17.01.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಯಾವಾಗ
ಈ ಭಾರತವು ಸ್ವರ್ಗವಾಗಿತ್ತೋ ಆಗ ನೀವು ಸಂಪೂರ್ಣ ಪ್ರಕಾಶತೆಯಲ್ಲಿದ್ದಿರಿ, ಈಗ ಅಂಧಕಾರವಿದೆ ಪುನಃ
ಬೆಳಕಿನೆಡೆಗೆ ನಡೆಯಿರಿ”
ಪ್ರಶ್ನೆ:
ತಂದೆಯು ತಮ್ಮ
ಮಕ್ಕಳಿಗೆ ಯಾವ ಒಂದು ಕಥೆಯನ್ನು ತಿಳಿಸಲು ಬಂದಿದ್ದಾರೆ?
ಉತ್ತರ:
ತಂದೆಯು
ತಿಳಿಸುತ್ತಾರೆ - ಮಧುರ ಮಕ್ಕಳೇ, ನಾನು ನಿಮಗೆ 84 ಜನ್ಮಗಳ ಕಥೆಯನ್ನು ತಿಳಿಸುತ್ತೇನೆ. ನೀವು
ಮೊಟ್ಟ ಮೊದಲ ಜನ್ಮದಲ್ಲಿದ್ದಾಗ ಒಂದೇ ದೈವೀ ಧರ್ಮವಿತ್ತು ಮತ್ತೆ ನೀವೇ ಎರಡು ಯುಗಗಳ ನಂತರ
ದೊಡ್ಡ-ದೊಡ್ಡ ಮಂದಿರಗಳನ್ನು ಕಟ್ಟಿಸಿದ್ದೀರಿ, ಭಕ್ತಿಯನ್ನು ಆರಂಭಿಸಿದ್ದೀರಿ. ಈಗ ನಿಮ್ಮದು ಇದು
ಅಂತಿಮದಲ್ಲಿಯೂ ಅಂತಿಮ ಜನ್ಮವಾಗಿದೆ. ದುಃಖಹರ್ತ-ಸುಖಕರ್ತ ಬನ್ನಿ ಎಂದು ನೀವೇ ಕರೆದಿರಿ ಆದ್ದರಿಂದ
ನಾನೀಗ ಬಂದಿದ್ದೇನೆ.
ಗೀತೆ:
ಇಂದು
ಅಂಧಕಾರದಲ್ಲಿ ಮನುಷ್ಯರು..........
ಓಂ ಶಾಂತಿ.
ನೀವು ಮಕ್ಕಳಿಗೆ ತಿಳಿದಿದೆ - ಈಗ ಇದು ಕಲಿಯುಗೀ ಪ್ರಪಂಚವಾಗಿದೆ, ಎಲ್ಲರೂ ಅಂಧಕಾರದಲ್ಲಿದ್ದಾರೆ.
ಮೊದಲು ಭಾರತವು ಸ್ವರ್ಗವಾಗಿದ್ದಾಗ ಪ್ರಕಾಶತೆಯಲ್ಲಿದ್ದರು. ಇದೇ ಭಾರತವಾಸಿಗಳು ಯಾರು ತಮ್ಮನ್ನು
ಹಿಂದೂಗಳೆಂದು ಕರೆಸಿಕೊಳ್ಳುತ್ತಿದ್ದಾರೆಯೋ ಅವರು ಮೂಲತಃ ದೇವಿ-ದೇವತೆಗಳಾಗಿದ್ದರು. ಭಾರತದಲ್ಲಿ
ಸ್ವರ್ಗವಾಸಿಗಳಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ, ಒಂದೇ ಧರ್ಮವಿತ್ತು. ಸ್ವರ್ಗ, ವೈಕುಂಠ,
ಬಹಿಶ್ತ್, ಹೆವೆನ್ ಇವೆಲ್ಲವು ಭಾರತದ ಹೆಸರುಗಳಾಗಿದ್ದವು. ಭಾರತವು ಪವಿತ್ರ ಮತ್ತು ಪ್ರಾಚೀನ
ಧನವಂತವಾಗಿತ್ತು. ಈಗಂತೂ ಭಾರತವು ಕಂಗಾಲಾಗಿದೆ ಏಕೆಂದರೆ ಈಗ ಕಲಿಯುಗವಾಗಿದೆ. ನಿಮಗೆ ತಿಳಿದಿದೆ -
ನಾವು ಅಂಧಕಾರದಲ್ಲಿದ್ದೇವೆ. ಸ್ವರ್ಗದಲ್ಲಿದ್ದಾಗ ಪ್ರಕಾಶತೆಯಲ್ಲಿದ್ದೆವು, ಸ್ವರ್ಗದ ರಾಜ
ರಾಜೇಶ್ವರ, ರಾಜ ರಾಜೇಶ್ವರಿ ಶ್ರೀ ಲಕ್ಷ್ಮೀ-ನಾರಾಯಣರಾಗಿದ್ದರು, ಅದಕ್ಕೆ ಸುಖಧಾಮವೆಂದು
ಹೇಳಲಾಗುತ್ತದೆ. ತಂದೆಯಿಂದಲೇ ನೀವು ಸುಖದ ಆಸ್ತಿಯನ್ನು ಪಡೆಯಬೇಕಾಗಿದೆ, ಅದಕ್ಕೆ
ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ಈಗಂತೂ ಎಲ್ಲರೂ ಜೀವನ ಬಂಧನದಲ್ಲಿದ್ದಾರೆ. ವಿಶೇಷವಾಗಿ ಭಾರತ
ಹಾಗೂ ಇಡೀ ಪ್ರಪಂಚವೇ ರಾವಣನ ಬಂಧನದಲ್ಲಿ ಶೋಕವಾಟಿಕೆಯಲ್ಲಿದೆ. ರಾವಣನು ಕೇವಲ ಲಂಕೆಯಲ್ಲಿದ್ದನು
ಮತ್ತು ರಾಮನು ಭಾರತದಲ್ಲಿದ್ದನು. ರಾವಣನು ಬಂದು ಸೀತೆಯನ್ನು ಅಪಹರಿಸಿದನು ಎಂದಲ್ಲ. ಇವೆಲ್ಲಾ ದಂತ
ಕಥೆಗಳಾಗಿವೆ. ಗೀತೆಯು ಮುಖ್ಯವಾಗಿದೆ, ಸರ್ವ ಶಾಸ್ತ್ರಮಯೀ ಶಿರೋಮಣಿ ಶ್ರೀಮತ ಅರ್ಥಾತ್ ಭಗವಂತನು
ಭಾರತದಲ್ಲಿ ಉಚ್ಛರಿಸಿರುವುದಾಗಿದೆ. ಮನುಷ್ಯರು ಯಾರದೇ ಸದ್ಗತಿ ಮಾಡಲು ಸಾಧ್ಯವಿಲ್ಲ.
ಸತ್ಯಯುಗದಲ್ಲಿ ಜೀವನ್ಮುಕ್ತ ದೇವಿ-ದೇವತೆಗಳಿದ್ದರು. ಯಾರು ಈ ಆಸ್ತಿಯನ್ನು ಕಲಿಯುಗದ ಅಂತ್ಯದಲ್ಲಿ
ಪಡೆದಿದ್ದರು. ಭಾರತವಾಸಿಗಳಿಗೆ ಇದು ತಿಳಿದೇ ಇಲ್ಲ ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲ.
ಶಾಸ್ತ್ರಗಳಲ್ಲಿ ಭಕ್ತಿಮಾರ್ಗದ ಜ್ಞಾನವಿದೆ. ಸದ್ಗತಿ ಮಾರ್ಗದ ಜ್ಞಾನವು ಮನುಷ್ಯ ಮಾತ್ರರಲ್ಲಿ
ಇಲ್ಲವೇ ಇಲ್ಲ. ಎಲ್ಲರೂ ಭಕ್ತಿ ಕಲಿಸುವವರಾಗಿದ್ದಾರೆ. ಶಾಸ್ತ್ರಗಳನ್ನು ಓದಿ ದಾನ-ಪುಣ್ಯ ಮಾಡಿ
ಎಂದು ಹೇಳುತ್ತಾರೆ. ಈ ಭಕ್ತಿಯು ದ್ವಾಪರದಿಂದ ನಡೆದು ಬರುತ್ತದೆ. ಸತ್ಯ-ತ್ರೇತಾಯುಗದಲ್ಲಿ ಜ್ಞಾನದ
ಪ್ರಾಲಬ್ಧವಿರುತ್ತದೆ. ಅಲ್ಲಿಯೂ ಈ ಜ್ಞಾನವು ನಡೆದು ಬರುತ್ತದೆಯೆಂದಲ್ಲ. ಭಾರತಕ್ಕೆ ಯಾವ
ಆಸ್ತಿಯಿತ್ತೋ ಅದು ತಂದೆಯಿಂದ ಸಂಗಮಯುಗದಲ್ಲಿಯೇ ಸಿಕ್ಕಿತು, ಅದು ಈಗ ಪುನಃ ನಿಮಗೆ ಸಿಗುತ್ತಿದೆ.
ಭಾರತವಾಸಿಗಳು ಯಾವಾಗ ನರಕವಾಸಿ ಬೇಹದ್ದಿನ ದುಃಖಿಯಾಗಿ ಬಿಡುವರೋ ಆಗ ಹೇ ಪತಿತ-ಪಾವನ,
ದುಃಖಹರ್ತ-ಸುಖಕರ್ತನೆಂದು ಕರೆಯುತ್ತಾರೆ. ಯಾರ ದುಃಖಹರ್ತ? ಸರ್ವರ ದುಃಖಹರ್ತನಾಗಿದ್ದಾರೆ ಏಕೆಂದರೆ
ಮುಖ್ಯವಾಗಿ ಭಾರತ ಹಾಗೂ ಸಾಮಾನ್ಯವಾಗಿ ಇಡೀ ಪ್ರಪಂಚದ ಎಲ್ಲರಲ್ಲಿ ಪಂಚ ವಿಕಾರಗಳಿವೆ. ತಂದೆಯು
ಪತಿತ-ಪಾವನನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಕಲ್ಪದ ಸಂಗಮ ಯುಗದಲ್ಲಿ
ಬರುತ್ತೇನೆ. ಸರ್ವರ ಸದ್ಗತಿದಾತನಾಗುತ್ತೇನೆ. ಅಹಲ್ಯೆಯರು, ಗಣಿಕೆಯರು ಮತ್ತು ಯಾರೆಲ್ಲಾ
ಗುರುಗಳಿದ್ದಾರೆಯೋ ಅವರೆಲ್ಲರ ಉದ್ಧಾರವನ್ನು ನಾನೇ ಮಾಡಬೇಕಾಗುತ್ತದೆ ಏಕೆಂದರೆ ಇದಂತೂ ಪತಿತ
ಪ್ರಪಂಚವಾಗಿದೆ, ಸತ್ಯಯುಗಕ್ಕೆ ಪಾವನ ಪ್ರಪಂಚವೆಂದು ಕರೆಯಲಾಗುತ್ತದೆ. ಭಾರತದಲ್ಲಿ ಈ
ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇವರು ಸ್ವರ್ಗದ ಮಾಲೀಕರಾಗಿದ್ದರೆಂಬುದು ಭಾರತವಾಸಿಗಳಿಗೆ
ತಿಳಿದಿಲ್ಲ. ಪತಿತ ಖಂಡವೆಂದರೆ ಅಸತ್ಯ ಖಂಡ, ಪಾವನ ಖಂಡವೆಂದರೆ ಸತ್ಯ ಖಂಡ. ಭಾರತ ಪಾವನ
ಖಂಡವಾಗಿತ್ತು, ಈ ಭಾರತವು ಅವಿನಾಶಿ ಖಂಡವಾಗಿದೆ, ಇದೆಂದೂ ವಿನಾಶ ಹೊಂದುವುದಿಲ್ಲ ಯಾವಾಗ ಈ
ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಆಗ ಮತ್ತ್ಯಾವುದೇ ಖಂಡವಿರಲಿಲ್ಲ. ಅವೆಲ್ಲವೂ ನಂತರದಲ್ಲಿ
ಬರುತ್ತವೆ. ಮನುಷ್ಯರು ಕಲ್ಪವನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ ಆದರೆ ಕಲ್ಪದ ಆಯಸ್ಸು
5000 ವರ್ಷಗಳಾಗಿದೆ. ಮನುಷ್ಯರು 84 ಲಕ್ಷ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ಹೇಳುತ್ತಾರೆ
ಮತ್ತು ಮನುಷ್ಯರನ್ನು ನಾಯಿ, ಬೆಕ್ಕು, ಕತ್ತೆ ಇತ್ಯಾದಿ ಎಲ್ಲವನ್ನಾಗಿ ಮಾಡಿ ಬಿಟ್ಟಿದ್ದಾರೆ ಆದರೆ
ಬೆಕ್ಕು, ನಾಯಿಯ ಜನ್ಮವೇ ಬೇರೆಯಾಗಿದೆ. 84 ಲಕ್ಷ ವಿಭಿನ್ನ ಪ್ರಾಣಿ-ಪಕ್ಷಿಗಳಿವೆ. ಮನುಷ್ಯ
ಜಾತಿಯಂತೂ ಒಂದೇ ಆಗಿದೆ. ಮನುಷ್ಯರೇ 84 ಜನ್ಮಗಳನ್ನು ತೆಗೆದುಕೊಳ್ಳುವರು. ತಂದೆಯು ತಿಳಿಸುತ್ತಾರೆ
- ಭಾರತವಾಸಿಗಳು ಡ್ರಾಮಾ ಪ್ಲಾನನುಸಾರ ತಮ್ಮ ಧರ್ಮವನ್ನೇ ಮರೆತು ಹೋಗಿದ್ದಾರೆ. ಕಲಿಯುಗದ
ಅಂತ್ಯದಲ್ಲಿ ಸಂಪೂರ್ಣ ಪತಿತರಾಗಿ ಬಿಟ್ಟಿದ್ದಾರೆ ಮತ್ತೆ ಸಂಗಮ ಯುಗದಲ್ಲಿ ಬಂದು ಪಾವನ ಮಾಡುತ್ತಾರೆ,
ಇದಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ ನಂತರ ಇದೇ ಭಾರತವು ಸುಖಧಾಮವಾಗುವುದು. ತಂದೆಯು
ತಿಳಿಸುತ್ತಾರೆ - ಹೇ ಮಕ್ಕಳೇ, ನೀವು ಭಾರತವಾಸಿಗಳು ಸ್ವರ್ಗವಾಸಿಗಳಾಗಿದ್ದಿರಿ ನಂತರ ನೀವು 84
ಜನ್ಮಗಳ ಏಣಿಯನ್ನು ಇಳಿಯುತ್ತೀರಿ. ಸತೋದಿಂದ ರಜೋ, ತಮೋದಲ್ಲಿ ಖಂಡಿತ ಬರಲೇಬೇಕಾಗಿದೆ. ನೀವು
ದೇವತೆಗಳಂತಹ ಧನವಂತರು ಸದಾ ಸಂತೋಷ, ಆರೋಗ್ಯ, ಐಶ್ವರ್ಯವಂತರು ಮತ್ತ್ಯಾರೂ ಆಗುವುದಿಲ್ಲ. ಭಾರತವು
ಎಷ್ಟು ಸಾಹುಕಾರನಾಗಿತ್ತು, ವಜ್ರ-ರತ್ನಗಳು ಕಲ್ಲುಗಳ ತರಹ ಹೇರಳವಾಗಿದ್ದವು. ಎರಡು ಯುಗಗಳ ನಂತರ
ಭಕ್ತಿಮಾರ್ಗದಲ್ಲಿ ಎಷ್ಟು ದೊಡ್ಡ-ದೊಡ್ಡ ಮಂದಿರಗಳನ್ನು ಕಟ್ಟಿಸುತ್ತಾರೆ! ಅದು ಎಷ್ಟು ಭಾರಿ
ಮಂದಿರಗಳನ್ನು ಕಟ್ಟಿಸಿದರು. ಸೋಮನಾಥ ಮಂದಿರವು ದೊಡ್ಡದಕ್ಕಿಂತ ದೊಡ್ಡದಾಗಿತ್ತು. ಕೇವಲ ಒಂದು
ಮಂದಿರವೇ ಇರುವುದಿಲ್ಲ ಅಲ್ಲವೆ. ಅನ್ಯ ರಾಜರ ಮಂದಿರಗಳೂ ಇದ್ದವು, ಎಷ್ಟೊಂದು ಲೂಟಿ ಮಾಡಿಕೊಂಡು
ಹೋಗಿದ್ದಾರೆ. ತಂದೆಯು ನೀವು ಮಕ್ಕಳಿಗೆ ಸ್ಮೃತಿ ತರಿಸುತ್ತಾರೆ - ನಿಮ್ಮನ್ನು ಎಷ್ಟು
ಸಾಹುಕಾರರನ್ನಾಗಿ ಮಾಡಿದ್ದೆನು, ನೀವು ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಿದ್ದಿರಿ, ಯಥಾ
ಮಹಾರಾಜ-ಮಹಾರಾಣಿ. ಅವರಿಗೆ ಭಗವಾನ್-ಭಗವತಿಯೆಂದೂ ಹೇಳಬಹುದು ಆದರೆ ತಂದೆಯು ತಿಳಿಸಿದ್ದಾರೆ -
ಭಗವಂತನು ಒಬ್ಬರೇ ಆಗಿದ್ದಾರೆ, ಅವರು ತಂದೆಯಾಗಿದ್ದಾರೆ. ಕೇವಲ ಈಶ್ವರ ಅಥವಾ ಪ್ರಭು ಎಂದು
ಹೇಳಿದಾಗಲೂ ಸಹ ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ ಎಂಬುದು ನೆನಪಿಗೆ ಬರುವುದಿಲ್ಲ. ತಂದೆಯು
ಕುಳಿತು ಕಥೆಯನ್ನು ತಿಳಿಸುತ್ತಾರೆ. ಈಗ ನಿಮ್ಮದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಕೇವಲ ಒಬ್ಬರ
ಮಾತಿಲ್ಲ ಅಥವಾ ಯಾವುದೇ ಯುದ್ಧದ ಮೈದಾನ ಇತ್ಯಾದಿಗಳಿಲ್ಲ. ಭಾರತವಾಸಿಗಳು ಅವರ
ರಾಜ್ಯವಿತ್ತೆಂಬುದನ್ನೂ ಸಹ ಮರೆತು ಹೋಗಿದ್ದಾರೆ. ಸತ್ಯಯುಗದ ಆಯಸ್ಸನ್ನು ಬಹಳ ಉದ್ದಗಲ
ಮಾಡಿರುವುದರಿಂದ ಬಹಳ ದೂರ ತೆಗೆದುಕೊಂಡು ಹೋಗಿದ್ದಾರೆ. ತಂದೆಯು ಬಂದು ತಿಳಿಸುತ್ತಾರೆ -
ಮನುಷ್ಯರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಮನುಷ್ಯರು ಯಾರದೇ ಸದ್ಗತಿ ಮಾಡಲು ಸಾಧ್ಯವಿಲ್ಲ.
ಸರ್ವರ ಸದ್ಗತಿದಾತ, ಪತಿತ-ಪಾವನ ಕರ್ತನೊಬ್ಬನೇ ಎಂದು ಗಾದೆ ಮಾತಿದೆ. ಒಬ್ಬರೇ ಸತ್ಯ
ತಂದೆಯಾಗಿದ್ದಾರೆ. ಅವರು ಸತ್ಯ ಖಂಡದ ಸ್ಥಾಪನೆ ಮಾಡುವವರಾಗಿದ್ದಾರೆ. ಪೂಜೆಯನ್ನೂ ಮಾಡುತ್ತಾರೆ
ಅದರೆ ಭಕ್ತಿಮಾರ್ಗದಲ್ಲಿ ನೀವು ಯಾರ ಪೂಜೆ ಮಾಡುತ್ತಾ ಬಂದಿದ್ದೀರೋ ಅವರಲ್ಲಿ ಯಾರೊಬ್ಬರ
ಚರಿತ್ರೆಯನ್ನೂ ತಿಳಿದುಕೊಂಡಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ನೀವು ಶಿವ ಜಯಂತಿಯನ್ನಂತೂ
ಆಚರಿಸುತ್ತೀರಲ್ಲವೆ. ತಂದೆಯು ಹೊಸ ಸೃಷ್ಟಿಯ ರಚಯಿತನಾಗಿದ್ದಾರೆ. ಅವರು ಬೇಹದ್ದಿನ ಸುಖ
ಕೊಡುವವರಾಗಿದ್ದಾರೆ. ಸತ್ಯಯುಗದಲ್ಲಿ ಬಹಳ ಸುಖವಿತ್ತು, ಅದನ್ನು ಯಾರು ಮತ್ತು ಹೇಗೆ ಸ್ಥಾಪನೆ
ಮಾಡಿದರು? ಇದನ್ನು ತಂದೆಯೇ ತಿಳಿಸುತ್ತಾರೆ. ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವುದು
ಅಥವಾ ಭ್ರಷ್ಟಾಚಾರಿಗಳನ್ನು ಶ್ರೇಷ್ಠಾಚಾರಿ ದೇವತೆಗಳನ್ನಾಗಿ ಮಾಡುವುದು ತಂದೆಯ ಕರ್ತವ್ಯವೇ ಆಗಿದೆ.
ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳನ್ನು ಪಾವನರನ್ನಾಗಿ ಮಾಡುತ್ತೇನೆ. ನೀವು ಸ್ವರ್ಗದ
ಮಾಲೀಕರಾಗುತ್ತೀರಿ. ನಿಮ್ಮನ್ನು ಪತಿತರನ್ನಾಗಿ ಯಾರು ಮಾಡುತ್ತಾರೆ? ಈ ರಾವಣ. ದುಃಖವನ್ನೂ ಸಹ
ಈಶ್ವರನೇ ಕೊಡುತ್ತಾರೆಂದು ಮನುಷ್ಯರು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ನಾನಂತೂ
ಎಲ್ಲರಿಗೆ ಇಷ್ಟೊಂದು ಸುಖವನ್ನೂ ಕೊಡುತ್ತೇನೆ ಮತ್ತೆ ಅರ್ಧ ಕಲ್ಪದವರೆಗೆ ನೀವು ತಂದೆಯ
ಸ್ಮರಣೆಯನ್ನೇ ಮಾಡುವುದಿಲ್ಲ ನಂತರ ರಾವಣ ರಾಜ್ಯವಾದಾಗ ಎಲ್ಲರ ಪೂಜೆ ಮಾಡತೊಡಗುತ್ತೀರಿ. ನಿಮ್ಮದು
ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಬಾಬಾ, ನಾವು ಎಷ್ಟು ಜನ್ಮಗಳನ್ನು ತೆಗೆದುಕೊಂಡೆವು ಎಂದು
ಕೇಳುತ್ತಾರೆ. ಅದಕ್ಕೆ ತಂದೆಯು ಹೇಳುತ್ತಾರೆ - ಮಧುರಾತಿ ಮಧುರ ಭಾರತವಾಸಿಗಳೇ, ಹೇ ಆತ್ಮರೇ, ಈಗ
ನಿಮಗೆ ಬೇಹದ್ದಿನ ಆಸ್ತಿಯನ್ನು ಕೊಡುತ್ತೇನೆ. ಮಕ್ಕಳೇ, ನೀವು 84 ಜನ್ಮಗಳನ್ನು
ತೆಗೆದುಕೊಂಡಿದ್ದೀರಿ, ನೀವೀಗ 21 ಜನ್ಮಗಳಿಗಾಗಿ ತಂದೆಯಿಂದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ.
ಎಲ್ಲರೂ ಒಟ್ಟಿಗೆ ಬರುವುದಿಲ್ಲ, ನೀವೇ ಸತ್ಯಯುಗದ ಸೂರ್ಯವಂಶಿ ಪದವಿಯನ್ನು ಪುನಃ
ತೆಗೆದುಕೊಳ್ಳುತ್ತೀರಿ ಅರ್ಥಾತ್ ಸತ್ಯ ತಂದೆಯಿಂದ ಸತ್ಯ ನರನಿಂದ ನಾರಾಯಣನಾಗುವ ಜ್ಞಾನವನ್ನು
ಕೇಳುತ್ತೀರಿ. ಇದು ಜ್ಞಾನ, ಅದು ಭಕ್ತಿಯಾಗಿದೆ. ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗಕ್ಕಾಗಿಯೇ ಇವೆ.
ಅವು ಜ್ಞಾನ ಮಾರ್ಗದ ಶಾಸ್ತ್ರಗಳಲ್ಲ, ಇದು ಆಧ್ಯಾತ್ಮಿಕ ಜ್ಞಾನವಾಗಿದೆ. ಪರಮ ಆತ್ಮನೇ ಕುಳಿತು
ಜ್ಞಾನವನ್ನು ತಿಳಿಸುತ್ತಾರೆ ಅಂದಾಗ ಮಕ್ಕಳು ಆತ್ಮಾಭಿಮಾನಿಯಾಗಬೇಕಾಗಿದೆ. ತಮ್ಮನ್ನು ಆತ್ಮ
ನಿಶ್ಚಯ ಮಾಡಿಕೊಂಡು ನನ್ನೊಬ್ಬನನ್ನೇ ನೆನಪು ಮಾಡಿ. ತಂದೆಯು ತಿಳಿಸುತ್ತಾರೆ – ಆತ್ಮದಲ್ಲಿಯೇ
ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವಿರುತ್ತದೆ. ಅದರನುಸಾರವಾಗಿಯೇ ಮನುಷ್ಯನಿಗೆ ಒಳ್ಳೆಯ ಅಥವಾ ಕೆಟ್ಟ
ಜನ್ಮ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ಇವರು (ಬ್ರಹ್ಮಾ) ಯಾರು ಪಾವನರಾಗಿದ್ದರೊ ಅವರೇ ಈಗ
ಅಂತಿಮ ಜನ್ಮದಲ್ಲಿ ಪತಿತನಾಗಿದ್ದಾರೆ, ತತ್ತ್ವಂ. ತಂದೆಯಾದ ನಾನು ಈ ಹಳೆಯ ರಾವಣ ಪ್ರಪಂಚ, ಪತಿತ
ಪ್ರಪಂಚದಲ್ಲಿ ಬರಬೇಕಾಗುತ್ತದೆ. ಯಾರು ಪುನಃ ಮೊದಲ ನಂಬರಿನಲ್ಲಿ ಹೋಗಬೇಕಾಗಿದೆಯೋ ಅವರ
ತನುವಿನಲ್ಲಿಯೇ ಬರುತ್ತೇನೆ. ಸೂರ್ಯವಂಶಿಗಳೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಇವರು
ಬ್ರಹ್ಮಾವಂಶಿ ಬ್ರಾಹ್ಮಣರಾಗಿದ್ದಾರೆ. ತಂದೆಯು ಪ್ರತಿನಿತ್ಯವೂ ತಿಳಿಸುತ್ತಾರೆ. ಕಲ್ಲು
ಬುದ್ಧಿಯವರನ್ನು ಪಾರಸ ಬುದ್ಧಿಯವರನ್ನಾಗಿ ಮಾಡುವುದು ಚಿಕ್ಕಮ್ಮನ ಮನೆಯಂತಲ್ಲ. ಹೇ ಆತ್ಮರೇ, ಈಗ
ದೇಹೀ-ಅಭಿಮಾನಿಯಾಗಿರಿ. ಹೇ ಆತ್ಮರೇ, ಒಬ್ಬ ತಂದೆಯನ್ನು ನೆನಪು ಮಾಡಿ ಮತ್ತು ರಾಜಧಾನಿಯನ್ನು ನೆನಪು
ಮಾಡಿ. ದೇಹದ ಸಂಬಂಧಗಳನ್ನು ಬಿಡಿ, ಎಲ್ಲರೂ ಸಾಯಲೇಬೇಕಾಗಿದೆ. ಎಲ್ಲರದು ವಾನಪ್ರಸ್ಥ ಸ್ಥಿತಿಯಾಗಿದೆ.
ಒಬ್ಬ ಸದ್ಗುರುವಿನ ವಿನಃ ಮತ್ತ್ಯಾರೂ ಸರ್ವರ ಸದ್ಗತಿದಾತನಾಗಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ
- ಹೇ ಭಾರತವಾಸಿ ಮಕ್ಕಳೇ, ನೀವು ಮೊಟ್ಟ ಮೊದಲು ನನ್ನಿಂದ ಅಗಲಿದ್ದೀರಿ. ಆತ್ಮಗಳು ಮತ್ತು
ಪರಮಾತ್ಮನು ಬಹಳ ಕಾಲ ಅಗಲಿದ್ದರು..... ಎಂದು ಗಾಯನವಿದೆ. ಮೊಟ್ಟ ಮೊದಲಿಗೆ ನೀವು ಭಾರತವಾಸಿ
ದೇವಿ-ದೇವತಾ ಧರ್ಮದವರು ಬಂದಿದ್ದಿರಿ, ಅನ್ಯ ಧರ್ಮದವರ ಜನ್ಮಗಳು ಕಡಿಮೆಯಿರುತ್ತವೆ. ಇಡೀ ಚಕ್ರವು
ಹೇಗೆ ಸುತ್ತುತ್ತದೆಯೆಂಬುದನ್ನು ತಂದೆಯು ತಿಳಿಸುತ್ತಾರೆ. ಯಾರು ಧಾರಣೆ ಮಾಡಿಸಲು ಸಾಧ್ಯವಿಲ್ಲವೋ
ಅವರಿಗಾಗಿಯೇ ಬಹಳ ಸಹಜವಾಗಿದೆ. ಆತ್ಮಗಳು ಧಾರಣೆ ಮಾಡುತ್ತಾರೆ. ಆತ್ಮವೆ ಪುಣ್ಯಾತ್ಮ,
ಪಾಪಾತ್ಮನಾಗುತ್ತದೆಯಲ್ಲವೆ. ನಿಮ್ಮದು ಇದು 84ನೇ ಅಂತಿಮ ಜನ್ಮವಾಗಿದೆ. ನೀವೆಲ್ಲರೂ ವಾನಪ್ರಸ್ಥ
ಸ್ಥಿತಿಯಲ್ಲಿದ್ದೀರಿ. ವಾನಪ್ರಸ್ಥ ಸ್ಥಿತಿಯಲ್ಲಿರುವವರು ಮಂತ್ರವನ್ನು ಪಡೆಯುವುದಕ್ಕಾಗಿ
ಗುರುಗಳನ್ನು ಮಾಡಿಕೊಳ್ಳುತ್ತಾರೆ. ನೀವಂತೂ ಈಗ ದೇಹಧಾರಿ ಗುರುಗಳನ್ನು ಮಾಡಿಕೊಳ್ಳುವ
ಅವಶ್ಯಕತೆಯಿಲ್ಲ. ನಾನು ನಿಮ್ಮೆಲ್ಲರ ತಂದೆ, ಶಿಕ್ಷಕ, ಸದ್ಗುರುವಾಗಿದ್ದೇನೆ. ಹೇ ಪತಿತ-ಪಾವನ
ಶಿವಬಾಬಾ ಎಂದು ನೀವು ನನಗೆ ಹೇಳುತ್ತೀರಿ. ಈಗ ಸ್ಮೃತಿ ಬಂದಿದೆ - ಎಲ್ಲಾ ಆತ್ಮರ ತಂದೆಯಾಗಿದ್ದಾರೆ.
ಆತ್ಮವು ಸತ್ಯ ಚೈತನ್ಯವಾಗಿದೆ ಏಕೆಂದರೆ ಅಮರನಾಗಿದೆ. ಎಲ್ಲಾ ಆತ್ಮರಲ್ಲಿ ಪಾತ್ರವು ಅಡಕವಾಗಿದೆ.
ತಂದೆಯೂ ಸಹ ಸತ್ಯ ಚೈತನ್ಯನಾಗಿದ್ದಾರೆ. ಅವರು ಮನುಷ್ಯ ಸೃಷ್ಟಿಯ ಬೀಜರೂಪನಾಗಿರುವ ಕಾರಣ
ತಿಳಿಸುತ್ತಾರೆ - ನಾನು ಇಡೀ ವೃಕ್ಷದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇನೆ ಆದ್ದರಿಂದ
ನನಗೆ ಜ್ಞಾನಪೂರ್ಣನೆಂದು ಕರೆಯುತ್ತಾರೆ. ನಿಮ್ಮಲ್ಲಿಯೂ ಪೂರ್ಣ ಜ್ಞಾನವಿದೆ. ಬೀಜದಿಂದ ವೃಕ್ಷವು
ಹೇಗೆ ಆಗುತ್ತದೆ? ವೃಕ್ಷವು ಬೆಳೆಯುವುದರಲ್ಲಿ ಸಮಯ ಹಿಡಿಸುತ್ತದೆಯಲ್ಲವೆ! ತಂದೆಯು ತಿಳಿಸುತ್ತಾರೆ
- ನಾನು ಬೀಜ ರೂಪನಾಗಿದ್ದೇನೆ. ಅಂತಿಮದಲ್ಲಿ ಇಡೀ ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ತಲುಪುತ್ತದೆ.
ಈಗ ನೋಡಿ, ದೇವಿ-ದೇವತಾ ಧರ್ಮದ ಫೌಂಡೇಷನ್ ಇಲ್ಲ. ಅದು ಮರೆಯಾಗಿದೆ. ಯಾವಾಗ ದೇವತಾ ಧರ್ಮವು
ಪ್ರಾಯಲೋಪವಾಗುವುದೋ ಆಗ ಮತ್ತೆ ಒಂದು ಧರ್ಮದ ಸ್ಥಾಪನೆ ಮಾಡಿ ಉಳಿದೆಲ್ಲದರ ವಿನಾಶ ಮಾಡಿಸಲು ತಂದೆಯು
ಬರಬೇಕಾಗುತ್ತದೆ. ಪ್ರಜಾಪಿತ ಬ್ರಹ್ಮಾರವರ ಮೂಲಕ ತಂದೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ
ಮಾಡಿಸುತ್ತಿದ್ದಾರೆ. ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. ಇದು ಅಂತ್ಯವಾಗುವುದಿಲ್ಲ. ತಂದೆಯು
ಅಂತಿಮದಲ್ಲಿ ಬರುತ್ತಾರೆ, ಯಾವಾಗ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸಬೇಕಾಗಿದೆ
ಆದ್ದರಿಂದ ಅವಶ್ಯವಾಗಿ ಸಂಗಮದಲ್ಲಿಯೇ ಬರುತ್ತಾರೆ. ನಿಮಗೆ ಒಬ್ಬರೇ ತಂದೆಯಾಗಿದ್ದಾರೆ. ಎಲ್ಲಾ
ಆತ್ಮಗಳು ಸಹೋದರ-ಸಹೋದರರಾಗಿದ್ದೀರಿ. ಮೂಲವತನದ ನಿವಾಸಿಯಾಗಿದ್ದೀರಿ. ಆ ತಂದೆಯೊಬ್ಬರನ್ನೇ ಎಲ್ಲರೂ
ನೆನಪು ಮಾಡುತ್ತಾರೆ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು.... ರಾವಣ ರಾಜ್ಯದಲ್ಲಿ
ದುಃಖವಿದೆಯಲ್ಲವೆ. ಇಲ್ಲಿ ಸ್ಮರಣೆ ಮಾಡುತ್ತಾರೆ, ಅಂದಮೇಲೆ ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ.
ಅವರದೇ ಮಹಿಮೆಯಿದೆ. ತಂದೆಯು ಬರದಿದ್ದರೆ ಭಾರತವನ್ನು ಸ್ವರ್ಗವನ್ನಾಗಿ ಯಾರು ಮಾಡುವರು? ಇಸ್ಲಾಮಿ
ಮೊದಲಾದ ಯಾರೆಲ್ಲರೂ ಇದ್ದಾರೆಯೋ ಎಲ್ಲರೂ ಈ ಸಮಯದಲ್ಲಿ ತಮೋಪ್ರಧಾನರಾಗಿದ್ದಾರೆ. ಎಲ್ಲರೂ
ಅವಶ್ಯವಾಗಿ ಪುನರ್ಜನ್ಮವನ್ನು ತೆಗೆದುಕೊಳ್ಳಬೇಕಾಗಿದೆ. ಈಗ ನರಕದಲ್ಲಿ ಪುನರ್ಜನ್ಮ ಸಿಗುತ್ತದೆ.
ಸ್ವರ್ಗದಲ್ಲಿ ಹೋಗುತ್ತಾರೆಂದಲ್ಲ. ಹೇಗೆ ಸ್ವರ್ಗವಾಸಿಯಾದರು ಎಂದು ಹಿಂದೂಗಳು ಹೇಳುತ್ತಾರೆ
ಅಂದಮೇಲೆ ಅವಶ್ಯವಾಗಿ ನರಕದಲ್ಲಿದ್ದರು, ಈಗ ಸ್ವರ್ಗದಲ್ಲಿ ಹೋದರು ಎಂದು ಅರ್ಥವಲ್ಲವೆ.
ಸ್ವರ್ಗವಾಸಿಯಾದರು ಎಂದಮೇಲೆ ಮತ್ತೆ ನರಕದ ಆಸುರೀ ವೈಭವವನ್ನು ಅವರಿಗೆ ಏಕೆ ತಿನ್ನಿಸುತ್ತೀರಿ!
ಬಂಗಾಳದಲ್ಲಿ ಮೀನುಗಳನ್ನು ತಿನ್ನಿಸುತ್ತಾರೆ. ಅರೆ! ಅವರಿಗೆ ಇವೆಲ್ಲವನ್ನೂ ತಿನ್ನುವ
ಅವಶ್ಯಕತೆಯೇನಿದೆ! ಇಂತಹವರು ನಿರ್ವಾಣ ಗೈದರು ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ -
ಇವೆಲ್ಲವೂ ಸುಳ್ಳಾಗಿದೆ, ಹಿಂತಿರುಗಿ ಯಾರೂ ಹೋಗಲು ಸಾಧ್ಯವಿಲ್ಲ. ಯಾವಾಗ ಮೊದಲನೆ ನಂಬರಿನವರೇ 84
ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಅಂದಮೇಲೆ ಅನ್ಯರು ಯಾರು ಹೋಗಲು ಸಾಧ್ಯ!
ತಂದೆಯು ತಿಳಿಸುತ್ತಾರೆ
- ಇದರಲ್ಲಿ ಯಾವುದೇ ಕಷ್ಟವಿಲ್ಲ. ಭಕ್ತಿ ಮಾರ್ಗದಲ್ಲಿ ಎಷ್ಟೊಂದು ಕಷ್ಟವಿರುತ್ತದೆ, ರಾಮ-ರಾಮ ಎಂದು
ಜಪಿಸುತ್ತಾ ರೋಮಾಂಚನವಾಗಿ ನಿಂತು ಬಿಡುತ್ತಾರೆ. ಅವೆಲ್ಲವೂ ಭಕ್ತಿ ಮಾರ್ಗವಾಗಿದೆ. ಈ
ಸೂರ್ಯ-ಚಂದ್ರರನ್ನೂ ನೀವು ತಿಳಿದುಕೊಂಡಿದ್ದೀರಿ. ಇವರು ಪ್ರಕಾಶ ನೀಡುವವರಾಗಿದ್ದಾರೆ. ಇವರೇನು
ದೇವತೆಗಳಲ್ಲ, ವಾಸ್ತವದಲ್ಲಿ ಜ್ಞಾನ ಸೂರ್ಯ, ಜ್ಞಾನ ಚಂದ್ರಮ ಮತ್ತು ನೀವು ಜ್ಞಾನ ನಕ್ಷತ್ರಗಳ
ಮಹಿಮೆಯಿದೆ. ಇದರಿಂದ ಅವರು ಸೂರ್ಯ ದೇವತಾಯ ನಮಃ ಎಂದು ಹೇಳಿ, ಸೂರ್ಯನನ್ನು ದೇವತೆಯೆಂದು ತಿಳಿದು
ಜಲಾರ್ಪಣೆ ಮಾಡುತ್ತಾರೆ. ಅಂದಾಗ ತಂದೆಯು ತಿಳಿಸುತ್ತಾರೆ - ಇದೆಲ್ಲವೂ ಭಕ್ತಿಮಾರ್ಗವಾಗಿದೆ. ಇದು
ಕಲ್ಪದ ನಂತರವೂ ಆಗುವುದು. ಮೊದಲು ಒಬ್ಬ ಶಿವ ತಂದೆಯ ಅವ್ಯಭಿಚಾರಿ ಭಕ್ತಿಯಿರುತ್ತದೆ ನಂತರ
ದೇವತೆಗಳ ಭಕ್ತಿ ನಡೆಯುತ್ತದೆ ಮತ್ತೆ ಇಳಿಯುತ್ತಾ-ಇಳಿಯುತ್ತಾ ಈಗ ನೋಡಿ, ಎಲ್ಲಿ ಮೂರು ರಸ್ತೆಗಳು
ಕೂಡುವವೋ ಅಲ್ಲಿ ಮಣ್ಣಿನ ದೀಪವನ್ನಿಟ್ಟು ಎಣ್ಣೆಯನ್ನು ಹಾಕಿ ಅದಕ್ಕೂ ಪೂಜೆ ಮಾಡುತ್ತಾರೆ. ಪಂಚ
ತತ್ವಗಳಿಗೂ ಪೂಜೆ ಮಾಡುತ್ತಾರೆ. ಮನುಷ್ಯರ ಚಿತ್ರವನ್ನು ಮಾಡಿ ಪೂಜಿಸುತ್ತಾರೆ. ಇದರಿಂದ
ಪ್ರಾಪ್ತಿಯೇನೂ ಆಗುವುದಿಲ್ಲ. ಈ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಆತ್ಮನಿಂದ
ಕೆಟ್ಟ ಸಂಸ್ಕಾರಗಳನ್ನು ತೆಗೆಯಲು ಆತ್ಮಾಭಿಮಾನಿಯಾಗಿರುವ ಅಭ್ಯಾಸ ಮಾಡಬೇಕಾಗಿದೆ. ಇದು ಅಂತಿಮ
84ನೇ ಜನ್ಮವಾಗಿದೆ, ವಾನಪ್ರಸ್ಥ ಸ್ಥಿತಿಯಾಗಿದೆ ಆದ್ದರಿಂದ ಪುಣ್ಯಾತ್ಮನಾಗುವ ಪರಿಶ್ರಮ
ಪಡಬೇಕಾಗಿದೆ.
2. ದೇಹದ ಎಲ್ಲಾ
ಸಂಬಂಧಗಳನ್ನು ಬಿಟ್ಟು ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ಒಬ್ಬ ತಂದೆಯನ್ನು ಮತ್ತು
ರಾಜಧಾನಿಯನ್ನು ನೆನಪು ಮಾಡಬೇಕು. ಬೀಜ ಮತ್ತು ವೃಕ್ಷದ ಜ್ಞಾನವನ್ನು ಸ್ಮರಣೆ ಮಾಡಿ ಸದಾ
ಹರ್ಷಿತರಾಗಿರಬೇಕು.
ವರದಾನ:
ಉಪರಾಂ ಮತ್ತು
ಎವರೆಡಿ ಆಗಿದ್ದು ಬುದ್ಧಿಯ ಮೂಲಕ ಅಶರೀರಿಯಾಗುವ ಅಭ್ಯಾಸವನ್ನು ಮಾಡುವಂತಹ ಸರ್ವಕಲೆಗಳಲ್ಲಿ
ಸಂಪನ್ನ ಭವ.
ಹೇಗೆ ಸರ್ಕಸ್ನಲ್ಲಿ
ಹುರುಪನ್ನು ತೋರಿಸುವಂತಹ ಕಲೆಗಾರರ ಪ್ರತೀ ಕರ್ಮವೂ ಕಲೆಯಾಗಿ ಬಿಡುತ್ತದೆ. ಆ ಕಲೆಗಾರರ ಯಾವುದೇ
ಅಂಗವನ್ನು ಹೇಗೆ ಬೇಕು, ಎಲ್ಲಿ ಬೇಕು, ಎಷ್ಟು ಸಮಯದವರೆಗೆ ಬೇಕೋ ಅಲ್ಲಿಯವರೆಗೆ ಮೋಲ್ಡ್ ಮಾಡಲು
ಸಾಧ್ಯವಾಗುವುದು - ಇದೇ ಕಲೆಯಾಗಿದೆ. ತಾವು ಮಕ್ಕಳು ಬುದ್ಧಿಯನ್ನು ಯಾವಾಗ ಬೇಕು, ಎಷ್ಟು
ಸಮಯದವರೆಗೆ ಎಲ್ಲಿ ಸ್ಥಿತಗೊಳಿಸಬೇಕು, ಅಲ್ಲಿ ಸ್ಥಿತಗೊಳಿಸುವುದೇ ಅತಿ ಶ್ರೇಷ್ಠವಾದ ಕಲೆಯಾಗಿದೆ.
ಈ ಒಂದು ಕಲೆಯಿಂದ (ವಿಶೇಷತೆ/ಹುರುಪು) 16 ಕಲಾ ಸಂಪನ್ನರಾಗಿ ಬಿಡುವಿರಿ. ಇದಕ್ಕಾಗಿ ಈ ರೀತಿಯಾಗಿ
ಉಪರಾಂ ಮತ್ತು ಎವರೆಡಿಯಾಗಿರಿ, ಅದು ಆದೇಶದನುಸಾರ ಒಂದು ಸೆಕೆಂಡಿನಲ್ಲಿಯೇ ಅಶರೀರಿ ಆಗಿ ಬಿಡಬೇಕು.
ಯುದ್ಧದಲ್ಲಿಯೇ ಸಮಯ ಹೋಗಬಾರದು ಅಥವ ಕಳೆದು ಹೋಗಬಾರದು.
ಸ್ಲೋಗನ್:
ಸರಳತೆ ಮತ್ತು
ಸಹನಶೀಲತೆಯ ಗುಣವನ್ನು ಧಾರಣೆ ಮಾಡಿಕೊಳ್ಳುವವರೇ ಸತ್ಯ ಸ್ನೇಹಿ ಹಾಗೂ ಸಹಯೋಗಿ ಆಗಿರುತ್ತಾರೆ.
ಅವ್ಯಕ್ತ ಸೂಚನೆಗಳು:- ಈ
ಅವ್ಯಕ್ತ ಮಾಸದಲ್ಲಿ ಬಂಧನಮುಕ್ತರಾಗಿ ಜೀವನಮುಕ್ತ ಸ್ಥಿತಿಯ ಅನುಭವ ಮಾಡಿರಿ.
ಯಾರು ಪರಮಾತ್ಮ ಜ್ಞಾನಿ
ಮಕ್ಕಳಾಗಿದ್ದಾರೋ, ಅವರಿಗೆ ಜ್ಞಾನದ ಫಲವಾಗಿ ಮುಕ್ತಿ ಮತ್ತು ಜೀವನಮುಕ್ತಿಯ ಆಸ್ತಿ
ಸಂಗಮಯುಗದಲ್ಲಿಯೇ ಲಭಿಸುತ್ತಾರೆ. ಜ್ಞಾನ ಎಂದರೆ ತಿಳುವಳಿಕೆ. ತಿಳುವಳಿಕೆಯುಕ್ತ ಆತ್ಮ ಪ್ರತೀ
ಕರ್ಮವನ್ನು ಮಾಡುತ್ತಾ ಇದ್ದರೂ ಸದಾ ಸ್ವತಃ ಬಂಧನಮುಕ್ತ, ಎಲ್ಲಾ ಆಕರ್ಷಣೆಗಳಿಂದ
ಮುಕ್ತರಾಗುವುದನ್ನು ತಿಳಿದುಕೊಂಡಿರುತ್ತದೆ. ಅವರ ಪ್ರತೀ ಸಂಕಲ್ಪ, ಮಾತು, ಕರ್ಮ, ಸಂಬಂಧ ಮತ್ತು
ಸಂಪರ್ಕದಲ್ಲೂ ಮುಕ್ತಿ-ಜೀವನಮುಕ್ತಿಯ ಸ್ಟೇಜ್ ಇರುತ್ತದೆ, ಇದನ್ನೇ ನ್ಯಾರಾ ಮತ್ತು ಪ್ಯಾರಾ (ಭಿನ್ನ
ಮತ್ತು ಪ್ರಿಯ) ಎಂದು ಹೇಳಿದ್ದಾರೆ.