17.08.25 Avyakt Bapdada
Kannada
Murli 16.11.2006 Om Shanti Madhuban
“ತಮ್ಮ ಸ್ವಮಾನದ ಸ್ಥಿತಿ
(ನಶೆ) ಯಲ್ಲಿರಿ ಮತ್ತು ಸಮಯದ ಮಹತ್ವವನ್ನರಿತು ಎವರೆಡಿಯಾಗಿರಿ”
ಇಂದು ಬಾಪ್ದಾದಾ
ನಾಲ್ಕಾರು ಕಡೆಯ ತನ್ನ ಪರಮಾತ್ಮ ಪ್ರೀತಿಗೆ ಪಾತ್ರರಾದ ಸ್ವಮಾನದ ಸೀಟ್ನಲ್ಲಿ ಸ್ಥಿತರಾಗಿರುವ
ಮಕ್ಕಳನ್ನು ನೋಡುತ್ತಿದ್ದಾರೆ. ಸೀಟ್ನಲ್ಲಂತೂ ಎಲ್ಲಾ ಮಕ್ಕಳೂ ಸ್ಥಿತರಾಗಿದ್ದಾರೆ ಆದರೆ ಕೆಲವು
ಮಕ್ಕಳು ಏಕಾಗ್ರ ಸ್ಥಿತಿಯಲ್ಲಿ ಸೆಟ್ ಆಗಿದ್ದಾರೆ, ಇನ್ನೂ ಕೆಲವರು ಸಂಕಲ್ಪದಲ್ಲಿ ಸ್ವಲ್ಪ-ಸ್ವಲ್ಪ
ಅಪಸೆಟ್ ಆಗಿದ್ದಾರೆ. ಬಾಪ್ದಾದಾ ವರ್ತಮಾನ ಸಮಯ ಪ್ರಮಾಣ ಪ್ರತಿಯೊಬ್ಬ ಮಗುವನ್ನು ಏಕಾಗ್ರತೆಯ
ರೂಪದಲ್ಲಿ, ಸ್ವಮಾನಧಾರಿ ಸ್ವರೂಪದಲ್ಲಿ ನೋಡಲು ಬಯಸುತ್ತಾರೆ. ಎಲ್ಲಾ ಮಕ್ಕಳೂ ಸಹ ಏಕಾಗ್ರತೆಯ
ಸ್ಥಿತಿಯಲ್ಲಿ ಸ್ಥಿತರಾಗಿರಲು ಬಯಸುತ್ತಾರೆ, ತಮ್ಮ ಭಿನ್ನ-ಭಿನ್ನ ಪ್ರಕಾರದ ಸ್ವಮಾನಗಳನ್ನೂ
ತಿಳಿದುಕೊಂಡಿದ್ದಾರೆ ಮತ್ತು ಆಲೋಚಿಸುತ್ತಾರೆ ಆದರೆ ಏಕಾಗ್ರತೆಯು ಏರುಪೇರಿನಲ್ಲಿ ತರುತ್ತದೆ, ಸದಾ
ಏಕರಸ ಸ್ಥಿತಿಯು ಕಡಿಮೆಯಿರುತ್ತದೆ. ಅನುಭವವೂ ಆಗುತ್ತದೆ ಮತ್ತು ಈ ಸ್ಥಿತಿಯನ್ನೂ ಬಯಸುತ್ತಾರೆ
ಆದರೆ ಇದು ಕೆಲಕೆಲವೊಮ್ಮೆ ಮಾತ್ರವೇ ಇರುತ್ತದೆ - ಕಾರಣವೇನು? ಕಾರಣವಾಗಿದೆ - ಸದಾ ಅಟೇಂಷನ್ನ
ಕೊರತೆ. ಒಂದುವೇಳೆ ಸ್ವಮಾನದ ಪಟ್ಟಿಯನ್ನು ತೆಗೆದರೆ ಎಷ್ಟು ದೊಡ್ಡದಾಗಿದೆ! ಎಲ್ಲದಕ್ಕಿಂತ ಮೊದಲ
ಸ್ವಮಾನವಾಗಿದೆ - ಯಾವ ತಂದೆಯನ್ನು ನೆನಪು ಮಾಡುತ್ತಿದ್ದಿರೋ ಅವರ ಡೈರೆಕ್ಟ್ ಮಕ್ಕಳಾಗಿದ್ದೀರಿ.
ನಂಬರ್ವನ್ ಸಂತಾನರಾಗಿದ್ದೀರಿ. ಬಾಪ್ದಾದಾರವರು ತಾವು ಕೋಟಿಯಲ್ಲಿಯೂ ಕೆಲವರಾದ ಮಕ್ಕಳನ್ನು
ಎಲ್ಲೆಲ್ಲಿಂದ ಆಯ್ಕೆ ಮಾಡಿ ತನ್ನವರನ್ನಾಗಿ ಮಾಡಿಕೊಂಡರು. ಐದೂ ಖಂಡಗಳಿಂದ ಡೈರೆಕ್ಟ್ ತಂದೆಯು
ತನ್ನ ಮಕ್ಕಳನ್ನು ತನ್ನವರನ್ನಾಗಿ ಮಾಡಿಕೊಂಡರು - ಇದು ಎಷ್ಟು ದೊಡ್ಡ ಸ್ವಮಾನವಾಗಿದೆ. ಸೃಷ್ಟಿ
ರಚಯಿತನ ಮೊದಲ ರಚನೆ ತಾವಾಗಿದ್ದೀರಿ. ಈ ಸ್ವಮಾನವನ್ನು ತಿಳಿದುಕೊಂಡಿದ್ದೀರಲ್ಲವೆ! ಬಾಪ್ದಾದಾರವರು
ತನ್ನ ಜೊತೆ ಜೊತೆಗೆ ತಾವು ಮಕ್ಕಳನ್ನೂ ಸಹ ಇಡೀ ವಿಶ್ವದ ಆತ್ಮರಿಗೆ ಪೂರ್ವಜರನ್ನಾಗಿ ಮಾಡಿದ್ದಾರೆ.
ವಿಶ್ವದ ಪೂರ್ವಜರಾಗಿದ್ದೀರಿ, ಪೂಜ್ಯರಾಗಿದ್ದೀರಿ. ಬಾಪ್ದಾದಾರವರು ಪ್ರತಿಯೊಬ್ಬ ಮಗುವನ್ನೂ
ವಿಶ್ವದ ಆಧಾರಮೂರ್ತಿ, ಉದಾಹರಣಾಮೂರ್ತಿಯನ್ನಾಗಿ ಮಾಡಿದ್ದಾರೆ. ನಶೆಯಿದೆಯೇ? ಕೆಲವೊಮ್ಮೆ
ಸ್ವಲ್ಪ-ಸ್ವಲ್ಪ ಕಡಿಮೆಯಾಗಿ ಬಿಡುತ್ತದೆ. ಆಲೋಚಿಸಿ, ಎಲ್ಲದಕ್ಕಿಂತ ಅಮೂಲ್ಯ ಇಡೀ ಕಲ್ಪದಲ್ಲಿಯೇ
ಇಂತಹ ಅಮೂಲ್ಯ ಸಿಂಹಾಸನವು ಯಾರಿಗೂ ಪ್ರಾಪ್ತವಾಗುವುದಿಲ್ಲ. ಅಂತಹ ಪರಮಾತ್ಮ ಸಿಂಹಾಸನ, ಲೈಟ್ನ
ಕಿರೀಟ, ಸ್ಮೃತಿಯ ತಿಲಕವನ್ನು ಕೊಟ್ಟರು. ಸ್ಮೃತಿ ಬರುತ್ತಿದೆಯಲ್ಲವೆ - ನಾನು ಯಾರು! ನನ್ನ
ಸ್ವಮಾನವೇನು! ನಶೆಯೇರುತ್ತಿದೆಯಲ್ಲವೆ. ಇಡೀ ಕಲ್ಪದಲ್ಲಿ ಸತ್ಯಯುಗೀ ಸಿಂಹಾಸನವು ಎಷ್ಟಾದರೂ
ಅಮೂಲ್ಯವಾಗಿರಲಿ ಆದರೆ ಪರಮಾತ್ಮನ ಹೃದಯ ಸಿಂಹಾಸನವು ತಾವು ಮಕ್ಕಳಿಗೇ ಪ್ರಾಪ್ತಿಯಾಗುತ್ತದೆ.
ಬಾಪ್ದಾದಾ ಸದಾ ಕೊನೆಯ
ನಂಬರಿನ ಮಗುವನ್ನೂ ಸಹ ಫರಿಶ್ತಾ ಸೋ ದೇವತಾ ಸ್ವರೂಪದಲ್ಲಿ ನೋಡುತ್ತಾರೆ. ಈಗೀಗ
ಬ್ರಾಹ್ಮಣರಾಗಿದ್ದೀರಿ, ಬ್ರಾಹ್ಮಣರಿಂದ ಫರಿಶ್ತೆ, ಫರಿಶ್ತೆಯಿಂದ ದೇವತೆಗಳಾಗಲೇಬೇಕಾಗಿದೆ. ತಮ್ಮ
ಸ್ವಮಾನವನ್ನು ತಿಳಿದುಕೊಂಡಿದ್ದೀರಾ? ಏಕೆಂದರೆ ಬಾಪ್ದಾದಾರವರಿಗೆ ಗೊತ್ತಿದೆ, ಸ್ವಮಾನವನ್ನು
ಮರೆಯುವ ಕಾರಣದಿಂದಲೇ ದೇಹಭಾನ, ದೇಹಾಭಿಮಾನವು ಬರುತ್ತದೆ. ಆಗ ವ್ಯಾಕುಲ (ಬೇಸರ) ರಾಗುತ್ತಾರೆ.
ಬಾಪ್ದಾದಾ ನೋಡುತ್ತಾರೆ- ದೇಹಾಭಿಮಾನ ಅಥವಾ ದೇಹಭಾನವು ಯಾವಾಗ ಬರುತ್ತದೆಯೋ ಆಗ ಎಷ್ಟೊಂದು
ವ್ಯಾಕುಲ(ಚಿಂತಿತ)ರಾಗುತ್ತಾರೆ! ಎಲ್ಲರೂ ಅನುಭವಿಗಳಾಗಿದ್ದೀರಲ್ಲವೆ. ಸ್ವಮಾನದ ಶಾನ್ (ಸ್ಥಿತಿ)
ನಲ್ಲಿರುವುದು ಮತ್ತು ಈ ಶಾನ್ನಿಂದ ದೂರ ಪರೇಶಾನ್ ಆಗುವುದು ಎರಡನ್ನೂ ತಿಳಿದುಕೊಂಡಿದ್ದೀರಿ.
ಬಾಪ್ದಾದಾ ನೋಡುತ್ತಾರೆ - ಎಲ್ಲಾ ಮಕ್ಕಳು ಮೆಜಾರಿಟಿ ನಾಲೆಡ್ಜ್ಫುಲ್ ಚೆನ್ನಾಗಿ ಆಗಿದ್ದಾರೆ ಆದರೆ
ಪವರ್ನಲ್ಲಿ ಫುಲ್, ಪವರ್ಫುಲ್ ಆಗಿಲ್ಲ ಅಂದರೆ ಪರ್ಸೆಂಟೇಜ್ನಲ್ಲಿದೆ.
ಬಾಪ್ದಾದಾ ಪ್ರತಿಯೊಬ್ಬ
ಮಗುವನ್ನೂ ತಮ್ಮ ಸರ್ವ ಖಜಾನೆಗಳಿಗೆ ಬಾಲಕರು ಸೋ ಮಾಲೀಕರನ್ನಾಗಿ ಮಾಡಿದರು. ಎಲ್ಲರಿಗೆ
ಸರ್ವಖಜಾನೆಗಳನ್ನು ಕೊಟ್ಟಿದ್ದಾರೆ. ಹೆಚ್ಚು-ಕಡಿಮೆ ಕೊಟ್ಟಿಲ್ಲ ಏಕೆಂದರೆ ಅಪರಿಮಿತ ಖಜಾನೆಯಿದೆ,
ಬೇಹದ್ದಿನ ಖಜಾನೆಯಿದೆ ಆದ್ದರಿಂದ ಪ್ರತಿಯೊಬ್ಬ ಮಗುವನ್ನು ಬೇಹದ್ದಿನ ಬಾಲಕರು ಸೋ ಮಾಲೀಕರನ್ನಾಗಿ
ಮಾಡಿದ್ದಾರೆ ಅಂದಮೇಲೆ ಈಗ ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿ- ಬೇಹದ್ದಿನ ತಂದೆ ಹದ್ದಿನ
ತಂದೆಯಲ್ಲ, ಬೇಹದ್ದಿನ ತಂದೆಯಾಗಿದ್ದಾರೆ ಬೇಹದ್ದಿನ ಖಜಾನೆಯಿದೆ ಅಂದಮೇಲೆ ತಮ್ಮಬಳಿಯೂ ಬೇಹದ್ದ್
ಇದೆಯೇ? ಸದಾ ಇರುತ್ತದೆಯೇ ಅಥವಾ ಕೆಲಕೆಲವೊಮ್ಮೆ ಸ್ವಲ್ಪ ಕಳುವಾಗಿ ಬಿಡುತ್ತದೆಯೋ? ಮಾಯವಾಗಿ
ಬಿಡುತ್ತದೆಯೇ? ತಂದೆಯು ಏಕೆ ಗಮನ ತರಿಸುತ್ತಿದ್ದಾರೆ? ವ್ಯಾಕುಲರಾಗಬೇಡಿ, ಸ್ವಮಾನದ ಸೀಟಿನಲ್ಲಿ
ಸೆಟ್ ಆಗಿರಿ, ಅಪ್ಸೆಟ್ ಅಲ್ಲ. 63 ಜನ್ಮಗಳಂತೂ ಅಪ್ಸೆಟ್ನ ಅನುಭವ ಮಾಡಿಬಿಟ್ಟಿರಲ್ಲವೆ, ಈಗಲೂ
ಅನುಭವ ಮಾಡಬಯಸುತ್ತೀರಾ? ಸುಸ್ತಾಗಿ ಬಿಟ್ಟಿಲ್ಲವೆ? ಈಗ ಸ್ವಮಾನದಲ್ಲಿರಿ ಅರ್ಥಾತ್ ತಮ್ಮ
ಶ್ರೇಷ್ಠಾತಿ ಶ್ರೇಷ್ಠ ಸ್ಥಿತಿಯಲ್ಲಿರಿ - ಏಕೆ? ಎಷ್ಟೊಂದು ಸಮಯವು ಕಳೆದು ಹೋಯಿತು, 70ನೇ
ವರ್ಷವನ್ನು ಆಚರಿಸುತ್ತಿದ್ದೀರಲ್ಲವೆ ಅಂದಮೇಲೆ ಸ್ವಯಂನ ಪರಿಚಯ ಅರ್ಥಾತ್ ಸ್ವಮಾನದ ಪರಿಚಯ,
ಸ್ವಮಾನದಲ್ಲಿ ಸ್ಥಿತರಾಗಿರಿ. ಸಮಯಾನುಸಾರ ಈಗ ಸದಾ ಶಬ್ಧವನ್ನು ಪ್ರಾಕ್ಟಿಕಲ್ ಜೀವನದಲ್ಲಿ ತನ್ನಿರಿ,
ಶಬ್ಧವನ್ನು ಅಂಡರ್ಲೈನ್ ಮಾಡಿಕೊಳ್ಳುವುದಲ್ಲ, ಪ್ರಾಕ್ಟಿಕಲ್ ಜೀವನದಲ್ಲಿ ಅಂಡರ್ಲೈನ್ ಮಾಡಿಕೊಳ್ಳಿ.
ಇರಬೇಕಾಗಿದೆ, ಇರುತ್ತೇವೆ, ಮಾಡುವುದಂತೂ ಮಾಡುತ್ತಿದ್ದೇವೆ, ಕೊನೆಗೆ ಮಾಡಿ ಬಿಡುತ್ತೇವೆ, ಇದು
ಬೇಹದ್ದಿನ ಬಾಲಕರು ಮತ್ತು ಮಾಲೀಕರ ಮಾತಲ್ಲ. ಈಗಂತೂ ಪ್ರತಿಯೊಬ್ಬರ ಹೃದಯದಿಂದ ನಿರಂತರ ಇದೇ ಶಬ್ಧವು
ಹೊರಬರಲಿ, ಏನನ್ನು ಪಡೆಯಬೇಕಿತ್ತೋ ಅದನ್ನು ಪಡೆದು ಬಿಟ್ಟೆವು. ಪಡೆಯುತ್ತಿದ್ದೇವೆ - ಇದು
ಬೇಹದ್ದಿನ ಖಜಾನೆಯ ಬೇಹದ್ದಿನ ತಂದೆಯ ಮಕ್ಕಳು ಹೇಳಲು ಸಾಧ್ಯವಿಲ್ಲ. ಪಡೆದು ಬಿಟ್ಟೆವು, ಯಾವಾಗ
ಬಾಪ್ದಾದಾರವರನ್ನು ಪಡೆದುಕೊಂಡಿರಿ, ನನ್ನ ಬಾಬಾ ಎಂದು ಹೇಳಿದಿರಿ, ಒಪ್ಪಿಕೊಂಡಿರಿ, ಅರಿತುಕೊಂಡಿರಿ
ಮತ್ತು ಒಪ್ಪಿಕೊಂಡಿರಿ ಅಂದಮೇಲೆ ಇದೇ ಶಬ್ಧವು ನಿರಂತರವಾಗಿ ಹೊರ ಬರುತ್ತಿರಲಿ – ಪಡೆದು ಬಿಟ್ಟೆವು....
ಏಕೆಂದರೆ ಬಾಪ್ದಾದಾರವರಿಗೆ ಗೊತ್ತಿದೆ, ಮಕ್ಕಳು ಕೆಲಕೆಲವೊಮ್ಮೆ ಸ್ವಮಾನದಲ್ಲಿರುವ ಕಾರಣ ಸಮಯದ
ಮಹತ್ವವನ್ನು ಸ್ಮೃತಿಯಲ್ಲಿ ಕಡಿಮೆಯಿಡುತ್ತಾರೆ. ಒಂದು ಸ್ವಯಂನ ಸ್ವಮಾನ, ಇನ್ನೊಂದು ಸಮಯದ ಮಹತ್ವ.
ತಾವು ಸಾಧಾರಣರಲ್ಲ, ಪೂರ್ವಜರಾಗಿದ್ದೀರಿ. ತಾವು ಒಬ್ಬೊಬ್ಬರ ಹಿಂದೆ ಇಡೀ ವಿಶ್ವದ ಆತ್ಮರ ಆಧಾರವಿದೆ.
ಆಲೋಚಿಸಿ, ಒಂದುವೇಳೆ ತಾವು ಏರುಪೇರಿನಲ್ಲಿ ಬಂದರೆ ವಿಶ್ವದ ಆತ್ಮರ ಗತಿಯೇನಾಗುವುದು! ಯಾರು
ಮಹಾರಥಿಗಳೆಂದು ಕರೆಸಿಕೊಳ್ಳುತ್ತಾರೆಯೋ ಅವರಹಿಂದೆ ವಿಶ್ವದ ಆಧಾರವಿದೆ ಎಂದು ತಿಳಿದುಕೊಳ್ಳಬೇಡಿ.
ಒಂದುವೇಳೆ ಹೊಸಬರೇ ಇರಬಹುದು ಏಕೆಂದರೆ ಇಂದು ಹೊಸಬರು ಅನೇಕರು ಬಂದಿದ್ದೀರಿ. ಹೊಸಬರೇ ಆಗಿರಲಿ ಯಾರು
ಹೃದಯದಿಂದ ``ನನ್ನ ಬಾಬಾ'' ಎಂದು ಒಪ್ಪಿಕೊಂಡಿರಿ, ಒಪ್ಪಿಕೊಂಡಿದ್ದೀರಲ್ಲವೆ? ಯಾರು ಹೊಸಹೊಸಬರು
ಬಂದಿದ್ದೀರೋ ಅವರು ಒಪ್ಪಿಕೊಂಡಿದ್ದೀರಾ? ಕೇವಲ ತಿಳಿದುಕೊಳ್ಳುವುದಲ್ಲ, ``ನನ್ನಬಾಬಾ'' ಎಂದು
ಒಪ್ಪಿಕೊಂಡಿದ್ದೀರೋ ಅವರು ಕೈಯೆತ್ತಿರಿ. ಕೈಯನ್ನು ಉದ್ದವಾಗಿ ಎತ್ತಿರಿ, ಹೊಸ ಹೊಸಬರು
ಕೈಯೆತ್ತುತ್ತಿದ್ದಾರೆ. ಹಳಬರಂತೂ ಪಕ್ಕಾ ಆಗಿಯೇ ಇದ್ದೀರಲ್ಲವೆ! ಯಾರು ಹೃದಯದಿಂದ ನನ್ನ ಬಾಬಾ ಎಂದು
ಒಪ್ಪಿಕೊಂಡಿರಿ ಮತ್ತು ತಂದೆಯೂ ಸಹ ನನ್ನ ಮಗು ಎಂದು ಒಪ್ಪಿಕೊಂಡರು, ಅವರೆಲ್ಲರೂ
ಜವಾಬ್ದಾರರಾಗಿದ್ದೀರಿ - ಏಕೆ? ಯಾವಾಗಿನಿಂದ ತಾವು ಹೇಳುತ್ತೀರಿ- ನಾನು
ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯಾಗಿದ್ದೇನೆ. ಬ್ರಹ್ಮಾಕುಮಾರ-ಕುಮಾರಿಯಾಗಿದ್ದೀರೋ, ಶಿವ
ಕುಮಾರ-ಕುಮಾರಿಯಾಗಿದ್ದೀರೋ ಅಥವಾ ಇಬ್ಬರಿಗೂ ಕುಮಾರ-ಕುಮಾರಿಯರಾಗಿದ್ದೀರೋ? ಹಾಗಿದ್ದರೆ
ಬಂಧಿತರಾದಿರಿ. ಜವಾಬ್ದಾರಿಯ ಕಿರೀಟ ಬಂದಿತು, ಕಿರೀಟ ಬಂದಿತಲ್ಲವೆ? ಪಾಂಡವರು ಹೇಳಿರಿ,
ಜವಾಬ್ದಾರಿಯ ಕಿರೀಟ ಬಂದಿದೆಯೇ, ಭಾರವೆನಿಸುತ್ತಿಲ್ಲ ಅಲ್ಲವೆ, ಹಗುರವಾಗಿದೆಯಲ್ಲವೆ ಏಕೆಂದರೆ ಇದು
ಲೈಟ್ನ ಕಿರೀಟವಾಗಿದೆ ಅಂದಮೇಲೆ ಲೈಟ್ ಎಷ್ಟು ಹಗುರವಾಗಿರುತ್ತದೆ ಆದ್ದರಿಂದ ಸಮಯದ ಮಹತ್ವವನ್ನೂ ಸಹ
ಗಮನದಲ್ಲಿಟ್ಟುಕೊಳ್ಳಿ. ಸಮಯವು ಕೇಳಿ ಬರುವುದಿಲ್ಲ. ಕೆಲವು ಮಕ್ಕಳು ಈಗಲೂ ಸಹ ಹೇಳುತ್ತಾರೆ,
ಆಲೋಚಿಸುತ್ತಾರೆ, ಇನ್ನೂ 10 ವರ್ಷಗಳಿದೆಯೇ ಅಥವಾ 20 ವರ್ಷಗಳಿದೆಯೇ ಎಂಬುದು ಸ್ವಲ್ಪ ಗೊತ್ತಾದರೂ
ಸಾಕು ಎಂದು. ಆದರೆ ಬಾಪ್ದಾದಾ ಹೇಳುತ್ತಾರೆ- ಸಮಯದ ಅಂತಿಮ ವಿನಾಶವನ್ನು ಬಿಟ್ಟು ಬಿಡಿ, ತಮಗೆ
ತಮ್ಮ ವಿನಾಶದ ದಿನಾಂಕವು ತಿಳಿದಿದೆಯೇ? ನಾನು ಇಂತಹ ತಾರೀಖಿನಲ್ಲಿ ಶರೀರ ಬಿಡುತ್ತೇನೆಂದು
ತಿಳಿದಿರುವವರು ಯಾರಾದರೂ ಇದ್ದೀರಾ? ಯಾರಿಗಾದರೂ ತಿಳಿದಿದೆಯೇ? ಮತ್ತು ಇತ್ತೀಚೆಗೆ ಬ್ರಾಹ್ಮಣರು
ಮರುಜೀವ ಭೋಗವನ್ನು ಬಹಳ ಇಡಿಸುತ್ತೀರಿ. ಯಾವುದೇ ಭರವಸೆಯಿಲ್ಲ ಆದ್ದರಿಂದ ಸಮಯದ ಮಹತ್ವಿಕೆಯನ್ನು
ತಿಳಿದುಕೊಳ್ಳಿ. ಇದು ಚಿಕ್ಕ ಯುಗವಾಗಿದೆ, ಆಯಸ್ಸಿನಲ್ಲಿ ಚಿಕ್ಕದು ಆದರೆ ದೊಡ್ಡದಕ್ಕಿಂತ ದೊಡ್ಡ
ಪ್ರಾಪ್ತಿಯ ಯುಗವಾಗಿದೆ ಏಕೆಂದರೆ ಅತಿ ದೊಡ್ಡ ತಂದೆ ಈ ಚಿಕ್ಕ ಯುಗದಲ್ಲಿಯೇ ಬರುತ್ತಾರೆ ಮತ್ತು
ದೊಡ್ಡ ಯುಗಗಳಲ್ಲಿ ಬರುವುದಿಲ್ಲ. ಈ ಚಿಕ್ಕ ಯುಗದಲ್ಲಿಯೇ ಇಡೀ ಕಲ್ಪದ ಪ್ರಾಪ್ತಿಯ ಬೀಜವನ್ನು
ಬಿತ್ತುವ ಸಮಯವಾಗಿದೆ. ವಿಶ್ವದ ರಾಜ್ಯವನ್ನಾದರೂ ಪ್ರಾಪ್ತಿ ಮಾಡಿಕೊಳ್ಳಿ, ಪೂಜ್ಯರಾದರೂ ಆಗಿರಿ.
ಇಡೀ ಕಲ್ಪದ ಬೀಜವನ್ನು ಬಿತ್ತುವ ಸಮಯವು ಇದಾಗಿದೆ ಮತ್ತು ಡಬಲ್ ಫಲವನ್ನು ಪ್ರಾಪ್ತಿ ಮಾಡಿಕೊಳ್ಳುವ
ಸಮಯವಾಗಿದೆ, ಭಕ್ತಿಯ ಫಲವೂ ಈಗಲೇ ಸಿಗುತ್ತದೆ ಮತ್ತು ಪ್ರತ್ಯಕ್ಷ ಫಲವೂ ಈಗಲೇ ಸಿಗುತ್ತದೆ. ಈಗೀಗ
ಮಾಡಿದಿರಿ, ಈಗೀಗ ಪ್ರತ್ಯಕ್ಷ ಫಲವು ಸಿಗುತ್ತದೆ ಮತ್ತು ಭವಿಷ್ಯವೂ ಆಗುತ್ತದೆ. ಇಡೀ ಕಲ್ಪದಲ್ಲಿ
ನೋಡಿರಿ, ಇಂತಹ ಯುಗವು ಯಾವುದಾದರೂ ಇದೆಯೇ? ಏಕೆಂದರೆ ಈ ಸಮಯದಲ್ಲಿಯೇ ತಂದೆಯು ಪ್ರತಿಯೊಬ್ಬ
ಮಗುವಿನ ಅಂಗೈಯಲ್ಲಿ ಅತಿ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ. ತಮ್ಮ ಉಡುಗೊರೆಯು ನೆನಪಿದೆಯೇ?
ಸ್ವರ್ಗದ ರಾಜ್ಯಭಾಗ್ಯ. ಹೊಸ ಪ್ರಪಂಚದ ಸ್ವರ್ಗದ ಉಡುಗೊರೆಯನ್ನು ಪ್ರತಿಯೊಬ್ಬ ಮಗುವಿನ ಅಂಗೈಯಲ್ಲಿ
ಇಟ್ಟಿದ್ದಾರೆ. ಇಷ್ಟು ದೊಡ್ಡ ಉಡುಗೊರೆಯನ್ನು ಯಾರೂ ಕೊಡುವುದಿಲ್ಲ ಮತ್ತು ಎಂದೂ ಕೊಡಲು
ಸಾಧ್ಯವಿಲ್ಲ. ಅದು ಈಗಲೇ ಸಿಗುತ್ತದೆ. ತಾವೀಗ ಮಾ||ಸರ್ವಶಕ್ತಿವಂತರಾಗುತ್ತೀರಿ ಮತ್ತ್ಯಾವುದೇ
ಯುಗದಲ್ಲಿ ಮಾ||ಸರ್ವಶಕ್ತಿವಂತ ಎಂಬ ಪದವಿಯು ಸಿಗುವುದಿಲ್ಲ. ಆದ್ದರಿಂದ ಸ್ವಯಂನ ಸ್ವಮಾನದಲ್ಲಿಯೂ
ಏಕಾಗ್ರವಾಗಿರಿ ಮತ್ತು ಸಮಯದ ಮಹತ್ವಿಕೆಯನ್ನೂ ಅರಿತುಕೊಳ್ಳಿರಿ. ಸ್ವಯಂ ಮತ್ತು ಸಮಯ, ಸ್ವಯಂಗೆ
ಸ್ವಮಾನವಿದೆ, ಸಮಯದ ಮಹತ್ವಿಕೆಯಿದೆ. ಹುಡುಗಾಟಿಕೆಯಲ್ಲಿ ಬರಬೇಡಿ, 70 ವರ್ಷಗಳು ಕಳೆದು ಹೋಯಿತು,
ಒಂದುವೇಳೆ ಈಗಲೂ ಹುಡುಗಾಟಿಕೆಯಲ್ಲಿ ಬಂದರೆ ತಮ್ಮ ಬಹಳಷ್ಟು ಪ್ರಾಪ್ತಿಯನ್ನು ಕಡಿಮೆ
ಮಾಡಿಕೊಳ್ಳುತ್ತೀರಿ ಏಕೆಂದರೆ ಎಷ್ಟು ಮುಂದುವರೆಯುತ್ತೀರೋ ಅಷ್ಟು ಒಂದನೆಯದಾಗಿ ಹುಡುಗಾಟಿಕೆ
ಬರುತ್ತದೆ, ಬಹಳ ಚೆನ್ನಾಗಿದ್ದೇವೆ ಬಹಳ ಚೆನ್ನಾಗಿ ನಡೆಯುತ್ತೇವೆ, ಮಾಡಿ ಬಿಡುತ್ತೇವೆ, ನೋಡಿರಿ
ನಾವು ಹಿಂದೆ ಉಳಿಯುವುದಿಲ್ಲ, ಆಗಿ ಬಿಡುವುದು, ಇದು ಹುಡುಗಾಟಿಕೆ ಮತ್ತು ರಾಯಲ್ ಆಲಸ್ಯವಾಗಿದೆ.
ಹುಡುಗಾಟಿಕೆ ಮತ್ತು ಆಲಸ್ಯವಿರಬಾರದು. `ಯಾವಾಗಲಾದರೂ' (ಮಾಡುವೆವು) - ಇದು ಆಲಸ್ಯವಾಗಿದೆ, `ಈಗಲೇ
(ಮಾಡುವೆವು)' ಶಬ್ಧವು ತುರಂತ್ ದಾನ (ಶೀಘ್ರ ದಾನ) ಮಹಾಪುಣ್ಯವಾಗಿದೆ.
ಇಂದು ಇದು ಮೊದಲ ಟರ್ನ್
ಆಗಿದೆಯಲ್ಲವೆ ಆದ್ದರಿಂದ ಬಾಪ್ದಾದಾ ಗಮನ ತರಿಸುತ್ತಿದ್ದೇವೆ. ಈ ಸೀಜನ್ನಲ್ಲಿ ಸ್ವಮಾನದಿಂದ
ಇಳಿಯಬಾರದು, ಸಮಯದ ಮಹತ್ವಿಕೆಯನ್ನು ಮರೆಯಬಾರದು. ಅಲರ್ಟ್ ಆಗಿರಿ, ಎಚ್ಚರಿಕೆಯಿಂದಿರಿ.
ಪ್ರಿಯರಾಗಿದ್ದೀರಲ್ಲವೆ! ಯಾರೊಂದಿಗೆ ಪ್ರೀತಿಯಿರುವುದೋ ಅವರ ಸ್ವಲ್ಪವೂ ಕೊರತೆಯನ್ನು ನೋಡಲು
ಇಷ್ಟವಾಗುವುದಿಲ್ಲ. ತಿಳಿಸಿದೆವಲ್ಲವೆ- ಬಾಪ್ದಾದಾರವರಿಗೆ ಕೊನೆಯ ನಂಬರಿನ ಮಗುವಿನೊಂದಿಗೂ ಅತೀ
ಪ್ರೀತಿ ಇದೆ. ಮಗುವಾಗಿದ್ದಾರಲ್ಲವೆ! ಅಂದಾಗ ಈಗ ನಡೆಯುತ್ತಿರುವ ಈ ಸೀಜನ್ನಲ್ಲಿ ಸೀಜನ್ ಭಲೆ
ಭಾರತೀಯರದಾಗಿದೆ ಆದರೆ ಡಬಲ್ ವಿದೇಶಿಯರೂ ಕಡಿಮೆಯಿಲ್ಲ. ಬಾಪ್ದಾದಾ ನೋಡಿದ್ದೇವೆ - ಡಬಲ್
ವಿದೇಶಿಯರು ಇಲ್ಲದೇ ಇರುವಂತಹ ಟರ್ನ್ ಯಾವುದೂ ಇರುವುದಿಲ್ಲ. ಅವರದು ಇದು ಕಮಾಲ್ ಆಗಿದೆ. ಈಗ ಡಬಲ್
ವಿದೇಶಿಯರು ಕೈಯೆತ್ತಿರಿ. ನೋಡಿ, ಎಷ್ಟೊಂದು ಮಂದಿ ಇದ್ದಾರೆ! ಅವರಿಗಾಗಿ ವಿಶೇಷ ಸೀಜನ್ ಕಳೆದು
ಹೋಯಿತು ಆದರೂ ನೋಡಿ ಎಷ್ಟೊಂದು ಮಂದಿಯಿದ್ದಾರೆ! ಶುಭಾಷಯಗಳು. ಭಲೆ ಬನ್ನಿರಿ, ಬಹಳ-ಬಹಳ ಶುಭಾಷಯಗಳು.
ಅಂದಾಗ ಈಗ ಏನು
ಮಾಡಬೇಕೆಂದು ಕೇಳಿಸಿಕೊಂಡಿರಾ? ಈ ಸೀಜನ್ನಲ್ಲಿ ಏನೇನು ಮಾಡಬೇಕು ಎಂಬ ಹೋಮ್ವರ್ಕ್ನ್ನು ಕೊಟ್ಟು
ಬಿಟ್ಟೆವು. ಸ್ವಯಂನ್ನು ರಿಯಲೈಜ್ ಮಾಡಿಕೊಳ್ಳಿ, ಸ್ವಯಂನ್ನೇ ರಿಯಲೈಜ್ ಮಾಡಿ ಅನ್ಯರನ್ನಲ್ಲ ಮತ್ತು
ರಿಯಲ್ ಗೋಲ್ಡ್ ಆಗಿರಿ ಏಕೆಂದರೆ ಬಾಪ್ದಾದಾ ತಿಳಿದುಕೊಳ್ಳುತ್ತಾರೆ - ಯಾರು ನನ್ನಬಾಬಾ ಎಂದು
ಹೇಳಿದರು ಅವರು ಜೊತೆಯಲ್ಲಿಯೇ ಹೋಗಬೇಕಾಗಿದೆ. ದಿಬ್ಬಣಿಗರಾಗಿ ಹೋಗಬಾರದು. ಬಾಪ್ದಾದಾರವರ ಜೊತೆ
ಶ್ರೀಮತದ ಕೈಯನ್ನಿಡಿದು ಜೊತೆ ಹೋಗಬೇಕು ಮತ್ತೆ ಬ್ರಹ್ಮಾ ತಂದೆಯ ಜೊತೆ ಮೊದಲು ರಾಜ್ಯದಲ್ಲಿ
ಬರಬೇಕಾಗಿದೆ. ಹೊಸ ಮನೆಯಲ್ಲಿಯೇ ಮಜಾ ಬರುತ್ತದೆಯಲ್ಲವೆ. ಒಂದು ತಿಂಗಳಿನ ನಂತರವೂ ಸಹ ಇದು ಒಂದು
ತಿಂಗಳು ಹಳೆಯದಾಗಿದೆ ಎಂದೇ ಹೇಳುತ್ತಾರೆ. ಹೊಸ ಮನೆ, ಹೊಸ ಪ್ರಪಂಚ, ಹೊಸ ಚಟುವಟಿಕೆ, ಹೊಸ
ರೀತಿ-ನೀತಿ ಮತ್ತು ಬ್ರಹ್ಮಾ ತಂದೆಯ ಜೊತೆ ರಾಜ್ಯದಲ್ಲಿ ಬನ್ನಿರಿ. ಬ್ರಹ್ಮಾ ತಂದೆಯೊಂದಿಗೆ ನಮಗೆ
ಬಹಳ ಪ್ರೀತಿಯಿದೆಯೆಂದು ಎಲ್ಲರೂ ಹೇಳುತ್ತೀರಲ್ಲವೆ. ಅಂದಮೇಲೆ ಪ್ರೀತಿಯ ಚಿಹ್ನೆಯೇನು?
ಜೊತೆಯಿರುವುದು, ಜೊತೆ ನಡೆಯುವುದು, ಜೊತೆಯಲ್ಲಿ ಬರುವುದು. ಇದು ಪ್ರೀತಿಯ ಸಂಕೇತವಾಗಿದೆ. ಇದು
ಇಷ್ಟವಿದೆಯಲ್ಲವೆ? ಜೊತೆಯಿರಬೇಕು, ಜೊತೆಯಲ್ಲಿಯೇ ಹೋಗಬೇಕು ಮತ್ತು ಜೊತೆಯಲ್ಲಿ ಬರಬೇಕು - ಇದು
ಇಷ್ಟವೇ? ಅಂದಮೇಲೆ ಯಾವುದು ಇಷ್ಟವಾಗುತ್ತದೆಯೋ ಅದನ್ನು ಬಿಡುವುದಿಲ್ಲ ಆದ್ದರಿಂದ ತಂದೆಗೆ
ಪ್ರತಿಯೊಬ್ಬ ಮಗುವಿನ ಜೊತೆ ಪ್ರೀತಿಯ ರೀತಿಯು ಇದೇ ಆಗಿದೆ - ಜೊತೆಯಲ್ಲಿ ಹೋಗಬೇಕು, ಹಿಂದಿಂದೆ
ಅಲ್ಲ. ಒಂದುವೇಳೆ ಸ್ವಲ್ಪ ಹೊರೆ ಉಳಿದುಕೊಂಡರೂ ಸಹ ಧರ್ಮರಾಜನ ಶಿಕ್ಷೆಗಾಗಿ ನಿಲ್ಲಬೇಕಾಗುವುದು,
ಆಗ ಕೈಯಲ್ಲಿ ಕೈಯಿರುವುದಿಲ್ಲ. ಹಿಂದೆ-ಹಿಂದೆ ಬರುತ್ತೀರಿ. ಮಜಾ ಯಾವುದರಲ್ಲಿದೆ? ಜೊತೆ
ಇರುವುದರಲ್ಲಿ ಅಲ್ಲವೆ. ಅಂದಮೇಲೆ ಇದು ಪಕ್ಕಾ ಪ್ರತಿಜ್ಞೆಯಾಗಿದೆಯಲ್ಲವೆ. ಜೊತೆಯಲ್ಲಿಯೇ
ಹೋಗಬೇಕೆಂದು ಪಕ್ಕಾ ಪ್ರತಿಜ್ಞೆಯಿದೆಯೇ? ಅಥವಾ ಹಿಂದೆ-ಹಿಂದೆ ಬರಬೇಕಾಗಿದೆಯೋ? ನೋಡಿ, ಕೈಯನ್ನಂತೂ
ಬಹಳ ಚೆನ್ನಾಗಿ ಎತ್ತುತ್ತೀರಿ. ಕೈಗಳನ್ನು ನೋಡಿ ಬಾಪ್ದಾದಾ ಖುಷಿಯಾಗುತ್ತೇವೆ ಆದರೆ ಶ್ರೀಮತದ
ಕೈಯನ್ನೆತ್ತಿರಿ. ಶಿವ ತಂದೆಗಂತೂ ಕೈಗಳಿರುವುದಿಲ್ಲ, ಬ್ರಹ್ಮಾ ತಂದೆ ಆತ್ಮಕ್ಕೂ ಕೈಯಿರುವುದಿಲ್ಲ,
ತಮಗೂ ಸಹ ಈ ಸ್ಥೂಲ ಕೈಗಳು ಇರುವುದಿಲ್ಲ. ಶ್ರೀಮತದ ಕೈಯನ್ನು ಹಿಡಿದುಕೊಂಡು ಜೊತೆಯಲ್ಲಿ ನಡೆಯಿರಿ.
ನಡೆಯುತ್ತೀರಲ್ಲವೆ! ತಲೆಯನ್ನಾದರೂ ಅಲುಗಾಡಿಸಿರಿ. ಕೈಗಳನ್ನು ಚೆನ್ನಾಗಿ ಅಲುಗಾಡಿಸುತ್ತಿದ್ದಾರೆ.
ಬಾಪ್ದಾದಾ ಇದನ್ನೇ ಬಯಸುತ್ತಾರೆ - ಒಬ್ಬ ಮಗುವೂ ಸಹ ಹಿಂದೆ ಉಳಿಯಬಾರದು. ಎಲ್ಲರೂ ಜೊತೆ ಜೊತೆಯಲ್ಲಿ
ನಡೆಯಬೇಕಾಗಿದೆ ಅಂದಮೇಲೆ ಎವರೆಡಿಯಾಗಿ ಇರಬೇಕಾಗಿದೆ. ಒಳ್ಳೆಯದು.
ಈಗ ಬಾಪ್ದಾದಾ ನಾಲ್ಕಾರು
ಕಡೆಯ ಮಕ್ಕಳ ರಿಜಿಸ್ಟರ್ ನೋಡುತ್ತಾ ಇರುತ್ತೇವೆ. ಪ್ರತಿಜ್ಞೆ ಮಾಡಿದಿರಿ, ಅದನ್ನು ನಿಭಾಯಿಸಿದಿರಿ
ಎಂದರೆ ಲಾಭವನ್ನು ಪಡೆದುಕೊಳ್ಳುವಿರಿ. ಕೇವಲ ಪ್ರತಿಜ್ಞೆ ಮಾಡಬೇಡಿ, ಅದರ ಲಾಭವನ್ನು ಪಡೆಯಿರಿ.
ಒಳ್ಳೆಯದು - ಈಗ ಎಲ್ಲರೂ ಧೃಡ ಸಂಕಲ್ಪ ಮಾಡುತ್ತೀರಾ! ಧೃಡ ಸಂಕಲ್ಪದ ಸ್ಥಿತಿಯಲ್ಲಿ ಸ್ಥಿತರಾಗಿ
ಕುಳಿತುಕೊಳ್ಳಿರಿ, ಮಾಡಲೇಬೇಕು ಹೋಗಲೇಬೇಕಾಗಿದೆ, ಜೊತೆಯಲ್ಲಿ ನಡೆಯಬೇಕಾಗಿದೆ. ಈಗ ತಮ್ಮೊಂದಿಗೆ ಈ
ಧೃಡ ಸಂಕಲ್ಪ ಮಾಡಿರಿ, ಈ ಸ್ಥಿತಿಯಲ್ಲಿ ಕುಳಿತುಕೊಳ್ಳಿರಿ. ಮಾಡುತ್ತೇವೆ, ಓದುತ್ತೇವೆ, ಈ ವೆ,ವೆ
ಎನ್ನಬೇಡಿ, ಮಾಡಲೇಬೇಕಾಗಿದೆ. ಒಳ್ಳೆಯದು.
ಎಲ್ಲಾ ಕಡೆಯ ಡಬಲ್
ಸೇವಾಧಾರಿ ಮಕ್ಕಳಿಗೆ, ನಾಲ್ಕಾರು ಕಡೆಯ ಸದಾ ಏಕಾಗ್ರ ಸ್ವಮಾನದ ಸೀಟಿನಲ್ಲಿ ಸೆಟ್ ಆಗಿರುವಂತಹ
ಬಾಪ್ದಾದಾರವರ ಮಸ್ತಕ ಮಣಿಗಳು, ನಾಲ್ಕೂ ಕಡೆಯ ಸಮಯದ ಮಹತ್ವಿಕೆಯನ್ನರಿತು ತೀವ್ರ ಪುರುಷಾರ್ಥದ
ಪ್ರತ್ಯಕ್ಷ ಪ್ರಮಾಣವನ್ನು ನೀಡುವಂತಹ ಸುಪುತ್ರ ಮಕ್ಕಳಿಗೆ, ನಾಲ್ಕೂ ಕಡೆಯ ಉಮ್ಮಂಗ-ಉತ್ಸಾಹದ
ರೆಕ್ಕೆಗಳಿಂದ ಸದಾ ಹಾರುತ್ತಾ, ಹಾರಿಸುತ್ತಾ ಇರುವಂತಹ ಡಬಲ್ಲೈಟ್ ಫರಿಶ್ತಾ ಮಕ್ಕಳಿಗೆ
ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ದಾದಿಯರೊಂದಿಗೆ:-
ಎಲ್ಲರೂ ಜೊತೆ ಕೊಡುತ್ತಾ ನಡೆಯುತ್ತಿದ್ದಾರೆ, ಇದು ಬಾಪ್ದಾದಾರವರಿಗೆ ಖುಷಿಯಿದೆ. ಪ್ರತಿಯೊಬ್ಬರೂ
ತಮ್ಮ ವಿಶೇಷತೆಯ ಬೆರಳನ್ನು (ಸಹಯೋಗವನ್ನು) ಕೊಡುತ್ತಿದ್ದಾರೆ. (ದಾದೀಜಿಯೊಂದಿಗೆ) ಎಲ್ಲರಿಗೆ
ಆದಿರತ್ನವನ್ನು ನೋಡಿ ಖುಷಿಯಾಗುತ್ತಿದೆಯಲ್ಲವೆ. ಆದಿಯಿಂದ ಹಿಡಿದು ಸೇವೆಯಲ್ಲಿ ತಮ್ಮ ಮೂಳೆಗಳನ್ನು
ಸವೆಸಿದ್ದಾರೆ. ಅವಿಶ್ರಾಂತ ಸೇವೆ ಮಾಡಿದ್ದಾರೆ, ಬಹಳ ಒಳ್ಳೆಯದು - ನೋಡಿ ಏನೇ ಆಗಲಿ ಆದರೆ ಒಂದು
ಮಾತನ್ನು ನೋಡಿರಿ, ಹಾಸಿಗೆ ಹಿಡಿದಿರಲಿ ಅಥವಾ ಎಲ್ಲಿಯಾದರೂ ಇರಲಿ ಆದರೆ ತಂದೆಯನ್ನು ಮರೆತಿಲ್ಲ.
ಹೃದಯದಲ್ಲಿ ತಂದೆಯೇ ಸಮಾವೇಶವಾಗಿದ್ದಾರೆ. ಹೌದಲ್ಲವೆ. ನೋಡಿರಿ, ಎಷ್ಟು ಚೆನ್ನಾಗಿ
ಮುಗುಳ್ನಗುತ್ತಿದ್ದಾರೆ. ಬಾಕಿ ಆಯಸ್ಸು ದೊಡ್ಡದಾಗಿದೆ ಮತ್ತು ಧರ್ಮರಾಜ ಪುರಿಯಲ್ಲಿ ಟಾಟಾ ಮಾಡಿ
ಹೋಗಬೇಕಾಗಿದೆ ಶಿಕ್ಷೆಯನ್ನನುಭವಿಸುವುದಿಲ್ಲ. ಧರ್ಮರಾಜನೂ ಸಹ ತಲೆ ಬಾಗಬೇಕಾಗುವುದು. ಸ್ವಾಗತ
ಮಾಡಬೇಕಾಗುವುದಲ್ಲವೆ. ಟಾಟಾ ಮಾಡಬೇಕಾಗುವುದು ಆದ್ದರಿಂದಲೇ ಇಲ್ಲಿ ತಂದೆಯ ನೆನಪಿನಲ್ಲಿ
ಅಲ್ಪಸ್ವಲ್ಪ ಲೆಕ್ಕಾಚಾರವನ್ನು ಮುಗಿಸುತ್ತಿದ್ದಾರೆ. ಇನ್ನೇನೂ ಕಷ್ಟವಿಲ್ಲ. ಭಲೆ ಕಾಯಿಲೆಯಿದೆ
ಆದರೆ ದುಃಖದ ಚಿಹ್ನೆಯೂ ಇಲ್ಲ. (ಪರದಾದಿ-ನಿರ್ಮಲ ಶಾಂತ ದಾದಿಯೊಂದಿಗೆ) ಇವರು ಬಹಳ
ಮುಗುಳ್ನಗುತ್ತಿದ್ದಾರೆ. ಎಲ್ಲರಿಗೆ ದೃಷ್ಟಿಯನ್ನು ಕೊಡಿ. ಒಳ್ಳೆಯದು.
ವರದಾನ:
ಬಾಹರ್ಮುಖಿ,
ಚತುರತೆಯಿಂದ ಮುಕ್ತರಾಗಿರುವಂತಹ ತಂದೆಗೆ ಇಷ್ಟವಾಗುವಂತಹ ಸತ್ಯ ವ್ಯಾಪಾರಿ ಭವ.
ಬಾಪ್ದಾದಾರವರಿಗೆ
ಪ್ರಾಪಂಚಿಕ ಬಾಹರ್ಮುಖತೆ ಚತುರತೆ ಇಷ್ಟವಾಗುವುದಿಲ್ಲ. ಮುಗ್ಧ್ದರ ಭಗವಂತ ಎಂದು ಹೇಳಲಾಗುವುದು.
ಚತುರ ಸುಜಾನ್ ಆಗಿರುವ ತಂದೆಗೆ ಮುಗ್ಧ ಮಕ್ಕಳೇ ಪ್ರಿಯ. ಪರಮಾತ್ಮನ ಪುಸ್ತಕದಲ್ಲಿ ಮುಗ್ಧ ಮಕ್ಕಳೇ
ವಿಶೇಷ ವಿ.ಐ.ಪಿ. ಯಾಗಿದ್ದಾರೆ. ಯಾರ ಮೇಲೆ ಪ್ರಪಂಚದವರ ಕಣ್ಣು ಹೋಗುವುದಿಲ್ಲ-ಅವರೇ ತಂದೆಯ ಜೊತೆ
ವ್ಯಾಪಾರ ಮಾಡಿ ಪರಮಾತ್ಮನ ಕಣ್ಣುಗಳ ನಕ್ಷತ್ರಗಳಾಗಿ ಬಿಟ್ಟರು. ಮುಗ್ಧ ಮಕ್ಕಳೇ ಹೃದಯದಿಂದ
ಹೇಳುತ್ತಾರೆ “ನನ್ನ ಬಾಬಾ”, ಇದೇ ಒಂದು ಸೆಕೆಂಡಿನ ಒಂದು ಮಾತಿನಿಂದ ಅಗಣಿತ ಖಜಾನೆಯ ವ್ಯಾಪಾರ
ಮಾಡುವಂತಹ ಸತ್ಯ ವ್ಯಾಪಾರಿಗಳಾಗಿ ಬಿಟ್ಟಿರಿ.
ಸ್ಲೋಗನ್:
ಸರ್ವರ ಸ್ನೇಹ
ಪ್ರಾಪ್ತಿ ಮಾಡಿಕೊಳ್ಳಬೇಕಾದರೆ ಮುಖದಿಂದ ಸದಾ ಮಧುರ ಮಾತನ್ನೇ ಮಾತನಾಡಿ.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಯಾರು ಸದಾ ತಂದೆಯ
ನೆನಪಿನಲ್ಲಿ ಲವಲೀನ ಅರ್ಥಾತ್ ಸಮಾವೇಶವಾಗಿದ್ದಾರೆ. ಇಂತಹ ಆತ್ಮಗಳ ನಯನಗಳಲ್ಲಿ ಮತ್ತು ಮುಖದ ಪ್ರತಿ
ಮಾತಿನಲ್ಲಿ ತಂದೆಯು ಸಮಾವೇಶವಾಗಿರುವ ಕಾರಣ ಶಕ್ತಿ-ಸ್ವರೂಪದ ಬದಲಾಗಿ ಸರ್ವ ಶಕ್ತಿವಂತನಾಗಿ
ಕಾಣಿಸುವರು. ಹೇಗೆ ಆದಿ ಸ್ಥಾಪನೆಯಲ್ಲಿ ಬ್ರಹ್ಮಾ ರೂಪದಲ್ಲಿ ಸದಾ ಶ್ರೀಕೃಷ್ಣ ಕಾಣಿಸುತ್ತಿದ್ದರು,
ಹಾಗೆಯೇ ನೀವು ಮಕ್ಕಳ ಮೂಲಕ ಸರ್ವ ಶಕ್ತಿವಂತ ಕಾಣಿಸಲಿ.
ಸೂಚನೆ: ಇಂದು ತಿಂಗಳಿನ
ಮೂರನೇ ರವಿವಾರವಾಗಿದೆ, ಎಲ್ಲಾ ರಾಜಯೋಗಿ ತಪಸ್ವಿ ಸಹೋದರ-ಸಹೋದರಿಯರು ಸಂಜೆ 6.30ರಿಂದ
7.30ರವರೆಗೆ, ವಿಶೇಷ ಯೋಗ ಅಭ್ಯಾಸದ ಸಮಯ ತಮ್ಮ ಪೂರ್ವಜತನದ ಸ್ವಮಾನದಲ್ಲಿ ಸ್ಥಿತರಾಗಿ, ಕಲ್ಪ
ವೃಕ್ಷದ ಬುಡದಲ್ಲಿ ಕುಳಿತು ಪೂರ್ಣ ವೃಕ್ಷಕ್ಕೆ ಶಕ್ತಿಶಾಲಿ ಯೋಗ ದಾನ ಕೊಡುತ್ತಾ, ತಮ್ಮ ವಂಶಾವಳಿಯ
ದಿವ್ಯ ಪಾಲನೆ ಮಾಡಿ.