18.05.25 Avyakt Bapdada
Kannada
Murli 25.03.2005 Om Shanti Madhuban
“ಮಾ|| ಸೂರ್ಯರಾಗಿ
ಅನುಭೂತಿಯ ಕಿರಣಗಳನ್ನು ಹರಡಿ, ವಿಧಾತರಾಗಿ, ತಪಸ್ವಿಗಳಾಗಿ”
ಇಂದು ಬಾಪ್ದಾದಾ ತನ್ನ
ನಾಲ್ಕಾರುಕಡೆಯ ಹೋಲಿಹಂಸ ಮಕ್ಕಳೊಂದಿಗೆ ಹೋಲಿಯನ್ನಾಚರಿಸಲು ಬಂದಿದ್ದಾರೆ. ಮಕ್ಕಳೂ ಸಹ ಪ್ರೀತಿಯ
ಹಗ್ಗದಲ್ಲಿ ಬಂಧಿತರಾಗಿ ಹೋಲಿಯನ್ನಾಚರಿಸಲು ಬಂದು ತಲುಪಿದ್ದೀರಿ. ಮಿಲನವನ್ನಾಚರಿಸಲು ಎಷ್ಟು
ಪ್ರೀತಿಯಿಂದ ಬಂದಿದ್ದೀರಿ. ಬಾಪ್ದಾದಾ ಸರ್ವಮಕ್ಕಳ ಭಾಗ್ಯವನ್ನು ನೋಡುತ್ತಿದ್ದೆವು - ಎಷ್ಟು
ಶ್ರೇಷ್ಠಭಾಗ್ಯವಾಗಿದೆ! ಎಷ್ಟು ಪವಿತ್ರರೋ ಅಷ್ಟೇ ಶ್ರೇಷ್ಠರೂ ಆಗಿದ್ದೀರಿ. ಇಡೀ ಕಲ್ಪದಲ್ಲಿ
ನೋಡಿದಾಗ ತಮ್ಮೆಲ್ಲರ ಭಾಗ್ಯಕ್ಕಿಂತ ಶ್ರೇಷ್ಠಭಾಗ್ಯವು ಮತ್ತ್ಯಾರಿಗೂ ಇಲ್ಲ. ತಮ್ಮ ಭಾಗ್ಯವನ್ನು
ಅರಿತುಕೊಂಡಿದ್ದೀರಲ್ಲವೆ? ವರ್ತಮಾನ ಸಮಯದಲ್ಲಿಯೂ ಪರಮಾತ್ಮನ ಪಾಲನೆ, ಪರಮಾತ್ಮನ ವಿದ್ಯೆ ಮತ್ತು
ಪರಮಾತ್ಮನ ವರದಾನಗಳಿಂದಲೇ ಪಾಲನೆಯನ್ನು ಪಡೆಯುತ್ತಿದ್ದೀರಿ. ಭವಿಷ್ಯದಲ್ಲಿಯೂ ವಿಶ್ವದ
ರಾಜ್ಯಾಧಿಕಾರಿಗಳಾಗುವಿರಿ, ಆಗಲೇಬೇಕಾಗಿದೆ. ಇದು ನಿಶ್ಚಿತವಾಗಿದೆ, ನಿಶ್ಚಯವೂ ಇದೆ. ನಂತರದಲ್ಲಿ
ತಾವು ಪೂಜ್ಯರಾದಾಗಲೂ ಸಹ ತಾವು ಶ್ರೇಷ್ಠಆತ್ಮಗಳಿಗಾಗು ವಿಧಿಪೂರ್ವಕ ಪೂಜೆಯು ಮತ್ತ್ಯಾರಿಗೂ
ಆಗುವುದಿಲ್ಲ ಅಂದಮೇಲೆ ವರ್ತಮಾನ, ಭವಿಷ್ಯ ಮತ್ತು ಪೂಜ್ಯಸ್ವರೂಪದಲ್ಲಿಯೂ ಸಹ ಹೈಯೆಸ್ಟ್ ಅರ್ಥಾತ್
ಅತಿಶ್ರೇಷ್ಠರಾಗಿದ್ದೀರಿ. ತಮ್ಮ ಜಡಚಿತ್ರಗಳಿಗೂ ಸಹ ಪ್ರತಿಯೊಂದು ಕರ್ಮದ ಪೂಜೆಯು ನಡೆಯುತ್ತದೆ.
ಅನೇಕ ಧರ್ಮಪಿತರು, ಮಹಾತ್ಮರು ಇದ್ದು ಹೋಗಿದ್ದಾರೆ ಆದರೆ ಇಂತಹ ವಿಧಿಪೂರ್ವಕ ಪೂಜೆಯು ತಾವು
ಶ್ರೇಷ್ಠಾತಿಶ್ರೇಷ್ಠ ಪರಮಾತ್ಮನ ಮಕ್ಕಳಿಗೇ ಆಗುತ್ತದೆ ಏಕೆಂದರೆ ಈ ಸಮಯದಲ್ಲಿ ಪ್ರತಿಯೊಂದು
ಕರ್ಮದಲ್ಲಿ ಕರ್ಮಯೋಗಿಯಾಗಿ ಕರ್ಮಮಾಡುವ ವಿಧಿಯ ಫಲವಾಗಿ ಪೂಜೆಯೂ ವಿಧಿಪೂರ್ವಕವಾಗಿ ನಡೆಯುತ್ತದೆ.
ಈ ಸಂಗಮದ ಸಮಯದ ಪುರುಷಾರ್ಥಕ್ಕೆ ಪ್ರಾಲಬ್ಧವು ಸಿಗುತ್ತದೆ ಅಂದಾಗ ಶ್ರೇಷ್ಠಾತಿಶ್ರೇಷ್ಠ ಭಗವಂತನು
ತಾವು ಮಕ್ಕಳಿಗೂ ಸಹ ಶ್ರೇಷ್ಠಾತಿಶ್ರೇಷ್ಠ ಪ್ರಾಪ್ತಿಗಳನ್ನು ಮಾಡಿಸುತ್ತಾರೆ.
ಹೋಲಿ ಅರ್ಥಾತ್ ಪವಿತ್ರತೆ.
ನೀವು ಪವಿತ್ರರೂ ಆಗಿದ್ದೀರಿ, ಶ್ರೇಷ್ಠರೂ ಆಗಿದ್ದೀರಿ. ಈ ಬ್ರಾಹ್ಮಣಜೀವನದ ತಳಹದಿಯೇ
ಪವಿತ್ರತೆಯಾಗಿದೆ. ಸಂಕಲ್ಪಮಾತ್ರದಲ್ಲಿನ ಅಪವಿತ್ರತೆಯೂ ಸಹ ಶ್ರೇಷ್ಠರಾಗಲು ಬಿಡುವುದಿಲ್ಲ.
ಪವಿತ್ರತೆಯು ಸುಖ-ಶಾಂತಿಯ ಜನನಿಯಾಗಿದೆ. ಪವಿತ್ರತೆಯು ಸರ್ವಪ್ರಾಪ್ತಿಗಳಿಗೆ ಬೀಗದ ಕೈ ಆಗಿದೆ
ಆದ್ದರಿಂದ ತಮ್ಮೆಲ್ಲರ ಸ್ಲೋಗನ್ ಇದೇ ಆಗಿದೆ - “ಪವಿತ್ರರಾಗಿ-ಯೋಗಿಗಳಾಗಿ”. ಈ ಹೋಲಿಹಬ್ಬವೂ ಸಹ
ನೆನಪಾರ್ಥವಾಗಿದೆ, ಇದರಲ್ಲಿಯೂ ನೋಡಿ, ಮೊದಲು ಸುಡುತ್ತಾರೆ ನಂತರ ಆಚರಿಸುತ್ತಾರೆ. ಸುಡದ ಹೊರತು
ಆಚರಿಸುವುದಿಲ್ಲ. ಅಪವಿತ್ರತೆಯನ್ನು ಸುಡುವುದಾಗಿದೆ, ಯೋಗದ ಅಗ್ನಿಯ ಮೂಲಕ ಅಪವಿತ್ರತೆಯನ್ನು
ಸುಡುತ್ತೀರಿ ಅದರ ನೆನಪಾರ್ಥವಾಗಿ ಅವರು ಸ್ಥೂಲವಾದ ಬೆಂಕಿಯಲ್ಲಿ ಸುಡುತ್ತಾರೆ ಮತ್ತು ಸುಟ್ಟನಂತರ
ಪವಿತ್ರರಾದಾಗ ಖುಷಿಯನ್ನಾಚರಿಸುತ್ತಾರೆ. ಇಲ್ಲಿ ಪವಿತ್ರರಾಗುವ ನೆನಪಾರ್ಥವಾಗಿ ಅವರು
ಮಿಲನವನ್ನಾಚರಿಸುತ್ತಾರೆ ಏಕೆಂದರೆ ತಾವೆಲ್ಲರೂ ಯಾವಾಗ ಅಪವಿತ್ರತೆಯನ್ನು ಸುಡುವಿರೋ, ಪರಮಾತ್ಮನ
ಸಂಗದ ರಂಗಿನಲ್ಲಿ ಕೆಂಪಾಗಿಬಿಡುತ್ತೀರೋ ಆಗ ಸರ್ವಆತ್ಮಗಳ ಪ್ರತಿ ಶುಭಭಾವನೆ-ಶುಭಕಾಮನೆಯ
ಮಿಲನವನ್ನಾಚರಿಸುತ್ತೀರಿ. ಇದರ ನೆನಪಾರ್ಥವಾಗಿ ಅವರು ಮಂಗಲಮಿಲನವನ್ನಾಚರಿಸುತ್ತಾರೆ ಆದ್ದರಿಂದ
ಬಾಪ್ದಾದಾ ಎಲ್ಲಾ ಮಕ್ಕಳಿಗೆ ಇದೇ ಸ್ಮೃತಿಯನ್ನು ತರಿಸುತ್ತೇವೆ - “ಸದಾ ಪ್ರತಿಯೊಬ್ಬರಿಂದ
ಆಶೀರ್ವಾದವನ್ನು ತೆಗೆದುಕೊಳ್ಳಿ ಮತ್ತು ಆಶೀರ್ವಾದವನ್ನು ಕೊಡಿ”. ತಮ್ಮ ಆಶೀರ್ವಾದಗಳ
ಶುಭಭಾವನೆಯಿಂದ ಮಂಗಲಮಿಲನವನ್ನಾಚರಿಸಿ ಏಕೆಂದರೆ ಒಂದುವೇಳೆ ಯಾರಾದರೂ ಶಾಪವನ್ನು ಕೊಡಲೂಬಹುದು ಆದರೆ
ಅವರು ಅಪವಿತ್ರತೆಯಿಂದ ಪರವಶರಾಗಿದ್ದಾರೆ ಆದರೆ ಒಂದುವೇಳೆ ತಾವು ಶಾಪವನ್ನು ಮನಸ್ಸಿನಲ್ಲಿ
ಅಳವಡಿಸಿಕೊಳ್ಳುತ್ತೀರೆಂದರೆ ನೀವು ಖುಷಿಯಾಗಿರಲು ಸಾಧ್ಯವೆ? ಸುಖಿಯಾಗಿರುತ್ತೀರಾ? ಅಥವಾ
ವ್ಯರ್ಥಸಂಕಲ್ಪಗಳ ಏಕೆ, ಏನು, ಹೇಗೆ, ಯಾರು........ ಈ ದುಃಖದ ಅನುಭವ ಮಾಡುತ್ತೀರಾ! ಶಾಪವನ್ನು
ತೆಗೆದುಕೊಳ್ಳುವುದು ಅರ್ಥಾತ್ ತಮಗೂ ಸಹ ದುಃಖ ಮತ್ತು ಅಶಾಂತಿಯ ಅನುಭವ ಮಾಡಿಸುವುದು. ಆಗ ಸುಖವನ್ನು
ಕೊಡಿ, ಸುಖವನ್ನು ಪಡೆಯಿರಿ ಎಂದು ಬಾಪ್ದಾದಾರವರ ಯಾವ ಶ್ರೀಮತವಿದೆಯೋ ಅದರ
ಉಲ್ಲಂಘನೆಯಾಗಿಬಿಡುತ್ತದೆ ಆದ್ದರಿಂದ ಈಗ ಎಲ್ಲಾ ಮಕ್ಕಳು ಆಶೀರ್ವಾದವನ್ನು ಕೊಡುವುದು ಮತ್ತು
ಆಶೀರ್ವಾದ ತೆಗೆದುಕೊಳ್ಳುವುದನ್ನು ಕಲಿತುಬಿಟ್ಟಿದ್ದೀರಲ್ಲವೆ! ಕಲಿತಿದ್ದೀರಾ?
ಪ್ರತಿಜ್ಞೆ ಮತ್ತು ಧೃಡತೆ,
ಧೃಡತೆಯಿಂದ ಪ್ರತಿಜ್ಞೆ ಮಾಡಿ - ಸುಖವನ್ನು ಕೊಡಬೇಕು ಮತ್ತು ಸುಖವನ್ನೇ ತೆಗೆದುಕೊಳ್ಳಬೇಕಾಗಿದೆ.
ಆಶೀರ್ವಾದ ಕೊಡಬೇಕು ಮತ್ತು ತೆಗೆದುಕೊಳ್ಳಬೇಕಾಗಿದೆ. ಈ ಪ್ರತಿಜ್ಞೆಯಿದೆಯೇ? ಸಾಹಸವಿದೆಯೇ?
ಆಶೀರ್ವಾದ ತೆಗೆದುಕೊಳ್ಳುತ್ತೇನೆ, ಆಶೀರ್ವಾದ ಕೊಡುತ್ತೇನೆ ಎಂದು ಯಾರು ಇಂದಿನಿಂದಲೇ ಧೃಡತೆಯ
ಸಂಕಲ್ಪವನ್ನು ತೆಗೆದುಕೊಳ್ಳುವ ಸಾಹಸವಿದೆಯೋ ಅವರು ಕೈಯನ್ನೆತ್ತಿರಿ. ಪಕ್ಕಾ? ಪಕ್ಕಾ ಇದೆಯೇ?
ಕಚ್ಚಾ (ಅರ್ಧಂಬರ್ಧ) ಆಗಬಾರದು. ಕಚ್ಚಾ ಆಗುತ್ತೀರೆಂದರೆ ಕಚ್ಚಾಫಲವನ್ನು ಪಕ್ಷಿಗಳು ಬಹಳ
ತಿನ್ನುತ್ತವೆ. ಧೃಡತೆಯು ಸಫಲತೆಯ ಬೀಗದಕೈ ಆಗಿದೆ. ಎಲ್ಲರ ಬಳಿ ಈ ಬೀಗದ ಕೈಯಿದೆಯೇ? ಇದೆಯೇ? ಈ
ಬೀಗದ ಕೈ ಸದಾ ಇರುತ್ತದೆಯೇ, ಮಾಯೆಯು ಕಸಿದುಕೊಳ್ಳುವುದಿಲ್ಲ ತಾನೆ? ಅದಕ್ಕೂ ಸಹ ಈ ಬೀಗದ
ಕೈನೊಂದಿಗೆ ಪ್ರೀತಿಯಿದೆ. ಸದಾ ಸಂಕಲ್ಪ ಮಾಡುತ್ತಲೂ ಈ ಸಂಕಲ್ಪವನ್ನು ಇಮರ್ಚ್ ಮಾಡಿಕೊಳ್ಳಿ, ಮರ್ಜ್
ಅಲ್ಲ ಇಮರ್ಜ್ - ನಾನು ಮಾಡಲೇಬೇಕಾಗಿದೆ, ಆಗಲೇಬೇಕಾಗಿದೆ, ಆಗಿಯೇ ಆಗುತ್ತದೆ, ಆಗಿಯೇ ಇದೆ. ಇದಕ್ಕೆ
ನಿಶ್ಚಯಬುದ್ಧಿ ವಿಜಯಂತಿ ಎಂದು ಹೇಳಲಾಗುತ್ತದೆ. ನಾಟಕದಲ್ಲಿ ವಿಜಯವು ಮೊದಲೇ ಮಾಡಲ್ಪಟ್ಟಿದೆ.
ಕೇವಲ ಅದನ್ನು ಪುನರಾವರ್ತನೆ ಮಾಡಬೇಕಾಗಿದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಮೊದಲೇ
ಮಾಡಲ್ಪಟ್ಟಿದೆ. ಕೇವಲ ಅದನ್ನು ಈಗ ಪುನರಾವರ್ತನೆ ಮಾಡಬೇಕಾಗಿದೆ. ಇದು ಕಷ್ಟವೇ? ಕೆಲಕೆಲವೊಮ್ಮೆ
ಕಷ್ಟವಾಗಿಬಿಡುತ್ತದೆ. ಏಕೆ ಕಷ್ಠವಾಗುತ್ತದೆ? ತಮಗೆ ತಾವೇ ಸಹಜವನ್ನು ಕಷ್ಟವನ್ನಾಗಿ
ಮಾಡಿಕೊಂಡುಬಿಡುತ್ತೀರಿ. ಚಿಕ್ಕತಪ್ಪನ್ನು ಮಾಡಿಬಿಡುತ್ತೀರಿ, ಯಾವ ತಪ್ಪು ಮಾಡುತ್ತೀರೆಂದು
ತಿಳಿದಿದೆಯೇ? ಬಾಪ್ದಾದಾರವರಿಗೆ ಆ ಸಮಯದಲ್ಲಿ ಮಕ್ಕಳ ಪ್ರತಿ ಬಹಳ ದಯೆ ಅಥವಾ ಪ್ರೀತಿಯುಂಟಾಗುತ್ತದೆ.
ಯಾವ ಪ್ರೀತಿ? ಒಂದುಕಡೆಯಂತೂ ನಾನು-ಬಾಪ್ದಾದಾ ಕಂಬೈಂಡ್ ಆಗಿದ್ದೇವೆಂದು ಹೇಳುತ್ತೀರಿ. ಕಂಬೈಂಡ್
ಆಗಿದ್ದೀರಾ? ಆಗಿದ್ದೀರಾ? ಜೊತೆಯಲ್ಲ, ಕಂಬೈಂಡ್. ಕಂಬೈಂಡ್ ಆಗಿದ್ದೀರಾ? ಡಬಲ್ ವಿದೇಶಿಯರು
ಕಂಬೈಂಡ್ ಆಗಿದ್ದೀರಾ? ಹಿಂದೆ ಕುಳಿತಿರುವವರು ಆಗಿದ್ದೀರಾ? ಗ್ಯಾಲರಿಯಲ್ಲಿ ಕುಳಿತಿರುವವರು
ಆಗಿದ್ದೀರಾ?
ಒಳ್ಳೆಯದು. ಇಂದು
ಬಾಪ್ದಾದಾರವರಿಗೆ ಸಮಾಚಾರವು ಸಿಕ್ಕಿದೆ - ಮಧುಬನ ನಿವಾಸಿಗಳು ಪಾಂಡವಭವನ, ಜ್ಞಾನಸರೋವರ ಮತ್ತು
ಇಲ್ಲಿಯವರೂ ಸಹ ಬೇರೆ ಹಾಲ್ನಲ್ಲಿ ಕುಳಿತು ಕೇಳುತ್ತಿದ್ದಾರೆ ಅಂದಾಗ ಅವರನ್ನೂ ಬಾಪ್ದಾದಾ
ಕೇಳುತ್ತಿದ್ದಾರೆ- ಬಾಪ್ದಾದಾ ಕಂಬೈಂಡ್ ಆಗಿದ್ದಾರೆಯೇ? ಕೈಯನ್ನೆತ್ತುತ್ತಿದ್ದಾರೆ. ಯವಾಗ ಕಂಬೈಂಡ್
ಆಗಿದ್ದಾರೆ, ಸರ್ವಶಕ್ತಿವಂತ ಬಾಪ್ದಾದಾ ಕಂಬೈಂಡ್ ಆಗಿದ್ದಾರೆ ಅಂದಮೇಲೆ ಮತ್ತೇಕೆ
ಒಂಟಿಯಾಗಿಬಿಡುತ್ತೀರಿ? ಒಂದುವೇಳೆ ತಾವು ಬಲಹೀನರೇ ಆಗಿರಬಹುದು ಆದರೆ ಬಾಪ್ದಾದಾ
ಸರ್ವಶಕ್ತಿವಂತನಲ್ಲವೆ! ಯಾವಾಗ ಒಂಟಿಯಾಗಿಬಿಡುತ್ತೀರೋ ಆಗಲೇ ಬಲಹೀನರಾಗಿಬಿಡುತ್ತೀರಿ ಆದ್ದರಿಂದ
ಕಂಬೈಂಡ್ ರೂಪದಲ್ಲಿರಿ. ಬಾಪ್ದಾದಾ ಪ್ರತೀ ಸಮಯದಲ್ಲಿ ಪ್ರತಿಯೊಬ್ಬ ಮಗುವಿಗೆ ಸಹಯೋಗಿಯಾಗಿದ್ದೇವೆ.
ಶಿವತಂದೆಯು ಪರಮಧಾಮದಿಂದ ಬಂದಿರುವುದಾದರೂ ಏಕೆ? ಏತಕ್ಕೋಸ್ಕರ ಬಂದಿದ್ದಾರೆ? ಮಕ್ಕಳಿಗೆ
ಸಹಯೋಗಿಯಾಗುವುದಕ್ಕಾಗಿಯೇ ಬಂದಿದ್ದಾರೆ. ನೋಡಿ, ಬ್ರಹ್ಮಾತಂದೆಯೂ ಸಹ ವ್ಯಕ್ತದಿಂದ ಅವ್ಯಕ್ತ
ಏಕಾದರು? ಸಾಕಾರ ಶರೀರಕ್ಕಿಂತಲೂ ಅವ್ಯಕ್ತ ರೂಪದಲ್ಲಿ ಅತೀ ಹೆಚ್ಚು ಸಹಯೋಗ ಕೊಡಬಹುದಾಗಿದೆ ಅಂದಾಗ
ಯಾವಾಗ ಬಾಪ್ದಾದಾ ಸಹಯೋಗ ನೀಡುವ ಭರವಸೆಯನ್ನು ಕೊಡುತ್ತಿದ್ದೇವೆಂದ ಮೇಲೆ ಏಕೆ
ಒಂಟಿಯಾಗಿಬಿಡುತ್ತೀರಿ? ಪರಿಶ್ರಮದಲ್ಲಿ ಏಕೆ ತೊಡಗುತ್ತೀರಿ? 63 ಜನ್ಮಗಳಂತೂ ಪರಿಶ್ರಮ
ಪಟ್ಟಿದ್ದೀರಲ್ಲವೆ! ಆ ಪರಿಶ್ರಮದ ಸಂಸ್ಕಾರವು ಈಗಲೂ ಸೆಳೆಯುತ್ತದೆಯೇ? ಸ್ನೇಹದಲ್ಲಿರಿ,
ಪ್ರೀತಿಯಲ್ಲಿ ಲೀನವಾಗಿರಿ, ಪ್ರೀತಿಯು ಪರಿಶ್ರಮದಿಂದ ಮುಕ್ತರನ್ನಾಗಿ ಮಾಡುತ್ತದೆ. ಪರಿಶ್ರಮವೇ
ಇಷ್ಟವಾಗುತ್ತದೆಯೇ? ಅದೇ ಹವ್ಯಾಸಕ್ಕೆ ಅಂಟಿಕೊಂಡುಬಿಟ್ಟಿದ್ದೀರಾ? ಎಲ್ಲರೂ ಸಹಜಯೋಗಿಗಳಾಗಿದ್ದೀರಿ.
ಬಾಪ್ದಾದಾ ವಿಶೇಷವಾಗಿ ಮಕ್ಕಳಿಗೋಸ್ಕರ ಪರಮಧಾಮದಿಂದ ಉಡುಗೊರೆಯನ್ನು ತಂದಿದ್ದೇವೆ, ಯಾವ
ಉಡುಗೊರೆಯನ್ನು ತಂದಿದ್ದೇವೆಂದು ತಿಳಿದಿದೆಯೇ? ತಮ್ಮ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದಾರೆ.
ತಮ್ಮ ಚಿತ್ರವೂ ಇದೆಯಲ್ಲವೆ. ಮಕ್ಕಳಿಗಾಗಿ ರಾಜ್ಯಭಾಗ್ಯವನ್ನು ತಂದಿದ್ದಾರೆ. ಆದ್ದರಿಂದ
ಬಾಪ್ದಾದಾರವರಿಗೆ ಪರಿಶ್ರಮ ಇಷ್ಟವಾಗುವುದಿಲ್ಲ.
ಬಾಪ್ದಾದಾ ಪ್ರತಿಯೊಬ್ಬ
ಮಗುವನ್ನು ಪರಿಶ್ರಮ ಮುಕ್ತ ಮತ್ತು ಪ್ರೀತಿಯಲ್ಲಿ ಮಗ್ನರಾಗಿರುವುದನ್ನು ನೋಡಲು ಬಯಸುತ್ತಾರೆ.
ಅಂದಾಗ ಪರಿಶ್ರಮ ಹಾಗೂ ಮಾಯೆಯ ಯುದ್ಧದಿಂದ ಮುಕ್ತರಾಗುವ ಹೋಲಿಯನ್ನು ಇಂದು ಸಂಕಲ್ಪದ ಮೂಲಕ
ಸುಟ್ಟುಹಾಕುತ್ತೀರಾ? ಸುಡುವಿರಾ? ಸುಡುವುದೆಂದರೆ ಅದರ ಹೆಸರು-ಗುರುತು ಸಮಾಪ್ತಿ. ಯಾವುದೇ
ವಸ್ತುವನ್ನು ಸುಡುತ್ತಾರೆಂದರೆ ಅದು ಹೆಸರು ಸಹಿತವಾಗಿ ಸಮಾಪ್ತಿಯಾಗಿಬಿಡುತ್ತದೆಯಲ್ಲವೆ. ಅಂದಾಗ
ಇಂತಹ ಹೋಲಿಯನ್ನಾಚರಿಸುವಿರಾ? ಆಚರಿಸುತ್ತೀರಾ? ಕೈಯನ್ನಂತೂ ಅಲುಗಾಡಿಸುತ್ತಿದ್ದಾರೆ. ಬಾಪ್ದಾದಾ
ಕೈಗಳನ್ನು ನೋಡಿ ಖುಷಿ ಪಡುತ್ತಿದ್ದಾರೆ ಆದರೆ, ಆದರೆ ಎನ್ನುವುದಿದೆ. ಆದರೆ ಎಂದರೆ ಏನೆಂಬುದನ್ನು
ಹೇಳುವುದೇ ಅಥವಾ ಬೇಡವೇ? ಮನಸ್ಸಿನ ಕೈಯನ್ನಲುಗಾಡಿಸಿ. ಈ ಸ್ಥೂಲವಾದ ಕೈಯನ್ನಲುಗಾಡಿಸುವುದಂತೂ ಬಹಳ
ಸಹಜವಾಗಿದೆ, ಒಂದುವೇಳೆ ಮಾಡಲೇಬೇಕೆಂದು ಮನಸ್ಸು ಒಪ್ಪಿದರೆ ಅದು ಆಗಿಯೇ ಇದೆಯೆಂದರ್ಥ. ಹೊಸ-ಹೊಸಬರು
ಅನೇಕರು ಬಂದಿದ್ದಾರೆ, ಯಾರು ಮೊದಲಬಾರಿ ಮಿಲನ ಮಾಡಲು ಬಂದಿದ್ದೀರೋ ಅವರು ಕೈಯನ್ನೆತ್ತಿರಿ. ಡಬಲ್
ವಿದೇಶಿಯರಲ್ಲಿಯೂ ಹೊಸಬರಿದ್ದಾರೆ.
ಈಗ ಯಾರೆಲ್ಲರೂ ಮೊದಲ
ಬಾರಿ ಬಂದಿದ್ದೀರೋ ಅವರಿಗೆ ಬಾಪ್ದಾದಾ ವಿಶೇಷವಾಗಿ ತಮ್ಮ ಭಾಗ್ಯವನ್ನು ರೂಪಿಸಿಕೊಂಡಿರುವುದಕ್ಕೆ
ಶುಭಾಷಯಗಳನ್ನು ನೀಡುತ್ತಿದ್ದೇವೆ. ಆದರೆ ಈ ಶುಭಾಷಯಗಳನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ ಮತ್ತು ಸದಾ
ಈ ಲಕ್ಷ್ಯವನ್ನಿಟ್ಟುಕೊಳ್ಳಿ ಏಕೆಂದರೆ ಅಂತಿಮ ಫಲಿತಾಂಶವು ಇನ್ನೂ ಹೊರಬಂದಿಲ್ಲ. ಎಲ್ಲರಿಗೂ
ಅವಕಾಶವಿದೆ. ಕೊನೆಯಲ್ಲಿ ಬಂದರೂ ಸಹ ಮೊದಲಿನವರಿಗಿಂತಲೂ ನೀವು ಬಹಳ ಮುಂದೆ ಹೋಗಬಹುದಾಗಿದೆ. ಲಾಸ್ಟ್
ಸೋ ಫಾಸ್ಟ್, ಫಾಸ್ಟ್ ಸೋ ಫಸ್ಟ್ ಬರಬಹುದಾಗಿದೆ. ಇದಕ್ಕೆ ಅವಕಾಶವಿದೆ. ಬಹಳಷ್ಟು ಮುಂದೆ
ಹೋಗಬಲ್ಲಿರಿ. ಇದನ್ನು ಸದಾ ನೆನಪಿಟ್ಟುಕೊಳ್ಳಿ - ನಾನು ಅರ್ಥಾತ್ ನಾನಾತ್ಮನು ಫಾಸ್ಟ್ ಮತ್ತು
ಫಸ್ಟ್ ಕ್ಲಾಸ್ನಲ್ಲಿ ಬರಲೇಬೇಕಾಗಿದೆ. ವಿ.ಐ.ಪಿ., ಗಳು ಬಹಳ ಮಂದಿ ಬಂದಿದ್ದಾರಲ್ಲವೆ. ನಿಮ್ಮ
ಬಿರುದು ವಿ.ಐ.ಪಿ ಎಂದಾಗಿದೆ. ಯಾರೆಲ್ಲಾ ವಿ.ಐ.ಪಿ.,ಗಳು ಬಂದಿದ್ದೀರೋ ಅವರು ಉದ್ದನೆಯದಾಗಿ
ಕೈಯನ್ನೆತ್ತಿರಿ. ಎಲ್ಲರಿಗೂ ಸ್ವಾಗತ. ತಮ್ಮ ಮನೆಗೆ ಬರಲು ಸುಸ್ವಾಗತ. ಭಲೆ ಬನ್ನಿರಿ, ಈಗಲೂ ಸಹ
ತಮಗೆ ಕೇವಲ ಪರಿಚಯಕ್ಕಾಗಿ ವಿ.ಐ.ಪಿ., ಎಂದು ಹೇಳಲಾಗುತ್ತದೆ ಆದರೆ ಈಗ ನೀವು ವಿ.ಐ.ಪಿ.,ಗಳಿಂದ
ವಿ.ವಿ.ವಿ.ಐ.ಪಿ., ಗಳಾಗಬೇಕಾಗಿದೆ. ನೋಡಿ, ತಮ್ಮ ಜಡಚಿತ್ರಗಳು (ದೇವತೆಗಳು)
ವಿ.ವಿ.ವಿ.ಐ.ಪಿ.,ಗಳಾಗಿದ್ದಾರೆಂದರೆ ತಾವೂ ಸಹ ಪೂರ್ವಜರಂತೆ ಆಗಲೇಬೇಕಾಗಿದೆ. ಬಾಪ್ದಾದಾ
ಮಕ್ಕಳನ್ನು ನೋಡಿ ಬಹಳ ಖುಷಿಪಡುತ್ತೇವೆ ಏಕೆಂದರೆ ಸಂಬಂಧದಲ್ಲಿ ಬಂದಿದ್ದೀರಿ. ಯಾರೆಲ್ಲಾ
ವಿ.ಐ.ಪಿ.,ಗಳು ಬಂದಿದ್ದೀರೋ ಅವರು ಎದ್ದೇಳಿ. ಕುಳಿತು-ಕುಳಿತು ಸುಸ್ತಾಗಿಬಿಟ್ಟಿರುತ್ತೀರಿ,
ಸ್ವಲ್ಪ ಎದ್ದೇಳಿ. ಒಳ್ಳೆಯದು.
ವರ್ತಮಾನ ಸಮಯದಲ್ಲಿ
ಬಾಪ್ದಾದಾ ವಿಶೇಷವಾಗಿ ಎರಡು ಮಾತುಗಳ ಮೇಲೆ ಮತ್ತೆ-ಮತ್ತೆ ಗಮನ ತರಿಸುತ್ತಿದ್ದೇವೆ - ಒಂದು ಸ್ಟಾಪ್
ಎಂದರೆ ಬಿಂದುವನ್ನಿಡಿ, ಎರಡನೆಯದು ಸ್ಟಾಕ್ನ್ನು ಜಮಾ ಮಾಡಿಕೊಳ್ಳಿ. ಎರಡೂ ಅತ್ಯವಶ್ಯಕವಾಗಿವೆ.
ಮೂರು ಖಜಾನೆಗಳನ್ನು ವಿಶೇಷವಾಗಿ ಜಮಾ ಮಾಡಿಕೊಳ್ಳಿ - ಒಂದನೆಯದು ತನ್ನ ಪುರುಷಾರ್ಥದ ಪ್ರಾಲಬ್ಧ
ಅರ್ಥಾತ್ ಪ್ರತ್ಯಕ್ಷಫಲ, ಅದನ್ನು ಜಮಾ ಮಾಡಿಕೊಳ್ಳಿ. ಎರಡನೆಯದಾಗಿ ಸದಾ ಸಂತುಷ್ಟರಾಗಿರಿ,
ಸಂತುಷ್ಟರನ್ನಾಗಿ ಮಾಡಿ. ಕೇವಲ ಸಂತುಷ್ಟರಾಗಿರುವುದಷ್ಟೇ ಅಲ್ಲ ಅನ್ಯರನ್ನೂ ಮಾಡಬೇಕಾಗಿದೆ. ಅದಕ್ಕೆ
ಫಲಸ್ವರೂಪವಾಗಿ ಆಶೀರ್ವಾದಗಳನ್ನು ಜಮಾ ಮಾಡಿಕೊಳ್ಳಿ, ಆಶೀರ್ವಾದದ ಖಾತೆಯನ್ನು ಕೆಲಕೆಲವೊಮ್ಮೆ
ಕೆಲವು ಮಕ್ಕಳು ಜಮಾ ಮಾಡಿಕೊಳ್ಳುತ್ತಾರೆ ಆದರೆ ನಡೆಯುತ್ತಾ-ನಡೆಯುತ್ತಾ ಕೆಲವು ಚಿಕ್ಕ-ಚಿಕ್ಕ
ಮಾತುಗಳಲ್ಲಿ ತಬ್ಬಿಬ್ಬಾಗಿ ಧೈರ್ಯಹೀನರಾಗಿ ಜಮಾ ಮಾಡಿಕೊಂಡಿರುವ ಖಜಾನೆಗೂ ಸಹ ಅಡ್ಡಗೆರೆಯನ್ನು
ಎಳೆದುಕೊಳ್ಳುತ್ತಾರೆ. ಅಂದಾಗ ಈಗ ಆಶೀರ್ವಾದಗಳ ಖಾತೆಯು ಜಮಾ ಆಗಲಿ ಅದರ ವಿಧಿಯಾಗಿದೆ -
ಸಂತುಷ್ಟವಾಗಿರುವುದು, ಅನ್ಯರನ್ನೂ ಸಂತುಷ್ಟಪಡಿಸುವುದು. ಮೂರನೆಯದಾಗಿ - ಸೇವೆಯ ಮೂಲಕ ಸೇವೆಯ
ಫಲವನ್ನು ಜಮಾ ಮಾಡಿಕೊಳ್ಳಬೇಕಾಗಿದೆ ಅಥವಾ ಖಜಾನೆಗಳನ್ನು ಜಮಾ ಮಾಡಿಕೊಳ್ಳಬೇಕಾಗಿದೆ ಮತ್ತು
ಸೇವೆಯಲ್ಲಿಯೂ ವಿಶೇಷವಾಗಿ ನಿಮಿತ್ತಭಾವ, ನಿರ್ಮಾಣಭಾವ, ನಿರ್ಮಲವಾಣಿ. ಇದು ಬೇಹದ್ದಿನ ಸೇವೆಯಾಗಿದೆ,
ನನ್ನ ಸೇವೆಯಲ್ಲ. ಇದು ಬಾಬನ ಸೇವೆಯಾಗಿದೆ. ಮಾಡಿ-ಮಾಡಿಸುವಂತಹ ತಂದೆಯು ನಾನಾತ್ಮನಿಂದ
ಮಾಡಿಸುತ್ತಿದ್ದಾರೆ. ಇದು ಬೇಹದ್ದಿನ ಸೇವೆಯಾಗಿದೆ. ಈ ಮೂರೂಖಾತೆಗಳನ್ನು ಪರಿಶೀಲನೆ ಮಾಡಿಕೊಳ್ಳಿ
- ಮೂರೂಖಾತೆಗಳು ಜಮಾ ಆಗಿದೆಯೇ? ನನ್ನತನದ ಅಭಾವವಾಗಲಿ, ಇಚ್ಛಾಮಾತ್ರಂ ಅವಿದ್ಯಾ, ಈ ವರ್ಷದಲ್ಲಿ
ಏನು ಮಾಡಬೇಕು? ಎಂದು ಯೋಚಿಸುತ್ತೀರಿ. ಸೀಜನ್ ಪೂರ್ಣವಾಗುತ್ತಿದೆ. ಈಗ 6 ತಿಂಗಳು ಏನು ಮಾಡಬೇಕು?
ಒಂದನೆಯದಾಗಿ ಖಾತೆಯನ್ನು ಜಮಾ ಮಾಡಿಕೊಳ್ಳಬೇಕು, ಯಾವುದೇ ಮೂಲೆಯಲ್ಲಿ ಯಾವುದಾದರು ಇಚ್ಛೆ ಇಲ್ಲವೇ?
ನಾನು ಹಾಗೂ ನನ್ನ ತನ ಇಲ್ಲವೇ? ಎಂದು ಚೆನ್ನಾಗಿ ಪರಿಶೀಲನೆ ಮಾಡಬೇಕು. ಲೇವತಾ (ತೆಗೆದುಕೊಳ್ಳುವವರು)
ಅಲ್ಲ ತಾನೇ? ವಿಧಾತರಾಗಿ, ತೆಗೆದುಕೊಳ್ಳುವವರಾಗಬೇಡಿ. ಹೆಸರು, ಮರ್ಯಾದೆ, ಗೌರವ
ತೆಗೆದುಕೊಳ್ಳುವವರಲ್ಲ, ದಾತ-ವಿಧಾತರಾಗಿ.
ಈಗ ದುಃಖ ಬಹಳ-ಬಹಳ
ಹೆಚ್ಚಾಗುತ್ತಿದೆ, ಹೆಚ್ಚಾಗುತ್ತಲೇ ಇರುತ್ತದೆ. ಆದ್ದರಿಂದ ಮಾಸ್ಟರ್ ಸೂರ್ಯರಾಗಿ ಅನುಭೂತಿಯ
ಕಿರಣಗಳನ್ನು ಹರಡಿ. ಹೇಗೆ ಸೂರ್ಯ ಒಂದೇ ಸಮಯದಲ್ಲಿ ಎಷ್ಟೊಂದು ಪ್ರಾಪ್ತಿಗಳನ್ನು ಮಾಡಿಸುತ್ತಾನೆ,
ಒಂದು ಪ್ರಾಪ್ತಿ ಮಾಡಿಸುವುದಿಲ್ಲ. ಕೇವಲ ಬೆಳಕು ಕೊಡುವುದಿಲ್ಲ, ಶಕ್ತಿಯನ್ನೂ ಸಹ ಕೊಡುತ್ತಾನೆ.
ಅನೇಕ ಪ್ರಾಪ್ತಿಗಳನ್ನು ಮಾಡಿಸುತ್ತಾನೆ. ಹಾಗೆಯೇ ತಾವೆಲ್ಲರೂ ಈ 6 ತಿಂಗಳಲ್ಲಿ ಜ್ಞಾನಸೂರ್ಯರಾಗಿ
ಸುಖದ, ಖುಷಿಯ, ಶಾಂತಿಯ, ಸಹಯೋಗದ ಕಿರಣಗಳನ್ನು ಹರಡಿರಿ. ಅನುಭೂತಿ ಮಾಡಿಸಿ. ತಮ್ಮ ಮುಖವನ್ನು
ನೋಡುತ್ತಲೇ ದುಃಖದ ಅಲೆಗಳಲ್ಲಿ ಇರುವವರಿಗೆ ಕಡಿಮೆ ಪಕ್ಷ ಮುಗುಳುನಗೆಯಾದರೂ ಬರಲಿ. ತಮ್ಮ
ದೃಷ್ಟಿಯಿಂದ ಧೈರ್ಯ ಬರಲಿ. ಅಂದಾಗ ಈ ಗಮನ ಕೊಡಬೇಕು. ವಿಧಾತರಾಗಬೇಕು, ತಪಸ್ವಿಯಾಗಬೇಕು. ಅಂತಹ
ತಪಸ್ಸನ್ನು ಮಾಡಿ, ಯಾವುದರಲ್ಲಿ ತಪಸ್ಸಿನ ಜ್ವಾಲೆಯು ಯಾವುದಾದರೂ ಅನುಭೂತಿ ಮಾಡಿಸಲಿ. ಕೇವಲ ವಾಣಿ
ಅಷ್ಟೇ ಹೇಳುವುದಲ್ಲ, ಅನುಭೂತಿ ಮಾಡಿಸಿ. ಅನುಭೂತಿ ಅಮರವಾಗಿರುತ್ತದೆ. ಕೇವಲ ವಾಣಿ ಸ್ವಲ್ಪ
ಸಮಯಕ್ಕಾಗಿ ಚೆನ್ನಾಗಿರುತ್ತದೆ, ಸದಾ ನೆನಪು ಇರುವುದಿಲ್ಲ ಆದ್ದರಿಂದ ಅನುಭವದ ಅಥಾರಿಟಿಯಾಗಿ
ಅನುಭೂತಿ ಮಾಡಿಸಿ. ಯಾರೆಲ್ಲಾ ಸಂಭಂದ- ಸಂಪರ್ಕದಲ್ಲಿ ಬರುತ್ತಿದ್ದಾರೆ ಅವರಿಗೆ ಧೈರ್ಯ,
ಉಮ್ಮಂಗ-ಉತ್ಸಾಹ ತಮ್ಮ ಸಹಯೋಗದಿಂದ ಬಾಪ್ದಾದಾರವರ ಸಂಬಂಧದಿಂದ ಕೊಡಿಸಿ. ಹೆಚ್ಚು ಶ್ರಮವನ್ನು
ಮಾಡಬೇಡಿ. ತಾವು ಸ್ವಯಂ ಶ್ರಮ ಪಡಬೇಡಿ ಅನ್ಯರಿಗೂ ಪಡಿಸಬೇಡಿ. ನಿಮಿತ್ತರಲ್ಲವೇ, ಅಂದಾಗ ಅಂತಹ
ಉಮ್ಮಂಗ-ಉತ್ಸಾಹದ ಪ್ರಕಂಪನೆಗಳನ್ನು (ವೈಬ್ರೇಷನ್) ಹರಡಿಸಿ ಯಾವುದರಲ್ಲಿ ಗಂಬೀರವಾಗಿರುವವರೂ ಸಹ
ಉಮ್ಮಂಗ-ಉತ್ಸಾಹದಲ್ಲಿ ಬರಲಿ. ಮನಸ್ಸು ಖುಷಿಯಲ್ಲಿ ನರ್ತನ ಮಾಡಲಿ. ಏನು ಮಾಡಬೇಕು ಎಂದು
ಕೇಳಿದ್ದೀರಲ್ಲವೇ? ಫಲಿತಾಂಶವನ್ನು ನೋಡುತ್ತೇವೆ. ಯಾವ ಸ್ಥಾನವು ಎಷ್ಟು ಆತ್ಮಗಳನ್ನು ದೃಡ
ಮಾಡಿದ್ದಾರೆ, ಸ್ವಯಂ ದೃಡ ಆಗಿದ್ದಾರೆಯೇ, ಎಷ್ಟು ಆತ್ಮಗಳನ್ನು ದೃಡ ಮಾಡಿದ್ದಾರೆಯೇ ಎಂದು
ನೋಡುತ್ತೇವೆ, ಸಾಧಾರಣ ಲೆಕ್ಕವನ್ನು ನೋಡುವುದಿಲ್ಲ. ತಪ್ಪು ಮಾಡಲಿಲ್ಲವಾ, ಸುಳ್ಳು ಹೇಳಲಿಲ್ಲವಾ,
ಯಾವುದೇ ವಿಕರ್ಮ ಮಾಡಲಿಲ್ಲವಾ ಎಂದು ನೋಡುವುದಿಲ್ಲ, ಆದರೆ ಎಷ್ಟು ಆತ್ಮಗಳನ್ನು
ಉಮ್ಮಂಗ-ಉತ್ಸಾಹದಲ್ಲಿ ತಂದಿದ್ದೀರಿ, ಅನುಭೂತಿ ಮಾಡಿಸಿದ್ದೀರಾ? ದೃಡತೆಯ ಬೀಗದ ಕೈ ಕೊಟ್ಟಿದ್ದೀರಾ?
ಸರಿಯಲ್ಲವೇ, ಮಾಡಲೇಬೇಕಲ್ಲವೇ. ಬಾಪ್ದಾದಾರವರೂ ಸಹ ನೀವು ಮಾಡುತ್ತೀರಿ ಎಂದು ಏಕೆ ಹೇಳಲಿ,
ಮಾಡಲೇಬೇಕಾಗಿದೆ. ತಾವು ಮಾಡಲಿಲ್ಲವೆಂದರೆ ಯಾರು ಮಾಡುತ್ತಾರೆ? ಕೊನೆಯಲ್ಲಿ ಬರುವವರು
ಮಾಡುತ್ತಾರೇನು? ತಾವೇ ಕಲ್ಪ-ಕಲ್ಪದಲ್ಲಿ ತಂದೆಯಿಂದ ಅಧಿಕಾರಿ ಆಗಿದ್ದಿರಿ ಹಾಗೂ ಪ್ರತಿ ಕಲ್ಪದಲ್ಲಿ
ಆಗುತ್ತೀರಿ. ಇಂತಹ ಧೃಡತಾಪೂರ್ವಕ ಮಕ್ಕಳ ಸಂಘಟನೆಯನ್ನು ಬಾಪ್ದಾದಾರವರು ನೋಡಲೇಬೇಕು. ಸರಿಯಲ್ಲವೇ,
ಕೈ ಎತ್ತಿ. ಆಗಲೇಬೇಕು. ಮನಸ್ಸಿನ ಕೈ ಎತ್ತಿ. ಧೃಡ ನಿಶ್ಚಯದ ಕೈ ಎತ್ತಿ. ಇದರಲ್ಲಿ ಎಲ್ಲರೂ ಪಾಸ್
(ತೇರ್ಗಡೆ) ಆಗಿದ್ದೀರಿ, ಪಾಸ್ ಆಗಿದ್ದೀರಲ್ಲವೇ? ಒಳ್ಳೆಯದು.
ಒಳ್ಳೆಯದು. ನಾಲ್ಕಾರು
ಕಡೆಯ ಹೃದಯ ಸಿಂಹಾಸನಾಧಿಕಾರಿ ಮಕ್ಕಳಿಗೆ ದೂರದಲ್ಲಿ ಕುಳಿತಿದ್ದರೂ ಪರಮಾತ್ಮನ ಪ್ರೀತಿಯ ಅನುಭವ
ಮಾಡುವಂತಹ ಮಕ್ಕಳಿಗೆ ಸದಾ ಹೋಳಿ ಎಂದರೆ ಪವಿತ್ರತೆಯ ತಳಪಾಯವನ್ನು ದೃಡ ಮಾಡಿಕೊಳ್ಳುವಂತಹ
ಸ್ವಪ್ನಮಾತ್ರದಲ್ಲೂ ಅಪವಿತ್ರತೆಯ ಅಂಶ ಮಾತ್ರದಿಂದಲೂ ದೂರ ಇರುವಂತಹ ಮಹಾವೀರ, ಮಹಾವೀರಣಿ ಮಕ್ಕಳಿಗೆ,
ಸದಾ ಪ್ರತಿ ಸಮಯದಲ್ಲೂ ಸರ್ವ ಜಮಾದ ಖಾತೆಯನ್ನು ಜಮಾ ಮಾಡಿಕೊಳ್ಳುವ ಸಂಪನ್ನ ಮಕ್ಕಳಿಗೆ, ಸದಾ
ಸಂತುಷ್ಟ ಮಣಿಯಾಗಿ ಸಂತುಷ್ಟ ಆಗಿರುವ ಹಾಗೂ ಸಂತುಷ್ಟರನ್ನಾಗಿ ಮಾಡುವಂತಹ ತಂದೆಯ ಸಮಾನ ಮಕ್ಕಳಿಗೆ
ಬಾಪ್ದಾದಾರವರ ಸವಿ-ನೆನಪು, ಆಶೀರ್ವಾದಗಳು ಹಾಗೂ ನಮಸ್ತೆ.
ದಾದಿಯವರ ಜೊತೆ:
ದಾದಿಯರಂತೂ ಹಿರಿಯ ಸಹೋದರರು (ಗುರು ಭಾಯಿ) ಅಲ್ಲವೇ. ಅಂದಾಗ ಜೊತೆಯಲ್ಲಿ ಕುಳಿತುಕೊಳ್ಳಿ. ಹಾಗಾಗಿ
ಸಹೋದರ-ಸಹೋದರರು ಜೊತೆಯಲ್ಲಿ ಕುಳಿತುಕೊಳ್ಳುತ್ತಾರೆ. ಒಳ್ಳೆಯದು. ಬಾಪ್ದಾದಾರವರು ಪ್ರತಿನಿತ್ಯ
ಸ್ನೇಹದ ಮಾಲೀಶ್ ಮಾಡುತ್ತೇವೆ. ನಿಮಿತ್ತರಲ್ಲವೇ. ಈ ಮಾಲೀಶ್ ನಡೆಸುತ್ತಿದೆ. ಒಳ್ಳೆಯದು.
ತಮ್ಮೆಲ್ಲರ ಉದಾಹರಣೆಯನ್ನು ನೋಡಿ ಎಲ್ಲರಿಗೆ ಧೈರ್ಯ ಬರುತ್ತದೆ. ನಿಮಿತ್ತ ದಾದಿಯರ ಸಮಾನ
ಸೇವೆಯಲ್ಲಿ, ನಿಮಿತ್ತ ಭಾವದಲ್ಲಿ ಮುಂದುವರೆಯಬೇಕು. ಒಳ್ಳೆಯದು. ಮಾಡಿಸುವವರು ಮಾಡಿಸುತ್ತಿದ್ದಾರೆ,
ನಡೆಸುವವರು ನಡೆಸುತ್ತಿದಾರೆ ಎಂದು ನಿಮ್ಮೆಲ್ಲರಿಗೆ ಇದು ಪಕ್ಕಾ ನಿಶ್ಚಯವಿದೆಯಲ್ಲವೇ. ಈ ನಿಮಿತ್ತ
ಭಾವವು ಸೇವೆಯನ್ನು ಮಾಡಿಸುತ್ತಿದೆ. ನನ್ನತನವಿದೆಯೇ? ಯಾವುದೇ ರೀತಿಯಲ್ಲಿ ನನ್ನತನ ಬರುತ್ತದೆಯೇನು?
ಒಳ್ಳೆಯದು. ಇಡೀ ವಿಶ್ವದ ಮುಂದೆ ನಿಮಿತ್ತ ಉದಾಹರಣೆ ಆಗಿದ್ದೀರಲ್ಲವೇ. ಹಾಗಾಗಿ ಬಾಪ್ದಾದಾರವರೂ ಸಹ
ಸದಾ ವಿಶೇಷವಾಗಿ ಪ್ರೀತಿ ಮತ್ತು ಆಶೀರ್ವಾದಗಳನ್ನು ಕೊಡುತ್ತಲೇ ಇರುತ್ತೇವೆ. ಒಳ್ಳೆಯದು. ಅನೇಕರು
ಬಂದಿದ್ದೀರಿ ಅಂದಾಗ ಒಳ್ಳೆಯದಲ್ಲವೇ. ಕೊನೆಯ ಸರದಿ ತೀಕ್ಷ್ಣವಾಗಿ ಮುಂದೆ ಹೋಗಿದೆ. ಒಳ್ಳೆಯದು.
ಡಬಲ್ ವಿದೇಶಿ ಮುಖ್ಯ
ಶಿಕ್ಷಕಿಯರೊಂದಿಗೆ:
ಎಲ್ಲರೂ ಕೂಡಿ ಎಲ್ಲರ ಪಾಲನೆ ಮಾಡುವುದಕ್ಕೆ ನಿಮಿತ್ತರಾಗುತ್ತೀರಿ. ಇದು ಬಹಳ ಒಳ್ಳೆಯ ಪಾತ್ರವನ್ನು
ಅಭಿನಯಿಸುತ್ತೀರಿ. ಸ್ವಯಂ ರಿಫ್ರೆಶ್ ಆಗುತ್ತೀರಿ ಹಾಗೂ ಅನ್ಯರನ್ನೂ ಸಹ ರಿಫ್ರೆಶ್ ಮಾಡುತ್ತೀರಿ.
ಒಳ್ಳೆಯ ಕಾರ್ಯಕ್ರಮ ಮಾಡುತ್ತೀರಿ. ಬಾಪ್ದಾದಾರವರಿಗೆ ಇಷ್ಟವಿದೆ. ಸ್ವಯಂ ರಿಫ್ರೆಶ್ ಆದಾಗ
ಅನ್ಯರನ್ನು ರಿಫ್ರೆಶ್ ಮಾಡುತ್ತೀರಿ. ಬಹಳ ಒಳ್ಳೆಯದು. ಎಲ್ಲರೂ ತಮ್ಮ ರಿಫ್ರೆಶ್ಮೆಂಟ್ ಚೆನ್ನಾಗಿ
ಮಾಡಿಕೊಂಡಿದ್ದೀರಿ. ಬಾಪ್ದಾದಾ ಖುಷಿ ಪಡುತ್ತೇವೆ. ಬಹಳ ಒಳ್ಳೆಯದು.
ವರದಾನ:
ಜ್ಞಾನ ಪೂರ್ಣ
ಸ್ಥಿತಿಯ ಮೂಲಕ ಪುರುಷಾರ್ಥಿಗಳನ್ನು ಪಾರು ಮಾಡುವಂತಹ ಅಂಗದ ಸಮಾನ ಅಚಲ-ಅಡೋಲ ಭವ
ರಾವಣರಾಜ್ಯದ ಯಾವುದೇ
ಪರಿಸ್ಥಿತಿ ಅಥವಾ ವ್ಯಕ್ತಿ ಸ್ವಲ್ಪವೂ ಸಂಕಲ್ಪ ರೂಪದಲ್ಲಿಯೂ ಸಹ ಅಲುಗಾಡಿಸಲು ಸಾಧ್ಯವಿರಬಾರದು. ಈ
ರೀತಿ ಅಚಲ-ಅಡೋಲ ಭವದ ವರದಾನಿಗಳಾಗಿ ಏಕೆಂದರೆ ಯಾವುದೇ ವಿಘ್ನ ಬೀಳಿಸಲು ಅಲ್ಲ ಬದಲಾಗಿ
ಶಕ್ತಿಶಾಲಿಗಳನ್ನಾಗಿ ಮಾಡಲು ಬರುತ್ತದೆ. ಜ್ಞಾನಪೂರ್ಣರು ಎಂದೂ ಪೇಪರ್ ನೋಡಿ
ತಬ್ಬಿಬ್ಬಾಗುವುದಿಲ್ಲ. ಮಾಯೆ ಯಾವುದಾದರೂ ರೂಪದಲ್ಲಿ ಬರಬಹುದು ಆದರೆ ನೀವು ಯೋಗಾಗ್ನಿಯನ್ನು
ಪ್ರಜ್ವಲಿತಮಾಡಿಕೊಂಡಿರಿ, ಜ್ಞಾನಪೂರ್ಣ ಸ್ಥಿತಿಯಲ್ಲಿರಿ ಆಗ ಎಲ್ಲಾ ವಿಘ್ನ ಸ್ವತಃ
ಸಮಾಪ್ತಿಯಾಗಿಬಿಡುತ್ತದೆ ಮತ್ತು ನೀವು ಅಚಲ-ಅಡೋಲ ಸ್ಥಿತಿಯಲ್ಲಿ ಸ್ಥಿತರಾಗಿರುವಿರಿ.
ಸ್ಲೋಗನ್:
ಶುದ್ಧ ಸಂಕಲ್ಪದ
ಖಜಾನೆಯ ಜಮಾ ಆಗುತ್ತಿದ್ದಾಗ ವ್ಯರ್ಥ ಸಂಕಲ್ಪಗಳಲ್ಲಿ ಸಮಯ ಹೋಗುವುದಿಲ್ಲ.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ಪವಿತ್ರತೆಯ
ವ್ಯಕ್ತಿತ್ವದ ಆಧಾರದ ಮೇಲೆ ಬ್ರಹ್ಮಾ ತಂದೆ ಆದಿ ದೇವ ಅಥವಾ ಮೊದಲನೇ ರಾಜಕುಮಾರರಾದರು. ಈ ರೀತಿ
ನೀವು ಸಹ ಫಾಲೋ ಫಾದರ್ ಮಾಡಿ ಮೊದಲನೇ ವ್ಯಕ್ತಿತ್ವದ ಲಿಸ್ಟ್ನಲ್ಲಿ ಬಂದುಬಿಡಿ ಏಕೆಂದರೆ ಬ್ರಾಹ್ಮಣ
ಜನ್ಮದ ಸಂಸ್ಕಾರ ಪವಿತ್ರತೆಯಾಗಿದೆ. ನಿಮ್ಮ ಶ್ರೇಷ್ಠತೆ ಅಥವಾ ಮಹಾನತೆಯೇ ಪವಿತ್ರತೆಯಾಗಿದೆ.