18.12.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವು
ಮಕ್ಕಳನ್ನು ಜ್ಞಾನದಿಂದ ಶೃಂಗಾರ ಮಾಡಲು ಬೇಹದ್ದಿನ ತಂದೆಯು ಬಂದಿದ್ದಾರೆ, ಶ್ರೇಷ್ಠ ಪದವಿಯನ್ನು
ಪಡೆಯಬೇಕೆಂದರೆ ಸದಾ ಶೃಂಗರಿತರಾಗಿರಿ."
ಪ್ರಶ್ನೆ:
ಯಾವ ಮಕ್ಕಳನ್ನು
ನೋಡಿ ಬೇಹದ್ದಿನ ತಂದೆಯು ಬಹಳ ಖುಷಿ ಪಡುತ್ತಾರೆ?
ಉತ್ತರ:
ಯಾವ ಮಕ್ಕಳು
ಸರ್ವೀಸಿಗಾಗಿ ಎವರೆಡಿಯಾಗಿರುತ್ತಾರೆ, ಅಲೌಕಿಕ ಮತ್ತು ಪಾರಲೌಕಿಕ ತಂದೆಯನ್ನು ಪೂರ್ಣ
ಅನುಸರಿಸುತ್ತಾರೆ, ಜ್ಞಾನ-ಯೋಗದಿಂದ ಆತ್ಮವನ್ನು ಶೃಂಗಾರ ಮಾಡಿಕೊಳ್ಳುತ್ತಾರೆ, ಯಾರು ಪತಿತರನ್ನು
ಪಾವನರನ್ನಾಗಿ ಮಾಡುವ ಸೇವೆ ಮಾಡುತ್ತಾರೆಯೋ ಅಂತಹ ಮಕ್ಕಳನ್ನು ನೋಡಿ ಬೇಹದ್ದಿನ ತಂದೆಗೆ ಬಹಳ
ಖುಷಿಯಾಗುತ್ತದೆ. ನನ್ನ ಮಕ್ಕಳು ಪರಿಶ್ರಮ ಪಟ್ಟು ಶ್ರೇಷ್ಠ ಪದವಿಯನ್ನು ಪಡೆಯಬೇಕೆಂಬುದೇ ತಂದೆಯ
ಬಯಕೆಯಾಗಿದೆ.
ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳ ಪ್ರತಿ ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಹೇಗೆ ಲೌಕಿಕ
ತಂದೆಗೆ ಮಕ್ಕಳು ಪ್ರಿಯರೆನಿಸುತ್ತಾರೆಯೋ ಹಾಗೆಯೇ ಬೇಹದ್ದಿನ ತಂದೆಗೂ ಸಹ ಬೇಹದ್ದಿನ ಮಕ್ಕಳು
ಪ್ರಿಯರೆನಿಸುತ್ತಾರೆ. ತಂದೆಯು ಮಕ್ಕಳಿಗೆ ನನ್ನ ಮಕ್ಕಳು ಶ್ರೇಷ್ಠ ಪದವಿಯನ್ನು ಪಡೆಯಲಿ ಎಂದು
ಶಿಕ್ಷಣ, ಸಾವಧಾನವನ್ನು ನೀಡುತ್ತಾರೆ - ಇದೇ ತಂದೆಯ ಬಯಕೆಯಾಗಿರುತ್ತದೆ. ಹಾಗೆಯೇ ಬೇಹದ್ದಿನ
ತಂದೆಗೂ ಸಹ ಇದೇ ಇಚ್ಛೆಯಿರುತ್ತದೆ - ಮಕ್ಕಳನ್ನು ಜ್ಞಾನ ಮತ್ತು ಯೋಗದ ಆಭರಣಗಳಿಂದ ಶೃಂಗಾರ
ಮಾಡುತ್ತಾರೆ. ಮಕ್ಕಳು ಶ್ರೇಷ್ಠ ಪದವಿಯನ್ನು ಪಡೆಯಲೆಂದು ನಿಮ್ಮನ್ನು ಇಬ್ಬರೂ ತಂದೆಯರು ಶೃಂಗಾರ
ಮಾಡುತ್ತಾರೆ. ಅಲೌಕಿಕ ತಂದೆಯು ಖುಷಿಯಾಗುತ್ತಾರೆ ಮತ್ತು ಪಾರಲೌಕಿಕ ತಂದೆಯೂ ಖುಷಿ ಪಡುತ್ತಾರೆ.
ಯಾವ ಮಕ್ಕಳು ಚೆನ್ನಾಗಿ ಪುರುಷಾರ್ಥ ಮಾಡುವರೋ ಅವರನ್ನು ನೋಡಿ ಫಾಲೋ ಫಾದರ್ ಎಂದು ಗಾಯನ
ಮಾಡಲಾಗುತ್ತದೆ ಅಂದಾಗ ಇಬ್ಬರನ್ನೂ ಫಾಲೋ ಮಾಡಬೇಕಾಗಿದೆ. ಒಬ್ಬರು ಆತ್ಮಿಕ ತಂದೆ, ಇನ್ನೊಬ್ಬರು
ಅಲೌಕಿಕ ತಂದೆ. ಮಕ್ಕಳು ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ.
ಯಾವಾಗ ನೀವು
ಭಟ್ಟಿಯಲ್ಲಿದ್ದಿರೋ ಆಗ ಎಲ್ಲರ ಕಿರೀಟ ಸಹಿತ ಭಾವ ಚಿತ್ರಗಳನ್ನು ತೆಗೆಯಲಾಗಿತ್ತು. ತಂದೆಯು
ತಿಳಿಸಿದ್ದಾರೆ - ಸ್ಥೂಲವಾಗಿ ಪ್ರಕಾಶತೆಯ ಕಿರೀಟವೇನೂ ಇಲ್ಲ, ಕೇವಲ ಪವಿತ್ರತೆಯ ಸಂಕೇತವಾಗಿದೆ.
ಇದನ್ನು ಎಲ್ಲರಿಗೂ ತೋರಿಸುತ್ತಾರೆ. ಸ್ಥೂಲವಾಗಿ ಯಾವುದೇ ಬಿಳಿಯ ಬೆಳಕಿನ ಕಿರೀಟವೇನೂ ಇರುವುದಿಲ್ಲ.
ಇದನ್ನು ಕೇವಲ ಪವಿತ್ರತೆಯ ಸಂಕೇತವಾಗಿ ತಿಳಿಸಲಾಗುತ್ತದೆ. ಮೊಟ್ಟ ಮೊದಲು ನೀವು ಸತ್ಯಯುಗದಲ್ಲಿ
ಬರುತ್ತೀರಿ. ನೀವೇ ಇದ್ದಿರಲ್ಲವೆ. ತಂದೆಯೂ ಹೇಳುತ್ತಾರೆ - ಆತ್ಮಗಳು ಮತ್ತು ಪರಮಾತ್ಮನು ಬಹಳ ಕಾಲ
ಅಗಲಿ ಹೋಗಿದ್ದರು.... ನೀವು ಮಕ್ಕಳೇ ಮೊಟ್ಟ ಮೊದಲು ಬರುತ್ತೀರಿ ಮತ್ತೆ ನೀವೇ ಮೊದಲಿಗೆ
ಹೋಗಬೇಕಾಗಿದೆ. ನೀವು ಮುಕ್ತಿಧಾಮದ ದ್ವಾರವನ್ನು ತೆರೆಯಬೇಕಾಗಿದೆ. ತಂದೆಯು ನೀವು ಮಕ್ಕಳನ್ನು
ಶೃಂಗರಿಸುತ್ತಾರೆ. ಹೇಗೆ ತಂದೆಯ ಮನೆಯಲ್ಲಿದ್ದಾಗ ವನವಾಸದಲ್ಲಿರುತ್ತಾರೆ. ಈ ಸಮಯದಲ್ಲಿ ನೀವೂ ಸಹ
ಸಾಧಾರಣವಾಗಿರಬೇಕಾಗಿದೆ. ಬಹಳ ಉತ್ತಮ ಮಟ್ಟದಲ್ಲಿಯೂ ಅಲ್ಲ, ಕೀಳು ಮಟ್ಟದಲ್ಲಿಯೂ ಅಲ್ಲ. ತಂದೆಯೂ
ತಿಳಿಸುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಯಾವುದೇ ದೇಹಧಾರಿಗೆ
ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಮನುಷ್ಯರು ಮನುಷ್ಯರ ಸದ್ಗತಿ ಮಾಡಲು ಸಾಧ್ಯವಿಲ್ಲ.
ಸದ್ಗತಿಯನ್ನು ಗುರು (ಸದ್ಗುರು) ಗಳೇ ಮಾಡುತ್ತಾರೆ, ಮನುಷ್ಯರು 60 ವರ್ಷಗಳ ನಂತರ ವಾನಪ್ರಸ್ಥವನ್ನು
ಸ್ವೀಕರಿಸಿ ಗುರುಗಳನ್ನು ಮಾಡಿಕೊಳ್ಳುತ್ತಾರೆ. ಈ ಪದ್ಧತಿಯು ಈಗಿನದಾಗಿದೆ. ಇದು ಮತ್ತೆ
ಭಕ್ತಿಮಾರ್ಗದಲ್ಲಿ ನಡೆಯುತ್ತದೆ. ಇತ್ತೀಚೆಗೆ ಚಿಕ್ಕ ಮಕ್ಕಳಿಗೂ ಗುರುಗಳನ್ನು ಮಾಡಿಸಿ ಬಿಡುತ್ತಾರೆ.
ಭಲೆ ವಾನಪ್ರಸ್ಥ ಸ್ಥಿತಿಯಾಗಿಲ್ಲ ಆದರೆ ಆಕಸ್ಮಿಕವಾಗಿ ಮೃತ್ಯು ಬಂದು ಬಿಡುತ್ತದೆಯಲ್ಲವೆ
ಆದ್ದರಿಂದ ಮಕ್ಕಳಿಗೂ ಧೀಕ್ಷೆಯನ್ನು ಕೊಡಿಸಿ ಗುರುಗಳನ್ನು ಮಾಡಿಸಿ ಬಿಡುತ್ತಾರೆ. ಹೇಗೆ ತಂದೆಯು
ತಿಳಿಸುತ್ತಾರೆ - ನೀವೆಲ್ಲರೂ ಆತ್ಮರಾಗಿದ್ದೀರಿ, ಎಲ್ಲರಿಗೆ ಆಸ್ತಿಯನ್ನು ಪಡೆಯುವ ಅಧಿಕಾರವಿದೆ.
ಗುರುಗಳಿಲ್ಲದೆ ನೆಲೆಯಿಲ್ಲ ಅರ್ಥಾತ್ ಬ್ರಹ್ಮತತ್ವದಲ್ಲಿ ಲೀನವಾಗುವುದಿಲ್ಲವೆಂದು ಅವರು
ಹೇಳುತ್ತಾರೆ ಆದರೆ ನೀವಂತೂ ಲೀನವಾಗುವುದಿಲ್ಲ, ಇದು ಭಕ್ತಿಮಾರ್ಗದ ಶಬ್ಧವಾಗಿದೆ. ಆತ್ಮವು ಬಿಂದು
ಮಾದರಿಯಲ್ಲಿದೆ. ತಂದೆಯೂ ಬಿಂದುವಾಗಿದ್ದಾರೆ. ಆ ಬಿಂದುವನ್ನೇ ಜ್ಞಾನ ಸಾಗರನೆಂದು ಹೇಳಲಾಗುತ್ತದೆ.
ನೀವೂ ಸಹ ಚಿಕ್ಕ ಆತ್ಮಗಳಾಗಿದ್ದೀರಿ. ಅತಿ ಚಿಕ್ಕ ಆತ್ಮನಲ್ಲಿ ಸಂಪೂರ್ಣ ಜ್ಞಾನವನ್ನು
ತುಂಬಿಸಲಾಗುತ್ತದೆ. ನೀವು ಸಂಪೂರ್ಣ ಜ್ಞಾನವನ್ನು ಪಡೆಯುತ್ತೀರಿ, ಪಾಸ್-ವಿತ್-ಆನರ್
ಆಗುತ್ತೀರಲ್ಲವೆ. ಶಿವ ಲಿಂಗವು ದೊಡ್ಡ ರೂಪದಲ್ಲಿರುತ್ತದೆಯೆಂದಲ್ಲ. ಆತ್ಮವು ಎಷ್ಟು
ಗಾತ್ರದಲ್ಲಿದೆಯೋ ಪರಮಾತ್ಮನೂ ಅಷ್ಟೇ ಇದ್ದಾರೆ. ಆತ್ಮವು ಪರಮಧಾಮದಿಂದ ಪಾತ್ರವನ್ನಭಿನಯಿಸಲು
ಬರುತ್ತದೆ. ತಂದೆಯು ತಿಳಿಸುತ್ತಾರೆ - ನಾನೂ ಸಹ ಅಲ್ಲಿಂದ ಬರುತ್ತೇನೆ ಆದರೆ ನನಗೆ ನನ್ನದೇ ಆದ
ಶರೀರವಿಲ್ಲ. ನಾನು ರೂಪನೂ ಆಗಿದ್ದೇನೆ, ಭಸಂತನೂ ಆಗಿದ್ದೇನೆ, ಪರಮ ಆತ್ಮನು ರೂಪನಾಗಿದ್ದಾರೆ
ಅವರಲ್ಲಿ ಸಂಪೂರ್ಣ ಜ್ಞಾನವು ತುಂಬಲ್ಪಟ್ಟಿದೆ. ಜ್ಞಾನದ ಮಳೆಯನ್ನು ಸುರಿಸುತ್ತಾರೆ ಅದರಿಂದ ಎಲ್ಲಾ
ಮನುಷ್ಯರು ಪಾಪಾತ್ಮರಿಂದ ಪುಣ್ಯಾತ್ಮರಾಗಿ ಬಿಡುತ್ತಾರೆ. ತಂದೆಯು ಗತಿ-ಸದ್ಗತಿ ಎರಡನ್ನೂ
ಕೊಡುತ್ತಾರೆ. ನೀವು ಸದ್ಗತಿಯಲ್ಲಿ ಹೋಗುತ್ತೀರಿ ಉಳಿದೆಲ್ಲರೂ ಗತಿಯಲ್ಲಿ ಅರ್ಥಾತ್ ತಮ್ಮ ಮನೆಗೆ
ಹೋಗುತ್ತಾರೆ. ಅದು ಮಧುರ ಮನೆಯಾಗಿದೆ. ಆತ್ಮವೇ ಈ ಕಿವಿಗಳ ಮೂಲಕ ಹೇಳುತ್ತದೆ. ಈಗ ತಂದೆಯು
ತಿಳಿಸುತ್ತಾರೆ - ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳೇ ಹಿಂತಿರುಗಿ ಹೋಗಬೇಕಾಗಿದೆ.
ನಾನು ಎಲ್ಲರನ್ನೂ ಕರೆದುಕೊಂಡು ಹೋಗಲು ಬಂದಿದ್ದೇನೆ. ಆತ್ಮಗಳಿಗೆ ಶಿವನ ಮೆರವಣಿಗೆ ಎಂದು
ಹೇಳುತ್ತಾರೆ. ಈಗ ಶಿವ ತಂದೆಯು ಶಿವಾಲಯದ ಸ್ಥಾಪನೆ ಮಾಡುತ್ತಿದ್ದಾರೆ ಮತ್ತೆ ರಾವಣನು ಬಂದು
ವೇಶ್ಯಾಲಯವನ್ನು ಸ್ಥಾಪನೆ ಮಾಡುತ್ತಾನೆ. ವಾಮಮಾರ್ಗಕ್ಕೆ ವೇಶ್ಯಾಲಯವೆಂದು ಹೇಳಲಾಗುತ್ತದೆ. ತಂದೆಯ
ಬಳಿ ಬಹುತೇಕ ಮಕ್ಕಳಿದ್ದಾರೆ ವಿವಾಹ ಮಾಡಿಕೊಂಡೂ ಪವಿತ್ರರಾಗಿರುತ್ತಾರೆ. ಇಬ್ಬರೂ ಒಟ್ಟಿಗೆ ಇದ್ದು
ಪವಿತ್ರರಾಗಿರಲು ಸಾಧ್ಯವಿಲ್ಲವೆಂದು ಸನ್ಯಾಸಿಗಳು ಹೇಳುತ್ತಾರೆ ಆದರೆ ಇಲ್ಲಿ ತಿಳಿಸಲಾಗುತ್ತದೆ -
ಇದರಲ್ಲಿ ಬಹಳ ಸಂಪಾದನೆಯಿದೆ, ಪವಿತ್ರರಾಗಿರುವುದರಿಂದ 21 ಜನ್ಮಗಳ ರಾಜಧಾನಿಯು ಸಿಗುತ್ತದೆ.
ಅಂದಮೇಲೆ ಒಂದು ಜನ್ಮ ಪವಿತ್ರರಾಗಿರುವುದು ದೊಡ್ಡ ಮಾತೇನು! ತಂದೆಯು ಹೇಳುತ್ತಾರೆ - ನೀವು ಕಾಮ
ಚಿತೆಯ ಮೇಲೆ ಕುಳಿತು ಕಪ್ಪಾಗಿ ಬಿಟ್ಟಿದ್ದೀರಿ, ಕೃಷ್ಣನಿಗೂ ಸಹ ಶ್ಯಾಮ-ಸುಂದರನೆಂದು ಹೇಳುತ್ತಾರೆ.
ಈ ತಿಳುವಳಿಕೆಯು ಈ ಸಮಯದ್ದಾಗಿದೆ. ಕಾಮ ಚಿತೆಯನ್ನೇರಿ ಕಪ್ಪಾಗಿ ಬಿಟ್ಟರು ಮತ್ತೆ ಅವರಿಗೆ (ಬ್ರಹ್ಮಾ)
ಹಳ್ಳಿ ಬಾಲಕನೆಂದು ಹೇಳಲಾಗುತ್ತದೆ. ಅವಶ್ಯವಾಗಿ ಮೊದಲು ಇವರು ಆಗಿದ್ದರಲ್ಲವೆ. ಕೃಷ್ಣನಂತೂ ಗೊಲ್ಲ
ಬಾಲಕನಾಗಲು ಸಾಧ್ಯವಿಲ್ಲ. ಇವರದೇ ಬಹಳ ಜನ್ಮಗಳ ಅಂತಿಮದಲ್ಲಿ ತಂದೆಯು ಪ್ರವೇಶ ಮಾಡಿ ಸುಂದರರನ್ನಾಗಿ
ಮಾಡುತ್ತಾರೆ. ನೀವೀಗ ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಬಾಬಾ, ತಾವು ಎಷ್ಟು
ಮಧುರರಾಗಿದ್ದೀರಿ! ಎಷ್ಟು ಮಧುರ ಆಸ್ತಿಯನ್ನು ಕೊಡುತ್ತೀರಿ! ನಮ್ಮನ್ನು ಮನುಷ್ಯರಿಂದ ದೇವತೆ,
ಮಂದಿರಯೋಗ್ಯರನ್ನಾಗಿ ಮಾಡುತ್ತೀರಿ. ಹೀಗೀಗೆ ತಮ್ಮೊಂದಿಗೆ ಮಾತನಾಡಿಕೊಳ್ಳಬೇಕಾಗಿದೆ. ಬಾಯಿಂದ
ಏನನ್ನೂ ಹೇಳುವಂತಿಲ್ಲ. ಭಕ್ತಿಮಾರ್ಗದಲ್ಲಿ ತಾವು ಪ್ರಿಯತಮನನ್ನು ಎಷ್ಟೊಂದು ನೆನಪು ಮಾಡುತ್ತಾ
ಬಂದಿದ್ದೀರಿ. ಈಗ ತಾವು ಸತ್ತಿದ್ದೀರಿ. ಬಾಬಾ, ತಾವಂತೂ ಎಲ್ಲರಿಗಿಂತ ಮಧುರರಾಗಿದ್ದೀರಿ. ತಮ್ಮನ್ನು
ನಾವೇಕೆ ನೆನಪು ಮಾಡುವುದಿಲ್ಲ. ತಮಗೆ ಪ್ರೇಮ, ಶಾಂತಿಯ ಸಾಗರನೆಂದು ಹೇಳಲಾಗುತ್ತದೆ. ತಾವೇ
ಆಸ್ತಿಯನ್ನು ಕೊಡುತ್ತೀರಿ ಬಾಕಿ ಪ್ರೇರಣೆಯಿಂದ ಏನೂ ಸಿಗುವುದಿಲ್ಲ. ತಂದೆಯಂತೂ ಸನ್ಮುಖದಲ್ಲಿ ಬಂದು
ನೀವು ಮಕ್ಕಳಿಗೆ ಓದಿಸುತ್ತಾರೆ - ಇದು ಪಾಠಶಾಲೆಯಲ್ಲವೆ. ತಂದೆಯು ತಿಳಿಸುತ್ತಾರೆ - ನಾನು
ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ಇದು ರಾಜಯೋಗವಾಗಿದೆ. ನೀವೀಗ ಮೂಲವತನ,
ಸೂಕ್ಷ್ಮವತನ, ಸ್ಥೂಲವತನವನ್ನು ಅರಿತಿದ್ದೀರಿ. ಇಷ್ಟು ಚಿಕ್ಕ ಆತ್ಮವು ಹೇಗೆ
ಪಾತ್ರವನ್ನಭಿನಯಿಸುತ್ತದೆ, ಇದು ಮಾಡಿ-ಮಾಡಲ್ಪಟ್ಟದ್ದಾಗಿದೆ, ಇದಕ್ಕೆ ಆನಾದಿ-ಅವಿನಾಶಿ
ಸೃಷ್ಟಿನಾಟಕವೆಂದು ಹೇಳಲಾಗುತ್ತದೆ. ನಾಟಕವು ಸುತ್ತುತ್ತಿರುತ್ತದೆ ಇದರಲ್ಲಿ ಸಂಶಯದ ಯಾವುದೇ
ಮಾತಿಲ್ಲ. ತಂದೆಯು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ನೀವು ಸ್ವದರ್ಶನ
ಚಕ್ರಧಾರಿಗಳಾಗಿದ್ದೀರಿ, ನಿಮ್ಮ ಬುದ್ಧಿಯಲ್ಲಿ ಇಡೀ ಚಕ್ರವು ಸುತ್ತುತ್ತಿರುತ್ತದೆ ಅಂದಾಗ ಇದರಿಂದ
ನಿಮ್ಮ ಪಾಪಗಳು ಕತ್ತರಿಸಲ್ಪಡುತ್ತವೆ. ಬಾಕಿ ಕೃಷ್ಣನು ಯಾವುದೇ ಸ್ವದರ್ಶನ ಚಕ್ರವನ್ನು ತಿರುಗಿಸಿ
ಹಿಂಸೆ ಮಾಡಲಿಲ್ಲ. ಅಲ್ಲಂತೂ ಹಿಂಸೆಯ ಮಾತಾಗಲಿ, ಕಾಮ ಕಟಾರಿಯನ್ನಾಗಲಿ ನಡೆಸುವುದಿಲ್ಲ. ಡಬಲ್
ಅಹಿಂಸಕರಾಗಿರುತ್ತೀರಿ. ಈ ಸಮಯದಲ್ಲಿ ಪಂಚ ವಿಕಾರಗಳೊಂದಿಗೆ ನಿಮ್ಮ ಯುದ್ಧವು ನಡೆಯುತ್ತದೆ
ಮತ್ತ್ಯಾವುದೇ ಯುದ್ಧದ ಮಾತಿಲ್ಲ. ನೀವೀಗ ಶ್ರೇಷ್ಠಾತಿ ಶ್ರೇಷ್ಠರು ನಂತರ ಶ್ರೇಷ್ಠಾತಿ ಶ್ರೇಷ್ಠ
ಆಸ್ತಿಯಾದ ಈ ಲಕ್ಷ್ಮೀ-ನಾರಾಯಣರಂತೂ ಶ್ರೇಷ್ಠರಾಗಬೇಕಾಗಿದೆ. ಎಷ್ಟು ನೀವು ಪುರುಷಾರ್ಥ ಮಾಡುವಿರೋ
ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಕಲ್ಪ-ಕಲ್ಪವೂ ಅದೇ ನಿಮ್ಮ ವಿದ್ಯೆಯು ಇರುವುದು. ಈಗ
ಒಳ್ಳೆಯ ಪುರುಷಾರ್ಥ ಮಾಡಿದರೂ ಕಲ್ಪ-ಕಲ್ಪವೂ ಮಾಡುತ್ತಾ ಇರುತ್ತೀರಿ. ಲೌಕಿಕ ವಿದ್ಯೆಯಿಂದ
ಇಷ್ಟೊಂದು ಪದವಿ ಸಿಗಲು ಸಾಧ್ಯವಿಲ್ಲ. ಆತ್ಮಿಕ ವಿದ್ಯೆಯಿಂದ ಸಿಗುತ್ತದೆ. ಶ್ರೇಷ್ಠಾತಿ ಶ್ರೇಷ್ಠ
ಈ ಲಕ್ಷ್ಮೀ-ನಾರಾಯಣರಾಗುತ್ತಾರೆ. ಇವರೂ ಮನುಷ್ಯರೆ ಆದರೆ ದೈವೀ ಗುಣಗಳನ್ನು ಧಾರಣೆ ಮಾಡುತ್ತಾರೆ
ಆದ್ದರಿಂದ ದೇವತೆಗಳೆಂದು ಹೇಳಲಾಗುತ್ತದೆ. ಉಳಿದಂತೆ 8-10 ಭುಜಗಳಿರುವಂತಹ ವ್ಯಕ್ತಿಯು ಯಾರೂ
ಇರುವುದಿಲ್ಲ. ಭಕ್ತಿಯಲ್ಲಿ ದರ್ಶನವಾದಾಗ ಬಹಳ ಅಳುತ್ತಾರೆ, ದುಃಖದಲ್ಲಿ ಬಂದು ಬಹಳ ಕಣ್ಣೀರನ್ನು
ಸುರಿಸುತ್ತಾರೆ. ಇಲ್ಲಂತೂ ತಂದೆಯು ತಿಳಿಸುತ್ತಾರೆ - ಕಣ್ಣೀರು ಬಂದಿತೆಂದರೆ ನೀವು
ಅನುತ್ತೀರ್ಣರಾದಿರಿ. ತಾಯಿ ಸತ್ತರೂ ಸಹ ಜ್ಞಾನದ ಹಲ್ವ ತಿನ್ನಿ..... ಇತ್ತೀಚೆಗೆ ಬಾಂಬೆಯಲ್ಲಿಯೂ
ಯಾರಾದರೂ ರೋಗಿಯಾದರೆ ಅಥವಾ ಮರಣ ಹೊಂದಿದರೆ ಬಂದು ಶಾಂತಿಯನ್ನು ಕೊಡಿ ಎಂದು
ಬ್ರಹ್ಮಾಕುಮಾರ-ಕುಮಾರಿಯರನ್ನು ಕರೆಸುತ್ತಾರೆ. ನೀವು ತಿಳಿಸುತ್ತೀರಿ - ಆತ್ಮವು ಒಂದು ಶರೀರವನ್ನು
ಬಿಟ್ಟು ಇನ್ನೊಂದನ್ನು ತೆಗೆದುಕೊಂಡಿತು, ಇದರಲ್ಲಿ ನಿಮ್ಮದೇನು ಹೋಗುತ್ತದೆ! ಅಳುವುದರಿಂದ ಏನು
ಲಾಭ? ಆಗ ಹೇಳುತ್ತಾರೆ - ಇವರನ್ನು ಕಾಲವು ಕಬಳಿಸಿ ಬಿಟ್ಟಿತೆಂದು ಆದರೆ ಇಂತಹ ಯಾವುದೇ ಮಾತಿಲ್ಲ,
ಇಲ್ಲಂತೂ ಆತ್ಮವು ತಾನಾಗಿಯೇ ಒಂದು ಶರೀರವನ್ನು ಬಿಟ್ಟು ಬಿಡುತ್ತದೆ. ತನ್ನ ಸಮಯದಲ್ಲಿ ಶರೀರವನ್ನು
ಬಿಟ್ಟು ಹೋಗುತ್ತದೆ ಬಾಕಿ ಮೃತ್ಯುವು ಯಾವುದೇ ವಸ್ತುವಲ್ಲ. ಸತ್ಯಯುಗದಲ್ಲಿ ಗರ್ಭ ಮಹಲಿರುತ್ತದೆ,
ಶಿಕ್ಷೆಯ ಮಾತೇ ಇರುವುದಿಲ್ಲ. ಅಲ್ಲಿ ನಿಮ್ಮ ಕರ್ಮಗಳು ಅಕರ್ಮವಾಗುತ್ತದೆ. ವಿಕರ್ಮವಾಗಲು ಅಲ್ಲಿ
ಮಾಯೆಯೇ ಇರುವುದಿಲ್ಲ. ನೀವು ವಿಕರ್ಮಾಜೀತರಾಗುತ್ತೀರಿ. ಮೊಟ್ಟ ಮೊದಲು ವಿಕರ್ಮಾಜೀತ ಸಂವತ್ಸರ
ನಡೆಯುತ್ತದೆ ನಂತರ ಭಕ್ತಿಮಾರ್ಗವು ಆರಂಭವಾದಾಗ ರಾಜ ವಿಕರ್ಮಾ ಸಂವತ್ಸರವು ಆರಂಭವಾಗುತ್ತದೆ. ಈ
ಸಮಯದಲ್ಲಿ ಯಾವ ವಿಕರ್ಮಗಳನ್ನು ಮಾಡಿದ್ದೀರೋ ಅದರ ಮೇಲೆ ಜಯ ಗಳಿಸುತ್ತೀರಿ ಆದ್ದರಿಂದ
ವಿಕರ್ಮಾಜೀತರೆಂದು ಹೆಸರಿಡಲಾಗುತ್ತದೆ. ನಂತರ ದ್ವಾಪರದಲ್ಲಿ ವಿಕರ್ಮಿ ರಾಜರಾಗಿ ಬಿಡುತ್ತಾರೆ,
ವಿಕರ್ಮ ಮಾಡುತ್ತಿರುತ್ತಾರೆ. ಸೂಜಿಯ ಮೇಲೆ ಒಂದುವೇಳೆ ತುಕ್ಕು ಹಿಡಿದಿದ್ದರೆ ಅದನ್ನು ಅಯಸ್ಕಾಂತವು
ಆಕರ್ಷಿಸುವುದಿಲ್ಲ. ಎಷ್ಟು ಪಾಪಗಳ ತುಕ್ಕು ಇಳಿಯುತ್ತಾ ಹೋಗುವುದೋ ಅಷ್ಟು ಅಯಸ್ಕಾಂತವು
ಸೆಳೆಯುವುದು. ತಂದೆಯಂತೂ ಸಂಪೂರ್ಣ ಪವಿತ್ರರಾಗಿದ್ದಾರೆ, ನಿಮ್ಮನ್ನೂ ಯೋಗಬಲದಿಂದ ಪವಿತ್ರರನ್ನಾಗಿ
ಮಾಡುತ್ತಾರೆ. ಹೇಗೆ ಲೌಕಿಕ ತಂದೆಯೂ ಸಹ ಮಕ್ಕಳನ್ನು ನೋಡಿ ಖುಷಿ ಪಡುತ್ತಾರಲ್ಲವೆ. ಹಾಗೆಯೇ
ಬೇಹದ್ದಿನ ತಂದೆಯೂ ಸಹ ಮಕ್ಕಳ ಸೇವೆಯನ್ನು ನೋಡಿ ಬಹಳ ಖುಷಿ ಪಡುತ್ತಾರೆ. ಮಕ್ಕಳು ಬಹಳ
ಪರಿಶ್ರಮವನ್ನೂ ಪಡುತ್ತಿದ್ದೀರಿ. ಸರ್ವೀಸಿನಲ್ಲಿ ಮಕ್ಕಳು ಸದಾ ಎವರೆಡಿಯಾಗಿರಬೇಕು. ನೀವು ಮಕ್ಕಳು
ಪತಿತರನ್ನು ಪಾವನ ಮಾಡುವಂತಹ ಈಶ್ವರೀಯ ಮೆಷಿನ್ ಆಗಿದ್ದೀರಿ. ನೀವೀಗ ಈಶ್ವರೀಯ ಸಂತಾನರಾಗಿದ್ದೀರಿ.
ಬೇಹದ್ದಿನ ತಂದೆಯಾಗಿದ್ದಾರೆ ಮತ್ತು ನೀವೆಲ್ಲರೂ ಸಹೋದರ-ಸಹೋದರಿಯರಾಗಿದ್ದೀರಿ. ಮತ್ತ್ಯಾವುದೇ
ಸಂಬಂಧವಿಲ್ಲ, ಮುಕ್ತಿಧಾಮದಲ್ಲಂತೂ ತಂದೆ ಮತ್ತು ನೀವಾತ್ಮರು ಸಹೋದರ-ಸಹೋದರರಿರುತ್ತೀರಿ ನಂತರ ನೀವು
ಸತ್ಯಯುಗದಲ್ಲಿ ಹೋದಾಗ ಅಲ್ಲಿ ಒಬ್ಬ ಮಗ ಮತ್ತು ಒಬ್ಬ ಮಗಳು ಅಷ್ಟೇ. ಆದರೆ ಇಲ್ಲಿ ನೋಡಿ! ಬಹಳ
ಸಂಬಂಧಗಳಾಗುತ್ತವೆ - ಚಿಕ್ಕಪ್ಪ, ದೊಡ್ಡಪ್ಪ, ಮಾವ..... ಇತ್ಯಾದಿ.
ಮೂಲ ವತನವು ಮಧುರ ಮನೆ,
ಮುಕ್ತಿಧಾಮವಾಗಿದೆ ಅದಕ್ಕಾಗಿ ಮನುಷ್ಯರು ಎಷ್ಟೊಂದು ಯಜ್ಞ, ತಪ ಇತ್ಯಾದಿಗಳನ್ನು ಮಾಡುತ್ತಾರೆ ಆದರೆ
ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ, ಸುಳ್ಳು ಹೇಳುತ್ತಿರುತ್ತಾರೆ. ಸರ್ವರ ಸದ್ಗತಿದಾತನು
ಒಬ್ಬರೇ ತಂದೆಯಾಗಿದ್ದಾರೆ. ಅನ್ಯಯಾರೂ ಇಲ್ಲ. ಈಗ ನೀವು ಸಂಗಮಯುಗದಲ್ಲಿದ್ದೀರಿ, ಇಲ್ಲಿ ಅನೇಕ
ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ಬಹಳ ಕೆಲವರೇ ಇರುತ್ತಾರೆ. ಸ್ಥಾಪನೆಯ ನಂತರ ಹಳೆಯದರ
ವಿನಾಶವಾಗುತ್ತದೆ. ಈಗ ಅನೇಕ ಧರ್ಮಗಳಿರುವ ಕಾರಣ ಎಷ್ಟೊಂದು ಹೊಡೆದಾಟವಿದೆ. ನೀವು 100%
ಸಾಹುಕಾರರಾಗಿದ್ದಿರಿ ಮತ್ತೆ 84 ಜನ್ಮಗಳ ನಂತರ 100% ಬಡವರಾಗಿ ಬಿಟ್ಟಿದ್ದೀರಿ. ತಂದೆಯು ಬಂದು
ಎಲ್ಲರನ್ನೂ ಜಾಗೃತಗೊಳಿಸುತ್ತಾರೆ - ಮಕ್ಕಳೇ, ಎದ್ದೇಳಿ ಈಗ ಸತ್ಯಯುಗವು ಬರುತ್ತಿದೆ. ಸತ್ಯ ತಂದೆಯೇ
ನಿಮಗೆ 21 ಜನ್ಮಗಳ ಆಸ್ತಿಯನ್ನು ಕೊಡುತ್ತಾರೆ. ಭಾರತವೇ ಸತ್ಯ ಖಂಡವಾಗುತ್ತದೆ. ತಂದೆಯು ಭಾರತವನ್ನು
ಸತ್ಯ ಖಂಡವನ್ನಾಗಿ ಮಾಡುತ್ತಾರೆ, ಅಸತ್ಯ ಖಂಡವನ್ನಾಗಿ ಯಾರು ಮಾಡುತ್ತಾರೆ? ಪಂಚ ವಿಕಾರಗಳೆಂಬ
ರಾವಣ. ರಾವಣನ ಎಷ್ಟೊಂದು ಪ್ರತಿಮೆಯನ್ನು ಮಾಡುತ್ತಾರೆ ಮತ್ತೆ ಅದನ್ನು ಸುಡುತ್ತಾರೆ ಏಕೆಂದರೆ ಇವನು
ನಂಬರ್ವನ್ ಶತ್ರುವಾಗಿದ್ದಾನೆ. ಯಾವಾಗಿನಿಂದ ರಾವಣ ರಾಜ್ಯವಾಗಿದೆ ಎಂಬುದು ಮನುಷ್ಯರಿಗೆ ತಿಳಿದೇ
ಇಲ್ಲ. ತಂದೆಯು ತಿಳಿಸುತ್ತಾರೆ – ಅರ್ಧ ಕಲ್ಪ ರಾಮ ರಾಜ್ಯ, ಅರ್ಧ ಕಲ್ಪ ರಾವಣ ರಾಜ್ಯವಿರುತ್ತದೆ
ಆದರೆ ರಾವಣನ್ನು ಸಾಯಿಸಲು ಅವನೇನು ಒಬ್ಬ ಮನುಷ್ಯನಲ್ಲ. ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ರಾವಣ
ರಾಜ್ಯವಿದೆ. ತಂದೆಯು ಬಂದು ರಾಮ ರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ ನಂತರ ಜಯ ಜಯಕಾರ ಆಗಿ
ಬಿಡುತ್ತದೆ. ಅಲ್ಲಿ ಸದಾ ಖುಷಿಯಿರುತ್ತದೆ, ಅದು ಸುಖಧಾಮವಾಗಿದೆ. ಈಗ ಈ ಸಮಯಕ್ಕೆ ಪುರುಷೋತ್ತಮ
ಸಂಗಮ ಯುಗವೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಈ ಪುರುಷಾರ್ಥದಿಂದ ಈ
ರೀತಿಯಾಗುವವರಿದ್ದೀರಿ. ನಿಮ್ಮ ಚಿತ್ರಗಳನ್ನೂ ಮಾಡಿಸಲಾಗಿತ್ತು ಆದರೆ ಅನೇಕರು ಬಂದರು, ಸ್ವಲ್ಪ
ದಿನಗಳು ನಡೆದು ಹೊರಟು ಹೋದರು. ತಂದೆಯು ಬಂದು ನೀವು ಮಕ್ಕಳಿಗೂ ಬಹಳ ಪ್ರೀತಿಯಿಂದ ತಿಳಿಸುತ್ತಾರೆ.
ತಂದೆ, ಶಿಕ್ಷಕರು ಬಹಳ ಪ್ರೀತಿ ಮಾಡುತ್ತಾರೆ, ಗುರುಗಳೂ ಪ್ರೀತಿ ಮಾಡುತ್ತಾರೆ. ಸದ್ಗುರುವಿನ
ನಿಂಧಕರಿಗೆ ನೆಲೆಯಿಲ್ಲ. ನಿಮ್ಮ ಗುರಿ-ಧ್ಯೇಯವು ಸನ್ಮುಖದಲ್ಲಿದೆ. ಆ ಗುರುಗಳ ಬಳಿಯಂತೂ ಯಾವುದೇ
ಗುರಿ-ಧ್ಯೇಯವಿರುವುದಿಲ್ಲ. ಅದೇನೂ ವಿದ್ಯೆಯಲ್ಲ. ಇದು ವಿದ್ಯೆಯಾಗಿದೆ. ಇದು ಆಸ್ಪತ್ರೆ ಮತ್ತು
ವಿಶ್ವ ವಿದ್ಯಾಲಯವೂ ಆಗಿದೆ. ಇದರಿಂದ ನೀವು ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುತ್ತೀರಿ.
ಇಲ್ಲಂತೂ ಅಸತ್ಯವಿದೆ ಆದ್ದರಿಂದಲೇ ಸುಳ್ಳು ಮಾಯೆ, ಸುಳ್ಳು ಕಾಯವೆಂದು ಹಾಡುತ್ತಾರೆ. ಸತ್ಯಯುಗವು
ಸತ್ಯ ಖಂಡವಾಗಿದೆ. ಅಲ್ಲಂತೂ ವಜ್ರ ರತ್ನಗಳ ಮಹಲುಗಳಿರುತ್ತದೆ. ಸೋಮನಾಥ ಮಂದಿರವನ್ನೂ ಸಹ
ಭಕ್ತಿಮಾರ್ಗದಲ್ಲಿ ಮಾಡಿದ್ದಾರೆ. ಎಷ್ಟೊಂದು ಹಣವಿತ್ತು ಅದನ್ನು ಮುಸಲ್ಮಾನರು ಬಂದು ಲೂಟಿ ಮಾಡಿದರು,
ದೊಡ್ಡ-ದೊಡ್ಡ ಮಸೀದಿಗಳನ್ನು ಕಟ್ಟಿಸಿದರು. ಈಗ ನಿಮಗೆ ತಂದೆಯು ಕುಬೇರನ ಖಜಾನೆಯನ್ನು ಕೊಡುತ್ತಾರೆ.
ಆರಂಭದಿಂದಲೇ ನಿಮಗೆ ಎಲ್ಲವನ್ನೂ ಸಾಕ್ಷಾತ್ಕಾರ ಮಾಡಿಸುತ್ತಾ ಬಂದಿದ್ದಾರೆ. ಅಲ್ಲಾ ಅವಲುದ್ದೀನ್
ಕಥೆಯಿದೆಯಲ್ಲವೆ. ಮೊಟ್ಟ ಮೊದಲ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ, ಅದು ದೇವತಾ ಧರ್ಮವಾಗಿದೆ.
ಯಾವ ಧರ್ಮವಿಲ್ಲವೋ ಅದು ಪುನಃ ಸ್ಥಾಪನೆಯಾಗುತ್ತದೆ. ಎಲ್ಲರಿಗೂ ತಿಳಿದಿದೆ - ಪ್ರಾಚೀನ
ಸತ್ಯಯುಗದಲ್ಲಿ ಇವರದೇ ರಾಜ್ಯವಿತ್ತು, ಇವರ ಮೇಲೆ ಮತ್ತ್ಯಾರೂ ಇರಲಿಲ್ಲ. ದೈವೀ ರಾಜ್ಯವನ್ನು
ಸ್ವರ್ಗವೆಂದು ಹೇಳಲಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ ಮತ್ತು ಅನ್ಯರಿಗೂ ತಿಳಿಸಬೇಕಾಗಿದೆ
ಅಂದಮೇಲೆ ಎಲ್ಲರಿಗೆ ಇದನ್ನು ಹೇಗೆ ಅರ್ಥ ಮಾಡಿಸಬೇಕು! ಯಾವುದರಿಂದ ನಂತರ ಅವರು ನಮಗೆ
ತಿಳಿಯಲಿಲ್ಲವೆಂದು ದೂರು ಕೊಡುವಂತಾಗಬಾರದು. ನೀವು ಎಲ್ಲರಿಗೆ ತಿಳಿಸುತ್ತೀರಿ ಆದರೂ ಸಹ ತಂದೆಯನ್ನು
ಬಿಟ್ಟು ಹೊರಟು ಹೋಗುತ್ತಾರೆ. ಈ ಇತಿಹಾಸವು ಮತ್ತೆ ಪುನರಾವರ್ತನೆಯಾಗುವುದು. ತಂದೆಯ ಬಳಿ
ಬರುತ್ತಾರೆ ಆಗ ತಂದೆಯು ಕೇಳುತ್ತಾರೆ - ಮೊದಲು ಎಂದಾದರೂ ಮಿಲನ ಮಾಡಿದ್ದಿರಾ? ಹೌದು ಬಾಬಾ, 5000
ವರ್ಷಗಳ ಮೊದಲೂ ಸಹ ನಾವು ಮಿಲನ ಮಾಡಲು ಬಂದಿದ್ದೆವು, ಬೇಹದ್ದಿನ ಆಸ್ತಿಯನ್ನು ಪಡೆಯಲು
ಬಂದಿದ್ದೆವೆಂದು ಹೇಳುತ್ತಾರೆ. ಕೆಲವರು ಬಂದು ಕೇಳುತ್ತಾರೆ, ಕೆಲವರಿಗೆ ಬ್ರಹ್ಮಾನ
ಸಾಕ್ಷಾತ್ಕಾರವಾಗಿದ್ದರೆ ಅದು ನೆನಪಿಗೆ ಬರುತ್ತದೆ ಆಗ ನಾವು ಇದೇ ರೂಪವನ್ನು ನೋಡಿದ್ದೆವು ಎಂದು
ಹೇಳುತ್ತಾರೆ. ತಂದೆಯೂ ಸಹ ಮಕ್ಕಳನ್ನು ನೋಡಿ ಖುಷಿ ಪಡುತ್ತಾರೆ. ಅವಿನಾಶಿ ಜ್ಞಾನ ರತ್ನಗಳಿಂದ
ನಿಮ್ಮ ಜೋಳಿಗೆಯು ತುಂಬುತ್ತದೆಯಲ್ಲವೆ. ಇದು ವಿದ್ಯೆಯಾಗಿದೆ. 7 ದಿನಗಳ ಕೋರ್ಸ್ ತೆಗೆದುಕೊಂಡು
ನಂತರ ಭಲೆ ಎಲ್ಲಿ ಬೇಕಾದರೂ ಇದ್ದು ಮುರುಳಿಯ ಆಧಾರದ ಮೇಲೆ ನಡೆಯಬಹುದು. 7 ದಿನಗಳಲ್ಲಿ ಇಷ್ಟು
ತಿಳಿಸಿಕೊಡಲಾಗುತ್ತದೆ ಮತ್ತೆ ಅವರಿಗೆ ಇಡೀ ಮುರುಳಿಯು ಅರ್ಥವಾಗುತ್ತದೆ. ತಂದೆಯಂತೂ ಮಕ್ಕಳಿಗೆ
ಎಲ್ಲಾ ರಹಸ್ಯಗಳನ್ನು ಬಹಳ ಚೆನ್ನಾಗಿ ತಿಳಿಸುತ್ತಿರುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸ್ವದರ್ಶನ
ಚಕ್ರವನ್ನು ತಿರುಗಿಸುತ್ತಾ ಪಾಪಗಳನ್ನು ಭಸ್ಮ ಮಾಡಿಕೊಳ್ಳಬೇಕು, ಆತ್ಮಿಕ ವಿದ್ಯೆಯಿಂದ ತಮ್ಮ
ಪದವಿಯನ್ನು ಶ್ರೇಷ್ಠ ಮಾಡಿಕೊಳ್ಳಬೇಕಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಕಣ್ಣೀರು ಹಾಕಬಾರದು.
2. ಇದು ವಾನಪ್ರಸ್ಥ
ಸ್ಥಿತಿಯಲ್ಲಿರುವ ಸಮಯವಾಗಿದೆ, ಆದ್ದರಿಂದ ವನವಾಸದಲ್ಲಿ ಬಹಳ ಸಾಧಾರಣ ಆಗಿರಬೇಕಾಗಿದೆ. ಬಹಳ
ಮೇಲ್ಮಟ್ಟವೂ ಅಲ್ಲ, ಕೆಳ ಮಟ್ಟವೂ ಅಲ್ಲ. ಹಿಂತಿರುಗಿ ಹೋಗುವುದಕ್ಕಾಗಿ ಆತ್ಮವನ್ನು ಸಂಪೂರ್ಣ ಪಾವನ
ಮಾಡಿಕೊಳ್ಳಬೇಕಾಗಿದೆ.
ವರದಾನ:
ಸದಾ ಮೋಲ್ಡ್
ಆಗುವಂತಹ ವಿಶೇಷತೆಯಿಂದ ಸಂಪರ್ಕ ಮತ್ತು ಸೇವೆಯಲ್ಲಿ ಸಫಲರಾಗುವಂತಹ ಸಫಲತಾಮೂರ್ತಿ ಭವ.
ಯಾವ ಮಕ್ಕಳಲ್ಲಿ ಸ್ವಯಂಗೆ
ಮೋಲ್ಡ್ ಆಗುವಂತಹ ವಿಶೇಷತೆಯಿದೆ ಅವರು ಸಹಜವಾಗಿ ಗೋಲ್ಡನ್ ಏಜ್ನ ಸ್ಟೇಜ್ ವರೆಗೆ ತಲುಪಲು ಸಾಧ್ಯ.
ಎಂತಹ ಸಮಯ, ಎಂತಹ ವಾತಾವರಣವೊ ಅದರ ಪ್ರಮಾಣ ತನ್ನ ಧಾರಣೆಗಳನ್ನು ಪ್ರತ್ಯಕ್ಷ ಮಾಡಲು ಮೋಲ್ಡ್
ಆಗಬೇಕಾಗುತ್ತದೆ. ಮೋಲ್ಡ್ ಆಗುವವರೇ ರಿಯಲ್ ಗೋಲ್ಡ್ ಆಗಿದ್ದಾರೆ. ಹೇಗೆ ಸಾಕಾರ ತಂದೆಯ
ವಿಶೇಷತೆಯನ್ನು ನೋಡಿದಿರಿ-ಎಂತಹ ಸಮಯ, ಎಂತಹ ವ್ಯಕ್ತಿ ಅಂತಹ ರೂಪ-ಈ ರೀತಿ ಫಾಲೋ ಫಾದರ್ ಮಾಡಿ ಆಗ
ಸೇವೆ ಮತ್ತು ಸಂಪರ್ಕ ಎಲ್ಲದರಲ್ಲಿಯೂ ಸಹಜವಾಗಿ ಸಫಲತಾ ಮೂರ್ತಿಗಳಾಗುವಿರಿ.
ಸ್ಲೋಗನ್:
ಎಲ್ಲಿ ಸರ್ವ
ಶಕ್ತಿಗಳಿರುವುದೊ ಅಲ್ಲಿ ನಿರ್ವಿಘ್ನ ಸಫಲತೆ ಜೊತೆಯಲ್ಲಿರುತ್ತದೆ.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.
ಹೇಗೆ ಸಾಕಾರದಲ್ಲಿ
ಬರುವುದು ಹೋಗುವುದು ಸಹಜ ಅಭ್ಯಾಸ ಆಗಿ ಬಿಟ್ಟಿದೆ, ಹಾಗೆಯೇ ಆತ್ಮಕ್ಕೆ ತಮ್ಮ ಕರ್ಮಾತೀತ
ಅವಸ್ಥೆಯಲ್ಲಿರುವ ಅಭ್ಯಾಸವಿರಲಿ. ಈಗೀಗ ಕರ್ಮ ಯೋಗಿಯಾಗಿ ಕರ್ಮದಲ್ಲಿ ಬರುವುದು, ಕರ್ಮ
ಸಮಾಪ್ತಿಯಾಯಿತು ನಂತರ ಕರ್ಮಾತೀತ ಅವಸ್ಥೆಯಲ್ಲಿರುವುದು, ಇದರ ಅನುಭವ ಸಹಜವಾಗುತ್ತಾ ಹೋಗಲಿ. ಸದಾ
ಲಕ್ಷ್ಯವಿರಲಿ ಕರ್ಮಾತೀತ ಅವಸ್ಥೆಯಲ್ಲಿರಬೇಕು, ನಿಮಿತ್ತ ಮಾತ್ರ ಕರ್ಮ ಮಾಡುವುದಕ್ಕೆ ಕರ್ಮ
ಯೋಗಿಯಾಗಿ ನಂತರ ಪುನಃ ಕರ್ಮಾತೀತ.