20.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಶ್ರೀಮತದಂತೆ ನಡೆದು ಎಲ್ಲರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯುವ ಮಾರ್ಗವನ್ನು ತಿಳಿಸಿ, ಇಡೀ
ದಿನ ಇದೇ ವ್ಯವಹಾರವನ್ನು ಮಾಡುತ್ತಾ ಇರಿ”.
ಪ್ರಶ್ನೆ:
ತಂದೆಯು ಯಾವ
ಸೂಕ್ಷ್ಮ ಮಾತುಗಳನ್ನು ತಿಳಿಸಿದ್ದಾರೆ, ಅವು ಬಹಳ ತಿಳಿದುಕೊಳ್ಳುವಂತಹವಾಗಿವೆ?
ಉತ್ತರ:
1. ಸತ್ಯಯುಗವು
ಅಮರಲೋಕವಾಗಿದೆ, ಅಲ್ಲಿ ಆತ್ಮವು ಒಂದು ವಸ್ತ್ರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ
ಆದರೆ ಮೃತ್ಯುವಿನ ಹೆಸರಿರುವುದಿಲ್ಲ. ಆದ್ದರಿಂದ ಅದಕ್ಕೆ ಮೃತ್ಯುಲೋಕವೆಂದು ಹೇಳಲಾಗುವುದಿಲ್ಲ. 2.
ಶಿವ ತಂದೆಯದು ಬೇಹದ್ದಿನ ರಚನೆಯಾಗಿದೆ, ಬ್ರಹ್ಮಾನ ರಚನೆಯು ಈ ಸಮಯದಲ್ಲಿ ಕೇವಲ ನೀವು
ಬ್ರಾಹ್ಮಣರಾಗಿದ್ದೀರಿ. ತ್ರಿಮೂರ್ತಿ ಶಿವನೆಂದೂ ಹೇಳುತ್ತಾರೆ, ತ್ರಿಮೂರ್ತಿ ಬ್ರಹ್ಮಾನಲ್ಲ.
ಇವೆಲ್ಲಾ ಸೂಕ್ಷ್ಮ ಮಾತುಗಳನ್ನು ತಂದೆಯು ತಿಳಿಸಿದ್ದಾರೆ. ಇಂತಹ ಮಾತುಗಳನ್ನು ಕುರಿತು ವಿಚಾರ ಮಾಡಿ,
ಬುದ್ಧಿಗೆ ತಾವೇ ಭೋಜನವನ್ನು ತಯಾರು ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ.
ತ್ರಿಮೂರ್ತಿ ಶಿವ ಭಗವಾನುವಾಚ - ಅವರಂತೂ ತ್ರಿಮೂರ್ತಿ ಬ್ರಹ್ಮನೆಂದು ಹೇಳುತ್ತಾರೆ. ತಂದೆಯು
ತಿಳಿಸುತ್ತಾರೆ - ತ್ರಿಮೂರ್ತಿ ಶಿವ ಭಗವಾನುವಾಚ. ತ್ರಿಮೂರ್ತಿ ಬ್ರಹ್ಮಾ ಭಗವಾನುವಾಚ ಎಂದು
ಹೇಳುವುದಿಲ್ಲ. ನೀವು ತ್ರಿಮೂರ್ತಿ ಶಿವ ಭಗವಾನುವಾಚ ಎಂದು ಹೇಳುತ್ತೀರಿ. ಅವರಂತೂ ಶಿವ-ಶಂಕರನೆಂದು
ಹೇಳಿ ಇಬ್ಬರನ್ನು ಸೇರಿಸಿ ಬಿಡುತ್ತಾರೆ. ಇದಂತೂ ನೇರವಾಗಿದೆ, ತ್ರಿಮೂರ್ತಿ ಬ್ರಹ್ಮಾನ ಬದಲು
ತ್ರಿಮೂರ್ತಿ ಶಿವ ಭಗವಾನುವಾಚ. ಶಂಕರನು ಕಣ್ಣುತೆರೆದಾಗ ವಿನಾಶವಾಗಿ ಬಿಡುತ್ತದೆ ಎಂದು ಮನುಷ್ಯರು
ಹೇಳುತ್ತಾರೆ. ಇದೆಲ್ಲವೂ ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಲಾಗುತ್ತದೆ. ಮೂವರದೇ ಮುಖ್ಯ ಪಾತ್ರವಿದೆ,
ಬ್ರಹ್ಮಾ ಮತ್ತು ವಿಷ್ಣುವಿನದು 84 ಜನ್ಮಗಳ ದೊಡ್ಡ ಪಾತ್ರವಿದೆ. ವಿಷ್ಣು ಮತ್ತು ಪ್ರಜಾಪಿತ
ಬ್ರಹ್ಮಾನ ಅರ್ಥವನ್ನು ತಿಳಿದುಕೊಂಡಿದ್ದೀರಿ. ಈ ಮೂವರದು ಪಾತ್ರವಿದೆ. ಬ್ರಹ್ಮಾನಿಗಂತೂ ಆದಿ ದೇವ,
ಆಡಂ ಎಂದು ಹೆಸರಿನ ಗಾಯನವಿದೆ, ಪ್ರಜಾಪಿತನ ಮಂದಿರವೂ ಇದೆ. ಇದು ವಿಷ್ಣು ಅಥವಾ ಕೃಷ್ಣನ ಅಂತಿಮ
84ನೇ ಜನ್ಮವಾಗಿದೆ, ಇವರ ಹೆಸರನ್ನು ಬ್ರಹ್ಮಾನೆಂದು ಇಟ್ಟಿದ್ದಾರೆ. ಬ್ರಹ್ಮಾ ಮತ್ತು ವಿಷ್ಣುವನ್ನು
ಸಿದ್ಧ ಮಾಡಲೇಬೇಕಾಗಿದೆ. ಬ್ರಹ್ಮಾನಿಗೆ ದತ್ತು ಮಗುವೆಂದು ಹೇಳುತ್ತಾರೆ, ಇವರಿಬ್ಬರೂ ಶಿವನ
ಮಕ್ಕಳಾಗಿದ್ದಾರೆ. ವಾಸ್ತವದಲ್ಲಿ ಒಬ್ಬರೇ ಮಗುವಾಗಿದ್ದಾರೆ. ಲೆಕ್ಕ ಮಾಡುವುದಾದರೆ ಬ್ರಹ್ಮಾನು
ಶಿವನ ಮಗನಾಗಿದ್ದಾರೆ. ತಂದೆ ಮತ್ತು ದಾದಾ, ಇಲ್ಲಿ ವಿಷ್ಣುವಿನ ಹೆಸರೇ ಬರುವುದಿಲ್ಲ. ಪ್ರಜಾಪಿತ
ಬ್ರಹ್ಮಾರವರ ಮೂಲಕ ಶಿವ ತಂದೆಯು ಸ್ಥಾಪನೆ ಮಾಡುತ್ತಿದ್ದಾರೆ, ವಿಷ್ಣುವಿನ ಮೂಲಕ ಸ್ಥಾಪನೆ
ಮಾಡಿಸುವುದಿಲ್ಲ. ಶಿವನ ಮಕ್ಕಳೂ ಇದ್ದಾರೆ, ಬ್ರಹ್ಮಾನ ಮಕ್ಕಳೂ ಇದ್ದಾರೆ. ವಿಷ್ಣುವಿನ ಮಕ್ಕಳೆಂದು
ಹೇಳುವುದಿಲ್ಲ ಅಥವಾ ಲಕ್ಷ್ಮೀ-ನಾರಾಯಣರಿಗೂ ಬಹಳ ಮಂದಿ ಮಕ್ಕಳಿರಲು ಸಾಧ್ಯವಿಲ್ಲ, ಇದು ಬುದ್ಧಿಗೆ
ಭೋಜನವಾಗಿದೆ, ಸ್ವಯಂ ತಾವೇ ಭೋಜನವನ್ನು ತಯಾರಿಸಿಕೊಳ್ಳಬೇಕು. ಎಲ್ಲರಿಗಿಂತ ಹೆಚ್ಚಿನ ಪಾತ್ರವು
ವಿಷ್ಣುವಿನದೆಂದು ಹೇಳಬಹುದು, 84 ಜನ್ಮಗಳ ವಿರಾಟ ರೂಪವನ್ನೂ ವಿಷ್ಣುವಿನದೇ ತೋರಿಸುತ್ತಾರೆ,
ಬ್ರಹ್ಮನದಲ್ಲ. ವಿರಾಟ ರೂಪವು ವಿಷ್ಣುವಿನದನ್ನೇ ಮಾಡುತ್ತಾರೆ ಏಕೆಂದರೆ ಮೊಟ್ಟ ಮೊದಲು ಪ್ರಜಾಪಿತ
ಬ್ರಹ್ಮನ ಹೆಸರನ್ನು ತೆಗೆದುಕೊಳ್ಳುತ್ತಾರೆ. ಬ್ರಹ್ಮನದು ಬಹಳ ಚಿಕ್ಕ ಪಾತ್ರವಿದೆ ಆದ್ದರಿಂದ
ವಿಷ್ಣುವಿನದೇ ವಿರಾಟ ರೂಪವನ್ನು ತೋರಿಸುತ್ತಾರೆ. ಚತುರ್ಭುಜನನ್ನು ವಿಷ್ಣುವಿನ ರೂಪದಲ್ಲಿಯೇ
ಮಾಡುತ್ತಾರೆ, ವಾಸ್ತವದಲ್ಲಿ ಈ ಅಲಂಕಾರಗಳು ನಿಮ್ಮದಾಗಿವೆ. ಇವು ಬಹಳ ತಿಳಿದುಕೊಳ್ಳುವ
ಮಾತುಗಳಾಗಿವೆ. ಯಾವುದೇ ಮನುಷ್ಯರು ಈ ಮಾತುಗಳನ್ನು ತಿಳಿಸಲು ಸಾಧ್ಯವಿಲ್ಲ. ತಂದೆಯು ಹೊಸ-ಹೊಸ
ವಿಧಾನದಿಂದ ತಿಳಿಸುತ್ತಿರುತ್ತಾರೆ. ತಂದೆಯೂ ಹೇಳುತ್ತಾರೆ - ತ್ರಿಮೂರ್ತಿ ಶಿವ ಭಗವಾನುವಾಚ,
ಸರಿಯಲ್ಲವೆ. ವಿಷ್ಣು, ಬ್ರಹ್ಮಾ ಮತ್ತು ಶಿವ. ಇದರಲ್ಲಿಯೂ ಪ್ರಜಾಪಿತ ಬ್ರಹ್ಮಾನೇ ಮಗನಾಗಿದ್ದಾರೆ.
ವಿಷ್ಣುವನ್ನು ಮಗನೆಂದು ಹೇಳುವುದಿಲ್ಲ. ಭಲೆ ರಚನೆಯಾಗಿದೆ ಆದರೆ ರಚನೆಯು ಬ್ರಹ್ಮಾನದೇ
ಆಗಿದೆಯಲ್ಲವೆ ನಂತರ ಭಿನ್ನ ನಾಮ-ರೂಪವನ್ನು ತೆಗೆದುಕೊಳ್ಳುತ್ತಾರೆ. ಮುಖ್ಯವಾದ ಪಾತ್ರವು
ಅವರದಾಗಿದೆ. ಬ್ರಹ್ಮಾನ ಪಾತ್ರವು ಈ ಸಮಯದಲ್ಲಿ ಬಹಳ ಚಿಕ್ಕದಾಗಿದೆ. ವಿಷ್ಣುವಿನ ರಾಜ್ಯವು ಎಷ್ಟು
ಸಮಯದ್ದಾಗಿದೆ! ಇಡೀ ವೃಕ್ಷದ ಬೀಜರೂಪವು ಶಿವ ತಂದೆಯದಾಗಿದೆ. ಅವರ ರಚನೆಗೆ ಸಾಲಿಗ್ರಾಮಗಳೆಂದು
ಹೇಳಲಾಗುತ್ತದೆ. ಬ್ರಹ್ಮಾನ ರಚನೆಗೆ ಬ್ರಾಹ್ಮಣ-ಬ್ರಾಹ್ಮಿಣಿಯರೆಂದು ಹೇಳುತ್ತಾರೆ. ಈಗ ಶಿವನ ರಚನೆ
ಎಷ್ಟಿದೆಯೋ ಅಷ್ಟು ಬ್ರಹ್ಮಾನ ರಚನೆಯಿಲ್ಲ. ಶಿವನ ರಚನೆಯು ಬಹಳಷ್ಟಿದೆ! ಎಲ್ಲಾ ಆತ್ಮಗಳು ಅವರ
ಸಂತಾನರಾಗಿದ್ದಾರೆ. ಬ್ರಹ್ಮಾನ ರಚನೆಯು ಕೇವಲ ನೀವು ಬ್ರಾಹ್ಮಣರೇ ಆಗಿದ್ದೀರಿ, ಹದ್ದಿನಲ್ಲಿ ಬಂದು
ಬಿಟ್ಟಿರಲ್ಲವೆ. ಶಿವ ತಂದೆಯದು ಬೇಹದ್ದಿನ ರಚನೆಯಾಗಿದೆ ಅಂದರೆ ಎಲ್ಲಾ ಆತ್ಮಗಳು. ಬೇಹದ್ದ್
ಆತ್ಮಗಳ ಕಲ್ಯಾಣ ಮಾಡುತ್ತಾರೆ. ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ನೀವು
ಬ್ರಾಹ್ಮಣರೇ ಹೋಗಿ ಸ್ವರ್ಗವಾಸಿಗಳಾಗುತ್ತೀರಿ, ಮತ್ತ್ಯಾರಿಗೂ ಸ್ವರ್ಗವಾಸಿಗಳೆಂದು ಹೇಳುವುದಿಲ್ಲ.
ನಿರ್ವಾಣವಾಸಿ ಅಥವಾ ಶಾಂತಿಧಾಮದ ನಿವಾಸಿಗಳಂತೂ ಎಲ್ಲರೂ ಆಗುತ್ತಾರೆ. ಎಲ್ಲರಿಗಿಂತ ಶ್ರೇಷ್ಠ
ಸೇವೆಯು ಶಿವ ತಂದೆಯದಾಗಿದೆ ಏಕೆಂದರೆ ಎಲ್ಲಾ ಆತ್ಮರನ್ನು ಕರೆದುಕೊಂಡು ಹೋಗುತ್ತಾರೆ. ಎಲ್ಲರ
ಪಾತ್ರವು ಬೇರೆ-ಬೇರೆಯಾಗಿದೆ. ಶಿವ ತಂದೆಯೂ ಸಹ ಹೇಳುತ್ತಾರೆ - ನನ್ನ ಪಾತ್ರವು ಬೇರೆಯಾಗಿದೆ,
ಎಲ್ಲರ ಲೆಕ್ಕಾಚಾರಗಳನ್ನು ಮುಕ್ತಾಯ ಮಾಡಿಸಿ ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಿ
ಕರೆದುಕೊಂಡು ಹೋಗುತ್ತೇನೆ. ನೀವಿಲ್ಲಿ ಪಾವನರಾಗಲು ಪರಿಶ್ರಮ ಪಡುತ್ತಿದ್ದೀರಿ. ಉಳಿದವರೆಲ್ಲರೂ
ಅಂತಿಮ ಸಮಯದಲ್ಲಿ ತಮ್ಮ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೋಗುತ್ತಾರೆ, ಮತ್ತೆ ಮುಕ್ತಿಧಾಮದಲ್ಲಿ
ಕುಳಿತಿರುತ್ತಾರೆ. ಸೃಷ್ಟಿಚಕ್ರವು ಸುತ್ತಲೇಬೇಕಾಗಿದೆ.
ನೀವು ಮಕ್ಕಳು
ಬ್ರಹ್ಮಾರವರ ಮೂಲಕ ಬ್ರಾಹ್ಮಣರಾಗಿ ನಂತರ ದೇವತೆಗಳಾಗುತ್ತೀರಿ. ನೀವು ಬ್ರಾಹ್ಮಣರು ಶ್ರೀಮತದಂತೆ
ಸೇವೆ ಮಾಡುತ್ತೀರಿ. ಮುಕ್ತಿ ಮತ್ತು ಜೀವನ್ಮುಕ್ತಿಯನ್ನು ಪಡೆಯಬೇಕೆಂದರೆ ಈ ರೀತಿ ಪಡೆಯಬಹುದೆಂದು
ಕೇವಲ ಮನುಷ್ಯರಿಗೆ ಮಾತ್ರವೇ ತಿಳಿಸುತ್ತೀರಿ. ಎರಡು ಬೀಗದ ಕೈಗಳು ಕೈಯಲ್ಲಿದೆ. ಮುಕ್ತಿಯಲ್ಲಿ ಯಾರು
ಮತ್ತು ಜೀವನ್ಮುಕ್ತಿಯಲ್ಲಿ ಯಾರ್ಯಾರು ಹೋಗುತ್ತಾರೆಂದು ನಿಮಗೆ ತಿಳಿದಿದೆ. ನಿಮಗೆ ಇಡೀ ದಿನ ಇದೇ
ಕಾರ್ಯ ಮಾಡಬೇಕಾಗಿದೆ. ಯಾರಾದರೂ ದವಸ-ಧಾನ್ಯಗಳ ವ್ಯಾಪಾರ ಮಾಡುತ್ತಾರೆಂದರೆ ಇಡೀ ದಿನ ಅದೇ
ಬುದ್ಧಿಯಲ್ಲಿರುತ್ತದೆ ಹಾಗೆಯೇ ನಿಮ್ಮ ವ್ಯಾಪಾರವು ರಚನೆಯ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಳ್ಳುವುದು, ಅನ್ಯರಿಗೆ ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸುವುದಾಗಿದೆ. ಯಾರು ಈ
ಧರ್ಮದವರಾಗಿದ್ದಾರೆಯೋ ಅವರು ಬಂದು ಬಿಡುತ್ತಾರೆ. ಹೀಗೆ ಬಹಳ ಧರ್ಮದವರಿದ್ದಾರೆ ಯಾರು ಬದಲಾಗುವುದೇ
ಇಲ್ಲ. ಹೇಗೆ ಆಂಗ್ಲೋ ಕ್ರಿಶ್ಚಿಯನ್ನರು ಕಪ್ಪು ಬಣ್ಣದವರಾಗಿರುತ್ತಾರೆ, ರೂಪವಂತು ಬದಲಾಗುವುದಿಲ್ಲ.
ಕೇವಲ ಈ ರೀತಿ ಬದಲಾಯಿಸುತ್ತಾರೆ ಅಂದರೆ ರೂಪವು ಬದಲಾಗುತ್ತದೆಯೆಂದಲ್ಲ, ಕೇವಲ ಧರ್ಮವನ್ನು
ಒಪ್ಪುತ್ತಾರೆ. ಕೆಲವರು ಬೌದ್ಧರು ಧರ್ಮವನ್ನು ಒಪ್ಪುತ್ತಾರೆ ಏಕೆಂದರೆ ದೇವಿ-ದೇವತಾ ಧರ್ಮವಂತೂ
ಪ್ರಾಯಲೋಪವಾಗಿದೆ. ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರೆಂದು ಯಾರೊಬ್ಬರೂ ಹೇಳುವುದಿಲ್ಲ.
ದೇವತೆಗಳ ಚಿತ್ರಗಳು ಕೆಲಸಕ್ಕೆ ಬರುತ್ತದೆ. ಆತ್ಮವು ಅವಿನಾಶಿಯಾಗಿದೆ, ಅದೆಂದೂ ಸಾಯುವುದಿಲ್ಲ.
ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತದೆ. ಸತ್ಯಯುಗಕ್ಕೆ
ಮೃತ್ಯುಲೋಕವೆಂದು ಹೇಳುವುದಿಲ್ಲ, ಅದು ಅಮರಲೋಕವಾಗಿದೆ. ಕೇವಲ ವಸ್ತ್ರವನ್ನು ಬದಲಾಯಿಸುತ್ತಾರೆ. ಈ
ಮಾತುಗಳು ಬಹಳ ಸೂಕ್ಷ್ಮ, ತಿಳಿದುಕೊಳ್ಳುವಂತಹವಾಗಿವೆ. ಇವು ಸಾಮಾನ್ಯವಾದ ಮಾತುಗಳಲ್ಲ. ಹೇಗೆ
ವಿವಾಹವಾದಾಗ ಕೆಲವರಿಗೆ ವರದಕ್ಷಿಣೆಯಾಗಿ ವಸ್ತುಗಳನ್ನು ಕೊಡುತ್ತಾರೆ, ಕೆಲವರಿಗೆ ಸ್ವಲ್ಪ ಹಣವನ್ನು
ಕೊಡುತ್ತಾರೆ, ಕೆಲವರಿಗೆ ಕೈ ತುಂಬಿ ಕೊಡುತ್ತಾರೆ. ಕೆಲವರು ಎಲ್ಲವನ್ನೂ ತೋರಿಸಿ (ತೋರ್ಪಡಿಕೆ)
ಕೊಳ್ಳುತ್ತಾರೆ. ಇನ್ನೂ ಕೆಲವರು ಗುಪ್ತವಾಗಿ (ಪೆಟ್ಟಿಗೆಯಲ್ಲಿ ತುಂಬಿಸಿ) ಕೊಡುತ್ತಾರೆ.
ಭಿನ್ನ-ಭಿನ್ನ ಪ್ರಕಾರದವರಿರುತ್ತಾರೆ. ನಿಮಗಂತೂ ಬಹಳಷ್ಟು ಆಸ್ತಿಯು ಸಿಗುತ್ತದೆ ಏಕೆಂದರೆ
ನೀವೆಲ್ಲರೂ ವಧುಗಳಾಗಿದ್ದೀರಿ, ತಂದೆಯು ವರನಾಗಿದ್ದಾರೆ. ನೀವು ಮಕ್ಕಳಿಗೆ ಶೃಂಗಾರ ಮಾಡಿ ವಿಶ್ವದ
ರಾಜ್ಯಭಾಗ್ಯವನ್ನು ಕೈತುಂಬಿ ಕೊಡುತ್ತಾರೆ. ನೀವು ವಿಶ್ವದ ಮಾಲೀಕರಾಗುತ್ತೀರಿ.
ಮುಖ್ಯ ಮಾತು
ನೆನಪಿನದಾಗಿದೆ. ಜ್ಞಾನವು ಬಹಳ ಸಹಜ, ಕೇವಲ ತಂದೆಯನ್ನು ನೆನಪು ಮಾಡುವುದಾಗಿದೆ ಆದರೆ ವಿಚಾರ
ಮಾಡಿದಾಗ ನೆನಪೇ ಬಹಳ ಬೇಗನೆ ಜಾರಿ ಹೋಗುತ್ತದೆ. ಬಹುತೇಕ ಮಂದಿ ಇದನ್ನೇ ಹೇಳುತ್ತಾರೆ - ಬಾಬಾ,
ನೆನಪು ಮರೆತು ಹೋಗುತ್ತದೆ. ನೀವು ಯಾರಿಗಾದರೂ ತಿಳಿಸುವಾಗ ಯಾವಾಗಲೂ ನೆನಪು ಎಂಬ ಶಬ್ಧವನ್ನು
ಹೇಳಿರಿ, ಯೋಗ ಶಬ್ಧವು ತಪ್ಪಾಗಿದೆ. ಹೇಗೆ ಶಿಕ್ಷಕರಿಗೆ ವಿದ್ಯಾರ್ಥಿಗಳ ನೆನಪಿರುತ್ತದೆ. ತಂದೆಯು
ಪರಮ ಆತ್ಮನಾಗಿದ್ದಾರೆ, ನೀವಾತ್ಮಗಳು ಪರಮ ಅರ್ಥಾತ್ ಶ್ರೇಷ್ಠರಲ್ಲ, ನೀವು ಪತಿತರಾಗಿದ್ದೀರಿ
ಆದ್ದರಿಂದ ತಂದೆಯನ್ನು ನೆನಪು ಮಾಡಿ. ತಂದೆ, ಶಿಕ್ಷಕ, ಗುರುವನ್ನು ನೆನಪು ಮಾಡಲಾಗುತ್ತದೆ.
ಗುರುಗಳು ಶಾಸ್ತ್ರಗಳನ್ನು ತಿಳಿಸುತ್ತಾರೆ, ಮಂತ್ರವನ್ನು ಕೊಡುತ್ತಾರೆ. ಆದರೆ ಇಲ್ಲಿ ತಂದೆಯದು
ಒಂದೆ ಮಂತ್ರವಾಗಿದೆ - ಮನ್ಮನಾಭವ. ಮತ್ತೇನಾಗುವುದು? ಮಧ್ಯಾಜೀ ಭವ. ನೀವು ವಿಷ್ಣು ಪುರಿಯಲ್ಲಿ
ಹೊರಟು ಹೋಗುತ್ತೀರಿ, ಎಲ್ಲರೂ ರಾಜ-ರಾಣಿಯರಾಗುವುದಿಲ್ಲ. ರಾಜ, ರಾಣಿ ಮತ್ತು ಪ್ರಜೆಗಳೂ ಇರುತ್ತಾರೆ
ಅಂದಾಗ ಮುಖ್ಯವಾದವರು ತ್ರಿಮೂರ್ತಿಗಳಾಗಿದ್ದಾರೆ. ಶಿವ ತಂದೆಯ ನಂತರ ಬ್ರಹ್ಮಾ, ಇವರೇ ಮನುಷ್ಯ
ಸೃಷ್ಟಿ ಅರ್ಥಾತ್ ಬ್ರಾಹ್ಮಣರನ್ನು ರಚಿಸುತ್ತಾರೆ ಮತ್ತೆ ಬ್ರಾಹ್ಮಣರಿಗೆ ಓದಿಸುತ್ತಾರೆ. ಇದು ಹೊಸ
ಮಾತಲ್ಲವೆ. ನೀವು ಬ್ರಾಹ್ಮಣ-ಬ್ರಾಹ್ಮಿಣಿಯರು ಪರಸ್ಪರ ಸಹೋದರ-ಸಹೋದರಿಯರಾದಿರಿ. ನಾವು
ಸಹೋದರ-ಸಹೋದರಿಯೆಂದು ವೃದ್ಧರೂ ಹೇಳುತ್ತೀರಿ. ಇದು ಆಂತರ್ಯದಲ್ಲಿ ತಿಳಿದುಕೊಳ್ಳುವ ಮಾತುಗಳಾಗಿವೆ.
ಮೇಲೆ ಕೇವಲ ಹೇಳುವ ಮಾತಲ್ಲ, ಭಗವಂತನು ಪ್ರಜಾಪಿತ ಬ್ರಹ್ಮಾರವರ ಮೂಲಕ ಸೃಷ್ಟಿಯನ್ನು ರಚಿಸಿದರು
ಅಂದಮೇಲೆ ಸಹೋದರ-ಸಹೋದರರಾದಿರಲ್ಲವೆ. ಒಬ್ಬ ಪ್ರಜಾಪಿತ ಬ್ರಹ್ಮಾನ ಮಕ್ಕಳೇ ಆಗಿದ್ದೀರಿ, ಇವು
ತಿಳಿದುಕೊಳ್ಳುವ ಮಾತುಗಳಾಗಿವೆ. ಮಕ್ಕಳಿಗೆ ಬಹಳ ಖುಷಿಯಿರಬೇಕು - ನಮಗೆ ಓದಿಸುವವರು ಯಾರು? ಶಿವ
ತಂದೆ, ತ್ರಿಮೂರ್ತಿ ಶಿವ. ಬ್ರಹ್ಮಾನದು ಬಹಳ ಸ್ವಲ್ಪ ಸಮಯದ ಪಾತ್ರವಿದೆ. ಸತ್ಯಯುಗೀ ರಾಜಧಾನಿಯಲ್ಲಿ
ವಿಷ್ಣುವಿನದು 8 ಜನ್ಮಗಳ ಪಾತ್ರವು ನಡೆಯುತ್ತದೆ. ಬ್ರಹ್ಮಾರವರದು ಒಂದೇ ಜನ್ಮದ ಪಾತ್ರವಿದೆ
ಆದ್ದರಿಂದ ವಿಷ್ಣುವಿನ ಪಾತ್ರವು ದೊಡ್ಡದೆಂದು ಹೇಳಲಾಗುತ್ತದೆ. ತ್ರಿಮೂರ್ತಿ ಶಿವನು
ಮುಖ್ಯವಾಗಿದ್ದಾರೆ. ಅವರ ನಂತರ ಬ್ರಹ್ಮಾನ ಪಾತ್ರವು ಬರುತ್ತದೆ. ಇವರು ನೀವು ಮಕ್ಕಳನ್ನು ವಿಷ್ಣು
ಪುರಿಯ ಮಾಲೀಕರನ್ನಾಗಿ ಮಾಡುತ್ತಾರೆ. ಬ್ರಹ್ಮಾನಿಂದ ಬ್ರಾಹ್ಮಣರು ಮತ್ತೆ ನೀವೇ ದೇವತೆಗಳಾಗುತ್ತೀರಿ
ಆದ್ದರಿಂದ ಇವರು ಅಲೌಕಿಕ ತಂದೆಯಾದರು. ಸ್ವಲ್ಪ ಸಮಯಕ್ಕಾಗಿ ಇವರು ತಂದೆಯಾಗಿದ್ದಾರೆ, ಇವರನ್ನು ಈಗ
ಒಪ್ಪುತ್ತೀರಿ. ಆದಿ ದೇವ, ಆದಂ ಮತ್ತು ಬೀಬಿ. ಇವರಿಲ್ಲದೆ ಸೃಷ್ಟಿಯು ಹೇಗೆ ರಚನೆಯಾಗುತ್ತದೆ. ಆದಿ
ದೇವ ಮತ್ತು ಆದಿ ದೇವಿಯಿದ್ದಾರಲ್ಲವೆ. ಬ್ರಹ್ಮನ ಪಾತ್ರವು ಕೇವಲ ಸಂಗಮಯುಗದ ಸಮಯದ್ದಾಗಿದೆ.
ದೇವತೆಗಳ ಪಾತ್ರವಾದರೂ ಬಹಳ ನಡೆಯುತ್ತದೆ. ದೇವತೆಗಳು ಕೇವಲ ಸತ್ಯಯುಗದಲ್ಲಿರುತ್ತಾರೆಂದು
ಹೇಳುತ್ತಾರೆ, ತ್ರೇತಾಯುಗದಲ್ಲಿ ಕ್ಷತ್ರಿಯರೆಂದು ಹೇಳುತ್ತಾರೆ. ನಿಮಗೆ ಬಹಳ ಗುಹ್ಯ-ಗುಹ್ಯವಾದ
ಅಂಶಗಳು ಸಿಗುತ್ತವೆ. ಎಲ್ಲವನ್ನೂ ಒಂದೇ ಸಮಯದಲ್ಲಿ ವರ್ಣನೆ ಮಾಡಲು ಸಾಧ್ಯವಿಲ್ಲ. ಅವರು
ತ್ರಿಮೂರ್ತಿ ಬ್ರಹ್ಮಾನೆಂದು ಹೇಳುತ್ತಾರೆ, ಶಿವನನ್ನು ಹಾರಿಸಿ ಬಿಟ್ಟಿದ್ದಾರೆ ಮತ್ತೆ ತ್ರಿಮೂರ್ತಿ
ಶಿವನೆಂದು ಹೇಳುತ್ತಾರೆ. ತ್ರಿಮೂರ್ತಿ ಬ್ರಹ್ಮಾನೆಂದು ಹೇಳುತ್ತಾರೆಂದರೆ ಅದರಲ್ಲಿ ಬ್ರಹ್ಮಾ,
ವಿಷ್ಣು, ಶಂಕರನು ಬರುತ್ತಾರೆ. ನಾವು ತ್ರಿಮೂರ್ತಿ ಶಿವನೆಂದು ಹೇಳುತ್ತಾರೆ. ಇವೆಲ್ಲವೂ
ಭಕ್ತಿಮಾರ್ಗದ ಚಿತ್ರಗಳಾಗಿವೆ, ಬ್ರಹ್ಮಾರವರ ಮೂಲಕ ಪ್ರಜೆಗಳನ್ನು ರಚಿಸುತ್ತಾರೆ. ಮತ್ತೆ ನೀವು
ದೇವತೆಗಳಾಗುತ್ತೀರಿ, ವಿನಾಶದ ಸಮಯದಲ್ಲಿ ಪ್ರಾಕೃತಿಕ ಆಪತ್ತುಗಳೂ ಬರುತ್ತವೆ. ವಿನಾಶವಂತು
ಆಗಲೇಬೇಕಾಗಿದೆ. ಕಲಿಯುಗದ ನಂತರ ಮತ್ತೆ ಸತ್ಯಯುಗವಾಗುವುದು. ಇಷ್ಟೆಲ್ಲಾ ಶರೀರಗಳ ವಿನಾಶವು
ಆಗಲೇಬೇಕಾಗಿದೆ. ಎಲ್ಲವೂ ಪ್ರತ್ಯಕ್ಷ ರೂಪದಲ್ಲಿ ಆಗಬೇಕಲ್ಲವೆ. ಕೇವಲ ಕಣ್ಣು ತೆರೆದ ತಕ್ಷಣ ಆಗಿ
ಬಿಡುವುದಿಲ್ಲ. ಯಾವಾಗ ಸ್ವರ್ಗವು ಮರೆಯಾಗುವುದೋ ಆ ಸಮಯದಲ್ಲಿಯೂ ಭೂಕಂಪಗಳಾಗುತ್ತವೆ ಅಂದಮೇಲೆ ಆ
ಸಮಯದಲ್ಲಿಯೂ ಶಂಕರನು ಕಣ್ಣನ್ನು ತೆರೆಯುವರೇ? ದ್ವಾರಿಕೆ ಅಥವಾ ಲಂಕೆಯು ನೀರಿನಲ್ಲಿ ಮುಳುಗಿ
ಹೋಯಿತೆಂದು ಹೇಳುತ್ತಾರಲ್ಲವೆ.
ಈಗ ತಂದೆಯು
ತಿಳಿಸುತ್ತಾರೆ - ನಾನು ಕಲ್ಲು ಬುದ್ಧಿಯವರನ್ನು ಪಾರಸ ಬುದ್ಧಿಯವರನ್ನಾಗಿ ಮಾಡಲು ಬಂದಿದ್ದೇನೆ.
ಹೇ ಪತಿತ-ಪಾವನ ಬನ್ನಿ, ಬಂದು ಪಾವನ ಪ್ರಪಂಚವನ್ನು ಸ್ಥಾಪನೆ ಮಾಡಿ ಎಂದು ಮನುಷ್ಯರು ಕರೆಯುತ್ತಾರೆ
ಆದರೆ ಈಗ ಕಲಿಯುಗವಾಗಿದೆ, ಇದರ ನಂತರ ಸತ್ಯಯುಗವು ಬರುವುದೆಂದು ತಿಳಿದುಕೊಂಡಿಲ್ಲ. ನೀವು ಮಕ್ಕಳಂತು
ಖುಷಿಯಲ್ಲಿ ನರ್ತಿಸಬೇಕು. ಹೇಗೆ ವಕೀಲರು ಪರೀಕ್ಷೆಯನ್ನು ತೇರ್ಗಡೆ ಮಾಡುತ್ತಾರೆ. ಒಳಗೆ ವಿಚಾರ
ಮಾಡುತ್ತಾರಲ್ಲವೆ - ನಾವು ಹಣವನ್ನು ಸಂಪಾದಿಸುತ್ತೇವೆ ಮತ್ತು ಮನೆಯನ್ನು ಕಟ್ಟುತ್ತೇವೆ, ಇದು
ಮಾಡುತ್ತೇವೆ ಅಂದಾಗ ನೀವೂ ಸಹ ಈಗ ಸತ್ಯ ಸಂಪಾದನೆ ಮಾಡಿಕೊಳ್ಳುತ್ತೀರಿ. ಸ್ವರ್ಗದಲ್ಲಿ ಎಲ್ಲವೂ
ನಿಮಗೆ ಹೊಸದೇ ಸಿಗುವುದು. ಅಂದಾಗ ವಿಚಾರ ಮಾಡಿ - ಸೋಮನಾಥ ಮಂದಿರವು ಹೇಗಿತ್ತು! ಕೇವಲ ಒಂದೇ
ಮಂದಿರವಿರುವುದಿಲ್ಲ, ಆ ಮಂದಿರಕ್ಕೆ 2500 ವರ್ಷಗಳಾಯಿತು, ಅದನ್ನು ಕಟ್ಟಿಸುವುದರಲ್ಲಿ ಸಮಯವಂತೂ
ತಿಳಿಸಿರುತ್ತದೆ. ಅದಕ್ಕೆ ಪೂಜೆಯೂ ನಡೆಯಿತು ನಂತರ ಅದನ್ನು ಲೂಟಿ ಮಾಡಿ ತೆಗೆದುಕೊಂಡು ಹೋದರು.
ಕಟ್ಟಿಸಿದ ತಕ್ಷಣವೇ ಬಂದಿರುವುದಿಲ್ಲ, ಅದರ ಜೊತೆ ಬಹಳಷ್ಟು ಮಂದಿರಗಳಿರುತ್ತವೆ. ಪೂಜೆಗಾಗಿ
ಮಂದಿರಗಳನ್ನು ಕಟ್ಟಿಸಿದ್ದಾರೆ. ಈಗ ನಿಮಗೆ ತಿಳಿದಿದೆ - ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ
ನಾವು ಸತ್ಯಯುಗದಲ್ಲಿ ಹೊರಟು ಹೋಗುತ್ತೇವೆ, ಆತ್ಮವು ಪವಿತ್ರವಾಗುತ್ತದೆ, ಪರಿಶ್ರಮ ಪಡಬೇಕಾಗುತ್ತದೆ.
ಪರಿಶ್ರಮವಿಲ್ಲದೆ ಕೆಲಸವು ನಡೆಯುವುದಿಲ್ಲ, ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ ಆದರೆ
ಇದು ಸುಮ್ಮನೆ ಸಿಕ್ಕಿ ಬಿಡುವುದಿಲ್ಲ. ಮಕ್ಕಳಾದಾಗ ಅವಶ್ಯವಾಗಿ ಸಿಗುತ್ತದೆಯೆಂದು ಹೇಳಬಹುದು.
ನೀವೀಗ ಮುಕ್ತಿಧಾಮದಲ್ಲಿ ಹೋಗುವುದಕ್ಕಾಗಿ ಪರಿಶ್ರಮ ಪಡುತ್ತಿದ್ದೀರಿ ಅಂದಮೇಲೆ ತಂದೆಯ
ನೆನಪಿನಲ್ಲಿರಬೇಕಾಗಿದೆ. ದಿನ-ಪ್ರತಿದಿನ ತಂದೆಯು ನಿಮ್ಮ ಬುದ್ಧಿಯನ್ನು ಪರಿಶುದ್ಧವನ್ನಾಗಿ
ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮಗೆ ಬಹಳ-ಬಹಳ ಗುಹ್ಯವಾದ ಮಾತುಗಳನ್ನು
ತಿಳಿಸುತ್ತೇನೆ. ಆತ್ಮವು ಬಿಂದುವಾಗಿದೆ, ಪರಮಾತ್ಮನೂ ಬಿಂದುವಾಗಿದ್ದಾರೆ ಎಂಬ ಮಾತನ್ನು ಮೊದಲು
ತಿಳಿಸಿರಲಿಲ್ಲ. ಇದಕ್ಕೆ ತಂದೆಯು ಮೊದಲೇ ಏಕೆ ತಿಳಿಸಿರಲಿಲ್ಲ. ಇದಕ್ಕೆ ತಂದೆಯು ಮೊದಲೇ ಏಕೆ
ತಿಳಿಸಲಿಲ್ಲ ಎಂದು ಹೇಳುತ್ತಾರೆ ಆದರೆ ಇದು ಡ್ರಾಮಾದಲ್ಲಿರಲಿಲ್ಲ, ಮೊದಲೇ ನಿಮಗೆ ತಿಳಿಸಿದರೆ ನೀವು
ತಿಳಿದುಕೊಳ್ಳಲು ಸಾಧ್ಯವಿಲ್ಲ. ನಿಧಾನ-ನಿಧಾನವಾಗಿ ತಿಳಿಸುತ್ತಿರುತ್ತೇನೆ. ಇದು ರಾವಣ
ರಾಜ್ಯವಾಗಿದೆ. ರಾವಣ ರಾಜ್ಯದಲ್ಲಿ ಎಲ್ಲರೂ ದೇಹಾಭಿಮಾನಿಗಳಾಗಿರುತ್ತಾರೆ. ಸತ್ಯಯುಗದಲ್ಲಿ
ಆತ್ಮಾಭಿಮಾನಿಗಳಿರುತ್ತಾರೆ. ತಮ್ಮನ್ನು ಆತ್ಮನೆಂದು ತಿಳಿದುಕೊಂಡಿರುತ್ತಾರೆ. ನನ್ನ ಶರೀರವು
ದೊಡ್ಡದಾಯಿತು, ಈಗ ಇದನ್ನು ಬಿಟ್ಟು ಇನ್ನೊಂದು ಚಿಕ್ಕ ಶರೀರವನ್ನು ತೆಗೆದುಕೊಳ್ಳಬೇಕೆಂದು
ತಿಳಿಯುತ್ತಾರೆ. ಆತ್ಮದ ಶರೀರವು ಮೊದಲು ಚಿಕ್ಕದಾಗಿರುತ್ತದೆ ನಂತರ ದೊಡ್ಡದಾಗುತ್ತಾ ಹೋಗುತ್ತದೆ.
ಇಲ್ಲಂತೂ ಕೆಲಕೆಲವರದು ಸ್ವಲ್ಪ ಆಯಸ್ಸಿರುತ್ತದೆ. ಇನ್ನೂ ಕೆಲವರದು ಅಕಾಲಮೃತ್ಯುವಾಗುತ್ತದೆ.
ಕೆಲವರಿಗೆ 125 ವರ್ಷಗಳೂ ಆಯಸ್ಸಿರುತ್ತದೆ. ಅಂದಾಗ ತಂದೆಯು ತಿಳಿಸುತ್ತಾರೆ - ನಿಮಗೆ ತಂದೆಯಿಂದ
ಆಸ್ತಿಯನ್ನು ತೆಗೆದುಕೊಳ್ಳುವ ಬಹಳ ಖುಷಿಯಿರಬೇಕು, ಗಂಧರ್ವ ವಿವಾಹ ಮಾಡಿಕೊಂಡರೆ ಇದೇನು ಖುಷಿಯ
ಮಾತಲ್ಲ, ಇದು ನಿರ್ಬಲತೆಯ ಮಾತಾಗಿದೆ. ಒಂದುವೇಳೆ ನಾನು ಪವಿತ್ರವಾಗಿರಲು ಇಚ್ಛಿಸುತ್ತೇನೆಂದು
ಕುಮಾರಿಯು ಹೇಳಿದರೆ ಅವಳನ್ನು ಸಾಯಿಸುತ್ತಾರೆಯೇ? ಜ್ಞಾನವು ಕಡಿಮೆಯಿದ್ದಾಗ ಹೀಗೆ ಹೆದರುತ್ತಾರೆ.
ಚಿಕ್ಕ ಕುಮಾರಿಯನ್ನು ಒಂದುವೇಳೆ ಯಾರಾದರೂ ಹೊಡೆದು ರಕ್ತವು ಬಂದರೆ ಪೋಲಿಸರಿಗೆ ರಿಪೋರ್ಟ್
ಮಾಡಿದಾಗ ಅದಕ್ಕೂ ಶಿಕ್ಷೆಯು ಸಿಗುತ್ತದೆ. ಒಂದುವೇಳೆ ಪ್ರಾಣಿಗಳನ್ನೂ ಸಹ ಯಾರಾದರೂ ಹೊಡೆದರೆ ಅವರ
ಮೇಲೆ ಕೇಸ್ ಆಗುತ್ತದೆ, ಶಿಕ್ಷೆಗಳನ್ನು ವಿಧಿಸುತ್ತಾರೆ. ನೀವು ಮಕ್ಕಳನ್ನೂ ಸಹ ಹೊಡೆಯಲು
ಸಾಧ್ಯವಿಲ್ಲ. ಕುಮಾರಿಯನ್ನೂ ಹೊಡೆಯುವಂತಿಲ್ಲ, ಅವರು ತಮಗಾಗಿ ಸಂಪಾದನೆ ಮಾಡಿಕೊಳ್ಳಬಲ್ಲರು. ಶರೀರ
ನಿರ್ವಹಣೆ ಮಾಡಿಕೊಳ್ಳಬಹುದು. ಹೊಟ್ಟೆಯೇನೂ ಹೆಚ್ಚು ಕೇಳುವುದಿಲ್ಲ. ಒಬ್ಬ ಮನುಷ್ಯನ ಹೊಟ್ಟೆಯು
ನಾಲ್ಕೈದು ರೂಪಾಯಿ, ಇನ್ನೊಬ್ಬ ಮನುಷ್ಯನ ಹೊಟ್ಟೆ 400-500 ರೂಪಾಯಿಯನ್ನು ಖರ್ಚು ಮಾಡುತ್ತದೆ.
ಬಹಳ ಹಣವಿದ್ದರೆ ಲೋಭವುಂಟಾಗಿ ಬಿಡುತ್ತದೆ. ಬಡವರಿಗೆ ಹಣವೇ ಇರುವುದಿಲ್ಲ ಆದ್ದರಿಂದ ಲೋಭವೂ ಇಲ್ಲ.
ಅವರು ಒಣ ರೊಟ್ಟಿಯಲ್ಲಿಯೇ ಖುಷಿ ಪಡುತ್ತಾರೆ. ಮಕ್ಕಳು ಹೆಚ್ಚು ಆಹಾರ-ಪಾನೀಯಗಳ ಜಂಜಾಟದಲ್ಲಿ
ಹೋಗಬಾರದು. ತಿನ್ನುವ ಆಸಕ್ತಿಯಿರಬಾರದು.
ನಿಮಗೆ ತಿಳಿದಿದೆ -
ಅಲ್ಲಿ ನಿಮಗೆ ಏನು ತಾನೆ ಸಿಗುವುದಿಲ್ಲ! ಬೇಹದ್ದಿನ ರಾಜ್ಯಭಾಗ್ಯ, ಬೇಹದ್ದಿನ ಸುಖವು ಸಿಗುತ್ತದೆ.
ಅಲ್ಲಿ ಯಾವುದೇ ರೋಗವಿರುವುದಿಲ್ಲ. ಸುಖ, ಶಾಂತಿ, ಖುಷಿ ಎಲ್ಲವೂ ಇರುತ್ತದೆ. ಅಲ್ಲಿ ವೃದ್ಧಾಪ್ಯವೂ
ಸಹ ಬಹಳ ಚೆನ್ನಾಗಿರುತ್ತದೆ, ಖುಷಿಯಿರುತ್ತದೆ. ಯಾವುದೇ ಪ್ರಕಾರದ ಕಷ್ಟವಿರುವುದಿಲ್ಲ. ಪ್ರಜೆಗಳೂ
ಸಹ ಅದೇ ರೀತಿಯಿರುತ್ತಾರೆ. ಆದರೆ ಪ್ರಜೆಗಳಾದರೂ ಸರಿ ಎಂದು ತಿಳಿಯುವುದಲ್ಲ. ಹೀಗೆ ತಿಳಿಯುವವರಿಗೆ
ಕಾಡು ಜನರೆಂದು ಹೇಳಲಾಗುತ್ತದೆ. ಸೂರ್ಯವಂಶಿ ಲಕ್ಷ್ಮೀ-ನಾರಾಯಣರಾಗಬೇಕೆಂದರೆ ಅಷ್ಟು
ಪುರುಷಾರ್ಥವನ್ನು ಮಾಡಬೇಕಾಗುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಾವು
ಬ್ರಹ್ಮಾನ ಹೊಸ ರಚನೆ ಪರಸ್ಪರ ಸಹೋದರ-ಸಹೋದರಿಯರಾಗಿದ್ದೇವೆ. ಇದನ್ನು ಕೇವಲ ಆಂತರ್ಯದಲ್ಲಿ
ತಿಳಿದುಕೊಳ್ಳಬೇಕು. ಯಾರಿಗೂ ಹೇಳುವ ಅವಶ್ಯಕತೆಯಿಲ್ಲ. ಸದಾ ಇದೇ ಖುಷಿಯಲ್ಲಿರಿ - ನಮಗೆ ಶಿವ
ತಂದೆಯು ಓದಿಸುತ್ತಾರೆ.
2. ಆಹಾರ-ಪಾನೀಯಗಳ
ಜಂಜಾಟದಲ್ಲಿ ಹೆಚ್ಚು ಹೋಗಬಾರದು. ಲೋಭವನ್ನು ಬಿಟ್ಟು ಬೇಹದ್ದಿನ ರಾಜ್ಯಭಾಗ್ಯದ ಸುಖವನ್ನು ನೆನಪು
ಮಾಡಬೇಕಾಗಿದೆ.
ವರದಾನ:
ಅನೇಕ ಪ್ರಕಾರದ
ಪ್ರವೃತ್ತಿಯಿಂದ ನಿವೃತ್ತಿಯಾಗುವಂತಹ ನಷ್ಠಾಮೋಹ ಸ್ಮತಿ ಸ್ವರೂಪ ಭವ.
ಸ್ವಯಂನ ಪ್ರವೃತ್ತಿ,
ದೈವೀ ಪರಿವಾರದ ಪ್ರವೃತ್ತಿ, ಸೇವೆಯ ಪ್ರವೃತ್ತಿ, ಹದ್ಧಿನ ಪ್ರಾಪ್ತಿಗಳ ಪ್ರವೃತ್ತಿ ಈ ಎಲ್ಲದರಿಂದ
ನಷ್ಠಮೋಹ ಅರ್ಥಾತ್ ನ್ಯಾರಾ ಆಗುವುದಕ್ಕಾಗಿ ಬಾಪ್ದಾದಾರವರ ಸ್ನೇಹ ರೂಪವನ್ನು ಎದುರಿಗೆ ಇಟ್ಟುಕೊಂಡು
ಸ್ಮತಿ ಸ್ವರೂಪರಾಗಿ. ಸ್ಮತಿ ಸ್ವರೂಪರಾಗುವುದರಿಂದ ನಷ್ಠಾಮೋಹ ಸ್ವತಃವಾಗಿ ಆಗಿ ಬಿಡುವಿರಿ.
ಪ್ರವೃತ್ತಿಯಿಂದ ನಿವೃತ್ತರಾಗುವುದು ಅರ್ಥಾತ್ ನನ್ನತನವನ್ನು ಸಮಾಪ್ತಿ ಮಾಡಿ ನಷ್ಠಾಮೋಹ ಆಗುವುದು.
ಈ ರೀತಿಯ ನಷ್ಠಾಮೋಹ ಆಗುವ ಮಕ್ಕಳು ಬಹಳ ಕಾಲದ ಪುರುಷಾರ್ಥದಿಂದ ಬಹಳ ಕಾಲದ ಪ್ರಾಲಭ್ಧದ ಪ್ರಾಪ್ತಿಯ
ಅಧಿಕಾರಿ ಆಗುವರು.
ಸ್ಲೋಗನ್:
ಕಮಲದ ಹೂವಿನ
ಹಾಗೆ ಭಿನ್ನರಾಗಿ ಆಗ ಪ್ರಭುವಿನ ಪ್ರೀತಿ ಸಿಗುತ್ತಿರುವುದು.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.ಯಾರು ನಂಬರ್ ಒನ್ ಪತಂಗಗಳಿರುತ್ತಾರೆ
ಅವರಿಗೆ ಸ್ವಯಂನ ಅರ್ಥಾತ್ ಈ ದೇಹ ಭಾನದ, ಹಗಲು-ರಾತ್ರಿಯ, ಹಸಿವು ಮತ್ತು ಬಾಯಾರಿಕೆಯ, ತಮ್ಮ ಸುಖದ
ಸಾಧನೆಗಳ, ಯಾವುದೇ ಮಾತಿನ ಆಧಾರವಿಲ್ಲ. ಅವರು ಎಲ್ಲಾ ಪ್ರಕಾರದ ದೇಹದ ಸ್ಮೃತಿಗಳನ್ನು ಮರೆತು
ನಿರಂತರ ಪರಂಜ್ಯೋತಿಯ ಪ್ರೀತಿಯಲ್ಲಿ ಲವಲೀನರಾಗಿರುತ್ತಾರೆ. ಹೇಗೆ ತಂದೆ ಜ್ಯೋತಿ
ಸ್ವರೂಪರಾಗಿದ್ದಾರೆ, ಲೈಟ್ ಮೈಟ್ ರೂಪರಾಗಿದ್ದಾರೆ, ಹಾಗೆಯೇ ತಂದೆಯ ಸಮಾನ ಸ್ವಯಂ ಲೈಟ್-ಮೈಟ್
ರೂಪರಾಗಿ ಬಿಡುತ್ತಾರೆ.