20.07.25    Avyakt Bapdada     Kannada Murli    25.02.2006     Om Shanti     Madhuban


“ಇಂದು ಉತ್ಸವದ ದಿನ ಮನಸ್ಸಿನ ಉಮ್ಮಂಗ-ಉತ್ಸಾಹದ ಮೂಲಕ ಮಾಯೆಯಿಂದ ಮುಕ್ತರಾಗಿರುವ ವ್ರತವನ್ನು ತೆಗೆದುಕೊಳ್ಳಿ, ದಯಾಹೃದಯಿಗಳಾಗಿ ಮಾ|| ಮುಕ್ತಿದಾತರಾಗಿ, ಜೊತೆ ಹೋಗಬೇಕೆಂದರೆ ಸಮಾನರಾಗಿ”


ಇಂದು ನಾಲ್ಕಾರು ಕಡೆಯ ಅತೀ ಸ್ನೇಹಿ ಮಕ್ಕಳ ಉಮ್ಮಂಗ-ಉತ್ಸಾಹ ತುಂಬಿದ ಮಧುರಾತಿ ಮಧುರ ನೆನಪು-ಪ್ರೀತಿ ಹಾಗೂ ಶುಭಾಷಯಗಳು ತಲುಪುತ್ತಿವೆ, ಪ್ರತಿಯೊಬ್ಬರ ಮನಸ್ಸಿನಲ್ಲಿ ಬಾಪ್ದಾದಾರವರ ಜನ್ಮ ದಿನದ ಉಮ್ಮಂಗದಿಂದ ಕೂಡಿದ ಶುಭಾಷಯಗಳು ಸಮಾವೇಶವಾಗಿದೆ, ತಾವೆಲ್ಲರೂ ಸಹ ವಿಶೇಷವಾಗಿ ಇಂದು ಶುಭಾಷಯಗಳನ್ನು ಕೊಡಲು ಬಂದಿದ್ದೀರೊ ಅಥವಾ ತೆಗೆದುಕೊಳ್ಳಲು ಬಂದಿದ್ದೀರೋ? ಬಾಪ್ದಾದಾರವರೂ ಸಹ ಪ್ರತಿಯೊಬ್ಬ ಅಗಲಿಹೋಗಿ ಮರಳಿ ಸಿಕ್ಕಿರುವ ಮುದ್ದು ಮಕ್ಕಳಿಗೆ ಮಕ್ಕಳ ಜನ್ಮದಿನದ ಪದಮಾಪದಮ ಶುಭಾಷಯಗಳನ್ನು ನೀಡುತ್ತಿದ್ದಾರೆ. ಇಂದಿನ ದಿನದ ವಿಶೇಷತೆಯೇನೆಂದರೆ ಯಾವುದು ಇಡೀ ಕಲ್ಪದಲ್ಲಿಯೇ ಇಲ್ಲವೋ ಅದು ಇಂದು ಇದೆ ಅಂದರೆ ಇಂದು ತಂದೆ ಮತ್ತು ಮಕ್ಕಳ ಜನ್ಮದಿನವು ಜೊತೆ ಜೊತೆಯಲ್ಲಿದೆ, ಇದಕ್ಕೆ ವಿಚಿತ್ರ ಜಯಂತಿ ಎಂದು ಹೇಳಲಾಗುತ್ತದೆ. ಇಡೀ ಕಲ್ಪದಲ್ಲಿ ಸುತ್ತಾಡಿ ನೋಡಿ, ಇಂಥಹ ಜಯಂತಿಯನ್ನು ಎಂದಾದರೂ ಆಚರಣೆ ಮಾಡಿದ್ದೀರಾ! ಆದರೆ ಇಂದು ಬಾಪ್ದಾದಾ ಮಕ್ಕಳ ಜಯಂತಿಯನ್ನು ಆಚರಿಸುತ್ತಿದ್ದಾರೆ ಮತ್ತು ಮಕ್ಕಳು ಬಾಪ್ದಾದಾರವರ ಜಯಂತಿಯನ್ನು ಆಚರಿಸುತ್ತಿದ್ದೀರಿ, ಹೆಸರಂತೂ ಶಿವ ಜಯಂತಿಯೆಂದು ಹೇಳುತ್ತಾರೆ. ಆದರೆ ಇದು ಎಂತಹ ಜಯಂತಿಯಾಗಿದೆ? ಒಂದೇ ಜಯಂತಿಯಲ್ಲಿ ಬಹಳ ಜಯಂತಿಗಳು ಸಮಾವೇಶವಾಗಿವೆ. ನಾವು ತಂದೆಗೆ ಶುಭಾಷಯಗಳನ್ನು ಕೊಡಲು ಬಂದಿದ್ದೇವೆ ಮತ್ತು ತಂದೆಯು ನಮಗೆ ಶುಭಾಷಯಗಳನ್ನು ಕೊಡಲು ಬಂದಿದ್ದಾರೆಂದು ತಮ್ಮೆಲ್ಲರಿಗೂ ಬಹಳ ಖುಷಿಯಾಗುತ್ತಿದೆಯಲ್ಲವೆ, ಏಕೆಂದರೆ ತಂದೆ ಮತ್ತು ಮಕ್ಕಳದು ಒಟ್ಟಿಗೆ ಜನ್ಮದಿನವಾಗುವುದು, ಇದು ಅತೀ ಪ್ರೀತಿಯ ಸಂಕೇತವಾಗಿದೆ. ತಂದೆಯು ಮಕ್ಕಳಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಮತ್ತು ಮಕ್ಕಳು ತಂದೆಯಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಜನ್ಮವೂ ಒಟ್ಟಿಗೆ ಆಗಿದೆ ಮತ್ತು ಸಂಗಮಯುಗದಲ್ಲಿ ಇರುವುದೂ ಸಹ ಒಟ್ಟಿಗೆ, ಏಕೆಂದರೆ ತಂದೆ ಮತ್ತು ಮಕ್ಕಳು ಕಂಬೈಂಡ್ ಆಗಿದ್ದೀರಿ. ವಿಶ್ವ ಕಲ್ಯಾಣದ ಕಾರ್ಯವೂ ಸಹ ಒಟ್ಟಿಗೆ ಇದೆ. ತಂದೆಯೊಬ್ಬರೇ ಮಾಡಲು ಸಾಧ್ಯವಿಲ್ಲ ಅಥವಾ ಕೇವಲ ಮಕ್ಕಳೇ ಮಾಡುವುದಕ್ಕೂ ಸಾಧ್ಯವಿಲ್ಲ. ಜೊತೆ ಜೊತೆಯಲ್ಲಿ ನಡೆಯುತ್ತದೆ ಮತ್ತು ತಮ್ಮ ಪ್ರತಿಜ್ಞೆಯಾಗಿದೆ - ಜೊತೆಯಲ್ಲಿಯೇ ಇರುತ್ತೇವೆ, ಜೊತೆಯಲ್ಲಿಯೇ ನಡೆಯುತ್ತೇವೆ, ಜೊತೆಯಲ್ಲಿಯೇ ನಡೆಯುತ್ತೀರಲ್ಲವೆ. ಪ್ರತಿಜ್ಞೆಯಿದೆಯಲ್ಲವೆ. ತಂದೆ ಮತ್ತು ಮಕ್ಕಳ ಇಷ್ಟೊಂದು ಪ್ರೀತಿಯನ್ನು ಎಲ್ಲಿಯಾದರೂ ನೋಡಿದ್ದೀರಾ? ನೋಡಿದ್ದೀರಾ ಅಥವಾ ಅನುಭವ ಮಾಡುತ್ತಿದ್ದೀರಾ? ಆದ್ದರಿಂದ ಈ ಸಂಗಮಯುಗಕ್ಕೆ ಮಹತ್ವಿಕೆಯಿದೆ ಮತ್ತು ಇದೇ ಮಿಲನದ ನೆನಪಾರ್ಥವು ಭಿನ್ನ-ಭಿನ್ನ ಮೇಳಗಳಲ್ಲಿ ಮಾಡಲ್ಪಟ್ಟಿದೆ, ಈ ಶಿವ ಜಯಂತಿಯ ದಿನದಂದು ಭಕ್ತರು ಬನ್ನಿ ಎಂದು ಕೂಗುತ್ತಿದ್ದಾರೆ, ಯಾವಾಗ ಬರುವರೋ, ಹೇಗೆ ಬರುವರೋ ಎಂಬುದನ್ನೇ ಯೋಚಿಸುತ್ತಿದ್ದಾರೆ ಆದರೆ ನೀವು ಮಿಲನವನ್ನಾಚರಿಸುತ್ತಿದ್ದೀರಿ.

ಬಾಪ್ದಾದಾರವರಿಗೆ ಭಕ್ತರ ಮೇಲೆ ಸ್ನೇಹವೂ ಇದೆ, ದಯೆಯೂ ಬರುತ್ತದೆ. ಎಷ್ಟೊಂದು ಪ್ರಯತ್ನ ಪಡುತ್ತಾರೆ, ಹುಡುಕುತ್ತಿರುತ್ತಾರೆ, ಆದರೆ ತಾವು ಹುಡುಕಿದಿರಾ? ಅಥವಾ ತಂದೆಯು ತಮ್ಮನ್ನು ಹುಡುಕಿದರೇ? ಯಾರು ಹುಡುಕಿದಿರಿ? ತಾವಂತೂ ಎಲ್ಲಾಕಡೆ ಸುತ್ತಾಡುತ್ತಲೇ ಇದ್ದಿರಿ ಆದರೆ ತಂದೆಯನ್ನು ನೋಡಿ, ಮಕ್ಕಳನ್ನು ಯಾವುದೇ ಮೂಲೆಗಳಲ್ಲಿ ಬಚ್ಚಿಟ್ಟುಕೊಂಡಿರಬಹುದು, ಎಲ್ಲರನ್ನೂ ಆರಿಸಿಕೊಂಡರು. ಭಾರತದ ಅನೇಕ ರಾಜ್ಯಗಳಿಂದ ಬಂದಿದ್ದೀರಿ ಆದರೆ ವಿದೇಶವೂ ಕಡಿಮೆಯಿಲ್ಲ, 100 ದೇಶಗಳಿಂದ ಬಂದು ಬಿಟ್ಟಿದ್ದಾರೆ ಮತ್ತು ಏನು ಪರಿಶ್ರಮ ಪಟ್ಟಿರಿ? ತಂದೆಯ ಮಕ್ಕಳಾಗುವುದರಲ್ಲಿ ಯಾವ ಪರಿಶ್ರಮ ಪಟ್ಟಿರಿ? ಪರಿಶ್ರಮವಾಯಿತೇ? ಪರಿಶ್ರಮ ಪಟ್ಟಿರಾ? ಯಾರು ಪರಿಶ್ರಮ ಪಟ್ಟಿರಿ, ಅವರು ಕೈಯನ್ನೆತ್ತಿರಿ. ತಂದೆಯನ್ನು ಭಕ್ತಿಯಲ್ಲಿ ಹುಡುಕಿದಿರಿ, ಆದರೆ ಯಾವಾಗ ತಂದೆಯು ಹುಡುಕಿದರೋ ಅನಂತರ ಪರಿಶ್ರಮ ಪಟ್ಟಿರಾ? ಸೆಕೆಂಡಿನಲ್ಲಿ ಸಂಪಾದನೆ ಮಾಡಿಕೊಂಡಿರಿ, ಒಂದು ಶಬ್ಧದಲ್ಲಿಯೇ ಸಂಪಾದನೆಯಾಗಿ ಬಿಟ್ಟಿತು, ಆ ಒಂದು ಶಬ್ಧ ಯಾವುದು? ``ನನ್ನವರು''. ಮಕ್ಕಳು ``ನನ್ನಬಾಬಾ'' ಎಂದು ಹೇಳಿದಿರಿ ಮತ್ತು ``ನನ್ನಮಕ್ಕಳೇ'' ಎಂದು ತಂದೆಯು ಹೇಳಿದರು, ಸಂಪಾದನೆಯಾಗಿ ಬಿಟ್ಟಿತು, ಇದು ಸಸ್ತಾ ವ್ಯಾಪಾರವೇ ಅಥವಾ ಕಷ್ಟವೇ? ಸಸ್ತಾ ಅಲ್ಲವೆ? ಸ್ವಲ್ಪ-ಸ್ವಲ್ಪ ಪರಿಶ್ರಮವಾಗುತ್ತದೆಯೆಂದು ತಿಳಿದುಕೊಳ್ಳುತ್ತೀರೋ ಅವರು ಕೈಯೆತ್ತಿರಿ. ಕೆಲಕೆಲವೊಮ್ಮೆ ಪರಿಶ್ರಮವಾಗುತ್ತದೆಯಲ್ಲವೆ! ಅಥವಾ ಇಲ್ಲವೆ? ಸಹಜವಾಗಿದೆ ಆದರೆ ತನ್ನ ನಿರ್ಬಲತೆಗಳು ಪರಿಶ್ರಮದ ಅನುಭವ ಮಾಡಿಸುತ್ತದೆ.

ಬಾಪ್ದಾದಾ ನೋಡುತ್ತಾರೆ - ಭಕ್ತರೂ ಸಹ ಯಾರು ಸತ್ಯ ಭಕ್ತರಿದ್ದಾರೆಯೋ, ಸ್ವಾರ್ಥ ಭಕ್ತರಲ್ಲವೋ ಅವರು ಇಂದಿನ ದಿನದಂದು ಬಹಳ ಪ್ರೀತಿಯಿಂದ ವ್ರತವನ್ನಿಟ್ಟುಕೊಳ್ಳುತ್ತಾರೆ. ತಾವೆಲ್ಲರೂ ಸಹ ವ್ರತವನ್ನು ತೆಗೆದುಕೊಂಡಿದ್ದೀರಿ. ಅವರು ಕೆಲವೇ ದಿನಗಳ ವ್ರತವನ್ನಿಡುತ್ತಾರೆ ಮತ್ತು ತಾವೆಲ್ಲರೂ ಇಂತಹ ವ್ರತವನ್ನಿಟ್ಟುಕೊಳ್ಳುತ್ತೀರಿ ಯಾವುದು ಈಗಿನ ವ್ರತವು 21 ಜನ್ಮಗಳವರೆಗೆ ಸ್ಥಿರವಾಗಿರುತ್ತದೆ. ಅವರು ಪ್ರತೀ ವರ್ಷ ಆಚರಿಸುತ್ತಾರೆ, ವ್ರತವನ್ನಿಟ್ಟುಕೊಳ್ಳುತ್ತಾರೆ ಆದರೆ ತಾವು ಕಲ್ಪದಲ್ಲಿ ಒಂದೇ ಬಾರಿ ವ್ರತತೆ ಗೆದುಕೊಳ್ಳುತ್ತೀರಿ ಇದರಿಂದ ಮತ್ತೆ 21 ಜನ್ಮಗಳವರೆಗೆ ಮನಸ್ಸಿನಿಂದಾಗಲಿ, ತನುವಿನಿಂದಾಗಲಿ ವ್ರತವನ್ನಿಟ್ಟುಕೊಳ್ಳುವ ಅವಶ್ಯಕತೆಯಿರುವುದಿಲ್ಲ. ವ್ರತವನ್ನಂತೂ ತಾವೂ ಸಹ ತೆಗೆದುಕೊಳ್ಳುತ್ತೀರಿ, ಯಾವ ವ್ರತ ತೆಗೆದುಕೊಂಡಿದ್ದೀರಿ? ಪವಿತ್ರ ವೃತ್ತಿ, ದೃಷ್ಟಿ, ಕೃತಿ, ಪವಿತ್ರ ಜೀವನದ ವ್ರತವನ್ನು ತೆಗೆದುಕೊಂಡಿದ್ದೀರಿ, ಜೀವನವೇ ಪವಿತ್ರವಾಯಿತು. ಪವಿತ್ರತೆಯು ಕೇವಲ ಬ್ರಹ್ಮಚರ್ಯದ್ದಲ್ಲ ಆದರೆ ಜೀವನದಲ್ಲಿ ಆಹಾರ, ವ್ಯವಹಾರ, ಸಂಸಾರ, ಸಂಸ್ಕಾರ ಎಲ್ಲವೂ ಪವಿತ್ರವಾಗಿರಲಿ. ಇಂತಹ ವ್ರತ ತೆಗೆದುಕೊಂಡಿದ್ದೀರಲ್ಲವೆ? ತೆಗೆದುಕೊಂಡಿದ್ದೀರಾ? ತಲೆಯನ್ನು ಅಲುಗಾಡಿಸಿ. ಪಕ್ಕಾ ತೆಗೆದುಕೊಂಡಿದ್ದೀರಾ? ಪಕ್ಕಾ ಇದೆಯೋ ಅಥವಾ ಸ್ವಲ್ಪ-ಸ್ವಲ್ಪ ಕಚ್ಚಾ ಇದೆಯೋ? ಒಳ್ಳೆಯದು - ಒಂದು ಮಹಾಭೂತವಾದ ಕಾಮ ವಿಕಾರದ ವ್ರತವನ್ನು ತೆಗೆದುಕೊಂಡಿದ್ದೀರೋ ಅಥವಾ ಉಳಿದ ಇನ್ನೂ ನಾಲ್ಕರ ವ್ರತವನ್ನು ತೆಗೆದುಕೊಂಡಿದ್ದೀರೋ? ಬ್ರಹ್ಮಚಾರಿಗಳಂತೂ ಆದಿರಿ ಆದರೆ ಅದರ ಹಿಂದೆ ಇನ್ನೂ ನಾಲ್ಕು ವಿಕಾರಗಳಿವೆ, ಅದರ ವ್ರತವನ್ನೂ ತೆಗೆದುಕೊಂಡಿದ್ದೀರಾ? ಕ್ರೋಧದ ವ್ರತ ತೆಗೆದುಕೊಂಡಿದ್ದೀರಾ ಅಥವಾ ಅದಕ್ಕೆ ಬರಲು ಅನುಮತಿಯಿದೆಯೇ? ಕ್ರೋಧ ಮಾಡಲು ಅನುಮತಿ ಸಿಕ್ಕಿದೆಯೇ? ಇದು ಎರಡನೇ ನಂಬರಿನ ವಿಕಾರವಾದ್ದರಿಂದ ಪರವಾಗಿಲ್ಲ ಎಂದು ತಿಳಿಯುತ್ತಿಲ್ಲ ತಾನೇ? ಹೇಗೆ ಮಹಾಭೂತವನ್ನು ಮಹಾಭೂತವೆಂದು ತಿಳಿದು ಮನ-ವಚನ-ಕರ್ಮದಲ್ಲಿ ಪಕ್ಕಾ ವ್ರತವನ್ನು ತೆಗೆದುಕೊಂಡಿದ್ದೀರೋ ಅದೇರೀತಿ ಕ್ರೋಧದ ವ್ರತವನ್ನೂ ತೆಗೆದುಕೊಂಡಿದ್ದೀರಾ? ನಾವು ಕ್ರೋಧದ ಮಕ್ಕಳು-ಮರಿಗಳು ಅದರ ಹಿಂದೆ ಇವೆ, ಲೋಭ, ಮೋಹ, ಅಹಂಕಾರ ಅದರದ್ದೂ ವ್ರತ ತೆಗೆದುಕೊಂಡಿದ್ದೇವೆ ಎಂದು ತಿಳಿಯುತ್ತಾರೆ ಆದರೆ ಇಂದು ಕ್ರೋಧದ ಬಗ್ಗೆ ಕೇಳುತ್ತಿದ್ದೇವೆ. ಯಾರು ಕ್ರೋಧ ವಿಕಾರದ ಪೂರ್ಣ ವ್ರತ ತೆಗೆದುಕೊಂಡಿದ್ದೀರಿ, ಮನಸ್ಸಿನಲ್ಲಿಯೂ ಕ್ರೋಧವಿಲ್ಲ, ಹೃದಯದಲ್ಲಿಯೂ ಕ್ರೋಧದ ಫೀಲಿಂಗ್ ಬರುವುದಿಲ್ಲ, ಈ ರೀತಿಯಿದೆಯೇ? ಇಂದು ಶಿವ ಜಯಂತಿಯಲ್ಲವೆ, ಭಕ್ತರು ವ್ರತವನ್ನಿಟ್ಟುಕೊಳ್ಳುತ್ತಾರೆ ಅಂದಾಗ ಬಾಪ್ದಾದಾರವರೂ ಸಹ ವ್ರತವನ್ನು ಕೇಳುತ್ತೇವೆ ಅಲ್ಲವೆ? ಸ್ವಪ್ನದಲ್ಲಿಯೂ ಕ್ರೋಧದ ಅಂಶ ಬರುವುದಿಲ್ಲವೆಂದು ತಿಳಿಯುತ್ತೀರೋ ಅವರು ಕೈಯೆತ್ತಿ. ಬರುವುದಿಲ್ಲ ತಾನೆ? ಬರಲು ಸಾಧ್ಯವಿಲ್ಲ ಅಲ್ಲವೆ? ಇವರ ಭಾವಚಿತ್ರವನ್ನು ತೆಗೆಯಿರಿ. ಯಾರೆಲ್ಲಾ ಕೈಯೆತ್ತಿದರೋ ಅವರ ಭಾವಚಿತ್ರ ತೆಗೆಯಿರಿ, ಏತಕ್ಕಾಗಿ? ಏಕೆಂದರೆ ತಾವು ಕೈಯೆತ್ತುವುದನ್ನೂ ಬಾಪ್ದಾದಾ ಒಪ್ಪುವುದಿಲ್ಲ, ತಮ್ಮ ಜೊತೆಗಾರರಿಂದಲೂ ಸರ್ಟಿಫಿಕೇಟ್ ತೆಗೆದುಕೊಂಡ ಮೇಲೆ ಬಹುಮಾನ ಕೊಡುತ್ತಾರೆ. ಇದು ಒಳ್ಳೆಯ ಮಾತಾಗಿದೆ ಏಕೆಂದರೆ ಬಾಪ್ದಾದಾ ನೋಡಿದರು, ಕ್ರೋಧದ ಅಂಶಗಳಾದ ಈರ್ಷ್ಯೆ, ದ್ವೇಷವೂ ಸಹ ಕ್ರೋಧದ ಮಕ್ಕಳು-ಮರಿಗಳಾಗಿವೆ ಆದರೆ ಯಾರು ಸಾಹಸದಿಂದ ಕೈಯೆತ್ತಿದಿರೋ ಅವರಿಗೆ ಬಾಪ್ದಾದಾ ಈಗಂತೂ ಶುಭಾಷಯಗಳನ್ನು ತಿಳಿಸುತ್ತಿದ್ದಾರೆ ಆದರೆ ಸರ್ಟಿಫಿಕೇಟ್ ತೆಗೆದುಕೊಂಡನಂತರ ಬಹುಮಾನ ಕೊಡುತ್ತೇವೆ ಏಕೆಂದರೆ ಬಾಪ್ದಾದ ಯಾವ ಕೆಲಸವನ್ನು ಕೊಟ್ಟಿದ್ದರೋ ಅದರ ಫಲಿತಾಂಶವನ್ನೂ ನೋಡುತ್ತಿದ್ದಾರೆ.

ಇಂದು ಜನ್ಮದಿನವನ್ನು ಆಚರಿಸುತ್ತಿದ್ದೀರಿ ಅಂದಾಗ ಜನ್ಮದಿನದಂದು ಏನು ಮಾಡುತ್ತಾರೆ? ಮೊದಲನೆಯದಾಗಿ ಕೇಕ್ನ್ನು ಕಟ್ ಮಾಡುತ್ತಾರೆ. ಅಂದಾಗ ಈಗಂತೂ ಎರಡು ತಿಂಗಳು ಕಳೆಯಿತು, ಇನ್ನು ಒಂದು ತಿಂಗಳು ಉಳಿದಿದೆ. ಈ ಎರಡು ತಿಂಗಳಿನಲ್ಲಿ ವ್ಯರ್ಥ ಸಂಕಲ್ಪಗಳ ಕೇಕ್ನ್ನು ಕಟ್ ಮಾಡಿದಿರಾ? ಆ ಕೇಕ್ನ್ನಂತೂ ಬಹಳ ಸಹಜವಾಗಿ ಕತ್ತರಿಸುತ್ತೀರಲ್ಲವೆ. ಇಂದೂ ಕತ್ತರಿಸುತ್ತೀರಿ ಆದರೆ ವ್ಯರ್ಥ ಸಂಕಲ್ಪಗಳ ಕೇಕ್ನ್ನು ಕತ್ತರಿಸಿದಿರಾ? ಕತ್ತರಿಸಬೇಕಾಗುತ್ತದೆಯಲ್ಲವೆ ಏಕೆಂದರೆ ತಂದೆಯ ಜೊತೆಯಲ್ಲಿಯೇ ಹೋಗಬೇಕೆಂಬ ಪಕ್ಕಾ ಪ್ರತಿಜ್ಞೆಯಿದೆಯಲ್ಲವೆ. ಜೊತೆಯಲ್ಲಿರುತ್ತೇವೆ, ಜೊತೆ ನಡೆಯುತ್ತೇವೆ. ಜೊತೆಯಲ್ಲಿ ಹೋಗಬೇಕೆಂದರೆ ಸಮಾನರಾಗಬೇಕಾಗುತ್ತದೆ. ಒಂದುವೇಳೆ ಅಲ್ಪಸ್ವಲ್ಪ ಉಳಿದುಕೊಂಡಿರಲೂಬಹುದು. ಎರಡು ತಿಂಗಳಂತೂ ಕಳೆಯಿತು ಅಂದಾಗ ಇಂದಿನ ದಿನ ಜನ್ಮ ದಿನವನ್ನಾಚರಿಸಲು ಎಲ್ಲೆಲ್ಲಿಂದ ಬಂದಿದ್ದೀರಿ! ವಿಮಾನಗಳಲ್ಲಿಯೂ, ರೈಲಿನಲ್ಲಿಯೂ, ಕಾರುಗಳಲ್ಲಿಯೂ ಬಂದಿದ್ದೀರಿ. ಓಡೋಡಿ ಬಂದಿದ್ದೀರಿ, ಇದು ಬಾಪ್ದಾದಾರವರಿಗೆ ಖುಷಿಯಿದೆ ಆದರೆ ಜನ್ಮದಿನದಂದು ಮೊದಲು ಉಡುಗೊರೆಯನ್ನು ಕೊಡುತ್ತಾರೆ ಅಂದಾಗ ಯಾವು ಒಂದು ತಿಂಗಳು ಉಳಿದುಕೊಂಡಿದೆ. ಹೋಳಿಯೂ ಬರುತ್ತಿದೆ. ಹೋಳಿಯಲ್ಲಿಯೇ ಸುಡಲಾಗುತ್ತದೆ ಅಂದಾಗ ಯಾವ ಅಲ್ಪಸ್ವಲ್ಪ ವ್ಯರ್ಥ ಸಂಕಲ್ಪಗಳ ಬೀಜವಿದೆಯೋ ಆ ಬೀಜವು ಉಳಿದುಕೊಂಡಿದ್ದರೂ ಸಹ ಕೆಲವೊಮ್ಮೆ ಅದರಿಂದ ಕಾಂಡವೂ ಹೊರಬರುವುದು, ಕೆಲವೊಮ್ಮೆ ಶಾಖೆಗಳೂ ಹೊರಬರಬಹುದು. ಆದ್ದರಿಂದ ಇಂದಿನ ಉತ್ಸವದ ದಿನದಂದು ಮನಸ್ಸಿನ ಉಮ್ಮಂಗ-ಉತ್ಸಾಹದಿಂದ, ಮುಖದ ಉತ್ಸಾಹದಿಂದಲ್ಲ, ಮನಸ್ಸಿನ ಉಮ್ಮಂಗ-ಉತ್ಸಾಹದಿಂದ. ಯಾವುದು ಅಲ್ಪಸ್ವಲ್ಪ ಉಳಿದುಕೊಂಡಿದೆಯೋ ಮನಸ್ಸಿನಲ್ಲಿರಬಹುದು, ವಾಣಿಯಲ್ಲಿರಬಹುದು, ಸಂಬಂಧ-ಸಂಪರ್ಕದಲ್ಲಿರಬಹುದು ಅದನ್ನು ಇಂದು ತಂದೆಯ ಜನ್ಮದಿನದಂದು ತಂದೆಗೆ ಉಡುಗೊರೆಯಾಗಿ ಕೊಡಬಲ್ಲಿರಾ? ಮನಸ್ಸಿನ ಉಮ್ಮಂಗ-ಉತ್ಸಾಹದಿಂದ ಕೊಡಬಲ್ಲಿರಾ? ತಂದೆಯಂತೂ ಕೇವಲ ನೋಡುವರು ಆದರೆ ಲಾಭವಂತೂ ತಮಗೇ ಇದೆ. ಯಾರು ಉಮ್ಮಂಗ-ಉತ್ಸಾಹದಿಂದ ಸಾಹಸವನ್ನಿಡುವರೋ ಮಾಡಿಯೇ ತೋರಿಸುತ್ತೇವೆ, ಸಮರ್ಥರಾಗಿ ತೋರಿಸುತ್ತೇವೆ ಎನ್ನುವಿರೋ ಅವರು ಕೈಯೆತ್ತಿರಿ. ವ್ಯರ್ಥವನ್ನು ಬಿಡಲೇಬೇಕಾಗುವುದು, ಆಲೋಚಿಸಿ. ಮಾತಿನಲ್ಲಿಯೂ ಇಲ್ಲ, ಸಂಬಂಧ-ಸಂಪರ್ಕದಲ್ಲಿಯೂ ವ್ಯರ್ಥವಿಲ್ಲ, ಇಷ್ಟು ಧೈರ್ಯವಿದೆಯೇ? ಮಧುಬನದವರಲ್ಲಿಯೂ ಇದೆ, ವಿದೇಶದವರಲ್ಲಿಯೂ ಇದೆ, ಭಾರತವಾಸಿಗಳಲ್ಲಿಯೂ ಇದೆ ಏಕೆಂದರೆ ಬಾಪ್ದಾದಾರವರ ಪ್ರೀತಿಯಿದೆಯಲ್ಲವೆ ಆದ್ದರಿಂದ ಎಲ್ಲರೂ ಒಟ್ಟಿಗೆ ಹೋಗಬೇಕು, ಯಾರೂ ಉಳಿದುಕೊಳ್ಳಬಾರದೆಂದು ಬಾಪ್ದಾದಾ ತಿಳಿಯುತ್ತಾರೆ. ಜೊತೆಯಲ್ಲಿಯೇ ಹೋಗುತ್ತೇವೆಂದು ಯಾವಾಗ ಪ್ರತಿಜ್ಞೆ ಮಾಡಿದ್ದೀರಿ ಅಂದಮೇಲೆ ಸಮಾನರಂತೂ ಆಗಲೇಬೇಕಾಗುವುದು. ಪ್ರೀತಿಯಿದೆಯಲ್ಲವೆ. ಪರಿಶ್ರಮದಿಂದಂತೂ ಕೈಯೆತ್ತುತ್ತಿಲ್ಲ ಅಲ್ಲವೆ?

ಬಾಪ್ದಾದಾ ಈ ಸಂಘಟನೆಯ, ಬ್ರಾಹ್ಮಣ ಪರಿವಾರದವರಲ್ಲಿ ತಂದೆಯ ಸಮಾನ ಚಹರೆಯನ್ನು ನೋಡಲು ಬಯಸುತ್ತಾರೆ. ಕೇವಲ ಧೃಡ ಸಂಕಲ್ಪ, ಧೈರ್ಯವನ್ನಿಡಿ, ದೊಡ್ಡ ಮಾತೇನಿಲ್ಲ ಆದರೆ ಸಹನಾಶಕ್ತಿಯು ಬೇಕು. ಅಳವಡಿಸಿಕೊಳ್ಳುವ ಶಕ್ತಿ ಬೇಕು. ಇವೆರಡು ಶಕ್ತಿಗಳು, ಯಾರಲ್ಲಿ ಸಹನ ಶಕ್ತಿಯಿದೆಯೋ, ಅಳವಡಿಸಿಕೊಳ್ಳುವ ಶಕ್ತಿಯಿದೆಯೋ ಅವರು ಸಹಜವಾಗಿ ಕ್ರೋಧ ಮುಕ್ತರಾಗುತ್ತಾರೆ ಅಂದಾಗ ತಾವು ಬ್ರಾಹ್ಮಣ ಮಕ್ಕಳಿಗಂತೂ ಬಾಪ್ದಾದಾ ಸರ್ವ ಶಕ್ತಿಗಳನ್ನು ವರದಾನದಲ್ಲಿ ಕೊಟ್ಟಿದ್ದಾರೆ, ಮಾ|| ಸರ್ವಶಕ್ತಿವಂತ ಎಂಬ ಬಿರುದು ಇದೆ, ಕೇವಲ ಒಂದು ಸ್ಲೋಗನ್ ನೆನಪಿಟ್ಟುಕೊಳ್ಳಿ, ಒಂದುವೇಳೆ ಒಂದು ತಿಂಗಳಿನಲ್ಲಿ ಸಮಾನರಾಗಲೇಬೇಕು ಎಂಬುದಾದರೆ ಒಂದು ಪ್ರತಿಜ್ಞೆಯ ಸ್ಲೋಗನ್ ನೆನಪಿಟ್ಟುಕೊಳ್ಳಿ - ದುಃಖವನ್ನು ಕೊಡಲೂಬಾರದು, ದುಃಖವನ್ನು ತೆಗೆದುಕೊಳ್ಳಲೂಬಾರದು. ಕೆಲವರು ನಾನು ಇಂದಿನದಿನ ಯಾರಿಗೆ ದುಃಖ ಕೊಟ್ಟಿಲ್ಲವೆಂದು ಪರಿಶೀಲನೆ ಮಾಡಿಕೊಳ್ಳುತ್ತಾರೆ ಆದರೆ ತೆಗೆದುಕೊಳ್ಳುವುದು ಮಾತ್ರ ಬಹಳ ಸಹಜವಾಗಿ ತೆಗೆದುಕೊಳ್ಳುತ್ತಾರೆ ಏಕೆಂದರೆ ತೆಗೆದುಕೊಳ್ಳುವುದರಲ್ಲಿ ಅನ್ಯರು ಕೊಡುತ್ತಾರಲ್ಲವೆ ಆದ್ದರಿಂದ ತನ್ನನ್ನು ನಾನೇನೂ ಮಾಡಲಿಲ್ಲ, ಅನ್ಯರು ಕೊಟ್ಟರು ಎಂದು ತನ್ನನ್ನು ಬಿಡಿಸಿಕೊಳ್ಳುತ್ತಾರೆ ಆದರೆ ತೆಗೆದುಕೊಂಡಿದ್ದಾದರೂ ಏಕೆ? ತೆಗೆದುಕೊಳ್ಳುವವರು ತಾವೋ ಅಥವಾ ಕೊಡುವವರೋ? ಕೊಡುವವರು ತಪ್ಪು ಮಾಡಿದರು, ಅದರ ಲೆಕ್ಕಾಚಾರವು ತಂದೆಗೆ ಗೊತ್ತು, ಡ್ರಾಮಾಗೆ ಗೊತ್ತು ಆದರೆ ತಾವು ತೆಗೆದುಕೊಂಡಿದ್ದು ಏಕೆ? ಬಾಪ್ದಾದಾ ಫಲಿತಾಂಶದಲ್ಲಿ ನೋಡಿದರು - ಕೊಡುವುದರಲ್ಲಿಯಾದರೂ ಆಲೋಚಿಸುತ್ತಾರೆ ಆದರೆ ತೆಗೆದುಕೊಳ್ಳುವುದರಲ್ಲಿ ಬಹುಬೇಗನೆ ದುಃಖವನ್ನು ಸ್ವೀಕರಿಸಿ ಬಿಡುತ್ತಾರೆ. ಆದ್ದರಿಂದ ಸಮಾನರಾಗಲು ಸಾಧ್ಯವಿಲ್ಲ. ಅಂದಾಗ ಯಾರೆಷ್ಟಾದರೂ ಕೊಡಲಿ, ದುಃಖವನ್ನು ತೆಗೆದುಕೊಳ್ಳಬಾರದು ಇಲ್ಲವಾದರೆ ಫೀಲಿಂಗ್ನ ಖಾಯಿಲೆಯು ಹೆಚ್ಚಾಗಿ ಬಿಡುತ್ತದೆ. ಆದ್ದರಿಂದ ಒಂದುವೇಳೆ ಚಿಕ್ಕ-ಚಿಕ್ಕ ಮಾತುಗಳಲ್ಲಿ ಫೀಲಿಂಗ್ ಹೆಚ್ಚಾಗುತ್ತದೆಯೆಂದರೆ ವ್ಯರ್ಥ ಸಂಕಲ್ಪಗಳು ಸಮಾಪ್ತಿಯಾಗಲು ಸಾಧ್ಯವಿಲ್ಲ ಮತ್ತು ತಂದೆಯ ಜೊತೆ ಹೇಗೆ ಹೋಗುವಿರಿ? ತಂದೆಯ ಮೇಲೆ ಪ್ರೀತಿಯಿದೆ, ತಂದೆಯು ತಮ್ಮನ್ನು ಬಿಡುವುದಿಲ್ಲ. ಜೊತೆಯಲ್ಲಿಯೇ ಕರೆದುಕೊಂಡು ಹೋಗಬೇಕಾಗಿದೆ, ಸಮ್ಮತವೇ? ಇಷ್ಟವಿದೆಯಲ್ಲವೆ? ಇಷ್ಟವಿದ್ದರೆ ಕೈಯೆತ್ತಿರಿ. ಹಿಂದೆ-ಹಿಂದೆ ಬರಬಾರದಲ್ಲವೆ. ಒಂದುವೇಳೆ ಜೊತೆಯಲ್ಲಿ ನಡೆಯಬೇಕೆಂದರೆ ಈ ಉಡುಗೊರೆಯನ್ನು ಕೊಡಲೇಬೇಕಾಗುವುದು. ಒಂದು ತಿಂಗಳು ಎಲ್ಲರೂ ಅಭ್ಯಾಸ ಮಾಡಿ - ದುಃಖವನ್ನು ಕೊಡಬಾರದು, ದುಃಖವನ್ನು ತೆಗೆದುಕೊಳ್ಳಬಾರದು. ನಾನೇನೂ ಕೊಡಲಿಲ್ಲ ಅವರು ತೆಗೆದುಕೊಂಡು ಬಿಟ್ಟರು ಎಂದು ಹೇಳುವಂತಿಲ್ಲ. ಪರದರ್ಶನ ಮಾಡಬಾರದು, ಸ್ವ-ದರ್ಶನದಲ್ಲಿರಬೇಕಾಗಿದೆ. ಮೊದಲು ನಾನು ಹೇ! ಅರ್ಜುನ ಆಗಬೇಕಾಗಿದೆ.

ನೋಡಿ, ಬಾಪ್ದಾದಾ ರಿಪೋರ್ಟ್ನಲ್ಲಿ ನೋಡಿದರು, ಸಂತುಷ್ಟತೆಯ ರಿಪೋರ್ಟ್ ಬಹುತೇಕ ಮಕ್ಕಳದು ಈಗಲೂ ಇರಲಿಲ್ಲ ಆದ್ದರಿಂದ ಬಾಪ್ದಾದಾ ಪುನಃ ಒಂದು ತಿಂಗಳಿಗಾಗಿ ಅಂಡರ್ಲೈನ್ ಮಾಡಿಸುತ್ತಾರೆ. ಒಂದುವೇಳೆ ಒಂದು ತಿಂಗಳು ಅಭ್ಯಾಸ ಮಾಡಿದರೂ ಸಹ ಇದು ಹವ್ಯಾಸವಾಗಿ ಬಿಡುವುದು. ಹವ್ಯಾಸ ಮಾಡಿಕೊಳ್ಳಬೇಕಾಗಿದೆ, ಇದಂತೂ ಆಗಿಯೇ ಆಗುತ್ತದೆ, ಇಷ್ಟಂತೂ ನಡೆಯುತ್ತದೆ ಎಂದು ಹಗುರವಾಗಿ ಬಿಟ್ಟು ಬಿಡಬೇಡಿ. ಒಂದುವೇಳೆ ಬಾಪ್ದಾದಾರವರೊಂದಿಗೆ ಪ್ರೀತಿಯಿದೆಯೆಂದರೆ ಆ ಪ್ರೀತಿಯ ಹಿಂದೆ ಕೇವಲ ಒಂದು ಕ್ರೋಧ ವಿಕಾರವನ್ನು ಬಲಿದಾನ ನೀಡಲು ಸಾಧ್ಯವಿಲ್ಲವೆ? ಬಲಿಹಾರಿಯ ಚಿಹ್ನೆಯಾಗಿದೆ - ಪ್ರತೀ ಆಜ್ಞೆಯನ್ನು ಪಾಲಿಸುವವರು. ವ್ಯರ್ಥ ಸಂಕಲ್ಪಗಳು ಅಂತಿಮ ಘಳಿಗೆಯಲ್ಲಿ ಬಹಳ ಮೋಸ ಮಾಡುತ್ತದೆ. ಏಕೆಂದರೆ ನಾಲ್ಕಾರು ಕಡೆ ದುಃಖದ ವಾಯುಮಂಡಲ, ಪ್ರಕೃತಿಯ ವಾಯುಮಂಡಲ ಮತ್ತು ಆತ್ಮಗಳ ವಾಯುಮಂಡಲ ಆಕರ್ಷಣೆ ಮಾಡುವಂತಹದ್ದಾಗಿರುತ್ತದೆ. ಒಂದುವೇಳೆ ವ್ಯರ್ಥ ಸಂಕಲ್ಪಗಳ ಹವ್ಯಾಸವಿದ್ದರೆ ವ್ಯರ್ಥದಲ್ಲಿಯೇ ಸಿಕ್ಕಿ ಹಾಕಿಕೊಳ್ಳುವಿರಿ. ಆದ್ದರಿಂದ ಇಂದು ವಿಶೇಷವಾಗಿ ಬಾಪ್ದಾದಾರವರ ಈ ಸಾಹಸದ ಸಂಕಲ್ಪವಿದೆ, ವಿದೇಶದಲ್ಲಿರಬಹುದು, ಭಾರತದಲ್ಲಿರಬಹುದು - ಎಲ್ಲರೂ ಒಬ್ಬ ಬಾಪ್ದಾದಾರವರ ಮಕ್ಕಳೇ ಆಗಿದ್ದೀರಿ ಅಂದಮೇಲೆ ನಾಲ್ಕಾರು ಕಡೆಯ ಮಕ್ಕಳು ಧೈರ್ಯ ಮತ್ತು ಧೃಡತೆಯನ್ನಿಟ್ಟು ಸಫಲತಾಮೂರ್ತಿಗಳಾಗಿ. ವಿಶ್ವದಲ್ಲಿ ಈ ಘೋಷಣೆ ಮಾಡಿ - ಕಾಮವೂ ಇಲ್ಲ, ಕ್ರೋಧವೂ ಇಲ್ಲ, ನಾವು ಪರಮಾತ್ಮನ ಮಕ್ಕಳಾಗಿದ್ದೇವೆ. ಹೇಗೆ ಅನ್ಯರಿಂದ ಮಧ್ಯಪಾನವನ್ನು ಬಿಡಿಸುತ್ತೀರಿ, ಧೂಮಪಾನವನ್ನು ಬಿಡಿಸುತ್ತೀರಿ ಆದರೆ ಇಂದು ಬಾಪ್ದಾದಾ ಪ್ರತಿಯೊಬ್ಬ ಮಗುವಿನಿಂದ ಕ್ರೋಧಮುಕ್ತ, ಕಾಮ ವಿಕಾರಮುಕ್ತ ಇವೆರಡರ ಧೈರ್ಯವನ್ನು ತರಿಸಿ ಸ್ಟೇಜಿನ ಮೇಲೆ ವಿಶ್ವಕ್ಕೆ ತೋರಿಸಲು ಬಯಸುತ್ತಾರೆ. ಒಪ್ಪಿಗೆಯೇ? ದಾದಿಯರಿಗೆ ಇಷ್ಟವಿದೆಯೇ? ಮೊದಲ ಸಾಲಿನವರಿಗೆ ಇಷ್ಟವಿದೆಯೇ? ಮಧುಬನದವರಿಗೆ ಇಷ್ಟವಿದೆಯೇ? ಮಧುಬನದವರಿಗೂ ಇಷ್ಟವಿದೆ, ವಿದೇಶಿಯರಿಗೂ ಇಷ್ಟವಿದೆ ಅಂದಾಗ ಇಷ್ಟವಾದ ಮಾತನ್ನು ಮಾಡುವುದರಲ್ಲಿ ದೊಡ್ಡ ಮಾತೇನಿದೆ? ಬಾಪ್ದಾದಾ ಅಧಿಕ ಕಿರಣಗಳನ್ನು ಕೊಡುತ್ತಾರೆ. ಇಂತಹ ನಕ್ಷೆಯು ಕಾಣಿಸಲಿ - ಇದು ಆಶೀರ್ವಾದವನ್ನು ಕೊಡುವ ಮತ್ತು ಆಶೀರ್ವಾದಗಳನ್ನು ತೆಗೆದುಕೊಳ್ಳುವ ಬ್ರಾಹ್ಮಣ ಪರಿವಾರವಾಗಿದೆ, ಏಕೆಂದರೆ ಸಮಯವೂ ಕೂಗುತ್ತಿದೆ, ಬಾಪ್ದಾದಾರವರ ಬಳಿಯಂತೂ ಅಡ್ವಾನ್ಸ್ ಪಾರ್ಟಿಯವರದೂ ಹೃದಯದ ಕೂಗು ಕೇಳಿಸುತ್ತಿದೆ, ಮಾಯೆಯೂ ಈಗ ಸುಸ್ತಾಗಿ ಬಿಟ್ಟಿದೆ. ಅದೂ ಸಹ ಈಗ ನಮಗೂ ಮುಕ್ತಿ ಕೊಟ್ಟುಬಿಡಿ ಎಂದು ಬಯಸುತ್ತಿದೆ, ಮುಕ್ತಿಯನ್ನು ಕೊಡುತ್ತೀರಿ ಆದರೆ ಮಧ್ಯ-ಮಧ್ಯದಲ್ಲಿ ಸ್ವಲ್ಪ ಗೆಳೆತನ ಬೆಳೆಸಿ ಬಿಡುತ್ತೀರಿ. ಏಕೆಂದರೆ 63 ಜನ್ಮಗಳಿಂದ ಗೆಳೆಯನಾಗಿತ್ತಲ್ಲವೆ ಅಂದಾಗ ಬಾಪ್ದಾದಾ ಹೇಳುತ್ತಾರೆ – ಮಾ|| ಮುಕ್ತಿದಾತರೇ, ಈಗ ಎಲ್ಲರಿಗೆ ಮುಕ್ತಿ ಕೊಡಿ ಏಕೆಂದರೆ ಇಡೀ ವಿಶ್ವಕ್ಕೆ ಏನಾದರೊಂದು ಪ್ರಾಪ್ತಿಯ ಅಂಚಲಿಯನ್ನು ನೀಡಬೇಕಾಗಿದೆ, ಎಷ್ಟೊಂದು ಕೆಲಸ ಮಾಡಬೇಕಾಗಿದೆ, ಏಕೆಂದರೆ ಈ ಸಮಯದಲ್ಲಿ ಸಮಯವೂ ತಮ್ಮ ಜೊತೆಗಾರನಾಗಿದೆ. ಸರ್ವ ಆತ್ಮರು ಮುಕ್ತಿಯಲ್ಲಿ ಹೋಗಲೇಬೇಕಾಗಿದೆ, ಆ ಸಮಯವಾಗಿದೆ - ಇನ್ನೂ ಬೇರೆ ಸಮಯದಲ್ಲಿ ಒಂದುವೇಳೆ ತಾವು ಪುರುಷಾರ್ಥ ಮಾಡಿದರೂ ಸಹ ಅದು ಸಮಯವಲ್ಲ ಆದ್ದರಿಂದ ತಾವು ಕೊಡಲು ಸಾಧ್ಯವಿಲ್ಲ. ಈಗ ಸಮಯವಾಗಿದೆ ಆದ್ದರಿಂದ ಬಾಪ್ದಾದಾ ಹೇಳುತ್ತಾರೆ - ಮೊದಲು ಸ್ವಯಂಗೆ ಮುಕ್ತಿ ನೀಡಿ ನಂತರ ಇಡೀ ವಿಶ್ವದ ಸರ್ವ ಆತ್ಮರಿಗೆ ಪ್ರಾಪ್ತಿ, ಮುಕ್ತಿಯನ್ನು ಕೊಡುವ ಅಂಚಲಿ ನೀಡಿ. ಅವರು ಕೂಗುತ್ತಿದ್ದಾರೆ, ತಮಗೆ ದುಃಖಿಗಳ ಆ ಕೂಗಿನ ಶಬ್ಧವು ಕೇಳಿಬರುತ್ತಿಲ್ಲವೆ? ಒಂದುವೇಳೆ ತಮ್ಮದರಲ್ಲಿಯೇ ತತ್ಫರರಾಗಿದ್ದರೆ ಅದು ಕೇಳಿಬರುವುದಿಲ್ಲ. ಪದೇ-ಪದೇ ದುಃಖಿಗಳ ಮೇಲೆ ದಯೆ ತೋರಿಸಿ ಎಂದು ಗೀತೆಯನ್ನು ಹಾಡುತ್ತಿದ್ದಾರೆ. ಈಗಿನಿಂದಲೂ ದಯಾಳು, ಕೃಪಾಳು, ಕರುಣಾಳುವಿನ ಸಂಸ್ಕಾರವನ್ನು ಬಹಳ ಕಾಲದಿಂದ ತುಂಬಿಸಿಕೊಳ್ಳಲಿಲ್ಲವೆಂದರೆ ತಮ್ಮ ಜಡ ಚಿತ್ರದಲ್ಲಿ ಆ ದಯೆ, ಕೃಪೆ, ಕರುಣೆಯ ವೈಬ್ರೇಷನ್ ಹೇಗೆ ತುಂಬುವುದು?

ಡಬಲ್ ವಿದೇಶಿಯರು ತಿಳಿದುಕೊಳ್ಳುತ್ತಾರೆ, ತಾವೂ ಸಹ ದ್ವಾಪರದಲ್ಲಿ ದಯಾಹೃದಯಿಗಳಾಗಿ ಜಡ ಚಿತ್ರಗಳ ಮೂಲಕ ಎಲ್ಲರಿಗೆ ದಯೆ ತೋರಿಸುತ್ತೀರಲ್ಲವೆ. ತಮ್ಮ ಚಿತ್ರಗಳಿವೆಯಲ್ಲವೆ ಅಥವಾ ಕೇವಲ ಭಾರತದವರ ಚಿತ್ರಗಳೋ? ನಮ್ಮ ಚಿತ್ರಗಳಿವೆ ಎಂದು ವಿದೇಶಿಯವರು ತಿಳಿದುಕೊಳ್ಳುತ್ತೀರಾ? ಅಂದಮೇಲೆ ಚಿತ್ರಗಳು ಏನನ್ನು ಕೊಡುತ್ತವೆ? ಚಿತ್ರಗಳ ಮುಂದೆ ಹೋಗಿ ಏನನ್ನು ಬೇಡುತ್ತಾರೆ? ದಯೆ ತೋರಿಸಿ, ದಯೆ ತೋರಿಸಿ ಎಂದು ಹೇಳುತ್ತಿರುತ್ತಾರೆ. ಅಂದಾಗ ಈಗ ಸಂಗಮದಲ್ಲಿ ತಾವು ತಮ್ಮ ದ್ವಾಪರ-ಕಲಿಯುಗದ ಸಮಯಕ್ಕಾಗಿ ಜಡ ಚಿತ್ರಗಳ ವಾಯುಮಂಡಲವನ್ನು ತುಂಬಿಸುತ್ತೀರೆಂದರೆ ತಮ್ಮ ಜಡ ಚಿತ್ರಗಳ ಮೂಲಕ ಅನುಭವ ಮಾಡುತ್ತಾರೆ. ಭಕ್ತರ ಕಲ್ಯಾಣವಾಗುತ್ತದೆಯಲ್ಲವೆ. ಭಕ್ತರೂ ಸಹ ತಮ್ಮದೇ ವಂಶಾವಳಿಯಲ್ಲವೆ. ತಾವೆಲ್ಲರೂ ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ನ ಸಂತಾನರಾಗಿದ್ದೀರಿ ಅಂದಾಗ ಭಕ್ತರು ಭಲೆ ದುಃಖಿಯಾಗಿರಬಹುದು ಆದರೆ ಅವರೂ ತಮ್ಮದೇ ವಂಶಾವಳಿಯಲ್ಲವೆ. ಅವರಮೇಲೆ ತಮಗೆ ದಯೆ ಬರುವುದಿಲ್ಲವೇ? ಬರುತ್ತದೆ ಆದರೆ ಸ್ವಲ್ಪ-ಸ್ವಲ್ಪ ಬೇರೆ ಕಡೆ ವ್ಯಸ್ತರಾಗಿ ಬಿಡುತ್ತೀರಿ. ಈಗ ತಮ್ಮ ಪುರುಷಾರ್ಥದಲ್ಲಿ ಹೆಚ್ಚು ಸಮಯವನ್ನು ತೊಡಗಿಸಿಕೊಳ್ಳಬೇಡಿ, ಅನ್ಯರಿಗೆ ಕೊಡುವುದರಲ್ಲಿ ತೊಡಗಿ ಆಗ ಕೊಡುವುದೇ ತೆಗೆದುಕೊಳ್ಳುವುದಾಗಿಬಿಡುತ್ತದೆ. ಚಿಕ್ಕ-ಚಿಕ್ಕ ಮಾತುಗಳು ಇಲ್ಲವೇ ಇಲ್ಲ. ಮುಕ್ತಿ ದಿನವನ್ನು ಆಚರಿಸಿ. ಇಂದಿನದಿನವನ್ನು ಮುಕ್ತಿದಿನವನ್ನಾಗಿ ಆಚರಿಸಿರಿ, ಸರಿಯೇ? ಮೊದಲನೇ ಸಾಲಿನವರಿಗೆ ಒಪ್ಪಿಗೆಯೇ? ಒಪ್ಪಿಗೆಯೇ? ಮಧುಬನದವರಿಗೆ ಒಪ್ಪಿಗೆಯೇ?

ಇಂದು ಮಧುಬನದವರು ಬಹಳ ಪ್ರಿಯರೆನಿಸುತ್ತಿದ್ದೀರಿ ಏಕೆಂದರೆ ಮಧುಬನದವರನ್ನು ಬಹಳ ಬೇಗನೆ ಫಾಲೋ ಮಾಡುತ್ತಾರೆ. ಪ್ರತೀ ಮಾತಿನಲ್ಲಿ ಮಧುಬನದವರನ್ನು ಬಹು ಬೇಗನೆ ಫಾಲೋ ಮಾಡಿ ಬಿಡುತ್ತಾರೆ ಅಂದಮೇಲೆ ಮಧುಬನದವರು ಮುಕ್ತಿ ದಿನವನ್ನು ಆಚರಿಸುತ್ತೀರೆಂದರೆ ಎಲ್ಲರೂ ನಿಮ್ಮನ್ನು ಫಾಲೋ ಮಾಡುತ್ತಾರೆ. ತಾವು ಮಧುಬನ ನಿವಾಸಿಗಳೆಲ್ಲರೂ ಮಾ|| ಮುಕ್ತಿದಾತರಾದಿರಿ, ಆಗಬೇಕಲ್ಲವೆ? (ಎಲ್ಲರೂ ಕೈ ಎತ್ತುತ್ತಿದ್ದಾರೆ) ಒಳ್ಳೆಯದು ಬಹಳ ಒಳ್ಳೊಳ್ಳೆಯವರಿದ್ದಾರೆ. ಈಗ ಬಾಪ್ದಾದಾ ಎಲ್ಲರ ಸನ್ಮುಖದಲ್ಲಿರಬಹುದು, ದೇಶ-ವಿದೇಶದಲ್ಲಿ ದೂರಕುಳಿತು ಕೇಳುತ್ತಿರಬಹುದು, ನೋಡುತ್ತಿರಬಹುದು, ಎಲ್ಲಾ ಮಕ್ಕಳಿಗೆ ಡ್ರಿಲ್ ಮಾಡಿಸುತ್ತಾರೆ. ಎಲ್ಲರೂ ತಯಾರಾದಿರಾ? ಎಲ್ಲಾ ಸಂಕಲ್ಪಗಳನ್ನು ಮರ್ಜ್ ಮಾಡಿದಿರಿ, ಈಗ ಒಂದು ಸೆಕೆಂಡಿನಲ್ಲಿ ಮನಸ್ಸು-ಬುದ್ಧಿಯ ಮೂಲಕ ತಮ್ಮ ಮಧುರ ಮನೆಯಲ್ಲಿ ತಲುಪಿದಿರಿ, ಈಗ ಪರಮಧಾಮದಿಂದ ತಮ್ಮ ಸೂಕ್ಷ್ಮವತನವನ್ನು ತಲುಪಿರಿ, ಈಗ ಸೂಕ್ಷ್ಮವತನದಿಂದ ಸ್ಥೂಲ-ಸಾಕಾರವತನ, ತಮ್ಮ ರಾಜ್ಯವಾದ ಸ್ವರ್ಗವನ್ನು ತಲುಪಿರಿ. ಈಗ ತಮ್ಮ ಪುರುಷೋತ್ತಮ ಸಂಗಮಯುಗದಲ್ಲಿ ತಲುಪಿರಿ. ಈಗ ಮಧುಬನದಲ್ಲಿ ಬಂದು ಬಿಡಿ. ಇದೇ ರೀತಿ ಪದೇ-ಪದೇ ಸ್ವದರ್ಶನ ಚಕ್ರಧಾರಿಯಾಗಿ ಚಕ್ರವನ್ನು ಸುತ್ತುತ್ತಾ ಇರಿ. ಒಳ್ಳೆಯದು.

ನಾಲ್ಕಾರು ಕಡೆಯ ಲವಲೀ ಮತ್ತು ಲಕ್ಕಿ ಮಕ್ಕಳಿಗೆ, ಸದಾ ಸ್ವರಾಜ್ಯದ ಮೂಲಕ ಸ್ವ-ಪರಿವರ್ತನೆ ಮಾಡಿಕೊಳ್ಳುವ ರಾಜಾ ಮಕ್ಕಳಿಗೆ, ಸದಾ ಧೃಡತೆಯ ಮೂಲಕ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವ ಸಫಲತೆಯ ನಕ್ಷತ್ರಗಳಿಗೆ, ಸದಾ ಖುಷಿಯಾಗಿರುವ ಖುಷಿಯ ಅದೃಷ್ಟವಂತ ಮಕ್ಕಳಿಗೆ, ಬಾಪ್ದಾದಾರವರ ಇಂದಿನ ಜನ್ಮದಿನದ ತಂದೆ ಮತ್ತು ಮಕ್ಕಳ ಜನ್ಮದಿನದ ಬಹಳ-ಬಹಳ ಶುಭಾಷಯಗಳು, ಆಶೀರ್ವಾದಗಳು ಮತ್ತು ನೆನಪು-ಪ್ರೀತಿ, ಇಂತಹ ಶ್ರೇಷ್ಠ ಮಕ್ಕಳಿಗೆ ನಮಸ್ತೆ.

ವರದಾನ:
ವಿಶ್ವ ಕಲ್ಯಾಣದ ಜವಾಬ್ದಾರಿ ಎಂದು ತಿಳಿದು ಸಮಯ ಮತ್ತು ಶಕ್ತಿಗಳ ಉಳಿತಾಯ ಮಾಡುವಂತಹ ಮಾಸ್ಟರ್ ರಚೈತಾ ಭವ.

ವಿಶ್ವದ ಸರ್ವ ಆತ್ಮರು ತಾವು ಶ್ರೇಷ್ಠ ಆತ್ಮರ ಪರಿವಾರ ಆಗಿದೆ, ಎಷ್ಟು ದೊಡ್ಡ ಪರಿವಾರವಿರುತ್ತೆ, ಅಷ್ಟೂ ಉಳಿತಾಯದ ಚಿಂತನೆ ಮಾಡಲಾಗುವುದು. ಆದ್ದರಿಂದ ಸರ್ವ ಆತ್ಮಗಳನ್ನು ಎದುರಿನಲ್ಲಿಟ್ಟುಕೊಂಡು, ಸ್ವಯಂನ್ನು ಬೇಹದ್ಧಿನ ಸೇವಾರ್ಥ ನಿಮಿತ್ತಾ ಎಂದು ತಿಳಿಯುತ್ತಾ ತಮ್ಮ ಸಮಯ ಮತ್ತು ಶಕ್ತಿಗಳನ್ನು ಕಾರ್ಯದಲ್ಲಿ ತೊಡಗಿಸಿ. ತಮ್ಮ ಪ್ರತಿಯೇ ಸಂಪಾದಿಸುವುದು, ತಿನ್ನುವುದು ಮತ್ತು ಕಳೆಯುವುದು-ಈ ರೀತಿ ಬೇಜವಾಬ್ದಾರಿಯಾಗಬೇಡಿ. ಸರ್ವ ಖಜಾನೆಗಳ ಉಳಿತಾಯ ಯೋಜನೆ ಮಾಡಿ. ಮಾಸ್ಟರ್ ರಚೈತಾ ಭವದ ವರದಾನವನ್ನು ಸ್ಮತಿಯಲ್ಲಿಟ್ಟು ಸಮಯ ಮತ್ತು ಶಕ್ತಿಯ ಸ್ಟಾಕ್ ಸೇವೆಯ ಪ್ರತಿ ಜಮಾ ಮಾಡಿ.

ಸ್ಲೋಗನ್:
ಮಹಾದಾನಿ ಅವರೇ ಆಗಿದ್ದಾರೆ ಯಾರ ಸಂಕಲ್ಪ ಮತ್ತು ಮಾತಿನ ಮೂಲಕ ಎಲ್ಲರಿಗೂ ವರದಾನಗಳ ಪ್ರಾಪ್ತಿ ಮಾಡಿಸುವರು.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ.

ನಿಮ್ಮ ಯಾವ ಸೂಕ್ಷ್ಮ ಶಕ್ತಿಗಳು ಮಂತ್ರಿ ಹಾಗೂ ಮಹಾಮಂತ್ರಿ ಇದ್ದಾರೆ (ಮನಸ್ಸು ಹಾಗೂ ಬುದ್ಧಿ) ಅದನ್ನು ತಮ್ಮ ಆರ್ಡರ್ ಪ್ರಮಾಣ ನಡೆಸಿ. ಒಂದುವೇಳೆ ಈಗಿನಿಂದ ರಾಜ್ಯ ದರಬಾರು ಸರಿಯಾಗಿದ್ದರೆ ಧರ್ಮರಾಜನ ದರ್ಬಾರಿನಲ್ಲಿ ಹೋಗುವುದಿಲ್ಲ. ಧರ್ಮರಾಜನು ಸಹ ಸ್ವಾಗತ ಮಾಡುವನು. ಆದರೆ ಒಂದುವೇಳೆ ಕಂಟ್ರೋಲಿಂಗ್ ಪವರ್ ಇಲ್ಲ ಎಂದರೆ ಅಂತಿಮ ಫಲಿತಾಂಶದಲ್ಲಿ ದಂಡಕ್ಕಾಗಿ ಧರ್ಮರಾಜ ಪುರಿಗೆ ಹೋಗಬೇಕಾಗುವುದು. ಈ ಶಿಕ್ಷೆಗಳು ದಂಡವಾಗಿವೆ. ರೀಫೈನ್ (ಪರಿಶುದ್ಧ) ಆಗಿ ಬಿಡಿ ಆಗ ಫೈನ್ ಕಟ್ಟಬೇಕಾಗಿಲ್ಲ.

ಸೂಚನೆ: ಇಂದು ತಿಂಗಳಿನ ಮೂರನೆಯ ರವಿವಾರವಾಗಿದೆ, ಎಲ್ಲಾ ರಾಜಯೋಗಿ ತಪಸ್ವಿ ಸಹೋದರ ಸಹೋದರಿಯರು 6.30 ಯಿಂದ 7.30 ರವರೆಗೆ ವಿಶೇಷ ಯೋಗ ಅಭ್ಯಾಸದ ಸಮಯದಲ್ಲಿ ಭಕ್ತರ ಕರೆಯನ್ನು ಕೇಳಿಸಿಕೊಳ್ಳಿ ಹಾಗೂ ತಮ್ಮ ಇಷ್ಟ ದೇವ, ದಯಾ ಹೃದಯಿ, ದಾತಾ ಸ್ವರೂಪದಲ್ಲಿ ಸ್ಥಿತರಾಗಿ ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡುವ ಸೇವೆ ಮಾಡಿ.