21.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಶ್ರೀಮತದಂತೆ ನಡೆದು ಎಲ್ಲರಿಗೂ ಸುಖ ಕೊಡಿ, ಆಸುರೀ ಮತದಂತೆ ದುಃಖವನ್ನು ಕೊಡುತ್ತಾ ಬಂದಿರಿ, ಈಗ ಸುಖ ಕೊಡಿ, ಸುಖವನ್ನು ಪಡೆಯಿರಿ”

ಪ್ರಶ್ನೆ:
ಬುದ್ಧಿವಂತ ಮಕ್ಕಳು ಯಾವ ರಹಸ್ಯವನ್ನು ತಿಳಿದಿರುವ ಕಾರಣ ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತಾರೆ?

ಉತ್ತರ:
ಅವರು ತಿಳಿದುಕೊಳ್ಳುತ್ತಾರೆ - ಇದು ಸುಖ ಮತ್ತು ದುಃಖ, ಸೋಲು ಮತ್ತು ಗೆಲುವಿನ ಆಟವಾಗಿದೆ, ಈಗ ಅರ್ಧಕಲ್ಪ ಸುಖದ ಆಟವು ನಡೆಯುವುದಿದೆ, ಅಲ್ಲಿ ಯಾವುದೇ ಪ್ರಕಾರದ ದುಃಖವಿರುವುದಿಲ್ಲ, ಈಗ ಹೊಸ ರಾಜಧಾನಿಯು ಬರಲಿದೆ ಅದಕ್ಕಾಗಿ ತಂದೆಯು ತನ್ನ ಪರಮಧಾಮವನ್ನು ಬಿಟ್ಟು ನಾವು ಮಕ್ಕಳಿಗೆ ಓದಿಸಲು ಬಂದಿದ್ದಾರೆ. ಈಗ ಪುರುಷಾರ್ಥ ಮಾಡಿ ಪಡೆಯಲೇಬೇಕಾಗಿದೆ.

ಗೀತೆ:
ಪ್ರಪಂಚ ಬದಲಾದರೂ ನಾವು ಬದಲಾಗುವುದಿಲ್ಲ...........

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಅರ್ಥವನ್ನು ತಿಳಿದುಕೊಂಡಿರಿ. ಇಲ್ಲಿ ಯಾವುದೇ ಪ್ರತಿಜ್ಞೆಯನ್ನು ಮಾಡುವ ಅವಶ್ಯಕತೆಯಿಲ್ಲ. ಇದು ಕೇವಲ ಆತ್ಮದಲ್ಲಿ ತಿಳುವಳಿಕೆ ಬೇಕಾಗಿದೆ. ಆತ್ಮವು ತಮೋಪ್ರಧಾನವಾಗಿರುವ ಕಾರಣ ಸಂಪೂರ್ಣ ಬುದ್ಧಿಹೀನನಾಗಿ ಬಿಟ್ಟಿದೆ. ಮಕ್ಕಳಿಗೆ ತಿಳಿದಿದೆ - ನಾವು ಎಷ್ಟು ಬುದ್ಧಿಹೀನರಾಗಿದ್ದೆವು, ಈಗ ಎಷ್ಟೊಂದು ಬುದ್ಧಿವಂತರಾಗಿದ್ದೇವೆ. ಅನ್ಯ ಸತ್ಸಂಗಗಳಲ್ಲಿ ಈ ಮಾತುಗಳು ಇರುವುದಿಲ್ಲ. ಅವರು ಶಾಸ್ತ್ರ, ರಾಮಾಯಣ ಇತ್ಯಾದಿಗಳನ್ನು ಓದುತ್ತಾರೆ. ಒಂದು ಕಿವಿಯಿಂದ ಕೇಳಿದರೆ ಇನ್ನೊಂದು ಕಿವಿಯಿಂದ ಹೊರಟು ಹೋಗುತ್ತದೆ. ಯಾವುದೇ ಪ್ರಾಪ್ತಿಯಿಲ್ಲ. ಯಜ್ಞ, ತಪ, ದಾನ-ಪುಣ್ಯ ಇತ್ಯಾದಿಗಳನ್ನು ಬಹಳಷ್ಟು ಮಾಡುತ್ತಾರೆ, ಹುಡುಕಾಡುತ್ತಿರುತ್ತಾರೆ, ಪ್ರಾಪ್ತಿಯೇನೂ ಇಲ್ಲ. ಈ ಪ್ರಪಂಚದಲ್ಲಿ ಯಾರಿಗೂ ಸುಖವಿಲ್ಲ. ಈಗ ತಂದೆಯು ಸಂಪೂರ್ಣ ತಿಳುವಳಿಕೆ ನೀಡುತ್ತಾರೆ. ಎಲ್ಲರಿಗೆ ಸುಖ-ಶಾಂತಿ ನೀಡುವವರು ಒಬ್ಬರೇ ತಂದೆಯಾಗಿದ್ದಾರೆ. ಮನುಷ್ಯರಂತೂ ಘೋರ ಅಂಧಕಾರದಲ್ಲಿದ್ದಾರೆ, ಭಕ್ತಿ ಮಾರ್ಗದವರೂ ಸಹ ಹೇ ದುಃಖಹರ್ತ-ಸುಖಕರ್ತ, ಸದ್ಗತಿದಾತ ಎಂದು ನೆನಪು ಮಾಡುತ್ತಿರುತ್ತಾರೆ. ನೋಡಿ, ಪ್ರಪಂಚದಲ್ಲಿ ಏನಾಗಿ ಬಿಟ್ಟಿದೆ! ಎಲ್ಲರಿಗೆ ದುಃಖವೇ ದುಃಖವಿರುತ್ತದೆ. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರಿಗೂ ಸಹ ತಂದೆಯು ಯಾರು? ತಂದೆಯಿಂದ ಯಾವ ಆಸ್ತಿಯು ಸಿಗುತ್ತದೆ? ಎಂಬುದು ಏನೂ ತಿಳಿದಿಲ್ಲ. ಬೇಹದ್ದಿನ ತಂದೆಯನ್ನೇ ತಿಳಿದುಕೊಂಡಿಲ್ಲ, ಶಾಂತಿಗಾಗಿ ಅಲೆದಾಡುತ್ತಿರುತ್ತಾರೆ. ಮನಸ್ಸಿಗೆ ಶಾಂತಿ ಬೇಕು ಎಂದು ಯಾರು ಹೇಳಿದರು? ಆತ್ಮವೇ ಹೇಳುತ್ತದೆ. ಇದನ್ನೂ ಸಹ ಮನುಷ್ಯರು ತಿಳಿದುಕೊಂಡಿಲ್ಲ. ದೇಹಾಭಿಮಾನವಿದೆಯಲ್ಲವೆ. ಸಾಧು-ಸಂತ ಮೊದಲಾದವರೆಲ್ಲರೂ ದುಃಖಿಗಳಾಗಿದ್ದಾರೆ, ಎಲ್ಲರೂ ಶಾಂತಿಯನ್ನು ಬಯಸುತ್ತಾರೆ. ಸಾಧು-ಸಂತರಿಗೂ ಸಹ ಖಾಯಿಲೆ ಬರುತ್ತದೆ, ಅಪಘಾತಗಳಾಗುತ್ತವೆ, ಪ್ರಪಂಚದಲ್ಲಿ ದುಃಖವನ್ನು ಬಿಟ್ಟರೆ ಬೇರೇನೂ ಇಲ್ಲ. ನೀವೀಗ ಬುದ್ಧಿವಂತರಾಗಿದ್ದೀರಿ, ತಂದೆಯು ತಿಳಿಸುತ್ತಾರೆ - ಡ್ರಾಮಾದಲ್ಲಿ ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚ, ಸುಖ ಮತ್ತು ದುಃಖದ ಆಟವು ಮಾಡಲ್ಪಟ್ಟಿದೆ. ತಂದೆಯು ನಿಮ್ಮ ಬುದ್ಧಿಯ ಬೀಗವನ್ನು ತೆರೆದಿದ್ದಾರೆ, ಮತ್ತೆಲ್ಲಾ ಮನುಷ್ಯ ಮಾತ್ರರ ಬುದ್ಧಿಗೆ ಗಾಡ್ರೇಜ್ನ ಬೀಗವು ಹಾಕಲ್ಪಟ್ಟಿದೆ, ಸಂಪೂರ್ಣ ತಮೋಪ್ರಧಾನ ಬುದ್ಧಿಯವರಾಗಿದ್ದಾರೆ. ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ಅವರು ನಮಗೆ ಈ ಆಟವು ಹೇಗೆ ಮಾಡಲ್ಪಟ್ಟಿದೆ ಎಂದು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಸುಖವಿದ್ದಾಗ ದುಃಖದ ಹೆಸರೂ ಇರುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿದೆ - ನಾವು ತಂದೆಯಿಂದ ಸುಖ-ಶಾಂತಿ, ಸಂಪತ್ತಿನ ಆಸ್ತಿಯನ್ನು ಪಡೆಯುತ್ತಿದ್ದೇವೆ. ಸತ್ಯಯುಗದಿಂದ ಹಿಡಿದು ತ್ರೇತಾದ ಅಂತ್ಯದವರೆಗೆ ಯಾವುದೇ ದುಃಖವಿರುವುದಿಲ್ಲ. ನೀವೀಗ ಬೆಳಕಿನಲ್ಲಿದ್ದೀರಿ. ನಮ್ಮ ರಾಜಧಾನಿಯಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದು ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಇದು ಬೇಹದ್ದಿನ ಶಾಲೆಯಾಗಿದೆ, ಬೇಹದ್ದಿನ ತಂದೆಯು ಓದಿಸುತ್ತಾರೆ. ಅವರು ನಮ್ಮ ಅತಿ ಪ್ರಿಯ ತಂದೆಯಾಗಿದ್ದಾರೆ, ಅವರದೇ ಅಪರಂಪಾರ ಮಹಿಮೆಯಿದೆ, ಆ ಸರ್ವ ಶ್ರೇಷ್ಠ ತಂದೆಯು ಶ್ರೀಮತ ಕೊಡುತ್ತಾರೆ. ಉಳಿದೆಲ್ಲಾ ಮನುಷ್ಯ ಮಾತ್ರರು ಆಸುರೀ ಮತದಂತೆ ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಾರೆ. ನೀವು ಶ್ರೀಮತದಂತೆ ಎಲ್ಲರಿಗೆ ಸುಖವನ್ನೇ ಕೊಡಬೇಕಾಗಿದೆ. ಈ ಡ್ರಾಮಾದಲ್ಲಿ ನಾವು ಪಾತ್ರಧಾರಿಗಳಾಗಿದ್ದೇವೆ ಎಂಬುದನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳು ಈಗ ತಿಳಿದುಕೊಳ್ಳುತ್ತೀರಿ - ಈ ಡ್ರಾಮಾದಲ್ಲಿ ಭಾರತವಾಸಿಗಳದೇ ಸರ್ವತೋಮುಖ ಪಾತ್ರವಿದೆ. ಮೊದಲು ನೀವು ಏನನ್ನೂ ತಿಳಿದುಕೊಂಡಿರಲಿಲ್ಲ, ಈಗಂತೂ ಮೂಲವತನದಿಂದ ಹಿಡಿದು ಸೂಕ್ಷ್ಮವತನ, ಸ್ಥೂಲವತನ ಎಲ್ಲವನ್ನೂ ನೀವು ಅರಿತುಕೊಂಡಿದ್ದೀರಿ. ನಿಮಗೆ ಸತ್ಯ ಜ್ಞಾನವಿದೆ. ಪರಮಪಿತ ಪರಮಾತ್ಮನು ನಮಗೆ ಇವರ ಮೂಲಕ ಓದಿಸುತ್ತಿದ್ದಾರೆ. ತಂದೆಯು ನಮಗೆ ತ್ರಿಲೋಕದ ಜ್ಞಾನವನ್ನು ಕೊಡುತ್ತಿದ್ದಾರೆ. ಇದು ಮುಳ್ಳುಗಳ ಕಾಡಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವೀಗ ಮುಳ್ಳುಗಳಿಂದ ಹೂ ಅರ್ಥಾತ್ ಮನುಷ್ಯರಿಂದ ದೇವತೆಗಳಾಗುತ್ತೇವೆ. ಇಲ್ಲಂತೂ ಚಿಕ್ಕವರು, ದೊಡ್ಡವರು ಎಲ್ಲರೂ ದುಃಖ ಕೊಡುತ್ತಾರೆ. ತಾಯಿಗೆ ಗರ್ಭದಲ್ಲಿಯೇ ಮಕ್ಕಳು ದುಃಖ ಕೊಡುತ್ತಾರೆ. ಇದು ಬಹಳ ಛೀ ಛೀ ಹಳೆಯ ಪ್ರಪಂಚವಾಗಿದೆ. ಈ ಸೃಷ್ಟಿಚಕ್ರವನ್ನು ಯಾರೂ ತಿಳಿದುಕೊಂಡಿಲ್ಲ. ನಾವು ಎಲ್ಲಿಂದ ಬಂದೆವು, ಎಷ್ಟು ಜನ್ಮಗಳನ್ನು ತೆಗೆದುಕೊಂಡೆವು ಮತ್ತೆ ಎಲ್ಲಿಗೆ ಹೋಗಬೇಕಾಗಿದೆ?.... ಏನೂ ಗೊತ್ತಿಲ್ಲ. ಬೇಹದ್ದಿನ ತಂದೆ ಅರ್ಥಾತ್ ಎಲ್ಲಾ ಸೀತೆಯರಿಗೆ ರಾಮನು ಒಬ್ಬರೇ ನಿರಾಕಾರನಾಗಿದ್ದಾರೆ, ನೀವೆಲ್ಲರೂ ಸೀತೆಯರಾಗಿದ್ದೀರಿ. ತಂದೆಯು ವರನಾಗಿದ್ದಾರೆ, ಒಬ್ಬ ಪ್ರಿಯತಮನಿಗೆ ಎಲ್ಲರೂ ಪ್ರಿಯತಮೆಯರು, ಭಕ್ತಿನಿಯರಾಗಿದ್ದಾರೆ. ಯಾರೆಲ್ಲಾ ಸೀತೆಯರಿದ್ದಾರೆಯೋ ಎಲ್ಲರೂ ರಾವಣನ ಬಂಧನದಲ್ಲಿ ಸಿಲುಕಿ ಶೋಕವಾಟಿಕೆಯಲ್ಲಿ ಬಂದು ಬಿಟ್ಟಿದ್ದಾರೆ. ಇಡೀ ಪ್ರಪಂಚದ ಎಲ್ಲಾ ಮನುಷ್ಯ ಮಾತ್ರರು ಒಬ್ಬ ಭಗವಂತನನ್ನು ನೆನಪು ಮಾಡುತ್ತಾರೆ. ಭಗವಂತನಿಗೆ ಭಕ್ತರ ರಕ್ಷಕನೆಂದು ಹೇಳುತ್ತಾರೆ. ನೀವೆಲ್ಲರೂ ಈಗ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ಬ್ರಾಹ್ಮಣರಿಗೆ ತಿಳಿದಿದೆ - ನಮಗೆ ಶಿವ ತಂದೆಯು ಓದಿಸುತ್ತಿದ್ದಾರೆ, ತಂದೆಯಿಂದ ಆಸ್ತಿಯು ಅವಶ್ಯವಾಗಿ ಸಿಗುತ್ತದೆ. ಶಿವ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಸ್ವರ್ಗವೆಂದಾದರೂ ಹೇಳಿ ಅಥವಾ ದೈವೀ ರಾಜಧಾನಿ ಎಂದಾದರೂ ಹೇಳಿ - ಇದು ಸ್ವರ್ಗದ ರಾಜಧಾನಿಯಲ್ಲವೆ. ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದಾರೆ, ಇಲ್ಲಿ ಸತ್ಯಯುಗವಿದ್ದಾಗ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಈಗ ಕಲಿಯುಗವಾಗಿದೆ. ಮನುಷ್ಯರಂತೂ ಘೋರ ಅಂಧಕಾರದಲ್ಲಿರುವ ಕಾರಣ ಈಗ ಕಲಿಯುಗದ ಅಂತ್ಯವಾಗಿದೆ, ವಿನಾಶವು ಸನ್ಮುಖದಲ್ಲಿ ನಿಂತಿದೆ ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ನೀವೆಲ್ಲಾ ಸೀತೆಯರ ರಾಮ ಒಬ್ಬರಾಗಿದ್ದಾರೆ. ಸೀತೆಯರೆಲ್ಲರೂ ದುರ್ಗತಿಯಲ್ಲಿದ್ದಾರೆ ಆದರೆ ನಾವು ದುರ್ಗತಿಯಲ್ಲಿದ್ದೇವೆ ಎಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ತಮ್ಮ ಸಾಹುಕಾರಿತನದ ನಶೆಯಿದೆ - ನಮಗೆ ಇಷ್ಟು ಮನೆಗಳಿವೆ, ಇಷ್ಟು ಹಣವಿದೆ, ಇಷ್ಟು ಮಹಲುಗಳಿವೆ ಎಂದು. ಈ ದುಃಖದ ಪ್ರಪಂಚವು ಬದಲಾಗಲಿದೆ, ಮೃತ್ಯು ಸಮ್ಮುಖದಲ್ಲಿ ನಿಂತಿದೆ, ಎಲ್ಲವೂ ಮಣ್ಣು ಪಾಲಾಗುವುದೆಂದು ಯಾರಿಗೂ ಗೊತ್ತಿಲ್ಲ. ಈ ಹಳೆಯ ಪ್ರಪಂಚದಲ್ಲಿ ಏನೆಲ್ಲವನ್ನೂ ನೋಡುತ್ತೀರೋ ಎಲ್ಲವೂ ವಿನಾಶವಾಗಿ ಬಿಡುವುದು, ವಿನಾಶಕ್ಕಾಗಿ ಪೂರ್ಣ ತಯಾರಿಯಾಗುತ್ತಿದೆ. ಇದು ಅದೇ ಮಹಾಭಾರತ ಯುದ್ಧವಾಗಿದೆ. ಅದೇ ಗೀತೆಯ ಭಗವಂತನಾಗಿದ್ದಾರೆ ಆದರೆ ತಂದೆಯ ಚರಿತ್ರೆಯಲ್ಲಿ ಮಗನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಈಗ ಶಿವ ತಂದೆಯು ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ದೊಡ್ಡದಕ್ಕಿಂತ ದೊಡ್ಡ ತಪ್ಪು ಏನೆಂದರೆ - ಭಗವಂತನ ಹೆಸರನ್ನೇ ಮರೆ ಮಾಡಿ ಬಿಟ್ಟಿದ್ದಾರೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮಗೆ ಯಾವುದೇ ಮನುಷ್ಯರು ಸಾಧು-ಸಂತರು ಓದಿಸುವುದಿಲ್ಲ, ಶಿವ ತಂದೆಯು ನಮಗೆ ಓದಿಸುತ್ತಿದ್ದಾರೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ, ಸರ್ವಸ್ವವೂ ಆಗಿದ್ದಾರೆ. ಇದನ್ನು ಮರೆಯಬಾರದಲ್ಲವೆ. ತಂದೆಯು ತಿಳಿಸುತ್ತಾರೆ - ಎಲ್ಲರೂ ನನ್ನ ಮಕ್ಕಳಾಗಿದ್ದಾರೆ ಆದರೆ ಎಲ್ಲರಿಗೂ ಓದಿಸುವುದಿಲ್ಲ. ನಾನು ಭಾರತವಾಸಿಗಳಿಗೇ ಪುನಃ ರಾಜಯೋಗವನ್ನು ಕಲಿಸಲು ಬಂದಿದ್ದೇನೆ. ಭಾರತವಾಸಿಗಳು ಸ್ವರ್ಗವಾಸಿಗಳಾಗಿದ್ದರು, ವಜ್ರ ಸಮಾನರಾಗಿದ್ದರು, ಈಗ ಕವಡೆಯಂತಾಗಿ ಬಿಟ್ಟಿದ್ದಾರೆ. ಮನೆ-ಮನೆಯಲ್ಲಿ ಎಷ್ಟೊಂದು ಅಶಾಂತಿಯಿದೆ. ಬಾಬಾ ನಮಗೆ ಕ್ರೋಧ ಬರುತ್ತದೆ, ಮಕ್ಕಳನ್ನು ಹೊಡೆಯಬೇಕಾಗುತ್ತದೆ ಆದರೆ ನಾವು ಪಂಚ ವಿಕಾರಗಳನ್ನು ಶಿವ ತಂದೆಗೆ ದಾನವಾಗಿ ಕೊಟ್ಟಿದ್ದೇವೆ ಆದರೂ ಸಹ ನಾವು ಹೀಗೇಕೆ ಮಾಡುತ್ತೇವೆಂದು ಭಯವಾಗುತ್ತದೆ ಎಂದು ಕೆಲವರು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಎಲ್ಲರ ಮೇಲೆ ಪಂಚ ವಿಕಾರಗಳ ಗ್ರಹಣವು ಹಿಡಿದಿದೆ. ದೇಹಾಭಿಮಾನದ ಭೂತವು ಬರುವುದರಿಂದ ಮತ್ತೆಲ್ಲಾ ಭೂತಗಳು ಹಿಡಿದುಕೊಳ್ಳುತ್ತವೆ. ಈಗ ತಂದೆಯು ತಿಳಿಸುತ್ತಾರೆ - ಆತ್ಮಾಭಿಮಾನಿಯಾಗಿರಿ. ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ. ಸತ್ಯಯುಗದಲ್ಲಿಯೂ ನಾವು ಆತ್ಮಾಭಿಮಾನಿಗಳಾಗಿದ್ದೇವೆ. ಆತ್ಮನ ಈ ಶರೀರವು ಈಗ ಹಳೆಯದಾಯಿತು, ಆಯಸ್ಸು ಪೂರ್ಣವಾಯಿತು ಆದ್ದರಿಂದ ಈ ಶರೀರವನ್ನು ಬಿಟ್ಟು ಈಗ ಹೊಸದನ್ನು ತೆಗೆದುಕೊಳ್ಳಬೇಕೆಂದು ತಿಳಿಯುತ್ತಾರೆ (ಸರ್ಪದ ಉದಾಹರಣೆ). ಸರ್ಪದ ಒಂದು ಪೆÇರೆಯ ಹಳೆಯದಾದರೆ ಮತ್ತೆ ಇನ್ನೊಂದು ಹೊಸದನ್ನು ತೆಗೆದುಕೊಳ್ಳುತ್ತದೆ. ಸತ್ಯಯುಗಕ್ಕಾಗಿ ಈ ದೃಷ್ಟಾಂತವಿದೆ, ಅಲ್ಲಿ ನೀವು ಈ ರೀತಿ ಶರೀರ ಬಿಡುತ್ತೀರಿ, ದುಃಖದ ಯಾವುದೇ ಮಾತಿರುವುದಿಲ್ಲ. ಇಲ್ಲಿ ಎಷ್ಟೊಂದು ದುಃಖವಾಗುತ್ತದೆ. ಅಳುವುದು, ಚೀರಾಡುವುದು ಎಲ್ಲವೂ ಇರುತ್ತದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇದು ಹಳೆಯ ಪೊರೆಯಾಗಿದೆ, ಇಲ್ಲಿ ಹೊಸ ಪೊರೆಯು ಸಿಗುವುದಿಲ್ಲ. ಇದು ಅಂತಿಮ ಹಳೆಯ ಪಾದರಕ್ಷೆಯಾಗಿದೆ. ನೀವೀಗ ಇದರಿಂದ ಬೇಸತ್ತು ಹೋಗಿದ್ದೀರಿ. ಸತ್ಯಯುಗದಲ್ಲಂತೂ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಈ ಮಾತುಗಳನ್ನೂ ಸಹ ನೀವು ತಿಳಿದುಕೊಳ್ಳುತ್ತೀರಿ. ಇಲ್ಲಿ ಎಷ್ಟೊಂದು ಮಂದಿ ಹೊಸಬರು ಬರುತ್ತಾರೆ ಆದರೆ ಎಲ್ಲರೂ ತಿಳಿದುಕೊಳ್ಳುತ್ತಾರೆಯೇ! ಎರಡು, ಮೂರು ದಿನಗಳು ಇಲ್ಲಿ ತಿಳಿದುಕೊಂಡು ಹೋಗುತ್ತಾರೆ ಮತ್ತೆ ಮರೆತು ಹೋಗುತ್ತಾರೆ. ಯಾರಾದರೂ ಚೆನ್ನಾಗಿ ಕೇಳಿ ಖುಷಿಯಾದರೆ ಅವರು ಪ್ರಜೆಗಳಲ್ಲಿ ಬರುತ್ತಾರೆ. ಪ್ರಜೆಗಳೂ ಸಹ ಬಹಳ ಮಂದಿ ಆಗಬೇಕಲ್ಲವೆ. ಇದು ಈಶ್ವರನ ಧರೆ ಅಥವಾ ಮನೆಯಾಗಿದೆ. ನೀವು ಈಶ್ವರನ ಮನೆಯಲ್ಲಿ ಕುಳಿತಿದ್ದೀರಿ. ಪರಮಪಿತನು ತನ್ನ ಪರಮಧಾಮವನ್ನು ಬಿಟ್ಟು ಇಲ್ಲಿ ಸಾಧಾರಣ ತನುವಿನಲ್ಲಿ ಕುಳಿತಿದ್ದಾರೆ. ಅಲ್ಲಂತೂ ತಂದೆಯ ಬಳಿ ಆತ್ಮಗಳಿರುತ್ತೀರಿ, ಇಲ್ಲಿ ಸಂಗಮದಲ್ಲಿ ಸ್ವಯಂ ತಂದೆಯೇ ಪಾವನರನ್ನಾಗಿ ಮಾಡಲು ಬಂದಿದ್ದಾರೆ, ಅವರಿಗೆ ಶಿವ ನಿರಾಕಾರನೆಂದು ಹೇಳುತ್ತಾರೆ. ನಿರಾಕಾರ ತಂದೆಯನ್ನು ಆತ್ಮರು ಓ ಗಾಡ್ ಫಾದರ್ ಎಂದು ಹೇಳಿ ಕರೆಯುತ್ತಾರೆ. ಮನುಷ್ಯರು ತಿಳುವಳಿಕೆಯಿಲ್ಲದೆ ಓ ಗಾಡ್ ಫಾದರ್ ಎಂದು ಹೇಳುತ್ತಾರೆ. ಈ ಲಕ್ಷ್ಮೀ-ನಾರಾಯಣರನ್ನೂ ಯುರೋಪಿಯನ್ನರು ಭಗವಾನ್-ಭಗವತಿಯೆಂದು ಹೇಳುತ್ತಾರೆ. ಇವರನ್ನು ಹೀಗೆ ಮಾಡಿದವರು ಯಾರು? ಈ ದೇವತೆಗಳಿಗೆ ಸರ್ವ ಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಿದ್ದೀರಿ ಎಂದು ಹೇಳುತ್ತಾರೆ ಮತ್ತು ತಮಗೆ ಏನು ಹೇಳಿಕೊಳ್ಳುತ್ತಾರೆ? ಇವರೂ ಸಹ ಮನುಷ್ಯರೇ ಆಗಿದ್ದಾರೆ, ಭಾರತದಲ್ಲಿಯೇ ರಾಜ್ಯ ಮಾಡಿ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಮುಂದೆ ಹೋಗಿ ಮಹಿಮೆ ಮಾಡುತ್ತಾರೆ. ತಮ್ಮನ್ನು ನೀಚ, ಪಾಪಿ ಎಂದು ಹೇಳಿಕೊಳ್ಳುತ್ತಾರೆ. ಕೃಷ್ಣನ ಮಂದಿರದಲ್ಲಿಯೂ ಹೋಗಿ ಮಹಿಮೆ ಮಾಡುತ್ತಾರೆ. ಶಿವನಿಗೆ ಈ ಮಹಿಮೆ ಮಾಡುವುದಿಲ್ಲ, ಅವರ ಮಹಿಮೆಯೇ ಬೇರೆಯಾಗಿದೆ. ಬಹುತೇಕವಾಗಿ ಶಿವನ ಬಳಿ ಹೋಗುತ್ತಾರೆ. ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ ಮತ್ತೆ ಶಿವನನ್ನು ಭಂಗಿ ಸೇದುವವರು, ದತ್ತೂರಿಯನ್ನು ತಿನ್ನುವವರೆಂದು ಹೇಳಿ ಬಿಡುತ್ತಾರೆ. ಅರೆ! ಅಲ್ಲಿ ಭಂಗಿ, ದತ್ತೂರಿಯು ಎಲ್ಲಿಂದ ಬಂದಿತು? ಏನನ್ನೂ ತಿಳಿದುಕೊಂಡಿಲ್ಲ. ಪತಿ ಬೇಕು, ಇದು ಬೇಕು, ಅದು ಬೇಕು... ಎಂದು ಬೇಡುತ್ತಿರುತ್ತಾರೆ. ದೀಪಾವಳಿಯಂದು ಲಕ್ಷ್ಮಿಯ ಆಹ್ವಾನವನ್ನೂ ಮಾಡುತ್ತಾರೆ. ಅವರು ಯಾರೆಂಬುದು ಯಾರಿಗೂ ತಿಳಿದಿಲ್ಲ. ಎಂದಾದರೂ 8-10 ಭುಜಗಳಿರುತ್ತವೆಯೇ? ಪ್ರವೃತ್ತಿ ಮಾರ್ಗವೆಂದು ಹೀಗೆ ಚತುರ್ಭುಜವನ್ನು ರೂಪವನ್ನು ತೋರಿಸುತ್ತಾರೆ, ಅವರಿಗೆ ವಿಷ್ಣುವೆಂದು ಹೆಸರನ್ನು ಇಟ್ಟಿದ್ದಾರೆ. ಲಕ್ಷ್ಮೀ-ನಾರಾಯಣರಂತೂ ಸತ್ಯಯುಗದಲ್ಲಿ ಇರುತ್ತಾರೆ, ವಿಷ್ಣುವಿನ ಎರಡು ರೂಪಗಳಾದ ಲಕ್ಷ್ಮೀ-ನಾರಾಯಣರ ಮೂಲಕ ಪಾಲನೆಯಾಗುತ್ತದೆ ಎಂದು ಮನುಷ್ಯರಿಗೆ ತಿಳಿದೇ ಇಲ್ಲ. ಚಿತ್ರಗಳಲ್ಲಿ ಲಕ್ಷ್ಮಿಗೂ 4 ಭುಜಗಳನ್ನು ತೋರಿಸುತ್ತಾರೆ, ನಾಲ್ಕು ಭುಜದವರಿಗೆ ಮಕ್ಕಳಾದರೆ ಅವರಿಗೂ ನಾಲ್ಕು ಭುಜಗಳಿರಬೇಕು. ಏನನ್ನೂ ತಿಳಿದುಕೊಳ್ಳುವುದಿಲ್ಲ. ನೀವೀಗ ತಿಳಿದುಕೊಳ್ಳುತ್ತೀರಿ - ತಂದೆಯು ಬರುವವರೆಗೆ ನಾವೂ ಸಹ ತಿಳಿದುಕೊಂಡಿರಲಿಲ್ಲ. ಈಗ ಇಡೀ ವಿಶ್ವದ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೇವೆ. ತಂದೆಯು ಬಂದು ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡುತ್ತಾರೆ. ಹೇ ಪತಿತ-ಪಾವನ ಬನ್ನಿ ಎಂದು ಮನುಷ್ಯರು ಕರೆಯುತ್ತಾರೆ, ಪರಮಾತ್ಮನು ಹೇಗೆ ಬರುವರು? ಹೇಗೆ ಬಂದು ಪತಿತರನ್ನು ಪಾವನ ಮಾಡುವುದು? ತಂದೆಯು ತಿಳಿಸುತ್ತಾರೆ - 5000 ವರ್ಷಗಳ ಮೊದಲೂ ಸಹ ನಾನು ದೈವೀ ಸ್ವರಾಜ್ಯವನ್ನು ಸ್ಥಾಪನೆ ಮಾಡಿದ್ದೆನು, ನಂತರ ನೀವು 84 ಜನ್ಮಗಳನ್ನು ಹೇಗೆ ತಿಳಿದುಕೊಂಡಿರಿ? ಈ ತಿಳುವಳಿಕೆಯು ಮೊದಲು ನಿಮ್ಮ ಬುದ್ಧಿಯಲ್ಲಿ ಇರಲೇ ಇಲ್ಲ. ಈ ಬ್ರಹ್ಮಾರವರಿಗೂ ಸಹ ತಿಳಿದಿರಲಿಲ್ಲ, ರಾಧೆ-ಕೃಷ್ಣ, ಲಕ್ಷ್ಮೀ-ನಾರಾಯಣರ ಪೂಜೆ ಮಾಡುತ್ತಿರುತ್ತಾರೆ ಆದರೆ ರಾಧೆ-ಕೃಷ್ಣರೇ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣರಾಗಿದ್ದಾರೆ ಆದ್ದರಿಂದ ರಾಜಕುಮಾರಿ ರಾಧೆ, ರಾಜಕುಮಾರ ಕೃಷ್ಣನೆಂದು ಹೇಳಲಾಗುತ್ತದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಸ್ವಯಂವರದ ನಂತರ ಮಹಾರಾಜ-ಮಹಾರಾಣಿಯಾಗುತ್ತಾರೆ, ಇವರೇ ಆ ರೀತಿ ಆಗುತ್ತಿದ್ದಾರೆ, ಆದರೆ ಇವರಿಗೂ ಸಹ ಅದು ತಿಳಿದಿರಲಿಲ್ಲ. ಭಲೆ ಯಾರಿಗಾದರೂ ಸಾಕ್ಷಾತ್ಕಾರವಾಗಬಹುದು ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಆದರೂ ಸಹ ಭಕ್ತರ ಭಾವನೆಯನ್ನು ಅಲ್ಪಕಾಲಕ್ಕಾಗಿ ಪೂರ್ಣ ಮಾಡಲು ನಾನು ಸಾಕ್ಷಾತ್ಕಾರ ಮಾಡಿಸುತ್ತೇನೆ. ಇಲ್ಲಂತೂ ಸಾಕ್ಷಾತ್ಕಾರದ ಮಾತೇ ಇಲ್ಲ. ತಂದೆಯು ತಿಳಿಸುತ್ತಾರೆ - ಸಾಕ್ಷಾತ್ಕಾರದಲ್ಲಿ ಮಾಯೆಯು ಪ್ರವೇಶ ಮಾಡಿ ಬಿಟ್ಟರೆ ನೀವು ಪದವಿ ಭ್ರಷ್ಟರಾಗಿ ಬಿಡುತ್ತೀರಿ. ನಮಗೆ ಶಿವ ತಂದೆಯ ಸಾಕ್ಷಾತ್ಕಾರವಾಗಲಿ ಎಂದು ಅನೇಕರು ಹೇಳುತ್ತಾರೆ. ಅರೆ! ನಿಮಗೆ ತಿಳಿಸಲಾಗಿದೆ – ಮಿಂಚು ಹುಳು ಎಷ್ಟು ಚಿಕ್ಕದಿರುತ್ತದೆ, ಅದನ್ನು ಕಣ್ಣುಗಳಿಂದ ನೋಡಬಹುದಾಗಿದೆ. ಆತ್ಮವಂತೂ ಅದಕ್ಕಿಂತಲೂ ಚಿಕ್ಕ ಬಿಂದುವಾಗಿದೆ. ಹೇಗೆ ಆತ್ಮವಿದೆಯೋ ಹಾಗೆಯೇ ಪರಮಾತ್ಮನ ರೂಪವಿದೆ. ಸಾಕ್ಷಾತ್ಕಾರವಾದರೂ ಸಹ ಅದೇ ಚಿಕ್ಕ ಬಿಂದುವಿನದಾಗುತ್ತದೆ. ಆತ್ಮವಂತೂ ಚಿಕ್ಕ ಬಿಂದುವಾಗಿದೆ, ಅದು ಭೃಕುಟಿಯ ಮಧ್ಯದಲ್ಲಿರುತ್ತದೆ. ಆತ್ಮದ ಸಾಕ್ಷಾತ್ಕಾರವಾದರೂ ಸಹ ಏನನ್ನೂ ತಿಳಿದುಕೊಳ್ಳುವುದಿಲ್ಲ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವೀಗ ಶಿವ ತಂದೆಯ ಸಂತಾನರಾಗಿದ್ದೇವೆ. ಎಲ್ಲಾ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಗುರಿ-ಧ್ಯೇಯವೇ ಇದಾಗಿದೆ. ನಾವು ವಿದ್ಯಾರ್ಥಿಗಳಲ್ಲವೆ. ತಂದೆಯಿಂದ ಸಹಜ ರಾಜಯೋಗವನ್ನು ಕಲಿಯಲು ಬಂದಿದ್ದೇವೆಂದು ನೀವು ಹೇಳುತ್ತೀರಿ. ಇದು ಗುರಿ-ಧ್ಯೇಯವಾಗಿದೆ. ಮಕ್ಕಳು ಇದನ್ನು ಮರೆಯಬಾರದು. ಭಕ್ತಿ ಮಾರ್ಗದಲ್ಲಿ ಮಕ್ಕಳು ದೇವತೆಗಳ ಚಿತ್ರಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುತ್ತಾರೆ ಹಾಗೆಯೇ ನೀವೂ ಸಹ ಈ ತ್ರಿಮೂರ್ತಿಯ ಚಿತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳಬೇಕು, ಈ ಶಿವ ತಂದೆಯ ಮೂಲಕ ನಾವು ಈ ಲಕ್ಷ್ಮೀ-ನಾರಾಯಣರಾಗುತ್ತಿದ್ದೇವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶಿವ ತಂದೆಗೆ ವಿಕಾರಗಳ ದಾನವನ್ನು ಕೊಟ್ಟ ಮೇಲೆ ಮತ್ತೆಂದೂ ಹಿಂತೆಗೆದುಕೊಳ್ಳಬಾರದು. ದೇಹಾಭಿಮಾನದ ಭೂತದಿಂದ ಪಾರಾಗಬೇಕು. ಈ ಭೂತದಿಂದ ಮತ್ತೆಲ್ಲಾ ಭೂತಗಳು ಬಂದು ಬಿಡುತ್ತವೆ, ಆದ್ದರಿಂದ ಆತ್ಮಾಭಿಮಾನಿಯಾಗುವ ಅಭ್ಯಾಸ ಮಾಡಬೇಕಾಗಿದೆ.

2. ಧ್ಯಾನ-ಸಾಕ್ಷಾತ್ಕಾರದ ಆಸೆಯನ್ನು ಇಟ್ಟುಕೊಳ್ಳಬಾರದು. ಗುರಿ-ಧ್ಯೇಯವನ್ನು ಸನ್ಮುಖದಲ್ಲಿ ಇಟ್ಟುಕೊಂಡು ಪುರುಷಾರ್ಥ ಮಾಡಬೇಕಾಗಿದೆ. ಶ್ರೀಮತದಂತೆ ಎಲ್ಲರಿಗೆ ಸುಖ ಕೊಡಬೇಕಾಗಿದೆ.

ವರದಾನ:
ಮಾಡಿಸುವವರ ಸ್ಮೃತಿಯಿಂದ ಸೇವೆಯಲ್ಲಿ ಸದಾ ನಿರ್ಮಾಣದ ಕಾರ್ಯವನ್ನು ಮಾಡುವಂತಹ ಕರ್ಮಯೋಗಿ ಭವ.

ಯಾವುದೇ ಕರ್ಮವು ಕರ್ಮ ಯೋಗಿಯ ಸ್ಥಿತಿಯಲ್ಲಿ ಪರಿವರ್ತನೆ ಮಾಡಿರಿ, ಕೇವಲ ಕರ್ಮ ಮಾಡುವವರಲ್ಲ ಆದರೆ ಕರ್ಮಯೋಗಿ ಆಗಿದ್ದೀರಿ. ಕರ್ಮ ಅರ್ಥಾತ್ ವ್ಯವಹಾರ ಮತ್ತು ಯೋಗ ಅರ್ಥಾತ್ ಪರಮಾರ್ಥ ಎರಡರ ಸಮತೋಲನವಿರಲಿ. ಶರೀರ ನಿರ್ವಹಣೆಯ ಹಿಂದೆ ಆತ್ಮ ನಿರ್ವಹಣೆಯನ್ನು ಮರೆಯಬಾರದು. ಏನೆಲ್ಲಾ ಕರ್ಮವನ್ನು ಮಾಡುತ್ತೀರಿ ಅದು ಈಶ್ವರನ ಸೇವಾರ್ಥವಾಗಿ ಇರಲಿ. ಇದಕ್ಕಾಗಿ ಸೇವೆಗಳಲ್ಲಿ ನಿಮಿತ್ತನೆಂಬ ಮಂತ್ರ ಅಥವಾ ಮಾಡಿಸುವವರ ಸ್ಮೃತಿಯ ಸಂಕಲ್ಪವು ಸದಾ ನೆನಪಿರಲಿ. ಮಾಡಿಸುವವರನ್ನು ಮರೆಯದಿದ್ದರೆ ಸೇವೆಯಲ್ಲಿ ನಿರಹಂಕಾರಿ ಗುಣವೇ ನಿರ್ಮಾಣ ಮಾಡುತ್ತಿರುತ್ತದೆ.

ಸ್ಲೋಗನ್:
ಸೇವೆ ಅಥವಾ ಸಂಬಂಧ-ಸಂಪರ್ಕದಲ್ಲಿ ವಿಘ್ನವುಂಟಾಗಲು ಕಾರಣವೇನೆಂದರೆ ಹಳೆಯ ಸಂಸ್ಕಾರವಿರುವುದು, ಆ ಸಂಸ್ಕಾರಗಳೊಂದಿಗೆ ವೈರಾಗ್ಯವಿರಲಿ.

ಅವ್ಯಕ್ತ ಸೂಚನೆಗಳು:- ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ.

ಸಮಯ ಪ್ರಮಾಣ ಈಗ ಸದಾ ಅಚಲ ಅಡೋಲ ಸರ್ವ ಖಜಾನೆಗಳಿಂದ ಸಂಪನ್ನರಾಗಿ. ಸ್ವಲ್ಪವೂ ಸಹ ಏರುಪೇರು ಆಗುತ್ತೀರಿ ಎಂದರೆ ಸರ್ವ ಖಜಾನೆಗಳ ಅನುಭವ ಆಗುವುದಿಲ್ಲ. ತಂದೆಯ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸದಾ ಖಾಯಂ ಆಗಿ ಇಟ್ಟುಕೊಳ್ಳುವ ಸಾಧನ ಆಗಿದೆ ಸದಾ ಅಚಲ ಅಡೋಲರಾಗಿ ಇರುವುದು. ಅಚಲರಾಗಿರುವುದರಿಂದ ಸದಾ ಖುಷಿಯ ಅನುಭವ ಆಗುತ್ತಾ ಇರುತ್ತದೆ. ಹೇಗೆ ವಿನಾಶಿ ಧನ, ಹೆಸರು - ಮಾನ್ಯತೆ - ಆಡಂಬರ, ಪದವಿ ಇತ್ಯಾದಿಗಳು ಸಿಗುತ್ತದೆ ಎಂದರೆ ಖುಷಿಯಾಗುತ್ತದೆ ಅಲ್ಲವೇ. ಇದಂತೂ ಅವಿನಾಶಿ ಖುಷಿಯಾಗಿದೆ ಆದರೆ ಈ ಖುಷಿ ಅವರಿಗೆ ಇರುತ್ತದೆ ಯಾರು ಅಚಲ ಅಡೋಲ ಏಕ-ರಸ ಸ್ಥಿತಿಯಲ್ಲಿ ಇರುತ್ತಾರೆ.