21.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೀವಾತ್ಮಗಳ ಪ್ರೀತಿಯು ಒಬ್ಬ ತಂದೆಯೊಂದಿಗಿದೆ, ನಿಮಗೆ ತಂದೆಯು ಆತ್ಮದೊಂದಿಗೇ ಪ್ರೀತಿ ಮಾಡುವುದನ್ನು ಕಲಿಸಿದ್ದಾರೆ, ಶರೀರದೊಂದಿಗಲ್ಲ”

ಪ್ರಶ್ನೆ:
ಯಾವ ಪುರುಷಾರ್ಥದಲ್ಲಿ ಮಾಯೆಯು ವಿಘ್ನಗಳನ್ನು ಹಾಕುತ್ತದೆ? ಮಾಯಾಜೀತರಾಗುವ ಯುಕ್ತಿಯೇನಾಗಿದೆ?

ಉತ್ತರ:
ನಾವು ತಂದೆಯನ್ನು ನೆನಪು ಮಾಡಿ ನಮ್ಮ ಪಾಪಗಳನ್ನು ಭಸ್ಮ ಮಾಡಿಕೊಳ್ಳಬೇಕೆಂದು ನೀವು ಪುರುಷಾರ್ಥ ಮಾಡುತ್ತೀರಿ ಆದರೆ ಈ ನೆನಪಿನಲ್ಲಿಯೇ ಮಾಯೆಯ ವಿಘ್ನಗಳು ಬೀಳುತ್ತವೆ. ಮಾಲೀಕ ತಂದೆಯು ನಿಮಗೆ ಮಾಯಾಜೀತರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಆ ಮಾಲೀಕನನ್ನು ಅರಿತು ನೆನಪು ಮಾಡಿ ಆಗ ಖುಷಿಯೂ ಇರುವುದು, ಪುರುಷಾರ್ಥವನ್ನೂ ಮಾಡುತ್ತೀರಿ ಮತ್ತು ಹೆಚ್ಚಿನ ಸೇವೆಯನ್ನೂ ಮಾಡುತ್ತೀರಿ. ಮಾಯಾಜೀತರೂ ಆಗಿಬಿಡುತ್ತೀರಿ.

ಗೀತೆ:
ಈ ಪಾಪದ ಪ್ರಪಂಚದಿಂದ ದೂರ ಕರೆದುಕೊಂಡು ಹೋಗು.............

ಓಂ ಶಾಂತಿ.
ಆತ್ಮೀಯ ಮಕ್ಕಳು ಗೀತೆಯನ್ನು ಕೇಳಿದಿರಿ, ಅರ್ಥವು ತಿಳಿಯಿತೆ. ಪ್ರಪಂಚದಲ್ಲಿ ಯಾರೂ ಸಹ ಅರ್ಥವನ್ನು ತಿಳಿದುಕೊಂಡಿಲ್ಲ. ಮಕ್ಕಳಿಗೇ ತಿಳಿದಿದೆ- ನಾವಾತ್ಮಗಳ ಪ್ರೀತಿಯು ಪರಮಪಿತ ಪರಮಾತ್ಮನೊಂದಿಗಿದೆ. ಆತ್ಮವು ತನ್ನ ತಂದೆಯಾದ ಪರಮಪಿತ ಪರಮಾತ್ಮನನ್ನು ಕರೆಯುತ್ತದೆ. ಪ್ರೀತಿಯು ಆತ್ಮದಲ್ಲಿದೆಯೋ ಅಥವಾ ಶರೀರದಲ್ಲಿದೆಯೋ? ಈಗ ಇದನ್ನು ತಂದೆಯು ಕಲಿಸುತ್ತಾರೆ- ಆತ್ಮದೊಂದಿಗೆ ಪ್ರೀತಿಯಿರಬೇಕು, ಶರೀರವಂತೂ ಸಮಾಪ್ತಿಯಾಗಲಿದೆ. ಆತ್ಮದಲ್ಲಿ ಪ್ರೀತಿಯಿದೆ, ನಿಮ್ಮ ಪ್ರೀತಿಯು ಪರಮಾತ್ಮ ತಂದೆಯೊಂದಿಗೇ ಇರಬೇಕೇ ಹೊರತು ಶರೀರದೊಂದಿಗಲ್ಲ. ಆತ್ಮವೇ ತನ್ನ ತಂದೆಯನ್ನು ಕರೆಯುತ್ತದೆ- ನಮ್ಮನ್ನು ಪುಣ್ಯಾತ್ಮರ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ. ನಿಮಗೆ ತಿಳಿದಿದೆ- ನಾವು ಪಾಪಾತ್ಮರಾಗಿದ್ದೆವು, ಈಗ ಮತ್ತೆ ಪುಣ್ಯಾತ್ಮರಾಗುತ್ತಿದ್ದೇವೆ. ತಂದೆಯು ನಿಮಗೆ ಯುಕ್ತಿಯಿಂದ ಪುಣ್ಯಾತ್ಮರನ್ನಾಗಿ ಮಾಡುತ್ತಿದ್ದಾರೆ. ತಂದೆಯು ತಿಳಿಸಿದಾಗಲೇ ಮಕ್ಕಳಿಗೆ ಅನುಭವವಾಗುವುದು ಮತ್ತು ನಾವು ತಂದೆಯ ಮೂಲಕ ತಂದೆಯ ನೆನಪಿನಿಂದ ಮಾತ್ರ ಪವಿತ್ರ ಪುಣ್ಯಾತ್ಮರಾಗುತ್ತಿದ್ದೇವೆ, ಯೋಗಬಲದಿಂದ ನಮ್ಮ ಪಾಪಗಳು ಭಸ್ಮವಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಯಾವುದೇ ಸ್ಥೂಲವಾದ ಗಂಗೆಯಲ್ಲಿ ಪಾಪವನ್ನು ತೊಳೆಯಲಾಗುವುದಿಲ್ಲ. ಮನುಷ್ಯರು ಗಂಗಾಸ್ನಾನ ಮಾಡುತ್ತಾರೆ, ಶರೀರಕ್ಕೆ ಮಣ್ಣನ್ನು ಹಚ್ಚಿಕೊಳ್ಳುತ್ತಾರೆ ಆದರೆ ಅದರಿಂದೇನೂ ಪಾಪವು ಕಳೆಯುವುದಿಲ್ಲ. ಆತ್ಮದ ಪಾಪವು ಯೋಗಬಲದಿಂದಲೇ ಕಳೆಯುತ್ತದೆ, ತುಕ್ಕು ಬಿಟ್ಟುಹೋಗುತ್ತದೆ. ಇದಂತೂ ಮಕ್ಕಳಿಗೇ ತಿಳಿದಿದೆ ಮತ್ತು ನಿಶ್ಚಯವಿದೆ- ನಾವು ತಂದೆಯನ್ನು ನೆನಪು ಮಾಡಿದರೆ ನಮ್ಮ ಪಾಪಗಳು ಭಸ್ಮವಾಗುತ್ತವೆ. ನಿಶ್ಚಯವಿದೆಯೆಂದಮೇಲೆ ಪುರುಷಾರ್ಥ ಮಾಡಬೇಕಲ್ಲವೆ. ಈ ಪುರುಷಾರ್ಥದಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ಶಕ್ತಿಶಾಲಿಗಳೊಂದಿಗೆ ಮಾಯೆಯೂ ಸಹ ಶಕ್ತಿಶಾಲಿಯಾಗಿ ಯುದ್ಧ ಮಾಡುತ್ತದೆ. ನಿರ್ಬಲರೊಂದಿಗೇನು ಯುದ್ಧ ಮಾಡುತ್ತದೆ! ಮಕ್ಕಳು ಸದಾ ಈ ಸಂಕಲ್ಪವನ್ನಿಡಬೇಕು- ನಾವು ಮಾಯಾಜೀತರು, ಜಗಜ್ಜೀತರಾಗಬೇಕಾಗಿದೆ. ಮಾಯಾಜೀತೇ ಜಗಜ್ಜೀತ್ ಎಂಬುದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ನೀವೀಗ ಹೇಗೆ ಮಾಯೆಯ ಮೇಲೆ ಜಯಗಳಿಸಬಹುದೆಂಬುದನ್ನು ನೀವು ಮಕ್ಕಳಿಗೆ ತಿಳಿಸಲಾಗಿದೆ. ಮಾಯೆಯು ಸಮರ್ಥವಾಗಿದೆಯಲ್ಲವೆ. ನೀವು ಮಕ್ಕಳಿಗೆ ಮಾಲೀಕನು ಸಿಕ್ಕಿದ್ದಾರೆ, ಆ ಮಾಲೀಕನನ್ನು ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದಾರೆ. ಯಾರು ಅರಿತಿರುವರೋ ಅವರಿಗೆ ಖುಷಿಯೂ ಇರುತ್ತದೆ, ಪುರುಷಾರ್ಥವನ್ನೂ ಮಾಡುತ್ತಾರೆ. ಹೆಚ್ಚಿನ ಸೇವೆ ಮಾಡುತ್ತಾರೆ. ಅಮರನಾಥಕ್ಕೆ ಬಹಳಷ್ಟು ಮಂದಿ ಹೋಗುತ್ತಾರೆ.

ಈಗ ಎಲ್ಲಾ ಮನುಷ್ಯರು ಹೇಳುತ್ತಾರೆ- ವಿಶ್ವದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುವುದು? ನೀವೀಗ ಎಲ್ಲರಿಗೂ ಸಿದ್ಧ ಮಾಡಿ ತಿಳಿಸಿ- ಸತ್ಯಯುಗದಲ್ಲಿ ಹೇಗೆ ಸುಖ-ಶಾಂತಿಯಿತ್ತು, ಇಡೀ ವಿಶ್ವದಲ್ಲಿ ಶಾಂತಿಯಿತ್ತು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಮತ್ತ್ಯಾವುದೇ ಧರ್ಮವಿರಲಿಲ್ಲ. ಇಂದಿಗೆ 5000 ವರ್ಷಗಳಾಯಿತು ಯಾವಾಗ ಸತ್ಯಯುಗವಾಗಿತ್ತು ಮತ್ತೆ ಸೃಷ್ಟಿಯು ಅವಶ್ಯವಾಗಿ ಸುತ್ತಲೇ ಬೇಕಾಗಿದೆ. ಚಿತ್ರಗಳಲ್ಲಿ ಬಹಳ ಸ್ಪಷ್ಟವಾಗಿ ತಿಳಿಸುತ್ತೀರಿ- ಕಲ್ಪದ ಹಿಂದೆಯೂ ಇಂತಹ ಚಿತ್ರಗಳನ್ನು ಮಾಡಿಸಿದ್ದರು. ದಿನ-ಪ್ರತಿದಿನ ವೃದ್ಧಿಯಾಗುತ್ತಾ ಹೋಗುತ್ತದೆ. ಕೆಲವೊಂದೆಡೆ ಮಕ್ಕಳು ಚಿತ್ರಗಳಲ್ಲಿ ತಿಥಿ-ತಾರೀಖು ಬರೆಯುವುದನ್ನು ಮರೆತುಹೋಗುತ್ತಾರೆ. ಲಕ್ಷ್ಮೀ-ನಾರಾಯಣನ ಚಿತ್ರದಲ್ಲಿ ತಿಥಿ-ತಾರೀಖು ಅವಶ್ಯವಾಗಿ ಇರಬೇಕು. ನೀವು ಮಕ್ಕಳ ಬುದ್ಧಿಯಲ್ಲಿ ಕುಳಿತಿದೆಯಲ್ಲವೆ- ನಾವು ಸ್ವರ್ಗವಾಸಿಗಳಾಗಿದ್ದೆವು, ಈಗ ಪುನಃ ಆಗಬೇಕಾಗಿದೆ, ಯಾರೆಷ್ಟು ಪುರುಷಾರ್ಥವನ್ನು ಮಾಡುವರೋ ಅಷ್ಟು ಪದವಿಯನ್ನು ಪಡೆಯುತ್ತಾರೆ. ಈಗ ತಂದೆಯ ಮೂಲಕ ನೀವು ಜ್ಞಾನದ ಅಥಾರಿಟಿಯಾಗಿದ್ದೀರಿ, ಭಕ್ತಿಯು ಈಗ ಸಮಾಪ್ತಿಯಾಗಲಿದೆ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯಿರುವುದಿಲ್ಲ ನಂತರ ಅರ್ಧಕಲ್ಪ ಭಕ್ತಿಯು ನಡೆಯುತ್ತದೆ. ಇದೂ ಸಹ ಈಗ ನೀವು ಮಕ್ಕಳಿಗೆ ಅರ್ಥವಾಗುತ್ತದೆ. ಅರ್ಧಕಲ್ಪದ ನಂತರ ರಾವಣರಾಜ್ಯವು ಆರಂಭವಾಗುತ್ತದೆ. ಆಟವೆಲ್ಲವೂ ನೀವು ಭಾರತವಾಸಿಗಳದೇ ಆಗಿದೆ. 84 ಜನ್ಮಗಳ ಚಕ್ರವು ಭಾರತದ ಮೇಲೆಯೇ ಇದೆ. ಭಾರತವೇ ಅವಿನಾಶಿ ಖಂಡವಾಗಿದೆ ಎಂಬುದೂ ಸಹ ಮೊದಲು ತಿಳಿದಿರಲಿಲ್ಲ. ಲಕ್ಷ್ಮೀ-ನಾರಾಯಣರಿಗೆ ದೇವಿ-ದೇವತೆಗಳೆಂದು ಹೇಳುತ್ತಾರಲ್ಲವೆ. ಅವರದು ಎಷ್ಟು ಶ್ರೇಷ್ಠಪದವಿಯಾಗಿದೆ ಮತ್ತು ವಿದ್ಯೆಯು ಎಷ್ಟೊಂದು ಸಹಜವಾಗಿದೆ. ಈ 84 ಜನ್ಮಗಳ ಚಕ್ರವನ್ನು ಪೂರ್ಣಮಾಡಿ ನಾವು ಹಿಂತಿರುಗಿ ಹೋಗುತ್ತೇವೆ. 84ರ ಚಕ್ರವೆಂದು ಹೇಳುವುದರಿಂದ ಬುದ್ಧಿಯು ಮೇಲೆ ಹೋಗುತ್ತದೆ. ಈಗ ನಿಮಗೆ ಮೂಲವತನ, ಸೂಕ್ಷ್ಮವತನ, ಸ್ಥೂಲವತನ ಎಲ್ಲವೂ ನೆನಪಿದೆ. ಸೂಕ್ಷ್ಮವತನವೆಂದರೇನು ಎಂಬುದು ಮೊದಲು ನಿಮಗೆ ತಿಳಿದಿರಲಿಲ್ಲ. ಅಲ್ಲಿ ಹೇಗೆ ಸನ್ನೆಯ ಭಾಷೆಯು ನಡೆಯುತ್ತದೆಯೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮೊದಲು ಮೂಖಚಲನಚಿತ್ರಗಳೂ ಸಹ ಬಂದಿದ್ದವು. ನಿಮಗೆ ತಿಳಿಸುವುದರಲ್ಲಿ ಸಹಜವಾಗುತ್ತದೆ. ಸೈಲೆನ್ಸ್, ಮೂವ್ಹಿ, ಟಾಕಿ. ನೀವು ಎಲ್ಲವನ್ನೂ ತಿಳಿದುಕೊಂಡಿದ್ದೀರಿ- ಲಕ್ಷ್ಮೀ-ನಾರಾಯಣರ ರಾಜ್ಯದಿಂದ ಹಿಡಿದು ಪೂರ್ಣಚಕ್ರವು ನಿಮ್ಮ ಬುದ್ಧಿಯಲ್ಲಿದೆ.

ನಿಮಗೆ ಗೃಹಸ್ಥ ವ್ಯವಹಾರದಲ್ಲಿದ್ದರೂ ಸಹ ಇದೇ ಚಿಂತೆಯಿರಲಿ- ನಾವು ಪಾವನರಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಗೃಹಸ್ಥ ವ್ಯವಹಾರದಲ್ಲಿದ್ದರೂ ಸಹ ಈ ಹಳೆಯ ಪ್ರಪಂಚದೊಂದಿಗಿನ ಮಮತ್ವವನ್ನು ಕಳೆಯಿರಿ. ಮಕ್ಕಳು ಮುಂತಾದವರನ್ನು ಭಲೆ ಸಂಭಾಲನೆ ಮಾಡಿ ಆದರೆ ಬುದ್ಧಿಯು ತಂದೆಯ ಕಡೆಯಿರಬೇಕು. ಕೈಕೆಲಸ ಮಾಡುತ್ತಿರಲಿ ಬುದ್ಧಿಯು ನೆನಪು ಮಾಡುತ್ತಿರಲಿ ಎಂದು ಹೇಳುತ್ತಾರಲ್ಲವೆ. ಮಕ್ಕಳಿಗೆ ತಿನ್ನಿಸಿ, ಕುಡಿಸಿ, ಸ್ನಾನ ಮಾಡಿಸಿ ಆದರೆ ಬುದ್ಧಿಯಲ್ಲಿ ತಂದೆಯ ನೆನಪಿರಲಿ ಏಕೆಂದರೆ ನಿಮಗೆ ತಿಳಿದಿದೆ- ಶರೀರದ ಮೇಲೆ ಪಾಪದ ಹೊರೆಯು ಬಹಳಷ್ಟಿದೆ ಆದ್ದರಿಂದ ಬುದ್ಧಿಯು ತಂದೆಯ ಜೊತೆಯಿರಲಿ. ಆ ಪ್ರಿಯತಮನನ್ನು ಬಹಳ-ಬಹಳ ನೆನಪು ಮಾಡಬೇಕಾಗಿದೆ, ಪ್ರಿಯತಮ ತಂದೆಯು ನೀವೆಲ್ಲಾ ಆತ್ಮಗಳಿಗೆ ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ. ಈ ಪಾತ್ರವೂ ಸಹ ಈಗ ನಡೆಯುತ್ತಿದೆ ಮತ್ತೆ 5000 ವರ್ಷಗಳ ನಂತರ ಪುನರಾವರ್ತನೆಯಾಗುವುದು. ತಂದೆಯು ಎಷ್ಟು ಯುಕ್ತಿಗಳನ್ನು ತಿಳಿಸುತ್ತಾರೆ, ಯಾವುದೇ ಕಷ್ಟವಿಲ್ಲ. ಕೆಲವರು ಹೇಳುತ್ತಾರೆ- ನಾವಂತೂ ಇದನ್ನು ಮಾಡಲು ಆಗುವುದಿಲ್ಲ, ನಮಗೆ ಬಹಳ ಕಷ್ಟದ ಅನುಭವವಾಗುತ್ತಿದೆ. ನೆನಪಿನ ಯಾತ್ರೆಯು ಬಹಳ ಕಷ್ಟವಾಗಿದೆ, ಅರೆ! ನೀವು ತಂದೆಯನ್ನೇ ನೆನಪು ಮಾಡಲು ಸಾಧ್ಯವಿಲ್ಲವೆ! ಇಂತಹ ತಂದೆಯನ್ನು ಮರೆಯಬೇಕೆ! ತಂದೆಯನ್ನಂತೂ ಬಹಳ ಚೆನ್ನಾಗಿ ನೆನಪು ಮಾಡಬೇಕಾಗಿದೆ ಆಗಲೇ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಸದಾ ಆರೋಗ್ಯವಂತರಾಗುತ್ತೀರಿ. ಇಲ್ಲವಾದರೆ ಆಗುವುದಿಲ್ಲ. ನಿಮಗೆ ಬಹಳ ಒಳ್ಳೆಯ ಸಲಹೆಯು ಸಿಗುತ್ತದೆ. ಹೇಗೆ ಒಂದೇಬಾರಿಗೆ ಗುಣಪಡಿಸುವ ಔಷಧಿಯಿರುತ್ತದೆಯಲ್ಲವೆ. ಹಾಗೆಯೇ ನಾನು ಗ್ಯಾರಂಟಿ ಕೊಡುತ್ತೇನೆ. ಈ ಯೋಗಬಲದಿಂದ 21 ಜನ್ಮಗಳಲ್ಲಿ ಎಂದೂ ರೋಗಿಯಾಗುವುದಿಲ್ಲ. ಕೇವಲ ತಂದೆಯನ್ನು ನೆನಪು ಮಾಡಿ, ಎಷ್ಟು ಸಹಜಯುಕ್ತಿಯಾಗಿದೆ. ಭಕ್ತಿಮಾರ್ಗದಲ್ಲಿ ಪರಿಚಯವಿಲ್ಲದೆ ನೆನಪು ಮಾಡುತ್ತಿದ್ದಿರಿ. ಈಗ ತಂದೆಯು ತಿಳಿಸುತ್ತಾರೆ, ನೀವು ತಿಳಿದುಕೊಂಡಿದ್ದೀರಿ ನಾವು ಕಲ್ಪದ ಮೊದಲೂ ಸಹ ಬಾಬಾ ತಮ್ಮ ಬಳಿ ಬಂದಿದ್ದೆವು, ಪುರುಷಾರ್ಥ ಮಾಡುತ್ತಿದ್ದೆವು- ಇದು ಪಕ್ಕಾ ನಿಶ್ಚಯವಾಗಿಬಿಟ್ಟಿದೆ. ನಾವೇ ರಾಜ್ಯ ಮಾಡುತ್ತಿದ್ದೆವು ನಂತರ ಕಳೆದುಕೊಂಡೆವು, ಈಗ ಪುನಃ ತಂದೆಯು ಬಂದಿದ್ದಾರೆ, ಅವರಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಾಗಿದೆ. ತಂದೆಯು ಹೇಳುತ್ತಾರೆ- ನನ್ನನ್ನು ನೆನಪು ಮಾಡಿ ಮತ್ತು ರಾಜ್ಯಭಾಗ್ಯವನ್ನು ನೆನಪು ಮಾಡಿ. ಮನ್ಮನಾಭವ. ಅಂತ್ಯಮತಿ ಸೋ ಗತಿಯಾಗಿಬಿಡುವುದು. ಈಗ ನಾಟಕವು ಪೂರ್ಣವಾಗುತ್ತದೆ, ಹಿಂತಿರುಗಿ ಹೋಗಬೇಕಾಗಿದೆ. ಹೇಗೆ ವರನು ವಧುವನ್ನು ಕರೆದುಕೊಂಡು ಹೋಗಲು ಬರುತ್ತಾರೆಯೋ ಅದೇರೀತಿ ತಂದೆಯು ಎಲ್ಲರನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ನಾವು ನಮ್ಮ ಅತ್ತೆಯ ಮನೆಗೆ ಹೋಗುತ್ತೇವೆಂದು ವಧುಗಳಿಗೆ ಬಹಳ ಖುಷಿಯಾಗುತ್ತದೆ. ನೀವೆಲ್ಲರೂ ಒಬ್ಬ ರಾಮನ ಸೀತೆಯರಾಗಿದ್ದೀರಿ, ರಾಮನೇ ನಿಮ್ಮನ್ನು ರಾವಣನ ಜೈಲಿನಿಂದ ಬಿಡಿಸಿ ಕರೆದುಕೊಂಡು ಹೋಗುತ್ತಾರೆ. ಮುಕ್ತಿದಾತನು ಒಬ್ಬರೇ ಆಗಿದ್ದಾರೆ, ರಾವಣರಾಜ್ಯದಿಂದ ಮುಕ್ತಗೊಳಿಸುತ್ತಾರೆ. ಇದು ರಾವಣರಾಜ್ಯವೆಂದು ಮನುಷ್ಯರು ಹೇಳುತ್ತಾರೆ ಆದರೆ ಯಥಾರ್ಥ ರೀತಿಯಿಂದ ಅರಿತುಕೊಂಡಿಲ್ಲ. ಈಗ ಮಕ್ಕಳಿಗೆ ತಿಳಿಸಲಾಗುತ್ತದೆ- ಅನ್ಯರಿಗೆ ತಿಳಿಸುವುದಕ್ಕಾಗಿ ಬಹಳ ಒಳ್ಳೊಳ್ಳೆಯ ಯುಕ್ತಿಗಳನ್ನು ಕೊಡಲಾಗುತ್ತದೆ. ಹೇಗೆ ತಂದೆಯು ತಿಳಿಸಿದ್ದರು- ವಿಶ್ವದಲ್ಲಿ ಶಾಂತಿಯನ್ನು ಕಲ್ಪದ ಹಿಂದಿನ ತರಹ ತಂದೆಯು ಸ್ಥಾಪನೆ ಮಾಡುತ್ತಿದ್ದಾರೆ. ಬ್ರಹ್ಮಾರವರ ಮೂಲಕ ಸ್ಥಾಪನೆಯಾಗುತ್ತಿದೆ ಎಂಬುದನ್ನು ಬರೆಯಿರಿ. ವಿಷ್ಣುವಿನ ರಾಜ್ಯವಿದ್ದಾಗ ವಿಶ್ವದಲ್ಲಿ ಶಾಂತಿಯಿತ್ತಲ್ಲವೆ. ವಿಷ್ಣು ಅಂದರೆ ಲಕ್ಷ್ಮೀ-ನಾರಾಯಣರಿದ್ದರು, ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ವಿಷ್ಣು ಮತ್ತು ಲಕ್ಷ್ಮೀ-ನಾರಾಯಣ ಹಾಗೂ ರಾಧೆ-ಕೃಷ್ಣರನ್ನು ಬೇರೆ-ಬೇರೆ ಎಂದು ತಿಳಿಯುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ- ನೀವು ಸ್ವದರ್ಶನ ಚಕ್ರಧಾರಿಗಳೂ ಆಗಿದ್ದೀರಿ, ತಂದೆಯು ಬಂದು ಸೃಷ್ಟಿಚಕ್ರದ ಜ್ಞಾನವನ್ನು ಕೊಡುತ್ತಾರೆ. ಅವರ ಮೂಲಕ ಈಗ ನೀವೂ ಸಹ ಮಾ!! ಜ್ಞಾನಸಾಗರರಾಗಿದ್ದೀರಿ. ನೀವು ಜ್ಞಾನನದಿಗಳಾಗಿದ್ದೀರಲ್ಲವೆ. ಇವು ಮಕ್ಕಳದೇ ಹೆಸರುಗಳಾಗಿವೆ.

ಭಕ್ತಿಮಾರ್ಗದಲ್ಲಿ ಮನುಷ್ಯರು ಎಷ್ಟೊಂದು ಗಂಗಾಸ್ನಾನ ಮಾಡುತ್ತಾರೆ, ಎಷ್ಟು ಅಲೆದಾಡುತ್ತಾರೆ. ಬಹಳ ದಾನ-ಪುಣ್ಯಗಳನ್ನು ಮಾಡುತ್ತಾರೆ. ಸಾಹುಕಾರರಂತೂ ಬಹಳಷ್ಟು ದಾನ-ಪುಣ್ಯ ಮಾಡುತ್ತಿರುತ್ತಾರೆ. ಚಿನ್ನವನ್ನೂ ದಾನ ಮಾಡುತ್ತಾರೆ. ನೀವೂ ಸಹ ತಿಳಿದುಕೊಂಡಿದ್ದೀರಿ- ನಾವು ಎಷ್ಟೊಂದು ಅಲೆದಾಡುತ್ತಿದ್ದೆವು, ಈಗ ನಾವು ಹಠಯೋಗಿಗಳಲ್ಲ, ರಾಜಯೋಗಿಗಳಾಗಿದ್ದೇವೆ. ಪವಿತ್ರ ಗೃಹಸ್ಥ ಆಶ್ರಮದವರಾಗಿದ್ದೆವು ಮತ್ತೆ ರಾವಣರಾಜ್ಯದಲ್ಲಿ ಅಪವಿತ್ರರಾಗಿದ್ದೇವೆ. ನಾಟಕದನುಸಾರ ತಂದೆಯು ಪುನಃ ಗೃಹಸ್ಥಧರ್ಮವನ್ನಾಗಿ ಮಾಡುತ್ತಿದ್ದಾರೆ ಅದನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಮನುಷ್ಯರು ನಿಮ್ಮನ್ನು ಕೇಳುತ್ತಾರೆ- ನೀವೆಲ್ಲರೂ ಪವಿತ್ರರಾದರೆ ಪ್ರಪಂಚವು ಹೇಗೆ ನಡೆಯುತ್ತದೆ? ಅವರಿಗೆ ತಿಳಿಸಿ, ಇಷ್ಟು ಮಂದಿ ಸನ್ಯಾಸಿಗಳು ಪವಿತ್ರರಾಗಿರುತ್ತಾರೆ ಅಂದಮೇಲೆ ಪ್ರಪಂಚವೇನು ನಿಂತುಹೋಯಿತೇ? ಅರೆ! ಸೃಷ್ಟಿಯು ಇಷ್ಟೊಂದು ವೃದ್ಧಿಯಾಗಿದೆ, ತಿನ್ನುವುದಕ್ಕೆ ಆಹಾರವೂ ಇಲ್ಲ ಅಂದಮೇಲೆ ಈ ಸೃಷ್ಟಿಯನ್ನು ಮತ್ತೆಷ್ಟು ಹೆಚ್ಚಿಸುತ್ತೀರಿ? ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ತಂದೆಯು ನಾವಾತ್ಮಗಳಿಗೆ ಓದಿಸುತ್ತಿದ್ದಾರೆ, ನಮ್ಮ ಮುಂದೆ ಹಾಜರಿದ್ದಾರೆ, ಇದನ್ನು ಬುದ್ಧಿಯಿಂದ ತಿಳಿದುಕೊಂಡಿದ್ದೀರಿ.

ಯಾರು ವಿಶ್ವಶಾಂತಿಯ ಬಗ್ಗೆ ಮಾತನಾಡುತ್ತಾರೆಯೋ ಅವರಿಗೆ ನೀವು ತಿಳಿಸಿ- ವಿಶ್ವದಲ್ಲಿ ಶಾಂತಿಯನ್ನು ತಂದೆಯು ಸ್ಥಾಪನೆ ಮಾಡುತ್ತಿದ್ದಾರೆ ಅದಕ್ಕಾಗಿಯೇ ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ, 5000 ವರ್ಷಗಳ ಮೊದಲೂ ಸಹ ವಿನಾಶವಾಗಿತ್ತು, ಈಗಲೂ ಈ ವಿನಾಶವು ಮುಂದೆ ನಿಂತಿದೆ. ಇದರ ನಂತರ ವಿಶ್ವದಲ್ಲಿ ಶಾಂತಿಯು ಸ್ಥಾಪನೆಯಾಗುವುದು. ಈಗ ನೀವು ಮಕ್ಕಳ ಬುದ್ಧಿಯಲ್ಲಿರುವುದೇ ಈ ಮಾತುಗಳು, ಇವು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ಈ ಮಾತುಗಳು ಬುದ್ಧಿಯಲ್ಲಿರುವವರು ನಿಮ್ಮ ವಿನಃ ಯಾರೂ ಇಲ್ಲ. ನಿಮಗೆ ತಿಳಿದಿದೆ- ಸತ್ಯಯುಗದಲ್ಲಿ ಇಡೀ ವಿಶ್ವದಲ್ಲಿ ಸಂಪೂರ್ಣ ಶಾಂತಿಯಿತ್ತು, ಒಂದು ಭಾರತಖಂಡವನ್ನು ಬಿಟ್ಟು ಮತ್ತ್ಯಾವುದೇ ಖಂಡವಿರಲಿಲ್ಲ. ನಂತರದಲ್ಲಿ ಈ ಎಲ್ಲಾ ಖಂಡಗಳಾಗಿವೆ. ಈಗಂತೂ ಎಷ್ಟೊಂದು ಖಂಡಗಳಾಗಿವೆ, ಈಗ ಆ ಆಟದ ಕೊನೆಯಾಗಿದೆ. ಭಗವಂತನು ಅವಶ್ಯವಾಗಿ ಇರುವರೆಂದು ಹೇಳುತ್ತಾರೆ ಆದರೆ ಭಗವಂತ ಯಾರು ಮತ್ತು ಯಾವ ರೂಪದಲ್ಲಿ ಬರುತ್ತಾರೆಂಬುದನ್ನು ಅರಿತುಕೊಂಡಿಲ್ಲ. ಕೃಷ್ಣನಂತೂ ಆಗಲು ಸಾಧ್ಯವಿಲ್ಲ ಅಥವಾ ಪ್ರೇರಣೆಯಿಂದ ಇಲ್ಲವೆ ಶಕ್ತಿಯಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲ. ತಂದೆಯು ಪ್ರಿಯಾತಿಪ್ರಿಯನಾಗಿದ್ದಾರೆ. ಅವರಿಂದ ಆಸ್ತಿಯು ಸಿಗುತ್ತದೆ. ತಂದೆಯೇ ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆಂದಮೇಲೆ ಮತ್ತೆ ಹಳೆಯ ಪ್ರಪಂಚದ ವಿನಾಶವನ್ನೂ ಅವರೇ ಮಾಡಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ- ಸತ್ಯಯುಗದಲ್ಲಿ ಈ ಲಕ್ಷ್ಮೀ-ನಾರಾಯಣರಿದ್ದರು, ಈಗ ಪುನಃ ಸ್ವಯಂ ಪುರುಷಾರ್ಥದಿಂದ ಅದೇರೀತಿ ಆಗುತ್ತಿದ್ದಾರೆ. ನಶೆಯಿರಬೇಕಲ್ಲವೆ. ಭಾರತದಲ್ಲಿ ರಾಜ್ಯ ಮಾಡುತ್ತಿದ್ದರು. ಶಿವತಂದೆಯು ರಾಜ್ಯವನ್ನು ಕೊಟ್ಟುಹೋಗಿದ್ದರು, ಶಿವತಂದೆಯು ರಾಜ್ಯಭಾರ ಮಾಡಿ ಹೋಗಿದ್ದರೆಂದು ಹೇಳುವುದಿಲ್ಲ, ಭಾರತಕ್ಕೆ ರಾಜ್ಯವನ್ನು ಕೊಟ್ಟುಹೋಗಿದ್ದರು. ಲಕ್ಷ್ಮೀ-ನಾರಾಯಣರು ರಾಜ್ಯಭಾರ ಮಾಡುತ್ತಿದ್ದರಲ್ಲವೆ. ಈಗ ಪುನಃ ತಂದೆಯು ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದಾರೆ, ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ನೀವು ನನ್ನನ್ನೂ ನೆನಪು ಮಾಡಿ ಮತ್ತು ಸೃಷ್ಟಿಚಕ್ರವನ್ನು ನೆನಪು ಮಾಡಿ. ನೀವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಕಡಿಮೆ ಪುರುಷಾರ್ಥ ಮಾಡಿದರೆ ಇವರು ಬಹಳ ಕಡಿಮೆ ಭಕ್ತಿ ಮಾಡಿದ್ದಾರೆಂದರ್ಥ. ಹೆಚ್ಚು ಭಕ್ತಿ ಮಾಡಿರುವವರು ಹೆಚ್ಚು ಪುರುಷಾರ್ಥವನ್ನು ಮಾಡುತ್ತಾರೆ. ತಂದೆಯು ಎಷ್ಟು ಸ್ಪಷ್ಟಮಾಡಿ ತಿಳಿಸಿಕೊಡುತ್ತಾರೆ. ಆದರೆ ಇದು ಬುದ್ಧಿಯಲ್ಲಿ ಕುಳಿತುಕೊಳ್ಳಬೇಕು. ನಿಮ್ಮ ಕೆಲಸವು ಪುರುಷಾರ್ಥ ಮಾಡುವುದಾಗಿದೆ. ಕಡಿಮೆ ಭಕ್ತಿ ಮಾಡಿದ್ದರೆ ಯೋಗವು ಹಿಡಿಸುವುದಿಲ್ಲ, ಶಿವತಂದೆಯ ನೆನಪು ಬುದ್ಧಿಯಲ್ಲಿ ನಿಲ್ಲುವುದಿಲ್ಲ. ಪುರುಷಾರ್ಥದಲ್ಲೆಂದೂ ನಿಂತುಬಿಡಬಾರದು. ಶಕ್ತಿಶಾಲಿ ಮಾಯೆಯನ್ನು ನೋಡಿ ಹೃದಯವಿಧೀರ್ಣರಾಗಬಾರದು. ಮಾಯೆಯ ಬಿರುಗಾಳಿಗಳು ಬಹಳಷ್ಟು ಬರುತ್ತವೆ, ಇದನ್ನೂ ಸಹ ಮಕ್ಕಳಿಗೆ ತಿಳಿಸಿದ್ದಾರೆ- ಆತ್ಮವೇ ಎಲ್ಲವನ್ನೂ ಮಾಡುತ್ತದೆ. ಶರೀರವಂತೂ ಸಮಾಪ್ತಿಯಾಗುವುದು, ಆತ್ಮವು ಶರೀರವನ್ನು ಬಿಟ್ಟುಹೋಯಿತೆಂದರೆ ಶರೀರವು ಮಣ್ಣಾಗಿಬಿಡುವುದು ಮತ್ತೆ ಅದು ಸಿಗುವುದಿಲ್ಲ ಅಂದಮೇಲೆ ಅದನ್ನು ನೆನಪು ಮಾಡಿ ಅಳುವುದರಿಂದ ಲಾಭವಾದರೂ ಏನು! ಅದೇ ವಸ್ತು ಮತ್ತೆ ಸಿಗುತ್ತದೆಯೇ! ಆತ್ಮವು ಹೋಗಿ ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತದೆ. ನೀವೀಗ ಎಷ್ಟು ಉನ್ನತ ಸಂಪಾದನೆ ಮಾಡಿಕೊಳ್ಳುತ್ತೀರಿ. ನಿಮ್ಮದೇ ಜಮಾ ಆಗುತ್ತದೆ, ಉಳಿದೆಲ್ಲರದೂ ಖಾಲಿಯಾಗುತ್ತದೆ.

ತಂದೆಯು ಭೋಲಾ ವ್ಯಾಪಾರಿಯಾಗಿದ್ದಾರೆ ಆದ್ದರಿಂದಲೇ ನಿಮಗೆ ಹಿಡಿ ಅವಲಕ್ಕಿಗೆ ಬದಲಾಗಿ 21 ಜನ್ಮಗಳಿಗಾಗಿ ಮಹಲನ್ನು ಕೊಟ್ಟುಬಿಡುತ್ತಾರೆ, ಎಷ್ಟೊಂದು ಬಡ್ಡಿಯನ್ನು ಕೊಡುತ್ತಾರೆ. ನಿಮಗೆ ಭವಿಷ್ಯಕ್ಕಾಗಿ ಎಷ್ಟು ಬೇಕೋ ಅಷ್ಟನ್ನು ಜಮಾ ಮಾಡಿಕೊಳ್ಳಬೇಕು ಆದರೆ ಅಂತಿಮದಲ್ಲಿ ಬಂದು ಜಮಾ ಮಾಡಿಕೊಳ್ಳಿ ಎಂದು ಹೇಳುವುದಿಲ್ಲ. ಆ ಸಮಯದಲ್ಲಿ ತೆಗೆದುಕೊಂಡು ಏನು ಮಾಡುತ್ತಾರೆ? ಇವರೇನು ಅನಾಡಿ ವ್ಯಾಪಾರಿಯೇ? ನೀವು ಕೊಟ್ಟದ್ದು ಕೆಲಸಕ್ಕೆ ಬರುವುದಿಲ್ಲ. ಮತ್ತೆ ಅದಕ್ಕೆ ಬಡ್ಡಿಯನ್ನು ಹಾಕಿ ಕೊಡಬೇಕಾಗುತ್ತದೆ. ಅಂತಹವರಿಂದ ತಂದೆಯು ತೆಗೆದುಕೊಳ್ಳುವುದಿಲ್ಲ. ನಿಮಗೆ ಹಿಡಿ ಅವಲಕ್ಕಿಗೆ ಬದಲು 21 ಜನ್ಮಗಳಿಗಾಗಿ ಮಹಲು ಸಿಕ್ಕಿಬಿಡುತ್ತದೆ. ಎಷ್ಟೊಂದು ಬಡ್ಡಿಯೂ ಸಿಗುತ್ತದೆ. ತಂದೆಯು ತಿಳಿಸುತ್ತಾರೆ- ನಾನು ನಂಬರ್ವನ್ ಭೋಲಾನಾಥನಾಗಿದ್ದೇನೆ. ನೋಡಿ, ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಕೇವಲ ನೀವು ನನ್ನವರಾಗಿ ಸೇವೆ ಮಾಡಿ. ಭೋಲಾನಾಥನಾಗಿದ್ದಾರೆ ಆದ್ದರಿಂದಲೇ ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ. ನೀವೀಗ ಜ್ಞಾನಮಾರ್ಗದಲ್ಲಿದ್ದೀರಿ ಅಂದಾಗ ತಂದೆಯ ಶ್ರೀಮತದಂತೆ ನಡೆಯಿರಿ ಮತ್ತು ರಾಜ್ಯಭಾಗ್ಯವನ್ನು ತೆಗೆದುಕೊಳ್ಳಿ. ತಂದೆಯು ನಮಗೆ ರಾಜ್ಯಭಾಗ್ಯ ಅದೂ ಸೂರ್ಯವಂಶದಲ್ಲಿ ರಾಜ್ಯಪದವಿಯನ್ನು ಕೊಡಲು ಬಂದಿದ್ದಾರೆಂದು ಹೇಳುತ್ತೀರಿ. ಒಳ್ಳೆಯದು. ನಿಮ್ಮ ಬಾಯಿ ಸಿಹಿಯಾಗಲಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದಂತೆ ನಡೆದು ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಾಗಿದೆ. ಹಿಡಿ ಅವಲಕ್ಕಿಯನ್ನು ಕೊಟ್ಟು 21 ಜನ್ಮಗಳಿಗಾಗಿ ಮಹಲನ್ನು ಪಡೆಯಬೇಕಾಗಿದೆ. ಭವಿಷ್ಯಕ್ಕಾಗಿ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ.

2. ಗೃಹಸ್ಥ ವ್ಯವಹಾರದಲ್ಲಿರುತ್ತಾ ಈ ಹಳೆಯ ಪ್ರಪಂಚದಿಂದ ಮಮತ್ವವನ್ನು ಕಳೆದು ಪೂರ್ಣ ಪಾವನರಾಗಬೇಕಾಗಿದೆ. ಎಲ್ಲವನ್ನೂ ಮಾಡುತ್ತಾ ಬುದ್ಧಿಯು ತಂದೆಯಕಡೆ ತೊಡಗಿರಲಿ.

ವರದಾನ:
ಮನಸ್ಸಿನ ಶುಭ ಭಾವನೆಯ ಮೂಲಕ ಪರಸ್ಪರರನ್ನು ಮುಂದುವರೆಸುವಂತಹ ವಿಶ್ವ ಕಲ್ಯಾಣಕಾರಿ ಭವ

ಒಂದುವೇಳೆ ಯಾರಾದರೂ ತಪ್ಪು ಮಾಡುತ್ತಿದ್ದರೆ ಆಗ ನೀವು ಅವರು ಪರವಶರಾಗಿರುವರೆಂದು ತಿಳಿದು ದಯಾ ದೃಷ್ಠಿಯಿಂದ ಪರಿವರ್ತನೆ ಮಾಡಿ. ಒಂದು ವೇಳೆ ಯಾರದರೂ ಕಲ್ಲನ್ನು ನೋಡಿ ನಿಂತುಬಿಟ್ಟರೆ ನಿಮ್ಮ ಕೆಲಸವಾಗಿದೆ ಅದನ್ನು ಪಾರುಮಾಡಿ ಹೋಗುವುದು ಅಥವ ಅವರನ್ನೂ ಜೊತೆಗಾರರನ್ನಾಗಿ ಮಾಡಿಕೊಂಡು ಪಾರುಮಾಡಿ ಹೋಗುವುದು. ಇದಕ್ಕಾಗಿ ಪ್ರತಿಯೊಬ್ಬರ ವಿಶೇಷತೆಯನ್ನು ನೋಡಿ, ಬಲಹೀನತೆಯನ್ನು ಬಿಡುತ್ತಾ ಹೋಗಿ. ಈಗ ವಾಣಿಯಿಂದ ಯಾರಿಗೂ ಎಚ್ಚರಿಕೆ ನೀಡುವಂತಹ ಸಮಯವಲ್ಲಾ ಆದರೆ ಮನಸಾ ಶುಭಭಾವನೆಯ ಮೂಲಕ ಪರಸ್ಪರ ಒಬ್ಬರಿಗೊಬ್ಬರು ಸಹಯೋಗಿಗಳಾಗಿ ಮುಂದುವರೆಯಿರಿ ಮತ್ತು ಮುಂದುವರೆಸಿರಿ ಆಗ ಹೇಳಲಾಗುತ್ತದೆ ವಿಶ್ವಕಲ್ಯಾಣಕಾರಿ.

ಸ್ಲೋಗನ್:
ಧೃಡ ಸಂಕಲ್ಪದ ಬೆಲ್ಟ್ ಕಟ್ಟಿಕೊಳ್ಳಿ ಆಗ ಸೀಟ್ನಿಂದ ಎಂದೂ ಅಪ್ಸೆಟ್ ಆಗುವುದಿಲ್ಲ.


ಅವ್ಯಕ್ತ ಸೂಚನೆ: ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.

ಪವಿತ್ರತೆಯ ಜ್ಯೋತಿ ನಾಲ್ಕಾರು ಕಡೆ ಬೆಳಗಿದಾಗ ಪ್ರತ್ಯಕ್ಷತೆಯ ಸೂರ್ಯ ಉದಯವಾಗುತ್ತದೆ. ಹೇಗೆ ಜ್ಯೋತಿಯನ್ನು ಹಿಡಿದುಕೊಂಡು ಸುತ್ತುತ್ತಾರೆ, ಹಾಗೆಯೇ ಪವಿತ್ರತೆಯ ಜ್ಯೋತಿ ನಾಲ್ಕಾರು ಕಡೆ ಬೆಳಗಿಸಿದಾಗ ಎಲ್ಲರೂ ತಂದೆಯನ್ನು ನೋಡಲು ಸಾಧ್ಯ, ತಿಳಿಯಲು ಸಾಧ್ಯ. ಎಷ್ಟು ಪವಿತ್ರತೆಯ ಜ್ಯೋತಿ ಅಚಲವಾಗಿರುತ್ತದೆ ಅಷ್ಟು ಸಹಜವಾಗಿ ಎಲ್ಲರು ತಂದೆಯನ್ನು ತಿಳಿದುಕೊಳ್ಳಲು ಸಾಧ್ಯ ಮತ್ತು ಪವಿತ್ರತೆಯ ಜಯಜಯಕಾರವಾಗುವುದು.