21.01.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ಒಬ್ಬ ತಂದೆಯ ನೆನಪಿನಿಂದ ನೀವು ಸುಪ್ರೀಮ್ ಆಗಬೇಕಾದರೆ ಅಪ್ಪಿ-ತಪ್ಪಿಯೂ ಸಹ ಬೇರೆ ಯಾರನ್ನೂ ನೆನಪು ಮಾಡಬಾರದು”

ಪ್ರಶ್ನೆ:
ತಂದೆಯಿಂದ ಯಾವ ಭರವಸೆಯನ್ನಿಟ್ಟುಕೊಳ್ಳದೇ, ಕೃಪೆಯನ್ನು ಬೇಡುವ ಬದಲು, ತಮ್ಮ ಪರಿಶ್ರಮ ಪಡಬೇಕು?

ಉತ್ತರ:
ಹಳೆಯ ಶರೀರದ ಯಾವುದೇ ಕರ್ಮ ಭೋಗ, ದಿವಾಳಿಯಾಗುವುದು ಅಥವಾ ರೋಗಿಯಾಗುವುದು, ಅಂದಾಗ ತಂದೆಯು ಹೇಳುತ್ತಾರೆ ಇದಂತು ತಮ್ಮದೇ ಆದಂತಹ ಲೆಕ್ಕಾಚಾರವಾಗಿದೆ, ಇದರಲ್ಲಿ ತಂದೆಯು ಯಾವುದಾದರೂ ಕೃಪೆ ಮಾಡಿ ಎಂದು ಭರವಸೆಯಿಟ್ಟುಕೊಳ್ಳಬೇಡಿ. ತಮ್ಮ ಪರಿಶ್ರಮ ಪಟ್ಟು ಯೋಗ ಬಲದಿಂದ ಕೆಲಸ ತೆಗೆದುಕೊಳ್ಳಿ, ನೆನಪಿನಿಂದಲೇ ಆಯಸ್ಸು ಹೆಚ್ಚಾಗುತ್ತದೆ. ಕರ್ಮ ಭೋಗವು ಸಮಾಪ್ತಿಯಾಗುತ್ತದೆ. ತಂದೆಯು ಪ್ರಾಣಕ್ಕಿಂತಲೂ ಪ್ರಿಯರಾಗಿದ್ದಾರೆ, ಅವರಿಂದ ಎಷ್ಟು ಪ್ರೀತಿಯಿದೆ ಅಷ್ಟು ನೆನಪು ಇರುತ್ತದೆ ಮತ್ತು ಕಲ್ಯಾಣವಾಗುತ್ತಾ ಹೋಗುತ್ತದೆ.

ಓಂ ಶಾಂತಿ.
ಬೇಹದ್ದಿನ ತಂದೆ ಕುಳಿತು ಮಕ್ಕಳಿಗೆ ತಿಳುವಳಿಕೆ ನೀಡುತ್ತಿದ್ದಾರೆ - ಮಧುರ ಮಕ್ಕಳೇ ನಿಮ್ಮನ್ನು ಆತ್ಮ ಎಂದು ತಿಳಿದು ನಾನು ತಂದೆಯನ್ನು ನೆನಪು ಮಾಡಿ ಮತ್ತು ನಿಮ್ಮ ಮನೆಯನ್ನು ನೆನಪು ಮಾಡಿ ಅದಕ್ಕೆ ಹೇಳಲಾಗುವುದು ಟವರ್ ಆಫ್ ಸೈಲೆನ್ಸ್ (ಶಾಂತಿ ಸ್ತಂಭ). ಟವರ್ ಆಫ್ ಸುಖ. ಟವರ್ ಎಂದರೆ ಬಹಳ ಎತ್ತರದಲ್ಲಿರುತ್ತದೆ. ನೀವು ಅಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿರುವಿರಿ. ಎತ್ತರದಲ್ಲಿ ಎತ್ತರ ಟವರ್ ಆಫ್ ಸೈಲೆನ್ಸ್ ಮೇಲೆ ನೀವು ಹೇಗೆ ಹೋಗಲು ಸಾಧ್ಯ, ಇಲ್ಲಿಯೂ ಸಹ ಟವರ್ನಲ್ಲಿ ವಾಸಿಸುವ ತಂದೆ ಕುಳಿತು ಕಲಿಸುತ್ತಿದ್ದಾರೆ, ಮಕ್ಕಳೇ, ನಿಮ್ಮನ್ನು ಆತ್ಮ ಎಂದು ತಿಳಿಯಿರಿ. ನಾವು ಆತ್ಮಗಳು ಶಾಂತಿಧಾಮದ ನಿವಾಸಿಗಳು. ಅದಾಗಿದೆ ತಂದೆಯ ಮನೆ. ಇದಕ್ಕೆ ನಡೆಯುತ್ತಾ ತಿರುಗಾಡುತ್ತಾ ಅಭ್ಯಾಸ ಮಾಡಬೇಕು. ನಿಮ್ಮನ್ನು ಆತ್ಮ ಎಂದು ತಿಳಿದುಕೊಳ್ಳಿ ಮತ್ತು ಶಾಂತಿಧಾಮ, ಸುಖಧಾಮವನ್ನು ಸೆನಪು ಮಾಡಿ. ತಂದೆಗೆ ಗೊತ್ತಿದೆ ಇದರಲ್ಲೇ ಪರಿಶ್ರಮವಿದೆ ಎಂದು. ಯಾರು ಆತ್ಮ ಅಭಿಮಾನಿಯಾಗಿರುತ್ತಾರೆ ಅವರಿಗೆ ಹೇಳಲಾಗುವುದು ಮಹಾವೀರ. ನೆನಪಿನಿಂದಲೇ ನೀವು ಮಹಾವೀರ, ಸುಪ್ರೀಮ್ ಆಗುವಿರಿ. ಸುಪ್ರೀಮ್ ಅರ್ಥಾತ್ ಶಕ್ತಿಶಾಲಿ.

ಮಕ್ಕಳಿಗೆ ಖುಷಿಯಾಗಬೇಕು-ಸ್ವರ್ಗದ ಮಾಲೀಕರನ್ನಾಗಿ ಮಾಡುವಂತಹ ಬಾಬಾ, ವಿಶ್ವದ ಮಾಲೀಕರನ್ನಾಗಿ ಮಾಡುವಂತಹ ಬಾಬಾ ನಮಗೆ ಓದಿಸುತ್ತಿದ್ದಾರೆ. ಆತ್ಮದ ಬುದ್ಧಿ ತಂದೆಯ ಕಡೆ ಹೋಗಿ ಬಿಡುವುದು. ಇದಾಗಿದೆ-ಆತ್ಮನ ಪ್ರೀತಿ ಒಬ್ಬ ತಂದೆಯ ಜೊತೆ. ಬೆಳ್ಳಿಗ್ಗೆ-ಬೆಳ್ಳಿಗ್ಗೆ ಎದ್ದು ಬಾಬಾರವರ ಜೊತೆ ಮಧುರ ವಾರ್ತಾಲಾಪ ಮಾಡಿ. ಬಾಬಾ ನಿಮ್ಮದು ಚಮತ್ಕಾರವಾಗಿದೆ, ನಮ್ಮ ಸ್ವಪ್ನದಲ್ಲೇ ಇರಲಿಲ್ಲ ನೀವು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುವಿರೆಂದು. ಬಾಬಾ ನಾವು ನಿಮ್ಮ ಶಿಕ್ಷಣದ ಮೇಲೆ ಖಂಡಿತ ನಡೆಯುತ್ತೇವೆ. ಯಾವುದೇ ಪಾಪದ ಕೆಲಸ ಮಾಡುವುದಿಲ್ಲ. ಬಾಬಾನ ತರಹ ಪುರುಷಾರ್ಥ ಮಾಡುತ್ತೇವೆ, ಮಕ್ಕಳಿಗೂ ಸಹ ಹೇಳುತ್ತೇವೆ. ಶಿವಬಾಬಾನಿಗೆ ಎಷೋಂದು ಮಕ್ಕಳಿದ್ದಾರೆ, ಖಾಳಜಿಯಂತೂ ಇರುವುದಲ್ಲವೆ, ಎಷ್ಟು ಮಕ್ಕಳ ಸಂಭಾಲನೆಯಾಗುತ್ತದೆ, ಇಲ್ಲಿ ನೀವು ಈಶ್ವರೀಯ ಪರಿವಾರದಲ್ಲಿ ಕುಳಿತಿರುವಿರಿ. ತಂದೆ ಸಮ್ಮುಖದಲ್ಲಿ ಕುಳಿತಿದ್ದಾರೆ. ನಿಮ್ಮ ಜೊತೆಯಲ್ಲೇ ತಿನ್ನುವೆವು, ನಿಮ್ಮ ಜೊತೆಯಲ್ಲೇ ಕುಳಿತುಕೊಳ್ಳುವೆವು..... ನೀವು ತಿಳಿದಿರುವಿರಿ ಶಿವ ಬಾಬಾ ಇವರಲ್ಲಿ ಬಂದು ಹೇಳುತ್ತಾರೆ-ಮಧುರ ಮಕ್ಕಳೇ ಮಾಮೇಕಮ್ ಯಾದ್ ಕರೋ (ನನ್ನೊಬ್ಬನನ್ನೇ ನೆನಪು ಮಾಡಿ). ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನೂ ಮರೆತು ಬಿಡಿ. ಇದು ಅಂತಿಮ ಜನ್ಮವಾಗಿದೆ. ಈ ಹಳೆಯ ಜಗತ್ತು, ಹಳೆಯ ದೇಹ ಸಮಾಪ್ತಿಯಾಗುವುದಿದೆ. ಗಾಧೆ ಮಾತೂ ಇದೆ ನೀವು ಸತ್ತರೆ ನಿಮ್ಮ ಪಾಲಿಗೆ ಜಗತ್ತೇ ಸತ್ತ ಹಾಗೆ ಎಂದು. ಪುರುಷಾರ್ಥಕ್ಕಾಗಿ ಸಂಗಮಯುಗದ ಸ್ವಲ್ಪವೇ ಸಮಯ ಬಾಕಿಯಿದೆ. ಮಕ್ಕಳು ಕೇಳುತ್ತಾರೆ ಈ ವಿದ್ಯೆ ಎಲ್ಲಿಯವರೆಗೆ ನಡೆಯುತ್ತೆ? ಎಂದು. ಎಲ್ಲಿಯವರೆಗೆ ದೈವಿ ರಾಜಧಾನಿ ಸ್ಥಾಪನೆಯಾಗುವುದು ಅಲ್ಲಿಯವರೆಗೆ ನಿಮಗೆ ಹೇಳುತ್ತಲೇ ಇರುವೆನು. ನಂತರ ಟ್ರಾನ್ಸ್ಫರ್ ಆಗುವುದು ಹೊಸ ಪ್ರಪಂಚಕ್ಕೆ. ಇದು ಹಳೆಯ ಶರೀರವಾಗಿದೆ, ಏನಾದರೂ ಒಂದು ಕರ್ಮ ಭೋಗ ನಡೆಯುತ್ತಾ ಇರುತ್ತದೆ. ಇದರಲ್ಲಿ ಬಾಬಾ ಸಹಾಯ ಮಾಡುತ್ತಾರೆ ಎನ್ನುವ ಭರವಸೆ ಇಟ್ಟುಕೊಳ್ಳಬೇಡಿ. ದೀವಾಳಿ ಆಯಿತು, ಖಾಯಿಲೆ ಆಯಿತು-ತಂದೆ ಹೇಳುತ್ತಾರೆ ಇದು ನಿಮ್ಮ ಲೆಕ್ಕಾಚಾರವಾಗಿದೆ. ಹಾ! ಆದರೂ ಯೋಗದಿಂದ ಆಯಸ್ಸು ವೃದ್ಧಿಯಾಗುವುದು. ನೀವು ನಿಮ್ಮ ಪರಿಶ್ರಮ ಪಡಿ, ಕೃಪೆ ಬೇಡ ಬೇಡಿ. ತಂದೆಯನ್ನು ಎಷ್ಟು ನೆನಪು ಮಾಡುವಿರಿ ಅದರಲ್ಲೆ ಕಲ್ಯಾಣವಿದೆ. ಎಷ್ಟು ಸಾಧ್ಯವೋ ಅಷ್ಟು ಯೋಗಬಲದಿಂದ ಕೆಲಸ ತೆಗೆದುಕೊಳ್ಳಿ. ಹಾಡುವಿರಲ್ಲವೆ-ನನ್ನನ್ನು ಕಣ್ಣಿನ ರೆಪ್ಪೆಗಳಲ್ಲಿ ಮುಚ್ಚಿಟ್ಟುಕೊಳ್ಳಿ..... ಪ್ರಿಯ ವಸ್ತುವನ್ನು ಕಣ್ಮಣಿ, ಪ್ರಾಣ ಪ್ರೀಯ ಎಂದು ಹೇಳುತ್ತಾರೆ. ಈ ತಂದೆಯಂತೂ ಬಹಳ ಪ್ರಿಯರಾಗಿದ್ದಾರೆ, ಆದರೆ ಗುಪ್ತ. ಅವರ ಮೇಲೆ ಪ್ರೀತಿ ಹೀಗೆ ಇರಬೇಕು ಅದರ ಮಾತೇ ಕೇಳಬೇಡಿ. ಮಕ್ಕಳಿಗಂತೂ ತಂದೆಯನ್ನು ಕಣ್ಣಿನ ರೆಪ್ಪೆಯಲ್ಲಿ ಮುಚ್ಚಿಕೊಳ್ಳಬೇಕು. ರೆಪ್ಪೆಗಳೆಂದರೆ ಈ ಕಣ್ಣುಗಳಲ್ಲ. ಅದಂತೂ ಬುದ್ಧಿಯಲ್ಲಿ ನೆನಪಿಡಬೇಕು. ಅತೀ ಪ್ರೀತಿಯ ನಿರಾಕಾರ ತಂದೆ ನಮಗೆ ಓದಿಸುತ್ತಿದ್ದಾರೆ. ಅವರು ಜ್ಞಾನ ಸಾಗರ, ಸುಖ ಸಾಗರ, ಪ್ರೀತಿಯ ಸಾಗರ ಆಗಿದ್ದಾರೆ. ಈ ರೀತಿಯ ಅತೀ ಪ್ರಿಯ ತಂದೆಯ ಜೊತೆ ಎಷ್ಟು ಪ್ರೀತಿಯಿಂದಿರಬೇಕು. ಮಕ್ಕಳಿಗೆ ಎಷ್ಟೋಂದು ಸ್ವಾರ್ಥ ರಹಿತ ಸೇವೆ ಮಾಡುತ್ತಾರೆ. ಪತಿತ ಶರೀರದಲ್ಲಿ ಬಂದು ಮಕ್ಕಳನ್ನು ವಜ್ರ ಸಮಾನ ಮಾಡುತ್ತಾರೆ. ಎಷ್ಟು ಮಧುರ ಬಾಬಾ ಆಗಿದ್ದಾರೆ. ಆದ್ದರಿಂದ ಮಕ್ಕಳೂ ಸಹ ಅಷ್ಟು ಮಧುರರಾಗಬೇಕು. ಬಾಬಾ ನೀವು ಎಷ್ಟು ನಿರಹಂಕಾರಿಯಾಗಿ ಮಕ್ಕಳ ಸೇವೆ ಮಾಡುವಿರಿ, ಆದ್ದರಿಂದ ನೀವು ಮಕ್ಕಳೂ ಸಹ ಅಷ್ಟು ಸೇವೆ ಮಾಡಬೇಕು. ಶ್ರೀಮತದ ಮೇಲೆ ನಡೆಯಬೇಕು. ಎಲ್ಲಾದರೂ ನಿಮ್ಮ ಮತದಂತೆ ನಡೆದರೆ ನಿಮ್ಮ ಅದೃಷ್ಟಕ್ಕೆ ಬರೆ ಎಳೆದುಕೊಂಡು ಬಿಡುವಿರಿ. ನೀವು ಬ್ರಾಹ್ಮಣರು ಈಶ್ವರೀಯ ಸಂತಾನರಾಗಿರುವಿರಿ. ಬ್ರಹ್ಮಾರವರ ಸಂತಾನ ಸಹೋದರ-ಸಹೋದರಿ ಆಗಿರುವಿರಿ. ಈಶ್ವರೀಯ ಮೊಮ್ಮಗ-ಮೊಮ್ಮಗಳು ಆಗಿರುವಿರಿ. ಅವರಿಂದ ಆಸ್ತಿ ಪಡೆಯುತ್ತಿರುವಿರಿ. ಎಷ್ಟು ಪುರುಷಾರ್ಥ ಮಾಡುವಿರಿ ಅಷ್ಟು ಪದವಿಯನ್ನು ಪಡೆಯುವಿರಿ. ಇದರಲ್ಲಿ ಸಾಕ್ಷಿಯಾಗಿರುವುದಕ್ಕೂ ಸಹ ಬಹಳ ಅಭ್ಯಾಸ ಬೇಕು. ಬಾಬಾ ಹೇಳುತ್ತಾರೆ, ಮಧುರ ಮಕ್ಕಳೇ, ಹೇ ಆತ್ಮರೇ ಮಾಮೇಕಮ್ ಯಾದ್ ಕರೊ (ನನ್ನೊಬ್ಬನನ್ನೇ ನೆನಪು ಮಾಡಿ). ಅಪ್ಪಿ ತಪ್ಪಿಯೂ ಸಹ ತಂದೆಯ ವಿನಹ ಬೇರೆಯಾರನ್ನೂ ನೆನಪು ಮಾಡಬೇಡಿ. ನಿಮ್ಮ ಪ್ರತಿಜ್ಞೆಯಾಗಿದೆ ಬಾಬಾ ನನಗಂತೂ ನೀವೊಬ್ಬರೇ ಆಗಿರುವಿರಿ. ನಾವು ಆತ್ಮ ಆಗಿದ್ದೇವೆ, ನೀವು ಪರಮಾತ್ಮ ಆಗಿರುವಿರಿ, ನಿಮ್ಮಿಂದಲೇ ಆಸ್ತಿಯನ್ನು ಪಡೆಯಬೇಕು. ನಿಮ್ಮಿಂದಲೆ ರಾಜಯೋಗವನ್ನು ಕಲಿಯುತ್ತಿದ್ದೇವೆ, ಯಾವುದರಿಂದ ರಾಜ್ಯ-ಭಾಗ್ಯ ಪಡೆಯುತ್ತೇವೆ.

ಮಧುರ ಮಕ್ಕಳೇ, ನೀವು ತಿಳಿದಿರುವಿರಿ ಇದು ಅನಾದಿ ಡ್ರಾಮ ಆಗಿದೆ. ಇದರಲ್ಲಿ ಸೋಲು ಗೆಲುವಿನ ಆಟ ನಡೆಯುತ್ತಿರುತ್ತದೆ. ಏನಾಗುತ್ತಿದೆ ಅದು ಸರಿಯಾಗಿದೆ. ರಚೈತನಿಗೆ ಡ್ರಾಮ ಖಂಡಿತ ಇಷ್ಟವಾಗಿರುವುದಲ್ಲವೇ, ಆದ್ದರಿಂದ ರಚೈತನ ಮಕ್ಕಳಿಗೂ ಸಹ ಇಷ್ಟವಾಗಬೇಕು. ಈ ಡ್ರಾಮದಲ್ಲಿ ತಂದೆ ಒಂದೇ ಬಾರಿ ಮಕ್ಕಳ ಬಳಿ ಮಕ್ಕಳಿಗೆ ಹೃದಯ ಪೂರ್ವಕವಾದ ಪ್ರೀತಿಯಿಂದ ಸೇವೆ ಮಾಡಲು ಬರುತ್ತಾರೆ. ತಂದೆಗಂತೂ ಎಲ್ಲಾ ಮಕ್ಕಳ ಮೇಲೆ ಪ್ರೀತಿಯಿದೆ. ನೀವು ತಿಳಿದಿರುವಿರಿ ಸತ್ಯಯುಗದಲ್ಲಿಯೂ ಸಹ ಎಲ್ಲರೂ ಒಬ್ಬರು ಇನ್ನೊಬ್ಬರನ್ನು ಬಹಳ ಪ್ರೀತಿ ಮಾಡುತ್ತಾರೆ. ಪ್ರಾಣಿಗಳಲ್ಲಿಯೂ ಸಹ ಪ್ರೀತಿಯಿರುತ್ತದೆ. ಈ ರೀತಿ ಯಾವುದೇ ಪ್ರಾಣಿಗಳಿರುವುದಿಲ್ಲ ಯಾವುದು ಪ್ರೀತಿಯಿಂದ ಇಲ್ಲದೇ ಇರುವುದು. ಆದ್ದರಿಂದ ನೀವು ಮಕ್ಕಳು ಇಲ್ಲಿ ಮಾಸ್ಟರ್ ಪ್ರೀತಿಯ ಸಾಗರರಾಗಬೇಕು. ಇಲ್ಲಿ ಆದಾಗ ಅಲ್ಲಿ ಸಂಸ್ಕಾರ ಅವಿನಾಶಿಯಾಗಿ ಬಿಡುವುದು. ತಂದೆ ಹೇಳುತ್ತಾರೆ ಕಲ್ಪದ ಹಿಂದಿನಂತೆ ಪುನಃ ಪ್ರಿಯರನ್ನಾಗಿ ಮಾಡಲು ಬಂದಿರುವೆನು. ಎಂದಾದರೂ ಯಾವುದೇ ಮಕ್ಕಳು ಕೋಪದಿಂದ ಕೂಗಾಡುವುದನ್ನು ಕೇಳಿದರೆ ತಂದೆ ಶಿಕ್ಷಣ ಕೊಡುತ್ತಾರೆ ಮಗು, ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ, ಇದರಿಂದ ನೀನು ದುಃಖಿಯಾಗುವೆ ಬೇರೆಯವರನ್ನೂ ಸಹ ದುಃಖಿಗಳನ್ನಾಗಿ ಮಾಡುವೆ. ತಂದೆ ಸದಾ ಕಾಲಕ್ಕೆ ಸುಖವನ್ನು ಕೊಡುವವರಾಗಿದ್ದಾರೆ ಆದ್ದರಿಂದ ಮಕ್ಕಳಿಗೂ ಸಹ ತಂದೆ ಸಮಾನರಾಗಬೇಕು. ಒಬ್ಬರಿನ್ನೊಬ್ಬರಿಗೆ ಎಂದೂ ದುಃಖವನ್ನು ಕೊಡಬಾರದು.

ನೀವು ಮಕ್ಕಳು ತಿಳಿದುಕೊಂಡಿರುವಿರಿ ಶಿವ ಬಾಬಾ ಆಗಿದ್ದಾರೆ ಬೆಳಗಿನ ಸ್ವಾಮಿ (ಸುಬೋಕ ಸಾಯಿ)..... ರಾತ್ರಿಯನ್ನು ಹಗಲು ಮಾಡುವಂತಹವರಾಗಿದ್ದಾರೆ. ಸಾಯಿ ಎಂದು ಬೇಹದ್ದಿನ ತಂದೆಗೆ ಹೇಳಲಾಗುವುದು. ಅವರೊಬ್ಬರೇ ಸಾಯಿ ಬಾಬಾ ಆಗಿದ್ದಾರೆ. ಹೆಸರೇ ಆಗಿದೆ ಭೋಲಾನಾಥ. ಭೋಲಿ-ಭೋಲಿ ಕನ್ಯೆಯರು, ಮಾತೆಯರ ಮೇಲೆ ಜ್ಞಾನದ ಕಳಸ ಇಡುತ್ತಾರೆ. ಅವರನ್ನೇ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಎಷ್ಟು ಸಹಜ ಉಪಾಯ ತಿಳಿಸುತ್ತಾರೆ. ಎಷ್ಟು ಪ್ರೀತಿಯಿಂದ ನಿಮ್ಮನ್ನು ಜ್ಞಾನದಿಂದ ಪಾಲನೆ ಮಾಡುತ್ತಾರೆ. ಆತ್ಮನನ್ನು ಪಾವನ ಮಾಡಲು ನೆನಪಿನ ಯಾತ್ರೆಯಲ್ಲಿರಿ. ಯೋಗದ ಸ್ನಾನ ಮಾಡಬೇಕು. ಜ್ಞಾನ ಆಗಿದೆ ವಿದ್ಯೆ, ಯೋಗ ಸ್ನಾನದಿಂದ ಪಾಪ ಭಸ್ಮ ಆಗುವುದು. ನಿಮ್ಮನ್ನು ಆತ್ಮ ಎಂದು ತಿಳಿಯುವ ಅಭ್ಯಾಸ ಮಾಡುತ್ತಿರಿ, ಆಗ ಈ ದೇಹದ ಅಹಂಕಾರ ಪೂರ್ತಿ ಮುರಿದು ಹೋಗುವುದು. ಯೋಗದಿಂದಲೇ ಪವಿತ್ರ ಸತೋಪ್ರಧಾನರಾಗಿ ಬಾಬಾರವರ ಬಳಿ ಹೋಗಬೇಕಾಗಿದೆ. ಕೆಲವು ಮಕ್ಕಳು ಈ ಮಾತುಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದಿಲ್ಲ. ಸತ್ಯ-ಸತ್ಯ ತಮ್ಮ ಚಾರ್ಟ್ ಹೇಳುವುದಿಲ್ಲ. ಅರ್ಧಕಲ್ಪ ಸುಳ್ಳಿನ ಪ್ರಪಂಚದಲ್ಲಿದ್ದಿರಿ ಆದ್ದರಿಂದ ಸುಳ್ಳು ಒಳಗೆ ಸೇರಿಕೊಂಡು ಬಿಟ್ಟಿದೆ. ಸತ್ಯತೆಯಿಂದ ನಿಮ್ಮ ಚಾರ್ಟ್ ತಂದೆಗೆ ಒಪ್ಪಿಸಬೇಕಾಗಿದೆ. ಚೆಕ್ ಮಾಡಿಕೊಳ್ಳಬೇಕು-ನಾವು ಮುಕ್ಕಾಲು ಘಂಟೆ ಕುಳಿತು ಕೊಂಡರೆ ಅದರಲ್ಲಿ ಎಷ್ಟು ಸಮಯ ನಮ್ಮನ್ನು ಆತ್ಮ ಎಂದು ಅರ್ಥ ಮಾಡಿಕೊಂಡು ತಂದೆಯನ್ನು ನೆನಪು ಮಾಡಿದೆ! ಕೆಲವರಿಗೆ ಸತ್ಯ ಹೇಳಲು ನಾಚಿಕೆಯಾಗುತ್ತೆ. ಇದಂತು ತಕ್ಷಣ ಹೇಳುತ್ತಾರೆ ಇಷ್ಟು ಸೇವೆ ಮಾಡಿದೆ, ಇಷ್ಟು ಜನಕ್ಕೆ ಜ್ಞಾನ ತಿಳಿಸಿದೆ ಆದರೆ ನೆನಪಿನ ಚಾರ್ಟ್ ಎಷ್ಟಿತ್ತು, ಇದನ್ನು ಸತ್ಯವಾಗಿ ಹೇಳುವುದಿಲ್ಲ. ನೆನಪಿನಲ್ಲಿರದ ಕಾರಣವೇ ನಿಮ್ಮ ಬಾಣಯಾರಿಗೂ ನಾಟುವುದಿಲ್ಲ. ಜ್ಞಾನದ ಖಡ್ಗದಲ್ಲಿ ಹರಿತ ಇರುವುದಿಲ್ಲ. ಕೆಲವರು ಹೇಳುತ್ತಾರೆ ನಾನಂತೂ ನಿರಂತರ ನೆನಪಿನಲ್ಲಿರುತ್ತೇನೆ, ಬಾಬಾ ಹೇಳುತ್ತಾರೆ ಅವರು ಆ ಅವಸ್ಥೆಯಲ್ಲೇ ಇಲ್ಲ. ನಿರಂತರ ನೆನಪಿನಲ್ಲಿದ್ದಿದ್ದೇ ಆದರೆ ಕರ್ಮಾತೀತ ಅವಸ್ಥೆ ಆಗಿ ಬಿಡಬೇಕಿತ್ತು. ಜ್ಞಾನದ ಪರಾಕಾಷ್ಠ ಕಂಡು ಬರಬೇಕು, ಇದರಲ್ಲಿ ದೊಡ್ಡ ಪರಿಶ್ರಮವಿದೆ. ವಿಶ್ವದ ಮಾಲೀಕ ಹಾಗೆಯೇ ಸುಮ್ಮನೆ ಆಗಿ ಬಿಡುವುದಿಲ್ಲ. ಒಬ್ಬ ತಂದೆಯ ವಿನಹ ಬೇರೆ ಯಾರದೂ ನೆನಪಿರಬಾರದು. ಈ ದೇಹವೂ ಸಹ ನೆನಪಿಗೆ ಬರಬಾರದು. ಈ ಅವಸ್ಥೆ ನಿಮಗೆ ಅಂತ್ಯದಲ್ಲಿ ಆಗುವುದು. ನೆನಪಿನ ಯಾತ್ರೆಯಿಂದಲೇ ನಿಮ್ಮ ಸಂಪಾದನೆ ಆಗುತ್ತಿರುವುದು. ಒಂದುವೇಳೆ ಶರೀರ ಬಿಟ್ಟರೆ ಮತ್ತೆ ಸಂಪಾದನೆ ಮಾಡಲಾಗುವುದಿಲ್ಲ. ಭಲೆ ಆತ್ಮ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ ಆದರೆ ಟೀಚರ್ ಅಂತೂ ಬೇಕಲ್ಲವೇ ನಮಗೆ ಪುನಃ ಸ್ಮತಿ ತರಿಸಲು. ತಂದೆ ಘಳಿಗೆ-ಘಳಿಗೆ ಸ್ಮತಿ ತರಿಸುತ್ತಿರುತ್ತಾರೆ. ಈ ರೀತಿ ಬಹಳ ಮಕ್ಕಳಿದ್ದಾರೆ ಯಾರು ಗೃಹಸ್ಥ ವ್ಯವಹಾರದಲ್ಲಿರುತ್ತಾ, ನೌಕರಿ ಇತ್ಯಾದಿಯನ್ನೂ ಮಾಡುತ್ತಾ ಇನ್ನೂ ಉನ್ನತ ಪದವಿಯನ್ನು ಪಡೆಯಲು ಶ್ರೀಮತದಂತೆ ನಡೆದು ತಮ್ಮ ಭವಿಷ್ಯವನ್ನೂ ಸಹ ಜಮಾ ಮಾಡಿಕೊಳ್ಳುತ್ತಿರುತ್ತಾರೆ. ಬಾಬಾರವರಿಂದ ಸಲಹೆಯನ್ನು ಪಡೆಯುತ್ತಿರುತ್ತಾರೆ. ಹಣ ಇದೆ ಅದನ್ನು ಹೇಗೆ ಸಫಲ ಮಾಡಿಕೊಳ್ಳುವುದು., ಬಾಬಾ ಹೇಳುತ್ತಾರೆ ಸೆಂಟರ್ ತೆರೆಯಿರಿ, ಅದರಿಂದ ಬಹಳ ಜನರ ಕಲ್ಯಾಣ ವಾಗುವುದು. ಮನುಷ್ಯರು ದಾನ ಪುಣ್ಯ ಇತ್ಯಾದಿ ಮಾಡುತ್ತಾರೆ, ಮುಂದಿನ ಜನ್ಮದಲ್ಲಿ ಅದರ ಫಲ ಸಿಗುತ್ತದೆ. ನಿಮಗೂ ಸಹ ಭವಿಷ್ಯ 21 ಜನ್ಮಕ್ಕಾಗಿ ರಾಜ್ಯಭಾಗ್ಯ ಸಿಗುತ್ತದೆ. ಇದು ನಿಮ್ಮ ನಂಬರ್ಒನ್ ಬ್ಯಾಂಕ್ ಆಗಿದೆ, ಇದರಲ್ಲಿ 4 ಆಣೆ ಹಾಕಿದರೆ ಭವಿಷ್ಯದಲ್ಲಿ ಸಾವಿರ ಆಗಿ ಬಿಡುವುದು. ಕಲ್ಲಿನಿಂದ ಪಾರಸ ಆಗಿ ಬಿಡುವುದು. ನಿಮ್ಮ ಪ್ರತಿ ವಸ್ತು ಪಾರಸ ಆಗಿ ಬಿಡುವುದು. ಬಾಬಾ ಹೇಳುತ್ತಾರೆ ಮಧುರ ಮಕ್ಕಳೇ ಉನ್ನತ ಪದವಿ ಪಡೆಯ ಬೇಕೆಂದರೆ ಮಾತ-ಪಿತಾರವರನ್ನು ಪೂರ್ತಿ ಫಾಲೋ ಮಾಡಿ ಮತ್ತು ನಿಮ್ಮ ಕರ್ಮೇಂದ್ರಿಯಗಳ ಮೇಲೆ ಕಂಟ್ರೋಲ್ ಇಟ್ಟುಕೊಳ್ಳಿ. ಒಂದುವೇಳೆ ಕರ್ಮೇಂದ್ರಿಯಗಳು ವಶದಲ್ಲಿಲ್ಲವೆಂದರೆ, ಚಲನೆ ಸರಿಯಾಗಿರುವುದಿಲ್ಲ ಉನ್ನತ ಪದವಿಯಿಂದ ವಂಚಿತರಾಗಿ ಬಿಡುವಿರಿ. ನಿಮ್ಮ ಚಲನೆಯನ್ನು ಸುಧಾರಣೆ ಮಾಡಿಕೊಳ್ಳಿ ಜಾಸ್ತಿ ಇಚ್ಛೆಗಳನ್ನು ಇಟ್ಟುಕೊಳ್ಳಬೇಡಿ.

ಬಾಬಾ ನೀವು ಮಕ್ಕಳಿಗೆ ಎಷ್ಟು ಜ್ಞಾನದ ಶೃಂಗಾರ ಮಾಡಿ ಸತ್ಯಯುಗದ ಮಹಾರಾಜ ಮಹಾರಾಣಿಯನ್ನಾಗಿ ಮಾಡುತ್ತಾರೆ. ಇದರಲ್ಲಿ ಸಹನಶೀಲತೆಯ ಗುಣ ಬಹಳ ಚೆನ್ನಾಗಿ ಇರಬೇಕು. ದೇಹದ ಮೇಲೆ ತುಂಬಾ ಹೆಚ್ಚು ಮೋಹ ಇರಬಾರದು. ಯೋಗಬಲದಿಂದಲೇ ಕೆಲಸ ತೆಗೆದುಕೊಳ್ಳಬೇಕು. ಬಾಬಾನಿಗೆ ಎಷ್ಟೇ ಕೆಮ್ಮು ಧಮ್ಮ ಇರುತ್ತಿತ್ತು ಆದರೂ ಸಹ ಸದಾ ಸೇವೆಯಲ್ಲಿ ತತ್ಪರರಾಗಿರುತ್ತಿದ್ದರು. ಜ್ಞಾನ ಯೋಗದಿಂದ ಶೃಂಗಾರ ಮಾಡಿ ಮಕ್ಕಳನ್ನು ಲಾಯಕ್ಕಾಗಿ ಮಾಡುತ್ತಾರೆ. ನೀವು ಈಗ ಈಶ್ವರೀಯ ಮಡಿಲಿನಲ್ಲಿ, ಮಾತಾಪಿತರ ಮಡಿಲಿನಲ್ಲಿ ಕುಳಿತಿರುವಿರಿ. ತಂದೆ ಬ್ರಹ್ಮಾ ಮುಖದಿಂದ ನೀವು ಮಕ್ಕಳಿಗೆ ಜನ್ಮ ಕೊಡುತ್ತಾರೆ ಅಂದಮೇಲೆ ಇವರು ತಾಯಿಯಾದರು. ಆದರೂ ನಿಮ್ಮ ಬುದ್ಧಿ ಶಿವ ಬಾಬಾರವರ ಕಡೆ ಹೋಗುತ್ತದೆ. ನೀವು ಮಾತಾಪಿತರು ನಾವು ನಿಮ್ಮ ಬಾಲಕರು.... ನೀವು ಸರ್ವ ಗುಣ ಸಂಪನ್ನ ಇಲ್ಲಿ ಆಗಬೇಕಿದೆ ಘಳಿಗೆ-ಘಳಿಗೆ ಮಾಯೆಯಿಂದ ಸೋಲನುಭವಿಸಬೇಡಿ. ಬಾಪ್ದಾದಾರವರು ಹೇಳುತ್ತಾರೆ - ಮಧುರ ಮಕ್ಕಳೇ, ನಿಮ್ಮನ್ನು ಆತ್ಮ ಎಂದು ತಿಳಿದು ನನ್ನನ್ನು ನೆನಪು ಮಾಡಿ. ಈ ರೀತಿ ತಮ್ಮನ್ನು ತಿಳಿಯುವುದರಿಂದ ಎಷ್ಟು ಮಧುರವೆನಿಸುತ್ತದೆ. ನಾವು ಏನಾಗಿದ್ದೆವು… ಈಗ ಏನಾಗುತ್ತಿದ್ದೇವೆ!

ಈ ಡ್ರಾಮಾ ಎಷ್ಟು ವಂಡರ್ಫುಲ್ ಆಗಿದೆ ಎಂಬುದನ್ನೂ ಈಗ ನೀವು ತಿಳಿದುಕೊಂಡಿದ್ದೀರಿ. ಇದು ಪುರುಷೋತ್ತಮ ಸಂಗಮಯುಗವಾಗಿದೆ ಕೇವಲ ಈ ಒಂದು ನೆನಪಿದ್ದರೂ ಸಹ ನಿಶ್ಚಯವಾಗುತ್ತದೆ - ನಾವು ಸತ್ಯಯುಗಕ್ಕೆ ಹೋಗುವವರು, ಈಗ ಸಂಗಮಯುಗದಲ್ಲಿದ್ದೇವೆ. ನಂತರ ಮನೆಗೆ ಹೋಗಬೇಕಾಗಿದೆ, ಆದ್ದರಿಂದ ಪಾವನ ಅವಶ್ಯವಾಗಿ ಆಗಬೇಕು. ಆಂತರ್ಯದಲ್ಲಿ ಬಹಳ ಸಂತೋಷ ಇರಬೇಕು. “ಓಹೋ! ಬೇಹದ್ದಿನ ತಂದೆಯು ಹೇಳುತ್ತಾರೆ — ಮಧುರಾತಿ ಮಧುರ ಮಕ್ಕಳೇ, ನನ್ನನ್ನು ನೆನಪು ಮಾಡಿ, ಆಗ ನೀವು ಸತೋಪ್ರಧಾನರಾಗುತ್ತೀರಿ. ವಿಶ್ವದ ಮಾಲೀಕರಾಗುತ್ತೀರಿ. ಬಾಪ್ದಾದಾ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ. ಈ ರೀತಿಯಲ್ಲ ಕೇವಲ ಶಿಕ್ಷಕನ ರೂಪದಲ್ಲಿ ಓದಿಸಿ ಮನೆಗೆ ಹೋಗಿ ಬಿಡುತ್ತಾರೆ. ಇವರು ತಂದೆಯೂ ಹೌದು, ಶಿಕ್ಷಕರೂ ಹೌದು. ನಿಮಗೆ ಓದಿಸುತ್ತಾರೆ. ನೆನಪಿನ ಯಾತ್ರೆಯನ್ನೂ ಸಹ ಕಲಿಸುತ್ತಾರೆ.

ಇಂತಹ ವಿಶ್ವದ ಮಾಲೀಕರನ್ನಾಗಿ ಮಾಡುವಂತಹ, ಪತಿತರಿಂದ ಪಾವನ ಮಾಡುವಂತಹ ತಂದೆಯೊಂದಿಗೆ ಬಹಳ ಪ್ರೀತಿ ಇರಬೇಕು. ಬೆಳಿಗ್ಗೆ ಎದ್ದ ತಕ್ಷಣ ಮೊಟ್ಟ ಮೊದಲು ಶಿವ ಬಾಬಾರವರಿಗೆ ಗುಡ್ ಮಾನಿರ್ಂಗ್ ಹೇಳಬೇಕು. ಗುಡ್ ಮಾನಿರ್ಂಗ್ ಎಂದರೆ ನೆನಪು. ನೆನಪು ಮಾಡಿದರೆ ಬಹಳಷ್ಟು ಖುಷಿಯಲ್ಲಿರುತ್ತೀರಿ. ಮಕ್ಕಳು ತಮ್ಮ ಹೃದಯವನ್ನು ಪ್ರಶ್ನಿಸಿಕೊಳ್ಳಬೇಕು ನಾವು ಬೆಳಿಗ್ಗೆ ಎದ್ದು ಎಷ್ಟು ಸಮಯ ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತೇವೆ? ಮನುಷ್ಯರು ಅಮೃತವೇಳೆಯಲ್ಲಿ ಭಕ್ತಿ ಮಾಡುತ್ತಾರೆ. ಭಕ್ತಿಯನ್ನು ಸಹ ಎಷ್ಟು ಪ್ರೀತಿಯಿಂದ ಮಾಡುತ್ತಾರೆ. ಆದರೆ ಬಾಬಾ ತಿಳಿದುಕೊಂಡಿದ್ದಾರೆ ಬಹಳ ಮಕ್ಕಳು ಹೃದಯದ ಪ್ರೀತಿಯಿಂದ ನೆನಪು ಮಾಡುವುದಿಲ್ಲ. ಬೆಳಿಗ್ಗೆ ಎದ್ದು ತಂದೆಗೆ ಗುಡ್ ಮಾನಿರ್ಂಗ್ ಮಾಡಿ, ಜ್ಞಾನ ಚಿಂತನೆಯಲ್ಲಿದ್ದರೆ ಖುಷಿಯ ನಶೆ ಏರುತ್ತದೆ. ತಂದೆಯೊಂದಿಗೆ ಗುಡ್ ಮಾನಿರ್ಂಗ್ ಮಾಡಲಿಲ್ಲವೆಂದರೆ ಪಾಪದ ಭಾರ ಹೇಗೆ ಕಡಿಮೆಯಾಗುತ್ತದೆ? ಮುಖ್ಯ ವಿಷಯವೇ ನೆನಪು. ಇದರಿಂದ ನಿಮ್ಮ ಭವಿಷ್ಯಕ್ಕಾಗಿ ಭಾರಿ ಸಂಪಾದನೆಯಾಗುತ್ತದೆ. ಕಲ್ಪ ಕಲ್ಪಾಂತರಕ್ಕೂ ಈ ಸಂಪಾದನೆ ಕೆಲಸಕ್ಕೆ ಬರುತ್ತದೆ. ಬಹಳ ದೈರ್ಯದಿಂದ, ಗಂಭೀರತೆಯಿಂದ, ಅರಿವಿನಿಂದ ನೆನಪು ಮಾಡಬೇಕು. ದೊಡ್ಡ ರೂಪದಿಂದ ಹೇಳಿ ಬಿಡುತ್ತೇವೆ ನಾವು ಬಾಬಾರಾವರನ್ನು ಬಹಳ ನೆನಪು ಮಾಡುತ್ತೇವೆ ಎಂದು. ಆದರೆ ಎಕ್ಯೂರೆಟ್ ನೆನಪು ಮಾಡುವುದರಲ್ಲಿ ಪರಿಶ್ರಮವಿದೆ. ಯಾರು ತಂದೆಯನ್ನು ಹೆಚ್ಚು ನೆನಪು ಮಾಡುತ್ತಾರೋ ಅವರಿಗೆ ಹೆಚ್ಚಿನ ಕರಂಟ್ ದೊರೆಯುತ್ತದೆ, ಏಕೆಂದರೆ ನೆನಪಿನ ಮೂಲಕ ನೆನಪು ದೊರೆಯುತ್ತದೆ. ಯೋಗ ಮತ್ತು ಜ್ಞಾನ ಎರಡೂ ವಿಷಯಗಳಾಗಿವೆ. ಯೋಗವು ಬೇರೆ ವಿಷಯವಾಗಿದೆ. ಬಹಳ ದೊಡ್ಡ ವಿಷಯವಾಗಿದೆ. ಯೋಗದಿಂದಲೇ ಆತ್ಮ ಸತೋಪ್ರಧಾನವಾಗುತ್ತದೆ. ನೆನಪು ಇಲ್ಲದೆ ಸತೋಪ್ರಧಾನರಾಗುವುದು ಅಸಾಧ್ಯ. ನೀವು ತಂದೆಯನ್ನು ಬಹಳ ಚೆನ್ನಾಗಿ ಹೃದಯದ ಪ್ರೀತಿಯಿಂದ ನೆನಪು ಮಾಡಿದರೆ ಸ್ವತಃ ಕರೆಂಟ್ (ಶಕ್ತಿ) ದೊರೆಯುತ್ತದೆ, ಆರೋಗ್ಯವಂತರಾಗುತ್ತಾರೆ. ಕರೆಂಟ್(ಶಕ್ತಿ)ನಿಂದ ಆಯಸ್ಸು ಹೆಚ್ಚುತ್ತದೆ. ಮಕ್ಕಳು ನೆನಪು ಮಾಡಿದರೆ ತಂದೆ ಸರ್ಚ್ಲೈಟ್ ನೀಡುತ್ತಾರೆ. ತಂದೆ ಮಕ್ಕಳಿಗೆ ಎಂತಹ ದೊಡ್ಡ ಖಜಾನೆ ನೀಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ, ಕಣ್ಮಣಿ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ಹೃದಯದ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯನ್ನು ದೈರ್ಯ, ಗಂಭೀರತೆ, ಅರಿವಿನಿಂದ ನೆನಪು ಮಾಡಬೇಕು. ನೆನಪು ಎಕ್ಯೂರೆಟ್ ಆಗಿದ್ದರೆ ಕರೆಂಟ್ (ಶಕ್ತಿ) ದೊರೆಯುವುದು, ಆಯಸ್ಸು ಹೆಚ್ಚುತ್ತದೆ, ಆರೋಗ್ಯವಂತರಾಗಿ ಬಿಡುವಿರಿ.

2. ಶ್ರೇಷ್ಠ ಪದವಿ ಪಡೆಯಲು ಸ್ವಯಂನ ಚಲನೆಯನ್ನು ಸುಧಾರಿಸಬೇಕು. ಹೆಚ್ಚು ಆಸೆಗಳನ್ನು ಇಟ್ಟುಕೊಳ್ಳಬಾರದು. ಕರ್ಮೆಂದ್ರಿಯಗಳ ಮೇಲೆ ಸಂಪೂರ್ಣ ನಿಯಂತ್ರಣ ಇರಬೇಕು, ಮಾತ ಪಿತಾರನ್ನು ಸಂಪೂರ್ಣವಾಗಿ ಫಾಲೋ ಮಾಡಬೇಕು.

ವರದಾನ:
ಫಾಲೋ ಫಾದರ್ ಮತ್ತು ಸೀ ಫಾದರ್..ನ ಮಹಾಮಂತ್ರದ ಮೂಲಕ ಏಕರಸ ಸ್ಥಿತಿ ಮಾಡಿಕೊಳ್ಳುವಂತಹ ಶ್ರೇಷ್ಠ ಪುರುಷಾರ್ಥಿ ಭವ.

“ಸೀ ಫಾದರ್-ಫಾಲೋ ಫಾದರ್” ಈ ಮಂತ್ರವನ್ನು ಸದಾ ತಮ್ಮ ಮುಂದೆ ಇಟ್ಟುಕೊಳ್ಳುತ್ತಾ ಏರುವ ಕಲೆಯಲ್ಲಿ ಸಾಗುತ್ತಿರಿ, ಹಾರುತ್ತಿರಿ. ಆತ್ಮರನ್ನೆಂದಿಗೂ ನೋಡಬಾರದು ಏಕೆಂದರೆ ಆತ್ಮರೆಲ್ಲರೂ ಪುರುಷಾರ್ಥಿ ಆಗಿದ್ದಾರೆ, ಪುರುಷಾರ್ಥಿಯಲ್ಲಿ ಸದ್ಗುಣವೂ ಇರುತ್ತದೆ, ಹಾಗೆಯೇ ಕೆಲವು ಕೊರತೆಗಳೂ ಇರುತ್ತವೆ. ಅವರು ಸಂಪನ್ನರಲ್ಲ ಆದ್ದರಿಂದ ಫಾಲೋ ಫಾದರ್ ಮಾಡಿರಿ, ಫಾಲೋ ಬ್ರದರ್ಸ್-ಸಿಸ್ಟರ್ಸ್ ಅಲ್ಲ. ಹೇಗೆ ತಂದೆಯವರು ಏಕರಸವಾಗಿ ಇರುತ್ತಾರೆಯೋ ಹಾಗೆಯೇ ಅನುಕರಣೆ ಮಾಡುವವರೂ ಸಹ ಸ್ವತಹವಾಗಿಯೇ ಏಕರಸ ಸ್ಥಿತಿಯವರು ಆಗಿ ಬಿಡುವರು.

ಸ್ಲೋಗನ್:
ಪರ ಚಿಂತನೆಯ ಪ್ರಭಾವದಲ್ಲಿ ಬರದೆ ಶುಭ ಚಿಂತನೆ ಮಾಡುವಂತಹ ಶುಭ ಚಿಂತಕ ಮಣಿಯಾಗಿರಿ.

ಅವ್ಯಕ್ತ ಸೂಚನೆಗಳು:– ಈ ಅವ್ಯಕ್ತ ಮಾಸದಲ್ಲಿ ಬಂಧನ ಮುಕ್ತರಾಗಿ ಜೀವನ ಮುಕ್ತ ಸ್ಥಿತಿಯ ಅನುಭವ ಮಾಡಿರಿ.

ಹೇಗೆ ಅನ್ಯ ಸ್ಥೂಲ ವಸ್ತುಗಳನ್ನು ಬೇಕಾದಾಗ ತೆಗೆದುಕೊಂಡು, ಬೇಡವಾದಾಗ ಬಿಟ್ಟು ಬಿಡುತ್ತೀರೋ, ಹಾಗೆಯೇ ದೇಹಾಭಿಮಾನವನ್ನು ಬೇಕಾದಾಗ ಬಿಟ್ಟು ದೇಹಿ–ಅಭಿಮಾನಿಯಾಗುವ ಅಭ್ಯಾಸ ಇರಲಿ - ಈ ಅಭ್ಯಾಸ ಯಾವುದೇ ಸ್ಥೂಲ ವಸ್ತುವನ್ನು ಹಿಡಿದು–ಬಿಡುವಷ್ಟು ಸಹಜವಾಗಿರಲಿ. ರಚಯಿತನು ಯಾವಾಗ ಬೇಕಾದರೂ ರಚನೆಯ ಆಧಾರ ತೆಗೆದುಕೊಳ್ಳಲಿ, ಯಾವಾಗ ಬೇಕಾದರೂ ರಚನೆಯ ಆಧಾರವನ್ನು ಬಿಡಲಿ, ಯಾವಾಗ ಬೇಕಾದರೂ ಭಿನ್ನ, ಯಾವಾಗ ಬೇಕಾದರೂ ಪ್ರಿಯ ಆಗಿ ಬಿಡಲಿ - ಇಷ್ಟರ ಮಟ್ಟಿಗೆ ಬಂಧನ ಮುಕ್ತರಾಗಿರಿ.