17.08.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆ
ಮತ್ತು ದಾದಾರವರದು ಅದ್ಭುತ ಕಥೆಯಾಗಿದೆ, ತಂದೆಯು ಯಾವಾಗ ದಾದಾರವರಲ್ಲಿ ಪ್ರವೇಶ ಮಾಡುವರೋ ಆಗ ನೀವು
ಬ್ರಹ್ಮಾಕುಮಾರ-ಕುಮಾರಿಯರು ಆಸ್ತಿಗೆ ಅಧಿಕಾರಿಗಳಾಗುವಿರಿ”
ಪ್ರಶ್ನೆ:
ನಿಶ್ಚಿತ
ಡ್ರಾಮಾವನ್ನು ಅರಿತುಕೊಂಡಿದ್ದರೂ ಸಹ ನೀವು ಮಕ್ಕಳು ಯಾವ ಲಕ್ಷ್ಯವನ್ನು ಅವಶ್ಯವಾಗಿ
ಇಟ್ಟುಕೊಳ್ಳಬೇಕು?
ಉತ್ತರ:
ಪುರುಷಾರ್ಥ ಮಾಡಿ
ಗ್ಯಾಲಪ್ ಮಾಡುವ ಅರ್ಥಾತ್ ವಿನಾಶಕ್ಕೆ ಮೊದಲೇ ತಂದೆಯ ನೆನಪಿನಲ್ಲಿದ್ದು ಕರ್ಮಾತೀತರಾಗುವ
ಲಕ್ಷ್ಯವನ್ನು ಅವಶ್ಯವಾಗಿ ಇಟ್ಟುಕೊಳ್ಳಬೇಕಾಗಿದೆ. ಕರ್ಮಾತೀತ ಅರ್ಥಾತ್ ತಮೋಪ್ರಧಾನರಿಂದ
ಸತೋಪ್ರಧಾನರಾಗುವುದು. ಪುರುಷಾರ್ಥಕ್ಕೆ ಇದು ಇನ್ನು ಸ್ವಲ್ಪವೇ ಸಮಯವಿದೆ, ಆದ್ದರಿಂದ ವಿನಾಶಕ್ಕೆ
ಮೊದಲೇ ತಮ್ಮ ಸ್ಥಿತಿಯನ್ನು ಅಚಲ, ಅಡೋಲವನ್ನಾಗಿ ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ.
ಓಂ ಶಾಂತಿ. ಈ ಎರಡನ್ನೂ ಯಾರು ಹೇಳುತ್ತಾರೆ? ಒಬ್ಬರು ತಂದೆ, ಇನ್ನೊಬ್ಬರು ದಾದಾ. ಒಬ್ಬ
ರಾಜನಿದ್ದನು, ಒಬ್ಬ ರಾಣಿಯಿದ್ದಳು ಎಂದು ಕಥೆಯನ್ನು ಹೇಳುತ್ತಾರಲ್ಲವೆ. ಈಗ ಇವು ಹೊಸ ಮಾತುಗಳಾಗಿವೆ.
ಒಬ್ಬರು ತಂದೆ, ಇನ್ನೊಬ್ಬರು ದಾದಾ, ನೀವು ಹೇಳುತ್ತೀರಿ - 5000 ವರ್ಷಗಳು ಮೊದಲೂ ಸಹ ಒಬ್ಬರು ಶಿವ
ತಂದೆಯಿದ್ದರು, ಇನ್ನೊಬ್ಬರು ಬ್ರಹ್ಮಾ ದಾದಾ ಇದ್ದರು. ಶಿವನಿಗಂತೂ ಎಲ್ಲರೂ ಮಕ್ಕಳಾಗಿದ್ದಾರೆ.
ಎಲ್ಲಾ ಆತ್ಮರು ಒಬ್ಬ ತಂದೆಯ ಸಂತಾನರಾಗಿದ್ದಾರೆ. ಇದಂತೂ ಇದ್ದೇ ಇದೆ. ಬ್ರಹ್ಮನ ಮಕ್ಕಳು
ಬ್ರಾಹ್ಮಣರೂ ಇದ್ದರು, ಪ್ರಜಾಪಿತ ಬ್ರಹ್ಮನ ಸಂತಾನರು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದರು, ಅವರಿಗೆ
ಯಾರು ಓದಿಸುತ್ತಿದ್ದರು? ಶಿವ ತಂದೆ. ಪ್ರಜಾಪಿತ ಬ್ರಹ್ಮನಿಗೆ ಈ ಬ್ರಹ್ಮಾಕುಮಾರ-ಕುಮಾರಿಯರು ಅನೇಕ
ಮಕ್ಕಳಿದ್ದಾರಲ್ಲವೆ. ಬ್ರಹ್ಮಾಕುಮಾರ-ಕುಮಾರಿಯರು ಒಪ್ಪುತ್ತಾರೆ - ನಾವು ಶಿವ ತಂದೆಯ ಮಕ್ಕಳೂ
ಆಗಿದ್ದೇವೆ, ಮೊಮ್ಮಕ್ಕಳೂ ಆಗಿದ್ದೇವೆ. ಮಕ್ಕಳಂತೂ ಆಗಿಯೇ ಇದ್ದೇವೆ, ಈಗ ಮೊಮ್ಮಕ್ಕಳಾಗಿದ್ದೇವೆ.
ಈಗ ಬ್ರಹ್ಮಾರವರ ಮೂಲಕ ತಾತನಿಂದ ಆಸ್ತಿಯನ್ನು ತೆಗೆದುಕೊಳ್ಳಲು ಮೊಮ್ಮಕ್ಕಳಾಗಿದ್ದೇವೆ. ಈಗ ನಿಮಗೆ
ತಾತನಿಂದ ಆಸ್ತಿಯು ಸಿಗುತ್ತಿದೆ, ಅವರಿಗೆ ಶಿವ ಬಾಬಾ ಎಂದು ಹೇಳುತ್ತಾರೆ ಆದರೆ
ಬ್ರಹ್ಮಾಕುಮಾರ-ಕುಮಾರಿಯರಾಗಿರುವ ಕಾರಣ ಅವರಿಗೆ ನಾವು ತಾತನೆಂದು ಹೇಳುತ್ತೇವೆ. ಆಸ್ತಿಯು
ತಾತನದಾಗಿದೆ, ಬ್ರಹ್ಮಾ ಬಾಬಾರವರದಲ್ಲ. ವೈಕುಂಠ ವಾಸಿಗಳಾಗುವ ಆಸ್ತಿಯು ಆ ತಂದೆಯಿಂದ ಸಿಗುತ್ತದೆ.
ಅರ್ಧ ಕಲ್ಪ ಆಸ್ತಿಯನ್ನು ಪಡೆಯುತ್ತೀರಿ, ನಂತರ ನಿಮಗೆ ರಾವಣನಿಂದ ಶಾಪ ಸಿಗುತ್ತದೆ,
ಕೆಳಗಿಳಿಯುತ್ತಾ ಬರುತ್ತೀರಿ ಅಂದರೆ ಕೆಳಗಿಳಿಯುವ ಗ್ರಹಚಾರವು ಕುಳಿತುಕೊಳ್ಳುತ್ತದೆ. ಈಗ ನೀವು
ಮಕ್ಕಳು ತಿಳಿದುಕೊಳ್ಳುತ್ತೀರಿ - ನಮ್ಮ ಗ್ರಹಚಾರ ರಾಹುವಿನ ದೆಶೆಯು ಮುಕ್ತಾಯವಾಯಿತು, ರಾಹುವಿನ
ದೆಶೆಯು ಎಲ್ಲದಕ್ಕಿಂತ ಕೆಟ್ಟದ್ದಾಗಿದೆ, ಬೃಹಸ್ಪತಿ ದೆಶೆ ಸರ್ವ ಶ್ರೇಷ್ಠವಾಗಿದೆ, ಮತ್ತೆ
ರಾಹುವಿನ ದೆಶೆ ಬಂದಿದ್ದರಿಂದ 5 ವಿಕಾರಗಳ ಕಾರಣ ನಾವು ಕಪ್ಪಾಗಿ ಬಿಟ್ಟಿದ್ದೇವೆ, ಈಗ ಪುನಃ ತಂದೆಯು
ಹೇಳುತ್ತಾರೆ - ದಾನ ಕೊಟ್ಟರೆ ಗ್ರಹಣವು ಬಿಟ್ಟು ಹೋಗುವುದು. ನಿಮ್ಮದೇ ಮಾತಾಗಿದೆ. ಇದನ್ನು ಅವರು
ಸೂರ್ಯ-ಚಂದ್ರನ ಗ್ರಹಣವೆಂದು ತಿಳಿದುಕೊಂಡಿದ್ದಾರೆ. ಗ್ರಹಣ ಹಿಡಿದಾಗ ದಾನ ಕೊಡುತ್ತಾರೆ, ಇಲ್ಲಿ
ತಂದೆಯು ನಿಮಗೆ ತಿಳಿಸುತ್ತಾರೆ - 5 ವಿಕಾರಗಳ ದಾನ ಕೊಟ್ಟರೆ ಗ್ರಹಚಾರವು ಕಳೆಯುವುದು. ಈ
ವಿಕಾರಗಳಿಂದಲೇ ನೀವು ಪಾಪಾತ್ಮರಾಗಿದ್ದೀರಿ, ಮುಖ್ಯವಾದುದು ದೇಹಾಭಿಮಾನವಾಗಿದೆ. ಮೊದಲು ಇಷ್ಟು
ಸತೋಪ್ರಧಾನರಾಗಿದ್ದೆವು ನಂತರ ಸತೋ, ರಜೋ, ತಮೋ ಆದೆವು, 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ.
ದೇವತೆಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂಬುದು ಪಕ್ಕಾ ನಿಶ್ಚಯವಿದೆ ಅಂದಮೇಲೆ ಮೊದಲು
ಅವರೇ ತಂದೆಯೊಂದಿಗೆ ಮಿಲನ ಮಾಡಬೇಕು, ಆತ್ಮಗಳು ಪರಮಾತ್ಮನಿಂದ ಬಹುಕಾಲ ಅಗಲಿ ಹೋಗಿದ್ದರೆಂದು ಗಾಯನ
ಮಾಡುತ್ತಾರೆ. ತಂದೆಯು ಹೇಳುತ್ತಾರೆ – ಮೊಟ್ಟ ಮೊದಲು ನಿಮ್ಮನ್ನು ಸತ್ಯಯುಗದಲ್ಲಿ ಕಳುಹಿಸಿದ್ದೆನು
ನಂತರ ನೀವೇ ಬಂದು ಈಗ ಮಿಲನ ಮಾಡಿದ್ದೀರಿ. ಮೊದಲು ಕೇವಲ ಹಾಡುತ್ತಿದ್ದಿರಿ, ಅದರ ಅರ್ಥವನ್ನು ಈಗ
ತಂದೆಯು ತಿಳಿಸುತ್ತಾರೆ. ಎಲ್ಲಾ ವೇದಶಾಸ್ತ್ರ, ಜಪ-ತಪ, ಶ್ಲೋಕ ಏನೆಲ್ಲವೂ ಇದೆಯೋ ಎಲ್ಲದರ
ಸಾರವನ್ನು ತಂದೆಯು ತಿಳಿಸುತ್ತಾರೆ. ಚಕ್ರವು ಬಹಳ ಸಹಜವಾಗಿದೆ. ಈಗ ಕಲಿಯುಗ ಮತ್ತು ಸತ್ಯಯುಗದ
ಸಂಗಮವಾಗಿದೆ. ಯುದ್ಧವೂ ಸನ್ಮುಖದಲ್ಲಿದೆ, ಸತ್ಯಯುಗದ ಸ್ಥಾಪನೆಯಾಗುತ್ತದೆ ಎಂಬುದೂ ಸಹ ನಿಮಗೆ
ನಿಶ್ಚಯವಿದೆ. ಕಲಿಯುಗದಲ್ಲಿ ಯಾರೆಲ್ಲರೂ ಇದ್ದಾರೆಯೋ ಎಲ್ಲರ ಶರೀರಗಳು ಸಮಾಪ್ತಿಯಾಗುತ್ತವೆ. ಬಾಕಿ
ಆತ್ಮರು ಪವಿತ್ರರಾಗಿ ಲೆಕ್ಕಾಚಾರವನ್ನು ಮುಗಿಸಿಕೊಂಡು ಹೋಗುತ್ತಾರೆ, ಇದು ಎಲ್ಲರ ಅಂತಿಮ
ಸಮಯವಾಗಿದೆ. ಆತ್ಮಗಳು ಶರೀರಗಳನ್ನು ಬಿಟ್ಟು ಹೊರಟು ಹೋಗುತ್ತಾರೆ, ಇದು ಈಗ ನಿಮ್ಮ ಬುದ್ಧಿಯಲ್ಲಿದೆ.
ಎಲ್ಲಿಯವರೆಗೆ ನಾವು ಕರ್ಮಾತೀತ ಸ್ಥಿತಿಯನ್ನು ನಾವು ಪಡೆಯುವುದಿಲ್ಲವೋ ಅಲ್ಲಿಯವರೆಗೆ ಸಂಗಮದಲ್ಲಿ
ನಿಂತಿರುತ್ತೇವೆ. ಒಂದು ಕಡೆ ಕೋಟ್ಯಾಂತರ ಮನುಷ್ಯರಿದ್ದಾರೆ, ಇನ್ನೊಂದು ಕಡೆ ನೀವು ಕೆಲವರೇ
ಇದ್ದೀರಿ, ನಿಮ್ಮಲ್ಲಿಯೂ ಸಹ ಎಷ್ಟೊಂದು ಮಂದಿ ನಿಶ್ಚಯ ಬುದ್ಧಿಯವರಾಗುತ್ತಾ ಹೋಗುತ್ತಾರೆ. ನಿಶ್ಚಯ
ಬುದ್ಧಿ ವಿಜಯಂತಿ, ನಂತರ ಹೋಗಿ ವಿಷ್ಣುವಿನ ಕೊರಳಿನ ಹಾರವಾಗುತ್ತಾರೆ. ಒಂದು ರುದ್ರಾಕ್ಷಿ ಮಾಲೆ,
ಇನ್ನೊಂದು ರುಂಡ ಮಾಲೆಯಾಗಿದೆ. ಆ ರುಂಡ ಮಾಲೆಯಲ್ಲಿ ಚಿಕ್ಕ-ಚಿಕ್ಕ ಮುಖಗಳಿರುತ್ತವೆ, ಇದು
ಗುರುತಾಗಿದೆ. ನಾವಾತ್ಮರೇ ಬಂದು ಪುನಃ ತಂದೆಯ ಕೊರಳಿನ ಮಾಲೆಯ ಮಣಿಯಾಗುತ್ತೇವೆ ನಂತರ ಇಲ್ಲಿಗೆ
ನಂಬರ್ವಾರ್ ಆಗಿ ಬರುತ್ತೇವೆ. 8ರ ಮಾಲೆಯೂ ಇದೆ, 108 ಮತ್ತು 16,108ರ ಮಾಲೆಯೂ ಇದೆ. ಈಗ
16,000ವೇ ಅಥವಾ 5-10 ಸಾವಿರವೇ? ಇದನ್ನು ಲೆಕ್ಕವನ್ನು ಮಾಡಲಾಗುವುದಿಲ್ಲ. ಈ ಮಾಲೆಗಳ
ಗಾಯನವಾಗುತ್ತದೆ. ತಂದೆಯು ತಿಳಿಸುತ್ತಾರೆ - ಇದೆಲ್ಲವನ್ನೂ ನೀವೇಕೆ ವಿಚಾರ ಮಾಡುತ್ತೀರಿ! ಕಲ್ಪದ
ಮೊದಲೂ ಸತ್ಯ-ತ್ರೇತಾಯುಗದಲ್ಲಿ ಎಷ್ಟು ಮಂದಿ ರಾಜರಾಗಿದ್ದರೋ ಅಷ್ಟೇ ಆಗುವರು. 100 ಮಂದಿಯಾದರೂ
ಆಗಲಿ ಅಥವಾ 200-300 ಮಂದಿಯಾದರೂ ಆಗಲಿ, ಇದನ್ನು ಕೇಳುವ ಅವಶ್ಯಕತೆಯಿಲ್ಲ.
ತಂದೆಯು ತಿಳಿಸುತ್ತಾರೆ
- ನೀವು ಎಷ್ಟು ಸನ್ಮುಖದಲ್ಲಿ ಬರುತ್ತಾ ಹೋಗುತ್ತೀರೋ ಆಗ ಇದೆಲ್ಲವನ್ನೂ ತಿಳಿದುಕೊಳ್ಳುತ್ತೀರಿ,
ಇಂದು ನಾವು ಇಲ್ಲಿದ್ದೇವೆ, ನಾಳೆ ವಿನಾಶವಾದರೆ ಮತ್ತೆ ಸತ್ಯಯುಗದಲ್ಲಿ ನಾವು ಕೆಲವರೇ
ದೇವಿ-ದೇವತೆಗಳಿರುತ್ತೇವೆ ನಂತರದಲ್ಲಿ ವೃದ್ಧಿಯಾಗುತ್ತದೆ. ಸತ್ಯಯುಗದ ದೃಶ್ಯಗಳೂ ಕಂಡು ಬರುತ್ತವೆ.
ಬಾಕಿ ಲಕ್ಷಾಂತರ ಮಂದಿ ಹೋಗಿ ಇರುತ್ತಾರೆ. ಲಕ್ಷವಾದರೂ ಇರಬಹುದು ಅಥವಾ 9-10 ಲಕ್ಷವಾದರೂ ಇರಬಹುದು,
ಇದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ನೀವು ಯಾವಾಗ ಸಂಪೂರ್ಣರಾಗಲು ಯೋಗ್ಯರಾಗುತ್ತೀರೋ ಆಗ
ನಿಮಗೆ ಇನ್ನೂ ಹೆಚ್ಚು-ಹೆಚ್ಚು ಸಾಕ್ಷಾತ್ಕಾರಗಳಾಗುವುದು, ಈಗಿನ್ನು ಬಹಳಷ್ಟು ತಿಳಿದುಕೊಳ್ಳುವ
ಸಮಯವಿದೆ. ಬಹಳ ಸಾಕ್ಷಾತ್ಕಾರಗಳಾಗುತ್ತಾ ಇರುತ್ತವೆ, ಯುದ್ಧದ ತಯಾರಿಗಳೂ ಬಹಳ ನಡೆಯುತ್ತಿದೆ.
ಎಲ್ಲಾ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಾ ಹೋಗುತ್ತದೆ. ವಿದೇಶದಲ್ಲಿಯೂ ಸಹ ತೆರಿಗೆ ಹೆಚ್ಚುತ್ತಾ
ಹೋಗುತ್ತದೆ. ಬಹಳಷ್ಟು ಬೇಡಿಕೆಯಾಗಿ ನಂತರ ಒಮ್ಮೆಲೆ ಎಲ್ಲವೂ ಸಸ್ತಾ ಆಗಿ ಬಿಡುತ್ತದೆ.
ಸತ್ಯಯುಗದಲ್ಲಿ ಯಾವುದೇ ವಸ್ತುವಿಗಾಗಿ ಖರ್ಚಾಗುವುದಿಲ್ಲ, ಎಲ್ಲಾ ಗಣಿಗಳೂ ಸಂಪನ್ನವಾಗಿ ಬಿಡುತ್ತವೆ.
ಹೊಸ ಪ್ರಪಂಚದಲ್ಲಿ ಬಹಳ ವೈಭವವಿರುತ್ತದೆ. ಲಕ್ಷ್ಮೀ-ನಾರಾಯಣರ ಬಳಿ ಬಹಳ ವೈಭವವಿತ್ತಲ್ಲವೆ.
ಶ್ರೀನಾಥ ದ್ವಾರದಲ್ಲಿ ಮೂರ್ತಿಗಳ ಮುಂದೆ ಎಷ್ಟೊಂದು ವೈಭವದ ಭೋಗವನ್ನು ಇಡುತ್ತಾರೆ. ಅಲ್ಲಿ ಅನೇಕ
ಪ್ರಕಾರದ ಪದಾರ್ಥಗಳನ್ನು ತಯಾರಿಸುತ್ತಾರೆ ಮತ್ತು ತಿನ್ನುತ್ತಾ ಇರುತ್ತಾರೆ. ನಾವು ದೇವತೆಗಳಿಗೆ
ಭೋಗವನ್ನು ಇಡುತ್ತೇವೆ ಎಂದು ಹೇಳುತ್ತಾರೆ. ದೇವತೆಗಳಿಗೆ ಭೋಗವನ್ನು ಇಡಲಿಲ್ಲ ಎಂದರೆ ಅವರು
ಕೋಪಿಸಿಕೊಳ್ಳುತ್ತಾರೆಂದು ಹೇಳುತ್ತಾರೆ. ಆದರೆ ಇದರಲ್ಲಿ ಕೋಪಿಸಿಕೊಳ್ಳುವ ಮಾತೇ ಇಲ್ಲ. ನೀವು ಯಾರ
ಮೇಲೂ ಬೇಸರ ಪಡುವುದಿಲ್ಲ. ನಿಮಗೆ ತಿಳಿದಿದೆ - ಡ್ರಾಮಾನುಸಾರ ಈ ವಿನಾಶವು ಆಗಲೇಬೇಕಾಗಿದೆ.
ಕಲಿಯುಗವು ಪರಿವರ್ತನೆಯಾಗಿ ಸತ್ಯಯುಗವಾಗುವುದು, ಡ್ರಾಮಾನುಸಾರ ಈಗ ಹೊಸ ಚಕ್ರವು
ಆರಂಭವಾಗಬೇಕೆಂಬುದನ್ನು ತಿಳಿದುಕೊಂಡಿದ್ದೇವೆ. ನೀವೂ ಸಹ ಡ್ರಾಮಾದ ವಶವಾಗಿದ್ದೀರಿ, ಡ್ರಾಮಾ
ಅನುಸಾರ ತಂದೆಯು ಬಂದಿದ್ದಾರೆ. ಡ್ರಾಮಾದಲ್ಲಿ ಒಂದು ನಿಮಿಷವೂ ಏರುಪೇರಾಗಲು ಸಾಧ್ಯವಿಲ್ಲ. ಹೇಗೆ
ತಂದೆಯು ಬಂದರು, ನೀವೂ ನೋಡಿದಿರಿ - ಕಲ್ಪದ ನಂತರವೂ ಚಾಚೂ ತಪ್ಪದೆ ಇದೇ ರೀತಿಯಾಗುವುದು.
ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಉದ್ದಗಲವಾಗಿ ಬರೆದಿದ್ದಾರೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ-
ಅವಶ್ಯವಾಗಿ ವಿನಾಶವು ಸನ್ಮುಖದಲ್ಲಿ ನಿಂತಿದೆ. ನೀವೀಗ ಮುನ್ನಡೆಯುತ್ತಿದ್ದೀರಿ, ನಿಮಗೆ ತಿಳಿದಿದೆ-
ತಂದೆಯನ್ನು ನೆನಪು ಮಾಡುತ್ತಾ ನಾವು ಅವಶ್ಯವಾಗಿ ಕರ್ಮಾತೀತ ಸ್ಥಿತಿಯನ್ನು ಹೊಂದಬೇಕಾಗಿದೆ ಅರ್ಥಾತ್
ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಒಂದುವೇಳೆ ಈಗ ಪುರುಷಾರ್ಥ ಮಾಡದಿದ್ದರೆ ಪದವಿ
ಭ್ರಷ್ಟವಾಗಿ ಬಿಡುವುದು. ಹೇ ಆತ್ಮರೇ, ನೀವೀಗ ಪತಿತರಾಗಿ ಬಿಟ್ಟಿದ್ದೀರಿ. ಇದೂ ಸಹ ತಿಳಿದಿದೆ -
ಅನೇಕ ಪ್ರಕಾರದವರು ಬರುತ್ತಾರೆ, ಯಾರು ಅನ್ಯ ಧರ್ಮಗಳಲ್ಲಿ ಸೇರಿದ್ದಾರೆಯೋ ಅವರು ಪುನಃ ಅಲ್ಲಿಂದ
ಮರಳಿ ಬರುತ್ತಾರೆ, ಬಂದು ತಂದೆಯಿಂದ ತಮ್ಮ ಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತಿರುತ್ತಾರೆ.
ಬ್ರಾಹ್ಮಣ ಧರ್ಮದಲ್ಲಿ ಬಂದು ಮತ್ತೆ ದೇವತಾ ಧರ್ಮದಲ್ಲಿ ಬರುತ್ತಾರೆ. ಬ್ರಾಹ್ಮಣ ಧರ್ಮದಲ್ಲಿ
ಬರಲಿಲ್ಲವೆಂದರೆ ದೇವತಾ ಧರ್ಮದಲ್ಲಿ ಹೇಗೆ ಬರುತ್ತಾರೆ? ಬ್ರಾಹ್ಮಣರು ದಿನೇ ದಿನೇ ವೃದ್ಧಿಯಾಗುತ್ತಾ
ಇರುತ್ತಾರೆ. ವಿನಾಶವು ಸನ್ಮುಖ ಬಂದು ಬಿಟ್ಟಿದೆ ಎಂಬುದನ್ನು ನೋಡಿದಾಗ ಇವರು ಸತ್ಯ ಹೇಳುತ್ತಾರೆಂದು
ಅರ್ಥವಾಗುತ್ತದೆ ಆಗ ವೃದ್ಧಿಯಾಗುತ್ತಾ ಹೋಗುತ್ತದೆ. ಬ್ರಾಹ್ಮಣರ ವೃಕ್ಷವು ವೃದ್ಧಿಯಾಗಿ ತುಂಬಿ
ಹೋದಾಗ ಹಿಂತಿರುಗಿ ಹೋಗುವಿರಿ. ದೇವತೆಗಳ ವೃಕ್ಷವು ಹೆಚ್ಚಾಗುವುದು.
ನೀವೀಗ ಸಂಗಮದಲ್ಲಿ
ರಾಜಯೋಗವನ್ನು ಕಲಿಯುತ್ತಿದ್ದೀರಿ. ಈ ಸಂಗಮಕ್ಕೆ ಕಲ್ಯಾಣಕಾರಿ ಯುಗವೆಂದು ಹೇಳಲಾಗುತ್ತದೆ.
ಸಂಗಮದ್ದೇ ಗಾಯನವಿದೆ - ಗಂಗಾ ಸಾಗರದ ಮೇಳವನ್ನು ತೋರಿಸುತ್ತಾರೆ. ಅದೆಲ್ಲವೂ ಭಕ್ತಿ
ಮಾರ್ಗದ್ದಾಗಿದೆ, ಇವರು ಜ್ಞಾನ ಸಾಗರ ಮತ್ತು ಜ್ಞಾನ ಸಾಗರನಿಂದ ಹೊರಟಿರುವ ಜ್ಞಾನ
ಗಂಗೆಯರಾಗಿದ್ದೀರಿ. ಜ್ಞಾನ ಸಾಗರದೊಂದಿಗೆ ಪತಿತ-ಪಾವನ ಶಬ್ಧವು ಅನ್ವಯಿಸುತ್ತದೆ. ಮನುಷ್ಯರು
ಪತಿತ-ಪಾವನಿ ಗಂಗೆಯೆಂದು ತಿಳಿದು ಗಂಗೆಯಲ್ಲಿ ಸ್ನಾನ ಮಾಡುತ್ತಲೇ ಇರುತ್ತಾರೆ. ಈ ನದಿಗಳಂತೂ
ಸತ್ಯಯುಗದಿಂದ ಹಿಡಿದು ನಡೆಯುತ್ತಾ ಬಂದಿವೆ. ಈಗಂತೂ ನದಿಗಳೂ ಸಹ ಕೆಲವೊಂದೆಡೆ ಮನುಷ್ಯರನ್ನು
ಮುಳುಗಿಸಿ ಬಿಡುತ್ತದೆ. ಪ್ರಕೃತಿಯು ತಮೋಪ್ರಧಾನ, ಸಾಗರವೂ ತಮೋಪ್ರಧಾನವಾಗಿ ಬಿಟ್ಟಿದೆ. ಸಾಗರವು
ಸ್ವಲ್ಪ ಉಕ್ಕಿದರೂ ಸಹ ಎಲ್ಲವನ್ನೂ ಸಮಾಪ್ತಿ ಮಾಡಿ ಬಿಡುತ್ತದೆ. ಸತ್ಯಯುಗದಲ್ಲಿ ಯಮುನಾ ನದಿಯ
ತೀರದಲ್ಲಿ ನಾವು ಕೆಲವರೇ ಭಾರತದಲ್ಲಿರುತ್ತೇವೆ, ದೆಹಲಿಯು ಪರಿಸ್ತಾನವಾಗಿತ್ತು, ಈಗ ಪುನಃ ಆಗುವುದು.
ಸತ್ಯಯುಗದಲ್ಲಿ ಕೆಲವರೇ ಜೀವಾತ್ಮರಿರುತ್ತಾರೆ ನಂತರ ನಿಧಾನ-ನಿಧಾನವಾಗಿ ಬರತೊಡಗುತ್ತಾರೆ. ಈಗ
ಕಲಿಯುಗದ ಅಂತ್ಯವಾಗಿದೆ, ಈಗ ಎಷ್ಟೊಂದು ಜನ ಸಂಖ್ಯೆಯಾಗಿದೆ, ಬೇಹದ್ದಿನ ನಾಟಕವಾಗಿದೆ, ಇದನ್ನು
ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಭಲೆ ಯಾರಾದರೂ ತನ್ನನ್ನು ಪಾತ್ರಧಾರಿಯೆಂದು
ತಿಳಿದುಕೊಳ್ಳಲೂಬಹುದು ಆದರೆ ಕಲ್ಪವು 5000 ವರ್ಷಗಳಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. 84
ಜನ್ಮಗಳೆಲ್ಲಿ! 84 ಲಕ್ಷ ಜನ್ಮಗಳೆಲ್ಲಿ! ನೀವೀಗ ಬೆಳಕಿನಲ್ಲಿದ್ದೀರಿ, ನಿಮಗೀಗ ತಂದೆಯಿಂದ ಆಸ್ತಿಯು
ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ಮನ್ಮನಾಭವ. ತಂದೆಯನ್ನು ನೆನಪು ಮಾಡಬೇಕಾಗಿದೆ. ಶಿವ
ಭಗವಾನುವಾಚ, ಕೃಷ್ಣನು ಜ್ಞಾನ ಸಾಗರನಲ್ಲ. ಭಗವಂತನ ಮಹಿಮೆ ಮತ್ತು ದೇವತೆಗಳ ಮಹಿಮೆಯಲ್ಲಿ ಬಹಳ
ಅಂತರವಿದೆ. ತಂದೆಯು ಯಾವ ಹೊಸ ರಚನೆಯನ್ನು ರಚಿಸುತ್ತಾರೆಯೋ ಅವರ ಮಹಿಮೆಯಾಗಿದೆ – ಸರ್ವ ಗುಣ
ಸಂಪನ್ನರು.... ನೀವೀಗ ಆ ರೀತಿ ಆಗುತ್ತಿದ್ದೀರಿ. ತಂದೆಯ ಮಹಿಮೆ ಮತ್ತು ದೇವತೆಗಳ ಮಹಿಮೆಯಲ್ಲಿ
ರಾತ್ರಿ-ಹಗಲಿನ ಅಂತರವಿದೆ. ಇದು ರಾಜಯೋಗವಲ್ಲವೆ. ಭಗವಂತನು ರಾಜಯೋಗವನ್ನು ಕಲಿಸುತ್ತಾರೆಂದು
ಗಾಯನವಿದೆ, ಅವರು ನಿರಾಕಾರನಾಗಿದ್ದಾರೆ ಅಂದಮೇಲೆ ನಿರಾಕಾರಿ ಪ್ರಪಂಚದಿಂದ ಸಾಕಾರಿ ಪ್ರಪಂಚದಲ್ಲಿ
ಬರಬೇಕಾಗುತ್ತದೆ. ಭಗವಂತನಿಗೆ ಇಷ್ಟೊಂದು ಮಹಿಮೆಯಿದೆ, ಅಂದಮೇಲೆ ಅವಶ್ಯವಾಗಿ ಬರಬೇಕಾಗಿದೆ. ಅವರದು
ದಿವ್ಯ ಅಲೌಕಿಕ ಜನ್ಮವಾಗಿದೆ, ಮತ್ತ್ಯಾರದೂ ದಿವ್ಯ ಜನ್ಮವೆಂದು ಗಾಯನವಾಗುವುದಿಲ್ಲ. ಇದೂ ಸಹ
ಮಕ್ಕಳಿಗೆ ತಿಳಿಸಲಾಗಿದೆ - ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆಯಿದ್ದಾರೆ.
ಇವರನ್ನೇ ಭಗವಂತನೆಂದು ಹೇಳಿ ನೆನಪು ಮಾಡುತ್ತಾರೆ ಮತ್ತು ಮೂರನೆಯವರು ಅಲೌಕಿಕ ತಂದೆಯಿದ್ದಾರೆ.
ಇವರು ಅದ್ಭುತ ತಂದೆಯಾಗಿದ್ದಾರೆ, ತಂದೆಯು ದತ್ತು ಮಾಡಿಕೊಳ್ಳುತ್ತಾರೆ ಅವರ ಮಧ್ಯದಲ್ಲಿ ಈ ಅಲೌಕಿಕ
ತಂದೆಯು ಬಂದು ಬಿಡುತ್ತಾರೆ. ಪ್ರಜಾಪಿತ ಬ್ರಹ್ಮನಿಗೆ ಎಷ್ಟೊಂದು ಮಂದಿ ಮಕ್ಕಳಿದ್ದಾರೆ, ಶಿವ
ತಂದೆಯು ಬಂದು ಬ್ರಹ್ಮಾರವರ ಮೂಲಕ ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ. ಎಷ್ಟೊಂದು
ಮಂದಿ ಬ್ರಹ್ಮಾಕುಮಾರ-ಕುಮಾರಿಯರಾಗುತ್ತೀರಿ! ಲೌಕಿಕ ತಂದೆಗೆ 8-10 ಮಂದಿ ಮಕ್ಕಳಿರಬಹುದು, ಶಿವ
ತಂದೆಯು ಪಾರಲೌಕಿಕ ತಂದೆಯಾಗಿದ್ದಾರೆ ಅವರಿಗೆ ಅನೇಕ ಮಕ್ಕಳಿದ್ದೀರಿ. ನಾವೆಲ್ಲರೂ
ಸಹೋದರರಾಗಿದ್ದೇವೆ ಎಂದು ಎಲ್ಲಾ ಆತ್ಮರೂ ಹೇಳುತ್ತಾರೆ. ಈ ಸಂಗಮದಲ್ಲಿ ಮತ್ತೆ ಅಲೌಕಿಕ ತಂದೆಯು
ಸಿಗುತ್ತಾರೆ. ಸತ್ಯಯುಗದಲ್ಲಿ ನಿಮಗೆ ಈ ಜ್ಞಾನವಿರುವುದಿಲ್ಲ. ಯಾವಾಗ ತಂದೆಯು ಬಂದು ಹೊಸ
ಸೃಷ್ಟಿಯನ್ನು ರಚಿಸುವರೋ ಆಗಲೇ ಪ್ರಜಾಪಿತ ಬ್ರಹ್ಮಾ ತಂದೆಯು ಸಿಗುತ್ತಾರೆ ಅಂದಮೇಲೆ ಇದು ಅಲೌಕಿಕ
ಜನ್ಮವಾಯಿತಲ್ಲವೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು
ಪಾರಲೌಕಿಕ ತಂದೆ ಮತ್ತು ಇವರು ಸಂಗಮಯುಗೀ ಅಲೌಕಿಕ ತಂದೆಯಾಗಿದ್ದಾರೆ. ಸತ್ಯಯುಗದಿಂದ ಹಿಡಿದು
ಲೌಕಿಕ ತಂದೆಯರು ಪ್ರತೀ ಜನ್ಮದಲ್ಲಿಯೂ ಸಿಗುತ್ತಾ ಬಂದಿದ್ದಾರೆ, ಪಾರಲೌಕಿಕ ತಂದೆಯನ್ನು ಅಲ್ಲಿ
ಯಾರೂ ನೆನಪು ಮಾಡುವುದಿಲ್ಲ. ಅಲ್ಲಿ ಒಬ್ಬರೇ ತಂದೆಯಿರುತ್ತಾರೆ. ಹೇ ಭಗವಂತ, ಹೇ ಪರಮಾತ್ಮ ಎಂದು
ಹೇಳಿ ನೆನಪು ಮಾಡುವುದಿಲ್ಲ. ಮತ್ತೆ ದ್ವಾಪರದಲ್ಲಿ ಯಾವಾಗ ಭಕ್ತಿ ಮಾರ್ಗವು ಪ್ರಾರಂಭವಾಗುವುದೋ ಆಗ
ಇಬ್ಬರು ತಂದೆಯರಾಗುತ್ತಾರೆ. ಈ ಸಂಗಮದಲ್ಲಿ ಮೂವರು ತಂದೆಯರಿದ್ದಾರೆ, ಪ್ರಜಾಪಿತ ಬ್ರಹ್ಮನೂ ಸಹ ಈಗ
ಸಿಗುತ್ತಾರೆ. ನೀವೀಗ ಅವರ ಮಕ್ಕಳಾಗುತ್ತೀರಿ, ಇವರು ಅಲೌಕಿಕ ತಂದೆಯೆಂದು ನಿಮಗೆ ತಿಳಿದಿದೆ. ಈಗ
ನೀವು ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಿ ಮತ್ತು ನೆನಪು ಮಾಡುತ್ತೀರಿ. ತಮ್ಮನ್ನು
ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ, ಸತ್ಯಯುಗದಲ್ಲಿ ನೆನಪು ಮಾಡುವ ಅವಶ್ಯಕತೆಯೇ
ಇರುವುದಿಲ್ಲ, ದುಃಖದಲ್ಲಿ ಎಲ್ಲರೂ ಪಾರಲೌಕಿಕ ತಂದೆಯ ಸ್ಮರಣೆ ಮಾಡುತ್ತಾರೆ, ಇದು ಬಹಳ ಸಹಜ
ಮಾತಾಗಿದೆ. ಸತ್ಯ-ತ್ರೇತಾಯುಗದಲ್ಲಿ ಒಬ್ಬ ತಂದೆಯಿರುತ್ತಾರೆ, ದ್ವಾಪರದಲ್ಲಿ ಇಬ್ಬರು
ತಂದೆಯರಿರುತ್ತಾರೆ. ಈ ಸಮಯದಲ್ಲಿ ನೀವು ಅಲೌಕಿಕ ತಂದೆಯ ಮಕ್ಕಳಾಗಿದ್ದೀರಿ, ಅವರ ಮೂಲಕ ನೀವು
ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ನೀವು ಮಕ್ಕಳೇ ಬ್ರಾಹ್ಮಣರಾಗುತ್ತೀರಿ ನಂತರ
ದೇವತೆಗಳಾಗುತ್ತೀರಿ. ನೀವೇ ವಿನಾಶವನ್ನೂ ಸಹ ನೋಡಬೇಕಾಗಿದೆ. ನೀವು ಈ ಕಣ್ಣುಗಳಿಂದಲೇ ನೋಡುತ್ತೀರಿ,
ಬಾಂಬುಗಳನ್ನು ಹಾಕುತ್ತಾರೆ, ಮನುಷ್ಯರಂತೂ ಸಾಯುತ್ತಾರಲ್ಲವೆ. ಜಪಾನಿನಲ್ಲಿ ಬಾಂಬನ್ನು ಹಾಕಿದಾಗ
ಮನುಷ್ಯರು ಹೇಗೆ ಸತ್ತರು ಎಂಬುದನ್ನು ನೋಡಿದಿರಲ್ಲವೆ. ಈಗ ಇಲ್ಲಿ ಯುದ್ಧಗಳಾಗುತ್ತಾ ಇರುತ್ತವೆ.
ನಾವಂತೂ ದುಃಖಿಗಳಾಗುತ್ತೇವೆಂದು ತಾವೇ ಹೇಳುತ್ತಾರೆ. 10-10 ವರ್ಷಗಳವರೆಗೂ ಯುದ್ಧಗಳು ನಡೆಯುತ್ತಲೇ
ಇರುತ್ತವೆ. ಬಾಂಬುಗಳಿಂದ ಸೆಕೆಂಡಿನಲ್ಲಿ ಎಲ್ಲವೂ ಸಮಾಪ್ತಿಯಾಗಿ ಬಿಡುವುದು. ಒಂದು ಕಿಡಿ ಬಿದ್ದರೂ
ಸಾಕು ನಗರವೇ ನಷ್ಟವಾಗಿ ಬಿಡುವುದು. ಅಂದಮೇಲೆ ಇವಂತೂ ಬಾಂಬುಗಳಾಗಿವೆ, ಬೆಂಕಿಯು ಬೀಳಲಿದೆ.
ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ತಂದೆಯು ಬಂದಿರುವುದೇ ಸ್ಥಾಪನೆ ಮತ್ತು ವಿನಾಶ ಮಾಡಿಸಲು ಅಂದಮೇಲೆ
ಅವಶ್ಯವಾಗಿ ಇದೆಲ್ಲವೂ ಆಗುವುದು. ಪುರುಷಾರ್ಥ ಮಾಡಲು ಈಗ ಸಮಯವಿದೆ, ಮಾಯೆಯು ಪದೇ-ಪದೇ ನಿಮ್ಮ
ಬುದ್ಧಿಯೋಗವನ್ನು ತುಂಡರಿಸುತ್ತದೆ, ಬಹುಷಃ ನೀವಿನ್ನೂ ಅಡೋಲ ಹಾಗೂ ಸ್ಥಿರವಾಗಿಲ್ಲ. ಬಾಬಾ, ಮಾಯೆಯ
ಬಿರುಗಾಳಿಗಳು ಬಹಳ ಬರುತ್ತವೆ, ಕೆಲವರಂತೂ ಇಡೀ ದಿನದಲ್ಲಿ ಒಂದು ಗಂಟೆ ಅಥವಾ ಅರ್ಧ ಗಂಟೆಯೂ ಸಹ
ನೆನಪು ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಕರ್ಮಯೋಗಿಗಳಾಗಿದ್ದೀರಿ, 8 ಗಂಟೆಗಳಂತೂ ಈ
ಸೇವೆ ಮಾಡುತ್ತೀರಿ. 8 ಗಂಟೆಗಳ ಸಮಯ ನೆನಪು ಮಾಡುವಷ್ಟು ಪುರುಷಾರ್ಥ ಮಾಡಬೇಕು. ನೆನಪು
ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತಾ ಹೋಗುತ್ತವೆ, ಇದಕ್ಕೇ ಯೋಗಾಗ್ನಿಯೆಂದು ಹೇಳಲಾಗುತ್ತದೆ.
ಇದು ಪರಿಶ್ರಮವಿದೆ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಕೇವಲ ನೆನಪು ಮಾಡಬೇಕಾಗಿದೆ. ಇದನ್ನೂ ತಂದೆಯು
ತಿಳಿಸುತ್ತಾರೆ - ಯಾರು ಗೃಹಸ್ಥವನ್ನು ಬಿಟ್ಟಿದ್ದಾರೆಯೋ, ಮಕ್ಕಳಾಗಿದ್ದಾರೆಯೋ ಅವರೂ ಸಹ ಇಷ್ಟೊಂದು
ನೆನಪು ಮಾಡುವುದಿಲ್ಲ. ಮನೆಯಲ್ಲಿರುವವರು ಇನ್ನೂ ಹೆಚ್ಚಿನದಾಗಿ ನೆನಪು ಮಾಡುತ್ತಾರೆ. ಅರ್ಜುನ
ಮತ್ತು ಏಕಲವ್ಯನ ಉದಾಹರಣೆ ಕೊಡುತ್ತಾರಲ್ಲವೆ. ತಂದೆಯನ್ನು ನೆನಪು ಮಾಡುವುದು ಪರಿಶ್ರಮವಿದೆ ಮತ್ತು
ಚಕ್ರವನ್ನು ತಿಳಿದುಕೊಳ್ಳಬೇಕಾಗಿದೆ. ಮಹಾಭಾರತ ಯುದ್ಧವೂ ಸಹ ಖಂಡಿತ ಆಗುವುದು. ಸತ್ಯಯುಗದಲ್ಲಿ
ಆಗುವುದೇ! ಈಗ ನೀವು ಮಕ್ಕಳು ಅಂಧರಿಗೆ ಊರುಗೋಲಾಗಬೇಕಾಗಿದೆ. ಎಲ್ಲರಿಗೆ ಮಾರ್ಗ ತಿಳಿಸಬೇಕಾಗಿದೆ-
ತಂದೆಯನ್ನು ನೆನಪು ಮಾಡಿ, ಚಕ್ರವನ್ನು ನೆನಪು ಮಾಡಿ, ಸ್ವದರ್ಶನ ಚಕ್ರಧಾರಿಗಳಾಗಿರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಕೊನೆಪಕ್ಷ 8
ಗಂಟೆಗಳ ಕಾಲ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಸ್ಥಿತಿಯನ್ನು ಅಚಲ,
ಅಡೋಲವಾಗಿಟ್ಟುಕೊಳ್ಳಲು ನೆನಪಿನ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಹುಡುಗಾಟಿಕೆ ಮಾಡಬಾರದು.
2. ಈ ನಾಟಕವು ಬಹಳ
ನಿಖರವಾಗಿ ಮಾಡಲ್ಪಟ್ಟಿದೆ, ಆದ್ದರಿಂದ ಯಾರ ಮೇಲೂ ಬೇಸರ ಪಡಬಾರದು. ನಿಶ್ಚಯ ಬುದ್ಧಿಯವರಾಗಬೇಕಾಗಿದೆ.
ವರದಾನ:
ಮುರಿಯುವುದು,
ತಿರುಗಿಸುವುದು ಮತ್ತು ಜೋಡಿಸುವುದು - ಈ ಮೂರು ಶಬ್ಧಗಳ ಸ್ಮೃತಿಯ ಮೂಲಕ ಸದಾ ವಿಜಯಿ ಭವ.
ಸಂಪೂರ್ಣ ವಿದ್ಯೆಯ ಮತ್ತು
ಶಿಕ್ಷಣದ ಸಾರವು ಈ ಮೂರು ಶಬ್ಧಗಳಲ್ಲಿದೆ - 1. ಕರ್ಮ ಬಂಧನವನ್ನು ಮುರಿಯುವುದು 2. ತನ್ನ
ಸಂಸ್ಕಾರ-ಸ್ವಭಾವವನ್ನು ಪರಿವರ್ತಿಸುವುದು ಮತ್ತು 3. ಒಬ್ಬ ತಂದೆಯೊಂದಿಗೆ ಸರ್ವ ಸಂಬಂಧವನ್ನು
ಜೋಡಿಸುವುದು - ಇದೇ ಮೂರು ಶಬ್ಧಗಳನ್ನು ಸಂಪೂರ್ಣ ವಿಜಯಿಗಳನ್ನಾಗಿ ಮಾಡಿ ಬಿಡುತ್ತದೆ. ಇದಕ್ಕಾಗಿ
ಸ್ಮೃತಿಯಲ್ಲಿ ಸದಾ ಇದೇ ಇರಲಿ- ಈ ನಯನಗಳಿಂದ ಯಾವುದೆಲ್ಲಾ ವಿನಾಶಿ ವಸ್ತುಗಳನ್ನು ನೋಡುತ್ತೇನೆ,
ಅವೆಲ್ಲವೂ ವಿನಾಶವಾಗಿ ಬಿಟ್ಟಿದೆ. ಅದನ್ನು ನೋಡುತ್ತಿದ್ದರೂ ತಮ್ಮ ಹೊಸ ಸಂಬಂಧ, ಹೊಸ ಸೃಷ್ಟಿಯನ್ನು
ನೋಡುತ್ತಾ ಇರುತ್ತೀರೆಂದರೆ, ಎಂದಿಗೂ ಸೋಲುಂಟಾಗಲು ಸಾಧ್ಯವಿಲ್ಲ.
ಸ್ಲೋಗನ್:
ಯೋಗಿಯ
ಗುರುತಾಗಿದೆ - ಸದಾ ಸ್ಪಷ್ಟ ಮತ್ತು ಶುದ್ಧವಾಗಿರುವುದು.
ಅವ್ಯಕ್ತ ಸೂಚನೆಗಳು:-
ಅಪವಿತ್ರತೆಯ ಬೀಜವನ್ನು ಸಮಾಪ್ತಿ ಮಾಡಿ ಸಂಪೂರ್ಣ ಸ್ವಚ್ಛ ( ಪವಿತ್ರ ) ಆಗಿರಿ.
ಒಂದುವೇಳೆ ಬ್ರಾಹ್ಮಣ
ಜೀವನದಲ್ಲಿ ಸಂಕಲ್ಪದಲ್ಲಿಯು ಅಪವಿತ್ರತೆ ಅಥವಾ ಅಮರ್ಯಾದೆ ಬಂದು ಬಿಡುತ್ತದೆ ಎಂದರೆ ಸಿಂಹಾಸನ
ಅಧಿಕಾರಿಯ ಬದಲಾಗಿ ಇಳಿಯುವ ಕಲೆಯಲ್ಲಿ ಅರ್ಥಾತ್ ಕೆಳಗೆ ಬಂದು ಬಿಡುವಿರಿ. ಯಾವುದೇ ವಿಕರ್ಮ
ಆಗಿಲ್ಲ ಆದರೆ ವ್ಯರ್ಥ ಕರ್ಮವು ಆಗುತ್ತದೆ ಆಗ ಪಶ್ಚಾತ್ತಾಪದ ಬದಲಾಗಿ ಅನುಭವದ ಸ್ಟೇಜ್ ಆಗಿ
ಬಿಡುವುದು. ಅನುಭವ ಆಗುವುದು ಇದು ತಪ್ಪಾಗಿದೆ, ಈ ರೀತಿ ಆಗಬಾರದು.. ಆ ಮಾತುಗಳು ಮುಳ್ಳಿನಂತೆ
ಚುಚ್ಚುತ್ತಾ ಇರುತ್ತದೆ, ಹಾಗಾಗಿ ವ್ಯರ್ಥದಿಂದ ಮುಕ್ತರಾಗಿ.