19.06.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನೀವೀಗ
ಈಶ್ವರೀಯ ಸಂತಾನರಾಗಿದ್ದೀರಿ, ನಿಮ್ಮಲ್ಲಿ ಯಾವುದೇ ಆಸುರಿಗುಣಗಳಿರಬಾರದು, ತಮ್ಮ ಉನ್ನತಿ
ಮಾಡಿಕೊಳ್ಳಬೇಕು, ತಪ್ಪುಗಳನ್ನು ಮಾಡಬಾರದು”
ಪ್ರಶ್ನೆ:
ತಾವು ಸಂಗಮಯುಗೀ
ಬ್ರಾಹ್ಮಣಮಕ್ಕಳಿಗೆ ಯಾವ ನಿಶ್ಚಯ ಮತ್ತು ನಶೆಯಿದೆ?
ಉತ್ತರ:
ನಾವು ಮಕ್ಕಳಿಗೆ
ಇದೇ ನಿಶ್ಚಯ ಮತ್ತು ನಶೆಯಿದೆ- ನಾವೀಗ ಈಶ್ವರೀಯ ಸಂಪ್ರದಾಯದವರಾಗಿದ್ದೇವೆ. ನಾವು ಸ್ವರ್ಗವಾಸಿಗಳು,
ವಿಶ್ವದ ಮಾಲೀಕರಾಗುತ್ತಿದ್ದೇವೆ. ಸಂಗಮಯುಗದಲ್ಲಿ ನಾವು ವರ್ಗಾಯಿತರಾಗುತ್ತಿದ್ದೇವೆ. ಆಸುರೀ
ಸಂತಾನರಿಂದ ಈಶ್ವರೀಯ ಸಂತಾನರಾಗಿ 21 ಜನ್ಮಗಳಿಗಾಗಿ ಸ್ವರ್ಗವಾಸಿಗಳಾಗುತ್ತಿದ್ದೇವೆ. ಇದಕ್ಕಿಂತ
ದೊಡ್ಡದಾದುದು ಯಾವುದೂ ಇಲ್ಲ.
ಓಂ ಶಾಂತಿ.
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಬಹುತೇಕ ಮಂದಿ ಮನುಷ್ಯರು ಶಾಂತಿಯನ್ನೇ ಇಷ್ಟಪಡುತ್ತಾರೆ.
ಮನೆಯಲ್ಲಿ ಒಂದುವೇಳೆ ಮಕ್ಕಳ ಕಿರಿಕಿರಿಯಿದ್ದರೆ ಅಲ್ಲಿ ಅಶಾಂತಿಯಿರುತ್ತದೆ. ಅಶಾಂತಿಯಿಂದ ದುಃಖವು
ಭಾಸವಾಗುತ್ತದೆ. ಶಾಂತಿಯಿಂದ ಸುಖದ ಅನುಭವವಾಗುತ್ತದೆ. ನೀವು ಮಕ್ಕಳು ಇಲ್ಲಿ ಕುಳಿತಿದ್ದೀರಿ,
ನಿಮಗೆ ಸತ್ಯವಾದ ಶಾಂತಿಯಿದೆ. ನಿಮಗೆ ತಿಳಿಸಲಾಗಿದೆ- ತಂದೆಯನ್ನು ನೆನಪು ಮಾಡಿ, ತನ್ನನ್ನು
ಆತ್ಮನೆಂದು ತಿಳಿಯಿರಿ. ಆತ್ಮದಲ್ಲಿ ಅರ್ಧಕಲ್ಪದಿಂದ ಯಾವ ಅಶಾಂತಿಯಿದೆಯೋ ಅದನ್ನು ಶಾಂತಿಯ ಸಾಗರ
ತಂದೆಯನ್ನು ನೆನಪು ಮಾಡುವುದರಿಂದ ಅದು ಕಳೆಯುತ್ತದೆ. ನಿಮಗೆ ಶಾಂತಿಯ ಆಸ್ತಿಯು ಸಿಗುತ್ತದೆ,
ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ- ಶಾಂತಿಯ ಪ್ರಪಂಚ ಮತ್ತು ಅಶಾಂತಿಯ ಪ್ರಪಂಚವು
ಸಂಪೂರ್ಣವಾಗಿ ಬೇರೆಯಾಗಿದೆ. ಆಸುರೀ ಪ್ರಪಂಚ, ಈಶ್ವರೀಯ ಪ್ರಪಂಚ. ಸತ್ಯಯುಗ-ಕಲಿಯುಗವೆಂದು
ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ಯಾವುದೇ ಮನುಷ್ಯಮಾತ್ರರೂ ತಿಳಿದುಕೊಂಡಿಲ್ಲ. ನಮಗೂ ಸಹ
ತಿಳಿದಿರಲಿಲ್ಲ ಭಲೆ ಎಷ್ಟು ದೊಡ್ಡಸ್ಥಾನದವರಾಗಿದ್ದೆವು, ಆದರೆ ನಮಗೂ ಸಹ ತಿಳಿದಿರಲಿಲ್ಲ.
ಹಣವಿರುವವರಿಗೆ ಸ್ಥಾನಮಾನದವರೆಂದು ಹೇಳಲಾಗುತ್ತದೆ. ಬಡವರು ಮತ್ತು ಸಾಹುಕಾರರೆಂಬುದು
ತಿಳಿದುಕೊಳ್ಳಬಹುದಲ್ಲವೆ. ಹಾಗೆಯೇ ನೀವೂ ಸಹ ಅವಶ್ಯವಾಗಿ ತಿಳಿದುಕೊಳ್ಳುತ್ತೀರಿ- ಅವಶ್ಯವಾಗಿ
ಈಶ್ವರೀಯ ಸಂತಾನರು ಮತ್ತು ಆಸುರೀ ಸಂತಾನರಿದ್ದಾರೆ. ನಾವು ಈಶ್ವರೀಯ ಸಂಪ್ರದಾಯದವರು, ಸ್ವರ್ಗದ
ಮಾಲೀಕರಾಗುತ್ತಿದ್ದೇವೆಂದು ತಿಳಿದುಕೊಂಡಿದ್ದೀರಿ. ಅಂದಮೇಲೆ ಪ್ರತೀಕ್ಷಣ ಆ ಖುಷಿಯಿರಬೇಕು. ಬಹಳ
ಕೆಲವರೇ ಯಥಾರ್ಥರೀತಿಯಿಂದ ಅರಿತುಕೊಳ್ಳುತ್ತಾರೆ. ಸತ್ಯಯುಗದಲ್ಲಿ ಈಶ್ವರೀಯ
ಸಂಪ್ರದಾಯದವರಿರುತ್ತಾರೆ, ಕಲಿಯುಗದಲ್ಲಿ ಆಸುರೀ ಸಂಪ್ರದಾಯದವರಿದ್ದಾರೆ. ಪುರುಷೋತ್ತಮ
ಸಂಗಮಯುಗದಲ್ಲಿ ಆಸುರೀ ಸಂಪ್ರದಾಯವು ಬದಲಾಗುತ್ತದೆ. ನಾವೀಗ ಶಿವತಂದೆಯ ಸಂತಾನರಾಗಿದ್ದೇವೆ. ಇದನ್ನು
ಮಧ್ಯದಲ್ಲಿ ಮರೆತುಹೋಗಿದ್ದೆವು. ನಾವು ಶಿವತಂದೆಯ ಸಂತಾನರೆಂಬುದನ್ನು ಕರೆಸಿಕೊಳ್ಳುವುದಿಲ್ಲ. ಅವರು
ದೈವೀಸಂತಾನರಾಗಿದ್ದಾರೆ, ಇದಕ್ಕೆ ಮೊದಲು ನಾವು ಅಸುರೀ ಸಂತಾನರಾಗಿದ್ದೆವು. ಈಗ ಈಶ್ವರೀಯ
ಸಂತಾನರಾಗಿದ್ದೇವೆ. ನಾವು ಬ್ರಾಹ್ಮಣರು ಬಿ.ಕೆ.ಗಳಾಗಿದ್ದೇವೆ. ರಚನೆಯು ಒಬ್ಬ ತಂದೆಯದ್ದಾಗಿದೆ.
ನೀವೆಲ್ಲರೂ ಸಹೋದರ-ಸಹೋದರರು ಮತ್ತು ಈಶ್ವರೀಯ ಸಂತಾನರಾಗಿದ್ದೀರಿ. ತಂದೆಯಿಂದ ನಮಗೆ ರಾಜ್ಯವು
ಸಿಗುತ್ತಿದೆ. ಭವಿಷ್ಯದಲ್ಲಿ ಹೋಗಿ ನಾವು ದೈವೀಸ್ವರಾಜ್ಯವನ್ನು ಪಡೆಯುತ್ತೇವೆ,
ಸುಖಿಯಾಗಿರುತ್ತೇವೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಸತ್ಯಯುಗವು ಸುಖಧಾಮವಾಗಿದೆ, ಕಲಿಯುಗವು
ದುಃಖಧಾಮವಾಗಿದೆ. ಇದನ್ನು ಕೇವಲ ನೀವು ಸಂಗಮಯುಗೀ ಬ್ರಾಹ್ಮಣರೇ ಅರಿತುಕೊಂಡಿದ್ದೀರಿ. ಆತ್ಮವೇ
ಈಶ್ವರೀಯ ಸಂತಾನವಾಗಿದೆ. ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ಅವರು ರಚಯಿತನಲ್ಲವೆ. ನರಕದ
ರಚಯಿತನಂತೂ ಅಲ್ಲ. ಒಂದುವೇಳೆ ಆಗಿದ್ದರೆ ಅವರನ್ನು ಯಾರು ನೆನಪು ಮಾಡುತ್ತಾರೆ! ತಂದೆಯು ಸ್ವರ್ಗದ
ಸ್ಥಾಪನೆ ಮಾಡುತ್ತಿದ್ದಾರೆ, ಅವರು ನಮ್ಮ ಮಧುರತಂದೆಯಾಗಿದ್ದಾರೆ. ನಮ್ಮನ್ನು 21 ಜನ್ಮಗಳಿಗಾಗಿ
ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಇದಕ್ಕಿಂತಲೂ ದೊಡ್ಡದಾದದ್ದು ಬೇರೇನೂ ಇಲ್ಲವೆಂದು ಮಧುರಾತಿ
ಮಧುರ ಮಕ್ಕಳೇ ಅರ್ಥಮಾಡಿಕೊಂಡಿದ್ದೀರಿ. ಇದನ್ನು ನೆನಪಿಟ್ಟುಕೊಳ್ಳಬೇಕು. ನಾವು ಈಶ್ವರೀಯ
ಸಂತಾನರಾಗಿದ್ದೇವೆ ಅಂದಮೇಲೆ ನಮ್ಮಲ್ಲಿ ಯಾವುದೇ ಅಸುರೀ ಅವಗುಣವಿರಬಾರದು, ತಮ್ಮ ಉನ್ನತಿ
ಮಾಡಿಕೊಳ್ಳಬೇಕಾಗಿದೆ. ಇನ್ನು ಸ್ವಲ್ಪವೇ ಸಮಯವಿದೆ, ಇದರಲ್ಲಿ ಹುಡುಗಾಟಿಕೆ ಮಾಡಬಾರದು.
ಮರೆತುಹೋಗಬೇಡಿ, ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆಂಬುದನ್ನು ನೋಡುತ್ತೀರಿ. ನಾವು ಅವರ
ಸಂತಾನರಾಗಿದ್ದೇವೆ, ನಾವು ದೈವೀ ಸಂತಾನರಾಗಲು ಈಶ್ವರ ತಂದೆಯಿಂದ ಓದುತ್ತಿದ್ದೇವೆ ಅಂದಮೇಲೆ
ಎಷ್ಟೊಂದು ಖುಷಿಯಿರಬೇಕು. ತಂದೆಯು ಇಷ್ಟನ್ನೇ ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದರೆ
ವಿಕರ್ಮಗಳು ವಿನಾಶವಾಗುವವು. ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುವುದಕ್ಕಾಗಿಯೇ ಬಂದಿದ್ದಾರೆ.
ಅವರನ್ನು ಎಷ್ಟೆಷ್ಟು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುವವು. ಅಜ್ಞಾನ ಕಾಲದಲ್ಲಿ
ಹೇಗೆ ಕನ್ಯೆಗೆ ನಿಶ್ಚಿತಾರ್ಥವಾದ ನಂತರ ಅವರ ನೆನಪೇ ಹೆಚ್ಚಾಗಿಬಿಡುತ್ತದೆ. ಮಕ್ಕಳಾದರೆ ಇನ್ನೂ
ಹೆಚ್ಚು ನೆನಪು ಉಳಿದುಬಿಡುತ್ತದೆ. ಈ ನೆನಪಂತೂ ಸ್ವರ್ಗದಲ್ಲಿಯೂ ಉಳಿದುಬಿಡುತ್ತದೆ, ನರಕದಲ್ಲಿಯೂ
ಉಳಿದುಬಿಡುತ್ತದೆ. ಇವರು ನಮ್ಮ ತಂದೆಯಾಗಿದ್ದಾರೆ ಎಂದು ಮಗನು ಹೇಳುವರು. ಈಗ ಇವರಂತೂ ಬೇಹದ್ದಿನ
ತಂದೆಯಾಗಿದ್ದಾರೆ, ಇವರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ ಅಂದಮೇಲೆ ಅವರ ನೆನಪು ಹಾಗೆ
ಅಚ್ಚಾಗಿಬಿಡಬೇಕಾಗಿದೆಯಲ್ಲವೆ. ತಂದೆಯಿಂದ ನಾವು ಭವಿಷ್ಯದ 21 ಜನ್ಮಗಳ ಆಸ್ತಿಯನ್ನು ಪುನಃ
ತೆಗೆದುಕೊಳ್ಳುತ್ತಿದ್ದೇವೆ. ಬುದ್ಧಿಯಲ್ಲಿ ಆಸ್ತಿಯ ನೆನಪೇ ಇದೆ.
ಇದನ್ನೂ ಸಹ
ತಿಳಿದುಕೊಂಡಿದ್ದೀರಿ- ಎಲ್ಲರೂ ಸಾಯಲೇಬೇಕಾಗಿದೆ. ಒಬ್ಬರೂ ಉಳಿಯುವುದಿಲ್ಲ, ಯಾರೆಲ್ಲಾ
ಪ್ರಿಯಾತಿಪ್ರಿಯರು ಇದ್ದಾರೆಯೋ ಎಲ್ಲರೂ ಹೊರಟುಹೋಗುವರು. ಇದನ್ನು ಕೇವಲ ನೀವು ಬ್ರಾಹ್ಮಣರೇ
ತಿಳಿದುಕೊಂಡಿದ್ದೀರಿ- ಈ ಹಳೆಯ ಪ್ರಪಂಚವು ಈಗ ಹೊರಟೇಹೋಯಿತು. ಅದು ಹೋಗುವುದಕ್ಕೆ ಮುಂಚೆ ಪೂರ್ಣ
ಪುರುಷಾರ್ಥ ಮಾಡಬೇಕಾಗಿದೆ. ಈಶ್ವರೀಯ ಸಂತಾನರಾಗಿದ್ದೀರಿ ಅಂದಮೇಲೆ ಅಪಾರ ಖುಷಿಯಿರಬೇಕು. ತಂದೆಯು
ತಿಳಿಸುತ್ತಿರುತ್ತಾರೆ- ಮಕ್ಕಳೇ, ತಮ್ಮ ಜೀವನವನ್ನು ವಜ್ರಸಮಾನ ಮಾಡಿಕೊಳ್ಳಿ. ಅದು ದೈವೀ ಪ್ರಪಂಚ,
ಇದು ದೆವ್ವಗಳ ಪ್ರಪಂಚವಾಗಿದೆ. ಸತ್ಯಯುಗದಲ್ಲಿ ಎಷ್ಟೊಂದು ಅಪಾರ ಸುಖವಿರುತ್ತದೆ ಅದನ್ನು ತಂದೆಯೇ
ಕೊಡುತ್ತಾರೆ. ನೀವಿಲ್ಲಿ ತಂದೆಯ ಬಳಿ ಬಂದಿದ್ದೀರಿ, ನೀವಿಲ್ಲಿ ಕುಳಿತುಬಿಡುವುದಿಲ್ಲ. ಎಲ್ಲರೂ
ಒಟ್ಟಿಗೆ ಇರುತ್ತೀರೆಂದಲ್ಲ ಏಕೆಂದರೆ ಬೇಹದ್ದಿನ ಮಕ್ಕಳಾಗಿದ್ದೀರಿ. ನೀವಿಲ್ಲಿ ಬಹಳ ಉಮ್ಮಂಗದಿಂದ
ಬರುತ್ತೀರಿ. ನಾವು ಬೇಹದ್ದಿನ ತಂದೆಯ ಬಳಿ ಹೋಗುತ್ತೇವೆ. ನಾವು ಈಶ್ವರೀಯ ಸಂತಾನರಾಗಿದ್ದೇವೆ,
ಪರಮಾತ್ಮನ ಮಕ್ಕಳಾಗಿದ್ದೇವೆ ಅಂದಮೇಲೆ ನಾವೇಕೆ ಸ್ವರ್ಗದಲ್ಲಿರಬಾರದು! ಪರಮಾತ್ಮನಂತೂ ಸ್ವರ್ಗವನ್ನೇ
ರಚಿಸುತ್ತಾರಲ್ಲವೆ. ಈಗ ನಿಮ್ಮ ಬುದ್ಧಿಯಲ್ಲಿ ಇಡೀ ವಿಶ್ವದ ಚರಿತ್ರೆ-ಭೂಗೋಳವಿದೆ. ಸ್ವರ್ಗದ
ರಚಯಿತ ತಂದೆಯು ನಮ್ಮನ್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಕಲ್ಪ-ಕಲ್ಪವೂ
ಮಾಡುತ್ತಾರೆ. ನಾನು ಪಾತ್ರಧಾರಿಯಾಗಿದ್ದೇನೆ, ಪರಮಾತ್ಮನ ಮಕ್ಕಳು ಅಂದಮೇಲೆ ನಾವೇಕೆ
ದುಃಖಿಯಾಗಿದ್ದೇವೆ! ಪರಸ್ಪರ ಏಕೆ ಹೊಡೆದಾಡುತ್ತೇವೆ, ನಾವಾತ್ಮಗಳೆಲ್ಲರೂ ಸಹೋದರರಾಗಿದ್ದೇವೆ
ಎಂಬುದನ್ನು ತಿಳಿದಿರುವ ಮನುಷ್ಯರು ಯಾರೊಬ್ಬರೂ ಇಲ್ಲ. ಸಹೋದರರು ಪರಸ್ಪರ ಹೇಗೆ
ಹೊಡೆದಾಡುತ್ತಿರುತ್ತಾರೆ. ಹೊಡೆದಾಡಿ ಸಮಪ್ತಿಯಾಗಿಬಿಡುತ್ತಾರೆ. ನಾವಿಲ್ಲಿ ತಂದೆಯಿಂದ ಆಸ್ತಿಯನ್ನು
ಪಡೆಯುತ್ತಿದ್ದೇವೆ, ಸಹೋದರರೆಂದಮೇಲೆ ಪರಸ್ಪರ ಎಂದೂ ಉಪ್ಪುನೀರಾಗಬಾರದು. ಇಲ್ಲಂತೂ ಮಾಯೆಯು ಎಷ್ಟು
ಶಕ್ತಿಶಾಲಿಯಾಗಿದೆ! ಒಳ್ಳೊಳ್ಳೆಯ ಮಕ್ಕಳು ಉಪ್ಪುನೀರಾಗಿಬಿಡುತ್ತಾರೆ. ತಂದೆಯ ಮೇಲೆ ಎಷ್ಟೊಂದು
ಪ್ರೀತಿಯಿದೆ! ತಂದೆಗಂತೂ ನೆನಪು ಮಾಡಲು ಮಕ್ಕಳ ವಿನಃ ಮತ್ತ್ಯಾರೂ ಇಲ್ಲ. ನಿಮಗಾಗಿ ಬಹಳಷ್ಟು ಮಂದಿ
ಇದ್ದಾರೆ, ನಿಮ್ಮ ಬುದ್ಧಿಯು ಅಲ್ಲಿ-ಇಲ್ಲಿ ಹೋಗುತ್ತದೆ. ಉದ್ಯೋಗ-ವ್ಯವಹಾರಗಳಲ್ಲಿಯೂ ಬುದ್ಧಿಯು
ಹೋಗುತ್ತದೆ ಆದರೆ ನನಗಂತೂ ಯಾವುದೇ ಉದ್ಯೋಗ-ವ್ಯವಹಾರವಿಲ್ಲ. ನೀವು ಅನೇಕ ಮಕ್ಕಳಿಗೆ ಅನೇಕ
ವ್ಯವಹಾರಗಳಿವೆ. ನನಗಂತೂ ಒಂದೇ ವ್ಯವಹಾರವಿದೆ. ಮಕ್ಕಳನ್ನು ಸ್ವರ್ಗದ ವಾರಸುಧಾರರನ್ನಾಗಿ
ಮಾಡುವುದಕ್ಕಾಗಿಯೇ ನಾನು ಬಂದಿದ್ದೇನೆ. ತಂದೆಗೆ ಕೇವಲ ನೀವು ಮಕ್ಕಳೇ ಆಸ್ತಿಯಾಗಿದ್ದೀರಿ. ಅವರು
ಪರಮಪಿತನಲ್ಲವೆ. ಎಲ್ಲಾ ಆತ್ಮಗಳು ಅವರಿಗೆ ಆಸ್ತಿಯಾಗಿದ್ದೇವೆ. ಮಾಯೆಯು ಪತಿತರನ್ನಾಗಿ
ಮಾಡಿಬಿಟ್ಟಿದೆ. ಈಗ ಪುನಃ ತಂದೆಯು ಹೂವಿನ ಸಮಾನರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ-
ನನ್ನವರಂತೂ ನೀವೇ ಆಗಿದ್ದೀರಿ. ನಿಮ್ಮ ಮೇಲೆ ನನಗೂ ಮೋಹವೂ ಇದೆ. ನೀವು ಪತ್ರ ಬರೆಯಲಿಲ್ಲವೆಂದರೆ
ಚಿಂತೆಯಾಗಿಬಿಡುತ್ತದೆ. ಒಳ್ಳೊಳ್ಳೆಯ ಮಕ್ಕಳಿಂದ ಪತ್ರಗಳು ಬರುವುದೇ ಇಲ್ಲ. ಒಳ್ಳೊಳ್ಳೆಯ
ಮಕ್ಕಳನ್ನೂ ಸಹ ಮಾಯೆಯು ಒಮ್ಮೆಲೆ ಸಮಾಪ್ತಿ ಮಾಡಿಬಿಡುತ್ತದೆ ಅಂದಾಗ ಅವಶ್ಯವಾಗಿ ದೇಹಾಭಿಮಾನವಿದೆ
ಆದ್ದರಿಂದ ತಂದೆಯು ತಿಳಿಸುತ್ತಿರುತ್ತಾರೆ- ಮಕ್ಕಳೇ, ತಮ್ಮ ಕ್ಷೇಮಸಮಾಚಾರವನ್ನು ಬರೆಯುತ್ತಾ ಇರಿ.
ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ- ಮಕ್ಕಳೇ ನಿಮಗೆ ಮಾಯೆಯು ತೊಂದರೆ ಕೊಡುತ್ತಿಲ್ಲವೆ?
ಸಾಹಸವಂತರಾಗಿ ಮಾಯೆಯ ಮೇಲೆ ಜಯಗಳಿಸುತ್ತಿದ್ದೀರಲ್ಲವೇ! ನೀವು ಯುದ್ಧದ ಮೈದಾನದಲ್ಲಿದ್ದೀರಿ,
ಕರ್ಮೇಂದ್ರಿಯಗಳನ್ನು ಈ ರೀತಿ ವಶದಲ್ಲಿಟ್ಟುಕೊಳ್ಳಿ- ಒಂದುಸ್ವಲ್ಪವೂ ಚಂಚಲತೆಯಾಗದಿರಲಿ.
ಸತ್ಯಯುಗದಲ್ಲಿ ಎಲ್ಲಾ ಕರ್ಮೇಂದ್ರಿಯಗಳು ವಶದಲ್ಲಿರುತ್ತವೆ, ಕರ್ಮೇಂದ್ರಿಯಗಳ
ಚಂಚಲತೆಯಿರುವುದಿಲ್ಲ. ಬಾಯಿಯದಾಗಲಿ, ಕಿವಿಯದಾಗಲಿ.... ಯಾವುದೇ ಚಂಚಲತೆಯ ಮಾತಿರುವುದಿಲ್ಲ.
ಯಾವುದೇ ಕೆಟ್ಟವಸ್ತುವಿರುವುದಿಲ್ಲ. ಇಲ್ಲಿ ಯೋಗಬಲದಿಂದ ಕರ್ಮೇಂದ್ರಿಯಗಳ ಮೇಲೆ ವಿಜಯಿಗಳಾಗುತ್ತೀರಿ.
ತಂದೆಯು ತಿಳಿಸುತ್ತಾರೆ- ಮಕ್ಕಳೇ, ಯಾವುದೇ ಕೊಳಕು ಮಾತಿಲ್ಲ. ಕರ್ಮೇಂದ್ರಿಯಗಳನ್ನು
ವಶಪಡಿಸಿಕೊಳ್ಳಬೇಕಾಗಿದೆ ಬಹಳ ಚೆನ್ನಾಗಿ ಪುರುಷಾರ್ಥ ಮಾಡಬೇಕಾಗಿದೆ. ಸಮಯವು ಬಹಳ ಕಡಿಮೆಯಿದೆ,
ಬಹಳ ಹೋಯಿತು ಸ್ವಲ್ಪವೇ ಉಳಿಯಿತೆಂದು ಗಾಯನವಿದೆ ಈಗ ಸ್ವಲ್ಪ ಉಳಿಯುತ್ತಾ ಹೋಗುತ್ತದೆ,
ಹೊಸಮನೆಯಾಗುತ್ತಿದ್ದರೆ ಇನ್ನು ಸ್ವಲ್ಪವೇ ಸಮಯದಲ್ಲಿ ತಯಾರಾಗಿಬಿಡುವುದು, ಇನ್ನು ಸ್ವಲ್ಪವೇ
ಕೆಲಸವಷ್ಟೇ ಉಳಿದಿದೆ ಎಂದು ಬುದ್ಧಿಯಲ್ಲಿರುತ್ತದೆಯಲ್ಲವೆ. ಅದು ಹದ್ದಿನ ಮಾತು, ಇದು ಬೇಹದ್ದಿನ
ಮಾತಾಗಿದೆ. ಇದನ್ನೂ ಸಹ ಮಕ್ಕಳಿಗೆ ತಿಳಿಸಲಾಗಿದೆ- ಅವರದು ಸೈನ್ಸ್ ನ ಬಲ, ನಿಮ್ಮದು ಸೈಲೆನ್ಸ್ ನ
ಬಲವಾಗಿದೆ. ಅವರದು ಬುದ್ಧಿಯ ಬಲ, ನಿಮ್ಮದೂ ಬುದ್ಧಿಯ ಬಲವಾಗಿದೆ. ವಿಜ್ಞಾನದ ಎಷ್ಟೊಂದು
ಸಂಶೋಧನೆಗಳನ್ನು ಮಾಡುತ್ತಿರುತ್ತಾರೆ. ಈಗಂತೂ ಇಂತಹ ಬಾಂಬುಗಳನ್ನು ತಯಾರು ಮಾಡುತ್ತಿದ್ದಾರೆ- ನಾವು
ಕುಳಿತಿದ್ದಂತೆಯೇ ಒಂದು ಬಾಂಬನ್ನು ಎಸೆದರೆ ಸಾಕು, ಇಡೀ ನಗರವೇ ಸಮಾಪ್ತಿಯಾಗಿಬಿಡುವುದು ಎಂದು ತಾವೇ
ಹೇಳುತ್ತಿರುತ್ತೀರಿ. ನಂತರ ಈ ಸೈನ್ಸ್, ವಿಮಾನ, ಇತ್ಯಾದಿಯೇನೂ ಕೆಲಸಕ್ಕೆ ಬರುವುದಿಲ್ಲ ಅಂದಾಗ
ಅವರದು ವೈಜ್ಞಾನಿಕ ಬುದ್ಧಿಯಾಗಿದೆ. ನಿಮ್ಮದು ಶಾಂತಿಯ ಬುದ್ಧಿಯಾಗಿದೆ. ಅವರು ವಿನಾಶಕ್ಕಾಗಿ
ನಿಮಿತ್ತರಾಗಿದ್ದಾರೆ, ನೀವು ಅವಿನಾಶಿ ಪದವಿಯನ್ನು ಪಡೆಯಲು ನಿಮಿತ್ತರಾಗಿದ್ದೀರಿ. ಇದನ್ನೂ ಸಹ
ತಿಳಿದುಕೊಳ್ಳುವ ಬುದ್ಧಿಯು ಬೇಕಲ್ಲವೆ.
ನೀವು ಮಕ್ಕಳು ಇದನ್ನು
ತಿಳಿದುಕೊಳ್ಳಬಹುದು- ತಂದೆಯು ಎಷ್ಟು ಸಹಜಮಾರ್ಗವನ್ನು ತಿಳಿಸುತ್ತಾರೆ. ಭಲೆ ಎಷ್ಟೇ ಅಹಲ್ಯೆ,
ಕುಬ್ಜೆಯರಿರಲಿ ಕೇವಲ ತಂದೆ ಮತ್ತು ಆಸ್ತಿ-ಇವೆರಡೇ ಶಬ್ಧಗಳನ್ನು ನೆನಪು ಮಾಡಿ. ಮತ್ತೆ ಯಾರೆಷ್ಟು
ನೆನಪು ಮಾಡುವರೋ ಅಷ್ಟು ಪದವಿ ಸಿಗುವುದು. ಅನ್ಯಸಂಗಗಳನ್ನು ಬಿಟ್ಟು ಒಬ್ಬ ತಂದೆಯನ್ನು ನೆನಪು
ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ- ನಾನು ಯಾವಾಗ ನನ್ನ ಮನೆ ಪರಮಧಾಮದಲ್ಲಿದ್ದೆನೋ ಆಗ
ಭಕ್ತಿಮಾರ್ಗದಲ್ಲಿ ಬಾಬಾ, ತಾವು ಬಂದರೆ ನಾವು ಎಲ್ಲವನ್ನೂ ಬಲಿಹಾರಿ ಮಾಡುತ್ತೇವೆಂದು ನೀವು
ಕರೆಯುತ್ತಿದ್ದಿರಿ. ಸತ್ತನಂತರ ಅವರು ಬಳಸುವ ವಸ್ತುಗಳನ್ನು ಸ್ಮಶಾನದವರಿಗೆ ಕೊಡುತ್ತಾರೆ. ಅವರಿಗೆ
ಹಳೆಯ ಸಾಮಾನುಗಳನ್ನು ಕೊಡಲಾಗುತ್ತದೆ, ನೀವು ತಂದೆಗೆ ಏನು ಕೊಡುವಿರಿ? ಇವರಿಗಂತೂ (ಬ್ರಹ್ಮಾ)
ಕೊಡುವುದಿಲ್ಲ. ಇವರೂ ಸಹ ಎಲ್ಲವನ್ನು ಕೊಟ್ಟುಬಿಟ್ಟರಲ್ಲವೆ. ಇವರಿಲ್ಲಿ ಕುಳಿತು ಮಹಲುಗಳನ್ನೇನು
ಕಟ್ಟುವುದಿಲ್ಲ. ಇದೆಲ್ಲವೂ ಶಿವತಂದೆಗಾಗಿ ಅವರ ಆದೇಶದಂತೆ ಮಾಡುತ್ತಿದ್ದಾರೆ. ಅವರು
ಮಾಡಿ-ಮಾಡಿಸುವವರಾಗಿ ಆದೇಶ ನೀಡುತ್ತಿರುತ್ತಾರೆ. ಬಾಬಾ, ತಾವು ಒಬ್ಬರೇ ನಮ್ಮವರಾಗಿದ್ದೀರಿ.
ತಮಗಾಗಿ ಬಹಳಮಂದಿ ಮಕ್ಕಳಿದ್ದಾರೆಂದು ಮಕ್ಕಳು ಹೇಳುತ್ತಾರೆ. ಮಕ್ಕಳೇ, ನನಗಂತೂ ಕೇವಲ ನೀವೇ
ಮಕ್ಕಳಿದ್ದೀರಿ. ನಿಮಗಂತೂ ಬಹಳ ಮಂದಿಯಿದ್ದಾರೆ. ಎಷ್ಟೊಂದು ದೇಹದ ಸಂಬಂಧಗಳ ನೆನಪಿರುತ್ತದೆ ಎಂದು
ತಂದೆಯು ಹೇಳುತ್ತಾರೆ. ಮಧುರಾತಿ ಮಧುರ ಮಕ್ಕಳು ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡಿ
ಮತ್ತು ಎಲ್ಲರನ್ನು ಮರೆಯುತ್ತಾ ಹೋಗಿ. ಸ್ವರ್ಗದ ರಾಜ್ಯರೂಪಿ ಬೆಣ್ಣೆಯು ನಿಮಗೆ ಸಿಗುತ್ತದೆ.
ಸ್ವಲ್ಪ ಆಲೋಚನೆಯನ್ನಾದರೂ ಮಾಡಿ- ಹೇಗೆ ಈ ಆಟದ ರಚನೆಯಾಗಿದೆ, ನೀವು ಕೇವಲ ತಂದೆಯನ್ನು ನೆನಪು
ಮಾಡುತ್ತೀರಿ ಮತ್ತು ಸ್ವದರ್ಶನಚಕ್ರಧಾರಿ ಆಗುವುದರಿಂದ ಚಕ್ರವರ್ತಿ ರಾಜರಾಗುತ್ತೀರಿ. ನೀವೀಗ
ಪ್ರತ್ಯಕ್ಷವಾಗಿಯೂ ಅನುಭವಿಗಳಾಗಿದ್ದೀರಿ. ಭಕ್ತಿಯು ಪರಂಪರೆಯಿಂದ ನಡೆದುಬಂದಿದೆ. ವಿಕಾರವೂ ಸಹ
ನಡೆದುಬಂದಿದೆ. ಈ ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣನಿಗೂ ಮಕ್ಕಳಿದ್ದರಲ್ಲವೆ ಎಂದು ಮನುಷ್ಯರು
ತಿಳಿಯುತ್ತಾರೆ. ಅರೆ! ಮಕ್ಕಳಂತೂ ಇದ್ದರು ಆದರೆ ಅವರನ್ನು ಸಂಪೂರ್ಣ ನಿರ್ವಿಕಾರಿಗಳೆಂದು
ಕರೆಯಲಾಗುವುದು. ಇಲ್ಲಿ ಸಂಪೂರ್ಣ ವಿಕಾರಿಗಳಿದ್ದಾರೆ, ಒಬ್ಬರು ಇನ್ನೊಬ್ಬರನ್ನು ನಿಂದನೆ
ಮಾಡುತ್ತಿರುತ್ತಾರೆ. ನೀವು ಮಕ್ಕಳಿಗೆ ಈಗ ಶ್ರೇಷ್ಠಾತಿಶ್ರೇಷ್ಠ ತಂದೆಯ ಶ್ರೀಮತವು ಸಿಗುತ್ತದೆ,
ಶ್ರೇಷ್ಠರನ್ನಾಗಿ ಮಾಡುತ್ತಾರೆ. ಒಂದುವೇಳೆ ತಂದೆಯ ಮಾತನ್ನು ಪಾಲಿಸದೇ ಹೋದರೆ ನೀವು ಆಗುವುದಿಲ್ಲ
ಅಂದಮೇಲೆ ಈಗ ಒಪ್ಪಿದರೆ ಒಪ್ಪಿಕೊಳ್ಳಿ, ಬಿಟ್ಟರೆ ಬಿಡಿ. ಸುಪುತ್ರ ಮಕ್ಕಳು ಅದನ್ನು ತಕ್ಷಣವೇ
ಪಾಲಿಸುತ್ತಾರೆ. ಪೂರ್ಣ ಸಹಯೋಗ ಕೊಡಲಿಲ್ಲವೆಂದರೆ ತಮಗೇ ನಷ್ಟವನ್ನು ಮಾಡಿಕೊಳ್ಳುತ್ತಾರೆ. ನಾನು
ಎಷ್ಟೊಂದು ಪುರುಷಾರ್ಥ ಮಾಡಿಸುತ್ತೇನೆ, ಎಷ್ಟೊಂದು ಖುಷಿಯಿಂದ ಕರೆದುಕೊಂಡು ಬರುತ್ತೇನೆ ಆದರೆ ನೀವು
ಆ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ಮಾಯೆಯೊಂದಿಗೆ ಯುದ್ಧವಾಗುತ್ತದೆ, ಬಹಳ ದೊಡ್ಡ-ದೊಡ್ಡ
ಬಿರುಗಾಳಿಗಳು ಬರುತ್ತವೆ, ಅದರಲ್ಲಿಯೂ ಸಹ ವಾರಸುಧಾರರ ಮೇಲೆ ಮಾಯೆಯು ಹೆಚ್ಚು ಯುದ್ಧ ಮಾಡುವುದು.
ಶಕ್ತಿಶಾಲಿಗಳೊಂದಿಗೆ ಶಕ್ತಿಶಾಲಿಗಳಾಗಿ ಹೋರಾಡುವುದು. ಹೇಗೆ ವೈದ್ಯರು ಔಷಧಿಯನ್ನು
ಕೊಡುತ್ತಾರೆಂದರೆ ಒಳಗಿರುವ ಖಾಯಿಲೆಯೆಲ್ಲವೂ ಹೆಚ್ಚಿನ ರೂಪದಲ್ಲಿ ಹೊರಬರುತ್ತದೆ. ಇಲ್ಲಿಯೂ ಸಹ
ನನ್ನವರಾದಮೇಲೆ ಮತ್ತೆಲ್ಲರ ನೆನಪು ಬರತೊಡಗುತ್ತದೆ. ಬಿರುಗಾಳಿಗಳೂ ಬರುತ್ತವೆ, ಇದರಲ್ಲಿ
ಬುದ್ಧಿಯೋಗವು ಸ್ಪಷ್ಟವಾಗಿರಬೇಕು. ನಾವುಮೊದಲು ಪವಿತ್ರರಾಗಿದ್ದೆವು ನಂತರ ಅರ್ಧಕಲ್ಪ
ಅಪವಿತ್ರರಾದೆವು. ಈಗ ಮತ್ತೆ ವಿಕರ್ಮಗಳು ವಿನಾಶವಾಗುತ್ತದೆ. ಎಷ್ಟು ನೆನಪು ಮಾಡುವಿರೋ ಅಷ್ಟು
ಶ್ರೇಷ್ಠಪದವಿಯನ್ನು ಪಡೆಯುವಿರಿ. ಆತ್ಮದಲ್ಲಿಯೇ ಜ್ಞಾನವು ಧಾರಣೆಯಾಗುತ್ತದೆಯಲ್ಲವೆ. ಆತ್ಮವೇ
ಓದುತ್ತದೆ, ಆತ್ಮದ ಜ್ಞಾನವನ್ನು ಪರಮಾತ್ಮ ತಂದೆಯು ಬಂದು ಕೊಡುತ್ತಾರೆ. ನೀವು ವಿಶ್ವದ ಮಾಲೀಕರಾಗಲು
ಇಷ್ಟು ದೊಡ್ಡಜ್ಞಾನವನ್ನು ಪಡೆಯುತ್ತೀರಿ. ಪತಿತ-ಪಾವನ, ಜ್ಞಾನಸಾಗರನೆಂದು ನೀವು ಹೇಳುತ್ತೀರಿ.
ನನ್ನ ಬಳಿ ಯಾವ ಜ್ಞಾನವಿದೆಯೋ ಅದೆಲ್ಲವನ್ನೂ ನಿಮಗೆ ಕೊಡುತ್ತೇನೆ ಆದರೆ ದಿವ್ಯದೃಷ್ಟಿಯ ಬೀಗದ
ಕೈಯನ್ನು ನಿಮಗೆ ಕೊಡುವುದಿಲ್ಲ ಅದಕ್ಕೆ ಬದಲಾಗಿ ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ.
ಸಾಕ್ಷಾತ್ಕಾರದಲ್ಲಿ ಏನೂ ಇಲ್ಲ, ಮುಖ್ಯವಾದುದು ವಿದ್ಯೆಯಾಗಿದೆ. ವಿದ್ಯೆಯಿಂದ ನಿಮಗೆ 21 ಜನ್ಮಗಳ
ಸುಖವು ಸಿಗುತ್ತದೆ. ಮೀರಾಳ ಹೋಲಿಕೆಯಲ್ಲಿ ನೀವು ತಮ್ಮ ಸುಖವನ್ನು ಹೋಲಿಕೆ ಮಾಡಿ- ಮೀರಾ
ಕಲಿಯುಗದಲ್ಲಿದ್ದಳು, ಸಾಕ್ಷಾತ್ಕಾರ ಮಾಡಿದಳು ಮತ್ತೇನಾಯಿತು? ಭಕ್ತಿಯ ಮಾಲೆ ಬೇರೆಯಾಗಿದೆ,
ಜ್ಞಾನಮಾರ್ಗದ ಮಾಲೆಯೇ ಬೇರೆಯಾಗಿದೆ. ರಾವಣನ ರಾಜ್ಯವೇ ಬೇರೆ, ನಿಮ್ಮ ರಾಜ್ಯವೇ ಬೇರೆ ಆಗಿದೆ
ಅದಕ್ಕೆ ದಿನ, ಇದಕ್ಕೆ ರಾತ್ರಿಯೆಂದು ಹೇಳಲಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ನೆನಪಿನ
ಬಲದಿಂದ ತಮ್ಮ ಕರ್ಮೇಂದ್ರಿಯಗಳನ್ನು ಈ ರೀತಿ ವಶಪಡಿಸಿಕೊಳ್ಳಬೇಕಾಗಿದೆ ಅದರಿಂದ ಯಾವುದೇ
ಚಂಚಲತೆಯಾಗದಿರಲಿ. ಸಮಯವು ಬಹಳ ಕಡಿಮೆಯಿದೆ ಆದ್ದರಿಂದ ಪುರುಷಾರ್ಥ ಮಾಡಿ ಮಾಯಾಜೀತರಾಗಬೇಕಾಗಿದೆ.
2) ತಂದೆಯು ಯಾವ
ಜ್ಞಾನವನ್ನು ಕೊಡುತ್ತಾರೆಯೋ ಅದನ್ನು ಅಂತರ್ಮುಖಿಯಾಗಿ ಧಾರಣೆ ಮಾಡಬೇಕಾಗಿದೆ. ಎಂದೂ ಪರಸ್ಪರ
ಉಪ್ಪುನೀರಾಗಿ ವರ್ತಿಸಬಾರದು. ತಂದೆಗೆ ತಮ್ಮ ಕ್ಷೇಮಸಮಾಚಾರವನ್ನು ಅವಶ್ಯವಾಗಿ ತಿಳಿಸಬೇಕಾಗಿದೆ.
ವರದಾನ:
ಕಲ್ಯಾಣಕಾರಿ
ವೃತ್ತಿಯ ಮುಖಾಂತರ ಸೇವೆ ಮಾಡುವಂತಹ ಸರ್ವ ಆತ್ಮರುಗಳ ಆಶೀರ್ವಾದದ ಅಧಿಕಾರಿ ಭವ
ಕಲ್ಯಾಣಕಾರಿ ವೃತ್ತಿಯ
ಮುಖಾಂತರ ಸೇವೆ ಮಾಡುವುದು-ಇದೇ ಸರ್ವ ಆತ್ಮರುಗಳ ಆಶೀರ್ವಾದ ಪ್ರಾಪ್ತಿಮಾಡಿಕೊಳ್ಳುವ ಸಾಧನವಾಗಿದೆ.
ಯಾವಾಗ ನಾನು ವಿಶ್ವಕಲ್ಯಾಣಕಾರಿ ಆಗಿರುವೆ ಎಂದು ಲಕ್ಷ್ಯ ಇರುತ್ತದೆ, ಆಗ ಅಕಲ್ಯಾಣದ ಕರ್ತವ್ಯವಾಗಲು
ಸಾಧ್ಯವೇ ಇಲ್ಲ. ಹೇಗೆ ಕಾರ್ಯ ಆಗುತ್ತದೆ ಹಾಗೆ ನಿಮ್ಮ ಧಾರಣೆಗಳಾಗುತ್ತವೆ, ಒಂದುವೇಳೆ ಕಾರ್ಯ
ನೆನಪಿನಲ್ಲಿದ್ದಾಗ ಸದಾ ದಯಾ ಹೃದಯಿ, ಸದಾ ಮಹಾದಾನಿಯಾಗಿರುವಿರಿ. ಪ್ರತಿಯೊಂದು ಹೆಜ್ಜೆಯಲ್ಲಿ
ಕಲ್ಯಾಣಕಾರಿ ವೃತ್ತಿಯಿಂದ ನಡೆಯುತ್ತದೆ, ನನ್ನತನ ಬರುವುದಿಲ್ಲ, ನಿಮಿತ್ತ ಭಾವ ನೆನಪಿರುತ್ತದೆ.
ಇಂತಹ ಸೇವಾಧಾರಿಗಳಿಗೆ ಸೇವೆಯ ಪ್ರತಿಫಲದಲ್ಲಿ ಸರ್ವ ಆತ್ಮರ ಆಶೀರ್ವಾದದ ಅಧಿಕಾರ
ಪ್ರಾಪ್ತಿಯಾಗುವುದು.
ಸ್ಲೋಗನ್:
ಸಾಧನಗಳ ಆಕರ್ಷಣೆ
ಸಾಧನೆಯನ್ನು ತುಂಡು ಮಾಡಿಬಿಡುತ್ತದೆ.
ಅವ್ಯಕ್ತ ಸೂಚನೆಗಳು-
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಅಂತರ್ಮುಖಿ ಆತ್ಮಗಳು
ಮೂರು ಪ್ರಕಾರದ ಭಾಷೆಯನ್ನು ಅನುಭವ ಮಾಡುತ್ತಾರೆ:1- ನಯನಗಳ ಭಾಷೆ 2- ಭಾವನೆಗಳ ಭಾಷೆ 3-
ಸಂಕಲ್ಪಗಳ ಭಾಷೆ. ಈ ಮೂರು ಭಾಷೆಗಳು ಆತ್ಮಿಕ ಯೋಗಿ ಜೀವನದ ಭಾಷೆಗಳಾಗಿದೆ. ಎಷ್ಟು ಎಷ್ಟು ತಮ್ಮ
ಅಂತರ್ಮುಖಿ ಮಧುರ ಶಾಂತ ಸ್ವರೂಪದಲ್ಲಿ ಸ್ಥಿತರಾಗುವಿರಿ- ಅಷ್ಟು ಈ ಮೂರು ಭಾಷೆಗಳ ಮೂಲಕ ಸರ್ವ
ಆತ್ಮಗಳನ್ನು ಅನುಭವ ಮಾಡುವಿರಿ. ಈಗ ಈ ಆತ್ಮಿಕ ಭಾಷೆಗಳ ಅಭ್ಯಾಸ ಆಗಿರಿ.