಿಗೇ ಹೇಳಲಾಗುತ್ತದೆ. ಶಿವತಂದೆಯು
ಬಂದು ಶಿವಾಲಯವನ್ನು ರಚಿಸುತ್ತಾರೆ ಆದರೆ ಎಲ್ಲಿ ಬರುತ್ತಾರೆ? ವೇಶ್ಯಾಲಯದಲ್ಲಿ. ಸ್ವಯಂ ತಂದೆಯು
ಬಂದು ತಿಳಿಸುತ್ತಾರೆ- ಹೇ ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳೇ ಎಂದು ಆತ್ಮವೇ
ಕೇಳುತ್ತದೆಯಲ್ಲವೆ. ನಾವಾತ್ಮರು ಅವಿನಾಶಿಯೆಂದು ಗೊತ್ತಿದೆ. ಈ ದೇಹ ವಿನಾಶಿಯಾಗಿದೆ. ನಾವು ಆತ್ಮರು
ಈಗ ತನ್ನ ಪರಮಪಿತ ಪರಮಾತ್ಮನಿಂದ ಮಹಾವಾಕ್ಯವನ್ನು ಕೇಳುತ್ತಿದ್ದೇವೆ. ಮಹಾವಾಕ್ಯವು ಒಬ್ಬ ಪರಮಪಿತ
ಪರಮಾತ್ಮನದ್ದೇ ಆಗಿರುತ್ತದೆ ಯಾರು ಮಹಾನ್ ಪುರುಷ ಪುರುಷೋತ್ತಮರನ್ನಾಗಿ ಮಾಡುತ್ತಾರೆ. ಬಾಕಿ
ಯಾರೆಲ್ಲಾ ಮಹಾತ್ಮರು ಗುರು ಮುಂತಾದವರಿದ್ದಾರೆ, ಅವರದನ್ನು ಮಹಾವಾಕ್ಯವೆಂದು ಹೇಳುವುದಿಲ್ಲ.
ಶಿವೋಹಂ ಎಂದು ಯಾರು ಹೇಳುತ್ತಾರೆ ಅದೂ ಸಹ ಸರಿಯಾದ ವಾಕ್ಯವಲ್ಲ. ನೀವು ಈಗ ತಂದೆಯಿಂದ
ಮಹಾವಾಕ್ಯವನ್ನು ಕೇಳಿ ಹೂಗಳಾಗುತ್ತೀರಿ. ಮುಳ್ಳು ಹಾಗೂ ಹೂವಿನಲ್ಲಿ ಎಷ್ಟೊಂದು ವ್ಯತ್ಯಾಸವಿದೆ!
ಈಗ ನೀವು ಮಕ್ಕಳಿಗೆ ಗೊತ್ತಿದೆ, ನಮಗೆ ಯಾವ ಮನುಷ್ಯನೂ ತಿಳಿಸುತ್ತಿಲ್ಲ. ಇವರಲ್ಲಿ (ಬ್ರಹ್ಮಾ)
ಶಿವತಂದೆಯು ವಿರಾಜಮಾನವಾಗಿದ್ದಾರೆ, ಅವರೂ ಆತ್ಮನಾಗಿದ್ದಾರೆ, ಆದರೆ ಇವರಿಗೆ (ಶಿವತಂದೆ) ಪರಮ
ಆತ್ಮ ಎಂದು ಹೇಳಲಾಗುತ್ತದೆ. ಈಗ ಪತಿತ ಆತ್ಮರು ಹೇಳುತ್ತಾರೆ- ಹೇ ಪರಮ ಆತ್ಮ ಬನ್ನಿ, ಬಂದು
ನಮ್ಮನ್ನು ಪಾವನ ಮಾಡಿ. ಅವರು ಪರಮಪಿತ ಆಗಿದ್ದಾರೆ, ಪರಮ (ಶ್ರೇಷ್ಠ)ರನ್ನಾಗಿ ಮಾಡುತ್ತಾರೆ. ನೀವು
ಪುರುಷೋತ್ತಮರೆಂದರೆ ಎಲ್ಲಾ ಪುರುಷರಿಗಿಂತ ಉತ್ತಮ ಪುರುಷರಾಗುತ್ತೀರಿ. ಅವರು ದೇವತೆಗಳಾಗಿದ್ದಾರೆ.
ಪರಮಪಿತ ಅಕ್ಷರ ಬಹಳ ಮಧುರವಾಗಿದೆ. ಸರ್ವವ್ಯಾಪಿ ಎಂದು ಹೇಳುತ್ತಾರೆ ಆಗ ಆ ಮಧುರತೆ ಇರುವುದಿಲ್ಲ.
ನಿಮ್ಮಲ್ಲಿಯೂ ಸಹ ಬಹಳ ಕಡಿಮೆ ಮಂದಿಯಿದ್ದಾರೆ ಯಾರು ಪ್ರೀತಿಯಿಂದ ಆಂತರ್ಯದಲ್ಲಿ ನೆನಪು
ಮಾಡುತ್ತಾರೆ. ಆ ಸ್ತ್ರೀ-ಪುರುಷರಂತೂ ಒಬ್ಬರನ್ನೊಬ್ಬರು ಸ್ಥೂಲರೂಪದಲ್ಲಿ ನೆನಪು ಮಾಡುತ್ತಾರೆ. ಇದು
ಆತ್ಮಗಳು ಪರಮಾತ್ಮನನ್ನು ಬಹಳ ಪ್ರೀತಿಯಿಂದ ನೆನಪು ಮಾಡುವುದಾಗಿದೆ. ಭಕ್ತಿಮಾರ್ಗದಲ್ಲಿ ಇಷ್ಟು
ಪ್ರೀತಿಯಿಂದ ಪೂಜೆ ಮಾಡಲು ಸಾಧ್ಯವಿಲ್ಲ. ಈ ಪ್ರೀತಿಯೂ ಇರುವುದಿಲ್ಲ. ಯಾರೆಂದು
ಗೊತ್ತೇಯಿಲ್ಲವೆಂದಾಗ ಪ್ರೀತಿಯು ಹೇಗಿರುತ್ತದೆ! ಈಗ ನೀವು ಮಕ್ಕಳಿಗೆ ಬಹಳ ಪ್ರೀತಿಯಿದೆ. ನನ್ನ
ಬಾಬಾ ಎಂದು ಆತ್ಮವು ಹೇಳುತ್ತದೆ. ಆತ್ಮಗಳು ಪರಸ್ಪರ ಸಹೋದರರಾಗಿದ್ದಾರೆ. ಪ್ರತಿಯೊಬ್ಬ ಸಹೋದರನು
ಹೇಳುತ್ತಾನೆ- ಬಾಬಾ ನನಗೆ ತನ್ನ ಪರಿಚಯವನ್ನು ನೀಡಿದ್ದಾರೆ ಆದರೆ ಅದನ್ನು ಪ್ರೀತಿಯೆಂದು
ಹೇಳುವುದಿಲ್ಲ. ಯಾರಿಂದಲಾದರೂ ಏನಾದರೂ ಸಿಕ್ಕಿದರೆ ಅವರಲ್ಲಿ ಪ್ರೀತಿಯಿರುತ್ತದೆ. ಮಕ್ಕಳಿಗೆ
ತಂದೆಯೊಂದಿಗೆ ಪ್ರೀತಿಯಿದೆ ಏಕೆಂದರೆ ತಂದೆಯಿಂದ ಆಸ್ತಿಯು ಸಿಗುತ್ತದೆ. ಎಷ್ಟು ಹೆಚ್ಚು ಆಸ್ತಿಯು
ಸಿಗುತ್ತದೆಯೋ ಅಷ್ಟು ಹೆಚ್ಚು ಮಕ್ಕಳಿಗೆ ಪ್ರೀತಿಯಿರುತ್ತದೆ. ಒಂದುವೇಳೆ ತಂದೆಯ ಬಳಿ ಏನೂ
ಆಸ್ತಿಯಿಲ್ಲ, ತಾತನ ಬಳಿಯಿದ್ದರೆ ತಂದೆಯಲ್ಲಿ ಇಷ್ಟು ಪ್ರೀತಿಯಿರುವುದಿಲ್ಲ. ಆಗ ತಾತನಲ್ಲಿ
ಪ್ರೀತಿಯಿರುತ್ತದೆ. ಇವರಿಂದ ಆಸ್ತಿಯು ಸಿಗುತ್ತದೆ ಎಂದು ತಿಳಿಯುತ್ತಾರೆ. ಇವರು ಬೇಹದ್ದಿನ
ತಂದೆಯಾಗಿದ್ದಾರೆ. ನೀವು ಮಕ್ಕಳಿಗೆ ಗೊತ್ತಿದೆ- ತಂದೆಯು ನಮಗೆ ಓದಿಸುತ್ತಿದ್ದಾರೆ, ಇದಂತೂ ಬಹಳ
ಖುಷಿಯ ಮಾತಾಗಿದೆಯಲ್ಲವೆ. ಭಗವಂತ ನಮ್ಮ ತಂದೆಯಾಗಿದ್ದಾರೆ ಯಾವ ರಚಯಿತ ತಂದೆಯನ್ನು ಯಾರೂ ಸಹ
ತಿಳಿದೇ ಇಲ್ಲ. ತಿಳಿಯದಿರುವ ಕಾರಣ ತನ್ನನ್ನೇ ತಂದೆಯೆಂದು ಹೇಳಿಬಿಡುತ್ತಾರೆ. ಹೇಗೆ ಮಗುವಿನೊಂದಿಗೆ
ಕೇಳಿದಾಗ ನಿಮ್ಮ ತಂದೆ ಯಾರು? ಕೊನೆಯಲ್ಲಿ ಅದು ನಾನೇ ಎಂದು ಹೇಳುತ್ತದೆ. ಈಗ ನೀವು ಮಕ್ಕಳಿಗೆ
ಗೊತ್ತಿದೆ- ಎಲ್ಲಾ ತಂದೆಯರ ತಂದೆ ಅವಶ್ಯವಾಗಿ ಇದ್ದಾರೆ. ಈಗ ನಮಗೆ ಸಿಕ್ಕಿರುವ ಬೇಹದ್ದಿನ ತಂದೆಗೆ
ತನ್ನದೇ ಆದ ಯಾವ ತಂದೆಯೂ ಇಲ್ಲ. ಇವರು ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ. ಅಂದಮೇಲೆ
ಮಕ್ಕಳಿಗೆ ಆಂತರ್ಯದಲ್ಲಿ ಖುಷಿಯಿರಬೇಕಲ್ಲವೆ. ಆ ಯಾತ್ರೆಗಳಿಗೆ ಹೋದಾಗಲೂ ಇಷ್ಟೊಂದು
ಖುಷಿಯಿರುವುದಿಲ್ಲ ಏಕೆಂದರೆ ಪ್ರಾಪ್ತಿಯೇನೂ ಇಲ್ಲ. ಕೇವಲ ದರ್ಶನಕ್ಕಾಗಿ ಹೋಗುತ್ತಾರಷ್ಟೆ.
ಸುಮ್ಮನೆ ಎಷ್ಟೊಂದು ಕಷ್ಟಪಡುತ್ತಿರುತ್ತಾರೆ. ಒಂದಂತೂ ಹಣವನ್ನು ಬಹಳ ಖರ್ಚು ಮಾಡುತ್ತಾರೆ ಆದರೆ
ಪ್ರಾಪ್ತಿಯೇನೂ ಇಲ್ಲ. ಭಕ್ತಿಮಾರ್ಗದಲ್ಲಿ ಒಂದುವೇಳೆ ಸಂಪಾದನೆಯಿದ್ದಲ್ಲಿ ಭಾರತವಾಸಿಗಳು ಬಹಳ
ಸಾಹುಕಾರರಾಗುತ್ತಿದ್ದರು. ಈ ಮಂದಿರ ಮುಂತಾದವುಗಳನ್ನು ಕಟ್ಟಿಸುವುದರಲ್ಲಿ ಕೋಟ್ಯಾಂತರ
ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಸೋಮನಾಥ ಮಂದಿರವೇ ಅಲ್ಲ, ಎಲ್ಲಾ ರಾಜರುಗಳ ಬಳಿ
ಮಂದಿರಗಳಿದ್ದವು. ನಿಮಗೆ ಎಷ್ಟೊಂದು ಸಂಪತ್ತನ್ನು ಕೊಟ್ಟಿದ್ದೆವು- 5000 ವರ್ಷಗಳ ಹಿಂದೆ
ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಿದ್ದೆನು. ಒಬ್ಬ ತಂದೆಯೇ ಈ ರೀತಿ ಹೇಳುತ್ತಾರೆ. ಇಂದಿಗೆ
5000 ವರ್ಷಗಳ ಹಿಂದೆ ನಿಮಗೆ ರಾಜಯೋಗವನ್ನು ಕಲಿಸಿ ಈ ರೀತಿ ಮಾಡಿದ್ದೆನು. ಈಗ ನೀವು
ಏನಾಗಿಬಿಟ್ಟಿದ್ದೀರಿ! ಬುದ್ಧಿಯಲ್ಲಿ ಬರಬೇಕಲ್ಲವೆ. ನಾವು ಎಷ್ಟು ಶ್ರೇಷ್ಠರಾಗಿದ್ದೆವು,
ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಸಂಪೂರ್ಣ ಕನಿಷ್ಠರಾಗಿದ್ದೇವೆ. ಕವಡೆಯ ಸಮಾನರಾಗಿದ್ದೇವೆ,
ಈಗ ಮತ್ತೆ ನಾವು ಬಾಬಾರವರ ಬಳಿ ಹೋಗುತ್ತೇವೆ ಯಾವ ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ
ಮಾಡುತ್ತಾರೆ. ಇದು ಒಂದೇ ಯಾತ್ರೆಯಾಗಿದೆ ಯಾವಾಗ ಆತ್ಮಗಳಿಗೆ ತಂದೆಯು ಸಿಗುತ್ತಾರೆ ಅಂದಮೇಲೆ
ಆಂತರ್ಯದಲ್ಲಿ ಆ ಪ್ರೀತಿಯಿರಬೇಕು. ನೀವು ಮಕ್ಕಳು ಯಾವಾಗ ಇಲ್ಲಿಗೆ ಬರುತ್ತೀರಿ ಆಗ
ಬುದ್ಧಿಯಲ್ಲಿರಬೇಕು- ನಾವು ಆ ತಂದೆಯ ಬಳಿ ಹೋಗುತ್ತೇವೆ, ಯಾರಿಂದ ಪುನಃ ನಮಗೆ ವಿಶ್ವದ
ರಾಜ್ಯಭಾಗ್ಯವು ಸಿಗುತ್ತದೆ. ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಇದು ಯಾತ್ರೆಯಾಗಿದೆ ಯಾವಾಗ
ಆತ್ಮಗಳಿಗೆ ತಂದೆಯು ಸಿಗುತ್ತಾರೆ ಅಂದಮೇಲೆ ಆಂತರ್ಯದಲ್ಲಿ ಆ ಪ್ರೀತಿಯಿರಬೇಕು. ನೀವು ಮಕ್ಕಳು
ಯಾವಾಗ ಇಲ್ಲಿಗೆ ಬರುತ್ತೀರಿ ಆಗ ಬುದ್ಧಿಯಲ್ಲಿರಬೇಕು- ನಾವು ಆ ತಂದೆಯ ಬಳಿ ಹೋಗುತ್ತೇವೆ ಯಾರಿಂದ
ಪುನಃ ನಮಗೆ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಆ ತಂದೆಯು ನಮಗೆ ಶಿಕ್ಷಣ ಕೊಡುತ್ತಾರೆ- ಮಕ್ಕಳೇ,
ದಿವ್ಯಗುಣಗಳನ್ನು ಧಾರಣೆ ಮಾಡಿ. ಸರ್ವಶಕ್ತಿವಂತನಾದ ಪತಿತ-ಪಾವನನಾದ ಆ ತಂದೆಯನ್ನು ನೆನಪು ಮಾಡಿ.
ನಾನು ಕಲ್ಪ-ಕಲ್ಪವೂ ಬಂದು ಹೇಳುತ್ತೇನೆ. ನನ್ನೊಬ್ಬನನ್ನೇ ನೆನಪು ಮಾಡಿ ಆಗ ವಿಕರ್ಮವು
ವಿನಾಶವಾಗುತ್ತದೆ. ಮನಸ್ಸಿನಲ್ಲಿ ಇದು ಬರಬೇಕಾಗಿದೆ- ನಾವು ಬೇಹದ್ದಿನ ತಂದೆಯ ಬಳಿ ಬಂದಿದ್ದೇವೆ.
ತಂದೆಯು ಹೇಳುತ್ತಾರೆ- ನಾನು ಗುಪ್ತನಾಗಿದ್ದೇನೆ. ಆತ್ಮನೂ ಹೇಳುತ್ತದೆ- ನಾನೂ ಆತ್ಮನಾಗಿದ್ದೇನೆ.
ನೀವು ತಿಳಿದುಕೊಳ್ಳುತ್ತೀರಿ- ನಾವು ಶಿವತಂದೆಯ ಬಳಿ ಬ್ರಹ್ಮಾದಾದಾರವರ ಬಳಿ ಹೋಗುತ್ತೇವೆ. ಯಾರು
ಕಂಬೈಂಡ್ ಆಗುತ್ತಾರೆ ಅವರೊಂದಿಗೆ ನಾವು ಮಿಲನ ಮಾಡುತ್ತೇವೆ, ಯಾರಿಂದ ನಾವು ವಿಶ್ವದ
ಮಾಲೀಕರಾಗುತ್ತೇವೆ. ಆಂತರ್ಯದಲ್ಲಿ ಎಷ್ಟೊಂದು ಬೇಹದ್ದಿನ ಖುಷಿಯಿರಬೇಕು! ಯಾವಾಗ ಮಧುಬನಕ್ಕೆ ಬರಲು
ಮನೆಯಿಂದ ಹೊರಡುತ್ತೇವೆ ಆಗ ಆಂತರ್ಯದಲ್ಲಿ ಗದ್ಗದಿತವುಂಟಾಗಬೇಕು. ತಂದೆಯು ನಮಗೆ ಓದಿಸಲು
ಬಂದಿದ್ದಾರೆ, ಈಗ ನಮಗೆ ದೈವೀಗುಣಗಳ ಧಾರಣೆ ಮಾಡಲು ಯುಕ್ತಿಯನ್ನು ತಿಳಿಸುತ್ತಾರೆ. ಮನೆಯಿಂದ
ಹೊರಡುವಾಗಲೇ ಆಂತರ್ಯದಲ್ಲಿ ಈ ಖುಷಿಯಿರಬೇಕು. ಹೇಗೆ ಕನ್ಯೆಯು ಪತಿಯ ಬಳಿ ಬರುವರೋ ಆಗ ಆಭರಣಗಳನ್ನು
ಧರಿಸುತ್ತಾಳೆ ಆಗ ಮುಖವು ಅರಳುತ್ತದೆ. ಆ ಮುಖವು ಅರಳಿರುವುದು ದುಃಖವನ್ನನುಭವಿಸಲು. ನಿಮ್ಮ ಮುಖ
ಅರಳಿರುವುದು ಸದಾ ಸುಖವನ್ನು ಪಡೆಯಲು ಅಂದಾಗ ಇಂತಹ ತಂದೆಯ ಬಳಿ ಬರುವಾಗ ಎಷ್ಟೊಂದು ಖುಷಿಯಿರಬೇಕು.
ಈಗ ನಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ಸತ್ಯಯುಗಕ್ಕೆ ಹೋದನಂತರ ಡಿಗ್ರಿಯು ಕಡಿಮೆಯಾಗುತ್ತದೆ.
ಈಗಂತೂ ನಾವು ಬ್ರಾಹ್ಮಣರು ಈಶ್ವರೀಯ ಸಂತಾನರಾಗಿದ್ದೇವೆ. ಭಗವಂತ ಕುಳಿತು ಓದಿಸುತ್ತಾರೆ. ಅವರು
ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಓದಿಸುತ್ತಾರೆ ಮತ್ತು ಪಾವನ ಮಾಡಿ
ಜೊತೆಯಲ್ಲಿಯೂ ಕರೆದುಕೊಂಡು ಹೋಗುತ್ತಾರೆ. ಈಗ ನಾವಾತ್ಮರು ಈ ರಾವಣ ಛೀ ಛೀ ರಾಜ್ಯದಿಂದ
ಮುಕ್ತರಾಗುತ್ತೇವೆ. ಆಂತರ್ಯದಲ್ಲಿ ಬಹಳಷ್ಟು ಖುಷಿಯಿರಬೇಕು- ಯಾವಾಗ ತಂದೆಯು ವಿಶ್ವದ
ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ಈ ವಿದ್ಯೆಯನ್ನು ಎಷ್ಟು ಚೆನ್ನಾಗಿ ಓದಬೇಕು.
ವಿದ್ಯಾರ್ಥಿಗಳು ಚೆನ್ನಾಗಿ ಓದಿದರೆ ಒಳ್ಳೆಯ ಅಂಕಗಳಿಂದ ತೇರ್ಗಡೆಯಾಗುತ್ತಾರೆ. ಬಾಬಾ ನಾವಂತೂ
ಶ್ರೀನಾರಾಯಣರಾಗುತ್ತೇವೆಂದು ಮಕ್ಕಳು ಹೇಳುತ್ತಾರೆ. ಇದೇ ಸತ್ಯನಾರಾಯಣ ಕಥೆಯಾಗಿದೆ ಅರ್ಥಾತ್
ನರನಿಂದ ನಾರಾಯಣನಾಗುವ ಕಥೆಯಾಗಿದೆ. ಆ ಸುಳ್ಳುಕಥೆಗಳಂತೂ ಜನ್ಮ-ಜನ್ಮಾಂತರ ಕೇಳುತ್ತಾ ಬಂದಿದ್ದೇವೆ.
ಈಗ ತಂದೆಯಿಂದ ಒಂದೇಬಾರಿ ನೀವು ಸತ್ಯ-ಸತ್ಯವಾದ ಕಥೆಯನ್ನು ಕೇಳುತ್ತೀರಿ. ಅದರ ನಂತರ ಅದು
ಭಕ್ತಿಮಾರ್ಗದಲ್ಲಿ ನಡೆದುಬರುತ್ತದೆ. ಹೇಗೆ ಶಿವತಂದೆಯು ಜನ್ಮಪಡೆದರು, ಇದನ್ನು ಪ್ರತೀ ವರ್ಷವು
ಜಯಂತಿಯನ್ನಾಚರಿಸುತ್ತಾ ಬಂದಿದ್ದಾರೆ. ಅವರು ಯಾವಾಗ ಬಂದರು, ಬಂದು ಏನು ಮಾಡಿದರು ಏನೂ ಗೊತ್ತಿಲ್ಲ.
ಒಳ್ಳೆಯದು, ಕೃಷ್ಣಜಯಂತಿಯನ್ನಾಚರಿಸುತ್ತಾರೆ, ಕೃಷ್ಣನೂ ಯಾವಾಗ ಬಂದನು, ಹೇಗೆ ಬಂದನು ಎಂಬುದೇನೂ
ಗೊತ್ತಿಲ್ಲ. ಕಂಸಪುರಿಯಲ್ಲಿ ಬರುತ್ತಾನೆಂದು ಹೇಳುತ್ತಾರೆ. ಈಗ ಅವನು ಪತಿತಪ್ರಪಂಚದಲ್ಲಿ ಹೇಗೆ
ಜನ್ಮವನ್ನು ಪಡೆಯಲು ಸಾಧ್ಯ! ಮಕ್ಕಳಿಗೆ ಎಷ್ಟು ಖುಷಿಯಾಗಬೇಕು- ನಾವು ಬೇಹದ್ದಿನ ತಂದೆಯ ಬಳಿ
ಹೋಗುತ್ತೇವೆ. ನಮಗೆ ಇಂತಹವರಿಂದ ಬಾಣವು ನಾಟಿತು, ಬಾಬಾರವರು ಬಂದಿದ್ದಾರೆ...... ಈ ರೀತಿ
ಅನುಭವವನ್ನೂ ತಿಳಿಸುತ್ತಾರಲ್ಲವೆ. ಆ ದಿನದಿಂದ ನಾವು ತಂದೆಯನ್ನೇ ನೆನಪು ಮಾಡುತ್ತಿದ್ದೇವೆ.
ಇದು ನಿಮ್ಮದು ಅತೀ
ಶ್ರೇಷ್ಠ ತಂದೆಯ ಬಳಿ ಬರುವಂತಹ ಯಾತ್ರೆಯಾಗಿದೆ. ತಂದೆಯಂತೂ ಚೈತನ್ಯವಾಗಿದ್ದಾರೆ, ಮಕ್ಕಳ ಬಳಿ
ಹೋಗುತ್ತಾರೆ. ಅದು ಜಡಯಾತ್ರೆಗಳಾಗಿವೆ, ಇಲ್ಲಂತೂ ತಂದೆಯು ಚೈತನ್ಯವಾಗಿದ್ದಾರೆ. ಹೇಗೆ ನಾವಾತ್ಮರು
ಮಾತನಾಡುತ್ತೇವೆಯೋ ಹಾಗೆಯೇ ಆ ತಂದೆಯು ಶರೀರದ ಮೂಲಕ ಮಾತನಾಡುತ್ತಾರೆ. ಈ ವಿದ್ಯೆಯು ಭವಿಷ್ಯದ 21
ಜನ್ಮಗಳ ಶರೀರ ನಿರ್ವಹಣೆಗಾಗಿ ಇದೆ. ಅದು ಕೇವಲ ಈ ಒಂದು ಜನ್ಮಕ್ಕಾಗಿ ಅಂದಾಗ ಈಗ ಯಾವ ವಿದ್ಯೆಯನ್ನು
ಓದಬೇಕು ಅಥವಾ ಯಾವ ವ್ಯಾಪಾರವನ್ನು ಮಾಡಬೇಕಾಗಿದೆ? ತಂದೆಯು ತಿಳಿಸುತ್ತಾರೆ- ಎರಡನ್ನೂ ಮಾಡಿ.
ಸನ್ಯಾಸಿಗಳಂತೆ ಮನೆ-ಮಠವನ್ನು ಬಿಟ್ಟು ಕಾಡಿಗೆ ಹೋಗಬಾರದು. ಇದು ಪ್ರವೃತ್ತಿ ಮಾರ್ಗವಾಗಿದೆ ತಾನೆ!
ಎರಡಕ್ಕೂ ವಿದ್ಯೆಯಾಗಿದೆ. ಎಲ್ಲರೂ ಓದುವುದೂ ಇಲ್ಲ. ಕೆಲವರು ಚೆನ್ನಾಗಿ ಓದುತ್ತಾರೆ, ಕೆಲವರು
ಕಡಿಮೆ. ಕೆಲವರಿಗಂತು ಬಹಳ ಬೇಗನೆ ಬಾಣವು ನಾಟುತ್ತದೆ. ಕೆಲವರು ಹೇಳುತ್ತಾರೆ- ಸರಿ, ನಾವು
ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುತ್ತೇವೆ. ಕೆಲವರಂತೂ ಇದು ಏಕಾಂತದಲ್ಲಿ ತಿಳಿದುಕೊಳ್ಳುವ
ಮಾತುಗಳಾಗಿವೆ ಎಂದು ತಿಳಿದುಕೊಳ್ಳುತ್ತಾರೆ ನಂತರ ಮರೆಯಾಗಿಬಿಡುತ್ತಾರೆ. ಕೆಲವರಿಗೆ ಜ್ಞಾನದ ಬಾಣವು
ನಾಟಿದ ತಕ್ಷಣ ಬಂದು ತಿಳಿದುಕೊಳ್ಳುತ್ತಾರೆ. ಕೆಲವರಂತೂ ನಮಗೆ ಸಮಯವಿಲ್ಲವೆಂದು ಹೇಳಿಬಿಡುತ್ತಾರೆ
ಅಂದರೆ ಅವರಿಗೆ ಬಾಣವು ನಾಟಲಿಲ್ಲವೆಂದು ತಿಳಿದುಕೊಳ್ಳಬೇಕು. ನೋಡಿ, ಬ್ರಹ್ಮಾತಂದೆಗೆ ಬಾಣವು
ನಾಟಿದಕೂಡಲೇ ಎಲ್ಲವನ್ನೂ ಕೂಡಲೇ ಬಿಟ್ಟುಬಿಟ್ಟರು. ರಾಜ್ಯಭಾಗ್ಯವೇ ಸಿಗುತ್ತಿದೆ, ಅದರ ಮುಂದೆ
ಇದೇನು! ಎಂದು ತಿಳಿದುಕೊಂಡರು. ನಾನಂತೂ ತಂದೆಯಿಂದ ರಾಜ್ಯಭಾಗ್ಯವನ್ನು ಪಡೆದುಕೊಳ್ಳಬೇಕು. ಈಗ
ತಂದೆಯು ತಿಳಿಸುತ್ತಾರೆ- ಈ ವ್ಯಾಪಾರವನ್ನೂ ಸಹ ಮಾಡಿ ಆದರೆ ಒಂದು ವಾರ ಇದನ್ನು ಚೆನ್ನಾಗಿ
ತಿಳಿದುಕೊಳ್ಳಿ. ಗೃಹಸ್ಥ ವ್ಯವಹಾರವನ್ನು ಸಂಭಾಲನೆ ಮಾಡಬೇಕು. ರಚನೆಯ ಪಾಲನೆಯನ್ನೂ ಮಾಡಿ. ಅವರಾದರೆ
(ಸನ್ಯಾಸಿಗಳು) ರಚನೆ ಮಾಡಿ ನಂತರ ಓಡಿಹೋಗುತ್ತಾರೆ. ತಂದೆಯು ಹೇಳುತ್ತಾರೆ- ನೀವು ರಚಿಸಿದ್ದೀರಿ
ಅಂದಮೇಲೆ ಚೆನ್ನಾಗಿ ಸಂಭಾಲನೆ ಮಾಡಿ. ಸ್ತ್ರೀ ಅಥವಾ ಮಗುವಿಗೆ ನೀವು ಹೇಳಿದ್ದನ್ನು
ಕೇಳುತ್ತಾರೆಂದರೆ ಅವರು ಸುಪುತ್ರರೆಂದು ತಿಳಿದುಕೊಳ್ಳಿ. ತಿಳಿದುಕೊಳ್ಳುವುದಿಲ್ಲವೆಂದರೆ ಅವರು
ಕುಪುತ್ರರು. ಸುಪುತ್ರ ಹಾಗೂ ಕುಪುತ್ರರೆನ್ನುವುದು ತಿಳಿದುಬರುತ್ತದೆಯಲ್ಲವೆ. ತಂದೆಯು ಹೇಳುತ್ತಾರೆ-
ನೀವು ಶ್ರೀಮತದಂತೆ ನಡೆಯಿರಿ ಆಗ ಶ್ರೇಷ್ಠರಾಗುವಿರಿ ಇಲ್ಲದಿದ್ದರೆ ಆಸ್ತಿಯು ಸಿಗಲು ಸಾಧ್ಯವಿಲ್ಲ.
ಪವಿತ್ರರಾಗಿ ಸುಪುತ್ರ ಮಗುವಾಗಿ, ಹೆಸರನ್ನು ಪ್ರಖ್ಯಾತಗೊಳಿಸಿ. ಬಾಣ ನಾಟಿದರೆ ಹೇಳುತ್ತಾರೆ-
ಈಗಂತೂ ನಾವು ಸತ್ಯವಾದ ಸಂಪಾದನೆಯನ್ನೇ ಮಾಡುತ್ತೇವೆ. ತಂದೆಯು ಶಿವಾಲಯಕ್ಕೆ ಕರೆದುಕೊಂಡು ಹೋಗಲು
ಬಂದಿದ್ದಾರೆ ಅಂದಮೇಲೆ ಯೋಗ್ಯರಾಗಬೇಕು, ಇದರಲ್ಲಿ ಪರಿಶ್ರಮವಿದೆ. ಈಗ ಶಿವತಂದೆಯನ್ನು ನೆನಪು ಮಾಡಿ
ಆಗ ವಿಕರ್ಮ ವಿನಾಶವಾಗುತ್ತದೆ ಎಂದು ಹೇಳಿ, ನೀವು ಮಕ್ಕಳ ಕರ್ತವ್ಯವೇ ಆಗಿದೆ- ತಂದೆಯ ಮನೆ ಮತ್ತು
ಅತ್ತೆಯ ಮನೆಯನ್ನು ಉದ್ಧಾರ ಮಾಡುವುದು. ಯಾವಾಗ ನಿಮ್ಮನ್ನು ಕರೆಯುತ್ತಾರೆ ಆಗ ಅವರ ಕಲ್ಯಾಣ
ಮಾಡುವುದು ನಿಮ್ಮ ಕರ್ತವ್ಯವಾಗಿದೆ. ದಯಾಹೃದಯಿಗಳಾಗಬೇಕು. ಪತಿತ, ತಮೋಪ್ರಧಾನ ಮನುಷ್ಯರನ್ನು
ಸತೋಪ್ರಧಾನರನ್ನಾಗಿ ಮಾಡಲು ದಾರಿ ತೋರಿಸಬೇಕು. ನಿಮಗೆ ಗೊತ್ತಿದೆ, ಪ್ರತಿಯೊಂದು ವಸ್ತುವು
ಹೊಸದರಿಂದ ಹಳೆಯದು ಅವಶ್ಯವಾಗಿ ಆಗುತ್ತದೆ. ನರಕದಲ್ಲಿ ಎಲ್ಲರೂ ಪತಿತ ಆತ್ಮರೇ ಆಗಿದ್ದಾರೆ
ಆದ್ದರಿಂದ ಪಾವನರಾಗಲು ಗಂಗೆಯಲ್ಲಿ ಸ್ನಾನ ಮಾಡಲು ಹೋಗುತ್ತಾರೆ. ಮೊದಲು ನಾವು ಪತಿತರಾಗಿದ್ದೇವೆಂದು
ತಿಳಿದುಕೊಳ್ಳಬೇಕು ಆದ್ದರಿಂದ ಪಾವನರಾಗಬೇಕು. ತಂದೆಯು ಆತ್ಮಗಳಿಗೆ ಹೇಳುತ್ತಾರೆ- ನನ್ನನ್ನು ನೆನಪು
ಮಾಡಿ ಆಗ ನಿಮ್ಮ ಪಾಪಗಳು ನಾಶವಾಗುತ್ತವೆ. ಸಾಧು-ಸನ್ಯಾಸಿ ಮುಂತಾದವರಿಗೆಲ್ಲರಿಗೂ ಈ ಸಂದೇಶವನ್ನು
ಕೊಡಿ, ತಂದೆಯು ಹೇಳುತ್ತಾರೆ- ನನ್ನನ್ನು ನೆನಪು ಮಾಡಿ. ಈ ಯೋಗಾಗ್ನಿಯಿಂದ ಅಥವಾ ನೆನಪಿನ
ಯಾತ್ರೆಯಿಂದ ನಿಮ್ಮಲ್ಲಿರುವ ತುಕ್ಕು ಬಿಟ್ಟುಹೋಗುತ್ತದೆ. ನೀವು ಪವಿತ್ರರಾಗಿ ನನ್ನ ಬಳಿ
ಬರುತ್ತೀರಿ. ನಾನು ನಿಮ್ಮೆಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ಹೇಗೆ ಚೇಳು
ನಡೆಯುತ್ತಾ ಹೋಗುತ್ತದೆ, ಎಲ್ಲಿ ಮೃದುವಾದ ವಸ್ತುವನ್ನು ನೋಡಿದಾಗ ಅದು ಕುಟುಕುತ್ತದೆ. ಕಲ್ಲಿಗೆ
ಕುಟ್ಟುವುದರಿಂದೇನು ಪ್ರಯೋಜನ! ನೀವೂ ಸಹ ತಂದೆಯ ಪರಿಚಯವನ್ನು ಕೊಡಿ. ನನ್ನ ಭಕ್ತರು
ಎಲ್ಲಿರುತ್ತಾರೆ! ಇದನ್ನೂ ಸಹ ತಂದೆಯು ತಿಳಿಸಿದ್ದಾರೆ. ಶಿವನ ಮಂದಿರದಲ್ಲಿ, ಕೃಷ್ಣನ ಮಂದಿರದಲ್ಲಿ,
ಲಕ್ಷ್ಮೀ-ನಾರಾಯಣನ ಮಂದಿರದಲ್ಲಿ. ಭಕ್ತರು ನನ್ನ ಭಕ್ತಿಯನ್ನು ಮಾಡುತ್ತಿರುತ್ತಾರೆ, ಎಷ್ಟಾದರೂ
ನನ್ನ ಮಕ್ಕಳಲ್ಲವೆ. ನನ್ನಿಂದ ರಾಜ್ಯವನ್ನು ಪಡೆದಿದ್ದರು ಈಗ ಪೂಜ್ಯರಿಂದ ಪೂಜಾರಿಯಾಗಿದ್ದಾರೆ.
ದೇವತೆಗಳ ಭಕ್ತರಾಗಿದ್ದಾರೆ. ನಂಬರ್ವನ್ ಆಗಿದೆ- ಶಿವನ ಅವ್ಯಭಿಚಾರಿ ಭಕ್ತಿ ನಂತರ
ಕೆಳಗಿಳಿಯುತ್ತಾ-ಇಳಿಯುತ್ತಾ ಈಗಂತೂ ಭೂತಪೂಜೆಯನ್ನು ಮಾಡಲಾರಂಭಿಸಿದರು. ಶಿವನ ಪೂಜಾರಿಗಳಿಗೆ
ತಿಳಿಸಲು ಸಹಜವಾಗುತ್ತದೆ. ಇವರು ಎಲ್ಲಾ ಆತ್ಮಗಳ ತಂದೆ ಶಿವತಂದೆಯಾಗಿದ್ದಾರೆ, ಸ್ವರ್ಗದ
ಆಸ್ತಿಯನ್ನು ಕೊಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು
ವಿನಾಶವಾಗುತ್ತವೆ. ನಾವೀಗ ನಿಮಗೆ ಈ ಸಂದೇಶವನ್ನು ಕೊಡುತ್ತೇವೆ. ಪತಿತ-ಪಾವನ, ಜ್ಞಾನಸಾಗರ
ನಾನಾಗಿದ್ದೇನೆಂದು ತಂದೆಯು ಹೇಳುತ್ತಾರೆ. ಜ್ಞಾನವನ್ನು ತಿಳಿಸುತ್ತಿದ್ದೇನೆ. ಪಾವನರಾಗಲು
ಯೋಗವನ್ನು ಕಲಿಸುತ್ತಿದ್ದೇನೆ. ಬ್ರಹ್ಮಾನ ತನುವಿನಿಂದ ನನ್ನನ್ನು ನೆನಪು ಮಾಡಿ ಎಂದು ಸಂದೇಶವನ್ನು
ಕೊಡುತ್ತಿದ್ದೇನೆ. ನಿಮ್ಮ 84 ಜನ್ಮಗಳನ್ನು ನೆನಪು ಮಾಡಿ. ಮಂದಿರಗಳಲ್ಲಿ ಮತ್ತು ಕುಂಭಮೇಳದಲ್ಲಿ
ನಿಮಗೆ ಭಕ್ತರು ಸಿಗುತ್ತಾರೆ. ಅಲ್ಲಿ ಹೋಗಿ ನೀವು ತಿಳಿಸಿಕೊಡಬಹುದು- ಪತಿತ-ಪಾವನ ಗಂಗೆಯೋ ಅಥವಾ
ಪರಮಾತ್ಮನೋ?
ಅಂದಮೇಲೆ ಮಕ್ಕಳಿಗೆ ಈ
ಖುಷಿಯಿರಬೇಕು- ನಾವು ಯಾರ ಬಳಿ ಹೋಗುತ್ತೇವೆ! ಎಷ್ಟು ಸಾಧಾರಣವಾಗಿದ್ದಾರೆ. ದೊಡ್ಡಸ್ತಿಕೆಯನ್ನೇನು
ತೋರಿಸುವುದು! ಶಿವತಂದೆಯು ದೊಡ್ಡವ್ಯಕ್ತಿಯಾಗಿ ತೋರಿಸಿಕೊಳ್ಳಲು ಏನು ಮಾಡಬೇಕು, ಸನ್ಯಾಸಿಗಳ
ವಸ್ತ್ರಗಳನ್ನು ಧರಿಸಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ನಾನಂತೂ ಸಾಧಾರಣ ತನುವನ್ನು
ಪಡೆದುಕೊಳ್ಳುತ್ತೇನೆ. ನೀವೇ ಸಲಹೆ ಕೊಡಿ- ನಾನೇನು ಮಾಡಲಿ? ಈ ರಥಕ್ಕೆ (ಬ್ರಹ್ಮಾ) ಏನು ಶೃಂಗಾರ
ಮಾಡಲಿ? ಅವರು ಹುಸೇನನ ಕುದುರೆಯನ್ನು ಎತ್ತಿನ ಮಸ್ತಕದಲ್ಲಿ ಗುಂಡು-ಗುಂಡಾಗಿ ಶಿವನ ಚಿತ್ರವನ್ನು
ತೋರಿಸುತ್ತಾರೆ. ಈಗ ಶಿವತಂದೆಯು ಎತ್ತಿನ ಮೇಲೆ ಎಲ್ಲಿಂದ ಬರುತ್ತಾರೆ? ಮಂದಿರದಲ್ಲಿ ಎತ್ತನ್ನೇಕೆ
ಇಟ್ಟಿದ್ದಾರೆ? ಶಂಕರನ ಸವಾರಿಯೆಂದು ಹೇಳುತ್ತಾರೆ. ಸೂಕ್ಷ್ಮವತನದಲ್ಲಿ ಶಂಕರನ ಸವಾರಿಯಿರುತ್ತದೆಯೇ?
ಇದೆಲ್ಲವೂ ಭಕ್ತಿಮಾರ್ಗವಾಗಿದೆ ಹಾಗೂ ಅದು ಡ್ರಾಮಾದಲ್ಲಿ ನಿಗಧಿತವಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸ್ವಯಂ
ತಮ್ಮೊಂದಿಗೆ ತಾವು ಪ್ರತಿಜ್ಞೆ ಮಾಡಿಕೊಳ್ಳಿ- ಈಗ ನಾವು ಸತ್ಯವಾದ ಸಂಪಾದನೆಯನ್ನು ಮಾಡುತ್ತೇವೆ.
ತನ್ನನ್ನು ಶಿವಾಲಯಕ್ಕೆ ಕರೆದುಕೊಂಡು ಹೋಗಲು ಯೋಗ್ಯರನ್ನಾಗಿ ಮಾಡಿಕೊಳ್ಳುತ್ತೇವೆ. ಸುಪುತ್ರ
ಮಗುವಾಗಿ ಶ್ರೀಮತದಂತೆ ನಡೆದು ತಂದೆಯ ಹೆಸರನ್ನು ಪ್ರಖ್ಯಾತಗೊಳಿಸುತ್ತೇವೆ.
2. ದಯಾಹೃದಯಿಯಾಗಿ
ತಮೋಪ್ರಧಾನ ಮನುಷ್ಯರನ್ನು ಸತೋಪ್ರಧಾನರನ್ನಾಗಿ ಮಾಡಬೇಕು. ಎಲ್ಲರ ಕಲ್ಯಾಣ ಮಾಡಬೇಕು. ಸಾಯುವ ಮೊದಲು
ಎಲ್ಲರಿಗೂ ತಂದೆಯ ನೆನಪನ್ನು ತರಿಸಬೇಕಾಗಿದೆ.
ವರದಾನ:
ಎಲ್ಲಾ ಮನುಷ್ಯ
ಆತ್ಮರಿಗೆ ತಮ್ಮ ಮೂರೂ ಕಾಲಗಳ ದರ್ಶನ ಮಾಡಿಸುವಂತಹ ದಿವ್ಯ ದರ್ಪಣ ಭವ
ನೀವು ಮಕ್ಕಳು ಈಗ ಇಂತಹ
ದಿವ್ಯ ದರ್ಪಣ ಆಗಿ ಆ ದರ್ಪಣದ ಮೂಲಕ ಎಲ್ಲಾ ಮನುಷ್ಯಾತ್ಮರೂ ತಮ್ಮ ಮೂರೂಕಾಲದ ದರ್ಶನ ಮಾಡಲಿ.
ಅವರಿಗೆ ಸಷ್ಟವಾಗಿ ಕಂಡುಬರಲಿ ನಾನು ಏನಾಗಿದ್ದೆ ಮತ್ತು ಈಗ ಏನಾಗಿದ್ದೇನೆ. ಭವಿಷ್ಯದಲ್ಲಿ
ಏನಾಗಬೇಕಿದೆ. ಯಾವಾಗ ತಿಳಿಯುವರು ಅರ್ಥಾತ್ ಅನುಭವ ಮಾಡುತ್ತಾರೆ ಅಥವಾ ನೋಡುತ್ತಾರೆ ಅನೇಕ ಜನ್ಮದ
ಬಾಯಾರಿಕೆ ಅಥವಾ ಮುಕ್ತಿಯಲ್ಲಿ ಹೋಗುವಂತಹ ಅಥವಾ ಸ್ವರ್ಗದಲ್ಲಿ ಹೋಗುವಂತಹ ಅನೇಕ ಜನ್ಮದ ಆಸೆಗಳು
ಪೂರ್ಣವಾಗಲಿದೆ ಆಗ ಸಹಜವಾಗಿಯೇ ತಂದೆಯಿಂದ ಆಸ್ತಿ ಪಡೆಯಲು ಆಕರ್ಷಿತರಾಗಿ ಬರುತ್ತಾರೆ.
ಸ್ಲೋಗನ್:
ಒಂದೇ ಬಲ. ಒಂದೇ
ಭರವಸೆ - ಈ ಪಾಠವನ್ನು ಸದಾ ಪಕ್ಕಾ ಮಾಡಿಕೊಳ್ಳಿ ಆಗ ಸುಳಿಯ ಮಧ್ಯದಿಂದ ಸಹಜವಾಗಿ ಹೊರಬಂದುಬಿಡುವಿರಿ.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ವಾರಸುಧಾರರ ಕ್ವಾಲಿಟಿ
ಯಾವಾಗ ಪ್ರತ್ಯಕ್ಷವಾಗುವುದೆಂದರೆ, ಯಾವಾಗ ತಾವು ತಮ್ಮ ಪವಿತ್ರತೆಯ ಘನತೆಯಲ್ಲಿರುವಿರಿ. ಎಲ್ಲಿಯೂ
ಮಿತವಾದ ಆಕರ್ಷಣೆಯಲ್ಲಿ ಕಣ್ಣುಗಳು ಮೋಸ ಹೋಗುವುದಿಲ್ಲ. ವಾರಸುಧಾರರು ಅರ್ಥಾತ್ ಅಧಿಕಾರಿ. ಯಾರು
ಇಲ್ಲಿ ಸದಾ ಅಧಿಕಾರಿ ಸ್ಟೇಜಿನ ಮೇಲೆ ಇರುತ್ತಾರೆ, ಎಂದೂ ಮಾಯೆಯ ಅಧೀನರಾಗುವುದಿಲ್ಲ, ಅಧಿಕಾರಿತನದ
ಶುಭ ನಶೆಯಲ್ಲಿರುತ್ತಾರೆ, ಇಂತಹ ಅಧಿಕಾರಿ ಸ್ಟೇಜ್ನವರೇ ಅಲ್ಲಿಯೂ ಅಧಿಕಾರಿಯಾಗುತ್ತಾರೆ.