18.01.26    Avyakt Bapdada     Kannada Murli      Om Shanti     Madhuban


“ಬಾಪ್ದಾದಾರವರ ಅಮೂಲ್ಯ ಮಹಾವಾಕ್ಯ ಪಿತಾಶ್ರಿಜೀಯವರ ಪುಣ್ಯ ಸ್ಮೃತಿ ದಿನದ ಪ್ರಾತಃ ಕ್ಲಾಸ್ನಲ್ಲಿ ಓದಲು.”
“ಮಧುರ ಮಕ್ಕಳೇ, ಜ್ಞಾನ ರತ್ನಗಳಿಂದ ನಿಮ್ಮ ಜೋಳಿಯನ್ನು ತುಂಬಿಸಿಕೊಂಡು ದಾನವೂ ಮಾಡಬೇಕು. ಇತರರಿಗೆ ದಾರಿ ತೋರಿಸಿದಷ್ಟೂ ನಿಮಗೆ ಆಶೀರ್ವಾದಗಳು ಲಭಿಸುತ್ತವೆ.”


ಓಂ ಶಾಂತಿ. ಶಿವ ತಂದೆ ನಮಗೆ ಶಿಕ್ಷಣ ಕೊಡುತ್ತಾರೆ ಎಂದು ಮಧುರ ಮಕ್ಕಳು ಪಕ್ಕಾ ನೆನಪಿಡಬೇಕಾಗಿದೆ. ಶಿವ ತಂದೆ ಪತಿತ-ಪಾವನ, ಸದ್ಗತಿಯ ದಾತ. ಸದ್ಗತಿ ಅಂದರೆ ಸ್ವರ್ಗದ ರಾಜ್ಯ ಭಾಗ್ಯ. ಬಾಬಾ ಎಷ್ಟು ಮಧುರರಾಗಿದ್ದಾರೆ! ಎಷ್ಟು ಪ್ರೀತಿಯಿಂದ ಮಕ್ಕಳಿಗೆ ಕುಳಿತು ಶಿಕ್ಷಣ ಕೊಡುತ್ತಾರೆ. ತಂದೆಯು ದಾದಾರವರ ಮೂಲಕ ನಮಗೆ ಶಿಕ್ಷಣ ಕೊಡುತ್ತಾರೆ. ಬಾಬಾ ಎಷ್ಟು ಮಧುರ, ಎಷ್ಟು ಪ್ರಿಯ. ಯಾವ ತೊಂದರೆಯನ್ನೂ ಕೊಡುವುದಿಲ್ಲ. ಕೇವಲ ಹೇಳುತ್ತಾರೆ ನನನ್ನು ನೆನಪು ಮಾಡಿ, ಚಕ್ರವನ್ನು ನೆನಪು ಮಾಡಿ. ತಂದೆಯ ನೆನಪಿನಲ್ಲಿ ಹೃದಯ ಸಂಪೂರ್ಣ ಶಾಂತವಾಗಬೇಕು (ಶೀತಲವಾಗಬೇಕು). ಒಬ್ಬ ತಂದೆಯ ನೆನಪು ಮಾತ್ರ ಸತಾಯಿಸಬೇಕು, ಏಕೆಂದರೆ ತಂದೆಯಿಂದ ದೊರೆಯುವ ಆಸ್ತಿ ಬಹಳ ದೊಡ್ಡದು. ತಮನ್ನು ತಾವು ನೋಡಿಕೊಳ್ಳಬೇಕು - ನನಗೆ ತಂದೆಯೊಂದಿಗೆ ಎಷ್ಟು ಪ್ರೀತಿ ಇದೆ? ನಮ್ಮಲ್ಲಿ ದೈವೀ ಗುಣಗಳು ಎಷ್ಟು ಇದೆ? ನೀವು ಈಗ ಮುಳ್ಳಿನಿಂದ ಹೂವಾಗುತ್ತೀರಿ. ಯೋಗದಲ್ಲಿ ಇದ್ದಷ್ಟೂ ಮುಳ್ಳು ಹೂವಾಗುತ್ತದೆ, ಸತೋಪ್ರಧಾನವಾಗುತ್ತದೆ. ಹೂವಾದ ಮೇಲೆ ಇಲ್ಲಿ ಉಳಿಯಲು ಆಗುವುದಿಲ್ಲ. ಹೂಗಳ ತೋಟವೇ ಸ್ವರ್ಗ. ಯಾರು ಹೆಚ್ಚಿನ ಮುಳ್ಳುಗಳನ್ನು ಹೂವಾಗಿಸುತ್ತಾರೋ ಅವರಿಗೆ ನಿಜವಾದ ಸುಗಂಧಿತ ಹೂ ಎಂದು ಕರೆಯುತ್ತಾರೆ. ಅವರು ಯಾರಿಗೂ ಮುಳ್ಳಾಗುವುದಿಲ್ಲ. ಕ್ರೋಧ ದೊಡ್ಡ ಮುಳ್ಳಾಗಿದೆ, ಬಹಳಷ್ಟು ಜನರನ್ನು ಸತಾಯಿಸುತ್ತದೆ. ನೀವು ಮಕ್ಕಳು ಈಗ ಸಂಗಮ ಯುಗದಲ್ಲಿ ಮುಳ್ಳಿನ ಪ್ರಪಂಚದಿಂದ ಈ ತೀರಕ್ಕೆ ಬಂದು ಬಿಟ್ಟಿದ್ದೀರಿ. ಮಾಲಿ ಹೂಗಳನ್ನು ವಿಭಿನ್ನ ಪಾತ್ರೆಯಲ್ಲಿ ಇಡುವಂತೆ, ತಂದೆ ಈಗ ನಿಮ್ಮನ್ನೂ ಸಂಗಮ ಯುಗದ ಪಾತ್ರೆಯಲ್ಲಿ ಪ್ರತ್ಯೇಕವಾಗಿ ಇಟ್ಟಿದ್ದಾರೆ. ನಂತರ ನೀವು ಹೂಗಳಾಗಿ ಸ್ವರ್ಗಕ್ಕೆ ಹೋಗುತ್ತೀರಿ. ಕಲಿಯುಗದ ಮುಳ್ಳುಗಳು ಭಸ್ಮವಾಗುತ್ತವೆ.

ಮಧುರ ಮಕ್ಕಳು ತಿಳಿದುಕೊಂಡಿದ್ದಾರೆ ಪಾರಲೌಕಿಕ ತಂದೆಯಿಂದ ನಮಗೆ ಅವಿನಾಶಿ ಆಸ್ತಿ ಸಿಗುತ್ತದೆ. ಬಾಪ್ದಾದಾರೊಂದಿಗೆ ಸಂಪೂರ್ಣ ಪ್ರೀತಿ ಇರುವ ನಿಜವಾದ ಮಕ್ಕಳು ಬಹಳ ಖುಷಿಯಾಗಿರುತ್ತಾರೆ. ನಾವು ಜಗತ್ತಿನ ಮಾಲೀಕರಾಗುತ್ತೇವೆ. ಹೌದು, ಅದು ಪುರುಷಾರ್ಥದಿಂದ; ಹೇಳುವುದರಿಂದ ಮಾತ್ರವಲ್ಲ. ಅನನ್ಯ ಮಕ್ಕಳು ಸದಾ ನೆನಪಿಡುತ್ತಾರೆ ನಾವು ಪುನಃ ಸೂರ್ಯವಂಶಿ-ಚಂದ್ರವಂಶಿ ರಾಜಧಾನಿ ಸ್ಥಾಪಿಸುತ್ತಿದ್ದೇವೆ. ತಂದೆ ಹೇಳುತ್ತಾರೆ ಮಧುರ ಮಕ್ಕಳೇ, ನೀವು ಎಷ್ಟು ಜನರ ಕಲ್ಯಾಣ ಮಾಡುತ್ತೀರೋ ಅಷ್ಟೂ ನಿಮಗೆ ಪ್ರಾಪ್ತಿ ಸಿಗುತ್ತದೆ. ಅನೇಕರಿಗೆ ದಾರಿ ತೋರಿಸಿದರೆ ಅನೇಕರ ಆಶೀರ್ವಾದ ಸಿಗುತ್ತದೆ. ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಂಡು ನಂತರ ದಾನ ಮಾಡಬೇಕು. ಜ್ಞಾನ ಸಾಗರ (ತಂದೆ) ನಿಮಗೆ ರತ್ನಗಳ ತಟ್ಟೆಗಳನ್ನು ತುಂಬಿ ಕೊಡುತ್ತಾರೆ. ಆ ರತ್ನಗಳನ್ನು ಯಾರು ದಾನ ಮಾಡುತ್ತಾರೋ ಅವರು ಎಲ್ಲರಿಗೂ ಪ್ರಿಯವಾಗುತ್ತಾರೆ. ಮಕ್ಕಳ ಹೃದಯದಲ್ಲಿ ಎಷ್ಟು ಖುಷಿ ಇರಬೇಕು. ಬುದ್ದಿವಂತ ಮಕ್ಕಳು ಹೇಳುತ್ತಾರೆ ನಾವು ತಂದೆಯಿಂದ ಸಂಪೂರ್ಣ ಆಸ್ತಿ ಪಡೆಯುತ್ತೇವೆ. ತಕ್ಷಣ ಸಿದ್ಧರಾಗುತ್ತೇವೆ. ತಂದೆಯ ಮೇಲೆ ಅಪಾರ ಪ್ರೀತಿ ಇರುತ್ತದೆ, ಏಕೆಂದರೆ ಅವರು ಪ್ರಾಣ ದಾತ. ಜ್ಞಾನದ ವರದಾನದಿಂದ ನಾವು ಏನಿಂದ ಏನಾಗುತ್ತೇವೆ. ನಿರ್ಧನರಿಂದ ಧನವಂತರಾಗುತ್ತೇವೆ. ತಂದೆಯು ನಮ್ಮನ್ನು ಖಜಾನೆಯಿಂದ ಭರಪೂರ ಮಾಡುತ್ತಾರೆ. ತಂದೆಯ ನೆನಪು ಮಾಡಿದಷ್ಟೂ ಪ್ರೀತಿ ಹೆಚ್ಚಾಗುತ್ತದೆ, ಸೆಳೆತ ಹೆಚ್ಚಾಗುತ್ತದೆ. ಸೂಜಿ ಶುದ್ಧವಾಗಿದ್ದರೆ ಅಯಸ್ಕಾಂತದ ಕಡೆಗೆ ಸೆಳೆಯಲ್ಪಡುತ್ತದೆಯಲ್ಲವೇ. ತಂದೆಯ ನೆನಪಿನಿಂದ ಬಂಧನಗಳು ಕಡಿದು ಹೋಗುತ್ತವೆ. ಒಬ್ಬ ತಂದೆಯ ಹೊರತು ಬೇರೆ ಯಾರು ನೆನಪಿಗೆ ಬರಬಾರದು.

ತಂದೆ ತಿಳಿಸುತ್ತಾರೆ ಮಧುರ ಮಕ್ಕಳೇ, ಈಗ ತಪ್ಪು ಮಾಡಬೇಡಿ. ಸ್ವದರ್ಶನ ಚಕ್ರಧಾರಿ ಆಗಿ, ಲೈಟ್ಹೌಸ್ ಆಗಿ. ಸ್ವದರ್ಶನ ಚಕ್ರಧಾರಿ ಆಗುವ ಅಭ್ಯಾಸ ಚೆನ್ನಾಗಾದರೆ ನೀವೇ ಜ್ಞಾನ ಸಾಗರರಂತೆ ಆಗುತ್ತೀರಿ. ವಿದ್ಯಾರ್ಥಿಗಳು ಓದಿ ಶಿಕ್ಷಕರಾಗುವಂತೆ. ನಿಮ್ಮ ಕೆಲಸವೇ ಇದು. ಎಲ್ಲರನ್ನು ಸ್ವದರ್ಶನ ಚಕ್ರಧಾರಿಯನ್ನಾಗಿ ಮಾಡಿ ಆಗ ನೀವು ಚಕ್ರವರ್ತಿ ರಾಜ-ರಾಣಿ ಆಗುತ್ತೀರಿ. ಅದಕ್ಕಾಗಿ ತಂದೆಯು ಸದಾ ಕೇಳುತ್ತಾರೆ “ಸ್ವದರ್ಶನ ಚಕ್ರಧಾರಿಗಳಾಗಿ ಕುಳಿತಿದ್ದೀರಾ?” ತಂದೆಯೇ ಸ್ವದರ್ಶನ ಚಕ್ರಧಾರಿ. ತಂದೆ ಬಂದಿದ್ದಾರೆ ಮಧುರ ಮಕ್ಕಳನ್ನು ವಾಪಸ್ ಕರೆದುಕೊಂಡು ಹೋಗಲು. ಮಕ್ಕಳಿಲ್ಲದೆ ನಮಗೂ ನೆಮ್ಮದಿ ಇರುವುದಿಲ್ಲ. ಸಮಯ ಬಂದಾಗ ಸಂಕಲ್ಪ ಬರುತ್ತದೆ “ಇನ್ನು ಹೋಗಬೇಕು.” ಮಕ್ಕಳು ಬಹಳ ಕರೆಯುತ್ತಾರೆ, ಬಹಳ ದುಃಖದಲ್ಲಿದ್ದಾರೆ, ದಯೆ ಬರುತ್ತದೆ. ಈಗ ನೀವು ಮಕ್ಕಳೇ ಮನೆಗೆ ಹೋಗಬೇಕು. ನಂತರ ಅಲ್ಲಿ ನೀವು ತಮ್ಮ ಸ್ಥಿತಿ ಪ್ರಕಾರ ಸುಖಧಾಮಕ್ಕೆ ಹೋಗುತ್ತೀರಿ. ಅಲ್ಲಿ ನಾನು ನಿಮ್ಮ ಸಂಗಾತಿಯಾಗಿರುವುದಿಲ್ಲ. ಅಲ್ಲಿ ನಿಮ್ಮ ಸ್ಥಿತಿಯನುಸಾರ ಆತ್ಮವು ತೆರಳುತ್ತದೆ.

ನೀವು ಮಕ್ಕಳು ತಂದೆಯ ನೆನಪಿನಲ್ಲಿ ಇದ್ದಷ್ಟೂ ಇತರರಿಗೆ ಶಿಕ್ಷಣ ಕೊಡುವ ಪ್ರಭಾವವಾಗುತ್ತದೆ. ಹೆಚ್ಚು ಮಾತನಾಡುವ ಅಗತ್ಯವಿಲ್ಲ. ಆತ್ಮ-ಅಭಿಮಾನಿಯಾದರೆ ಸ್ವಲ್ಪ ಹೇಳಿದರೂ ಸಹ ಬಾಣವು ನಾಟುತ್ತದೆ. ತಂದೆ ಹೇಳುತ್ತಾರೆ “ಮಕ್ಕಳೇ, ಕಳೆದದ್ದು ಕಳೆದು ಹೋಯಿತು ಮೊದಲು ನಿಮ್ಮನ್ನು ಸುಧಾರಿಸಿಕೊಳ್ಳಿ.” ನೀವು ಸ್ವತಃ ನೆನಪು ಮಾಡದೇ ಇತರರಿಗೆ ಹೇಳುತ್ತಾ ಇದ್ದರೆ ಅದು ತಲುಪುವುದಿಲ್ಲ. ಮನಸ್ಸು ತಿನ್ನುತಿರುತ್ತದೆ. ತಂದೆಯ ಮೇಲೆ ಸಂಪೂರ್ಣ ಪ್ರೀತಿ ಇಲ್ಲದಿದ್ದರೆ ಶ್ರೀಮತದಂತೆ ನಡೆಯಲಾಗುವುದಿಲ್ಲ. ತಂದೆಯಂತಹ ಶಿಕ್ಷಣ ಯಾರೂ ಕೊಡಲಾರರು. ತಂದೆ ಹೇಳುತ್ತಾರೆ ಮಧುರ ಮಕ್ಕಳೇ, ಈ ಹಳೆಯ ಪ್ರಪಂಚವನ್ನು ಈಗ ಮರೆತು ಬಿಡಿ. ಅಂತ್ಯದ ಸಮಯದಲ್ಲಿ ಹೇಗಾದರೂ ಸರಿ ಮರೆಯಲೇಬೇಕು. ಬುದ್ಧಿಯು ಶಾಂತಿಧಾಮ-ಸುಖಧಾಮಗಳ ಕಡೆಗೆ ಹೋಗಬೇಕು. ತಂದೆಯನ್ನು ನೆನಪು ಮಾಡುತ್ತಾ ಮಾಡುತ್ತಾ ತಂದೆಯ ಬಳಿಗೆ ಹೋಗಬೇಕು. ಪತಿತ ಆತ್ಮಗಳು ಸಹ ತಿಳಿಯಲಿ ಅದು ಪಾವನ ಆತ್ಮಗಳ ಮನೆಯಾಗಿದೆ. ಶರೀರವು ಪಂಚ ತತ್ವಗಳಿಂದ ನಿರ್ಮಾಣವಾಗಿರುವುದು. ಆದ್ದರಿಂದ ಆ ಪಂಚ ತತ್ವಗಳು ಇಲ್ಲಿ ಇರಲು ಆತ್ಮವನ್ನು ಸೆಳೆಯುತ್ತವೆ, ಯಾಕೆಂದರೆ ಆತ್ಮವು ಇದನ್ನು ಆಸ್ತ್ತಿ ಎಂದು ತಿಳಿಯುತ್ತದೆ. ಅದಕ್ಕಾಗಿ ಶರೀರದ ಮೇಲೆ ಮಮತ್ವ ಉಂಟಾಗಿದೆ. ಈಗ ಈ ಮಮತ್ವವನ್ನು ತೆಗೆದು ನಮ್ಮ ಮನೆಗೆ ಹೋಗಬೇಕು. ಅಲ್ಲಿ ಈ ಪಂಚ ತತ್ವಗಳೇ ಇಲ್ಲ. ಸತ್ಯಯುಗದಲ್ಲಿ ಸಹ ಶರೀರವು ಯೋಗಬಲದಿಂದ ನಿರ್ಮಾಣವಾಗುತ್ತದೆ. ಸತೋಪ್ರಧಾನ ಪ್ರಕೃತಿ ಇರುವುದರಿಂದ ಅಲ್ಲಿ ಯಾವುದೇ ಸೆಳೆತವಿಲ್ಲ, ದುಃಖವಿಲ್ಲ. ಇವು ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾದ ಮಾತುಗಳು. ಇಲ್ಲಿನ 5 ತತ್ವಗಳ ಬಲ ಆತ್ಮವನ್ನು ಸೆಳೆಯುತ್ತದೆ, ಆದ್ದರಿಂದ ಶರೀರವನ್ನು ಬಿಟ್ಟು ಹೋಗಲು ಮನಸ್ಸಿಲ್ಲದಂತೆ ಆಗುತ್ತದೆ. ಆದರೆ ಇದರಲ್ಲಿ ನಿಜವಾಗಿ ಇನ್ನೂ ಹೆಚ್ಚು ಖುಷಿಯಾಗಿರಬೇಕು. ಪಾವನರಾದ ನಂತರ ಶರೀರವನ್ನು ಬೆಣ್ಣೆ ಇಂದ ಕೂದಲನ್ನು ತೆಗೆದುಕೊಳ್ಳುವಂತೆ ಸುಲಭವಾಗಿ ಬಿಟ್ಟು ಹೋಗುವಿರಿ. ಆದ್ದರಿಂದ ಶರೀರದಿಂದ ಮತ್ತು ಎಲ್ಲಾ ವಸ್ತುಗಳಿಂದ ಮಮತ್ವವನ್ನು ಸಂಪೂರ್ಣವಾಗಿ ತೆಗೆಯಬೇಕು. ಇದರಲ್ಲಿ (ಶರೀರ) ನಮಗೆ ಯಾವುದೇ ಸಂಪರ್ಕವಿಲ್ಲ. ನಾವು ಕೇವಲ ಬಾಬಾರ ಬಳಿಗೆ ಹೋಗುತ್ತಿದ್ದೇವೆ. ಈ ಪ್ರಪಂಚದಿಂದ ನಮ್ಮ ಬ್ಯಾಗ್-ಬ್ಯಾಗೇಜನ್ನು ಮುಂಚಿತವಾಗಿಯೇ ಕಳುಹಿಸಿಕೊಂಡಿದ್ದೇವೆ. ಜೊತೆಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಇತರ ಆತ್ಮಗಳೂ ಕೂಡ ಹೋಗಬೇಕಿದೆ. ಶರೀರವನ್ನೂ ಇಲ್ಲಿ ಬಿಡಲೇಬೇಕಾಗಿದೆ. ಬಾಬಾ ಹೊಸ ಶರೀರದ ಸಾಕ್ಷಾತ್ಕಾರವನ್ನು ಈಗಾಗಲೇ ಮಾಡಿಸಿದ್ದಾರೆ. ವಜ್ರ ವೈಡೂರ್ಯಗಳಿಂದ ನಿರ್ಮಿತ ಮಹಲುಗಳು ದೊರೆಯುತ್ತವೆ. ಅಂತಹ ಸುಖಧಾಮಕ್ಕೆ ಹೋಗಲು ಎಷ್ಟು ಪರಿಶ್ರಮ ಮಾಡಬೇಕಾಗಿದೆ. ದಣಿಯಬಾರದು. ಹಗಲು ರಾತ್ರಿ ಬಹಳ ಸಂಪಾದನೆ ಮಾಡಲೇಬೇಕಾಗಿದೆ. ಆದ್ದರಿಂದ ಬಾಬಾ ಹೇಳಿದ್ದಾರೆ ನಿದ್ದೆಯನ್ನು ಗೆಲ್ಲುವ ಮಕ್ಕಳೇ, “ಮಾಮೇಕಂ” ಕೇವಲ ನನ್ನನ್ನೇ ನೆನಪಿಸಿಕೊಳ್ಳಿರಿ ಮತ್ತು ವಿಚಾರ ಸಾಗರ ಮಂಥನ ಮಾಡಿ. ಡ್ರಾಮಾದ ಸತ್ಯ ರಹಸ್ಯವನ್ನು ಬುದ್ಧಿಯಲ್ಲಿ ಇಟ್ಟುಕೊಂಡರೆ ಬುದ್ಧಿ ಸಂಪೂರ್ಣ ಶಾಂತ ಶೀತಲವಾಗುತ್ತದೆ. ಮಹಾರಥಿ ಮಕ್ಕಳು ಎಂದೂ ಅಲುಗಾಡುವುದಿಲ್ಲ. ಶಿವ ಬಾಬಾರನ್ನು ನೆನಪು ಮಾಡುತ್ತಿದ್ದರೆ ಅವರೇ ಸಾಂಭಾಲನೆಯನ್ನು ಸಹ ಮಾಡುತ್ತಾರೆ.

ತಂದೆ ನೀವು ಮಕ್ಕಳನ್ನು ದುಃಖದಿಂದ ಬಿಡಿಸಿ ಶಾಂತಿಯ ದಾನವನ್ನು ಕೊಡುತ್ತಾರೆ. ನೀವು ಸಹ ಶಾಂತಿಯ ದಾನವನ್ನು ಕೊಡಬೇಕು. ನಿಮ್ಮ ಈ ಅಪಾರ ಶಾಂತಿ, ಯೋಗಬಲ, ಇತರರನ್ನೂ ಕೂಡ ಒಂದೇ ಕ್ಷಣದಲ್ಲಿ ಸಂಪೂರ್ಣ ಶಾಂತಗೊಳಿಸುತ್ತದೆ. ನೀವು ಬಾಬಾರವರ ನೆನಪಲ್ಲಿ ಇದ್ದು ನಂತರ ನೋಡಿ ಈ ಆತ್ಮ ನಮ್ಮ ಕುಲಕ್ಕೆ ಸೇರಿದವರಾಗಿದ್ದಾರೆಯೋ ಅಥವಾ ಇಲ್ಲವೋ! ಒಂದುವೇಳೆ ಆಗಿದ್ದರೆ ಅವರು ಒಂದೇ ಕ್ಷಣದಲ್ಲಿ ಶಾಂತವಾಗಿ ಬಿಡುತ್ತಾರೆ. ಈ ಕುಲದ ಆತ್ಮಗಳು ಮಾತ್ರವೇ ಈ ಮಾತುಗಳಲ್ಲಿ ಆಸಕ್ತಿ ಪಡೆಯುತ್ತಾರೆ. ಮಕ್ಕಳು ಬಾಬಾರವರನ್ನು ನೆನಪು ಮಾಡುತ್ತಿದ್ದರೆ ತಂದೆಯೂ ಕೂಡ ಪ್ರೀತಿ ಮಾಡುತ್ತಾರೆ. ಆತ್ಮಕ್ಕೆ ಪ್ರೀತಿ ಮಾಡಲಾಗುತ್ತದೆ. ಯಾರು ಹೆಚ್ಚು ಭಕ್ತಿ ಮಾಡಿದ್ದಾರೋ ಅವರೇ ಹೆಚ್ಚು ಅಧ್ಯಯನ ಮಾಡುತ್ತಾರೆ. ಅವರ ಮುಖದಿಂದಲೇ ತಿಳಿದು ಬಿಡುತ್ತದೆ ತಂದೆಯ ಮೇಲೆ ಎಷ್ಟು ಪ್ರೀತಿ ಇದೆ ಎಂದು. ಆತ್ಮವು ತಂದೆಯನ್ನು ನೋಡುತ್ತದೆ. ತಂದೆ ನಮ್ಮಂತಹ ಚಿಕ್ಕ “ಬಿಂದು ರೂಪ” ಆತ್ಮಗಳಿಗೆ ಶಿಕ್ಷಣ ನೀಡುತಿದ್ದಾರೆ. ನಾವು ಸಹೋದರ-ಸಹೋದರಿಯರಿಗೆ ಶಿಕ್ಷಣ ನೀಡುತಿದ್ದೇವೆ ಎಂದು ಮುಂದೆ ಹೋದಂತೆ ನಿಮ್ಮದು ಇಂತಹ ಸ್ಥಿತಿ ಆಗಿ ಬಿಡುತ್ತದೆ. ರೂಪವು ಸಹೋದರಿಯದ್ದಾಗಿದ್ದರೂ ದೃಷ್ಟಿ ಆತ್ಮದ ಕಡೆಗೆ ಹೋಗುತ್ತದೆ. ಶರೀರದ ಮೇಲೆ ದೃಷ್ಟಿ ಹೋಗಬಾರದು ಇದರಲ್ಲಿ ತುಂಬಾ ಪರಿಶ್ರಮ ಪಡಬೇಕಾಗುತ್ತದೆ. ಇದು ನಿಜಕ್ಕೂ ಸೂಕ್ಷ್ಮ ವಿಷಯ. ಇದು ಅತ್ಯಂತ ಶ್ರೇಷ್ಠ ವಿದ್ಯೆಯಾಗಿದೆ. ತೂಕ ಮಾಡಿ ನೋಡಿದರೆ ಈ ವಿದ್ಯೆ ಬಹಳ ಬೆಲೆಯುಳ್ಳದ್ದಾಗಿದೆ. ಒಳ್ಳೆಯದು! ಈ ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಿಗೆ ಮಾತಪಿತಾ ಬಾಪ್ದಾದಾರವರಿಂದ ನೆನಪು, ಪ್ರೀತಿ ಮತ್ತು ಗುಡ್ ಮಾರ್ನಿಂಗ್. ಆತ್ಮಿಕ ತಂದೆಯಿಂದ ಆತ್ಮಿಕ ಮಕ್ಕಳಿಗೆ ನಮಸ್ತೆ.

ಅವ್ಯಕ್ತ ಮಹಾವಾಕ್ಯ:

ಮಹಾವೀರ ಮಕ್ಕಳ ಸಂಘಟನೆಯ ವಿಶೇಷತೆ - ಏಕರಸ ಸ್ಥಿತಿ - 9-12-75

ಮಹಾವೀರರು ಎಂದರೆ ವಿಶೇಷ ಆತ್ಮ. ಇಂತಹ ಮಹಾವೀರರು, ವಿಶೇಷ ಆತ್ಮಗಳ ಸಂಘಟನೆಯ ವಿಶೇಷತೆ ಈಗಿನ ಸಮಯದಲ್ಲಿ ಏನೆಂದರೆ ಒಂದೇ ಸಮಯದಲ್ಲಿ ಎಲ್ಲರ ಏಕರಸ ಸ್ಥಿತಿ ಇರಬೇಕು. ಯಾವ ಸ್ಥಿತಿಯಲ್ಲಿ ಎಷ್ಟು ಸಮಯ ನಿಲ್ಲಬೇಕೆಂದು ಬಯಸುತ್ತಾರೋ, ಅಷ್ಟೇ ಸಮಯ ಆ ಸ್ಥಿತಿಯಲ್ಲಿ ಸಂಘಟಿತವಾಗಿ ನಿಲ್ಲುವಂತೆ ಆಗಬೇಕು. ಸಂಘಟಿತ ರೂಪದಲ್ಲಿ ಎಲ್ಲರ ಸಂಕಲ್ಪ ಎಂಬ ಬೆರಳು ಒಂದಾಗಬೇಕು. ಸಂಘಟನೆಯ ಈ ಅಭ್ಯಾಸ ಇಲ್ಲದಿರುವ ತನಕ ಸಿದ್ಧಿ ಸಾಧ್ಯವಿಲ್ಲ. ಸಂಘಟನೆಯಲ್ಲಿ ಈಗ ಆಜ್ಞೆಯಾದರೆ “ಐದು ನಿಮಿಷಗಳ ತನಕ ವ್ಯರ್ಥ ಸಂಕಲ್ಪಗಳನ್ನು ಸಂಪೂರ್ಣವಾಗಿ ನಿಲ್ಲಿಸಿ, ಬೀಜರೂಪ ಪವರ್ಫುಲ್ ಸ್ಥಿತಿಯಲ್ಲಿ ಏಕರಸವಾಗಿ ಕೂತುಕೊಳ್ಳಿ”. ಹೀಗಾಗಲು ಅಭ್ಯಾಸ ಇದೆಯಾ? ಯಾರೋ ಒಬ್ಬರು ಮನನದಲ್ಲಿ, ಇನ್ನೊಬ್ಬರು ಆತ್ಮಿಕ ವರ್ತಾಲಾಪದಲ್ಲಿ, ಮತ್ತೊಬ್ಬರು ಅವ್ಯಕ್ತ ಸ್ಥಿತಿಯಲ್ಲಿ ಇದ್ದರೆ ಅದು ಆಜ್ಞೆ ಅನುಸರಿಸಿದಂತೆ ಆಗುವುದಿಲ್ಲ. ಆಜ್ಞೆಯು ಬೀಜರೂಪವಾಗಬೇಕೆಂದು ಇದೆ, ಆದರೆ ಮಾಡುತ್ತಿರುವುದು ಆತ್ಮಿಕ ವರ್ತಾಲಾಪ ಹೀಗಾದರೆ ಆಜ್ಞೆ ಪಾಲನೆಯಾಗುವುದಿಲ್ಲ. ವ್ಯರ್ಥ ಸಂಕಲ್ಪಗಳ ಅಂತ್ಯ ಮಾಡಿದಾಗ ಇದು ಆಗುವುದು. ಏಕೆಂದರೆ ಎಲ್ಲಾ ಚಿಂತನೆಗಳ ಕಾರಣ ವ್ಯರ್ಥ ಸಂಕಲ್ಪಗಳೇ. ಈ ವ್ಯರ್ಥ ಸಂಕಲ್ಪಗಳನ್ನು ಮುಗಿಸಲು ಮತ್ತು ಸಂಘಟನೆಯನ್ನು ಶಕ್ತಿಶಾಲಿ ಏಕಮತವಾಗಿ ಮಾಡಲು ಯಾವ ಶಕ್ತಿ ಬೇಕು?

ಒಂದು ನಂಬಿಕೆ ಎರಡನೇದು ಸಮಾವೇಶಿಸಿಕೊಳ್ಳುವ ಶಕ್ತಿ. ಸಂಘಟನೆಯನ್ನು ಜೋಡಿಸುವ ದಾರವೇ ನಂಬಿಕೆ. ಯಾರು ಏನನ್ನಾದರೂ ಮಾಡಿದರು ತಪ್ಪಾದರೂ ಅದರ ಹಿಂದೆ ಅವರ ಸಂಸ್ಕಾರ, ಕಾಲ, ಪರಿಸ್ಥಿತಿಯ ಯಾವುದೋ ಅಂತರಂಗ ಭಾವನಾರ್ಥ ಇರುವುದು. ಸೇವೆ ಇರುವ ಜಾಗದಲ್ಲಿ ಅವರ ಸಂಸ್ಕಾರಗಳನ್ನೂ ಕರುಣೆ ದೃಷ್ಟಿಯಿಂದ ನೋಡಿ, ಅಲ್ಲಿ ಕೂಡ ಕಲ್ಯಾಣ ಇದೆ ಎಂಬ ದೃಷ್ಟಿ ಇರಬೇಕು. ಒಬ್ಬರ ತಪ್ಪನ್ನು ಮತ್ತೊಬ್ಬರು ವ್ಯರ್ಥವಾಗಿ ಹರಡಬಾರದು. ಯಾರಾದರೂ ತಮ್ಮ ತಪ್ಪನ್ನು ಅರಿಯುತ್ತಾರೆ, ಆದರೆ ಅದನ್ನು ಹರಡಲು ಬಯಸುವುದಿಲ್ಲ ಅದೇ ರೀತಿ ಇತರರ ತಪ್ಪನ್ನೂ ಹರಡಬಾರದು. ವ್ಯರ್ಥ ಸಂಕಲ್ಪಗಳನ್ನು ಓಡಿಸಬಾರದು ಅವುಗಳನ್ನು ಸಮಾಧಾನಗೊಳಿಸಬೇಕು. ಇದರಲ್ಲಿ ಇನ್ನೊಬ್ಬರ ನಂಬಿಕೆ ಬೇಕು. ಪ್ರೀತಿಯ ಶಕ್ತಿ ಸಮಸ್ಯೆಗಳನ್ನು ಕರಗಿಸುತ್ತದೆ. ಪ್ರಪಂಚದಲ್ಲಿ ಮನೆಯ ವಿಷಯ ಹೊರಗೆ ಹೇಳುವುದಿಲ್ಲ ಹೇಳಿದರೆ ಮನೆಗೇ ಹಾನಿ. ಹಾಗೆಯೇ ಸಂಘಟನೆಯಲ್ಲಿ ಯಾರಾದರೂ ಏನಾದರೂ ಮಾಡಿದರು ಅದರಲ್ಲೂ ಯಾವುದೋ ರಹಸ್ಯ, ಕಲ್ಯಾಣ ಅರ್ಥ ಇರುತ್ತದೆ. ಈ ಎರಡು ಪ್ರಕಾರದ ನಂಬಿಕೆ ಇಟ್ಟುಕೊಂಡು ಒಬ್ಬರಿನ್ನೊಬ್ಬರ ಸಂಪರ್ಕದಲ್ಲಿ ನಡೆಯುವುದರಿಂದ ಸಂಘಟನೆಯ ಸಫಲತೆಯಾಗುವುದು. ಇದರಲ್ಲಿ ಸಮಾವೇಶಿಸುವ ಶಕ್ತಿ ಬಹಳ ಅವಶ್ಯಕ. ವ್ಯರ್ಥ ಸಂಕಲ್ಪಗಳನ್ನು ಸಮಾವೇಶಿಸಿಕೊಳ್ಳಬೇಕು. ಹಿಂದಿನ ಸಂಸ್ಕಾರಗಳನ್ನು ಎಂದೂ ವರ್ತಮಾನ ಸಮಯದೊಂದಿಗೆ ಹೊಲಿಸಬಾರದು ಮಾಡಬಾರದು. ಹಳೆಯ ವಿಷಯಗಳನ್ನು ಇಂದಿಗೆ ತಂದುಕೊಂಡಾಗಲೆ ಸಂಕಲ್ಪಗಳ ಕ್ಯೂ ಉದ್ದವಾಗುತ್ತದೆ. ಈ ವ್ಯರ್ಥ ಸಂಕಲ್ಪಗಳ ಸಾಲು ಇರುವ ತನಕ ಸಂಘಟಿತ ರೂಪದ ಏಕರಸ ಸ್ಥಿತಿ ಸಾಧ್ಯವಿಲ್ಲ.

ಅನ್ಯರ ತಪ್ಪನ್ನೂ ತನ್ನ ತಪ್ಪೆಂದು ಅರ್ಥ ಮಾಡಿಕೊಳ್ಳುವುದೇ ಸಂಘಟನೆಯನ್ನು ಬಲ ಪಡಿಸುವುದು. ಇದಕ್ಕಾಗಿ ಪರಸ್ಪರ ನಂಬಿಕೆ ಬೇಕು, ಪರಿವರ್ತನೆಗೆ ನಂಬಿಕೆ, ಕಲ್ಯಾಣಕ್ಕೆ ನಂಬಿಕೆ. ಇದರಲ್ಲಿ ಸಮಾವೇಶಿಸಿಕೊಳ್ಳುವ ಶಕ್ತಿ ಅವಶ್ಯಕವಾಗಿಬೇಕು. ನೋಡಿದನ್ನು ಮತ್ತು ಕೇಳಿದದ್ದನ್ನೂ ಸಂಪೂರ್ಣ ಸಮಾವೇಶಿಸಿ, ಅದೇ ಆತ್ಮಿಕ ದೃಷ್ಟಿಯಿಂದ, ಕಲ್ಯಾಣ ಭಾವದಿಂದ ನೋಡುವುದು. ಅಜ್ಞಾನಿಗಳಿಗೆ ಹೇಳುವಂತೆ ಅಪಕಾರಿಗಳಿಗೆ ಉಪಕಾರ ಮಾಡಬೇಕು. ಸಂಘಟನೆಯಲ್ಲಿ ಕೂಡ ಒಬ್ಬರಿನ್ನೊಬ್ಬರ ಪ್ರತಿ ದಯೆಯ ಭಾವನೆಯಿರಬೇಕು. ಈಗ ದಯೆಯ ಭಾವನೆ ಕಡಿಮೆಯಾಗಿದೆ, ಏಕೆಂದರೆ ಆತ್ಮಿಕ ಸ್ಥಿತಿಯ ಅಭ್ಯಾಸ ಕಡಿಮೆಯಾಗಿದೆ.

ಇಂತಹ ಪವರ್ಫುಲ್ ಸಂಘಟನೆಯಿಂದಲೇ ಸಿದ್ಧಿ ಬರುತ್ತದೆ. ಈಗ ನೀವು ಸಿದ್ಧಿಯನ್ನು ಆಮಂತ್ರಿಸುತ್ತಿದ್ದೀರಿ ಆದರೆ ಮುಂದೆ ಸಿದ್ಧಿಯೇ ನಿಮ್ಮ ಮುಂದೆ ತಲೆ ಬಾಗುತ್ತದೆ. ಹೇಗೆ ಸತ್ಯಯುಗದಲ್ಲಿ ಪ್ರಕೃತಿ ದಾಸಿಯಾಗಿ ಕೆಲಸ ಮಾಡುತ್ತದೋ, ಹಾಗೆಯೇ ಸಿದ್ಧಿಯೂ ನಿಮ್ಮ ಮುಂದೆ ಶರಣಾಗುತ್ತದೆ. ಜ್ಞಾನ ಶ್ರೇಷ್ಠವಾದಾಗ, ಸ್ಟೇಜ್ ಪವರ್ಫುಲ್ ಆಗಿದ್ದರೆ ಸಿದ್ಧಿ ದೊಡ್ಡ ವಿಷಯವಲ್ಲ. ಎಂದೆಂದಿಗೂ ಏಕರಸ ಸ್ಥಿತಿಯಲ್ಲಿರುವವರಿಗೆ ಸಿದ್ಧಿ ಲಭಿಸದೇ ಇರಲು ಸಾಧ್ಯವಿಲ್ಲ. ಆದರೆ ಇದಕ್ಕಾಗಿ ಸಂಘಟನೆಯ ಶಕ್ತಿ ಬೇಕು. ಒಬ್ಬರು ಮಾತನಾಡಿದರೆ, ಇನ್ನೊಬ್ಬರು ಸ್ವೀಕಾರ ಮಾಡಬೇಕು. ಎದುರಿಸುವ ಶಕ್ತಿ ಬ್ರಾಹ್ಮಣ ಕುಟುಂಬದ ಮುಂದೆ ಬಳಸಬಾರದು. ಅದು ಮಾಯೆಯ ಮುಂದೆ ಬಳಸಬೇಕಾಗಿದೆ. ಕುಟುಂಬದ ಮುಂದೆ ಎದುರಿಸುವ ಶಕ್ತಿ ಉಪಯೋಗಿಸಿದರೆ ಸಂಘಟನೆಯ ಶಕ್ತಿ ಕುಂದುತ್ತದೆ. ಯಾವುದೋ ಮಾತು ಇಷ್ಟವಾಗಲಿಲ್ಲವೆಂದರೂ ಒಬ್ಬರನ್ನೊಬ್ಬರು ಸನ್ಮಾನಿಸಬೇಕು. ಆ ಸಮಯದಲ್ಲಿ ಅವರ ಸಂಕಲ್ಪ ಅಥವಾ ಮಾತನ್ನು ಕತ್ತರಿಸಬಾರದು. ಆದ್ದರಿಂದ ಈಗ ಸಮಾವೇಶಿಸಿಕೊಳ್ಳುವ ಶಕ್ತಿಯನ್ನು ಧಾರಣೆ ಮಾಡಬೇಕು.

ಸಂಘಟಿತ ರೂಪದಲ್ಲಿ ಬ್ರಾಹ್ಮಣ ಮಕ್ಕಳ ಪರಸ್ಪರದ ಭಾಷೆ ಅವ್ಯಕ್ತ ಭಾವ ಆಗಿರಬೇಕು. ಹೇಗೆ ಫರಿಸ್ಥಾಗಳು ಅಥವಾ ಆತ್ಮಗಳು ಪರಸ್ಪರ ಮಾತನಾಡುತ್ತಿದ್ದೇವೆ ಹಾಗೆ. ಯಾರಾದರೂ ಕೇಳಿದ ತಪ್ಪನ್ನು ಸಂಕಲ್ಪದಲ್ಲೂ ಸ್ವೀಕರಿಸಬಾರದು ಮತ್ತು ಸ್ವೀಕಾರ ಮಾಡಿಸಬಾರದು. ಬಾಬಾರವರ ಸಂಘಟನೆಯ ಶುಭ ಕಾಮನೆ ಪ್ರಾಕ್ಟಿಕಲ್ ಆಗುವುದು ಅಂತಹ ಸ್ಥಿತಿಯಲ್ಲಿ ಮಾತ್ರ. ಇದಕ್ಕಾಗಿ ಪರಸ್ಪರ ವಿಶೇಷ ಪುರುಷಾರ್ಥ, ವಿಶೇಷ ಅನುಭವಗಳನ್ನು ಹಂಚಿಕೊಳ್ಳಬೇಕು. ಸಂಘಟಿತ ರೂಪದಲ್ಲಿ ವಿಶೇಷ ಯೋಗ ಅಭ್ಯಾಸಗಳು ನಡೆಯುತ್ತಿರುವಾಗ ವಿನಾಶ ಜ್ವಾಲೆಗೆ ಉತ್ತೇಜನ ಸಿಗುತ್ತದೆ. ಯೋಗಾಗ್ನಿಯಿಂದಲೇ ವಿನಾಶದ ಅಗ್ನಿ ಪ್ರಜ್ವಲಿಸುತ್ತದೆ. ಒಳ್ಳೆಯದು, ಓಂ ಶಾಂತಿ.

ವರದಾನ:
ವ್ಯಕ್ತ ಸ್ಥಿತಿಯಲ್ಲಿ ಇದ್ದರೂ ಅವ್ಯಕ್ತ ಫರಿಸ್ಥಾ ರೂಪದ ಸಾಕ್ಷಾತ್ಕಾರ ಮಾಡುವ, ಶ್ವೇತ ವಸ್ತ್ರಧಾರಿಯೂ, ಶ್ವೇತ ಲೈಟ್ಧಾರಿ ಭವ.

ಹೇಗೆ ಈಗಲೂ ಎಲ್ಲೆಡೆ ಕೇಳಿಸುತ್ತಿದೆ “ಈ ಶ್ವೇತ ವಸ್ತ್ರಧಾರಿಗಳು ಯಾರು? ಎಲ್ಲಿಂದ ಬಂದವರು?” ಈಗ ಎಲ್ಲೆಡೆ ಫರಿಸ್ತಾ ರೂಪದ ಸಾಕ್ಷಾತ್ಕಾರವಾಗುವಂತೆ ಜಾಗೃತರಾಗಿ. ಇದನ್ನು “ಡಬಲ್ ಸೇವೆ” ಎನ್ನುತ್ತಾರೆ. ಹೇಗೆ ಮೋಡಗಳು ಎಲ್ಲೆಡೆ ತುಂಬುತ್ತವೆಯೋ ಹಾಗೆ. ಇದಾಗುವುದು ಶರೀರದಿಂದ ಭಿನ್ನ ಆಗಿ ಸೂಕ್ಷ್ಮ ಶರೀರದಿಂದ ಚಕ್ರ ಹಾಕುವ ಅಭ್ಯಾಸ ಮಾಡಿದ್ದಾಗ ಮನಸ್ಸು ಪವರ್ಫುಲ್ ಆಗುತ್ತದೆ.

ಸ್ಲೋಗನ್:
ಸರ್ವ ಗುಣ ಸರ್ವ ಶಕ್ತಿಯ ಅಧಿಕಾರಿ ಆಗಬೇಕಾದರೆ ಆಜ್ಞಾಕಾರಿ ಆಗಿ.

ಅವ್ಯಕ್ತ ಸೂಚನೆಗಳು:- ಈ ಅವ್ಯಕ್ತ ಮಾಸದಲ್ಲಿ ಬಂಧನ ಮುಕ್ತರಾಗಿ ಜೀವನ ಮುಕ್ತ ಸ್ಥಿತಿಯ ಅನುಭವ ಮಾಡಿರಿ.

ಹೇಗೆ ತಂದೆ ಸದಾ ಸ್ವತಂತ್ರರಾಗಿದ್ದಾರೋ, ಹಾಗೆಯೇ ತಂದೆಯ ಸಮಾನರಾಗಿರಿ. ಬಾಪ್ದಾದಾ ಈಗ ಮಕ್ಕಳನ್ನು ಪರತಂತ್ರವಾಗಿ ನೋಡಲು ಸಾಧ್ಯವಿಲ್ಲ. ನೀವು ನಿಮ್ಮನ್ನು ಸ್ವತಂತ್ರಗೊಳಿಸಿಕೊಳ್ಳಲಾಗುತ್ತಿಲ್ಲ, ಸ್ವತಃ ನಿಮ್ಮ ಬಲಹೀನತೆಗಳಲ್ಲಿ ಬೀಳುತ್ತಾ ಇರುತ್ತೀರಿ ಎಂದರೆ, ವಿಶ್ವ ಪರಿವರ್ತಕರು ಹೇಗೆ ಆಗುವಿರಿ! ಈಗ ಈ ಸ್ಮೃತಿಯನ್ನು ಹೆಚ್ಚಿಸಿಕೊಳ್ಳಿ “ನಾನು ಮಾಸ್ಟರ್ ಸರ್ವಶಕ್ತಿವಂತ.” ಇದರಿಂದ ಸಹಜವಾಗಿ ಎಲ್ಲ ಪಂಜರಗಳಿಂದ ಮುಕ್ತವಾಗಿ ಹಾರುವ ಪಕ್ಷಿಯಂತೆ ಆಗುವಿರಿ.