17.06.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ತಮ್ಮ
ಕಲ್ಯಾಣ ಮಾಡಿಕೊಳ್ಳಬೇಕೆಂದರೆ ಪ್ರತಿಯೊಂದು ಪ್ರಕಾರದ ವ್ರತವನ್ನಿಟ್ಟುಕೊಳ್ಳಿ, ಹೂಗಳಾಗಲು
ಪವಿತ್ರರ ಕೈಯಿಂದ ಶುದ್ಧಭೋಜನವನ್ನು ಸ್ವೀಕರಿಸಿ”
ಪ್ರಶ್ನೆ:
ನೀವು ಮಕ್ಕಳು
ಈಗ ಇಲ್ಲಿಯೇ ಯಾವ ಅಭ್ಯಾಸ ಮಾಡುತ್ತೀರಿ ಅದು 21 ಜನ್ಮಗಳಿಗವರೆಗೆ ಇರುತ್ತದೆ?
ಉತ್ತರ:
ಸದಾ
ತನು-ಮನ-ಧನದಿಂದ ಆರೋಗ್ಯವಂತರಾಗಿರುವ ಅಭ್ಯಾಸವನ್ನು ನೀವು ಇಲ್ಲಿಯೇ ಮಾಡುತ್ತೀರಿ. ನೀವು ದಧೀಚಿ
ಋಷಿಯ ಸಮಾನ ಮೂಳೆ-ಮೂಳೆಗಳನ್ನು ಸವೆಸಬೇಕಾಗಿದೆ ಆದರೆ ಹಠಯೋಗದ ಮಾತಿಲ್ಲ. ತಮ್ಮ ಶರೀರವನ್ನು ಬಲಹೀನ
ಮಾಡಿಕೊಳ್ಳುವುದಲ್ಲ, ನೀವು ಯೋಗದಿಂದ 21 ಜನ್ಮಗಳಿಗಾಗಿ ಆರೋಗ್ಯವಂತರಾಗುತ್ತೀರಿ, ಅದರ
ಅಭ್ಯಾಸವನ್ನು ಇಲ್ಲಿಂದಲೇ ಮಾಡುತ್ತೀರಿ.
ಓಂ ಶಾಂತಿ.
ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರೂ ಸಹ ವಿದ್ಯಾರ್ಥಿಗಳಕಡೆ ನೋಡುತ್ತಾರೆ- ಗುಲಾಬಿ
ಹೂಗಳು ಎಲ್ಲಿದ್ದಾರೆ? ಮುಂದೆ ಯಾರು ಕುಳಿತಿದ್ದಾರೆ? ಹಾಗೆಯೇ ಇದೂ ಸಹ ಹೂದೋಟವಾಗಿದೆ ಆದರೆ
ನಂಬರ್ವಾರಂತೂ ಇದ್ದೇ ಇರುತ್ತಾರೆ. ಇಲ್ಲಿಯೇ ಗುಲಾಬಿಹೂಗಳನ್ನು ನೋಡುತ್ತೇನೆ ಪಕ್ಕದಲ್ಲಿಯೇ
ರತ್ನಜ್ಯೋತಿ ಹೂಗಳನ್ನು ನೋಡುತ್ತೇನೆ, ಇನ್ನೂ ಕೆಲವರು ಎಕ್ಕದ ಹೂವಿನಂತಹವರನ್ನು ನೋಡುತ್ತೇನೆ.
ಹೂದೋಟದ ಮಾಲೀಕನು ನೋಡಬೇಕಾಗುತ್ತದೆಯಲ್ಲವೆ. ಬಂದು ಈ ಮುಳ್ಳಿನ ಕಾಡನ್ನು ಸಮಾಪ್ತಿ ಮಾಡಿ ಹೂವಿನ
ಸಸಿಗಳನ್ನು ನಾಟಿ ಮಾಡಿ ಎಂದು ಆ ಮಾಲೀಕನನ್ನು ಕರೆಯುತ್ತೀರಿ. ಹೇಗೆ ಮುಳ್ಳುಗಳಿಂದ ಹೂವಿನ ಸಸಿಗಳ
ನಾಟಿಯಾಗುತ್ತದೆ ಎಂಬುದನ್ನು ನೀವು ಮಕ್ಕಳು ಪ್ರಾಕ್ಟಿಕಲ್ನಲ್ಲಿ ನೋಡುತ್ತೀರಿ. ನಿಮ್ಮಲ್ಲಿಯೂ
ಕೆಲವೇ ಮಕ್ಕಳು ಮಾತ್ರ ಈ ಮಾತಿನ ಚಿಂತನೆ ಮಾಡುತ್ತೀರಿ, ಇದೂ ಸಹ ಮಕ್ಕಳಿಗೆ ತಿಳಿದಿದೆ- ಅವರು
ಹೂದೋಟದ ಮಾಲೀಕನೂ ಆಗಿದ್ದಾರೆ, ಅಂಬಿಗನೂ ಆಗಿದ್ದಾರೆ, ಎಲ್ಲರನ್ನು ಕರೆದುಕೊಂಡು ಹೋಗುತ್ತಾರೆ.
ಹೂಗಳನ್ನು ನೋಡಿ ತಂದೆಯು ಖುಷಿಪಡುತ್ತಾರೆ. ನಾವು ಮುಳ್ಳುಗಳಿಂದ ಹೂಗಳಾಗುತ್ತಿದ್ದೇವೆಂದು
ಪ್ರತಿಯೊಬ್ಬರೂ ತಿಳಿದುಕೊಳ್ಳುತ್ತಾರೆ. ಜ್ಞಾನವು ನೋಡಿ, ಎಷ್ಟು ಶ್ರೇಷ್ಠವಾಗಿದೆ! ಇದನ್ನು
ತಿಳಿದುಕೊಳ್ಳಲು ಬಹಳ ವಿಶಾಲಬುದ್ಧಿಯು ಬೇಕು. ಇಲ್ಲಿರುವುದೇ ಕಲಿಯುಗೀ ನರಕವಾಸಿಗಳು, ನೀವೀಗ
ಸ್ವರ್ಗವಾಸಿಗಳಾಗುತ್ತಿದ್ದೀರಿ. ಸನ್ಯಾಸಿಗಳು ಗೃಹಸ್ಥವನ್ನು ಬಿಟ್ಟು ಹೊರಟುಹೋಗುತ್ತಾರೆ. ಆದರೆ
ನೀವು ಹೋಗಬೇಕಾಗಿಲ್ಲ. ಕೆಲವರ ಮನೆಯಲ್ಲಿ ಒಬ್ಬರು ಮುಳ್ಳಾಗಿದ್ದರೆ ಇನ್ನೊಬ್ಬರು ಹೂವಾಗಿರುತ್ತಾರೆ.
ತಂದೆಯೊಂದಿಗೆ ಕೆಲವರು ಹೇಳುತ್ತಾರೆ- ಬಾಬಾ, ಮಕ್ಕಳ ಮದುವೆ ಮಾಡುವುದೇ? ತಂದೆಯು ಹೇಳುತ್ತಾರೆ- ಭಲೆ
ಮಾಡಿ, ಮನೆಯಲ್ಲಿಟ್ಟುಕೊಳ್ಳಿ, ಸಂಭಾಲನೆ ಮಾಡಿ. ಕೇಳುತ್ತಾರೆಂದರೆ ಧೈರ್ಯವಿಲ್ಲವೆಂದರೆ ಇದರಿಂದಲೇ
ತಿಳಿದುಬರುತ್ತದೆ ಆದ್ದರಿಂದ ಭಲೆ ಮಾಡಿ ಎಂದು ತಂದೆಯು ಹೇಳಿಬಿಡುತ್ತಾರೆ. ಬಾಬಾ, ನಾವಂತೂ
ರೋಗಿಯಾಗಿದ್ದೇವೆ ಮತ್ತೆ ಸೊಸೆಯು ಬರುತ್ತಾಳೆಂದರೆ ಅವರ ಕೈಯಿಂದ ತಿನ್ನಬೇಕಾಗುತ್ತದೆ ಎಂದು
ಕೇಳುತ್ತಾರೆ. ಅದಕ್ಕೆ ತಂದೆಯು ಹೇಳುತ್ತಾರೆ- ಭಲೆ ತಿನ್ನಿರಿ, ಬೇಡ ಎನ್ನುತ್ತಾರೆಯೇ! ಇಂತಹ
ಸನ್ನಿವೇಶಗಳಿರುತ್ತವೆ ಆಗ ತಿನ್ನಲೇಬೇಕಾಗುವುದು ಏಕೆಂದರೆ ಮೋಹವೂ ಇರುತ್ತದೆಯಲ್ಲವೆ. ಮನೆಗೆ
ಸೊಸೆಯು ಬಂದಳೆಂದರೆ ಮಾತೇ ಕೇಳಬೇಡಿ. ಹೇಗೆ ದೇವಿಯೇ ಬಂದಾಂತಾಗಿಬಿಡುತ್ತದೆ. ಅಷ್ಟು
ಖುಷಿಯಾಗಿಬಿಡುತ್ತಾರೆ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ನಾವು ಹೂಗಳಾಗಬೇಕೆಂದರೆ ಪವಿತ್ರರ
ಕೈಯಿಂದ ತಿನ್ನಬೇಕಾಗಿದೆ. ಅದಕ್ಕಾಗಿ ತಮ್ಮ ಪ್ರಬಂಧ ಮಾಡಿಕೊಳ್ಳಬೇಕಾಗಿದೆ. ಇದರಲ್ಲಿ ಕೇಳಬೇಕೇ!
ತಂದೆಯು ತಿಳಿಸುತ್ತಾರೆ- ನೀವು ದೇವತೆಗಳಾಗುತ್ತೀರಿ ಅಂದಮೇಲೆ ಇದರಲ್ಲಿ ಪಥ್ಯವು ಇರಬೇಕು. ಎಷ್ಟು
ಹೆಚ್ಚು ಪಥ್ಯವನ್ನಿಡುತ್ತೀರೋ ಅಷ್ಟು ನಿಮ್ಮ ಕಲ್ಯಾಣವಾಗುವುದು. ಹೆಚ್ಚು
ಪಥ್ಯವನ್ನಿಟ್ಟುಕೊಳ್ಳುವುದರಲ್ಲಿ ಸ್ವಲ್ಪ ಪರಿಶ್ರಮವೂ ಆಗುವುದು. ಈ ಮಾರ್ಗದಲ್ಲಿ ಹೋಗಬೇಕಾದರೆ
ಹಸಿವಾಗುತ್ತದೆ ಆದ್ದರಿಂದ ಊಟವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ. ಏನಾದರೂ ತೊಂದರೆಯಾಗುತ್ತದೆ,
ಅಂತಹ ಸನ್ನಿವೇಶವು ಬರುತ್ತದೆಯೆಂದರೆ ಸ್ಟೇಷನ್ನಿನವರಿಂದ ಡಬಲ್ ರೊಟ್ಟಿಗಳನ್ನು ತೆಗೆದುಕೊಂಡು
ತಿನ್ನಿರಿ, ಕೇವಲ ತಂದೆಯನ್ನು ನೆನಪು ಮಾಡಿ, ಇದಕ್ಕೆ ಯೋಗಬಲವೆಂದು ಹೇಳಲಾಗುವುದು. ಇದರಲ್ಲಿ
ಹಠಯೋಗದ ಯಾವುದೇ ಮಾತಿಲ್ಲ ಅಥವಾ ಶರೀರವನ್ನು ಬಲಹೀನವನ್ನಾಗಿ ಮಾಡಿಕೊಳ್ಳಬೇಕಾಗಿಲ್ಲ. ದಧೀಚಿ ಋಷಿಯ
ತರಹ ಮೂಳೆ-ಮೂಳೆಗಳನ್ನೂ ಯಜ್ಞಸೇವೆಯಲ್ಲಿ ಕೊಡಬೇಕಾಗಿದೆ ಆದರೆ ಇದರಲ್ಲಿ ಹಠಯೋಗದ ಮಾತಿಲ್ಲ.
ಇದೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಶರೀರವನ್ನಂತೂ ಸ್ವಸ್ಥವಾಗಿಟ್ಟುಕೊಳ್ಳಬೇಕಾಗಿದೆ,
ಯೋಗಬಲದಿಂದ 21 ಜನ್ಮಗಳಿಗಾಗಿ ಸ್ವಸ್ಥ ಅರ್ಥಾತ್ ಆರೋಗ್ಯವಂತರಾಗಬೇಕಾಗಿದೆ. ಈ ಅಭ್ಯಾಸವನ್ನು
ಇಲ್ಲಿಂದಲೇ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಇದರಲ್ಲಿ ಕೇಳುವ ಅವಶ್ಯಕತೆಯಿಲ್ಲ. ಅಂತಹ
ದೊಡ್ಡಮಾತಾಗಿದ್ದು ಅದರಲ್ಲಿ ತಬ್ಬಿಬ್ಬಾಗುತ್ತೀರೆಂದರೆ ಕೇಳಬಹುದು. ಚಿಕ್ಕ-ಚಿಕ್ಕ ಮಾತುಗಳನ್ನು
ತಂದೆಯೊಂದಿಗೆ ಕೇಳುವುದರಲ್ಲಿ ಎಷ್ಟು ಸಮಯ ಹೋಗುತ್ತದೆ. ಹಿರಿಯ ವ್ಯಕ್ತಿಗಳು ಬಹಳ ಕಡಿಮೆ
ಮಾತನಾಡುತ್ತಾರೆ, ಶಿವತಂದೆಗೆ ಸದ್ಗತಿದಾತನೆಂದೂ ಹೇಳಲಾಗುತದೆ. ರಾವಣನಿಗೆ ಸದ್ಗತಿದಾತನೆಂದು
ಹೇಳುವುದಿಲ್ಲ ಒಂದುವೇಳೆ ಸದ್ಗತಿದಾತನಾಗಿದ್ದರೆ ಅವನನ್ನು ಏಕೆ ಸುಡುತ್ತಾರೆ? ರಾವಣನು
ಪ್ರಸಿದ್ಧನಾಗಿದ್ದಾನೆಂದು ಮಕ್ಕಳು ತಿಳಿಯುತ್ತಾರೆ. ಭಲೆ ರಾವಣನಲ್ಲಿ ಹೆಚ್ಚು ಶಕ್ತಿಯಿದೆ, ಆದರೆ
ಶತ್ರುವಲ್ಲವೆ. ಅರ್ಧಕಲ್ಪ ರಾವಣನ ರಾಜ್ಯವು ನಡೆಯುತ್ತದೆ ಆದರೆ ಅವನ ಮಹಿಮೆಯನ್ನು ಎಂದಾದರೂ
ಕೇಳಿದ್ದೀರಾ? ಮಹಿಮೆಯೇನೂ ಇಲ್ಲ, ಪಂಚವಿಕಾರಗಳಿಗೆ ರಾವಣನೆಂದು ಹೇಳಲಾಗುತ್ತದೆ. ಸಾಧು-ಸಂತರು
ಪವಿತ್ರರಾಗುತ್ತಾರೆಂದರೆ ಅವರಿಗೆ ಮಹಿಮೆ ಮಾಡುತ್ತಾರಲ್ಲವೆ. ಈ ಸಮಯದ ಮನುಷ್ಯರಂತೂ ಎಲ್ಲರೂ
ಪತಿತರಾಗಿದ್ದಾರೆ. ಭಲೆ ಯಾರಾದರೂ ಬರಲಿ, ತಿಳಿದುಕೊಳ್ಳಿ- ಹಿರಿಯ ವ್ಯಕ್ತಿಯು ಬರುತ್ತಾರೆಂದರೆ
ನಾವು ಬಾಬಾರವರೊಂದಿಗೆ ಸಂಭಾಷಣೆ ಮಾಡಬೇಕೆಂದು ಹೇಳುತ್ತಾರೆ ಆಗ ತಂದೆಯು ಅವರೊಂದಿಗೆ ಏನು
ಕೇಳುತ್ತಾರೆ? ಇದನ್ನೇ ಕೇಳುತ್ತಾರೆ- ರಾಮರಾಜ್ಯ ಮತ್ತು ರಾವಣರಾಜ್ಯವೆಂದು ಎಂದಾದರೂ ಕೇಳಿದ್ದೀರಾ?
ಮನುಷ್ಯರು ಮತ್ತು ದೇವತೆಗಳು ಎಂಬುದನ್ನು ಎಂದಾದರೂ ಕೇಳಿದ್ದೀರಾ? ಈ ಸಮಯದ ರಾಜ್ಯವು ಮನುಷ್ಯರದ್ದೋ
ಅಥವಾ ದೇವತೆಗಳದ್ದೋ? ಮನುಷ್ಯರು ಯಾರು, ದೇವತೆಗಳು ಯಾರು? ದೇವತೆಗಳು ಯಾವ ರಾಜ್ಯದಲ್ಲಿದ್ದರು?
ದೇವತೆಗಳಂತೂ ಸತ್ಯಯುಗದಲ್ಲಿರುತ್ತಾರೆ, ಯಥಾರಾಜ-ರಾಣಿ ತಥಾ ಪ್ರಜಾ..... ನೀವು ಇದನ್ನು
ಪ್ರಶ್ನಿಸಬಹುದು- ಇದು ಹೊಸಸೃಷ್ಟಿಯೇ ಅಥವಾ ಹಳೆಯದೇ? ಸತ್ಯಯುಗದಲ್ಲಿ ಯಾರ ರಾಜ್ಯವಿತ್ತು? ಈಗ ಯಾರ
ರಾಜ್ಯವಿದೆ? ಚಿತ್ರಗಳಂತೂ ನಿಮ್ಮ ಮುಂದಿವೆ. ಭಕ್ತಿಯೆಂದರೇನು, ಜ್ಞಾನವೆಂದರೇನು? ಇದನ್ನು ತಂದೆಯೇ
ಕುಳಿತು ತಿಳಿಸುತ್ತಾರೆ.
ಬಾಬಾ, ನಮಗೆ
ಧಾರಣೆಯಾಗುವುದಿಲ್ಲವೆಂದು ಯಾವ ಮಕ್ಕಳು ಹೇಳುತ್ತಾರೆಯೋ ಅವರಿಗೆ ತಂದೆಯು ತಿಳಿಸುತ್ತಾರೆ- ಅರೆ!
ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದು ಸಹಜವಲ್ಲವೆ. ತಂದೆಯೇ ತಿಳಿಸುತ್ತಾರೆ- ಮಕ್ಕಳೇ,
ನನ್ನನ್ನು ನೆನಪು ಮಾಡಿದರೆ ನಿಮಗೆ ಆಸ್ತಿಯು ಸಿಗುವುದು, ಭಾರತದಲ್ಲಿ ಶಿವಜಯಂತಿಯನ್ನು
ಆಚರಿಸುತ್ತಾರೆ ಆದರೆ ಅವರು ಭಾರತದಲ್ಲಿ ಯಾವಾಗ ಬಂದು ಸ್ವರ್ಗವನ್ನು ಸ್ಥಾಪನೆ ಮಾಡಿದರು? ಭಾರತವು
ಸ್ವರ್ಗವಾಗಿತ್ತು ಎಂಬುದನ್ನೇ ತಿಳಿದುಕೊಂಡಿಲ್ಲ, ಮರೆತುಹೋಗಿದ್ದಾರೆ. ನಾವು ಸ್ವರ್ಗದ
ಮಾಲೀಕರಾಗಿದ್ದೆವು ಎಂಬುದನ್ನು ನಾವು ತಿಳಿದುಕೊಂಡಿರಲಿಲ್ಲ, ಈಗ ತಂದೆಯ ಮೂಲಕ ಪುನಃ
ದೇವತೆಗಳಾಗುತ್ತಿದ್ದೇವೆಂದು ಹೇಳಿ. ತಿಳಿಸುವವನು ನಾನಾಗಿದ್ದೇನೆ, ಸೆಕೆಂಡಿನ ಜೀವನ್ಮುಕ್ತಿಯೆಂದು
ಗಾಯನವಿದೆ ಆದರೆ ಇದರ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಸೆಕೆಂಡಿನಲ್ಲಿ ನೀವು ಸ್ವರ್ಗದ
ಪರಿಗಳಾಗುತ್ತೀರಲ್ಲವೆ. ಇದಕ್ಕೆ ಇಂದ್ರಸಭೆಯೆಂದು ಹೇಳುತ್ತಾರೆ. ಇದಕ್ಕೆ ಅವರು ಮಳೆ
ಸುರಿಸುವವರನ್ನು ಇಂದ್ರನೆಂದು ತಿಳಿಯುತ್ತಾರೆ. ಮಳೆ ಸುರಿಸುವವರದ್ದು ಯಾವುದೇ ಸಭೆ ಇರುತ್ತದೆಯೇ?
ಈ ರೀತಿ ಇಂದ್ರಸಭೆ ಏನೇನನ್ನೋ ಹೇಳುತ್ತಾರೆ.
ಇಂದು ಪುನಃ ಈ
ಪುರುಷಾರ್ಥ ಮಾಡುತ್ತಿದ್ದೀರಿ, ಇದು ವಿದ್ಯೆಯಲ್ಲವೆ. ಕಾನೂನಿನ ವಿದ್ಯೆಯನ್ನು ಓದುತ್ತಾರೆಂದರೆ
ನಾವು ನಾಳೆ ಬ್ಯಾರಿಸ್ಟರ್ ಆಗುತ್ತೇವೆಂದು ತಿಳಿಯುತ್ತಾರೆ. ನೀವು ಇಂದು ಓದುತ್ತೀರಿ ನಾಳೆ
ಶರೀರವನ್ನು ಬಿಟ್ಟುಹೋಗಿ ರಾಜಧಾನಿಯಲ್ಲಿ ಜನ್ಮಪಡೆಯುತ್ತೀರಿ. ನೀವು ಭವಿಷ್ಯಕ್ಕಾಗಿ
ಪ್ರಾಲಬ್ಧವನ್ನು ಪಡೆಯುತ್ತೀರಿ. ಇಲ್ಲಿಂದ ಓದಿ ಹೋಗುತ್ತೇವೆಂದರೆ ಮತ್ತೆ ನಮ್ಮ ಜನ್ಮವು
ಸತ್ಯಯುಗದಲ್ಲಾಗುವುದು. ನಮ್ಮ ಲಕ್ಷ್ಯವೇ ಆಗಿದೆ- ರಾಜಕುಮಾರ-ರಾಜಕುಮಾರಿಯರಾಗುವುದು. ಇದು
ರಾಜಯೋಗವಲ್ಲವೆ. ಬಾಬಾ, ನಮ್ಮ ಬುದ್ಧಿಯು ಕೆಲಸ ಮಾಡುವುದಿಲ್ಲವೆಂದು ಕೆಲವರು ಹೇಳುತ್ತಾರೆ. ನಿಮ್ಮ
ಅದೃಷ್ಟವೇ ಹೀಗಿದೆ, ಡ್ರಾಮಾದಲ್ಲಿ ಪಾತ್ರವೇ ಹೀಗಿದೆ ಅದನ್ನು ತಂದೆಯು ಬದಲಾವಣೆ ಮಾಡಲು ಹೇಗೆ
ಸಾಧ್ಯ! ಸ್ವರ್ಗದ ಮಾಲೀಕರಾಗಲು ಎಲ್ಲರೂ ಹಕ್ಕುದಾರರಾಗಿದ್ದಾರೆ ಆದರೆ ನಂಬರ್ವಾರಂತೂ
ಇರುತ್ತಾರಲ್ಲವೆ. ಎಲ್ಲರೂ ರಾಜರಾಗಿಬಿಡುವುದಿಲ್ಲ. ಈಶ್ವರೀಯ ಶಕ್ತಿಯಿದ್ದರೆ ಎಲ್ಲರನ್ನೂ
ರಾಜರನ್ನಾಗಿ ಮಾಡಿಬಿಡಲಿ ಎಂದು ಕೆಲವರು ಹೇಳುತ್ತಾರೆ ಮತ್ತೆ ಪ್ರಜೆಗಳೆಲ್ಲಿಂದ ಬರುವರು- ಇದು
ತಿಳುವಳಿಕೆಯ ಮಾತಲ್ಲವೆ. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಈಗಂತೂ ಕೇವಲ ನಾಮಮಾತ್ರ
ಮಹಾರಾಜ-ಮಹಾರಾಣಿಯರಿದ್ದಾರೆ, ಬಿರುದುಗಳನ್ನೂ ಸಹ ಕೊಟ್ಟುಬಿಡುತ್ತಾರೆ. ಒಂದೆರಡು ಲಕ್ಷಗಳು
ಕೊಟ್ಟರೆ ಸಾಕು ರಾಜ-ರಾಣಿಯರ ಬಿರುದು ಸಿಗುತ್ತದೆ ಮತ್ತೆ ಅವರ ಚಲನೆಯೂ ಈ ರೀತಿ ಇಟ್ಟುಕೊಳ್ಳಬೇಕು.
ನಾವು ಶ್ರೀಮತದನುಸಾರ
ನಮ್ಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ.
ಅಲ್ಲಂತೂ ಎಲ್ಲರೂ ಸುಂದರರಾಗಿರುತ್ತಾರೆ, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ.
ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಬಹಳ ಧೀರ್ಘವಾಗಿ ಬರೆದಿರುವುದರಿಂದ ಮನುಷ್ಯರು
ಮರೆತುಹೋಗಿದ್ದಾರೆ. ನೀವೀಗ ಶ್ಯಾಮನಿಂದ ಸುಂದರರಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ದೇವತೆಗಳು
ಕಪ್ಪಾಗಿರುತ್ತಾರೆಯೇ? ಕೃಷ್ಣನನ್ನು ಕಪ್ಪು, ರಾಧೆಯನ್ನು ಬಿಳುಪಾಗಿ ತೋರಿಸುತ್ತಾರೆ.
ಸುಂದರರಾಗಿದ್ದರೆ, ಇಬ್ಬರೂ ಸುಂದರರಾಗಿರಬೇಕಲ್ಲವೆ. ಮತ್ತೆ ಕಾಮಚಿತೆಯನ್ನೇರಿ ಕಪ್ಪಾಗಿಬಿಡುತ್ತಾರೆ.
ಅವರು ಸ್ವರ್ಣಿಮ ಪ್ರಪಂಚದ ಮಾಲೀಕರಾಗುತ್ತಾರೆ, ಇದು ಪತಿತ ಪ್ರಪಂಚವಾಗಿದೆ. ನೀವು ಮಕ್ಕಳಿಗೆ
ಮೊದಲನೆಯದಾಗಿ ಆಂತರ್ಯದಲ್ಲಿ ಬಹಳ ಖುಷಿಯಿರಬೇಕು ಮತ್ತು ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ.
ಬಾಬಾ, ಬೀಡಿ ಸೇದುವ ಚಟವು ಬಿಟ್ಟುಹೋಗುತ್ತಿಲ್ಲ ಎಂದು ಕೆಲವರು ತಂದೆಗೆ ಹೇಳುತ್ತಾರೆ. ಅದಕ್ಕೆ
ತಂದೆಯು ಹೇಳುತ್ತಾರೆ- ಒಳ್ಳೆಯದು, ಚೆನ್ನಾಗಿ ಸೇದಿರಿ. ಕೇಳುತ್ತೀರೆಂದರೆ ಇನ್ನೇನು ಹೇಳುವುದು.
ವ್ರತದನುಸಾರ ನಡೆಯದಿದ್ದರೆ ಕೆಳಗೆ ಬೀಳುತ್ತೀರಿ. ತಮಗೆ ಅರಿವಿರಬೇಕಲ್ಲವೆ. ನಾವು
ದೇವತೆಗಳಾಗುತ್ತೇವೆಂದರೆ ನಮ್ಮ ಚಲನೆ-ವಲನೆ, ಆಹಾರ-ಪಾನೀಯಗಳು ಹೇಗಿರಬೇಕು! ಎಂಬ ತಿಳುವಳಿಕೆ ನಿಮಗೇ
ಇರಬೇಕು. ನಾವು ಲಕ್ಷ್ಮಿಯನ್ನು ನಾರಾಯಣನನ್ನು ವರಿಸುತ್ತೇವೆಂದು ಎಲ್ಲರೂ ಹೇಳುತ್ತೀರಿ. ಒಳ್ಳೆಯದು.
ತಮ್ಮನ್ನು ನೋಡಿಕೊಳ್ಳಿ- ಈ ರೀತಿಯ ಗುಣಗಳಿವೆಯೇ? ನಾವು ಬೀಡಿ ಸೇದುತ್ತೇವೆಂದರೆ ಮತ್ತೆ
ನಾರಾಯಣನಾಗಲು ಸಾಧ್ಯವೇ? ನಾರದನ ಕಥೆಯೂ ಇದೆಯಲ್ಲವೆ. ನಾರದನೆಂದರೆ ಕೇವಲ ಒಬ್ಬರಲ್ಲ, ಎಲ್ಲಾ
ಮನುಷ್ಯರು ಭಕ್ತ(ನಾರದ)ರಾಗಿದ್ದಾರೆ.
ತಂದೆಯು ತಿಳಿಸುತ್ತಾರೆ-
ದೇವತೆಗಳಾಗುವಂತಹ ಮಕ್ಕಳೇ, ಅಂತರ್ಮುಖಿಯಾಗಿ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ- ಯಾವಾಗ ನಾವು
ದೇವತೆಗಳಾಗುತ್ತೇವೆಂದರೆ ನಮ್ಮ ಚಲನೆಯು ಹೇಗಿರಬೇಕು? ನಾವು ದೇವತೆಗಳಾಗಿದ್ದೇವೆ ಅಂದಮೇಲೆ
ಮಧ್ಯಪಾನ ಮಾಡಲು ಸಾಧ್ಯವಿಲ್ಲ. ಬೀಡಿ ಸೇದಲು ಸಾಧ್ಯವಿಲ್ಲ. ವಿಕಾರದಲ್ಲಿ ಹೋಗುವಂತಿಲ್ಲ. ಪತಿತರ
ಕೈಯಿಂದ ತಯಾರಿಸುವುದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಇದು ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ.
ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ನಾಟಕದ ರಹಸ್ಯವನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಇದು
ನಾಟಕವಾಗಿದೆ, ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ, ನಾವು ಆತ್ಮಗಳು ಮೇಲಿಂದ ಬರುತ್ತೇವೆ,
ಪಾತ್ರವನ್ನಂತೂ ಇಡೀ ಪ್ರಪಂಚದ ಪಾತ್ರಧಾರಿಗಳೆಲ್ಲರೂ ಅಭಿನಯಿಸಬೇಕಾಗಿದೆ. ಎಲ್ಲರದೂ ತಮ್ಮ-ತಮ್ಮ
ಪಾತ್ರವಿದೆ, ಎಷ್ಟು ಮಂದಿ ಪಾತ್ರಧಾರಿಗಳಿದ್ದಾರೆಯೋ, ಹೇಗೆ ಪಾತ್ರವನ್ನಭಿನಯಿಸುತ್ತಾರೆ, ಇದು
ವಿವಿಧ ಕರ್ಮಗಳ ವೃಕ್ಷವಾಗಿದೆ. ಒಂದು ಮಾವಿನವೃಕ್ಷಕ್ಕೆ ವಿಭಿನ್ನ ವೃಕ್ಷವೆಂದು ಹೇಳುವುದಿಲ್ಲ. ಅದು
ಮಾವಿನಹಣ್ಣನ್ನೇ ಕೊಡುತ್ತದೆ. ಇದು ವಿಭಿನ್ನ ವೃಕ್ಷವಾಗಿದೆ ಆದರೆ ಇದರ ಹೆಸರಾಗಿದೆ- ವಿಭಿನ್ನ
ಧರ್ಮಗಳ ವೃಕ್ಷ. ಬೀಜವು ಒಬ್ಬರೇ ಆಗಿದ್ದಾರೆ,ಮನುಷ್ಯರ ವೈವಿಧ್ಯತೆ ನೋಡಿ ಎಷ್ಟೊಂದಿದೆ,
ಒಬ್ಬೊಬ್ಬರು ಒಂದೊಂದು ತರಹ ಇದ್ದಾರೆ ಇದೆಲ್ಲವನ್ನೂ ತಂದೆಯೇ ಕುಳಿತು ತಿಳಿಸುತ್ತಾರೆ-
ಮನುಷ್ಯರಿಗೇನೂ ತಿಳಿದಿಲ್ಲ. ಮನುಷ್ಯರನ್ನು ತಂದೆಯೇ ಪಾರಸಬುದ್ಧಿಯವರನ್ನಾಗಿ ಮಾಡುತ್ತಾರೆ.
ಮಕ್ಕಳಿಗೆ ತಿಳಿದಿದೆ- ಈ ಹಳೆಯ ಪ್ರಪಂಚದಲ್ಲಿ ಇನ್ನು ಸ್ವಲ್ಪದಿನಗಳು ಮಾತ್ರವೇ ಉಳಿದಿದೆ. ಕಲ್ಪದ
ಹಿಂದಿನಂತೆ ಸಸಿಯ ನಾಟಿಯಾಗುತ್ತದೆ, ಒಳ್ಳೆಯ ಪ್ರಜೆಗಳು, ಸಾಧಾರಣ ಪ್ರಜೆಗಳ ನಾಟಿಯಾಗುತ್ತದೆ.
ಇಲ್ಲಿಯೇ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಮಕ್ಕಳು ಪ್ರತಿಯೊಂದು ಮಾತಿನಲ್ಲಿ ಬುದ್ಧಿಯನ್ನು
ಉಪಯೋಗಿಸಬೇಕಾಗಿದೆ. ಮುರುಳಿ ಕೇಳಿದರೆ ಕೇಳಿದೆವು, ಬಿಟ್ಟರೆ ಬಿಟ್ಟೆವು ಎಂದಲ್ಲ. ಇಲ್ಲಿ
ಕುಳಿತಿದ್ದರೂ ಬುದ್ಧಿಯು ಹೊರಗಡೆ ಅಲೆಯುತ್ತಿರುತ್ತದೆ. ಇಂತಹವರೂ ಇದ್ದಾರೆ ಕೆಲವರು ಸನ್ಮುಖದಲ್ಲಿ
ಮುರುಳಿಯನ್ನು ಕೇಳುತ್ತಾ ಬಹಳ ಗದ್ಗದಿತರಾಗುತ್ತಾರೆ. ಮುರುಳಿಗಾಗಿ ಓಡುತ್ತಾರೆ, ಭಗವಂತನೇ
ಓದಿಸುತ್ತಾರೆಂದಮೇಲೆ ಇಂತಹ ವಿದ್ಯೆಯನ್ನು ಬಿಡುವುದೇ? ಅಂತಹ ಸನ್ನಿವೇಶದಲ್ಲಿ ಕ್ಯಾಸೆಟ್ನಲ್ಲಿ
ಬಹಳ ಚೆನ್ನಾಗಿ ರೆಕಾರ್ಡ್ ಆಗಿರುತ್ತದೆ, ಅದರಿಂದಾದರೂ ಕೇಳಬೇಕು. ಸಾಹುಕಾರರು ಖರೀದಿ
ಮಾಡುತ್ತೀರೆಂದರೆ ಅದರಿಂದ ಬಡವರೂ ಸಹ ಕೇಳುತ್ತಾರೆ, ಇದರಿಂದ ಅನೇಕರ ಕಲ್ಯಾಣವಾಗುವುದು. ಬಡಮಕ್ಕಳೇ
ತಮ್ಮ ಭಾಗ್ಯವನ್ನು ಬಹಳ ಚೆನ್ನಾಗಿ ರೂಪಿಸಿಕೊಳ್ಳುತ್ತಾರೆ. ತಂದೆಯು ಮಕ್ಕಳಿಗಾಗಿ ಮನೆಗಳನ್ನು
ಕಟ್ಟಿಸುತ್ತಾರೆ. ಬಡವರು ಎರಡು ರೂಪಾಯಿಗಳನ್ನಾದರೂ ತಂದೆಗೆ ಕಳುಹಿಸುತ್ತಾರೆ- ಬಾಬಾ, ಇದರಿಂದ ಒಂದು
ಇಟ್ಟಿಗೆಯನ್ನಾದರೂ ಬಾಬಾನ ಮನೆಗೆ ಉಪಯೋಗಿಸಿಕೊಳ್ಳಿ. ಈ ಒಂದುರೂಪಾಯಿಯನ್ನು ಯಜ್ಞದಲ್ಲಿ ಹಾಕಿ ಎಂದು
ಹೇಳುತ್ತಾರೆ. ಇನ್ನು ಕೆಲವರಂತೂ ಹುಂಡಿಯನ್ನು ತುಂಬಿಸುವವರೂ ಇರುತ್ತಾರಲ್ಲವೆ. ಮನುಷ್ಯರು
ಆಸ್ಪತ್ರೆಯನ್ನು ಕಟ್ಟಿಸುತ್ತಾರೆಂದರೆ ಎಷ್ಟೊಂದು ಖರ್ಚಾಗುತ್ತದೆ! ಸಾಹುಕಾರರು ಸರ್ಕಾರಕ್ಕೆ ಬಹಳ
ಸಹಯೋಗ ನೀಡುತ್ತಾರೆ. ಅದಕ್ಕೆ ಪ್ರತಿಯಾಗಿ ಏನು ಸಿಗುತ್ತದೆ! ಅಲ್ಪಕಾಲದ ಸುಖ. ಇಲ್ಲಿ ನೀವು
ಏನೆಲ್ಲವನ್ನೂ ಮಾಡುತ್ತೀರೋ ಅದಕ್ಕೆ ಪ್ರತಿಯಾಗಿ 21 ಜನ್ಮಗಳಿಗಾಗಿ ಸಿಗುತ್ತದೆಯಲ್ಲವೆ. ಈ
ಬ್ರಹ್ಮಾರವರು ಎಲ್ಲವನ್ನೂ ಅರ್ಪಣೆ ಮಾಡಿದರು, ವಿಶ್ವದ ಮೊಟ್ಟಮೊದಲನೇ ಮಾಲೀಕರಾದರು, 21
ಜನ್ಮಗಳಿಗಾಗಿ ಇಂತಹ ವ್ಯಾಪಾರವನ್ನು ಯಾರು ತಾನೆ ಮಾಡುವುದಿಲ್ಲ! ಆದ್ದರಿಂದಲೇ ತಂದೆಗೆ
ಭೋಲಾನಾಥನೆಂದೂ ಹೇಳುತ್ತಾರಲ್ಲವೆ. ಇದು ಈಗಿನದೇ ಮಾತಾಗಿದೆ. ತಂದೆಯು ಎಷ್ಟು ಭೋಲಾಭಂಡಾರಿ
ಆಗಿದ್ದಾರೆ. ಎಷ್ಟು ಪ್ರಾಪ್ತಿ ಮಾಡಿಕೊಳ್ಳಬೇಕೋ ಅಷ್ಟು ಈಗಲೇ ಮಾಡಿಕೊಳ್ಳಿ ಎಂದು ಹೇಳುತ್ತಾರೆ.
ಎಷ್ಟೊಂದು ಮಂದಿ ಬಡಮಕ್ಕಳಿದ್ದಾರೆ. ಕೆಲವರು ಬಟ್ಟೆಯನ್ನು ಹೊಲಿದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.
ತಂದೆಗೆ ಗೊತ್ತಿದೆ- ಇಂತಿಂತಹವರು ಬಹಳ ಶ್ರೇಷ್ಠಪದವಿಯನ್ನೇ ಪಡೆಯುತ್ತಾರೆ. ಸುಧಾಮನ
ಉದಾಹರಣೆಯಿದೆಯಲ್ಲವೆ, ಹಿಡಿ ಅವಲಕ್ಕಿಗೆ ಬದಲು 21 ಜನ್ಮಗಳಿಗಾಗಿ ಮಹಲು ಸಿಗುತ್ತದೆ, ಇವೆಲ್ಲಾ
ಮಾತುಗಳನ್ನು ನೀವು ನಂಬರ್ವಾರ್ ಪುರುಷಾರ್ಥದನುಸಾರ ಅರಿತುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ-
ನಾನು ಭೋಲಾನಾಥನೂ ಆಗಿದ್ದೇನೆ. ಈ ದಾದಾರವರು ಭೋಲಾನಾಥನಲ್ಲ, ಇವರೂ (ಬ್ರಹ್ಮಾ) ಹೇಳುತ್ತಾರೆ-
ಶಿವತಂದೆಯು ಭೋಲಾನಾಥನಾಗಿದ್ದಾರೆ ಆದ್ದರಿಂದ ಅವರಿಗೆ ಸೌಧಾಗಾರ, ರತ್ನಾಗಾರ, ಜಾದೂಗಾರನೆಂದು
ಕರೆಯಲಾಗುತ್ತದೆ. ನೀವು ವಿಶ್ವದ ಮಾಲೀಕರಾಗುತ್ತೀರಿ. ಇಲ್ಲಿ ಭಾರತವೇ ಕಂಗಾಲಾಗಿದೆ, ಪ್ರಜೆಗಳು
ಸಾಹುಕಾರರಾಗಿದ್ದಾರೆ, ಸರ್ಕಾರವು ಧೀನನಾಗಿಬಿಟ್ಟಿದೆ. ನಿಮಗೆ ತಿಳಿದಿದೆ- ಭಾರತವು ಒಂದಾನೊಂದು
ಕಾಲದಲ್ಲಿ ಎಷ್ಟು ಶ್ರೇಷ್ಠವಾಗಿತ್ತು, ಸ್ವರ್ಗವಾಗಿತ್ತು. ಅದರ ಸಾಕ್ಷ್ಯಾಧಾರಗಳೂ ಇವೆ. ಸೋಮನಾಥ
ಮಂದಿರವು ಎಷ್ಟೊಂದು ವಜ್ರರತ್ನಗಳಿಂದ ಶೃಂಗರಿತವಾಗಿತ್ತು, ಅದನ್ನು ಒಂಟೆಗಳ ಮೇಲೆ ತುಂಬಿಸಿಕೊಂಡು
ತೆಗೆದುಕೊಂಡು ಹೋದರು. ಮಕ್ಕಳು ತಿಳಿದುಕೊಂಡಿದ್ದೀರಿ- ಈಗ ಪ್ರಪಂಚವು ಅವಶ್ಯವಾಗಿ ಬದಲಾಗಲಿದೆ,
ಅದಕ್ಕಾಗಿ ನೀವು ತಯಾರು ಮಾಡಿಕೊಳ್ಳುತ್ತಿದ್ದೀರಿ. ಯಾರು ಮಾಡುವರೋ ಅವರು ಪಡೆಯುವರು. ಮಾಯೆಯ
ಹೋರಾಟವೂ ಬಹಳಷ್ಟಾಗುತ್ತದೆ. ನೀವು ಈಶ್ವರನ ಶಿಷ್ಯರಾಗಿದ್ದೀರಿ, ಉಳಿದೆಲ್ಲರೂ ರಾವಣನ
ಶಿಷ್ಯರಾಗಿದ್ದಾರೆ. ಶಿವತಂದೆಯು ನಿಮಗೆ ಆಸ್ತಿಯನ್ನು ಕೊಡುತ್ತಾರೆ. ತಂದೆಯ ವಿನಃ ಮತ್ತ್ಯಾವುದೇ
ಮಾತು ನಿಮ್ಮ ಬುದ್ಧಿಯಲ್ಲಿ ಬರಬಾರದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1)
ಅಂತರ್ಮುಖಿಯಾಗಿ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ- ನಾವು ದೇವತೆಗಳಾಗುತ್ತಿದ್ದೇವೆ ಅಂದಮೇಲೆ
ನಮ್ಮ ಚಲನೆಯು ಹೇಗಿದೆ! ಅಶುದ್ಧ ಆಹಾರ-ಪಾನೀಯಗಳಂತೂ ಇಲ್ಲವೇ!
2) ತಮ್ಮ ಭವಿಷ್ಯವನ್ನು
21 ಜನ್ಮಗಳಿಗಾಗಿ ಶ್ರೇಷ್ಠ ಮಾಡಿಕೊಳ್ಳಬೇಕೆಂದರೆ ಸುಧಾಮನ ತರಹ ಏನೆಲ್ಲವೂ ಇದೆಯೋ ಅದನ್ನು
ಭೋಲಾನಾಥ ತಂದೆಗೆ ಅರ್ಪಣೆ ಮಾಡಿರಿ. ವಿದ್ಯಾಭ್ಯಾಸಕ್ಕಾಗಿ ಯಾವುದೇ ನೆಪ ಹೇಳಬಾರದು.
ವರದಾನ:
ಆದಿ ಮತ್ತು
ಅನಾದಿ ಸ್ವರೂಪದ ಸ್ಮೃತಿಯ ಮುಖಾಂತರ ತಮ್ಮ ಮೂಲ ಸ್ವಧರ್ಮವನ್ನು ತಮ್ಮದನ್ನಾಗಿಸಿಕೊಳ್ಳುವಂತಹ
ಪವಿತ್ರ ಮತ್ತು ಯೋಗಿ ಭವ
ಬ್ರಾಹ್ಮಣರ ಮೂಲ
ಸ್ವಧರ್ಮ ಪವಿತ್ರತೆಯಾಗಿದೆ, ಅಪವಿತ್ರತೆ ಪರಧರ್ಮವಾಗಿದೆ. ಯಾವ ಪವಿತ್ರತೆಯನ್ನ
ತಮ್ಮದಾಗಿಸಿಕೊಳ್ಳಲು ಮನುಷ್ಯರು ಬಹಳ ಕಷ್ಟ ಎಂದು ತಿಳಿಯುತ್ತಾರೊ ಅದು ನೀವು ಮಕ್ಕಳಿಗೆ ಅತೀ
ಸಹಜವಾಗಿದೆ ಏಕೆಂದರೆ ಸ್ಮøತಿ ಬಂತು ನಮ್ಮ ವಾಸ್ತವಿಕ ಆತ್ಮ ಸ್ವರೂಪ ಸದಾ ಪವಿತ್ರವಾಗಿದೆ. ಅನಾದಿ
ಸ್ವರೂಪ ಪವಿತ್ರ ಆತ್ಮವಾಗಿದೆ ಮತ್ತು ಆದಿ ಸ್ವರೂಪ ಪವಿತ್ರ ದೇವತೆ ಆಗಿದೆ. ಈಗಿನ ಅಂತಿಮ ಜನ್ಮ ಸಹಾ
ಪವಿತ್ರ ಬ್ರಾಹ್ಮಣ ಜೀವನದ ವ್ಯಕ್ತಿತ್ವವಾಗಿದೆ. ಯಾರು ಪವಿತ್ರವಾಗಿದ್ದಾರೆ ಅವರೇ ಯೋಗಿ ಆಗಿದ್ದಾರೆ.
ಸ್ಲೋಗನ್:
ಸಹಜಯೋಗಿ ಎಂದು
ಹೇಳಿ ಬೇಜವಾಬ್ದಾರಿತನವನ್ನು ತರಬೇಡಿ, ಶಕ್ತಿರೂಪವಾಗಿ.
ಅವ್ಯಕ್ತ ಸೂಚನೆಗಳು-
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಹೇಳಲಾಗುತ್ತದೆ
“ಅಂತರ್ಮುಖಿ ಸದಾ ಸುಖಿ“ ಅವರಿಗೆ ಹೊರಗಿನ ಯಾವುದೇ ಆಕರ್ಷಣೆ ಆಕರ್ಷಿತರನ್ನಾಗಿ ಮಾಡುವುದಿಲ್ಲ.
ಎಂದೂ ಮನಮತ, ಪರಮತ ಆಕರ್ಷಣೆ ಮಾಡುವುದಿಲ್ಲ. ಅಂತರ್ಮುಖಿ ಸದಾ ಸುಖಿಯಾಗಿರುವವರು, ಸುಖದಾತನ ಮಕ್ಕಳು
ಮಾಸ್ಟರ್ ಸುಖದಾತ ಆಗಿರುತ್ತಾರೆ, ಬಾಹರ್ಮುಖತೆಯಿಂದ ಮುಕ್ತರಾಗಿರುತ್ತಾರೆ.