18.08.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಹೇಗೆ ತಂದೆಯು ಮಾರ್ಗದರ್ಶಕರಾಗಿದ್ದಾರೆ ಹಾಗೆಯೇ ಮಾರ್ಗದರ್ಶಕರಾಗಿ ಎಲ್ಲರಿಗೆ ಮನೆಯ ಮಾರ್ಗವನ್ನು ತಿಳಿಸಿ, ಅಂಧರಿಗೆ ಊರುಗೋಲಾಗಿ ಬಿಡಿ”.

ಪ್ರಶ್ನೆ:
ಈ ಮಾಡಿ-ಮಾಡಲ್ಪಟ್ಟ ಅನಾದಿ ನಾಟಕದ ರಹಸ್ಯ ಯಾವುದಾಗಿದೆ? ಅದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ.

ಉತ್ತರ:
ಇದು ಮಾಡಿ-ಮಾಡಲ್ಪಟ್ಟ ಅನಾದಿ ನಾಟಕವಾಗಿದೆ, ಇದರಲ್ಲಿ ಯಾವ ಪಾತ್ರಧಾರಿಯೂ ಸಹ ಬಂದು ಸೇರ್ಪಡೆಯಾಗಲು ಸಾಧ್ಯವಿಲ್ಲ ಅಥವಾ ಯಾರೂ ಕಡಿಮೆಯಾಗಲೂ ಸಾಧ್ಯವಿಲ್ಲ. ಯಾರಿಗೂ ಮೋಕ್ಷವು ಸಿಗುವುದಿಲ್ಲ. ನಾವು ಈ ಆವಾಗಮನ (ಜನನ-ಮರಣ)ದ ಚಕ್ರದಲ್ಲಿ ಬರುವುದೇ ಇಲ್ಲ ಎಂದು ಯಾರಾದರೂ ಹೇಳುವುದಾದರೆ ಅವರಿಗಾಗಿ ತಂದೆಯು ತಿಳಿಸುತ್ತಾರೆ - ಹಾ! ಸ್ವಲ್ಪ ಸಮಯಕ್ಕಾಗಿ ಬರದೇ ಇರಬಹುದು ಆದರೆ ಪಾತ್ರದಿಂದ ಯಾರೂ ಮುಕ್ತರಾಗಲು ಸಾಧ್ಯವಿಲ್ಲ. ನಾಟಕದ ಈ ರಹಸ್ಯವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ.

ಓಂ ಶಾಂತಿ.
ಭೋಲಾನಾಥನೆಂದು ಯಾರಿಗೆ ಹೇಳಲಾಗುತ್ತದೆ ಎಂಬುದನ್ನು ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ. ನೀವು ಸಂಗಮಯುಗೀ ಮಕ್ಕಳೇ ತಿಳಿದುಕೊಳ್ಳುತ್ತೀರಿ, ಕಲಿಯುಗೀ ಮನುಷ್ಯರು ಅಂಶ ಮಾತ್ರದಷ್ಟೂ ತಿಳಿದುಕೊಂಡಿಲ್ಲ. ಜ್ಞಾನಸಾಗರನು ಒಬ್ಬ ತಂದೆಯಾಗಿದ್ದಾರೆ, ಅವರೇ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ, ತಮ್ಮ ಪರಿಚಯವನ್ನು ಕೊಡುತ್ತಾರೆ. ನೀವು ಮಕ್ಕಳು ಈಗ ತಿಳಿದುಕೊಳ್ಳುತ್ತೀರಿ, ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ. ತಂದೆಯು ತಿಳಿಸುತ್ತಾರೆ - ನಾನೇ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ, ಬೇಹದ್ದಿನ ಆಸ್ತಿಯನ್ನು ಕೊಡುತ್ತೇನೆ, ಅದನ್ನು ನೀವೀಗ ತೆಗೆದುಕೊಳ್ಳುತ್ತಿದ್ದೀರಿ. ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂದು ನಿಮಗೆ ತಿಳಿದಿದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ಯಾವುದೇ ಪಾತ್ರಧಾರಿಯೂ ಸಹ ಮಧ್ಯದಲ್ಲಿ ಸೇರ್ಪಡೆಯಾಗಲೂ ಸಾಧ್ಯವಿಲ್ಲ ಅಥವಾ ಕಡಿಮೆಯಾಗಲೂ ಸಾಧ್ಯವಿಲ್ಲ. ಎಲ್ಲರಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ, ಯಾರೂ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ಯಾರ್ಯಾರು ಯಾವ-ಯಾವ ಧರ್ಮದವರಿದ್ದಾರೆಯೋ ಮತ್ತೆ ಅದೇ ಧರ್ಮದಲ್ಲಿ ಹೋಗುವರು. ಬೌದ್ಧರು, ಕ್ರಿಶ್ಚಿಯನ್ ಮೊದಲಾದವರು ನಾವು ಸ್ವರ್ಗದಲ್ಲಿ ಹೋಗಬೇಕೆಂದು ಇಚ್ಛಿಸಿದರೂ ಸಹ ಅವರು ಹೋಗಲು ಸಾಧ್ಯವಿಲ್ಲ. ಯಾವಾಗ ಅವರ ಧರ್ಮ ಸ್ಥಾಪಕರು ಬರುವರೋ ಆಗಲೇ ಅವರ ಧರ್ಮವಿರುವುದು. ಇದು ನಿಮ್ಮ ಬುದ್ಧಿಯಲ್ಲಿದೆ - ಇಡೀ ಪ್ರಪಂಚದ ಮನುಷ್ಯಾತ್ಮರು ಈ ಸಮಯದಲ್ಲಿ ನಾಸ್ತಿಕರಾಗಿದ್ದಾರೆ ಅರ್ಥಾತ್ ಬೇಹದ್ದಿನ ತಂದೆಯನ್ನು ತಿಳಿಯದಿರುವವರಾಗಿದ್ದಾರೆ. ಮನುಷ್ಯರೇ ಅರಿತುಕೊಳ್ಳುವರಲ್ಲವೆ. ಈ ನಾಟಕ ಶಾಲೆಯು ಮನುಷ್ಯರದ್ದಾಗಿದೆ, ಪ್ರತಿಯೊಂದು ಆತ್ಮವು ಪಾತ್ರವನ್ನಭಿನಯಿಸಲು ನಿರ್ವಾಣಧಾಮದಿಂದ ಬರುತ್ತದೆ ಮತ್ತೆ ನಿರ್ವಾಣ ಧಾಮದಲ್ಲಿಯೇ ಹೋಗಲು ಪುರುಷಾರ್ಥ ಮಾಡುತ್ತದೆ. ಬುದ್ಧನು ನಿರ್ವಾಣಗೈದರೆಂದು ಹೇಳುತ್ತಾರೆ, ಈಗ ಬುದ್ಧನ ಶರೀರವಂತು ಹೋಗಲಿಲ್ಲ, ಆತ್ಮವು ಹೋಯಿತು. ಆದರೆ ತಂದೆಯು ತಿಳಿಸುತ್ತಾರೆ - ವಾಸ್ತವದಲ್ಲಿ ಯಾರೂ ಹೋಗುವುದಿಲ್ಲ. ನಾಟಕದಿಂದ ಯಾರೊಬ್ಬರೂ ಬಿಡುಗಡೆಯಾಗಲು ಸಾಧ್ಯವಿಲ್ಲ ಅಂದರೆ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಕೆಲ ಮನುಷ್ಯರು ಮೋಕ್ಷವು ಸಿಗುತ್ತದೆಯೆಂದು ತಿಳಿಯುತ್ತಾರೆ ಆದ್ದರಿಂದ ಪುರುಷಾರ್ಥ ಮಾಡುತ್ತಿರುತ್ತಾರೆ. ಹೇಗೆ ಜೈನರು ಪುರುಷಾರ್ಥ ಮಾಡುತ್ತಿರುತ್ತಾರೆ, ಅವರಿಗೆ ತಮ್ಮದೇ ಆದ ರೀತಿ-ಪದ್ಧತಿಗಳಿವೆ. ತಮ್ಮ ಗುರುಗಳಿದ್ದಾರೆ, ಅವರ ಮತವನ್ನು ಪಾಲಿಸುತ್ತಾರೆ ಬಾಕಿ ಯಾರಿಗೂ ಮೋಕ್ಷವು ಸಿಗುವುದಿಲ್ಲ. ನೀವಂತೂ ತಿಳಿದುಕೊಂಡಿದ್ದೀರಿ - ನಾವು ಈ ನಾಟಕದಲ್ಲಿ ಪಾತ್ರಧಾರಿಗಳಾಗಿದ್ದೇವೆ, ಯಾವಾಗ ಬಂದೆವು ಮತ್ತೆ ಹೇಗೆ ಹೋಗುತ್ತೇವೆಂದು ಯಾರಿಗೂ ತಿಳಿದಿಲ್ಲ. ಇದನ್ನು ಪ್ರಾಣಿಗಳಂತೂ ತಿಳಿದುಕೊಳ್ಳುವುದಿಲ್ಲ ಅಲ್ಲವೆ. ನಾವು ಪಾತ್ರಧಾರಿಗಳು ಎಂಬ ಮಾತನ್ನು ಮನುಷ್ಯರೇ ಹೇಳುತ್ತಾರೆ. ಇದು ಕರ್ಮ ಕ್ಷೇತ್ರವಾಗಿದೆ, ಇಲ್ಲಿಯೇ ಆತ್ಮಗಳಿದ್ದಾರೆ. ಅದಕ್ಕೆ ಕರ್ಮ ಕ್ಷೇತ್ರವೆನ್ನುವುದಿಲ್ಲ, ಅದು ನಿರಾಕಾರಿ ಪ್ರಪಂಚವಾಗಿದೆ. ಅಲ್ಲಿ ಯಾವುದೇ ಪಾತ್ರವಿಲ್ಲ, ಆಟ-ಪಾಠವಿಲ್ಲ. ಆ ನಿರಾಕಾರಿ ಪ್ರಪಂಚದಿಂದ ಸಾಕಾರಿ ಪ್ರಪಂಚದಲ್ಲಿ ಪಾತ್ರವನ್ನಭಿನಯಿಸಲು ಬರುತ್ತೀರಿ. ಅದು ಮತ್ತೆ ಪುನರಾವರ್ತನೆಯಾಗುತ್ತಾ ಇರುತ್ತದೆ, ಎಂದೂ ಪ್ರಳಯವಾಗುವುದಿಲ್ಲ. ಮಹಾಭಾರತ ಯುದ್ಧದಲ್ಲಿ ಯಾದವರು ಮತ್ತು ಕೌರವರು ಮರಣ ಹೊಂದಿದರು, ಕೇವಲ ಐದು ಜನ ಪಾಂಡವರು ಉಳಿದರು, ಅವರೂ ಸಹ ಪರ್ವತಗಳ ಮೇಲೆ ಕರಗಿ ಹೋದರೆಂದು ಶಾಸ್ತ್ರಗಳಲ್ಲಿ ತೋರಿಸುತ್ತಾರೆ ಅಂದಮೇಲೆ ಮತ್ತೇನೂ ಉಳಿಯಲೇ ಇಲ್ಲ, ಇದರಿಂದ ಪ್ರಳಯವಾಯಿತೆಂದು ಅವರು ತಿಳಿಯುತ್ತಾರೆ. ಇವೆಲ್ಲಾ ಮಾತುಗಳನ್ನು ಕುಳಿತು ಬರೆದಿದ್ದಾರೆ ಮತ್ತು ಸಮುದ್ರದಲ್ಲಿ ಆಲದ ಎಲೆಯ ಮೇಲೆ ಒಂದು ಮಗು ತನ್ನ ಬೆರಳನ್ನು ಚೀಪುತ್ತಾ ತೇಲಿ ಬಂದಿತೆಂದು ತೋರಿಸುತ್ತಾರೆ. ಇದರಿಂದ ಮತ್ತೆ ಪ್ರಪಂಚವು ಹೇಗೆ ವೃದ್ಧಿಯಾಗುವುದು! ಮನುಷ್ಯರು ಏನನ್ನು ಕೇಳುವರೋ ಅದನ್ನೇ ಸತ್ಯ-ಸತ್ಯವೆನ್ನುತ್ತಿರುತ್ತಾರೆ. ನೀವು ಮಕ್ಕಳೀಗ ತಿಳಿದುಕೊಂಡಿದ್ದೀರಿ - ಶಾಸ್ತ್ರಗಳಲ್ಲಿಯೂ ಏನೇನನ್ನು ಬರೆದು ಬಿಟ್ಟಿದ್ದಾರೆ! ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ, ಭಕ್ತರಿಗೆ ಫಲವನ್ನು ನೀಡುವವರು ಒಬ್ಬ ಭಗವಂತ ತಂದೆಯೇ ಆಗಿದ್ದಾರೆ. ಕೆಲವರು ಮುಕ್ತಿಯಲ್ಲಿ, ಇನ್ನೂ ಕೆಲವರು ಜೀವನ್ಮುಕ್ತಿಯಲ್ಲಿ ಹೋಗುತ್ತಾರೆ. ಪ್ರತಿಯೊಬ್ಬ ಪಾತ್ರಧಾರಿ ಆತ್ಮನ ಪಾತ್ರವು ಯಾವಾಗ ಇರುವುದೋ ಆಗ ಮತ್ತೆ ಬರುತ್ತಾರೆ. ಈ ಡ್ರಾಮಾದ ರಹಸ್ಯವನ್ನು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ನಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲವೆಂದು ಹೇಳುತ್ತಾರೆ. ನಾಟಕದ ಪಾತ್ರಧಾರಿಗಳಾಗಿಯೂ ನಾಟಕದ ಆದಿ-ಮಧ್ಯ-ಅಂತ್ಯದ ಕಾಲಾವಧಿಯನ್ನೇ ತಿಳಿದುಕೊಂಡಿಲ್ಲವೆಂದರೆ ತಿಳುವಳಿಕೆ ಹೀನರೆಂದು ಹೇಳಲಾಗುತ್ತದೆಯಲ್ಲವೆ. ತಿಳಿಸಿದರೂ ಸಹ ತಿಳಿದುಕೊಳ್ಳುವುದಿಲ್ಲ. 84 ಲಕ್ಷ ಜನ್ಮಗಳೆಂದು ತಿಳಿದುಕೊಂಡಿರುವ ಕಾರಣ ಇದರ ಕಾಲಾವಧಿಯೂ ಸಹ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ.

ನೀವೀಗ ತಿಳಿದುಕೊಳ್ಳುತ್ತೀರಿ - ಬಾಬಾ, ನಾವು ತಮ್ಮಿಂದ ಕಲ್ಪ-ಕಲ್ಪವೂ ಬಂದು ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. 5000 ವರ್ಷಗಳ ಮೊದಲೂ ಸಹ ಬೇಹದ್ದಿನ ಆಸ್ತಿಯನ್ನು ಪಡೆಯಲು ತಮ್ಮೊಂದಿಗೆ ಮಿಲನ ಮಾಡಿದ್ದೆವು. ಯಥಾ ರಾಜ-ರಾಣಿ ತಥಾ ಪ್ರಜೆಗಳೆಲ್ಲರೂ ವಿಶ್ವದ ಮಾಲೀಕರಾಗುತ್ತಾರೆ. ಪ್ರಜೆಗಳೂ ಸಹ ಹೇಳುತ್ತಾರೆ - ನಾವು ವಿಶ್ವದ ಮಾಲೀಕರಾಗುತ್ತೇವೆ. ನೀವು ಯಾವಾಗ ವಿಶ್ವದ ಮಾಲೀಕರಾಗಿದ್ದಿರಿ, ಆ ಸಮಯದಲ್ಲಿ ಚಂದ್ರವಂಶಿಯ ರಾಜ್ಯವಾಗುವುದಿಲ್ಲ. ನೀವು ಮಕ್ಕಳು ಡ್ರಾಮಾದ ಪೂರ್ಣ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಮನುಷ್ಯರು ಭಕ್ತಿಮಾರ್ಗದಲ್ಲಿ ಯಾರ ಪೂಜೆಯನ್ನು ಮಾಡುತ್ತಾರೆ ಅವರನ್ನೂ ಸಹ ತಿಳಿದುಕೊಂಡಿಲ್ಲ. ಯಾರ ಭಕ್ತಿ ಮಾಡಲಾಗುತ್ತದೆಯೋ ಅವರ ಚರಿತ್ರೆಯನ್ನೂ ತಿಳಿದುಕೊಳ್ಳಬೇಕಾಗಿದೆ. ನೀವು ಮಕ್ಕಳೀಗ ಎಲ್ಲರ ಚರಿತ್ರೆಯನ್ನು ತಂದೆಯ ಮೂಲಕ ತಿಳಿದುಕೊಂಡಿದ್ದೀರಿ. ನೀವು ತಂದೆಯ ಮಕ್ಕಳಾಗಿದ್ದೀರಿ. ತಂದೆಯ ಚರಿತ್ರೆಯು ಗೊತ್ತಿದೆ. ಆ ತಂದೆಯು ಪತಿತ-ಪಾವನ, ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ. ನಿಮ್ಮನ್ನು ಪಾಂಡವರೆಂದು ಹೇಳಲಾಗುತ್ತದೆ. ನೀವು ಎಲ್ಲರಿಗೆ ಮಾರ್ಗದರ್ಶಕರಾಗಿದ್ದೀರಿ, ಎಲ್ಲರಿಗೆ ಮಾರ್ಗವನ್ನು ತಿಳಿಸಲು ಅಂಧರಿಗೆ ಊರುಗೋಲಾಗುತ್ತೀರಿ. ಹೇಗೆ ತಂದೆಯು ಮಾರ್ಗದರ್ಶಕರಾಗಿದ್ದಾರೆಯೋ ಅದೇರೀತಿ ನೀವು ಮಕ್ಕಳನ್ನೂ ಮಾಡಲಾಗುತ್ತದೆ. ಎಲ್ಲರಿಗೂ ಮಾರ್ಗವನ್ನು ತಿಳಿಸಬೇಕು. ನೀವು ಆತ್ಮರು ಅವರು ಪರಮಾತ್ಮನಾಗಿದ್ದಾರೆ, ಅವರಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಭಾರತದಲ್ಲಿ ಬೇಹದ್ದಿನ ರಾಜ್ಯವಿತ್ತು, ಈಗಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ಪಡೆಯುತ್ತೇವೆ ಅರ್ಥಾತ್ ಮನುಷ್ಯರಿಂದ ದೇವತೆಗಳಾಗುತ್ತೇವೆ. ನಾವೇ ದೇವತೆಗಳಾಗಿದ್ದೆವು ನಂತರ 84 ಜನ್ಮಗಳನ್ನು ತೆಗೆದುಕೊಂಡು ಶೂದ್ರರಾಗುತ್ತೇವೆ. ತಂದೆಯು ಬಂದು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಯಜ್ಞದಲ್ಲಿ ಅವಶ್ಯವಾಗಿ ಬ್ರಾಹ್ಮಣರು ಬೇಕು. ಇದು ಜ್ಞಾನ ಯಜ್ಞವಾಗಿದೆ, ಭಾರತದಲ್ಲಿ ಯಜ್ಞಗಳನ್ನು ಬಹಳ ರಚಿಸುತ್ತಾರೆ. ಇದರಲ್ಲಿ ಖಾಸಾಗಿ ಆರ್ಯಸಮಾಜಿಗಳು ಬಹಳ ಯಜ್ಞ ಮಾಡುತ್ತಾರೆ. ಈಗ ಇದು ರುದ್ರ ಜ್ಞಾನ ಯಜ್ಞವಾಗಿದೆ, ಇದರಲ್ಲಿ ಇಡೀ ಹಳೆಯ ಪ್ರಪಂಚವೇ ಸ್ವಾಹಾ ಆಗಲಿದೆ. ಈಗ ಬುದ್ಧಿಯಿಂದ ಕೆಲಸವನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಲಿಯುಗದಲ್ಲಂತೂ ಬಹಳ ಮನುಷ್ಯರಿದ್ದಾರೆ, ಇಷ್ಟು ಇಡೀ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಬಿಡುತ್ತದೆ. ಯಾವುದೇ ವಸ್ತು ಕೆಲಸಕ್ಕೆ ಬರುವುದಿಲ್ಲ. ಸತ್ಯಯುಗದಲ್ಲಂತೂ ನಂತರ ಎಲ್ಲವೂ ಹೊಸದಾಗುತ್ತದೆ. ಇಲ್ಲಂತೂ ಎಷ್ಟೊಂದು ಕೊಳಕಾಗಿದೆ. ಮನುಷ್ಯರು ಹೇಗೆ ಕೊಳಕಾಗಿರುತ್ತಾರೆ! ಧನವಂತರು ಒಳ್ಳೆಯ ದೊಡ್ಡ ಮನೆಗಳಲ್ಲಿರುತ್ತಾರೆ. ಬಡವರಂತೂ ಅಸಹಾಯಕರು ಕೊಳಕಿನಲ್ಲಿ, ಗುಡಿಸಿಲಿನಲ್ಲಿ ಇರುತ್ತಾರೆ. ಈಗ ಈ ಗುಡಿಸಲುಗಳನ್ನು ಧ್ವಂಸ ಮಾಡುತ್ತಿರುತ್ತಾರೆ. ಅವರಿಗೆ ಬೇರೆ ಜಾಗವನ್ನು ಕೊಟ್ಟು, ಆ ಸ್ಥಳವನ್ನು ಪುನಃ ಮಾರಾಟ ಮಾಡುತ್ತಿರುತ್ತಾರೆ ಇಲ್ಲವೆಂದರೆ ಬಲವಂತವಾಗಿ ಎಬ್ಬಿಸುತ್ತಾರೆ. ಬಡವರು, ದುಃಖಿಗಳು ಬಹಳ ಇದ್ದಾರೆ, ಯಾರು ಸುಖಿಗಳಿದ್ದಾರೆ ಅವರೂ ಸ್ಥಿರವಾದ ಸುಖಿಗಳಲ್ಲ. ಒಂದುವೇಳೆ ಸುಖವಿರುತ್ತದೆಯೆಂದರೆ ಏನು ಹೇಳುತ್ತಾರೆ - ಇದು ಕಾಗವಿಷ್ಟ ಸಮಾನವಾದ ಸುಖವೆಂದು ಹೇಳುತ್ತಾರೆ.

ಶಿವ ಭಗವಾನುವಾಚ, ನಾವು ಈ ಮಾತೆಯರ ಮೂಲಕ ಸ್ವರ್ಗದ ದ್ವಾರವನ್ನು ತೆರೆಯುತ್ತಿದ್ದೇವೆ. ಮಾತೆಯರ ಮೇಲೆ ಕಳಸವನ್ನಿಟ್ಟಿದ್ದೇವೆ. ಅವರು ನಂತರ ಎಲ್ಲರಿಗೆ ಜ್ಞಾನಾಮೃತವನ್ನು ಕುಡಿಸುತ್ತಾರೆ ಆದರೆ ನಿಮ್ಮದು ಪ್ರವೃತ್ತಿ ಮಾರ್ಗವಾಗಿದೆ. ನೀವು ಸತ್ಯ-ಸತ್ಯ ಬ್ರಾಹ್ಮಣರಾಗಿದ್ದೀರಿ ಅಂದಾಗ ಎಲ್ಲರಿಗೂ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳುತ್ತೀರಿ. ಈಗ ನೀವು ದೈವೀ ಸಂಪ್ರದಾಯದವರಾಗುತ್ತೀರಿ. ಆಸುರೀ ಸಂಪ್ರದಾಯ ಅರ್ಥಾತ್ ರಾವಣ ರಾಜ್ಯ. ಗಾಂಧೀಜಿಯವರು ರಾಮ ರಾಜ್ಯವಾಗಲಿ ಎಂದು ಹೇಳುತ್ತಿದ್ದರು. ಹೇಳುವುದೂ ಸಹ ಪತಿತ-ಪಾವನ ಬನ್ನಿ ಎಂದು ಆದರೆ ತಮ್ಮನ್ನು ಪತಿತರೆಂದು ತಿಳಿಯುತ್ತಾರೆಯೇ! ತಂದೆಯು ಮಕ್ಕಳನ್ನು ಜಾಗೃತ ಮಾಡುತ್ತಾರೆ, ನೀವು ಘೋರ ಅಂಧಕಾರದಿಂದ ಪ್ರಕಾಶತೆಯಲ್ಲಿ ಬಂದಿದ್ದೀರಿ. ಮನುಷ್ಯರಂತೂ ಗಂಗಾ ಸ್ನಾನ ಮಾಡುವುದರಿಂದ ಪಾವನರಾಗಿ ಬಿಡುತ್ತೇವೆಂದು ತಿಳಿಯುತ್ತಾರೆ. ಹಾಗೆಯೇ ಗಂಗೆಯಲ್ಲಿ ಹರಿದ್ವಾರದ ಕೊಳಕೆಲ್ಲವೂ ಬೀಳುತ್ತದೆ. ಅದೆಲ್ಲವನ್ನೂ ಮತ್ತೆ ತೋಟಗಳಿಗೆ ಬಿಡುತ್ತಾರೆ. ಸತ್ಯಯುಗದಲ್ಲಿ ಇಂತಹ ಕೆಲಸವಿರುವುದಿಲ್ಲ. ಅಲ್ಲಂತೂ ದವಸ-ಧಾನ್ಯಗಳು ಯಥೇಚ್ಛವಾಗಿರುತ್ತದೆ, ಹಣವನ್ನೇನೂ ಖರ್ಚು ಮಾಡಬೇಕಾಗಿಲ್ಲ. ಈ ಬಾಬಾರವರು ಅನುಭವಿಯಲ್ಲವೆ. ಮೊದಲು ದವಸ-ಧಾನ್ಯಗಳು ಎಷ್ಟು ಸಸ್ತಾ ಇತ್ತು, ಸತ್ಯಯುಗದಲ್ಲಿಯೂ ಸಹ ಬಹಳ ಕಡಿಮೆ ಜನಸಂಖ್ಯೆಯಿರುವ ಕಾರಣ ಪ್ರತಿಯೊಂದು ವಸ್ತುವು ಬಹಳ ಸಸ್ತಾ ಆಗಿರುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನೀವೀಗ ಪತಿತರಿಂದ ಪಾವನರಾಗಬೇಕಾಗಿದೆ. ಬಹಳ ಸಹಜ ಯುಕ್ತಿಯನ್ನು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಆತ್ಮದಲ್ಲಿ ತುಕ್ಕು ಬೀಳುವುದರಿಂದಲೇ ಅದು ಮೇಣದ ಸಮಾನವಾಗಿ ಬಿಟ್ಟಿದೆ. ಯಾರು ಪಾರಸ ಬುದ್ಧಿಯವರಿದ್ದರೋ ಅವರೇ ಈಗ ಕಲ್ಲು ಬುದ್ಧಿಯವರಾಗಿದ್ದಾರೆ. ನೀವು ಮಕ್ಕಳೀಗ ತಂದೆಯ ಬಳಿ ಕಲ್ಲಿನ ಸಮಾನರಿಂದ ಚಿನ್ನದ ಸಮಾನವಾಗಲು ಬಂದಿದ್ದೀರಿ. ಬೇಹದ್ದಿನ ತಂದೆಯು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಅದೂ ಸ್ವರ್ಗದ ಮಾಲೀಕರು. ಇದು ಕಲಿಯುಗೀ ಪ್ರಪಂಚ (ಕಬ್ಬಿಣದಂತಹ) ವಾಗಿದೆ. ತಂದೆಯು ಕುಳಿತು ಮಕ್ಕಳನ್ನು ಪಾರಸಪುರಿಯ ಮಾಲೀಕರನ್ನಾಗಿ ಮಾಡುತ್ತಾರೆ. ನಿಮಗೆ ತಿಳಿದಿದೆ - ಇಲ್ಲಿನ ಇಷ್ಟೊಂದು ಮಹಲು-ಮಹಡಿಗಳಾಗುವುದೂ ಕೆಲಸಕ್ಕೆ ಬರುವುದಿಲ್ಲ, ಎಲ್ಲವೂ ಸಮಾಪ್ತಿಯಾಗುವುದು. ಇಲ್ಲೇನಿದೆ! ಅಮೇರಿಕಾದವರ ಬಳಿ ಎಷ್ಟೊಂದು ಚಿನ್ನವಿದೆ, ಇಲ್ಲಂತೂ (ಭಾರತದಲ್ಲಿ) ಮಾತೆಯರ ಬಳಿಯಿರುವ ಅಲ್ಪಸ್ವಲ್ಪ ಚಿನ್ನವನ್ನೂ ಸಹ ತೆಗೆದುಕೊಳ್ಳುತ್ತಿರುತ್ತಾರೆ ಏಕೆಂದರೆ ಅವರಿಗೆ ಸಾಲಕ್ಕಾಗಿ ಚಿನ್ನವನ್ನು ಕೊಡಬೇಕಾಗಿದೆ. ಸತ್ಯಯುಗದಲ್ಲಂತೂ ನಿಮ್ಮ ಬಳಿ ಅಪಾರ ಚಿನ್ನವಿರುತ್ತದೆ. ಇಲ್ಲಿ ಕವಡೆಗಳ ಸಮಾನ ಅಲ್ಲಿ ರತ್ನಗಳಿರುತ್ತವೆ. ಇದಕ್ಕೆ ಕಬ್ಬಿಣದ ಸಮಾನ ಪ್ರಪಂಚವೆಂದು ಹೇಳಲಾಗುತ್ತದೆ. ಭಾರತವೇ ಅವಿನಾಶಿ ಖಂಡವಾಗಿದೆ, ಇದೆಂದೂ ವಿನಾಶವಾಗುವುದಿಲ್ಲ. ಭಾರತವು ಎಲ್ಲದಕ್ಕಿಂತ ಸರ್ವ ಶ್ರೇಷ್ಠವಾಗಿದೆ. ನೀವು ಮಾತ್ರವೇ ಇಡೀ ವಿಶ್ವದ ಉದ್ಧಾರ ಮಾಡುತ್ತೀರಿ. ನಿಮಗಾಗಿ ಖಂಡಿತ ಹೊಸ ಪ್ರಪಂಚವು ಬೇಕು. ಹಳೆಯ ಪ್ರಪಂಚದ ವಿನಾಶವಾಗಬೇಕು. ಇವು ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಶರೀರ ನಿರ್ವಹಣಾರ್ಥವಾಗಿ ಉದ್ಯೋಗ-ವ್ಯವಹಾರಗಳನ್ನೂ ಮಾಡಿರಿ, ಏನನ್ನೂ ಬಿಡಬೇಕಾಗಿಲ್ಲ. ತಂದೆಯು ತಿಳಿಸುತ್ತಾರೆ - ಎಲ್ಲವನ್ನೂ ಮಾಡುತ್ತಲೂ ನನ್ನನ್ನು ನೆನಪು ಮಾಡಿ. ಭಕ್ತಿಮಾರ್ಗದಲ್ಲಿಯೂ ಸಹ ನೀವು ಪ್ರಿಯತಮನಾದ ನನ್ನನ್ನು ನೆನಪು ಮಾಡುತ್ತಾ ಬಂದಿದ್ದೀರಿ - ಬಂದು ನಮ್ಮನ್ನು ಶ್ಯಾಮನಿಂದ ಸುಂದರರನ್ನಾಗಿ ಮಾಡಿ ಎಂದು. ಅವರಿಗೆ ಪ್ರಯಾಣಿಕನೆಂದು ಕರೆಯಲಾಗುತ್ತದೆ. ನೀವೆಲ್ಲರೂ ಪ್ರಯಾಣಿಕರಲ್ಲವೆ, ಅದು ನಿಮ್ಮ ಮನೆಯಾಗಿದೆ ಎಲ್ಲಿ ಎಲ್ಲಾ ಆತ್ಮಗಳೂ ಇರುತ್ತೀರಿ.

ನೀವು ಎಲ್ಲರನ್ನೂ ಜ್ಞಾನ ಚಿತೆಯ ಮೇಲೆ ಕುಳ್ಳರಿಸುತ್ತೀರಿ. ಎಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೋಗುವವರಿದ್ದಾರೆ ಮತ್ತೆ ಹೊಸದಾಗಿ ನೀವು ಸತ್ಯಯುಗದಲ್ಲಿ ಬರುತ್ತೀರಿ. ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು ಪವಿತ್ರರಾಗುತ್ತೀರಿ ಮತ್ತು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಮಾತೆಯರಿಗಾದರೂ ಬಿಡುವಿರುತ್ತದೆ. ಪುರುಷರ ಬುದ್ಧಿಯು ಉದ್ಯೋಗ-ವ್ಯವಹಾರಗಳ ಕಡೆ ಕಳೆಯುತ್ತಿರುತ್ತೀರಿ. ಆದ್ದರಿಂದ ತಂದೆಯು ಮಾತೆಯರ ಮೇಲೆ ಕಳಶವನ್ನಿಟ್ಟಿದ್ದಾರೆ. ಇಲ್ಲಂತೂ ಸ್ತ್ರೀಗೆ ಹೇಳುತ್ತಾರೆ - ಪತಿಯೇ ನಿಮ್ಮ ಈಶ್ವರ, ಗುರು, ಸರ್ವಸ್ವವೂ ಆಗಿದ್ದಾರೆ, ನೀವು ಅವರ ದಾಸಿಯಾಗಿದ್ದೀರಿ ಎಂದು. ಆದರೆ ಇಲ್ಲಿ ತಂದೆಯು ನೀವು ಮಾತೆಯರನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ! ನೀವು ನಾರಿಯರೇ ಭಾರತವನ್ನು ಉದ್ಧಾರ ಮಾಡುತ್ತೀರಿ. ಕೆಲಕೆಲವರು ತಂದೆಯೊಂದಿಗೆ ಈ ರೀತಿ ಕೇಳುತ್ತಾರೆ - ಆವಾಗಮನದ ಚಕ್ರದಿಂದ ಮುಕ್ತರಾಗಬಹುದೇ? ಇದಕ್ಕೆ ತಂದೆಯು ತಿಳಿಸುತ್ತಾರೆ - ಹೌದು, ಆದರೆ ಸ್ವಲ್ಪ ಸಮಯಕ್ಕಾಗಿ. ನೀವು ಮಕ್ಕಳಂತು ಆಲ್ರೌಂಡ್ ಆದಿಯಿಂದ ಅಂತ್ಯದವರೆಗೆ ಪಾತ್ರವನ್ನಭಿನಯಿಸುತ್ತೀರಿ. ಉಳಿದೆಲ್ಲರೂ ಮುಕ್ತಿಧಾಮದಲ್ಲಿರುತ್ತಾರೆ. ಅವರ ಪಾತ್ರವೇ ಕಡಿಮೆಯಿದೆ. ಅವರು ಸ್ವರ್ಗದಲ್ಲಂತೂ ಬರುವವರಲ್ಲ. ಆವಾಗಮನದ ಚಕ್ರದಿಂದ ಮೋಕ್ಷವು ಯಾರಿಗಿದೆ ಎಂದು ಹೇಳಬಹುದೆಂದರೆ ಯಾರು ಕೊನೆಯಲ್ಲಿ ಬರುವರು ಮತ್ತೆ ಸ್ವಲ್ಪ ಸಮಯಕ್ಕೆ ಹೊರಟು ಹೋಗುವರು. ಈ ಜ್ಞಾನ ಇತ್ಯಾದಿಗಳನ್ನಂತೂ ಹೇಳಲು ಸಾಧ್ಯವಿಲ್ಲ. ಯಾರು ಆದಿಯಿಂದ ಅಂತ್ಯದವರೆಗೆ ತಮ್ಮ ಪಾತ್ರವನ್ನಭಿನಯಿಸುವರೋ ಅವರೇ ತಿಳಿದುಕೊಳ್ಳುವರು. ಈ ಜ್ಞಾನವನ್ನು ಕೆಲವರು ಈ ರೀತಿ ಹೇಳುತ್ತಾರೆ - ನಮಗಂತೂ ಅದೇ ಇಷ್ಟವಾಗಿದೆ, ನಾವು ಪರಮಧಾಮದಲ್ಲಿಯೇ ಕುಳಿತಿರುತ್ತೇವೆ. ಆದರೆ ಇದು ಸಾಧ್ಯವೇ? ಡ್ರಾಮಾದಲ್ಲಿ ನಿಗಧಿಯಾಗಿದೆ, ಅವರು ಹೋಗಿ ಕೊನೆಯಲ್ಲಿ ಅವಶ್ಯವಾಗಿ ಬರುತ್ತಾರೆ. ಬಾಕಿ ಇಡೀ ಸಮಯ ಶಾಂತಿಧಾಮದಲ್ಲಿರುತ್ತಾರೆ. ಇದು ಬೇಹದ್ದಿನ ನಾಟಕವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸತ್ಯ-ಸತ್ಯ ಬ್ರಾಹ್ಮಣರಾಗಿ ಎಲ್ಲರಿಗೆ ಜ್ಞಾನಾಮೃತವನ್ನು ಕುಡಿಸಬೇಕಾಗಿದೆ. ಜ್ಞಾನ ಚಿತೆಯ ಮೇಲೆ ಕುಳ್ಳರಿಸಬೇಕಾಗಿದೆ.

2. ಶರೀರ ನಿರ್ವಹಣಾರ್ಥವಾಗಿ ಉದ್ಯೋಗ-ವ್ಯವಹಾರ ಇತ್ಯಾದಿಗಳೆಲ್ಲವನ್ನೂ ಮಾಡುತ್ತಾ ಪತಿತರಿಂದ ಪಾವನರಾಗಲು ತಂದೆಯ ನೆನಪಿನಲ್ಲಿರಬೇಕು ಮತ್ತು ಎಲ್ಲರಿಗೆ ತಂದೆಯ ನೆನಪು ತರಿಸಬೇಕಾಗಿದೆ.

ವರದಾನ:
ವಿಶೇಷತೆಗಳ ದಾನದ ಮೂಲಕ ಮಹಾನ್ ಆಗುವಂತಹ ಮಹಾದಾನಿ ಭವ.

ಜ್ಞಾನ ದಾನವನ್ನಂತೂ ಎಲ್ಲರೂ ಮಾಡುತ್ತಾರೆ ಆದರೆ ತಾವು ವಿಶೇಷ ಆತ್ಮರಿಗೆ ತಮ್ಮ ವಿಶೇಷತೆಗಳ ದಾನ ಮಾಡಬೇಕಾಗಿದೆ. ಯಾರೇ ನಿಮ್ಮ ಎದುರಿಗೆ ಬರಲಿ ಅವರಿಗೆ ನಿಮ್ಮಿಂದ ತಂದೆಯ ಸ್ನೇಹದ ಅನುಭವವಾಗಬೇಕು, ನಿಮ್ಮ ಚೆಹರೆಯಿಂದ ತಂದೆಯ ಚಿತ್ರ ಮತ್ತು ಚಲನೆಯಿಂದ ತಂದೆಯ ಚರಿತ್ರೆ ಕಂಡು ಬರಬೇಕು. ನಿಮ್ಮ ವಿಶೇಷತೆಗಳನ್ನು ನೋಡಿ ಅವರಿಗೆ ವಿಶೇಷ ಆತ್ಮಗಳಾಗುವ ಪ್ರೇರಣೆ ಪ್ರಾಪ್ತಿಯಾಗಬೇಕು, ಈ ರೀತಿಯ ಮಹಾದಾನಿ ಆಗಿ ಆಗ ಆದಿಯಿಂದ ಅಂತ್ಯದವರೆಗೆ, ಪೂಜ್ಯ ತನದಲ್ಲಿಯೂ ಮತ್ತು ಪೂಜಾರಿ ತನದಲ್ಲಿಯೂ ಮಹಾನ್ ಆಗಿ ಇರುವಿರಿ.

ಸ್ಲೋಗನ್:
ಸದಾ ಆತ್ಮ ಅಭಿಮಾನಿಯಾಗಿರುವಂತಹವರೇ ಎಲ್ಲರಿಗಿಂತಲು ದೊಡ್ಡ ಜ್ಞಾನಿಯಾಗಿದ್ದಾರೆ.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ಯಾರು ಸದಾ ತಂದೆಯ ನೆನಪಿನಲ್ಲಿ ಲವಲೀನರಾಗಿದ್ದು ನಾನು-ನನ್ನತನದ ತ್ಯಾಗ-ವೃತ್ತಿಯಲ್ಲಿರುತ್ತ, ಅವರಿಂದಲೇ ತಂದೆಯು ಕಾಣಿಸಿಕೊಳ್ಳುತ್ತಾರೆ. ನೀವು ಮಕ್ಕಳು ಜ್ಞಾನದ ಆಧಾರದಿಂದ ತಂದೆಯ ನೆನಪಿನಲ್ಲಿ ಸಮಾವೇಶವಾಗಿ ಬಿಡುತ್ತೀರೆಂದಾಗ ಈ ಸಮಾವೇಶವಾಗುವುದೇ ಲವಲೀನ ಸ್ಥಿತಿಯಾಗಿದೆ, ಯಾವಾಗ ಪ್ರೀತಿಯಲ್ಲಿ ಲೀನವಾಗುತ್ತೀರಿ ಅರ್ಥಾತ್ ಲಗನನಲ್ಲಿ ಮಗನರಾಗುತ್ತೀರಿ ಆಗ ತಂದೆ ಸಮಾನರಾಗಿ ಬಿಡುತ್ತೀರಿ.