22.03.26    Avyakt Bapdada     Kannada Murli    07.04.2009     Om Shanti     Madhuban


“ಕಾರಣ ಶಬ್ದದಿಂದ ಮುಕ್ತರಾಗಿ ಚಲನೆ ಹಾಗೂ ಚೆಹರೆಯಿಂದ ಮುಕ್ತಿಯನ್ನು ಕೊಡುವಂತಹ ಮುಕ್ತಿದಾತರಾಗಿ, ಸೇವೆಯ ಒಲವು-ಉತ್ಸಾಹದ ಜೊತೆ ಸದಾ ಬೇಹದ್ದಿನ ವೈರಾಗ್ಯದ ವೃತ್ತಿಯಲ್ಲಿ ಇರಿ”


ಇಂದು ಬಾಪ್ದಾದಾರವರು ನಾಲ್ಕಾರು ಕಡೆಯ ಮಕ್ಕಳು ಯಾರು ಡಬಲ್ ಮಾಲೀಕರಾಗಿದ್ದಾರೆ ಆ ಪ್ರತಿಯೊಬ್ಬ ಮಕ್ಕಳನ್ನು ನೋಡುತ್ತಿದ್ದಾರೆ. ಒಂದು ತಂದೆಯ ಸರ್ವ ಖಜಾನೆಗಳಿಗೆ ಮಾಲೀಕ ಮತ್ತು ಇನ್ನೊಂದು ಸ್ವರಾಜ್ಯಕ್ಕೆ ಮಾಲೀಕರಾಗಿದ್ದಾರೆ. ಎರಡೂ ಮಾಲೀಕತನ ಪ್ರತಿಯೊಬ್ಬ ಮಕ್ಕಳಿಗೆ ತಂದೆಯ ಮೂಲಕ ಸಿಕ್ಕಿದೆ. ತಂದೆಯ ಬಾಲಕರೂ ಸಹ ಆಗಿದ್ದಾರೆ ಹಾಗೂ ಮಾಲೀಕರೂ ಸಹ ಆಗಿದ್ದಾರೆ. ನನ್ನ ಬಾಬಾ ಎಂದು ಹೇಳಿದರೆ ಮತ್ತು ತಂದೆಯೂ ಸಹ ನನ್ನ ಮಕ್ಕಳು ಎಂದು ಹೇಳಿದರು ಅಂದಾಗ ಬಾಲಕ ಹಾಗೂ ಮಾಲೀಕ ಎರಡರ ಅನುಭವವಿದೆ.

ಇಂದು ಬಹಳಷ್ಟು ಮಕ್ಕಳು ಬಂದಿದ್ದಾರೆ. ಈ ವರ್ಷದ ಕೊನೆಯ ಸರದಿಯಾಗಿದೆ. ಅಂದಾಗ ಈ ದಿನ ಬಾಪ್ದಾದಾರವರು ಪ್ರತಿಯೊಬ್ಬರ ಪುರುಷಾರ್ಥವನ್ನು ಚೆಕ್ ಮಾಡಿದ್ದಾರೆ. ಅಂದಾಗ ಹೇಳಿ ಏನು ನೋಡಿರಬಹುದು? ಪ್ರತಿಯೊಬ್ಬರು ತಮ್ಮನ್ನು ತಾವು ಕೇಳಿಕೊಳ್ಳಿ - ನನ್ನ ಪುರುಷಾರ್ಥ ಏನು? ಬಾಪ್ದಾದಾ ಎಲ್ಲಾ ಮಕ್ಕಳನ್ನು ನೋಡಿ ಖುಷಿಯೂ ಆಗಿದ್ದಾರೆ ಆದರೆ ತಂದೆಯ ಒಂದು ಆಸೆ ಇದೆ, ಹೇಳಲೇ ಅದು ಏನೆಂದು. ತಂದೆಯ ಆಸೆಯನ್ನು ಪೂರ್ಣ ಮಾಡುತ್ತೀರಲ್ಲವೇ. ಒಂದೇ ಆಸೆ ಇದೆ ಹೇಳಲೇ? ಯಾರು ಆಸೆ ಪೂರ್ಣ ಮಾಡುತ್ತೀರಿ ಅವರು ಕೈ ಎತ್ತಿ. ಬಹಳ ಒಳ್ಳೆಯದು. ಚಿಕ್ಕ ಆಸೆ ಇದೆ. ಈ ದಿನದಿಂದ ಒಂದು ಶಬ್ದವನ್ನು ಬದಲಾವಣೆ ಮಾಡಿಕೊಳ್ಳಿ ಅದು ಯಾವ ಶಬ್ದವಾಗಿದೆ? ಯಾವುದು ಪದೇ-ಪದೇ ಕೆಳಗೆ ಕರೆದುಕೊಂಡು ಬರುತ್ತದೆ, ಆ ಶಬ್ದವಾಗಿದೆ - ಕಾರಣ. ಈ ಕಾರಣ ಶಬ್ದವನ್ನು ಪರಿವರ್ತನೆ ಮಾಡಿಕೊಂಡು ನಿವಾರಣೆ ಶಬ್ದವನ್ನು ಸದಾ ಧಾರಣೆ ಮಾಡಿಕೊಳ್ಳಿ ಏಕೆಂದರೆ ತಮ್ಮ ಸೇವೆಯೂ ಸಹ ಈಗ ಏನಾಗಿದೆ? ವಿಶ್ವದ ಆತ್ಮಗಳ ಎಲ್ಲರ ಸಮಸ್ಯೆಗಳ ಕಾರಣವನ್ನು ನಿವಾರಣೆ ಮಾಡಿ, ನಿವಾರಣೆ ಮಾಡುತ್ತಲೇ ನಿರ್ವಾಣಧಾಮಕ್ಕೆ ಕರೆದುಕೊಂಡು ಹೋಗಬೇಕು ಏಕೆಂದರೆ ತಾವೆಲ್ಲರೂ ಮುಕ್ತಿದಾತರಾಗಿದ್ದೀರಿ. ಅನ್ಯರಿಗೂ ಮುಕ್ತಿ ಕೊಡುವಂತಹವರು ಅಂದಮೇಲೆ ಸ್ವಯಂ ಸಹ ಕಾರಣವನ್ನು ನಿವಾರಣೆ ಮಾಡಿಕೊಳ್ಳಬೇಕು ಆಗ ಅನ್ಯರಿಗೆ ಮುಕ್ತಿಯನ್ನು ಕೊಡಿಸಲು ಸಾಧ್ಯವಾಗುತ್ತದೆ. ನಿರ್ವಾಣಧಾಮಕ್ಕೆ ಕರೆದೊಯ್ಯುತ್ತೀರಿ. ಈ ಒಂದು ಶಬ್ದದ ಸಮಾಪ್ತಿ ಮಾಡುವುದು ಕಷ್ಟವೋ ಅಥವಾ ಸಹಜವೋ? ಯೋಚನೆ ಮಾಡಿ.

ಈ ದಿನ ಬಾಪ್ದಾದಾರವರು ಯಾರೆಲ್ಲಾ ಬಂದಿದ್ದಾರೆ ಅಥವಾ ತಮ್ಮ-ತಮ್ಮ ಸ್ಥಾನಗಳಲ್ಲಿ ನೋಡುತ್ತಿದ್ದೀರಿ, ಕೇಳುತ್ತಿದ್ದೀರಿ, ಅವರೆಲ್ಲರಿಂದ ಒಂದು ಶಬ್ದದ ಪರಿವರ್ತನೆ ಬಯಸುತ್ತೇವೆ ಏಕೆಂದರೆ ಕಾರಣ ಕೆಳಗೆ ಕರೆದುಕೊಂಡು ಬರುತ್ತದೆ. ಕಾರಣದಲ್ಲಂತೂ ಅರ್ಧಕಲ್ಪ ಇದ್ದಿರಿ ಈಗ ನಿವಾರಣೆ ಮಾಡುವ ಸಮಯವಾಗಿದೆ. ನಿವಾರಣೆ ಹಾಗೂ ನಿರ್ವಾಣ, ಮುಕ್ತಿ ಅಂದಾಗ ಇದು ತಂದೆಗೆ ಕೊಡಲು ಸಾಹಸವಿದೆಯೇ. ಕೊನೆಯ ಸರದಿಯಾಗಿದೆ. ಎಲ್ಲರೂ ಒಲವು-ಉತ್ಸಾಹದಿಂದ ಬಂದಿದ್ದಾರೆ ಮತ್ತೆ ಬಾಪ್ದಾದಾ ಒಬ್ಬೊಬ್ಬರಿಗೆ ಶುಭಾಶಯಗಳನ್ನು ಕೊಡುತ್ತಿದ್ದಾರೆ, ಸಂಖ್ಯೆಯ ಕಾರಣ ನಿದ್ರೆ ಮಾಡುವ, ತಿನ್ನುವ ಕಷ್ಟವು ಇದ್ದರೂ ಸಹ ಎಲ್ಲರೂ ಸ್ನೇಹದಿಂದ ಬಂದಿದ್ದೀರಿ ಸ್ನೇಹದ ವಿಮಾನ ತಮ್ಮೆಲ್ಲರನ್ನು ಮಧುಬನಕ್ಕೆ ತಲುಪಿಸಿದೆ. ಬಾಪ್ದಾದಾ ಪ್ರತಿಯೊಬ್ಬರ ಸ್ನೇಹವನ್ನು ನೋಡಿ ಪ್ರತಿಯೊಬ್ಬರಿಗೆ ಪದಮಗುಣ ಹೃದಯದ ಸ್ನೇಹವನ್ನು ಕೊಡುತ್ತಿದ್ದಾರೆ ಆದರೆ ಸ್ನೇಹದಲ್ಲಿ ತಾವು ಏನು ಮಾಡುತ್ತೀರಿ? ಯಾರೊಂದಿಗಾದರೂ ಸ್ನೇಹ ಇರುತ್ತದಲ್ಲವೇ ಅವರಿಗೆ ಸ್ನೇಹದಲ್ಲಿ ಉಡುಗೊರೆಯನ್ನೂ ಸಹ ಕೊಡಲಾಗುತ್ತದೆ. ಅಂದಾಗ ಈ ದಿನ ಬಾಪ್ದಾದಾ ಈ ಕಾರಣ ಶಬ್ದವನ್ನು ತೆಗೆದುಕೊಳ್ಳಲು ಇಷ್ಟ ಪಡುತ್ತಾರೆ. ಈ ಆಸೆ ಬಾಪ್ದಾದಾರವರದ್ದು ಪೂರ್ಣ ಮಾಡಬೇಕಲ್ಲವೇ, ಮತ್ತೆ ಕೈ ಎತ್ತಿರಿ, ಇಲ್ಲೇ ಬಿಟ್ಟು ಹೋಗಬೇಕು. ಇಲ್ಲಿನ ಗೇಟ್ನಿಂದ ಹೊರಗೆ ಹೋದರೆ ಕಾರಣ ಶಬ್ದ ಸಮಾಪ್ತಿ ಆಗಲಿ. ಒಂದುವೇಳೆ ಬಂದರೂ ಸಹ ತಂದೆಗೆ ಕೊಟ್ಟಿರುವ ವಸ್ತು ಉಡುಗೊರೆಯಾಗಿದೆ. ಅಂದಾಗ ಉಡುಗೊರೆಯನ್ನು ಏನು ಮಾಡಲಾಗುತ್ತದೆ? ವಾಪಸ್ ಹಿಂತೆಗೆದುಕೊಳ್ಳಲಾಗುತ್ತದೇನು? ಎಲ್ಲರೂ ದೃಢ ಸಂಕಲ್ಪ ಮಾಡಿದ್ದೀರಾ? ಮಾಡಿದ್ದೀರಾ? ಮಾಡಿದ್ದೀರಾ? ಮತೆ ಕೈ ಎತ್ತಿರಿ. ಮತ್ತೆ ಕೈ ಎತ್ತಿದವರು ಕೈ ಅಲುಗಾಡಿಸಿ. ಒಳ್ಳೆಯದು. ಬಹಳ ಒಳ್ಳೆಯದು ಏಕೆಂದರೆ ಈಗ ಸಮಯದನುಸಾರ ತಮ್ಮ ಹತ್ತಿರ ಕ್ಯೂ ಇರುತ್ತದೆ. ಹೇ! ಮುಕ್ತಿ ದಾತ ಮುಕ್ತಿಯನ್ನು ಕೊಡಿ ಎಂದು ಬೇಡುತ್ತಾರೆ ಅಂದಾಗ ಕೊಡುವಂತಹ ಮುಕ್ತಿದಾತ ತಾವು ಮೊದಲು ಈ ಒಂದು ಶಬ್ದದಿಂದ ಮುಕ್ತರಾದಾಗ ಮುಕ್ತಿಯನ್ನು ಕೊಡಲು ಸಾಧ್ಯ.

ಈಗ ಈ ವರ್ಷದ ಹೋಂವರ್ಕ್ ಇದೇ ಇರಲಿ, ನಾನು ಮುಕ್ತನಾಗಿ ಮುಕ್ತಿಯನ್ನು ಕೊಡಿಸಬೇಕು ಎಂದು ಬಾಪ್ದಾದಾರವರು ಬಯಸುತ್ತಾರೆ ಏಕೆಂದರೆ ಸಮಸ್ಯೆಗಳು ದಿನ ಪ್ರತಿದಿನ ಬಹಳ ಹೆಚ್ಚಾಗುವುದಿದೆ. ಅಂದಾಗ ಸಮಸ್ಯೆ ಸಮಾಧಾನ ರೂಪದಲ್ಲಿ ಬದಲಾವಣೆ ಆಗಲಿ. ಪರಿಶ್ರಮ ಮತ್ತು ಸಮಯ ಸಮಸ್ಯೆಯನ್ನು ತೆಗೆಯುವುದರಲ್ಲಿ ತೊಡಗಿಸಬಾರದು. ತಮ್ಮ ಭಕ್ತರ ಹಾಗೂ ಸಮಯದ ಕೂಗು ಕೇಳುವುದಿಲ್ಲವೇನು? ಅಂದಾಗ ಈಗ ಸಮಯದನುಸಾರ ಏನು ಪರಿವರ್ತನೆ ಮಾಡಿಕೊಳ್ಳುವುದು ಅವಶ್ಯಕತೆ ಇದೆ? ಏಕೆಂದರೆ ಪ್ರತಿಯೊಬ್ಬರು ಅನುಭವಿಮೂರ್ತಿ ಆಗಿ ಏನಾದರೂ ಅನುಭವ ಮಾಡಿಸುವ ಅವಶ್ಯಕತೆ ಇದೆ. ಅಂದಾಗ ಬಾಬಾ ಈಗ ತಮ್ಮೆಲ್ಲರ ಚೆಹರೆ, ಚಲನೆ ಇವರು ಮುಕ್ತಿದಾತನ ಮಕ್ಕಳು ಮುಕ್ತಿಯನ್ನು ಕೊಡುವಂತಹರು - ಈ ರೀತಿ ಸ್ಪಷ್ಟವಾಗಿ ಕಂಡುಬರಲಿ. ತಮ್ಮ ಮಸ್ತಕದಿಂದ ಹೊಳೆಯುತ್ತಿರುವ ನಕ್ಷತ್ರದ ಅನುಭವ ಆಗಲಿ ಕೇವಲ ತಿಳಿಸುವುದರಿಂದ ಅಲ್ಲ ಆದರೆ ಚೆಹರೆಯಿಂದಲೇ ಅನುಭವ ಆಗಲಿ ಏಕೆಂದರೆ ಅನುಭವ ಹತ್ತಿರ ಕರೆದುಕೊಂಡು ಬರುತ್ತದೆ. ಅಂದಾಗ ಈ ಅನುಭವ ಚೆಹರೆ ಹಾಗೂ ಚಲನೆಯಿಂದ ತೋರಿಸಿ. ಹೇಗೆ ನೋಡಿ ವಿಜ್ಞಾನದ ಸಾಧನಗಳು ಅನುಭವ ಮಾಡಿಸುತ್ತದೆಯಲ್ಲವೇ. ಈ ಬೇಸಿಗೆ ಕಾಲ ಆಗಿದೆ ಅಂದಾಗ ಬಿಸಿಲು ಹಾಗೂ ಚಳಿಯ ಅನುಭವವನ್ನು ಮಾಡಿಸುತ್ತದೆಯಲ್ಲವೇ. ವಿಜ್ಞಾನದ ಸಾಧನಗಳು ಅನುಭವಿ ಮಾಡಿಸುತ್ತದೆ ಅಂದಾಗ ತಾವು ಶಾಂತಿಯ ಶಕ್ತಿಯ ಅನುಭವ ಮಾಡಿಸಲು ಸಾಧ್ಯವಿಲ್ಲವೇನು? ಅಂದಾಗ ಬಾಪ್ದಾದಾರವರು ಈಗ ಮಕ್ಕಳಿಂದ ಅನುಭವದ ಸ್ಥಿತಿಯಲ್ಲಿ ಸ್ಥಿತರಾಗಿ ನಯನಗಳಿಂದ, ಮಸ್ತಕದಿಂದ ಯಾವುದಾದರೂ ಶಕ್ತಿಯ ಅನುಭವ ಮಾಡಿಸಲಿ ಎಂದು ಬಯಸುತ್ತಾರೆ. ಕೇಳಿರುವ ಮಾತು ಕೇಳುವ ಸಮಯದಲ್ಲಿ ಚೆನ್ನಾಗಿ ಎನಿಸುತ್ತದೆ ಆದರೆ ಮತ್ತೆ ಯಾವುದಾದರೂ ಸಮಸ್ಯೆ ಬಂದಾಗ ಮರೆತೂ ಹೋಗುತ್ತದೆ. ಆದರೆ ಅನುಭವ ಜೀವನದ ಕೊನೆವರೆಗೂ ಮರೆಯುವುದಿಲ್ಲ.

ಬಾಪ್ದಾದಾರವರು ಒಂದು ಕಾರಣವನ್ನು ನೋಡಿದ್ದಾರೆ, ಫಲಿತಾಂಶವೂ ಸಹ ನೋಡಿದ್ದಾರೆ. ಒಂದು ಫಲಿತಾಂಶವನ್ನು ನೋಡಿ ಬಹಳ-ಬಹಳ ಶುಭಾಶಯಗಳನ್ನು ಕೊಟ್ಟಿದ್ದಾರೆ, ಯಾವ ಫಲಿತಾಂಶವಾಗಿದೆ? ಈ ದಿನದವರೆಗೆ ಸೇವೆಯ ಒಲವು-ಉತ್ಸಾಹ ಚೆನ್ನಾಗಿದೆ, ಅಂದಾಗ ಬಾಪ್ದಾದಾರವರು ಶುಭಾಶಯಗಳನ್ನೂ ಕೊಡುತ್ತಾರೆ, ಸೇವೆಯೂ ಸಹ ಹೆಚ್ಚಿಸುತ್ತಾರೆ ಮತ್ತು ಪ್ಲಾನ್ಗಳೂ ಸಹ ಚೆನ್ನಾಗಿ ಮಾಡುತ್ತಾರೆ, ಫಲಿತಾಂಶವೂ ಸಹ ಯಥಾ ಶಕ್ತಿ ಸಿಗುತ್ತದೆ ಆದರೆ ಒಂದು ಮಾತು ಅನುಭವ ಮಾಡಿಸಲು ತಮ್ಮಲ್ಲಿ ಅಟೆನ್ಷನ್ ಕೊಡಬೇಕಾಗುತ್ತದೆ. ಹೇಗೆ ಸೇವೆ ತಮ್ಮದು ಈಗ ಪ್ರಸಿದ್ಧ ಆಗುತ್ತಾ ಹೋಗುತ್ತದೆ, ಖುಷಿಯೂ ಸಹ ಆಗುತ್ತದೆ ಮತ್ತು ಈಗಿನ ಸಮಯದಲ್ಲಿ ಆಸಕ್ತಿಯೂ ಸಹ ಹೆಚ್ಚುತ್ತಿರುತ್ತದೆ ಈಗ ಬಾಕಿ ಅನುಭವ ಮಾಡಿಸುವ ವಿಧಿ ಏನಾಗಿದೆ? ಒಲವು-ಉತ್ಸಾಹದ ಜೊತೆ ಎಷ್ಟು ಉಮ್ಮಂಗ ಇದೆಯೋ ಅಷ್ಟೇ ಈಗ ಬೇಹದ್ದಿನ ವೈರಾಗ್ಯ ವೃತ್ತಿಯೂ ಸಹ ಬೇಕು. ಪುರುಷಾರ್ಥದಲ್ಲಿ ಕೆಲವರು ಸಮಸ್ಯಾರೂಪ ಆಗುತ್ತಾರೆ, ಅಂದಾಗ ಅದರ ಕಾರಣ ಬೇಹದ್ದಿನ ವೈರಾಗ್ಯ ವೃತ್ತಿಯ ಕೊರತೆಯಾಗಿದೆ. ಈಗ ಬೇಹದ್ದಿನ ವೈರಾಗ್ಯ ಬೇಕಾಗಿದೆ. ಬೇಹದ್ದಿನ ವೈರಾಗ್ಯ ಸದಾ ಕಾಲ ನಡೆಯುತ್ತದೆ ಒಂದುವೇಳೆ ಸಮಯದಲ್ಲಿ ಆಗದಿದ್ದರೆ ಸಮಯ ನಂಬರ್ವನ್ ಆಗಿ ಬಿಡುತ್ತದೆ ಮತ್ತೆ ತಾವು ನಂಬರ್ ಟೂ ಆಗಿ ಬಿಡುತ್ತೀರಿ. ಸಮಯವೇ ನಿಮಗೆ ವೈರಾಗ್ಯವನ್ನು ತರಿಸಿದೆ, ಬೇಹದ್ದಿನ ವೈರಾಗ್ಯ ಸದಾಕಾಲ ಇರುತ್ತದೆ. ಒಂದು ಕಡೆ ಒಲವು-ಉತ್ಸಾಹ, ಖುಷಿ ಮತ್ತೆ ಇನ್ನೊಂದು ಕಡೆ ಬೇಹದ್ದಿನ ವೈರಾಗ್ಯ, ಬೇಹದ್ದಿನ ವೈರಾಗ್ಯ ಸದಾ ಇಲ್ಲದೆ ಇರಲು ಕಾರಣ ಏನು? ಇದಕ್ಕೆ ಕಾರಣ ದೇಹಾಭಿಮಾನವನ್ನು ಬಾಪ್ದಾದಾರವರು ನೋಡಿದ್ದಾರೆ. ದೇಹ ಎನ್ನುವ ಶಬ್ದ ಎಲ್ಲಾ ಕಡೆ ಬರುತ್ತದೆ - ಹೇಗೆ ದೇಹದ ಸಂಬಂಧ, ದೇಹದ ಪದಾರ್ಥ, ದೇಹದ ಸಂಸ್ಕಾರ, ದೇಹದ ಶಬ್ದ ಎಲ್ಲದರಲ್ಲಿ ಬರುತ್ತದೆ ಮತ್ತು ವಿಶೇಷವಾಗಿ ದೇಹಾಭಿಮಾನ ಯಾವ ವಿಷಯದಲ್ಲಿ ಬರುತ್ತದೆ? ದೇಹಿ-ಅಭಿಮಾನಿಯಿಂದ ದೇಹಾಭಿಮಾನದಲ್ಲಿ ಕರೆದುಕೊಂಡು ಬರುತ್ತದೆ. ಅದು ಇದುವರೆಗೆ ಬಾಪ್ದಾದಾರವರು ಚೆಕ್ ಮಾಡಿದ್ದಾರೆ - ಮೂಲ ಕಾರಣ ಹಳೆಯ ಸಂಸ್ಕಾರ ಕೆಳಗೆ ಕರೆದುಕೊಂಡು ಬರುತ್ತದೆ. ಸಂಸ್ಕಾರವನ್ನು ಅಳಿಸಿದ್ದೀರಿ ಆದರೆ ಯಾವುದಾದರೂ ಸಂಸ್ಕಾರ ಸ್ವಭಾವದ ರೂಪದಲ್ಲಿ ಈಗಲೂ ಸಹ ಕೆಲಸ ಮಾಡಿ ಬಿಡುತ್ತದೆ. ಹೇಗೆ ದೇಹಾಭಿಮಾನದ ಸ್ವಭಾವ ಸ್ವಾಭಾವಿಕವಾಗಿದೆ ಅದೇ ರೀತಿ ದೇಹಿ-ಅಭಿಮಾನದ ಸ್ವಭಾವ ಸ್ವಾಭಾವಿಕ ಆಗಿಲ್ಲ. ಹೇಳುತ್ತಾರೆ ನಾವು ಸಮಾಪ್ತಿ ಮಾಡಿದ್ದೇವೆ ಎಂದು ಆದರೆ ಬೀಜವನ್ನು ಪೂರ್ತಿ ಸಮಾಪ್ತಿ ಮಾಡಿಲ್ಲ ಆದ್ದರಿಂದ ಸಮಯ ಬಂದಾಗ ಮತ್ತೆ ದೇಹಬಾನದ ಸಂಸ್ಕಾರ ಇಮರ್ಜ್ ಆಗಿ ಬಿಡುತ್ತದೆ ಅಂದಾಗ ಈಗ ಈ ದೇಹಭಾನದ ಸಂಸ್ಕಾರವನ್ನು ಶಕ್ತಿಶಾಲಿ ಆತ್ಮಾಭಿಮಾನಿಯ ಶಕ್ತಿಯಿಂದ ವಂಶ ಸಹಿತ ನಾಶ ಮಾಡುವ ಶಕ್ತಿಯ ಅವಶ್ಯಕತೆ ಇದೆ ಏಕೆಂದರೆ ಬಯಸುವುದಿಲ್ಲ ಆದರೆ ಕೆಲವೊಮ್ಮೆ ಹೊರ ಬರುತ್ತದೆ ಎಂದು ಮಕ್ಕಳು ಹೇಳುತ್ತಾರೆ. ಏಕೆ ಹೊರ ಬರುತ್ತದೆ? ಅಂಶವಿದ್ದರೆ ವಂಶವಾಗಿ ಹೊರ ಬರುತ್ತದೆ. ಅಂದಾಗ ಈಗ ಶಕ್ತಿ ರೂಪ ಆಗುವ, ಶಕ್ತಿ ಸ್ವರೂಪ ಆಗುವ ಅವಶ್ಯಕತೆ ಇದೆ. ಯಾವುದಾದರೂ ಸ್ವರೂಪದಲ್ಲಿ ಅಂಶ ಮಾತ್ರವೂ ಸಹ ಹಳೆಯ ದೇಹಭಾನದ ಸಂಸ್ಕಾರ ಉಳಿದುಕೊಂಡಿಲ್ಲ ತಾನೇ? ಎಂದು ತಮ್ಮನ್ನು ತಾವು ಚೆಕ್ ಮಾಡಿಕೊಳ್ಳುವ ಅವಶ್ಯಕತೆ ಇದೆ. ಮತ್ತು ಅದು ಬೇಹದ್ದಿನ ವೈರಾಗ್ಯ ವೃತ್ತಿಯಿಂದ ಸಮಾಪ್ತಿ ಆಗುತ್ತದೆ. ಸೇವೆಯನ್ನು ನೋಡಿ ಬಾಪ್ದಾದಾರವರು ಖುಷಿ ಆಗುತ್ತಾರೆ ಆದರೆ ಈಗ ಹೇಗೆ ಸೇವೆಯ ನಶೆ, ಹೊಳಪು ಈಗ ಮನುಷ್ಯರಲ್ಲಿ ಕಂಡು ಬರುತ್ತದೆ, ಸೇವೆಯ ಅನುಭವ ಆಗುತ್ತದೆ, ಅದೇ ರೀತಿ ಬೇಹದ್ದಿನ ವೈರಾಗ್ಯ ವೃತ್ತಿಯ ಪ್ರಭಾವ ಆಗಲಿ ಎಂದು ಇದನ್ನೇ ತಂದೆಯು ಬಯಸುತ್ತಾರೆ ಏಕೆಂದರೆ ಇತ್ತೀಚಿಗೆ ಸೇವೆಯ ಮೂಲಕ ತಮ್ಮ ಪ್ರಶಂಸೆ ಹೆಚ್ಚುತ್ತದೆ, ತಮಗೆ ಪ್ರಕೃತಿ ದಾಸಿ ಆಗುತ್ತದೆ, ತಮಗೆ ಅನುಭವ ಮಾಡಿಸುತ್ತದೆ, ಸಾಧನಗಳು ಹೆಚ್ಚುತ್ತದೆ ಆದರೆ ಬೇಹದ್ದಿನ ವೈರಾಗ್ಯ ವೃತ್ತಿಯಿಂದ ಸಾಧನಗಳು ಮತ್ತು ಸಾಧನೆಯ ಬ್ಯಾಲೆನ್ಸ್ ಇರುತ್ತದೆ. ಹೇಗೆ ತಮಗೆ ಪ್ರವೃತ್ತಿಯಲ್ಲಿ ಇರುವವರಿಗೆ ಎಲ್ಲವನ್ನು ಮಾಡುತ್ತಾ ಕರ್ಮಯೋಗಿ ಕಮಲಪುಷ್ಪದ ಸಮಾನ ಇರಿ ಎಂದು ಉದಾಹರಣೆಯನ್ನು ಕೊಡುತ್ತಾರೆ, ಅದೇ ರೀತಿ ತಮ್ಮೆಲ್ಲರಿಗೂ ಸಹ ಸೇವೆ ಮಾಡುತ್ತಾ, ಸಾಧನಗಳು ಇದ್ದರೂ ಸಾಧನ ಹಾಗೂ ಸಾಧನೆಯ ಬ್ಯಾಲೆನ್ಸ್ ಇರುತ್ತದೆ, ಅಂದಾಗ ಈಗಿನ ಸಮಯದಲ್ಲಿ ಸೇವೆಯ ಜೊತೆ ಬೇಹದ್ದಿನ ವೈರಾಗ್ಯ ವೃತ್ತಿಯೂ ಸಹ ಅವಶ್ಯಕವಾಗಿದೆ. ಇವರು ವಿಶೇಷ ಆತ್ಮಗಳು ಎಂದು ನಡೆಯುತ್ತಾ, ಓಡಾಡುತ್ತಾಲೂ ಸಹ ಅನುಭವ ಆಗಲಿ. ಕೇವಲ ಯೋಗದಲ್ಲಿ ಕುಳಿತುಕೊಳ್ಳುವ ಸಮಯದಲ್ಲಿ ಅಲ್ಲ, ಭಾಷಣ ಮಾಡುವ ಸಮಯದಲ್ಲಿ ಅಲ್ಲ ಆದರೆ ನಡೆಯುತ್ತಾ-ಓಡಾಡುತ್ತಾ, ಶಾಂತಿ, ಶಕ್ತಿ, ಖುಷಿಯ ಅನುಭವ ಆಗಲಿ ಏಕೆಂದರೆ ಸಮಯ ಪ್ರತಿ ಸಮಯ ಈಗ ಸಮಯ ಬದಲಾವಣೆ ಆಗುತ್ತಾ ಹೋಗುತ್ತಿದೆ.

ಅಂದಾಗ ಬಾಪ್ದಾದಾರವರು ಸಮಯ ಪ್ರತಿ ಸಮಯ ಸೂಚನೆಯಂತೂ ಕೊಟ್ಟು ಬಿಟ್ಟಿದ್ದಾರೆ ಆದರೆ ಈ ದಿನ ವಿಶೇಷವಾಗಿ ಬಾಪ್ದಾದಾರವರು ಒಂದು ಬೇಹದ್ದಿನ ವೈರಾಗ್ಯದ ಕಡೆ ಸೂಚನೆ ನೀಡುತ್ತಿದ್ದಾರೆ, ಇದಕ್ಕಾಗಿ ಈಗ ತಮ್ಮನ್ನು ಚೆಕ್ ಮಾಡಿಕೊಂಡು ದೇಹೀ-ಅಭಿಮಾನಿ ಆಗಲು ಏನು ವಿಘ್ನ ಇದೆಯೋ ದೇಹಾಭಿಮಾನ, ಅನೇಕ ಪ್ರಕಾರದ ದೇಹಾಭಿಮಾನ ಅನುಭವ ಇದೆ, ಇದನ್ನು ಪರಿವರ್ತನೆ ಮಾಡಿಕೊಳ್ಳಿ, ಮತ್ತು ಇನ್ನೊಂದು ಬಹಳ ಸಮಯದ್ದೂ ಸಹ ತಮ್ಮದು ಯೋಚನೆ ಮಾಡಿ, ಬಹಳ ಸಮಯದ ಅಭ್ಯಾಸ ಬೇಕಾಗಿದೆ. ಬಹಳ ಸಮಯದ ಪುರುಷಾರ್ಥ, ಬಹಳ ಸಮಯದ ಪ್ರಾಲಬ್ಧ, ಈಗ ಒಂದುವೇಳೆ ಬಹಳ ಕಾಲದ ಅಟೆನ್ಷನ್ ಕಡಿಮೆ ಕೊಟ್ಟರೆ ಅಂತ್ಯಕಾಲದಲ್ಲಿ ಜಮಾ ಮಾಡಿಕೊಳ್ಳಲು ಸಾಧ್ಯವಿಲ್ಲ. ಟೂ ಲೇಟ್ನ ಬೋರ್ಡ್ ಹಾಕಲಾಗುತ್ತದೆ, ಆದ್ದರಿಂದ ಬಾಪ್ದಾದಾರವರು ಇಂದು ಇನ್ನೊಂದು ವರ್ಷಕ್ಕಾಗಿ ಹೋಂವರ್ಕ್ ಕೊಡುತ್ತಿದ್ದಾರೆ. ಈ ದೇಹಾಭಿಮಾನ ಎಲ್ಲಾ ಸಮಸ್ಯೆಗಳಿಗೆ ಕಾರಣ ಆಗುತ್ತದೆ. ಮತ್ತೆ ಮಕ್ಕಳು ರಮಣೀಕವಾಗಿದ್ದೀರಲ್ಲವೇ, ಅಂದಾಗ ತಂದೆಗೂ ಸಹ ಸಮಯದಲ್ಲಿ ನಾವು ಸರಿ ಆಗಿ ಬಿಡುತ್ತೇವೆ ಎಂದು ಧೈರ್ಯ ಕೊಡುತ್ತಾರೆ. ಸಮಯ ತಮ್ಮ ಟೀಚರ್ ಏನು? ಎಂದು ಬಾಪ್ದಾದಾರವರು ಕೇಳುತ್ತಾರೆ. ಸಮಯದಲ್ಲಿ ಸರಿ ಆಗಿ ಬಿಟ್ಟರೆ ತಮ್ಮ ಟೀಚರ್ ಯಾರಾಗಿದ್ದಾರೆ? ತಮ್ಮ ರಚನೆ, ಸಮಯ ತಮ್ಮ ಟೀಚರ್ ಏನು? ಇದು ಚೆನ್ನಾಗಿ ಅನಿಸುತ್ತದೇನು? ಆದ್ದರಿಂದ ಸಮಯವನ್ನು ತಾವು ಹತ್ತಿರ ತೆಗೆದುಕೊಂಡು ಬರಬೇಕು. ತಾವು ಸಮಯವನ್ನು ಹತ್ತಿರ ತೆಗೆದುಕೊಂಡು ಬರುವಂತಹವರು. ಸಮಯದಲ್ಲಿ ಇರುವಂತಹವರಲ್ಲ. ಸಮಯವನ್ನು ಟೀಚರನ್ನಾಗಿ ಮಾಡಿಕೊಳ್ಳಬೇಡಿ.

ಈ ದಿನ ಬಾಪ್ದಾದಾ ಪದೇ-ಪದೇ ಸ್ವಯಂನ್ನು ಚೆಕ್ ಮಾಡಿಕೊಳ್ಳಿ ಮತ್ತು ಪರಿವರ್ತನೆ ಮಾಡಿಕೊಳ್ಳಿ ಎಂದು ಪದೇ-ಪದೇ ಇದೇ ಸೂಚನೆ ಕೊಡುತ್ತಿದ್ದಾರೆ, ಬಹಳ ಕಾಲದ ಪರಿವರ್ತನೆ ಬಹಳ ಕಾಲದ ಅಧಿಕಾರಿಯನ್ನಾಗಿ ಮಾಡುತ್ತದೆ. ಅಂದಾಗ ಬಾಪ್ದಾದಾ ಭಲೆ ಇದುವರೆಗೆ ಎಂತಹದ್ದೇ ಪುರುಷಾರ್ಥ ಇರಲಿ ಆದರೆ ಕೊನೆಯ ನಂಬರ್ ಪುರುಷಾರ್ಥಿಯ ಮಗುವಿನ ಜೊತೆಯೂ ಸಹ ತಂದೆಯ ಸ್ನೇಹವಿದೆ. ಸ್ನೇಹವಿದೆ ಆಗ ತಂದೆಯವರಾಗಿದ್ದೀರಿ, ತಂದೆಯನ್ನು ತಿಳಿದುಕೊಂಡಿದ್ದೀರಿ, ನನ್ನ ಬಾಬಾ ಎಂದು ಹೇಳುತ್ತಾರೆ, ಆದ್ದರಿಂದ ಸಮಯದಲ್ಲಿ ಬಿಡಬೇಡಿ. ಸಮಯ ಬರುವುದೇ ಇಲ್ಲ, ಸಂಪೂರ್ಣತೆಯ ಸಮಯವನ್ನು ನಾವು ತೆಗೆದುಕೊಂಡು ಬರಬೇಕು. ಬಾಪ್ದಾದಾರವರ ವಿಶ್ವ ಪರಿವರ್ತನೆಯ ಕಾರ್ಯಕ್ಕೆ ತಾವೆಲ್ಲಾ ಜೊತೆಗಾರರಾಗಿದ್ದೀರಿ. ಒಂಟಿಯಾಗಿ ತಂದೆ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ, ಮಕ್ಕಳ ಜೊತೆ ಇದೆ. ತಂದೆಯಂತೂ ಹೇಳುತ್ತಾರೆ - ಮೊದಲು ಮಕ್ಕಳು, ಮುಂದೆ ಮಕ್ಕಳು ಅಂದಾಗ ಈಗ ಒಂದುವೇಳೆ ಇನ್ನೊಂದು ವರ್ಷದಲ್ಲಿ ಬರಲೇಬೇಕು ಎಂದರೆ ಈ ಹೋಂವರ್ಕ್ ಮಾಡಿ ಇಟ್ಟುಕೊಳ್ಳುತ್ತೀರಾ! ಮಾಡುತ್ತೀರಾ? ಹಾ, ಕೈ ಎತ್ತಿ. ಒಳ್ಳೆಯದು ಹಿಂದೆಯವರೂ ಸಹ ಕೈ ಎತ್ತುತ್ತಿದ್ದಾರೆ.

ನೋಡಿ ಈ ದಿನ ಸಂಖ್ಯೆ ಹೆಚ್ಚಾಗಿದೆ ಅಂದಾಗ ಬಾಪ್ದಾದಾರವರು ನೋಡಿದೆವು ಕೆಲವೊಂದೆಡೆ ನಿದ್ರೆ ಮಾಡಿದ್ದಾರೆ, ಹೇಗೆ ಲೈನ್ನಲ್ಲಿ ನಿಲ್ಲುತ್ತಾರೆ ಸುತ್ತಿಕೊಂಡು ನೋಡಿಕೊಂಡು ಬಾ ಎಂದು ಸೂಚನೆ ಕೊಟ್ಟಿದ್ದೆವು. ದೊಡ್ಡ ಲೈನಾದರೂ ಸರಿ ಮಧುಬನದಲ್ಲಂತೂ ಇದ್ದೇವೆ ಎಂದು ಎಲ್ಲರ ಮುಖದಲ್ಲಿ ಖುಷಿ ಇದೆ. ಆದರೆ ಈ ಖುಷಿ ಮಧುಬನದಲ್ಲೇ ಬಿಟ್ಟು ಹೋಗಬಾರದು, ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ಬಾಪ್ದಾದಾರವರು ವತನದಲ್ಲಿ ಕುಳಿತು ತಮ್ಮೆಲ್ಲರ ನಿದ್ರೆ ಮಾಡುವ, ಊಟ ತಿನ್ನುವ ಕ್ಯೂನ (ಸಾಲು) ಸ್ಥಿತಿಯನ್ನು ನೋಡಿದ್ದಾರೆ. ಈಗೀಗ ರಜಾಯಿಗಳು ಹೊತ್ತುಕೊಳ್ಳುವಷ್ಟು ಮಳೆ ಬಂದು ಬಿಡಲಿ ಎಂದು ಬಾಪ್ದಾದಾರವರಿಗೆ ಈ ರೀತಿ ಸಂಕಲ್ಪ ಬರುತ್ತದೆ. ಆದರೆ ಇದೂ ಸಹ ಮೌಜಿನ ಮೇಳವಾಗಿದೆ. ಎಲ್ಲೇ ಸಿಗಲಿ, ಹೇಗಾದರೂ ಸಿಗಲಿ ಎಲ್ಲರೂ ಮೆಜಾರಿಟಿ ಒಳ್ಳೆಯ ರೀತಿಯಲ್ಲಿ ಪಾಸ್ ಆಗಿರುವುದನ್ನು ಚೆನ್ನಾಗಿ ಬಾಪ್ದಾದಾರವರು ನೋಡಿದರು. ಚಪ್ಪಾಳೆ ಹೊಡೆಯಿರಿ ಆದರೆ ಈ ಹೋಂವರ್ಕ್ ಮರೆಯಬಾರದು. ಇದರಲ್ಲಿ ಚಪ್ಪಾಳೆ ಹೊಡೆಯುವುದಿಲ್ಲ. ಬಾಪ್ದಾದಾ ಮತ್ತು ವಿಶೇಷ ಬ್ರಹ್ಮಾ ತಂದೆ ಸದಾ ಮಕ್ಕಳಿಗೆ ಮಧುಬನದ ಶೃಂಗಾರ ಎಂದು ಹೇಳುತ್ತಾರೆ ಅಂದಾಗ ತಾವೆಲ್ಲರೂ ಮಧುಬನದಲ್ಲಿ ಬಂದಿದ್ದೀರಿ. ಬಾಪ್ದಾದಾರವರೂ ಸಹ ಸಾಕಾರ ರೂಪದಿಂದ ಇಷ್ಟು ಪರಿವಾರವನ್ನು ನೋಡಿ ಖುಷಿ ಆಗುತ್ತಾರೆ. ಸಹನೆ ಮಾಡಿಕೊಳ್ಳಬೇಕಾಗಿತ್ತು ಆದರೆ ಈ ಸಹನೆ ಸದಾ ಕಾಲಕ್ಕಾಗಿ ಸಹನ ಶಕ್ತಿಯನ್ನು ಹೆಚ್ಚಿಸುತ್ತದೆ, ಎಲ್ಲರೂ ಖುಷಿಯಾಗಿದ್ದೀರಲ್ಲವೇ. ಕಷ್ಟ ಆಗಲಿಲ್ಲ ತಾನೇ? ಮತ್ತೆ ನೋಡಿ ಇಷ್ಟೊಂದು ಪರಿವಾರದಲ್ಲಿ ನೀರೂ ಸಿಗುತ್ತಿತ್ತು, ಎಲ್ಲರು ನೀರನ್ನು ಉಪಯೋಗಿಸಿದ್ದೀರಲ್ಲವೇ, ಸ್ವಲ್ಪ ಕಡಿಮೆ ಆದರೆ ಗಮನ ಇಟ್ಟುಕೊಳ್ಳಬೇಕಾಗುತ್ತದೆ ಆದರೆ ಈಗಿನ ಸಮಯದಲ್ಲಿ ಹಳ್ಳಿಯಲ್ಲಿ ಕುಡಿಯುವ ನೀರೂ ಸಹ ಸಿಗುವುದಿಲ್ಲ, ಇಲ್ಲಂತೂ ತಮಗೆ ಬಟ್ಟೆ ಒಗೆಯುವಷ್ಟು ನೀರು ಸಿಕ್ಕಿದೆ ಮತ್ತು ಇಷ್ಟು ದೊಡ್ಡ ಪರಿವಾರವನ್ನು ನೋಡಿ ಖುಷಿಯೂ ಆಗುತ್ತದೆ. ಪೂರ್ತಿ ಕಲ್ಪದಲ್ಲಿ ಬಾಪ್ದಾದಾರವರಿಗೆ ಇಷ್ಟು ದೊಡ್ಡ ಪರಿವಾರ ಯಾರಿಗೂ ಇಲ್ಲ ಎಂದು ಈ ನಶೆ ಇದೆ.

ಬಾಪ್ದಾದಾರವರು ಟೀಚರ್ಸ್ಗೆ ಒಂದು ವಿಶೇಷ ಸೇವೆಯನ್ನು ಏನು ಹೋಂವರ್ಕ್ ಮಾಡಬೇಕು ಎಂಬುದನ್ನು ನೆನಪಿಗೆ ತರಿಸುತ್ತಿದ್ದಾರೆ. ಸದಾ ಟೀಚರ್ ತಮ್ಮನ್ನು ಬಾಪ್ದಾದಾರವರ ಸತ್ಯ ಜೊತೆಗಾರ, ಸಮೀಪದ ಜೊತೆಗಾರ ತಮ್ಮ ಮೂಲಕ ತಂದೆಯನ್ನು ಪ್ರತ್ಯಕ್ಷ ಮಾಡುವವರು, ಯಾರೇ ನಿಮ್ಮನ್ನು ನೋಡಲಿ ಆದರೆ ಇವರನ್ನು ಮಾಡುವವರು ಯಾರು! ಇವರಿಗೂ ಸಹ ತಂದೆ, ಶಿಕ್ಷಕ, ಸದ್ಗುರು ಯಾರಾಗಿದ್ದಾರೆ! ನಿಮ್ಮನ್ನು ನೋಡಬಾರದು ತಂದೆಯನ್ನು ನೋಡಬೇಕು. ಇದು ಶಿಕ್ಷಕಿಯರ ಹೋಂವರ್ಕ್ ಆಗಿದೆ. ಇದೇ ಸ್ವಮಾನದಲ್ಲಿ 6-7 ತಿಂಗಳುಗಳು ಏನು ಸಿಗುವುದಿದೆ, ಈ ಹೋಂವರ್ಕ್ನ್ನು ಬಾಪ್ದಾದಾರವರು ಕೇಳುತ್ತಾರೆ. ಪ್ರತಿಯೊಬ್ಬರು ಎಷ್ಟು % ನಲ್ಲಿ ಮಾಡಿದ್ದೀರಿ? ಹೆಚ್ಚು ಸಮಾಚಾರ ಕೇಳುವುದಿಲ್ಲ, ಎಷ್ಟು % ಈ ಹೋಂವರ್ಕ್ನ್ನು ಮಾಡಿದ್ದೀರಾ? ತಾವು ಕಾಣಬಾರದು ತಂದೆ ಕಾಣಬೇಕು, ಇದರಲ್ಲಿ ಎಲ್ಲಾ ಧಾರಣೆಗಳು ಬಂದು ಬಿಡುತ್ತದೆ. ಮಧುಬನದವರಿಗೂ ಸಹ ನೆನಪು-ಪ್ರೀತಿಯನ್ನು ನೀಡುತ್ತಲೇ ಇದ್ದೇವೆ ಆದರೆ ಮಧುಬನದವರೂ ಸಹ ನಾಲ್ಕೂ ಕಡೆಯವರು ಮಧುಬನದ ಒಂದೊಂದು ರತ್ನ ವಿಶೇಷ ತಂದೆಯನ್ನು ಪ್ರತ್ಯಕ್ಷತೆ ಮಾಡಲು ನಿಮಿತ್ತರಾಗಿದ್ದಾರೆ ಎಂದು ತಿಳಿಯಲಿ. ಇಡೀ ಸಮಯ ಮಧುಬನದವರು ಈ ರೀತಿ ಮನಸಾ ಸೇವೆ, ಕರ್ಮಣಾ ಸೇವೆ ಮತ್ತು ಎಲ್ಲರನ್ನು ತಂದೆಯ ಸಮಾನ ಮಾಡುವಂತಹ ಉದಾಹರಣೆ ಆಗಿ ತೋರಿಸಲಿ. ಮಧುಬನದವರು ತಂದೆಯ ಸಮಾನ ಆಗುವ ಲಕ್ಷ್ಯವನ್ನು ತಮ್ಮಲ್ಲಿ ತೋರಿಸಿದ್ದೀರಾ? ಈ ಫಲಿತಾಂಶ ಕೊಡಬೇಕು. ಪ್ರತಿಯೊಬ್ಬರ ಮುಖದಿಂದ ವಾಹ್! ತಂದೆಯ ಮಕ್ಕಳೇ, ವಾಹ್! ಎಂದು ಬರಲಿ. ತಾವೆಲ್ಲರೂ ಏನು ಮಾಡುತ್ತೀರಿ? ತಾವೆಲ್ಲರೂ ತನ್ನನ್ನು ನಂಬರ್ವಾರ್ ಅಲ್ಲ ಆದರೆ ನಂಬರ್ವನ್ ಆಗುವ ಉದಾಹಾರಣೆ ಆಗಿ ತೋರಿಸಬೇಕು. ನಂಬರ್ವಾರ್ ಆಗುವುದರಲ್ಲಿ ಖುಷಿ ಇಲ್ಲ. ಆಗುವುದಾದರೆ ನಂಬರ್ವನ್ ಆಗಿ. ನಂಬರ್ವಾರ್ ಆಗುವುದು ಯಾವ ದೊಡ್ಡ ಮಾತಾಗಿದೆ! ಈಗ ಜಯ ಗಳಿಸಿ ಮತ್ತು ಮೊದಲು ಬರುವುದು - ಈ ಫಲಿತಾಂಶವನ್ನು ತಿಳಿಸಬೇಕು. ಒಳ್ಳೆಯದು.

ಎಲ್ಲಾ ಕಡೆಯಿಂದ ಬಾಪ್ದಾದಾರವರ ಹೃದಯ ಸಿಂಹಾಸನಾಧಿಕಾರಿಗಳು ಮತ್ತು ಭೃಕುಟಿಯ ಸಿಂಹಾಸನಾರೂಢರು ಮತ್ತು ಭವಿಷ್ಯದಲ್ಲಿ ರಾಜ್ಯ ಸಿಂಹಾಸನಾರೂಢರು, ಇಂತಹ ಬಾಪ್ದಾದಾರವರ ಬಹಳ ಪ್ರಿಯ, ಪದಮದಷ್ಟು ಭಾಗ್ಯಶಾಲಿ ಮಕ್ಕಳಿಗೆ ಸದಾ ತನ್ನ ನಯನದ ಮೂಲಕ ಆತ್ಮೀಯತೆಯ ಅನುಭವ ಮಾಡಿಸುವಂತಹ ಮತ್ತು ಚೆಹರೆಯ ಮೂಲಕ ಸದಾ ಖುಷಿಯ ಅದೃಷ್ಟ, ಮನಸ್ಸು ಸದಾ ಖುಷಿಯಲ್ಲಿ ನರ್ತನೆ ಮಾಡುತ್ತಿರಲಿ, ಯಾರೇ ಮುಂದೆ ಬರಲಿ, ಅನುಭವ ಮಾಡಲಿ, ಇವರಂತಹ ಖುಷಿ ಎಲ್ಲಿಯೂ ಇಲ್ಲ ಎಂದು ಖುಷಿಯಾಗಿರುವುದನ್ನು ಎಲ್ಲರೂ ಕಲಿತು ಹೋಗಲಿ. ಈ ರೀತಿ ಪ್ರತಿಯೊಬ್ಬ ತಂದೆಯ ಮಕ್ಕಳು ತಮ್ಮ ಮೂಲಕ ಮುಖದಿಂದ ತಂದೆಯ ಪರಿಚಯವನ್ನು ಕೊಡುತ್ತೀರಿ, ನಯನ ಮತ್ತು ಚೆಹರೆಯ ಮೂಲಕ ತಂದೆಯ ಸಾಕ್ಷಾತ್ಕಾರವನ್ನು ಮಾಡಿಸುವವರು, ಈ ರೀತಿ ನಾಲ್ಕೂ ಕಡೆ ಮಕ್ಕಳಿಗೆ ಯಾರೆಲ್ಲಾ ಪತ್ರವನ್ನು ಕಳುಹಿಸಿದ್ದಾರೆ, ಈ-ಮೇಲ್ ಮಾಡಿದ್ದಾರೆ, ಎಲ್ಲರದೂ ಬಾಪ್ದಾದಾರವರ ಬಳಿ ತಲುಪಿದೆ. ತಾವು ಮಾಡಿದಿರಿ, ಆ ಸಮಯವೇ ತಂದೆಯ ಬಳಿ ಅದು ತಲುಪಿ ಬಿಟ್ಟಿತು. ಎದುರಿನಲ್ಲಿ ಕುಳಿತಿರುವವರೊಂದಿಗೆ ತಾವು ಯಾವ ಸಮಯದಲ್ಲಿ ಮಾಡಿದ್ದೀರೋ ಆ ಸಮಯದಲ್ಲಿಯೇ ತಲುಪಿತು, ಆದ್ದರಿಂದ ಬಹಳ-ಬಹಳ ಶುಭಾಶಯಗಳು. ದೇಶ-ವಿದೇಶದ ಎಲ್ಲಾ ಮಕ್ಕಳಿಗೆ ತಂದೆ ಹೃದಯದ, ಸ್ನೇಹದ ಪ್ರತ್ಯುತ್ತರವನ್ನು ನೀಡುತ್ತಿದ್ದೇವೆ. ನಾಲ್ಕೂ ಕಡೆಯ ಮಕ್ಕಳಿಗೆ ಬಾಪ್ದಾದಾ ಪದಮದಷ್ಟು ಹೃದಯದ ಪ್ರೀತಿ, ಹೃದಯದಿಂದ ಮುದ್ದು ಮಾಡುತ್ತಾ ಎಲ್ಲರಿಗೆ ನಮಸ್ತೆಯನ್ನು ತಿಳಿಸುತ್ತಿದ್ದಾರೆ.

ವರದಾನ:
ಕರ್ಮ ಮಾಡುತ್ತಿದ್ದರೂ ಕರ್ಮದ ಬಂಧನಗಳಿಂದ ಮುಕ್ತರಾಗಿರುವಂತಹ ಸಹಜಯೋಗಿ ಸ್ವತಹ ಯೋಗಿ ಭವ.

ಯಾರು ಮಹಾವೀರ ಮಕ್ಕಳಾಗಿದ್ದಾರೆಯೋ ಅವರನ್ನು ಸಾಕಾರಿ ಪ್ರಪಂಚದ ಯಾವುದೇ ಆಕರ್ಷಣೆಗಳು, ತನ್ನಕಡೆಗೆ ಆಕರ್ಷಿಸಲು ಸಾಧ್ಯವಾಗುವುದಿಲ್ಲ. ಅವರು ಸ್ವಯಂನ್ನು ಒಂದು ಸೆಕೆಂಡಿನಲ್ಲಿ ಭಿನ್ನ ಹಾಗೂ ತಂದೆಯ ಪ್ರಿಯರನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುವುದು.ಆದೇಶವು ಸಿಗುತ್ತಿದ್ದಂತೆಯೇ ಅಶರೀರಿ, ಆತ್ಮ-ಅಭಿಮಾನಿ, ಬಂಧನ-ಮುಕ್ತ, ಯೋಗ ಯುಕ್ತ ಸ್ಥಿತಿಯ ಅನುಭವ ಮಾಡುವವರೇ ಸಹಜಯೋಗಿ, ಸ್ವತಹ ಯೋಗಿ, ಸದಾ ಯೋಗಿ, ಕರ್ಮಯೋಗಿ ಮತ್ತು ಶ್ರೇಷ್ಠ ಯೋಗಿ ಆಗಿದ್ದಾರೆ. ಅವರು ಯಾವಾಗ ಬೇಕು, ಎಷ್ಟು ಸಮಯ ಬೇಕೋ, ಭಲೆ ತನ್ನ ಸಂಕಲ್ಪ-ಶ್ವಾಸವನ್ನೂ ಒಬ್ಬ ಪ್ರಾಣೇಶ್ವರ ತಂದೆಯ ನೆನಪಿನಲ್ಲಿ ಸ್ಥಿತಗೊಳಿಸಲು ಸಾಧ್ಯವಾಗುವುದು.

ಸ್ಲೋಗನ್:
ಏಕರಸ ಸ್ಥಿತಿಯ ಶ್ರೇಷ್ಠವಾದ ಆಸನದ ಮೇಲೆ ಕುಳಿತಿರುವುದೇ ತಪಸ್ವಿ ಆತ್ಮನ ಸಂಕೇತವಾಗಿದೆ.

ಅವ್ಯಕ್ತ ಸೂಚನೆ:- “ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”

ಈ ನಿಶ್ಚಯ ಅಥವಾ ಸ್ಮೃತಿ ಮತ್ತು ಸಮರ್ಥತೆಯಿಟ್ಟುಕೊಳ್ಳಿ ಅನೇಕ ಬಾರಿ ತಂದೆಯವರಾಗಿದ್ದೇವೆ ಅಥವಾ ಮಾಯಾಜೀತ್ರಾಗಿದ್ದೇವೆ, ಈಗ ಆಗುವುದರಲ್ಲಿ ಏನು ಕಷ್ಟವಿದೆ. ನಾನು ಶ್ರೇಷ್ಠ ಆತ್ಮ ವಿಜಯಿಯಾಗುವ ಪಾತ್ರವನ್ನು ಅನೇಕ ಬಾರಿ ಮಾಡಿದ್ದೇನೆ ಎನ್ನುವ ಸ್ಮೃತಿಯು ಸ್ಪಷ್ಟವಾಗಿಲ್ಲವೇ? ಒಂದುವೇಳೆ ಸ್ಮೃತಿ ಸ್ಪಷ್ಟವಿಲ್ಲವೆಂದರೆ ಇದರಿಂದ ಸಿದ್ಧವಾಗುತ್ತದೆ ತಂದೆಯ ಮುಂದೆ ಸ್ವಯಂನ್ನು ಸ್ಪಷ್ಟ ಮಾಡಿಕೊಂಡಿಲ್ಲ.