16.08.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಅದ್ಭುತವಾದ ರಂಗು-ರಂಗಿನ ಪ್ರಪಂಚದ ಮಾಲೀಕರಾಗುವುದು ನಿಮ್ಮ ಲಕ್ಷ್ಯವಾಗಿದೆ, ಆದ್ದರಿಂದ ಸದಾ ಇದೇ ಖುಷಿಯಲ್ಲಿ ಹರ್ಷಿತವಾಗಿರಿ, ಬಾಡಿ ಹೋಗಬೇಡಿ”.

ಪ್ರಶ್ನೆ:
ಭಾಗ್ಯಶಾಲಿ ಮಕ್ಕಳಿಗೆ ಸದಾ ಯಾವ ಉಮ್ಮಂಗವಿರುವುದು?

ಉತ್ತರ:
ಬೇಹದ್ದಿನ ತಂದೆಯು ನಮ್ಮನ್ನು ಹೊಸ ಪ್ರಪಂಚದ ರಾಜಕುಮಾರ-ಕುಮಾರಿಯರನ್ನಾಗಿ ಮಾಡಲು ಓದಿಸುತ್ತಿದ್ದಾರೆ. ನೀವು ಇದೇ ಉಮ್ಮಂಗದಿಂದ ಎಲ್ಲರಿಗೆ ತಿಳಿಸಿಕೊಡಿ - ಈ ಯುದ್ಧದಲ್ಲಿ ಸ್ವರ್ಗವು ಸಮಾವೇಶವಾಗಿದೆ, ಈ ಯುದ್ಧದ ನಂತರ ಸ್ವರ್ಗದ ಬಾಗಿಲು ತೆರೆಯುವುದು - ಇದೇ ಖುಷಿಯಲ್ಲಿರಿ ಮತ್ತು ಖುಷಿ-ಖುಷಿಯಿಂದ ಅನ್ಯರಿಗೂ ತಿಳಿಸಿಕೊಡಿ.

ಗೀತೆ:
ಆ ಪ್ರಪಂಚವು ರಂಗು-ರಂಗಿನಿಂದ ಕೂಡಿದೆ ಬಾಬಾ....................

ಓಂ ಶಾಂತಿ.
ಪ್ರಪಂಚವು ರಂಗು-ರಂಗಿನಿಂದ ಕೂಡಿದೆ ಎಂದು ತಂದೆಗೆ ಯಾರು ಹೇಳಿದರು? ಇದರ ಅರ್ಥವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸಿದ್ದಾರೆ - ಈ ಆಟವು ರಂಗು-ರಂಗಿನಿಂದ ಕೂಡಿದೆ. ಹೇಗೆ ಯಾವುದೇ ಚಲನಚಿತ್ರವು ಬಹಳ ರಂಗು-ರಂಗಿನ ದೃಶ್ಯಗಳಿಂದ ಕೂಡಿರುತ್ತದೆಯಲ್ಲವೆ. ಈಗ ಈ ಬೇಹದ್ದಿನ ಪ್ರಪಂಚವನ್ನು ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ಮಕ್ಕಳಲ್ಲಿ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ನಿಮಗೆ ತಿಳಿದಿದೆ, ಸ್ವರ್ಗವು ಎಷ್ಟು ರಂಗು-ರಂಗಿನಿಂದ ಕೂಡಿದೆ! ಸುಂದರವಾಗಿದೆ! ಇದು ಯಾರಿಗೂ ತಿಳಿದಿಲ್ಲ. ಅದು ಸುಂದರವಾದ ರಂಗು-ರಂಗಿನ ಪ್ರಪಂಚವೆಂದು ಯಾರ ಬುದ್ಧಿಯಲ್ಲಿಯೂ ಇಲ್ಲ. ‘ವಂಡರ್ ಆಫ್ ದಿ ವರ್ಲ್ಡ್’ (ವಿಶ್ವದ ಅದ್ಭುತ) ಎಂದು ಗಾಯನವಿದೆ. ಇದನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ. ನೀವೇ ಅದ್ಭುತ ಪ್ರಪಂಚದಲ್ಲಿ ಹೋಗುವುದಕ್ಕಾಗಿ ತಮ್ಮ-ತಮ್ಮ ಅದೃಷ್ಟದನುಸಾರ ಪುರುಷಾರ್ಥ ಮಾಡುತ್ತಿದ್ದೀರಿ. ಲಕ್ಷ್ಯವಂತೂ ಇದೆ. ಅದು ಪ್ರಪಂಚದ ಅದ್ಭುತವಾಗಿದೆ, ಬಹಳ ರಂಗು-ರಂಗಿನ ಪ್ರಪಂಚವಾಗಿದೆ, ಅಲ್ಲಿ ವಜ್ರ ರತ್ನಗಳಿಂದ ಕೂಡಿದ ಮಹಲುಗಳಿರುತ್ತವೆ. ನೀವು ಒಂದು ಸೆಕೆಂಡಿನಲ್ಲಿ ಆ ಸುಂದರವಾದ ವೈಕುಂಠದಲ್ಲಿ ಹೋಗುತ್ತೀರಿ. ಆಟವಾಡುತ್ತೀರಿ, ರಾಸ ಲೀಲೆಗಳನ್ನು ಮಾಡುತ್ತೀರಿ, ಅವಶ್ಯವಾಗಿ ಸುಂದರವಾದ ಪ್ರಪಂಚವಿತ್ತಲ್ಲವೆ! ಇಲ್ಲಿ ಮಾಯೆಯ ರಾಜ್ಯವಾಗಿದೆ, ಇದೂ ಸಹ ಎಷ್ಟು ವಿಚಿತ್ರವಾಗಿದೆ. ಮನುಷ್ಯರು ಏನೇನು ಮಾಡುತ್ತಿರುತ್ತಾರೆ. ನಾವು ನಾಟಕದಲ್ಲಿ ಆಟವಾಡುತ್ತಿದ್ದೇವೆಂದು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಒಂದುವೇಳೆ ನಾಟಕವೆಂದು ತಿಳಿದಿದ್ದರೆ ನಾಟಕದ ಆದಿ-ಮಧ್ಯ-ಅಂತ್ಯದ ಜ್ಞಾನವೂ ಇರುತ್ತಿತ್ತು. ನೀವು ಮಕ್ಕಳಿಗೆ ತಿಳಿದಿದೆ - ತಂದೆಯು ಎಷ್ಟು ಸಾಧಾರಣವಾಗಿದ್ದಾರೆ, ತಂದೆಯ ನೆನಪನ್ನು ಮಾಯೆಯು ಮರೆಸಿ ಬಿಡುತ್ತದೆ, ಮೂಗನ್ನು ಹಿಡಿದು ಮರೆಸುತ್ತದೆ. ಈಗೀಗ ನೆನಪಿನಲ್ಲಿರುತ್ತಾರೆ, ಓಹೋ ಬಾಬಾ! ನಾವು ಆ ಅದ್ಭುತ ಸ್ವರ್ಗದ ಮಾಲೀಕರಾಗುತ್ತಿದ್ದೇವೆಂದು ಬಹಳ ಹರ್ಷಿತರಾಗುತ್ತಾರೆ ನಂತರ ಮರೆತು ಬಿಟ್ಟರೆ ಬಾಡಿ ಹೋಗುತ್ತಾರೆ. ಈ ರೀತಿ ಬಾಡಿ ಹೋಗುತ್ತಾರೆ, ಹೇಗೆ ಕಾಡು ಜನರೂ ಸಹ ಇಷ್ಟು ಬಾಡಿ ಹೋಗಿರುವುದಿಲ್ಲ. ನಾವು ಸ್ವರ್ಗದಲ್ಲಿ ಹೋಗುವವರಿದ್ದೇವೆ, ನಮಗೆ ಬೇಹದ್ದಿನ ತಂದೆಯು ಓದಿಸುತ್ತಿದ್ದಾರೆ ಎಂಬುದನ್ನು ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ. ಹೀಗೆ ಒಮ್ಮೆಲೆ ಶವದಂತಾಗಿ ಬಿಡುತ್ತಾರೆ. ಆ ಖುಷಿ-ನಶೆಯೇ ಇರುವುದಿಲ್ಲ. ಈಗ ಅದ್ಭುತ ಪ್ರಪಂಚವು ಸ್ಥಾಪನೆಯಾಗುತ್ತಿದೆ, ಆ ಪ್ರಪಂಚದ ರಾಜಕುಮಾರನು ಶ್ರೀಕೃಷ್ಣನಾಗಿದ್ದಾನೆ. ಕೃಷ್ಣ ಜನ್ಮಾಷ್ಟಮಿಯಲ್ಲಿ ಯಾರು ಜ್ಞಾನದಲ್ಲಿ ಬುದ್ಧಿವಂತರಿದ್ದಾರೆಯೋ ಅವರು ತಿಳಿಸಿಕೊಡುತ್ತಾರೆ. ಶ್ರೀಕೃಷ್ಣನು ಸುಂದರ ಸ್ವರ್ಗದ ರಾಜಕುಮಾರನಾಗಿದ್ದನು ಮತ್ತೆ ಆ ಸ್ವರ್ಗವು ಎಲ್ಲಿಗೆ ಹೋಯಿತು? ಸತ್ಯಯುಗದಿಂದ ಹಿಡಿದು ಹೇಗೆ ಕೆಳಗಿಳಿದಿರಿ, ಸತ್ಯಯುಗದಿಂದ ಕಲಿಯುಗವು ಹೇಗಾಯಿತು, ಇಳಿಯುವ ಕಲೆಯು ಹೇಗಾಯಿತು? ನೀವು ಮಕ್ಕಳ ಬುದ್ಧಿಯಲ್ಲಿಯೇ ಬರುತ್ತದೆ. ಅಂದಮೇಲೆ ಆ ಖುಷಿಯಿಂದ ತಿಳಿಸಿ ಕೊಡಬೇಕು - ಶ್ರೀಕೃಷ್ಣನು ಬರಲಿದ್ದಾನೆ, ಕೃಷ್ಣನ ರಾಜ್ಯವು ಪುನಃ ಸ್ಥಾಪನೆಯಾಗುತ್ತಿದೆ. ಇದನ್ನು ಕೇಳಿ ಭಾರತವಾಸಿಗಳಿಗೂ ಸಹ ಬಹಳ ಖುಷಿಯಾಗಲಿ ಆದರೆ ಈ ಉಮ್ಮಂಗವು ಅದೃಷ್ಟವಂತ ಮಕ್ಕಳಿಗೇ ಇರುವುದು. ಪ್ರಪಂಚದ ಮನುಷ್ಯರಂತೂ ರತ್ನಗಳನ್ನೂ ಸಹ ಕಲ್ಲುಗಳೆಂದು ತಿಳಿದು ಎಸೆಯುತ್ತಾರೆ. ಇವು ಅವಿನಾಶಿ ಜ್ಞಾನರತ್ನಗಳಲ್ಲವೆ. ಈ ಜ್ಞಾನರತ್ನಗಳ ಸಾಗರನು ತಂದೆಯಾಗಿದ್ದಾರೆ. ಈ ರತ್ನಗಳಿಗೆ ಬಹಳ ಬೆಲೆಯಿದೆ ಅಂದಮೇಲೆ ಈ ಜ್ಞಾನರತ್ನಗಳನ್ನು ಮಕ್ಕಳು ಧಾರಣೆ ಮಾಡಬೇಕಾಗಿದೆ. ಈಗ ನೀವು ಜ್ಞಾನ ಸಾಗರನಿಂದ ಡೈರೆಕ್ಟ್ ಕೇಳುತ್ತೀರಿ ಆದ್ದರಿಂದ ಮತ್ತೇನೂ ಕೇಳುವ ಅವಶ್ಯಕತೆಯಿರುವುದಿಲ್ಲ. ಸತ್ಯಯುಗದಲ್ಲಿ ಇದೇನೂ ಇರುವುದಿಲ್ಲ ಅಲ್ಲಿ ಎಲ್.ಎಲ್.ಬಿ., ಅಥವಾ ಸರ್ಜನ್ ಆಗಬೇಕಾಗಿಲ್ಲ. ಅಲ್ಲಿ ಈ ಜ್ಞಾನವೇ ಇರುವುದಿಲ್ಲ. ನೀವು ಇಲ್ಲಿನ ಪ್ರಾಲಬ್ಧವನ್ನು ಅಲ್ಲಿ ಭೋಗಿಸುತ್ತೀರಿ ಅಂದಾಗ ಜನ್ಮಾಷ್ಟಮಿಯೆಂದು ಮಕ್ಕಳು ಚೆನ್ನಾಗಿ ತಿಳಿಸಿ ಕೊಡಬೇಕು. ಇದರ ಬಗ್ಗೆ ಅನೇಕ ಬಾರಿ ಮುರುಳಿಯನ್ನು ತಿಳಿಸಿದ್ದೇವೆ. ಮಕ್ಕಳು ವಿಚಾರಸಾಗರ ಮಂಥನ ಮಾಡಬೇಕಾಗಿದೆ. ಆಗಲೇ ಅನೇಕ ವಿಚಾರಗಳು ಬರುವುದು. ಭಾಷಣ ಮಾಡಬೇಕೆಂದರೆ ಮುಂಜಾನೆಯೆದ್ದು ಬರೆಯಬೇಕು ಮತ್ತೆ ಅದನ್ನು ಓದಬೇಕು. ಮರೆತಿರುವ ವಿಚಾರಗಳನ್ನು ಮತ್ತೆ ಸೇರಿಸಬೇಕು, ಇದರಿಂದ ಚೆನ್ನಾಗಿ ಧಾರಣೆಯಾಗುವುದು. ಆದರೂ ಸಹ ಬರವಣಿಗೆಯಂತೆ ಹೇಳಲು ಸಾಧ್ಯವಿಲ್ಲ. ಒಂದಲ್ಲಒಂದು ಅಂಶಗಳು ಮರೆತು ಹೋಗುತ್ತವೆ ಅಂದಾಗ ಶ್ರೀಕೃಷ್ಣ ಯಾರು ಎಂಬುದನ್ನು ತಿಳಿಸಬೇಕಾಗಿದೆ. ಶ್ರೀಕೃಷ್ಣನು ಅದ್ಭುತ ಸ್ವರ್ಗದ ಮಾಲೀಕನಾಗಿದ್ದನು, ಭಾರತವೇ ಸ್ವರ್ಗವಾಗಿತ್ತು. ಆ ಸ್ವರ್ಗಕ್ಕೆ ಶ್ರೀಕೃಷ್ಣನು ಮಾಲೀಕನಾಗುತ್ತಾನೆ. ನಾವು ತಮಗೆ ಸಂದೇಶವನ್ನು ತಿಳಿಸುತ್ತೇವೆ - ಶ್ರೀಕೃಷ್ಣನು ಬರಲಿದ್ದಾನೆ, ರಾಜಯೋಗವನ್ನು ಭಗವಂತನೇ ಕಲಿಸುತ್ತಾರೆ, ಈಗಲೇ ಕಲಿಸುತ್ತಿದ್ದಾರೆ. ಡಬಲ್ ಕಿರೀಟಧಾರಿ ದೇವತೆಗಳನ್ನಾಗಿ ಮಾಡಲು ಪವಿತ್ರತೆಗಾಗಿ ಪುರುಷಾರ್ಥ ಮಾಡಿಸುತ್ತಿದ್ದಾರೆ. ಮಕ್ಕಳಿಗೆ ಇದೆಲ್ಲವೂ ಸ್ಮೃತಿಗೆ ಬರಬೇಕಾಗಿದೆ. ಯಾರಿಗೆ ಅಭ್ಯಾಸವಿದೆಯೋ ಅವರು ಚೆನ್ನಾಗಿ ತಿಳಿಸಿಕೊಡುತ್ತಾರೆ. ಕೃಷ್ಣನ ಚಿತ್ರದಲ್ಲಿಯೂ ಬಹಳ ಒಳ್ಳೆಯ ಬರವಣಿಗೆಯಿದೆ. ಈ ಯುದ್ಧದ ನಂತರ ಸ್ವರ್ಗದ ಬಾಗಿಲು ತೆರೆಯುವುದು, ಈ ಯುದ್ಧದಲ್ಲಿ ಸ್ವರ್ಗವು ಸಮಾವೇಶವಾಗಿದೆ. ನೀವು ಮಕ್ಕಳಿಗೂ ಸಹ ಬಹಳ ಖುಷಿಯಿರಬೇಕು. ಜನ್ಮಾಷ್ಟಮಿಯಂದು ಮನುಷ್ಯರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಆದರೆ ನೀವು ತಿಳಿದುಕೊಂಡಿದ್ದೀರಿ - ನಾವೀಗ ಈ ಹಳೆಯ ಶರೀರವನ್ನು ಬಿಟ್ಟು ನಂತರ ಹೊಸ ಕಂಚನ ಕಾಯವನ್ನು ತೆಗೆದುಕೊಳ್ಳುತ್ತೇವೆ. ಕಂಚನ ಕಾಯವೆಂದು ಹೇಳುತ್ತಾರಲ್ಲವೆ ಅರ್ಥಾತ್ ಚಿನ್ನದ ಸಮಾನ ಶರೀರ. ಆತ್ಮವೂ ಪವಿತ್ರ, ಶರೀರವೂ ಪವಿತ್ರ. ಈ ಶರೀರವು ಕಂಚನವಾಗಿಲ್ಲ, ನಂಬರ್ವಾರ್ ಆಗುತ್ತಿದೆ. ನೆನಪಿನ ಯಾತ್ರೆಯಿಂದಲೇ ಕಂಚನ ಕಾಯವಾಗುವುದು. ತಂದೆಗೆ ತಿಳಿದಿದೆ – ಬಹಳ ಮಂದಿ ಮಕ್ಕಳಿಗೆ ನೆನಪು ಮಾಡುವಷ್ಟೂ ಬುದ್ಧಿಯಿಲ್ಲ. ನೆನಪಿನಲ್ಲಿ ಪರಿಶ್ರಮ ಪಟ್ಟಾಗಲೇ ಮಾತಿನಲ್ಲಿ ಶಕ್ತಿ ಬರುವುದು. ಈಗ ಆ ಶಕ್ತಿಯೆಲ್ಲಿದೆ? ಯೋಗವೇ ಇಲ್ಲ. ಲಕ್ಷ್ಮೀ-ನಾರಾಯಣರಾಗುವ ಲಕ್ಷಣವೂ ಬೇಕಲ್ಲವೆ. ವಿದ್ಯಾಭ್ಯಾಸವು ಬೇಕು, ಕೃಷ್ಣ ಜನ್ಮಾಷ್ಟಮಿಯಂದು ಬಹಳ ಸಹಜವಾಗಿ ತಿಳಿಸಿಕೊಡಬಹುದಾಗಿದೆ. ಕೃಷ್ಣನಿಗೆ ಶ್ಯಾಮ ಸುಂದರನೆಂದು ಹೇಳುತ್ತಾರೆ. ಕೃಷ್ಣ, ರಾಮ, ನಾರಾಯಣನನ್ನೂ ಸಹ ಕಪ್ಪಾಗಿ ತೋರಿಸಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನ ಮಕ್ಕಳು ಯಾರು ಮೊದಲು ಜ್ಞಾನ ಚಿತೆಯನ್ನೇರಿ ಸ್ವರ್ಗದ ಮಾಲೀಕರಾದರು, ಮತ್ತೆ ಅವರು ಎಲ್ಲಿ ಹೋದರು! ಕಾಮ ಚಿತೆಯ ಮೇಲೆ ಕುಳಿತು ನಂಬರ್ವಾರ್ ಇಳಿಯುತ್ತಾ ಬಂದರು. ಸೃಷ್ಟಿಯು ಸತೋಪ್ರಧಾನದಿಂದ ಸತೋ, ರಜೋ, ತಮೋ ಆಗುತ್ತದೆ ಹಾಗೆಯೇ ಮನುಷ್ಯರ ಸ್ಥಿತಿಯು ಬದಲಾಗುತ್ತದೆ. ಕಾಮ ಚಿತೆಯ ಮೇಲೆ ಕುಳಿತು ಎಲ್ಲರೂ ಶ್ಯಾಮ ಅರ್ಥಾತ್ ಕಪ್ಪಾಗಿ ಬಿಟ್ಟಿದ್ದಾರೆ. ಈಗ ನಾನು ಪುನಃ ಸುಂದರರನ್ನಾಗಿ ಮಾಡಲು ಬಂದಿದ್ದೇನೆ. ಆತ್ಮವನ್ನೇ ಸುಂದರವನ್ನಾಗಿ ಮಾಡುತ್ತೇನೆ. ಮನಸಾ-ವಾಚಾ-ಕರ್ಮಣಾ ಇವರು ಹೇಗೆ ನಡೆಯುತ್ತಾರೆಂಬುದನ್ನು ತಂದೆಯು ಪ್ರತಿಯೊಬ್ಬರ ಚಲನೆಯಿಂದಲೇ ಅರ್ಥ ಮಾಡಿಕೊಳ್ಳುತ್ತಾರೆ. ಹೇಗೆ ಕರ್ಮವನ್ನು ಮಾಡುತ್ತಾರೆಂಬುದೂ ಸಹ ಅರ್ಥವಾಗುತ್ತದೆ ಅಂದಾಗ ಮಕ್ಕಳ ಚಲನೆಯು ಬಹಳ ಘನತೆಯಿಂದ ಕೂಡಿರಬೇಕು. ಬಾಯಿಂದ ಸದಾ ರತ್ನಗಳೇ ಹೊರಬರಲಿ. ಕೃಷ್ಣ ಜಯಂತಿಯಂದ ಬಹಳ ಚೆನ್ನಾಗಿ ತಿಳಿಸಿಕೊಡಬೇಕಾಗಿದೆ. ಶ್ಯಾಮ ಮತ್ತು ಸುಂದರ ಎಂಬ ಟಾಪಿಕ್ ಇರಲಿ. ಕೃಷ್ಣನನ್ನು, ನಾರಾಯಣನನ್ನು ಮತ್ತು ರಾಧೆಯನ್ನೂ ಸಹ ಏಕೆ ಕಪ್ಪಾಗಿ ತೋರಿಸುತ್ತಾರೆ? ಶಿವ ಲಿಂಗವನ್ನೂ ಕಪ್ಪು ಕಲ್ಲಿನಿಂದ ಮಾಡಿಡುತ್ತಾರೆ? ವಾಸ್ತವದಲ್ಲಿ ಶಿವಲಿಂಗವು ಕಪ್ಪಾಗಿಲ್ಲ. ಶಿವನೆಂದರೆ ಯಾರು! ಆದರೆ ಹೇಗೆ ತೋರಿಸುತ್ತಾರೆ. ಈ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಎಕೆ ಕಪ್ಪಾಗಿ ತೋರಿಸುತ್ತಾರೆ ಎಂಬುದರ ಮೇಲೂ ಸಹ ನೀವು ತಿಳಿಸಿಕೊಡಿ. ಈಗ ಮಕ್ಕಳು ಎಂತಹ ಸರ್ವೀಸ್ ಮಾಡುತ್ತೀರೆಂಬುದನ್ನು ನೋಡುತ್ತೇವೆ. ಈ ಜ್ಞಾನವು ಎಲ್ಲಾ ಧರ್ಮದವರಿಗಾಗಿ ಇದೆ ಆದ್ದರಿಂದ ಅವರಿಗೂ ತಿಳಿಸಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗುತ್ತದೆ, ಜೊತೆ ಜೊತೆಗೆ ಪವಿತ್ರರಾಗಬೇಕಾಗಿದೆ. ನೀವು ಯಾರಿಗೆ ಬೇಕಾದರೂ ಶ್ರೀ ರಕ್ಷೆಯನ್ನು ಕಟ್ಟಬಹುದು. ಯುರೋಪಿಯನ್ನರಿಗೂ ಕಟ್ಟಬಹುದಾಗಿದೆ. ಯಾರೇ ಇರಲಿ, ಅವರಿಗೆ ತಿಳಿಸಿಕೊಡಿ - ಭಗವಾನುವಾಚ, ಅವಶ್ಯವಾಗಿ ಯಾರದೋ ತನುವಿನಿಂದ ಹೇಳುತ್ತಾರಲ್ಲವೆ. ನನ್ನೊಬ್ಬನನ್ನೇ ನೆನಪು ಮಾಡಿ, ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ. ತಂದೆಯು ಎಷ್ಟೊಂದು ತಿಳಿಸುತ್ತಾರೆ ಆದರೂ ತಿಳಿದುಕೊಳ್ಳುವುದಿಲ್ಲ. ಆಗ ಇವರ ಅದೃಷ್ಟದಲ್ಲಿಲ್ಲವೆಂದು ತಿಳಿಯುತ್ತಾರೆ. ಇದಂತೂ ತಿಳಿದಿರಬಹುದು – ಶಿವ ತಂದೆಯು ಓದಿಸುತ್ತಾರೆ, ರಥವಿಲ್ಲದೇ ಓದಿಸಲು ಸಾಧ್ಯವಿಲ್ಲ. ಕೆಲವು ಮಕ್ಕಳಿಗೆ ತಿಳಿಸಿಕೊಡುವ ಅಭ್ಯಾಸವು ಚೆನ್ನಾಗಿದೆ. ಮಮ್ಮಾ-ಬಾಬಾರವರೂ ಸಹ ಅವರು ಶ್ರೇಷ್ಠ ಪದವಿ ಪಡೆಯುವರೆಂದು ತಿಳಿದುಕೊಳ್ಳುತ್ತೀರಿ. ಆದರೂ ಸಹ ಸರ್ವೀಸ್ ಮಾಡುತ್ತಿದ್ದರಲ್ಲವೆ. ಮಾಯೆಯ ಅನೇಕ ಪ್ರಕಾರದ ರೂಪಗಳಿವೆ. ನನ್ನಲ್ಲಿ ಮಮ್ಮಾ ಬರುತ್ತಾರೆ, ಶಿವ ತಂದೆಯು ಬರುತ್ತಾರೆಂದು ಅನೇಕರು ಹೇಳುತ್ತಾರೆ ಆದರೆ ಹೊಸ-ಹೊಸ ವಿಚಾರಗಳನ್ನು ತಂದೆಯು ನಿಶ್ಚಿತ ತನುವಿನ ಮೂಲಕ ತಿಳಿಸುತ್ತಾರೆಯೇ ಹೊರತು ಬೇರೆ ಯಾರ ಮೂಲಕವಾದರೂ ತಿಳಿಸುವರೇ? ಇದು ಸಾಧ್ಯವೇ ಇಲ್ಲ. ಕೆಲವು ಮಕ್ಕಳು ತಮ್ಮ ವಿಚಾರಗಳನ್ನು ಬಹಳಷ್ಟು ತಿಳಿಸುತ್ತಾರೆ. ಮ್ಯಾಗಜೈನ್ನಲ್ಲಿ ಎಷ್ಟೊಂದು ಮಾತುಗಳು ಬರುತ್ತವೆ ಹಾಗೆಂದು ಹೇಳಿ ಅವರಲ್ಲಿ ಮಮ್ಮಾ-ಬಾಬಾ ಬರುತ್ತಾರೆ, ಅವರೇ ಬರೆಸುತ್ತಾರೆಂದಲ್ಲ. ತಂದೆಯು ಇಲ್ಲಿ (ಮಧುಬನ) ಸನ್ಮುಖದಲ್ಲಿ ಬರುತ್ತಾರೆ ಆದ್ದರಿಂದಲೇ ಮುರುಳಿಯನ್ನು ಕೇಳುವುದಕ್ಕಾಗಿ ಮಧುಬನಕ್ಕೆ ಬರುತ್ತೀರಿ. ಒಂದುವೇಳೆ ಯಾರಲ್ಲಾದರೂ ಮಮ್ಮಾ-ಬಾಬಾ ಬರುವಂತಿದ್ದರೆ ಮತ್ತೆ ಅಲ್ಲಿಯೇ ಕುಳಿತು ಅವರಿಂದಲೇ ಓದಬೇಕಿತ್ತಲ್ಲವೆ ಆದರೆ ಮಧುಬನಕ್ಕೆ ಬರಲು ಎಲ್ಲರಿಗೂ ಇಷ್ಟವಾಗುತ್ತದೆ. ದೂರ ಇರುವವರಿಗಂತೂ ಇನ್ನೂ ಹೆಚ್ಚು ಆಕರ್ಷಣೆಯಾಗುತ್ತದೆ ಅಂದಾಗ ಮಕ್ಕಳು ಜನ್ಮಾಷ್ಟಮಿಯಂದು ಬಹಳಷ್ಟು ಸರ್ವೀಸ್ ಮಾಡಬಹುದಾಗಿದೆ. ಕೃಷ್ಣನ ಜನ್ಮವು ಯಾವಾಗ ಆಯಿತೆಂಬುದು ಯಾರಿಗೂ ತಿಳಿದಿಲ್ಲ. ಈಗ ನಿಮ್ಮ ಜೋಳಿಗೆಯು ತುಂಬುತ್ತಿದೆ ಅಂದಮೇಲೆ ಖುಷಿಯಿರಬೇಕು ಆದರೆ ತಂದೆಯು ನೋಡುತ್ತಾರೆ - ಕೆಲಕೆಲವು ಮಕ್ಕಳಲ್ಲಿ ಖುಷಿಯೇ ಕಾಣುವುದಿಲ್ಲ. ಹೇಗೆ ಪ್ರತಿಜ್ಞೆ ಮಾಡಿದ್ದಾರೇನೋ ಎಂಬಂತೆ ಶ್ರೀಮತದಂತೆ ನಡೆಯುವುದೇ ಇಲ್ಲ. ಸೇವಾಧಾರಿ ಮಕ್ಕಳಿಗಂತೂ ಎಲ್ಲಿ ನೋಡಿದರಲ್ಲಿ ಸೇವೆಯೇ ಸೇವೆಯು ತೋಚುತ್ತಿರುತ್ತದೆ ಏಕೆಂದರೆ ತಂದೆಯ ಸೇವೆ ಮಾಡಲಿಲ್ಲ, ಯಾರಿಗೂ ಮಾರ್ಗವನ್ನು ತಿಳಿಸಲಿಲ್ಲವೆಂದರೆ ನಾವು ಕುರುಡರಿದ್ದಂತೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಇದು ತಿಳಿದುಕೊಳ್ಳುವ ಮಾತಲ್ಲವೆ. ಹೇಗೆ ಬ್ಯಾಡ್ಜ್ನಲ್ಲಿ ಕೃಷ್ಣನ ಚಿತ್ರವಿದೆ, ಇದರ ಮೇಲೂ ನೀವು ತಿಳಿಸಬಹುದು. ಯಾರೊಂದಿಗಾದರೂ ದೇವತೆಗಳನ್ನು ಏಕೆ ಕಪ್ಪಾಗಿ ತೋರಿಸಿದ್ದಾರೆಂದು ಪ್ರಶ್ನೆ ಮಾಡಿದರೆ ಅವರು ತಿಳಿಸಲು ಸಾಧ್ಯವಿಲ್ಲ. ರಾಮನ ಸ್ತ್ರೀಯನ್ನು ರಾವಣನು ಅಪಹರಿಸಿಕೊಂಡು ಹೋದನೆಂದು ಶಾಸ್ತ್ರಗಳಲ್ಲಿ ಬರೆದಿದ್ದಾರೆ ಆದರೆ ಈ ರೀತಿಯ ಮಾತು ಅಲ್ಲಿರುವುದಿಲ್ಲ.

ನೀವು ಭಾರತವಾಸಿಗಳು ಸ್ವರ್ಗವಾಸಿಗಳಾಗಿದ್ದಿರಿ, ಈಗ ನರಕವಾಸಿಗಳಾಗಿದ್ದೀರಿ ಮತ್ತೆ ಜ್ಞಾನ ಚಿತೆಯ ಮೇಲೆ ಕುಳಿತು ದೈವೀ ಗುಣಗಳನ್ನು ಧಾರಣೆ ಮಾಡಿಕೊಂಡು ಸ್ವರ್ಗವಾಸಿಗಳಾಗುತ್ತೀರಿ. ಮಕ್ಕಳು ಸರ್ವೀಸ್ ಮಾಡಬೇಕು, ಎಲ್ಲರಿಗೆ ಸಂದೇಶವನ್ನು ಕೊಡಬೇಕಾಗಿದೆ. ಇದರಲ್ಲಿ ಬಹಳ ಬುದ್ಧಿವಂತಿಕೆ ಬೇಕು. ಇಷ್ಟು ನಶೆಯಿರಲಿ - ನಮಗೆ ಭಗವಂತನೇ ಓದಿಸುತ್ತಾರೆ, ಭಗವಂತನ ಜೊತೆಯಿರುತ್ತೇವೆ. ಭಗವಂತನ ಮಕ್ಕಳೂ ಆಗಿದ್ದೇವೆ ಮತ್ತೆ ಅವರಿಂದಲೇ ಓದುತ್ತೇವೆ. ಹೇಗೆ ಬೋರ್ಡಿಂಗ್ ಶಾಲೆಯಲ್ಲಿದ್ದರೆ ಅವರಿಗೆ ಹೊರಗಿನ ಸಂಘದ ಪ್ರಭಾವವು ಬೀರುವುದಿಲ್ಲ. ಇಲ್ಲಿಯೂ ಶಾಲೆಯಿದೆಯಲ್ಲವೆ, ಕ್ರಿಶ್ಚಿಯನ್ನರಲ್ಲಿಯಾದರೂ ಒಳ್ಳೆಯ ನಡವಳಿಕೆಯಿರುತ್ತದೆ, ಈಗಂತೂ ಒಳ್ಳೆಯ ನಡತೆಯೂ ಇಲ್ಲ, ತಮೋಪ್ರಧಾನ-ಪತಿತರಾಗಿದ್ದಾರೆ. ದೇವತೆಗಳ ಮುಂದೆ ಹೋಗಿ ತಲೆ ಬಾಗುತ್ತಾರೆ. ಅವರ ಮಹಿಮೆ ಎಷ್ಟೊಂದಿದೆ! ಸತ್ಯಯುಗದಲ್ಲಿ ಎಲ್ಲರ ನಡವಳಿಕೆಯು ದೈವೀ ನಡವಳಿಕೆಯಾಗಿತ್ತು, ಈಗ ಆಸುರೀ ನಡವಳಿಕೆಯಾಗಿದೆ. ಹೀಗೆ ನೀವು ಭಾಷಣ ಮಾಡಿದರೆ ಕೇಳಿ ಬಹಳ ಖುಷಿ ಪಡುತ್ತಾರೆ. ಹೇಗೆ ಚಿಕ್ಕ ಬಾಯಿ ದೊಡ್ಡ ಮಾತೆಂದು ಕೃಷ್ಣನಿಗೆ ಹೇಳುತ್ತಾರೆ. ನೀವೀಗ ದೊಡ್ಡವರಾಗಲು ಎಷ್ಟು ದೊಡ್ಡ ಮಾತುಗಳನ್ನು ಕೇಳುತ್ತೀರಿ! ನೀವು ಶ್ರೀರಕ್ಷೆಯನ್ನು ಯಾರಿಗೆ ಬೇಕಾದರೂ ಕಟ್ಟಬಹುದು. ತಂದೆಯ ಈ ಸಂದೇಶವನ್ನು ಎಲ್ಲರಿಗೂ ಕೊಡಬೇಕಾಗಿದೆ. ಈ ಯುದ್ಧವು ಸ್ವರ್ಗದ ಬಾಗಿಲನ್ನು ತೆರೆಸುತ್ತದೆ, ಈಗ ಪತಿತರಿಂದ ಪಾವನರಾಗಬೇಕು, ತಂದೆಯನ್ನು ನೆನಪು ಮಾಡಬೇಕಾಗಿದೆ. ದೇಹಧಾರಿಗಳನ್ನು ನೆನಪು ಮಾಡಬೇಡಿ. ತಂದೆಯೊಬ್ಬರೇ ಸರ್ವರ ಸದ್ಗತಿ ಮಾಡುತ್ತಾರೆ. ಈ ಪ್ರಪಂಚವೇ ಕಬ್ಬಿಣದ ಸಮಾನವಾಗಿದೆ. ನೀವು ಮಕ್ಕಳ ಬುದ್ಧಿಯಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ಧಾರಣೆಯಾಗುತ್ತದೆ. ಶಾಲೆಯಲ್ಲಿಯೂ ವಿದ್ಯಾರ್ಥಿ ವೇತನವನ್ನು ಪಡೆಯಲು ಬಹಳ ಪರಿಶ್ರಮ ಪಡುತ್ತಾರೆ, ಹಾಗೆಯೇ ಇಲ್ಲಿ ಎಷ್ಟು ದೊಡ್ಡ ವಿದ್ಯಾರ್ಥಿ ವೇತನವು ಸಿಗುತ್ತದೆ. ಸೇವೆಯು ಬಹಳಷ್ಟಿದೆ. ಎಲ್ಲಾ ಚಿತ್ರಗಳನ್ನು ತೆಗೆದುಕೊಂಡು ಹೋಗಿ ಮಾತೆಯರೂ ಸಹ ಬಹಳ ಸರ್ವೀಸ್ ಮಾಡಬಹುದು. ಕೃಷ್ಣ, ನಾರಾಯಣ, ರಾಮಚಂದ್ರ, ಶಿವ ಎಲ್ಲರ ಕಪ್ಪಾಗಿ ತೋರಿಸಿರುವ ಚಿತ್ರಗಳನ್ನು ತೋರಿಸಿ, ತಿಳಿಸಿಕೊಡಿ - ದೇವತೆಗಳನ್ನು ಏಕೆ ಕಪ್ಪಾಗಿ ತೋರಿಸಿದ್ದಾರೆ? ಶ್ಯಾಮ ಸುಂದರ, ಶ್ರೀನಾಥ ದ್ವಾರದಲ್ಲಿ ಹೋದರೆ ಬಹಳ ಕಪ್ಪು ಚಿತ್ರಗಳನ್ನು ತೋರಿಸಿದ್ದಾರೆ. ಇಂತಹ ಚಿತ್ರಗಳನ್ನು ಸಂಗ್ರಹಿಸಬೇಕು ಮತ್ತು ತಮ್ಮ ಬಳಿಯಿರುವ ಚಿತ್ರಗಳನ್ನು ತೋರಿಸಿ. ಶ್ಯಾಮ ಸುಂದರ ಎಂಬ ಅರ್ಥವನ್ನು ಹೇಳಿ ತಿಳಿಸಿರಿ - ಈಗ ನೀವೂ ಸಹ ಶ್ರೀ ರಕ್ಷೆಯನ್ನು ಕಟ್ಟಿಕೊಂಡು ಕಾಮ ಚಿತೆಯಿಂದ ಇಳಿದು ಜ್ಞಾನ ಚಿತೆಯ ಮೇಲೆ ಕುಳಿತುಕೊಂಡರೆ ಸುಂದರರಾಗುತ್ತೀರಿ. ಇಲ್ಲಿಯೂ ಸಹ ನೀವು ಬಹಳಷ್ಟು ಸರ್ವೀಸ್ ಮಾಡಬಹುದು. ಇದರ ಬಗ್ಗೆ ಬಹಳ ಚೆನ್ನಾಗಿ ಭಾಷಣ ಮಾಡಿರಿ, ಈ ದೇವತೆಗಳನ್ನು ಏಕೆ ಕಪ್ಪಾಗಿ ತೋರಿಸಿದ್ದಾರೆ? ಶಿವಲಿಂಗವನ್ನೂ ಸಹ ಏಕೆ ಕಪ್ಪಾಗಿ ಮಾಡಿದ್ದಾರೆ? ಶ್ಯಾಮ ಮತ್ತು ಸುಂದರನೆಂದು ಏಕೆ ಹೇಳುತ್ತಾರೆ ಎಂಬುದನ್ನು ನಾವು ತಮಗೆ ತಿಳಿಸಿಕೊಡುತ್ತೇವೆ. ಹೀಗೆ ಹೇಳುವುದರಿಂದ ಯಾರಿಗೂ ಬೇಸರವಾಗುವುದಿಲ್ಲ. ವಾಸ್ತವದಲ್ಲಿ ಸರ್ವೀಸ್ ಬಹಳ ಸಹಜವಾಗಿದೆ. ತಂದೆಯು ಯಾವಾಗಲೂ ತಿಳಿಸುತ್ತಾ ಇರುತ್ತಾರೆ - ಮಕ್ಕಳೇ, ಒಳ್ಳೆಯ ಗುಣಗಳನ್ನು ಧಾರಣೆ ಮಾಡಿಕೊಳ್ಳಿ. ಕುಲದ ಹೆಸರನ್ನು ಪ್ರಸಿದ್ಧ ಮಾಡಿ. ನಿಮಗೆ ತಿಳಿದಿದೆ - ನಾವೀಗ ಶ್ರೇಷ್ಠಾತಿ ಶ್ರೇಷ್ಠ ಬ್ರಾಹ್ಮಣ ಕುಲದವರಾಗಿದ್ದೇವೆ. ರಕ್ಷಾಬಂಧನದ ಅರ್ಥವನ್ನು ನೀವು ಬಹಳ ಚೆನ್ನಾಗಿ ತಿಳಿಸಿಕೊಡಿ. ವೇಶ್ಯೆಯರಿಗೂ ಸಹ ಇದನ್ನು ತಿಳಿಸಿ ಶ್ರೀರಕ್ಷೆಯನ್ನು ಕಟ್ಟಿರಿ, ಚಿತ್ರಗಳೂ ಜೊತೆಯಿರಲಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ಈ ಆದೇಶವನ್ನು ಪಾಲಿಸಿದರೆ ನೀವು ಸುಂದರರಾಗಿ ಬಿಡುತ್ತೀರಿ. ಬಹಳಷ್ಟು ಯುಕ್ತಿಗಳಿವೆ. ಯಾರೂ ಇದರಲ್ಲಿ ಬೇಸರವಾಗುವುದಿಲ್ಲ. ಒಬ್ಬ ತಂದೆಯ ವಿನಃ ಯಾವುದೇ ಮನುಷ್ಯ ಮಾತ್ರರು ಸದ್ಗತಿ ಮಾಡಲು ಸಾಧ್ಯವಿಲ್ಲ. ಭಲೆ ರಕ್ಷಾಬಂಧನದ ದಿನವಲ್ಲದಿದ್ದರೂ ಸಹ ಯಾವಾಗ ಬೇಕಾದರೂ ನೀವು ಶ್ರೀ ರಕ್ಷೆಯನ್ನು ಕಟ್ಟಬಹುದು, ಇದಂತೂ ಕೇವಲ ಅರ್ಥವನ್ನು ತಿಳಿದುಕೊಳ್ಳಬೇಕಾಗಿದೆ. ಶ್ರೀ ರಕ್ಷೆಯನ್ನು ಯಾವಾಗ ಬೇಕಾದರೂ ಕಟ್ಟಬಹುದು. ನಿಮ್ಮ ಕರ್ತವ್ಯವೇ ಇದಾಗಿದೆ – ತಿಳಿಸಿ ಕೊಡಿ, ತಂದೆಯೊಂದಿಗೆ ಪ್ರತಿಜ್ಞೆ ಮಾಡಿರಿ. ನನ್ನೊಬ್ಬನನ್ನೇ ನೆನಪು ಮಾಡಿದರೆ ಪವಿತ್ರರಾಗುತ್ತೀರೆಂದು ತಂದೆಯು ತಿಳಿಸುತ್ತಾರೆ. ನೀವು ಮಸೀದಿಗೂ ಹೋಗಿ ತಿಳಿಸಬಹುದು - ನಾವು ಶ್ರೀ ರಕ್ಷೆಯನ್ನು ಕಟ್ಟಲು ಬಂದಿದ್ದೇವೆ. ಈ ಮಾತನ್ನು ತಿಳಿದುಕೊಳ್ಳಲು ನಿಮಗೂ ಸಹ ಹಕ್ಕಿದೆ. ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗುತ್ತೀರೆಂದು ತಂದೆಯು ತಿಳಿಸುತ್ತಾರೆ. ಈಗಂತೂ ಪತಿತ ಪ್ರಪಂಚವಲ್ಲ. ಖಂಡಿತವಾಗಿಯೂ ಸತ್ಯಯುಗವಿತ್ತು, ಈಗ ಕಲಿಯುಗವಾಗಿದೆ, ಅಂದಮೇಲೆ ನೀವು ಸತ್ಯಯುಗದಲ್ಲಿ ಭಗವಂತನ (ಖುದಾನ) ಬಳಿ ಹೋಗುವುದಿಲ್ಲವೆ? ಹೀಗೆ ತಿಳಿಸಿದಾಗ ಕೂಡಲೆ ಬಂದು ನಿಮ್ಮ ಚರಣಗಳಿಗೆ ಬೀಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಜ್ಞಾನ ರತ್ನಗಳ ಸಾಗರನಿಂದ ಯಾವ ಅವಿನಾಶಿ ಜ್ಞಾನ ರತ್ನಗಳು ಪ್ರಾಪ್ತಿಯಾಗುತ್ತಿವೆಯೋ ಅದರ ಪ್ರತಿ ಬೆಲೆಯನ್ನಿಡಬೇಕಾಗಿದೆ. ಮುಖದಿಂದ ಸದಾ ರತ್ನಗಳೇ ಹೊರ ಬರಬೇಕಾಗಿದೆ. ವಿಚಾರ ಸಾಗರ ಮಂಥನ ಮಾಡಿ ಸ್ವಯಂನಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ.

2. ನೆನಪಿನ ಯಾತ್ರೆಯಲ್ಲಿದ್ದು ವಾಣಿಯನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ನೆನಪಿನಿಂದಲೇ ಆತ್ಮವು ಕಂಚನವಾಗುವುದು ಆದ್ದರಿಂದ ನೆನಪು ಮಾಡುವ ಬುದ್ಧಿವಂತಿಕೆಯನ್ನು ಕಲಿಯಬೇಕಾಗಿದೆ.

ವರದಾನ:
ನನ್ನತನದ ಸೂಕ್ಷ್ಮ ಸ್ವರೂಪವನ್ನೂ ಸಹಾ ತ್ಯಾಗ ಮಾಡುವಂತಹ ಸದಾ ನಿರ್ಭಯ, ನಿಶ್ಚಿಂತ ಚಕ್ರವರ್ತಿ ಭವ.

ಇಂದಿನ ಜಗತ್ತಿನಲ್ಲಿ ಧನವೂ ಸಹ ಇದೆ ಮತ್ತು ಭಯವೂ ಸಹಾ ಇದೆ. ಎಷ್ಟು ಧನ ಅಷ್ಟು ಭಯದಲ್ಲಿಯೇ ತಿನ್ನುತ್ತಾರೆ, ಭಯದಲ್ಲಿಯೇ ಮಲಗುತ್ತಾರೆ, ಎಲ್ಲಿ ನನ್ನತನ ಇದೆ ಅಲ್ಲಿ ಖಂಡಿತ ಭಯ ಇರುವುದು. ಯಾವುದೇ ಚಿನ್ನದ ಜಿಂಕೆ ಒಂದುವೇಳೆ ನನ್ನದಾಗಿದ್ದರೆ ಭಯ ಇರುತ್ತೆ. ಆದರೆ ಒಂದುವೇಳೆ ನನ್ನವರು ಒಬ್ಬರೇ ಶಿವಬಾಬಾ ಇದ್ದಾಗ ನಿರ್ಭಯರಾಗಿ ಬಿಡುವಿರಿ. ಆದ್ದರಿಂದ ಸೂಕ್ಷ್ಮ ರೂಪದಿಂದ ಸಹಾ ನನ್ನದು-ನನ್ನದು ಎನ್ನುವುದನ್ನು ಚೆಕ್ ಮಾಡಿಕೊಂಡು ಅದರ ತ್ಯಾಗವನ್ನು ಮಾಡಿದಾಗ ನಿರ್ಭಯ, ನಿಶ್ಚಿಂತ ಚಕ್ರವರ್ತಿಯಾಗಿರುವ ವರದಾನ ಸಿಕ್ಕಿ ಬಿಡುವುದು.

ಸ್ಲೋಗನ್:
ಬೇರೆಯವರ ವಿಚಾರಗಳಿಗೆ ಸನ್ಮಾನ ಕೊಡಿ-ಆಗ ನಿಮಗೆ ಸನ್ಮಾನ ಪ್ರಾಪ್ತಿಯಾಗುವುದು.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ಒಂದು ಕಡೆ ಬೇಹದ್ದಿನ ವೈರಾಗ್ಯವಿರಲಿ, ಇನ್ನೊಂದು ಕಡೆ ತಂದೆಯ ಸಮಾನ ತಂದೆಯ ಪ್ರೀತಿಯಲ್ಲಿ ಲವಲೀನರಾಗಿರಿ, ಒಂದು ಸೆಕೆಂಡ್ ಮತ್ತು ಒಂದು ಸಂಕಲ್ಪವೂ ಸಹ ಈ ಲವಲೀನ ಅವಸ್ಥೆಯಿಂದ ಕೆಳಗೆ ಬರಬಾರದು. ಇಂತಹ ಲವಲೀನ ಮಕ್ಕಳ ಸಂಘಟನವೇ ತಂದೆಯನ್ನು ಪ್ರತ್ಯಕ್ಷ ಮಾಡುವುದು. ನೀವು ನಿಮಿತ್ತ ಆತ್ಮರು ಪವಿತ್ರ ಪ್ರೇಮ ಮತ್ತು ತಮ್ಮ ಪ್ರಾಪ್ತಿಗಳ ಮೂಲಕ ಎಲ್ಲರಿಗೆ ಶ್ರೇಷ್ಠ ಪಾಲನೆಯನ್ನು ಕೊಡಿ, ಯೋಗ್ಯರನ್ನಾಗಿ ಮಾಡಿ ಅರ್ಥಾತ್ ಯೋಗಿಯನ್ನಾಗಿ ಮಾಡಿರಿ.