16.08.26 Avyakt Bapdada
Kannada
Murli 16.03.2011 Om Shanti Madhuban
“ಮನಸಾ ಮೂಲಕ
ಪ್ರಕೃತಿಯನ್ನು ಸತೋಗುಣಿಯನ್ನಾಗಿ ಮಾಡುವ ಸೇವೆ ಮಾಡಿ, ಶುಭ ಭಾವನೆ, ಶುಭ ಕಾಮನೆ ಇಟ್ಟುಕೊಂಡು
ಸಂಸ್ಕಾರ ಮಿಲನದ ರಾಸ್ ಮಾಡಿ ಮತ್ತು ತಮ್ಮ ಹಳೆಯ ಸಂಸ್ಕಾರಗಳನ್ನು ಸುಟ್ಟು, ಪ್ರಭುವಿನ ಸಂಗದ
ರಂಗನ್ನು ಹಾಕಿಕೊಳ್ಳುತ್ತಾ ಸತ್ಯ ಹೋಲಿಯನ್ನು ಆಚರಣೆ ಮಾಡಿ”
ಈ ದಿನ ಹೋಲಿಯಸ್ಟ್ ತಂದೆ
ತನ್ನ ಮಕ್ಕಳ ಜೊತೆ ಹೋಲಿಯನ್ನು ಆಚರಣೆ ಮಾಡಲು ಬಂದಿದ್ದಾರೆ. ತಾವೆಲ್ಲರೂ ಸಹ ಹೋಲಿಯನ್ನು ಆಚರಣೆ
ಮಾಡಲು ಬಂದಿದ್ದೀರಿ. ಎಲ್ಲದಕ್ಕಿಂತ ಶ್ರೇಷ್ಠ ಸಂಗ ಪರಮಾತ್ಮನ ಸಂಗದ ರಂಗು ಎಂದು ಗೊತ್ತಿದೆ. ಈ
ರಂಗು ಸದಾ ಶ್ರೇಷ್ಠಾತಿ ಶ್ರೇಷ್ಠರನ್ನಾಗಿ ಮಾಡುವಂತಹದ್ದು. ಹೇಗೆ ತಂದೆ ಶ್ರೇಷ್ಠಾತಿ ಶ್ರೇಷ್ಠ
ಆಗಿದ್ದಾರೆ ಅದೇ ರೀತಿ ಈ ಪರಮಾತ್ಮನ ರಂಗು ಶ್ರೇಷ್ಠಾತಿ ಶ್ರೇಷ್ಠರನ್ನಾಗಿ ಮಾಡುವಂತಹದ್ದು.
ಪ್ರತಿಯೊಬ್ಬ ಮಗುವಿನ ಮಸ್ತಕದಲ್ಲಿ ಹೊಳೆಯುತ್ತಿರುವ ಭಾಗ್ಯದ ನಕ್ಷತ್ರವನ್ನು ನೋಡುತ್ತಿದ್ದೇವೆ. ಈ
ಭಾಗ್ಯದ ನಕ್ಷತ್ರ ಇಡೀ ಕಲ್ಪದಲ್ಲಿ ತಾವು ಭಾಗ್ಯಶಾಲಿ ಮಕ್ಕಳ ವಿನಃ ಬೇರೆ ಯಾರೂ ಪ್ರಾಪ್ತಿ
ಮಾಡಿಕೊಳ್ಳಲು ಸಾಧ್ಯವಿಲ್ಲ. ಆ ಶ್ರೇಷ್ಠ ಭಾಗ್ಯವಾಗಿದೆ - ತಾವು ಮಕ್ಕಳೇ ಡಬಲ್ ಪವಿತ್ರ ಅರ್ಥಾತ್
ಹೋಲಿ ಆಗುತ್ತೀರಿ. ಧರ್ಮಾತ್ಮರೂ ಸಹ ಇದ್ದಾರೆ ಆದರೆ ಅವರು ಶರೀರದಿಂದ ಪವಿತ್ರರಾಗುವುದಿಲ್ಲ. ತಾವು
ಬ್ರಾಹ್ಮಣ ಆತ್ಮರದ್ದು ಭವಿಷ್ಯದಲ್ಲಿ ಆತ್ಮ ಪವಿತ್ರ ಆಗುತ್ತದೆ ಮತ್ತು ಶರೀರವೂ ಸಹ ಪವಿತ್ರ
ಆಗುತ್ತದೆ. ಇದರ ಗುರುತು ಡಬಲ್ ಪವಿತ್ರ ಅಂದಾಗ ಡಬಲ್ ಕಿರೀಟ ಪ್ರಾಪ್ತಿ ಆಗುತ್ತದೆ. ಇಡೀ
ಕಲ್ಪದಲ್ಲಿ ಡಬಲ್ ಕಿರೀಟಧಾರಿಯರು ತಾವು ಸಂಗಮಯುಗದಲ್ಲಿ ತಂದೆಯ ಸಂಗದ ರಂಗಿನಿಂದ ಡಬಲ್
ಪವಿತ್ರರಾಗುತ್ತೀರಿ. ಸಂಗಮ ಯುಗದ ಪರಮಾತ್ಮನ ಸಂಗ ಡಬಲ್ ಪವಿತ್ರರನ್ನಾಗಿ ಮಾಡಿ ಬಿಡುತ್ತದೆ.
ಅಂದಾಗ ತಮ್ಮ ಹೋಲಿ ತಂದೆಯ ಜೊತೆ ಇರುವುದರಿಂದ, ತಂದೆಯನ್ನು ಕಂಬೈನ್ಡ್ ಮಾಡಿಕೊಳ್ಳುವುದರಿಂದ ಡಬಲ್
ಪವಿತ್ರರಾಗಿ ಬಿಡುತ್ತೀರಿ. ಸದಾ ಹೃದಯದಲ್ಲಿ ತಂದೆಯ ಸಂಗ ಇರುತ್ತದೆ. ಈ ರಂಗು ಎಷ್ಟು ಶ್ರೇಷ್ಠ
ಆಗಿದೆ ಯಾವುದು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತದೆ. ಮನುಷ್ಯರಂತೂ ಸ್ಥೂಲ ರಂಗಿನಿಂದ ಹೋಲಿಯನ್ನು
ಆಚರಣೆ ಮಾಡುತ್ತಾರೆ ಆದರೆ ತಾವು ತಂದೆಯ ಸಂಗದ ರಂಗಿನಿಂದ ಹೋಲಿ (ಪವಿತ್ರ) ಆಗಿಬಿಡುತ್ತೀರಿ. ಅದೂ
ಸಹ ಡಬಲ್ ಹೋಲಿ. ಅಂದಾಗ ತಮ್ಮ ಹೋಲಿ ಪ್ರಪಂಚದಿಂದ ಭಿನ್ನ ಪರಮಾತ್ಮನಿಗೆ ಪ್ರಿಯವಾಗಿದೆ. ನಮ್ಮ ಹೋಲಿ
ಪ್ರಭುವಿನ ಸಂಗದ ರಂಗು ಇರುವ ಕಾರಣ ಅರ್ಧ ಕಲ್ಪ ಈ ರೀತಿ ಪವಿತ್ರರಾಗುತ್ತೀರಿ ಯಾವುದರಿಂದ ಇದುವರೆಗೆ
ತಮ್ಮ ಚಿತ್ರಗಳು ಕಾಯಿದೆ ಪ್ರಮಾಣವಾಗಿ ಪೂಜೆ ಮಾಡಲಾಗುತ್ತಿದೆ ಎಂದು ನಶೆ ಇರುತ್ತದೆಯಲ್ಲವೇ. ಮತ್ತೆ
ಬೇರೆಯವರ ಚಿತ್ರಗಳು ಪ್ರೇಮ ಪೂರ್ವಕವಾಗಿ ಪೂಜೆ ಮಾಡಲಾಗುವುದಿಲ್ಲ. ತಾವು ಸ್ವಯಂ ತಮ್ಮ
ಚಿತ್ರಗಳನ್ನು ನೋಡುತ್ತಿದ್ದೀರಿ. ಬೇರೆಯವರದೂ ಪೂಜೆ ಮಾಡಲಾಗುತ್ತದೆ ಆದರೆ ಇಷ್ಟು ಸಮಯ ಮತ್ತು ಈ
ರೀತಿ ವಿಧಿ ಪೂರ್ವಕವಾಗಿ ಪೂಜೆ ಮಾಡಲಾಗುವುದಿಲ್ಲ. ತಾವು ಸದಾ ಉಮ್ಮಂಗ-ಉತ್ಸಾಹದಲ್ಲಿ ಇರುತ್ತೀರಿ.
ಇರುತ್ತೀರಲ್ಲವೇ! ಉಮ್ಮಂಗ-ಉತ್ಸಾಹದಲ್ಲಿ ಇರುತ್ತೀರಾ? ಕೈ ಎತ್ತಿ, ಇರುತ್ತೀರಾ? ಕೆಲವೊಮ್ಮೆ
ಇರುತ್ತೀರಾ ಅಥವಾ ಸದಾ ಇರುತ್ತೀರಾ? ಯಾರು ನಾವೂ ಸಹ ಸದಾ ಉಮ್ಮಂಗ-ಉತ್ಸಾಹದಲ್ಲಿ ಇರುತ್ತೇವೆ ಮತ್ತೆ
ಬೇರೆಯವರಿಗೂ ಸಹ ಉಮ್ಮಂಗ-ಉತ್ಸಾಹವನ್ನು ಕೊಡಿಸುತ್ತೇವೆ ಎಂದು ಹೇಳುತ್ತೀರಿ ಅವರು ಕೈ ಎತ್ತಿ.
ಕೆಲವೊಮ್ಮೆ ಅಲ್ಲ ಸದಾ. ಸದಾ ಶಬ್ದವನ್ನು ಅಂಡರ್ಲೈನ್ ಮಾಡುತ್ತೀರಲ್ಲವೇ ಆದರೆ ತಮ್ಮ ನೆನಪಾರ್ಥ
ಯಾವುದು ತಮ್ಮ ಸ್ಥಿತಿ ಇತ್ತು ಅದರ ನೆನಪಾರ್ಥ ತಮ್ಮ ಭಕ್ತರು ಉತ್ಸವ ರೂಪದಲ್ಲಿ ಆಚರಣೆ ಮಾಡುತ್ತಾರೆ.
ತಾವು ಪ್ರಭುವಿನ ಸಂಗದ ರಂಗನ್ನು ಹಾಕಿಕೊಂಡಿದ್ದೀರಿ. ಅವರೂ ರಂಗು ಹಾಕಿಕೊಳ್ಳುತ್ತಾರೆ ಆದರೆ
ದೇಹಾಭಿಮಾನದ ಕಾರಣ ಸ್ಥೂಲ ರಂಗನ್ನು ಹಾಕಿಕೊಳ್ಳುತ್ತಾರೆ. ಯಾವ ರಂಗಿನಲ್ಲಿ ಖರ್ಚೂ ಸಹ ಬಹಳ ಇದೆ
ಮತ್ತು ರಿಜಲ್ಟ್ ಸಹ ಕೆಲವು ಚೆನ್ನಾಗಿರುತ್ತದೆ, ಕೆಲವು ಚೆನ್ನಾಗಿರುವುದಿಲ್ಲ. ಈ ರೀತಿ ಆಚರಣೆ
ಮಾಡುತ್ತಾರೆ ಆದರೆ ತಮ್ಮ ಉತ್ಸಾಹದ ನೆನಪಾರ್ಥ ಖಂಡಿತ ಉತ್ಸವವನ್ನು ಆಚರಣೆ ಮಾಡುತ್ತಾರೆ. ತಾವು
ತಂದೆಯವರಾಗಲು ಮೊದಲು ತಮ್ಮ ಹಳೆಯ ಸಂಸ್ಕಾರಗಳನ್ನು ಸುಟ್ಟು ಹಾಕುತ್ತೀರಿ ಮತ್ತು ಪ್ರಭುವಿನ ಸಂಗದ
ರಂಗು ಹಾಕಿಕೊಳ್ಳುವುದರಿಂದ ಸದಾ ಆಚರಣೆ ಮಾಡುತ್ತಿರುತ್ತೀರಿ. ಅವರೂ ಸಹ ಮೊದಲು ಸುಡುತ್ತಾರೆ ನಂತರ
ಆಚರಣೆ ಮಾಡುತ್ತಾರೆ. ಆದರೆ ತಮ್ಮ ಆಚರಣೆ ಮತ್ತು ಅವರು ಆಚರಣೆ ಮಾಡುವುದರಲ್ಲಿ ರಾತ್ರಿ-ಹಗಲಿನ
ಅಂತರವಿದೆ. ಅವರದು ದೇಹಾಭಿಮಾನ, ತಮ್ಮದು ಆತ್ಮಾಭಿಮಾನವಾಗಿದೆ. ಅವರು ದೇಹಭಾನದಲ್ಲಿ ತಾವು ಆತ್ಮಿಕ
ಭಾನದಲ್ಲಿ ಆಚರಣೆ ಮಾಡುತ್ತೀರಿ.
ತಮಗೆ ಬಾಪ್ದಾದಾರವರ
ಡೈರೆಕ್ಷನ್ ಇದೆ - ಹೋಲಿ ಅರ್ಥಾತ್ ಕಳೆದು ಹೋಗಿರುವುದು ಕಳೆದು ಹೋಗಿದೆ. ಇದನ್ನೂ ಸಹ ಹೇಳುತ್ತಾರೆ
ಹೋ ಲಿ. ಆದರೆ ಅರ್ಥವನ್ನು ಪ್ರಾಕ್ಟಿಕಲ್ನಲ್ಲಿ ತೆಗೆದುಕೊಂಡು ಬರಲು ಸಾಧ್ಯವಿಲ್ಲ. ತಾವೆಲ್ಲರೂ
ಹೋಲಿ ಅರ್ಥಾತ್ ಕಳೆದು ಹೋಗಿರುವುದನ್ನು ಮರೆತು ಬಿಡುತ್ತೀರಿ. ಮಾಡುತ್ತೀರಲ್ಲವೇ! ಅಥವಾ ಕೆಲವೊಮ್ಮೆ
ಮಾಡುತ್ತೀರಾ? ಏಕೆಂದರೆ ಕಳೆದು ಹೋಗಿರುವದನ್ನು ನೆನಪು ಮಾಡುವುದರಿಂದ ವ್ಯರ್ಥ ಸಂಕಲ್ಪ ಬಹಳ
ನಡೆಯುತ್ತದೆ. ಸಮಯವೂ ಸಹ ವ್ಯರ್ಥ ಆಗುತ್ತದೆ, ಯಾವುದು ಬಹಳ ಸಮಯದ ಸಂಸ್ಕಾರ ಇದೆ ಅದು ಬೇಡದಿದ್ದರೂ
ನಡೆಯುತ್ತದೆ ಅಂದಾಗ ಈ ಸಂಗಮ ಯುಗದ ಒಂದೊಂದು ನಿಮಿಷ ಯಾವುದು ಒಂದು ಜನ್ಮದಲ್ಲಿ 21 ಜನ್ಮಗಳ
ಪ್ರಾಲಬ್ದ ಮಾಡುತ್ತದೆ. ಒಂದೊಂದು ಸಂಕಲ್ಪ, ಒಂದೊಂದು ನಿಮಿಷ ಎಷ್ಟು ಬೆಲೆವುಳ್ಳದ್ದಾಗಿದೆ. ಒಂದು
ಸೆಕೆಂಡ್ ಹೋಗಿಲ್ಲ ಆದರೆ ಅನೇಕ ಜನ್ಮಗಳ ಪ್ರಾಲಬ್ಧದಲ್ಲಿ ಅಂತರ ಬಂದು ಬಿಡುತ್ತದೆ. ಬಾಪ್ದಾದಾರವರು
ಮೊದಲೂ ಸಹ ತಿಳಿಸಿದ್ದಾರೆ - ಸಂಗಮ ಸಮಯದ ಸಮಯ ಮತ್ತು ಸಂಕಲ್ಪವೂ ಸಹ ವ್ಯರ್ಥವಾಗಿ ಕಳೆಯಬಾರದು.
ಒಂದುವೇಳೆ ಸದಾ ಪ್ರಭುವಿನ ರಂಗಿನಲ್ಲಿ ಇದ್ದರೆ ಅರ್ಥಾತ್ ತಂದೆಯನ್ನು ಸದಾ ಜೊತೆಗಾರರನ್ನಾಗಿ
ಮಾಡಿಕೊಂಡರೆ ಸಂಗಮ ಯುಗದ ಒಂದೊಂದು ಸಂಕಲ್ಪ ಮತ್ತು ಸಮಯ ಅರ್ಥಾತ್ ಒಂದೊಂದು ನಿಮಿಷವನ್ನು ಸಫಲ
ಮಾಡಲು ಸಾಧ್ಯತೆ ಇದೆ. ಅಂದಾಗ ತಮ್ಮ ಒಂದೊಂದು ನಿಮಿಷ ಮತ್ತು ಸಂಕಲ್ಪ ಸಫಲ ಆಗುತ್ತದೋ? ಅಥವಾ
ವ್ಯರ್ಥವಾಗಿ ಹೋಗುತ್ತದೋ? ಎಂದು ಚೆಕ್ ಮಾಡಿಕೊಳ್ಳಿ. ಏಕೆಂದರೆ ಒಂದು ನಿಮಿಷ ಅಲ್ಲ 21 ಜನ್ಮಗಳ
ಸಂಬಂಧ ಪ್ರತಿಯೊಂದು ನಿಮಿಷ ಮತ್ತು ಸಂಕಲ್ಪದ ಜೊತೆ ಇದೆ. ಇಷ್ಟು ಬೆಲೆ ಇದೆ. ಅಂದಾಗ ತಮ್ಮ
ಹೃದಯದಿಂದ ಯೋಚನೆ ಮಾಡಿ ಇಷ್ಟು ಬೆಲೆ ಇರುತ್ತದೆಯೇ! ಈ ಸಂಗಮದ ಸಮಯಕ್ಕೆ ಹೇಳಲಾಗಿತ್ತು -
“ಈಗಿಲ್ಲವೆಂದರೆ ಇನ್ನೆಂದೆಂದಿಗೂ ಇಲ್ಲ” ಇಷ್ಟು ಬೆಲೆ ಸದಾ ಸ್ಮೃತಿಯಲ್ಲಿ ಇರಲಿ. ತಾವೆಲ್ಲರೂ ಈ
ದಿನ ಹೋಲಿಯನ್ನು ಆಚರಣೆ ಮಾಡಿದ್ದೀರಿ ಅರ್ಥಾತ್ ತಂದೆಯ ಸಂಗದ ರಂಗನ್ನು ಹಾಕಿಕೊಂಡಿದ್ದೀರಿ. ಅಂದಾಗ
ಇಡೀ ದಿನ ಚೆಕ್ ಮಾಡಿಕೊಂಡಿದ್ದೀರಾ? ತಂದೆಯ ರಂಗು ಹಾಕಿಕೊಂಡೇ ಇದ್ದೀರಾ? ಪರಮಾತ್ಮನ ಸಂಗದಲ್ಲಿ
ಇದ್ದೀರೋ ಅಥವಾ ಬೇರೆ ಕಡೆಗೂ ಸಮಯ ಅಥವಾ ಸಂಕಲ್ಪ ಹೋಗಿದೆಯೋ? ಚೆಕ್ ಮಾಡಿಕೊಂಡಿದ್ದೀರಾ? ಕತ್ತನ್ನು
ಅಲುಗಾಡಿಸಿ ಕೈ ಅಲ್ಲ, ಈ ರೀತಿ ಮಾಡಿ.
ಬಾಪ್ದಾದಾ ಸದಾ
ಸೂಚನೆಯನ್ನು ಕೊಡುತ್ತಾರೆ - ತಮ್ಮ ಮನಸಿನ ಶುಭ ಸತೋಗುಣಿ ಸಂಕಲ್ಪದ ಮೂಲಕ ಪ್ರಕೃತಿಯನ್ನೂ ಸಹ
ಸತೋಗುಣಿಯನ್ನಾಗಿ ಮಾಡುತ್ತಿರಿ. ಆ ಮನಸಾ ಸೇವೆ ನೆನಪಿರುತ್ತದೆಯೇ? ಏಕೆಂದರೆ ಈಗ ಪ್ರಕೃತಿ ದೊಡ್ಡ
ರೂಪದಲ್ಲಿ ತನ್ನ ಕಾರ್ಯವನ್ನು ಮಾಡುವುದಿದೆ. ಇದು ಚಿಕ್ಕ ಮಾತಾಗಿದೆ ಆದರೆ ಪ್ರಕೃತಿಯನ್ನು
ಮನುಷ್ಯಾತ್ಮರು ತೊಂದರೆ ಕೊಟ್ಟರೆ ಅದೂ ಸಹ ತೊಂದರೆ ಕೊಡುವುದು ಶುರು ಮಾಡುತ್ತದೆ ಆದ್ದರಿಂದ ತಂದೆ
ಹೇಳುತ್ತಾರೆ - ಹೇಗೆ ಮಯಾಜೀತರಾಗಲು ಅಟೆನ್ಷನ್ ಇಟ್ಟುಕೊಳ್ಳುತ್ತೀರಿ, ಇಟ್ಟುಕೊಳ್ಳುತ್ತೀರಲ್ಲವೇ.
ಮಾಯೆಯ ಜೊತೆ ಪ್ರತಿಜ್ಞೆ ಇದೆ - ತಮ್ಮ ಕೆಲಸವಾಗಿದೆ ಬರುವುದು ಮತ್ತು ನಮ್ಮ ಕೆಲಸವಾಗಿದೆ
ಓಡಿಸುವುದು. ಎಲ್ಲರೂ ಪ್ರತಿಜ್ಞೆಯನ್ನು ಮಾಡಿದ್ದೀರಲ್ಲವೇ? ಮಾಡಿದ್ದೀರಾ? ಮಾಯಾಜೀತರಾಗಬೇಕಲ್ಲವೇ,
ಅದೇ ರೀತಿ ಪ್ರಕೃತಿಜೀತರಾಗಬೇಕು ಏಕೆಂದರೆ ತಾವು ರಾಜ್ಯ ಮಾಡಬೇಕಲ್ಲವೇ. ತಮ್ಮ ರಾಜ್ಯ
ಬರುತ್ತಿದೆಯಲ್ಲವೇ! ನಶೆ ಇದೆಯಲ್ಲವೇ! ಮನುಷ್ಯರಂತೂ ಪಾಪ ಏನಾಗುತ್ತದೋ ಎಂದು ಯೋಚನೆ ಮಾಡುತ್ತಾರೆ,
ಭಯ ಪಡುತ್ತಾರೆ ಆದರೆ ತಮಗೆ ಗೊತ್ತಿದೆ - ಈಗ ಸಂಗಮ ಯುಗ ಅಮೃತವೇಳೆ ನಡೆಯುತ್ತಿದೆ. ಅಂದಾಗ
ಅಮೃತವೇಳೆಯ ನಂತರ ಯಾವುದು ಬರುತ್ತದೆ? ಬೆಳಕು ಬರುತ್ತದೆ. ಬೆಳಕಿನಲ್ಲಿಯೇ ನಮ್ಮ ರಾಜ್ಯ ಬರಬೇಕು.
ನಶೆ ಇದೆಯಲ್ಲವೇ! ನಮ್ಮ ರಾಜ್ಯ ಆಗಿದೆಯೋ ಅಥವಾ ಕೇವಲ ಮಹಾರಥಿಗಳಿಗೆ ರಾಜ್ಯವೋ? ತಮ್ಮೆಲ್ಲರ
ರಾಜ್ಯವಾಗಿದೆ. ಏನಾಗುತ್ತದೋ? ಎಂದು ತಮಗೆ ಚಿಂತೆ ಇಲ್ಲ. ಒಳ್ಳೆಯದರಲ್ಲಿ ಒಳ್ಳೆಯದೇ ಆಗುತ್ತದೆ.
ಅಂದಾಗ ತಮ್ಮ ರಾಜ್ಯದಲ್ಲಿ ಪ್ರಕೃತಿಯೂ ಸಹ ಸತೋಪ್ರಧಾನ ಆಗಬೇಕಾಗಿದೆ ಅಂದಾಗ ಪ್ರಕೃತಿಯನ್ನು
ತಮೋಗುಣಿಯಿಂದ ಸತೋಗುಣಿಯನ್ನಾಗಿ ಯಾರು ಮಾಡುತ್ತಾರೆ? ಅಥವಾ ಪ್ರಕೃತಿ ಹೇಗಿದ್ದರೂ ನಡೆಯುತ್ತದೆಯೇ?
ತಮ್ಮ ರಾಜ್ಯದಲ್ಲಿ ನಡೆಯುತ್ತದೆಯೇ? ನಡೆಯುತ್ತದೆಯೇ? ಹೌದು ಎಂದಾದರೂ ಹೇಳಿ ಅಥವಾ ಇಲ್ಲ ಎಂದಾದರೂ
ಹೇಳಿ. ನಡೆಯುವುದಿಲ್ಲ? ಅಂದಾಗ ಪ್ರಕೃತಿಯನ್ನು ಸತೋಗುಣಿಯನ್ನಾಗಿ ಯಾರು ಮಾಡುತ್ತಾರೆ? ತಾವೇ
ಮಾಡುತ್ತೀರಲ್ಲವೇ. ಆದ್ದರಿಂದ ಈಗ ಅಚಾನಕ್ನ ಮೊದಲನೇ ದೃಶ್ಯ ಇದು ಚಿಕ್ಕದಾಗಿದೆ, ಶುರು ಆಗಿದೆ. ಈಗ
ದೊಡ್ಡ-ದೊಡ್ಡದು ಬರುವುದಿದೆ ಮತ್ತು ಅಚಾನಕ್ ಆಗಿಯೇ ಬರುವುದಿದೆ. ಯಾವುದು ಯೋಚನೆಯಲ್ಲೂ
ಇರುವುದಿಲ್ಲ ಅದು ಆಗುವುದಿದೆ.
ಬಾಪ್ದಾದಾರವರಂತೂ ಬಹಳ
ಸಮಯದಿಂದ ಅಚಾನಕ್ನ ಪಾರ್ಟ್ ಓದಿಸಿದ್ದಾರೆ. ಆದರೆ ಈಗ ಪ್ರತ್ಯಕ್ಷ ರೂಪದಲ್ಲಿ ನೋಡಿ ತಮ್ಮ
ಕಾರ್ಯವನ್ನು ಶುರು ಮಾಡಿ. ಗಾಬರಿ ಆಗಬೇಡಿ. ಕಥೆಯನ್ನು ತಿಳಿಸುತ್ತಾರಲ್ಲವೇ. ಎಲ್ಲಾ ಕಡೆ ಬೆಂಕಿ
ಬಿದ್ದಿದೆ ಆದರೆ ಪರಮಾತ್ಮನ ಮಕ್ಕಳು ಸುರಕ್ಷಿತವಾಗಿರುತ್ತಾರೆ. ಅಂದಾಗ ಈಗಲೂ ಸಹ ಮಕ್ಕಳು
ಸುರಕ್ಷಿತವಾಗಿದ್ದಾರಲ್ಲವೇ! ಪೇಪರ್ ಅಂತೂ ಬರಲೇಬೇಕು ಆದರೆ ತಮ್ಮದು ಡಬಲ್ ಕಾರ್ಯವಾಗಿದೆ. ಒಂದು
ನಿರ್ಭಯರಾಗಿ ಎದುರಿಸಿ ಇನ್ನೊಂದು ತಮ್ಮ ಭಕ್ತರು ಮತ್ತು ತಮ್ಮ ದುಃಖಿ ಸಹೋದರ - ಸಹೋದರಿಯ
ಸೇವೆಯನ್ನೂ ಸಹ ಯಾರು ಮಾಡುತ್ತಾರೆ? ತಾವು ಪ್ರಭುವಿನ ಸಂಗದ ರಂಗಿನಲ್ಲಿ ಇದ್ದೀರಿ. ಅಂದಾಗ
ಪರಮಾತ್ಮನ ಸಂಗದ ರಂಗಿನಲ್ಲಿ ಯಾವುದು ಪ್ರಾಪ್ತಿ ಮಾಡಿಕೊಂಡಿದ್ದೀರಿ ಅದನ್ನು ತಮ್ಮ
ಸಹೋದರ-ಸಹೋದರಿಯರಿಗೆ, ಭಕ್ತರಿಗೆ ಹೆಚ್ಚು ಪ್ರೀತಿಯಿಂದ, ಹೃದಯದಿಂದ ಹಂಚಿ. ದುಃಖದ ಸಮಯದಲ್ಲಿ ಯಾರು
ಸದಾ ನೆನಪು ಬರುತ್ತಾರೆ? ಪರಮಾತ್ಮ ನೆನಪು ಬರುತ್ತಾರೆ, ತಿಳಿದುಕೊಳ್ಳಲಿ, ತಿಳಿಯದೆ ಇರಲಿ. ಆದರೆ
ಕಷ್ಟದಿಂದಾದರೂ ಹೇ ತಂದೆ, ಹೇ ಪರಮಾತ್ಮ ಎಂದು ಖಂಡಿತ ಹೇಳುತ್ತಾರೆ. ಅಂದಾಗ ತಾವು ಪರಮಾತ್ಮನ
ಮಕ್ಕಳು ದುಃಖಿಗಳಿಗೆ ಆಶ್ರಯವನ್ನು ಕೊಡಬೇಕು. ಅವರಿಗೆ ಶುಭ ಭಾವನೆ-ಶುಭ ಕಾಮನೆಯ ಮೂಲಕ ತಂದೆಯಿಂದ
ಪ್ರಾಪ್ತಿ ಆಗಿರುವ ಕಿರಣಗಳ ಮೂಲಕ ಆಶ್ರಯದಾತರಾಗಿ. ಅವರೂ ಸಹ ತಮ್ಮ ಪರಿವಾರ ಆಗಿದೆಯಲ್ಲವೇ!
ಪರಿವಾರದಲ್ಲಿ ಒಬ್ಬರಿಗೊಬ್ಬರು ಸಹಯೋಗವನ್ನು ಕೊಡುತ್ತಾರಲ್ಲವೇ! ಹೆಸರೇ ಆಗಿದೆ ಸಹಯೋಗ, ಶ್ರೇಷ್ಠ
ಯೋಗ ಇದೇ ಆಶ್ರಯವನ್ನು ಕೊಡಲು ಸಾಧನೆಯಾಗಿದೆ. ಸಂದೇಶವನ್ನೂ ಕಳುಹಿಸಿದ್ದೇವೆ ಈಗ ಸಮಯವನ್ನು ಫಿಕ್ಸ್
ಮಾಡಿ ಎಂದು. ಹಾಗೆ ಆಗಿ ಬಿಡುವುದಿಲ್ಲ, ಹೇಗೆ ಟ್ರಾಫಿಕ್ ಕಂಟ್ರೋಲ್, ಅಮೃತವೇಳೆ ನಿಶ್ಚಿತವಾಗಿದೆ
ಅಂದಾಗ ಮಾಡುತ್ತೀರಲ್ಲವೇ ಅದೇ ರೀತಿ ತಮ್ಮ ಕಾರ್ಯದ ಪ್ರಮಾಣ ಮನಸಾ ಸೇವೆಯೂ ಸಹ ಈಗಿನ ಸಮಯದ ಪ್ರಮಾಣ
ಅತೀ ಅವಶ್ಯಕವಾಗಿದೆ. ಸಮಯವನ್ನು ತೆಗೆಯಿರಿ. ದಯಾಹೃದಯಿ ಆಗಿ, ಕಲ್ಯಾಣಕಾರಿ ಆಗಿ. ತಮ್ಮ ಸ್ವಮಾನ
ಯಾವುದು? ವಿಶ್ವ ಕಲ್ಯಾಣಕಾರಿ ಆಗುವುದಾಗಿದೆ. ದಯೆ ಬರುತ್ತದೆಯೇ? ಅಥವಾ ಆಗಿ ಬಿಡುತ್ತದೋ? ಇದರಲ್ಲಿ
ಹುಡುಗಾಟಿಕೆ ಇರಬಾರದು ಏಕೆಂದರೆ ಯಾರಿಗೆ ತಾವು ಸಕಾಶವನ್ನು ಕೊಡುತ್ತೀರಿ ಅವರೇ ತಮ್ಮ
ಭಕ್ತರಾಗುತ್ತಾರೆ. ಆದ್ದರಿಂದ ಏನು ಮಾಡಬೇಕು? ಅಟೆನ್ಷನ್ ಇದೆಯೇ? ಯಾರು ನಮಗೆ ಅಟೆನ್ಷನ್ ಇದೆ
ಮತ್ತೆ ಇನ್ನೂ ವೃದ್ಧಿ ಆಗುತ್ತದೆ ಎಂದು ತಿಳಿದಿರುವವರು ಕೈ ಎತ್ತಿ. ಕೆಳಗೆ ಮೇಲೆ ಮಾಡುತ್ತಿದ್ದಾರೆ.
ಇದನ್ನು ಟಿ.ವಿಯಲ್ಲಿ ನೋಡಬಹುದು. ಒಂದುವೇಳೆ ಇಷ್ಟೆಲ್ಲರೂ ತಮ್ಮ ಸ್ವಮಾನವನ್ನು ಪ್ರಾಕ್ಟಿಕಲ್ನಲ್ಲಿ
ತೆಗೆದುಕೊಂಡು ಬಂದರೆ ಆತ್ಮಗಳು ಈಗಲೂ ಸಹ ಹೃದಯದಿಂದ ತಮ್ಮ ಹಾಡನ್ನು ಹೇಳುತ್ತಾರೆ - ವಾಹ್!
ಪರಮಾತ್ಮನ ಮಕ್ಕಳೇ ವಾಹ್! ನಮಗೆ ಆಶ್ರಯವನ್ನು ಕೊಟ್ಟಿದ್ದೀರಿ. ತಮಗಾಗಿ ಈಗಿನ ಆಶ್ರಯ ಅರ್ಧಕಲ್ಪ
ತಮ್ಮ ಗಾಯನ ಮಾಡುತ್ತಾರೆ. ತಾವು ಅವರಿಗೆ ಪೂರ್ವಜರಾಗಿ ಬಿಡುತ್ತೀರಿ. ಪೂರ್ವಜರಾಗಿದ್ದೀರಾ?
ವೃಕ್ಷದಲ್ಲಿ ಬ್ರಾಹ್ಮಣರು ಎಲ್ಲಿ ಕುಳಿತಿದ್ದಾರೆ? ಕೆಳಗೆ ಕುಳಿತಿದ್ದಾರಲ್ಲವೇ, ಅಂದಾಗ
ಪೂರ್ವಜರಾಗಿದ್ದೀರಲ್ಲವೇ. ಭಕ್ತರ ಕೂಗು ಕೇಳಿಸುತ್ತಿದೆಯೇ? ಸ್ವಲ್ಪ ತಮ್ಮನ್ನು ಎಚ್ಚರಿಕೆಯಿಂದ
ಇಟ್ಟುಕೊಳ್ಳಿ. ದುಃಖಿಗಳಿಗೆ ಆಶ್ರಯವನ್ನು ಕೊಡಲೇಬೇಕು ಅಂದಾಗ ಶಬ್ದ ಕೇಳಿಸುತ್ತದೆ.
ಎಲ್ಲರೂ ಹೋಲಿಯನ್ನಂತೂ
ಆಚರಣೆ ಮಾಡಿದ್ದೀರಿ. ತಮಗಂತೂ ಇಡೀ ಸಂಗಮ ಯುಗವೇ ಹೋಲಿ ಆಗಿದೆ. ಪರಮಾತ್ಮನ ಸಂಗದ ರಂಗಿನಲ್ಲಿಯೇ
ಇರುತ್ತೀರಿ. ನೆನಪಾರ್ಥವನ್ನು ಒಂದು-ಎರಡು ದಿನ ಆಚರಣೆ ಮಾಡುತ್ತಾರೆ ತಾವಂತೂ ಪೂರ್ತಿ ಸಂಗಮ ಯುಗ
ಪ್ರಭುವಿನ ಸಂಗದ ರಂಗಿನಲ್ಲಿ ಇರುವವರಾಗಿದ್ದೀರಿ. ನಶೆ ಇದೆಯಲ್ಲವೇ! ಹೇ ಪ್ರಭು ಇದನ್ನು ಮಾಡಿ,
ಅದನ್ನು ಮಾಡಿ ಎಂದು ಮನುಷ್ಯರಂತೂ ಪಾಪ ಬೇಡಿಕೊಳ್ಳುತ್ತಿರುತ್ತಾರೆ. ಆದರೆ ತಮಗೆ 21 ಜನ್ಮಗಳ
ಗ್ಯಾರೆಂಟಿ ಸಿಕ್ಕಿದೆ, ಎಂದೂ ದುಃಖದ ದೃಶ್ಯ ಕನಸಿನಲ್ಲೂ ಬರುವುದಿಲ್ಲ. ಸಂಕಲ್ಪದಲ್ಲೂ ಸಹ ದುಃಖದ
ಅಲೆ ಬರುವುದಿಲ್ಲ ಅಂದಾಗ ಪ್ರತಿಯೊಬ್ಬರು ಒಂದುವೇಳೆ ರಾಜ್ಯವನ್ನು ಪಡೆದುಕೊಳ್ಳಬೇಕೆಂದರೆ ಈಗ ತಮ್ಮ
ಪರಿವಾರ ಸತ್ಯಯುಗದ ಜೊತೆಗಾರರು ಮತ್ತು ರಾಯಲ್ ಪ್ರಜೆಗಳು, ಸಾಧಾರಣ ಪ್ರಜೆಗಳು ಎಲ್ಲರನ್ನೂ ಈಗ
ಮಾಡಬಹುದು. 21 ಜನ್ಮಗಳ ಗ್ಯಾರೆಂಟಿ ಇದೆ. ಸ್ವಲ್ಪ ಸೇವೆ ಮಾಡಿ. ಸಮಯವನ್ನು ತೆಗೆಯಿರಿ. ಏಕೆಂದರೆ
ತಮ್ಮ ಬಳಿ ಸಂಕಲ್ಪದ ಶಕ್ತಿಯಂತೂ ಇದ್ದೇ ಇದೆ. ಕೇವಲ ತಂದೆಯಿಂದ ಯಾವುದು ಸಿಕ್ಕಿದೆ ಅದನ್ನು ತಮ್ಮ
ಸಹೋದರ-ಸಹೋದರಿಯರಿಗೂ ಕೊಡಿ.
ಬಾಪ್ದಾದಾರವರೂ ಮೊದಲೂ
ಸಹ ತಿಳಿಸಿದರು - ಸದಾ ನಾನು ಬ್ರಾಹ್ಮಣ ಪರಿವಾರದ ಮಧ್ಯದಲ್ಲಿ ಸಂಸ್ಕಾರ ಮಿಲನದ ರಾಸ್ ಮಾಡಬೇಕೆಂದು
ಚೆಕ್ ಮಾಡಿಕೊಳ್ಳಿ. ಆ ರಾಸ್ ಯಾವಾಗ ಮಾಡುತ್ತೀರಿ? ಅದರ ಡೇಟ್ ಸಹ ಫಿಕ್ಸ್ ಮಾಡಿ. ಫಿಕ್ಸ್ ಆಗಲು
ಸಾಧ್ಯತೆ ಇದೆಯೇ? ಸಾಧ್ಯತೆ ಇದೆಯೇ? ಮೊದಲನೇ ಲೈನ್ನವರು ಹೇಳಿ. ಕೈ ಎತ್ತಿ. ಆಗಲು ಸಾಧ್ಯತೆ ಇದೆಯೇ?
ಪಾಂಡವರೂ ಕೈ ಎತ್ತಿ. ಪಾಂಡವರ ವಿನಃ ಗತಿ ಇಲ್ಲ. ಒಳ್ಳೆಯದು. ಈಗ ಲಾಸ್ಟ್ ಟರ್ನ್ ಆಗಿದೆ, ಇನ್ನೊಂದು
ಟರ್ನ್ ಉಳಿದಿದೆ. ಅದರಲ್ಲಿ ಪ್ರತಿಯೊಬ್ಬರು ತಮಗಾಗಿ ಯಾವ ದೃಢ ಸಂಕಲ್ಪವಿದೆ, ಅದನ್ನು ಫಿಕ್ಸ್ ಮಾಡಿ
ಬರೆಯಬೇಕು. ಎಷ್ಟು ಸಮಯ ಹಿಡಿಸುತ್ತದೆ? ಯಾವುದು ಬ್ರಾಹ್ಮಣ ಪರಿವಾರದಲ್ಲಿ ಎಂದೂ ಸಹ ಸಂಸ್ಕಾರ
ತನ್ನ ಕಾರ್ಯವನ್ನು ಮಾಡಬಾರದು. ನನ್ನ ಸಂಸ್ಕಾರ ಇರಬಹುದು, ಬೇರೆಯವರ ಸಂಸ್ಕಾರ ಇರಬಹುದು ನನಗೆ
ಪ್ರಭಾವ ಹಾಕಬಾರದು. ಈ ಡೇಟ್ ಫಿಕ್ಸ್ ಆಗಲು ಸಾಧ್ಯತೆ ಇದೆಯೇ? ಕೈ ಎತ್ತಿ. ಒಳ್ಳೆಯದು, ಎಲರ ಫೋಟೋ
ತೆಗೆದಿದ್ದೀರಾ! ಏಕೆಂದರೆ ಈಗ ಅಚಾನಕ್ ದೃಶ್ಯವನ್ನು ನೋಡಿದ್ದೀರಲ್ಲವೇ ಅದೇ ರೀತಿ ಎಲ್ಲಾ ಅಚಾನಕ್
ಆಗುವುದಿದೆ. ಆದ್ದರಿಂದ ಬಾಪ್ದಾದಾರವರು ತಯಾರಿಯಂತೂ ನೋಡುತ್ತಾರಲ್ಲವೇ. ಬೇರೆಯವರಿಗೆ ಶುಭ ಭಾವನೆ,
ಶುಭ ಕಾಮನೆ ಕೊಟ್ಟಾಗ ಬಾಪ್ದಾದಾರವರು ನೋಡಿದರು ಬೇರೆಯವರ ಸೇವೆಯ ಪ್ರೋಗ್ರಾಂ ಮಾಡುತ್ತೀರಿ ಅಂದಾಗ
ಒಂದುವೇಳೆ ಪ್ರತಿಯೊಬ್ಬ ಆತ್ಮನ ಪ್ರತಿ ಸದಾ ಶುಭ ಭಾವನೆ, ಶುಭ ಕಾಮನೆ ಇಟ್ಟುಕೊಂಡಾಗ ನಂಬರ್ವಾರಂತೂ
ಆಗಲೇಬೇಕು. ತಮ್ಮ ಮಾಲೆಯ ನೆನಪಾರ್ಥ ಎಲ್ಲರದೂ ಒಂದೇ ನಂಬರ್ ಆಗಿದೆಯೇನು? ನಂಬರ್ವಾರ್ ಆಗಿದೆ. ಆದರೆ
ಮಾಲೆಯಲ್ಲಂತೂ ಪೋಣಿಸಲ್ಪಡುತ್ತಾರಲ್ಲವೇ. ನಂಬರ್ ಏಕೆ ಸಿಕ್ಕಿತು? ಭಿನ್ನ-ಭಿನ್ನ ಸಂಸ್ಕಾರವಿದೆ
ಆದರೆ ನಾವು ಸಂಸ್ಕಾರ ನೋಡುವುದರ ಬದಲಾಗಿ ಶುಭ ಭಾವನೆ, ಶುಭ ಕಾಮನೆಯನ್ನು ಇಟ್ಟುಕೊಳ್ಳಬೇಕು. ಅವರೂ
ಸಹ ಬ್ರಾಹ್ಮಣ ಪರಿವಾರ ಆಗಿದೆಯಲ್ಲವೇ. ಹೇಗಾದರೂ ಪರಿವಾರ ನನ್ನದಲ್ಲವೇ. ಹೇಗೆ ನನ್ನ ಬಾಬಾ ಎಂದು
ಹೇಳುತ್ತೀರಿ ಅದೇ ರೀತಿ ನನ್ನ ಪರಿವಾರ ಆಗಿದೆ. ಒಳ್ಳೆಯದು ಮೆಜಾರಿಟಿ ಕೈ ಎತ್ತಿದ್ದಾರೆ. ಎಲ್ಲರ
ಉಮ್ಮಂಗ-ಉತ್ಸಾಹವಿದೆ ಆ ಕಾರಣ ಕೈ ಎತ್ತಿದ್ದೀರಲ್ಲವೇ. ಒಬ್ಬರಿಗೊಬ್ಬರು ಸಹಯೋಗಿ ಆಗಿ ಶುಭ
ಭಾವನೆ-ಶುಭ ಕಾಮನೆಯ ದೃಷ್ಟಿ-ವೃತ್ತಿ-ಸ್ಮೃತಿ ಇಟ್ಟುಕೊಳ್ಳುವುದರಿಂದ ಈ ರಾಸ್ ಆಗುವುದು ದೊಡ್ಡ
ಮಾತೇನಲ್ಲ. ಇದರಲ್ಲಿ ಯಾರು ಬಹಳ ಒಳ್ಳೆಯ ನಂಬರ್ ತೆಗೆದುಕೊಳ್ಳುತ್ತಾರೆ, ಆ ತಾರೀಖಿನಲ್ಲಿ
ಪ್ರಾಕ್ಟಿಕಲ್ ಮಾಡಿ ತೋರಿಸುತ್ತಾರೆ ಅವರಿಗೆ ನ್ಯಾರಾ ಮತ್ತು ಪ್ಯಾರ ಆಗಿರುವ ಕಾರಣ ಬಹುಮಾನ
ಸಿಗುತ್ತದೆ. ಯಾವ ಬಹುಮಾನ ಎಂದು ಈಗ ತಿಳಿಸುವುದಿಲ್ಲ ಆದರೆ ಬಾಪ್ದಾದಾ ಬಹುಮಾನ ಕೊಡುತ್ತಾರೆ ಏಕೆ?
ಸೇವೆ ಮಾಡಲು ಸಮಯ ತೆಗೆಯಬೇಕಲ್ಲವೇ. ಸಂಸ್ಕಾರದ ಕಿರಿ-ಕಿರಿ, ಸಮಯ ತನ್ನ ಕಡೆ ಸೆಳೆಯುತ್ತದೆ
ಆದ್ದರಿಂದ ಈಗ ಸಮಯದ ಅವಶ್ಯಕತೆ ಇದೆ. ಸರಿಯಲ್ಲವೇ!
ಎಲ್ಲರೂ
ಮಧುಬನದವರಾಗಿದ್ದೀರಲ್ಲವೇ! ಇಷ್ಟ ಆಗಿದೆಯಲ್ಲವೇ! ಏಕೆಂದರೆ ಮಧುಬನ ವಾಸಿಗಳು ವಿಶೇಷವಾಗಿದ್ದಾರೆ.
ಬಾಪ್ದಾದಾರವರಿಗೂ ಸಹ ಮಧುಬನವಾಸಿಗಳ ಮೇಲೆ ಹೃದಯದ ಪ್ರೀತಿ ಇದೆ. ಮತ್ತು ಮಧುಬನದವರಿಗೂ ಸಹ ಇದೆ.
ಇದನ್ನೂ ಸಹ ಬಾಬಾ ತಿಳಿಸುತ್ತಾರೆ ತಂದೆಯ ಮೇಲೆ ಪ್ರೀತಿ ಇದೆ ಮತ್ತು ಇರುತ್ತದೆ. ಅಳಿಸುವುದಿಲ್ಲ.
ಅಮರವಾಗಿದೆ ಇದರಲ್ಲಿ. ಆಗ ಮಧುಬನವಾಸಿಗಳಾದರಲ್ಲವೇ! ಎಲ್ಲಾದರೂ ಮಧುಬನವಾಸಿಗಳು ಹೋದರೆ ಎಷ್ಟು
ರಿಗಾರ್ಡ್ ಕೊಡುತ್ತಾರೆ! ಮಧುಬನದವರು, ಮಧುಬನದವರು ಎಂದು ಎಷ್ಟು ಗೌರವ ಕೊಡುತ್ತಾರೆ. ಆದ್ದರಿಂದ
ಅಟೆನ್ಷನ್ ಇಟ್ಟುಕೊಳ್ಳಬೇಕು. ಲಾಸ್ಟ್ ಟರ್ನ್ಗಿಂತ ಮುಂಚೆ ಯಾವುದಾದರೂ ಸ್ಥಾನವನ್ನು ಫಿಕ್ಸ್ ಮಾಡಿ
ಎಲ್ಲಿ ತಮ್ಮ ಪತ್ರವನ್ನು ಹಾಕಬಹುದು ಆದರೆ ಲಾಸ್ಟ್ ಟರ್ನ್ಗಿಂತ ಮುಂಚಿತವಾಗಿ ಮಾಡಬೇಕು.
ಎಲ್ಲರೂ ಹೋಲಿಯನ್ನು
ಆಚರಣೆ ಮಾಡಿದ್ದೀರಾ? ತಮಗಂತೂ ಪ್ರತಿದಿನ ಹೋಲಿಯಾಗಿದೆ. ಈಗಲೂ ಸಹ ಸ್ವಲ್ಪ ಹೊರಗಿನ ರೂಪದಲ್ಲಿ
ಆಚರಣೆ ಮಾಡಬೇಕಾಗುತ್ತದೆ. ಆಚರಣೆ ಮಾಡಲು ಎಲ್ಲಿ ಹೋಗುತ್ತೀರಿ? ಇಲ್ಲಿಯೇ ಆಚರಣೆ ಮಾಡುತ್ತೇವೆ ಆದರೆ
ಅದು ರೀತಿ ಪದ್ಧತಿಯಾಗಿದೆ. ಅಂದಾಗ ನಾಲ್ಕಾರು ಕಡೆಯ ಬಾಪ್ದಾದಾರವರ ಅತೀ ಸ್ನೇಹಿ, ಅತೀ ಪ್ರಿಯ
ಮುದ್ದಾದ, ಅಗಲಿ ಹೋಗಿ ಸಿಕ್ಕಿರುವ, ಸ್ವಮಾನಧಾರಿ ಪ್ರತಿಯೊಬ್ಬ ಮಗುವಿಗೆ ಬಾಪ್ದಾದಾ
ನೆನಪು-ಪ್ರೀತಿಯನ್ನೂ ಕೊಡುತ್ತಿದ್ದಾರೆ ಮತ್ತು ಹೃದಯದ ಪ್ರೀತಿಯನ್ನೂ ಕೊಡುತ್ತಿದ್ದಾರೆ. ಬಾಪ್ದಾದಾ
ನೋಡುತ್ತಿದ್ದಾರೆ ನಾಲ್ಕಾರು ಕಡೆ ಎಲ್ಲರೂ ನೋಡಿ, ಕೇಳಿ ಹರ್ಷಿತರಾಗುತ್ತಿದ್ದಾರೆ.
ಈ ದಿನ ಮೊದಲನೇ ಬಾರಿ
ಯಾರು ಬಂದಿದ್ದಾರೆ ಎದ್ದು ನಿಲ್ಲಿ. ನೀವೆಲ್ಲರೂ ಮೊದಲನೇ ಬಾರಿ ಬಂದಿದ್ದೀರಾ? ಒಳ್ಳೆಯದು. ಮೊದಲನೇ
ಬಾರಿ ಮಧುಬನ ನಿವಾಸಿ ಆಗುವ ಭಾಗ್ಯ ಪ್ರಾಪ್ತಿ ಆಗಿದೆ. ಎಲ್ಲರೂ ತಮ ಸಹೋದರ-ಸಹೋದರಿಯರು ಮತ್ತು
ಬಾಪ್ದಾದಾರವರೂ ಸಹ ತಮ್ಮೆಲ್ಲರಿಗೂ ಮೊದಲನೇ ಬಾರಿ ಬಂದಿರುವ ಕಾರಣ ಶುಭಾಶಯಗಳನ್ನು ನೀಡುತ್ತಿದ್ದಾರೆ.
ಈಗ ಬಾಪ್ದಾದಾರವರು ನೋಡುತ್ತಾರೆ ಏಕೆಂದರೆ ಅವಕಾಶವಿದೆ, ಸ್ವಲ್ಪ ತಡವಾಗಿ ಬಂದಿದ್ದೀರಿ ಆದರೆ ಏನು
ಬೇಕೋ ಅದನ್ನು ಈಗಲೂ ಸಹ ಲಾಸ್ಟ್ ಸೋ ಫಾಸ್ಟ್ (ಹಿಂದೆ ಬಂದಿದ್ದರೂ ಮುಂದೆ) ಹೋಗಿ ಮೊದಲನೇ ನಂಬರ್
ತೆಗೆದುಕೊಂಡು ಮೊದಲನೇ ಶ್ರೇಣಿಯಲ್ಲಿ ಬರಬಹುದು. ಇದು ಈ ದಿನ ಯಾರೆಲ್ಲಾ ಬಂದಿದ್ದಾರೆ ಅವರೆಲ್ಲಾ
ಮಕ್ಕಳಿಗೆ ಬಾಪ್ದಾದಾರವರ ವರದಾನವಾಗಿದೆ. ಕೇವಲ ತಂದೆಯ ಯಾವ ಮಹಾವಾಕ್ಯಗಳಿದೆ ಆ ಶ್ರೀಮತದ ಮೇಲೆ
ನಡೆದರೆ ಶ್ರೀಮತ ತಮ್ಮನ್ನು ಶ್ರೇಷ್ಠ ಶ್ರೇಣಿಯಲ್ಲಿ ತೆಗೆದುಕೊಂಡು ಬರಬಹುದು, ತೆಗೆದುಕೊಂಡು
ಬರುತ್ತದೆ. ಇಷ್ಟೆಲ್ಲಾ ಪರಿವಾರದ ಮೂಲಕ ತಮ್ಮೆಲ್ಲರಿಗೆ ವರದಾನವಂತೂ ತಂದೆಯದು ಸಿಕ್ಕಿದೆ, ಆದರೆ
ತಾವು ಎಷ್ಟು ಮುಂದುವರೆಯಲು ಬಯಸುತ್ತೀರೋ ಅಷ್ಟು ಮುಂದುವರೆಯಬಹುದು ಎಂಬ ಶುಭ ಭಾವನೆ, ಶುಭ ಕಾಮನೆ
ಇದೆ. ಎಲ್ಲರೂ ತಮಗೆ ಹೃದಯದ ಆಶೀರ್ವಾದಗಳನ್ನು ಕೊಡುತ್ತಾರೆ. ಎಲ್ಲಾದರೂ ಬಂದಾಗ ಅಲ್ಲಿ ತಮಗೆ
ಆಶೀರ್ವಾದ ಸಿಗುತ್ತಿರುತ್ತದೆ ಮತ್ತು ಆ ಆಶೀರ್ವಾದಗಳು ತಮ್ಮನ್ನು ತೀವ್ರ ಪುರುಷಾರ್ಥಿಯನ್ನಾಗಿ
ಮಾಡಿ ಮುಂದುವರೆಸುತ್ತದೆ. ಈ ನಿಶ್ಚಯ ಇಟ್ಟುಕೊಳ್ಳಿ. ಒಳ್ಳೆಯದು. ಈಗ ಬಾಪ್ದಾದಾರವರು ಎಲ್ಲರೊಂದಿಗೆ
ಬಹಳ ಸುಂದರವಾದ ಗುಡ್ನೈಟ್ ಮಾಡುತ್ತಿದ್ದಾರೆ. ಒಳ್ಳೆಯದು.
ವರದಾನ:
ಪ್ರತಿಯೊಂದು
ಸಂಕಲ್ಪ ಮತ್ತು ಕರ್ಮದಲ್ಲಿ ಸಿದ್ಧಿ ಅರ್ಥಾತ್ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸಂಪೂರ್ಣ
ಮೂರ್ತಿ ಭವ.
ಸಂಕಲ್ಪಗಳ ಸಿದ್ಧಿಯ
ಪ್ರಾಪ್ತಿಯು ಆಗ ಪ್ರಾಪ್ತಿಯಾಗುತ್ತದೆ, ಯಾವಾಗ ಸಮರ್ಥ ಸಂಕಲ್ಪಗಳ ರಚನೆ ಮಾಡುವಿರಿ. ಯಾರು ಅಧಿಕ
ಸಂಕಲ್ಪಗಳ ರಚನೆ ಮಾಡುವರು, ಅವರು ಅದನ್ನು ಪಾಲಿಸಲು ಆಗುವುದಿಲ್ಲ ಆದ್ದರಿಂದ ರಚನೆಯೆಷ್ಟು
ಹೆಚ್ಚಾಗುವುದು ಅಷ್ಟು ಶಕ್ತಿಹೀನರಾಗುವರು. ಅಂದಮೇಲೆ ಮೊದಲು ವ್ಯರ್ಥದ ರಚನೆಯನ್ನು ಬಂಧ್
ಮಾಡುತ್ತೀರೆಂದರೆ ಸಫಲತೆಯ ಪ್ರಾಪ್ತಿಯಾಗುವುದು ಮತ್ತು ಕರ್ಮಗಳಲ್ಲಿ ಸಫಲತೆಯನ್ನು ಪ್ರಾಪ್ತಿ
ಮಾಡಿಕೊಳ್ಳುವ ಯುಕ್ತಿಯಾಗಿದೆ - ಕರ್ಮ ಮಾಡುವುದಕ್ಕೆ ಮೊದಲು ಆದಿ-ಮಧ್ಯ ಮತ್ತು ಅಂತ್ಯವನ್ನು
ತಿಳಿದುಕೊಂಡ ನಂತರ ಕರ್ಮವನ್ನು ಮಾಡುವುದು. ಇದರಿಂದ ಸಂಪೂರ್ಣ ಮೂರ್ತಿಗಳಾಗುವಿರಿ.
ಸ್ಲೋಗನ್:
ಸಮಯದಲ್ಲಿ ದುಃಖ
ಮತ್ತು ಮೋಸದಿಂದ ಪಾರಾಗುತ್ತಾ ಸಫಲರಾಗುವವರೇ ಜ್ಞಾನಿ (ಬುದ್ಧಿವಂತ) ಆಗಿದ್ದಾರೆ.
ಅವ್ಯಕ್ತ ಸೂಚನೆಗಳು:-
ಅಪವಿತ್ರತೆಯ ಬೀಜವನ್ನು ಸಮಾಪ್ತಿ ಮಾಡಿ ಸಂಪೂರ್ಣ ಸ್ವಚ್ಛ ( ಪವಿತ್ರ ) ಆಗಿರಿ.
ತಾವು ಹೋಲಿ ಹಂಸ ಮಕ್ಕಳ
ಆಹಾರವು ಶುದ್ಧ, ವ್ಯವಹಾರವು ಶುದ್ಧ, ಅಶುದ್ಧತೆಯ ಹೆಸರು ಚಿಹ್ನೆಯೂ ಸಹ ಇರಬಾರದು ಏಕೆಂದರೆ ಶುದ್ಧ
ಪ್ರಪಂಚದಲ್ಲಿ ಹೋಗುವವರು ಆಗಿದ್ದೀರಿ, ಅಲ್ಲಿ ಅಪವಿತ್ರತೆ ಅಥವಾ ಅಶುದ್ಧತೆಯ ಹೆಸರು ಚಿಹ್ನೆಯೂ
ಇಲ್ಲ. ಯಾವಾಗ ಇಂತಹ ಹೋಲಿ ಹಂಸ ಆಗುವಿರಿ ಆಗ ಭವಿಷ್ಯದಲ್ಲಿ ಹಿಸ್-ಹೊಲಿನೆಸ್ ಎಂದು
ಕರೆಸಿಕೊಳ್ಳುವಿರಿ.