19.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತನ್ನ
ಸ್ವಧರ್ಮವನ್ನು ಮರೆಯುವುದೇ ಎಲ್ಲದಕ್ಕಿಂತ ದೊಡ್ಡತಪ್ಪಾಗಿದೆ, ನೀವೀಗ ಸ್ಮೃತಿ ಸ್ವರೂಪರಾಗಬೇಕಾಗಿದೆ,
ತಮ್ಮ ಮನೆ ಮತ್ತು ರಾಜಧಾನಿಯನ್ನು ನೆನಪು ಮಾಡಬೇಕಾಗಿದೆ”.
ಪ್ರಶ್ನೆ:
ತಾವು ಮಕ್ಕಳ
ಯಾವ ಸ್ಥಿತಿಯು ಸಮಯದ ಸಮೀಪತೆಯ ಚಿಹ್ನೆಯಾಗಿದೆ?
ಉತ್ತರ:
ಯಾವಾಗ ತಾವು
ಮಕ್ಕಳು ನೆನಪಿನ ಯಾತ್ರೆಯಲ್ಲಿ ಸದಾ ಮಗ್ನರಾಗಿರುತ್ತೀರಿ, ಬುದ್ಧಿಯ ಅಲೆದಾಟವು ನಿಂತು ಹೋಗುವುದೋ,
ವಾಣಿಯಲ್ಲಿ ನೆನಪಿನ ಹರಿತವು ಬರುವುದೋ, ಅಪಾರ ಖುಷಿಯಲ್ಲಿರುವಿರೋ, ಪದೇ-ಪದೇ ತಮ್ಮ ಸತ್ಯಯುಗ
ಪ್ರಪಂಚದ ದೃಶ್ಯಗಳು ಸಮ್ಮುಖದಲ್ಲಿ ಕಾಣುತ್ತಿರುವುದೋ ಆಗ ಸಮಯವು ಸಮೀಪಿಸಿದೆ ಎಂದು ತಿಳಿದುಕೊಳ್ಳಿ.
ವಿನಾಶದಲ್ಲಿ ಸಮಯವು ಹಿಡಿಸುವುದಿಲ್ಲ, ಇದಕ್ಕಾಗಿ ನೆನಪಿನ ಚಾರ್ಟನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.
ಗೀತೆ:
ನಿಮ್ಮನ್ನು
ಪಡೆದ ನಾನು ಜಗತ್ತನ್ನೇ ಪಡೆದೆನು.....................
ಓಂ ಶಾಂತಿ.
ಆತ್ಮೀಯ ಮಕ್ಕಳು ಈ ಗೀತೆಯ ಅರ್ಥವನ್ನಂತೂ ತಿಳಿದುಕೊಂಡಿರುತ್ತೀರಿ. ಈಗ ಬೇಹದ್ದಿನ ತಂದೆಯನ್ನಂತೂ
ಪಡೆದುಕೊಂಡಿದ್ದೀರಿ. ಆ ಬೇಹದ್ದಿನ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ, ಯಾವ ಆಸ್ತಿಯನ್ನು
ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾವಾಗ ರಾವಣ ರಾಜ್ಯವು ಆರಂಭವಾಗುವುದೋ ಆಗಲೇ ಆಸ್ತಿಯ ನಶೆಯು
ಮಾಯವಾಗುತ್ತದೆ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಈ ಚಕ್ರವು ಹೇಗೆ ಸುತ್ತುತ್ತದೆ ಎಂದು
ಮಕ್ಕಳಿಗೆ ಸೃಷ್ಟಿ ನಾಟಕದ ಜ್ಞಾನವಿದೆ. ಇದಕ್ಕೆ ನಾಟಕವೆಂದಾದರೂ ಹೇಳಿ, ಡ್ರಾಮಾ ಎಂದಾದರೂ ಹೇಳಿ.
ಮಕ್ಕಳಿಗೆ ಗೊತ್ತಿದೆ, ಅವಶ್ಯವಾಗಿ ತಂದೆಯು ಬಂದು ಸೃಷ್ಟಿಚಕ್ರದ ಜ್ಞಾನವನ್ನು ತಿಳಿಸುತ್ತಾರೆ.
ಯಾರು ಬ್ರಾಹ್ಮಣ ಕುಲದವರಿದ್ದಾರೆಯೋ ಅವರಿಗೇ ತಿಳಿಸಿಕೊಡುತ್ತಾರೆ. ನೀವು ಮಕ್ಕಳು ತಮ್ಮ
ಜನ್ಮಗಳನ್ನು ಕುರಿತು ತಿಳಿದುಕೊಂಡಿಲ್ಲ, ನಾನು ನಿಮಗೆ ತಿಳಿಸಿಕೊಡುತ್ತೇನೆ. 84 ಲಕ್ಷ ಜನ್ಮಗಳನ್ನು
ತೆಗೆದುಕೊಂಡ ನಂತರ ಒಂದು ಮನುಷ್ಯನ ಜನ್ಮವು ಸಿಗುತ್ತದೆಯೆಂದು ನೀವು ಮೊದಲು ಕೇಳುತ್ತಿದ್ದಿರಿ ಆದರೆ
ಆ ರೀತಿ ಇಲ್ಲ. ನೀವೀಗ ಎಲ್ಲಾ ಆತ್ಮಗಳು ನಂಬರ್ವಾರ್ ಬರುತ್ತಾ ಹೋಗುತ್ತೀರಿ. ನಿಮ್ಮ ಬುದ್ಧಿಯಲ್ಲಿ
ಬಂದಿದೆ – ಮೊಟ್ಟ ಮೊದಲು ನಾವು ಆದಿ ಸನಾತನ ದೇವಿ-ದೇವತಾ ಧರ್ಮದ ಪೂಜ್ಯರಾಗಿದ್ದೆವು, ಮತ್ತೆ ನಾವೇ
ಪೂಜಾರಿಗಳಾಗಿದ್ದೇವೆ. ತಾವೇ ಪೂಜ್ಯ, ತಾವೇ ಪೂಜಾರಿ ಎಂಬ ಗಾಯನವೂ ಇದೆ ಆದರೆ ಮನುಷ್ಯರು ಭಗವಂತನೇ
ಪೂಜ್ಯ, ಅವರೇ ಪೂಜಾರಿಯಾಗುತ್ತಾರೆ, ಇದೆಲ್ಲಾ ರೂಪವು ಅವರದೇ ಆಗಿದೆ ಎಂದು ತಿಳಿದುಕೊಳ್ಳುತ್ತಾರೆ.
ಅನೇಕ ಮತಮತಾಂತರಗಳಿವೆ ಅಲ್ಲವೆ. ನೀವೀಗ ಶ್ರೀಮತದನುಸಾರ ನಡೆಯುತ್ತೀರಿ. ನಾವು ವಿದ್ಯಾರ್ಥಿಗಳು
ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ ಎಂದು ನಿಮಗೆ ಈಗ ಅರ್ಥವಾಗುತ್ತದೆ. ನಂತರ ಓದುತ್ತಾ ಹೋದಂತೆ
ಇನ್ನೂ ಹೆಚ್ಚಿನ ಪರೀಕ್ಷೆಗಳನ್ನು ತೇರ್ಗಡೆ ಮಾಡುತ್ತಾ ಹೋಗುತ್ತೀರಿ. ಆ ಲೌಕಿಕ ವಿದ್ಯಾರ್ಥಿಗಳೂ
ಸಹ ಆರಂಭದಲ್ಲಿ ಏನೂ ತಿಳಿದುಕೊಂಡಿರುವುದಿಲ್ಲ ನಂತರ ಪರೀಕ್ಷೆಯನ್ನು ತೇರ್ಗಡೆ ಮಾಡುತ್ತಾ,
ಮಾಡುತ್ತಾ ನಾವೀಗ ಬ್ಯಾರಿಸ್ಟರಿ ಪರೀಕ್ಷೆಯನ್ನು ತೇರ್ಗಡೆ ಮಾಡಿಬಿಟ್ಟಿದ್ದೇವೆಂದು
ತಿಳಿದುಕೊಳ್ಳುತ್ತಾರೆ. ನಿಮಗೂ ಸಹ ಈಗ ತಿಳಿದಿದೆ - ನಾವು ಓದಿ ಮನುಷ್ಯರಿಂದ ದೇವತೆಗಳು ಅದರಲ್ಲಿಯೂ
ವಿಶ್ವದ ಮಾಲೀಕರಾಗುತ್ತಿದ್ದೇವೆ. ಅಲ್ಲಂತೂ ಒಂದು ರಾಜ್ಯ, ಒಂದೇ ಧರ್ಮವಿರುತ್ತದೆ. ನಿಮ್ಮ
ರಾಜ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಲ್ಲಿ ನಿಮಗೆ ಸುಖ, ಶಾಂತಿ, ಪವಿತ್ರತೆ,
ಸಂಪತ್ತು ಎಲ್ಲವೂ ಇರುತ್ತದೆ. ಗೀತೆಯಲ್ಲಿಯೂ ಕೇಳಿದಿರಲ್ಲವೆ. ಈ ಗೀತೆಗಳನ್ನಂತೂ ನೀವು ಬರೆದಿಲ್ಲ.
ನಾಟಕದನುಸಾರ ಇವೆಲ್ಲಾ ಹಾಡುಗಳು ಈ ಸಮಯಕ್ಕಾಗಿ ಮಾಡಲ್ಪಟ್ಟಿವೆ. ಮನುಷ್ಯರು ರಚಿಸಿರುವ ಗೀತೆಗಳ
ಅರ್ಥವನ್ನು ತಂದೆಯು ತಿಳಿಸಿಕೊಡುತ್ತಾರೆ. ನೀವೀಗ ಇಲ್ಲಿ ಶಾಂತಿಯಲ್ಲಿ ಕುಳಿತು ತಂದೆಯಿಂದ
ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ, ಯಾವ ಆಸ್ತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.
ಅರ್ಧಕಲ್ಪದವರೆಗೆ ಸುಖದ ಆಸ್ತಿಯಿರುತ್ತದೆ. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ,
ಅರ್ಧಕಲ್ಪಕ್ಕಿಂತಲೂ ಹೆಚ್ಚು ಸುಖವನ್ನು ನೀವು ಅನುಭವಿಸುತ್ತೀರಿ. ನಂತರ ರಾವಣ ರಾಜ್ಯವು
ಆರಂಭವಾಗುತ್ತದೆ. ಮಂದಿರಗಳಲ್ಲಿಯೂ ಸಹ ದೇವತೆಗಳು ವಾಮಮಾರ್ಗದಲ್ಲಿ ಹೇಗೆ ಹೋಗುತ್ತಾರೆಂಬ
ಚಿತ್ರಗಳನ್ನು ತೋರಿಸುತ್ತಾರೆ. ಉಡುಪುಗಳಂತೂ ಅವೇ ಆಗಿವೆ, ಅವು ನಂತರದಲ್ಲಿ ಬದಲಾಗುತ್ತವೆ.
ಪ್ರತಿಯೊಬ್ಬ ರಾಜನಿಗೂ ತಮ್ಮ-ತಮ್ಮದೇ ಆದ ಉಡುಪುಗಳು, ಕಿರೀಟ ಇತ್ಯಾದಿ ಎಲ್ಲವೂ ಪ್ರತ್ಯೇಕವಾಗಿ
ಇರುತ್ತವೆ.
ನಾವೀಗ ಶಿವ ತಂದೆಯಿಂದ
ಬ್ರಹ್ಮಾ ತಂದೆಯ ಮೂಲಕ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂದು ಮಕ್ಕಳಿಗೆ ತಿಳಿದಿದೆ.
ತಂದೆಯಂತೂ ಮಕ್ಕಳೇ, ಮಕ್ಕಳೇ ಎಂದು ಹೇಳುತ್ತಾರೆ. ಮಕ್ಕಳೇ, ನೀವು ನಿಮ್ಮ ಜನ್ಮಗಳನ್ನು ಕುರಿತು
ತಿಳಿದುಕೊಂಡಿಲ್ಲ. ಆತ್ಮವೇ ಕೇಳುತ್ತದೆಯಲ್ಲವೆ. ನಾವಾತ್ಮಗಳಾಗಿದ್ದೇವೆ, ಶರೀರವಲ್ಲ. ಬೇರೆ
ಯಾರೆಲ್ಲಾ ಮನುಷ್ಯರಿದ್ದಾರೆಯೋ ಅವರಿಗೆ ತಮ್ಮ ಶರೀರದ ಹೆಸರಿನ ನಶೆಯಿರುತ್ತದೆ ಏಕೆಂದರೆ
ದೇಹಾಭಿಮಾನಿಗಳಾಗಿದ್ದಾರೆ. ನಾವಾತ್ಮಗಳಾಗಿದ್ದೇವೆ ಎಂಬುದನ್ನೇ ತಿಳಿದುಕೊಂಡಿಲ್ಲ. ಅವರಂತೂ ಆತ್ಮನೇ
ಪರಮಾತ್ಮ, ಪರಮಾತ್ಮನೇ ಆತ್ಮನೆಂದು ಹೇಳಿಬಿಡುತ್ತಾರೆ. ಈಗ ನಿಮಗೆ ತಂದೆಯು ತಿಳಿಸಿದ್ದಾರೆ -
ನೀವಾತ್ಮಗಳು ವಿಶ್ವದ ಮಾಲೀಕರು, ದೇವಿ-ದೇವತೆಗಳಾಗುತ್ತಿದ್ದೀರಿ. ಈ ಜ್ಞಾನವು ಈ ಸಮಯದಲ್ಲಿಯೇ ಇದೆ.
ನಾವೇ ದೇವತೆಗಳು ನಂತರ ಕ್ಷತ್ರಿಯ ಮನೆತನದಲ್ಲಿ ಬರುತ್ತೇವೆ. 84 ಜನ್ಮಗಳ ಲೆಕ್ಕವು ಬೇಕಲ್ಲವೆ.
ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲರೂ ಒಟ್ಟಿಗೆ ಬಂದು ಬಿಡುವುದಿಲ್ಲ. ಯಾವ
ಧರ್ಮದವರು ಹೇಗೆ ಬರುತ್ತಾ ಇರುತ್ತಾರೆ! ಚರಿತ್ರೆಯು ಹಳೆಯದರಿಂದ ಮತ್ತೆ ಹೊಸದಾಗುತ್ತದೆ
ಎಂಬುದೆಲ್ಲವೂ ನಿಮಗೆ ತಿಳಿದಿದೆ. ಈಗ ಇದು ಪತಿತ ಪ್ರಪಂಚ, ಸತ್ಯಯುಗವು ಪಾವನ ಪ್ರಪಂಚವಾಗಿದೆ.
ನಂತರದಲ್ಲಿ ಅನ್ಯ ಧರ್ಮದವರು ಬರುತ್ತಾರೆ. ಈ ಕರ್ಮ ಕ್ಷೇತ್ರದಲ್ಲಿ ಇದೊಂದೇ ನಾಟಕವು ನಡೆಯುತ್ತದೆ,
ಇದರಲ್ಲಿ ಮುಖ್ಯವಾಗಿ ನಾಲ್ಕುಧರ್ಮಗಳಿವೆ. ಈ ಸಂಗಮಯುಗದಲ್ಲಿ ತಂದೆಯು ಬಂದು ಬ್ರಾಹ್ಮಣ
ಸಂಪ್ರದಾಯವನ್ನು ಸ್ಥಾಪನೆ ಮಾಡುತ್ತಾರೆ. ವಿರಾಟ ರೂಪದ ಚಿತ್ರವನ್ನು ತೋರಿಸುತ್ತಾರೆ ಆದರೆ ಅದರಲ್ಲಿ
ತಪ್ಪಿದೆ - ತಂದೆಯು ಬಂದು ಎಲ್ಲಾ ಮಾತುಗಳನ್ನು ತಿಳಿಸಿ ಸ್ಮೃತಿ ಸ್ವರೂಪರನ್ನಾಗಿ ಮಾಡುತ್ತಾರೆ.
ತಂದೆಯಂತೂ ಎಂದೂ ಶರೀರದಲ್ಲಿ ಬರುವುದಿಲ್ಲ, ತಪ್ಪನ್ನು ಮಾಡುವುದಿಲ್ಲ. ಅವರು ಸ್ವಲ್ಪ ಸಮಯಕ್ಕಾಗಿಯೇ
ನೀವು ಮಕ್ಕಳಿಗೆ ಸುಖಧಾಮ ಮತ್ತು ನಮ್ಮ ಮನೆಯ ಮಾರ್ಗವನ್ನು ತಿಳಿಸಲು ಈ ರಥದಲ್ಲಿ (ಬ್ರಹ್ಮಾ)
ಬರುತ್ತಾರೆ. ಕೇವಲ ಮಾರ್ಗವನ್ನಷ್ಟೆ ತಿಳಿಸುವುದಿಲ್ಲ, ಜೀವನವನ್ನೂ ರೂಪಿಸುತ್ತಾರೆ. ಕಲ್ಪ-ಕಲ್ಪವೂ
ನೀವು ಮನೆಗೆ ಹೋಗುತ್ತೀರಿ ನಂತರ ಸುಖದ ಪಾತ್ರವನ್ನಭಿನಯಿಸುತ್ತೀರಿ. ನಾವಾತ್ಮಗಳ ಸ್ವಧರ್ಮವೇ
ಶಾಂತಿಯಾಗಿದೆ ಎಂಬುದು ಮಕ್ಕಳಿಗೆ ಮರೆತು ಹೋಗಿದೆ. ಈ ದುಃಖದ ಪ್ರಪಂಚದಲ್ಲಿ ಶಾಂತಿಯಿರಲು ಹೇಗೆ
ಸಾಧ್ಯ, ಇವೆಲ್ಲಾ ಮಾತುಗಳನ್ನು ನೀವು ತಿಳಿದುಕೊಳ್ಳುತ್ತೀರಿ ಮತ್ತು ಎಲ್ಲರಿಗೂ ತಿಳಿಸುತ್ತೀರಿ.
ನಿಧಾನ-ನಿಧಾನವಾಗಿ ಎಲ್ಲರೂ ಬರತೊಡಗುತ್ತಾರೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಇದರ
ಕಾಲಾವಧಿ ಎಷ್ಟು ಎಂಬುದು ವಿದೇಶಿಯರಿಗೂ ಸಹ ಅರ್ಥವಾಗುವುದು. ವಿದೇಶಿಯರು ನಿಮ್ಮ ಬಳಿ ಬರುತ್ತಾರೆ
ಹಾಗೂ ಮಕ್ಕಳೂ ಸಹ ಅಲ್ಲಿಗೆ ಹೋಗಿ ಸೃಷ್ಟಿಚಕ್ರದ ರಹಸ್ಯವನ್ನು ತಿಳಿಸುತ್ತಾರೆ. ಕ್ರೈಸ್ಟ್ ಹೋಗಿ
ಭಗವಂತನ ಸಾನಿಧ್ಯವನ್ನು ಸೇರಿದರೆಂದು ಅವರು ತಿಳಿಯುತ್ತಾರೆ. ಕ್ರೈಸ್ಟ್ ಭಗವಂತನ ಮಗುವೆಂದು
ತಿಳಿಯುತ್ತಾರೆ. ಇನ್ನೂ ಕೆಲವರು ಕ್ರಿಸ್ತನೂ ಸಹ ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಕೆಳಗೆ ಇಳಿದಿದ್ದಾರೆಂಬುದನ್ನೂ ಸಹ
ತಿಳಿದುಕೊಳ್ಳುತ್ತಾರೆ. ಹೇಗೆ ನೀವೂ ಸಹ ಈಗ ಭಿಕಾರಿಗಳಾಗಿದ್ದೀರಲ್ಲವೆ. ಭಿಕಾರಿ ಅರ್ಥಾತ್
ತಮೋಪ್ರಧಾನರು. ಕ್ರಿಸ್ತನೂ ಸಹ ಇಲ್ಲಿಯೇ ಇದ್ದಾರೆಂಬ ಮಾತನ್ನು ತಿಳಿದುಕೊಳ್ಳುತ್ತಾರೆ ಆದರೆ ಮತ್ತೆ
ಯಾವಾಗ ಬರುತ್ತಾರೆ? ಎಂಬುದು ತಿಳಿದಿಲ್ಲ ಆದ್ದರಿಂದ ನೀವು ತಿಳಿಸಿ, ನಿಮ್ಮ ಧರ್ಮ ಸ್ಥಾಪಕರು ಪುನಃ
ತಮ್ಮ ಸಮಯದಲ್ಲಿ ಧರ್ಮ ಸ್ಥಾಪನೆ ಮಾಡಲು ಬರುವರು, ಅವರಿಗೆ ಗುರುಗಳೆಂದು ಹೇಳಲು ಸಾಧ್ಯವಿಲ್ಲ, ಅವರು
ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಸದ್ಗತಿದಾತನು ಕೇವಲ ಒಬ್ಬ ತಂದೆಯಾಗಿದ್ದಾರೆ.
ಮತ್ತ್ಯಾರೆಲ್ಲರೂ ಧರ್ಮ ಸ್ಥಾಪನೆ ಮಾಡಲು ಬರುವರೋ ಅವರೆಲ್ಲರೂ ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಬಂದು ತಮೋಪ್ರಧಾನರಾಗಿದ್ದಾರೆ. ಅಂತ್ಯದಲ್ಲಿ ಇಡೀ
ವೃಕ್ಷವೇ ವಾನಪ್ರಸ್ಥ ಸ್ಥಿತಿಯನ್ನು ತಲುಪಿದೆ. ನೀವೀಗ ತಿಳಿದುಕೊಂಡಿದ್ದೀರಿ - ಇಡೀ ವೃಕ್ಷವು
ನಿಂತಿದೆ ಆದರೆ ದೇವಿ-ದೇವತಾ ಧರ್ಮದ ಬುನಾದಿಯೇ ಇಲ್ಲ (ಆಲದ ಮರದ ತರಹ). ಈ ಮಾತುಗಳನ್ನು ತಂದೆಯು
ಮಕ್ಕಳಿಗೆ ತಿಳಿಸಿಕೊಡುತ್ತಾರೆ. ನೀವು ಮಕ್ಕಳಿಗಂತೂ ಬಹಳ ಖುಷಿಯಿರಬೇಕು ಏಕೆಂದರೆ ನಿಮಗೆ
ಅರ್ಥವಾಗಿದೆ - ನಾವೇ ದೇವಿ-ದೇವತೆಗಳಾಗಿದ್ದೆವು, ಈಗ ಪುನಃ ಆಗುತ್ತೇವೆ. ಮಕ್ಕಳು ಸತ್ಯನಾರಾಯಣನ
ಕಥೆಯನ್ನು ಕೇಳುವುದಕ್ಕಾಗಿಯೇ ಇಲ್ಲಿಗೆ ಬರುತ್ತೀರಿ ಯಾವುದರಿಂದ ನರನಿಂದ ನಾರಾಯಣನಾಗುತ್ತೀರಿ.
ನಾರಾಯಣನಾಗುತ್ತಾರೆಂದರೆ ಅವಶ್ಯವಾಗಿ ಲಕ್ಷ್ಮೀಯೂ ಇರುವರು. ಲಕ್ಷ್ಮೀ-ನಾರಾಯಣರಿದ್ದರೆ ಅವಶ್ಯವಾಗಿ
ಅವರ ರಾಜಧಾನಿಯು ಇರುತ್ತದೆಯಲ್ಲವೆ. ಕೇವಲ ಲಕ್ಷ್ಮೀ-ನಾರಾಯಣರಿಬ್ಬರೇ ಇರುವುದಿಲ್ಲ,
ಲಕ್ಷ್ಮಿಯಾಗುವ ಕಥೆಯು ಬೇರೇನಲ್ಲ, ನಾರಾಯಣನ ಜೊತೆ ಲಕ್ಷ್ಮಿಯೂ ಆಗುತ್ತಾರೆ. ಲಕ್ಷ್ಮಿಯೂ ಸಹ
ಕೆಲವೊಮ್ಮೆ ನಾರಾಯಣನಾಗುತ್ತಾರೆ. ಇನ್ನೂ ಕೆಲವೊಮ್ಮೆ ನಾರಾಯಣನು ನಂತರದ ಜನ್ಮದಲ್ಲಿ ಲಕ್ಷ್ಮೀಯೂ
ಆಗುತ್ತಾರೆ. ಕೆಲಕೆಲವು ಗೀತೆಗಳು ಬಹಳ ಚೆನ್ನಾಗಿವೆ. ಮಾಯೆಯ ಉದಾಸೀತನ (ಬೇಸರ) ವು ಬಂದಾಗ ಇಂತಹ
ಹಾಡುಗಳನ್ನು ಕೇಳುವುದರಿಂದ ಪುನಃ ಹರ್ಷಿತಮುಖತೆಯು ಬಂದು ಬಿಡುವುದು. ಹೇಗೆ ಈಜುವುದನ್ನು
ಕಲಿಯುವಾಗ ಮೊದಲು ಹೆದರಿಕೆಯಾಗುತ್ತದೆ ನಂತರ ನಿರ್ಭಯರಾಗಿ ಬಿಡುತ್ತಾರೆ. ಇಲ್ಲಿಯೂ ಸಹ ಮಕ್ಕಳು
ಮಾಯೆಯಿಂದ ಉಗುಳು ನುಂಗುತ್ತಾರೆ. ಈಜುವವರಂತೂ ಅನೇಕರಿದ್ದಾರೆ. ಹೇಗೆ ಈಜುಗಾರರ ಸ್ಪರ್ಧೆಯಿರುತ್ತದೆ,
ಹಾಗೆಯೇ ನಿಮ್ಮದೂ ಸಹ ಆ ತೀರವನ್ನು ಸೇರುವ ಸ್ಪರ್ಧೆಯಾಗಿದೆ. ನನ್ನೊಬ್ಬನನ್ನೇ ನೆನಪು ಮಾಡಬೇಕಾಗಿದೆ.
ನೆನಪು ಮಾಡದಿದ್ದರೆ ಆಲಸಿಗಳಾಗುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೆನಪಿನ
ಯಾತ್ರೆಯಿಂದಲೇ ದೋಣಿಯು ಪಾರಾಗುವುದು, ಆ ತೀರವನ್ನು ತಲುಪುತ್ತೀರಿ. ಈಜುಗಾರರು ಕೆಲವರು ಬಹಳ
ತೀಕ್ಷ್ಣರಾಗಿರುತ್ತಾರೆ. ಕೆಲವರು ಕಡಿಮೆ. ಇಲ್ಲಿಯೂ ಹಾಗೆಯೇ ತಂದೆಯ ಬಳಿ ಚಾರ್ಟನ್ನು
ಕಳುಹಿಸುತ್ತಾರೆ. ತಂದೆಯು ಅದನ್ನು ಪರಿಶೀಲನೆ ಮಾಡುತ್ತಾರೆ. ನೆನಪಿನ ಚಾರ್ಟನ್ನು ಇವರು ಸರಿಯಾದ
ರೀತಿಯಿಂದ ತಿಳಿದುಕೊಂಡಿದ್ದಾರೆಯೇ ಅಥವಾ ತಪ್ಪಾಗಿ ತಿಳಿದುಕೊಂಡಿದ್ದಾರೆಯೇ! ನಾನು ಇಡೀ ದಿನದಲ್ಲಿ
5 ಗಂಟೆಗಳ ಸಮಯ ನೆನಪಿನಲ್ಲಿದ್ದೆನು ಎಂದು ಕೆಲವರು ತೋರಿಸುತ್ತಾರೆ. ಅವರ ಮೇಲೆ ನಾನು
ವಿಶ್ವಾಸವನ್ನಿಡುವುದಿಲ್ಲ, ಖಂಡಿತವಾಗಿ ತಪ್ಪಾಗಿರುತ್ತದೆ. ಇನ್ನೂ ಕೆಲವರು ನಾವು ಎಷ್ಟು ಸಮಯ
ಇಲ್ಲಿ ಓದುತ್ತೇವೆಯೋ ಅಷ್ಟು ಸಮಯವಂತೂ ಚಾರ್ಟ್ ಸರಿಯಿರುತ್ತದೆ ಎಂದು ತಿಳಿದುಕೊಳ್ಳುತ್ತಾರೆ ಆದರೆ
ಇಲ್ಲ. ಅನೇಕರಿಗೆ ಇಲ್ಲಿ ಕುಳಿತಿದ್ದರೂ, ಮುರುಳಿಯನ್ನು ಕೇಳುತ್ತಿದ್ದರೂ ಬುದ್ಧಿಯು ಹೊರಗಡೆ
ಎಲ್ಲೆಲ್ಲಿಯೋ ಹೋಗುತ್ತಿರುತ್ತದೆ. ಪೂರ್ಣವಾಗಿ ಕೇಳುವುದೇ ಇಲ್ಲ. ಭಕ್ತಿಮಾರ್ಗದಲ್ಲಿಯೂ ಇದೇ
ರೀತಿಯೇ ಆಗುತ್ತದೆ. ಸನ್ಯಾಸಿಗಳು ಕಥೆಯನ್ನು ಹೇಳುವಾಗ ಮಧ್ಯ-ಮಧ್ಯದಲ್ಲಿ ನಾನು ಏನನ್ನು ಹೇಳಿದೆನು
ಎಂದು ಮಧ್ಯ-ಮಧ್ಯದಲ್ಲಿ ಕೇಳುತ್ತಿರುತ್ತಾರೆ. ಇವರು ಕಾದಿರುವ ಹೆಂಚಿನ ರೀತಿಯಲ್ಲಿ ಕುಳಿತಿದ್ದಾರೆ
ಎಂಬುದನ್ನು ನೋಡಿ ಅವರನ್ನೆ ಕೇಳುತ್ತಾರೆ ಆಗ ಅಂತಹವರು ಉತ್ತರಿಸಲು ಸಾಧ್ಯವಾಗುವುದಿಲ್ಲ. ಬುದ್ಧಿಯು
ಯಾವುದಾದರೊಂದು ಕಡೆ ಹೊರಟು ಹೋಗುತ್ತದೆ. ಒಂದು ಶಬ್ಧವನ್ನೂ ಕೇಳಿಸಿಕೊಳ್ಳುವುದಿಲ್ಲ. ಇಲ್ಲಿಯೂ
ಹಾಗೆಯೇ. ತಂದೆಯು ನೋಡುತ್ತಿರುತ್ತಾರೆ, ಇವರ ಬುದ್ಧಿಯು ಎಲ್ಲಿಯೋ ಹೊರಗಡೆ ಅಲೆಯುತ್ತಿರುತ್ತದೆ. ಆ
ಕಡೆ ಈ ಕಡೆ ನೋಡುತ್ತಿರುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ. ಇಂತಹವರು ಕೆಲಕೆಲವರು ಹೊಸಬರೂ
ಬರುತ್ತಾರೆ. ಇಂತಹವರನ್ನು ನೋಡಿ ಇವರು ಪೂರ್ಣ ಅರಿತುಕೊಂಡಿಲ್ಲವೆಂದು ತಂದೆಯು ತಿಳಿಯುತ್ತಾರೆ.
ಆದ್ದರಿಂದ ತಂದೆಯು ಹೇಳುತ್ತಾರೆ - ಹೊಸಬರನ್ನು ತರಗತಿಗೆ ತರಲು ಬೇಗನೆ ಅನುಮತಿ ಕೊಡಬೇಡಿ. ಅಂತಹವರು
ವಾಯುಮಂಡಲವನ್ನು ಕೆಡಿಸುತ್ತಾರೆ. ಮುಂದೆ ಹೋದಂತೆ ನೀವು ನೋಡುತ್ತೀರಿ, ಯಾರು ಒಳ್ಳೊಳ್ಳೆಯ
ಮಕ್ಕಳಿದ್ದಾರೆಯೋ ಅವರು ಇಲ್ಲಿ ಕುಳಿತು-ಕುಳಿತಿದ್ದಂತೆಯೇ ವೈಕುಂಠಕ್ಕೆ ಹೊರಟು ಹೋಗುತ್ತಾರೆ, ಬಹಳ
ಖುಷಿಯಾಗುತ್ತದೆ. ಪುನಃ-ಪುನಃ ಹೋಗುತ್ತಾರೆ. ಈಗ ಸಮಯವು ಸಮೀಪವಿದೆ, ನಂಬರ್ವಾರ್
ಪುರುಷಾರ್ಥದನುಸಾರ ನೀವು ಆ ಸ್ಥಿತಿಯನ್ನು ತಲುಪುವಿರಿ. ನೀವು ಪದೇ-ಪದೇ ಸ್ವರ್ಗದಲ್ಲಿ ತಮ್ಮ
ಮಹಲುಗಳನ್ನು ನೋಡುತ್ತಿರುತ್ತೀರಿ. ಏನೆಲ್ಲವನ್ನೂ ತಿಳಿಸಬೇಕಾಗಿದೆಯೋ ಅದರ ಸಾಕ್ಷಾತ್ಕಾರವಾಗುತ್ತಾ
ಇರುವುದು. ಸಮಯವನ್ನಂತು ನೋಡುತ್ತಿದ್ದೀರಿ, ಹೇಗೇಗೆ ತಯಾರಿಗಳು ನಡೆಯುತ್ತಿದೆ, ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಇಡೀ ಪ್ರಪಂಚದ ಮನುಷ್ಯರೆಲ್ಲರೂ ಹೇಗೆ ಒಂದು ಸೆಕೆಂಡಿನಲ್ಲಿ ಸುಟ್ಟು
ಹೋಗುತ್ತಾರೆ ಎಂಬುದನ್ನು ನೋಡುವಿರಿ. ಒಂದು ಬಾಂಬು ಹಾಕಿದರೆಂದರೆ ಇದೆಲ್ಲವೂ ಸಮಾಪ್ತಿಯಾಗುವುದು.
ನೀವು ಮಕ್ಕಳಿಗೆ
ತಿಳಿದಿದೆ - ಈಗ ನಿಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಅಂದಮೇಲೆ ನೆನಪಿನ ಯಾತ್ರೆಯಲ್ಲಿ
ಮಗ್ನರಾಗಿರಬೇಕಾಗಿದೆ. ಯಾರಿಗಾದರೂ ದೃಷ್ಟಿಯಿಂದಲೇ ಬಾಣವು ನಾಟುವಷ್ಟು ಯೋಗದ ಹರಿತವನ್ನು
ತುಂಬಿಸಿಕೊಳ್ಳಬೇಕಾಗಿದೆ. ಅಂತಿಮದಲ್ಲಿ ಭೀಷ್ಮ ಪಿತಾಮಹ ಮೊದಲಾದವರಿಗೂ ಸಹ ನೀವೇ ಜ್ಞಾನದ ಬಾಣವನ್ನು
ಹೊಡೆದಿದ್ದೀರಿ ಅಂದರೆ ಕೊನೆಯಲ್ಲಿ ಇವರು ಸತ್ಯವನ್ನು ಒಪ್ಪಿಕೊಳ್ಳುತ್ತಾರೆ. ಜ್ಞಾನ ಸಾಗರ,
ಪತಿತ-ಪಾವನನು ನಿರಾಕಾರ ಪರಮಾತ್ಮನಾಗಿದ್ದಾರೆ, ಕೃಷ್ಣನಾಗಲು ಸಾಧ್ಯವಿಲ್ಲ. ಕೃಷ್ಣನಿಗೆ ಜನ್ಮವನ್ನು
ತೋರಿಸುತ್ತಾರೆ. ಕೃಷ್ಣನ ಅದೇ ರೂಪವು ಮತ್ತೆಂದೂ ಹೋಲುವುದಿಲ್ಲ. ಮತ್ತೆ ಸತ್ಯಯುಗದಲ್ಲಿ ಅದೇ ಮುಖ
ಲಕ್ಷಣಗಳು ಸಿಗುತ್ತವೆ ಎಂಬ ಎಲ್ಲಾ ಮಾತುಗಳನ್ನು ಬಹಳ ಬೇಗನೆ ಅರಿತುಕೊಳ್ಳುತ್ತಾ ಹೋಗುತ್ತಾರೆ.
ಪ್ರತಿಯೊಂದು ಜನ್ಮದಲ್ಲಿ ಪ್ರತಿಯೊಬ್ಬರ ರೂಪವು ಬೇರೆ-ಬೇರೆಯಾಗಿರುತ್ತದೆ. ಈ ನಾಟಕದ ಪಾತ್ರವೇ ಹೀಗೆ
ಮಾಡಲ್ಪಟ್ಟಿದೆ. ಅಲ್ಲಂತೂ ಬಹಳ ಸುಂದರ ರೂಪವಿರುತ್ತದೆ. ಈಗಂತೂ ದಿನ-ಪ್ರತಿದಿನ ಕಳೆದಂತೆ ಶರೀರಗಳು
ತಮೋಪ್ರಧಾನವಾಗುತ್ತಾ ಹೋಗುತ್ತದೆ. ಮೊಟ್ಟ ಮೊದಲಿಗೆ ಸತೋಪ್ರಧಾನರಿದ್ದವರು ನಂತರ ಸತೋ, ರಜೋ, ತಮೋ
ಆಗಿಬಿಡುತ್ತಾರೆ. ಇಲ್ಲಿ ನೋಡಿ, ಎಂತೆಂತಹ ಮಕ್ಕಳು ಜನ್ಮ ಪಡೆಯುತ್ತಾರೆ! ಕೆಲವರು
ಕುಂಟರಾಗಿರುತ್ತಾರೆ, ಕೆಲವರು ರೋಗಿಯಾಗಿರುತ್ತಾರೆ. ಏನೇನು ನಡೆಯುತ್ತಿದೆ, ಸತ್ಯಯುಗದಲ್ಲಿ ಈ ರೀತಿ
ಇರುವುದಿಲ್ಲ. ಅಲ್ಲಂತೂ ದೇವತೆಗಳಿಗೆ ಮೀಸೆ-ಗಡ್ಡ ಇತ್ಯಾದಿಯು ಇರುವುದಿಲ್ಲ. ಮುಖ ಲಕ್ಷಣಗಳಿಂದ
ಇವರು ಸ್ತ್ರೀ, ಇವರು ಪುರುಷನೆಂದು ಅರ್ಥವಾಗುತ್ತದೆ. ಮುಂದೆ ಹೋದಂತೆ ನಿಮಗೆ ಬಹಳ
ಸಾಕ್ಷಾತ್ಕಾರವಾಗುತ್ತಿರುತ್ತದೆ. ಅಂದಮೇಲೆ ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ತಂದೆಯು
ಕಲ್ಪ-ಕಲ್ಪವೂ ಬಂದು ನಮಗೆ ರಾಜಯೋಗವನ್ನು ಕಲಿಸಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ಇದೂ
ಸಹ ನೀವು ಮಕ್ಕಳಿಗೆ ತಿಳಿದಿದೆ - ಅನ್ಯ ಯಾವುದೆಲ್ಲಾ ಧರ್ಮದವರಿದ್ದಾರೆಯೋ ಎಲ್ಲರೂ ಹೋಗಿ
ತಮ್ಮ-ತಮ್ಮ ವಿಭಾಗ (ಪರಮಧಾಮ) ದಲ್ಲಿರುತ್ತಾರೆ. ಆತ್ಮಗಳ ವೃಕ್ಷವನ್ನು ತೋರಿಸುತ್ತಾರಲ್ಲವೆ. ಈ
ಚಿತ್ರಗಳಲ್ಲಿ ಇನ್ನೂ ತಿದ್ದು ಪಡಿಯಾಗುತ್ತಾ ಹೋಗುತ್ತದೆ. ಹೇಗೆ ತಂದೆಯು ಸೂಕ್ಷ್ಮವತನದ ಬಗ್ಗೆ
ತಿಳಿಸುತ್ತಾರೆ. ಸಂಶಯ ಬುದ್ಧಿಯವರಂತು ಮೊದಲು ಹೇಗೆ ಹೇಳುತ್ತಿದ್ದರು, ಈಗ ಏನು ಹೇಳುತ್ತಾರೆ ಎಂದು
ತಿಳಿದುಕೊಳ್ಳುತ್ತಾರೆ. ಲಕ್ಷ್ಮೀ-ನಾರಾಯಣರ ಎರಡು ರೂಪಗಳನ್ನು ಸೇರಿಸಿ ವಿಷ್ಣುವೆಂದು ಹೇಳುತ್ತಾರೆ.
ಉಳಿದಂತೆ ನಾಲ್ಕು ಭುಜಗಳನ್ನು ಹೊಂದಿರುವ ಮನುಷ್ಯರೇನು ಇರುವುದಿಲ್ಲ. ರಾವಣನಿಗೆ 10 ತಲೆಗಳನ್ನು
ತೋರಿಸುತ್ತಾರೆ. ಈ ರೀತಿ ಯಾವುದೇ ಮನುಷ್ಯರಿರುವುದಿಲ್ಲ. ರಾವಣನನ್ನು ಪ್ರತೀ ವರ್ಷವು ಸುಡುತ್ತಾರೆ.
ಇದು ಗೊಂಬೆಯಾಟವಾಗಿದೆ.
ಶಾಸ್ತ್ರಗಳಿಲ್ಲದೆ ನಾವು
ಬದುಕುವುದಕ್ಕೇ ಸಾಧ್ಯವಿಲ್ಲ, ಶಾಸ್ತ್ರಗಳು ನಮ್ಮ ಪ್ರಾಣವಾಗಿದೆ ಎಂದು ಮನುಷ್ಯರು ಹೇಳುತ್ತಾರೆ.
ಭಗವದ್ಗೀತೆಗೆ ನೋಡಿ, ಎಷ್ಟೊಂದು ಮಾನ್ಯತೆಯಿದೆ! ಇಲ್ಲಂತೂ ನಿಮ್ಮ ಬಳಿ ಮುರುಳಿಗಳು ಬಹಳಷ್ಟಿವೆ.
ನೀವು ಇಟ್ಟುಕೊಂಡು ಏನು ಮಾಡುತ್ತೀರಿ? ದಿನ-ಪ್ರತಿದಿನ ಹೊಸ-ಹೊಸ ವಿಚಾರಗಳನ್ನು ಕೇಳುತ್ತಾ
ಇರುತ್ತೀರಿ. ಹಾ! ಜ್ಞಾನ ಬಿಂದುಗಳನ್ನು ಬರೆದಿಟ್ಟುಕೊಳ್ಳುವುದು ಒಳ್ಳೆಯದು, ಭಾಷಣವನ್ನು ಮಾಡುವ
ಸಮಯದಲ್ಲಿ ಉಪಯೋಗಿಸಬಹುದು. ಭಾಷಣದ ವಿಷಯಗಳ ಪಟ್ಟಿಯನ್ನು ತಯಾರಿಸಬೇಕು. ಇಂದು ಈ ವಿಷಯದ ಮೇಲೆ
ತಿಳಿಸಿಕೊಡಬೇಕು - ರಾವಣ ಯಾರು, ರಾಮನು ಯಾರು? ಸತ್ಯವೇನೆಂದು ನಾವು ತಮಗೆ ತಿಳಿಸುತ್ತೇವೆ. ಈ
ಸಮಯದಲ್ಲಿ ಇಡೀ ಪ್ರಪಂಚದಲ್ಲಿಯೇ ರಾವಣ ರಾಜ್ಯವಿದೆ, ಎಲ್ಲರಲ್ಲಿ ಪಂಚ ವಿಕಾರಗಳಿವೆ. ತಂದೆಯು ಬಂದು
ಪುನಃ ರಾಮ ರಾಜ್ಯದ ಸ್ಥಾಪನೆ ಮಾಡುತ್ತಾರೆ. ಇದು ಸೋಲು ಮತ್ತು ಗೆಲುವಿನ ಆಟವಾಗಿದೆ. ಹೇಗೆ
ಸೋಲುಂಟಾಗುತ್ತದೆ! ಪಂಚ ವಿಕಾರಗಳೆಂಬ ರಾವಣನಿಂದ. ಮೊದಲು ಪವಿತ್ರ ಗೃಹಸ್ಥಾಶ್ರಮವಾಗಿತ್ತು. ಈಗ
ಪತಿತರಾಗಿ ಬಿಟ್ಟಿದ್ದಾರೆ. ಲಕ್ಷ್ಮೀ-ನಾರಾಯಣರೇ ಈಗ ಬ್ರಹ್ಮಾ-ಸರಸ್ವತಿ. ನಾನು ಇವರ ಬಹಳ ಜನ್ಮಗಳ
ಅಂತಿಮದಲ್ಲಿ ಪ್ರವೇಶ ಮಾಡುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ನಾವೂ ಸಹ ಬಹಳ ಜನ್ಮಗಳ
ಅಂತ್ಯದಲ್ಲಿ ತಂದೆಯಿಂದ ಜ್ಞಾನವನ್ನು ಪಡೆಯುತ್ತಿದ್ದೇವೆ. ಇವೆಲ್ಲವೂ ತಿಳಿದುಕೊಳ್ಳುವ
ಮಾತುಗಳಾಗಿವೆ. ಮಂಧಬುದ್ಧಿಯವರು ಇದನ್ನು ತಿಳಿದುಕೊಳ್ಳುವುದಿಲ್ಲ. ಈಗಂತೂ ರಾಜಧಾನಿಯು
ಸ್ಥಾಪನೆಯಾಗುತ್ತಿದೆ. ಅನೇಕರು ಬಂದು ಹೋದರು. ಅವರು ಪುನಃ ಬರುತ್ತಾರೆ. ಪ್ರಜೆಗಳಲ್ಲಿ ಬಹಳ ಕಡಿಮೆ
ಪದವಿಯನ್ನು ಪಡೆಯುತ್ತಾರೆ. ಸತ್ಯಯುಗದಲ್ಲಿ ಅವರೂ ಬೇಕಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸದಾ ಇದೇ
ನಶೆಯಲ್ಲಿರಿ - ನಾವೀಗ ಈ ವಿದ್ಯಾಭ್ಯಾಸವನ್ನು ಮುಗಿಸಿ ಮನುಷ್ಯರಿಂದ ದೇವತೆಗಳು ಅರ್ಥಾತ್ ವಿಶ್ವದ
ಮಾಲೀಕರಾಗುತ್ತೇವೆ. ನಮ್ಮ ರಾಜ್ಯದಲ್ಲಿ ಸುಖ, ಶಾಂತಿ, ಪವಿತ್ರತೆಯೆಲ್ಲವೂ ಇರುವುದು. ಅದನ್ನು ಯಾರೂ
ಕಸಿದುಕೊಳ್ಳಲು ಸಾಧ್ಯವಿಲ್ಲ.
2. ಈ ತೀರದಿಂದ ಆ
ತೀರವನ್ನು ಸೇರಲು ನೆನಪಿನ ಯಾತ್ರೆಯಲ್ಲಿ ಒಳ್ಳೆಯ ಈಜುಗಾರರಾಗಬೇಕಾಗಿದೆ. ಮಾಯೆಯಿಂದ ನೀರು
ಕುಡಿಯಬಾರದು. ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು, ನೆನಪಿನ ಚಾರ್ಟನ್ನು ಯಥಾರ್ಥವಾಗಿ ತಿಳಿದುಕೊಂಡು
ಬರೆಯಬೇಕಾಗಿದೆ.
ವರದಾನ:
ಪುರುಷಾರ್ಥ
ಮತ್ತು ಪ್ರಾಲಬ್ಧದ ಲೆಕ್ಕಾಚಾರವನ್ನು ತಿಳಿದು ತೀವ್ರ ಗತಿಯಿಂದ ಮುಂದುವರಯುತ್ತಿರುವಂತಹ
ಜ್ಞಾನಪೂರ್ಣ ಭವ.
ಪುರುಷಾರ್ಥದ ಮೂಲಕ
ಬಹಳಕಾಲದ ಪ್ರಾಲಬ್ಧ ಮಾಡಿಕೊಳ್ಳುವಂತಹ ಸಮಯ ಇದೇ ಆಗಿದೆ ಆದ್ದರಿಂದ ಜ್ಞಾನಪೂರ್ಣರಾಗಿ ತೀವ್ರ
ಗತಿಯಿಂದ ಮುಂದುವರೆಯಿರಿ. ಇದರಲ್ಲಿ ಎಂದೂ ಹೀಗೆ ಯೋಚಿಸಬೇಡಿ ಇಂದಿಲ್ಲದಿದ್ದರೆ ನಾಳೆಯಾದರೂ ಬದಲಾಗಿ
ಬಿಡುವೆ. ಇದಕ್ಕೆ ಹುಡುಗಾಟಿಕೆ, ಸಾಧಾರಣ ಪುರುಷಾರ್ಥ ನೋಡುತ್ತಾ ಕೇಳುತ್ತಾ ಇದ್ದರೂಸಹಾ ಎಕ್ಸ್ಟ್ರಾ
ಸಹಾಯದಿಂದ, ಎಕ್ಸ್ಟ್ರಾ ಮಾರ್ಕ್ಸ್ ಕೊಟ್ಟು ಮುಂದುವರೆಸುತ್ತಿದ್ದಾರೆ. ಆದ್ದರಿಂದ ಜ್ಞಾನಪೂರ್ಣರಾಗಿ
ಸಾಹಸ ಮತ್ತು ಸಹಾಯದ ವಿಶೇಷ ವರದಾನದ ಲಾಭ ಪಡೆಯಿರಿ.
ಸ್ಲೋಗನ್:
ಪ್ರಕೃತಿಗೆ ದಾಸ
ಆಗುವವರೇ ಉದಾಸರಾಗುತ್ತಾರೆ, ಆದ್ದರಿಂದ ಪ್ರಕೃತಿಜೀತ್ ಆಗಿ.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಹೇಗೆ ಯಾವುದೇ ಸಾಗರನಲ್ಲಿ
ಸಮಾವೇಶವಾದರೆ ಆ ಸಮಯ ಸಾಗರ ಬಿಟ್ಟರೆ ಬೇರೆ ಏನು ಕಾಣಿಸುವುದಿಲ್ಲ. ತಂದೆ ಅರ್ಥಾತ್ ಸರ್ವಗುಣಗಳ
ಸಾಗರದಲ್ಲಿ ಸಮಾವೇಶವಾಗುವುದು, ಇದಕ್ಕೆ ಲವಲೀನ ಸ್ಥಿತಿ. ತಂದೆಯಲ್ಲಿ ಸಮಾವೇಶವಾಗಬಾರದು, ಆದರೆ
ತಂದೆಯ ನೆನಪಿನಲ್ಲಿ, ಸ್ನೇಹದಲ್ಲಿ ಸಮಾವೇಶವಾಗಬೇಕು.