16.06.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನಮಗೆ
ಯಾವುದೇ ದೇಹಧಾರಿಯು ಓದಿಸುತ್ತಿಲ್ಲ, ಅಶರೀರಿ ತಂದೆಯೇ ಶರೀರದಲ್ಲಿ ಪ್ರವೇಶ ಮಾಡಿ ವಿಶೇಷವಾಗಿ ನಮಗೇ
ಓದಿಸಲು ಬಂದಿದ್ದಾರೆ ಎಂಬ ಖುಷಿಯಲ್ಲಿ ಸದಾ ಇರಿ”
ಪ್ರಶ್ನೆ:
ನೀವು ಮಕ್ಕಳಿಗೆ
ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ- ಏಕೆ?
ಉತ್ತರ:
ನಮಗೆ ನಮ್ಮ
ಶಾಂತಿಧಾಮ ಮತ್ತು ಸುಖಧಾಮವನ್ನು ನೋಡುವುದಕ್ಕಾಗಿ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ. ಈ
ಸ್ಥೂಲಕಣ್ಣುಗಳಿಂದ ಹಳೆಯ ಪ್ರಪಂಚ, ಮಿತ್ರಸಂಬಂಧಿ ಮೊದಲಾದವರು ಕಾಣಿಸುತ್ತಾರೆಯೋ ಅವರೆಲ್ಲರಿಂದ
ಬುದ್ಧಿಯನ್ನು ತೆಗೆಯಬೇಕಾಗಿದೆ. ತಂದೆಯು ನಮ್ಮನ್ನು ಕೆಸರಿನಿಂದ ಹೊರತೆಗೆದು ಹೂ (ದೇವತೆ)ಗಳನ್ನಾಗಿ
ಮಾಡಲು ಬಂದಿದ್ದಾರೆ ಅಂದಮೇಲೆ ಇಂತಹ ತಂದೆಗೆ ಬಹಳ ಗೌರವವನ್ನಿಡಬೇಕಾಗಿದೆ.
ಓಂ ಶಾಂತಿ.
ಶಿವಭಗವಾನುವಾಚ ಮಕ್ಕಳ ಪ್ರತಿ. ಶಿವಭಗವಂತನಿಗೆ ಸತ್ಯತಂದೆ ಎಂದು ಅವಶ್ಯವಾಗಿ ಹೇಳುತ್ತಾರೆ ಏಕೆಂದರೆ
ರಚಯಿತನಲ್ಲವೆ. ಭಗವಾನ್-ಭಗವತಿಯರನ್ನಾಗಿ ಮಾಡಲು ನೀವು ಮಕ್ಕಳಿಗೇ ಭಗವಂತನು ಓದಿಸುತ್ತಾರೆ. ಇದನ್ನು
ಪ್ರತಿಯೊಬ್ಬರೂ ಬಹಳ ಚೆನ್ನಾಗಿ ಅರಿತಿದ್ದೀರಿ. ತಮ್ಮ ಶಿಕ್ಷಕರನ್ನು, ವಿದ್ಯೆಯನ್ನು ಮತ್ತು ಅದರ
ಫಲಿತಾಂಶವನ್ನು ತಿಳಿಯದೇ ಇರುವಂತಹ ವಿದ್ಯಾರ್ಥಿಗಳು ಯಾರೂ ಇರುವುದಿಲ್ಲ. ನಿಮಗೆ ಭಗವಂತನೇ
ಓದಿಸುತ್ತಾರೆ ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ಆದರೆ ಈ ಖುಷಿಯು ಏಕೆ
ಸ್ಥಿರವಾಗಿರುವುದಿಲ್ಲ? ನಿಮಗೆ ತಿಳಿದಿದೆ- ಯಾವುದೇ ದೇಹಧಾರಿ ಮನುಷ್ಯರು ನಮಗೆ ಓದಿಸುತ್ತಿಲ್ಲ,
ಅಶರೀರಿ ತಂದೆಯು ಶರೀರದಲ್ಲಿ (ಬ್ರಹ್ಮಾ) ಪ್ರವೇಶ ಮಾಡಿ ನೀವು ಮಕ್ಕಳಿಗೆ ಓದಿಸಲು ಬಂದಿದ್ದಾರೆ.
ಭಗವಂತನೇ ಬಂದು ಓದಿಸುತ್ತಾರೆಂಬುದು ಮತ್ತ್ಯಾರಿಗೂ ತಿಳಿದಿಲ್ಲ. ನಾವು ಭಗವಂತನ ಮಕ್ಕಳಾಗಿದ್ದೇವೆ,
ನಮಗೆ ಅವರೇ ಓದಿಸುತ್ತಾರೆ. ಅವರು ಜ್ಞಾನಸಾಗರನೂ ಆಗಿದ್ದಾರೆ ಎಂಬುದನ್ನು ನೀವು
ತಿಳಿದುಕೊಂಡಿದ್ದೀರಿ. ಶಿವತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ, ಆತ್ಮಗಳು ಮತ್ತು ಪರಮಾತ್ಮನು ಈ
ಸಮಯದಲ್ಲಿಯೇ ಮಿಲನ ಮಾಡುತ್ತಿರಬೇಕು ಆದರೆ ಇಲ್ಲಂತೂ ಇಂತಿಂತಹವರೂ ಇದ್ದಾರೆ ತಂದೆಯನ್ನು
ಮರೆತೇಹೋಗುತ್ತಾರೆ. ಏನನ್ನೂ ತಿಳಿದುಕೊಂಡಿಲ್ಲ. ಬಹಳ ಮಕ್ಕಳು ಇದನ್ನು ಮರೆತುಹೋಗುತ್ತಾರೆಂದು
ಸ್ವಯಂ ಭಗವಂತನೇ ಹೇಳುತ್ತಾರೆ. ಇಲ್ಲದೇ ಹೋದರೆ ಆ ಖುಷಿಯಿರಬೇಕಲ್ಲವೆ. ನಾವು ಭಗವಂತನ
ಮಕ್ಕಳಾಗಿದ್ದೇವೆ, ಅವರೇ ನಮಗೆ ಓದಿಸುತ್ತಿದ್ದಾರೆ. ಮಾಯೆಯು ಎಷ್ಟು ಪ್ರಬಲವಾಗಿದೆ, ಸಂಪೂರ್ಣವಾಗಿ
ಮರೆಸಿಬಿಡುತ್ತದೆ. ಈ ಕಣ್ಣುಗಳಿಂದ ಯಾವ ಪ್ರಪಂಚ, ಮಿತ್ರಸಂಬಂಧಿ ಮೊದಲಾದವರನ್ನು ನೋಡುತ್ತೀರೋ
ಅದರಕಡೆ ಬುದ್ಧಿಯು ಹೊರಟುಹೋಗುತ್ತದೆ. ನೀವು ಮಕ್ಕಳಿಗೆ ಈಗ ತಂದೆಯು ಮೂರನೆಯ ನೇತ್ರವನ್ನು
ಕೊಡುತ್ತಾರೆ. ನೀವು ಶಾಂತಿಧಾಮ-ಸುಖಧಾಮವನ್ನು ನೆನಪು ಮಾಡಿ. ಇದು ದುಃಖಧಾಮ, ಛೀ ಛೀ ಪ್ರಪಂಚವಾಗಿದೆ.
ನೀವು ತಿಳಿದುಕೊಂಡಿದ್ದೀರಿ- ಭಾರತವು ಸ್ವರ್ಗವಾಗಿತ್ತು, ಈಗ ನರಕವಾಗಿದೆ. ತಂದೆಯು ಮತ್ತೆ ಬಂದು
ಹೂಗಳನ್ನಾಗಿ ಮಾಡುತ್ತಾರೆ. ಅಲ್ಲಿ ನಿಮಗೆ 21 ಜನ್ಮಗಳಿಗಾಗಿ ಸುಖವು ಸಿಗುತ್ತದೆ, ಇದಕ್ಕಾಗಿಯೇ
ನೀವು ಓದುತ್ತಿದ್ದೀರಿ ಆದರೆ ಪೂರ್ಣರೀತಿಯಲ್ಲಿ ಓದದೇ ಇರುವ ಕಾರಣ ಇಲ್ಲಿಯ ಹಣ, ಅಧಿಕಾರ
ಮೊದಲಾದವುಗಳಲ್ಲಿಯೇ ಬುದ್ಧಿಯು ಸಿಕ್ಕಿಹಾಕಿಕೊಳ್ಳುತ್ತದೆ. ಅದರಿಂದ ಬುದ್ಧಿಯು ದೂರವಾಗುವುದೇ
ಇಲ್ಲ. ತಂದೆಯು ತಿಳಿಸುತ್ತಾರೆ- ಶಾಂತಿಧಾಮ-ಸುಖಧಾಮದ ಕಡೆ ಬುದ್ಧಿಯನ್ನಿಡಿ ಆದರೆ ಬುದ್ಧಿಯು ಈ
ಕೊಳಕು ಪ್ರಪಂಚದ ಕಡೆಯೇ ಸಿಕ್ಕಿಹಾಕಿಕೊಂಡಿದೆ, ಬಿಡುತ್ತಿಲ್ಲ. ಭಲೆ ಇಲ್ಲಿ ಕುಳಿತಿದ್ದಾರೆ ಆದರೂ
ಸಹ ಹಳೆಯ ಪ್ರಪಂಚದಿಂದ ಬುದ್ಧಿಯು ದೂರವಾಗಿಲ್ಲ. ಪವಿತ್ರ ಹೂಗಳನ್ನಾಗಿ ಮಾಡಲು ತಂದೆಯು ಬಂದಿದ್ದಾರೆ.
ಬಾಬಾ, ನಮ್ಮನ್ನು ಪವಿತ್ರರನ್ನಾಗಿ ಮಾಡಿ ಪವಿತ್ರಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಾರೆಂದು ನೀವು
ಮುಖ್ಯವಾಗಿ ಪವಿತ್ರತೆಗಾಗಿಯೇ ಹೇಳುತ್ತೀರಿ. ಅಂದಮೇಲೆ ಇಂತಹ ತಂದೆಯ ಪ್ರತಿ ಎಷ್ಟೊಂದು
ಗೌರವವನ್ನಿಡಬೇಕು! ವಾಸ್ತವದಲ್ಲಿ ತಂದೆಗೆ ಬಲಿಹಾರಿಯಾಗಿಬಿಡಬೇಕು. ಯಾರು ಪರಮಧಾಮದಿಂದ ಬಂದು ನಾವು
ಮಕ್ಕಳಿಗೆ ಓದಿಸುತ್ತಾರೆ, ಮಕ್ಕಳಿಗಾಗಿ ಎಷ್ಟೊಂದು ಪರಿಶ್ರಮಪಡುತ್ತಾರೆ. ಒಮ್ಮೆಲೆ ಕೆಸರಿನಿಂದ
ಹೊರತೆಗೆಯುತ್ತಾರೆ. ನೀವೀಗ ಹೂಗಳಾಗುತ್ತಿದ್ದೀರಿ. ಕಲ್ಪ-ಕಲ್ಪವೂ ನಾವು ಈ ರೀತಿ
ಹೂಗಳಾಗುತ್ತೇವೆಂದು ನಿಮಗೆ ತಿಳಿದಿದೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಸದ್ಗುರು ಎಂದು
ಹೇಳುತ್ತಾರೆ. ಈಗ ನಮಗೆ ಆ ತಂದೆಯೇ ಓದಿಸುತ್ತಿದ್ದಾರೆ, ಇಲ್ಲಿ ನಾವು ಮನುಷ್ಯರಿಂದ ದೇವತೆಗಳಾಗಲು
ಬಂದಿದ್ದೇವೆ. ಈಗ ನಿಮಗೆ ಇದು ಅರ್ಥವಾಗಿದೆ- ನಾವು ಸ್ವರ್ಗವಾಸಿಗಳಾಗಿದ್ದೆವು ಎಂಬುದು ಮೊದಲು
ತಿಳಿದಿರಲಿಲ್ಲ. ಈಗ ತಂದೆಯು ತಿಳಿಸಿದ್ದಾರೆ- ಮಕ್ಕಳೇ, ನೀವು ರಾಜ್ಯಮಾಡುತ್ತಿದ್ದಿರಿ ನಂತರ
ರಾವಣನು ರಾಜ್ಯವನ್ನು ಕಸಿದುಕೊಂಡಿದ್ದಾನೆ. ನೀವೇ ಬಹಳ ಸುಖವನ್ನು ನೋಡಿದ್ದಿರಿ ನಂತರ 84
ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಏಣಿಯನ್ನು ಕೆಳಗಿಳಿಯುತ್ತೀರಿ, ಇದು ಛೀ ಛೀ
ಪ್ರಪಂಚವಾಗಿದೆ. ಎಷ್ಟೊಂದು ಮಂದಿ ಮನುಷ್ಯರು ದುಃಖಿಯಾಗಿದ್ದಾರೆ. ಲಕ್ಷಾಂತರಮಂದಿ ಹಸಿವಿನಿಂದ
ಸಾಯುತ್ತಿರುತ್ತಾರೆ, ಏನೂ ಸುಖವಿಲ್ಲ. ಭಲೆ ಎಷ್ಟೇ ಧನವಂತರಿರಬಹುದು ಆದರೂ ಸಹ ಈ ಅಲ್ಪಕಾಲದ ಸುಖವು
ಕಾಗವಿಷ್ಟ ಸಮಾನ ಸುಖವಾಗಿದೆ, ಇದಕ್ಕೆ ವಿಷಯವೈತರಣೀ ನದಿಯೆಂದು ಹೇಳಲಾಗುತ್ತದೆ. ಸ್ವರ್ಗದಲ್ಲಂತೂ
ನೀವು ಬಹಳ ಸುಖಿಯಾಗಿರುತ್ತೀರಿ, ನೀವೀಗ ಶ್ಯಾಮರಿಂದ ಸುಂದರರಾಗುತ್ತೀರಿ.
ನೀವೀಗ ತಿಳಿದುಕೊಂಡಿದ್ದೀರಿ- ನಾವೇ ದೇವತೆಗಳಾಗಿದ್ದೆವು, ನಂತರ ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಇಂದು ವೇಶ್ಯಾಲಯದಲ್ಲಿದ್ದೇವೆ. ಈಗ ಪುನಃ ನಿಮ್ಮನ್ನು
ತಂದೆಯು ಶಿವಾಲಯದಲ್ಲಿ ಕರೆದುಕೊಂಡು ಹೋಗುತ್ತಾರೆ. ಶಿವತಂದೆಯು ಸ್ವರ್ಗದ ಸ್ಥಾಪನೆ
ಮಾಡುತ್ತಿದ್ದಾರೆ, ನಿಮಗೆ ವಿದ್ಯೆಯನ್ನು ಓದಿಸುತ್ತಿದ್ದಾರೆ ಅಂದಮೇಲೆ ಚೆನ್ನಾಗಿ ಓದಬೇಕಲ್ಲವೆ.
ಓದುತ್ತಾ ಚಕ್ರವನ್ನು ಬುದ್ಧಿಯಲ್ಲಿಟ್ಟುಕೊಂಡು, ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ. ನೀವು
ಮಕ್ಕಳು ರೂಪಭಸಂತರಾಗಿದ್ದೀರಿ, ನಿಮ್ಮ ಬಾಯಿಂದ ಸದಾ ಜ್ಞಾನರತ್ನಗಳೇ ಬರಲಿ, ಕಲ್ಲುಗಳಲ್ಲ. ತಂದೆಯು
ಹೇಳುತ್ತಾರೆ- ನಾನು ರೂಪಭಸಂತನಾಗಿದ್ದೇನೆ..... ನಾನು ಪರಮಾತ್ಮನು ಜ್ಞಾನಸಾಗರನಾಗಿದ್ದೇನೆ,
ವಿದ್ಯೆಯು ಆದಾಯದ ಮೂಲವಾಗುತ್ತದೆ. ಯಾವಾಗ ಓದಿ ವಕೀಲರು, ವೈದ್ಯರಾಗುತ್ತಾರೆಯೋ ಆಗ ಲಕ್ಷಾಂತರ
ರೂಪಾಯಿಗಳನ್ನು ಸಂಪಾದಿಸುತ್ತಾರೆ. ಒಬ್ಬ ವೈದ್ಯನು ತಿಂಗಳಿಗೆ ಲಕ್ಷರೂಪಾಯಿಗಳನ್ನು ಸಂಪಾದಿಸುತಾರೆ,
ಅವರಿಗೆ ತಿನ್ನುವುದಕ್ಕೂ ಬಿಡುವಿರುವುದಿಲ್ಲ. ನೀವೂ ಸಹ ಓದುತ್ತಿದ್ದೀರಿ ಅಂದಮೇಲೆ ನೀವು
ಏನಾಗುತ್ತೀರಿ? ವಿಶ್ವದ ಮಾಲೀಕರು ಅಂದಮೇಲೆ ಈ ವಿದ್ಯೆಯ ನಶೆಯಿರಬೇಕಲ್ಲವೆ. ನೀವು ಮಕ್ಕಳಿಗೆ
ಮಾತನಾಡುವುದರಲ್ಲಿ ಎಷ್ಟೊಂದು ಘನತೆಯಿರಬೇಕು! ನೀವು ದೊಡ್ಡವ್ಯಕ್ತಿಗಳಾಗಿದ್ದೀರಲ್ಲವೆ. ರಾಜರ
ಚಲನೆಯು ನೋಡಿ ಹೇಗಿರುತ್ತದೆ! ತಂದೆಯಂತೂ ಅನುಭವಿಯಾಗಿದ್ದಾರಲ್ಲವೆ. ರಾಜರಿಗೆ ಕಾಣಿಕೆಯನ್ನು
ಕೊಡುತ್ತಾರೆಂದರೆ ಅವರೆಂದೂ ಕೈಯಲ್ಲಿ ತೆಗೆದುಕೊಳ್ಳುವುದಿಲ್ಲ. ಒಂದುವೇಳೆ
ತೆಗೆದುಕೊಳ್ಳುವಂತಿದ್ದರೆ ಕಾರ್ಯದರ್ಶಿಗೆ ಹೋಗಿ ಕೊಡಿ ಎಂದು ಸನ್ನೆ ಮಾಡುತ್ತಾರೆ. ಬಹಳ
ಘನತೆಯಿಂದಿರುತ್ತಾರೆ, ಇವರಿಂದ ತೆಗೆದುಕೊಳ್ಳುತ್ತೇವೆಂದರೆ ಮತ್ತೆ ಇವರಿಗೆ ಹಿಂದಿರುಗಿಸಲೂ
ಬೇಕಾಗುವುದು ಎಂದು ಬುದ್ಧಿಯಲ್ಲಿ ಸಂಕಲ್ಪವು ಬರುತ್ತದೆ. ಇಲ್ಲದಿದ್ದರೆ ಕೆಲವೊಮ್ಮೆ
ತೆಗೆದುಕೊಳ್ಳುವುದೇ ಇಲ್ಲ. ಕೆಲವು ರಾಜರು ಪ್ರಜೆಗಳಿಂದ ಏನನ್ನೂ ತೆಗೆದುಕೊಳ್ಳುವುದಿಲ್ಲ.
ಕೆಲವರಂತೂ ಬಹಳ ಲೂಟಿ ಮಾಡುತ್ತಾರೆ. ರಾಜರಲ್ಲಿಯೂ ಅಂತರವಿದೆ. ನೀವೀಗ ಸತ್ಯಯುಗೀ ಡಬಲ್ ಕಿರೀಟಧಾರಿ
ರಾಜರಾಗುತ್ತೀರಿ. ಡಬಲ್ ಕಿರೀಟಕ್ಕಾಗಿ ಪವಿತ್ರತೆಯು ಬೇಕು. ಈ ವಿಕಾರಿ ಪ್ರಪಂಚವನ್ನು ಬಿಡಬೇಕಾಗಿದೆ.
ನೀವು ಮಕ್ಕಳು ವಿಕಾರಗಳನ್ನು ಬಿಡುತ್ತೀರಿ, ವಿಕಾರಗಳನ್ನು ಯಾರೂ ಬಂದು ತಿಳಿದುಕೊಳ್ಳಲು
ಸಾಧ್ಯವಿಲ್ಲ. ಒಂದುವೇಳೆ ತಿಳಿಸದೆಯೇ ಬಂದು ಕುಳಿತುಕೊಳ್ಳುತ್ತಾರೆಂದರೆ ಅವರು ತಮ್ಮದೇ
ನಷ್ಟವನ್ನುಂಟು ಮಾಡಿಕೊಳ್ಳುತ್ತಾರೆ. ಯಾರಿಗೇನು ತಿಳಿಯುತ್ತದೆಯೆಂದು ಚಾಲಾಕಿತನ ಮಾಡುತ್ತಾರೆ.
ತಂದೆಯು ಭಲೆ ನೋಡಲಿ, ನೋಡದಿರಲಿ ಆದರೆ ತಾವೇ ಪಾಪಾತ್ಮರಾಗುತ್ತಾರಲ್ಲವೆ. ನೀವು
ಪಾಪಾತ್ಮರಾಗಿದ್ದಿರಿ, ಈಗ ಪುರುಷಾರ್ಥದಿಂದ ಪುಣ್ಯಾತ್ಮರಾಗಬೇಕಾಗಿದೆ. ನೀವು ಮಕ್ಕಳಿಗೆ ಎಷ್ಟೊಂದು
ಜ್ಞಾನವು ಸಿಕ್ಕಿದೆ. ಈ ಜ್ಞಾನದಿಂದ ನೀವು ವಿಷ್ಣುಪುರಿಯ ಮಾಲೀಕರಾಗುತ್ತೀರಿ. ತಂದೆಯು ಎಷ್ಟೊಂದು
ಶೃಂಗಾರ ಮಾಡುತ್ತಾರೆ. ಸರ್ವಶ್ರೇಷ್ಠಭಗವಂತನು ಓದಿಸುತ್ತಾರೆಂದರೆ ಎಷ್ಟೊಂದು ಖುಷಿ-ಖುಷಿಯಿಂದ
ಓದಬೇಕು! ಇಂತಹ ವಿದ್ಯೆಯನ್ನಂತೂ ಸೌಭಾಗ್ಯಶಾಲಿಗಳೇ ಓದುತ್ತಾರೆ ಮತ್ತು ಸರ್ಟಿಫಿಕೇಟನ್ನು
ತೆಗೆದುಕೊಳ್ಳಬೇಕಾಗಿದೆ. ತಂದೆಯು ಹೇಳುತ್ತಾರೆ- ನೀವಿಲ್ಲಿ ಓದುತ್ತೀರಿ, ಬುದ್ಧ್ದಿಯು
ಅಲೆಯುತ್ತಿರುತ್ತದೆ. ಅಂದಮೇಲೆ ಏನಾಗುತ್ತೀರಿ! ಲೌಕಿಕ ತಂದೆಯೂ ಸಹ ಈ ಸನ್ನಿವೇಶದಲ್ಲಿ ನೀವು
ಅನುತ್ತೀರ್ಣರಾಗಿಬಿಡುತ್ತೀರೆಂದು ಹೇಳುತ್ತಾರಲ್ಲವೆ. ಕೆಲವರಂತೂ ಓದಿ ಲಕ್ಷಾಂತರ ರೂಪಾಯಿಯನ್ನು
ಸಂಪಾದಿಸುತ್ತಾರೆ. ಇನ್ನೂ ಕೆಲವರನ್ನು ನೋಡಿದರೆ ಕಷ್ಟಪಡುತ್ತಿರುತ್ತಾರೆ. ನೀವಂತೂ ಮಾತಾಪಿತರನ್ನು
ಅನುಸರಿಸಬೇಕಾಗಿದೆ ಮತ್ತು ಯಾವ ಸಹೋದರರು ಚೆನ್ನಾಗಿ ಓದುವವರು ಮತ್ತು ಓದಿಸುವವರು, ಅವರು ಇದೇ
ಕರ್ತವ್ಯವನ್ನು ಮಾಡುತ್ತಾರೆ. ಪ್ರದರ್ಶನಿಯಲ್ಲಿ ಅನೇಕರಿಗೆ ಓದಿಸುತ್ತೀರಲ್ಲವೆ. ಮುಂದೆ ಹೋದಂತೆ
ದುಃಖವು ಎಷ್ಟು ಹೆಚ್ಚಾಗುವುದೋ ಅಷ್ಟು ಮನುಷ್ಯರಿಗೆ ವೈರಾಗ್ಯವು ಬಂದುಬಿಡುತ್ತದೆ. ಆಗ ಓದಲು
ತೊಡಗುತ್ತಾರೆ. ದುಃಖದಲ್ಲಿ ಭಗವಂತನನ್ನು ಬಹಳ ನೆನಪು ಮಾಡುತ್ತಾರೆ. ದುಃಖದಲ್ಲಿ, ಸಾಯುವ ಸಮಯದಲ್ಲಿ
ಹೇ ರಾಮ, ಅಯ್ಯೊ ಭಗವಂತ ಎನ್ನುತ್ತಿರುತ್ತಾರಲ್ಲವೆ. ನೀವಂತೂ ಏನೂ ಮಾಡಬೇಕಾಗಿಲ್ಲ. ಏಕೆಂದರೆ ನೀವು
ಖುಷಿಯಿಂದ ತಯಾರಿ ಮಾಡಿಕೊಳ್ಳುತ್ತೀರಿ. ಈ ಹಳೆಯ ಶರೀರವು ಬಿಟ್ಟುಹೋದರೆ ನಾವು ನಮ್ಮ ಮನೆಗೆ
ಹೋಗಿಬಿಡುತ್ತೇವೆ. ಅಲ್ಲಿ ಸುಂದರವಾದ ಶರೀರವು ಸಿಗುತ್ತದೆ. ಪುರುಷಾರ್ಥ ಮಾಡಿ ಓದಿಸುವವರಿಗಿಂತಲೂ
ಮುಂದೆಹೋಗಬೇಕು. ಕೆಲವರು ಓದಿಸುವವರಿಗಿಂತಲೂ ಓದುವವರ ಸ್ಥಿತಿಯು ಚೆನ್ನಾಗಿರುತ್ತದೆ. ತಂದೆಯಂತೂ
ಪ್ರತಿಯೊಂದು ಮಾತನ್ನು ತಿಳಿದುಕೊಂಡಿದ್ದಾರಲ್ಲವೆ. ನೀವು ಮಕ್ಕಳೂ ಸಹ ತಿಳಿದುಕೊಳ್ಳುತ್ತೀರಿ
ಅಂದಮೇಲೆ ತಮ್ಮನ್ನು ನೋಡಿಕೊಳ್ಳಿ- ನನ್ನಲ್ಲಿ ಯಾವ ಕೊರತೆಯಿದೆ? ಮಾಯೆಯ ವಿಘ್ನಗಳಿಂದ
ಪಾರಾಗಬೇಕಾಗಿದೆ, ಅದರಲ್ಲಿ ಸಿಕ್ಕಿಹಾಕಿಕೊಳ್ಳಬಾರದು.
ಮಾಯೆಯು ಬಹಳ ಶಕ್ತಿಶಾಲಿಯಾಗಿದೆ, ನಾವು ನಡೆಯಲು ಹೇಗೆ ಸಾಧ್ಯ ಎಂದು ಯಾರಾದರೂ ಹೀಗೆ
ಯೋಚಿಸುವುದಾದರೆ ಮಾಯೆಯು ಅಂತಹವರನ್ನು ಒಮ್ಮೆಲೆ ತಿಂದುಬಿಡುತ್ತದೆ. ಗಜ(ಆನೆ)ವನ್ನು ಮೊಸಳೆ
ತಿಂದಿತು, ಇದು ಈಗಿನ ಮಾತಲ್ಲವೆ. ಒಳ್ಳೊಳ್ಳೆಯ ಮಕ್ಕಳನ್ನೂ ಸಹ ಮಾಯಾರೂಪಿ ಮೊಸಳೆಯು ಒಂದೇಸಲ
ನುಂಗಿಬಿಡುತ್ತದೆ. ತಮ್ಮನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಾನು ಮಾಯೆಯ ಪೆಟ್ಟಿನಿಂದ
ಬಿಡುಗಡೆಯಾಗಬೇಕೆಂದು ತಾವು ಯೋಚಿಸುತ್ತೀರಿ ಆದರೆ ಮಾಯೆಯು ಬಿಡುಗಡೆಯಾಗಲು ಬಿಡುವುದಿಲ್ಲ. ಬಾಬಾ,
ನಮ್ಮನ್ನು ಈ ರೀತಿ ಹಿಡಿದುಕೊಳ್ಳದಿರಲಿ ಎಂದು ಮಾಯೆಗೆ ಹೇಳಿ ಎಂದು ಹೇಳುತ್ತಾರೆ. ಅರೆ! ಇದು
ಯುದ್ಧದ ಮೈದಾನವಲ್ಲವೆ. ಮೈದಾನದಲ್ಲಿ ನಮಗೆ ಈಟಿ ಎಸೆಯಬಾರದೆಂದು ಇವರಿಗೆ ಹೇಳಿ ಎಂದು ಹೇಳುವುದುಂಟೇ!
ಪಂದ್ಯದಲ್ಲಿ ನಮಗೆ ನಮ್ಮ ಕಡೆ ಚೆಂಡನ್ನು ಎಸೆಯಬೇಡಿ ಎಂದು ಹೇಳುತ್ತಾರೆಯೇ? ಈ ರೀತಿ
ಹೇಳುವಂತಿದ್ದರೆ ಯುದ್ಧದ ಮೈದಾನದಲ್ಲಿ ಬಂದಿದ್ದೀರೆಂದರೆ ನೀವೂ ಹೊಡೆಯಿರಿ ಎಂದು ಹೇಳಿಬಿಡುತ್ತಾರೆ.
ಅದೇರೀತಿ ಮಾಯೆಯೂ ಸಹ ಹೆಚ್ಚಿನದಾಗಿ ಹಿಂದೆಬೀಳುತ್ತದೆ. ನೀವು ಬಹಳ ಶ್ರೇಷ್ಠಪದವಿಯನ್ನು
ಪಡೆಯಬಲ್ಲಿರಿ. ಭಗವಂತನೇ ಓದಿಸುತ್ತಾರೆ, ಇದು ಕಡಿಮೆ ಮಾತೇನು! ನಂಬರ್ವಾರ್ ಪುರುಷಾರ್ಥದನುಸಾರ ಈಗ
ನಿಮ್ಮದು ಏರುವಕಲೆಯಾಗುತ್ತದೆ. ನಮ್ಮ ಭವಿಷ್ಯದ ಜೀವನವನ್ನು ವಜ್ರಸಮಾನ ಮಾಡಿಕೊಳ್ಳಬೇಕು,
ವಿಘ್ನಗಳನ್ನು ಕಳೆಯುತ್ತಾ ಹೋಗಬೇಕೆಂದು ಪ್ರತಿಯೊಬ್ಬ ಮಗುವೂ ಆಸಕ್ತಿಯನ್ನಿಡಬೇಕು. ಹೇಗಾದರೂ ಮಾಡಿ
ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ನಾವು ಕಲ್ಪ-ಕಲ್ಪಾಂತರವೂ
ಅನುತ್ತೀರ್ಣರಾಗಿಬಿಡುತ್ತೇವೆ. ತಿಳಿದುಕೊಳ್ಳಿ, ಯಾರಾದರೂ ಸಾಹುಕಾರರ ಮಗನಾಗಿದ್ದರೆ ತಂದೆಯು
ಅವರನ್ನು ಈ ವಿದ್ಯಾಭ್ಯಾಸಕ್ಕಾಗಿ ತಡೆದರೆ ನಾವಂತೂ ಈ ಲಕ್ಷಾಂತರ ರೂಪಾಯಿಗಳನ್ನು ತೆಗೆದುಕೊಂಡು ಏನು
ಮಾಡುವುದು! ನಮಗೆ ಬೇಹದ್ದಿನ ತಂದೆಯಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಷ್ಟೇ ಎಂದು
ಹೇಳುತ್ತಾರಲ್ಲವೆ. ಈ ಲಕ್ಷಾಂತರ-ಕೋಟ್ಯಾಂತರ ರೂಪಾಯಿಗಳೆಲ್ಲವೂ ಭಸ್ಮಿಭೂತವಾಗುವುದಿದೆ, ಕೆಲವರದು
ಮಣ್ಣುಪಾಲಾಗುವುದು, ಇನ್ನೂ ಕೆಲವರದು ಬೆಂಕಿಯಲ್ಲಿ ಸೇರುವುದು, ಇಡೀ ಸೃಷ್ಟಿರೂಪಿ ಬಿದುರಿನ ಕಾಡಿಗೆ
ಬೆಂಕಿಬೀಳುವುದಿದೆ. ಇದೆಲ್ಲವೂ ರಾವಣನ ಲಂಕೆಯಾಗಿದೆ, ನೀವೆಲ್ಲರೂ ಸೀತೆಯರಾಗಿದ್ದೀರಿ. ಈಗ ರಾಮನು
ಬಂದಿದ್ದಾರೆ. ಇಡೀ ಧರಣಿಯೇ ಒಂದು ದ್ವೀಪವಾಗಿದೆ, ಈ ಸಮಯವು ರಾವಣರಾಜ್ಯವಾಗಿದೆ. ತಂದೆಯು ಬಂದು
ರಾವಣರಾಜ್ಯವನ್ನು ಸಮಾಪ್ತಿ ಮಾಡಿಸಿ ನಿಮ್ಮನ್ನು ರಾಮರಾಜ್ಯದ ಮಾಲೀಕರನ್ನಾಗಿ ಮಾಡುತ್ತಾರೆ. ನಿಮಗೆ
ಆಂತರಿಕವಾಗಿ ಬಹಳ ಖುಷಿಯಿರಬೇಕು. ಗಾಯನವೂ ಇದೆ- ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಮಕ್ಕಳಿಂದ
ಕೇಳಿ. ನೀವು ಪ್ರದರ್ಶನಿಯಲ್ಲಿ ತಮ್ಮ ಸುಖದ ಅನುಭವವನ್ನು ತಿಳಿಸುತ್ತೀರಲ್ಲವೆ. ನಾವು ಭಾರತವನ್ನು
ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ. ಶ್ರೀಮತದನುಸಾರ ಭಾರತದ ಸೇವೆ ಮಾಡುತ್ತಿದ್ದೇವೆ. ಎಷ್ಟೆಷ್ಟು
ಶ್ರೀಮತದಂತೆ ನಡೆಯುತ್ತೀರೋ ಅಷ್ಟು ಶ್ರೇಷ್ಠರಾಗುವಿರಿ. ನಿಮಗೆ ಮತ ಕೊಡುವವರು ಅನೇಕರು ಬರುತ್ತಾರೆ
ಆದ್ದರಿಂದ ಅವರನ್ನು ಪರಿಶೀಲಿಸಬೇಕಾಗಿದೆ. ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕು. ಕೆಲವೊಂದುಕಡೆ
ಮಾಯೆಯು ಗುಪ್ತವಾಗಿ ಪ್ರವೇಶ ಮಾಡುತ್ತದೆ. ನೀವು ವಿಶ್ವದ ಮಾಲೀಕರಾಗುತ್ತೀರೆಂದರೆ ಬಹಳ
ಖುಷಿಯಿರಬೇಕು. ಬಾಬಾ, ನಾವು ತಮ್ಮಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೇವೆ.
ಸತ್ಯನಾರಾಯಣನ ಕಥೆಯನ್ನು ಕೇಳಿ ನಾವು ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮೀಯಾಗುತ್ತೇವೆಂದು
ಹೇಳುತ್ತೀರಿ. ನೀವೆಲ್ಲರೂ ಕೈಯೆತ್ತುತ್ತೀರಿ- ನಾವು ಸಂಪೂರ್ಣ ತೆಗೆದುಕೊಂಡೇ ತೋರಿಸುತ್ತೇವೆ,
ಇಲ್ಲದಿದ್ದರೆ ನಾವು ಕಲ್ಪ-ಕಲ್ಪಾಂತರ ಕಳೆದುಕೊಂಡುಬಿಡುತ್ತೇವೆ ಆದ್ದರಿಂದ ಯಾವುದೇ ವಿಘ್ನಬಂದರೂ
ಸಹ ನಾವು ಅದನ್ನು ಗೆಲ್ಲುತ್ತೇವೆ. ಇಷ್ಟು ಸಾಹಸವು ನಿಮ್ಮಲ್ಲಿರಬೇಕು. ನೀವು ಇಷ್ಟು ಸಾಹಸವನ್ನು
ತೋರಿಸಿದ್ದೀರಲ್ಲವೆ. ಯಾರಿಗೆ ಆಸ್ತಿಯು ಸಿಗುತ್ತದೆಯೋ ಅವರನ್ನೇಕೆ ಬಿಡುತ್ತೀರಿ! ಕೆಲವರಂತೂ
ಸ್ಥಿರವಾಗಿ ನಿಂತರು ಇನ್ನೂ ಕೆಲವರು ಹೊರಟುಹೋದರು. ಒಳ್ಳೊಳ್ಳೆಯ ಮಕ್ಕಳನ್ನೂ ಸಹ ಮಾಯೆಯು
ತಿಂದುಬಿಟ್ಟಿತು. ಮಾಯಾಹೆಬ್ಬಾವು ತಿಂದು ಎಲ್ಲವನ್ನೂ ನುಂಗಿಬಿಟ್ಟಿತು.
ಈಗ ತಂದೆಯು ತಿಳಿಸುತ್ತಾರೆ- ಹೇ ಆತ್ಮಗಳೇ, ಬಹಳ ಪ್ರೀತಿಯಿಂದ ತಿಳಿಸುತ್ತಾರೆ- ನಾನು
ಪತಿತಪ್ರಪಂಚದಲ್ಲಿ ಬಂದು ಇದನ್ನು ಪಾವನ ಪ್ರಪಂಚವನ್ನಾಗಿ ಮಾಡುತ್ತೇನೆ. ಈಗ ಪತಿತ ಪ್ರಪಂಚದ
ಮೃತ್ಯುವು ಸನ್ಮುಖದಲ್ಲಿ ನಿಂತಿದೆ. ನಾನೀಗ ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ. ಈಗ
ಪತಿತರಾಜರಿಗೂ ಸಹ ರಾಜರಾಗುವಿರಿ. ಸಿಂಗಲ್ ಕಿರೀಟಧಾರಿ ರಾಜರು ಡಬಲ್ ಕಿರೀಟಧಾರಿ ರಾಜರಿಗೆ ತಲೆಯೇಕೆ
ಬಾಗುತ್ತಾರೆ? ಏಕೆಂದರೆ ಅರ್ಧಕಲ್ಪದ ನಂತರ ಯಾವಾಗ ಇವರ ಪವಿತ್ರತೆಯು ಸಮಾಪ್ತಿಯಾಗುತ್ತದೆಯೋ ಆಗ
ರಾವಣರಾಜ್ಯದಲ್ಲಿ ಎಲ್ಲರೂ ವಿಕಾರಿಗಳು ಮತ್ತು ಪೂಜಾರಿಗಳಾಗುತ್ತಾರೆ ಆದ್ದರಿಂದ ತಂದೆಯು ಮಕ್ಕಳಿಗೆ
ತಿಳಿಸುತ್ತಾರೆ- ಮಕ್ಕಳೇ, ಯಾವುದೇ ತಪ್ಪನ್ನು ಮಾಡಬೇಡಿ, ಮರೆತುಹೋಗಬೇಡಿ. ಒಳ್ಳೆಯ ರೀತಿಯಲ್ಲಿ ಓದಿ.
ಪ್ರತಿನಿತ್ಯವೂ ಮುರುಳಿಯನ್ನು ಕೇಳಲು ಸಾಧ್ಯವಾಗದಿದ್ದರೆ ತಂದೆಯು ಎಲ್ಲಾ ಪ್ರಬಂಧಗಳನ್ನು
ಮಾಡುತ್ತಾರೆ. 7 ದಿನಗಳ ಕೋರ್ಸನ್ನು ತೆಗೆದುಕೊಳ್ಳಿ ಅದರಿಂದ ಮುರುಳಿಯನ್ನು ಸಹಜವಾಗಿ
ಅರ್ಥಮಾಡಿಕೊಳ್ಳಬಹುದು. ಎಲ್ಲಿಗೇ ಹೋದರೂ ಸಹ ಕೇವಲ ಎರಡು ಶಬ್ಧಗಳನ್ನು ನೆನಪು ಮಾಡಿ- ಇದು
ಮಹಾಮಂತ್ರವಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಯಾವುದೇ ವಿಕರ್ಮ
ಅಥವಾ ಪಾಪಕರ್ಮವು ದೇಹಾಭಿಮಾನದಲ್ಲಿ ಬರುವುದರಿಂದಲೇ ಆಗುತ್ತದೆ. ವಿಕರ್ಮಗಳಿಂದ ಪಾರಾಗಲು ಬುದ್ಧಿಯ
ಪ್ರೀತಿಯು ಒಬ್ಬ ತಂದೆಯೊಂದಿಗಿರಲಿ, ಯಾವುದೇ ದೇಹಧಾರಿಯೊಂದಿಗೆ ಅಲ್ಲ. ಒಬ್ಬ ತಂದೆಯ ಜೊತೆ
ಬುದ್ಧಿಯೋಗವಿರಲಿ. ಅಂತ್ಯದವರೆಗೂ ನೆನಪು ಮಾಡಬೇಕಾಗಿದೆ ಆಗ ಯಾವುದೇ ವಿಕರ್ಮವಾಗುವುದಿಲ್ಲ. ಇದಂತೂ
ಹಳೆಯದಾದ ದೇಹವಾಗಿದೆ. ಇದರ ಅಭಿಮಾನವನ್ನು ಬಿಟ್ಟುಬಿಡಿ. ನಾಟಕವು ಪೂರ್ಣವಾಗುತ್ತಿದೆ, ಈಗ ನಮ್ಮ
84 ಜನ್ಮಗಳು ಮುಕ್ತಾಯವಾಯಿತು. ಇದು ಹಳೆಯ ಆತ್ಮ, ಹಳೆಯ ಶರೀರವಾಗಿದೆ. ತಮೋಪ್ರಧಾನರಿಂದ
ಸತೋಪ್ರಧಾನರಾಗಬೇಕಾಗಿದೆ. ಆಗ ಶರೀರವೂ ಸಹ ಸತೋಪ್ರಧಾನವಾದದ್ದೇ ಸಿಗುತ್ತದೆ. ಆತ್ಮವನ್ನು
ಸತೋಪ್ರಧಾನ ಮಾಡಿಕೊಳ್ಳಬೇಕೆಂಬ ಚಿಂತನೆಯೇ ಇರಲಿ. ತಂದೆಯು ಇಷ್ಟನ್ನು ತಿಳಿಸುತ್ತಾರೆ- ಮಕ್ಕಳೇ,
ನನ್ನೊಬ್ಬನನ್ನೇ ನೆನಪು ಮಾಡಿ, ಇದೇ ಚಿಂತೆಯನ್ನಿಟ್ಟುಕೊಳ್ಳಿ- ಬಾಬಾ, ನಾವು ಉತ್ತೀರ್ಣರಾಗಿ
ತೋರಿಸುತ್ತೇವೆ ಎಂದು ನೀವೂ ಹೇಳುತ್ತೀರಲ್ಲವೆ. ನಿಮಗೆ ತಿಳಿದಿದೆ- ತರಗತಿಯಲ್ಲಿ ಎಲ್ಲರಿಗೂ
ಪ್ರಶಸ್ತಿಯು ಸಿಗುವುದಿಲ್ಲ. ಆದರೂ ಸಹ ಪುರುಷಾರ್ಥವನ್ನಂತೂ ಬಹಳ ಮಾಡುತ್ತಾರಲ್ಲವೆ. ಹಾಗೆಯೇ ನಾವು
ನರನಿಂದ ನಾರಾಯಣನಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕು. ಕಡಿಮೆಯೇಕೆ ಮಾಡುವುದು ಎಂದು ನೀವೂ ಸಹ
ತಿಳಿದುಕೊಳ್ಳುತ್ತೀರಿ. ಇಲ್ಲಿ ಯಾವುದೇ ಮಾತಿನ ಚಿಂತೆಯಿಲ್ಲ. ಯೋಧರೆಂದೂ ಚಿಂತೆ ಮಾಡುವುದಿಲ್ಲ.
ಬಾಬಾ ಬಹಳಷ್ಟು ಬಿರುಗಾಳಿಗಳು, ಸ್ವಪ್ನಗಳು ಇತ್ಯಾದಿ ಬರುತ್ತವೆಯೆಂದು ಕೆಲವರು ಹೇಳುತ್ತಾರೆ.
ಇದೆಲ್ಲವೂ ಆಗಿಯೇ ಆಗುವುದು. ನೀವು ಒಬ್ಬ ತಂದೆಯನ್ನು ನೆನಪು ಮಾಡುತ್ತಾ ಇರಿ. ನೀವು ಒಬ್ಬ
ಶತ್ರುವಿನ ಮೇಲೆ ಜಯಗಳಿಸಬೇಕಾಗಿದೆ. ಕೆಲವೊಮ್ಮೆ ಚಿತ್ತಮನಸ್ಸಿನಲ್ಲಿಯೂ ಇರದಂತಹ ಸ್ವಪ್ನಗಳು
ಬರುತ್ತವೆ. ಇದೆಲ್ಲವೂ ಮಾಯೆಯಾಗಿದೆ, ನಾವು ಮಾಯೆಯನ್ನು ಗೆಲ್ಲುತ್ತೇವೆ. ಅರ್ಧಕಲ್ಪಕ್ಕಾಗಿ
ಶತ್ರುವಿನಿಂದ ರಾಜ್ಯವನ್ನು ಪಡೆಯುತ್ತೇವೆ, ನಮಗೆ ಯಾವುದೇ ಚಿಂತೆಯಿಲ್ಲ. ಸಾಹಸವಂತರು ಎಂದೂ ಹಾ,
ಹ್ಞೂ ಎನ್ನುವುದಿಲ್ಲ. ಯುದ್ಧಕ್ಕೆ ಬಹಳ ಖುಷಿಯಿಂದ ಹೋಗುತ್ತಾರೆ, ನೀವಂತೂ ಇಲ್ಲಿ ಬಹಳ ಆರಾಮವಾಗಿ
ತಂದೆಯಿಂದ ಬಹಳ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಈ ಛೀ ಛೀ ಶರೀರದಿಂದ ನಾನು ನಿಮ್ಮನ್ನು
ಕರೆದುಕೊಂಡು ಹೋಗಲು ಬಂದಿದ್ದೇನೆ. ನನ್ನನ್ನು ನೆನಪು ಮಾಡಿದರೆ ಪಾವನರಾಗುತ್ತೀರಿ. ಅಪವಿತ್ರ
ಆತ್ಮವು ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇವು ಹೊಸಮಾತುಗಳಾಗಿವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1)
ವಿಕರ್ಮಗಳಿಂದ ಮುಕ್ತರಾಗಲು ಒಬ್ಬ ತಂದೆಯೊಂದಿಗೆ ಬುದ್ಧಿಯ ಪ್ರೀತಿಯನ್ನಿಡಬೇಕಾಗಿದೆ. ಈ
ಅರಿದುಹೋಗಿರುವ ದೇಹದ ಅಭಿಮಾನವನ್ನು ಬಿಟ್ಟುಬಿಡಬೇಕಾಗಿದೆ.
2) ನಾವು ಯೋಧರಾಗಿದ್ದೇವೆ,
ಈ ಸ್ಮೃತಿಯಿಂದ ಮಾಯಾರೂಪಿ ಶತ್ರುವಿನ ಮೇಲೆ ವಿಜಯವನ್ನು ಹೊಂದಬೇಕಾಗಿದೆ, ಅದರಬಗ್ಗೆ ಚಿಂತೆ
ಮಾಡಬಾರದು. ಮಾಯೆಯು ಗುಪ್ತ ರೂಪದಲ್ಲಿ ಪ್ರವೇಶ ಮಾಡುತ್ತದೆ ಆದ್ದರಿಂದ ಅದನ್ನು ಪರಿಶೀಲಿಸಬೇಕು
ಮತ್ತು ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ.
ವರದಾನ:
ಮನಸಾ-ವಾಚಾ
ಮತ್ತು ಕರ್ಮಣದ ಪವಿತ್ರತೆಯಲ್ಲಿ ಸಂಪೂರ್ಣ ಮಾಕ್ರ್ಸ್ ಪಡೆಯುವಂತಹವರು ನಂಬರ್ ಒನ್ ಆಜ್ಞಾಕಾರಿ ಭವ
ಮನಸಾ ಪವಿತ್ರತೆ ಅರ್ಥಾತ್
ಸಂಕಲ್ಪದಲ್ಲಿಯೂ ಸಹ ಅಪವಿತ್ರತೆಯ ಸಂಸ್ಕಾರ ಇಮರ್ಜ್ ಆಗಬಾರದು. ಸದಾ ಆತ್ಮೀಕ ಸ್ವರೂಪ ಅರ್ಥಾತ್
ಸಹೋದರ (ಭಾಯಿ-ಭಾಯಿಯ) ಶ್ರೇಷ್ಠ ಸ್ಮøತಿ ಇರಬೇಕು. ವಾಚಾದಲ್ಲಿ ಸದಾ ಸತ್ಯತೆ ಮತ್ತು ಮಧುರತೆ
ಇರಬೇಕು, ಕರ್ಮಣಾದಲ್ಲಿ ಸದಾ ನಮ್ರತೆ, ಸಂತುಷ್ಠತೆ ಮತ್ತು ಹರ್ಷಿತಮುಖತೆ ಇರಬೇಕು. ಇದರ ಆಧಾರದಮೇಲೆ
ನಂಬರ್ ದೊರಕುವುದು ಮತ್ತು ಈ ರೀತಿಯ ಸಂಪೂರ್ಣ ಪವಿತ್ರ ಆಜ್ಞಾಕಾರಿ ಮಕ್ಕಳ ಗುಣಗಾನವನ್ನು ತಂದೆಯೂ
ಸಹ ಮಾಡುತ್ತಾರೆ. ಅಂತಹವರೇ ತಮ್ಮ ಪ್ರತಿಯೊಂದು ಕರ್ಮದಿಂದ ತಂದೆಯ ಕರ್ತವ್ಯವನ್ನು ಸಿದ್ಧ
ಮಾಡುವಂತಹ ಸಮೀಪರತ್ನ ಆಗಿದ್ದಾರೆ.
ಸ್ಲೋಗನ್:
ಸಂಬಂಧ-ಸಂಪರ್ಕ
ಮತ್ತು ಸ್ಥಿತಿಯಲ್ಲಿ ಲೈಟ್ ಆಗಿ, ದಿನಚರ್ಯೆಯಲ್ಲಿ ಅಲ್ಲ.
ಅವ್ಯಕ್ತ ಸೂಚನೆಗಳು-
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಅಂತರ್ಮುಖಿ ಆತ್ಮ ಯಾವುದೇ
ಪರಿಸ್ಥಿತಿ ಇರಲಿ, ಒಳ್ಳೆಯದಾಗಿರಲಿ ಕೆಟ್ಟದಾಗಿರಲಿ. ಆದರೆ ಪ್ರತಿ ಸಮಯ, ಪ್ರತಿ ಪರಿಸ್ಥಿತಿಯಲ್ಲಿ
ತನ್ನನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತದೆ. ಒಬ್ಬಂಟಿ ಆಗಿರಲಿ ಅಥವಾ ಸಂಘಟನೆಯಲ್ಲಿ ಇರಲಿ,
ಎರಡರಲ್ಲಿಯೂ ಅಡ್ಜಸ್ಟ್ ಆಗುವುದು- ಇದು ಬ್ರಾಹ್ಮಣ ಜೀವನವಾಗಿದೆ.