22.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಚಾರಿಟಿ ಬಿಗಿನ್ಸ್ ಅಟ್ ಹೋಮ್ (ದಾನವು ಮನೆಯಿಂದಲೇ ಆರಂಭವಾಗುವುದು) ಅರ್ಥಾತ್ ಯಾರು ದೇವಿ-ದೇವತಾ ಧರ್ಮದವರಾಗಿದ್ದಾರೆಯೋ, ಯಾರು ಶಿವನ ಅಥವಾ ದೇವತೆಗಳ ಪೂಜಾರಿಗಳಿದ್ದಾರೆಯೊ ಅವರಿಗೆ ಮೊದಲು ಜ್ಞಾನವನ್ನು ಕೊಡಿ”

ಪ್ರಶ್ನೆ:
ತಂದೆಯ ಯಾವ ಕರ್ತವ್ಯವನ್ನು ಮನುಷ್ಯರು ಮಾಡಲು ಸಾಧ್ಯವಿಲ್ಲ ಏಕೆ?

ಉತ್ತರ:
ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪನೆಯ ಕರ್ತವ್ಯವನ್ನು ತಂದೆಯೊಬ್ಬರೇ ಮಾಡುವರು. ಮನುಷ್ಯರು ವಿಶ್ವದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ ಏಕೆಂದರೆ ಎಲ್ಲರೂ ವಿಕಾರಿಗಳಾಗಿದ್ದಾರೆ. ಒಬ್ಬ ತಂದೆಯನ್ನು ತಿಳಿದುಕೊಂಡು ಪವಿತ್ರರಾಗುವುದರಿಂದ ಶಾಂತಿ ಸ್ಥಾಪನೆಯಾಗುತ್ತದೆ. ತಂದೆಯನ್ನು ತಿಳಿಯದ ಕಾರಣ ಎಲ್ಲರೂ ನಿರ್ಧನಿಕರಾಗಿದ್ದಾರೆ.

ಗೀತೆ:
ಬದುಕಿದರೂ ನಿನ್ನ ಮಡಿಲಿನಲ್ಲಿಯೇ.............

ಓಂ ಶಾಂತಿ.
ಓಂ ಶಾಂತಿಯ ಅರ್ಥ ಘಳಿಗೆ-ಘಳಿಗೆಗೆ ಹೇಳಬೇಕಾಗುತ್ತದೆ, ಓಂ ಶಾಂತಿಯ ಅರ್ಥ ಯಾರಿಗೂ ಗೊತ್ತಿಲ್ಲ. ಮನ್ಮಮನಾಭವದ ಅರ್ಥ ಬೇಹದ್ದಿನ ತಂದೆಯನ್ನು ನೆನಪು ಮಾಡಿ ಎಂದು ಘಳಿಗೆ-ಘಳಿಗೆಗೆ ಹೇಳಬೇಕಾಗುತ್ತದೆ. ಓಂ ಶಾಂತಿಯ ಅರ್ಥ ಭಗವಂತ ಎಂದು ಹೇಳಿ ಬಿಡುತ್ತಾರೆ. ಓಂ ಅರ್ಥಾತ್ ನಾನು ಆತ್ಮ ಇದು ನನ್ನ ಶರೀರ ಎಂದು ತಂದೆ ತಿಳಿಸುತ್ತಾರೆ. ಪರಮಪಿತ ಪರಮಾತ್ಮನೂ ಸಹ ಓಂ ಎಂದು ಹೇಳುತ್ತಾರೆ, ನಾನು ಆತ್ಮನಾಗಿದ್ದೇನೆ ಪರಮಧಾಮದಲ್ಲಿ ಇರುತ್ತೇನೆ. ನೀವು ಆತ್ಮಗಳು ಜನನ-ಮರಣ ಚಕ್ರದಲ್ಲಿ ಬರುತ್ತೀರಿ. ನಾನು ಬರುವುದಿಲ್ಲ, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ನೀವು ಮಕ್ಕಳಿಗೆ ಕೊಡಲು ಸಾಕಾರದಲ್ಲಿ ಬರುತ್ತೇನೆ. ಇದನ್ನು ಯಾರು ತಿಳಿಸಲು ಸಾಧ್ಯವಿಲ್ಲ. ಒಂದುವೇಳೆ ನಿಶ್ಚಯವಿಲ್ಲ ಎಂದರೆ ಜಗತ್ತನ್ನು ಸುತ್ತಿ ಬನ್ನಿ ಹುಡುಕಿದರೂ ಯಾರಾದರೂ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆಯೇ? ಎಂದು.

ಪರಮಪಿತ ಪರಮಾತ್ಮನ ಹೊರತು ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಲು ಸಾಧ್ಯವಿಲ್ಲ, ಯಾರು ರಾಜಯೋಗವನ್ನು ಕಲಿಸಿ ಕೊಡಲು ಸಾಧ್ಯವಿಲ್ಲ. ಪತಿತರನ್ನು ಪಾವನ ಮಾಡಲು ಸಾಧ್ಯವಿಲ್ಲ. ಮೊಟ್ಟ ಮೊದಲು ದೇವಿ-ದೇವತೆಗಳ ಪೂಜಾರಿಗಳಿಗೆ ಹೇಳುವ ಪುರುಷಾರ್ಥ ಮಾಡಬೇಕು. ಆದಿ ಸನಾತನ ದೇವಿ-ದೇವತಾ ಧರ್ಮದವರೇ ಪೂರಾ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಅವರೇ ಈ ಜ್ಞಾನವನ್ನು ಕೇಳುತ್ತಾರೆ ನಂತರ ಬರುವವರು 84 ಜನ್ಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಯಾರು ದೇವತೆಗಳ ಪೂಜಾರಿಗಳಿದ್ದಾರೆಯೋ ಮತ್ತು ಗೀತೆಯನ್ನು ಓದುವವರಿದ್ದಾರೆಯೋ ಅವರೇ ಇದನ್ನು ಕೇಳುತ್ತಾರೆ. ಗೀತೆಯಲ್ಲಿ ಕೇವಲ ಒಂದು ತಪ್ಪು ಮಾಡಿದ್ದಾರೆ - ಭಗವಂತನ ಬದಲಾಗಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಗೀತೆಯನ್ನು ಓದುವವರಿಗೆ ತಿಳಿಸಿ ಹೇಳಬೇಕು. ಪರಮಪಿತ ಪರಮಾತ್ಮನ ಶಿವನ ಜೊತೆ ನಿಮಗೆ ಸಂಬಂಧವೇನು ಎಂದು ಕೇಳಬೇಕು, ಅವರಿಗೆ ಭಗವಂತನೆಂದು ಹೇಳಲಾಗುತ್ತದೆ. ಶ್ರೀ ಕೃಷ್ಣನಂತೂ ದೈವೀ ಗುಣವುಳ್ಳವನಾಗಿದ್ದಾನೆ, ಅವನಿಗೆ ದೈವೀ ರಾಜಧಾನಿಯಿತ್ತು. ಅದರಲ್ಲಿ ದೈವೀ ಗುಣವುಳ್ಳವರಾಗಿದ್ದರು. ಈಗ ಅವರೇ ಪೂಜ್ಯರಿಂದ ಪೂಜಾರಿಗಳಾಗಿದ್ದಾರೆ. ಅಂದಮೇಲೆ ಪ್ರಯತ್ನಪಟ್ಟು ಮೊಟ್ಟ ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮದವರನ್ನು ಮೇಲೆತ್ತಬೇಕಾಗಿದೆ. ಚಾರಿಟಿ ಬಿಗಿನ್ಸ್ ಅಟ್ ಹೋಮ್, ಯಾರು ಶಿವನ ಪೂಜಾರಿಗಳಿದ್ದಾರೆಯೋ ಅವರಿಗೂ ಸಹ ತಿಳಿಸಬೇಕು ಅಂದಮೇಲೆ ಶಿವನು ಅವಶ್ಯವಾಗಿ ಬಂದಿರಬೇಕು ಆದ್ದರಿಂದಲೇ ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಅವರು ಪರಮಪಿತ ಪರಮಾತ್ಮನಾಗಿದ್ದಾರೆ. ಅವಶ್ಯವಾಗಿ ಬಂದು ರಾಜಯೋಗವನ್ನೂ ಕಲಿಸಿರಬೇಕು ಮತ್ತ್ಯಾವ ಮನುಷ್ಯರೂ ಇದನ್ನು ಕಲಿಸಲು ಸಾಧ್ಯವಿಲ್ಲ. ಕೃಷ್ಣನಿಗಾಗಲಿ ಅಥವಾ ಬ್ರಹ್ಮನಿಗಾಗಲಿ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಎಲ್ಲರ ಸದ್ಗತಿದಾತ ಒಬ್ಬ ತಂದೆಯೇ ಆಗಿದ್ದಾರೆ, ಅವರು ಜ್ಞಾನದ ಸಾಗರನಾಗಿರುವ ಕಾರಣ ಎಲ್ಲರ ಶಿಕ್ಷಕನಾಗಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಇತಿಹಾಸ-ಭೂಗೋಳವು ಬೇರೆ ಯಾರಿಗೂ ಗೊತ್ತಿಲ್ಲ. ನನ್ನನ್ನು ಜ್ಞಾನ ಸಾಗರ, ಚೈತನ್ಯ ಬೀಜ ರೂಪನೆಂದೂ ಕರೆಯುತ್ತಾರೆ, ಇದಂತೂ ಉಲ್ಟಾ ವೃಕ್ಷವಾಗಿದೆ. ಆ ಬೀಜದಲ್ಲಿಯೇ ಆದಿ-ಮಧ್ಯ-ಅಂತ್ಯದ ಜ್ಞಾನವು ಇದೆ. ಇದರಿಂದಲೇ ನನ್ನನ್ನು ಜ್ಞಾನಸಾಗರ, ಆಲ್ಮೈಟಿ ಅಥಾರಿಟಿ ಎಂದು ಕರೆಯುತ್ತಾರೆ. ಯಾವುದರ ಅಥಾರಿಟಿ? ಎಲ್ಲಾ ವೇದಗಳು, ಶಾಸ್ತ್ರಗಳು, ಗ್ರಂಥಗಳನ್ನೂ ತಿಳಿದಿದ್ದಾರೆ. ಅದನ್ನು ನೀವು ಮಕ್ಕಳಿಗೆ ತಿಳಿಸುತ್ತಿದ್ದಾರೆ. ಆ ಶಾಸ್ತ್ರಗಳನ್ನು ಹೇಳುವವರು ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳಾಗಿದೆ ಎಂದು ತಿಳಿಸುತ್ತಾರೆ. ಆದರೆ ಅದಂತೂ ಆಗಲು ಸಾಧ್ಯವಿಲ್ಲ. ಇದು ವೆರೈಟಿ ಮನುಷ್ಯ ಸೃಷ್ಟಿ ವೃಕ್ಷ, ಇದರ ಆಯಸ್ಸನ್ನು ಭಾಗವತದಲ್ಲಿ ಉದ್ದಗಲವನ್ನಾಗಿ ಮಾಡಿ ಬರೆದು ಬಿಟ್ಟಿದ್ದಾರೆ. ಭಾಗವತವು ಯಾವುದೇ ಧರ್ಮ ಶಾಸ್ತ್ರವಲ್ಲ. ಗೀತೆಯು ಧರ್ಮ ಶಾಸ್ತ್ರವಾಗಿದೆ, ಇದರಿಂದ ದೇವಿ-ದೇವತಾ ಧರ್ಮವು ಸ್ಥಾಪನೆಯಾಯಿತು, ಬಾಕಿ ಭಾಗವತ, ಮಹಾಭಾರತ ಇತ್ಯಾದಿಗಳಿಂದ ಯಾವುದೇ ಧರ್ಮವು ಸ್ಥಾಪನೆ ಆಗುವುದಿಲ್ಲ. ಅವರಂತೂ ಶ್ರೀ ಕೃಷ್ಣನ ಇತಿಹಾಸವನ್ನು ಬರೆದಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, 84 ಜನ್ಮಗಳನ್ನು ನೀವೇ ತೆಗೆದುಕೊಂಡಿದ್ದೀರಿ ಎಂದು ದೇವಿ-ದೇವತಾ ಧರ್ಮದವರಿಗೆ ತಿಳಿಸಿ. ಸತ್ಯಯುಗದಲ್ಲಿ ಕೇವಲ ಭಾರತವು ಮಾತ್ರವೇ ಇತ್ತು, ಮತ್ತ್ಯಾವ ಧರ್ಮವೂ ಇರಲಿಲ್ಲ. ಭಾರತವೇ ಸ್ವರ್ಗವಾಗಿತ್ತು. ಭಾರತವನ್ನೇ ಶ್ರೇಷ್ಠಾತಿ ಶ್ರೇಷ್ಠವಾದುದು ಎಂದು ಹಾಡುತ್ತಾರೆ ಮತ್ತು ಪರಮಪಿತ ಪರಮಾತ್ಮ ಶಿವನ ಜನ್ಮ ಸ್ಥಾನವಾಗಿದೆ ಯಾರು ಬಂದು ಪತಿತರನ್ನು ಪಾವನ ಮಾಡುತ್ತಾರೆ. ಶಿವನ ಪೂಜೆಯೂ ಸಹ ಇಲ್ಲಿಯೇ ಆಗುತ್ತದೆ, ಜಯಂತಿಯನ್ನೂ ಸಹ ಇಲ್ಲಿಯೇ ಆಚರಿಸುತ್ತಾರೆ. ಅವಶ್ಯವಾಗಿ ಪತಿತ ಪ್ರಪಂಚದಲ್ಲಿಯೇ ಬಂದಿರಬೇಕಲ್ಲವೆ. ಪತಿತ-ಪಾವನ ಬನ್ನಿ ಎಂದು ಎಲ್ಲರೂ ಕರೆಯುತ್ತಾರೆ. ಭಾರತವು ಪಾವನವಾಗಿತ್ತು, ನಂತರ 84 ಜನ್ಮಗಳ ಚಕ್ರವನ್ನು ಸುತ್ತಿದೆವು. ಸ್ವರ್ಗವಾಸಿಗಳು ಯಾರು ಪಾವನರಾಗಿದ್ದರೋ ಅವರೇ ಈಗ ನರಕವಾಸಿ ಪತಿತರಾಗಿದ್ದಾರೆ. ಶಿವ ತಂದೆಯು ಪಾವನರನ್ನಾಗಿ ಮಾಡಿದರು, ರಾವಣನು ಪತಿತರನ್ನಾಗಿ ಮಾಡಿದನು. ಈ ಸಮಯದಲ್ಲಿ ರಾವಣನ ರಾಜ್ಯವಿದೆ. ಪ್ರತಿಯೊಬ್ಬ ನರ-ನಾರಿಯಲ್ಲಿಯೂ ಸಹ ಪಂಚ ವಿಕಾರಗಳಿವೆ. ಸತ್ಯಯುಗದಲ್ಲಿ ವಿಕಾರಗಳಿರುವುದಿಲ್ಲ, ನಿರ್ವಿಕಾರಿಗಳಾಗಿದ್ದರು, ಈಗ ಎಲ್ಲರೂ ಪತಿತರಾಗಿರುವುದರಿಂದ ಬನ್ನಿ, ನಮ್ಮನ್ನು ಮತ್ತೆ ಪಾವನವನ್ನಾಗಿ ಮಾಡಿ ಎಂದು ಕರೆಯುತ್ತಾರೆ. ಸತ್ಯಯುಗದಲ್ಲಿ ನಾವೇ ಪಾವನರಾಗಿದ್ದೆವು, 21 ಜನ್ಮಗಳು ರಾಮ ರಾಜ್ಯದಲ್ಲಿದ್ದೆವು. ಈಗಂತೂ ರಾವಣ ರಾಜ್ಯವಾಗಿದೆ, ಎಲ್ಲರೂ ವಿಕಾರಿಗಳಾಗಿದ್ದಾರೆ. ಕಾಮ ಮಹಾ ಶತ್ರುವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಇದು ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತದೆ. ಇದರ ಮೇಲೆಯೇ ಜಯ ಗಳಿಸಿ ಪಾವನರಾಗಿ. ನೀವು ಜನ್ಮ-ಜನ್ಮಾಂತರದಿಂದ ಪಾಪ ಮಾಡಿದ್ದೀರಿ. ಎಲ್ಲರಿಗಿಂತ ತಮೋಪ್ರಧಾನರಾಗಿದ್ದೀರಿ, ಆತ್ಮದಲ್ಲಿಯೇ ತುಕ್ಕು ಹಿಡಿದಿದೆ. ಮೊದಲು ಚಿನ್ನದ ಯುಗವಿತ್ತು ನಂತರ ಬೆಳ್ಳಿಯ ಯುಗ, ನಂತರ ತಾಮ್ರದ ಯುಗ.... ತುಕ್ಕು ಹಿಡಿಯುತ್ತಾ-ಹಿಡಿಯುತ್ತಾ ಏಣಿಯನ್ನು ಇಳಿಯುತ್ತಲೇ ಬಂದಿರಿ. ಇದು ಭಾರತದ್ದೇ ಮಾತಾಗಿದೆ. ಸತ್ಯಯುಗದಲ್ಲಿ 8 ಜನ್ಮಗಳು ನಂತರ ತ್ರೇತಾದಲ್ಲಿ 12 ಜನ್ಮ, ನಂತರ ಅವರೇ ಭಾರತವಾಸಿ ಚಂದ್ರವಂಶಿ, ವೈಶ್ಯವಂಶಿ.... ಆಗುತ್ತಾರೆ. ಆತ್ಮವು ಅಪವಿತ್ರವಾಗಿ ಬಿಡುತ್ತದೆ. ಕಲ್ಪ-ಕಲ್ಪವು ಭಾರತವನ್ನು ನಾನು ಸ್ವರ್ಗವನ್ನಾಗಿ ಮಾಡುತ್ತೇನೆ, ನಂತರ ರಾವಣನು ನರಕವನ್ನಾಗಿ ಮಾಡುತ್ತಾನೆ, ಈ ಡ್ರಾಮಾ ಮಾಡಲ್ಪಟಿದೆ ಎಂದು ತಂದೆಯು ತಿಳಿಸುತ್ತಾರೆ. ಜ್ಞಾನ ಸಾಗರನಂತೂ ಶಿವ ತಂದೆಯೇ ಆಗಿದ್ದಾರೆ. ಎಲ್ಲರಿಗಿಂತ ಶ್ರೇಷ್ಠಾತಿ ಶ್ರೇಷ್ಠ ಶಿವ ಆಗಿದ್ದಾರೆ. ಮೊಟ್ಟ ಮೊದಲು ಅವರದೇ ಪೂಜೆಯಾಗುತ್ತದೆ. ಅವರು ಬೇಹದ್ದಿನ ತಂದೆಯಾಗಿದ್ದಾರೆ. ಅವಶ್ಯವಾಗಿ ಅವರಿಂದ ಬೇಹದ್ದಿನ ಆಸ್ತಿಯು ದೊರಕುತ್ತದೆ. ಭಾರತವಾಸಿಗಳು ಮರೆತು ಹೋಗಿದ್ದಾರೆ. ಭಗವಂತನೆಂದು ಒಬ್ಬ ನಿರಾಕಾರನಿಗೇ ಹೇಳಲಾಗುತ್ತದೆ. ಮನುಷ್ಯರು ಅವರನ್ನೇ ನೆನಪು ಮಾಡುತ್ತಾರೆ, ಎಲ್ಲರೂ ಭಗವಂತನೇ ಭಗವಂತ ಎಂದಲ್ಲ. ಒಂದು ಕಡೆ ಭಗವಂತನನ್ನು ನೆನಪು ಮಾಡುತ್ತಾರೆ ಮತ್ತು ಇನ್ನೊಂದು ಕಡೆ ಗ್ಲಾನಿಯೂ ಮಾಡುತ್ತಾರೆ. ಒಂದು ಕಡೆ ಸರ್ವವ್ಯಾಪಿ ಎಂದು ಹೇಳುತ್ತಾರೆ, ಮತ್ತೆ ಪತಿತ-ಪಾವನ ಬಾ ಎಂದು ಕರೆಯುತ್ತಾರೆ. ತಂದೆಯು ಬಂದು ಬ್ರಹ್ಮನ ಶರೀರದಲ್ಲಿ, ಬ್ರಹ್ಮ ಮುಖ ವಂಶಾವಳಿ ಬ್ರಾಹ್ಮಣರಿಗೇ ತಿಳಿಸುತ್ತಾರೆ. ಈಗ ನೀವು ಜುಟ್ಟಿಗೆ ಸಮಾನರಾಗಿದ್ದೀರಿ. ಬ್ರಾಹ್ಮಣರಿಗಿಂತ ಶಿವ ತಂದೆಯು ಶ್ರೇಷ್ಠರಾಗಿರುವವರು. ವಿರಾಟ ರೂಪದಲ್ಲಿ ದೇವತೆ, ಕ್ಷತ್ರಿಯರು, ವೈಶ್ಯರು, ಶೂದ್ರರನ್ನು ತೋರಿಸುತ್ತಾರೆ. ಬ್ರಾಹ್ಮಣರ ಹೆಸರು ಇಲ್ಲ ಏಕೆಂದರೆ ಬ್ರಾಹ್ಮಣರು ವಿಕಾರಿಗಳಾಗಿದ್ದಾರೆ ಅಂದಮೇಲೆ ದೇವತೆಗಳಿಗಿಂತಲೂ ಉತ್ತಮರೆಂದು ಹೇಗೆ ಹೇಳಲು ಸಾಧ್ಯ. ಅವರು ಬ್ರಾಹ್ಮಣ ದೇವತಾಯ ನಮಃ ಎಂದು ಹಾಡುತ್ತಾರೆ. ಇವರು ಯಾವಾಗ ರಾಜ್ಯಭಾರ ಮಾಡಿದರು, ಸ್ವರ್ಗವು ಯಾವಾಗ ಇತ್ತು ಎಂದು ನಿಖರವಾಗಿ ಯಾರಿಗೂ ಗೊತ್ತಿಲ್ಲ, ಈಗ ನೀವು ತಿಳಿದುಕೊಂಡಿದ್ದೀರಿ - ತಂದೆಯು ಬಂದು ಬ್ರಹ್ಮನ ಮುಖಾಂತರ ಸ್ವರ್ಗದ ಸ್ಥಾಪನೆ, ಶಂಕರನ ಮುಖಾಂತರ ವಿನಾಶವನ್ನು ಮಾಡುತ್ತಾರೆ. ಮಹಾಭಾರತ ಯುದ್ಧವು ನಡೆದಿತ್ತು ಯಾವುದರಿಂದ ಸ್ವರ್ಗದ ದ್ವಾರ ತೆರೆಯಿತು. ಗಾಯನ ಮಾಡುತ್ತಾರೆ ಆದರೆ ಏನೂ ತಿಳಿದಿಲ್ಲ. ರುದ್ರ ಜ್ಞಾನ ಯಜ್ಞದಿಂದ ವಿನಾಶದ ಜ್ವಾಲೆಯು ಪ್ರಜ್ವಲಿತವಾಯಿತೆಂದು ತೋರಿಸುತ್ತಾರೆ. ಅವಶ್ಯವಾಗಿ ಈಗ ಆ ಪಾತ್ರವು ನಡೆಯುತ್ತಿದೆ. 5000 ವರ್ಷಗಳ ಮೊದಲೂ ಸಹ ಯುದ್ಧ ನಡೆದಿತ್ತು, ಯಾವಾಗ ಪತಿತ ಪ್ರಪಂಚದ ವಿನಾಶವಾಗಿತ್ತು. ಗೀತಾ ಜ್ಞಾನವನ್ನು ತಿಳಿಸುವಾಗ ಹೇಳುತ್ತಾರೆ - ಮೂರು ಸೈನ್ಯಗಳಿದ್ದವು, ಯುರೋಪಿಯನ್ನರ ಯಾದವ ಸೇನೆ, ಯಾವುದರಿಂದ ವಿಜ್ಞಾನದ ಅಣ್ವಸ್ತ್ರಗಳನ್ನು ಕಂಡು ಹಿಡಿದರು. ಗೀತೆಯು ಪೂರ್ಣವಾಗಿ 5000 ವರ್ಷಗಳಾಯಿತು, ಮೂರು ಸೇನೆಗಳು ಈಗ ಇವೆ ಎಂದು ತಂದೆಯು ತಿಳಿಸುತ್ತಾರೆ. ವಿನಾಶಕಾಲೇ ವಿಪರೀತ ಬುದ್ಧಿ ಅರ್ಥಾತ್ ಪರಮಪಿತ ಪರಮಾತ್ಮನ ಜೊತೆ ವಿಪರೀತ ಬುದ್ಧಿ ಎಂದು ಗಾಯನವಿದೆ. ನಿಮ್ಮ ವಿನಃ ಯಾರದೂ ಸಹ ಪ್ರೀತಿ ಬುದ್ಧಿಯಿಲ್ಲ, ಯಾರೂ ತಿಳಿದುಕೊಂಡಿಲ್ಲ. ಎಲ್ಲರದೂ ವಿನಾಶ ಕಾಲೇ ವಿಪರೀತ ಬುದ್ಧಿಯಾಗಿದೆ. ಕೇವಲ ನೀವು ಪಾಂಡವರದು ಪ್ರೀತಿ ಬುದ್ಧಿಯಾಗಿದೆ. ನೀವು ಶಿವ ತಂದೆಯನ್ನು ನೆನಪು ಮಾಡುತ್ತೀರಿ, 21 ಜನ್ಮಗಳಿಗೆ ಆಸ್ತಿಯನ್ನು ಕೊಡಲು ತಂದೆಯು ಬಂದಿದ್ದಾರೆಂದು ತಿಳಿದುಕೊಂಡಿದ್ದೀರಿ. ನಿಮ್ಮದು ಶಿವ ತಂದೆಯೊಂದಿಗೆ ಪ್ರೀತಿ ಬುದ್ಧಿಯಾಗಿದೆ. ಬಾಕಿ ತಂದೆಯನ್ನು ತಿಳಿದುಕೊಂಡಿಲ್ಲವೆಂದರೆ ಮೂರು ಸೇನೆಗಳಾಯಿತಲ್ಲವೆ. ನೀವು ಪಾಂಡವ ಸೇನೆಯವರಾಗಿದ್ದೀರಿ. ವಿನಾಶ ಕಾಲವಂತೂ ಇದ್ದೇ ಇದೆ. ಸಾವು ಸನ್ಮುಖದಲ್ಲಿ ನಿಂತಿದೆ, ನೀವು ಪವಿತ್ರರಾಗುತ್ತೀರೆಂದರೆ ಹೊಸ ಪ್ರಪಂಚದ ಮಾಲೀಕರಾಗುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ಸತ್ಯಯುಗದಲ್ಲಿ ಒಂದೇ ದೇವಿ-ದೇವತಾ ಧರ್ಮವಿತ್ತು, ಮತ್ತ್ಯಾವುದೇ ಧರ್ಮವಿರಲಿಲ್ಲ. ಈಗ ಬೇರೆಲ್ಲಾ ಧರ್ಮಗಳಿವೆ, ಆದಿ ಸನಾತನ ದೇವಿ-ದೇವತಾ ಧರ್ಮವೇ ಇಲ್ಲ. ತಮ್ಮನ್ನು ದೇವಿ-ದೇವತೆಗಳೆಂದು ತಿಳಿದುಕೊಂಡಿಲ್ಲ. ನಾವು ಪತಿತರಾಗಿದ್ದೇವೆಂದು ಹೇಳಿಕೊಳ್ಳುತ್ತಾರೆ. ದೇವತೆಗಳ ಮುಂದೆ ಹೋಗಿ ಮಹಿಮೆಯನ್ನೂ ಮಾಡುತ್ತಾರೆ - ನೀವು ಸರ್ವ ಗುಣ ಸಂಪನ್ನರು, 16 ಕಲಾ ಸಂಪೂರ್ಣರು.... ನಾವು ವಿಕಾರಿಗಳಾಗಿದ್ದೇವೆ. ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹೇಳುತ್ತಾರೆ. ತಂದೆಯನ್ನು ನೆನಪು ಮಾಡುತ್ತಾರೆ. ನೀವೂ ಸಹ ಒಬ್ಬ ತಂದೆಯನ್ನೇ ನೆನಪು ಮಾಡದ ವಿನಃ ಪಾವನರಾಗಲು ಸಾಧ್ಯವಿಲ್ಲ, ಶ್ರೇಷ್ಠ ಪದವಿಯನ್ನೂ ಪಡೆಯಲು ಸಾಧ್ಯವಿಲ್ಲ. ಅಪವಿತ್ರ ಪ್ರಪಂಚದ ವಿನಾಶವು ಯಾವಾಗ ಆಗುತ್ತದೆಯೋ ಆಗಲೇ ಪ್ರಪಂಚದಲ್ಲಿ ಶಾಂತಿಯಿರುತ್ತದೆ. ಭಾರತ ಮತ್ತು ಪ್ರಪಂಚದ ಶಾಂತಿಗಾಗಿ ಮನುಷ್ಯರು ಪ್ರಯತ್ನ ಪಡುತ್ತಾರೆ ಆದರೆ ಇದು ಒಬ್ಬ ತಂದೆಯ ಕೆಲಸವೇ ಆಗಿದೆ. ಮನುಷ್ಯರಂತೂ ವಿಕಾರಿಗಳಾಗಿದ್ದಾರೆ, ಅವರು ಶಾಂತಿಯನ್ನು ಹೇಗೆ ಸ್ಥಾಪನೆ ಮಾಡುತ್ತಾರೆ! ಮನೆ-ಮನೆಯಲ್ಲಿಯೂ ಜಗಳವಿದೆ, ತಂದೆಯನ್ನು ತಿಳಿಯದ ಕಾರಣ ನಿರ್ಧನಿಕರಾಗಿದ್ದಾರೆ. ಸತ್ಯಯುಗದಲ್ಲಿ ಅವಶ್ಯವಾಗಿ ಪವಿತ್ರತೆ, ಸುಖ, ಶಾಂತಿ ಇತ್ತು. ಈಗ ಪುನಃ ತಂದೆಯು ಆ ಪವಿತ್ರತೆ, ಸುಖ, ಶಾಂತಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ, ಇದನ್ನು ಯಾರೂ ಮಾಡುವುದಿಲ್ಲ. ಭಾರತವಾಸಿಗಳು ಈಗ ನರಕವಾಸಿಗಳಾಗಿದ್ದಾರೆ. ಸ್ವರ್ಗದಲ್ಲಿದ್ದರು ಅಂದಮೇಲೆ ಪುನರ್ಜನ್ಮವನ್ನೂ ಸ್ವರ್ಗದಲ್ಲಿಯೇ ತೆಗೆದುಕೊಳ್ಳಬೇಕಾಗಿದೆ. ಈಗ ಪತಿತರಾಗಿದ್ದಾರೆ ಆದ್ದರಿಂದಲೇ ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತಾರೆ. ಪಾರಲೌಕಿಕ ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುತ್ತದೆ ಎಂದು ಈಗ ಮಕ್ಕಳು ತಿಳಿದುಕೊಂಡಿದ್ದೀರಿ. ಲೌಕಿಕ ತಂದೆಯಿಂದ ಹದ್ದಿನ ಆಸ್ತಿಯು ಸಿಗುತ್ತದೆ, ಪಾರಲೌಕಿಕ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಇದು ತಿಳಿದುಕೊಳ್ಳುವ ಮಾತುಗಳಾಗಿವೆ. ಇದು ಯಾವುದೇ ಸತ್ಸಂಗವಲ್ಲ. ಅದು ಭಕ್ತಿ ಮಾರ್ಗವಾಗಿದೆ, ಇದು ಜ್ಞಾನ ಮಾರ್ಗವಾಗಿದೆ.

ತಂದೆಯು ನಮ್ಮನ್ನು ಸ್ವರ್ಗವಾಸಿಯನ್ನಾಗಿ ಮಾಡುತ್ತಿದ್ದಾರೆಂದು ನಿಮಗೆ ಖುಷಿಯಾಗುವುದು. ಯಾರು ಕಲ್ಪದ ಹಿಂದೆ ಸ್ವರ್ಗವಾಸಿಗಳಾಗಿದ್ದರೋ ಅವರೇ ಆಗುತ್ತಾರೆ. ಬ್ರಾಹ್ಮಣರಾಗದ ಹೊರತು ದೇವತೆಗಳಾಗಲು ಸಾಧ್ಯವಿಲ್ಲ. ಇದು ತಿಳಿದುಕೊಳ್ಳುವ ಮಾತಾಗಿದೆಯಲ್ಲವೆ. ಈಗಂತೂ ಭಾರತದಲ್ಲಿ ಯಾರಲ್ಲಿಯೂ ಕಲೆಗಳೇ ಇಲ್ಲದಂತಾಗಿದೆ, ಇದು ಯಾರಿಗೂ ಗೊತ್ತಾಗುವುದೇ ಇಲ್ಲ. ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ, ಈಗ ನಿಮ್ಮನ್ನು ತಂದೆಯು ಜಾಗೃತ ಮಾಡಿದ್ದಾರೆ. ಇಲ್ಲಿಗೆ ನೀವು ಸ್ವರ್ಗವಾಸಿಗಳಾಗಲು ಬಂದಿದ್ದೀರಿ. ತಂದೆಯ ವಿನಃ ಯಾರೂ ಸಹ ಮಾಡಲು ಸಾಧ್ಯವಿಲ್ಲ. ಸತ್ಯಯುಗಕ್ಕೆ ಸ್ವರ್ಗವೆಂದು, ಕಲಿಯುಗಕ್ಕೆ ನರಕವೆಂದು ಹೇಳಲಾಗುತ್ತದೆ. ಈಗ ಎಲ್ಲರೂ ವಿಕಾರದಿಂದಲೇ ಜನ್ಮ ಪಡೆಯುತ್ತಾರೆ, ದೇವತೆಗಳು ಎಂದೂ ಸಹ ವಿಕಾರದಿಂದ ಜನ್ಮ ಪಡೆಯುವುದಿಲ್ಲ. ಮಕ್ಕಳೇ, ನೀವೀಗ ತಂದೆಯ ಬಳಿ ಪವಿತ್ರರಾಗುವ ಪ್ರತಿಜ್ಞೆ ಮಾಡುತ್ತೀರಿ ಆದರೆ ನಡೆಯುತ್ತಾ-ನಡೆಯುತ್ತಾ ಸೋಲನ್ನು ಅನುಭವಿಸಿದರೆ ನಂತರ ಮಾಡಿಕೊಂಡಿರುವ ಸಂಪಾದನೆಯೆಲ್ಲವೂ ಹಾಳಾಗಿ ಬಿಡುತ್ತದೆ. ಬಹಳ ದೊಡ್ಡದಾಗಿ ಪೆಟ್ಟು ಬೀಳುವುದು. ಆಶ್ಚರ್ಯವಾಗಿ ಕೇಳಿ, ಹೇಳಿ ನಂತರ ಓಡಿ ಹೋಗುತ್ತಾರೆ. ಭಲೆ ಸಾಕ್ಷಾತ್ಕಾರಗಳಾಗುತ್ತವೆ ಆದರೆ ಸಾಕ್ಷಾತ್ಕಾರದಲ್ಲಿಯೇ ಮಾಯೆಯು ಪ್ರವೇಶವಾಗುವುದು. ಹೇಗೆ ರೇಡಿಯೋದಲ್ಲಿ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದಂತೆ ಮಧ್ಯದಲ್ಲಿ ಗಡಿ ಬಿಡಿ ಮಾಡಿ ಬಿಡುತ್ತಾರೆ. ಇದೂ ಸಹ ಹಾಗೆಯೇ. ಯೋಗದಲ್ಲಿ ಮಾಯೆಯು ವಿಘ್ನವನ್ನು ಹಾಕುತ್ತದೆ. ಪರಿಶ್ರಮವೂ ಸಹ ಯೋಗದಲ್ಲಿಯೇ ಇದೆ. ಭಾರತದ ಪ್ರಾಚೀನ ಯೋಗವೆಂದು ಗಾಯನವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯೊಂದಿಗೆ ಸತ್ಯ ಪ್ರೀತಿಯನ್ನು ಇಟ್ಟು ಸತ್ಯ-ಸತ್ಯವಾದ ಪಾಂಡವರಾಗಬೇಕಾಗಿದೆ. ಮೃತ್ಯು ಸನ್ಮುಖದಲ್ಲಿ ನಿಂತಿದೆ, ಆದ್ದರಿಂದ ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬೇಕಾಗಿದೆ.

2. ಕಾಮ ಮಹಾಶತ್ರುವಾಗಿದೆ ಯಾವುದು ಆದಿ-ಮಧ್ಯ-ಅಂತ್ಯ ದುಃಖ ಕೊಟ್ಟಿದೆ, ಅದರ ಮೇಲೆ ಜಯ ಗಳಿಸಿ ಪಾವನರಾಗಬೇಕು, ನೆನಪಿನಿಂದಲೇ ವಿಕಾರಗಳ ತುಕ್ಕು ಬಿಟ್ಟು ಹೋಗಿ ಆತ್ಮವು ಚಿನ್ನದಂತೆ ಆಗಿ ಬಿಡುತ್ತದೆ.

ವರದಾನ:
ಮರುಜೀವಾ ಜನ್ಮದ ಸ್ಮೃತಿಯ ಮೂಲಕ ಕರ್ಮ ಬಂಧನವನ್ನು ಸಂಬಂಧದಲ್ಲಿ ಪರಿವರ್ತನೆ ಮಾಡುವಂತಹ ಪರೋಪಕಾರಿ ಭವ.

ಲೌಕಿಕ ಕರ್ಮ ಬಂಧನದ ಸಂಬಂಧವನ್ನು ಈಗ ಮರುಜೀವಾ ಜನ್ಮದ ಕಾರಣ, ಶ್ರೀಮತದ ಆಧಾರದಿಂದ ಸೇವೆಯ ಸಂಬಂಧವು ಆಧಾರಿತವಾಗಿದೆ. ಇದು ಕರ್ಮ ಬಂಧನವಲ್ಲ ಸೇವೆಯ ಸಂಬಂಧವಾಗಿದೆ. ಸೇವೆಯ ಸಂಬಂಧದಲ್ಲಿ ವಿಭಿನ್ನ ಪ್ರಕಾರದ ಆತ್ಮರಗಳ ಬಗ್ಗೆ ತಿಳಿದುಕೊಂಡು, ಧಾರಣೆ ಮಾಡುತ್ತಾ ನಡೆಯುತ್ತೀರೆಂದರೆ ಬಂಧನದಲ್ಲಿ ಬೇಸರವಾಗುವುದಿಲ್ಲ. ಆದರೆ ಅತಿ ಪಾಪಾತ್ಮ, ಅಪಕಾರಿ ಆತ್ಮರೊಂದಿಗೂ ತಿರಸ್ಕಾರಕ್ಕೆ ಬದಲು ದಯಾಹೃದಯಿಯಾಗಿ ದಯೆಯ ಭಾವನೆಯನ್ನಿಟ್ಟು, ಸೇವೆಯ ಸಂಬಂಧವೆಂದು ತಿಳಿದುಕೊಂಡು ಸೇವೆ ಮಾಡುತ್ತೀರೆಂದರೆ ಪ್ರಸಿದ್ಧ ವಿಶ್ವ ಕಲ್ಯಾಣಿ ಅಥವಾ ಪರೋಪಕಾರಿ ಎಂದು ಗಾಯನವಾಗುತ್ತದೆ.

ಸ್ಲೋಗನ್:
ಸಮಯ ಅಥವಾ ಪರಿಸ್ಥಿತಿಯ ಅನುಸಾರ ವೈರಾಗ್ಯವು ಬಂದಿತೆಂದರೆ, ಇದೂ ಸಹ ಅಲ್ಪಕಾಲದ ವೈರಾಗ್ಯವಾಗಿದೆ, ಸದಾಕಾಲದ ವೈರಾಗಿಗಳಾಗಿರಿ.

ಅವ್ಯಕ್ತ ಸೂಚನೆಗಳು:- ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ.

ಸಮಯ ಪ್ರಮಾಣ ಈಗ ಸದಾ ಅಚಲ ಅಡೋಲ ಸರ್ವ ಖಜಾನೆಗಳಿಂದ ಸಂಪನ್ನರಾಗಿ. ಸ್ವಲ್ಪವೂ ಸಹ ಏರು-ಪೇರು ಆಗುತ್ತೀರಿ ಎಂದರೆ ಸರ್ವ ಖಜಾನೆಗಳ ಅನುಭವ ಆಗುವುದಿಲ್ಲ. ತಂದೆಯ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸದಾ ಖಾಯಂ ಆಗಿ ಇಟ್ಟುಕೊಳ್ಳುವ ಸಾಧನ ಆಗಿದೆ ಸದಾ ಅಚಲ ಅಡೋಲರಾಗಿ ಇರುವುದು. ಅಚಲರಾಗಿರುವುದರಿಂದ ಸದಾ ಖುಷಿಯ ಅನುಭವ ಆಗುತ್ತಾ ಇರುತ್ತದೆ. ಹೇಗೆ ವಿನಾಶಿ ಧನ, ಹೆಸರು - ಮಾನ್ಯತೆ - ಆಡಂಬರ, ಪದವಿ ಇತ್ಯಾದಿಗಳು ಸಿಗುತ್ತದೆ ಎಂದರೆ ಖುಷಿಯಾಗುತ್ತದೆ ಅಲ್ಲವೇ. ಇದಂತೂ ಅವಿನಾಶಿ ಖುಷಿಯಾಗಿದೆ, ಆದರೆ ಈ ಖುಷಿ ಅವರಿಗೆ ಇರುತ್ತದೆ ಯಾರು ಅಚಲ ಅಡೋಲ ಏಕ-ರಸ ಸ್ಥಿತಿಯಲ್ಲಿ ಇರುತ್ತಾರೆ.