18.06.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಈ ರುದ್ರಜ್ಞಾನ ಯಜ್ಞವು ಸ್ವಯಂ ರುದ್ರನೇ ರಚಿಸಿದ್ದಾರೆ, ಇದರಲ್ಲಿ ನೀವು ತಮ್ಮದೆಲ್ಲವನ್ನೂ ಸ್ವಾಹಾ ಮಾಡಿ ಏಕೆಂದರೆ ಈಗ ಮನೆಗೆ ಹೋಗಬೇಕಾಗಿದೆ”

ಪ್ರಶ್ನೆ:
ಸಂಗಮಯುಗದಲ್ಲಿ ಯಾವ ವಿಚಿತ್ರವಾದ ಆಟವು ನಡೆಯುತ್ತದೆ?

ಉತ್ತರ:
ಭಗವಂತನು ರಚಿಸಿರುವ ಯಜ್ಞದಲ್ಲಿಯೇ ಅಸುರರ ವಿಘ್ನಗಳು ಬೀಳುತ್ತವೆ. ಸಂಗಮದಲ್ಲಿಯೇ ಈ ವಿಚಿತ್ರವಾದ ಆಟವು ನಡೆಯುತ್ತದೆ. ಇಂತಹ ಯಜ್ಞವು ಇಡೀ ಕಲ್ಪದಲ್ಲಿಯೇ ರಚಿಸುವುದಿಲ್ಲ. ಇದು ಸ್ವರಾಜ್ಯವನ್ನು ಪಡೆಯುವುದಕ್ಕಾಗಿ ರಾಜಸ್ವ ಅಶ್ವಮೇಧ ಯಜ್ಞವಾಗಿದೆ, ಇದರಲ್ಲಿಯೇ ವಿಘ್ನಗಳು ಬೀಳುತ್ತವೆ.

ಓಂ ಶಾಂತಿ.
ನೀವು ಎಲ್ಲಿ ಕುಳಿತಿದ್ದೀರಿ? ಇದಕ್ಕೆ ಶಾಲೆ ಅಥವಾ ವಿಶ್ವವಿದ್ಯಾಲಯವೆಂದು ಹೇಳಲಾಗುತ್ತದೆ. ಇದು ವಿಶ್ವವಿದ್ಯಾಲಯವಾಗಿದೆ. ಈ ಈಶ್ವರೀಯ ಸೇವಾಕೇಂದ್ರದಲ್ಲಿ ತಂದೆಯು ಅತಿದೊಡ್ಡ ವಿಶ್ವವಿದ್ಯಾಲಯವನ್ನು ತೆರೆದಿದ್ದಾರೆ. ಶಾಸ್ತ್ರಗಳಲ್ಲಿ ರುದ್ರಯಜ್ಞವೆಂಬ ಹೆಸರನ್ನು ಬರೆದಿದ್ದಾರೆ. ಈ ಸಮಯದಲ್ಲಿ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಶಿವತಂದೆಯು ಈ ಪಾಠಶಾಲೆ ಅಥವಾ ವಿಶ್ವವಿದ್ಯಾಲಯವನ್ನು ತೆರೆದಿದ್ದಾರೆ. ಶ್ರೇಷ್ಠಾತಿಶ್ರೇಷ್ಠ ತಂದೆಯು ಓದಿಸುತ್ತಾರೆ. ಅವರು ಈ ಯಜ್ಞವನ್ನು ರಚಿಸಿದ್ದಾರೆ, ಇದರ ಹೆಸರೂ ಸಹ ಪ್ರಖ್ಯಾತವಾಗಿದೆ. ಮಕ್ಕಳ ಬುದ್ಧಿಯಲ್ಲಿ ನೆನಪಿರಬೇಕಲ್ಲವೆ. ರಾಜಸ್ವ ಅರ್ಥಾತ್ ಸ್ವರಾಜ್ಯಕ್ಕಾಗಿ. ರಾಜಸ್ವ ಅಶ್ವಮೇಧ ರುದ್ರಜ್ಞಾನ ಯಜ್ಞವಾಗಿದೆ. ಅಶ್ವಮೇಧ ಎಂದರೆ ಏನೆಲ್ಲವೂ ಕಾಣುತ್ತಿದೆಯೋ ಅದೆಲ್ಲವನ್ನೂ ಸ್ವಾಹಾ ಮಾಡುತ್ತಿದ್ದೀರಿ, ಇದರಲ್ಲಿ ಶರೀರವೂ ಸಹ ಸ್ವಾಹಾ ಆಗಿಬಿಡುತ್ತದೆ. ಆತ್ಮವು ಸ್ವಾಹಾ ಆಗಲು ಸಾಧ್ಯವಿಲ್ಲ. ಎಲ್ಲಾ ಶರೀರಗಳು ಸ್ವಾಹಾ ಆಗಿಬಿಡುತ್ತವೆ. ಉಳಿದ ಆತ್ಮಗಳು ಹಿಂತಿರುಗಿ ಹೋಗುತ್ತವೆ, ಇದು ಸಂಗಮಯುಗವಾಗಿದೆ. ಎಲ್ಲಾ ಆತ್ಮಗಳು ಹೋಗುತ್ತೀರಿ, ಉಳಿದಂತೆ ಶರೀರಗಳು ಇಲ್ಲಿ ಸಮಾಪ್ತಿಯಾಗುತ್ತವೆ. ಇದೆಲ್ಲವೂ ಡ್ರಾಮಾ ಆಗಿದೆ. ನೀವು ಈ ಡ್ರಾಮಾದಲ್ಲಿ ವಶರಾಗಿ ನಡೆಯುತ್ತಿದ್ದೀರಿ. ತಂದೆಯು ತಿಳಿಸುತ್ತಾರೆ- ನಾನು ರಾಜಸ್ವ ಯಜ್ಞವನ್ನು ರಚಿಸಿದ್ದೇನೆ. ಇದನ್ನೂ ಸಹ ನಾಟಕದನುಸಾರ ರಚಿಸಲ್ಪಟ್ಟಿದೆ. ನಾನು ಯಜ್ಞವನ್ನು ರಚಿಸಿದ್ದೇನೆಂದು ಹೇಳುವುದಿಲ್ಲ. ಯೋಜನೆಯನುಸಾರ ನೀವು ಮಕ್ಕಳಿಗೆ ಓದಿಸುವುದಕ್ಕಾಗಿ ಕಲ್ಪದ ಹಿಂದಿನಂತೆ ಜ್ಞಾನಯಜ್ಞವನ್ನು ರಚಿಸಲಾಗಿದೆ. ನಾನು ರಚಿಸಿದ್ದೇನೆ ಎಂಬ ಅರ್ಥವೂ ಸಹ ಬರುವುದಿಲ್ಲ. ನಾಟಕದನುಸಾರವೇ ಇದು ರಚಿಸಲ್ಪಟ್ಟಿದೆ. ಕಲ್ಪ-ಕಲ್ಪವೂ ರಚಿಸಲಾಗುತ್ತದೆ. ಈ ನಾಟಕವು ಮಾಡಲ್ಪಟ್ಟಿದೆಯಲ್ಲವೆ. ನಾಟಕದ ಯೋಜನೆಯನುಸಾರ ಒಂದೇಬಾರಿ ಯಜ್ಞವನ್ನು ರಚಿಸಲಾಗುತ್ತದೆ, ಇದೇನು ಹೊಸಮಾತಲ್ಲ. ಈಗ ಬುದ್ಧಿಯಲ್ಲಿ ಕುಳಿತಿದೆ- ಅವಶ್ಯವಾಗಿ 5000 ವರ್ಷಗಳ ಮೊದಲೂ ಸಹ ಸತ್ಯಯುಗವಿತ್ತು, ಈಗ ಪುನಃ ಚಕ್ರವು ಪುನರಾವರ್ತನೆಯಾಗುತ್ತಿದೆ. ಹೊಸಪ್ರಪಂಚವು ಪುನಃ ಸ್ಥಾಪನೆಯಾಗುತ್ತಿದೆ. ನಾವು ಹೊಸಪ್ರಪಂಚದಲ್ಲಿ ಸ್ವರಾಜ್ಯವನ್ನು ಪಡೆಯುವುದಕ್ಕಾಗಿ ಓದುತ್ತಿದ್ದೇವೆ ಅಂದಮೇಲೆ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಯಾರು ನಾಟಕದನುಸಾರ ಕಲ್ಪದ ಮೊದಲು ಆಗಿದ್ದರೋ ಅವರೇ ಆಗುತ್ತಾರೆ, ಈಗಲೂ ಆಗುತ್ತಾರೆ. ಸಾಕ್ಷಿಯಾಗಿ ನಾಟಕವನ್ನು ನೋಡಬೇಕಾಗಿದೆ ಮತ್ತು ಪುರುಷಾರ್ಥವನ್ನು ಮಾಡಬೇಕಾಗಿದೆ. ಮಕ್ಕಳು ಮಾರ್ಗವನ್ನು ತಿಳಿಸಬೇಕು, ಮುಖ್ಯಮಾತು ಪವಿತ್ರತೆಯಾಗಿದೆ. ಬನ್ನಿ, ಪವಿತ್ರರನ್ನಾಗಿ ಮಾಡಿ ಈ ಛೀ ಛೀ ಪ್ರಪಂಚದಿಂದ ಕರೆದುಕೊಂಡು ಹೋಗಿ ಎಂದು ತಂದೆಯನ್ನು ಕರೆದಿರಿ. ತಂದೆಯು ಮನೆಗೆ ಕರೆದುಕೊಂಡು ಹೋಗುವುದಕ್ಕಾಗಿಯೇ ಬಂದಿದ್ದಾರೆ. ಮಕ್ಕಳಿಗೆ ಬಹಳಷ್ಟು ವಿಷಯಗಳನ್ನು ತಿಳಿಸಲಾಗಿದೆ. ಮುಖ್ಯಮಾತನ್ನು ತಂದೆಯು ತಿಳಿಸುತ್ತಾರೆ- ಮನ್ಮನಾಭವ. ಪಾವನರಾಗುವುದಕ್ಕಾಗಿ ತಂದೆಯನ್ನು ನೆನಪು ಮಾಡುತ್ತೇವೆ, ಇದನ್ನು ಮರೆಯಬಾರದು. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಲಾಭವಾಗುವುದು. ಮಕ್ಕಳು ದಿನಚರಿಯನ್ನಿಡಬೇಕು, ಇಲ್ಲದಿದ್ದರೆ ಅಂತಿಮದಲ್ಲಿ ಅನುತ್ತೀರ್ಣರಾಗಿಬಿಡುತ್ತೀರಿ. ನಾವೇ ಸತೋಪ್ರಧಾನರಾಗಿದ್ದೆವು ಎಂದು ತಿಳಿಯುತ್ತೀರಿ ಅಂದಾಗ ನಂಬರ್ವಾರ್ ಪುರುಷಾರ್ಥದನುಸಾರ ಯಾರು ಶ್ರೇಷ್ಠರಾಗುವರೋ ಅವರೇ ಹೆಚ್ಚಿನ ಪರಿಶ್ರಮಪಡಬೇಕಾಗುವುದು. ನೆನಪಿನಲ್ಲಿರಬೇಕಾಗುತ್ತದೆ. ಇದಂತೂ ನಿಮಗೆ ತಿಳಿದಿದೆ- ಇನ್ನು ಸ್ವಲ್ಪವೇ ಸಮಯವಿದೆ, ಇದರ ನಂತರ ಸುಖದ ದಿನಗಳು ಬರಲಿವೆ. ಅವಶ್ಯವಾಗಿ ನಮ್ಮ ಅಪಾರ ಸುಖದ ದಿನಗಳು ಬರುತ್ತವೆ, ತಂದೆಯು ಒಂದೇಬಾರಿ ಬರುತ್ತಾರೆ, ದುಃಖಧಾಮವನ್ನೇ ಸಮಾಪ್ತಿ ಮಾಡಿ ತಮ್ಮ ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ನಾವೀಗ ಈಶ್ವರೀಯ ಪರಿವಾರದವರಾಗಿದ್ದೇವೆ, ನಂತರ ದೈವೀ ಪರಿವಾರದಲ್ಲಿ ಹೋಗುತ್ತೇವೆ, ಈ ಸಮಯದ ಗಾಯನವೇ ಇದೆ- ಈ ಸಂಗಮಯುಗವು ಪುರುಷೋತ್ತಮ ಶ್ರೇಷ್ಠರಾಗುವ ಯುಗವಾಗಿದೆ. ನಮಗೆ ಬೇಹದ್ದಿನ ತಂದೆಯು ಓದಿಸುತ್ತಿದ್ದಾರೆ, ಮುಂದೆಹೋದಂತೆ ಸನ್ಯಾಸಿಗಳೂ ಸಹ ಇದನ್ನು ಓಪ್ಪುತ್ತಾರೆ. ಅಂತಹ ಸಮಯವೂ ಸಹ ಬರುತ್ತಿದೆಯಲ್ಲವೆ. ಈಗಿನ ನಿಮ್ಮ ಪ್ರಭಾವವು ಅಷ್ಟೊಂದು ಬೀರುತ್ತಿಲ್ಲ, ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಇನ್ನೂ ಸಮಯವಿದೆ, ಕೊನೆಯಲ್ಲಿ ಈ ಸನ್ಯಾಸಿಗಳು ಮೊದಲಾದವರೂ ಸಹ ಬಂದು ತಿಳಿದುಕೊಳ್ಳುತ್ತಾರೆ- ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬ ಜ್ಞಾನವು ಯಾರಲ್ಲಿಯೂ ಇಲ್ಲ. ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ. ಪವಿತ್ರತೆಯ ಮೇಲೆ ಎಷ್ಟೊಂದು ವಿಘ್ನಗಳು ಬರುತ್ತವೆ. ಅಬಲೆಯರ ಮೇಲೆ ಅತ್ಯಾಚಾರವಾಗುತ್ತದೆ. ದ್ರೌಪದಿಯು ಕರೆದಳಲ್ಲವೆ. ವಾಸ್ತವದಲ್ಲಿ ನೀವೆಲ್ಲರೂ ದ್ರೌಪದಿಯರು, ಸೀತೆಯರು, ಪಾರ್ವತಿಯರಾಗಿದ್ದೀರಿ. ನೆನಪಿನಲ್ಲಿರುವುದರಿಂದ ಅಬಲೆಯರು, ಕುಬ್ಜೆಯರೂ ಸಹ ತಂದೆಯಿಂದ ಆಸ್ತಿಯನ್ನು ಪಡೆಯುತ್ತಾರೆ. ನೆನಪಿನಲ್ಲಿರುವುದು ಸಹಜವಲ್ಲವೆ. ಭಗವಂತನು ಬಂದು ಯಜ್ಞವನ್ನು ರಚಿಸುತ್ತಾರೆ, ಇದರಲ್ಲಿ ಎಷ್ಟೊಂದು ವಿಘ್ನಗಳು ಬರುತ್ತವೆ, ಈಗಲೂ ಸಹ ವಿಘ್ನಗಳು ಬರುತ್ತಿರುತ್ತವೆ. ಕನ್ಯೆಯರಿಗೆ ಬಲವಂತದಿಂದ ವಿವಾಹ ಮಾಡಿಸುತ್ತಾರೆ, ಇಲ್ಲವೆಂದರೆ ಹೊಡೆದು ಮನೆಯಿಂದ ಆಚೆ ಹಾಕುತ್ತಾರೆ. ಆದ್ದರಿಂದ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಅಂದಮೇಲೆ ಅವರಿಗೆ ಅವಶ್ಯವಾಗಿ ಬಂದು ಪಾವನ ಮಾಡಲು ರಥವು ಬೇಕಲ್ಲವೆ. ಸ್ಥೂಲ ನೀರಿನಿಂದ ಪಾವನರಾಗುವುದಿಲ್ಲ. ತಂದೆಯೇ ಬಂದು ಪಾವನ ಮಾಡಿ ಪಾವನಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಾರೆ.

ನೀವು ನೋಡುತ್ತೀರಿ- ಈ ಪತಿತಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ. ಅಂದಮೇಲೆ ನಾವೇಕೆ ತಂದೆಯ ಮಕ್ಕಳಾಗಬಾರದು! ಸ್ವಾಹಾ ಆಗಿಬಿಡಬಾರದು. ಹೇಗೆ ಸ್ವಾಹಾ ಆಗುವುದು? ಹೇಗೆ ವರ್ಗಾವಣೆ ಆಗುವುದೆಂದು ಕೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ಈ ತಂದೆ (ಸಾಕಾರ) ಯನ್ನು ನೋಡುತ್ತೀರಲ್ಲವೆ, ಇವರು ತಾವು ಮಾಡಿ (ಬ್ರಹ್ಮಾ) ಕಲಿಸುತ್ತಿದ್ದಾರೆ. ನಾವು ಎಂತಹ ಕರ್ಮವನ್ನು ಮಾಡುತ್ತೇವೆಯೋ ನಮ್ಮನ್ನು ನೋಡಿ ಅನ್ಯರೂ ಮಾಡುತ್ತಾರೆ. ತಂದೆಯು ಇವರಿಂದ ಕರ್ಮ ಮಾಡಿಸಿದರಲ್ಲವೆ. ಯಜ್ಞದಲ್ಲಿ ಎಲ್ಲವನ್ನೂ ಸ್ವಾಹಾ ಮಾಡಿಬಿಟ್ಟರು. ಸ್ವಾಹಾ ಆಗುವುದರಲ್ಲಿ ಯಾವುದೇ ಕಷ್ಟವಿಲ್ಲ, ಇವರು ಬಹಳ ಸಾಹುಕಾರರೂ ಅಲ್ಲ, ಬಡವರೂ ಆಗಿರಲಿಲ್ಲ. ಸಾಧಾರಣವಾಗಿದ್ದರು, ಯಜ್ಞವನ್ನು ರಚಿಸಲಾಗುತ್ತದೆಯೆಂದರೆ ಅದರಲ್ಲಿ ಆಹಾರ, ಪಾನೀಯಗಳ ಎಲ್ಲಾ ಸಾಮಗ್ರಿಗಳು ಬೇಕಲ್ಲವೆ. ಇದು ಈಶ್ವರೀಯ ಯಜ್ಞವಾಗಿದೆ, ಈಶ್ವರನು ಬಂದು ಈ ಜ್ಞಾನಯಜ್ಞದ ಸ್ಥಾಪನೆ ಮಾಡಿಸಿದ್ದಾರೆ. ನಿಮಗೆ ಓದಿಸುತ್ತಾರೆ- ಈ ಯಜ್ಞದ ಮಹಿಮೆ ಬಹಳ ಭಾರಿಯಾಗಿದೆ! ಈಶ್ವರೀಯ ಯಜ್ಞದಿಂದಲೇ ನಿಮ್ಮ ಶರೀರದ ನಿರ್ವಹಣೆಯಾಗುತ್ತದೆ. ಅವರು ತಮ್ಮನ್ನು ಅರ್ಪಣಮಯ ಎಂದು ತಿಳಿಯುತ್ತಾರೆ. ನಾವು ಟ್ರಸ್ಟಿಯಾಗಿದ್ದೇವೆ, ಎಲ್ಲರೂ ಈಶ್ವರನದ್ದಾಗಿದೆ, ನಾವು ಶಿವತಂದೆಯ ಯಜ್ಞದಿಂದ ಭೋಜನವನ್ನು ಸ್ವೀಕರಿಸುತ್ತೇವೆ. ಇದು ತಿಳುವಳಿಕೆಯ ಮಾತಲ್ಲವೆ. ಇಲ್ಲಂತೂ ಎಲ್ಲರೂ ಬಂದು ಕುಳಿತುಬಿಡುವಂತಿಲ್ಲ. ಇವರನ್ನು ನೋಡಿ- ಹೇಗೆ ಎಲ್ಲವನ್ನೂ ಸ್ವಾಹಾ ಮಾಡಿಬಿಡುತ್ತಾರೆ! ತಂದೆಯು ತಿಳಿಸುತ್ತಾರೆ- ಇವರು ಎಂತಹ ಕರ್ಮವನ್ನು ಮಾಡುವರೋ ಅದನ್ನು ನೋಡಿ ಅನ್ಯರೂ, ಬಹಳಷ್ಟು ಮಂದಿ ಸ್ವಾಹಾ ಮಾಡಿದರು, ಯಾರು ಯಾರು ಅರ್ಪಣೆಯಾದರು ಅವರು ತಮ್ಮ ಆಸ್ತಿಯನ್ನು ಪಡೆಯುತ್ತಾರೆ. ಬುದ್ಧಿಯಿಂದಲೂ ಸಹ ತಿಳಿಯಲಾಗುತ್ತದೆ- ಆತ್ಮವಂತೂ ಹೊರಟುಹೋಗುತ್ತದೆ, ಉಳಿದಂತೆ ಶರೀರವು ಇಲ್ಲಿಯೇ ಸಮಾಪ್ತಿಯಾಗಿಬಿಡುವುದು. ಇದು ಬೇಹದ್ದಿನ ಯಜ್ಞವಾಗಿದೆ, ಇದರಲ್ಲಿ ಎಲ್ಲವೂ ಸ್ವಾಹಾ ಆಗುತ್ತದೆ. ನೀವು ಮಕ್ಕಳಿಗೆ ತಿಳಿಸಲಾಗಿದೆ- ಹೇಗೆ ಬುದ್ಧಿಯಿಂದ ಸ್ವಾಹಾ ಆಗಿ ನಷ್ಟಮೋಹ ಆಗುವುದು ಎಂದು. ಇದೂ ಸಹ ನಿಮಗೆ ತಿಳಿದಿದೆ- ಇಲ್ಲಿನ ಸಾಮಗ್ರಿಗಳೆಲ್ಲವೂ ಬೂದಿಯಾಗಲಿದೆ. ಎಷ್ಟು ದೊಡ್ಡಯಜ್ಞವಾಗಿದೆ! ಇದರ ನಂತರ ಸತ್ಯಯುಗದಲ್ಲಿ ಯಾವುದೇ ಯಜ್ಞವನ್ನು ರಚಿಸಲಾಗುವುದಿಲ್ಲ. ಯಾವುದೇ ಉಪದ್ರವಗಳು ಆಗುವುದಿಲ್ಲ. ಈ ಭಕ್ತಿಮಾರ್ಗದ ಅನೇಕ ಯಜ್ಞಗಳೆಲ್ಲವೂ ಸಮಾಪ್ತಿ ಆಗಿಬಿಡುತ್ತವೆ. ಜ್ಞಾನಸಾಗರನು ಒಬ್ಬರೇ ಭಗವಂತನಾಗಿದ್ದಾರೆ, ಅವರೇ ಮನುಷ್ಯಸೃಷ್ಟಿಯ ಬೀಜರೂಪ, ಸತ್ಯ, ಚೈತನ್ಯವಾಗಿದ್ದಾರೆ. ಶರೀರವಂತೂ ಜಡವಾಗಿದೆ. ಆತ್ಮವೇ ಚೈತನ್ಯವಾಗಿದೆ. ಅವರು ಜ್ಞಾನಸಾಗರನಾಗಿದ್ದಾರೆ, ನೀವು ಮಕ್ಕಳಿಗೆ ಕುಳಿತು ಓದಿಸುತ್ತಾರೆ. ಮನುಷ್ಯರು ಕೇವಲ ಹಾಡುತ್ತಿರುತ್ತಾರೆ ಮತ್ತು ನಿಮಗೆ ತಂದೆಯ ಪೂರ್ಣಜ್ಞಾನವನ್ನು ತಿಳಿಸುತ್ತಿದ್ದಾರೆ. ಜ್ಞಾನವೇನೂ ಬಹಳಷ್ಟಿಲ್ಲ, ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ತಿಳಿಸಬೇಕಾಗಿದೆ.

ಇಲ್ಲಿ ಸ್ವಯಂ ತಂದೆಯೇ ನಿಮಗೆ ಓದಿಸುತ್ತಿದ್ದಾರೆ, ತಿಳಿಸುತ್ತಾರೆ- ನಾನು ಸಾಧಾರಣ ಮನುಷ್ಯನ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಭಗೀರಥನು ಪ್ರಸಿದ್ಧನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಮನುಷ್ಯನ ತನುವಿನಲ್ಲಿಯೇ ತಂದೆಯು ಬರುತ್ತಾರಲ್ಲವೆ. ಶಿವನೆಂದು ಅವರದು ಒಂದೇ ಹೆಸರು ನಡೆದುಬರುತ್ತದೆ. ಮತ್ತೆಲ್ಲರ ಹೆಸರುಗಳು ಬದಲಾಗುತ್ತದೆ ಆದರೆ ಇವರ ಹೆಸರು ಬದಲಾಗುವುದಿಲ್ಲ. ಆದರೆ ಭಕ್ತಿಯಲ್ಲಿ ಅನೇಕ ಹೆಸರುಗಳನ್ನಿಟ್ಟಿದ್ದಾರೆ, ಇಲ್ಲಂತೂ ಶಿವತಂದೆಯಿದ್ದಾರೆ. ಶಿವನು ಕಲ್ಯಾಣಕಾರಿಯೆಂದೂ ಹೇಳುತ್ತಾರೆ. ಭಗವಂತನೇ ಬಂದು ಹೊಸ ಪ್ರಪಂಚ ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆ ಅಂದಮೇಲೆ ಕಲ್ಯಾಣಕಾರಿಯಾದರಲ್ಲವೆ. ಭಾರತದಲ್ಲಿ ಸ್ವರ್ಗವಿತ್ತು, ಈಗ ನರಕವಾಗಿದೆ. ಈಗ ಪುನಃ ಸ್ವರ್ಗವಾಗುವುದು- ಇದಕ್ಕೆ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿಯೇ ತಂದೆಯು ಅಂಬಿಗನಾಗಿ ನಿಮ್ಮನ್ನು ಈ ತೀರದಿಂದ ಆ ತೀರಕ್ಕೆ ಕರೆದುಕೊಂಡು ಹೋಗುತ್ತಾರೆ. ಇದು ಹಳೆಯ, ದುಃಖದ ಪ್ರಪಂಚವಾಗಿದೆ, ಇದರ ನಂತರ ನಾಟಕದನುಸಾರ ಅವಶ್ಯವಾಗಿ ಹೊಸಪ್ರಪಂಚವಾಗುವುದು. ಇದಕ್ಕಾಗಿಯೇ ನೀವೀಗ ಪುರುಷಾರ್ಥ ಮಾಡುತ್ತೀರಿ. ತಂದೆಯ ನೆನಪು ಪದೇ-ಪದೇ ಮರೆತುಹೋಗುತ್ತದೆ, ಇದರಲ್ಲಿಯೇ ಪರಿಶ್ರಮವಿದೆ. ಬಾಕಿ ನಿಮ್ಮಿಂದ ಯಾವ ವಿಕರ್ಮಗಳಾಗಿವೆಯೋ ಅದರ ಶಿಕ್ಷೆಯನ್ನು ಕರ್ಮಭೋಗದ ಲೆಕ್ಕದಲ್ಲಿ ಭೋಗಿಸಲೇಬೇಕಾಗುತ್ತದೆ. ಇದನ್ನು ಅಂತ್ಯದವರೆಗೂ ಅನುಭವಿಸಲೇಬೇಕಾಗಿದೆ. ಇದರಲ್ಲಿ ಕ್ಷಮೆ ಸಿಗುವುದಿಲ್ಲ. ಬಾಬಾ ಕ್ಷಮಿಸಿ ಎಂದಲ್ಲ. ನಾಟಕದನುಸಾರ ಎಲ್ಲವೂ ಆಗುತ್ತದೆ. ಕ್ಷಮೆ ಇತ್ಯಾದಿಯೇನೂ ಸಿಗುವುದಿಲ್ಲ. ಲೆಕ್ಕಾಚಾರಗಳನ್ನು ಮುಗಿಸಲೇಬೇಕಾಗಿದೆ. ತಮೋಪ್ರಧಾನ, ಸತೋಪ್ರಧಾನರಾಗಬೇಕಾಗಿದೆ. ಇದಕ್ಕಾಗಿ ಶ್ರೀಮತವು ಸಿಗುತ್ತದೆ. ಶ್ರೇಷ್ಠಾತಿಶ್ರೇಷ್ಠ ತಂದೆಯ ಶ್ರೀಮತದಿಂದ ನೀವು ಶ್ರೇಷ್ಠರಾಗುತ್ತೀರಿ, ಶ್ರೇಷ್ಠಾತಿಶ್ರೇಷ್ಠ ತಂದೆಯು ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತಾರೆ. ನೀವೀಗ ಆಗುತ್ತಿದ್ದೀರಿ. ತಂದೆಯು ಕಲ್ಪ-ಕಲ್ಪವೂ ಬಂದು ನಮಗೆ ಓದಿಸುತ್ತಾರೆ, ಅದರ ಪ್ರಾಲಬ್ಧವು ಅರ್ಧಕಲ್ಪಕ್ಕಾಗಿ ಸಿಗುತ್ತದೆ ಎಂದು ನಿಮಗೆ ಈಗ ಸ್ಮೃತಿ ಬಂದಿದೆ. ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದರ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ಕಲ್ಪ-ಕಲ್ಪವು ತಂದೆಯು ಬಂದು ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂದು ತಿಳಿಸುತ್ತಾರೆ. ನಿಮ್ಮ ಕರ್ತವ್ಯವು ಓದುವುದು ಮತ್ತು ಪವಿತ್ರರಾಗುವುದಾಗಿದೆ. ಯೋಗದಲ್ಲಿರಬೇಕಾಗಿದೆ. ತಂದೆಯ ಮಕ್ಕಳಾಗಿ ಪವಿತ್ರರಾಗದಿದ್ದರೆ ಒಂದಕ್ಕೆ ನೂರುಪಟ್ಟು ಶಿಕ್ಷೆಯಾಗಿಬಿಡುವುದು. ಹೆಸರೂ ಸಹ ಹಾಳಾಗುತ್ತದೆ, ಸದ್ಗುರುವಿನ ನಿಂಧಕರಿಗೆ ನೆಲೆಯಿಲ್ಲ ಎಂದು ಹಾಡುತ್ತಾರೆ. ಇವರು ಯಾರು? ಎಂಬುದು ಮನುಷ್ಯರಿಗೆ ತಿಳಿದಿಲ್ಲ. ಸತ್ಯತಂದೆಯು ಸದ್ಗುರು, ಸತ್ಯಶಿಕ್ಷಕರಾಗಿದ್ದಾರಲ್ಲವೆ. ನಿಮಗೆ ಅವರು ಓದಿಸುತ್ತಾರೆ. ಸತ್ಯಗುರುವೂ ಆಗಿದ್ದಾರೆ. ಹೇಗೆ ತಂದೆಯು ಜ್ಞಾನಸಾಗರನಾಗಿದ್ದಾರೆಯೋ ಹಾಗೆಯೇ ನೀವೂ ಸಹ ಮಾ||ಜ್ಞಾನಸಾಗರ ಆಗಿದ್ದೀರಲ್ಲವೆ. ತಂದೆಯಂತೂ ಸಂಪೂರ್ಣ ಜ್ಞಾನವನ್ನು ಕೊಟ್ಟಿದ್ದಾರೆ. ಕಲ್ಪದ ಹಿಂದೆ ಯಾರು ಎಷ್ಟು ಧಾರಣೆ ಮಾಡಿದ್ದರೋ ಅಷ್ಟೇ ಈಗಲೂ ಮಾಡುತ್ತಾರೆ ಅಂದಾಗ ಪುರುಷಾರ್ಥ ಮಾಡಬೇಕಾಗಿದೆ. ಕರ್ಮವಿಲ್ಲದೆ ಇರಲು ಸಾಧ್ಯವಿಲ್ಲ. ಎಷ್ಟಾದರೂ ಹಠಯೋಗ ಇತ್ಯಾದಿಗಳನ್ನು ಮಾಡಲಿ ಅದೂ ಕರ್ಮವೇ ಅಲ್ಲವೆ. ಜೀವನ ಸಂಭಾಲನೆಗಾಗಿ ಇದು ಒಂದು ವ್ಯವಹಾರವಾಗಿದೆ. ಹೆಸರು ಪ್ರಖ್ಯಾತವಾಗುತ್ತದೆ, ಹಣ ಬಹಳ ಸಿಗುತ್ತದೆ. ನೀರಿನ ಮೇಲೆ, ಬೆಂಕಿಯ ಮೇಲೆ ನಡೆದಾಡುತ್ತಾರೆ. ಕೇವಲ ಹಾರುವುದಿಲ್ಲವಷ್ಟೇ. ಅದಕ್ಕಾಗಿ ಪೆಟ್ರೋಲ್ ಇತ್ಯಾದಿ ಬೇಕಲ್ಲವೆ ಆದರೆ ಇದರಿಂದೇನೂ ಲಾಭವಿಲ್ಲ. ಪಾವನರಂತೂ ಆಗುವುದಿಲ್ಲ. ವಿಜ್ಞಾನದವರದೂ ಸ್ಪರ್ಧೆಯಾಗಿದೆ, ಅವರದು ಸೈನ್ಸ್ ನ ಸ್ಪರ್ಧೆ, ನಿಮ್ಮದು ಸೈಲೆನ್ಸ್ ನ ಸ್ಪರ್ಧೆಯಾಗಿದೆ. ಎಲ್ಲರೂ ಶಾಂತಿಯನ್ನೇ ಬಯಸುತ್ತಾರೆ. ತಂದೆಯು ತಿಳಿಸುತ್ತಾರೆ- ಶಾಂತಿಯಂತೂ ನಿಮ್ಮ ಸ್ವಧರ್ಮವಾಗಿದೆ, ತಮ್ಮನ್ನು ಆತ್ಮನೆಂದು ತಿಳಿಯಿರಿ, ಈಗ ನಮ್ಮ ಮನೆ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ಇದು ದುಃಖಧಾಮವಾಗಿದೆ, ನಾವು ಶಾಂತಿಧಾಮದಿಂದ ಮತ್ತೆ ಸುಖಧಾಮದಲ್ಲಿ ಬರುತ್ತೇವೆ. ಈ ದುಃಖಧಾಮವು ಸಮಾಪ್ತಿಯಾಗಲಿದೆ, ಇದನ್ನು ಚೆನ್ನಾಗಿ ಧಾರಣೆ ಮಾಡಿಕೊಂಡು ಅನ್ಯರಿಗೂ ಧಾರಣೆ ಮಾಡಿಸಬೇಕಾಗಿದೆ. ಇನ್ನು ಕೆಲವೇ ದಿನಗಳು ಉಳಿದಿವೆ, ಹೇಗೆ ಮನುಷ್ಯರು ಆ ವಿದ್ಯೆಯ ಮೂಲಕ ಶರೀರ ನಿರ್ವಹಣಾರ್ಥವಾಗಿ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಅದೃಷ್ಟವಂತ ಮಕ್ಕಳು ತಕ್ಷಣ ನಾವು ಯಾವ ವಿದ್ಯೆಯನ್ನು ಓದಬೇಕೆಂದು ನಿರ್ಣಯ ತೆಗೆದುಕೊಳ್ಳುತ್ತಾರೆ. ಆ ವಿದ್ಯೆಯಿಂದ ಏನು ಸಿಗುತ್ತದೆ ಮತ್ತು ಈ ವಿದ್ಯೆಯಿಂದ ಏನು ಸಿಗುತ್ತದೆ? ಈ ವಿದ್ಯೆಯಿಂದಂತೂ 21 ಜನ್ಮಗಳ ಪ್ರಾಲಬ್ಧವಾಗುತ್ತದೆ ಅಂದಮೇಲೆ ವಿಚಾರ ಮಾಡಬೇಕು- ನಾವು ಯಾವ ವಿದ್ಯೆಯನ್ನು ಓದಬೇಕಾಗಿದೆ? ಯಾರು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆಯೋ ಅವರು ಬೇಹದ್ದಿನ ವಿದ್ಯೆಯಲ್ಲಿ ತೊಡಗಿರುತ್ತಾರೆ. ಆದರೆ ನಾಟಕದ ಯೋಜನೆಯನುಸಾರ ಯಾರ ಅದೃಷ್ಟದಲ್ಲಿಲ್ಲವೋ ಅವರು ಆ ವಿದ್ಯೆಯಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತಾರೆ. ಈ ವಿದ್ಯೆಯನ್ನೂ ಓದುವುದಿಲ್ಲ. ನಮಗೆ ಬಿಡುವು ಸಿಗುವುದಿಲ್ಲವೆಂದು ಹೇಳುತ್ತಾರೆ, ಇದಕ್ಕೆ ತಂದೆಯು ಕೇಳುತ್ತಾರೆ- ಯಾವ ಜ್ಞಾನವು ಒಳ್ಳೆಯದು? ಅದರಿಂದೇನು ಸಿಗುತ್ತದೆ ಮತ್ತು ಇದರಿಂದೇನು ಸಿಗುತ್ತದೆ? ಹೇಳುತ್ತಾರೆ- ಬಾಬಾ, ಸ್ಥೂಲ ಲೌಕಿಕವಿದ್ಯೆಯಿಂದ ಏನು ಸಿಗುತ್ತದೆ, ಅಲ್ಪಸ್ವಲ್ಪ ಸಂಪಾದನೆ ಮಾಡುತ್ತೇವೆ, ಇಲ್ಲಂತೂ ಭಗವಂತನೇ ಓದಿಸುತ್ತಾರೆ. ನಾವು ಓದಿ ರಾಜ್ಯಪದವಿಯನ್ನು ಪಡೆಯಬೇಕಾಗಿದೆ. ಅಂದಮೇಲೆ ಯಾವ ಮಾತಿನಮೇಲೆ ಹೆಚ್ಚಿನ ಗಮನ ಕೊಡಬೇಕು? ಬಾಬಾ, ಆ ಕೋರ್ಸನ್ನು ಪೂರ್ಣಮಾಡಿ ನಂತರ ಬರುತ್ತೇವೆಂದು ಕೆಲವರು ಹೇಳುತ್ತಾರೆ. ಇವರ ಅದೃಷ್ಟದಲ್ಲಿಲ್ಲ ಎಂದು ತಂದೆಯು ತಿಳಿದುಕೊಳ್ಳುತ್ತಾರೆ. ಏನಾಗುವುದೆಂದು ಮುಂದೆ ಹೋದಂತೆ ನೋಡುತ್ತೀರಿ. ಶರೀರಗಳ ಮೇಲೆ ಯಾವುದೇ ಭರವಸೆಯಿಲ್ಲ ಆದ್ದರಿಂದ ಸತ್ಯ ಸಂಪಾದನೆಯಲ್ಲಿ ತೊಡಗಬೇಕೆಂದು ಅರ್ಥವಾಗುತ್ತದೆ. ಯಾರ ಅದೃಷ್ಟದಲ್ಲಿದೆಯೋ ಅವರೇ ತಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುತ್ತಾರೆ. ಈಗ ಒತ್ತುಕೊಟ್ಟು ಹೇಳಬೇಕಾಗಿದೆ, ನಾವಂತೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಂಡೇ ತೋರಿಸುತ್ತೇವೆ. ಬೇಹದ್ದಿನ ತಂದೆಯು ನಿಮಗೆ ರಾಜ್ಯಭಾಗ್ಯವನ್ನು ಕೊಡುತ್ತಾರೆ ಅಂದಮೇಲೆ ನಾವೇಕೆ ಈ ಒಂದು ಜನ್ಮದಲ್ಲಿ ಪವಿತ್ರರಾಗಬಾರದು. ಇಷ್ಟೊಂದುಮಂದಿ ಮಕ್ಕಳು ಪವಿತ್ರರಾಗಿದ್ದಾರೆ, ಸುಳ್ಳನ್ನು ಹೇಳುತ್ತಿಲ್ಲ, ಎಲ್ಲರೂ ಪುರುಷಾರ್ಥ ಮಾಡುತ್ತಿದ್ದಾರೆ, ಓದುತ್ತಿದ್ದಾರೆ ಆದರೂ ವಿಶ್ವಾಸವನ್ನಿಡುವುದಿಲ್ಲ. ಯಾವಾಗ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಬೇಕಾಗಿದೆಯೋ ಆಗಲೇ ಬೇಹದ್ದಿನ ತಂದೆಯು ಬರುವರು. ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ. ಇದು ಬಹಳ ಸ್ಪಷ್ಟವಾಗಿದೆ. ಅವಶ್ಯವಾಗಿ ಅದೇ ಸಮಯವಾಗಿದೆ. ಈಗ ಅನೇಕ ಧರ್ಮಗಳೂ ಇವೆ, ಒಂದು ಧರ್ಮವಿರುವುದೇ ಸತ್ಯಯುಗದಲ್ಲಿ. ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ. ನಿಮ್ಮಲ್ಲಿಯೂ ಕೆಲವರು ಇನ್ನೂ ನಿಶ್ಚಯ ಮಾಡಿಕೊಳ್ಳುತ್ತಿದ್ದಾರೆ. ಅರೆ! ನಿಶ್ಚಯ ಮಾಡಿಕೊಳ್ಳುವುದರಲ್ಲಿ ಸಮಯ ಹಿಡಿಸುತ್ತದೆಯೇ? ಶರೀರದ ಮೇಲೂ ಭರವಸೆಯಿಲ್ಲ, ಈ ಅವಕಾಶವನ್ನು ಕಳೆದುಕೊಳ್ಳಬಾರದು, ಯಾರ ಅದೃಷ್ಟದಲ್ಲಿಲ್ಲವೋ ಅವರಿಗೆ ಏನೂ ಬುದ್ಧಿಯಲ್ಲಿ ಬರುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಸತ್ಯಸಂಪಾದನೆ ಮಾಡಿ 21 ಜನ್ಮಗಳಿಗಾಗಿ ತಮ್ಮ ಅದೃಷ್ಟವನ್ನು ರೂಪಿಸಿಕೊಳ್ಳಬೇಕಾಗಿದೆ. ಶರೀರದ ಮೇಲೆ ಯಾವುದೇ ಭರವಸೆಯಿಲ್ಲ ಆದ್ದರಿಂದ ಅವಕಾಶವನ್ನು ಕಳೆದುಕೊಳ್ಳಬಾರದು.

2) ನಷ್ಟಮೋಹಿಗಳಾಗಿ ತಮ್ಮದೆಲ್ಲವನ್ನೂ ರುದ್ರಯಜ್ಞದಲ್ಲಿ ಸ್ವಾಹಾ ಮಾಡಬೇಕಾಗಿದೆ, ತಮ್ಮನ್ನೂ ಅರ್ಪಣೆ ಮಾಡಿ ಟ್ರಸ್ಟಿಯಾಗಿ ಸಂಭಾಲನೆ ಮಾಡಬೇಕಾಗಿದೆ. ಸಾಕಾರ ತಂದೆಯನ್ನು ಫಾಲೋ ಮಾಡಬೇಕಾಗಿದೆ.

ವರದಾನ:
ಈಶ್ವರೀಯ ನಶೆಯ ಮುಖಾಂತರ ಹಳೆಯ ಪ್ರಪಂಚವನ್ನು ಮರೆಯುವಂತಹ ಸರ್ವ ಪ್ರಾಪ್ತಿ ಸಂಪನ್ನ ಭವ

ಯಾವರೀತಿ ಆ ನಶೆಯು ಎಲ್ಲವನ್ನು ಮರೆಸಿಬಿಡುತ್ತದೆ, ಹಾಗೆಯೇ ಈ ಈಶ್ವರೀಯ ನಶೆ ದುಃಖದ ಪ್ರಪಂಚವನ್ನು ಸಹಜವಾಗಿ ಮರೆಸಿಬಿಡುತ್ತದೆ. ಆ ನಶೆಯಲ್ಲಂತೂ ಬಹಳ ನಷ್ಟವಾಗುತ್ತದೆ, ಅಧಿಕವಾಗಿ ಕುಡಿಯುವುದರಿಂದ ನಾಶವೇ ಆಗಿಬಿಡುತ್ತಾರೆ ಆದರೆ ಈ ನಶೆ ಅವಿನಾಶಿಯನ್ನಾಗಿ ಮಾಡಿಬಿಡುವುದು. ಯಾರು ಸದಾ ಈಶ್ವರೀಯ ನಶೆಯಲ್ಲಿ ಮಸ್ತಾರಾಗಿರುತ್ತಾರೆ ಅವರು ಸರ್ವ ಪ್ರಾಪ್ತಿ ಸಂಪನ್ನರಾಗಿಬಿಡುತ್ತಾರೆ. ಒಬ್ಬ ತಂದೆಯ ವಿನಹ ಬೇರೆಯಾರೂ ಇಲ್ಲ-ಈ ಸ್ಮೃತಿಯೆ ನಶೆ ಏರಿಸುತ್ತದೆ. ಇದೇ ಸ್ಮøತಿಯಿಂದ ಸಮರ್ಥತೆ ಬಂದುಬಿಡುವುದು.

ಸ್ಲೋಗನ್:
ಒಬ್ಬರಿನ್ನೊಬ್ಬರನ್ನು ಅನುಸರಿಸುವ ಬದಲು ತಂದೆಯನ್ನು ಅನುಕರಿಸಿ.

ಅವ್ಯಕ್ತ ಸೂಚನೆಗಳು- ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಅಂತರ್ಮುಖಿ ಆಗಿರುವವರು ಪ್ರತಿ ಜ್ಞಾನದ ರತ್ನಗಳ ಗುಹ್ಯತೆಯಲ್ಲಿ ಹೋಗಬಹುದು. ಜ್ಞಾನದ ಪ್ರತಿಯೊಂದು ಪಾಯಿಂಟ್ ನ ರಹಸ್ಯ ಏನಾಗಿದೆ ಹಾಗೂ ಯಾವ ಸಮಯ ಯಾವ ವಿಧಿಯಲ್ಲಿ ಅದನ್ನು ಕಾರ್ಯದಲ್ಲಿ ಅಥವಾ ಸೇವೆಯಲ್ಲಿ ತರಬೇಕು, ಈ ರೀತಿ ಅದರ ಮೇಲೆ ಮನನ ಮಾಡುತ್ತಾ ಆ ರಹಸ್ಯದ ರಸದಲ್ಲಿ ಹೊರಟುಹೋಗಿ, ಆಗ ನಶೆಯ ಅನುಭವ ಮಾಡುವಿರಿ.