21.07.25 Morning Kannada Murli Om Shanti
BapDada Madhuban
ಮಧುರ ಮಕ್ಕಳೇ -
ಪುರುಷಾರ್ಥ ಮಾಡಿ ದೈವೀ ಗುಣಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ, ಯಾರಿಗೂ ದುಃಖವನ್ನು
ಕೊಡಬೇಡಿ, ನಿಮ್ಮಲ್ಲಿ ಯಾವುದೇ ಆಸುರೀ ಚಲನೆಯಿರಬಾರದು.
ಪ್ರಶ್ನೆ:
ಯಾವ ಆಸುರೀ ಗುಣ
ನಿಮ್ಮ ಶೃಂಗಾರವನ್ನು ಹಾಳು ಮಾಡಿ ಬಿಡುತ್ತದೆ?
ಉತ್ತರ:
ಪರಸ್ಪರದಲ್ಲಿ
ಹೊಡೆದಾಡುವುದು-ಜಗಳವಾಡುವುದು, ಮುನಿಸಿಕೊಳ್ಳುವುದು, ಸೇವಾಕೇಂದ್ರದಲ್ಲಿ ಬೆದರಿಕೆ ಹಾಕುವುದು,
ದುಃಖ ಕೊಡುವುದು - ಇವು ಆಸುರೀ ಗುಣಗಳಾಗಿವೆ. ಇವು ನಿಮ್ಮ ಶೃಂಗಾರವನ್ನು ಕೆಡಿಸುತ್ತವೆ. ಯಾವ
ಮಕ್ಕಳು ತಂದೆಯವರಾಗಿಯೂ ಈ ಆಸುರೀ ಗುಣಗಳ ತ್ಯಾಗ ಮಾಡುವುದಿಲ್ಲ, ಉಲ್ಟಾ ಕರ್ಮಗಳನ್ನು ಮಾಡುವರೋ
ಅವರಿಗೆ ಬಹಳ ನಷ್ಟವಾಗುತ್ತದೆ. ಲೆಕ್ಕಾಚಾರವೇ ಲೆಕ್ಕಾಚಾರವಿದೆ. ತಂದೆಯ ಜೊತೆ ಧರ್ಮರಾಜನೂ ಇದ್ದಾರೆ.
ಗೀತೆ:
ಭೋಲಾನಾಥನಿಗಿಂತ
ಭಿನ್ನ ಯಾರೂ ಇಲ್ಲ........
ಓಂ ಶಾಂತಿ.
ಆತ್ಮೀಯ ಮಕ್ಕಳು ಇದನ್ನಂತೂ ಅರಿತಿದ್ದೀರಿ – ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ, ಮನುಷ್ಯರು
ಕೇವಲ ಹಾಡುತ್ತಾರೆ ಮತ್ತು ನೀವು ದಿವ್ಯ ದೃಷ್ಟಿಯಿಂದ ನೋಡುತ್ತೀರಿ. ನೀವು ಬುದ್ಧಿಯಿಂದಲೂ
ಅರಿತುಕೊಂಡಿದ್ದೀರಿ, ಅವರು ನಮಗೆ ಓದಿಸುತ್ತಿದ್ದಾರೆ, ಆತ್ಮವೇ ಶರೀರದಿಂದ ಓದುತ್ತದೆ, ಎಲ್ಲವನ್ನೂ
ಶರೀರದಿಂದ ಆತ್ಮವೇ ಮಾಡುತ್ತದೆ. ಶರೀರವು ವಿನಾಶಿಯಾಗಿದೆ, ಇದನ್ನು ಆತ್ಮವು ಧಾರಣೆ ಮಾಡಿ
ಪಾತ್ರವನ್ನಭಿನಯಿಸುತ್ತದೆ. ಆತ್ಮದಲ್ಲಿಯೇ ಪೂರ್ಣ ಪಾತ್ರವು ನಿಗಧಿಯಾಗಿದೆ. 84 ಜನ್ಮಗಳ ಪಾತ್ರವು
ಆತ್ಮದಲ್ಲಿಯೇ ನಿಗಧಿಯಾಗಿದೆ. ಮೊಟ್ಟ ಮೊದಲು ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ. ತಂದೆಯು
ಸರ್ವಶಕ್ತಿವಂತನಾಗಿದ್ದಾರೆ. ಅವರಿಂದ ನೀವು ಮಕ್ಕಳಿಗೆ ಶಕ್ತಿಯು ಸಿಗುತ್ತದೆ. ಯೋಗದಿಂದ ಹೆಚ್ಚಿನ
ಶಕ್ತಿಯು ಸಿಗುತ್ತದೆ. ಇದರಿಂದ ನೀವು ಪಾವನರಾಗುತ್ತೀರಿ. ತಂದೆಯು ನಿಮಗೆ ವಿಶ್ವದ ಮೇಲೆ ರಾಜ್ಯಭಾರ
ಮಾಡುವ ಶಕ್ತಿಯನ್ನು ಕೊಡುತ್ತಾರೆ. ಇಷ್ಟು ಮಹಾನ್ ಶಕ್ತಿಯನ್ನು ಕೊಡುತ್ತಾರೆ ಆ ವಿಜ್ಞಾನದ
ಅಭಿಮಾನಿಗಳು ಇಷ್ಟೆಲ್ಲವನ್ನೂ ವಿನಾಶಕ್ಕಾಗಿ ತಯಾರು ಮಾಡುತ್ತಾರೆ. ಅವರ ಬುದ್ಧಿಯು ವಿನಾಶಕ್ಕಾಗಿಯೇ
ಇದೆ, ನಿಮ್ಮ ಬುದ್ಧಿಯು ಅವಿನಾಶಿ ಪದವಿಯನ್ನು ಪಡೆಯುವುದಕ್ಕಾಗಿ ಇದೆ. ನಿಮಗೆ ಬಹಳ ಶಕ್ತಿಯು
ಸಿಗುತ್ತದೆ ಅದರಿಂದ ನೀವು ವಿಶ್ವದ ಮೇಲೆ ರಾಜ್ಯವನ್ನು ಪಡೆಯುತ್ತೀರಿ. ಅಲ್ಲಿ
ಪ್ರಜಾಡಳಿತವಿರುವುದಿಲ್ಲ. ಅಲ್ಲಿರುವುದೇ ರಾಜ-ರಾಣಿಯರ ರಾಜ್ಯ. ಸರ್ವಶ್ರೇಷ್ಠನು ಭಗವಂತನಾಗಿದ್ದಾರೆ,
ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ. ಲಕ್ಷ್ಮೀ-ನಾರಾಯಣರಿಗೆ ಕೇವಲ ಮಂದಿರಗಳನ್ನು ಕಟ್ಟಿಸಿ
ಪೂಜಿಸುತ್ತಾರೆ ಆದರೂ ಸಹ ಶ್ರೇಷ್ಠಾತಿ ಶ್ರೇಷ್ಠನು ಭಗವಂತನೆಂದೇ ಗಾಯನವಿದೆ. ನೀವೀಗ
ತಿಳಿದುಕೊಂಡಿದ್ದೀರಿ- ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು, ಬೇಹದ್ದಿನ ತಂದೆಯಿಂದ
ಶ್ರೇಷ್ಠ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಅಂದಾಗ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು!
ಯಾರಿಂದ ಏನಾದರೂ ಸಿಗುತ್ತದೆಯೋ ಅವರನ್ನು ನೆನಪು ಮಾಡಲಾಗುತ್ತದೆಯಲ್ಲವೆ. ಕನ್ಯೆಗೆ ಪತಿಯೊಂದಿಗೆ
ಎಷ್ಟು ಪ್ರೀತಿಯಿರುತ್ತದೆ! ಪತಿಯ ಹಿಂದೆ ಪ್ರಾಣವನ್ನೇ ಕೊಡುತ್ತಾರೆ. ಪತಿಯು ಶರೀರ ಬಿಟ್ಟಾಗ
ಚೀರಾಡುತ್ತಾರೆ. ಈ ತಂದೆಯಂತೂ ಪತಿಯರಿಗೂ ಪತಿಯಾಗಿದ್ದಾರೆ. ಈ ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು
ಪ್ರಾಪ್ತಿ ಮಾಡಿಸುವುದಕ್ಕಾಗಿ ಎಷ್ಟೊಂದು ಶೃಂಗರಿಸುತ್ತಿದ್ದಾರೆ ಅಂದಾಗ ಮಕ್ಕಳಲ್ಲಿ ಎಷ್ಟೊಂದು
ನಶೆಯಿರಬೇಕು! ದೈವೀ ಗುಣಗಳನ್ನು ಇಲ್ಲಿಯೇ ಧಾರಣೆ ಮಾಡಿಕೊಳ್ಳಬೇಕಾಗಿದೆ. ಅನೇಕರಲ್ಲಿ ಇಲ್ಲಿಯವರೆಗೆ
ಆಸುರೀ ಅವಗುಣಗಳಿವೆ- ಜಗಳ-ಕಲಹ ಮಾಡುವುದು, ಮುನಿಸಿಕೊಳ್ಳುವುದು, ಸೇವಾಕೇಂದ್ರದಲ್ಲಿ ಬೆದರಿಕೆ
ಹಾಕುವುದು... ತಂದೆಗೆ ಗೊತ್ತಿದೆ- ಬಹಳಷ್ಟು ದೂರುಗಳು ಬರುತ್ತವೆ, ಕಾಮ ಮಹಾಶತ್ರುವಾಗಿದೆ ಅಂದಮೇಲೆ
ಈ ಕ್ರೋಧವೂ ಸಹ ಕಡಿಮೆ ಶತ್ರುವೇನಲ್ಲ. ಅವರ ಮೇಲಿನ ಪ್ರೀತಿ ನನ್ನ ಮೇಲೆಕಿಲ್ಲ? ಅವರೊಂದಿಗೆ ಮಾತ್ರ
ಕೇಳಿದರು, ನನ್ನೊಂದಿಗೆ ಏಕೆ ಕೇಳಲಿಲ್ಲ? ಹೀಗೆ ಹೇಳುವಂತಹ ಸಂಶಯ ಬುದ್ಧಿಯವರು ಅನೇಕರಿದ್ದಾರೆ,
ರಾಜಧಾನಿಯು ಸ್ಥಾಪನೆಯಾಗುತ್ತಿದೆಯಲ್ಲವೆ. ಇಂತಿಂತಹವರು ಯಾವ ಪದವಿಯನ್ನು ಪಡೆಯುವರು? ಪದವಿಯಲ್ಲಂತೂ
ಬಹಳ ಅಂತರವಾಗಿ ಬಿಡುತ್ತದೆ. ಕೂಲಿಗಾರರನ್ನು ನೋಡಿ- ಒಳ್ಳೊಳ್ಳೆಯ ಮಹಲುಗಳಲ್ಲಿರುತ್ತಾರೆ. ಕೆಲವರು
ಇನ್ನೆಲ್ಲಿಯೋ ಇರುತ್ತಾರೆ ಪ್ರತಿಯೊಬ್ಬರು ಪುರುಷಾರ್ಥ ಮಾಡಿ ದೈವೀ ಗುಣಗಳನ್ನು ಧಾರಣೆ
ಮಾಡಿಕೊಳ್ಳಬೇಕಾಗಿದೆ. ದೇಹಾಭಿಮಾನದಲ್ಲಿ ಬರುವುದರಿಂದ ಆಸುರೀ ಚಲನೆಯಾಗುತ್ತದೆ. ಯಾವಾಗ
ದೇಹೀ-ಅಭಿಮಾನಿಗಳಾಗಿ ಚೆನ್ನಾಗಿ ಧಾರಣೆ ಮಾಡುತ್ತೀರೋ ಆಗ ಶ್ರೇಷ್ಠ ಪದವಿಯನ್ನು ಪಡೆಯುವಿರಿ.
ದೈವೀಗುಣಗಳನ್ನು ಧಾರಣೆ ಮಾಡುವಂತಹ ಪುರುಷಾರ್ಥ ಮಾಡಬೇಕಾಗಿದೆ. ಯಾರಿಗೂ ದುಃಖ ಕೊಡಬಾರದು. ನೀವು
ಮಕ್ಕಳು ದುಃಖಹರ್ತ-ಸುಖಕರ್ತನಾದ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಯಾರಿಗೂ ದುಃಖವನ್ನು ಕೊಡಬಾರದು.
ಯಾರು ಸೇವಾಕೇಂದ್ರವನ್ನು ಸಂಭಾಲನೆ ಮಾಡುವರೋ ಅವರಮೇಲೆ ಬಹಳ ಜವಾಬ್ದಾರಿಯಿದೆ. ಹೇಗೆ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಒಂದುವೇಳೆ ಯಾರಾದರೂ ತಪ್ಪು ಮಾಡಿದರೆ ನೂರುಪಟ್ಟು ಶಿಕ್ಷೆಯಾಗುತ್ತದೆ.
ದೇಹಾಭಿಮಾನವಿದ್ದರೆ ಬಹಳ ನಷ್ಟವಾಗುತ್ತದೆ ಏಕೆಂದರೆ ನೀವು ಬ್ರಾಹ್ಮಣರನ್ನು ಸುಧಾರಣೆ ಮಾಡಲು
ನಿಮಿತ್ತರಾಗಿದ್ದೀರಿ. ಒಂದುವೇಳೆ ತಾನೇ ಸುಧಾರಣೆಯಾಗದಿದ್ದರೆ ಅನ್ಯರನ್ನೇನು ಸುಧಾರಣೆ ಮಾಡುತ್ತೀರಿ!
ಬಹಳ ನಷ್ಟವಾಗಿ ಬಿಡುತ್ತದೆ. ಇದು ಪಾಂಡವ ಸರ್ಕಾರವಲ್ಲವೆ. ಶ್ರೇಷ್ಠಾತಿ ಶ್ರೇಷ್ಠನು
ತಂದೆಯಾಗಿದ್ದಾರೆ ಮತ್ತು ಅವರ ಜೊತೆ ಧರ್ಮರಾಜನೂ ಇದ್ದಾರೆ. ಧರ್ಮರಾಜನ ಮೂಲಕ ಬಹಳ ದೊಡ್ಡ
ಶಿಕ್ಷೆಯನ್ನು ಅನುಭವಿಸುವಿರಿ. ಇಂತಹ ಕರ್ಮವನ್ನೇನಾದರೂ ಮಾಡಿದರೆ ಬಹಳ ನಷ್ಟವುಂಟಾಗುತ್ತದೆ.
ಲೆಕ್ಕವೇ ಲೆಕ್ಕವಿದೆ. ತಂದೆಯ ಬಳಿ ಪೂರ್ಣ ಲೆಕ್ಕವಿರುತ್ತದೆ. ಭಕ್ತಿಮಾರ್ಗದಲ್ಲಿ ಲೆಕ್ಕವೇ
ಲೆಕ್ಕವಿರುತ್ತದೆ. ಭಗವಂತನು ನಿಮ್ಮ ಲೆಕ್ಕವನ್ನು ತೆಗೆದುಕೊಳ್ಳುವರೆಂದು ಹೇಳುತ್ತಾರೆ. ಇಲ್ಲಿಯೂ
ಸಹ ಸ್ವಯಂ ತಂದೆಯೇ ಹೇಳುತ್ತಾರೆ- ಧರ್ಮರಾಜನು ನಿಮ್ಮ ಬಹಳ ಲೆಕ್ಕವನ್ನು ತೆಗೆದುಕೊಳ್ಳುವರು ಮತ್ತೆ
ಆ ಸಮಯದಲ್ಲಿ ಏನು ಮಾಡಲು ಸಾಧ್ಯ! ನಾವು ಇಂತಿಂತಹ ಕರ್ಮ ಮಾಡಿದೆವೆಂದು ಸಾಕ್ಷಾತ್ಕಾರವಾಗುವುದು.
ಅಲ್ಲಾದರೂ ಸ್ವಲ್ಪ ಪೆಟ್ಟು ತಿನ್ನಬೇಕಾಗುತ್ತದೆ ಆದರೆ ಇಲ್ಲಿ ಬಹಳಷ್ಟು ಶಿಕ್ಷೆಯನ್ನು
ಅನುಭವಿಸಬೇಕಾಗುವುದು. ಇದಕ್ಕಾಗಿ ಮೋರಧಜ, ತಾಮರಧಜನ ಕಥೆಯನ್ನು ತಿಳಿಸುತ್ತಾರೆ. ಈ ಸಮಯದೊಂದಿಗೆ ಈ
ಕಥೆಯ ಸಂಬಂಧವಿದೆ. ನೀವು ಮಕ್ಕಳು ಸತ್ಯಯುಗದಲ್ಲಿ ಗರ್ಭ ಜೈಲಿನಲ್ಲಿ ಇರುವುದಿಲ್ಲ. ಅಲ್ಲಿ ಗರ್ಭವು
ಮೆಹಲಿನ ಸಮಾನವಿರುತ್ತದೆ. ಯಾವುದೇ ಪಾಪ ಇತ್ಯಾದಿಗಳನ್ನು ಮಾಡುವುದಿಲ್ಲ ಅಂದಾಗ ಇಂತಹ
ರಾಜ್ಯಭಾಗ್ಯವನ್ನು ಪಡೆಯಲು ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಕೆಲವು ಮಕ್ಕಳು
ಬ್ರಾಹ್ಮಣಿಯರಿಗಿಂತಲೂ ಮುಂದೆ ಹೊರಟು ಹೋಗುತ್ತಾರೆ. ಅದೃಷ್ಟವು ಬ್ರಾಹ್ಮಣಿಯರಿಗಿಂತಲೂ ಉತ್ತಮವಾಗಿ
ಬಿಡುತ್ತದೆ. ಇದನ್ನೂ ತಂದೆಯೇ ತಿಳಿಸಿದ್ದಾರೆ. ಚೆನ್ನಾಗಿ ಸರ್ವೀಸ್ ಮಾಡಲಿಲ್ಲವೆಂದರೆ
ಜನ್ಮ-ಜನ್ಮಾಂತರ ದಾಸ-ದಾಸಿಯರಾಗುತ್ತೀರಿ.
ತಂದೆಯು ಸನ್ಮುಖದಲ್ಲಿ
ಬರುತ್ತಿದ್ದಂತೆಯೇ ಮಕ್ಕಳೊಂದಿಗೆ ಕೇಳುತ್ತಾರೆ- ಮಕ್ಕಳೇ, ಆತ್ಮಾಭಿಮಾನಿಯಾಗಿ ಕುಳಿತುಕೊಂಡಿದ್ದೀರಾ?
ಮಕ್ಕಳ ಪ್ರತಿ ತಂದೆಯ ಮಹಾವಾಕ್ಯವಾಗಿದೆ- ಮಕ್ಕಳೇ, ಆತ್ಮಾಭಿಮಾನಿಗಳಾಗುವ ಸಂಪೂರ್ಣ ಪುರುಷಾರ್ಥ
ಮಾಡಬೇಕಾಗಿದೆ. ನಡೆಯುತ್ತಾ-ತಿರುಗಾಡುತ್ತಾ ವಿಚಾರ ಸಾಗರ ಮಂಥನ ಮಾಡುತ್ತಾ ಇರಬೇಕಾಗಿದೆ. ಕೆಲವು
ಮಕ್ಕಳು ನಾವು ಬೇಗಬೇಗನೆ ನರಕದ ಛೀ ಛೀ ಪ್ರಪಂಚದಿಂದ ಸುಖಧಾಮಕ್ಕೆ ಹೊರಟು ಹೋಗಬೇಕೆಂದು
ತಿಳಿಯುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ- ಒಳ್ಳೊಳ್ಳೆಯ ಮಹಾರಥಿಗಳೂ ಸಹ ಯೋಗದಲ್ಲಿ ಕಡಿಮೆ,
ಅವರಿಂದಲೂ ಪುರುಷಾರ್ಥ ಮಾಡಿಸಲಾಗುತ್ತದೆ. ಯೋಗವಿಲ್ಲದಿದ್ದರೆ ಒಮ್ಮೆಲೆ ಕೆಳಗೆ ಬೀಳುತ್ತಾರೆ.
ಜ್ಞಾನವು ಬಹಳ ಸಹಜವಾಗಿದೆ, ಇತಿಹಾಸ-ಭೂಗೋಳವೆಲ್ಲವೂ ಬುದ್ಧಿಯಲ್ಲಿ ಬಂದು ಬಿಡುತ್ತದೆ. ಬಹಳ
ಒಳ್ಳೊಳ್ಳೆಯ ಮಕ್ಕಳಿದ್ದಾರೆ ಪ್ರದರ್ಶನಿಯಲ್ಲಿ ತಿಳಿಸುವುದರಲ್ಲಿ ಬಹಳ ತೀಕ್ಷ್ಣವಾಗಿದ್ದಾರೆ ಆದರೆ
ಯೋಗವು ಇಲ್ಲ, ದೈವೀ ಗುಣಗಳೂ ಇಲ್ಲ. ಮಕ್ಕಳಲ್ಲಿ ಇನ್ನೂ ಯಾವ-ಯಾವ ಸ್ಥಿತಿಗಳಿವೆಯೆಂದು
ಕೆಲಕೆಲವೊಮ್ಮೆ ಸಂಕಲ್ಪವು ಬರುತ್ತದೆ, ಪ್ರಪಂಚದಲ್ಲಿ ಎಷ್ಟೊಂದು ದುಃಖವಿದೆ! ಇದು ಬೇಗಬೇಗನೆ
ಸಮಾಪ್ತಿಯಾಗಿ ಬಿಡಲಿ. ಬೇಗನೆ ಸುಖಧಾಮಕ್ಕೆ ಹೋಗೋಣವೆಂದು ಕಾಯುತ್ತಿದ್ದಾರೆ. ಹೇಗೆ ತಂದೆಯೊಂದಿಗೆ
ಮಿಲನ ಮಾಡಲು ತವಕಪಡುತ್ತಾರೆ ಏಕೆಂದರೆ ತಂದೆಯು ನಮಗೆ ಸ್ವರ್ಗದ ಮಾರ್ಗವನ್ನು ತಿಳಿಸುತ್ತಾರೆ.
ಇಂತಹ ತಂದೆಯನ್ನು ನೋಡಲು ತವಕಿಸುತ್ತಾರೆ. ಈ ತಂದೆಯ ಸನ್ಮುಖದಲ್ಲಿ ಬಂದು ನಿತ್ಯವೂ ಕೇಳಬೇಕೆಂದು
ತಿಳಿಯುತ್ತಾರೆ. ಇಲ್ಲಿ ಯಾವುದೇ ಜಂಜಾಟದ ಮಾತಿರುವುದಿಲ್ಲ ಆದ್ದರಿಂದ ಇಲ್ಲಿ ಬಂದಾಗ
ತಿಳಿದುಕೊಳ್ಳುತ್ತೀರಿ ಆದರೆ ಹೊರಗಡೆಯಿದ್ದಾಗ ಎಲ್ಲರೊಂದಿಗೆ ಸಂಬಂಧವನ್ನು ನಿಭಾಯಿಸಬೇಕಾಗುತ್ತದೆ.
ಇಲ್ಲದಿದ್ದರೆ ಏರುಪೇರಾಗಿ ಬಿಡುವುದು ಆದ್ದರಿಂದ ತಂದೆಯು ಎಲ್ಲರಿಗೆ ಧೈರ್ಯ ತರಿಸುತ್ತಾರೆ.
ಇದರಲ್ಲಿ ಬಹಳ ಗುಪ್ತ ಪರಿಶ್ರಮವಿದೆ. ನೆನಪಿನ ಶ್ರಮವನ್ನು ಯಾರೂ ಪಡುತ್ತಿಲ್ಲ. ಗುಪ್ತ
ನೆನಪಿನಲ್ಲಿದ್ದಾಗ ತಂದೆಯ ಆದೇಶದನುಸಾರವೇ ನಡೆಯುತ್ತಾರೆ, ದೇಹಾಭಿಮಾನದ ಕಾರಣ ತಂದೆಯ ಆದೇಶದನುಸಾರ
ನಡೆಯುವುದೇ ಇಲ್ಲ. ನಿಮ್ಮ ಚಾರ್ಟನ್ನು ಇಟ್ಟುಕೊಳ್ಳಿ ಆಗ ನಿಮ್ಮ ಉನ್ನತಿಯಾಗುತ್ತದೆ ಎಂದು
ಹೇಳುತ್ತೇನೆ. ಇದನ್ನು ಯಾರು ಹೇಳಿದರು? ಶಿವ ತಂದೆ. ಶಿಕ್ಷಕರು ಕೆಲಸವನ್ನು ಕೊಡುತ್ತಾರೆಂದು ತಯಾರು
ಮಾಡಿಕೊಂಡು ಬರುತ್ತಾರಲ್ಲವೆ. ಇಲ್ಲಿ ಒಳ್ಳೊಳ್ಳೆಯ ಮಕ್ಕಳಿಗೂ ಸಹ ಮಾಯೆಯು ತಂದೆಯು ಕೊಟ್ಟಿರುವ
ಕೆಲಸವನ್ನು ಮಾಡಲು ಬಿಡುವುದಿಲ್ಲ. ಒಳ್ಳೊಳ್ಳೆಯ ಮಕ್ಕಳ ಚಾರ್ಟ್ ತಂದೆಯ ಬಳಿ ಬಂದಾಗ, ನೋಡಿ ಹೇಗೆ
ನೆನಪಿನಲ್ಲಿರುತ್ತೀರೆಂದು ತಿಳಿಸುವರು. ನಾವಾತ್ಮರು ಒಬ್ಬ ಪ್ರಿಯತಮನ ಪ್ರಿಯತಮೆಯರೆಂದು
ತಿಳಿಯುತ್ತಾರೆ. ಆ ದೈಹಿಕ ಪ್ರಿಯತಮ-ಪ್ರಿಯತಮೆಯರಂತೂ ಅನೇಕ ಪ್ರಕಾರದವರಿರುತ್ತಾರೆ. ನೀವು ಬಹಳ
ಹಳೆಯ ಪ್ರಿಯತಮೆಯರಾಗಿದ್ದೀರಿ. ಈಗ ನೀವು ದೇಹೀ-ಅಭಿಮಾನಿಗಳಾಗಬೇಕಾಗಿದೆ. ಏನನ್ನಾದರೂ ಸಹನೆ
ಮಾಡಲೇಬೇಕಾಗುತ್ತದೆ. ನಾನೇ ಎಲ್ಲಾ ತಿಳಿದಿದ್ದೇನೆಂದು ತಿಳಿಯಬಾರದು. ನಿಮ್ಮ ಮೂಳೆಗಳನ್ನು
ಮುರಿದುಕೊಳ್ಳಿ ಎಂದು ತಂದೆಯು ಹೇಳುವುದಿಲ್ಲ. ತಂದೆಯಂತೂ ಯಾವಾಗಲೂ ತಿಳಿಸುತ್ತಾರೆ - ಮಕ್ಕಳೇ,
ನಿಮ್ಮ ಆರೋಗ್ಯವನ್ನು ಚೆನ್ನಾಗಿಟುಕೊಳ್ಳಿ ಆಗ ಸೇವೆಯನ್ನೂ ಚೆನ್ನಾಗಿ ಮಾಡುವಿರಿ. ರೋಗಿಯಾದರೆ ಸೇವೆ
ಮಾಡಲು ಆಗುವುದಿಲ್ಲ. ಕೆಲಕೆಲವರು ಆಸ್ಪತ್ರೆಯಲ್ಲಿಯೂ ಅನ್ಯರಿಗೆ ತಿಳಿಸುವ ಸೇವೆ ಮಾಡುತ್ತಾರೆ ಆಗ
ಇವರಂತೂ ಫರಿಶ್ತೆಗಳಾಗಿದ್ದಾರೆಂದು ವೈದ್ಯರು ಹೇಳುತ್ತಾರೆ. ಚಿತ್ರಗಳನ್ನು ಜೊತೆಯಲ್ಲಿ
ತೆಗೆದುಕೊಂಡು ಹೋಗುತ್ತಾರೆ. ಯಾರು ಇಂತಹ ಸೇವೆ ಮಾಡುವರೋ ಅವರಿಗೆ ದಯಾಹೃದಯಿಗಳೆಂದು ಹೇಳಲಾಗುತ್ತದೆ.
ಸರ್ವೀಸ್ ಮಾಡುವುದರಿಂದ ಯಾರಾದರೂ ಬಂದೇ ಬರುತ್ತಾರೆ. ಎಷ್ಟೆಷ್ಟು ನೆನಪಿನ ಬಲದಲ್ಲಿರುತ್ತೀರೋ
ಅಷ್ಟು ಮನುಷ್ಯರನ್ನು ನೀವು ಸೆಳೆಯುತ್ತೀರಿ. ಇದರಲ್ಲಿಯೂ ಶಕ್ತಿಯಿದೆ. ಮೊದಲು ಪವಿತ್ರತೆ, ನಂತರ
ಶಾಂತಿ, ಕೊನೆಯಲ್ಲಿ ಸುಖವೆಂದು ಹೇಳಲಾಗುತ್ತದೆ. ನೆನಪಿನ ಬಲದಿಂದಲೇ ನೀವು ಪವಿತ್ರರಾಗುತ್ತೀರಿ
ನಂತರ ಜ್ಞಾನಬಲವಾಗಿದೆ. ನೆನಪಿನಲ್ಲಿ ನಿರ್ಬಲರಾಗಬೇಡಿ, ನೆನಪಿನಲ್ಲಿಯೇ ವಿಘ್ನಗಳು ಬರುತ್ತವೆ.
ನೆನಪಿನಲ್ಲಿದ್ದಾಗ ನೀವು ಪವಿತ್ರರೂ ಆಗುವಿರಿ ಮತ್ತು ದೈವೀ ಗುಣಗಳೂ ಬಂದು ಬಿಡುತ್ತವೆ. ತಂದೆಯ
ಮಹಿಮೆಯನ್ನಂತೂ ತಿಳಿದುಕೊಂಡಿದ್ದೀರಲ್ಲವೆ. ತಂದೆಯು ಎಷ್ಟೊಂದು ಸುಖ ಕೊಡುತ್ತಾರೆ! 21
ಜನ್ಮಗಳಿಗಾಗಿ ನಿಮ್ಮನ್ನು ಸುಖಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ ಅಂದಾಗ ಎಂದೂ ಯಾರಿಗೂ ದುಃಖವನ್ನು
ಕೊಡಬಾರದು. ಕೆಲವು ಮಕ್ಕಳು ಡಿಸ್-ಸರ್ವೀಸ್ ಮಾಡಿ ತಮ್ಮನ್ನು ತಾವು ಶ್ರಾಪಗ್ರಸ್ಥರನ್ನಾಗಿ
ಮಾಡಿಕೊಳ್ಳುತ್ತಾರೆ. ಅನ್ಯರಿಗೆ ಬಹಳ ತೊಂದರೆ ಕೊಡುತ್ತಾರೆ. ಕುಪುತ್ರರಾಗುತ್ತಾರೆಂದರೆ ತಮ್ಮನ್ನು
ತಾವೇ ಶ್ರಾಪಗ್ರಸ್ಥರನ್ನಾಗಿ ಮಾಡಿಕೊಳ್ಳುತ್ತಾರೆ. ಡಿಸ್-ಸರ್ವೀಸ್ ಮಾಡುವುದರಿಂದ ಒಮ್ಮೆಲೆ ಕೆಳಗೆ
ಬೀಳುತ್ತಾರೆ. ಅನೇಕ ಮಕ್ಕಳಿದ್ದಾರೆ ವಿಕಾರದಲ್ಲಿ ಕೆಳಗೆ ಬೀಳುತ್ತಾರೆ ಇಲ್ಲವೆ ಕ್ರೋಧದಲ್ಲಿ
ವಿದ್ಯೆಯನ್ನು ಬಿಟ್ಟು ಬಿಡುತ್ತಾರೆ. ಅನೇಕ ಪ್ರಕಾರದ ಮಕ್ಕಳು ಇಲ್ಲಿ ಕುಳಿತಿದ್ದಾರೆ. ಇಲ್ಲಿಂದ
ರಿಫ್ರೆಷ್ ಆಗಿ ಹೋದಾಗ ತಪ್ಪುಗಳಿಗಾಗಿ ಪಶ್ಚಾತ್ತಾಪ ಪಡುತ್ತಾರೆ ಆದರೂ ಸಹ ಪಶ್ಚಾತ್ತಾಪದಿಂದ
ಪಾಪವೇನೂ ಕಳೆಯಲು ಸಾಧ್ಯವಿಲ್ಲ. ತಮ್ಮ ಮೇಲೆ ತಾವೇ ಕ್ಷಮಿಸಿಕೊಳ್ಳಿ. ನೆನಪಿನಲ್ಲಿರಿ ಎಂದು ತಂದೆಯು
ತಿಳಿಸುತ್ತಾರೆ. ತಂದೆಯು ಯಾರನ್ನೂ ಕ್ಷಮೆ ಮಾಡುವುದಿಲ್ಲ, ಇದು ವಿದ್ಯೆಯಾಗಿದೆ. ತಂದೆಯು
ಓದಿಸುತ್ತಾರೆ, ಮಕ್ಕಳು ತಮ್ಮ ಮೇಲೆ ತಾವೇ ಕೃಪೆ ತೋರಿಸಿಕೊಂಡು ಓದಬೇಕಾಗಿದೆ. ಒಳ್ಳೆಯ ಗುಣವನ್ನು
ಇಟ್ಟುಕೊಳ್ಳಬೇಕಾಗಿದೆ. ತಂದೆಯು ಬ್ರಾಹ್ಮಿಣಿಯರಿಗೆ ತಿಳಿಸುತ್ತಾರೆ- ರಿಜಿಸ್ಟರ್ನ್ನು
ತೆಗೆದುಕೊಂಡು ಬನ್ನಿ, ಪ್ರತಿಯೊಬ್ಬರ ಸಮಾಚಾರವನ್ನು ಕೇಳಿ ಅದರಂತೆಯೇ ಸಲಹೆ ನೀಡಲಾಗುತ್ತದೆ.
ಇದರಿಂದ ಬ್ರಾಹ್ಮಿಣಿ ದೂರು ಕೊಟ್ಟಿದ್ದಾರೆಂದು ತಿಳಿದು ಇನ್ನೂ ಹೆಚ್ಚಿನ ಡಿಸ್-ಸರ್ವೀಸ್ ಮಾಡಲು
ತೊಡಗುತ್ತಾರೆ. ಬಹಳ ಪರಿಶ್ರಮವಾಗುತ್ತದೆ, ಮಾಯೆಯು ದೊಡ್ಡ ಶತ್ರುವಾಗಿದೆ. ಮಂಗನಿಂದ ಮಂದಿರಕ್ಕೆ
ಯೋಗ್ಯರಾಗಲು ಬಿಡುವುದಿಲ್ಲ. ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕೆ ಬದಲು ಇನ್ನೂ ಕೆಳಗಿಳಿಯುತ್ತಾರೆ.
ಅಂತಹವರು ಮತ್ತೆಂದೂ ಮೇಲೇಳಲು ಸಾಧ್ಯವಿಲ್ಲ. ತಂದೆಯು ಮಕ್ಕಳಿಗೆ ಮತ್ತೆ-ಮತ್ತೆ ತಿಳಿಸುತ್ತಾರೆ-
ಇದು ಬಹಳ ಉನ್ನತವಾದ ಗುರಿಯಾಗಿದೆ. ವಿಶ್ವದ ಮೇಲೆ ಮಾಲೀಕರಾಗಬೇಕಾಗಿದೆ. ಹಿರಿಯ ವ್ಯಕ್ತಿಗಳ ಮಕ್ಕಳು
ಬಹಳ ಘನತೆಯಿಂದ ನಡೆಯುತ್ತಾರೆ. ಎಲ್ಲಿಯೂ ತಂದೆಯ ಗೌರವವನ್ನು ಕಳೆಯಬಾರದೆಂದು ಬಹಳ ರಾಯಲ್ಟಿಯಿಂದ
ನಡೆಯುತ್ತಾರೆ. ನಿಮ್ಮ ತಂದೆಯು ಎಷ್ಟು ಒಳ್ಳೆಯವರಾಗಿದ್ದಾರೆ, ನೀವು ಎಷ್ಟೊಂದು
ಕುಪುತ್ರರಾಗಿದ್ದೀರಿ. ನೀವು ತಮ್ಮ ತಂದೆಯ ಗೌರವವನ್ನು ಕಳೆಯುತ್ತಿದ್ದೀರಿ! ಇಲ್ಲಂತೂ
ಪ್ರತಿಯೊಬ್ಬರೂ ತಮ್ಮ ಗೌರವವನ್ನು ಕಳೆದುಕೊಳ್ಳುತ್ತಾರೆ, ಬಹಳ ಶಿಕ್ಷೆಗಳನ್ನು
ಅನುಭವಿಸಬೇಕಾಗುತ್ತದೆ. ತಂದೆಯು ಸಾವಧಾನ ನೀಡುತ್ತಾರೆ. ಬಹಳ ಎಚ್ಚರಿಕೆಯಿಂದ ನಡೆಯಿರಿ, ಪಂಜರದ
ಪಕ್ಷಿಗಳಾಗಬೇಡಿ. ಪಂಜರದ ಪಕ್ಷಿಗಳೂ ಸಹ ಇಲ್ಲಿಯೇ ಇರುತ್ತವೆ, ಸತ್ಯಯುಗದಲ್ಲಿ ಯಾವುದೇ ಪಂಜರ (ಜೈಲು)
ಗಳಿರುವುದಿಲ್ಲ. ಆದರೂ ಸಹ ಓದಿ ಶ್ರೇಷ್ಠ ಪದವಿಯನ್ನು ಪಡೆಯಬೇಕು. ಹುಡುಗಾಟಿಕೆ ಮಾಡಬೇಡಿ, ಯಾರಿಗೂ
ದುಃಖವನ್ನು ಕೊಡಬೇಡಿ. ನೆನಪಿನ ಯಾತ್ರೆಯಲ್ಲಿರಿ. ನೆನಪೇ ಕೆಲಸಕ್ಕೆ ಬರುವುದು. ಪ್ರದರ್ಶನಿಯಲ್ಲಿಯೂ
ಮುಖ್ಯವಾಗಿ ಇದೇ ಮಾತನ್ನು ತಿಳಿಸಿ- ತಂದೆಯ ನೆನಪಿನಿಂದಲೇ ಪಾವನರಾಗುತ್ತೀರಿ. ಎಲ್ಲರೂ ಪಾವನರಾಗಲು
ಬಯಸುತ್ತಾರೆ, ಇದು ಪತಿತ ಪ್ರಪಂಚವಾಗಿದೆ. ಸರ್ವರ ಸದ್ಗತಿ ಮಾಡಲು ಒಬ್ಬ ತಂದೆಯೇ ಬರುತ್ತಾರೆ,
ಕ್ರೈಸ್ಟ್, ಬುದ್ಧ ಮೊದಲಾದವರು ಯಾವುದೇ ಸದ್ಗತಿ ಮಾಡಲು ಸಾಧ್ಯವಿಲ್ಲ ಮತ್ತೆ ಬಹ್ಮಾನ ಹೆಸರನ್ನು
ತೆಗೆದುಕೊಳ್ಳುತ್ತಾರೆ. ಬ್ರಹ್ಮಾನಿಗೂ ಸದ್ಗತಿದಾತನೆಂದು ಹೇಳಲು ಸಾಧ್ಯವಿಲ್ಲ. ಇವರು ದೇವಿ-ದೇವತಾ
ಧರ್ಮಕ್ಕೆ ನಿಮಿತ್ತನಾಗಿದ್ದಾರೆ. ಭಲೆ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಶಿವ ತಂದೆಯು
ಮಾಡುತ್ತಾರೆ, ಆದರೂ ಸಹ ಬ್ರಹ್ಮಾ-ವಿಷ್ಣು-ಶಂಕರನೆಂದು ಹೆಸರಿದೆಯಲ್ಲವೆ. ತ್ರಿಮೂರ್ತಿ
ಬ್ರಹ್ಮಾನೆಂದು ಹೇಳಿ ಬಿಡುತ್ತಾರೆ. ಇವರೂ (ಬ್ರಹ್ಮಾ) ಸಹ ಗುರುಗಳಲ್ಲ, ಗುರುವು ಒಬ್ಬರೇ
ಆಗಿದ್ದಾರೆ. ಅವರ ಮೂಲಕ ನೀವು ಆತ್ಮಿಕ ಗುರುಗಳಾಗುತ್ತೀರಿ. ಬಾಕಿ ಅವರೆಲ್ಲರೂ ಧರ್ಮ
ಸ್ಥಾಪಕರಾಗಿದ್ದಾರೆ. ಧರ್ಮ ಸ್ಥಾಪಕರಿಗೆ ಸದ್ಗತಿದಾತನೆಂದು ಹೇಳಲು ಹೇಗೆ ಸಾಧ್ಯ! ಇವು
ತಿಳಿದುಕೊಳ್ಳುವ ಗುಪ್ತ ಮಾತುಗಳಾಗಿವೆ. ಅನ್ಯ ಧರ್ಮ ಸ್ಥಾಪಕರಂತೂ ಕೇವಲ ಧರ್ಮ ಸ್ಥಾಪನೆ
ಮಾಡುತ್ತಾರೆ. ಅವರ ಹಿಂದೆ ಎಲ್ಲರೂ ಬಂದು ಬಿಡುತ್ತಾರೆ, ಆದರೆ ಅವರು ಎಲ್ಲರನ್ನೂ ಹಿಂತಿರುಗಿ
ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಅವರು ಪುನರ್ಜನ್ಮದಲ್ಲಿ ಬರಲೇಬೇಕಾಗಿದೆ. ಎಲ್ಲರಿಗೂ ಈ
ತಿಳುವಳಿಕೆ ಇದೆ- ಸದ್ಗತಿಗಾಗಿ ಮತ್ತ್ಯಾರೊಬ್ಬರೂ ಗುರುಗಳಿಲ್ಲ. ತಂದೆಯು ತಿಳಿಸುತ್ತಾರೆ- ಗುರು
ಪತಿತ-ಪಾವನನು ಒಬ್ಬರೇ ಆಗಿದ್ದಾರೆ, ಅವರೇ ಸರ್ವರ ಸದ್ಗತಿದಾತ, ಮುಕ್ತಿದಾತನಾಗಿದ್ದಾರೆ ಅಂದಾಗ
ತಿಳಿಸಬೇಕು- ನಮ್ಮ ಗುರು ಒಬ್ಬರೇ ಆಗಿದ್ದಾರೆ, ಅವರು ಸದ್ಗತಿ ಕೊಡುತ್ತಾರೆ.
ಶಾಂತಿಧಾಮ-ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ. ಸತ್ಯಯುಗದ ಆದಿಯಲ್ಲಿ ಬಹಳ ಕೆಲವರೇ
ಇರುತ್ತಾರೆ, ಅಲ್ಲಿ ಯಾರ ರಾಜ್ಯವಿತ್ತೆಂದು ಚಿತ್ರಗಳನ್ನು ತೋರಿಸುತ್ತಾರಲ್ಲವೆ. ಭಾರತವಾಸಿಗಳೇ
ಒಪ್ಪುತ್ತಾರೆ, ದೇವತೆಗಳ ಪೂಜಾರಿಗಳು ಒಪ್ಪುತ್ತಾರೆ- ಇವರು ಸ್ವರ್ಗದ ಮಾಲೀಕರಾಗಿದ್ದಾರೆ,
ಸ್ವರ್ಗದಲ್ಲಿ ಇವರ ರಾಜ್ಯವಿತ್ತು ಆಗ ಉಳಿದೆಲ್ಲಾ ಆತ್ಮಗಳು ಎಲ್ಲಿದ್ದರು? ಅವಶ್ಯವಾಗಿ ನಿರಾಕಾರಿ
ಪ್ರಪಂಚದಲ್ಲಿದ್ದರೆಂದು ಹೇಳುತ್ತಾರೆ. ಇದನ್ನೂ ಸಹ ನೀವು ಈಗ ತಿಳಿದುಕೊಂಡಿದ್ದೀರಿ. ಮೊದಲು ಏನೂ
ತಿಳಿದಿರಲಿಲ್ಲ, ಈಗ ನಿಮ್ಮ ಬುದ್ಧಿಯಲ್ಲಿ ಚಕ್ರವು ಸುತ್ತುತ್ತಿರುತ್ತದೆ. ಅವಶ್ಯವಾಗಿ 5000
ವರ್ಷಗಳ ಮೊದಲು ಭಾರತದಲ್ಲಿ ಇವರ ರಾಜ್ಯವಿತ್ತು, ಯಾವಾಗ ಜ್ಞಾನದ ಪ್ರಾಲಬ್ಧವು ಪೂರ್ಣವಾಗುವುದು ಆಗ
ಮುಕ್ತಿಮಾರ್ಗವು ಆರಂಭವಾಗುತ್ತದೆ ನಂತರ ಹಳೆಯ ಪ್ರಪಂಚದಿಂದ ವೈರಾಗ್ಯವು ಬೇಕು. ನಾವೀಗ ಹೊಸ
ಪ್ರಪಂಚಕ್ಕೆ ಹೊರಟುಹೋಗುತ್ತೇವೆ, ಹಳೆಯ ಪ್ರಪಂಚದಿಂದ ಪ್ರೀತಿಯು ಹೊರಟು ಹೋಗುತ್ತದೆ. ಅಲ್ಲಿ ಪತಿ,
ಮಕ್ಕಳೆಲ್ಲರೂ ಬಹಳ ಒಳ್ಳೆಯವರು ಸಿಗುತ್ತಾರೆ. ಬೇಹದ್ದಿನ ತಂದೆಯಂತೂ ನಮ್ಮನ್ನು ವಿಶ್ವದ
ಮಾಲೀಕರನ್ನಾಗಿ ಮಾಡುತ್ತಾರೆ. ಯಾರು ವಿಶ್ವದ ಮಾಲೀಕರಾಗುವ ಮಕ್ಕಳಿದ್ದಾರೆಯೋ ಅವರ ವಿಚಾರಗಳು ಬಹಳ
ಶ್ರೇಷ್ಠ ಮತ್ತು ಚಲನೆಯು ಬಹಳ ರಾಯಲ್ ಆಗಿರುವುದು. ಭೋಜನವೂ ಸಹ ಬಹಳ ಕಡಿಮೆ, ಹೆಚ್ಚಿನ
ಚಪಲವಿರಬಾರದು. ನೆನಪಿನಲ್ಲಿರುವವರ ಭೋಜನವು ಬಹಳ ಸೂಕ್ಷ್ಮವಾಗಿರುವುದು. ಅನೇಕರಿಗೆ ತಿನ್ನುವುದರ
ಕಡೆ ಬುದ್ಧಿಯು ಹೊರಟು ಹೋಗುತ್ತದೆ. ನೀವು ಮಕ್ಕಳಿಗಂತೂ ವಿಶ್ವದ ಮಾಲೀಕರಾಗುವ ಖುಷಿಯಿದೆ.
ಖುಷಿಯಂತಹ ಔಷಧಿಯಿಲ್ಲವೆಂದು ಹೇಳಲಾಗುತ್ತದೆ. ಸದಾ ಇಂತಹ ಖುಷಿಯಲ್ಲಿರಿ ಆಹಾರ-ಪಾನೀಯಗಳೂ ಸಹ
ಕಡಿಮೆಯಾಗಿ ಬಿಡಲಿ. ಬಹಳ ತಿನ್ನುವುದರಿಂದ ಭಾರಿಯಾಗಿ ಬಿಡುತ್ತೀರಿ. ನಂತರ ಅದರಿಂದ ತೂಕಡಿಸುತ್ತೀರಿ.
ನಂತರ ಬಾಬಾ, ನಿದ್ರೆಯು ಬರುತ್ತದೆಯೆಂದು ಹೇಳುತ್ತೀರಿ ಆದ್ದರಿಂದ ಭೋಜನವೂ ಸದಾ ಏಕರಸವಾಗಿರಬೇಕು.
ಭೋಜನವು ಚೆನ್ನಾಗಿದ್ದರೆ ಹೆಚ್ಚು ತಿನ್ನುವುದಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಾವು
ದುಃಖಹರ್ತ-ಸುಖಕರ್ತ ತಂದೆಯ ಮಕ್ಕಳಾಗಿದ್ದೇವೆ, ನಾವು ಯಾರಿಗೂ ದುಃಖವನ್ನು ಕೊಡಬಾರದು.
ಡಿಸ್-ಸರ್ವೀಸ್ ಮಾಡಿ ತಮ್ಮನ್ನು ತಾವು ಶ್ರಾಪಗ್ರಸ್ಥರನ್ನಾಗಿ ಮಾಡಿಕೊಳ್ಳಬಾರದು.
2. ತಮ್ಮ ವಿಚಾರಗಳನ್ನು
ಬಹಳ ಶ್ರೇಷ್ಠ ಮತ್ತು ರಾಯಲ್ ಆಗಿಟ್ಟುಕೊಳ್ಳಬೇಕಾಗಿದೆ. ದಯಾಹೃದಯಿಗಳಾಗಿ ಸರ್ವೀಸಿನಲ್ಲಿ
ತತ್ಫರರಾಗಿರಬೇಕಾಗಿದೆ. ಆಹಾರ-ಪಾನೀಯಗಳ ಚಪಲವನ್ನು ಬಿಟ್ಟು ಬಿಡಬೇಕಾಗಿದೆ.
ವರದಾನ:
ಪ್ರಾಮಾಣಿಕರಾಗಿ
ಸ್ವಯಂ ಅನ್ನು ತಂದೆಯ ಮುಂದೆ ಸ್ಪಷ್ಠ ಮಾಡುವಂತಹ ಏರುವ ಕಲೆಯ ಅನುಭವಿ ಭವ.
ಸ್ವಯಂ ಗೆ ಯಾವುದಿದೆ
ಹೇಗಿದೆ-ಹಾಗೆಯೇ ತಂದೆಯ ಮುಂದೆ ಪ್ರತ್ಯಕ್ಷ ಮಾಡುವುದು-ಇದೇ ಎಲ್ಲಕ್ಕಿಂತಲೂ ದೊಡ್ಡದರಲ್ಲಿ ದೊಡ್ಡ
ಏರುವ ಕಲೆಯ ಸಾಧನವಾಗಿದೆ. ಬುದ್ಧಿಯ ಮೇಲೆ ಏನು ಅನೇಕ ಪ್ರಕಾರದ ಹೊರೆಯಿದೆ ಅದನ್ನು ಸಮಾಪ್ತಿ ಮಾಡಲು
ಇದೇ ಸಹಜ ಯುಕ್ತಿಯಾಗಿದೆ. ಪ್ರಾಮಾಣಿಕರಾಗಿ ಸ್ವಯಂ ಅನ್ನು ತಂದೆಯ ಮುಂದೆ ಸ್ಪಷ್ಠ ಮಾಡುವುದು
ಅರ್ಥಾತ್ ಪುರುಷಾರ್ಥದ ಮಾರ್ಗ ಸ್ಪಷ್ಠ ಮಾಡಿಕೊಳ್ಳುವುದು. ಎಂದೂ ಸಹಾ ಚತುರತೆಯಿಂದ ಮನಮತ ಮತ್ತು
ಪರಮತದ ಪ್ಲಾನ್ ಮಾಡಿಕೊಂಡು ತಂದೆ ಅಥವಾ ನಿಮಿತ್ತರಾಗಿರುವಂತಹ ಆತ್ಮಗಳ ಮುಂದೆ ಯಾವುದೇ
ಮಾತನ್ನಿಟ್ಟಾಗ ಇದು ಪ್ರಾಮಾಣಿಕತೆ ಅಲ್ಲ. ಪ್ರಾಮಾಣಿಕತೆ ಅರ್ಥಾತ್ ಹೇಗೆ ತಂದೆ ಯಾರಾಗಿದ್ದಾರೆ
ಹೇಗಿದ್ದಾರೆ ಮಕ್ಕಳ ಮುಂದೆ ಪ್ರತ್ಯಕ್ಷರಾಗಿದ್ದಾರೆ, ಅದೇ ರೀತಿ ಮಕ್ಕಳು ತಂದೆಯ ಎದುರು
ಪ್ರತ್ಯಕ್ಷ ಆಗಬೇಕು.
ಸ್ಲೋಗನ್:
ಸತ್ಯ ತಪಸ್ವಿ
ಇವರೇ ಆಗಿದ್ದಾರೆ ಯಾರು ಸದಾ ಸರ್ವಸ್ವ ತ್ಯಾಗಿಯ ಪೊಜಿಷನ್ನಲ್ಲಿ ಇರುತ್ತಾರೆ.
ಅವ್ಯಕ್ತ ಸೂಚನೆ:
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ.
ವರ್ತಮಾನ, ಭವಿಷ್ಯದ
ದರ್ಪಣವಾಗಿದೆ. ವರ್ತಮಾನದ ಸ್ಟೇಜ್ ಎಂದರೆ ದರ್ಪಣದ ಮೂಲಕ ತಮ್ಮ ಭವಿಷ್ಯವನ್ನು ಸ್ಪಷ್ಟವಾಗಿ
ನೋಡಬಹುದು. ಭವಿಷ್ಯ ರಾಜ್ಯ ಅಧಿಕಾರಿ ಆಗುವುದಕ್ಕಾಗಿ ಚೆಕ್ ಮಾಡಿಕೊಳ್ಳಿ ವರ್ತಮಾನ ನನ್ನಲ್ಲಿ
ರೂಲಿಂಗ್ ಪವರ್ ಎಲ್ಲಿಯವರೆಗೂ ಇದೆ? ಮೊದಲು ಸೂಕ್ಷ್ಮ ಶಕ್ತಿಗಳು, ಯಾವುದು ವಿಶೇಷ ಕಾರ್ಯ
ಮಾಡಿಸುವುದಾಗಿದೆ - ಸಂಕಲ್ಪ ಶಕ್ತಿಯ ಮೇಲೆ, ಬುದ್ಧಿಯ ಮೇಲೆ ಸಂಪೂರ್ಣ ಅಧಿಕಾರ ಇರಲಿ ಆಗ ತಮ್ಮ
ಭವಿಷ್ಯ ಉಜ್ವಲ ಮಾಡಲು ಸಾಧ್ಯ.