20.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೀವು ಮಕ್ಕಳಿಗೆ ಅವಿನಾಶಿ ಸಂಪಾದನೆಯನ್ನು ಮಾಡಿಸಲು ತಂದೆಯು ಬಂದಿದ್ದಾರೆ, ಈಗ ನೀವು ಜ್ಞಾನರತ್ನಗಳನ್ನು ಎಷ್ಟು ಸಂಪಾದನೆ ಮಾಡಲು ಬಯಸುತ್ತೀರೋ ಅಷ್ಟು ಮಾಡಲು ಸಾಧ್ಯ”

ಪ್ರಶ್ನೆ:
ಅಸುರೀ ಸಂಸ್ಕಾರವನ್ನು ಬದಲಾಯಿಸಿಕೊಂಡು ದೈವೀ ಸಂಸ್ಕಾರವನ್ನು ರೂಪಿಸಿಕೊಳ್ಳಲು ಯಾವ ವಿಶೇಷ ಪುರುಷಾರ್ಥ ಮಾಡಬೇಕಾಗಿದೆ?

ಉತ್ತರ:
ಸಂಸ್ಕಾರವನ್ನು ಬದಲಾಯಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ದೇಹೀ-ಅಭಿಮಾನಿಯಾಗುವ ಅಭ್ಯಾಸ ಮಾಡಿ. ದೇಹಾಭಿಮಾನದಲ್ಲಿ ಬರುವುದರಿಂದಲೇ ಆಸುರೀ ಸಂಸ್ಕಾರವಾಗುತ್ತದೆ. ತಂದೆಯು ಆಸುರೀ ಸಂಸ್ಕಾರವನ್ನು ದೈವೀ ಸಂಸ್ಕಾರವನ್ನಾಗಿ ಮಾಡಲು ಬಂದಿದ್ದಾರೆ. ಮೊದಲು ನಾನು ದೇಹೀ ಆತ್ಮನಾಗಿದ್ದೇನೆ, ನಂತರ ಈ ಶರೀರವಾಗಿದೆ- ಈ ಪುರುಷಾರ್ಥ ಮಾಡಿ.

ಗೀತೆ:
ನೀನು ರಾತ್ರಿಯನ್ನು ಮಲಗುತ್ತಾ ಕಳೆದೆ, ಹಗಲನ್ನು ತಿನ್ನುತ್ತಾ ಕಳೆದೆ.............

ಓಂ ಶಾಂತಿ.
ಈ ಗೀತೆಯನ್ನು ಮಕ್ಕಳು ಬಹಳಷ್ಟು ಬಾರಿ ಕೇಳಿದ್ದೀರಿ. ಆತ್ಮೀಯ ಮಕ್ಕಳ ಪ್ರತಿ ಆತ್ಮೀಯ ತಂದೆಯು ಎಚ್ಚರಿಕೆ ನೀಡುತ್ತಿರುತ್ತಾರೆ. ಈಗ ವ್ಯರ್ಥವಾಗಿ ಕಳೆಯುವ ಸಮಯವಲ್ಲ, ಇದು ಬಹಳ ದೊಡ್ಡ ಸಂಪಾದನೆಯನ್ನು ಮಾಡಿಕೊಳ್ಳುವ ಸಮಯವಾಗಿದೆ. ಸಂಪಾದನೆ ಮಾಡಿಸಲು ತಂದೆಯು ಬಂದಿದ್ದಾರೆ. ಅಪಾರ ಸಂಪಾದನೆಯಿದೆ, ಇದನ್ನು ಯಾರೆಷ್ಟು ಬೇಕೋ ಅಷ್ಟನ್ನು ಮಾಡಿಕೊಳ್ಳಬಹುದಾಗಿದೆ. ಇದು ಅವಿನಾಶಿ ಜ್ಞಾನರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳುವಂತಹ ಸಂಪಾದನೆಯಾಗಿದೆ. ಇದು ಭವಿಷ್ಯಕ್ಕಾಗಿ ಇದೆ. ಇದು ಭಕ್ತಿ, ಇದು ಜ್ಞಾನವಾಗಿದೆ. ಯಾವಾಗ ರಾವಣರಾಜ್ಯವು ಆರಂಭವಾಗುತ್ತದೆಯೋ ಆಗ ಭಕ್ತಿಯು ಆರಂಭವಾಗುತ್ತದೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಯಾವಾಗ ತಂದೆಯು ಬಂದು ರಾಮರಾಜ್ಯವನ್ನು ಸ್ಥಾಪನೆ ಮಾಡುವರೋ ಆಗ ಜ್ಞಾನವು ಆರಂಭವಾಗುತ್ತದೆ. ಜ್ಞಾನವು ಹೊಸಪ್ರಪಂಚಕ್ಕಾಗಿ ಇದೆ. ಭಕ್ತಿಯು ಹಳೆಯ ಪ್ರಪಂಚಕ್ಕಾಗಿಯೇ ಇದೆ. ಈಗ ತಂದೆಯು ತಿಳಿಸುತ್ತಾರೆ- ಮೊದಲು ತನ್ನನ್ನು ಆತ್ಮನೆಂದು ತಿಳಿಯಬೇಕಾಗಿದೆ. ನಾವು ಮೊದಲು ಆತ್ಮಗಳಾಗಿದ್ದೇವೆ, ನಂತರ ಈ ಶರೀರವಿದೆ ಎಂದು ನೀವು ಮಕ್ಕಳ ಬುದ್ಧಿಯಲ್ಲಿದೆ. ಆದರೆ ನಾಟಕದನುಸಾರ ಮನುಷ್ಯರೆಲ್ಲರೂ ಉಲ್ಟಾ ಆಗಿಬಿಟ್ಟಿದ್ದಾರೆ ಆದ್ದರಿಂದ ಮೊದಲು ನಾವು ದೇಹವಾಗಿದ್ದೇವೆ ನಂತರ ದೇಹೀ ಆಗಿದ್ದೇವೆಂದು ಉಲ್ಟಾ ತಿಳಿದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಈ ಶರೀರವು ವಿನಾಶಿಯಾಗಿದೆ, ಅದನ್ನು ನೀವು ತೆಗೆದುಕೊಳ್ಳುತ್ತೀರಿ ಮತ್ತು ಬಿಡುತ್ತೀರಿ. ಸಂಸ್ಕಾರವು ಆತ್ಮದಲ್ಲಿರುತ್ತದೆ, ದೇಹಾಭಿಮಾನದಲ್ಲಿ ಬರುವುದರಿಂದ ಆಸುರೀ ಸಂಸ್ಕಾರವಾಗಿಬಿಡುತ್ತದೆ ಮತ್ತೆ ಆಸುರೀ ಸಂಸ್ಕಾರಗಳನ್ನು ದೈವೀ ಸಂಸ್ಕಾರವನ್ನಾಗಿ ಮಾಡಲು ತಂದೆಯು ಬರಬೇಕಾಗುತ್ತದೆ. ಈ ರಚನೆಯೆಲ್ಲವೂ ಆ ರಚಯಿತ ತಂದೆಯೊಬ್ಬರದೇ ಆಗಿದೆ. ಅವರನ್ನು ಎಲ್ಲರೂ ತಂದೆಯೆಂದೇ ಹೇಳುತ್ತಾರೆ. ಹೇಗೆ ಲೌಕಿಕ ತಂದೆಗೂ ಸಹ ತಂದೆಯೆಂದೇ ಹೇಳಲಾಗುತ್ತದೆ, ಮಮ್ಮಾ ಮತ್ತು ಬಾಬಾ ಇವೆರಡು ಶಬ್ಧಗಳು ಬಹಳ ಮಧುರವಾಗಿವೆ. ತಂದೆಗೆ ರಚಯಿತನೆಂದು ಹೇಳುತ್ತಾರೆ. ಅವರು ಮೊದಲು ತಾಯಿಯನ್ನು ದತ್ತು ಮಾಡಿಕೊಳ್ಳುತ್ತಾರೆ ನಂತರ ರಚನೆಯನ್ನು ರಚಿಸುತ್ತಾರೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ- ನಾನು ಯಾರಲ್ಲಿ ಬಂದು ಪ್ರವೇಶ ಮಾಡುತ್ತೇನೆ ಇವರ ಹೆಸರು ಪ್ರಸಿದ್ಧವಾಗಿದೆ. ಭಗೀರಥನೆಂದು ಹೇಳುತ್ತಾರೆ, ಮನುಷ್ಯನ ಚಿತ್ರವನ್ನೂ ತೋರಿಸುತ್ತಾರೆ ಯಾವುದೇ ಎತ್ತಿನ ಮಾತಿಲ್ಲ. ಭಗೀರಥ ಮನುಷ್ಯನ ತನುವಾಗಿದೆ. ತಂದೆಯೇ ಬಂದು ಮಕ್ಕಳಿಗೆ ತನ್ನ ಪರಿಚಯವನ್ನು ಕೊಡುತ್ತಾರೆ. ನೀವು ಯಾವಾಗಲೂ ಬಾಪ್ದಾದಾರವರ ಬಳಿ ಹೋಗುತ್ತೇವೆಂದೇ ಹೇಳಿ. ಕೇವಲ ಬಾಪ್ ಅರ್ಥಾತ್ ತಂದೆಯೆಂದು ಹೇಳಿದರೆ ಅವರು ನಿರಾಕಾರನಾಗಿಬಿಡುವರು. ಶರೀರವನ್ನು ಬಿಟ್ಟಾಗಲೇ ನಿರಾಕಾರಿ ತಂದೆಯ ಬಳಿ ಹೋಗಲು ಸಾಧ್ಯ. ಹಾಗೆಯೇ ಯಾರೂ ಹೋಗಲು ಸಾಧ್ಯವಿಲ್ಲ ಆದ್ದರಿಂದ ಬಾಪ್ದಾದಾರವರ ಬಳಿ ಹೋಗುತ್ತೇವೆಂದೇ ಹೇಳಬೇಕಾಗುತ್ತದೆ. ಈ ಜ್ಞಾನವನ್ನು ತಂದೆಯೇ ಕೊಡುತ್ತಾರೆ. ಜ್ಞಾನವು ಇರುವುದೇ ಅವರ ಬಳಿ. ಅವಿನಾಶಿ ಜ್ಞಾನರತ್ನಗಳ ಖಜಾನೆಯಾಗಿದೆ. ತಂದೆಯು ಜ್ಞಾನರತ್ನಗಳ ಸಾಗರನಾಗಿದ್ದಾರೆ. ಸ್ಥೂಲನೀರಿನ ಮಾತಿಲ್ಲ. ಜ್ಞಾನರತ್ನಗಳ ಭಂಡಾರವಾಗಿದೆ, ಅವರಲ್ಲಿ ಜ್ಞಾನವಿದೆ. ನೀರಿಗೆ ಜ್ಞಾನವೆಂದು ಹೇಳಲಾಗುವುದಿಲ್ಲ. ಹೇಗೆ ಮನುಷ್ಯರಿಗೆ ಬ್ಯಾರಿಸ್ಟರಿ, ಡಾಕ್ಟರಿ, ಮೊದಲಾದ ಜ್ಞಾನವಿರುತ್ತದೆ ಹಾಗೆಯೇ ಇದೂ ಜ್ಞಾನವಾಗಿದೆ. ಈ ಜ್ಞಾನಕ್ಕಾಗಿಯೇ ಋಷಿ-ಮುನಿ ಮೊದಲಾದವರೆಲ್ಲರೂ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ನಾವು ತಿಳಿದುಕೊಂಡಿಲ್ಲ. ಅದು ಒಬ್ಬ ರಚಯಿತನಿಗೇ ಗೊತ್ತು ಎಂದು ಹೇಳುತ್ತಾ ಬಂದಿದ್ದಾರೆ. ಮಾನವವಂಶವೃಕ್ಷದ ಬೀಜರೂಪ ತಂದೆಯಾಗಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವೂ ಅವರಲ್ಲಿದೆ, ಅವರು ಬಂದಾಗಲೇ ಇದನ್ನು ತಿಳಿಸುವರು. ಈಗ ನಿಮಗೆ ಜ್ಞಾನವು ಸಿಕ್ಕಿದೆ ಅಂದಮೇಲೆ ನೀವು ಈ ಜ್ಞಾನದಿಂದ ದೇವತೆಗಳಾಗುತ್ತೀರಿ. ಜ್ಞಾನವನ್ನು ಪಡೆದು ನಂತರ ಪ್ರಾಲಬ್ಧವನ್ನು ಪಡೆಯುತ್ತೀರಿ. ಸತ್ಯಯುಗದಲ್ಲಿ ಈ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ ಆದರೆ ದೇವತೆಗಳಲ್ಲಿ ಈ ಜ್ಞಾನವಿಲ್ಲದಿರುವಕಾರಣ ಅವರು ಅಜ್ಞಾನಿಗಳೆಂದಲ್ಲ. ಅವರು ಈ ಜ್ಞಾನದಿಂದಲೇ ಪದವಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ತಂದೆಯೇ ಬನ್ನಿ, ನಾವು ಪತಿತರಿಂದ ಹೇಗೆ ಪಾವನರಾಗಲು ಮಾರ್ಗ ಅಥವಾ ಜ್ಞಾನವನ್ನು ತಿಳಿಸಿ ಎಂದು ಮನುಷ್ಯರು ತಂದೆಯನ್ನು ಕರೆಯುತ್ತಾರೆ ಏಕೆಂದರೆ ಇದನ್ನು ತಿಳಿದುಕೊಂಡಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ- ನಾವಾತ್ಮಗಳು ಶಾಂತಿಧಾಮದಿಂದ ಬಂದಿದ್ದೇವೆ, ಅಲ್ಲಿ ಆತ್ಮಗಳು ಶಾಂತಿಯಲ್ಲಿರುತ್ತಾರೆ, ಇಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೀರಿ. ಇದು ಹಳೆಯ ಪ್ರಪಂಚವಾಗಿದೆ ಅಂದಮೇಲೆ ಅವಶ್ಯವಾಗಿ ಹೊಸ ಪ್ರಪಂಚವಿತ್ತು ಆದರೆ ಅದು ಯಾವಾಗ ಇತ್ತು, ಯಾರು ರಾಜ್ಯಭಾರ ಮಾಡುತ್ತಿದ್ದರು, ಇದು ಯಾರಿಗೂ ತಿಳಿದಿಲ್ಲ. ನೀವೀಗ ತಂದೆಯ ಮೂಲಕ ತಿಳಿದಿದ್ದೀರಿ- ತಂದೆಯೇ ಜ್ಞಾನಸಾಗರ, ಸದ್ಗತಿದಾತನಾಗಿದ್ದಾರೆ. ತಂದೆಯೇ ಬಂದು ನಮ್ಮ ದುಃಖವನ್ನು ದೂರಮಾಡು, ಸುಖ-ಶಾಂತಿಯನ್ನು ಕೊಡಿ ಎಂದು ಅವರನ್ನೇ ಕೂಗುತ್ತಾರೆ ಏಕೆಂದರೆ ಆತ್ಮಕ್ಕೆ ತಿಳಿದಿದೆ ಆದರೆ ತಮೋಪ್ರಧಾನವಾಗಿರುವಕಾರಣ ಪುನಃ ತಂದೆಯು ಬಂದು ಪರಿಚಯವನ್ನು ಕೊಡುತ್ತಿದ್ದಾರೆ. ಮನುಷ್ಯರು ಆತ್ಮವನ್ನಾಗಲಿ, ಪರಮಾತ್ಮನನ್ನಾಗಲಿ ಅರಿತುಕೊಂಡಿಲ್ಲ. ಪರಮಾತ್ಮ ಅಭಿಮಾನಿಗಳಾಗಲು ಆತ್ಮಕ್ಕೆ ಜ್ಞಾನವೇ ಇಲ್ಲ. ಮೊದಲು ನೀವೂ ಸಹ ತಿಳಿದುಕೊಂಡಿರಲಿಲ್ಲ, ಈಗ ಜ್ಞಾನ ಸಿಕ್ಕಿರುವುದರಿಂದ ತಿಳಿದುಕೊಂಡಿದ್ದೀರಿ- ಮೊದಲು ನಮ್ಮ ಮುಖವು ಮನುಷ್ಯನದಾಗಿತ್ತು ಮತ್ತು ಗುಣಗಳು ಮಂಗನದಾಗಿತ್ತು.

ಈಗ ತಂದೆಯು ಜ್ಞಾನವನ್ನು ಕೊಟ್ಟಿದ್ದಾರೆ ಅದರಿಂದ ನೀವೂ ಸಹ ಜ್ಞಾನಪೂರ್ಣರಾಗಿಬಿಟ್ಟಿದ್ದೀರಿ. ರಚಯಿತ ಮತ್ತು ರಚನೆಯ ಜ್ಞಾನವು ಸಿಕ್ಕಿದೆ. ನಿಮಗೆ ತಿಳಿದಿದೆ- ನಮಗೆ ಭಗವಂತನು ಓದಿಸುತ್ತಾರೆಂದಮೇಲೆ ಎಷ್ಟೊಂದು ನಶೆಯಿರಬೇಕು! ತಂದೆಯು ಜ್ಞಾನಸಾಗರನಾಗಿದ್ದಾರೆ, ಅವರಲ್ಲಿ ಬೇಹದ್ದಿನ ಜ್ಞಾನವಿದೆ. ನೀವು ಯಾರ ಬಳಿಯೇ ಹೋಗಿ, ಸೃಷ್ಟಿಯ ಆದಿ-ಮಧ್ಯ-ಅಂತ್ಯವಷ್ಟೇನು ನಾನಾತ್ಮ ಯಾರಾಗಿದ್ದೇನೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ತಂದೆಯನ್ನು ನೆನಪು ಮಾಡುತ್ತಾರೆ. ದುಃಖಹರ್ತ-ಸುಖಕರ್ತ ಎಂದು ಹೇಳುತ್ತಾರೆ ಆದರೂ ಮತ್ತೆ ಈಶ್ವರ ಸರ್ವವ್ಯಾಪಿಯೆಂದು ಹೇಳಿಬಿಡುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ನಾಟಕದನುಸಾರ ಅವರದೂ ಸಹ ದೋಷವಿಲ್ಲ. ಮಾಯೆಯು ಸಂಪೂರ್ಣ ತುಚ್ಛಬುದ್ಧಿಯವರನ್ನಾಗಿ ಮಾಡಿಬಿಡುತ್ತದೆ. ಕೀಟಗಳಿಗೆ ಕೊಳಕಿನಲ್ಲಿಯೇ ಸುಖವಿದೆಯೆನಿಸುತ್ತದೆ. ತಂದೆಯು ಕೆಸರಿನಿಂದ ಹೊರತೆಗೆಯಲು ಬರುತ್ತಾರೆ, ಮನುಷ್ಯರಂತೂ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರಿಗೆ ಜ್ಞಾನವೇ ತಿಳಿದಿಲ್ಲವೆಂದರೆ ಮತ್ತೇನು ಮಾಡುವುದು? ಕಂದಕದಲ್ಲಿ ಈ ರೀತಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಹೊರತೆಗೆಯುವುದೇ ಕಷ್ಟವಾಗಿಬಿಡುತ್ತದೆ. ಹೊರತೆಗೆಯಲು ಅರ್ಧ-ಮುಕ್ಕಾಲುಭಾಗ ಅವರನ್ನು ಎಳೆದುತಂದರೂ ಸಹ ಮತ್ತೆ ಕೈಯನ್ನು ಬಿಟ್ಟು ಕೆಳಗೆ ಬೀಳುತ್ತಾರೆ. ಕೆಲವು ಮಕ್ಕಳು ಅನ್ಯರಿಗೆ ಜ್ಞಾನವನ್ನು ಕೊಡುತ್ತಾ-ಕೊಡುತ್ತಾ ತಾವೇ ಮಾಯೆಯ ಪೆಟ್ಟನ್ನು ತಿನ್ನುತ್ತಾರೆ ಏಕೆಂದರೆ ತಂದೆಯ ಆದೇಶದ ವಿರುದ್ಧಕಾರ್ಯ ಮಾಡಿಬಿಡುತ್ತಾರೆ. ಅನ್ಯರನ್ನು ಹೊರತೆಗೆಯುವ ಪ್ರಯತ್ನಪಡುತ್ತಾ ಅವರೇ ಬಿದ್ದುಬಿಡುತ್ತಾರೆ. ಮತ್ತೆ ಅವರನ್ನು ಹೊರತೆಗೆಯುವುದರಲ್ಲಿ ಎಷ್ಟೊಂದು ಪರಿಶ್ರಮವಾಗುತ್ತದೆ. ಏಕೆಂದರೆ ಮಾಯೆಯಿಂದ ಸೋತುಹೋಗುತ್ತಾರೆ. ಅವರನ್ನು ತನ್ನ ಪಾಪವೇ ಒಳಗೆ ತಿನ್ನುತ್ತಿರುತ್ತದೆ. ಮಾಯೆಯ ಯುದ್ಧವಲ್ಲವೆ. ನೀವೀಗ ಯುದ್ಧದ ಮೈದಾನದಲ್ಲಿದ್ದೀರಿ. ಅದು ಬಾಹುಬಲದಿಂದ ಯುದ್ಧ ಮಾಡುವಂತಹ ಹಿಂಸಕ ಸೈನ್ಯಗಳಾಗಿವೆ. ನೀವು ಅಹಿಂಸಕರಾಗಿದ್ದೀರಿ, ಅಹಿಂಸೆಯಿಂದ ರಾಜ್ಯವನ್ನು ಪಡೆಯುತ್ತೀರಿ. ಹಿಂಸೆಯು ಎರಡು ಪ್ರಕಾರವಾಗಿರುತ್ತದೆ. ಒಂದು ಕಾಮಕಟಾರಿಯನ್ನು ನಡೆಸುವುದು, ಇನ್ನೊಂದು ಅನ್ಯರನ್ನು ಹೊಡೆಯುವ-ಬಡೆಯುವ ಹಿಂಸೆಯಾಗಿದೆ. ನೀವೀಗ ಡಬಲ್ ಅಹಿಂಸಕರಾಗುತ್ತೀರಿ. ಈ ಜ್ಞಾನಬಲದ ಯುದ್ಧವನ್ನು ಯಾರೂ ತಿಳಿದುಕೊಂಡಿಲ್ಲ. ಯಾವುದಕ್ಕೆ ಅಹಿಂಸೆಯೆಂದು ಹೇಳಲಾಗುತ್ತದೆ ಎಂಬುದನ್ನೂ ಸಹ ಅರಿತುಕೊಂಡಿಲ್ಲ. ಎಷ್ಟೊಂದು ಭಕ್ತಿಮಾರ್ಗದ ಸಾಮಗ್ರಿಯಿದೆ! ಪತಿತ-ಪಾವನ ಬನ್ನಿ ಎಂದು ಹಾಡುತ್ತಾರೆ ಆದರೆ ನಾನು ಹೇಗೆ ಪಾವನ ಮಾಡುತ್ತೇನೆಂದು ಯಾರೂ ತಿಳಿದುಕೊಂಡಿಲ್ಲ. ಮನುಷ್ಯನನ್ನು ಭಗವಂತನೆಂದು ಹೇಳಿ ಗೀತೆಯಲ್ಲಿಯೇ ತಪ್ಪು ಮಾಡಿಬಿಟ್ಟಿದ್ದಾರೆ. ಶಾಸ್ತ್ರಗಳನ್ನು ಮನುಷ್ಯರೇ ರಚಿಸಿದ್ದಾರೆ, ಮನುಷ್ಯರೇ ಓದುತ್ತಾರೆ. ದೇವತೆಗಳಿಗೆ ಶಾಸ್ತ್ರಗಳನ್ನು ಓದುವ ಅವಶ್ಯಕತೆಯಿಲ್ಲ, ಅಲ್ಲಿ ಯಾವುದೇ ಶಾಸ್ತ್ರಗಳಿರುವುದಿಲ್ಲ. ಜ್ಞಾನ, ಭಕ್ತಿ ನಂತರ ವೈರಾಗ್ಯ ಬರುತ್ತದೆ. ಯಾವುದರ ವೈರಾಗ್ಯ? ಭಕ್ತಿಯ, ಹಳೆಯ ಪ್ರಪಂಚದ ವೈರಾಗ್ಯವುಂಟಾಗುತ್ತದೆ. ಹಳೆಯ ಶರೀರದಿಂದ ವೈರಾಗ್ಯ ಬರುತ್ತದೆ. ತಂದೆಯು ತಿಳಿಸುತ್ತಾರೆ- ಈ ಕಣ್ಣುಗಳಿಂದ ನೀವು ಏನೆಲ್ಲವನ್ನೂ ನೋಡುತ್ತೀರೋ ಅದು ಉಳಿಯುವುದಿಲ್ಲ. ಇಡೀ ಛೀ ಛೀ ಪ್ರಪಂಚದೊಂದಿಗೆ ವೈರಾಗ್ಯವಿದೆ ಬಾಕಿ ನೀವು ದಿವ್ಯದೃಷ್ಟಿಯಿಂದ ಹೊಸಪ್ರಪಂಚದ ಸಾಕ್ಷಾತ್ಕಾರ ಮಾಡುತ್ತೀರಿ. ಹೊಸಪ್ರಪಂಚಕ್ಕಾಗಿಯೇ ನೀವು ಓದುತ್ತೀರಿ, ಈ ವಿದ್ಯೆಯು ಕೇವಲ ಈ ಜನ್ಮಕ್ಕಾಗಿಯೇ ಅಲ್ಲ, ಮತ್ತೇನೆಲ್ಲಾ ವಿದ್ಯೆಗಳಿವೆಯೋ ಅವು ಅದೇ ಸಮಯ, ಅದೇ ಜನ್ಮಕ್ಕಾಗಿ ಇರುತ್ತವೆ. ಈಗ ಸಂಗಮವಾಗಿದೆ ಆದ್ದರಿಂದ ನೀವು ಏನನ್ನು ಓದುವಿರೋ ಅದರ ಪ್ರಾಲಬ್ಧವು ಹೊಸಪ್ರಪಂಚದಲ್ಲಿ ನಿಮಗೆ ಸಿಗುತ್ತದೆ. ಬೇಹದ್ದಿನ ತಂದೆಯಿಂದ ನಿಮಗೆ ಎಷ್ಟು ದೊಡ್ಡಪ್ರಾಲಬ್ಧವು ಸಿಗುತ್ತದೆ! ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖವು ಪ್ರಾಪ್ತಿಯಾಗುತ್ತದೆ ಅಂದಮೇಲೆ ಮಕ್ಕಳು ಪೂರ್ಣಪುರುಷಾರ್ಥ ಮಾಡಿ ಶ್ರೀಮತದಂತೆ ನಡೆಯಬೇಕು. ತಂದೆಯು ಸರ್ವಶ್ರೇಷ್ಠನಾಗಿದ್ದಾರೆ, ಅವರಿಂದ ನೀವು ಶ್ರೇಷ್ಠರಾಗುತ್ತೀರಿ. ಅವರು ಸದಾ ಶ್ರೇಷ್ಠನಾಗಿದ್ದಾರೆ, ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತಾರೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಮತ್ತೆ ನೀವು ಭ್ರಷ್ಠರಾಗಿಬಿಡುತ್ತೀರಿ. ತಂದೆಯು ತಿಳಿಸುತ್ತಾರೆ- ನಾನಂತೂ ಜನನ-ಮರಣದಲ್ಲಿ ಬರುವುದಿಲ್ಲ, ನಾನೀಗ ಭಾಗ್ಯಶಾಲಿ ರಥದಲ್ಲಿಯೇ ಪ್ರವೇಶ ಮಾಡುತ್ತೇನೆ ಯಾರನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಈಗಿನ್ನೂ ನಿಮ್ಮದು ಚಿಕ್ಕವೃಕ್ಷವಾಗಿದೆ, ಚಿಕ್ಕಗಿಡವಾಗಿದ್ದಾಗ ಬಹಳಷ್ಟು ಬಿರುಗಾಳಿಗಳೂ ಬರುತ್ತವೆಯಲ್ಲವೆ. ಎಲೆಗಳು ಬಿಡುತ್ತಿರುತ್ತವೆ, ಹೂ ಬಿಡುತ್ತವೆ ಮತ್ತೆ ಬಿರುಗಾಳಿಗಳು ಬರುವುದರಿಂದ ಬಿದ್ದುಹೋಗುತ್ತವೆ. ಕೆಲಕೆಲವು ಒಳ್ಳೊಳ್ಳೆಯ ಫಲಗಳನ್ನು ಬಿಡುತ್ತವೆ ಆದರೂ ಸಹ ಆಕಡೆ ಬಾಹುಬಲ, ಈಕಡೆ ಯೋಗಬಲ ಅಥವಾ ನೆನಪಿನ ಬಲವಿದೆ. ನೀವು ನೆನಪು ಎಂಬ ಶಬ್ಧವನ್ನು ಪಕ್ಕಾ ಮಾಡಿಕೊಳ್ಳಿ. ಆ ಸನ್ಯಾಸಿಗಳಂತೂ ಯೋಗ, ಯೋಗ ಎಂದು ಹೇಳುತ್ತಿರುತ್ತಾರೆ. ನಿಮ್ಮದು ಯೋಗವಾಗಿದೆ. ನಡೆದಾಡುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡುತ್ತೀರಿ, ಇದಕ್ಕೆ ಯೋಗವೆಂದು ಹೇಳುವುದಿಲ್ಲ. ಯೋಗ ಶಬ್ಧವು ಸನ್ಯಾಸಿಗಳಿಗೆ ಪ್ರಖ್ಯಾತವಾಗಿದೆ, ಅನೇಕ ಪ್ರಕಾರದ ಯೋಗಗಳನ್ನು ಕಲಿಸುತ್ತಾರೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ- ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ. ನೀವು ಅರ್ಧಕಲ್ಪದ ಪ್ರಿಯತಮೆಯರಾಗಿದ್ದೀರಿ, ನನ್ನನ್ನು ನೆನಪು ಮಾಡುತ್ತಾ ಬಂದಿದ್ದೀರಿ. ನಾನೀಗ ಬಂದಿದ್ದೇನೆ. ಆತ್ಮವನ್ನು ಯಾರೂ ತಿಳಿದುಕೊಂಡಿಲ್ಲ ಆದ್ದರಿಂದ ತಂದೆಯು ಬಂದು ಆತ್ಮಾನುಭೂತಿ ಮಾಡಿಸುತ್ತಾರೆ. ಇವೂ ಸಹ ತಿಳಿದುಕೊಳ್ಳುವ ಬಹಳ ಸೂಕ್ಷ್ಮಮಾತುಗಳಾಗಿವೆ. ಆತ್ಮವು ಅತಿಸೂಕ್ಷ್ಮ ಮತ್ತು ಅವಿನಾಶಿಯಾಗಿದೆ. ಆತ್ಮವು ವಿನಾಶವಾಗುವುದಿಲ್ಲ ಅದರ ಪಾತ್ರವೂ ವಿನಾಶವಾಗಲು ಸಾಧ್ಯವಿಲ್ಲ. ಈ ಮಾತುಗಳನ್ನು ಮಂಧಬುದ್ಧಿಯವರು ಪರಿಶ್ರಮದಿಂದ ಅರ್ಥ ಮಾಡಿಕೊಳ್ಳುತ್ತಾರೆ. ಶಾಸ್ತ್ರಗಳಲ್ಲಿಯೂ ಈ ಮಾತುಗಳಿಲ್ಲ.

ನೀವು ಮಕ್ಕಳು ತಂದೆಯನ್ನು ನೆನಪು ಮಾಡುವ ಬಹಳ ಪರಿಶ್ರಮಪಡಬೇಕಾಗಿದೆ. ಜ್ಞಾನವು ಬಹಳ ಸಹಜವಾಗಿದೆ ಆದರೆ ವಿನಾಶಕಾಲೇ ಪ್ರೀತಬುದ್ಧಿ ಮತ್ತು ವಿಪರೀತಬುದ್ಧಿಯೆಂದು ನೆನಪಿಗಾಗಿಯೇ ಹೇಳಲಾಗುತ್ತದೆ. ನೆನಪು ಚೆನ್ನಾಗಿದ್ದರೆ ಪ್ರೀತಿಬುದ್ಧಿಯವರೆಂದು ಹೇಳಲಾಗುತ್ತದೆ. ಪ್ರೀತಿಯೂ ಸಹ ಅವ್ಯಭಿಚಾರಿಯಾಗಿರಬೇಕು. ನಾನು ತಂದೆಯನ್ನು ಎಷ್ಟು ಸಮಯ ನೆನಪು ಮಾಡುತ್ತೇನೆಂದು ತಮ್ಮೊಂದಿಗೆ ಕೇಳಿಕೊಳ್ಳಬೇಕಾಗಿದೆ. ಇದೂ ಸಹ ತಿಳಿದಿದೆ- ತಂದೆಯೊಂದಿಗೆ ಪ್ರೀತಿಯನ್ನಿಡುತ್ತಾ-ಇಡುತ್ತಾ ಯಾವಾಗ ಕರ್ಮಾತೀತ ಸ್ಥಿತಿಯಾಗುವುದೋ ಆಗ ಈ ಶರೀರವು ಬಿಟ್ಟುಹೋಗುವುದು ಮತ್ತು ಯುದ್ಧವು ಆರಂಭವಾಗುವುದು. ತಂದೆಯೊಂದಿಗೆ ಎಷ್ಟು ಪ್ರೀತಿಯಿರುವುದೋ ಅಷ್ಟು ತಮೋಪ್ರಧಾನರಿಂದ ಸತೋಪ್ರಧಾನರಾಗಿಬಿಡುತ್ತೀರಿ. ಪರೀಕ್ಷೆಯು ಒಂದೇ ಸಮಯದಲ್ಲಿ ಆಗುತ್ತದೆಯಲ್ಲವೆ. ಯಾವಾಗ ಸಮಯವು ಬರುವುದೋ ಆಗ ಎಲ್ಲರದೂ ಪ್ರೀತಿಬುದ್ಧಿಯಾಗುತ್ತದೆ, ಆ ಸಮಯದಲ್ಲಿ ವಿನಾಶವಾಗುತ್ತದೆ. ಅಲ್ಲಿಯವರೆಗೂ ಜಗಳ-ಕಲಹಗಳು ನಡೆಯುತ್ತಿರುತ್ತವೆ. ಈಗ ಮೃತ್ಯುವು ಸನ್ಮುಖದಲ್ಲಿದೆ, ಯಾರೋ ಪ್ರೇರಕರಿದ್ದಾರೆ ಅವರು ನಮ್ಮಿಂದ ಅಣ್ವಸ್ತ್ರಗಳನ್ನು ತಯಾರು ಮಾಡಿಸುತ್ತಾರೆ ಎಂದು ವಿದೇಶದವರೂ ಸಹ ತಿಳಿಯುತ್ತಾರೆ ಆದರೆ ಏನು ಮಾಡಲು ಸಾಧ್ಯ! ನಾಟಕದ ಪೂರ್ವನಿಶ್ಚಿತವಾಗಿದೆಯಲ್ಲವೆ. ತಮ್ಮದೇ ವಿಜ್ಞಾನಬಲದಿಂದ ತಮ್ಮ ಕುಲದ ಮೃತ್ಯುವನ್ನು ತಂದುಕೊಳ್ಳುತ್ತಾರೆ. ಬಾಬಾ, ಪಾವನಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು ಮಕ್ಕಳು ಹೇಳುತ್ತಾರೆ ಅಂದಾಗ ಶರೀರಗಳನ್ನು ಕರೆದುಕೊಂಡು ಹೋಗುವರೇ? ತಂದೆಯು ಮಹಾಕಾಲನಾಗಿದ್ದಾರೆ, ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣಸಂಕಟವೆಂದು ಗಾಯನವಿದೆ. ವಿನಾಶವು ನಿಂತುಹೋಗಲಿ ಶಾಂತವಾಗಿಬಿಡಲಿ ಎಂದು ಅವರು ಹೇಳುತ್ತಾರೆ. ಅರೆ! ವಿನಾಶವಾಗದೇ ಸುಖ-ಶಾಂತಿಯು ಹೇಗೆ ಸ್ಥಾಪನೆಯಾಗುವುದು ಆದ್ದರಿಂದ ಚಕ್ರದ ಬಗ್ಗೆ ಅವಶ್ಯವಾಗಿ ತಿಳಿಸಿಕೊಡಿ. ಈಗ ಸ್ವರ್ಗದ ಬಾಗಿಲಲ್ಲಿ ನಿಂತಿದ್ದಾರೆ. ತಂದೆಯು ತಿಳಿಸಿದ್ದಾರೆ- ಗೇಟ್ ವೇ ಟು ಶಾಂತಿಧಾಮ-ಸುಖಧಾಮ (ಶಾಂತಿಧಾಮ-ಸುಖಧಾಮದ ಮಾರ್ಗ) ಎಂದು ಒಂದು ಪುಸ್ತಕದ ಮುದ್ರಣ ಮಾಡಿಸಿ. ಮನುಷ್ಯರು ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ಬಹಳ ಸಹಜವಾಗಿದೆ ಆದರೆ ಕೋಟಿಯಲ್ಲಿ ಕೆಲವರು ತಿಳಿದುಕೊಳ್ಳುತ್ತಾರೆ. ನಿಮಗೆ ಪ್ರದರ್ಶನಿ ಮೊದಲಾದುದರಲ್ಲಿ ಎಂದೂ ಬೇಸರವಾಗಬಾರದು. ಪ್ರಜೆಗಳಂತೂ ಆಗುತ್ತಾರಲ್ಲವೆ. ಗುರಿಯು ಉನ್ನತವಾಗಿದೆ, ಪರಿಶ್ರಮವಾಗುತ್ತದೆ. ನೆನಪಿನ ಪರಿಶ್ರಮವಿದೆ. ಅದರಲ್ಲಿ ಅನೇಕರು ಅನುತ್ತೀರ್ಣರಾಗುತ್ತಾರೆ. ನೆನಪು ಅವ್ಯಭಿಚಾರಿಯಾಗಿರಬೇಕು, ಮಾಯೆಯು ಪದೇ-ಪದೇ ಮರೆಸಿಬಿಡುತ್ತದೆ. ಪರಿಶ್ರಮವಿಲ್ಲದೆ ಯಾರೂ ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ. ಪೂರ್ಣ ಪುರುಷಾರ್ಥ ಮಾಡಬೇಕು- ನಾವು ಸುಖಧಾಮದ ಮಾಲೀಕರಾಗಿದ್ದೇವೆ, ಅನೇಕಬಾರಿ ಚಕ್ರವನ್ನು ಸುತ್ತಿದ್ದೇವೆ, ಈಗ ತಂದೆಯನ್ನು ನೆನಪು ಮಾಡಬೇಕಾಗಿದೆ. ಮಾಯೆಯು ಬಹಳಷ್ಟು ವಿಘ್ನಗಳನ್ನು ಹಾಕುತ್ತದೆ. ತಂದೆಯ ಬಳಿ ಸರ್ವೀಸಿನ ಸಮಾಚಾರಗಳು ಬರುತ್ತವೆ, ಇಂದು ವಿದ್ಯುತ್ ಮಂಡಳಿಯವರಿಗೆ ತಿಳಿಸಿದೆವು, ಇದನ್ನು ಮಾಡಿದೆವು.... ನಾಟಕದನುಸಾರ ಮಾತೆಯರು ಮುಂದುವರೆಸಬೇಕಾಗಿದೆ. ಇದು ಚೈತನ್ಯ ದಿಲ್ವಾಡಾ ಮಂದಿರವಾಗಿದೆ. ನೀವು ಚೈತನ್ಯದಲ್ಲಿ ಆ ರೀತಿಯಾಗಿಬಿಡುತ್ತೀರಿ ನಂತರ ನೀವು ರಾಜ್ಯ ಮಾಡುತ್ತಿರುತ್ತೀರಿ. ಭಕ್ತಿಮಾರ್ಗದ ಮಂದಿರ ಇತ್ಯಾದಿಗಳು ಉಳಿಯುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯೊಂದಿಗೆ ಅವ್ಯಭಿಚಾರಿ ಪ್ರೀತಿಯನ್ನಿಡುತ್ತಾ-ಇಡುತ್ತಾ ಕರ್ಮಾತೀತ ಸ್ಥಿತಿಯನ್ನು ಪಡೆಯಬೇಕಾಗಿದೆ. ಈ ಹಳೆಯ ದೇಹ ಮತ್ತು ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗ್ಯವಿರಲಿ.

2. ತಂದೆಯ ಆಜ್ಞೆಯ ವಿರುದ್ಧ ಯಾವುದೇ ಕರ್ತವ್ಯವನ್ನು ಮಾಡಬಾರದಾಗಿದೆ. ಯುದ್ಧದ ಮೈದಾನದಲ್ಲಿ ಎಂದೂ ಸೋಲನ್ನನುಭವಿಸಬಾರದು. ಡಬಲ್ ಅಹಿಂಸಕರಾಗಬೇಕಾಗಿದೆ.

ವರದಾನ:
ಶುಭಭಾವನೆಯಿಂದ ಸೇವೆ ಮಾಡುವಂತಹ ತಂದೆ ಸಮಾನ ಅಪಕಾರಿಗಳ ಮೇಲೂ ಸಹ ಉಪಕಾರಿ ಭವ

ಹೇಗೆ ತಂದೆ ಅಪಕಾರಿಗಳ ಮೇಲೂ ಉಪಕಾರ ಮಾಡುತ್ತಾರೆ. ಹಾಗೆ ತಮ್ಮ ಮುಂದೆ ಎಂತಹದೇ ಆತ್ಮವಿರಲಿ ಆದರೆ ತಮ್ಮ ದಯಾ ವೃತ್ತಿಯಿಂದ, ಶುಭ ಭಾವನೆಯಿಂದ ಅವರನ್ನು ಪರಿವರ್ತನೆ ಮಾಡಿ – ಇದೇ ಆಗಿದೆ ಸತ್ಯ ಸೇವೆ. ಹೇಗೆ ವಿಜ್ಞಾನಿಗಳು ಮರಳುಗಾಡಿನಲ್ಲಿಯೂ ಬೆಳೆ ಬೆಳೆಯುತ್ತಾರೆ ಹಾಗೆ ಶಾಂತಿಯ ಶಕ್ತಿಯಿಂದ ದಯಾಹೃದಯಿಯಾಗಿ ಅಪಕಾರಿಗಳ ಮೇಲೂ ಸಹ ಉಪಕಾರ ಮಾಡಿ ಧರಣಿಯನ್ನು ಪರಿವರ್ತನೆ ಮಾಡಿ. ಸ್ವ ಪರಿವರ್ತನೆಯಿಂದ, ಶುಭ ಭಾವನೆಯಿಂದ ಎಂತಹದೇ ಆತ್ಮ ಪರಿವರ್ತನೆಯಾಗಿಬಿಡುವುದು ಏಕೆಂದರೆ ಶುಭಭಾವನೆ ಸಫಲತೆಯನ್ನು ಅವಶ್ಯವಾಗಿ ಪ್ರಾಪ್ತಿಮಾಡಿಸುವುದು.

ಸ್ಲೋಗನ್:
ಜ್ಞಾನದ ಸ್ಮರಣೆ ಮಾಡುವುದೇ ಸದಾ ಹರ್ಷಿತರಾಗಿರಲು ಆಧಾರವಾಗಿದೆ.


ಅವ್ಯಕ್ತ ಸೂಚನೆ: ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.

ನೀವು ಬ್ರಾಹ್ಮಣರ ತರಹ ಆತ್ಮಿಕ ವ್ಯಕ್ತಿತ್ವ ಇಡೀ ಕಲ್ಪದಲ್ಲಿ ಬೇರೆ ಯಾರದ್ದೂ ಇಲ್ಲ ಏಕೆಂದರೆ ನಿಮ್ಮೆಲ್ಲರ ವ್ಯಕ್ತಿತ್ವವನ್ನು ಮಾಡುವಂತಹವರು ಶ್ರೇಷ್ಠಾತಿಶ್ರೇಷ್ಠ ಸ್ವಯಂ ಪರಮ ಆತ್ಮ ಆಗಿದ್ದಾರೆ. ನಿಮ್ಮ ಎಲ್ಲದಕ್ಕಿಂತ ದೊಡ್ಡ ವ್ಯಕ್ತಿತ್ವವಾಗಿದೆ - ಸ್ವಪ್ನ ಅಥವಾ ಸಂಕಲ್ಪದಲ್ಲಿಯೂ ಸಂಪೂರ್ಣ ಪವಿತ್ರತೆ. ಈ ಪವಿತ್ರತೆಯ ಜೊತೆ-ಜೊತೆ ಮುಖ ಮತ್ತು ನಡತೆಯಲ್ಲಿ ಆತ್ಮಿಯತೆಯ ವ್ಯಕ್ತಿತ್ವವು ಸಹ ಇದೆ – ತಮ್ಮ ಈ ವ್ಯಕ್ತಿತ್ವದಲ್ಲಿ ಸದಾ ಸ್ಥಿತರಾಗಿರುತ್ತೀರೆಂದರೆ ಸೇವೆಯು ಸ್ವತಃ ಆಗುತ್ತದೆ.