18.10.26 Avyakt Bapdada
Kannada
Murli 02.02.2012 Om Shanti Madhuban
“ಈಗ ಸ್ಮೃತಿ ಸ್ವರೂಪದ
ಅನುಭವದ ಅಥಾರಿಟಿಯಾಗಿರಿ, ಜ್ವಾಲಾಮುಖಿ ಯೋಗದ ಮೂಲಕ ಎಲ್ಲರಿಗೂ ಲೈಟ್ ಮೈಟ್ನ ಕಿರಣಗಳ ಸಹಯೋಗ ಕೊಡಿ”
ಇಂದು ಬಾಪ್ದಾದಾರವರು
ತನ್ನ ಸನ್ಮುಖದ ಹಾಗೂ ನಾಲ್ಕೂ ಕಡೆಯ ತನ್ನ ಚಿಕ್ಕ ದಾದಾ ಸಂಸಾರ (ಪ್ರಪಂಚ) ವನ್ನು ನೋಡಿ
ಹರ್ಷಿತವಾಗುತ್ತಿದೆ ಏಕೆಂದರೆ ಈ ಪ್ರಪಂಚವು ಚಿಕ್ಕದಾಗಿದೆ ಆದರೆ ಅತಿ ಪ್ರಿಯವಾಗಿದೆ ಏಕೆಂದರೆ ಈ
ಸಂಸಾರದ ಒಂದೊಂದು ಆತ್ಮವು ಶ್ರೇಷ್ಠ ಆತ್ಮವಾಗಿದೆ. ಕೋಟಿಯಲ್ಲಿ ಕೆಲವು ಆತ್ಮರಾಗಿದ್ದಾರೆ. ತಂದೆಯ
ಆಸ್ತಿಯ ಅಧಿಕಾರಿ ಆತ್ಮರಾಗಿದ್ದಾರೆ. ಬಾಪ್ದಾದಾರವರು ಪ್ರತಿಯೊಂದು ಮಗುವನ್ನು ನೋಡಿ ಖುಷಿ
ಪಡುತ್ತಾರೆ - ಈ ಒಂದೊಂದು ಮಗು ರಾಜಾ ಮಗುವಾಗಿದೆ. ಬಾಪ್ದಾದಾರವರು ಪ್ರತಿಯೊಂದು ಮಗುವನ್ನು
ಸ್ವರಾಜ್ಯ ಅಧಿಕಾರಿ ಮತ್ತು ವಿಶ್ವ ರಾಜ್ಯ ಅಧಿಕಾರಿಯನ್ನಾಗಿ ಮಾಡಿದ್ದಾರೆ. ಈ ಸಮಯದಲ್ಲಿ ಎಲ್ಲರೂ
ಸ್ವರಾಜ್ಯ ಅಧಿಕಾರಿಗಳಾಗಿದ್ದೀರಿ ಅರ್ಥಾತ್ ಮನ-ಬುದ್ಧಿ, ಸಂಸ್ಕಾರ, ಕರ್ಮೇಂದ್ರಿಯಗಳ ರಾಜಾ
ಆಗಿದ್ದೀರಿ. ಕರ್ಮೇಂದ್ರಿಯಗಳಿಗೆ ವಶರಾಗಿಲ್ಲ. ಮನಸ್ಸಿಗೂ ಮಾಲೀಕರಾಗಿದ್ದೀರಿ ಅಂದಮೇಲೆ ಹಾಗೆಯೇ
ತಾವು ಪ್ರತಿಯೊಬ್ಬರೂ ತಮ್ಮನ್ನು ಮನಸ್ಸಿನ ಮಾಲೀಕ, ಸಂಸ್ಕಾರಕ್ಕೂ ಮಾಲೀಕರೆಂದು ತಿಳಿಯುತ್ತೀರಾ? ಈ
ರೀತಿಯಿರುವುದಿಲ್ಲವೆ - ಕೆಲವೊಮ್ಮೆ ಮನಸ್ಸಿನ ಮಾಲೀಕರಾಗಿರುತ್ತೇವೆ, ಅಥವಾ ಕೆಲವೊಮ್ಮೆ ಮನಸ್ಸು
ತಮ್ಮ ಮಾಲೀಕನಾಗುತ್ತದೆಯೇ! ಏಕೆಂದರೆ ಹೇಳುತ್ತೀರಿ - ನನ್ನ ಮನಸ್ಸು, ನಾನು ಮನಸ್ಸಲ್ಲ ಎಂದು
ಹೇಳುತ್ತೀರಿ. ಅಂದಮೇಲೆ ತಾವು ನನ್ನದರ ಮಾಲೀಕರಾದಿರಿ. ಪರಿಶೀಲಿಸಿ - ಕೆಲವೊಮ್ಮೆ ಮನಸ್ಸಂತು
ಮಾಲೀಕನಾಗುವುದಿಲ್ಲವೆ? ಏಕೆಂದರೆ ಈ ಸಮಯದಲ್ಲಿ ಬಾಪ್ದಾದಾರವರು ಪ್ರತಿಯೊಬ್ಬರನ್ನು ಸ್ವರಾಜ್ಯ
ಅಧಿಕಾರಿಯ ಸೀಟಿನ ಮೇಲೆ ಕೂರಿಸಿದ್ದಾರೆ. ಈಗಿನ ಸ್ವರಾಜ್ಯಧಾರಿಯಾಗಿದ್ದೀರಿ ಮತ್ತು ಭವಿಷ್ಯದ ತಮ್ಮ
ರಾಜ್ಯವಂತು ಇದ್ದೇ ಇದೆ. ಡಬಲ್ ರಾಜ್ಯದ ಅಧಿಕಾರಿಯಾಗಿದ್ದೀರಿ. ಬಾಪ್ದಾದಾರವರು ನೋಡುತ್ತಾರೆ -
ಪ್ರತಿಯೊಂದು ಮಗು ಸ್ವರಾಜ್ಯ ಅಧಿಕಾರಿಯಾಗುವುದರ ಜೊತೆ ಸ್ವಮಾನಧಾರಿಯೂ ಆಗಿದ್ದಾರೆ ಅಂದಾಗ ನಾನು
ಸ್ವಮಾನಧಾರಿ ಆತ್ಮನಾಗಿದ್ದೇನೆ, ಈ ಸ್ಮೃತಿಯಲ್ಲಿ ಕುಳಿತುಕೊಳ್ಳುತ್ತೀರೆಂದರೆ ನೋಡಿ, ತಮ್ಮ ಮುಂದೆ
ಎಷ್ಟೊಂದು ಸ್ವಮಾನದ ಲಿಸ್ಟ್ ಬರುತ್ತದೆ. ಅನೇಕ ಸ್ವಮಾನಗಳ ಮಾಲೆಯು ಮುಂದೆ ಬಂದು ಬಿಡುತ್ತದೆಯಲ್ಲವೆ!
ಬಾಪ್ದಾದಾರವರು ಮಕ್ಕಳಿಗೆ
ಸ್ವಮಾನಗಳ ಮಾಲೆಯನ್ನು ಪ್ರತಿಯೊಂದು ಮಗುವಿಗೂ ಹಾಕಿದ್ದಾರೆ. ಸ್ವಮಾನವನ್ನು ಕೇಳುತ್ತಲೇ ತಮ್ಮ
ಮುಂದೆಯೂ ಸಹ ತಮ್ಮ ಸ್ವಮಾನವು ಸ್ಮೃತಿಯಲ್ಲಿ ಬಂದಿತೆ! ನೆನಪು ಮಾಡಿಕೊಳ್ಳಿ, ಅನಾದಿ ಸ್ವರೂಪದಲ್ಲಿ
ತಮ್ಮ ಸ್ವಮಾನವು ಎಷ್ಟು ಶ್ರೇಷ್ಠವಾಗಿದೆ! ಅನಾದಿ ಸ್ವರೂಪದಲ್ಲಿ ತಲುಪಿದಿರಾ? ಪ್ರತಿಯೊಬ್ಬರ
ಸ್ವಮಾನವಿದೆ - ಒಂದಂತು ತಂದೆಯ ಜೊತೆ ಜೊತೆಯಿದೆ ಹೊಳೆಯುತ್ತಿರುವ ಆತ್ಮ, ತಂದೆಯ ಜೊತೆಯ ಕಾರಣ
ವಿಶೇಷವಾಗಿ ಹೊಳೆಯುತ್ತಿರುವಂತೆ ಕಂಡು ಬರುತ್ತಿದೆ. ನೋಡುತ್ತಿದ್ದೀರಾ? ಹೇಗೆ ಆಕಾಶದಲ್ಲಿಯೂ ಸಹ
ಇಲ್ಲಿ ಕೆಲವು ನಕ್ಷತ್ರಗಳು ವಿಶೇಷವಾಗಿ ಹೊಳೆಯುತ್ತದೆ, ಹಾಗೆಯೇ ತಂದೆಯು ಜೊತೆಯಿರುವ ಕಾರಣ
ಹೊಳೆಯುತ್ತಿರುವ ಆತ್ಮರಾಗಿದ್ದೀರಿ. ತಮ್ಮ ಅನಾದಿ ಸ್ವರೂಪವು ನೆನಪಿಗೆ ಬಂದಿತೆ? ಸೆಕೆಂಡಿನ ತಮ್ಮ
ಅನಾದಿ ಸ್ವರೂಪದಲ್ಲಿ ಸ್ಥಿತರಾಗಲು ಸಾಧ್ಯವೇ? ಈಗ ಒಂದು ಸೆಕೆಂಡಿನಲ್ಲಿ ಆ ಅನಾದಿ ಸ್ವರೂಪದಲ್ಲಿ
ಒಂದು ಸೆಕೆಂಡಿಗಾಗಿ ಸ್ಥಿತರಾಗಿ ಬಿಡಿ. ಎಷ್ಟು ನಶೆಯೇರುತ್ತದೆ! ಮುಂದುವರೆಯಿರಿ, ಈ ಸೃಷ್ಟಿಚಕ್ರದ
ಆದಿಯಲ್ಲಿ ಬಂದು ಬಿಟ್ಟಿರಾ! ಈ ಡ್ರಿಲ್ ಮಾಡಿ, ಸತ್ಯಯುಗದ ಆದಿಯ ತಮ್ಮ ಸ್ವರೂಪವನ್ನು ನೋಡಿ, ಎಷ್ಟು
ಶ್ರೇಷ್ಠ ಸುಖ ಸ್ವರೂಪವಾಗಿದೆ. ಎಷ್ಟು ಸರ್ವ ಪ್ರಾಪ್ತಿ ಸ್ವರೂಪವಾಗಿದೆ. ದುಃಖದ
ಹೆಸರು-ಚಿಹ್ನೆಯಿಲ್ಲ. ಪ್ರಕೃತಿ ಎಷ್ಟು ಸುಂದರ ಸತೋಗುಣಿಯಾಗಿದೆ. ತಮ್ಮ ದೇವತಾ ಸ್ವರೂಪವನ್ನು
ಅನುಭವ ಮಾಡಿ. ತಮ್ಮ ಸ್ವರೂಪವನ್ನು ನೋಡುತ್ತಿದ್ದೀರಾ? ಯಾರೇ ರಾಜನಾಗಿರಲಿ, ಮಹಾತ್ಮರಾಗಿರಲಿ, ನೇತಾ
ಆಗಿರಬಹುದು ಯಾರಾದರೂ ಇಂತಹ ಸರ್ವಪ್ರಾಪ್ತಿ ಸ್ವರೂಪರಾಗಿರುವುದನ್ನು ನೋಡಿದ್ದೀರಾ! ಅಂದಮೇಲೆ ಒಂದು
ಸೆಕೆಂಡಿಗಾಗಿ ತಮ್ಮ ದೇವತಾ ಸ್ವರೂಪದಲ್ಲಿ ಸ್ಥಿತರಾಗಿರಿ. ತಮ್ಮ ಸ್ವಮಾನದಲ್ಲಿ ಮಜಾ
ಬರುತ್ತದೆಯಲ್ಲವೆ! ಹಮ್ ಸೋ ದೇವತಾ (ನಾವೇ ದೇವತೆ)............. ಬಾಪ್ದಾದಾರವರು ಈ ಡ್ರಿಲ್
ಮಾಡಿಸುತ್ತಿದ್ದಾರೆ. ನಂತರ ಕೆಳಗೆ ಬನ್ನಿ, ಯಾವ ಯುಗವು ಬಂದಿತು? ದ್ವಾಪರದಲ್ಲಿಯೂ ತಮ್ಮ ಸ್ವಮಾನ
ಪೂಜ್ಯನದಾಗಿದೆ. ಪೂಜ್ಯ ಸ್ವರೂಪವಾಗಿದೆ. ತಮ್ಮ ಪೂಜ್ಯ ಸ್ವರೂಪವನ್ನು ನೋಡುತ್ತಿದ್ದೀರಾ? ಎಲ್ಲರೂ
ಎಷ್ಟು ಭಾವನೆಯಿಂದ ಕಾಯಿದೆಯನುಸಾರ ಪೂಜೆ ಮಾಡುತ್ತಾರೆ. ಈ ರೀತಿ ಕಾಯಿದೆಯನುಸಾರ ಪೂಜೆ ಮತ್ತ್ಯಾರದೂ
ಆಗುವುದಿಲ್ಲ. ಅಂದಮೇಲೆ ತಮ್ಮ ಸ್ವಮಾನವನ್ನು ನೋಡಿದಿರಾ, ಅನುಭವ ಮಾಡಿದಿರಾ? ಈಗ ಸಂಗಮದಲ್ಲಿ ಬನ್ನಿ,
ಎಲ್ಲರೂ ಚಕ್ಕರ್ (ಪರಿಕ್ರಮಣ) ಹಾಕುತ್ತಿದ್ದೀರಾ? ಹಿಂದೆ ಇರುವವರು ಚಕ್ಕರ್ ಹಾಕುತ್ತಿದ್ದೀರಾ!
ಕೈಯೆತ್ತಿ. ತಮ್ಮ ಸ್ವಮಾನವನ್ನು ನೋಡಿ ಏಕೆಂದರೆ ಸ್ವರಾಜ್ಯ ಅಧಿಕಾರಿಯಾಗಿದ್ದೀರಲ್ಲವೆ! ಅಂದಮೇಲೆ
ಸಂಗಮದಲ್ಲಿ ಸ್ವಯಂ ಭಗವಂತ, ತಮ್ಮ ಜೀವನದಲ್ಲಿ ಸ್ವಯಂ ಮಾಲೀಕನು ತಾವು ಮಕ್ಕಳಲ್ಲಿ ಪವಿತ್ರತೆಯ
ವಿಶೇಷತೆಯನ್ನು ತುಂಬುತ್ತಾರೆ. ಆ ಪವಿತ್ರತೆಯು ತಮ್ಮ ಸರ್ವಅವಿನಾಶಿ ಸುಖದ ಗಣಿಯಾಗಿದೆ. ಮತ್ತು ಆ
ರೀತಿ ಮಾಡುವವರು ಯಾರು? ಸ್ವಯಂ ಭಗವಂತ. ಅದಂತು ಈಗ ಪ್ರತ್ಯಕ್ಷ ಪ್ರಮಾಣದಲ್ಲಿ ತಮ್ಮ ಪವಿತ್ರತೆಯ
ಆಸ್ತಿಯು ತಂದೆಯಿಂದ ಪ್ರಾಪ್ತಿಯಾಗಿ ಬಿಟ್ಟಿದೆ. ಈಗ ಪರಿಶೀಲನೆ ಮಾಡಿ- ಪವಿತ್ರತೆಯು ಸರ್ವ
ಪ್ರಾಪ್ತಿಗಳಿಗೆ ಆಧಾರವಾಗಿದೆ, ಪವಿತ್ರತೆಯಿಂದ ತಾವೆಲ್ಲರೂ ಮಾಸ್ಟರ್ ಸರ್ವಶಕ್ತಿವಂತರಾಗಿದ್ದೀರಿ.
ಅದಕ್ಕಾಗಿ ಪರಿಶೀಲಿಸಿ – ಸರ್ವ ಶಕ್ತಿಗಳು ಪ್ರಾಪ್ತಿಯಾಗಿದೆಯೇ? ಕೆಲವು ಮಕ್ಕಳು ಹೇಳುತ್ತಾರೆ -
ಬಾಬಾರವರಂತು ಸರ್ವ ಶಕ್ತಿಗಳನ್ನು ಕೊಟ್ಟಿದ್ದಾರೆ ಆದರೆ ಕೆಲವೊಮ್ಮೆ ಯಾವ ಶಕ್ತಿಯ
ಅವಶ್ಯಕತೆಯಿರುವುದೋ ಆಗ ಅದು ಸ್ವಲ್ಪ ಸಮಯದ ನಂತರ ಬರುತ್ತದೆ. ಮಾತು ಪೂರ್ಣವಾಗಿ ಬಿಡುತ್ತದೆ ನಂತರ
ಬರುತ್ತದೆ. ಇದರ ಕಾರಣವೇನು? ವರದಾನದಲ್ಲಿ ಬಾಬಾರವರು ಕೊಟ್ಟಿದ್ದಾರೆ ಆದರೂ ಸಹ ಸಮಯದಲ್ಲಿ
ಬರುವುದಿಲ್ಲವೆಂದರೆ ಅದಕ್ಕೆ ಕಾರಣವೇನು? ತಮ್ಮ ಮಾಸ್ಟರ್ ಸರ್ವಶಕ್ತಿವಂತನ ಸ್ಮೃತಿಯ ಸೀಟಿನಲ್ಲಿ
ಇರುವುದಿಲ್ಲ, ಯಾರು ಯಾವುದೇ ಆದೇಶವನ್ನು ಒಪ್ಪಿಕೊಳ್ಳುತ್ತಾರೆಂದರೆ ಸೀಟ್ನಲ್ಲಿರುವವರ ಆದೇಶವನ್ನು
ಒಪ್ಪಿಕೊಳ್ಳುವರು. ಅಂದಮೇಲೆ ಯಾವಾಗ ತಾವು ಯಾವುದೇ ಶಕ್ತಿಗೆ ಆದೇಶ ಕೊಡುತ್ತೀರಿ, ಮೊದಲು ಇದನ್ನು
ನೋಡಿ - ಸ್ಮೃತಿಯ ಸೀಟ್ನಲ್ಲಿ ಇದ್ದೇನೆಯೇ? ಸ್ವಮಾನದ ಸೀಟ್ನಲ್ಲಿ ಇದ್ದೇನೆಯೇ? ಸ್ಮೃತಿಯ
ಸೀಟಿನಲ್ಲಿ ಸ್ಥಿತರಾಗಿ ಆಗ ಸರ್ವಶಕ್ತಿಗಳು ತಮ್ಮ ಮುಂದೆ ಸಮಯದಲ್ಲಿ ಬರಲು ಬಂಧಿಸಲ್ಪಟ್ಟಿದೆ
ಏಕೆಂದರೆ ಸರ್ವಶಕ್ತಿವಂತ ತಂದೆಯು ತಮ್ಮನ್ನು ಮಾಸ್ಟರ್ ಸರ್ವಶಕ್ತಿವಂತರನ್ನಾಗಿ ಮಾಡಿದ್ದಾರೆ.
ಅಂದಮೇಲೆ ಇಷ್ಟು ಶಕ್ತಿಶಾಲಿ ಸ್ವಮಾನಧಾರಿಯಾಗಿ ನಡೆಯುತ್ತಿದ್ದೀರಲ್ಲವೇ? ತಮ್ಮ ಸ್ವಮಾನವನ್ನು
ನೋಡಿದಿರಾ? ಸಂಗಮದ ನಂತರ ಎಲ್ಲಿ ಹೋಗುವಿರಿ? ರಿಟರ್ನ್ ಜರ್ನಿ ಮಾಡಬೇಕಲ್ಲವೆ! ಆದ್ದರಿಂದ
ಬಾಪ್ದಾದಾರವರು ಇದನ್ನೇ ಬಯಸುತ್ತಾರೆ - ಪ್ರತಿಯೊಬ್ಬರೂ ಇಡೀ ದಿನದಲ್ಲಿ ಈ ಎಕ್ಸರ್ಸೈಜ್ (ವ್ಯಾಯಾಮ)
ಮಾಡುತ್ತಾ ಇರಲಿ ಎಂದು. ಸಮಯವನ್ನು ತೆಗೆಯಿರಿ - ಮತ್ತೆ-ಮತ್ತೆ ಈ ಸ್ವಮಾನದ ಮಾಲೆಯನ್ನು
ಹಾಕಿಕೊಳ್ಳುವುದರಿಂದ, ಅನುಭವ ಮಾಡುವುದರಿಂದ ಬಾಪ್ದಾದಾರವರು ಯಾವ ಸ್ವರಾಜ್ಯದ ಅಧಿಕಾರಿಯನ್ನಾಗಿ
ಮಾಡಿದ್ದಾರೆ, ಅಂತಹವರ ಸ್ವಮಾನವು ತಮ್ಮ ಆದೇಶದಂತೆ ನಡೆಯಲಿಲ್ಲ, ಆ ರೀತಿಯಾಗಲು ಸಾಧ್ಯವಿಲ್ಲ.
ಕೇವಲ ಸೀಟ್ನ ಮೇಲೆ ಸೆಟ್ ಆಗಿರಿ.
ಬಾಪ್ದಾದಾರವರು ನೋಡಿದರು
- ಎಲ್ಲರೂ ಅಟೆನ್ಶನ್ ಇಡುತ್ತೀರಿ ಆದರೆ ನಿಯಮಿತ ರೂಪದಿಂದ ತಮ್ಮ ದಿನಚರಿಯನ್ನು ಸೆಟ್ ಮಾಡಿಕೊಳ್ಳಿ.
ಮಧ್ಯ-ಮಧ್ಯದಲ್ಲಿ ಈ ತಮ್ಮ ಸ್ವಮಾನದ ಸ್ಮೃತಿ ಸ್ವರೂಪದಲ್ಲಿ ಸ್ಥಿತರಾಗಿರಿ. ಹೇಗೆ ಟ್ರಾಫಿಕ್
ಕಂಟ್ರೋಲ್ ಮಾಡುತ್ತೀರಿ ಹಾಗೆಯೇ ಆದಿ ಕಾಲದಿಂದ ರಿಟರ್ನ್ ಜರ್ನಿಯವರೆಗೆ ಈ ಸ್ವಮಾನದ ಸ್ಮೃತಿಯಿರಲಿ,
ಮಧ್ಯ-ಮಧ್ಯದಲ್ಲಿ ಸಮಯವನ್ನು ನಿಗಧಿಪಡಿಸಿ. ಇದನ್ನು ನಡೆಯುತ್ತಾ-ತಿರುಗಾಡುತ್ತಲೂ ಮಾಡಬಹುದು
ಏಕೆಂದರೆ ಮನಸ್ಸನ್ನು ಸೀಟ್ನ ಮೇಲೆ ಕೂರಿಸಬೇಕಾಗಿದೆ. ಬಾಪ್ದಾದಾ ನೋಡಿದರು, ಮೊದಲೂ ಹೇಳಿದ್ದಾರೆ -
ಎಲ್ಲರೂ ಯೋಗವನ್ನು ಜೋಡಿಸುತ್ತಾರೆ ಆದರೆ ಈಗ ಯಾವುದರ ಅವಶ್ಯಕತೆಯಿದೆ? ಸಮಯದ ಸ್ಥಿತಿಗತಿಯನ್ನು
ನೋಡಿ ಮೊದಲೂ ತಿಳಿಸಿದ್ದೇವೆ ಈಗ ಜ್ವಾಲಾಮುಖಿ ಯೋಗದ ಅವಶ್ಯಕತೆಯಿದೆ, ಅದರಿಂದ ಡಬಲ್
ಕಾರ್ಯವಾಗುವುದು. ಒಂದು ತಮ್ಮ ಹಳೆಯ ಸಂಸ್ಕಾರಗಳ ಸಂಸ್ಕಾರ(ಭಸ್ಮ)ವಾಗುತ್ತದೆ, ಈಗ ಸಂಸ್ಕಾರಗಳನ್ನು
ಸಾಯಿಸುತ್ತೀರಿ ಆದರೆ ಸುಡುವುದಿಲ್ಲ. ಸಾಯಿಸಿದ ನಂತರವೂ ಸಹ ಕೆಲವೊಮ್ಮೆ ಅದು ಜಾಗೃತಗೊಳ್ಳುತ್ತದೆ.
ಹೇಗೆ ರಾವಣನನ್ನು ಕೇವಲ ಸಾಯಿಸಲಿಲ್ಲ, ಸುಟ್ಟರು. ಹಾಗೆಯೇ ತಾವೂ ಸಹ ತಮ್ಮ ಹಳೆಯ ಸಂಸ್ಕಾರಗಳನ್ನು,
ಯಾವುದು ಮಧ್ಯ-ಮಧ್ಯದಲ್ಲಿ ತೀವ್ರ ಪುರುಷಾರ್ಥದಲ್ಲಿ ಕೊರತೆಯುಂಟು ಮಾಡುತ್ತದೆ ಅದಕ್ಕಾಗಿ
ಜ್ವಾಲಾಮುಖಿ ಯೋಗದ ಅವಶ್ಯಕತೆಯಿದೆ. ಒಂದು ಸ್ವಯಂಗಾಗಿ, ಮತ್ತೊಂದು ಜ್ವಾಲಾಮುಖಿ ಯೋಗದ ಮೂಲಕ ಲೈಟ್
ರೂಪವಾಗಿರುವ ಕಾರಣ, ಮೈಟ್ ರೂಪವಾಗಿರುವ ಕಾರಣ ಅನ್ಯರಿಗೂ ಸಹ ತಮ್ಮ ಕಿರಣಗಳ ಮೂಲಕ ಸಹಯೋಗ ಕೊಡಬಹುದು.
ಅಂದಮೇಲೆ ಈಗ ಎಲ್ಲರೂ ಯೋಗವನ್ನು ಜ್ವಾಲಾಮುಖಿ ಯೋಗದಲ್ಲಿ ಪರಿವರ್ತನೆ ಮಾಡಿದ್ದೀರಾ? ಸಮಯದನುಸಾರ
ಈಗ ಆತ್ಮರಿಗೆ ತಮ್ಮ ಸಹಯೋಗದ ಅವಶ್ಯಕತೆಯಿದೆ. ಉಳಿದಂತೆ ಬಾಪ್ದಾದಾರವರಂತು ಅಮೃತವೇಳೆ ಪ್ರತಿಯೊಂದು
ಮಗುವಿಗೆ ಸ್ನೇಹವನ್ನು ಕೊಡುತ್ತಾರೆ.
ಬಾಪ್ದಾದಾ ನೋಡುತ್ತಾರೆ
- ಲಕ್ಷ್ಯವನ್ನಂತು ಬಹಳ ಚೆನ್ನಾಗಿ ಇಡುತ್ತೀರಿ, ಸಾಹಸವನ್ನೂ ಇಡುತ್ತೀರಿ ಆದರೆ ಇಡೀ ದಿನದಲ್ಲಿ ಅದೇ
ಗಮನದಲ್ಲಿರಲಿ, ಹೇಗೆ ಅಮೃತವೇಳೆಯಿರುತ್ತದೆ ಅದು ಕಡಿಮೆಯಾಗಿ ಬಿಡುತ್ತದೆ. ಕಾರಣವೇನಾಗುವುದು? ಯಾವ
ಕರ್ಮದಲ್ಲಿ ತೊಡಗುತ್ತೀರಿ, ಕರ್ಮ ಯೋಗಿಯಾಗಿ ಕರ್ಮ ಮಾಡಬೇಕಾಗಿದೆ, ಇದರಲ್ಲಿ ವ್ಯತ್ಯಾಸವಾಗಿ
ಬಿಡುತ್ತದೆ. ತಾವು ಕೇವಲ ಯೋಗವನ್ನಿಡುವವರಲ್ಲ, ಯೋಗಿ ಜೀವನದವರಾಗಿದ್ದೀರಿ. ಅಂದಮೇಲೆ ಜೀವನ ಸದಾ
ಇರುತ್ತದೆ, ಕೆಲ ಕೆಲವೊಮ್ಮೆ ಅಲ್ಲ. ಅಂದಮೇಲೆ ಬಾಪ್ದಾದಾರವರು ಈಗ ಏನನ್ನು ಬಯಸುತ್ತಾರೆ?
ಪ್ರೀತಿಯಲ್ಲಂತು ಬಹಳಷ್ಟು ಪಾಸ್ ಆಗಿದ್ದೀರಿ, ಪ್ರೀತಿಯ ಸಬ್ಜೆಕ್ಟ್ನಲ್ಲಿ ತಂದೆಯು ನೋಡಿದರು -
ಮೆಜಾರಿಟಿ ತಂದೆಯ ಜೊತೆ ಮೇರಾ ಬಾಬಾ, ಮೇರಾ ಬಾಬಾ ಎಂದು ಹೇಳಿ ಪ್ರೀತಿಯ ಅನುಭವವನು ಮಾಡುತ್ತೀರಿ.
ಪ್ರೀತಿಯಲ್ಲಂತು ಮೆಜಾರಿಟಿ ಉತ್ತೀರ್ಣರಾಗಿದ್ದೀರಿ, ಈಗ ಯಾವುದರಲ್ಲಿ ಉತ್ತೀರ್ಣರಾಗಬೇಕು? ತಂದೆಯ
ಸಮಾನರಾಗುವುದರಲ್ಲಿ. ಎಲ್ಲರೂ ಏನನ್ನು ಬಯಸುತ್ತೀರಿ? ತಂದೆಯ ಸಮಾನರಾಗಬೇಕು ಅಥವಾ ತಂದೆಯು
ತಂದೆಯಾಗಿರುತ್ತಾರೆ ತಾವು ಮಕ್ಕಳಾಗಿರುತ್ತೀರಾ, ಅದಕ್ಕಾಗಿ ತಂದೆಯ ಸಮಾನರಂತು ಆಗಬೇಕಾಗುತ್ತದೆ.
ಪ್ರೀತಿ ಅಂದರೆ ಏನಾಗಿದೆ? ಪ್ರಿಯವಾಗಿರುವವರು ಏನು ಹೇಳುತ್ತಾರೆ ಅದನ್ನು ಮಾಡಲೇಬೇಕು. ಅಂದಮೇಲೆ
ಎಲ್ಲರೂ ತಂದೆಯ ಪ್ರಿಯರಾಗಿದ್ದೀರಿ, ತಂದೆಯ ಪ್ರೀತಿ ತಮ್ಮೊಂದಿಗೆ ಇದೆ. ಇದರಲ್ಲಿ ಕೈಯೆತ್ತಿ.
ಪ್ರೀತಿಯಿದೆ ಒಳ್ಳೆಯದು - ಪ್ರೀತಿಯಿದೆಯೇ? ಅಂದಮೇಲೆ ಈಗ ಬಾಪ್ದಾದಾ ಇದನ್ನೇ ಬಯಸುತ್ತಾರೆ - ಹೇಗೆ
ಪ್ರೀತಿಯಿದೆ, ಹಾಗೆಯೇ ಈ ಲಕ್ಷ್ಯವನ್ನಿಡಿ - ನಾವು ತಂದೆಯ ಸಮಾನರಾಗಲೇಬೇಕು, ಇದರಲ್ಲಿ ಕೈಯೆತ್ತಿ.
ಇದಕ್ಕಾಗಿ ನಿಶ್ಚಯವನ್ನಿಡುತ್ತೀರಿ, ಕೈಯನ್ನಂತು ಬಹಳ ಚೆನ್ನಾಗಿ ಮೇಲೆತ್ತುವಿರಿ. ಬಾಪ್ದಾದಾರವರು
ನೋಡುತ್ತಿದ್ದಾರೆ.
ಬಾಪ್ದಾದಾ ಬಯಸುತ್ತಾರೆ
- ಒಂದೊಂದು ಮಗು ಈ ರೀತಿ ಖುಷ್ನುಮಃ (ಖುಷಿಯ ಚಹರೆ), ಖುಷ್ನಸೀಬ್ (ಭಾಗ್ಯಶಾಲಿ) ಆಗಿ ಕಂಡುಬರಲಿ,
ಚಹರೆಯಿಂದ ಚಲನೆಯಿಂದ ಕಂಡು ಬರಲಿ ಏಕೆಂದರೆ ಸಮಯ ಪ್ರಮಾಣ ಈಗ ತಮ್ಮ ಚಹರೆಯು ಬಹಳ ಸೇವೆ ಮಾಡುತ್ತದೆ.
ಅದರ ಅವಶ್ಯಕತೆಯಿರುತ್ತದೆ. ಇದಕ್ಕಾಗಿ ಬಾಪ್ದಾದಾ ಬಯಸುತ್ತಾರೆ - ಈಗಿನಿಂದ ಲಕ್ಷ್ಯವನ್ನಿಡಿ -
ಹೇಗೆ ಈಗ ಈ 90 ವರ್ಷಗಳ ಕಾರಣದಿಂದ ಎಲ್ಲರಿಗೂ ಸೇವೆ ಮಾಡುವ ಉಮ್ಮಂಗವಿದೆ. ಚಹರೆಯಿಂದ ಸೇವೆ ಮಾಡುವ
ಉಮ್ಮಂಗವೂ ಹಾಗೆಯೇ ಇರಲಿ ಏಕೆಂದರೆ ದಿನ-ಪ್ರತಿ ದಿನ ನಾಜೂಕು ಸಮಯವು ಬರಲೇಬೇಕಾಗಿದೆ. ಅದಕ್ಕಾಗಿ
ಇಂತಹ ಸಮಯದಲ್ಲಿ ತಮ್ಮ ಚಹರೆಯು ಆತ್ಮರನ್ನು ಹರ್ಷಿತಮುಖಿಯನ್ನಾಗಿ ಮಾಡಲಿ.
ಬಾಪ್ದಾದಾರವರು ಇಂದು
ಅಮೃತವೇಳೆ ಚಕ್ಕರ್ ಹಾಕಿದರು, ಆಗ ಏನು ನೋಡಿದರು? ಎಲ್ಲರೂ ತಮ್ಮ ರುಚಿಯಿಂದ ಕುಳಿತುಕೊಳ್ಳುತ್ತೀರಿ
ಆದರೆ ಎಲ್ಲದಕ್ಕಿಂತ ದೊಡ್ಡ ಅಥಾರಿಟಿಯಾಗಿದೆ - ಅನುಭವದ ಅಥಾರಿಟಿ. ಆಗ ನೋಡಿದರು -
ಕುಳಿತುಕೊಳ್ಳುತ್ತಾರೆ ಆದರೆ ಅನುಭವದ ಅಥಾರಿಟಿ, ಸ್ಮೃತಿಯಲ್ಲಿಯೂ ಕುಳಿತುಕೊಳ್ಳುತ್ತಾರೆ ಆದರೆ
ಸ್ಮೃತಿ ಸ್ವರೂಪದ ಅನುಭವವಾಗಲಿ. ಅನುಭವದ ಅಥಾರಿಟಿಯ ಆನಂದವು ಸ್ವಲ್ಪ ಸಮಯದಲ್ಲಷ್ಟೇ ಆಗುತ್ತದೆ.
ನಾನು ಬಾಪ್ದಾದಾರವರ ಸಿಂಹಾಸನಾಧಿಕಾರಿ ಎಂದು ಯೋಚಿಸುವರು ಆದಎರ್ ಸ್ವರೂಪದ ಸ್ಮೃತಿ ಸ್ವರೂಪದ
ಅನುಭವಿಮೂರ್ತಿ, ಆ ಅನುಭವದಲ್ಲಿ ಮುಳುಗಬೇಕು, ಅದನ್ನು ಈಗ ಇನ್ನಷ್ಟು ಹೆಚ್ಚಿಸಬೇಕಾಗಿದೆ ಏಕೆಂದರೆ
ಅನುಭವದ ಅಥಾರಿಟಿ ಎಲ್ಲದಕ್ಕಿಂತ ಅತಿ ದೊಡ್ಡದಾಗಿದೆ. ಸೃತಿ ಸ್ವರೂಪರಾಗಿರುವುದು, ಇದಕ್ಕೆ ಅನುಭವ
ಎಂದು ಹೇಳಲಾಗುವುದು. ಅಂದಮೇಲೆ ಅನುಭವದಲ್ಲಿ ಮುಳುಗಬೇಕು - ಯಾವ ಸ್ವರೂಪದ ಸ್ಮೃತಿಯನ್ನಿಡುತ್ತೀರಿ
ಆ ಸ್ವರೂಪದ ಅನುಭೂತಿಯಲ್ಲಿರಬೇಕು - ಇದರ ಅವಶ್ಯಕತೆಯಿದೆ ಏಕೆಂದರೆ ಅನುಭವವನ್ನು ಎಂದಿಗೂ
ಮರೆಯುವುದಿಲ್ಲ. ತಾವು ಯಾವುದೇ ಅನುಭವ ಮೂಲಕ ಯಾರಿಗೇ ಆದರೂ ತಿಳಿಸುವ ಪ್ರಯತ್ನ ಪಡುತ್ತೀರಿ
ಏಕೆಂದರೆ ಅನುಭವದ ಪ್ರಭಾವವು ಅವರಮೇಲೆ ಬೀಳುವುದು. ಅದಕ್ಕಾಗಿ ಸ್ವಯಂನ್ನು ಯಾವ ಸ್ವರೂಪದ
ಸ್ಮೃತಿಯಲ್ಲಿಡುತ್ತೀರಿ ಆ ಸ್ವರೂಪದ ಅನುಭೂತಿಯಲ್ಲಿ ಮುಳುಗಿ ಬಿಡಿ, ಅನುಭವವು ತಮ್ಮ
ಪುರುಷಾರ್ಥದಲ್ಲಿಯೂ ಬಹಳ ಸಹಯೋಗ ಕೊಡುವುದು. ಅಂದಮೇಲೆ ಬಾಪ್ದಾದಾ ನೋಡಿದರು - ಅನುಭವದ
ಅಥಾರಿಟಿಯಲ್ಲಿ ನಂಬರ್ವಾರ್ ಇದ್ದರು. ಈಗ ಈ ಅನುಭವದ ಅಥಾರಿಯ ಅಭ್ಯಾಸದ ಪ್ರತಿ ಇನ್ನಷ್ಟು
ಗಮನವನ್ನಿಡಬೇಕು. ಅನುಭವ ಸ್ವರೂಪದ ಸ್ಥಿತಿಯು ಸದಾ ಸಮಾವೇಶವಾಗಿರುತ್ತದೆ, ಅವರ ಚಹರೆ, ಚಲನೆಯು
ಸೇವೆ ಮಾಡುವುದು.
ಅಂದಮೇಲೆ ಇಂದು
ಬಾಪ್ದಾದಾರವರು ಮಕ್ಕಳ ರೆಕಾರ್ಡ್ ನೋಡುತ್ತಿದ್ದರು. ಒಂದು ಜ್ವಾಲಾಮುಖಿ ಯೋಗದ ಪ್ರತಿ ಇನ್ನೂ
ಹೆಚ್ಚಿನ ಗಮನವನ್ನಿಡಿ ಅದರಿಂದ ಸ್ವಭಾವ-ಸಂಸ್ಕಾರಗಳ ಪರಿವರ್ತನೆಯಲ್ಲಿ ಸಹಯೋಗ ಸಿಗುವುದು.
ಸಂಸ್ಕಾರವು ಈಗಲೂ ಸಹ ಯಾವುದನ್ನು ತಾವು ನೇಚರ್ ಎಂದು ಹೇಳುತ್ತೀರಿ ಅದು ಈಗಲೂ ಸಹ ತಮ್ಮ
ಕಾರ್ಯವನ್ನು ಮಧ್ಯ-ಮಧ್ಯದಲ್ಲಿ ಮಾಡಿ ಬಿಡುತ್ತದೆ. ಉಳಿದಂತೆ ಬಾಪ್ದಾದಾ ಖುಷಿಯಾಗಿದ್ದಾರೆ, ಯಾವ
ಮಾತಿನಲ್ಲಿ? ತಿಳಿದಿದ್ದೀರಾ, ಯಾವ ಮಾತಿನಲ್ಲಿ ಬಾಪ್ದಾದಾ ಖುಷಿಯಾಗಿದ್ದಾರೆ? ತಿಳಿದಿದ್ದೀರಾ?
ಇತ್ತೀಚಿನ ಮುರುಳಿಗಳನ್ನು ಕೇಳುತ್ತಾ ತಮ್ಮ ದಿನಚರಿಯಲ್ಲಿ ಗಮನವು ಹೆಚ್ಚಿನದಾಗಿ ಇರುವುದನ್ನು
ಬಾಪ್ದಾದಾ ನೋಡಿದರು. ಗಮನವು ಹೆಚ್ಚಿನದಾಗಿದೆ ಅದರಿಂದ ಟೆನ್ಶನ್ನ ಸಂಸ್ಕಾರವು ಕಡಿಮೆಯಾಗುತ್ತಾ
ಹೋಗುವುದು. ಬಾಪ್ದಾದಾರವರು ಮೊದಲೂ ಹೇಳಿದ್ದಾರೆ - ಯಾವಾಗ ಟೆನ್ಶನ್ ಬರುತ್ತದೆಯಲ್ಲವೆ, ಆಗ ‘ಎ’
ಹಾಕಿರಿ, ಸೇರಿಸಿ ಎ ಟೆನ್ಶನ್. ಎಲ್ಲರೂ ಹೋಗಲೇಬೇಕಾಗಿದೆ. ಇದಂತು ಪಕ್ಕಾ ಪ್ರತಿಜ್ಞೆಯಿದ್ದೇ ಇದೆ.
ಜೊತೆಯಲ್ಲಿ ನಡೆಯುತ್ತೇವೆ, ಜೊತೆಯಲ್ಲಿ ರಾಜ್ಯ ಮಾಡುತ್ತೇವೆ ಅಂದಮೇಲೆ ಎಲ್ಲರೂ ಖುಷಿಯಾಗಿದ್ದೀರಾ?
ಅಥವಾ ಕೆಲವೊಮ್ಮೆ ಖುಷಿಯಿದೆಯೇ? ಯಾರು ತಿಳಿಯುತ್ತೀರಿ - ನಾವು ಸದಾ ಖುಷಿಯಾಗಿರುತ್ತೇವೆ,
ಕೆಲವೊಮ್ಮೆ ಅಲ್ಲ, ಸದಾ ಖುಷಿಯಾಗಿರುತ್ತೇವೆ ಎಂದು. ನೋಡಿ, ಯೋಚನೆ ಮಾಡಿ ಕೈಯನ್ನೆತ್ತಿ. ಒಳ್ಳೆಯದು
- ಕೈಯನ್ನೂ ಸಹ ಯೋಚನೆ ಮಾಡಿ ಎತ್ತುತ್ತಿದ್ದಾರೆ. ಖುಷಿ ತಮ್ಮ ವಸ್ತುವಾಗಿದೆ. ತಮ್ಮ ವಸ್ತು ಏಕೆ
ಹೊರಟು ಹೋಗಬೇಕು? ಅಂದಮೇಲೆ ಈಗ ಏನು ಮಾಡುತ್ತೀರಿ? ಮುಂದೆ ನಡೆಯಲೇಬೇಕಾಗಿದೆ. ಅಂದಮೇಲೆ ಈಗ ಮುಂದೆ
ಏನು ಮಾಡುವಿರಿ?
ಪ್ರತಿಯೊಂದು
ಸೇವಾಕೇಂದ್ರ ನಿರ್ವಿಘ್ನ, ವ್ಯರ್ಥ ಸಂಕಲ್ಪ ರಹಿತ ಆಗಲು ಸಾಧ್ಯವಿದೆಯೇ? ಆಗುತ್ತದೆಯೇ? ಅಥವಾ
ಇದಕ್ಕಾಗಿ ಕಾಲಾವಕಾಶ ಬೇಕಾಗಿದೆಯೇ? ಈಗಿನವರೆಗೂ ಬಾಪ್ದಾದಾರವರ ಬಳಿ ಯಾವುದೇ ಸೇವಾಕೇಂದ್ರದ ಈ
ರಿಪೋರ್ಟ್ ಕೊಟ್ಟಿಲ್ಲ - ನಮ್ಮ ಸೇವಾಕೇಂದ್ರವು ಸದಾ ನಿರ್ವಿಘ್ನವಾಗಿದೆ. ಜೊತೆಗಾರರೂ
ನಿರ್ವಿಘ್ನವಾಗಿದ್ದಾರೆ ಎಂಬ ರಿಪೋರ್ಟ್ ಕೊಟ್ಟಿಲ್ಲ. ಕೇವಲ ಸ್ವಯಂ ಅಷ್ಟೇ ಅಲ್ಲ, ಜೊತೆಗಾರರೂ
ನಿರ್ವಿಘ್ನವಾಗಿರಬೇಕು. ಆ ಸಮಯವೂ ಬರುತ್ತದೆ. ಆಗಿ ಬಿಡುವುದು ಏಕೆಂದರೆ ಮಕ್ಕಳೇ ಆಗಬೇಕಾಗಿದೆ
ಮತ್ತೆ ಯಾರಾದರೂ ಉದಾಹರಣೆಗೆ ಬರುತ್ತಾರೆ ಅವರ ಹಿಂದೆ ತೀವ್ರ ಪುರುಷಾರ್ಥಿಗಳಾಗಿ
ಮುಂದುವರೆಯುತ್ತೀರಿ ಆದರೆ ಮೆಜಾರಿಟಿಯಂತು ತಾವೇ ಮುಂದೆಹೋಗಬೇಕಲ್ಲವೆ. ಬಾಪ್ದಾದಾ ನೋಡಿದರು -
ಮುರುಳಿಯೊಂದಿಗಿನ ಪ್ರೀತಿ ಮೆಜಾರಿಟಿ ಮಕ್ಕಳದಿದೆ ಆದರೆ ಹೇಗೆ ಜಗದಂಬಾರವರು ಪ್ರತ್ಯಕ್ಷ ಜೀವನದಲ್ಲಿ
ತೋರಿಸಿದರು - ಬಾಬಾರವರು ಏನನ್ನು ಹೇಳುವರು ಅದನ್ನು ಮಾಡಲೇಬೇಕು, ಲಕ್ಷ್ಯವನ್ನಿಟರು ಮತ್ತು
ಪುರುಷಾರ್ಥದ ಕಡೆ ಗಮನವನ್ನೂ ಕೊಟ್ಟರು. ತಮ್ಮ ದೀದಿ-ದಾರಿಯರು ಯಾರು ಅಡ್ವಾನ್ಸ್ ಪಾರ್ಟಿಯಲ್ಲಿಯೂ
ಹೋಗಿದ್ದಾರೆ ಅವರೂ ಸಹ ಗಮನ ಕೊಟ್ಟರು, ಈಗ ತಮ್ಮೆಲ್ಲರ ಪ್ರತೀಕ್ಷೆ ಮಾಡುತ್ತಿದ್ದಾರೆ. ಕೇಳುತ್ತಾರೆ
- ಸಮಾಪ್ತಿಯ ಗೇಟ್ ಯಾವಾಗ ತೆರೆಯುತ್ತದೆ? ಒಬ್ಬರು ಇಬ್ಬರಂತು ತೆರೆಯುವುದಿಲ್ಲ ಅಲ್ಲವೆ! ಅಂದಮೇಲೆ
ಈಗ ಪುರುಷಾರ್ಥ ಮಾಡಿ - ಗೇಟ್ ತೆರೆಯುವ ಸಮಯವನ್ನು ಸಮೀಪಕ್ಕೆ ತನ್ನಿರಿ. ಸಂಪನ್ನರಾಗುವುದು
ಅರ್ಥಾತ್ ಸಮೀಪ ತರುವುದು.
ಒಳ್ಳೆಯದು - ಎಲ್ಲಾ
ನಾಲ್ಕೂ ಕಡೆಯ ಮಕ್ಕಳಿಗೆ ಬಾಪ್ದಾದಾರವರು ಹೃದಯದ ಸ್ನೇಹವನ್ನು ಕೊಡುತ್ತಿದ್ದಾರೆ. ಜೊತೆ ಜೊತೆಯಲ್ಲಿ
ಬಾಪ್ದಾದಾರವರು ಎರಡು ತಿಂಗಳ ಯಾವ ಕಾರ್ಯವನ್ನು ಕೊಟ್ಟಿದ್ದಾರೆ, ಅದರ ಸ್ಮೃತಿಯನ್ನು
ಕೊಡುತ್ತಿದ್ದಾರೆ, ಏಕೆ? ಈ ವ್ಯರ್ಥ ಸಂಕಲ್ಪದ ಪುರುಷಾರ್ಥವನ್ನು ಬಹಳಷ್ಟು ತೀವ್ರ ಮಾಡುವುದಕ್ಕೆ
ಬದಲಾಗಿ ಸಾಧಾರಣ ಮಾಡಿಬಿಡುತ್ತದೆ ಆದ್ದರಿಂದ ನಾಲ್ಕೂ ಕಡೆಯ ಮಕ್ಕಳಿಗೆ ಬಾಪ್ದಾದಾರವರು
ನೆನಪು-ಪ್ರೀತಿಯ ಜೊತೆ ಈ ಸ್ಮೃತಿಯನ್ನು ಕೊಡುತ್ತಿದ್ದಾರೆ - ಈಗ ಸಂಗಮದ ಸಮಯವು ಎಷ್ಟು ಶ್ರೇಷ್ಠ,
ಸೌಭಾಗ್ಯವಾಗಿದೆ. ಈ ಸಂಗಮದ ಸಮಯದಲ್ಲಿಯೇ ತಂದೆಯ ಮೂಲಕ ಸರ್ವ ಖಜಾನೆಗಳು ಪ್ರಾಪ್ತಿಯಾಗುತ್ತದೆ,
ಸಂಗಮದ ಒಂದೊಂದು ಸೆಕೆಂಡ್ ಮಹಾನ್ ಆಗಿದೆ ಆದ್ದರಿಂದ ಸಂಗಮದ ಸಮಯದ ಮೌಲ್ಯವನ್ನು ಸದಾ ತಮ್ಮ
ಬುದ್ಧಿಯಲ್ಲಿಟ್ಟುಕೊಳ್ಳಿ. ಸಂಗಮದ ಒಂದು ಸೆಕೆಂಡ್ ಎಷ್ಟು ಪ್ರಾಪ್ತಿಯನ್ನು ಮಾಡಿಸುತ್ತದೆ!
ತಮ್ಮೊಂದಿಗೆ ಯಾರಾದರೂ ಕೇಳುತ್ತಾರೆ - ತಮಗೆ ಏನು ಸಿಕ್ಕಿದೆ, ಆಗ ಏನೆಂದು ಉತ್ತರ ಕೊಡುತ್ತೀರಿ?
ನಾವು ಬ್ರಾಹ್ಮಣರ ಹೃದಯದಲ್ಲಿ ಅಪ್ರಾಪ್ತಿಯಾಗುವ ಯಾವುದೇ ವಸ್ತುವಿಲ್ಲ. ಪಡೆಯಬೇಕಿತ್ತು ಅದನ್ನು
ಪಡೆದೆವು. ಈಗ ಅದನ್ನು ಕಾರ್ಯದಲ್ಲಿ ತೊಡಗಿಸುತ್ತಾ ತೀವ್ರ ಪುರುಷಾರ್ಥಿಗಳಾಗಿ ಸಮಯವನ್ನು ಸಮೀಪಕ್ಕೆ
ತನ್ನಿರಿ. ಒಳ್ಳೆಯದು - ಬಾಪ್ದಾದಾ ನೋಡುತ್ತಾರೆ - ಎಲ್ಲರಿಗೂ ಉಮ್ಮಂಗವೂ ಬರುತ್ತದೆ ಮತ್ತು ಈ
ಉಮ್ಮಂಗವು ಸದಾ ಮುಂದುವರೆಸುತ್ತಾ ಇರಬೇಕು. ಒಳ್ಳೆಯದು.
ವರದಾನ:
ತಮ್ಮ ಸ್ವರೂಪದ
ಮುಖಾಂತರ ಭಕ್ತರಿಗೆ ಬೆಳಕಿನ ಕಿರೀಟದ ಸಾಕ್ಷಾತ್ಕಾರ ಮಾಡಿಸುವಂತಹ ಇಷ್ಟ ದೇವ ಭವ.
ಯಾವಾಗ ನೀವು ತಂದೆಗೆ
ಮಕ್ಕಳಾಗಿದ್ದೀರಿ, ಪವಿತ್ರತೆಯ ಪ್ರತಿಜ್ಞೆ ಮಾಡಿದಿರಿ ಅದಕ್ಕೆ ಪ್ರತಿಯಾಗಿ ಬೆಳಕಿನ ಕಿರೀಟ
ಪ್ರಾಪ್ತಿಯಾಯಿತು. ಈ ಬೆಳಕಿನ ಕಿರೀಟದ ಮುಂದೆ ರತ್ನ ಜಡಿತ ಕಿರೀಟ ಏನೂ ಇಲ್ಲ. ಎಷ್ಟೆಷ್ಟು ಸಂಕಲ್ಪ,
ಮಾತು ಮತ್ತು ಕರ್ಮದಲ್ಲಿ ಪವಿತ್ರತೆಯ ಧಾರಣೆ ಮಾಡುತ್ತಾ ಹೋಗುವಿರಿ ಅಷ್ಟು ಈ ಬೆಳಕಿನ ಕಿರೀಟ
ಸ್ಪಷ್ಟವಾಗುತ್ತಾ ಹೋಗುವುದು ಮತ್ತು ಇಷ್ಟ ದೇವರ ರೂಪದಲ್ಲಿ ಭಕ್ತರಿಗೆ ಪ್ರತ್ಯಕ್ಷರಾಗುತ್ತಾ
ಹೋಗುವಿರಿ.
ಸ್ಲೋಗನ್:
ಸದಾ
ಬಾಪ್ದಾದಾರವರ ಛತ್ರಛಾಯೆಯ ಒಳಗೆ ಇದ್ದಾಗ ವಿಘ್ನ-ವಿನಾಶಕರಾಗಿ ಬಿಡುವಿರಿ.
ಅವ್ಯಕ್ತ ಸೂಚನೆ:-
ಪರೋಪಕಾರದ ಭಾವನೆಯಿಂದ ಸಂಪನ್ನರಾಗಿ ಅಪಕಾರಿ ಮೇಲೆಯೂ ಉಪಕಾರ ಮಾಡಿ.
ಹೇಗೆ ಬಾಪ್ದಾದಾರವರು ಸದಾ
ಮಕ್ಕಳ ಜೊತೆ ಪ್ರತಿ ಹೆಜ್ಜೆಯಲ್ಲಿ ಸಹಯೋಗಿಗಳಾಗಿದ್ದಾರೆ ಮತ್ತು ಅಂತ್ಯದವರೆಗೂ ಇರುತ್ತಾರೆ.
ತಂದೆಗೆ ಯಾರ ಪ್ರತಿ ದ್ವೇಷಯಿರುವುದಿಲ್ಲ. ಸದಾ ಅಪಕಾರಿಯ ಶುಭ ಚಿಂತಕರಾಗಿದ್ದಾರೆ, ಹೀಗೆ ಫಾಲೋ
ಫಾದರ್. ಪ್ರತಿ ಆತ್ಮನ ಪ್ರತಿ ಸದಾ ಶುಭ ಭಾವ ಮತ್ತು ಭಾವನೆಯಿಟ್ಟುಕೊಳ್ಳಿ. ಇವರು ಹೀಗೆ ಮಾಡಿದರು,
ಈ ಯೋಚನೆಯ ಬದಲಾಗಿ ಈ ಆತ್ಮನ ಕಲ್ಯಾಣ ಹೇಗಾಗುವುದು – ಇದನ್ನು ಯೋಚಿಸಿ ಆಗ ಹೇಳುವುದು ಶುಭ ಚಿಂತಕ
ಅಥವಾ ವಿಶ್ವ ಕಲ್ಯಾಣಕಾರಿ ಆತ್ಮ.
ವಿಶೇಷ ಸೂಚನೆ:-
ತಿಂಗಳಿನ ಮೂರನೇ ರವಿವಾರದ ಯೋಗ ಅಭ್ಯಾಸ.
ಇಂದು ತಿಂಗಳಿನ ಮೂರನೇ
ರವಿವಾರವಾಗಿದೆ, ಎಲ್ಲಾ ಸಹೋದರ-ಸಹೋದರಿಯರು ಸಂಘಟನೆ ರೂಪದಲ್ಲಿ ಸೇರಿ ಸಂಜೆ 6.30ಯಿಂದ
7.30ರವರೆಗೆ ತಮ್ಮ ಶಾಂತ ಸ್ವರೂಪ ಸ್ಥಿತಿಯಲ್ಲಿ ಸ್ಥಿತರಾಗಿ, ಶಾಂತಿಯ ಸಾಗರದ ಆಳದಲ್ಲಿ ಹೋಗಿ ಆ
ಪರಮ ಸುಖ ಮತ್ತು ಶೀತಲತೆಯ ಆಳವಾದ ಅನುಭೂತಿ ಮಾಡಿ ಮತ್ತು ಸರ್ವ ಆತ್ಮಗಳಿಗೆ ಶಾಂತಿಯ ದಾನ ಕೊಡುವ
ಸೇವೆಯನ್ನು ಮಾಡಿರಿ.