22.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೀವು ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಇದೆಲ್ಲವೂ ಹಳೆಯ ಪ್ರಪಂಚದ ಸಾಮಗ್ರಿಗಳಾಗಿವೆ, ಇದು ಸಮಾಪ್ತಿಯಾಗಲಿದೆ ಆದ್ದರಿಂದ ಈ ದುಃಖಧಾಮವನ್ನು ಬುದ್ಧಿಯಿಂದ ಮರೆತುಹೋಗಿ”

ಪ್ರಶ್ನೆ:
ಮನುಷ್ಯರು ತಂದೆಯ ಮೇಲೆ ಯಾವ ದೋಷವನ್ನು ಹೊರಿಸಿದ್ದಾರೆ ಆದರೆ ಆ ದೋಷವು ಯಾರದೂ ಅಲ್ಲ?

ಉತ್ತರ:
ಯಾವ ಇಷ್ಟು ದೊಡ್ಡ ವಿನಾಶವಾಗುತ್ತದೆಯೋ ಇದನ್ನು ಭಗವಂತನೇ ಮಾಡಿಸುತ್ತಾರೆ, ದುಃಖ-ಸುಖವನ್ನು ಅವರೇ ಕೊಡುತ್ತಾರೆಂದು ಮನುಷ್ಯರು ತಿಳಿಯುತ್ತಾರೆ, ಹೀಗೆ ತಿಳಿದು ತಂದೆಯ ಮೇಲೆ ಬಹಳ ದೊಡ್ಡ ದೋಷವನ್ನು ಹಾಕಿದ್ದಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಾನು ಸದಾ ಸುಖದಾತನಾಗಿದ್ದೇನೆ, ನಾನು ಯಾರಿಗೂ ದುಃಖವನ್ನು ಕೊಡಲು ಸಾಧ್ಯವಿಲ್ಲ. ಒಂದುವೇಳೆ ನಾನು ವಿನಾಶ ಮಾಡಿಸುವುದಾದರೆ ಎಲ್ಲಾ ಪಾಪವು ನನ್ನ ಮೇಲೆ ಬಂದುಬಿಡುವುದು. ವಿನಾಶವು ನಾಟಕದನುಸಾರ ಆಗುತ್ತದೆ, ನಾನು ಮಾಡಿಸುವುದಿಲ್ಲ.

ಗೀತೆ:
ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ..............

ಓಂ ಶಾಂತಿ.
ಮಕ್ಕಳಿಗೆ ಕಲಿಸಿಕೊಡುವುದಕ್ಕಾಗಿ ಕೆಲವು ಗೀತೆಗಳು ಬಹಳ ಸುಂದರವಾಗಿವೆ. ಗೀತೆಯ ಅರ್ಥವನ್ನು ತಿಳಿಸುವುದರಿಂದ ವಾಣಿಯು ಆರಂಭವಾಗುವುದು. ಮಕ್ಕಳ ಬುದ್ಧಿಯಲ್ಲಿದೆ- ನಾವು ಎಲ್ಲಾ ದಿನಗಳು ಯಾತ್ರೆಯಲ್ಲಿದ್ದೇವೆ. ರಾತ್ರಿಯ ಯಾತ್ರೆಯು ಮುಕ್ತಾಯವಾಗುತ್ತಿದೆ. ಭಕ್ತಿಮಾರ್ಗವೇ ರಾತ್ರಿಯ ಯಾತ್ರೆಯಾಗಿದೆ. ಅರ್ಧಕಲ್ಪ ರಾತ್ರಿಯ ಯಾತ್ರೆ ಮಾಡಿ ಇಳಿಯುತ್ತಾ ಬಂದಿದ್ದೀರಿ, ಈಗ ಹಗಲಿನ ಯಾತ್ರೆಯಲ್ಲಿ ಬಂದಿದ್ದೀರಿ. ಈ ಯಾತ್ರೆಯನ್ನು ಒಂದೇಬಾರಿ ಮಾಡುತ್ತೀರಿ. ನಿಮಗೆ ತಿಳಿದಿದೆ- ನೆನಪಿನ ಯಾತ್ರೆಯಿಂದ ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ನಂತರ ಸತೋಪ್ರಧಾನ, ಸತ್ಯಯುಗದ ಮಾಲೀಕರಾಗುತ್ತೇವೆ. ಸತೋಪ್ರಧಾನರಾಗುವುದರಿಂದ ಸತ್ಯಯುಗದ ಮಾಲೀಕರು, ತಮೋಪ್ರಧಾನರಾಗುವುದರಿಂದ ಕಲಿಯುಗದ ಮಾಲೀಕರಾಗುತ್ತೀರಿ. ಅದಕ್ಕೆ ಸ್ವರ್ಗವೆಂತಲೂ, ಇದಕ್ಕೆ ನರಕವೆಂತಲೂ ಹೇಳಲಾಗುತ್ತದೆ. ಈಗ ನೀವು ಮಕ್ಕಳು ತಂದೆಯನ್ನು ನೆನಪು ಮಾಡುತ್ತೀರಿ. ತಂದೆಯಿಂದ ಸುಖವೇ ಸಿಗುತ್ತದೆ ಮತ್ತೇನನ್ನೂ ಹೇಳಲು ಸಾಧ್ಯವಾಗದಿದ್ದರೂ ಅವರು ಕೇವಲ ಇದನ್ನು ನೆನಪಿಟ್ಟುಕೊಳ್ಳಿ- ಶಾಂತಿಧಾಮವು ನಾವಾತ್ಮಗಳ ಮನೆಯಾಗಿದೆ. ಸುಖಧಾಮವು ಸ್ವರ್ಗದ ರಾಜ್ಯಭಾಗ್ಯವಾಗಿದೆ ಮತ್ತು ಈಗ ಇದು ದುಃಖಧಾಮ, ರಾವಣರಾಜ್ಯವಾಗಿದೆ. ಈ ದುಃಖಧಾಮವನ್ನು ಮರೆತುಹೋಗಿ ಎಂದು ತಂದೆಯು ತಿಳಿಸುತ್ತಾರೆ. ಭಲೆ ಇಲ್ಲಿರುತ್ತೀರಿ ಆದರೆ ಇದು ಬುದ್ಧಿಯಲ್ಲಿರಲಿ- ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೇವೆಯೋ ಎಲ್ಲವೂ ರಾವಣರಾಜ್ಯವಾಗಿದೆ. ಈ ಶರೀರವನ್ನು ನೋಡುತ್ತೀರಿ, ಇದೆಲ್ಲವೂ ಸಹ ಹಳೆಯಪ್ರಪಂಚದ ಸಾಮಗ್ರಿಗಳಾಗಿವೆ. ಈ ಸಾಮಗ್ರಿಯೆಲ್ಲವೂ ರುದ್ರಜ್ಞಾನಯಜ್ಞದಲ್ಲಿ ಸ್ವಾಹಾ ಆಗುವುದಿದೆ, ಆ ಪತಿತ ಬ್ರಾಹ್ಮಣರು ಯಜ್ಞವನ್ನು ರಚಿಸಿದಾಗ ಅದರಲ್ಲಿ ಎಳ್ಳು, ತುಪ್ಪ, ಹರಳು ಮುಂತಾದ ಸಾಮಗ್ರಿಗಳನ್ನು ಸ್ವಾಹಾ ಮಾಡುತ್ತಾರೆ. ಇಲ್ಲಂತೂ ವಿನಾಶವಾಗಲಿದೆ. ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ. ಅವರ ನಂತರ ಬ್ರಹ್ಮಾ ಮತ್ತು ವಿಷ್ಣು. ಶಂಕರನ ಅಷ್ಟೊಂದು ಪಾತ್ರವಿಲ್ಲ. ವಿನಾಶವಂತೂ ಆಗಲೇಬೇಕಾಗಿದೆ. ಯಾರ ಮೇಲೆ ಯಾವುದೇ ಪಾಪವು ಬರುವುದಿಲ್ಲವೋ ಅವರಿಂದ ತಂದೆಯು ವಿನಾಶ ಮಾಡಿಸುತ್ತಾರೆ. ಒಂದುವೇಳೆ ಭಗವಂತನು ವಿನಾಶ ಮಾಡಿಸುತ್ತಾರೆಂದು ಹೇಳುವುದಾದರೆ ಅವರ ಮೇಲೆ ದೋಷವು ಬಂದುಬಿಡುತ್ತದೆ ಆದ್ದರಿಂದ ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ಇದು ಬೇಹದ್ದಿನ ನಾಟಕವಾಗಿದೆ ಯಾವುದನ್ನು ಯಾರೂ ತಿಳಿದುಕೊಂಡಿಲ್ಲ. ರಚಯಿತ ಮತ್ತು ರಚನೆಯನ್ನು ಯಾರೂ ತಿಳಿದುಕೊಂಡಿಲ್ಲ. ತಿಳಿದುಕೊಳ್ಳದಕಾರಣ ನಿರ್ಧನಿಕರಾಗಿಬಿಟ್ಟಿದ್ದಾರೆ. ದಣಿ (ಒಡೆಯ) ಯಾರೂ ಇಲ್ಲ. ಯಾರ ಮನೆಯಲ್ಲಾದರೂ ತಂದೆಯಿರುವುದಿಲ್ಲ ಮತ್ತು ಪರಸ್ಪರ ಹೊಡೆದಾಡುತ್ತಿದ್ದರೆ ನಿಮಗೆ ಯಾರೂ ದಣಿ-ದೋಣಿ ಇಲ್ಲವೆ ಎಂದು ಹೇಳುತ್ತಾರೆ. ಈಗಂತೂ ಕೋಟ್ಯಾಂತರ ಮನುಷ್ಯರಿದ್ದಾರೆ. ಇವರಿಗೆ ಯಾರೂ ದಣಿ-ದೋಣಿಯಿಲ್ಲ. ದೇಶ-ವಿದೇಶಗಳ ನಡುವೆ ಹೊಡೆದಾಡುತ್ತಿರುತ್ತಾರೆ, ಒಂದೇ ಮನೆಯಲ್ಲಿ ಮಕ್ಕಳು ತಂದೆಯ ಜೊತೆ, ಪುರುಷನು ಸ್ತ್ರೀಯ ಜೊತೆ ಜಗಳವಾಡುತ್ತಿರುತ್ತಾರೆ. ದುಃಖಧಾಮದಲ್ಲಿ ಅಶಾಂತಿಯೇ ಇದೆ. ಭಗವಂತ ತಂದೆಯು ಯಾವುದೇ ದುಃಖದ ಪ್ರಪಂಚವನ್ನು ರಚಿಸುತ್ತಾರೆಂದಲ್ಲ. ದುಃಖವನ್ನು ಕೊಡಲು ಸಾಧ್ಯವಿಲ್ಲ. ಅವರಿಗೆ ಸುಖದಾತನೆಂದು ಹೇಳಲಾಗುತ್ತದೆ ಅಂದಮೇಲೆ ದುಃಖವನ್ನೇಕೆ ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ- ನಾನು ನಿಮ್ಮನ್ನು ಬಹಳ ಸುಖಿಯನ್ನಾಗಿ ಮಾಡುತ್ತೇನೆ. ಮೊದಲನೆಯದಾಗಿ ತಮ್ಮನ್ನು ಆತ್ಮನೆಂದು ತಿಳಿಯಿರಿ, ಆತ್ಮವು ಅವಿನಾಶಿ ಶರೀರವು ವಿನಾಶಿಯಾಗಿದೆ. ನಾವಾತ್ಮಗಳಿರುವ ಸ್ಥಾನವು ಪರಮಧಾಮವಾಗಿದೆ ಅದನ್ನು ಶಾಂತಿಧಾಮವೆಂದೂ ಕರೆಯಲಾಗುತ್ತದೆ. ಈ ಶಬ್ಧವೂ ಸರಿಯಾಗಿದೆ. ಸ್ವರ್ಗಕ್ಕೆ ಪರಮಧಾಮವೆಂದು ಹೇಳಲಾಗುವುದಿಲ್ಲ. ಪರಮ ಎಂದರೆ ದೂರಕ್ಕಿಂತ ದೂರ ಇರುವುದೆಂದರ್ಥ. ಸ್ವರ್ಗವಂತೂ ಇಲ್ಲಿಯೇ ಆಗುತ್ತದೆ. ಮೂಲವತನವು ಅತಿದೂರವಿದೆ, ಎಲ್ಲಿ ನಾವಾತ್ಮಗಳಿರುತ್ತೇವೆ. ನೀವು ಸುಖ-ದುಃಖದ ಪಾತ್ರವನ್ನು ಅಭಿನಯಿಸುತ್ತೀರಿ. ಇಂತಹವರು ಸ್ವರ್ಗಸ್ಥರಾದರು ಎಂದು ಮನುಷ್ಯರು ಹೇಳುವ ಮಾತು ತಪ್ಪಾಗಿದೆ ಏಕೆಂದರೆ ಸ್ವರ್ಗವಂತೂ ಇಲ್ಲಿ ಇಲ್ಲವೇ ಇಲ್ಲ. ಇದು ಕಲಿಯುಗವಾಗಿದೆ. ಸಂಗಮದಲ್ಲಿ ನೀವು ಸಂಗಮಯುಗಿಯಾಗಿದ್ದೀರಿ. ಉಳಿದೆಲ್ಲರೂ ಕಲಿಯುಗಿಗಳಾಗಿದ್ದಾರೆ. ಒಂದೇ ಮನೆಯಲ್ಲಿ ತಂದೆಯು ಕಲಿಯುಗಿಯಾಗಿದ್ದರೆ, ಮಗನು ಸಂಗಮಯುಗಿಯಾಗಿರುತ್ತಾರೆ. ಸ್ತ್ರೀ ಸಂಗಮಯುಗಿಯಾಗಿದ್ದರೆ, ಪುರುಷನು ಕಲಿಯುಗಿಯಾಗಿರುತ್ತಾನೆ...... ಎಷ್ಟೊಂದು ಅಂತರವಾಗಿಬಿಡುತ್ತದೆ! ಸ್ತ್ರೀ ಜ್ಞಾನವನ್ನು ಪಡೆಯುತ್ತಾಳೆ, ಪುರುಷನು ಜ್ಞಾನಕ್ಕೆ ಬರಲಿಲ್ಲವೆಂದರೆ ಪರಸ್ಪರ ಸಹಯೋಗ ಕೊಡುವುದಿಲ್ಲ. ಮನೆಯಲ್ಲಿ ಕಿರಿಕಿರಿಯಾಗುತ್ತದೆ. ಸ್ತ್ರೀ ಹೂವಾಗುತ್ತಾಳೆ, ಪುರುಷನು ಮುಳ್ಳಿಗೆ ಮುಳ್ಳಾಗಿಯೇ ಉಳಿಯುತ್ತಾನೆ. ಒಂದೇ ಮನೆಯಲ್ಲಿ ನಾನು ಸಂಗಮಯುಗಿ ಪುರುಷೋತ್ತಮ ಪವಿತ್ರ ದೇವತೆಯಾಗುತ್ತಿದ್ದೇನೆಂದು ಮಗನು ತಿಳಿದುಕೊಂಡಿರುತ್ತಾನೆ ಆದರೆ ಅವರ ತಂದೆಯು ತಿಳಿಸುತ್ತಾರೆ, ವಿವಾಹ ಮಾಡಿಕೊಂಡು ನರಕವಾಸಿಯಾಗು. ಈಗ ಆತ್ಮಿಕ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಪವಿತ್ರರಾಗಿ. ಈಗಿನ ಪವಿತ್ರತೆಯು 21 ಜನ್ಮಗಳವರೆಗೆ ನಡೆಯುತ್ತದೆ. ಈ ರಾವಣರಾಜ್ಯವು ಸಮಾಪ್ತಿಯಾಗಲಿದೆ. ಯಾರೊಂದಿಗೆ ಶತ್ರುತ್ವವಿರುತ್ತದೆಯೋ ಅವರ ಪ್ರತಿಮೆಯನ್ನು ಮಾಡಿ ಸುಡುತ್ತಾರಲ್ಲವೆ. ಹೇಗೆ ರಾವಣನನ್ನೂ ಸುಡುತ್ತಾರೆ ಅಂದಮೇಲೆ ಶತ್ರುವಿನೊಂದಿಗೆ ಎಷ್ಟೊಂದು ತಿರಸ್ಕಾರವಿರಬೇಕು ಆದರೆ ರಾವಣ ಯಾರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಬಹಳಷ್ಟು ಖರ್ಚು ಮಾಡುತ್ತಾರೆ. ಮನುಷ್ಯರನ್ನು ಸುಡಲು ಇಷ್ಟೊಂದು ಖರ್ಚು ಮಾಡುವುದಿಲ್ಲ. ಸ್ವರ್ಗದಲ್ಲಿ ಇಂತಹ ಯಾವುದೇ ಮಾತಿರುವುದಿಲ್ಲ. ಅಲ್ಲಂತೂ ವಿದ್ಯುತ್ತಿಗೆ ಕೊಟ್ಟತಕ್ಷಣ ಸಮಾಪ್ತಿ. ಸಲ್ಲಿ ಸತ್ತವರ ಮಣ್ಣು ಕೆಲಸಕ್ಕೆ ಬರುತ್ತದೆ ಎಂಬ ವಿಚಾರವೇ ಇರುವುದಿಲ್ಲ. ಅಲ್ಲಿನ ರೀತಿ-ನೀತಿಗಳು ಈ ರೀತಿಯಿರುತ್ತವೆ ಅಲ್ಲಿ ಯಾವುದೇ ಕಷ್ಟ ಅಥವಾ ದಣಿವಿನ ಮಾತೇ ಇರುವುದಿಲ್ಲ. ಇಷ್ಟೊಂದು ಸುಖವಿರುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಪುರುಷೋತ್ತಮರಾಗಿ. ಈ ನೆನಪು ಮಾಡುವುದರಲ್ಲಿಯೇ ಯುದ್ಧವಾಗುತ್ತದೆ. ತಂದೆಯು ಮಕ್ಕಳಿಗೆ ಸದಾ ತಿಳಿಸುತ್ತಾರೆ- ಮಧುರ ಮಕ್ಕಳೇ, ತಮ್ಮ ಮೇಲೆ ಗಮನವೆಂಬ ಕಾವಲುಗಾರನನ್ನು ಇಡಿ. ಮಾಯೆಯು ಎಲ್ಲಿಯೂ ಕಿವಿ-ಮೂಗನ್ನು ತುಂಡು ಮಾಡದಿರಲಿ ಏಕೆಂದರೆ ಶತ್ರುವಲ್ಲವೆ. ನೀವು ತಂದೆಯನ್ನು ನೆನಪು ಮಾಡುತ್ತೀರಿ ಮತ್ತು ಮಾಯೆಯು ಬಿರುಗಾಳಿಯಲ್ಲಿ ಹಾರಿಸಿಬಿಡುತ್ತದೆ ಏಕೆಂದರೆ ತಂದೆಯು ತಿಳಿಸುತ್ತಾರೆ- ಪ್ರತಿಯೊಬ್ಬರೂ ಇಡೀ ದಿನದ ಚಾರ್ಟನ್ನು ಬರೆಯಬೇಕು- ತಂದೆಯನ್ನು ಎಷ್ಟು ನೆನಪು ಮಾಡಿದೆನು? ಎಲ್ಲಿಯಾದರೂ ಮನಸ್ಸು ಓಡಿತೆ? ಡೈರಿಯಲ್ಲಿ ನೋಟ್ ಮಾಡಿ, ಎಷ್ಟು ಸಮಯ ನೆನಪು ಮಾಡಿದೆನು? ತಮ್ಮ ಪರಿಶೀಲನೆ ಮಾಡಿಕೊಳ್ಳುತ್ತೀರೆಂದರೆ ಮಾಯೆಯೂ ನೋಡುತ್ತದೆ- ಇವರಂತೂ ಒಳ್ಳೆಯ ಶಕ್ತಿಶಾಲಿಗಳಾಗಿದ್ದಾರೆ, ತಮ್ಮ ಮೇಲೆ ಚೆನ್ನಾಗಿ ಗಮನವನ್ನಿಡುತ್ತಾರೆ. ಪೂರ್ಣ ಕಾವಲನ್ನು ಇಡಬೇಕಾಗಿದೆ. ಈಗ ನೀವು ಮಕ್ಕಳಿಗೆ ತಂದೆಯು ಬಂದು ಪರಿಚಯ ಕೊಡುತ್ತಾರೆ- ತಂದೆಯು ತಿಳಿಸುತ್ತಾರೆ- ಮಕ್ಕಳೇ, ಭಲೆ ಗೃಹಸ್ಥವನ್ನು ಸಂಭಾಲನೆ ಮಾಡಿ ಆದರೆ ಕೇವಲ ತಂದೆಯನ್ನು ನೆನಪು ಮಾಡಿ. ಇವರೇನು ಆ ಸನ್ಯಾಸಿಗಳ ತರಹ ಅಲ್ಲ. ಅವರಾದರೆ ಭಿಕ್ಷೆಯನ್ನಾದರೂ ಬೇಡುತ್ತಾರೆ, ಅದೂ ಸಹ ಕರ್ಮ ಮಾಡಿದಂತಾಯಿತಲ್ಲವೆ. ನೀವು ಅವರಿಗೂ ತಿಳಿಸಬಲ್ಲಿರಿ- ನೀವು ಹಠಯೋಗಿಯಾಗಿದ್ದೀರಿ, ರಾಜಯೋಗವನ್ನು ಕಲಿಸುವವರು ಒಬ್ಬರೇ ಭಗವಂತನಾಗಿದ್ದಾರೆ. ಈಗ ನೀವು ಮಕ್ಕಳು ಸಂಗಮದಲ್ಲಿದ್ದೀರಿ, ಈ ಸಂಗಮಯುಗವನ್ನೇ ನೆನಪು ಮಾಡಬೇಕಾಗಿದೆ. ನಾವೀಗ ಸಂಗಮಯುಗದಲ್ಲಿ ಸರ್ವೋತ್ತಮ ದೇವತೆಗಳಾಗುತ್ತೇವೆ, ನಾವು ಉತ್ತಮ ಪುರುಷರು ಅರ್ಥಾತ್ ಪೂಜ್ಯ ದೇವತೆಗಳಾಗಿದ್ದೆವು, ಈಗ ಕನಿಷ್ಠರಾಗಿಬಿಟ್ಟಿದ್ದೇವೆ. ಯಾವುದೇ ಪ್ರಯೋಜನಕ್ಕಿಲ್ಲ. ಈಗ ಹೇಗಿದ್ದವರು ಹೇಗಾಗುತ್ತೀರಿ! ಹೇಗೆ ಮನುಷ್ಯರು ಯಾವ ಸಮಯದಲ್ಲಿ ಓದುವರೋ ಅದೇ ಸಮಯದಲ್ಲಿ ಪದವಿಯು ಸಿಗುವುದಿಲ್ಲ. ಪರೀಕ್ಷೆಯು ಬರದಮೇಲೆ ಪದವಿಯ ಕಿರೀಟ ಸಿಗುತ್ತದೆ. ಹೋಗಿ ಸರ್ಕಾರಿ ನೌಕರಿಯಲ್ಲಿ ತೊಡಗುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ- ನಮಗೆ ಶ್ರೇಷ್ಠಾತಿಶ್ರೇಷ್ಠ ಭಗವಂತ ಓದಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಶ್ರೇಷ್ಠಾತಿಶ್ರೇಷ್ಠ ಪದವಿಯನ್ನೂ ಕೊಡುತ್ತಾರೆ. ಇದು ಗುರಿ-ಧ್ಯೇಯವಾಗಿದೆ. ಈಗ ತಂದೆಯು ಹೇಳುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ. ನಾನು ಹೇಗಿದ್ದೇನೆ, ಯಾರಾಗಿದ್ದೇನೆ ಎಂದೂ ತಿಳಿಸಿದ್ದೇನೆ. ಆತ್ಮರ ತಂದೆಯಾದ ನಾನು ಬಿಂದುವಾಗಿದ್ದೇನೆ. ನನ್ನಲ್ಲಿ ಸಂಪೂರ್ಣ ಜ್ಞಾನವಿದೆ. ನಿಮಗೂ ಸಹ ಮೊದಲು ನಾವಾತ್ಮರು ಬಿಂದುವಾಗಿದ್ದೇವೆ, ನಮ್ಮಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವು ನಿಗಧಿಯಾಗಿದೆ ಎಂಬ ಜ್ಞಾನವಿರಲಿಲ್ಲ. ಕ್ರೈಸ್ಟ್ ಪಾತ್ರವನ್ನಭಿನಯಿಸಿ ಹೋಗಿದ್ದಾರೆ, ಪುನಃ ಅವಶ್ಯವಾಗಿ ಬರುತ್ತಾರಲ್ಲವೆ. ಕ್ರೈಸ್ಟ್ ನ ಅನುಯಾಯಿಗಳೆಲ್ಲರೂ ಹೋಗುವರು, ಕ್ರೈಸ್ಟ್ ನ ಆತ್ಮವೂ ಸಹ ಈಗ ತಮೋಪ್ರಧಾನವಾಗಿರುವುದು. ಯಾರೆಲ್ಲಾ ಶ್ರೇಷ್ಠಾತಿಶ್ರೇಷ್ಠ ಧರ್ಮಸ್ಥಾಪಕರಿದ್ದಾರೆಯೋ ಅವರೀಗ ತಮೋಪ್ರಧಾನರಾಗಿದ್ದಾರೆ. ಇವರೂ (ಬ್ರಹ್ಮಾ) ಹೇಳುತ್ತಾರೆ- ನಾನು ಬಹಳ ಜನ್ಮಗಳ ಅಂತಿಮದಲ್ಲಿ ತಮೋಪ್ರಧಾನನಾದೆನು, ಈಗ ಮತ್ತೆ ಸತೋಪ್ರಧಾನನಾಗುತ್ತೇನೆ. ತತ್ತ್ವಂ.

ನೀವು ತಿಳಿದುಕೊಂಡಿದ್ದೀರಿ- ನಾವೀಗ ದೇವತೆಗಳಾಗುವುದಕ್ಕಾಗಿ ಬ್ರಾಹ್ಮಣರಾಗಿದ್ದೇವೆ. ವಿರಾಟರೂಪದ ಚಿತ್ರದ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ, ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಆತ್ಮವು ಮಧುರ ಮನೆಯಲ್ಲಿದ್ದಾಗ ಪವಿತ್ರವಾಗಿರುತ್ತೇವೆ. ಇಲ್ಲಿ ಬಂದು ಪತಿತನಾಗಿದೆ ಆದ್ದರಿಂದಲೇ ಹೇಳುತ್ತಾರೆ- ಹೇ ಪತಿತ-ಪಾವನ ಬಂದು ನಮ್ಮನ್ನು ಪವಿತ್ರರನ್ನಾಗಿ ಮಾಡಿ, ನಾವು ನಮ್ಮ ಮನೆ ಮುಕ್ತಿಧಾಮಕ್ಕೆ ಹೋಗಬೇಕು- ಇದು ಧಾರಣೆ ಮಾಡಿಕೊಳ್ಳುವ ಮಾತುಗಳಾಗಿವೆ. ಮುಕ್ತಿ-ಜೀವನ್ಮುಕ್ತಿಧಾಮ ಎಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಮುಕ್ತಿಧಾಮಕ್ಕೆ ಶಾಂತಿಧಾಮವೆಂದು ಹೇಳಲಾಗುತ್ತದೆ, ಜೀವನ್ಮುಕ್ತಿಧಾಮಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ಇಲ್ಲಿ ದುಃಖದ ಬಂಧನವಿದೆ, ಜೀವನ್ಮುಕ್ತಿಗೆ ಸುಖದ ಸಂಬಂಧವೆಂದು ಹೇಳುತ್ತದೆ. ಈಗ ದುಃಖದ ಬಂಧನವು ದೂರವಾಗಿಬಿಡುವುದು. ನಾವು ಶ್ರೇಷ್ಠಪದವಿಯನ್ನು ಪಡೆಯುವುದಕ್ಕಾಗಿ ಪುರುಷಾರ್ಥ ಮಾಡುತ್ತೇವೆ- ಇದು ನಶೆಯಿರಬೇಕು. ನಾವೀಗ ಶ್ರೀಮತದಂತೆ ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ಜಗದಂಬೆಯು ನಂಬರ್ವನ್ನಲ್ಲಿ ಹೋಗುತ್ತಾರೆ, ನಾವೂ ಸಹ ಅವರನ್ನು ಫಾಲೋ ಮಾಡುತ್ತೇವೆ. ಯಾವ ಮಕ್ಕಳು ಈಗ ಮಾತಾಪಿತರ ಹೃದಯವನ್ನೇರುವರೋ ಅವರೇ ಭವಿಷ್ಯದಲ್ಲಿ ಸಿಂಹಾಸನಾಧೀಶರಾಗುವರು. ಯಾರು ದಿನ-ರಾತ್ರಿ ಸೇವೆಯಲ್ಲಿ ಬ್ಯುಜಿûಯಾಗಿರುವರೋ ಅವರೇ ಹೃದಯವನ್ನೇರುತ್ತಾರೆ. ಎಲ್ಲರಿಗೆ ಸಂದೇಶ ಕೊಡಬೇಕು- ತಂದೆಯನ್ನು ನೆನಪು ಮಾಡಿ. ಒಂದುಪೈಸೆಯನ್ನೂ ಕೊಡಬೇಕಾಗಿಲ್ಲ. ಇವರು ರಾಖಿಯನ್ನು ಕಟ್ಟಲು ಬಂದರೆಂದರೆ ಏನಾದರೂ ಕೊಡಬೇಕಾಗುವುದೇನೋ ಎಂದು ಅವರು ತಿಳಿದುಕೊಳ್ಳುತ್ತಾರೆ. ಆದ್ದರಿಂದ ಹೇಳಿ, ನಮಗೆ ಮತ್ತೇನೂ ಬೇಕಾಗಿಲ್ಲ ಕೇವಲ 5 ವಿಕಾರಗಳ ದಾನ ಕೊಡಿ, ಈ ದಾನ ತೆಗೆದುಕೊಳ್ಳುವುದಕ್ಕಾಗಿ ನಾವು ಬಂದಿದ್ದೇವೆ ಆದ್ದರಿಂದ ಪವಿತ್ರತೆಯ ರಾಖಿಯನ್ನು ಕಟ್ಟುತ್ತೇವೆ. ತಂದೆಯನ್ನು ನೆನಪು ಮಾಡಿ, ಪವಿತ್ರರಾಗಿ ಆಗ ದೇವತೆಗಳಾಗುವಿರಿ ಬಾಕಿ ನಾವು ತಮ್ಮಿಂದ ಒಂದುಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ, ನಾವು ಆ ಬ್ರಾಹ್ಮಣರಲ್ಲ. ಕೇವಲ 5 ವಿಕಾರಗಳ ದಾನ ಕೊಟ್ಟರೆ ಗ್ರಹಣ ಬಿಟ್ಟುಹೋಗುವುದು, ಈಗ ಯಾವುದೇ ಕಲೆಯು ಉಳಿದುಕೊಂಡಿಲ್ಲ. ಎಲ್ಲರಮೇಲೆ ಗ್ರಹಣ ಹಿಡಿದಿದೆ, ನೀವು ಬ್ರಾಹ್ಮಣರಾಗಿದ್ದೀರಲ್ಲವೆ. ಎಲ್ಲಿಗೆ ಹೋದರೂ ಹೇಳಿರಿ- ದಾನ ಕೊಟ್ಟರೆ ಗ್ರಹಣ ಬಿಡುವುದು, ಪವಿತ್ರರಾಗಿರಿ, ವಿಕಾರದಲ್ಲಿ ಹೋಗಬೇಡಿ. ತಂದೆಯನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ ಮತ್ತು ನೀವು ಹೂವಾಗುತ್ತೀರಿ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತಾ ಬಂದಿದ್ದೀರಿ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ತಂದೆಯು ಬ್ರಹ್ಮಾರವರ ಮೂಲಕ ಸೂಚನೆ ನೀಡಿದ್ದಾರೆ. ಅವರು ಶ್ರೇಷ್ಠಾತಿಶ್ರೇಷ್ಠ ಭಗವಂತನಾಗಿದ್ದಾರೆ. ತಂದೆಗೆ ತನ್ನದೇ ಆದ ಶರೀರವಿಲ್ಲ. ಬ್ರಹ್ಮಾ-ವಿಷ್ಣು-ಶಂಕರನಿಗೆ ಶರೀರವಿದೆಯೇ? ಹೌದು ಸೂಕ್ಷ್ಮಶರೀರವಿದೆ ಎಂದು ನೀವು ಹೇಳುತ್ತೀರಿ ಆದರೆ ಸೂಕ್ಷ್ಮವತನವು ಮನುಷ್ಯಸೃಷ್ಟಿಯಂತೂ ಅಲ್ಲ, ಆಟವೆಲ್ಲವೂ ಇಲ್ಲಿಯೇ ನಡೆಯುತ್ತದೆ. ಸೂಕ್ಷ್ಮವತನದಲ್ಲಿ ನಾಟಕ ಹೇಗೆ ನಡೆಯುವುದು? ಮೂಲವತನದಲ್ಲಿಯೂ ಸೂರ್ಯ, ಚಂದ್ರರೇ ಇಲ್ಲವೆಂದಮೇಲೆ ನಾಟಕವೆಲ್ಲಿಯದು? ಈ ಸಾಕಾರ ಪ್ರಪಂಚವು ಬಹಳದೊಡ್ಡ ಮಂಟಪವಾಗಿದೆ, ಇಲ್ಲಿಯೇ ಪುನರ್ಜನ್ಮವಾಗುತ್ತದೆ, ಸೂಕ್ಷ್ಮವತನದಲ್ಲಿ ಅಲ್ಲ. ಈಗ ನಿಮ್ಮ ಬುದ್ಧಿಯಲ್ಲಿ ಇಡೀ ಬೇಹದ್ದಿನ ಆಟವಿದೆ. ಈಗ ತಿಳಿದಿದೆ- ನಾವು ದೇವಿ-ದೇವತೆಗಳು ಹೇಗೆ ವಾಮಮಾರ್ಗದಲ್ಲಿ ಬರುತ್ತೇವೆ. ವಾಮಮಾರ್ಗವೆಂದು ವಿಕಾರಿ ಮಾರ್ಗಕ್ಕೆ ಹೇಳಲಾಗುತ್ತದೆ. ಅರ್ಧಕಲ್ಪ ನಾವು ಪವಿತ್ರರಾಗಿದ್ದೆವು, ನಮ್ಮದೇ ಸೋಲು-ಗೆಲುವಿನ ಆಟವಾಗಿದೆ. ಭಾರತವು ಅವಿನಾಶಿ ಖಂಡವಾಗಿದೆ. ಇದೆಂದೂ ವಿನಾಶವಾಗುವುದಿಲ್ಲ. ಆದಿಸನಾತನ ದೇವಿ-ದೇವತಾಧರ್ಮವಿತ್ತು ಆಗ ಮತ್ತ್ಯಾವುದೇ ಧರ್ಮವಿರಲಿಲ್ಲ. ಯಾರು ಕಲ್ಪದ ಹಿಂದೆ ಈ ಮಾತುಗಳನ್ನು ಒಪ್ಪಿಕೊಂಡಿದ್ದರೋ ಅವರೇ ನಿಮ್ಮ ಈ ಮಾತುಗಳನ್ನು ಒಪ್ಪುವರು. 5000 ವರ್ಷಗಳಿಗಿಂತಲೂ ಹಳೆಯದಾದ ವಸ್ತು ಯಾವುದೂ ಇರುವುದಿಲ್ಲ. ಸತ್ಯಯುಗದಲ್ಲಿ ನೀವು ಮೊದಲು ಹೋಗಿ ತಮ್ಮ ಮಹಲುಗಳನ್ನು ತಯಾರು ಮಾಡುತ್ತೀರಿ. ಸಮುದ್ರದ ಕೆಳಗಡೆಯಿಂದ ಚಿನ್ನದ ದ್ವಾರಿಕೆಯು ಮೇಲೆದ್ದು ಬರುವುದಿಲ್ಲ. ಸಾಗರದಿಂದ ದೇವತೆಗಳು ರತ್ನಗಳ ತಟ್ಟೆಗಳನ್ನು ತುಂಬಿಕೊಡುತ್ತಿದ್ದರು ಎಂದು ತೋರಿಸುತ್ತಾರೆ. ವಾಸ್ತವದಲ್ಲಿ ಜ್ಞಾನಸಾಗರನು ತಂದೆಯಾಗಿದ್ದಾರೆ. ನೀವು ಮಕ್ಕಳಿಗೆ ಜ್ಞಾನರತ್ನಗಳ ತಟ್ಟೆಗಳನ್ನು ತುಂಬಿಕೊಡುತ್ತಿದ್ದಾರೆ. ಶಂಕರನು ಪಾರ್ವತಿಗೆ ಕಥೆಯನ್ನು ತಿಳಿಸದರೆಂದು ಹೇಳುತ್ತಾರೆ. ಜ್ಞಾನರತ್ನಗಳಿಂದ ಜೋಳಿಗೆ ತುಂಬಿದರು. ಶಂಕರನಿಗೆ ಹೇಳುತ್ತಾರೆ- ಭಂಗಿ ಸೇದುತ್ತಿದ್ದರು, ದತ್ತೂರಿ ಸೇವಿಸುತ್ತಿದ್ದರು ಎಂದು ಹೇಳುತ್ತಾರೆ ಮತ್ತೆ ಅವರಮುಂದೆ ಹೋಗಿ ನಮ್ಮ ಜೋಳಿಗೆಯನ್ನು ತುಂಬಿಸಿ ಹಣ ಕೊಡಿ ಎಂದು ಕೇಳುತ್ತಾರೆ. ನೋಡಿ, ಶಂಕರನಿಗೂ ಗ್ಲಾನಿ ಮಾಡಿಬಿಟ್ಟಿದ್ದಾರೆ. ಎಲ್ಲರಿಗಿಂತಲೂ ಹೆಚ್ಚು ಗ್ಲಾನಿ ನನಗೆ (ತಂದೆ) ಮಾಡುತ್ತಾರೆ. ಇದೂ ಆಟವಾಗಿದೆ, ಇದು ಪುನಃ ನಡೆಯುವುದು. ಈ ನಾಟಕವನ್ನು ಯಾರೂ ತಿಳಿದುಕೊಂಡಿಲ್ಲ. ನಾನು ಬಂದು ಆದಿಯಿಂದ ಅಂತ್ಯದವರೆಗೆ ಎಲ್ಲಾ ರಹಸ್ಯವನ್ನು ತಿಳಿಸುತ್ತೇನೆ. ಇದೂ ಗೊತ್ತಿದೆ- ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ, ವಿಷ್ಣುವಿನಿಂದ ಬ್ರಹ್ಮಾ, ಬ್ರಹ್ಮನಿಂದ ವಿಷ್ಣು ಹೇಗಾಗುತ್ತಾರೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ.

ನಾವು ವಿಷ್ಣುವಿನ ಕುಲದವರಾಗಬೇಕು ಎಂದು ನೀವು ಮಕ್ಕಳು ಪುರುಷಾರ್ಥ ಮಾಡುತ್ತೀರಿ. ಶ್ರೀಮತದನುಸಾರ ನಮಗಾಗಿ ಸೂರ್ಯವಂಶಿ-ಚಂದ್ರವಂಶಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ಯುದ್ಧದ ಮಾತಿಲ್ಲ. ದೇವತೆಗಳು ಮತ್ತು ಅಸುರರ ನಡುವೆ ಎಂದೂ ಯುದ್ಧವಾಗುವುದಿಲ್ಲ. ದೇವತೆಗಳು ಸತ್ಯಯುಗದಲ್ಲಿರುತ್ತಾರೆ. ಅಲ್ಲಿ ಯುದ್ಧವು ಹೇಗಾಗುವುದು? ನೀವು ಬ್ರಾಹ್ಮಣರು ಈಗ ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೀರಿ. ಬಾಹುಬಲದವರು ವಿನಾಶ ಹೊಂದುತ್ತಾರೆ. ನೀವು ಶಾಂತಿಯ ಬಲದಿಂದ ವಿಜ್ಞಾನದ ಮೇಲೆ ವಿಜಯಗಳಿಸುತ್ತೀರಿ. ನೀವೀಗ ಆತ್ಮಾಭಿಮಾನಿಗಳಾಗಬೇಕಾಗಿದೆ. ನಾವಾತ್ಮಗಳಾಗಿದ್ದೇವೆ, ನಾವು ನಮ್ಮ ಮನೆಗೆ ಹೋಗಬೇಕಾಗಿದೆ. ಆತ್ಮಗಳು ತೀಕ್ಷ್ಣವಾಗಿದ್ದಾರೆ. ಈಗ ಇಂತಹ ವಿಮಾನಗಳು ಬಂದಿವೆ, ಒಂದುಗಂಟೆಯ ಸಮಯದಲ್ಲಿ ಎಲ್ಲಿಂದ ಎಲ್ಲಿಗೋ ಹೋಗುತ್ತಾರೆ! ಆದರೆ ಆತ್ಮವಂತೂ ಅದಕ್ಕಿಂತಲೂ ತೀಕ್ಷ್ಣವಾಗಿದೆ. ಒಂದುಕ್ಷಣದಲ್ಲಿ ಎಲ್ಲಿಂದ ಎಲ್ಲಿಗೋ ಹೋಗಿ ಜನ್ಮ ತೆಗೆದುಕೊಳ್ಳುತ್ತದೆ. ಕೆಲವರು ವಿದೇಶದಲ್ಲಿಯೂ ಹೋಗಿ ಜನ್ಮ ಪಡೆಯುತ್ತಾರೆ. ಆತ್ಮವು ಎಲ್ಲದಕ್ಕಿಂತ ತೀಕ್ಷ್ಣ ರಾಕೇಟ್ ಆಗಿದೆ, ಇದರಲ್ಲಿ ಯಾವುದೇ ಯಾಂತ್ರಿಕತೆಯ ಮಾತಿಲ್ಲ. ಶರೀರವನ್ನು ಬಿಟ್ಟತಕ್ಷಣ ಹೊರಟುಹೋಗುತ್ತದೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ- ಮನೆಗೆ ಹೋಗಬೇಕಾಗಿದೆ. ಪತಿತ ಆತ್ಮರು ಹೋಗಲು ಸಾಧ್ಯವಿಲ್ಲ. ನೀವು ಪಾವನರಾಗಿಯೇ ಹೋಗುತ್ತೀರಿ. ಉಳಿದವರು ಶಿಕ್ಷೆಯನ್ನನುಭವಿಸಿ ಹೋಗುತ್ತಾರೆ. ಬಹಳಷ್ಟು ಶಿಕ್ಷೆಯು ಸಿಗುವುದು. ಸತ್ಯಯುಗದಲ್ಲಿ ಗರ್ಭಮಹಲಿನಲ್ಲಿ ಆರಾಮವಾಗಿರುತ್ತಾರೆ. ಮಕ್ಕಳು ಸಾಕ್ಷಾತ್ಕಾರ ಮಾಡಿದ್ದೀರಿ- ಕೃಷ್ಣನ ಜನ್ಮವು ಹೇಗಾಗುತ್ತದೆ. ಯಾವುದೇ ಕೊಳಕಿನ ಮಾತಿರುವುದಿಲ್ಲ. ಒಮ್ಮೆಲೆ ಕೃಷ್ಣನ ಜನ್ಮವಾಗುತ್ತಿದ್ದಂತೆ ಎಲ್ಲವೂ ಮಿಂಚುತ್ತದೆ. ನೀವೀಗ ವೈಕುಂಠದ ಮಾಲೀಕರಾಗುತ್ತೀರಿ ಅಂದಮೇಲೆ ಇಂತಹ ಪುರುಷಾರ್ಥ ಮಾಡಬೇಕು- ಶುದ್ಧ ಪವಿತ್ರ ಆಹಾರ-ಪಾನೀಯಗಳಿರಬೇಕು. ಏನಿಲ್ಲದಿದ್ದರೂ ರೊಟ್ಟಿ-ಪಲ್ಯವು ಎಲ್ಲದಕ್ಕಿಂತ ಒಳ್ಳೆಯದಾಗಿದೆ. ಋಷಿಕೇಶದಲ್ಲಿ ಸನ್ಯಾಸಿಯೊಬ್ಬರು ಕಿಟಕಿಯಿಂದ ತೆಗೆದುಕೊಂಡು ಹೊರಟುಹೋಗುತ್ತಿದ್ದರು. ಹಾ! ಕೆಲಕೆಲವರು ಕೆಲವೊಂದು ರೀತಿಯಲ್ಲಿರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಮೇಲೆ ಗಮನವೆಂಬ ಸಂಪೂರ್ಣ ಕಾವಲಿಡಬೇಕಾಗಿದೆ. ಮಾಯೆಯಿಂದ ತನ್ನನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ನೆನಪಿನ ಸತ್ಯ-ಸತ್ಯವಾದ ಚಾರ್ಟ್ ಇಡಬೇಕಾಗಿದೆ.

2. ಮಾತಾಪಿತರನ್ನು ಅನುಸರಿಸಿ ಹೃದಯ ಸಿಂಹಾಸನಾಧಾರಿಗಳಾಗಬೇಕು. ಹಗಲು-ರಾತ್ರಿ ಸೇವೆಯಲ್ಲಿ ತತ್ಫರರಾಗಿರಬೇಕಾಗಿದೆ. ಎಲ್ಲರಿಗೆ ಸಂದೇಶವನ್ನು ಕೊಡಬೇಕು- ತಂದೆಯನ್ನು ನೆನಪು ಮಾಡಿ. ಪಂಚವಿಕಾರಗಳ ದಾನಕೊಟ್ಟರೆ ಗ್ರಹಣವು ಬಿಡುವುದು.

ವರದಾನ:
ಸೆನ್ಸ್ ಮತ್ತು ಎಸೆನ್ಸ್ ನ ಬ್ಯಾಲೆನ್ಸ್ ಮೂಲಕ ತನ್ನ ತನವನ್ನು ಸ್ವಾಹ ಮಾಡುವಂತಹ ವಿಶ್ವ ಪರಿವರ್ತಕ ಭವ

ಸೆನ್ಸ್ ಅರ್ಥಾತ್ ಜ್ಞಾನದ ಪಾಯಿಂಟ್ಸ್, ತಿಳುವಳಿಕೆ ಮತ್ತು ಎಸೆನ್ಸ್ ಅರ್ಥಾತ್ ಸರ್ವ ಶಕ್ತಿ ಸ್ವರೂಪ ಮತ್ತು ಸಮರ್ಥ ಸ್ವರೂಪ. ಈ ಎರಡರ ಬ್ಯಾಲೆನ್ಸ್ ಇದ್ದಾಗ ತನ್ನ ತನ ಅಥವಾ ಹಳೆಯ ತನ ಸ್ವಾಹಾ ಆಗಿಬಿಡುತ್ತದೆ. ಪ್ರತಿ ಸೆಕೆಂಡ್, ಪ್ರತಿ ಸಂಕಲ್ಪ, ಪ್ರತಿ ಮಾತು ಮತ್ತು ಪ್ರತಿ ಕರ್ಮ ವಿಶ್ವ ಪರಿವರ್ತನೆಯ ಸೇವೆಯ ಪ್ರತಿ ಸ್ವಾಹಾ ಅಗುವುದರಿಂದ ವಿಶ್ವ ಪರಿವರ್ತಕ ಸ್ವತಃವಾಗಿ ಆಗಿಬಿಡುವಿರಿ. ಯಾರು ತಮ್ಮ ದೇಹದ ಸ್ಥಿತಿ ಸಹಿತ ಸ್ವಾಹ ಆಗುತ್ತಾರೆ ಅವರ ಶ್ರೇಷ್ಠ ವೈಬ್ರೇಷನ್ ಮೂಲಕ ವಾಯುಮಂಡಲದ ಪರಿವರ್ತನೆ ಸಹಜವಾಗಿ ಆಗುತ್ತದೆ.

ಸ್ಲೋಗನ್:
ಪ್ರಾಪ್ತಿಗಳನ್ನು ನೆನಪು ಮಾಡಿಕೊಂಡಾಗ ದುಃಖ ಹಾಗೂ ಚಿಂತೆಯ ಮಾತುಗಳು ಮರೆತುಹೋಗುವುದು.


ಅವ್ಯಕ್ತ ಸೂಚನೆ: ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.

ಶ್ರೇಷ್ಠ ಕರ್ಮಗಳ ಫೌಂಡೇಷನ್ವಾಗಿದೆ “ಪವಿತ್ರತೆ”. ಆದರೆ ಪವಿತ್ರತೆ ಕೇವಲ ಬ್ರಹ್ಮಚರ್ಯವಲ್ಲ. ಇದು ಸಹ ಶ್ರೇಷ್ಠವಾಗಿದೆ ಆದರೆ ಮನಸಾ ಸಂಕಲ್ಪದಲ್ಲಿಯೂ ಒಂದುವೇಳೆ ಯಾವುದೇ ಆತ್ಮನ ಪ್ರತಿ ವಿಶೇಷ ಆಕರ್ಷಣೆ ಅಥವಾ ಸೆಳೆತವಿದ್ದರೆ, ಯಾವುದೇ ಆತ್ಮನ ವಿಶೇಷತೆಯ ಮೇಲೆ ಪ್ರಭಾವಿತವಾದರೆ ಅಥವಾ ಅವರ ಪ್ರತಿ ನಕಾರಾತ್ಮಕ ಸಂಕಲ್ಪ ನಡೆದರೆ, ಮರ್ಯಾದೆಪೂರ್ವಕವಿರದೇ ಇರುವಂತಹ ಮಾತು ಅಥವಾ ಶಬ್ದ ಬಂದರೆ, ಅದನ್ನು ಪವಿತ್ರತೆ ಎಂದು ಹೇಳಲಾಗುವುದಿಲ್ಲ.