19.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-
ಶ್ರೀಮತವೇ ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡುವಂತದ್ದಾಗಿದೆ ಆದ್ದರಿಂದ ಶ್ರೀಮತವನ್ನು ಮರೆಯಬೇಡಿ,
ತಮ್ಮ ಮತವನ್ನು ಬಿಟ್ಟು ಒಬ್ಬ ತಂದೆಯ ಮತದಂತೆ ನಡೆಯಿರಿ”
ಪ್ರಶ್ನೆ:
ಪುಣ್ಯಾತ್ಮರಾಗುವ ಯುಕ್ತಿಯೇನಾಗಿದೆ?
ಉತ್ತರ:
ಪುಣ್ಯಾತ್ಮರಾಗಬೇಕೆಂದರೆ ಸತ್ಯಹೃದಯದಿಂದ ಪ್ರೀತಿಯಿಂದ ಒಬ್ಬ ತಂದೆಯನ್ನು ನೆನಪು ಮಾಡಿ. 2.
ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮ ಮಾಡಬೇಡಿ. ಎಲ್ಲರಿಗೆ ಮಾರ್ಗವನ್ನು ತಿಳಿಸಿ ತಮ್ಮ ಹೃದಯವನ್ನು
ಕೇಳಿಕೊಳ್ಳಿ- ಈ ಪುಣ್ಯದ ಕಾರ್ಯವನ್ನು ನಾವು ಎಷ್ಟು ಮಾಡುತ್ತೇವೆ? ತಮ್ಮ ಪರಿಶೀಲನೆ ಮಾಡಿಕೊಳ್ಳಿ-
ನೂರುಪಟ್ಟು ಶಿಕ್ಷೆಯನ್ನು ಅನುಭವಿಸುವಂತಹ ಯಾವುದೆ ಕರ್ಮವಾಗಬಾರದು. ಹೀಗೆ ಪರಿಶೀಲನೆ
ಮಾಡಿಕೊಳ್ಳುವುದರಿಂದ ಪುಣ್ಯಾತ್ಮರಾಗಿಬಿಡುತ್ತೀರಿ.
ಓಂ ಶಾಂತಿ.
ಆತ್ಮಿಕ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಮಕ್ಕಳಿಗಿದು ತಿಳಿದಿದೆ- ನಾವೀಗ ಶಿವತಂದೆಯ ಮತದಂತೆ
ನಡೆಯುತ್ತಿದ್ದೇವೆ ಅವರದು ಸರ್ವಶ್ರೇಷ್ಠ ಮತವಾಗಿದೆ. ಸರ್ವಶ್ರೇಷ್ಠ ಶಿವತಂದೆಯು ಹೇಗೆ ಮಕ್ಕಳನ್ನು
ಶ್ರೇಷ್ಠಮತವನ್ನು ಕೊಡುತ್ತಾರೆಂಬುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಈ ರಾವಣರಾಜ್ಯದಲ್ಲಿ
ಯಾವುದೇ ಮನುಷ್ಯಮಾತ್ರರೂ ಮನುಷ್ಯರಿಗೆ ಶ್ರೇಷ್ಠಮತವನ್ನು ಕೊಡಲು ಸಾಧ್ಯವಿಲ್ಲ. ನೀವೀಗ ಈಶ್ವರೀಯ
ಮತದವರಾಗಿದ್ದೀರಿ. ಈ ಸಮಯದಲ್ಲಿ ನೀವು ಮಕ್ಕಳಿಗೆ ಪತಿತರಿಂದ ಪಾವನರಾಗುವುದಕ್ಕೆ ಈಶ್ವರೀಯ ಮತವು
ಸಿಗುತ್ತದೆ. ಈಗ ನಿಮಗೆ ಅರ್ಥವಾಗಿದೆ- ನಾವು ವಿಶ್ವದ ಮಾಲೀಕರಾಗಿದ್ದೆವು, ಈ ಬ್ರಹ್ಮಾರವರು ಯಾರು
ಮಾಲೀಕನಾಗಿದ್ದರೋ ಅವರಿಗೂ ಸಹ ತಿಳಿದಿರಲಿಲ್ಲ. ವಿಶ್ವದ ಮಾಲೀಕರೇ ನಂತರ ಒಮ್ಮೆಲೆ
ಪತಿತರಾಗಿಬಿಡುತ್ತಾರೆ. ಈ ಆಟವು ಬಹಳ ಚೆನ್ನಾಗಿ ಬುದ್ಧಿಯಿಂದ ತಿಳಿದುಕೊಳ್ಳುವಂತದ್ದಾಗಿದೆ.
ಸರಿ-ತಪ್ಪು ಯಾವುದಾಗಿದೆ, ಇದರಲ್ಲಿ ಬುದ್ಧಿಯ ಯುದ್ಧವಾಗಿದೆ. ಇಡೀ ಪ್ರಪಂಚವೇ ಅಸತ್ಯವಾಗಿದೆ,
ಒಬ್ಬ ತಂದೆಯೇ ಸತ್ಯವಾಗಿದ್ದಾರೆ. ಅವರು ನಿಮ್ಮನ್ನು ಸತ್ಯಖಂಡದ ಮಾಲೀಕರನ್ನಾಗಿ ಮಾಡುತ್ತಾರೆ
ಅಂದಮೇಲೆ ಅವರ ಮತವನ್ನು ತೆಗೆದುಕೊಳ್ಳಬೇಕಲ್ಲವೆ. ತನ್ನ ಮತದಂತೆ ನಡೆಯುವುದರಿಂದ ಮೋಸಹೋಗುತ್ತೀರಿ
ಆದರೆ ಅವರು ಗುಪ್ತವಾಗಿದ್ದಾರೆ. ನಿರಾಕಾರನಾಗಿದ್ದಾರೆ. ಬಹಳ ಮಕ್ಕಳು ಹುಡುಗಾಟಿಕೆ ಮಾಡುತ್ತಾರೆ,
ಇದು ದಾದಾರವರ ಮತವೆಂದು ತಿಳಿಯುತ್ತಾರೆ. ಮಾಯೆಯು ಶ್ರೇಷ್ಠಮತವನ್ನು ತೆಗೆದುಕೊಳ್ಳಲು
ಬಿಡುವುದಿಲ್ಲ. ಶ್ರೀಮತದಂತೆ ನಡೆಯಬೇಕಲ್ಲವೆ. ಬಾಬಾ ತಾವೇನೂ ಹೇಳುವಿರೋ ಅದನ್ನು ನಾವು ಅವಶ್ಯವಾಗಿ
ಪಾಲಿಸುತ್ತೇವೆ, ಆದರೆ ಯಾರೂ ಪಾಲಿಸುವುದೇ ಇಲ್ಲ. ನಂಬರ್ವಾರ್ ಪುರುಷಾರ್ಥದನುಸಾರ ಮತದಂತೆ
ನಡೆಯುತ್ತಾರೆ, ಉಳಿದವರಂತೂ ತಮ್ಮ ಮತವನ್ನು ನಡೆಸುತ್ತಾರೆ. ತಂದೆಯು ಶ್ರೇಷ್ಠಮತವನ್ನು ಕೊಡಲು
ಬಂದಿದ್ದಾರೆ. ಇಂತಹ ತಂದೆಯನ್ನು ಪದೇ-ಪದೇ ಮರೆತುಹೋಗುತ್ತಾರೆ. ಮಾಯೆಯು ಮತವನ್ನು ತೆಗೆದುಕೊಳ್ಳಲು
ಬಿಡುವುದಿಲ್ಲ. ಶ್ರೀಮತವಂತೂ ಬಹಳ ಸಹಜವಾಗಿದೆಯಲ್ಲವೆ. ಪ್ರಪಂಚದಲ್ಲಿ ನಾವು ತಮೋಪ್ರಧಾನರಾಗಿದ್ದೆವು
ಎಂಬ ಅರಿವು ಯಾರಿಗೂ ಇಲ್ಲ. ನನ್ನ ಮತವಂತೂ ಪ್ರಸಿದ್ಧವಾಗಿದೆ. ಶ್ರೀಮದ್ ಭಗವದ್ಗೀತೆಯನ್ನು ಈಗ
ಭಗವಂತನು ತಿಳಿಸುತ್ತಾರೆ- ನಾನು 5000 ವರ್ಷಗಳ ನಂತರ ಬರುತ್ತೇನೆ, ಬಂದು ಭಾರತಕ್ಕೆ ಶ್ರೀಮತವನ್ನು
ಕೊಟ್ಟು ಶ್ರೇಷ್ಠಾತಿಶ್ರೇಷ್ಠರನ್ನಾಗಿ ಮಾಡುತ್ತೇನೆ. ತಂದೆಯು ಸಾವಧಾನ ನೀಡುತ್ತಾರೆ- ಮಕ್ಕಳು
ಶ್ರೀಮತದಂತೆ ನಡೆಯುವುದಿಲ್ಲ. ತಂದೆಯು ಪ್ರತಿನಿತ್ಯವೂ ತಿಳಿಸುತ್ತಿರುತ್ತಾರೆ- ಮಕ್ಕಳೇ,
ಶ್ರೀಮತದಂತೆ ನಡೆಯುವುದನ್ನು ಮರೆಯಬೇಡಿ. ಈ ಬ್ರಹ್ಮಾರವರ ಮಾತೇ ಇಲ್ಲ. ಶಿವತಂದೆಯ ಮಾತೆಂದು
ತಿಳಿಯಿರಿ. ಅವರೇ ಇವರ ಮೂಲಕ ಮತವನ್ನು ಕೊಡುತ್ತಾರೆ, ಅವರೇ ತಿಳಿಸಿಕೊಡುತ್ತಾರೆ.
ಆಹಾರ-ಪಾನೀಯಗಳನ್ನು ಸೇವಿಸುವುದಿಲ್ಲ, ನಾನು ಅಭೋಕ್ತನಾಗಿದ್ದೇನೆ, ನೀವು ಮಕ್ಕಳಿಗೆ ಶ್ರೀಮತವನ್ನು
ಕೊಡುತ್ತೇನೆ ಎಂದು ತಿಳಿಸುತ್ತಾರೆ. ನಂಬರ್ವನ್ ಮತವನ್ನು ಕೊಡುತ್ತಾರೆ- ಮಕ್ಕಳೇ, ನನ್ನನ್ನು ನೆನಪು
ಮಾಡಿ. ಯಾವುದೇ ವಿಕರ್ಮ ಮಾಡಬೇಡಿ. ತಮ್ಮ ಹೃದಯವನ್ನು ಕೇಳಿಕೊಳ್ಳಿ- ಎಷ್ಟು ಪಾಪ ಮಾಡಿದ್ದೇನೆ?
ಇದನ್ನಂತೂ ತಿಳಿದುಕೊಂಡಿದ್ದೀರಿ- ಎಲ್ಲರ ಪಾಪದ ಗಡಿಗೆಯು ತುಂಬಿದೆ, ಈ ಸಮಯದಲ್ಲಿ ಎಲ್ಲರೂ ತಪ್ಪು
ಮಾರ್ಗದಲ್ಲಿ ಇದ್ದಾರೆ, ಈಗ ತಂದೆಯ ಮೂಲಕ ನಿಮಗೆ ಸರಿಯಾದ ಮಾರ್ಗವು ಸಿಕ್ಕಿದೆ. ನಿಮ್ಮ
ಬುದ್ಧಿಯಲ್ಲಿ ಪೂರ್ಣಜ್ಞಾನವಿದೆ. ಗೀತೆಯಲ್ಲಿ ಯಾವ ಜ್ಞಾನವಿರಬೇಕೋ ಅದು ಇಲ್ಲ. ಅದು ತಂದೆಯಿಂದ
ಮಾಡಲ್ಪಟ್ಟ ಗೀತೆಯಲ್ಲ. ಇದೂ ಸಹ ಭಕ್ತಿಮಾರ್ಗದಲ್ಲಿ ನಿಗಧಿಯಾಗಿದೆ. ಭಗವಂತನು ಬಂದು ಭಕ್ತಿಯ
ಫಲವನ್ನು ಕೊಡುವರೆಂದು ಹೇಳುತ್ತಾರೆ. ಮಕ್ಕಳಿಗೆ ತಿಳಿಸಲಾಗಿದೆ- ಜ್ಞಾನದಿಂದ ಸದ್ಗತಿ, ಎಲ್ಲರದೂ
ಸದ್ಗತಿಯಾಗುತ್ತದೆ. ಎಲ್ಲರದೂ ದುರ್ಗತಿಯಾಗುತ್ತದೆ. ಈ ಪ್ರಪಂಚವೇ ತಮೋಪ್ರಧಾನವಾಗಿದೆ. ಯಾರೂ
ಸತೋಪ್ರಧಾನರಿಲ್ಲ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಕೊನೆಯಲ್ಲಿ
ಬಂದುಬಿಟ್ಟಿದ್ದಾರೆ. ಈಗ ಮೃತ್ಯುವು ಎಲ್ಲರ ತಲೆಯ ಮೇಲೆ ನಿಂತಿದೆ. ಇದು ಭಾರತದ್ದೇ ಮಾತಾಗಿದೆ.
ದೇವಿ-ದೇವತಾಧರ್ಮದ ಶಾಸ್ತ್ರವೆಂದು ಗೀತೆಯೂ ಇದೆ. ಅಂದಮೇಲೆ ನೀವು ಅನ್ಯ ಯಾವುದೆ ಧರ್ಮದಲ್ಲಿ
ಹೋಗುವುದರಿಂದೇನು ಲಾಭ! ಪ್ರತಿಯೊಬ್ಬರೂ ತಮ್ಮ-ತಮ್ಮ ಖುರಾನ್, ಬೈಬಲ್ ಇತ್ಯಾದಿಯನ್ನು ಓದುತ್ತಾರೆ,
ತಮ್ಮ ಧರ್ಮವನ್ನು ತಿಳಿದುಕೊಂಡಿದ್ದಾರೆ. ಭಾರತವಾಸಿಗಳು ಮಾತ್ರವೇ ಅನ್ಯ ಎಲ್ಲಾ ಧರ್ಮಗಳಲ್ಲಿ
ಹೊರಟುಹೋಗುತ್ತಾರೆ. ಮತ್ತೆಲ್ಲರೂ ತಮ್ಮ-ತಮ್ಮ ಧರ್ಮದಲ್ಲಿ ಸ್ಥಿರವಾಗಿ ನಿಂತಿದ್ದಾರೆ. ಪ್ರತಿಯೊಂದು
ಧರ್ಮದವರ ಚಹರೆಯು ಬೇರೆಯಾಗಿರುತ್ತದೆ. ತಂದೆಯು ಸ್ಮೃತಿಗೆ ತರಿಸುತ್ತಾರೆ- ಮಕ್ಕಳೇ, ತಮ್ಮ
ದೇವಿ-ದೇವತಾಧರ್ಮವನ್ನು ಮರೆತುಹೋಗಿದ್ದೀರಿ, ನೀವು ಸ್ವರ್ಗದ ದೇವತೆಗಳಾಗಿದ್ದೀರಿ, ಹಮ್ ಸೋ ಸೋ
ಹಮ್ನ ಅರ್ಥವನ್ನು ತಂದೆಯೇ ತಿಳಿಸುತ್ತಾರೆ. ನಾವಾತ್ಮರೇ ಪರಮಾತ್ಮನೆಂದಲ್ಲ. ಈ ಮಾತುಗಳನ್ನು
ಭಕ್ತಿಮಾರ್ಗದ ಗುರುಗಳು ಬರೆದಿದ್ದಾರೆ, ಕೋಟ್ಯಾಂತರ ಮಂದಿ ಗುರುಗಳಿದ್ದಾರೆ. ಸ್ತ್ರೀಗೆ ನಿಮ್ಮ
ಪತಿಯೇ ನಿಮ್ಮ ಗುರು, ಈಶ್ವರ, ಸರ್ವಸ್ವವೆಂದು ಹೇಳುತ್ತಾರೆ. ಯಾವಾಗ ಪತಿಯೇ ಈಶ್ವರನೆಂದಮೇಲೆ ಮತ್ತೆ
ಹೇ ಭಗವಂತ, ಹೇ ರಾಮ ಎಂದು ಏಕೆ ಹೇಳುತ್ತೀರಿ? ಮನುಷ್ಯರ ಬುದ್ಧಿಯು ಕಲ್ಲಾಗಿಬಿಟ್ಟಿದೆ.
ಇವರು(ಬ್ರಹ್ಮಾ) ಸಹ ಹೇಳುತ್ತಾರೆ- ನಾನೂ ಇದೇ ರೀತಿಯಿದ್ದೆನು, ವೈಕುಂಠದ ಮಾಲೀಕ ಶ್ರೀಕೃಷ್ಣನೆಲ್ಲಿ!
ಮತ್ತೆ ಅವರಿಗೆ ಗೊಲ್ಲಬಾಲಕನೆಂದು ಹೇಳಿರುವುದೆಲ್ಲಿ! ಶ್ಯಾಮಸುಂದರನೆಂದು ಹೇಳುತ್ತಾರೆ, ಅರ್ಥವನ್ನು
ತಿಳಿದುಕೊಂಡೇ ಇಲ್ಲ. ಈಗ ತಂದೆಯು ತಿಳಿಸುತ್ತಾರೆ- ಯಾರು ನಂಬರ್ವನ್ ಸುಂದರನೋ ಅವರೇ ಕೊನೆಯಲ್ಲಿ
ತಮೋಪ್ರಧಾನ ಶ್ಯಾಮನಾಗಿದ್ದಾರೆ. ನೀವೂ ಸಹ ತಿಳಿದುಕೊಂಡಿದ್ದೀರಿ- ನಾವು ಮೊದಲು ಸುಂದರರಾಗಿದ್ದೆವು,
ಈಗ ಶ್ಯಾಮರಾಗಿದ್ದೇವೆ. 84 ಜನ್ಮಗಳ ಚಕ್ರವನ್ನು ಸುತ್ತಿ ಈಗ ಶ್ಯಾಮನಿಂದ ಸುಂದರರಾಗಲು ತಂದೆಯು
ಒಂದೇ ಔಷಧಿಯನ್ನು ಕೊಡುತ್ತಾರೆ. ನನ್ನನ್ನು ನೆನಪು ಮಾಡಿರಿ, ನೀವಾತ್ಮರು ಪತಿತರಿಂದ
ಪಾವನರಾಗಿಬಿಡುವಿರಿ. ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ನಾಶವಾಗಿಬಿಡುತ್ತವೆ.
ನೀವು
ತಿಳಿದುಕೊಂಡಿದ್ದೀರಿ- ರಾವಣನು ಯಾವಾಗ ಬಂದನೋ ಆಗಿನಿಂದಲೇ ನೀವು ಇಳಿಯುತ್ತಾ-ಇಳಿಯುತ್ತಾ
ಪಾಪಾತ್ಮರಾಗಿದ್ದೀರಿ. ಇದು ಪಾಪಾತ್ಮರ ಪ್ರಪಂಚವಾಗಿದೆ. ಒಬ್ಬರೂ ಸುಂದರರಿಲ್ಲ. ತಂದೆಯ ವಿನಃ
ಮತ್ತ್ಯಾರೂ ಸುಂದರರನ್ನಾಗಿ ಮಾಡಲು ಸಾಧ್ಯವಿಲ್ಲ. ನೀವು ಸ್ವರ್ಗವಾಸಿ ಸುಂದರರಾಗಲು ಬಂದಿದ್ದೀರಿ,
ಈಗ ನರಕವಾಸಿ ಶ್ಯಾಮರಾಗಿದ್ದೀರಿ ಏಕೆಂದರೆ ಕಾಮಚಿತೆಯನ್ನೇರಿ ಕಪ್ಪಾಗಿದ್ದೀರಿ. ತಂದೆಯು
ತಿಳಿಸುತ್ತಾರೆ- ಕಾಮ ಮಹಾಶತ್ರುವಾಗಿದೆ. ಯಾರು ಇದರಮೇಲೆ ಜಯಗಳಿಸುವರೋ ಅವರೇ ಜಗಜ್ಜೀತರಾಗುತ್ತಾರೆ.
ಕಾಮವೇ ನಂಬರ್ವನ್ ಆಗಿದೆ. ಕಾಮಿಗೆ ಪತಿತರೆಂದು ಹೇಳಲಾಗುತ್ತದೆ, ಕ್ರೋಧಿಗೆ ಪತಿತರೆಂದು
ಹೇಳುವುದಿಲ್ಲ. ಪತಿತ-ಪಾವನ ಬಂದು ಪತಿತರಿಂದ ಪಾವನ ಮಾಡಿ ಎಂದು ಕರೆಯುತ್ತಾರೆ ಆದ್ದರಿಂದ ಈಗ
ತಂದೆಯು ಬಂದಿದ್ದಾರೆ- ಈ ಅಂತಿಮ ಜನ್ಮದಲ್ಲಿ ಪಾವನರಾಗಿ ಎಂದು ತಿಳಿಸುತ್ತಾರೆ. ಹೇಗೆ ರಾತ್ರಿಯ
ದಿನ, ದಿನದ ನಂತರ ರಾತ್ರಿಯಾಗುತ್ತದೆಯೋ ಹಾಗೆಯೇ ಸಂಗಮಯುಗದ ನಂತರ ಮತ್ತೆ ಸತ್ಯಯುಗವು
ಬರಬೇಕಾಗುತ್ತದೆ. ಚಕ್ರವು ಸುತ್ತುತ್ತದೆ. ಬಾಕಿ ಮತ್ತ್ಯಾವುದೇ ಆಕಾಶದಲ್ಲಿ ಅಥವಾ ಪಾತಾಳದಲ್ಲಿ
ಪ್ರಪಂಚವಿಲ್ಲ. ಸೃಷ್ಟಿಯು ಇದೇ ಆಗಿದೆ- ಸತ್ಯಯುಗ, ತ್ರೇತಾಯುಗ, ಇಲ್ಲಿಯೇ ಆಗುತ್ತದೆ. ವೃಕ್ಷವು
ಒಂದೇ ಆಗಿದೆ, ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ಅನೇಕ ಪ್ರಪಂಚಗಳಿವೆಯೆಂದು ಮನುಷ್ಯರು ಸುಳ್ಳು
ಹೇಳಿದ್ದಾರೆ. ತಂದೆಯು ತಿಳಿಸುತ್ತಾರೆ- ಇವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಈಗ ತಂದೆಯು
ಸತ್ಯಮಾರ್ಗವನ್ನು ತಿಳಿಸುತ್ತಾರೆ ಅಂದಮೇಲೆ ತಮ್ಮಲ್ಲಿ ನೋಡಿಕೊಳ್ಳಿ- ನಾವು ಎಲ್ಲಿಯವರೆಗೆ
ಶ್ರೀಮತದಂತೆ ನಡೆದು ಸತೋಪ್ರಧಾನ ಅರ್ಥಾತ್ ಪುಣ್ಯಾತ್ಮನಾಗುತ್ತಿದ್ದೇವೆ? ಸತೋಪ್ರಧಾನರಾಗಿ
ಪುಣ್ಯಾತ್ಮ, ತಮೋಪ್ರಧಾನರಾಗಿ ಪಾಪಾತ್ಮರೆಂದು ಹೇಳಲಾಗುತ್ತದೆ. ವಿಕಾರದಲ್ಲಿ ಹೋಗುವುದು ಪಾಪವಾಗಿದೆ
ಆದ್ದರಿಂದ ತಂದೆಯು ತಿಳಿಸುತ್ತಾರೆ- ಈಗ ಪವಿತ್ರರಾಗಿ ನನ್ನವರಾಗುತ್ತೀರೆಂದರೆ ನನ್ನ ಶ್ರೀಮತದಂತೆ
ನಡೆಯಬೇಕಾಗಿದೆ. ಮುಖ್ಯಮಾತೇನೆಂದರೆ ಯಾವುದೇ ಪಾಪವನ್ನು ಮಾಡಬೇಡಿ. ವಿಕಾರದಲ್ಲಿ ಹೋಗುವುದು
ಮೊಟ್ಟಮೊದಲನೇ ಪಾಪವಾಗಿದೆ. ಮತ್ತೆ ಇನ್ನೂ ಬಹಳಷ್ಟು ಪಾಪವಾಗುತ್ತದೆ, ಕಳ್ಳತನ, ಮೋಸ ಬಹಳಷ್ಟು
ಮಾಡುತ್ತಾರೆ. ಅನೇಕರನ್ನು ಸರ್ಕಾರವು ಹಿಡಿಯುತ್ತದೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಈಗ
ನೀವು ಹೃದಯದಿಂದ ಕೇಳಿಕೊಳ್ಳಿ, ನಾವು ಯಾವುದೇ ಪಾಪವನ್ನು ಮಾಡುತ್ತಿಲ್ಲವೆ? ನಾವು ಕಳ್ಳತನ
ಮಾಡಿದೆವು ಅಥವಾ ಲಂಚ ತಿಂದೆವೆಂದರೆ ಈ ಬಾಬಾರವರು ತಿಳಿದು-ತಿಳಿಸುವವರಾಗಿದ್ದಾರೆ. ಎಲ್ಲವನ್ನೂ
ತಿಳಿದುಕೊಂಡಿದ್ದಾರೆ ತಿಳಿಯಬೇಡಿ. ತಿಳಿದು-ತಿಳಿಸುವವರು ಎನ್ನುವುದರ ಅರ್ಥವು ಇದಲ್ಲ. ಯಾರಾದರೂ
ಕಳ್ಳತನ ಮಾಡಿದರೆ ತಂದೆಗೆ ತಿಳಿಯುತ್ತದೆ, ನಂತರ ಏನಾಗುವುದು? ಯಾರು ಕಳ್ಳತನ ಮಾಡಿದರೋ ಅವರಿಗೆ
ನೂರುಪಟ್ಟು ಶಿಕ್ಷೆಯು ಸಿಗುವುದು. ಬಹಳ ಶಿಕ್ಷೆಯನ್ನನುಭವಿಸುತ್ತಾರೆ. ಪದವಿಯು ಭ್ರಷ್ಟವಾಗುವುದು.
ತಂದೆಯು ತಿಳಿಸುತ್ತಾರೆ- ಒಂದುವೇಳೆ ಇಂತಹ ಕರ್ಮವನ್ನು ಮಾಡುತ್ತೀರೆಂದರೆ ಶಿಕ್ಷೆಯನ್ನು
ಅನುಭವಿಸಬೇಕಾಗುವುದು. ಯಾರಾದರೂ ಈಶ್ವರನ ಮಗುವಾಗಿ ಕಳ್ಳತನ ಮಾಡುತ್ತಾರೆ, ಯಾವ ಶಿವತಂದೆಯಿಂದ
ಇಷ್ಟೊಂದು ಆಸ್ತಿಯು ಸಿಗುತ್ತದೆಯೋ ಅವರ ಭಂಡಾರದಿಂದ ಕದಿಯುತ್ತಾರೆಂದರೆ ಇದು ಬಹಳ ದೊಡ್ಡಪಾಪವಾಗಿದೆ.
ಕೆಲವರಲ್ಲಿ ಕಳ್ಳತನದ ಹವ್ಯಾಸವಿರುತ್ತದೆ, ಅಂತಹವರಿಗೂ ಪಂಜರದ ಪಕ್ಷಿಯೆಂದು ಹೇಳಲಾಗುತ್ತದೆ. ಇದು
ಈಶ್ವರನ ಮನೆಯಾಗಿದೆ, ಎಲ್ಲವೂ ಈಶ್ವರನದಾಗಿದೆಯಲ್ಲವೆ. ತಂದೆಯಿಂದ ಆಸ್ತಿಯನ್ನು ಪಡೆಯಲು ಈಶ್ವರನ
ಮನೆಗೆ ಬರುತ್ತೀರಿ ಆದರೆ ಕೆಲವರಿಗೆ ಈ ಹವ್ಯಾಸವಾಗಿಬಿಡುತ್ತದೆ. ಇದಕ್ಕೆ ನೂರುಪಟ್ಟು
ಶಿಕ್ಷೆಯಾಗುತ್ತದೆ. ಬಹಳಷ್ಟು ಶಿಕ್ಷೆಯು ಸಿಗುತ್ತದೆ ಮತ್ತು ಪ್ರತೀ ಜನ್ಮದಲ್ಲಿಯೂ ಕೊಳಕು
ಮನೆಯಲ್ಲಿ ಹೋಗಿ ಜನ್ಮಪಡೆಯುತ್ತಾರೆ ಅಂದಾಗ ತಮ್ಮದೇ ನಷ್ಟಮಾಡಿಕೊಂಡಿರಲ್ಲವೆ. ಹೀಗೆ ಅನೇಕರಿದ್ದಾರೆ,
ನೆನಪಿನಲ್ಲಿ ಇರುವುದೇ ಇಲ್ಲ. ಏನನ್ನೂ ಕೇಳುವುದೇ ಇಲ್ಲ. ಬುದ್ಧಿಯಲ್ಲಿ ಕಳ್ಳತನದ ಸಂಕಲ್ಪಗಳೇ
ನಡೆಯುತ್ತವೆ. ಹೀಗೆ ಅನೇಕರು ಸತ್ಸಂಗದಲ್ಲಿ ಹೋಗುತ್ತಾರೆ, ಚಪ್ಪಲಿಯನ್ನು ಕಳವು ಮಾಡಿಕೊಂಡು
ಬರುತ್ತಾರೆ, ಅವರ ವ್ಯವಹಾರವೇ ಇದಾಗಿರುತ್ತದೆ, ಎಲ್ಲಿ ಸತ್ಸಂಗವಾಗುವುದೋ ಅಲ್ಲಿಗೆ ಹೋಗಿ
ಚಪ್ಪಲಿಯನ್ನು ಕದ್ದುಕೊಂಡು ಬರುತ್ತಾರೆ. ಪ್ರಪಂಚವೇ ಕೊಳಕಾಗಿದೆ, ಇದಂತೂ ಈಶ್ವರನ ಮನೆಯಾಗಿದೆ.
ಕಳ್ಳತನದ ಹವ್ಯಾಸವಿರುವುದು ಬಹಳ ಕೆಟ್ಟದ್ದಾಗಿದೆ. ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳನೆಂದು
ಹೇಳಲಾಗುತ್ತದೆ ಆದ್ದರಿಂದ ತಮ್ಮೊಳಗೆ ಕೇಳಿಕೊಳ್ಳಿ- ನಾನು ಎಷ್ಟು ಪುಣ್ಯಾತ್ಮನಾಗಿದ್ದೇನೆ?
ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ? ಎಷ್ಟು ಸ್ವದರ್ಶನ ಚಕ್ರಧಾರಿಯಾಗುತ್ತೇನೆ? ಎಷ್ಟು ಸಮಯ
ಈಶ್ವರೀಯ ಸೇವೆಯಲ್ಲಿರುತ್ತೇನೆ? ಎಷ್ಟು ಪಾಪಗಳು ತುಂಡಾಗುತ್ತಾ ಹೋಗುತ್ತಿವೆ? ಹೀಗೆ ಪ್ರತಿನಿತ್ಯವೂ
ತಮ್ಮ ಲೆಕ್ಕಪತ್ರವನ್ನು ನೋಡಿಕೊಳ್ಳಿ, ಎಷ್ಟು ಪುಣ್ಯ ಮಾಡಿದೆನು? ಎಷ್ಟು ಯೋಗ ಮಾಡಿದೆನು? ಎಷ್ಟು
ಮಂದಿಗೆ ಮಾರ್ಗವನ್ನು ತಿಳಿಸಿದೆನು? ಉದ್ಯೋಗ-ವ್ಯವಹಾರವನ್ನು ಭಲೆ ಮಾಡಿ, ನೀವು
ಕರ್ಮಯೋಗಿಗಳಾಗಿದ್ದೀರಿ, ಕರ್ಮವನ್ನಂತೂ ಭಲೆ ಮಾಡಿ. ತಂದೆಯು ಈ ಪದಕಗಳನ್ನೂ ಸಹ
ಮಾಡಿಸುತ್ತಿರುತ್ತಾರೆ. ಒಳ್ಳೊಳ್ಳೆಯವರಿಗೆ ಇದರ ಬಗ್ಗೆ ತಿಳಿಸಿ- ಈ ಮಹಾಭಾರತದ ಯುದ್ಧದ ಮೂಲಕವೇ ಈ
ಸ್ವರ್ಗದ ಬಾಗಿಲುಗಳು ತೆರೆಯುತ್ತಿವೆ. ಕೃಷ್ಣನ ಚಿತ್ರದಲ್ಲಿ ಕೆಳಗೆ ಬರವಣಿಗೆಯು ಬಹಳ ಚೆನ್ನಾಗಿದೆ
ಆದರೆ ಮಕ್ಕಳು ಇನ್ನೂ ಅಷ್ಟೊಂದು ವಿಶಾಲಬುದ್ಧಿಯವರಾಗಿಲ್ಲ. ಸ್ವಲ್ಪ ಹಣ ಸಿಕ್ಕಿದರೂ
ನರ್ತಿಸತೊಡಗುತ್ತಾರೆ. ಯಾರಾದರೂ ಹೆಚ್ಚು ಹಣವಿದ್ದರೆ ನಮ್ಮ ಹಾಗೆ ಯಾರಿಗೂ ಇಲ್ಲವೆಂದು
ತಿಳಿಯುತ್ತಾರೆ. ಯಾವ ಮಕ್ಕಳಿಗೆ ತಂದೆಯ ಪ್ರತಿ ಗೌರವವಿಲ್ಲವೋ ಅವರಿಗೆ ತಂದೆಯು ಯಾವ ಇಷ್ಟೊಂದು
ಜ್ಞಾನರತ್ನಗಳ ಖಜಾನೆಯನ್ನು ಕೊಡುತ್ತಾರೆಯೋ ಅದರ ಬಗ್ಗೆಯೂ ಬೆಲೆಯಿರುವುದಿಲ್ಲ. ತಂದೆಯು
ಒಂದುಮಾತನ್ನು ಹೇಳಿದರೆ ಅವರು ಇನ್ನೊಂದು ಮಾತನಾಡುತ್ತಾರೆ. ಬೆಲೆಯಿಲ್ಲದಕಾರಣ ಬಹಳಷ್ಟು ಪಾಪ
ಮಾಡುತ್ತಿರುತ್ತಾರೆ. ಶ್ರೀಮತದಂತೆ ನಡೆಯುವುದಿಲ್ಲ, ಇಂತಹವರು ಕೆಳಗೆ ಬೀಳುತ್ತಾರೆ. ತಂದೆಯು
ಹೇಳುತ್ತಾರೆ- ಇದೂ ಸಹ ನಾಟಕವಾಗಿದೆ, ಅವರ ಅದೃಷ್ಟದಲ್ಲಿಲ್ಲ. ತಂದೆಗೆ ಗೊತ್ತಿದೆಯಲ್ಲವೆ- ಬಹಳಷ್ಟು
ಪಾಪಗಳನ್ನು ಮಾಡುತ್ತಾರೆ. ಒಂದುವೇಳೆ ತಂದೆಯೇ ನಮಗೆ ಓದಿಸುತ್ತಾರೆಂದರೆ ಬಹಳ ಖುಷಿಯಿರಬೇಕು. ನಿಮಗೆ
ತಿಳಿದಿದೆ- ನಾವು ಭವಿಷ್ಯ ಹೊಸಪ್ರಪಂಚದಲ್ಲಿ ರಾಜಕುಮಾರ-ಕುಮಾರಿಯರಾಗುತ್ತೇವೆ ಅಂದಾಗ ಎಷ್ಟೊಂದು
ಖುಷಿಯಿರಬೇಕು! ಆದರೆ ಮಕ್ಕಳು ಇಲ್ಲಿಯವರೆಗೂ ಸಹ ಬಾಡುತ್ತಲೇ ಇರುತ್ತಾರೆ, ಆ ಸ್ಥಿತಿಯು ಬಂದಿಲ್ಲ.
ಸ್ವಯಂ ತಂದೆಯು
ತಿಳಿಸುತ್ತಾರೆ- ವಿನಾಶಕ್ಕೆ ರಿಹರ್ಸಲ್ ಸಹ ಆಗುತ್ತದೆ. ಭಾರತವನ್ನು ಬಲಹೀನ ಮಾಡುತ್ತಾ ಹೋಗುತ್ತದೆ.
ತಂದೆಯು ಸ್ವಯಂ ಹೇಳುತ್ತಾರೆ- ಇದೆಲ್ಲವೂ ಆಗಲೇಬೇಕಾಗಿದೆ. ಇಲ್ಲವೆಂದರೆ ವಿನಾಶವು ಹೇಗಾಗುತ್ತದೆ.
ಹಿಮದ ಮಳೆ ಬೀಳುವುದು ಆಗ ಬೆಳೆ ಇತ್ಯಾದಿಗಳೇನಾಗುವುದು! ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ,
ಇದನ್ನು ಯಾರೂ ತಿಳಿಸುವುದಿಲ್ಲ ಆದ್ದರಿಂದ ತಂದೆಯು ಮುಖ್ಯಮಾತನ್ನು ತಿಳಿಸುತ್ತಾರೆ- ಮಕ್ಕಳೇ,
ತಮ್ಮಲ್ಲಿ ಹೀಗೇ ಪರಿಶೀಲನೆ ಮಾಡಿಕೊಳ್ಳಿ, ನಾನು ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ? ಬಾಬಾ,
ತಾವಂತೂ ಮಧುರರಾಗಿದ್ದೀರಿ, ತಮ್ಮದು ಚಮತ್ಕಾರವಾಗಿದೆ. ತಮ್ಮ ಆದೇಶವಾಗಿದೆ- ನನ್ನನ್ನು ನೆನಪು
ಮಾಡಿದರೆ 21 ಜನ್ಮಗಳಿಗಾಗಿ ಎಂದಿಗೂ ರೋಗಿಯಾಗುವುದಿಲ್ಲ. ತಮ್ಮನ್ನು ಆತ್ಮವೆಂದು ತಿಳಿದು
ತಂದೆಯನ್ನು ನೆನಪು ಮಾಡಿರಿ ಆಗ ನಾನು ಗ್ಯಾರಂಟಿ ಕೊಡುತ್ತೇನೆ. ಸನ್ಮುಖದಲ್ಲಿ ತಂದೆಯು ನಿಮಗೆ
ಹೇಳುತ್ತಾರೆ- ನೀವು ಮತ್ತೆ ಅನ್ಯರಿಗೂ ತಿಳಿಸುತ್ತೀರಿ. ತಂದೆಯು ತಿಳಿಸುತ್ತಾರೆ- ತಂದೆಯಾದ
ನನ್ನನ್ನು ನೆನಪು ಮಾಡಿ, ಬಹಳ ಪ್ರೀತಿ ಮಾಡಿ. ನಿಮಗೆ ಪತಿತರಿಂದ ಪಾವನರಾಗುವ ಎಷ್ಟು
ಸಹಜಮಾರ್ಗವನ್ನು ತಿಳಿಸುತ್ತೇನೆ! ನಾವಂತೂ ಬಹಳ ಪಾಪಾತ್ಮರಾಗಿದ್ದೇವೆಂದು ಕೆಲವರು ಹೇಳುತ್ತಾರೆ.
ಒಳ್ಳೆಯದು- ಮತ್ತೆಂದೂ ಇಂತಹ ಪಾಪ ಮಾಡಬೇಡಿ, ನನ್ನನ್ನು ನೆನಪು ಮಾಡುತ್ತಾ ಇರಿ ಆಗ
ಜನ್ಮ-ಜನ್ಮಾಂತರದ ಯಾವ ಪಾಪವಿದೆಯೋ ಅದು ಈ ನೆನಪಿನಿಂದ ಭಸ್ಮವಾಗುತ್ತಾ ಹೋಗುತ್ತದೆ. ನೆನಪಿನದೇ
ಮುಖ್ಯಮಾತಾಗಿದೆ, ಇದಕ್ಕೆ ಸಹಜ ನೆನಪೆಂದು ಹೇಳಲಾಗುತ್ತದೆ ಅಂದಾಗ ಯೋಗ ಎಂಬ ಶಬ್ಧವನ್ನು
ತೆಗೆದುಬಿಡಿ, ಸನ್ಯಾಸಿಗಳು ಭಿನ್ನ-ಭಿನ್ನ ಪ್ರಕಾರದ ಹಠಯೋಗಗಳಿವೆ, ಅನೇಕ ಪ್ರಕಾರದಿಂದ
ಕಲಿಸುತ್ತಾರೆ. ಈ ಬಾಬಾರವರು (ಬ್ರಹ್ಮಾ) ಬಹಳಷ್ಟು ಗುರುಗಳನ್ನು ಮಾಡಿಕೊಂಡಿದ್ದರಲ್ಲವೆ. ಈಗ
ಬೇಹದ್ದಿನ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಇದೆಲ್ಲವನ್ನೂ ಬಿಡಿ, ನಾನೇ ಇವರೆಲ್ಲರ ಉದ್ಧಾರ
ಮಾಡಬೇಕಾಗಿದೆ. ಈ ಮಾತನ್ನು ಹೇಳಲು ಮತ್ತ್ಯಾರಿಗೂ ಶಕ್ತಿಯಿಲ್ಲ. ತಂದೆಯೂ ಹೇಳಿದ್ದಾರೆ- ನಾನು ಈ
ಸಾಧುಗಳೆಲ್ಲರ ಉದ್ಧಾರವನ್ನು ಮಾಡುತ್ತೇನೆ ಅಂದಮೇಲೆ ಇವರು ಗುರುಗಳಾಗಲು ಹೇಗೆ ಸಾಧ್ಯ! ಅಂದಾಗ
ಮೂಲಮಾತನ್ನು ತಂದೆಯು ತಿಳಿಸುತ್ತಾರೆ- ತಮ್ಮ ಹೃದಯದಿಂದ ಕೇಳಿಕೊಳ್ಳಿ, ನಾನು ಯಾವುದೇ ಪಾಪವನ್ನು
ಮಾಡುತ್ತಿಲ್ಲವೆ? ಯಾರಿಗೂ ದುಃಖವನ್ನು ಕೊಡುತ್ತಿಲ್ಲವೆ? ಇದರಲ್ಲಿ ಯಾವುದೇ ಕಷ್ಟವಿಲ್ಲ.
ಆಂತರ್ಯದಲ್ಲಿ ಪರಿಶೀಲನೆ ಮಾಡಿಕೊಳ್ಳಬೇಕು. ಇಡೀ ದಿನದಲ್ಲಿ ಎಷ್ಟು ಪಾಪ ಮಾಡಿದೆನು? ಎಷ್ಟು ನೆನಪು
ಮಾಡಿದೆನು? ನೆನಪಿನಿಂದಲೇ ಪಾಪಗಳು ಭಸ್ಮವಾಗುತ್ತವೆ ಆದ್ದರಿಂದ ಪ್ರಯತ್ನಪಡಬೇಕು, ಇದು ಬಹಳ
ಪರಿಶ್ರಮದ ಕೆಲಸವಾಗಿದೆ. ಜ್ಞಾನವನ್ನು ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ. ತಂದೆಯೇ
ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯು ಯಾವ
ಅವಿನಾಶಿ ಜ್ಞಾನರತ್ನಗಳ ಖಜಾನೆಯನ್ನು ಕೊಡುತ್ತಾರೆಯೋ ಅದರ ಪ್ರತಿ ಬೆಲೆಯಿರಬೇಕಾಗಿದೆ.
ನಿರ್ಲಕ್ಷ್ಯರಾಗಿ ಪಾಪಕರ್ಮ ಮಾಡಬಾರದು. ಒಂದುವೇಳೆ ಭಗವಂತನೇ ನಮಗೆ ಓದಿಸುತ್ತಾರೆಂಬ
ನಿಶ್ಚಯವಿದೆಯೆಂದರೆ ಅಪಾರ ಖುಷಿಯಲ್ಲಿರಬೇಕಾಗಿದೆ.
2. ಈಶ್ವರನ ಮನೆಯಲ್ಲೆಂದೂ
ಕಳ್ಳತನ ಇತ್ಯಾದಿಗಳನ್ನು ಮಾಡುವ ಸಂಕಲ್ಪ ಬರಬಾರದು. ಈ ಹವ್ಯಾಸವು ಬಹಳ ಕೆಟ್ಟದ್ದಾಗಿದೆ. ಅಡಿಕೆ
ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ ಎಂದು ಹೇಳಲಾಗುತ್ತದೆ. ತಮ್ಮ ಹೃದಯದಿಂದ ಕೇಳಿಕೊಳ್ಳಬೇಕು- ನಾನು
ಎಷ್ಟು ಪುಣ್ಯಾತ್ಮನಾಗಿದ್ದೇನೆ?
ವರದಾನ:
ನಿರ್ಬಲ,
ನಿರುತ್ಸಾಹಿ, ಅಸಮರ್ಥ ಆತ್ಮಗಳಿಗೆ ಹೆಚ್ಚಿನ ಬಲ ಕೊಡುವಂತಹ ಆತ್ಮೀಯ ದಯಾಹೃದಯಿ ಭವ
ಯಾರು ಆತ್ಮೀಯ ದಯಾಹೃದಯಿ
ಮಕ್ಕಳಾಗಿದ್ದಾರೆ- ಅವರು ಮಹಾದಾನಿಯಾಗಿ ಪೂರ್ತಿ ನಿರಾಶಾವಾದಿಗಳಲ್ಲಿಯೂ ಆಸೆಯನ್ನು
ಹುಟ್ಟಿಸುತ್ತಾರೆ. ನಿರ್ಬಲರನ್ನು ಬಲವಂತರನ್ನಾಗಿ ಮಾಡುತ್ತಾರೆ. ದಾನವನ್ನು ಸದಾ ಬಡವರಿಗೆ.
ನಿರಾಶ್ರಿತರಿಗೆ ಕೊಡಲಾಗುತ್ತದೆ. ಅಂದರೆ ಯಾರು ನಿರ್ಬಲ ನಿರುತ್ಸಾಹಿ ಅಸಮರ್ಥ ಪ್ರಜಾ ಕ್ವಾಲಿಟಿಯ
ಆತ್ಮಗಳಿರುತ್ತಾರೆ ಅವರ ಪ್ರತಿ ಆತ್ಮೀಯ ದಯಾಹೃದಯಿಗಳಾಗಿ ಮಹಾದಾನಿಗಳಾಗಿ. ಪರಸ್ಪರ ಒಬ್ಬರಿಗೊಬ್ಬರ
ಪ್ರತಿ ಮಹಾದಾನಿ ಅಲ್ಲ. ಅಲ್ಲಂತೂ ಸಹಯೋಗಿ ಜೊತೆಗಾರರಾಗಿರುವಿರಿ ಸಹೋದರ-ಸಹೋದರರಾಗಿರುವಿರಿ,
ಎಲ್ಲರೂ ಪುರುಷಾರ್ಥಿಗಳಾಗಿರುವಿರಿ. ಸಹಯೋಗ ನೀಡಿ, ದಾನವಲ್ಲ.
ಸ್ಲೋಗನ್:
ಸದಾ ಒಬ್ಬ
ತಂದೆಯ ಶ್ರೇಷ್ಠ ಸಂಗದಲ್ಲಿದ್ದಾಗ ಬೇರೆಯಾರದೇ ಸಂಗದ ರಂಗಿನ ಪ್ರಭಾವ ಬೀರಲು ಸಾಧ್ಯವಿಲ್ಲ.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ಪವಿತ್ರತೆಯ ಜೊತೆ-ಜೊತೆಗೆ
ಮುಖ ಮತ್ತು ನಡತೆಯಲ್ಲಿ ಆತ್ಮೀಯತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ, ಈ ಶ್ರೇಷ್ಠ ವ್ಯಕ್ತಿತ್ವದ
ಶ್ರೇಷ್ಠ ನಶೆಯಲ್ಲಿರಿ. ತಮ್ಮ ಆತ್ಮಿಕ ವ್ಯಕ್ತಿತ್ವವನ್ನು ಸ್ಮೃತಿಯಲ್ಲಿಟ್ಟುಕೊಂಡು ಸದಾ
ಪ್ರಸನ್ನಚಿತ್ತರಾಗಿದ್ದರೆ ಎಲ್ಲಾ ಪ್ರಶ್ನೆ ಸಮಾಪ್ತಿಯಾಗಿ ಬಿಡುತ್ತದೆ. ಅಶಾಂತಿ ಮತ್ತು
ಚಿಂತೆಯುಳ್ಳ ಆತ್ಮರು ನಿಮ್ಮ ಪ್ರಸನ್ನತೆಯ ದೃಷ್ಟಿಯಿಂದ ಪ್ರಸನ್ನರಾಗಿ ಬಿಡುತ್ತೀರಿ.