22.02.26 Avyakt Bapdada
Kannada
Murli 05.02.2009 Om Shanti Madhuban
“ಸೇವೆ ಮಾಡುತ್ತಾ
ಡಬಲ್ಲೈಟ್ ಸ್ಥಿತಿಯ ಮೂಲಕ ಫರಿಸ್ಥಾತನದ ಅವಸ್ಥೆಯಲ್ಲಿ ಇರಿ, ಅಶರೀರಿ ಆಗುವ ಅಭ್ಯಾಸ ಮಾಡಿ”
ಇಂದು ಬಾಪ್ದಾದಾರವರು
ನಾಲ್ಕೂ ಕಡೆಯ ಮಕ್ಕಳನ್ನು ಮೂರು ರೂಪದಲ್ಲಿ ನೋಡುತ್ತಿದ್ದೇವೆ - ಹೇಗೆ ತಂದೆಯ ಮೂರು ರೂಪವನ್ನು
ತಿಳಿದಿದ್ದೀರಿ ಹಾಗೆಯೇ ಮಕ್ಕಳದ್ದೂ ಮೂರು ರೂಪವನ್ನು ನೋಡುತ್ತಿದ್ದೇವೆ. ಯಾವುದು ಈ ಸಂಗಮಯುಗದ
ಲಕ್ಷ್ಯ ಮತ್ತು ಲಕ್ಷಣವಾಗಿದೆ. ಮೊದಲ ಸ್ವರೂಪ ಬ್ರಾಹ್ಮಣ ಎರಡನೆಯದು ಫರಿಸ್ಥೆ, ಮೂರನೆಯದು ದೇವತೆ.
ಬ್ರಾಹ್ಮಣರಿಂದ ಫರಿಸ್ಥೆಗಳು, ಫರಿಸ್ಥೆಗಳಿಂದ ದೇವತೆಗಳು, ಅಂದಾಗ ವರ್ತಮಾನ ಸಮಯ ಈಗ ವಿಶೇಷವಾಗಿ
ಯಾವ ಲಕ್ಷ್ಯ ಅಥವಾ ಗುರಿ ಎದುರಿನಲ್ಲಿ ಇರುತ್ತದೆ? ಏಕೆಂದರೆ ಫರಿಸ್ಥೆಗಳಾಗದ ವಿನಃ ದೇವತೆಗಳಾಗಲು
ಸಾಧ್ಯವಿಲ್ಲ. ವರ್ತಮಾನ ಸಮಯ ಮತ್ತು ಸ್ವಯಂನ ಪುರುಷಾರ್ಥದ ಪ್ರಮಾಣ ಈಗ ಫರಿಸ್ಥೆ ಆಗುವ ಲಕ್ಷ್ಯವಿದೆ.
ಸಂಗಮಯುಗದ ಸಂಪನ್ನ ಸ್ವರೂಪ ಫರಿಸ್ಥೆಗಳಿಂದ ದೇವತೆಗಳಾಗುವುದು. ಫರಿಸ್ಥೆಗಳ ಪರಿಭಾಷೆಯನ್ನು
ತಿಳಿದಿದ್ದೀರಿ, ಫರಿಸ್ಥೆ ಅರ್ಥಾತ್ ಹಳೆಯ ಜಗತ್ತಿನ ಸಂಬಂಧ, ಸಂಸ್ಕಾರ, ಸಂಕಲ್ಪದಿಂದ ಹಗುರವಾಗಿರಿ,
ಹಳೆಯ ಸಂಸ್ಕಾರ ಎಲ್ಲದರಲ್ಲಿ ಹಗುರವಾಗಿದೆ. ಕೇವಲ ತನ್ನ ಸಂಸ್ಕಾರ, ಸ್ವಭಾವ, ಸಂಸಾರದಲ್ಲಿ ಹಗುರತೆ
ಅಲ್ಲ ಆದರೆ ಫರಿಸ್ಥಾ ಅರ್ಥಾತ್ ಎಲ್ಲಾ ಬಂಧನದಲ್ಲಿ ಬರುತ್ತಾ ಸರ್ವರ ಸ್ವಭಾವ-ಸಂಸ್ಕಾರದಲ್ಲಿ
ಹಗುರತೆ. ಈ ಹಗುರತೆಯ ಲಕ್ಷಣವೇನು? ಆ ಫರಿಸ್ಥೆಯ ಆತ್ಮ ಸರ್ವರಿಗೂ ಪ್ರಿಯರಾಗಿರುತ್ತಾರೆ. ಕೆಲವರಿಗೆ
ಪ್ರಿಯರಲ್ಲ, ಸರ್ವರಿಗೆ ಪ್ರಿಯರು. ಹೇಗೆ ತಂದೆ, ಬ್ರಹ್ಮಾ ತಂದೆಯನ್ನು ಪ್ರತಿಯೊಬ್ಬರು ನನ್ನವರು
ಎಂದು ತಿಳಿಯುತ್ತಾರೆ, ನನ್ನ ಬಾಬಾ ಎಂದು ಹೇಳುತ್ತಾರೆ, ಇಂತಹ ಫರಿಸ್ಥಾ ಅರ್ಥಾತ್ ಸರ್ವರಿಗೂ
ಪ್ರಿಯರು. ಕೆಲವು ಮಕ್ಕಳು ಯೋಚಿಸುತ್ತಾರೆ ಬ್ರಹ್ಮಾ ತಂದೆಯಾದರೆ ಬ್ರಹ್ಮಾ ಆಗಿದ್ದರು ಆದರೆ
ತಾವೆಲ್ಲರೂ ತಮ್ಮ ಸಮಾನ ಬ್ರಾಹ್ಮಣ ಆತ್ಮರಲ್ಲಿ ತಮ್ಮೆಲ್ಲರ ಪ್ರಿಯ ದಾದಿಯನ್ನು ನೋಡಿದಿರಿ,
ಯಾರನ್ನು ಎಲ್ಲರೂ ಪ್ರೀತಿಯಿಂದ ನನ್ನ ದಾದಿ ಎಂದು ಅನುಭವ ಮಾಡುತ್ತಿದ್ದೀರಿ. ಎಲ್ಲಾ ಪ್ರಕಾರದ
ಸ್ವಭಾವ, ಸಂಸ್ಕಾರ ಮತ್ತು ಈ ಹಳೆಯ ಜಗತ್ತಿನಲ್ಲಿ ಇರುತ್ತಾ ಭಿನ್ನ ಮತ್ತು ಪ್ರಿಯರಾಗಿದ್ದರು.
ಪ್ರತಿಯೊಬ್ಬರು ಅಧಿಕಾರದಿಂದ ನನ್ನ ದಾದಿ ಎಂದು ಹೇಳುತ್ತಾರೆ, ಅಂದಾಗ ಇದರ ಕಾರಣವೇನು? ಸ್ವಯಂನ
ಸ್ವಭಾವ ಮತ್ತು ಸಂಸ್ಕಾರದಲ್ಲಿ ಹಗುರರಾಗಿದ್ದರು. ಎಲ್ಲರಿಗೂ ನನ್ನವರು ಎಂಬ ಅನುಭವವನ್ನು
ಮಾಡಿಸಿದರು ಅಂದಾಗ ಉದಾಹರಣೆ ಆಗಿ ಬಿಟ್ಟರು. ಜಗದಾಂಬಾರವರನ್ನೂ ಸಹ ನೋಡಿದಿರಿ ಆದರೆ ಕೆಲವರು
ಅವರಾದರೆ ಜಗದಾಂಬೆ ಆಗಿದ್ದರು ಎಂದು ತಿಳಿಯುತ್ತಾರೆ. ಆದರೆ ದಾದಿ ತಾವು ಬ್ರಾಹ್ಮಣ ಪರಿವಾರದಲ್ಲಿ
ಜೊತೆಗಾರರಾಗಿದ್ದರು. ಅವರ ಮುಖದಿಂದ ಸದಾ ಪುರುಷಾರ್ಥದ ಬಗ್ಗೆ ತಿಳಿಯುತ್ತಾ ಮತ್ತು ಕೇಳುತ್ತಾ “ಈಗ
ಕರ್ಮಾತೀತರಾಗಬೇಕು” ಎಂಬುದು ಒಂದೇ ಶಬ್ದ ಅವರದಾಗಿತ್ತು. ಕರ್ಮಾತೀತರಾಗುವ ಲಗನ್ನಿನಲ್ಲಿ ಅನ್ಯರಿಗೂ
ಸಹ ಇದೇ ಶಬ್ದವನ್ನು ಮತ್ತೆ-ಮತ್ತೆ ನೆನಪಿಸುತ್ತಿದ್ದರು. ಈಗ ಪ್ರತಿಯೊಬ್ಬ ಬ್ರಾಹ್ಮಣರ ಲಕ್ಷ್ಯ
ಮತ್ತು ಲಕ್ಷಣ ವಿಶೇಷವಾಗಿ ಇದೇ ಇರಬೇಕು. ಇದೇ ಇದ್ದೀರಿ ಆದರೆ ನಂಬರ್ವಾರ್. ಈಗ ಫರಿಸ್ಥೆಗಳು
ಆಗಲೇಬೇಕು ಎಂಬ ಇದೇ ಲಗನ್ ಇರಲಿ. ಫರಿಸ್ಥಾ ಅರ್ಥಾತ್ ಈ ದೇಹ, ಸಾಕಾರ ದೇಹದಿಂದ ಭಿನ್ನ. ಸದಾ
ಬೆಳಕಿನ ದೇಹಧಾರಿಗಳು. ಫರಿಸ್ಥಾ ಅರ್ಥಾತ್ ಈ ಕರ್ಮೇಂದ್ರಿಯಗಳಿಗೆ ರಾಜ.
ಬಾಪ್ದಾದಾರವರು ಮೊದಲೂ
ಸಹ ತಿಳಿಸಿದ್ದರು - ಇಡೀ ಸೃಷ್ಟಿಚಕ್ರದ ಒಳಗೆ ಒಬ್ಬರೇ ಬಾಪ್ದಾದಾ ಯಾವುದನ್ನು ನಶೆಯಿಂದ
ಹೇಳುತ್ತಾರೆ, ನನ್ನ ಒಬ್ಬೊಬ್ಬ ಮಗು ರಾಜಾ ಮಕ್ಕಳಾಗಿದ್ದಾರೆ, ಸ್ವರಾಜ್ಯಾಧಿಕಾರಿ ಆಗಿದ್ದಾರೆ,
ಫರಿಸ್ಥಾ ಅರ್ಥಾತ್ ಸ್ವರಾಜ್ಯಾಧಿಕಾರಿಗಳು. ಇಂತಹ ಸ್ವರಾಜ್ಯಾಧಿಕಾರಿ ಆತ್ಮ, ಬೆಳಕಿನ
ಸ್ವರೂಪಧಾರಿಗಳು. ಯಾರೇ ಆಗಿರಲಿ, ಇಂತಹ ಬೆಳಕಿನ ಡಬಲ್ ಹಗುರತೆಯ ಸ್ಥಿತಿಯಲ್ಲಿ ಸ್ಥಿತರಾಗಿ
ಯಾರನ್ನೇ ಮಿಲನ ಮಾಡುತ್ತಾರೆ ಎಂದರೆ ಅವರ ಮಸ್ತಕದಲ್ಲಿ ಆತ್ಮ ಜ್ಯೋತಿಯ ಅನುಭವ ನಡೆದಾಡುತ್ತಾ,
ತಿರುಗಾಡುತ್ತಲೂ ಸಹ ಕಂಡು ಬರುತ್ತದೆ. ಈಗ ಈ ತೀವ್ರ ಪುರುಷಾರ್ಥದ ಲಕ್ಷ್ಯ ಮತ್ತು ಲಕ್ಷಣ ಸದಾ
ಇಮರ್ಜ್ ಆಗಿ ಇಟ್ಟುಕೊಳ್ಳಿ. ಹೇಗೆ ಬ್ರಹ್ಮಾ ತಂದೆಯಲ್ಲಿ ನೋಡಿದಿರಿ, ಒಂದುವೇಳೆ ಯಾರಾದರೂ ಮಿಲನ
ಮಾಡಿದಾಗ, ದೃಷ್ಟಿಯನ್ನು ತೆಗೆದುಕೊಳ್ಳುವಾಗ ಮಾತನಾಡುತ್ತಿದ್ದಾಗ ಏನು ಕಂಡು ಬರುತ್ತಿತ್ತು? ಮತ್ತು
ಲೈಟಿನ ಅನುಭವವನ್ನು ಮಾಡುತ್ತಿದ್ದರು. ಬ್ರಹ್ಮಾ ತಂದೆ ಹೆಚ್ಚು ಮಾತನಾಡುತ್ತಾ, ಮಾತನಾಡುತ್ತಲೂ ಸಹ
ಮಧುರವಾದ ಅಶರೀರಿ ಸ್ಥಿತಿಯಲ್ಲಿ ಸ್ಥಿತರಾಗುತ್ತಿದ್ದರು. ಅನ್ಯರಿಗೂ ಸಹ ಭಲೆ ಎಷ್ಟೇ ಸೇವೆಯ
ಸಮಾಚಾರವಿರಲಿ ಒಂದು ಸೆಕೆಂಡಿನಲ್ಲಿ ಅಶರೀರಿತನದ ಅನುಭವ ಮಾಡಿಸುತ್ತಿದ್ದರು ಮತ್ತೆ-ಮತ್ತೆ ಯಾವುದೇ
ಮುರಳಿಯಲ್ಲಿ ಪರಿಶೀಲನೆ ಮಾಡಿ - ನಾನು ಅಶರೀರಿ ಆತ್ಮನಾಗಿದ್ದೇನೆಯೇ, ಎಂಬ ಆತ್ಮದ ಒಂದೇ ಪಾಠವನ್ನು
ಮುರಳಿಯಲ್ಲಿ ಎಷ್ಟು ಬಾರಿ ನೆನಪಿಸುತ್ತಿದ್ದರು. ಅಂದಾಗ ಸಮಯಾನುಸಾರ ಚಿಕ್ಕ-ಚಿಕ್ಕದಾದ ವಿಸ್ತಾರದ
ಮಾತುಗಳು ಸ್ವಭಾವ-ಸಂಸ್ಕಾರದ ಮಾತುಗಳು ಅಶರೀರಿ ಸ್ಥಿತಿಯಿಂದ ದೂರ ಮಾಡಿ ಬಿಡುತ್ತದೆ. ಈಗ
ಪರಿವರ್ತನೆ ಮಾಡಿಕೊಳ್ಳಬೇಕು.
ಬಾಪ್ದಾದಾರವರು
ಸೇವೆಯಲ್ಲಿ ಫಲಿತಾಂಶ ಒಳ್ಳೆಯದು ಇರುವುದನ್ನು ನೋಡುತ್ತಿದ್ದೇವೆ. ಸೇವೆಗಾಗಿ ಮೆಜಾರಿಟಿ
ಒಲವು-ಉತ್ಸಾಹವಿದೆ. ಯೋಜನೆಯನ್ನು ಮಾಡುತ್ತಿರುತ್ತೀರಿ ಆದರೆ ಸೇವೆಯ ಜೊತೆಗೆ ಸಂದೇಶ ಕೊಡುವುದೂ ಸಹ
ಅವಶ್ಯಕತೆ ಇದೆ ಮತ್ತು ಬಾಪ್ದಾದಾರವರು ಈ ದಿನವೂ ಸಹ ಭಿನ್ನ-ಭಿನ್ನ ವರ್ಗದ, ಸ್ಥಾನದ, ಸೇವೆಯ
ಒಳ್ಳೆಯ ಫಲಿತಾಂಶವನ್ನು ನೋಡಿದೆವು ಆದರೆ ಅಶರೀರಿ ಆಗುವ ವಾಯುಮಂಡಲ, ಪರಿಶ್ರಮ ಕಡಿಮೆ ಮತ್ತು
ಪ್ರಭಾವವನ್ನು ಹೆಚ್ಚಿನದಾಗಿ ಬೀರುತ್ತದೆ. ಕೇಳುವುದು ಚೆನ್ನಾಗಿಯೇ ಇರುತ್ತದೆ ಆದರೆ
ವಾಯುಮಂಡಲದಲ್ಲಿ ಅಶರೀರಿತನದ ದೃಷ್ಟಿಯಿಂದ ಅನುಭವ ಮಾಡುತ್ತಾರೆ ಮತ್ತು ಆ ಅನುಭವವನ್ನು
ಮರೆಯುವುದಿಲ್ಲ ಅಂದಾಗ ಫರಿಸ್ಥಾತನದ ಗುಂಗನ್ನು ಈಗ ಸೇವೆಯಲ್ಲಿ ವಿಶೇಷವಾಗಿ ಸೇವೆಯಲ್ಲಿ
ಅಳವಡಿಸಿಕೊಳ್ಳಿ. ಒಂದಲ್ಲ ಒಂದು ಶಾಂತಿಯ, ಖುಷಿಯ, ಸುಖದ, ಆತ್ಮಿಕ ಪ್ರೇಮದ ಅನುಭವವನ್ನು ಮಾಡಿಸಿ,
ನಡತೆಯಲ್ಲಿ ಪ್ರೀತಿ, ಪ್ರೇಮ ಮತ್ತು ಏನನ್ನು ಖಾತರಿ ಮಾಡುತ್ತೀರಿ, ಸಂಬಂಧದಿಂದ, ಪರಿವಾರದಿಂದ
ಅನುಭವವನ್ನು ಮಾಡಿ ಹೋಗುತ್ತಾರೆ. ಆದರೆ ಅತೀಂದ್ರಿಯ ಸುಖದ ಅನುಭವ, ಶಾಂತಿಯ, ಆತ್ಮೀಯ ನಶೆ ಈಗ
ವಾಯುಮಂಡಲ ಮತ್ತು ವೈಬ್ರೇಷನ್ನ ಮೂಲಕ ವಿಶೇಷ ಗಮನದಲ್ಲಿ ತನ್ನಿ. ವಿಶೇಷ ಅನುಭವವನ್ನು ಮಾಡಿಸಿ,
ಒಂದಲ್ಲ ಒಂದು ಅನುಭವವನ್ನು ಮಾಡಿಸಿ. ಹೀಗೆ ಇಲ್ಲಿನ ರೀತಿ-ಪದ್ಧತಿಗೆ ಪ್ರಭಾವಿತರಾಗಿ ಹೋಗುತ್ತಾರೆ,
ಇಂತಹ ಪದ್ಧತಿ, ಪರಿವಾರದ ಪ್ರೀತಿ ಮತ್ತೆ ಎಲ್ಲೂ ಸಿಗುವುದಿಲ್ಲ. ಹಾಗೆ ಒಂದಲ್ಲ ಒಂದು ಪ್ರಾಪ್ತಿಯ
ಅನುಭವವನ್ನು ಮಾಡಿ ಹೋಗಲಿ. ಈಗ 70-72 ವರ್ಷಗಳು ಪೂರ್ತಿ ಆಗುತ್ತಿವೆ. ಈ ಸಮಯದಲ್ಲಿ ಫಲಿತಾಂಶವನ್ನು
ಏನು ನೋಡಿದೆವು! ಪರಿಶ್ರಮದಿಂದ ಕೂಡಿರುವುದು, ಆದರೆ ಇದುವರೆವಿಗೂ ಬ್ರಹ್ಮಾಕುಮಾರಿಯರು ಒಳ್ಳೆಯ
ಕೆಲಸ ಮಾಡುತ್ತಿದ್ದಾರೆ, ಬ್ರಹ್ಮಾಕುಮಾರಿಯರ ಜ್ಞಾನ ಒಳ್ಳೆಯದಿದೆ. ಇದನ್ನು ಕೊಡುವವರು ಯಾರು!
ನಡೆಸುವವರು ಯಾರು! ಇದರ ಮೂಲ ಯಾರಾಗಿದ್ದಾರೆ! ಬಾಬಾ ಎನ್ನುವ ಶಬ್ದ ತಮ್ಮೆಲ್ಲರದನ್ನು ಕೇಳಿ
ಹೇಳುತ್ತಾರೆ, ಇವರ ಬಾಬಾ ಇದ್ದಾರೆಂದು ಹೇಳುತ್ತಾರೆ ಆದರೆ ಅವರು ನನ್ನ ಬಾಬಾ ಆಗಿದ್ದಾರೆ ಎಂಬ
ತಂದೆಯ ಪ್ರತ್ಯಕ್ಷತೆಯ ಈಗ ಗುಪ್ತ ರೂಪದಲ್ಲಿ ಇದೆ. ಬಾಬಾ, ಬಾಬಾ ಎಂದು ಹೇಳುತ್ತಾರೆ ಆದರೆ ನನ್ನ
ಬಾಬಾ, ಬಾಬಾ ನನ್ನವರು, ಇದನ್ನು ಕೋಟಿಯಲ್ಲಿ ಕೆಲವರು ತಿಳಿಯುತ್ತಾರೆ.
ಅಂದಾಗ ಸಂಗಮ ಯುಗದ ಗುರಿ
ಏನು? ನಮ್ಮೆಲ್ಲಾ ಆತ್ಮರ ತಂದೆ ಬಂದು ಬಿಟ್ಟರು, ಆಸ್ತಿಯಂತೂ ತಂದೆಯ ಮೂಲಕ ಸಿಗುತ್ತದೆಯಲ್ಲವೇ! ಈ
ಪ್ರಭಾವ ಫರಿಸ್ಥಾ ಸ್ಥಿತಿಯಿಂದ ವಾಯುಮಂಡಲದಲ್ಲಿ ಹರಡುತ್ತದೆ. ಇವರ ದೃಷ್ಟಿಯಿಂದ ಬೆಳಕು ಸಿಗುತ್ತದೆ,
ಇವರ ದೃಷ್ಟಿಯಿಂದ ಆತ್ಮೀಯತೆಯ ಬೆಳಕಿನ ದೃಶ್ಯ ಕಂಡು ಬರುತ್ತದೆ. ಈಗ ತೀವ್ರ ಪುರುಷಾರ್ಥಕ್ಕೆ ಇದೇ
ಲಕ್ಷ್ಯವನ್ನು ಇಟ್ಟುಕೊಳ್ಳಿ. ನಾನು ಡಬಲ್ಲೈಟ್ ಫರಿಸ್ಥೆ ಆಗಿದ್ದೇನೆ, ನಡೆದಾಡುತ್ತಾ,
ತಿರುಗಾಡುತ್ತಾ ಫರಿಸ್ಥಾ ಸ್ವರೂಪದ ಅನುಭೂತಿಯನ್ನು ಹೆಚ್ಚಿಸಿಕೊಳ್ಳಿ. ಅಶರೀರಿತನದ ಅನುಭವವನ್ನು
ಹೆಚ್ಚಿಸಿಕೊಳ್ಳಿ. ಸೆಕೆಂಡಿನಲ್ಲಿ ಯಾವುದೇ ಸಂಕಲ್ಪವನ್ನು ಸಮಾಪ್ತಿ ಮಾಡುವುದರಲ್ಲಿ, ಸಂಸ್ಕಾರ,
ಸ್ವಭಾವದಲ್ಲಿ ಡಬಲ್ಲೈಟ್ ಆಗಿ. ಕೆಲವು ಮಕ್ಕಳು ಹೇಳುತ್ತಾರೆ - ನಾವು ಹಗುರವಾಗಿರುತ್ತೇವೆ ಆದರೆ
ಅನ್ಯರು ನಮ್ಮನ್ನು ತಿಳಿದುಕೊಳ್ಳುವುದಿಲ್ಲ. ಇಂತಹ ಡಬಲ್ಲೈಟ್ ಫರಿಸ್ಥೆಗಳ, ಡಬಲ್ಲೈಟ್
ಸ್ಥಿತಿಯನ್ನು ಮುಚ್ಚಿಡಲು ಸಾಧ್ಯವೇ. ಯಾವುದೇ ಚಿಕ್ಕದಾದ, ಸ್ಥೂಲವಾದಂತಹ ಬೆಳಕು,
ಬ್ಯಾಟರಿಯದ್ದಾಗಲಿ ಅಥವಾ ಬೆಂಕಿ ಕಡ್ಡಿಯದ್ದಾಗಲಿ, ಎಲ್ಲೇ ಬೆಳಕು ಹಚ್ಚಿದಾಗ
ಮುಚ್ಚಿಡಲಾಗುವುದಿಲ್ಲ. ಇದಾದರೆ ಆತ್ಮೀಯ ಬೆಳಕಾಗಿದೆ. ತಮ್ಮ ವಾಯುಮಂಡಲದಿಂದ ಅವರಿಗೆ ಇವರು ಯಾರು!
ಎಂಬ ಅನುಭವವನ್ನು ಮಾಡಿಸಿ. ಜಗದಾಂಬಾರವರಾಗಲಿ, ದಾದಿಯವರಾಗಲಿ, ನನ್ನನ್ನು ತಿಳಿದಿಲ್ಲ ಎಂದು
ಹೇಳಲಿಲ್ಲ. ತಮ್ಮ ವಾಯುಮಂಡಲದಿಂದ ಸರ್ವರಿಗೂ ಪ್ರಿಯರಾಗಿದ್ದಾರೆ. ಆದ್ದರಿಂದ ದಾದಿಯವರ
ಉದಾಹರಣೆಯನ್ನು ಕೊಡುತ್ತಾರೆ ಏಕೆಂದರೆ ಬ್ರಹ್ಮಾ ತಂದೆಯ ಬಗ್ಗೆಯೂ ಸಹ ಯೋಚಿಸುತ್ತಾರೆ, ಬ್ರಹ್ಮಾ
ತಂದೆಯಲ್ಲಿ ಆದರೆ ಶಿವ ತಂದೆ ಇದ್ದರು, ಶಿವ ತಂದೆಯ ಬಗ್ಗೆಯೂ ಯೋಚಿಸುತ್ತಾರೆ, ಅವರು ನಿರಾಕಾರ
ಆಗಿದ್ದಾರೆ, ಎಲ್ಲದರಿಂದ ಭಿನ್ನ ಮತ್ತು ನಿರಾಕಾರಿ ಆಗಿದ್ದಾರೆ. ನಾವಾದರೆ ಸ್ಥೂಲ ಶರೀರಧಾರಿ
ಆಗಿದ್ದೇವೆ, ಇಷ್ಟು ದೊಡ್ಡ ಸಂಘಟನೆಯಲ್ಲಿ ಇರುವವರಾಗಿದ್ದೇವೆ. ಪ್ರತಿಯೊಬ್ಬರ ಸಂಸ್ಕಾರದಲ್ಲಿ
ಇರುವವರಾಗಿದ್ದೇವೆ. ಸಂಸ್ಕಾರಗಳನ್ನು ಹೊಂದಿಕೊಳ್ಳುವುದು ಅರ್ಥಾತ್ ಫರಿಸ್ಥೆ ಆಗುವುದು.
ಸಂಸ್ಕಾರವನ್ನು ನೋಡಿ ಕೆಲವು ಮಕ್ಕಳು ಹೃದಯ ವಿಧೀರ್ಣರಾಗಿ ಬಿಡುತ್ತಾರೆ, ತಂದೆ ಬಹಳ
ಒಳ್ಳೆಯವರಾಗಿದ್ದಾರೆ, ಬ್ರಹ್ಮಾ ತಂದೆಯೂ ಸಹ ಬಹಳ ಒಳ್ಳೆಯವರಾಗಿದ್ದಾರೆ, ಜ್ಞಾನವು ಬಹಳ
ಚೆನ್ನಾಗಿದೆ, ಪ್ರಾಪ್ತಿಯೂ ಬಹಳ ಚೆನ್ನಾಗಿದೆ. ಸ್ವಭಾವ-ಸಂಸ್ಕಾರಗಳನ್ನು ಹೊಂದುಕೊಳ್ಳುವುದು
ಅರ್ಥಾತ್ ಎಲ್ಲರಿಗೂ ಪ್ರಿಯರಾಗುವುದು, ಕೆಲವರಿಗೆ ಪ್ರಿಯರಲ್ಲ ಏಕೆಂದರೆ ಕೆಲವು ಮಕ್ಕಳು
ಹೇಳುತ್ತಾರೆ, ಕೆಲವರಲ್ಲಿ ವಿಶೇಷತೆಯನ್ನು ನೋಡಿ ಪ್ರೀತಿ ಬರುತ್ತದೆ ಎಂದು ಹೇಳುತ್ತಾರೆ. ಇವರ
ಭಾಷಣ ಬಹಳ ಚೆನ್ನಾಗಿದೆ, ಇವರಲ್ಲಿ ಇಂತಹ ವಿಶೇಷತೆ ಬಹಳ ಚೆನ್ನಾಗಿದೆ, ಇವರ ಮಾತು ಬಹಳ ಚೆನ್ನಾಗಿದೆ
ತಾವು ಫರಿಸ್ಥೆ ಆಗುವುದರಲ್ಲಿ ಇದು ವಿಘ್ನ ಆಗುತ್ತದೆ. ಅವರಿಗೆ ಪ್ರಿಯರಾದಿರಿ ಆದರೆ ಅವರನ್ನು ಭಲೆ
ಪ್ರಿಯರನ್ನಾಗಿ ಮಾಡಿಕೊಳ್ಳಿ ಆದರೆ ನಾನು ಆತ್ಮ ನ್ಯಾರಾ ಆಗಿದ್ದೇನೆ. ನ್ಯಾರಾ ಸ್ಥಿತಿಯಿಂದ
ಪ್ರಿಯರನ್ನಾಗಿ ಮಾಡಿಕೊಳ್ಳಿ. ವಿಶೇಷತೆಯೊಂದಿಗೆ ಪ್ರೀತಿಯಲ್ಲ. ಇವರ ಈ ಗುಣ ನನಗೆ ಬಹಳ
ಚೆನ್ನಾಗಿದೆಯನಿಸುತ್ತದೆ ಅನ್ನುವುದನ್ನು ಧಾರಣೆ ಮಾಡಿ, ಇದರ ಕಾರಣ ಇವರು ಪ್ರಿಯರು ಎಂಬುದು
ತಪ್ಪಾಗುತ್ತದೆ. ಫರಿಸ್ಥೆ ಎಲ್ಲರಿಗೂ ಇಷ್ಟವಾಗುತ್ತಾರೆ ಪ್ರತಿಯೊಬ್ಬರು ಇವರು ನನ್ನವರು ಎಂದು
ಹೇಳಲಿ, ನಮ್ಮವರು ಇಂತಹ ಫರಿಸ್ಥಾ ಸ್ಥಿತಿಯಲ್ಲಿ ಎರಡು ಪ್ರಕಾರದ ವಿಘ್ನಗಳು ಬರುತ್ತವೆ. ಒಂದಾಗಿದೆ
ದೇಹದ ಪರಿವೆ, ಅದಾದರೆ ಸ್ವಾಭಾವಿಕವಾಗಿ ಎಲ್ಲರಿಗೂ ಅನುಭವವಿದೆ, 63 ಜನ್ಮಗಳ ಪದೇ-ಪದೇ ಆ ದೇಹದ
ಪರಿವೆ ಪ್ರಕಟವಾಗುತ್ತಿರುತ್ತದೆ, ಮತ್ತೊಂದು ದೇಹದ ಅಭಿಮಾನ, ದೇಹದ ಪರಿವೆ ಮತ್ತು ದೇಹದ ಅಭಿಮಾನ,
ಜ್ಞಾನದಲ್ಲಿ ಎಷ್ಟು ಮುಂದೆ ಹೋಗುತ್ತಿರುತ್ತೀರೋ ಸ್ವಯಂ ಪ್ರತಿಯೂ ಸಹ ಕೆಲವೊಮ್ಮೆ ದೇಹಾಭಿಮಾನ ಬಂದು
ಬಿಡುತ್ತದೆ, ಆ ಅಭಿಮಾನ ಕೆಳಗೆ ಬೀಳಿಸುತ್ತದೆ. ದೇಹ-ಅಭಿಮಾನ ಏನು ಬರುತ್ತದೆ? ಏನೆಲ್ಲಾ
ವಿಶೇಷತೆಗಳಿರುತ್ತವೆಯಲ್ಲವೇ, ಆ ವಿಶೇಷತೆಯ ಕಾರಣ ಅಭಿಮಾನವಿರುತ್ತದೆ. ನಾನೇನು ಕಡಿಮೆಯೇ, ನನ್ನ
ಭಾಷಣ ಎಲ್ಲರಿಗೂ ಇಷ್ಟವೆನಿಸುತ್ತದೆ, ನನ್ನ ಸೇವೆಯ ಪ್ರಭಾವ ಬೀರುತ್ತದೆ. ಯಾವುದೇ ಕಲೆ ನನ್ನ
ಸಂಭಾಲನೆ ಮಾಡುವ ರೀತಿ (ಹ್ಯಾಂಡ್ಲಿಂಗ್) ಬಹಳ ಚೆನ್ನಾಗಿದೆ, ನಾನು ಕೋರ್ಸ್ ಕೊಡುವುದು ಬಹಳ
ಚೆನ್ನಾಗಿದೆ. ಒಂದಲ್ಲ ಒಂದು ಜ್ಞಾನದಲ್ಲಿ ಮುಂದೆ ಹೋಗಲು, ಸೇವೆಯಲ್ಲಿ ಮುಂದೆ ಹೋಗಲು ಈ ಅಭಿಮಾನ
ತನ್ನ ಪ್ರತಿಯೂ ಸಹ ಬರುತ್ತದೆ ಮತ್ತು ಅನ್ಯರ ಗುಣ ಅಥವಾ ಕಲೆ ಅಥವಾ ವಿಶೇಷತೆಗಳ ಪ್ರತಿಯೂ ಸಹ
ಪ್ರಿಯರಾಗಿ ಬಿಡುತ್ತಾರೆ. ಆದರೆ ಯಾರು ನೆನಪಿಗೆ ಬರುತ್ತಾರೆ? ದೇಹಾಭಿಮಾನ ನೆನಪಿಗೆ ಬರುತ್ತದೆ.
ಇಂತಹವರ ಬುದ್ಧಿ ಬಹಳ ಚೆನ್ನಾಗಿದೆ, ನನ್ನ ಹ್ಯಾಂಡ್ಲಿಂಗ್ ಬಹಳ ಚೆನ್ನಾಗಿದೆ, ಈ ಅಭಿಮಾನ ಸೇವೆ
ಅಥವಾ ಪುರುಷಾರ್ಥದಲ್ಲಿ ಮುಂದೆ ಹೋಗುವವರಿಗೆ ಅಭಿಮಾನದ ರೂಪದಲ್ಲಿ ಬರುತ್ತದೆ. ಅಂದಾಗ ಇದನ್ನೂ ಸಹ
ಪರಿಶೀಲನೆ ಮಾಡಿಕೊಳ್ಳಬೇಕು ಮತ್ತು ಅಭಿಮಾನವುಳ್ಳವರಿಗೆ ಅಭಿಮಾನ ಇದೆ, ಇದನ್ನು ಪರಿಶೀಲನೆ
ಮಾಡಿಕೊಳ್ಳುವ ಸಾಧನವಾಗಿದೆ. ಅಭಿಮಾನವುಳ್ಳವರಿಗೆ ಸ್ವಲ್ಪವೂ ಸಹ ಯಾರಾದರೂ ಅಪಮಾನ ಮಾಡಿದರೆ, ಅವರ
ವಿಚಾರದ, ಅವರ ಸಲಹೆಯ, ಅವರ ಕಲೆಯ, ಅವರ ಹ್ಯಾಂಡ್ಲಿಂಗ್ (ಕ್ಷೇತ್ರ ಪಾಲನೆ) ಬಗ್ಗೆ ಅಪಮಾನ ಬಹಳ
ಬೇಗ ಅನುಭವವಾಗುತ್ತದೆ. ಮತ್ತು ಅಪಮಾನದ ಅನುಭವವಾಯಿತು, ಅದರ ಇನ್ನೂ ಸೂಕ್ಷ್ಮ ಗುರುತು ಕ್ರೋಧದ
ಅಂಶ ಉತ್ಪನ್ನವಾಗಿ ಬಿಡುತ್ತದೆ, ಆವೇಶದಲ್ಲಿ ಬರುವುದು, ಇದು ಫರಿಸ್ಥೆಗಳಾಗಲು ಬಿಡುವುದಿಲ್ಲ
ಅಂದಾಗ ವರ್ತಮಾನ ಸಮಯದ ಲೆಕ್ಕದಿಂದ ಬಾಪ್ದಾದಾರವರು ಮತ್ತೆ ಸೂಚನೆಯನ್ನು ಕೊಡುತ್ತಿದ್ದಾರೆ, ತಮ್ಮ
ಸಂಗಮಯುಗದ ಕೊನೆಯ ಸ್ವರೂಪ ಫರಿಸ್ಥೆ, ಇದನ್ನು ಈಗ ಜೀವನದಲ್ಲಿ ಪ್ರತ್ಯಕ್ಷ ಮಾಡಿ, ಸಾಕಾರದಲ್ಲಿ
ತನ್ನಿ. ಫರಿಸ್ಥೆ ಆಗುವುದರಿಂದ ಅಶರೀರಿ ಆಗುವುದು ಬಹಳ ಸಹಜವಾಗುತ್ತದೆ. ಸೂಕ್ಷ್ಮ ರೂಪದಲ್ಲಿಯೂ ಸಹ
ಸೆಳತೆ ಯಾವುದಾದರೂ ವಿಶೇಷತೆ ಅಥವಾ ತನ್ನದೇ ಆಗಿರಲಿ ಅಥವಾ ಮತ್ತೊಬ್ಬರದು ಆಗಿರಲಿ ಅಭಿಮಾನ ಇಲ್ಲವೇ?
ಎಂದು ತಮ್ಮ ಚೆಕೆಂಗ್ ಮಾಡಿಕೊಳ್ಳಿ. ಕೆಲವು ಮಕ್ಕಳ ಚಿಕ್ಕ ಮಾತೂ ಸಹ ಅವರ ಸ್ಥಿತಿಯನ್ನು
ಹೆಚ್ಚು-ಕಡಿಮೆ ಮಾಡಿ ಬಿಡುತ್ತದೆ. ಖುಷಿಯಿಂದ ಕೂಡಿರುವ ಚೆಹರೆಗೆ ಬದಲಾಗಿ ಚಿಂತೆಯಿಂದ ಕೂಡಿರುವ
ಚೆಹರೆ ಅಥವಾ ಚಿಂತನೆಯಲ್ಲಿ ಇರುವ ಚೆಹರೆ ಮತ್ತು ನಡೆಯುತ್ತಾ-ನಡೆಯುತ್ತಾ ಹೃದಯ ವಿಧೀರ್ಣರಾಗಿ
ಬಿಡುತ್ತಾರೆ. ಖುಷಿಯಿಂದ ಇರುವುದರ ಬದಲಾಗಿ ಹೃದಯ ವಿಧೀರ್ಣರಾಗುತ್ತಾರೆ. ತಿಳಿಯಿತೇ, ಈಗ ತಮ್ಮ
ಸಂಗಮ ಯುಗದ ಕೊನೆಯ ಸ್ಥಿತಿ ಫರಿಸ್ಥಾತನದ ಸಂಸ್ಕಾರವನ್ನು ಪ್ರಕಟ ಮಾಡಿಕೊಳ್ಳಿ. ಹೇಗೆ ಬ್ರಹ್ಮಾ
ತಂದೆಯನ್ನು ನೋಡಿದಿರಿ ಅವರನ್ನು ಅನುಸರಿಸಬೇಕಲ್ಲವೇ. ಮಾತನಾಡುತ್ತಾ-ಮಾತನಾಡುತ್ತಾ ಮಕ್ಕಳು ಏನಾದರೂ
ಸಮಾಚಾರವನ್ನು ಹೇಳಲು ಬರುತ್ತಿದ್ದರು ಆದರೆ ಆ ಸಮಾಚಾರದಿಂದಲೇ ದೂರವಾಗಿ ಬಿಡುತ್ತಿದ್ದರು,
ಶಬ್ದದಿಂದ ದೂರ, ದೂರದ ಸ್ಥಿತಿಯ ಅನುಭವವನ್ನು ಮಾಡಿ ನೋಡಿದರು. ಮಾತುಗಳ ಸಮಾಚಾರವನ್ನು ಹೇಳಲು ಬಹಳ
ಪ್ಲಾನ್ ಮಾಡಿಕೊಂಡು ಬರುತ್ತಿದ್ದರು ಇದನ್ನು ಹೇಳಬೇಕು, ಇದನ್ನು ಹೇಳುತ್ತೇನೆ, ಇದನ್ನು
ಕೇಳುತ್ತೇನೆ ಆದರೆ ಬ್ರಹ್ಮಾ ತಂದೆಯು ಮುಂದೆ ಬಂದಾಗ ಏನು ಹೇಳಬೇಕಾಯಿತೋ ಅದನ್ನೇ ಮರೆತು
ಬಿಡುತ್ತಿದ್ದರು. ಇದಕ್ಕೆ ಫರಿಸ್ಥಾ ಸ್ಥಿತಿ ಎಂದು ಹೇಳಲಾಗುತ್ತದೆ. ಈ ದಿನ ಈ ಪಾಠವನ್ನು ಪಕ್ಕಾ
ಮಾಡಿಕೊಂಡಿದ್ದೀರಾ? ನಾನು ಯಾರು? ಫರಿಸ್ಥೆ. ಯಾವುದೇ ಮಾತಿನಲ್ಲಿ, ಯಾವುದೇ ವಿಶೇಷತೆಯಿಂದ, ತನ್ನ
ವಿಶೇಷತೆಯಿಂದ, ದೇಹದ ಅಭಿಮಾನದಿಂದ ದೂರ ಡಬಲ್ಲೈಟ್ ಫರಿಸ್ಥಾ ಏಕೆಂದರೆ ಫರಿಸ್ಥೆಗಳಾಗದೆ ದೇವತೆಯ
ಶ್ರೇಷ್ಠ ಪದವಿ ಸಿಗಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಬಂದು ಬಿಡುತ್ತೀರಿ, ಏಕೆಂದರೆ
ಮಕ್ಕಳಾಗಿದ್ದೀರಿ. ಆಸ್ತಿಯಂತೂ ಸಿಗುತ್ತದೆ ಆದರೆ ಶ್ರೇಷ್ಠ ಪದವಿ ಇಲ್ಲ. ಸದಾ ಜೊತೆಯಲ್ಲಿ
ಇರುತ್ತೇನೆ ಎಂದು ಯಾವ ವಾಯಿದೆ ಮಾಡಿದ್ದೀರಿ, ಜೊತೆ-ಜೊತೆಯಲ್ಲಿ ರಾಜ್ಯ ಮಾಡುತ್ತೇವೆ, ಸಿಂಹಾಸನದ
ಮೇಲೆ ಕುಳಿತುಕೊಳ್ಳದಿದ್ದರೂ ರಾಜ್ಯದ ಅಧಿಕಾರಿ ಆಗಲಿ, ಅಲ್ಲಿಯ ರಾಜ್ಯ ಸಭೆಯನ್ನು ನೋಡಿದ್ದೀರಲ್ಲವೇ.
ಯಾರೆಲ್ಲಾ ರಾಜ್ಯ ಸಭೆಯ ಅಧಿಕಾರಿಗಳಿದ್ದಾರೆ, ಅವರು ತಿಲಕ ಮತ್ತು ಕಿರೀಟಧಾರಿಗಳು. ರಾಜ್ಯದ ತಿಲಕ,
ರಾಜ್ಯದ ಗುರುತು ಕಿರೀಟ, ಅಂದಾಗ ಬಹಳ ಸಮಯದಿಂದ ಸ್ವರಾಜ್ಯಾಧಿಕಾರಿ ಮಧ್ಯ-ಮಧ್ಯದಲ್ಲಿ ಅಲ್ಲ. ಬಹಳ
ಸಮಯದ ಸ್ವರಾಜ್ಯಾಧಿಕಾರಿಗಳು ಸಿಂಹಾನದ ಮೇಲೆ ಭಲೆ ಕುಳಿತುಕೊಳ್ಳದಿದ್ದರೂ ರಾಜ ಪರಿವಾರದಲ್ಲಿ ಬರುವ
ಅಧಿಕಾರಿ ಆಗಿ ಬಿಡುತ್ತಾರೆ. ಒಳ್ಳೆಯದು.
ಯಾರು ಮೊದಲು ಬಾರಿ
ಬಂದಿದ್ದೀರಿ ಅವರು ಎದ್ದು ನಿಲ್ಲಿರಿ. ಒಳ್ಳೆಯದು. 3/4 ಸಭೆ ಎದ್ದು ನಿಂತಿದ್ದು. ಇಂದು ಯಾರೆಲ್ಲಾ
ಮೊದಲನೇ ಬಾರಿ ಬಂದಿದ್ದೀರಿ ಅವರೆಲ್ಲರಿಗೂ ತಂದೆಯನ್ನು ಸಾಕಾರದಲ್ಲಿ ಮಿಲನ ಮಾಡುವ, ಮೊದಲನೇ ಬಾರಿಯ
ಜನ್ಮದಿನದ ಶುಭಾಶಯಗಳು. ಬಾಪ್ದಾದಾರವರ ಬಂದಿರುವಂತಹ ಎಲ್ಲಾ ಮಕ್ಕಳಿಗೆ ಇದೇ ವರದಾನವಿದೆ, ಬನ್ನಿ,
ಬರಲಿ, ಟೂ ಲೇಟಿನ ಸಮಯವಿದೆ ಆದರೆ ಹೊಸದಾಗಿ ಬಂದಿರುವ ಮಕ್ಕಳ ಪ್ರತಿ ಒಂದು ವಿಶೇಷ ವರದಾನವಿದೆ,
ನಾವು ಹೇಗೆ ಮುಂದೆ ಹೋಗಲು ಸಾಧ್ಯವಿದೆ? ಎಂಬ ಸಂಕಲ್ಪವನ್ನು ಎಂದೂ ಸಹ ಮಾಡಬಾರದು. ಈಗ ತಡವಾಗಿ
ಬಂದಿದ್ದೀರಿ ಆದರೆ ಅತಿ ತಡವಾಗಿ ಬಂದಿಲ್ಲ. ತಮ್ಮೆಲ್ಲರಿಗೂ ವಿಶೇಷವಾಗಿ ಬಾಪ್ದಾದಾರವರು ಮತ್ತು
ನಿಮಿತ್ತರಾದ ಬ್ರಾಹ್ಮಣ ಪರಿವಾರದ ಸಹೋದರ-ಸಹೋದರಿಯರ ವಿಶೇಷ ಸಹಯೋಗದ ಭಾವನೆ ಇದೆ. ಒಂದುವೇಳೆ ತಾವು
ಸ್ವಲ್ಪ ಸಮಯದ ಒಂದೊಂದು ಸೆಕೆಂಡ್ನ್ನು ಸಫಲ ಮಾಡಿಕೊಳ್ಳುವುದಿದ್ದರೆ, ಏಕೆಂದರೆ ಸ್ವಲ್ಪ ಸಮಯದಲ್ಲಿ
ಬಹಳಷ್ಟು ಪಡೆಯಬಹುದು. ಒಂದು ಸೆಕೆಂಡ್ನ್ನೂ ಸಹ ವ್ಯರ್ಥವಾಗಿ ಕಳೆಯಬಾರದು. ಕರ್ಮ ಯೋಗಿ ಆಗಿ
ನಡೆಯಬೇಕು. ಕರ್ಮ ಬಿಡಬಾರದು ಆದರೆ ಕರ್ಮದಲ್ಲಿ ಯೋಗವನ್ನು ಜೋಡಿಸುತ್ತಾ, ಕರ್ಮ ಮತ್ತು ಯೋಗದ
ಬ್ಯಾಲೆನ್ಸ್ ಇಟ್ಟುಕೊಳ್ಳಬೇಕು. ಬ್ಯಾಲೆನ್ಸ್ ಇಟ್ಟುಕೊಳ್ಳುವವರಿಗೆ ಹೆಚ್ಚಿನ ಆಶೀರ್ವಾದ
ಸಿಗುತ್ತದೆ. ಯಾರೆಲ್ಲಾ ತಡವಾಗಿ ಬಂದಿದ್ದೀರಿ, ಆ ನಂತರ ಟೂ ಲೇಟ್ ಆಗುವುದಿದೆ. ತಮಗೆ ಅವಕಾಶವಿದೆ
- ಸ್ವಲ್ಪ ಸಮಯದಲ್ಲಿ ಬಹಳ ಪುರುಷಾರ್ಥವನ್ನು ಮಾಡಲು ಸಾಧ್ಯವಿದೆ. ಬಾಪ್ದಾದಾ ಸಾಹಸವಂತ ಮಕ್ಕಳಿಗೆ
ತಂದೆಯ ಸಹಾಯ ಇದ್ದೇ ಇದೆ ಎಂದು ವರದಾನವನ್ನು ಕೊಡುತ್ತೇವೆ.
ಅಂದಾಗ ಎಲ್ಲರಿಗೆ ಎಲ್ಲಾ
ಕಡೆ ಇರುವ ಮಕ್ಕಳಿಗೆ ಬಾಪ್ದಾದಾರವರ ಹೃದಯದ ಆಶೀರ್ವಾದಗಳು ಹಾಗೂ ಪದಮಾಗುಣ ಶುಭಾಶಯಗಳು. ಯಾರು ಶಿವ
ರಾತ್ರಿಯಂದು ತಮ್ಮ ಸೇವೆಯಲ್ಲಿ ಇರುತ್ತಾರೆ, ಅವರಿಗೆ ಈಗನಿಂದಲೇ ಶಿವ ರಾತ್ರಿಯ ತಮ್ಮ ಜನ್ಮದಿನದ
ಆಶಿರ್ವಾದಗಳು ಹಾಗೂ ಶುಭಾಶಯಗಳನ್ನು ಕೊಡುತ್ತಿದ್ದೇವೆ ಅಥವಾ ಏನು ಪತ್ರ ಈ-ಮೇಲ್ ಕಳುಹಿಸುತ್ತೀರಿ
ಅವರದು ಸೆಕೆಂಡಿಗಿಂತಲೂ ಕಡಿಮೆ ಸಮಯದಲ್ಲಿ ಬಾಪ್ದಾದಾರವರ ಬಳಿ ಬಂದು ತಲುಪಿ ಬಿಡುತ್ತದೆ. ಅವರಿಗೂ
ಸಹ ಮತ್ತೆ ಬಾಪ್ದಾದಾರವರ ಬಾಯಾರಿರುವ ಆತ್ಮಗಳು, ಬಾಂಧನದಲ್ಲಿರುವವರು ಯಾರು ಪೆಟ್ಟನ್ನೂ ಸಹ
ಕೊರಳಿನ ಹಾರವನ್ನಾಗಿ ಮಾಡಿಕೊಂಡು ಬಿಡುತ್ತಾರೆ, ಅಂತಹ ಆತ್ಮಗಳಿಗೂ ಸಹ ನೆನಪು ಪ್ರೀತಿ ಮತ್ತು
ಹೊಸ-ಹೊಸ ಸ್ನೇಹಿ ಆತ್ಮಗಳು ಯಾರು ಈಗ ಬರುತ್ತಿದ್ದಾರೆ, ಆದರೆ ಕಡಿಮೆ ಇದ್ದಾರೆ. ಸ್ನೇಹಿ ಹಾಗೂ
ಸಹಯೋಗಿ ಡಬಲ್ ಆಗಿರಬೇಕು. ಅಂದಾಗ ಎಲ್ಲಾ ಕಡೆಯ, ಎಲ್ಲಾ ಯುವಕರು, ವೃದ್ಧರು, ಮಕ್ಕಳು, ಮಾತೆಯರು,
ಪಾಂಡವರು, ಎಲ್ಲರಿಗೆ ಮುಂಚಿತವಾಗಿ ತಮ್ಮ ಹಾಗೂ ತಂದೆಯ ಜನ್ಮದಿನದ ಶುಭಾಶಯಗಳು. ಒಳ್ಳೆಯದು.
ವರದಾನ:
ಸಾಕಾರ ಹಾಗೂ
ನಿರಾಕಾರ ತಂದೆಯ ಜೊತೆಯ ಮೂಲಕ ಪ್ರತಿಯೊಂದು ಸಂಕಲ್ಪದಲ್ಲಿ ವಿಜಯಿಯಾಗುವಂತಹ ಸದಾ ಸಫಲತಾಮೂರ್ತಿ ಭವ.
ಹೇಗೆ ನಿರಾಕಾರ ಆತ್ಮ
ಮತ್ತು ಸಾಕಾರ ಶರೀರ - ಎರಡರ ಸಂಬಂಧದಿಂದ ಪ್ರತಿಯೊಂದು ಕಾರ್ಯವನ್ನೂ ಮಾಡಬಹುದು, ಅದೇರೀತಿ
ಪ್ರತಿಯೊಂದು ಕರ್ಮ ಅಥವಾ ಸಂಕಲ್ಪವನ್ನೂ ನಿರಾಕಾರ ಹಾಗೂ ಸಾಕಾರ ತಂದೆಯಿಬ್ಬರನ್ನೂ ಜೊತೆ ಅಥವಾ
ಸನ್ಮುಖದಲ್ಲಿ ಇಟ್ಟುಕೊಳ್ಳುತ್ತಾ ಮಾಡುತ್ತೀರೆಂದರೆ ಸಫಲತಾಮೂರ್ತಿ ಆಗಿ ಬಿಡುವಿರಿ. ಏಕೆಂದರೆ
ಯಾವಾಗ ಬಾಪ್ದಾದಾರವರು ಸನ್ಮುಖದಲ್ಲಿ ಇರುತ್ತಾರೆಂದರೆ ಅವಶ್ಯವಾಗಿ ಅವರಿಂದ ನಿರ್ಣಯ ತೆಗೆದುಕೊಂಡು,
ನಿಶ್ಚಯ ಹಾಗೂ ನಿರ್ಭಯತೆಯಿಂದ ಮಾಡುವಿರಿ. ಇದರಿಂದ ಸಮಯ ಹಾಗೂ ಸಂಕಲ್ಪದ ಉಳಿತಾಯವಾಗುವುದು. ಯಾವುದೂ
ಸಹ ವ್ಯರ್ಥವಾಗುವುದಿಲ್ಲ, ಪ್ರತಿಯೊಂದು ಕರ್ಮವು ಸ್ವತಹವಾಗಿಯೇ ಸಫಲವಾಗುವುದು.
ಸ್ಲೋಗನ್:
ಆತ್ಮಿಕ ಸ್ನೇಹವು
ಸಂಪತ್ತಿಗಿಂತಲೂ ಅಧಿಕ ಅಮೂಲ್ಯವಾಗಿದೆ, ಆದ್ದರಿಂದ ಮಾಸ್ಟರ್ ಸ್ನೇಹದ ಸಾಗರರಾಗಿರಿ.
ಅವ್ಯಕ್ತ ಸೂಚನೆ:- ಏಕತೆ
ಮತ್ತು ವಿಶ್ವಾಸದ ಗುಣ ಲಕ್ಷಣಗಳ ಮೂಲಕ ಸಫಲತಾ ಸಂಪನ್ನರಾಗಿರಿ.
ಧರ್ಮ ಸತ್ತಾರವರ ಮುಂದೆ
ಪವಿತ್ರತೆಯ ಶಕ್ತಿ ಮತ್ತು ರಾಜ್ಯ ಸತ್ತಾರವರ ಮುಂದೆ ಏಕತೆಯ ಶಕ್ತಿ ಸಿದ್ಧ ಮಾಡಿ. ಈ ಎರಡು
ಶಕ್ತಿಗಳನ್ನು ಸಿದ್ಧ ಮಾಡುವುದರಿಂದ ಈಶ್ವರೀಯ ಸತ್ತಾದ ಬಾವುಟ ಸಹಜವಾಗಿ ಹಾರುವುದು. ಈಗ ಈ ಎರಡು
ಕಡೆಯ ವಿಶೇಷ ಗಮನ ಬೇಕು. ಎಷ್ಟೆಷ್ಟು ಪವಿತ್ರ ಮತ್ತು ಏಕತೆಯ ಶಕ್ತಿಯಿಂದ ಅವರ ಸಮೀಪ ಸಂಪರ್ಕದಲ್ಲಿ
ಬರುತ್ತಿರುತ್ತೀರಿ ಅಷ್ಟು ಅವರು ಸ್ವಯಂ ತಮ್ಮ ವರ್ಣನೆ ಮಾಡುತ್ತಿರುತ್ತಾರೆ.