21.12.25    Avyakt Bapdada     Kannada Murli    05.03.2008     Om Shanti     Madhuban


“ಸಂಗಮಯುಗದ ಬ್ಯಾಂಕ್ ನಲ್ಲಿ ಶಾಂತಿಯ ಶಕ್ತಿ ಹಾಗೂ ಶ್ರೇಷ್ಠ ಕರ್ಮ ಜಮಾ ಮಾಡಿರಿ, ಶಿವ ಮಂತ್ರದಿಂದ ನನ್ನತನವನ್ನು ಪರಿವರ್ತನೆ ಮಾಡಿರಿ”


ಇಂದು ಬಾಪದಾದಾ ನಾಲ್ಕೂ ಕಡೆಯ ಮಕ್ಕಳ ಸ್ನೇಹವನ್ನು ನೋಡುತ್ತಿದ್ದಾರೆ. ತಾವು ಎಲ್ಲರೂ ಸ್ನೇಹದ ವಿಮಾನದಿಂದ ಇಲ್ಲಿ ತಲುಪಿದ್ದೀರಿ. ಈ ಸ್ನೇಹದ ವಿಮಾನ ಬಹಳ ಸಹಜವಾಗಿ ಸ್ನೇಹಿಯ ಹತ್ತಿರ ತಲುಪಿಸುತ್ತದೆ. ಬಾಪದಾದಾ ನೋಡುತ್ತಿದ್ದಾರೆ ಇಂದು ವಿಶೇಷವಾಗಿ ಎಲ್ಲಾ ಲವಲೀನ ಆತ್ಮರು ಪರಮಾತ್ಮನ ಪ್ರೀತಿಯ ಉಯ್ಯಾಲೆಯಲ್ಲಿ ಆಡುತ್ತಿದ್ದಾರೆ. ಬಾಪದಾದಾರವರೂ ಕೂಡ ನಾಲ್ಕೂ ಕಡೆಯ ಮಕ್ಕಳ ಸ್ನೇಹದಲ್ಲಿ ಸಮಾವೇಶ ಆಗಿದ್ದಾರೆ. ಈ ಪರಮಾತ್ಮನ ಸ್ನೇಹ ತಂದೆಯ ಸಮಾನ ಅಶರೀರಿ ಸಹಜವಾಗಿ ಮಾಡುತ್ತದೆ. ವ್ಯಕ್ತ ಭಾವದಿಂದ ದೂರ ಅವ್ಯಕ್ತ ಸ್ವರೂಪದಲ್ಲಿ ಸ್ಥಿತರನ್ನಾಗಿ ಮಾಡುತ್ತದೆ. ಬಾಪ್ದಾದಾರವರೂ ಕೂಡ ಪ್ರತಿಯೊಂದು ಮಕ್ಕಳನ್ನು ಸಮಾನ ಸ್ಥಿತಿಯಲ್ಲಿ ನೋಡಿ ಹರ್ಷಿತರಾಗುತ್ತಿದ್ದಾರೆ.

ಇಂದಿನ ದಿನ ಎಲ್ಲ್ಲಾ ಮಕ್ಕಳು ಶಿವರಾತ್ರಿ, ಶಿವ ಜಯಂತಿಯನ್ನು ತಂದೆಯ ಹಾಗೂ ತಮ್ಮ ಜನ್ಮ ದಿನ ಆಚರಿಸಲು ಬಂದಿದ್ದಾರೆ. ಬಾಪದಾದಾರವರೂ ಕೂಡ ತಮ್ಮ-ತಮ್ಮ ವತನದಿಂದ ತಾವು ಎಲ್ಲಾ ಮಕ್ಕಳ ಜನ್ಮ ದಿನ ಆಚರಿಸಲು ಇಲ್ಲಿ ತಲುಪಿದ್ದಾರೆ. ಇಡೀ ಕಲ್ಪದಲ್ಲಿ ಈ ಜನ್ಮ ದಿನ ತಂದೆಯ ಹಾಗೂ ತಾವು ಮಕ್ಕಳದು ನ್ಯಾರಾ (ಭಿನ್ನ) ಹಾಗೂ ಪ್ಯಾರಾ (ಪ್ರಿಯ) ಆಗಿದೆ. ಭಕ್ತ ಜನರೂ ಕೂಡ ಈ ಉತ್ಸವವನ್ನು ಬಹಳ ಭಾವನೆ ಹಾಗೂ ಪ್ರೀತಿಯಿಂದ ಆಚರಿಸುತ್ತಾರೆ. ತಾವು ಈ ದಿವ್ಯ ಜನ್ಮದಲ್ಲಿ ಏನು ಶ್ರೇಷ್ಠ ಅಲೌಕಿಕ ಕರ್ಮ ಮಾಡಿದ್ದೀರಿ, ಈಗಲೂ ಸಹ ಮಾಡುತ್ತಿದ್ದೀರಿ. ಅದು ನೆನಪಾರ್ಥ ರೂಪದಲ್ಲಿ ಭಲೇ ಅಲ್ಪಕಾಲಕ್ಕಾಗಿ ಅಲ್ಪ ಸಮಯಕ್ಕಾಗಿ ಆಚರಿಸುತ್ತಾರೆ ಆದರೂ ಭಕ್ತರದೂ ಕಮಾಲ್ (ಅದ್ಭುತ) ಆಗಿದೆ. ನೆನಪಾರ್ಥ ಆಚರಿಸುವವರೂ, ನೆನಪಾರ್ಥ ಮಾಡುವವರದೂ ಎಷ್ಟೊಂದು ಅದ್ಭುತವಾಗಿದೆ ನೋಡಿರಿ. ಅವರು ಕಾಪಿ ಮಾಡುವುದರಲ್ಲಿ ಚತುರ ಆಗಿದ್ದಾರೆ ಏಕೆಂದರೆ ಅವರು ನಿಮ್ಮ ಭಕ್ತರಾಗಿದ್ದಾರಲ್ಲವೇ. ಅಂದರೆ ನಿಮ್ಮ ಶ್ರೇಷ್ಠತೆಯ ಫಲ ನಿಮ್ಮ ನೆನಪಾರ್ಥ ಮಾಡುವವರಿಗೆ ವರದಾನದ ರೂಪದಲ್ಲಿ ಸಿಗುತ್ತದೆ. ನೀವು ಒಂದು ಜನ್ಮಕ್ಕಾಗಿ ಒಂದು ಸಲ ಸಂಪೂರ್ಣ ಪವಿತ್ರತೆಯ ವೃತ ಮಾಡುತ್ತೀರಿ. ಕಾಪಿಯಂತೂ ಮಾಡಿದ್ದಾರೆ, ಒಂದು ದಿನಕ್ಕಾಗಿ ಪವಿತ್ರತೆಯ ವ್ರತ ಮಾಡುತ್ತಾರೆ. ತಾವು ತಮ್ಮ ಪೂರ್ಣ ಜನ್ಮ ಪವಿತ್ರ ಅನ್ನದ ವ್ರತವನ್ನು ತೆಗೆದುಕೊಂಡಿದ್ದೀರಿ ಹಾಗೂ ಅವರು ಒಂದು ದಿನ ವ್ರತ ಮಾಡುತ್ತಾರೆ. ಬಾಪ್ದಾದಾ ಇಂದು ಅಮೃತವೇಳೆ ನೋಡುತ್ತಿದ್ದರು ತಮ್ಮೆಲ್ಲರ ಭಕ್ತರೂ ಕಡಿಮೆಯಿಲ್ಲ. ಅವರದೂ ವಿಶೇಷತೆ ಚೆನ್ನಾಗಿದೆ. ಊಟ ತಿಂಡಿಯ ವ್ರತವಿರಬಹುದು. ಮನಸ್ಸಿನ ಸಂಕಲ್ಪದ ಪವಿತ್ರತೆ, ವಚನದ ಕರ್ಮದ ಸಂಬಂಧ ಸಂಪರ್ಕದಲ್ಲಿ ಬರುತ್ತಲೂ ಕರ್ಮದ ಪಕ್ಕಾ ವ್ರತ ತಾವೆಲ್ಲರೂ ಇಡೀ ಜನ್ಮಕ್ಕೋಸ್ಕರ ತೆಗೆದುಕೊಂಡಿದ್ದೀರಾ? ಅಥವಾ ಸ್ವಲ್ಪ-ಸ್ವಲ್ಪ ತೆಗೆದುಕೊಂಡಿದ್ದೀರಾ? ಪವಿತ್ರತೆ ಬ್ರಾಹ್ಮಣ ಜೀವನದ ಆಧಾರವಾಗಿದೆ. ಪೂಜ್ಯ ಆಗುವುದಕ್ಕೆ ಆಧಾರವಾಗಿದೆ. ಶ್ರೇಷ್ಠ ಪ್ರಾಪ್ತಿಯ ಅಧಾರವಾಗಿದೆ. ಆದ್ದರಿಂದ ಯಾರೆಲ್ಲ ಭಾಗ್ಯವಂತ ಆತ್ಮರು ಇಲ್ಲಿ ಬಂದು ತಲುಪಿದ್ದೀರೋ ಅವರೆಲ್ಲ ಈ ಜನ್ಮದ ಉತ್ಸವ ಪವಿತ್ರ ಆಗುವುದರ ನಾಲ್ಕೂ ಪ್ರಕಾರದ - ಬರೀ ಬ್ರಹ್ಮಚರ್ಯದ ಪವಿತ್ರತೆಯಲ್ಲ ಆದರೆ ಮನ-ವಚನ-ಕರ್ಮ-ಸಂಬಂಧ ಸಂಪರ್ಕದಲ್ಲಿ ಪವಿತ್ರತೆಯನ್ನು ಪರಿಶೀಲನೆ ಮಾಡಿಕೊಳ್ಳಿ. ಈ ಪಕ್ಕಾ ವ್ರತ ತೆಗೆದುಕೊಂಡಿದ್ದೀರಾ? ಯಾರು ಪಕ್ಕಾ ವ್ರತ ತೆಗೆದುಕೊಂಡಿದ್ದೀರಿ ಅಲ್ಪ-ಸ್ವಲ್ಪ ಕಚ್ಚಾ ಅಲ್ಲ ಅವರು ಕೈಯನ್ನು ಎತ್ತಿ. ಪಕ್ಕಾ, ಪಕ್ಕಾ, ಪಕ್ಕಾ? ಎಷ್ಟು ಪಕ್ಕಾ ಆಗಿದ್ದೀರಿ? ಯಾರಾದರೂ ಅಲುಗಾಡಿಸಿದಲ್ಲಿ ಅಲುಗಾಡುತ್ತೀರಾ? ಅಥವಾ ಅಲುಗಾಡುವುದಿಲ್ಲವೇ? ಆಗಾಗ್ಗೆ ಮಾಯೆ ಬರುತ್ತದೆಯಲ್ಲವೇ, ಅಥವಾ ಮಾಯೆಗೆ ವಿದಾಯಿಯನ್ನು ನೀಡಿದ್ದೀರಾ? ಅಥವಾ ಆಗಾಗ್ಗೆ ವಿದಾಯ ನೀಡಿದ್ದರೂ ಅದು ಬರುತ್ತದೆಯೇ! ಪಕ್ಕಾ ವ್ರತವನ್ನು ತೆಗೆದುಕೊಂಡಿದ್ದೇನೆಯೇ? ಸದಾ ಕಾಲಕ್ಕೆ ಪಕ್ಕಾ ವ್ರತ ತೆಗೆದುಕೊಂಡಿದ್ದೀರಾ? ಅಥವಾ ಕೆಲವೊಮ್ಮೆ ತೆಗೆದುಕೊಂಡಿದ್ದೀರಾ? ಕೆಲವೊಮ್ಮೆ ಸ್ವಲ್ಪ, ಕೆಲವೊಮ್ಮೆ ಬಹಳ, ಕೆಲವೊಮ್ಮೆ ಪಕ್ಕಾ, ಕೆಲವೊಮ್ಮೆ ಕಚ್ಚಾ ಈ ರೀತಿಯಂತು ಇಲ್ಲವೇ! ಏಕೆಂದರೆ ಬಾಪ್ದಾದಾರ ಜೊತೆಗೆ ಎಲ್ಲರೂ 100% ಗಿಂತಲೂ ಹೆಚ್ಚು ಪ್ರೀತಿ ಇದೆ ಎಂದು ತಿಳಿದುಕೊಳ್ಳುತ್ತಾರೆ. ಒಂದು ವೇಳೆ ಬಾಪ್ದಾದಾರವರು ಬಾಬಾರೊಂದಿಗೆ ಪ್ರೀತಿ ಎಷ್ಟಿದೆ ಎಂದು ಕೇಳಿದಾಗ ಎಲ್ಲರೂ ಬಹಳ ಉಮ್ಮಸ್ಸು ಉತ್ಸಾಹದಿಂದ ಕೈ ಎತ್ತುತ್ತಾರೆ. ಪ್ರೀತಿಯ ಪರ್ಸೆಂಟೇಜ್ನಲ್ಲಿ ಬಹಳಷ್ಟು ಜನ ಇದ್ದಾರೆ, ಕಡಿಮೆಯಿಲ್ಲ. ಬಾಪದಾದಾರವರೂ ಸಹ ಮೆಜಾರಿಟಿ ಮಕ್ಕಳು ಪ್ರೀತಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಯುತ್ತಾರೆ. ಆದರೆ ಪವಿತ್ರತೆಯ ವೃತದಲ್ಲಿ ನಾಲ್ಕೂ ರೂಪದಲ್ಲಿ ಮನ-ವಚನ-ಕರ್ಮ, ಸಂಬಂಧ ಸಂಪಾರ್ಕ ನಾಲ್ಕೂ ರೂಪದಲ್ಲಿ ಸಂಪೂರ್ಣ ಪವಿತ್ರತೆಯ ವ್ರತವನ್ನು ನಿಭಾಯಿಸುವುದರಲ್ಲಿ ಪರ್ಸೆಂಟೇಜ್ನಲ್ಲಿ ಬರುತ್ತೀರಿ. ಈಗ ಬಾಪ್ದಾದಾರವರು ಏನು ಬಯಸುತ್ತಾರೆ? ಸಮಾನ ಆಗುವುದರ ಪ್ರತಿಜ್ಞೆಯನ್ನು ಮಾಡಿದ್ದೀರೋ, ಅಂದಾಗ ಪ್ರತಿಯೊಬ್ಬ ಮಗುವಿನ ಚೆಹರೆಯಲ್ಲಿ ತಂದೆಯ ಮೂರ್ತಿ ಕಾಣಬೇಕೆಂಬುದೇ ಬಾಪ್ದಾದಾರವರ ಬಯಕೆಯಾಗಿದೆ. ಪ್ರತಿಯೊಂದು ಮಾತು ತಂದೆಯ ಸಮಾನ ಮಾತು ಆಗಿರಬೇಕು, ಬಾಪ್ದಾದಾರವರ ಮಾತು ವರದಾನ ರೂಪವಾಗಿ ಬಿಡುತ್ತದೆ. ಆದ್ದರಿಂದ ತಾವೆಲ್ಲರೂ ನಮ್ಮ ಮುಖದಲ್ಲಿ ಬಾಬಾರ ಮೂರ್ತಿ ಕಾಣುತ್ತದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿರಿ. ಬಾಬಾರ ಮೂರ್ತಿ ಯಾವುದಾಗಿದೆ? ಸಂಪನ್ನ, ಎಲ್ಲ ಮಾತುಗಳಿಂದ ಸಂಪನ್ನ ಆಗಿದ್ದಾರೆ. ಹಾಗೆಯೇ ಪ್ರತಿಯೊಬ್ಬ ಮಗುವಿನ ನಯನ, ಪ್ರತಿಯೊಬ್ಬ ಮಗುವಿನ ಚೆಹರೆ ತಂದೆಯ ಸಮಾನ ಆಗಿದೆಯೇ? ಸದಾ ಮುಗುಳ್ನಗೆಯ ಚೆಹರೆಯಾಗಿದೆಯೇ? ಅಥವಾ ಕೆಲವೊಮ್ಮೆ ವಿಚಾರ ಮಾಡುವ, ಕೆಲವೊಮ್ಮೆ ವ್ಯರ್ಥ ಸಂಕಲ್ಪಗಳ ಛಾಯೆ ಇರುವ, ಕೆಲವೊಮ್ಮೆ ಇನ್ನೇನೋ ಆಗಿ ಬಿಡುತ್ತದೆ. ಏಕೆಂದರೆ ಜನ್ಮ ಪಡೆದುಕೊಂಡ ಕ್ಷಣವೇ ಮಾಯೆ ಈ ತಮ್ಮ ಶ್ರೇಷ್ಠ ಜೀವನದಲ್ಲಿ ಎದುರಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಮಾಯೆಯ ಕೆಲಸ ಬರುವುದಾಗಿದೆ, ತಾವು ಸದಾ ಪವಿತ್ರತೆಯ ವ್ರತ ತೆಗೆದುಕೊಂಡಿರುವ ಆತ್ಮರ ಕೆಲಸ ದೂರದಿಂದ ಮಾಯೆಯನ್ನು ಓಡಿಸುವುದಾಗಿದೆ.

ಬಾಪ್ದಾದಾ ನೋಡಿದ್ದೇವೆ ಕೆಲವು ಮಕ್ಕಳು ಮಾಯೆಯನ್ನು ದೂರದಿಂದಲೇ ಓಡಿಸುವುದಿಲ್ಲ. ಮಾಯೆಯು ಬಂದು ಬಿಡುತ್ತದೆ, ಬರಲು ಬಿಡುತ್ತಾರೆ. ಅರ್ಥಾತ್ ಮಾಯೆಯ ಪ್ರಭಾವದಲ್ಲಿ ಬಂದು ಬಿಡುತ್ತಾರೆ. ಒಂದುವೇಳೆ ದೂರದಿಂದಲೇ ಓಡಿಸುವುದಿಲ್ಲವೆಂದರೆ ಮಾಯೆಗೂ ಸಹ ಅಭ್ಯಾಸವಾಗಿ ಬಿಡುತ್ತದೆ. ಏಕೆಂದರೆ ಅದು ಇವರು ನನ್ನನ್ನು ಕುಳಿತುಕೊಳ್ಳಲು ಬಿಡುತ್ತಾರೆಂದು ತಿಳಿದುಕೊಳ್ಳುತ್ತದೆ. ಮಾಯೆ ಬರುವುದೇ ಅದು ಕುಳಿತುಕೊಳ್ಳುವುದರ ಲಕ್ಷಣ. ಇದು ಮಾಯೆ ಎಂದು ಯೋಚಿಸುತ್ತಾರೆ ಆದರೂ ಸಹ ಏನೆಂದು ಯೋಚಿಸುತ್ತಾರೆ? ಈಗ ಸಂಪೂರ್ಣ ಆಗಿದ್ದಾರೆಯೇ, ಯಾರೂ ಸಂಪೂರ್ಣರಾಗಿಲ್ಲ. ಈಗ ಆಗುತ್ತಾ ಇದ್ದೇವೆ, ಆಗಿ ಬಿಡುತ್ತೇವೆ. ಈ ರೀತಿ ವೆ, ವೆ ಎಂದು ಮಾಯೆಯನ್ನು ಕುಳ್ಳರಿಸಿಕೊಳ್ಳುವ ಅಭ್ಯಾಸವಾಗಿ ಬಿಡುತ್ತದೆ. ಈ ದಿನ ಜನ್ಮ ದಿನವನ್ನು ಆಚರಿಸುತ್ತಿದ್ದೀರಿ. ತಂದೆಯೂ ಸಹ ಆಶೀರ್ವಾದವನ್ನು, ಶುಭಾಷಯಗಳನ್ನಂತೂ ನೀಡುತ್ತಿದ್ದೇವೆ. ಆದರೆ ತಂದೆ ಪ್ರತಿಯೊಬ್ಬ ಮಗುವಿಗೆ ಕೊನೆಯ ನಂಬರಿನ ಮಗುವನ್ನೂ ಸಹ ಯಾವ ರೂಪದಲ್ಲಿ ನೋಡಲು ಬಯಸುತ್ತೇವೆ? ಕೊನೆಯ ನಂಬರಿನವರೂ ಸಹ ತಂದೆಗೆ ಪ್ರಿಯರಾಗಿದ್ದಾರಲ್ಲವೇ! ತಂದೆ ಕೊನೆಯ ನಂಬರಿನ ಮಗುವನ್ನೂ ಸಹ ಸದಾ ಅರಳಿರುವ ಗುಲಾಬಿಯಂತೆ ನೋಡಲು ಬಯಸುತ್ತೇವೆ, ಬಾಡಿ ಹೋಗಿರುವಂತದ್ದಲ್ಲ. ಬಾಡಿ ಹೋಗುವುದರ ಕಾರಣ ಹುಡುಗಾಟಿಕೆ. ಆಗಿ ಬಿಡುತ್ತದೆ, ನೋಡುತ್ತೇವೆ, ಮಾಡಿಯೇ ಬಿಡುತ್ತೇವೆ, ತಲುಪಿಯೇ ಬಿಡುತ್ತೇವೆ..... ಈ ವೆ, ವೆ ಎಂಬ ಭಾಷೆ ಕೆಳಗೆ ಬೀಳಿಸಿ ಬಿಡುತ್ತದೆ. ಪರಿಶೀಲನೆ ಮಾಡಿಕೊಳ್ಳಿ - ಎಷ್ಟು ಸಮಯ ಕಳೆದು ಹೋಯಿತು. ಈಗ ಸಮಯದ ಸಮೀಪತೆ ಮತ್ತು ಇದ್ದಕ್ಕಿದ್ದ ಹಾಗೆ ಆಗುವ ಸೂಚನೆಯನ್ನಂತೂ ಬಾಪ್ದಾದಾರವರು ಕೊಟ್ಟು ಬಿಟ್ಟಿದ್ದೇವೆ. ಕೊಡುತ್ತಾ ಇದ್ದೇವೆ ಅಲ್ಲ, ಕೊಟ್ಟು ಬಿಟ್ಟಿದ್ದೇವೆ. ಇಂತಹ ಸಮಯಕ್ಕಾಗಿ ಸದಾ ಸಿದ್ದರು, ಜಾಗೃತರಾಗುವ ಅವಶ್ಯಕತೆಯಿದೆ. ಜಾಗೃತರಾಗಲು ನಮ್ಮ ಮನ ಮತ್ತು ಬುದ್ಧಿ ಸದಾ ಸ್ವಚ್ಛವಾಗಿದೆಯೇ ಎಂದು ಶೋಧನೆ ಮಾಡಿಕೊಳ್ಳಿ? ಸ್ವಚ್ಛವಾಗಿರಬೇಕು ಸ್ಪಷ್ಟವಾಗಿರಬೇಕು. ಇದಕ್ಕಾಗಿ ಸಮಯದಲ್ಲಿ ವಿಜಯ ಪ್ರಾಪ್ತಿ ಮಾಡಿಕೊಳ್ಳಲು ಮನಸ್ಸಿನಲ್ಲಿ ಬುದ್ಧಿಯಲ್ಲಿ ಗ್ರಹಿಸುವಂತಹ ಶಕ್ತಿ ಮತ್ತು ಪ್ರೇರಣೆಯನ್ನು ಪಡೆಯುವ ಶಕ್ತಿ ಎರಡೂ ಬಹಳ ಅವಶ್ಯಕತೆ ಇದೆ. ಇಂತಹ ಪರಿಸ್ಥಿತಿಗಳು ಬರಲಿವೆ ಆಗ ಎಷ್ಟೇ ದೂರದಲ್ಲಿದ್ದರೂ ಸ್ಪಷ್ಟ ಮತ್ತು ಸ್ವಚ್ಛ ಮನಸ್ಸು ಬುದ್ಧಿ ಇದ್ದದ್ದೇ ಆದರೆ ತಂದೆಯ ಸೂಚನೆಯ, ಸಲಹೆಯ ಯಾವ ಶ್ರೀಮತ ಸಿಗುವುದಿದೆ ಅದನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಆಗ ಇದನ್ನು ಮಾಡಬೇಕು, ಇದನ್ನು ಮಾಡಬಾರದು ಎಂದು ಪ್ರೇರಣೆಯಾಗುತ್ತದೆ. ಆದ್ದರಿಂದ ಬಾಪಾದಾದಾರವರು ಮೊದಲೂ ಸಹ ತಿಳಿಸಿದ್ದೇವೆ ವರ್ತಮಾನ ಸಮಯದಲ್ಲಿ ಶಾಂತಿಯ ಶಕ್ತಿಯನ್ನು ತನ್ನ ಬಳಿ ಜಮಾ ಮಾಡಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ಜಮಾ ಮಾಡಿಕೊಳ್ಳಿ. ಯಾವಾಗ ಬೇಕು, ಹೇಗೆ ಬೇಕು ಹಾಗೆ ಮನಸ್ಸು ಬುದ್ಧಿಯನ್ನು ನಿಗ್ರಹಿಸಲು ಸಾಧ್ಯವಾಗಬೇಕು. ವ್ಯರ್ಥ ಸಂಕಲ್ಪ ಸ್ವಪ್ನದಲ್ಲಿಯೂ ಸಹ ಸ್ಪರ್ಶ ಮಾಡಬಾರದು. ಈ ರೀತಿ ಮನಸ್ಸು ನಿಯಂತ್ರಣದಲ್ಲಿರಬೇಕು. ಆದ್ದರಿಂದ ಮನಸ್ಸನ್ನು ಗೆದ್ದವರು ಜಗತ್ತನ್ನೇ ಗೆಲ್ಲುತ್ತಾರೆ ಎಂಬ ನಾಣ್ಣುಡಿಯಿದೆ. ಹೇಗೆ ಸ್ಥೂಲ ಕರ್ಮೇಂದ್ರಿಯ ಕೈಯನ್ನು ಎಲ್ಲಿಗೆ ಬೇಕೋ ಎಷ್ಟು ಬೇಕೋ ಅದನ್ನು ಆದೇಶದಂತೆ ನಡೆಸಲು ಸಾಧ್ಯವಿದೆ. ಹಾಗೆಯೇ ಮನಸ್ಸು ಮತ್ತು ಬುದ್ಧಿಯನ್ನು ನಿಯಂತ್ರಿಸುವ ಶಕ್ತಿ ಆತ್ಮನಲ್ಲಿ ಪ್ರತಿ ಸಮಯ ಇಮರ್ಜ್ ಆಗಬೇಕು. ಈ ರೀತಿ ಅಲ್ಲ ಯೋಗದ ಸಮಯ ಅನುಭವ ಆಗುತ್ತದೆ ಆದರೆ ಕರ್ಮದ ಸಮಯ, ವ್ಯವಹಾರದ ಸಮಯ, ಸಂಬಂಧದ ಸಮಯ ಅನುಭವ ಕಡಿಮೆಯಾಗುತ್ತದೆ. ಅಚಾನಕ್ (ಇದ್ದಕ್ಕಿದ್ದ ಹಾಗೆ) ಪೇಪರ್ ಬರುತ್ತವೆ ಏಕೆಂದರೆ ಅಂತಿಮ ಫಲಿತಾಂಶ (ರಿಜಲ್ಟ್) ಗೆ ಮೊದಲೇ ಮಧ್ಯ-ಮಧ್ಯದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಲಾಗುತ್ತದೆ.

ಅಂದಮೇಲೆ ಈ ಜನ್ಮ ದಿನದಂದು ವಿಶೇಷವಾಗಿ ಏನು ಮಾಡುತ್ತೀರಿ? ಶಾಂತಿಯ ಶಕ್ತಿಯನ್ನು ಎಷ್ಟು ಜಮಾ ಮಾಡಲು ಸಾಧ್ಯವಿದೆ ಅಷ್ಟು ಜಮಾ ಮಾಡಿಕೊಳ್ಳಿ, ಒಂದು ಸೆಕೆಂಡಿನಲ್ಲಿ ಮಧುರ ಶಾಂತಿಯ ಅನುಭೂತಿಯಲ್ಲಿ ಮಗ್ನರಾಗಿರಿ. ಏಕೆಂದರೆ ಸೈನ್ಸ್ (ವಿಜ್ಞಾನ) ಹಾಗೂ ಸಾಯಿಲೆನ್ಸ್ (ಶಾಂತಿ), ವಿಜ್ಞಾನವೂ ಅತೀಯಲ್ಲಿ ಹೋಗುತ್ತಿದೆ. ವಿಜ್ಞಾನದ ಮೇಲೆ ಶಾಂತಿಯ ಶಕ್ತಿಯ ವಿಜಯ ಪರಿವರ್ತನೆ ಮಾಡುತ್ತದೆ. ಶಾಂತಿಯ ಶಕ್ತಿಯಿಂದ ದೂರ ಕುಳಿತಿರುವ ಯಾವುದೇ ಆತ್ಮರಿಗೂ ಸಹಯೋಗವೂ ಕೊಡಬಹುದು. ಸಕಾಶವನ್ನೂ ಕೊಡಬಹುದು. ಬ್ರಹ್ಮಾಬಾಬಾರವನ್ನು ನೋಡಿದ್ದೀರಲ್ಲವೇ, ಯಾವಾಗಲಾದರೂ ಯಾವುದೇ ಅನನ್ಯ ಮಗು ಸ್ವಲ್ಪವೂ ಏರುಪೇರಿನಲ್ಲಿ ಶಾರೀರಿಕ ಲೆಕ್ಕಾಚಾರವಿದ್ದರೆ ಬೆಳಿಗ್ಗೆ-ಬೆಳಿಗ್ಗೆ ಎದ್ದು ಮಕ್ಕಳಿಗೆ ಶಾಂತಿಯ ಶಕ್ತಿಯ ಸಕಾಶವನ್ನು ಕೊಟ್ಟರು ಹಾಗೂ ಮಕ್ಕಳು ಅದನ್ನು ಅನುಭವ ಮಾಡುತ್ತಿದ್ದರು. ಅಂದಮೇಲೆ ಅಂತ್ಯದಲ್ಲಿ ಶಾಂತಿಯ ಸೇವೆಯ ಸಹಯೋಗ ಕೊಡಬೇಕಾಗಿದೆ. ಸಮಯದನುಸಾರ ಇದನ್ನು ಬಹಳ ಗಮನದಲ್ಲಿ ಇಟ್ಟುಕೊಳ್ಳಿರಿ, ಶಾಂತಿಯ ಶಕ್ತಿ ಹಾಗೂ ತಮ್ಮ ಶ್ರೇಷ್ಠ ಕರ್ಮಗಳ ಶಕ್ತಿಯನ್ನು ಜಮಾ ಮಾಡಿಕೊಳ್ಳುವ ಬ್ಯಾಂಕ್ ಕೇವಲ ಈಗಲೇ ತೆರೆಯುತ್ತದೆ. ಮತ್ತೆ ಯಾವುದೇ ಜನ್ಮದಲ್ಲಿ ಜಮಾ ಮಾಡಿಕೊಳ್ಳುವ ಬ್ಯಾಂಕ್ ಇರುವುದಿಲ್ಲ. ಒಂದುವೇಳೆ ಈಗ ಜಮಾ ಮಾಡಿಕೊಂಡಿಲ್ಲವೆಂದರೆ ಈ ಬ್ಯಾಂಕ್ ಇಲ್ಲದಿದ್ದಾಗ ಯಾವುದರಲ್ಲಿ ಜಮಾ ಮಾಡಿಕೂಳ್ಳುತ್ತೀರಿ! ಆದ್ದರಿಂದ ಜಮಾದ ಶಕ್ತಿಯನ್ನು ಎಷ್ಟು ಬಯಸುವಿರೋ ಅಷ್ಟು ಜಮಾ ಮಾಡಿಕೊಳ್ಳಿರಿ. ಮನುಷ್ಯರೂ ಸಹ ಇದೇ ಮಾತನ್ನು ಹೇಳುತ್ತಾರೆ - ಏನು ಮಾಡಬೇಕು ಈಗಲೇ ಮಾಡಿ ಬಿಡಿ. ಏನನ್ನು ಯೋಚಿಸಬೇಕೋ ಈಗ ಯೋಚಿಸಿ. ಈಗ ಯಾವುದನ್ನು ಯೋಚಿಸಿ ಮಾಡುವಿರೋ ಅದಷ್ಟೇ ಉಳಿಯುವುದು. ಇನ್ನೂ ಸ್ವಲ್ಪ ಸಮಯದ ನಂತರ ಸಮಯದ ರೇಖೆಯು ಸಮೀಪ ಬಂದಾಗ ನಿಮ್ಮ ಯೋಚನೆಯು (ಸಂಕಲ್ಪ) ಪಶ್ಚಾತ್ತಾಪ ರೂಪದಲ್ಲಿ ಬದಲಾಗುವುದು. ಇದನ್ನು, ಮಾಡುತ್ತಿದ್ದೆವು, ಇದರಲ್ಲಿ ಮಾಡಬೇಕಾಗಿತ್ತು......... ಹೀಗೆ ಅದು ಸಂಕಲ್ಪವಾಗಿ ಉಳಿಯುವುದಿಲ್ಲ, ಪಶ್ಚಾತ್ತಾಪದಲ್ಲಿ ಬದಲಾಗುತ್ತದೆ ಆದ್ದರಿಂದ ಬಾಪ್ದಾದಾ ಮೊದಲೇ ಸೂಚನೆ ನೀಡುತ್ತಿದ್ದೇವೆ - ಶಾಂತಿಯ ಶಕ್ತಿಯನ್ನು ಒಂದು ಸೆಕೆಂಡಿನಲ್ಲಿ ಏನಾದರೂ ಸರಿಯೇ, ಶಾಂತಿಯಲ್ಲಿ ಮುಳುಗಿ ಹೋಗಿ. ಈ ರೀತಿ ಪುರುಷಾರ್ಥವನ್ನು ಮಾಡುತ್ತೇವೆ! ಈ ಜಮಾದ ಪುರುಷಾರ್ಥವನ್ನು ಈಗಲೇ ಮಾಡಲು ಸಾಧ್ಯ.

ಬಾಪ್ದಾದಾರವರಿಗೆ ಮಕ್ಕಳೊಂದಿಗೆ ಸ್ನೇಹವಿದೆ. ಬಾಪ್ದಾದಾ ಒಂದೊಂದು ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ಬಯಸುತ್ತಾರೆ. ಜೊತೆಯಲ್ಲಿಯೇ ಇರುತ್ತೇವೆ, ಜೊತೆಯಲ್ಲಿಯೇ ಬರುತ್ತೇವೆ... ಈ ನಿಮ್ಮ ಪ್ರತಿಜ್ಞೆಯನ್ನು ನಿಭಾಯಿಸಬೇಕೆಂದರೆ ಸಮಾನರಾಗಬೇಕಾಗುತ್ತದೆ. ಈಗಾಗಲೇ ತಿಳಿಸಿದ್ದೇವೆ - ಡಬಲ್ ವಿದೇಶಿಯರಿಗೆ ಕೈಯಲ್ಲಿ ಕೈ ಕೊಟ್ಟು ನಡೆಯುವುದು ಬಹಳ ಇಷ್ಟವಾಗುತ್ತದೆ ಅಂದಮೇಲೆ ಶ್ರೀಮತದ ಕೈಯಲ್ಲಿ ನಿಮ್ಮ ಕೈ ಇರಲಿ. ತಂದೆಯ ಶ್ರೀಮತವೇ ನಿಮ್ಮ ಮತ - ಇದಕ್ಕೆ ಕೈಯಲ್ಲಿ ಕೈ ಕೊಡುವುದು ಎಂದು ಹೇಳಲಾಗುತ್ತದೆ. ಇಂದು ಜನ್ಮದಿನದ ಉತ್ಸವವನ್ನು ಆಚರಿಸಲು ಬಂದಿದ್ದೀರಲ್ಲವೇ! ಬಾಪ್ದಾದಾರವರಿಗೂ ಸಹ ಖುಷಿಯಿದೆ - ನನ್ನ ಮಕ್ಕಳು ಸದಾ ಉತ್ಸಾಹದಲ್ಲಿ ಇರುತ್ತಾ ಉತ್ಸವವನ್ನು ಆಚರಿಸುತ್ತಾರೆ. ಪ್ರತಿನಿತ್ಯವು ಉತ್ಸವ ಆಚರಿಸುತ್ತೀರೋ ಅಥವಾ ಕೇವಲ ವಿಶೇಷ ದಿನದಂದೋ? ಸಂಗಮಯುಗವೇ ಉತ್ಸವವಾಗಿದೆ. ಯುಗವೇ ಉತ್ಸವದ್ದಾಗಿದೆ. ಮತ್ಯಾವುದೇ ಯುಗವು ಸಂಗಮಯುಗದಂತೆ ಇಲ್ಲ. ಅಂದಮೇಲೆ ನಾವು ಸಮಾನರಾಗಲೇ ಬೇಕೆಂದು ಎಲ್ಲರಿಗೆ ಹುಮಸ್ಸು-ಉತ್ಸಾಹವಿದೆಯಲ್ಲವೇ. ಇದೆಯೇ? ಆಗಲೇಬೇಕಾಗಿದೆ ಎನ್ನುತ್ತೀರೋ ಅಥವಾ ನೋಡುತ್ತೇವೆ, ಮಾಡುತ್ತೇವೆ, ಆಗುತ್ತೇವೆ... ಈ ವೆ, ವೆ ಇಲ್ಲ ತಾನೇ? ಆಗಲೇಬೇಕೆಂದು ತಿಳಿಯುವವರೇ ಕೈ ಎತ್ತಿರಿ. ಆಗಲೇಬೇಕಾಗಿದೆ, ತ್ಯಾಗ ಮಾಡಬೇಕಾಗುತ್ತದೆ, ತಪಸ್ಸು ಮಾಡಬೇಕಾಗುತ್ತದೆ. ಏನನ್ನು ತ್ಯಾಗ ಮಾಡುವುದಕ್ಕೆ ತಯಾರಾಗಿದ್ದೀರಾ? ಎಲ್ಲದಕ್ಕಿಂತ ದೊಡ್ಡ ತ್ಯಾಗ ಯಾವುದು ಆಗಿದೆ? ತ್ಯಾಗ ಮಾಡುವುದರಲ್ಲಿ ಎಲ್ಲದಕ್ಕಿಂತ ದೊಡ್ಡ ಶಬ್ದವು ವಿಘ್ನ ಹಾಕುತ್ತದೆ, ತ್ಯಾಗ ತಪಸ್ಸು, ವೈರಾಗ್ಯ, ಬೇಹದ್ದಿನ ವೈರಾಗ್ಯ, ಇದರಲ್ಲಿ ಒಂದೇ ಶಬ್ದವು ವಿಘ್ನ ಹಾಕುತ್ತದೆ. ಅದನ್ನು ತಾವೂ ತಿಳಿದುಕೊಂಡಿದ್ದೀರಿ. ಆ ಒಂದು ಶಬ್ದ ಯಾವುದು? ‘ನಾನು’ ದೇಹಾಭಿಮಾನದ ನಾನು. ಆದ್ದರಿಂದ ಬಾಪ್ದಾದಾರವರು ತಿಳಿಸಿದರು, ಯಾವಾಗ ನನ್ನದು ಎಂದು ಹೇಳುತ್ತೀರೋ ಆಗ ಮೊದಲು ಯಾರು ನೆನಪು ಬರುತ್ತಾರೆ? ನನ್ನ ಬಾಬಾ ನೆನಪು ಬರುತ್ತದೆಯಲ್ಲವೇ? ಭಲೆ ಯಾವುದರಲ್ಲಿಯೇ ನನ್ನದು ಎಂದರೂ ಸಹ ಮೊದಲು ನನ್ನದು ಎಂದು ಹೇಳಿದಾಗ ತಂದೆಯ ನೆನಪೇ ಬರುತ್ತದೆ ಹಾಗೆಯೇ ಯಾವಾಗ ನಾನು ಎಂದು ಹೇಳುವವರೋ ಆಗ ಹೇಗೆ ನನ್ನ ಬಾಬಾ ಎಂದು ಮರೆಯುವುದಿಲ್ಲವೋ ಹಾಗೆಯೇ ನಾನು ಎಂದಾಗ ಮೊದಲು ಆತ್ಮದ ನೆನಪು ಬರಬೇಕು. ಅಂದರೆ ನಾನು ಯಾರು? ಆತ್ಮ. ನಾನು ಆತ್ಮನು ಇದನ್ನು ಮಾಡುತಿದ್ದೇನೆ. ನಾನು ಮತ್ತು ನನ್ನದು ಇವರೆಡು ಶಬ್ದಗಳು ಬೇಹದ್ದಿನದ್ದಾಗಲಿ. ಸಾಧ್ಯವೇ? ಆಗುತ್ತದೆಯೇ? ತಲೆಯನ್ನಾದರೂ ಅಲುಗಾಡಿಸಿ. ಇದನ್ನು ಅಭ್ಯಾಸ ಮಾಡಿಕೊಂಡಿರಿ. ನಾನು ಎಂದ ಕೂಡಲೇ ಆತ್ಮ ಎಂಬ ನೆನಪು ಬರಲಿ ಮತ್ತು ಮಾಡಿಸುವವರು ಯಾರು? ಎಂಬುದೂ ಸಹ ನೆನಪು ಬರಲಿ. ಮಾಡಿಸುವಂತಹ ತಂದೆಯೂ ಸಹ ಮಾಡಿಸುತ್ತಿದ್ದಾರೆ. ಮಾಡಿಸುವಂತಹ ತಂದೆಯು ನೆನಪು ಮಾಡುವ ಸಮಯದಲ್ಲಿ ಸದಾ ನೆನಪು ಇರಲಿ. ಇದರಲ್ಲಿ ನಾನು ಮಾಡಿದೆ ಎಂಬುವುದು ಬರುವುದಿಲ್ಲ. ನನ್ನ ವಿಚಾರ, ನನ್ನ ಕೆಲಸ ಹೀಗೆ ತನ್ನ ಕೆಲಸದ ಬಗ್ಗೆಯು ಬಹಳ ನಶೆ ಇರುತ್ತದೆ. ನನ್ನ ಕೆಲಸವಾಗಿರಬಹುದು ಆದರೆ ಕೊಡುವಂತಹ ದಾತ ಯಾರು! ಈ ಕರ್ತವ್ಯವೂ ಸಹ ಪ್ರಭುವಿನ ಕೊಡುಗೆಯಾಗಿದೆ. ಪ್ರಭುವಿನ ಕೊಡುಗೆಯನ್ನು ನನ್ನದು ಎನ್ನುವುದು ಸರಿಯೇ?

ಬಾಪ್ದಾದಾ ಪ್ರತಿಯೊಂದು ಸ್ಥಾನದಿಂದ ಫಲಿತಾಂಶ ನೋಡಲು ಬಯಸುತ್ತೇವೆ. ಇದೊಂದು ತಿಂಗಳು ಈ ರೀತಿ ಸ್ವಾಭಾವಿಕ ಗುಣ (ನ್ಯಾಚುರಲ್ ನೇಚರ್) ಮಾಡಿಕೊಳ್ಳಿರಿ ಏಕೆಂದರೆ ನ್ಯಾಚುರಲ್ ನೇಚರ್ ಬೇಗನೇ ಬದಲಾಗುವುದಿಲ್ಲ. ಆದ್ದರಿಂದಲೇ ತಿಳಿಸಿದ್ದೇವೆ, ಇದನ್ನು ನ್ಯಾಚುರಲ್ ನೇಚರ್ ಮಾಡಿಕೊಳ್ಳಿ - ಸದಾ ತಮ್ಮ ಚೆಹರೆಯಿಂದ ತಂದೆಯ ಗುಣಗಳೇ ಕಂಡು ಬರಲಿ, ಚೆಲನೆಯಿಂದ ತಂದೆಯ ಶ್ರೀಮತ ಕಾಣಿಸಲಿ, ಸದಾ ಮುಗುಳ್ನಗುತ್ತಿರುವ ಚೆಹರೆ ಇರಲಿ. ಸದಾ ಸಂತುಷ್ಟವಾಗಿರುವ ಹಾಗೂ ಸಂತುಷ್ಟ ಪಡಿಸುವ ನಡವಳಿಕೆ ಇರಲಿ. ಪ್ರತಿಯೊಂದು ಕರ್ಮದಲ್ಲಿ ಕರ್ಮ ಹಾಗೂ ಯೋಗದ ಸಮತೋಲನೆ ಇರಲಿ. ಕೆಲವು ಮಕ್ಕಳು ಬಾಪ್ದಾದಾರವರಿಗೆ ಬಹಳ ಒಳ್ಳೊಳ್ಳೆಯ ಮಾತುಗಳನ್ನು ತಿಳಿಸುತ್ತಾರೆ. ಅದೇನೆಂದು ಹೇಳಬೇಕೆ? ಬಾಬಾ ನನ್ನ ಸ್ವಭಾವವೇ ಹೀಗಿದೆ, ಮತ್ತೇನೂ ಇಲ್ಲ. ನೀವು ಅರ್ಥ ಮಾಡಿಕೊಳ್ಳಿ ನನ್ನ ಸ್ವಭಾವೇ ಹೀಗಿದೆ ಎಂದು ಹೇಳುತ್ತಾರೆ - ಇದಕ್ಕೆ ಬಾಪ್ದಾದಾ ಏನು ಹೇಳುವುದು? ನನ್ನ ಮಾತೇ ಹೀಗಿದೆ, ನಾನು ಕ್ರೋಧ ಮಾಡಲಿಲ್ಲ, ನಾನು ಮಾತನಾಡುವುದೇ ಸ್ವಲ್ಪ ಜೋರಾಗಿ ಇರುತ್ತದೆ. ಕೇವಲ ಸ್ವಲ್ಪ ಜೋರಾಗಿ ಮಾತನಾಡಿದೆ ಅಷ್ಟೇ. ನಾನೇನೂ ಕ್ರೋಧ ಮಾಡಲಿಲ್ಲ ಎಂದು ಹೇಳುತ್ತಾರೆ. ನೋಡಿ! ಎಷ್ಟು ಮಧುರಾತಿ ಮಧುರ ಮಾತುಗಳನ್ನು ಹೇಳುತ್ತೀರಿ, ಇದಕ್ಕೆ ಬಾಪ್ದಾದಾ ಹೇಳುವುದೇನೆಂದರೆ - ಯಾವುದನ್ನು ತಾವು ನನ್ನ ಸ್ವಭಾವ ಎಂದು ಹೇಳುತ್ತೀರೋ ಈ ರೀತಿ ನನ್ನದು ಎಂದು ಹೇಳುವುದೇ ತಪ್ಪಾಗಿದೆ. ಇದು ರಾವಣನ ಗುಣವಾಗಿದೆ. ಅದನ್ನು ನನ್ನದು ಎಂದು ಹೇಳುತ್ತೀರಿ. ನಿಮ್ಮ ಸ್ವಭಾವವು ಅನಾದಿ ಕಾಲ, ಆದಿ ಕಾಲ ಮತ್ತು ಪೂಜ್ಯ ಕಾಲ ಇದು ನಿಜ ಸ್ವಭಾವವಾಗಿದೆ. ರಾವಣನ ವಸ್ತುವನ್ನು ನನ್ನದು, ನನ್ನದು ಎಂದು ಹೇಳುತ್ತೀರಿ ಆದ್ದರಿಂದ ಅದು ಹೋಗುವುದಿಲ್ಲ. ಪರರ ವಸ್ತುವನ್ನು ತನ್ನದನ್ನಾಗಿ ಇಟ್ಟುಕೊಂಡಿದ್ದೀರಲ್ಲವೇ. ಯಾರಾದರೂ ಪರರ ವಸ್ತುವನ್ನು ತನ್ನ ಬಳಿ ಬಚ್ಚಿಟ್ಟುಕೊಂಡರೆ ಅದು ಚೆನ್ನಾಗಿರುತ್ತದೆಯೇ? ಹಾಗೆಯೇ ರಾವಣನ ಗುಣವು ಪರಗುಣವಾಗಿದೆ, ಅದನ್ನು ನೀವು ನನ್ನದು ಎಂದು ಏಕೆ ಹೇಳುತ್ತೀರಿ? ಬಹಳ ನಶೆಯಿಂದ ಹೇಳುತ್ತಾರೆ - ನನ್ನದೇನೂ ದೋಷವಿಲ್ಲ, ಇದು ನನ್ನ ಸ್ವಭಾವವಾಗಿದೆ ಎಂದು. ಬಾಪ್ದಾದಾರವರನ್ನೂ ಸಹ ಸಮಾಧಾನ ಪಡೆಸುವ ಪ್ರಯತ್ನ ಪಡುತ್ತಾರೆ. ಈಗ ಈ ಸಮಾಪ್ತಿ ಸಮಾರೋಹವನ್ನು ಮಾಡುತ್ತೀರಾ! ಮಾಡುತ್ತೀರಾ? ಹೃದಯಿಂದ ಹೇಳಿರಿ, ಮನಸ್ಸಿನಿಂದ ಹೇಳಿರಿ, ಎಲ್ಲಿ ಮನಸ್ಸು ಇರುವುದೋ ಅಲ್ಲಿ ಎಲ್ಲವೂ ಆಗಿ ಬಿಡುವುದು. ಮನಸ್ಸಿನಿಂದ ಹೇಳಿರಿ ಇದು ನನ್ನ ಗುಣವಲ್ಲ. ಇದು ಅನ್ಯರ ವಸ್ತುವಾಗಿದೆ ಅದನ್ನು ನಾನು ಇಟ್ಟುಕೊಳ್ಳಬಾರದು. ತಾವಂತೂ ಮರುಜೀವಿಗಳಾಗಿದ್ದೀರಲ್ಲವೇ ಅಂದಮೇಲೆ ತಮ್ಮದು ಬ್ರಾಹ್ಮಣರ ಸಂಸ್ಕಾರವೋ ಅಥವಾ ಹಳೆಯ ಸಂಸ್ಕಾರವೋ? ಬಾಪ್ದಾದಾ ಮಕ್ಕಳಿಂದ ಏನನ್ನು ಬಯಸುತ್ತೇವೆ ಎಂದು ತಿಳಿಯಿತೇ? ಭಲೆ ಮನೋರಂಜನೆ ಮಾಡಿರಿ, ಆಡಿರಿ, ಕುಣಿಯಿರಿ ಆದರೆ...ಆದರೆ ಎನ್ನುವುದಿದೆ. ಎಲ್ಲವನ್ನೂ ಮಾಡುತ್ತಿದ್ದರೂ ಸಹ ಸಮಾನರಾಗಲೇಬೇಕಾಗಿದೆ. ಸಮಾನರಾಗದೆ ಜೊತೆ ಹೇಗೆ ನಡೆಯುತ್ತೀರಿ! ಧರ್ಮರಾಜ ಪುರಿಯಲ್ಲಿ ನಿಲ್ಲಬೇಕಾಗುವುದು, ಜೊತೆಯಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ದಾದಿಯರೇ ಹೇಳಿ ಒಂದು ತಿಂಗಳ ರಿಜಲ್ಟ್ ನೋಡುವುದೇ! ಹೇಳಿರಿ ನೋಡುವುದೇ! ಒಂದು ತಿಂಗಳು ಗಮನದಲ್ಲಿ ಇಟ್ಟುಕೊಳ್ಳಿರಿ ಒಂದುವೇಳೆ ಒಂದು ತಿಂಗಳವರೆಗೆ ಗಮನದಲ್ಲಿ ಇಟ್ಟುಕೊಂಡು ಮಾಡಿದರೆ ಅದೇ ಅಭ್ಯಾಸ ಆಗಿ ಬಿಡುವುದು. ತಿಂಗಳಿನಲ್ಲಿ ಒಂದು ದಿನವು ಬಿಡುವಂತಿಲ್ಲ. ದಾದಿಯರು ಈ ಜವಾಬ್ದಾರಿಯನ್ನು ತೆಗೆದುಕೊಳ್ಳುವವರು. ಎಲ್ಲರೂ ಸೇರಿ ಒಬ್ಬರು ಇನ್ನೊಬ್ಬರ ಪ್ರತಿ ಶುಭ ಭಾವನೆ, ಶುಭ ಕಾಮನೆಯ ಸಹಯೋಗ ನೀಡಿ. ಹೇಗೆ ಯಾರಾದರೂ ಕೆಳಗೆ ಬಿದ್ದರೆ ಅವರನ್ನು ಕೈ ನೀಡಿ ಪ್ರೀತಿಯಿಂದ ಮೇಲೆತ್ತುತ್ತಾರೆ. ಹಾಗೆಯೇ ಈಗ ಶುಭ ಭಾವನೆ ಮತ್ತು ಶುಭ ಕಾಮನೆಯ ಸಹಯೋಗವನ್ನು ಒಬ್ಬರಿನೊಬ್ಬರಿಗೆ ನೀಡುತ್ತಾ ಹೋಗಿ. ಕೇವಲ ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳುವುದರಲ್ಲಿ ಕಡಿಮೆ ಇದ್ದೀರಿ. ಆದ ನಂತರ ಪರಿಶೀಲನೆ ಮಾಡಿಕೊಳ್ಳುತ್ತೀರಿ ಆದರೆ ಆಗಿ ಹೋಯಿತಲ್ಲವೇ. ಮೊದಲು ಯೋಚಿಸಿ ನಂತರ ಮಾಡಿರಿ. ಮಾಡಿದ ಮೇಲೆ ಯೋಚಿಸಬೇಡಿ. ಮಾಡಲೇಬೇಕು.

ಈಗ ಬಾಪ್ದಾದಾ ಯಾವ ಡ್ರಿಲ್ ಮಾಡಿಸುತ್ತಾರೆ? ಒಂದು ಸೆಕೆಂಡಿನಲ್ಲಿ ಶಾಂತಿಯ ಶಕ್ತಿ ಸ್ವರೂಪರಾಗಿ ಬಿಡಿ. ಏಕಾಗ್ರ ಬುದ್ಧಿ, ಏಕಾಗ್ರ ಮನಸ್ಸು. ಇಡೀ ದಿನದಲ್ಲಿ ಒಂದು ಸೆಕೆಂಡ್ ಮಧ್ಯ-ಮಧ್ಯದಲ್ಲಿ ತೆಗೆದು ಅಭ್ಯಾಸ ಮಾಡಿ. ಶಾಂತಿಯ ಸಂಕಲ್ಪ ಮಾಡಿದ ಕೂಡಲೆ ಅದರ ಸ್ವರೂಪರಾಗಿ ಬಿಡಿ. ಇದಕ್ಕಾಗಿ ಸಮಯದ ಅವಶ್ಯಕತೆ ಇಲ್ಲ. ಒಂದು ಸೆಕೆಂಡಿನ ಅಭ್ಯಾಸ ಮಾಡಿ. ಸೈಲೆನ್ಸ್. ಒಳ್ಳೆಯದು.

ಎಲ್ಲಾ ಕಡೆಯ ಜನ್ಮದಿನದ ಉತ್ಸವವನ್ನು ಆಚರಿಸುವ ಭಾಗ್ಯಶಾಲಿ ಆತ್ಮರಿಗೆ ಸದಾ ಉತ್ಸಾಹದಲ್ಲಿ ಇರುವಂತಹ ಸಂಗಮಯುಗದ ಉತ್ಸವವನ್ನು ಆಚರಿಸುವ ಸರ್ವ ಹುಮಸ್ಸು-ಉತ್ಸಾಹದ ರೆಕ್ಕೆಗಳಿಂದ ಹಾರುವಂತಹ ಮಕ್ಕಳಿಗೆ, ಸದಾ ಮನಸ್ಸು-ಬುದ್ಧಿಯಿಂದ ಏಕಾಗ್ರತೆಯ ಅನುಭವಿಯನ್ನಾಗಿ ಮಾಡಿಕೊಳ್ಳುವಂತಹ ಮಹಾವೀರ ಮಕ್ಕಳಿಗೆ ಸದಾ ಸಮಾನರಾಗುವ ಉಮಂಗವನ್ನು ಸಾಕಾರ ರೂಪದಲ್ಲಿ ತರುವಂತಹ ಫಾಲೋ ಫಾದರ್ ಮಡುವಂತಹ ಮಕ್ಕಳಿಗೆ ಸದಾ ಒಬ್ಬರಿನ್ನೊಬ್ಬರ ಸ್ನೇಹಿ ಸಹಯೋಗಿ ಸಾಹಸವನ್ನು ತರಿಸುವಂತಹ, ತಂದೆಯಿಂದ ಸಹಯೋಗದ ವರದಾನವನ್ನು ಕೊಡಿಸುವಂತಹ ವರದಾನಿ ಮಕ್ಕಳಿಗೆ, ಮಹಾದಾನಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಪದಮ ಪದಮ ಪದಮ ಪದಮಗುಣ ಶುಭಾಷಯಗಳು, ಶುಭಾಷಯಗಳು, ಶುಭಾಷಯಗಳು.

ವರದಾನ:
ಸದಾ ಏಕಾಂತ ಮತ್ತು ಸ್ಮರಣೆಯಲ್ಲಿ ವ್ಯಸ್ತರಾಗಿರುವ ಬೇಹದ್ದಿನ ವಾನಪಸ್ಥಿ ಭವ.

ವರ್ತಮಾನ ಸಮಯ ಪ್ರಮಾಣ ತಾವೆಲ್ಲರೂ ವಾನಪ್ರಸ್ತ ಅವಸ್ಥೆಗೆ ಸಮೀಪರಿದ್ದೀರಿ. ವಾನಪ್ರಸ್ಥಿಗಳು ಎಂದೂ ಗೊಂಬೆಯಾಟ ಆಡುವುದಿಲ್ಲ. ಅವರು ಸದಾ ಏಕಾಂತ ಮತ್ತು ಸ್ಮರಣೆಯಲ್ಲಿರುತ್ತಾರೆ. ತಾವೆಲ್ಲರೂ ಬೇಹದ್ದಿನ ವಾನಪ್ರಸ್ಥಿಗಳು ಸದಾ ಒಬ್ಬರ ಅಂತ್ಯದಲ್ಲಿ ಅರ್ಥಾತ್ ಏಕಾಂತದಲ್ಲಿರಿ, ಜೊತೆ-ಜೊತೆ ಒಬ್ಬರ ಸ್ಮರಣೆ ಮಾಡುತ್ತಾ ಸ್ಮøತಿ ಸ್ವರೂಪರಾಗಿ. ಎಲ್ಲಾ ಮಕ್ಕಳ ಪ್ರತಿ ಬಾಪ್ದಾದಾರವರಿಗೆ ಇದೇ ಶುಭ ಆಸೆ ಇದೆ ಈಗ ತಂದೆ ಮತ್ತು ಮಕ್ಕಳು ಸಮಾನರಾಗಿ ಬಿಡಲಿ ಎಂದು. ಸದಾ ನೆನಪಿನಲ್ಲಿ ಸಮಾವೇಶವಾಗಿರಿ. ಸಮಾನವಾಗುವುದೇ ಸಮಾವೇಶವಾಗುವುದು-ಇದೇ ವಾನಪ್ರಸ್ಥ ಸ್ಥಿತಿಯ ಗುರುತಾಗಿದೆ.

ಸ್ಲೋಗನ್:
ತಾವು ಸಾಹಸದ ಒಂದು ಹೆಜ್ಜೆ ಮುಂದೆ ಬನ್ನಿ ಆಗ ತಂದೆ ಸಹಯೋಗದ ಸಾವಿರ ಹೆಜ್ಜೆ ಮುಂದಿಡುತ್ತಾರೆ.

ಅವ್ಯಕ್ತ ಸೂಚನೆ: ಈಗ ಸಂಪನ್ನ ಅಥವಾ ಕರ್ಮತೀತರಾಗುವುದರಲ್ಲಿ ತತ್ಫರರಾಗಿರಿ.

ಹೇಗೆ ತಂದೆಗಾಗಿ ಎಲ್ಲರ ಮುಖದಿಂದ ಒಂದೇ ಶಬ್ದ ಬರುತ್ತದೆ - “ನನ್ನ ಬಾಬಾ”. ಈ ರೀತಿ ನೀವು ಪ್ರತಿ ಶ್ರೇಷ್ಠ ಆತ್ಮದ ಪ್ರತಿ ಈ ಭಾವನೆಯಿರಲಿ, ಅನುಭವವಿರಲಿ. ಪ್ರತಿಯೊಬ್ಬರಿಂದ ನನ್ನತನದ ಅನುಭವ ಬರಲಿ. ಪ್ರತಿಯೊಬ್ಬರು ತಿಳಿದುಕೊಳ್ಳಿ ಇವರು ನನ್ನ ಶುಭ ಚಿಂತಕರು ಸಹಯೋಗಿ ಸೇವೆಯಲ್ಲಿ ಜೊತೆಗಾರರಾಗಿದ್ದೀರಿ, ಇದಕ್ಕೆ ಹೇಳಲಾಗುತ್ತದೆ - ತಂದೆಯ ಸಮಾನ, ಕರ್ಮಾತೀತ ಸ್ಥಿತಿಯ ಸಿಂಹಾಸನ.

ಸೂಚನೆ:- ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ಎಲ್ಲಾ ರಾಜಯೋಗಿ ತಪಸ್ವಿ ಸಹೋದರ -ಸಹೋದರಿಯರು ಸಂಜೆ 6.30ರಿಂದ 7.30ರವರೆಗೆ, ವಿಶೇಷ ಯೋಗಾಭ್ಯಾಸದ ಸಮಯದಲ್ಲಿ ಭಕ್ತರ ತಮ್ಮ ಲೈಟ್ ಮೈಟ್ ಸ್ವರೂಪದಲ್ಲಿ ಸ್ಥಿತರಾಗಿ, ಭೃಕುಟಿಯ ಮಧ್ಯ ಬಾಪ್ದಾದಾರವರನ್ನು ಆಹ್ವಾನ ಮಾಡುತ್ತಾ, ಕಂಬೈಂಡ್ ಸ್ವರೂಪದ ಅನುಭವ ಮಾಡಿ ಮತ್ತು ನಾಲ್ಕು ಕಡೆ ಲೈಟ್ ಮೈಟ್ನ ಕಿರಣಗಳನ್ನು ಹರಡುವ ಸೇವೆಯನ್ನು ಮಾಡಿ.