21.08.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಆಸುರೀ ಮತದಂತೆ ನಡೆದಿದ್ದರಿಂದ ದಿವಾಳಿಯಾಗಿ ಬಿಟ್ಟಿರಿ, ಈಗ ಈಶ್ವರೀಯ ಮತದಂತೆ ನಡೆಯಿರಿ ಆಗ ಸುಖಧಾಮದಲ್ಲಿ ಹೋಗುವಿರಿ”.

ಪ್ರಶ್ನೆ:
ಮಕ್ಕಳು ತಂದೆಯೊಂದಿಗೆ ಯಾವ ಭರವಸೆಯನ್ನು ಇಟ್ಟುಕೊಳ್ಳಬೇಕು, ಯಾವುದನ್ನು ಇಟ್ಟುಕೊಳ್ಳಬಾರದು?

ಉತ್ತರ:
ತಂದೆಯೊಂದಿಗೆ ಇದೇ ಭರವಸೆಯನ್ನಿಡಬೇಕಾಗಿದೆ - ನಾವು ತಂದೆಯ ಮೂಲಕ ಪವಿತ್ರರಾಗಿ ನಮ್ಮ ಮನೆ ಮತ್ತು ರಾಜಧಾನಿಯಲ್ಲಿ ಹೋಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇಂತಹವರು ರೋಗಿಯಾಗಿದ್ದಾರೆ, ತಂದೆಯು ಆಶೀರ್ವಾದ ಮಾಡಲಿ ಎಂದು ನನ್ನಲ್ಲಿ ಭರವಸೆಯನ್ನಿಡಬೇಡಿ. ಇಲ್ಲಿ ಕೃಪೆ ಅಥವಾ ಆಶೀರ್ವಾದದ ಮಾತೇ ಇಲ್ಲ. ನಾನಂತೂ ನೀವು ಮಕ್ಕಳನ್ನು ಪತಿತರಿಂದ ಪಾವನ ಮಾಡಲು ಬಂದಿದ್ದೇನೆ. ಈಗ ನಾನು ನಿಮಗೆ ಇಂತಹ ಕರ್ಮವನ್ನು ಕಲಿಸುತ್ತೇನೆ, ಯಾವುದರಿಂದ ವಿಕರ್ಮಗಳಾಗುವುದಿಲ್ಲ.

ಗೀತೆ:
ಇಂದಿಲ್ಲದಿದ್ದರೆ ನಾಳೆ ಮೋಡಗಳು ಅವಶ್ಯವಾಗಿ ಚದುರಿ ಹೋಗುತ್ತವೆ..........

ಓಂ ಶಾಂತಿ.
ಆತ್ಮೀಯ ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳಿಗೆ ಗೊತ್ತಿದೆ, ಈಗ ಮನೆಗೆ ಹೋಗಬೇಕಾಗಿದೆ. ತಂದೆಯು ಕರೆದುಕೊಂಡು ಹೋಗಲು ಬಂದಿದ್ದಾರೆ. ಆತ್ಮಾಭಿಮಾನಿಗಳಾಗಿದ್ದಾಗಲೇ ಈ ನೆನಪಿರುವುದು. ದೇಹಾಭಿಮಾನದಲ್ಲಿದ್ದರೆ ನೆನಪೂ ಇರುವುದಿಲ್ಲ, ಮಕ್ಕಳಿಗೇ ಗೊತ್ತಿದೆ, ತಂದೆಯು ಯಾತ್ರಿಕನಾಗಿ ಬಂದಿದ್ದಾರೆ. ನೀವೂ ಸಹ ಯಾತ್ರಿಕರಾಗಿ ಬಂದಿದ್ದೀರಿ. ಈಗ ತಮ್ಮ ಮನೆಯನ್ನು ಮರೆತು ಹೋಗಿದ್ದೀರಿ. ತಂದೆಯು ಪುನಃ ಮನೆಯ ನೆನಪನ್ನು ತರಿಸಿದ್ದಾರೆ ಮತ್ತು ಪ್ರತಿನಿತ್ಯವೂ ತಿಳಿಸುತ್ತಾರೆ. ಎಲ್ಲಿಯವರೆಗೆ ಸತೋಪ್ರಧಾನರಾಗುವುದಿಲ್ಲವೋ ಅಲ್ಲಿಯವರೆಗೆ ಮನೆಗೆ ಹೋಗಲು ಸಾಧ್ಯವಿಲ್ಲ. ತಂದೆಯು ಸರಿಯಾದ ಮಾತನ್ನೇ ಹೇಳುತ್ತಾರೆ ಎಂದು ಮಕ್ಕಳಿಗೆ ಅರ್ಥವಾಗುತ್ತದೆ. ತಂದೆಯು ಮಕ್ಕಳಿಗೆ ಯಾವ ಶ್ರೀಮತವನ್ನು ಕೊಡುತ್ತಾರೆಯೋ ಅದರನುಸಾರ ಸುಪುತ್ರ ಮಕ್ಕಳು ನಡೆಯತೊಡಗುತ್ತಾರೆ. ಈ ಸಮಯದಲ್ಲಿ ಇಂತಹ ಒಳ್ಳೆಯ ಮತವನ್ನು ಕೊಡುವಂತಹ ತಂದೆಯು ಮತ್ತ್ಯಾರೂ ಇಲ್ಲ ಆದರೆ ಆಶ್ಚರ್ಯವೇನೆಂದರೆ ಲೌಕಿಕ ತಂದೆಯ ಮತದಂತೆ ನಡೆಯತೊಡಗುತ್ತಾರೆ. ಅದು ಆಸುರೀ ಮತವಾಗಿದೆ. ಇದಕ್ಕೆ ನಾಟಕವೆಂದು ಹೇಳಬಹುದು ಆದರೆ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ನೀವು ಆಸುರೀ ಮತದಂತೆ ನಡೆಯುತ್ತಾ ಈ ಸ್ಥಿತಿಗೆ ತಲುಪಿದ್ದೀರಿ. ಈಗ ಈಶ್ವರೀಯ ಮತದಂತೆ ನಡೆಯುವುದರಿಂದ ನೀವು ಸುಖಧಾಮದಲ್ಲಿ ಹೊರಟು ಹೋಗುತ್ತೀರಿ. ಅದು ಬೇಹದ್ದಿನ ಆಸ್ತಿಯಾಗಿದೆ. ತಂದೆಯು ಪ್ರತಿನಿತ್ಯವೂ ತಿಳಿಸುತ್ತಾರೆ ಅಂದಮೇಲೆ ಮಕ್ಕಳು ಎಷ್ಟೊಂದು ಹರ್ಷಿತರಾಗಿರಬೇಕು! ಎಲ್ಲರೂ ಇಲ್ಲಿ ಕುಳಿತು ಬಿಡಲು ಸಾಧ್ಯವಿಲ್ಲ. ಮನೆಯಲ್ಲಿದ್ದುಕೊಂಡೇ ನೆನಪು ಮಾಡಬೇಕು. ಈಗ ಪಾತ್ರವು ಮುಕ್ತಾಯವಾಗಲಿದೆ, ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಇದನ್ನು ಮನುಷ್ಯರು ಎಷ್ಟೊಂದು ಮರೆತಿದ್ದಾರೆ. ಇವರಂತೂ ತಮ್ಮ ಮನೆಮಠವನ್ನೆ ಮರೆತು ಬಿಟ್ಟಿದ್ದಾರೆಂದು ಹೇಳಲಾಗುತ್ತದೆಯಲ್ಲವೆ. ಈಗ ತಂದೆಯೂ ಸಹ ತಿಳಿಸುತ್ತಾರೆ - ಮಕ್ಕಳೇ, ಮನೆಯನ್ನೂ ನೆನಪು ಮಾಡಿ, ತಮ್ಮ ರಾಜಧಾನಿಯನ್ನೂ ನೆನಪು ಮಾಡಿ. ಈಗ ಪಾತ್ರವು ಮುಕ್ತಾಯವಾಗಲಿದೆ. ಈಗ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ನೀವು ಇದನ್ನು ಮರೆತು ಹೋಗಿದ್ದೀರಾ?

ನೀವು ಮಕ್ಕಳು ಹೇಳಬಹುದು - ಬಾಬಾ, ಡ್ರಾಮಾನುಸಾರ ಪಾತ್ರವೇ ಹೀಗಿದೆ. ನಾವು ನಮ್ಮ ಮನೆ ಮಠವನ್ನೇ ಮರೆತು ಅಲೆದಾಡುತ್ತಿದ್ದೇವೆ. ಭಾರತವಾಸಿಗಳೇ ತಮ್ಮ ಶ್ರೇಷ್ಠ ಧರ್ಮವನ್ನು ಮರೆತು ದೈವೀ ಧರ್ಮ ಭ್ರಷ್ಟರು, ದೈವೀ ಕರ್ಮ ಭ್ರಷ್ಟರಾಗಿ ಬಿಟ್ಟಿದ್ದಾರೆ. ಈಗ ತಂದೆಯು ಎಚ್ಚರಿಕೆ ನೀಡುತ್ತಾರೆ - ನಿಮ್ಮ ಧರ್ಮ-ಕರ್ಮವಂತೂ ಶ್ರೇಷ್ಠವಾಗಿತ್ತು. ಅಲ್ಲಿ ನೀವು ಯಾವ ಕರ್ಮ ಮಾಡುತ್ತಿದ್ದಿರೋ ಅದು ಅಕರ್ಮವಾಗುತ್ತಿತ್ತು, ಕರ್ಮ-ಅಕರ್ಮ-ವಿಕರ್ಮದ ರಹಸ್ಯವನ್ನು ತಂದೆಯೇ ನಿಮಗೆ ತಿಳಿಸಿದ್ದಾರೆ. ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ. ರಾವಣ ರಾಜ್ಯದಲ್ಲಿ ಕರ್ಮವು ವಿಕರ್ಮವಾಗುತ್ತದೆ. ಈಗ ತಂದೆಯು ಧರ್ಮ ಶ್ರೇಷ್ಠ, ಕರ್ಮ ಶ್ರೇಷ್ಠವನ್ನಾಗಿ ಮಾಡಲು ಬಂದಿದ್ದಾರೆ. ಆದ್ದರಿಂದ ಈಗ ಶ್ರೀಮತದಂತೆ ಕರ್ಮ ಶ್ರೇಷ್ಠ ಮಾಡಿಕೊಳ್ಳಬೇಕು. ಯಾವುದೇ ಭ್ರಷ್ಠ ಕರ್ಮವನ್ನು ಮಾಡಿ ದುಃಖವನ್ನು ಕೊಡಬಾರದು. ಇದು ಈಶ್ವರೀಯ ಮಕ್ಕಳ ಕೆಲಸವಲ್ಲ. ತಂದೆಯಿಂದ ಯಾವ ಆದೇಶ ಸಿಗುವುದೋ ಅದರನುಸಾರ ನಡೆಯಬೇಕು, ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಶುದ್ಧ ಭೋಜನವನ್ನು ತೆಗೆದುಕೊಳ್ಳಬೇಕಾಗಿದೆ. ಒಂದುವೇಳೆ ಅಂತಹ ಪರಿಸ್ಥಿತಿಯಲ್ಲಿ ಸಿಗಲಿಲ್ಲವೆಂದರೆ ಸಲಹೆಯನ್ನು ತೆಗೆದುಕೊಳ್ಳಿ. ತಂದೆಗೆ ಗೊತ್ತಿದೆ, ನೌಕರಿ ಇತ್ಯಾದಿಯಲ್ಲಿ ಕೆಲವೊಮ್ಮೆ ತಿನ್ನಲೂಬೇಕಾಗುತ್ತದೆ. ಯಾವಾಗ ಯೋಗಬಲದಿಂದ ನೀವು ರಾಜಧಾನಿಯನ್ನು ಸ್ಥಾಪನೆ ಮಾಡುತ್ತೀರಿ, ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡುತ್ತೀರೆಂದ ಮೇಲೆ ಭೋಜನವನ್ನು ಶುದ್ಧ ಮಾಡಿಕೊಳ್ಳುವುದು ದೊಡ್ಡ ಮಾತೇನಲ್ಲ. ನೌಕರಿಯನ್ನಂತೂ ಮಾಡಲೇಬೇಕಾಗಿದೆ. ತಂದೆಯ ಮಕ್ಕಳಾದ ತಕ್ಷಣ ಎಲ್ಲವನ್ನು ಬಿಟ್ಟು ಬಂದು ಇಲ್ಲಿ ಕುಳಿತು ಬಿಡುವುದಲ್ಲ. ಎಷ್ಟೊಂದು ಮಂದಿ ಮಕ್ಕಳಿದ್ದಾರೆ, ಎಲ್ಲರೂ ಇಲ್ಲಿಯೇ ಇರಲು ಸಾಧ್ಯವಿಲ್ಲ. ಆದ್ದರಿಂದ ಗೃಹಸ್ಥ ವ್ಯವಹಾರದಲ್ಲಿಯೇ ಇದ್ದು ಈ ರೀತಿ ತಿಳಿಯಿರಿ - ನಾನಾತ್ಮನಾಗಿದ್ದೇನೆ. ನನ್ನನ್ನು ಪವಿತ್ರನನ್ನಾಗಿ ಮಾಡಿ ಮನೆಗೆ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ ನಂತರ ನಾನು ರಾಜಧಾನಿಯಲ್ಲಿ ಬರುತ್ತೇನೆ. ಇದಂತೂ ಪರರಾವಣನ ಪತಿತ ರಾಜ್ಯವಾಗಿದೆ. ನಾಟಕದನುಸಾರ ನೀವು ಸಂಪೂರ್ಣ ಪತಿತರಾಗಿ ಬಿಟ್ಟಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನೀಗ ನಿಮ್ಮನ್ನು ಜಾಗೃತಗೊಳಿಸಲು ಬಂದಿದ್ದೇನೆ ಅಂದಮೇಲೆ ಶ್ರೀಮತದಂತೆ ನಡೆಯಿರಿ. ಎಷ್ಟು ನಡೆಯುವಿರೋ ಅಷ್ಟು ಶ್ರೇಷ್ಠರಾಗುವಿರಿ.

ಈಗ ನೀವು ತಿಳಿದುಕೊಳ್ಳುತ್ತೀರಿ - ಯಾವ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನೇ ನಾವು ಮರೆತು ಬಿಟ್ಟಿದ್ದೇವೆ, ಈಗ ತಂದೆಯು ಸುಧಾರಣೆ ಮಾಡಲು ಬಂದಿದ್ದಾರೆ ಅಂದಮೇಲೆ ಚೆನ್ನಾಗಿ ಸುಧಾರಣೆಯಾಗಬೇಕಲ್ಲವೆ. ಖುಷಿಯಲ್ಲಿರಬೇಕು, ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ಅವರು ಹೇಗೆ ನೀವಾತ್ಮಗಳು ಪರಸ್ಪರ ಮಾತನಾಡುತ್ತೀರೋ ಅದೇರೀತಿ ಮಾತನಾಡುತ್ತಾರೆ. ವಾಸ್ತವದಲ್ಲಿ ಅವರೂ ಆತ್ಮವೇ ಆದರೆ ಪರಮ ಆತ್ಮನಾಗಿದ್ದಾರೆ, ಅವರದೂ ಪಾತ್ರವಿದೆ. ನೀವಾತ್ಮಗಳು ಪಾತ್ರಧಾರಿಗಳಾಗಿದ್ದೀರಿ, ಶ್ರೇಷ್ಠರಿಂದ ಹಿಡಿದು ಕನಿಷ್ಠರವರೆಗೆ ನಿಮ್ಮ ಪಾತ್ರವಿದೆ. ಭಕ್ತಿಮಾರ್ಗದಲ್ಲಿ ಮನುಷ್ಯರು ಈಶ್ವರನೇ ಎಲ್ಲವನ್ನೂ ಮಾಡುತ್ತಾನೆಂದು ಹಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನದು ಇಂತಹ ಪಾತ್ರವೇನೂ ಇಲ್ಲ. ರೋಗಿಯನ್ನು ನಾನು ಚೆನ್ನಾಗಿ ಮಾಡಿಬಿಡುವುದು! ನೀವು ಹೇಗೆ ಪವಿತ್ರರಾಗಬಹುದೆಂಬ ಮಾರ್ಗವನ್ನು ತಿಳಿಸುವುದೇ ನನ್ನ ಪಾತ್ರವಾಗಿದೆ. ಪವಿತ್ರರಾದಾಗಲೇ ನೀವು ಮನೆಗೆ ಹೋಗಲು ಸಾಧ್ಯ. ರಾಜಧಾನಿಯಲ್ಲಿಯೂ ಬರಲು ಸಾಧ್ಯ, ಮತ್ತ್ಯಾವುದೇ ಭರವಸೆಯನ್ನಿಡಬೇಡಿ. ಇಂತಹವರು ರೋಗಿಯಾಗಿದ್ದಾರೆ, ಆಶೀರ್ವಾದ ಸಿಗಲಿ ಎಂದಲ್ಲ. ನನ್ನ ಬಳಿ ಆಶೀರ್ವಾದ ಅಥವಾ ಕೃಪೆಯ ಮಾತೇ ಇಲ್ಲ. ಅದಕ್ಕಾಗಿ ಸಾಧು-ಸಂತರ ಬಳಿ ಹೋಗಿ. ಹೇ ಪತಿತ-ಪಾವನ, ಬಂದು ನಮ್ಮನ್ನು ಪಾವನ ಮಾಡಿ, ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದೇ ನೀವು ನನ್ನನ್ನು ಕರೆಯುತ್ತೀರಿ. ಅಂದಾಗ ತಂದೆಯು ಕೇಳುತ್ತಾರೆ - ನಾನು ನಿಮ್ಮನ್ನು ವಿಷದ ಸಾಗರದಿಂದ ಹೊರ ತೆಗೆದು ದೂರ ಕರೆದುಕೊಂಡು ಹೋಗುತ್ತೇನೆ. ಮತ್ತೆ ನೀವು ವಿಷದ ಸಾಗರದಲ್ಲಿಯೇ ಏಕೆ ಸಿಲುಕುತ್ತೀರಿ! ಭಕ್ತಿ ಮಾರ್ಗದಲ್ಲಿ ನಿಮ್ಮದು ಈ ಸ್ಥಿತಿಯಾಗಿದೆ. ಜ್ಞಾನ, ಭಕ್ತಿಯು ನಿಮಗಾಗಿ ಇದೆ. ಸನ್ಯಾಸಿಗಳೂ ಸಹ ಜ್ಞಾನ, ಭಕ್ತಿ, ವೈರಾಗ್ಯವೆಂದು ಹೇಳುತ್ತಾರೆ ಆದರೆ ಅವರು ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಈಗ ನಿಮ್ಮ ಬುದ್ಧಿಯಲ್ಲಿ ಜ್ಞಾನವಿದೆ, ಭಕ್ತಿಯ ನಂತರ ವೈರಾಗ್ಯ ಅಂದಮೇಲೆ ಬೇಹದ್ದಿನ ವೈರಾಗ್ಯವನ್ನು ಕಲಿಸುವವರು ಬೇಕಲ್ಲವೆ. ತಂದೆಯು ಈ ಮಾತನ್ನು ತಿಳಿಸಿದ್ದರು - ಇದು ಸ್ಮಶಾನವಾಗಿದೆ, ಇದರ ನಂತರ ಸ್ವರ್ಗವಾಗಬೇಕಾಗಿದೆ. ಅಲ್ಲಿ ಪ್ರತಿಯೊಂದು ಕರ್ಮವು ಅಕರ್ಮವಾಗುತ್ತದೆ. ಈಗ ತಂದೆಯು ನಿಮಗೆ ಇಂತಹ ಕರ್ಮವನ್ನು ಕಲಿಸುತ್ತಾರೆ ಅದರಿಂದ ಯಾವುದೇ ವಿಕರ್ಮವಾಗುವುದಿಲ್ಲ. ಯಾರಿಗೂ ದುಃಖವನ್ನು ಕೊಡಬೇಡಿ, ಪತಿತರ ಆಹಾರವನ್ನು ಸೇವಿಸಬೇಡಿ, ವಿಕಾರದಲ್ಲಿ ಹೋಗಬೇಡಿ. ಇದಕ್ಕಾಗಿಯೇ ಅಬಲೆಯರ ಮೇಲೆ ಅತ್ಯಾಚಾರಗಳಾಗುತ್ತವೆ. ಮಾಯೆಯ ವಿಘ್ನಗಳು ಹೇಗೆ ಬೀಳುತ್ತವೆ ಎಂಬುದನ್ನು ನೋಡುತ್ತಿರುತ್ತೀರಿ. ಇದೆಲ್ಲವೂ ಗುಪ್ತವಾಗಿದೆ. ದೇವತೆಗಳು ಮತ್ತು ಅಸುರರ ನಡುವೆ ಯುದ್ಧವಾಯಿತೆಂದು ಹೇಳುತ್ತಾರೆ ಮತ್ತು ಪಾಂಡವರು ಮತ್ತು ಕೌರವರ ಯುದ್ಧವು ನಡೆಯಿತೆಂದು ಹೇಳುತ್ತಾರೆ. ಯುದ್ಧವಂತು ಒಂದೇ ಆಗಿದೆ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಭವಿಷ್ಯ 21 ಜನ್ಮಗಳಿಗಾಗಿ ರಾಜಯೋಗವನ್ನು ಕಲಿಸುತ್ತಿದ್ದೇನೆ. ಇದು ಮೃತ್ಯುಲೋಕವಾಗಿದೆ. ಮನುಷ್ಯರು ಸತ್ಯ ನಾರಾಯಣನ ಕಥೆಯನ್ನು ಕೇಳುತ್ತಾ ಬಂದಿದ್ದಾರೆ ಆದರೆ ಲಾಭವೇನೂ ಇಲ್ಲ. ನೀವೀಗ ಸತ್ಯವಾದ ಕಥೆಯನ್ನು ಹೇಳುತ್ತೀರಿ. ಸತ್ಯವಾದ ರಾಮಾಯಣವನ್ನೂ ತಿಳಿಸುತ್ತೀರಿ. ಒಬ್ಬ ರಾಮ-ಸೀತೆಯ ಮಾತಲ್ಲ. ಈ ಸಮಯದಲ್ಲಂತೂ ಇಡೀ ಪ್ರಪಂಚವೇ ಲಂಕೆಯಾಗಿದೆ. ನಾಲ್ಕೂ ಕಡೆ ನೀರಿದೆಯಲ್ಲವೆ. ಇದು ಬೇಹದ್ದಿನ ಲಂಕೆಯಾಗಿದೆ, ರಾವಣ ರಾಜ್ಯವಿದೆ. ಒಬ್ಬ ತಂದೆಯೇ ವರನಾಗಿದ್ದಾರೆ, ಉಳಿದೆಲ್ಲರೂ ವಧುಗಳಾಗಿದ್ದೀರಿ. ಈಗ ನಿಮ್ಮನ್ನು ತಂದೆಯು ರಾವಣ ರಾಜ್ಯದಿಂದ ಬಿಡಿಸುತ್ತಾರೆ ಇದು ಶೋಕವಾಟಿಕೆಯಾಗಿದೆ. ಸತ್ಯಯುಗಕ್ಕೆ ಅಶೋಕವಾಟಿಕೆಯೆಂದು ಹೇಳಲಾಗುತ್ತದೆ. ಅಲ್ಲಿ ಯಾವುದೇ ಶೋಕವಿರುವುದಿಲ್ಲ, ಈ ಸಮಯದಲ್ಲಂತೂ ಶೋಕವೇ ಶೋಕವಿದೆ. ಯಾರೊಬ್ಬರೂ ಅಶೋಕರಿಲ್ಲ. ಹೆಸರಂತೂ ಅಶೋಕ ಹೋಟೆಲ್ ಎಂದು ಇಟ್ಟು ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಇಡೀ ಪ್ರಪಂಚವು ಈ ಸಮಯದಲ್ಲಿ ಬೇಹದ್ದಿನ ಹೋಟೆಲ್ ಎಂದೇ ತಿಳಿಯಿರಿ. ಇದು ಶೋಕದ ಹೋಟೆಲ್ ಆಗಿದೆ. ಮನುಷ್ಯರ ಆಹಾರ, ಪಾನೀಯಗಳು ಪ್ರಾಣಿಗಳ ತರಹವಿದೆ. ನಿಮ್ಮನ್ನು ನೋಡಿ ತಂದೆಯು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ! ಸತ್ಯ-ಸತ್ಯವಾದ ಅಶೋಕವಾಟಿಕೆಯು ಸತ್ಯಯುಗದಲ್ಲಿರುವುದು. ತಂದೆಯು ಹದ್ದ್ ಮತ್ತು ಬೇಹದ್ದಿನ ಅಂತರವನ್ನು ತಿಳಿಸುತ್ತಾರೆ ಅಂದಾಗ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ನಿಮಗೆ ಗೊತ್ತಿದೆ, ತಂದೆಯೇ ನಮಗೆ ಓದಿಸುತ್ತಾರೆ ಅಂದಮೇಲೆ ನಮ್ಮ ಕರ್ತವ್ಯವೂ ಸಹ ಎಲ್ಲರಿಗೆ ಮಾರ್ಗವನ್ನು ತಿಳಿಸುವುದು ಅಂಧರಿಗೆ ಊರುಗೋಲಾಗುವುದೇ ಆಗಿದೆ. ನಿಮ್ಮ ಬಳಿ ಚಿತ್ರಗಳೂ ಇವೆ. ಹೇಗೆ ಶಾಲೆಯಲ್ಲಿ ಇದು ಇಂತಹ ದೇಶವಾಗಿದೆ ಎಂದು ಚಿತ್ರಗಳ ಮೂಲಕ ತಿಳಿಸುತ್ತಾರೆ. ಆದರೆ ನೀವು ತಿಳಿಸುತ್ತೀರಿ - ನೀವಾತ್ಮರಾಗಿದ್ದೀರಿ, ಶರೀರವಲ್ಲ. ಆತ್ಮಗಳು ಸಹೋದರ-ಸಹೋದರಾಗಿದ್ದೀರಿ. ಎಷ್ಟು ಸಹಜ ಮಾತನ್ನು ತಿಳಿಸುತ್ತೀರಿ. ನಾವೆಲ್ಲರೂ ಸಹೋದರ-ಸಹೋದರರೆಂಬ ಮಾತನ್ನು ಮನುಷ್ಯರೂ ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನೀವೆಲ್ಲಾ ಆತ್ಮಗಳು ಸಹೋದರರಲ್ಲವೆ. ಹೇ ಪರಮಪಿತ ಎಂದು ಕರೆಯುತ್ತೀರಲ್ಲವೆ. ಅಂದಮೇಲೆ ಎಂದೂ ಸಹ ಪರಸ್ಪರ ಜಗಳವಾಡಬಾರದು. ಶರೀರ ಧಾರಣೆಯಿಂದ ಸಹೋದರ-ಸಹೋದರಿಯಾಗುತ್ತೀರಿ. ನಾವು ಶಿವ ತಂದೆಯ ಮಕ್ಕಳಲ್ಲವೆ. ಸಹೋದರ-ಸಹೋದರರಾಗಿದ್ದೇವೆ, ಪ್ರಜಾಪಿತ ಬ್ರಹ್ಮನ ಮಕ್ಕಳು ಸಹೋದರ-ಸಹೋದರಿಯರಾಗಿದ್ದಾರೆ. ನಾವು ತಾತನಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ ಆದ್ದರಿಂದ ತಾತನನ್ನೇ ನೆನಪು ಮಾಡುತ್ತೇವೆ. ಈ ಮಗನನ್ನೂ ಸಹ (ಬ್ರಹ್ಮಾ) ನಾನು ತನ್ನವರನ್ನಾಗಿ ಮಾಡಿಕೊಂಡಿದ್ದೇನೆ ಅಥವಾ ಇವರಲ್ಲಿ ಪ್ರವೇಶ ಮಾಡಿದ್ದೇನೆಂದು ತಂದೆಯು ತಿಳಿಸುತ್ತಾರೆ. ಇವೆಲ್ಲಾ ಮಾತುಗಳನ್ನು ಈಗ ನೀವು ತಿಳಿದುಕೊಳ್ಳುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಹೊಸ ದೈವೀ ಪ್ರವೃತ್ತಿ ಮಾರ್ಗವು ಸ್ಥಾಪನೆಯಾಗುತ್ತಿದೆ. ನೀವೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯ ಮತದಂತೆ ನಡೆಯುತ್ತೀರಿ. ಬ್ರಹ್ಮಾರವರೂ ಸಹ ತಂದೆಯ ಮತದನುಸಾರವೇ ನಡೆಯುತ್ತಾರೆ. ತಂದೆಯು ತಿಳಿಸುತ್ತಾರೆ - ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಮತ್ತು ಸರ್ವ ಸಂಬಂಧಗಳನ್ನು ತ್ಯಜಿಸುತ್ತಾ ಹೋಗಿ. 8 ಗಂಟೆಗಳ ಸಮಯ ನೆನಪಿನಲ್ಲಿರಬೇಕಾಗಿದೆ, ಉಳಿದ 16 ಗಂಟೆಗಳಲ್ಲಿ ಉದ್ಯೋಗ-ವ್ಯವಹಾರ, ವಿಶ್ರಾಂತಿ ಏನೆಲ್ಲವನ್ನೂ ಮಾಡಬೇಕೋ ಮಾಡಿಕೊಳ್ಳಿ. ನಾನು ಶಿವ ತಂದೆಯ ಮಗುವಾಗಿದ್ದೇನೆ ಎಂಬುದನ್ನು ಮರೆಯಬೇಡಿ. ಇಲ್ಲಿಯೇ ಬಂದು ಇರಬೇಕೆಂದಲ್ಲ. ಗೃಹಸ್ಥ ವ್ಯವಹಾರದಲ್ಲಿ ಮಕ್ಕಳು ಮೊದಲಾದವರ ಜೊತೆಯೂ ಇರಬೇಕು. ತಂದೆಯ ಬಳಿ ರಿಫ್ರೆಷ್ ಆಗುವುದಕ್ಕಾಗಿಯೇ ಬರುತ್ತೀರಿ. ಮಥುರಾ, ಬೃಂದಾವನಕ್ಕೆ ಮಧುಬನದ ಸಾಕ್ಷಾತ್ಕಾರ ಮಾಡಲು ಹೋಗುತ್ತಾರೆ. ಅದನ್ನು ಚಿಕ್ಕ ಮಾಡಲ್ಗಳ ರೂಪದಲ್ಲಿ ಮಾಡಿಟ್ಟಿದ್ದಾರೆ. ಈ ಬೇಹದ್ದಿನ ಮಾತುಗಳನ್ನು ತಿಳಿದುಕೊಳ್ಳುವಂತಹದ್ದಾಗಿವೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಹೊಸ ಸೃಷ್ಟಿಯನ್ನು ರಚಿಸುತ್ತಿದ್ದಾರೆ. ನಾವು ಪ್ರಜಾಪಿತ ಬ್ರಹ್ಮಾನ ಸಂತಾನರು ಬಿ.ಕೆ. ಆಗಿದ್ದೇವೆ. ವಿಕಾರದ ಮಾತೇ ಇರಲು ಸಾಧ್ಯವಿಲ್ಲ. ಸನ್ಯಾಸಿಗಳಿಗೆ ಶಿಷ್ಯರಾಗುತ್ತಾರೆ. ಒಂದುವೇಳೆ ಅವರು ಕಾವಿವಸ್ತ್ರಗಳನ್ನು ಧರಿಸಿದರೆ ಹೆಸರು ಬದಲಾಗಿ ಬಿಡುತ್ತದೆ. ಇಲ್ಲಿಯೂ ಸಹ ನೀವು ತಂದೆಯ ಮಕ್ಕಳಾದಾಗ ತಂದೆಯು ಹೆಸರುಗಳನ್ನು ಬದಲಾಯಿಸಿದರಲ್ಲವೆ. ಇಷ್ಟೊಂದು ಮಂದಿ ಈ ಭಟ್ಟಿಯಲ್ಲಿದ್ದರು, ಈ ಭಟ್ಟಿಯ ಬಗ್ಗೆ ಯಾರಿಗೂ ತಿಳಿದಿಲ್ಲ. ಶಾಸ್ತ್ರಗಳಲ್ಲಂತೂ ಏನೇನು ಮಾತುಗಳನ್ನು ಬರೆದಿದ್ದಾರೆ, ಇದು ಮತ್ತೆ ಕಲ್ಪದ ನಂತರವೂ ಆಗುವುದು. ಈಗ ನಿಮ್ಮ ಬುದ್ಧಿಯಲ್ಲಿ ಸೃಷ್ಟಿಚಕ್ರವು ಸುತ್ತುತ್ತದೆ. ತಂದೆಯು ಸ್ವದರ್ಶನ ಚಕ್ರಧಾರಿಯಲ್ಲವೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯವು ಅವರಿಗೆ ತಿಳಿದಿದೆ. ನಿಮಗಾದರೆ ಸ್ಥೂಲ ಶರೀರವಿದೆ ಆದರೆ ತಂದೆಗೆ ಶರೀರವೂ ಇಲ್ಲ, ಅವರು ಪರಮ ಆತ್ಮನಾಗಿದ್ದಾರೆ. ಆತ್ಮವೇ ಸ್ವದರ್ಶನ ಚಕ್ರಧಾರಿಯಲ್ಲವೆ. ಈಗ ಆತ್ಮಕ್ಕೆ ಅಲಂಕಾರಗಳನ್ನು ಹೇಗೆ ತೋರಿಸುವುದು? ತಿಳುವಳಿಕೆಯ ಮಾತಲ್ಲವೆ. ಇವು ಎಷ್ಟು ಆಳವಾದ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ವಾಸ್ತವದಲ್ಲಿ ನಾನು ಸ್ವದರ್ಶನ ಚಕ್ರಧಾರಿಯಾಗಿದ್ದೇನೆ. ನಿಮಗೆ ತಿಳಿದಿದೆ - ಆತ್ಮದಲ್ಲಿ ಇಡೀ ಸೃಷ್ಟಿಚಕ್ರದ ಜ್ಞಾನವು ತುಂಬಿದೆ. ತಂದೆಯೂ ಸಹ ಪರಮಧಾಮದ ನಿವಾಸಿಯಾಗಿದ್ದಾರೆ. ನಾವು ಅಲ್ಲಿನ ನಿವಾಸಿಗಳಾಗಿದ್ದೇವೆ. ತಂದೆಯು ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ - ಮಕ್ಕಳೇ, ನಾನು ಸ್ವದರ್ಶನ ಚಕ್ರಧಾರಿಯಾಗಿದ್ದೇನೆ. ನಾನು ಪತಿತ-ಪಾವನನು ನಿಮ್ಮ ಬಳಿ ಬಂದಿದ್ದೇನೆ. ಪತಿತರಿಂದ ಪಾವನರನ್ನಾಗಿ ಮಾಡಿ ನಮ್ಮನ್ನು ಮುಕ್ತಗೊಳಿಸಿ ಎಂದೇ ನನ್ನನ್ನು ಕರೆದಿರಿ. ತಂದೆಗೆ ಶರೀರವಂತೂ ಇಲ್ಲ, ಅಜನ್ಮನಾಗಿದ್ದಾರೆ. ಭಲೆ ಜನ್ಮವನ್ನು ತೆಗೆದುಕೊಳ್ಳುತ್ತಾರೆ ಆದರೆ ದಿವ್ಯ ಜನ್ಮ. ಶಿವ ಜಯಂತಿ ಅಥವಾ ಶಿವರಾತ್ರಿಯನ್ನಾಚರಿಸುತ್ತಾರೆ. ತಂದೆಯು ತಿಳಿಸುತ್ತಾರೆ - ಯಾವಾಗ ರಾತ್ರಿಯು ಮುಕ್ತಾಯವಾಗುವುದೋ ಆಗ ದಿನವನ್ನಾಗಿ ಮಾಡಲು ನಾನು ಬರುತ್ತೇನೆ. ದಿನದಲ್ಲಿ 21 ಜನ್ಮಗಳು ಮತ್ತೆ ರಾತ್ರಿಯಲ್ಲಿ 63 ಜನ್ಮಗಳಿವೆ, ಆತ್ಮವೇ ಭಿನ್ನ-ಭಿನ್ನ ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ಈಗ ದಿನದಿಂದ ರಾತ್ರಿಯಲ್ಲಿ ಬಂದಿದ್ದೇವೆ ಮತ್ತೆ ದಿನದಲ್ಲಿ ಹೋಗಬೇಕಾಗಿದೆ. ತಂದೆಯು ನಿಮ್ಮನ್ನು ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡಿದ್ದಾರೆ. ಈ ಸಮಯದಲ್ಲಿ ನನ್ನ ಪಾತ್ರವಿದೆ ಆದ್ದರಿಂದ ನಿಮ್ಮನ್ನೂ ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡುತ್ತೇನೆ. ನೀವು ಮತ್ತೆ ಈ ರೀತಿ ಅನ್ಯರನ್ನೂ ಮಾಡಬೇಕಾಗಿದೆ. 84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂದು 84 ಜನ್ಮಗಳ ಚಕ್ರದ ರಹಸ್ಯವನ್ನೂ ತಿಳಿಸಿದ್ದೇನೆ. ಮೊದಲು ನಿಮಗೆ ಈ ಜ್ಞಾನವಿತ್ತೆ? ಇಲ್ಲವೇ ಇಲ್ಲ. ಅಜ್ಞಾನಿಗಳಾಗಿದ್ದಿರಿ. ತಂದೆಯು ಮುಖ್ಯ ಮಾತನ್ನು ತಿಳಿಸುತ್ತಾರೆ - ತಂದೆಯು ಸ್ವದರ್ಶನ ಚಕ್ರಧಾರಿಯಾಗಿದ್ದಾರೆ, ಅವರಿಗೆ ಜ್ಞಾನದ ಸಾಗರನೆಂದು ಹೇಳಲಾಗುತ್ತದೆ. ಅವರು ಸತ್ಯ, ಚೈತನ್ಯನಾಗಿದ್ದಾರೆ. ನೀವು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಿದ್ದಾರೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಮಕ್ಕಳೇ, ಪರಸ್ಪರ ಜಗಳವಾಡಬೇಡಿ, ಉಪ್ಪು-ನೀರಿನಂತೆ ವರ್ತಿಸಬೇಡಿ. ಸದಾ ಹರ್ಷಿತರಾಗಿರಿ ಮತ್ತು ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡಿ. ಎಲ್ಲರೂ ತಂದೆಯನ್ನೇ ಮರೆತು ಹೋಗಿದ್ದಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ನಿರಾಕಾರ ಭಗವಾನುವಾಚ ನಿರಾಕಾರಿ ಆತ್ಮಗಳ ಪ್ರತಿ. ಮೂಲತಃ ನೀವು ನಿರಾಕಾರಿಯಾಗಿದ್ದಿರಿ ನಂತರ ಸಾಕಾರಿಯಾಗುತ್ತೀರಿ. ಸಾಕಾರದಲ್ಲಿ ಬರದೇ ಆತ್ಮವು ಏನನ್ನೂ ಮಾಡಲು ಸಾಧ್ಯವಿಲ್ಲ. ಆತ್ಮವು ಶರೀರವನ್ನು ಬಿಟ್ಟು ಹೋಗುತ್ತದೆಯೆಂದರೆ ಶರೀರವು ಅಲುಗಾಡುವುದೂ ಇಲ್ಲ. ಆತ್ಮವು ಕೂಡಲೇ ಹೋಗಿ ಇನ್ನೊಂದು ಶರೀರದಲ್ಲಿ ತನ್ನ ಪಾತ್ರವನ್ನಭಿನಯಿಸುತ್ತದೆ. ಈ ಮಾತುಗಳನ್ನು ಒಳ್ಳೆಯ ರೀತಿಯಲ್ಲಿ ತಿಳಿದುಕೊಳ್ಳಿ, ಒಳಗಡೆ ಚಿಂತಿಸುತ್ತಾ (ಮನನ ಮಾಡುತ್ತಾ) ಇರಿ. ನಾವಾತ್ಮಗಳು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಸತ್ಯಯುಗದ ಆಸ್ತಿಯು ಸಿಗುತ್ತದೆ. ಅವಶ್ಯವಾಗಿ ತಂದೆಯೇ ಭಾರತಕ್ಕೆ ಆಸ್ತಿಯನ್ನು ಕೊಟ್ಟಿರಬೇಕು ಆದರೆ ಯಾವಾಗ ಆಸ್ತಿಯನ್ನು ಕೊಟ್ಟರು ನಂತರ ಏನಾಯಿತು? ಇದು ಮನುಷ್ಯರಿಗೆ ಸ್ವಲ್ಪವೂ ತಿಳಿದಿಲ್ಲ. ಈಗ ಎಲ್ಲವನ್ನೂ ತಂದೆಯು ತಿಳಿಸುತ್ತಾರೆ. ನೀವು ಮಕ್ಕಳನ್ನೇ ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡಿದ್ದಾರೆ ಮತ್ತೆ ನೀವು 84 ಜನ್ಮಗಳನ್ನು ತೆಗೆದುಕೊಂಡಿರಿ. ಈಗ ಪುನಃ ನಾನು ಬಂದಿದ್ದೇನೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಿರುತ್ತಾರೆ. ತಂದೆಯನ್ನು ನೆನಪು ಮಾಡಿ ಮತ್ತು ಮಧುರರಾಗಿ. ನಿಮ್ಮ ಗುರಿಯೂ ಸನ್ಮುಖದಲ್ಲಿದೆ. ತಂದೆಯು ವಕೀಲರಿಗೂ ವಕೀಲನಾಗಿದ್ದಾರೆ. ಎಲ್ಲಾ ಜಗಳಗಳಿಂದ ಬಿಡಿಸುತ್ತಾರೆ. ನೀವು ಮಕ್ಕಳಿಗೆ ಬಹಳ ಆಂತರಿಕ ಖುಷಿಯಿರಬೇಕು, ನಾವು ತಂದೆಯ ಮಕ್ಕಳಾಗಿದ್ದೇವೆ. ತಂದೆಯು ಆಸ್ತಿಯನ್ನು ಕೊಡಲು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ನೀವಿಲ್ಲಿ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕಾಗಿಯೇ ಬರುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳು, ಮೊಮ್ಮಕ್ಕಳು ಎಲ್ಲರನ್ನೂ ನೋಡುತ್ತಲೂ ಬುದ್ಧಿಯು ತಂದೆ ಮತ್ತು ರಾಜಧಾನಿಯ ಕಡೆ ಇರಲಿ. ವಿದ್ಯೆಯು ಎಷ್ಟು ಸಹಜವಾಗಿದೆ. ಯಾವ ತಂದೆಯು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನೇ ನೀವು ಮರೆತು ಹೋಗುತ್ತೀರಿ. ಮೊದಲು ತಮ್ಮನ್ನು ಆತ್ಮನೆಂದು ತಿಳಿಯಿರಿ. ಈ ಜ್ಞಾನವನ್ನು ತಂದೆಯು ಸಂಗಮಯುಗದಲ್ಲಿಯೇ ಕೊಡುತ್ತಾರೆ ಏಕೆಂದರೆ ನೀವು ಸಂಗಮಯುಗದಲ್ಲಿ ಪತಿತರಿಂದ ಪಾವನರಾಗಬೇಕಾಗಿದೆ.

ಒಳ್ಳೆಯದು, ಮಧುರಾತಿ ಮಧುರ ಆತ್ಮಿಕ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣ ಕುಲಭೂಷಣರೇ, ಇದು ದೇವತೆಗಳಿಗಿಂತಲೂ ಶ್ರೇಷ್ಠ ಕುಲವಾಗಿದೆ. ನೀವು ಭಾರತದ ಬಹಳ ಶ್ರೇಷ್ಠ ಸೇವೆ ಮಾಡುತ್ತೀರಿ. ನೀವೀಗ ಪುನಃ ಪೂಜ್ಯರಾಗಿ ಬಿಡುತ್ತೀರಿ. ಈಗ ನೀವು ಪೂಜಾರಿಗಳನ್ನು ಪೂಜ್ಯ ಮತ್ತು ನಿಮ್ಮನ್ನು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡುತ್ತಿದ್ದೇನೆ. ಇಂತಹ ಆತ್ಮಿಕ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದಂತೆ ಈಗ ಪ್ರತಿಯೊಂದು ಕರ್ಮವನ್ನು ಶ್ರೇಷ್ಠ ಕರ್ಮ ಮಾಡಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು, ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ತಂದೆಯ ಆದೇಶದನುಸಾರವೇ ನಡೆಯಬೇಕಾಗಿದೆ.

2. ಸದಾ ಹರ್ಷಿತರಾಗಿರಲು ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ. ಎಂದೂ ಉಪ್ಪು ನೀರಾಗಬಾರದು. ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಬಹಳ-ಬಹಳ ಮಧುರರಾಗಬೇಕಾಗಿದೆ.

ವರದಾನ:
ಮಾನ ಬೇಡುವ ಬದಲು ಎಲ್ಲರಿಗೂ ಮಾನ ಕೊಡುವಂತಹ ಸದಾ ನಿಷ್ಕಾಮ ಯೋಗಿ ಭವ.

ನಿಮಗೆ ಯಾರೇ ಮಾನ ಕೊಡಲಿ, ಒಪ್ಪಲಿ ಅಥವಾ ಬಿಡಲಿ ಆದರೆ ನೀವು ಅವರನ್ನು ಮಧುರ ಸಹೋದರ, ಮಧುರ ಸಹೋದರಿ ಎಂದು ಒಪ್ಪುತ್ತಾ ಸದಾ ಸ್ವಮಾನದಲ್ಲಿರುತ್ತಾ, ಸ್ನೇಹಿ ದೃಷ್ಠಿಯಿಂದ, ಸ್ನೇಹದ ವೃತ್ತಿಯಿಂದ ಆತ್ಮೀಕ ಮಾನ್ಯತೆ ಕೊಡುತ್ತಾ ಹೋಗಿ. ಇವರು ಮಾನ ಕೊಟ್ಟರೆ ನಾನು ಮಾನ ಕೊಡುವೆ-ಇದೂ ಸಹಾ ರಾಯಲ್ ಭಿಕಾರಿತನವಾಗಿದೆ, ಇದರಲ್ಲಿ ನಿಶ್ಕಾಮ ಯೋಗಿಗಳಾಗಿ. ಆತ್ಮೀಯ ಸ್ನೇಹದ ಮಳೆಯಿಂದ ಶತೃವನ್ನೂ ಸಹಾ ಸ್ನೇಹಿತನನ್ನಾಗಿ ಮಾಡಿಕೊಳ್ಳಿ. ನಿಮ್ಮ ಮುಂದೆ ಯಾರೇ ಕಲ್ಲನ್ನು ಎಸೆದರೂ ಸಹಾ ನೀವು ಅವರಿಗೆ ರತ್ನವನ್ನೇ ಕೊಡಿ. ಏಕೆಂದರೆ ನೀವು ರತ್ನಾಗಾರ ತಂದೆಯ ಮಕ್ಕಳಾಗಿರುವಿರಿ.

ಸ್ಲೋಗನ್:
ವಿಶ್ವದ ನವ-ನಿರ್ಮಾಣ ಮಾಡುವುದಕ್ಕೋಸ್ಕರ ಎರಡು ಶಬ್ಧ ನೆನಪಿನಲ್ಲಿಟ್ಟು ಕೊಳ್ಳಿ-ನಿಮಿತ್ತ ಮತ್ತು ನಿರ್ಮಾಣ.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ಸೇವೆಯಲ್ಲಿ ಸಫಲತೆಗೆ ಮುಖ್ಯ ಸಾಧನವಾಗಿದೆ – ತ್ಯಾಗ ಮತ್ತು ತಪಸ್ಸು. ಇಂತಹ ತ್ಯಾಗಿ ಮತ್ತು ತಪಸ್ವಿ ಅರ್ಥಾತ್ ಸದಾ ತಂದೆಯ ಲಗನನಿನಲ್ಲಿ ಲವಲೀನ, ಪ್ರೇಮದ ಸಾಗರದಲ್ಲಿ ಸಮಾವೇಶವಾಗಿರುವ, ಜ್ಞಾನ, ಆನಂದ, ಸುಖ, ಶಾಂತಿಯ ಸಾಗರದಲ್ಲಿ ಸಮಾವೇಶವಾಗಿರುವವರಿಗೆ ಹೇಳಲಾಗುವುದು – ತಪಸ್ವಿ. ಇಂತಹ ತ್ಯಾಗ ತಪಸ್ಯದವರಿಗೆ ಹೇಳಲಾಗುವುದು ಸತ್ಯ ಸೇವಾಧಾರಿಯಾಗಿದ್ದಾರೆ.