22.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮಗೆ
ಓದಿಸಲು ಯಾರು ಬಂದಿದ್ದಾರೆ ಎಂದು ವಿಚಾರ ಮಾಡಿ ಆಗ ಖುಷಿಯಲ್ಲಿ ರೋಮಾಂಚನವಾಗಿ ನಿಂತು ಬಿಡುತ್ತೀರಿ,
ಶ್ರೇಷ್ಠಾತಿ ಶ್ರೇಷ್ಠ ತಂದೆಯು ಓದಿಸುತ್ತಾರೆ, ಇಂತಹ ವಿದ್ಯೆಯನ್ನೆಂದೂ ಬಿಡಬಾರದು”.
ಪ್ರಶ್ನೆ:
ಈಗ ನೀವು
ಮಕ್ಕಳಿಗೆ ಯಾವ ನಿಶ್ಚಯವಾಗಿದೆ? ನಿಶ್ಚಯ ಬುದ್ಧಿಯವರ ಚಿಹ್ನೆಗಳೇನು?
ಉತ್ತರ:
ನಿಮಗೆ
ನಿಶ್ಚಯವಾಗಿದೆ - ನಾವೀಗ ಇಂತಹ ವಿದ್ಯೆಯನ್ನು ಓದುತ್ತಿದ್ದೇವೆ ಯಾವುದರಿಂದ ಡಬಲ್ ಕಿರೀಟಧಾರಿ
ರಾಜಾಧಿರಾಜರಾಗುತ್ತೇವೆ. ಸ್ವಯಂ ಭಗವಂತನೇ ಓದಿಸಿ ನಮ್ಮನ್ನು ವಿಶ್ವದ ಮಾಲೀಕರನ್ನಾಗಿ
ಮಾಡುತ್ತಿದ್ದಾರೆ. ನಾವೀಗ ಅವರ ಮಕ್ಕಳಾಗಿದ್ದೇವೆ ಅಂದಮೇಲೆ ಆ ವಿದ್ಯೆಯಲ್ಲಿಯೇ ತೊಡಗಬೇಕಾಗಿದೆ.
ಹೇಗೆ ಚಿಕ್ಕ ಮಕ್ಕಳು ತಮ್ಮ ತಂದೆ-ತಾಯಿಯನ್ನು ಬಿಟ್ಟು ಮತ್ತ್ಯಾರ ಬಳಿಯೂ ಹೋಗುವುದಿಲ್ಲ ಹಾಗೆಯೇ
ಇಂತಹ ಬೇಹದ್ದಿನ ತಂದೆಯು ಸಿಕ್ಕಿದ್ದಾರೆಂದರೆ ಮತ್ತ್ಯಾರೂ ಇಷ್ಟವಾಗಬಾರದು. ಒಬ್ಬ ತಂದೆಯದೇ
ನೆನಪಿರಲಿ.
ಗೀತೆ:
ಇಂದು
ಬೆಳಗ್ಗೆ-ಬೆಳಗ್ಗೆ ಬಂದವರು ಯಾರು.............
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಗೀತೆಯನ್ನು ಕೇಳಿದಿರಿ - ಯಾರು ಬಂದಿದ್ದಾರೆ ಮತ್ತು ಯಾರು ಓದಿಸುತ್ತಾರೆ?
ಇದು ತಿಳುವಳಿಕೆಯ ಮಾತಾಗಿದೆ. ಕೆಲವರು ಬಹಳ ಬುದ್ಧಿವಂತರಿರುತ್ತಾರೆ, ಕೆಲವರು ಕಡಿಮೆ
ಬುದ್ಧಿವಂತರಿರುತ್ತಾರೆ. ಯಾರು ಬಹಳ ವಿದ್ಯಾವಂತರಾಗಿದ್ದಾರೆಯೋ ಅವರಿಗೆ ಬಹಳ ಬುದ್ಧಿವಂತರೆಂದು
ಹೇಳುತ್ತಾರೆ. ಶಾಸ್ತ್ರಗಳು ಇತ್ಯಾದಿ ಏನೆಲ್ಲವನ್ನೂ ಓದಿರುತ್ತಾರೆಯೋ ಅವರಿಗೆ ಮಾನ್ಯತೆಯಿರುತ್ತದೆ.
ಕಡಿಮೆ ಓದಿರುವವರಿಗೆ ಕಡಿಮೆ ಮಾನ್ಯತೆಯು ಸಿಗುತ್ತದೆ. ಓದಿಸಲು ಯಾರು ಬಂದರೆಂದು ಗೀತೆಯ ಶಬ್ಧವನ್ನು
ಕೇಳಿದಿರಿ. ಶಿಕ್ಷಕರು ಬರುತ್ತಾರಲ್ಲವೆ. ಶಾಲೆಯಲ್ಲಿ ಓದುವವರಿಗೆ ಶಿಕ್ಷಕರು ಬಂದರೆಂದು
ತಿಳಿದಿರುತ್ತದೆ. ಇಲ್ಲಿ ಯಾರು ಬಂದಿದ್ದಾರೆ? ಒಮ್ಮೆಲೆ ರೋಮಾಂಚನವಾಗಿ ನಿಂತುಬಿಡಬೇಕು.
ಶ್ರೇಷ್ಠಾತಿ ಶ್ರೇಷ್ಠ ತಂದೆಯೇ ಪುನಃ ಓದಿಸಲು ಬಂದಿದ್ದಾರೆ, ತಿಳಿದುಕೊಳ್ಳುವ ಮಾತಲ್ಲವೆ!
ಅದೃಷ್ಟದ ಮಾತೂ ಆಗಿದೆ. ಓದಿಸುವವರು ಯಾರಾಗಿದ್ದಾರೆ? ಸ್ವಯಂ ಭಗವಂತ. ಅವರೇ ಬಂದು ಓದಿಸುತ್ತಾರೆ.
ಭಲೆ ಯಾರೆಷ್ಟೇ ದೊಡ್ಡದಕ್ಕಿಂತ ದೊಡ್ಡ ವಿದ್ಯೆಯನ್ನು ಓದಿರಲಿ ಆದರೆ ವಿವೇಕವು ಹೇಳುತ್ತದೆ - ಆ
ವಿದ್ಯೆಯನ್ನು ಕೂಡಲೇ ಬಿಟ್ಟು ಭಗವಂತನಿಂದ ಓದಿರಿ. ಒಂದು ಸೆಕೆಂಡಿನಲ್ಲಿ ಎಲ್ಲವನ್ನೂ ಬಿಟ್ಟು ಓದಲು
ತಂದೆಯ ಬಳಿ ಬನ್ನಿರಿ.
ತಂದೆಯು ತಿಳಿಸಿದ್ದಾರೆ
- ನೀವೀಗ ಪುರುಷೋತ್ತಮ ಸಂಗಮಯುಗದವರಾಗಿದ್ದೀರಿ. ಉತ್ತಮರಿಗಿಂತಲೂ ಉತ್ತಮ ಪುರುಷರು ಶ್ರೀ
ಲಕ್ಷ್ಮೀ-ನಾರಾಯಣರಾಗಿದ್ದಾರೆ. ಇವರು ಅಂತಹ ಯಾವ ವಿದ್ಯೆಯಿಂದ ಈ ಪದವಿಯನ್ನು ಪಡೆದರೆಂದು
ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಈ ಪದವಿಯನ್ನು ಪಡೆಯಲು ನೀವು ಓದುತ್ತೀರಿ. ಯಾರು ಓದಿಸುತ್ತಾರೆ?
ಭಗವಂತ. ಅಂದಮೇಲೆ ಮತ್ತೆಲ್ಲಾ ವಿದ್ಯೆಗಳನ್ನು ಬಿಟ್ಟು ಈ ವಿದ್ಯಾಭ್ಯಾಸದಲ್ಲಿ ತೊಡಗಿ ಬಿಡಬೇಕು.
ಏಕೆಂದರೆ ತಂದೆಯು ಬರುವುದೇ ಕಲ್ಪದ ನಂತರ. ತಂದೆಯು ತಿಳಿಸುತ್ತಾರೆ - ನಾನು ಪ್ರತೀ 5000 ವರ್ಷಗಳ
ನಂತರ ಸನ್ಮುಖದಲ್ಲಿ ಓದಿಸಲು ಬರುತ್ತೇನೆ. ಆಶ್ಚರ್ಯವಲ್ಲವೆ. ನಮಗೆ ಈ ಪದವಿಯನ್ನು ಪ್ರಾಪ್ತಿ
ಮಾಡಿಸಲು ಭಗವಂತನೇ ಓದಿಸುತ್ತಾರೆಂದು ಹೇಳುತ್ತಾರೆ ಆದರೆ ಓದುವುದೇ ಇಲ್ಲ ಅಂದಾಗ ಇವರು
ಸುಪುತ್ರರಲ್ಲ, ತಂದೆಯ ವಿದ್ಯೆಯ ಮೇಲೆ ಪೂರ್ಣವಾಗಿ ಗಮನ ಕೊಡುವುದಿಲ್ಲ, ಮರೆತು ಹೋಗುತ್ತಾರೆಂದು
ತಂದೆಯು ಹೇಳುತ್ತಾರಲ್ಲವೆ. ಬಾಬಾ, ನಾವು ಮರೆತು ಹೋಗುತ್ತೇವೆ ಎಂದು ನೀವೂ ಹೇಳುತ್ತೀರಿ.
ಶಿಕ್ಷಕರನ್ನೂ ಮರೆತು ಹೋಗುತ್ತೀರಿ. ಇದು ಮಾಯೆಯ ಬಿರುಗಾಳಿಯಾಗಿದೆ. ಆದರೆ ವಿದ್ಯೆಯನ್ನಂತೂ
ಓದಬೇಕಲ್ಲವೆ. ವಿವೇಕವು ಹೇಳುತ್ತದೆ, ಭಗವಂತನೇ ಓದಿಸುತ್ತಾರೆಂದರೆ ತಕ್ಷಣವೇ ಈ ವಿದ್ಯೆಯಲ್ಲಿ
ತೊಡಗಿ ಬಿಡಬೇಕು. ಚಿಕ್ಕ ಮಕ್ಕಳೇ ವಿದ್ಯೆಯನ್ನು ಓದುತ್ತಾರೆ, ಎಲ್ಲರಲ್ಲಿ ಆತ್ಮವಿದೆ. ಉಳಿದಂತೆ
ಶರೀರವು ಚಿಕ್ಕದು-ದೊಡ್ಡದಿರುತ್ತದೆ. ನಾನು ತಮ್ಮ ಅತಿ ಪುಟ್ಟ ಮಗುವಾಗಿದ್ದೇನೆ ಎಂದು ಆತ್ಮವು
ಹೇಳುತ್ತದೆ. ತಂದೆಯು ತಿಳಿಸುತ್ತಾರೆ - ಒಳ್ಳೆಯದು, ನನ್ನವರಾಗಿದ್ದೀರೆಂದರೆ ಈಗ ಓದಿರಿ. ವಿದ್ಯೆಯು
ಮೊದಲನೆಯದಾಗಿದೆ. ಇದರಲ್ಲಿ ಬಹಳ ಗಮನವನ್ನಿಡಬೇಕಾಗಿದೆ. ವಿದ್ಯಾರ್ಥಿಗಳು ಇಲ್ಲಿ ಪರಮ ಶಿಕ್ಷಕನ ಬಳಿ
ಬರುತ್ತೀರಿ. ಓದಿಸುವಂತಹ ಶಿಕ್ಷಕರೂ ಸಹ ನಿಗಧಿತರಾಗಿದ್ದಾರೆ ಆದರೂ ಸಹ ಪರಮ ಶಿಕ್ಷಕನೂ
ಇದ್ದಾರಲ್ಲವೆ. 7 ದಿನಗಳ ಭಟ್ಟಿಯೆಂದು ಗಾಯನವಿದೆ. ತಂದೆಯು ತಿಳಿಸುತ್ತಾರೆ - ಈಗ ಪವಿತ್ರರಾಗಿ
ಮತ್ತು ನನ್ನನ್ನು ನೆನಪು ಮಾಡಿ ದೈವೀ ಗುಣಗಳನ್ನು ಧಾರಣೆ ಮಾಡಿದರೆ ನೀವು ಆ ರೀತಿಯಾಗಿ ಬಿಡುತ್ತೀರಿ.
ಬೇಹದ್ದಿನ ತಂದೆಯನ್ನು ನೆನಪು ಮಾಡಬೇಕಾಗಿದೆ. ಚಿಕ್ಕ ಮಕ್ಕಳನ್ನು ತಂದೆ-ತಾಯಿಯ ಹೊರತು ಬೇರೆ
ಯಾರಾದರೂ ಎತ್ತಿಕೊಂಡರೆ ಅವರ ಬಳಿ ಹೋಗುವುದೇ ಇಲ್ಲ. ನೀವೂ ಸಹ ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ
ಅಂದಮೇಲೆ ನಿಮಗೆ ಮತ್ತ್ಯಾರನ್ನೂ ನೋಡುವುದಕ್ಕೂ ಇಷ್ಟವಾಗಬಾರದು. ನಿಮಗೆ ಗೊತ್ತಿದೆ, ನಾವು
ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಕ್ಕಳಾಗಿದ್ದೇವೆ. ಅವರು ನಮ್ಮನ್ನು ಡಬಲ್ ಕಿರೀಟಧಾರಿ,
ರಾಜಾಧಿರಾಜರನ್ನಾಗಿ ಮಾಡುತ್ತಾರೆ. ಪ್ರಕಾಶತೆಯ ಕಿರೀಟವು ಮನ್ಮಾನಭವ ಮತ್ತು ರತ್ನಜಡಿತ ಕಿರೀಟವು
ಮಧ್ಯಾಜೀ ಭವದಿಂದ ಸಿಗುತ್ತದೆ. ನಾವು ಈ ವಿದ್ಯೆಯಿಂದ ವಿಶ್ವದ ಮಾಲೀಕರಾಗುತ್ತೇವೆಂದು ನಿಶ್ಚಯವಾಗಿ
ಬಿಡುತ್ತದೆ. 5000 ವರ್ಷಗಳ ನಂತರ ಚರಿತ್ರೆಯು ಪುನರಾವರ್ತನೆಯಾಗುತ್ತದೆಯಲ್ಲವೆ. ನಿಮಗೆ
ರಾಜ್ಯಭಾಗ್ಯವು ಸಿಗುತ್ತದೆ, ಉಳಿದೆಲ್ಲಾ ಆತ್ಮಗಳು ತಮ್ಮ ಮನೆ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ.
ಮೂಲತಃ ನಾವಾತ್ಮಗಳು ತಂದೆಯ ಜೊತೆ ನಮ್ಮ ಮನೆಯಲ್ಲಿರುತ್ತೇವೆಂದು ಈಗ ಮಕ್ಕಳಿಗೆ ಅರ್ಥವಾಗಿದೆ. ಶಿವ
ತಂದೆಯ ಮಕ್ಕಳಾಗುವುದರಿಂದ ನೀವು ಸ್ವರ್ಗದ ಮಾಲೀಕರಾಗುತ್ತೀರಿ ಆದರೆ ಅಂತಹ ತಂದೆಯನ್ನೇ ಮರೆತು
ಅನಾಥರಾಗಿ ಬಿಡುತ್ತೀರಿ. ಭಾರತವು ಈ ಸಮಯದಲ್ಲಿ ಅನಾಥವಾಗಿದೆ, ಯಾರಿಗೆ ತಂದೆ-ತಾಯಿಯು
ಇರುವುದಿಲ್ಲವೋ, ಅಲೆದಾಡುತ್ತಿರುತ್ತಾರೆಯೋ ಅವರಿಗೆ ಅನಾಥರೆಂದು ಹೇಳುತ್ತಾರೆ. ನಿಮಗಂತೂ ಈಗ
ತಂದೆಯು ಸಿಕ್ಕಿದ್ದಾರೆ, ನೀವು ಇಡೀ ಸೃಷ್ಟಿಚಕ್ರವನ್ನೇ ತಿಳಿದುಕೊಂಡಿದ್ದೀರಿ. ಅಂದಾಗ ಖುಷಿಯಲ್ಲಿ
ಗದ್ಗದಿತರಾಗಬೇಕು, ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ಪರಮಪಿತ ಪರಮಾತ್ಮನು ಪ್ರಜಾಪಿತ
ಬ್ರಹ್ಮಾರವರ ಮೂಲಕ ಬ್ರಾಹ್ಮಣರ ಹೊಸ ಸೃಷ್ಟಿಯನ್ನು ರಚಿಸುತ್ತಾರೆ. ಇದು ಬಹಳ ಒಳ್ಳೆಯ
ತಿಳಿದುಕೊಳ್ಳುವ ಮಾತುಗಳಾಗಿವೆ. ನಿಮ್ಮ ಚಿತ್ರವೂ ಇದೆ, ವಿರಾಟ ರೂಪದ ಚಿತ್ರವನ್ನೂ ರಚಿಸಿದ್ದಾರೆ.
84 ಜನ್ಮಗಳ ಕಥೆಯನ್ನು ತೋರಿಸಿದ್ದಾರೆ. ನಾವೇ ದೇವತೆಗಳು ನಂತರ ಕ್ಷತ್ರಿಯರು, ವೈಶ್ಯ,
ಶೂದ್ರರಾಗುತ್ತೇವೆ. ಇದನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ ಏಕೆಂದರೆ ಬ್ರಾಹ್ಮಣರು ಮತ್ತು
ಬ್ರಾಹ್ಮಣರಿಗೆ ಓದಿಸುವಂತಹ ತಂದೆ ಇಬ್ಬರ ಹೆಸರು, ಗುರುತನ್ನೇ ಮರೆಸಿ ಬಿಟ್ಟಿದ್ದಾರೆ. ನೀವು
ಆಂಗ್ಲ ಭಾಷೆಯಲ್ಲಿಯೂ ಸಹ ಚೆನ್ನಾಗಿ ತಿಳಿಸಬಲ್ಲಿರಿ. ಯಾರು ಆಂಗ್ಲ ಭಾಷೆಯನ್ನು
ತಿಳಿದುಕೊಂಡಿದ್ದಾರೆಯೋ ಅವರು ಅನುವಾದ ಮಾಡಿ ತಿಳಿಸಿಕೊಡಿ. ತಂದೆಯು ನಾಲೆಡ್ಜ್ಫುಲ್ ಆಗಿದ್ದಾರೆ.
ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆಯೆಂದು ಅವರಿಗೇ ಈ ಜ್ಞಾನವಿದೆ. ಇದು ವಿದ್ಯೆಯಾಗಿದೆ.
ಯೋಗಕ್ಕೂ ತಂದೆಯ ನೆನಪೆಂದು ಹೇಳಲಾಗುತ್ತದೆ. ಇದನ್ನು ಆಂಗ್ಲ ಭಾಷೆಯಲ್ಲಿ ಕಮ್ಯುನಿಕೇಶನ್ ಎಂದು
ಹೇಳಲಾಗುತ್ತದೆ. ತಂದೆಯೊಂದಿಗೆ ಕಮ್ಯುನಿಯನ್, ಶಿಕ್ಷಕರೊಂದಿಗೆ ಕಮ್ಯುನಿಯನ್, ಸದ್ಗುರುವಿನೊಂದಿಗೆ
ಕಮ್ಯುನಿಯನ್. ಇದು ಪರಮಪಿತ ಪರಮಾತ್ಮನೊಂದಿಗೆ ಕಮ್ಯುನಿಯನ್ ಆಗಿದೆ. ಸ್ವಯಂ ತಂದೆಯೇ ತಿಳಿಸುತ್ತಾರೆ
- ನನ್ನನ್ನು ನೆನಪು ಮಾಡಿ, ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಮನುಷ್ಯರು
ಗುರುಗಳನ್ನು ಮಾಡಿಕೊಳ್ಳುತ್ತಾರೆ, ಶಾಸ್ತ್ರಗಳನ್ನು ಓದುತ್ತಾರೆ ಆದರೆ ಅವರಿಗೆ ಗುರಿ-ಉದ್ದೇಶವೇನೂ
ಇರುವುದಿಲ್ಲ. ಸದ್ಗತಿಯೂ ಆಗುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಎಲ್ಲರನ್ನೂ ಹಿಂತಿರುಗಿ
ಕರೆದುಕೊಂಡು ಹೋಗಲು ಬಂದಿದ್ದೇನೆ. ನೀವೀಗ ತಂದೆಯ ಜೊತೆ ಬುದ್ಧಿಯೋಗವನ್ನಿಡಬೇಕು. ಇದರಿಂದ ನೀವು
ಮನೆಗೆ ಹೋಗಬೇಕು. ಬಹಳ ಚೆನ್ನಾಗಿ ನೆನಪು ಮಾಡುವುದರಿಂದ ವಿಶ್ವದ ಮಾಲೀಕರಾಗುತ್ತೀರಿ. ಈ
ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರಲ್ಲವೆ. ಇದನ್ನು ತಿಳಿಸುವವರು ಯಾರಾಗಿದ್ದಾರೆ?
ತಂದೆಗೆ ನಾಲೆಡ್ಜ್ಫುಲ್ ಎಂದು ಹೇಳಲಾಗುತ್ತದೆ. ಇದಕ್ಕೆ ಮನುಷ್ಯರು ಭಗವಂತನು ಅಂತರ್ಯಾಮಿ ಎಂದು
ಹೇಳುತ್ತಾರೆ. ವಾಸ್ತವದಲ್ಲಿ ಅಂತರ್ಯಾಮಿ ಎನ್ನುವ ಶಬ್ಧವೇ ಇಲ್ಲ. ಒಳಗೆ ಇರುವಂತದ್ದು, ನಿವಾಸ
ಮಾಡುವಂತದ್ದು ಆತ್ಮವಾಗಿದೆ. ಆತ್ಮವು ಯಾವ ಕೆಲಸವನ್ನು ಮಾಡುತ್ತದೆ ಎಂಬುದನ್ನಂತೂ ಎಲ್ಲರೂ
ತಿಳಿದುಕೊಂಡಿದ್ದಾರೆ. ಎಲ್ಲಾ ಮನುಷ್ಯರು ಅಂತರ್ಯಾಮಿಯಾಗಿದ್ದಾರೆ. ಆತ್ಮವೇ ಕಲಿಯುತ್ತದೆ, ತಂದೆಯು
ನೀವು ಮಕ್ಕಳನ್ನು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ. ನೀವಾತ್ಮಗಳು ಮೂಲವತನದ
ನಿವಾಸಿಗಳಾಗಿದ್ದೀರಿ. ನೀವಾತ್ಮಗಳು ಎಷ್ಟು ಸೂಕ್ಷ್ಮವಾಗಿದ್ದೀರಿ! ಅನೇಕ ಬಾರಿ
ಪಾತ್ರವನ್ನಭಿನಯಿಸಲು ಬಂದಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ಬಿಂದುವಾಗಿದ್ದೇನೆ. ನನ್ನ
ಪೂಜೆಯನ್ನು ಮಾಡಲು ಸಾಧ್ಯವಿಲ್ಲ. ಏಕೆ ಮಾಡುತ್ತಾರೆ! ಅವಶ್ಯಕತೆಯೇ ಇಲ್ಲ. ನಾನು ನೀವಾತ್ಮಗಳಿಗೆ
ಓದಿಸಲು ಬರುತ್ತೇನೆ. ನಿಮಗೆ ರಾಜ್ಯಭಾಗ್ಯವನ್ನು ಕೊಡುತ್ತೇನೆ. ನಂತರ ನೀವು ರಾವಣ ರಾಜ್ಯದಲ್ಲಿ
ಬಂದು ಬಿಡುತ್ತೀರಿ ಆಗ ನನ್ನನ್ನೇ ಮರೆತು ಹೋಗುತ್ತೀರಿ. ಮೊಟ್ಟ ಮೊದಲು ಆತ್ಮವೇ
ಪಾತ್ರವನ್ನಭಿನಯಿಸಲು ಬರುತ್ತದೆ. 84 ಲಕ್ಷ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ಮನುಷ್ಯರು
ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಇರುವುದೇ ಗರಿಷ್ಠ 84 ಜನ್ಮ. ಈ ಮಾತುಗಳನ್ನು
ವಿದೇಶದಲ್ಲಿ ಹೋಗಿ ತಿಳಿಸಿದರೆ ಈ ಜ್ಞಾನವನ್ನು ನಮಗೆ ಇಲ್ಲಿ ಕುಳಿತು ಓದಿಸಿ ಎಂದು ಹೇಳುತ್ತಾರೆ.
ಅಲ್ಲಿ ನಿಮಗೆ ಸಾವಿರ ರೂಪಾಯಿಗಳು ಸಿಗುತ್ತವೆ. ನಾವು ನಿಮಗೆ 10-20 ಸಾವಿರ ರೂಪಾಯಿಗಳನ್ನು
ಕೊಡುತ್ತೇವೆ. ನಮಗೂ ಜ್ಞಾನವನ್ನು ತಿಳಿಸಿ ಎಂದು ಹೇಳುತ್ತಾರೆ. ಪರಮಾತ್ಮನೇ ನಾವಾತ್ಮಗಳಿಗೆ
ಓದಿಸುತ್ತಾರೆ, ಆತ್ಮವೇ ವಕೀಲ ಇತ್ಯಾದಿ ಪದವಿಯನ್ನು ಪಡೆಯುತ್ತದೆ. ಬಾಕಿ ಮನುಷ್ಯರಂತೂ ಎಲ್ಲರೂ
ದೇಹಾಭಿಮಾನಿಗಳಾಗಿದ್ದಾರೆ, ಯಾರಿಗೂ ಜ್ಞಾನವಿಲ್ಲ. ಭಲೆ ದೊಡ್ಡ-ದೊಡ್ಡ ತತ್ವಜ್ಞಾನಿಗಳು ಬಹಳಷ್ಟು
ಮಂದಿಯಿದ್ದಾರೆ ಆದರೆ ಯಾರಿಗೂ ಈ ಜ್ಞಾನವಿಲ್ಲ. ಭಗವಂತ ನಿರಾಕಾರನು ಓದಿಸಲು ಬರುತ್ತಾರೆ, ನಾವು
ಅವರಿಂದ ಓದುತ್ತೇವೆಂಬ ಈ ಮಾತುಗಳನ್ನು ಕೇಳಿ ಚಕಿತರಾಗಿ ಬಿಡುತ್ತಾರೆ. ಈ ಮಾತುಗಳನ್ನು ಎಂದೂ
ಕೇಳಿಯೂ ಇರುವುದಿಲ್ಲ. ಒಬ್ಬ ತಂದೆಗೇ ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳುತ್ತೀರಿ. ಯಾವಾಗ ಅವರೇ
ಮುಕ್ತಿದಾತನೆಂದ ಮೇಲೆ ಮತ್ತೆ ಕ್ರೈಸ್ಟ್ನ್ನು ಏಕೆ ನೆನಪು ಮಾಡುತ್ತೀರಿ? ಈ ಮಾತುಗಳನ್ನು ಚೆನ್ನಾಗಿ
ತಿಳಿಸಿದ್ದೇ ಆದರೆ ಅವರು ಚಕಿತರಾಗಿ ಬಿಡುತ್ತಾರೆ. ನಾವು ಇದನ್ನು ಕೇಳಲೇಬೇಕೆಂದು ಹೇಳುತ್ತಾರೆ
ಸ್ವರ್ಗದ ಸ್ಥಾಪನೆಯಾಗುತ್ತಿದೆ ಅದಕ್ಕಾಗಿ ಈ ಮಹಾಭಾರತ ಯುದ್ಧವೂ ಇದೆ. ತಂದೆಯು ತಿಳಿಸುತ್ತಾರೆ -
ನಾನು ನಿಮ್ಮನ್ನು ರಾಜಾಧಿರಾಜರು, ಡಬಲ್ ಕಿರೀಟಧಾರಿಗಳನ್ನಾಗಿ ಮಾಡುತ್ತೇನೆ. ಅಲ್ಲಿ ಸುಖ, ಶಾಂತಿ,
ಪವಿತ್ರತೆ ಎಲ್ಲವೂ ಇತ್ತು, ವಿಚಾರ ಮಾಡಿ - ಎಷ್ಟು ವರ್ಷಗಳಾಯಿತು? ಕ್ರಿಸ್ತನಿಗಿಂತ 3000 ವರ್ಷಗಳ
ಮೊದಲು ಇವರ ರಾಜ್ಯವಿತ್ತಲ್ಲವೆ. ಇದಂತೂ ಆಧ್ಯಾತ್ಮಿಕ ಜ್ಞಾನವಾಗಿದೆ ಎಂದು ಹೇಳುತ್ತಾರೆ. ಇವರು
ಡೈರೆಕ್ಟ್ ಆ ಪರಮಪಿತ ಪರಮಾತ್ಮನ ಮಗನಾಗಿದ್ದಾರೆ, ಅವರಿಂದ ರಾಜಯೋಗವನ್ನು ಕಲಿಯುತ್ತಿದ್ದಾರೆ.
ವಿಶ್ವದ ಚರಿತ್ರೆ, ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ, ಇದೆಲ್ಲವೂ ಜ್ಞಾನವಾಗಿದೆ.
ನಾವಾತ್ಮಗಳಲ್ಲಿ 84 ಜನ್ಮಗಳ ಪಾತ್ರವು ಅಡಕವಾಗಿದೆ. ಈ ಯೋಗದ ಶಕ್ತಿಯಿಂದ ಆತ್ಮವು ಸತೋಪ್ರಧಾನವಾಗಿ
ಸತೋಪ್ರಧಾನ ಪ್ರಪಂಚದಲ್ಲಿ ಹೊರಟು ಹೋಗುವುದು. ಅದಕ್ಕಾಗಿ ರಾಜ್ಯವೂ ಬೇಕಲ್ಲವೆ. ಹಳೆಯ ಪ್ರಪಂಚದ
ವಿನಾಶವೂ ಆಗಬೇಕು. ಅದು ಸನ್ಮುಖದಲ್ಲಿಯೇ ನಿಂತಿದೆ ಮತ್ತೆ ಒಂದು ಧರ್ಮದ ರಾಜ್ಯವಿರುವುದು. ಈಗ ಇದು
ಪಾಪಾತ್ಮರ ಪ್ರಪಂಚವಲ್ಲವೆ. ನೀವೀಗ ಪಾವನರಾಗುತ್ತಿದ್ದೀರಿ, ತಿಳಿಸಿ, ಈ ನೆನಪಿನ ಬಲದಿಂದ ನಾವು
ಪವಿತ್ರರಾಗುತ್ತೇವೆ, ಮತ್ತೆಲ್ಲದರ ವಿನಾಶವಾಗಿ ಬಿಡುತ್ತದೆ. ಪ್ರಾಕೃತಿಕ ವಿಕೋಪಗಳೂ ಸಹ ಆಗಲಿವೆ.
ನಾವು ಇದನ್ನು ರಿಯಲೈಜ್ ಮಾಡಿದ್ದೇವೆ ಮತ್ತು ದಿವ್ಯ ದೃಷ್ಟಿಯಿಂದಲೂ ನೋಡಿದ್ದೇವೆ. ಇದೆಲ್ಲವೂ
ಸಮಾಪ್ತಿಯಾಗುವುದಿದೆ. ತಂದೆಯು ದೈವೀ ಪ್ರಪಂಚದ ಸ್ಥಾಪನೆ ಮಾಡಲು ಬಂದಿದ್ದಾರೆ. ಇದನ್ನು ಕೇಳಿದಾಗ
ಹೇಳುತ್ತಾರೆ - ಓಹೋ, ಇವರು ಭಗವಂತನ ಮಕ್ಕಳಾಗಿದ್ದಾರೆ ಎಂದು. ನೀವು ಮಕ್ಕಳಿಗೆ ತಿಳಿದಿದೆ, ಈ
ಯುದ್ಧವಾಗುವುದು, ಪ್ರಾಕೃತಿಕ ವಿಕೋಪಗಳೂ ಆಗುವುದು ಆಗ ಯಾವ ಸ್ಥಿತಿಯಾಗಬಹುದು? ಈ ದೊಡ್ಡ-ದೊಡ್ಡ
ಕಟ್ಟಡಗಳೆಲ್ಲವೂ ಬೀಳತೊಡಗುತ್ತವೆ. ನಿಮಗೆ ತಿಳಿದಿದೆ - ಈ ಅಣು ಬಾಂಬು ಇತ್ಯಾದಿಗಳನ್ನು 5000
ವರ್ಷಗಳ ಮೊದಲೂ ತಮ್ಮದೇ ವಿನಾಶಕ್ಕಾಗಿ ತಯಾರಿಸಿದ್ದರು. ಈಗಲೂ ಬಾಂಬುಗಳು ತಯಾರಾಗಿವೆ.
ಯೋಗಬಲವೆಂದರೇನು ಯಾವುದರಿಂದ ನೀವು ವಿಶ್ವದ ಮೇಲೆ ವಿಜಯ ಗಳಿಸುತ್ತೀರಿ. ಇದು ಮತ್ತ್ಯಾರಿಗೂ
ತಿಳಿದಿಲ್ಲ. ಹೇಳಿ, ವಿಜ್ಞಾನವು ನಿಮ್ಮದೇ ವಿನಾಶ ಮಾಡುತ್ತದೆ. ನಮ್ಮದು ತಂದೆಯ ಜೊತೆ ಯೋಗವಿದೆ
ಆದ್ದರಿಂದ ಆ ಶಾಂತಿಯ ಬಲದಿಂದ ನಾವು ವಿಶ್ವದ ಮೇಲೆ ಜಯ ಗಳಿಸಿ ಸತೋಪ್ರಧಾನರಾಗಿ ಬಿಡುತ್ತೇವೆ.
ತಂದೆಯೇ ಪತಿತ-ಪಾವನನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಪಾವನ ಪ್ರಪಂಚವನ್ನು ಸ್ಥಾಪನೆ ಮಾಡಿಯೇ
ಮಾಡುತ್ತಾರೆ. ಡ್ರಾಮಾನುಸಾರ ನಿಗಧಿಯಾಗಿದೆ. ಯಾವ ಇಷ್ಟು ಬಾಂಬುಗಳನ್ನು ತಯಾರು ಮಾಡಿದ್ದಾರೆಯೋ
ಇವನ್ನು ಹಾಗೆಯೇ ಇಟ್ಟುಕೊಳ್ಳುತ್ತಾರೆಯೇ? ಹೀಗೆ ತಿಳಿಸಿದಾಗ ಅವರಿಗೆ ಅರ್ಥವಾಗುತ್ತದೆ, ಇದು
ಯಾವುದೋ ಶಕ್ತಿಯಾಗಿದೆ, ಇವರಲ್ಲಿ ಭಗವಂತನು ಬಂದು ಪ್ರವೇಶ ಮಾಡುತ್ತಾರೆ. ಇದೂ ಸಹ ನಾಟಕದಲ್ಲಿ
ನಿಗಧಿಯಾಗಿದೆ, ಇಂತಿಂತಹ ಮಾತುಗಳನ್ನು ತಿಳಿಸುತ್ತಾ ಇದ್ದಾಗ ಅವರೂ ಖುಷಿಯಾಗುತ್ತಾರೆ, ಆತ್ಮದಲ್ಲಿ
ಹೇಗೆ ಪಾತ್ರವಿದೆ, ಇದೂ ಸಹ ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ನಿಮ್ಮ ಕ್ರಿಸ್ತನೂ ಸಹ
ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ತಮೋಪ್ರಧಾನ ಸ್ಥಿತಿಯಲ್ಲಿದ್ದಾರೆ.
ಮತ್ತೆ ತಮ್ಮ ಸಮಯದಲ್ಲಿ ಕ್ರಿಸ್ತನು ಬಂದು ನಿಮ್ಮ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಹೀಗೆ
ಅಥಾರಿಟಿಯಿಂದ ಹೇಳಿದಾಗ ಅವರು ತಿಳಿದುಕೊಳ್ಳುತ್ತಾರೆ, ತಂದೆಯು ಎಲ್ಲಾ ಮಕ್ಕಳಿಗೆ ತಿಳಿಸುತ್ತಾರೆ
ಅಂದಾಗ ಈ ವಿದ್ಯೆಯಲ್ಲಿ ಮಕ್ಕಳು ತೊಡಗಬೇಕಾಗಿದೆ. ತಂದೆ, ಶಿಕ್ಷಕ, ಸದ್ಗುರು ಮೂವರೂ ಒಬ್ಬರೇ
ಆಗಿದ್ದಾರೆ. ಅವರು ಹೇಗೆ ಜ್ಞಾನವನ್ನು ಕೊಡುತ್ತಾರೆ ಎಂಬುದನ್ನೂ ನೀವು ತಿಳಿದುಕೊಂಡಿದ್ದೀರಿ.
ಎಲ್ಲರನ್ನೂ ಪವಿತ್ರರನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾರೆ. ದೈವೀ ರಾಜಧಾನಿಯಿದ್ದಾಗ
ಪವಿತ್ರರಿದ್ದರು, ದೇವಿ-ದೇವತೆಗಳಿದ್ದರು. ಮಾತನಾಡುವುದಕ್ಕೂ ಬಹಳ ಬುದ್ಧಿವಂತಿಕೆಯಿರಬೇಕು. ಮಾತಿನ
ಶೈಲಿಯು ಚೆನ್ನಾಗಿರಬೇಕು. ತಿಳಿಸಿ, ಉಳಿದೆಲ್ಲಾ ಆತ್ಮಗಳು ಮಧುರ ಮನೆಯಲ್ಲಿರುತ್ತಾರೆ, ತಂದೆಯೇ
ಕರೆದುಕೊಂಡು ಹೋಗುತ್ತಾರೆ. ಅವರೇ ಸರ್ವರ ಸದ್ಗತಿದಾತನಾಗಿದ್ದಾರೆ. ಅವರ ಜನ್ಮ ಸ್ಥಾನವು
ಭಾರತವಾಗಿದೆ. ಇದು ಎಷ್ಟು ದೊಡ್ಡ ತೀರ್ಥ ಸ್ಥಾನವಾಯಿತು!
ನಿಮಗೆ ತಿಳಿದಿದೆ -
ಎಲ್ಲರೂ ತಮೋಪ್ರಧಾನರಾಗಲೇಬೇಕಾಗಿದೆ. ಎಲ್ಲರೂ ಪುನರ್ಜನ್ಮವನ್ನು ತೆಗೆದುಕೊಳ್ಳುವರು, ಯಾರೂ
ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಆದಿದೇವನೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಅಂದಮೇಲೆ
ಕ್ರಿಸ್ತನೂ ಸಹ ಅವಶ್ಯವಾಗಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪುನಃ ಹೋಗಿ
ತಮೋಪ್ರಧಾನರಾಗುತ್ತಾರೆ. ಇಂತಹ ಮಾತುಗಳನ್ನು ತಿಳಿಸಿದಾಗ ಬಹಳ ಆಶ್ಚರ್ಯಚಕಿತರಾಗುತ್ತಾರೆ. ತಂದೆಯು
ತಿಳಿಸುತ್ತಾರೆ - ದಂಪತಿಗಳಾಗಿದ್ದರೆ ಬಹಳ ಚೆನ್ನಾಗಿ ತಿಳಿಸಬಹುದಾಗಿದೆ. ಭಾರತದಲ್ಲಿ ಮೊದಲು
ಪವಿತ್ರತೆಯಿತ್ತು, ನಂತರ ಹೇಗೆ ಅಪವಿತ್ರರಾಗುತ್ತಾರೆ ಎಂಬುದನ್ನೂ ಸಹ ತಿಳಿಸಬಹುದಾಗಿದೆ. ಪೂಜ್ಯರೇ
ಪೂಜಾರಿಗಳಾಗಿ ಬಿಡುತ್ತಾರೆ. ಅಪವಿತ್ರರಾಗುವುದರಿಂದ ಮತ್ತೆ ತಮ್ಮದೇ ಪೂಜೆಯನ್ನು ಮಾಡತೊಡಗುತ್ತಾರೆ.
ರಾಜರ ಮನೆಯಲ್ಲಿಯೂ ಈ ದೇವತೆಗಳ ಚಿತ್ರಗಳಿರುತ್ತವೆ, ಯಾರು ಪವಿತ್ರ, ಡಬಲ್ ಕಿರೀಟಧಾರಿಗಳಾಗಿದ್ದರೋ
ಅವರನ್ನು ಕಿರೀಟವಿಲ್ಲದ ಅಪವಿತ್ರರು ಪೂಜಿಸುತ್ತಾರೆ ಅಂದಮೇಲೆ ಅವರು ಪೂಜಾರಿ ರಾಜರಾದರು. ಅವರಿಗೆ
ದೇವಿ-ದೇವತೆಗಳೆಂದು ಹೇಳುವುದಿಲ್ಲ ಏಕೆಂದರೆ ಈ ದೇವತೆಗಳ ಪೂಜೆ ಮಾಡುತ್ತಾರೆ. ತಾವೇ ಪೂಜ್ಯ, ತಾವೇ
ಪೂಜಾರಿ ಪತಿತರಾಗಿ ಬಿಡುತ್ತಾರೆ, ಆಗ ರಾವಣ ರಾಜ್ಯವು ಆರಂಭವಾಗುತ್ತದೆ. ಈ ಸಮಯದಲ್ಲಿ ರಾವಣ
ರಾಜ್ಯವಿದೆ. ಹೀಗೀಗೆ ಕುಳಿತು ತಿಳಿಸಿದಾಗ ಎಷ್ಟು ಮಜಾ ಮಾಡಿ ತೋರಿಸುವಿರಿ. ಗಾಡಿಯ ಎರಡು ಚಕ್ರಗಳು
ಅರ್ಥಾತ್ ದಂಪತಿಗಳಿದ್ದರೆ ಅವರು ಬಹಳ ಅದ್ಭುತ ಮಾಡಿ ತೋರಿಸಬಹುದಾಗಿದೆ. ನಾವು ದಂಪತಿಗಳೇ ಪುನಃ
ಪೂಜ್ಯರಾಗುತ್ತೇವೆ. ನಾವು ಸುಖ, ಶಾಂತಿ, ಪವಿತ್ರತೆಯ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ.
ನಿಮ್ಮ ಚಿತ್ರಗಳೂ ಸಹ ರಚಿಸಲ್ಪಡುತ್ತಿರುತ್ತವೆ. ಇದು ಈಶ್ವರೀಯ ಪರಿವಾರವಾಗಿದೆ. ತಂದೆಗೆ
ಮಕ್ಕಳಿದ್ದಾರೆ, ಮೊಮ್ಮಕ್ಕಳೂ ಇದ್ದಾರೆ, ಮತ್ತ್ಯಾವುದೇ ಸಂಬಂಧವಿಲ್ಲ. ಇದಕ್ಕೆ ಹೊಸ ಸೃಷ್ಟಿಯೆಂದು
ಹೇಳಲಾಗುತ್ತದೆ. ಮತ್ತೆ ಕೆಲವರೇ ದೇವಿ-ದೇವತೆಗಳಾಗುತ್ತಾರೆ, ನಂತರ ನಿಧಾನ-ನಿಧಾನವಾಗಿ
ವೃದ್ಧಿಯಾಗುತ್ತದೆ. ಈ ಜ್ಞಾನವು ಎಷ್ಟೊಂದು ತಿಳಿದುಕೊಳ್ಳುವಂತದ್ದಾಗಿದೆ. ಈ ತಂದೆಯೂ ಸಹ (ಬ್ರಹ್ಮಾ)
ವ್ಯಾಪಾರದಲ್ಲಿ ಹೇಗೆ ನವಾಬನಾಗಿದ್ದರು, ಯಾವುದೇ ಮಾತಿನ ಚಿಂತೆಯಿರಲಿಲ್ಲ. ಯಾವಾಗ ಈ ವಿದ್ಯೆಯನ್ನು
ತಂದೆಯೇ ಓದಿಸುತ್ತಾರೆ, ವಿನಾಶವು ಸನ್ಮುಖದಲ್ಲಿ ನಿಂತಿದೆ ಎಂಬುದು ಅರ್ಥವಾದಾಗ ತಕ್ಷಣ ಎಲ್ಲವನ್ನೂ
ಬಿಟ್ಟು ಬಿಟ್ಟರು. ನಮಗೆ ರಾಜ್ಯಭಾಗ್ಯವೇ ಸಿಗುತ್ತದೆಯೆಂದ ಮೇಲೆ ಈ ಗುಲಾಮಿತನವನ್ನೇನು ಮಾಡುವುದು
ಎಂದು ತಿಳಿದುಕೊಂಡರು. ನೀವೂ ಸಹ ತಿಳಿದುಕೊಂಡಿದ್ದೀರಿ - ಭಗವಂತನೇ ಓದಿಸುತ್ತಾರೆ. ಇದನ್ನಂತೂ
ಪೂರ್ಣರೀತಿಯಲ್ಲಿ ಓದಬೇಕಲ್ಲವೆ. ಅವರ ಮತದನುಸಾರ ನಡೆಯಬೇಕು. ತಂದೆಯು ತಿಳಿಸುತ್ತಾರೆ - ತಮ್ಮನ್ನು
ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ನೀವು ತಂದೆಯನ್ನೇ ಮರೆತು ಹೋಗುತ್ತೀರಿ.
ನಾಚಿಕೆಯಾಗುವುದಿಲ್ಲವೆ? ಆ ನಶೆಯೂ ಏರುವುದಿಲ್ಲ. ಇಲ್ಲಿಂದ ಬಹಳ ಚೆನ್ನಾಗಿ ರಿಫ್ರೆಷ್ ಆಗಿ
ಹೋಗುತ್ತಾರೆ ಮತ್ತೆ ಅಲ್ಲಿ ಹೋಗಿ ಸೋಡಾವಾಟರ್ ಆಗಿ ಬಿಡುತ್ತಾರೆ. ಈಗ ನೀವು ಮಕ್ಕಳು
ಹಳ್ಳಿ-ಹಳ್ಳಿಯಲ್ಲಿ ಸರ್ವೀಸ್ ಮಾಡುವ ಪುರುಷಾರ್ಥ ಮಾಡುತ್ತೀರಿ. ತಂದೆಯು ತಿಳಿಸುತ್ತಾರೆ – ಮೊಟ್ಟ
ಮೊದಲು ಇದನ್ನು ತಿಳಿಸಿ - ಆತ್ಮಗಳ ತಂದೆ ಯಾರಾಗಿದ್ದಾರೆ. ಭಗವಂತನಂತೂ ನಿರಾಕಾರನೇ ಆಗಿದ್ದಾರೆ,
ಅವರೇ ಈ ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸ್ವಯಂ
ಭಗವಂತನು ಪರಮ ಶಿಕ್ಷಕನಾಗಿ ಓದಿಸುತ್ತಿದ್ದಾರೆ ಆದ್ದರಿಂದ ಚೆನ್ನಾಗಿ ಓದಬೇಕು, ಅವರ ಮತದಂತೆ
ನಡೆಯಬೇಕಾಗಿದೆ.
2. ತಂದೆಯ ಜೊತೆ ಈ ರೀತಿ
ಯೋಗವನ್ನಿಡಬೇಕು ಅದರಿಂದ ಶಾಂತಿಯ ಬಲವು ಜಮಾ ಆಗುತ್ತಾ ಹೋಗಲಿ. ಶಾಂತಿಯ ಬಲದಿಂದ ವಿಶ್ವದ ಮೇಲೆ ಜಯ
ಗಳಿಸಬೇಕಾಗಿದೆ, ಪತಿತರಿಂದ ಪಾವನರಾಗಬೇಕಾಗಿದೆ.
ವರದಾನ:
ಸಮಯ ಮತ್ತು
ಸಂಕಲ್ಪಗಳನ್ನು ಸೇವೆಯಲ್ಲಿ ಅರ್ಪಣೆ ಮಾಡುವಂತಹ ಮಾಸ್ಟರ್ ವಿದಾತಾ, ವರದಾತಾ ಭವ.
ಈಗ ಸ್ವಯಂನ ಸಣ್ಣ-ಸಣ್ಣ
ಮಾತುಗಳ ಹಿಂದೆ, ತನುವಿನ ಹಿಂದೆ, ಮನಸ್ಸಿನ ಹಿಂದೆ, ಸಾಧನಗಳ ಹಿಂದೆ, ಸಂಬಂಧ ನಿಭಾಯಿಸುವುದರ ಹಿಂದೆ
ಸಮಯ ಮತ್ತು ಸಂಕಲ್ಪ ತೊಡಗಿಸುವ ಬದಲು ಅದನ್ನು ಸೇವೆಯಲ್ಲಿ ಅರ್ಪಣೆ ಮಾಡಿ ಬಿಡಿ, ಇದರ ಸಮರ್ಪಣಾ
ಸಮಾರೋಹ ಆಚರಿಸಿ. ಶ್ವಾಸೊ ಶ್ವಾಸ ಸೇವೆಯ ಲಗನ್ ಇರಲಿ, ಸೇವೆಯಲ್ಲಿ ಮಗ್ನವಾಗಿರಿ. ಆದ್ದರಿಂದ
ಸೇವೆಯಲ್ಲಿ ತೊಡಗಿಸುವುದರಿಂದ ಸ್ವ-ಉನ್ನತಿಯ ಉಡುಗೊರೆ ಸ್ವತಃ ಪ್ರಾಪ್ತಿಯಾಗಿ ಬಿಡುವುದು. ವಿಶ್ವ
ಕಲ್ಯಾಣದಲ್ಲಿ ಸ್ವ ಕಲ್ಯಾಣ ಸಮಾವೇಶವಾಗಿದೆ ಆದ್ದರಿಂದ ನಿರಂತರ ಮಹಾದಾನಿ, ಮಾಸ್ಟರ್ ವಿದಾತಾ ಮತ್ತು
ವರದಾತಾ ಆಗಿ.
ಸ್ಲೋಗನ್:
ತಮ್ಮ
ಇಚ್ಛೆಗಳನ್ನು ಕಡಿಮೆ ಮಾಡಿ ಆಗ ಸಮಸ್ಯೆಗಳು ಕಡಿಮೆಯಾಗಿ ಬಿಡುವುದು.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಹೇಗೆ ಲೌಕಿಕ ರೀತಿಯಿಂದ
ಯಾರಾದರೂ ಯಾರದ್ದೇ ಸ್ನೇಹದಲ್ಲಿ ಲವಲೀನರಾಗಿದ್ದರೆ ಮುಖದಿಂದ, ನಯನಗಳಿಂದ, ವಾಣಿಯಿಂದ
ಅನುಭವವಾಗುತ್ತದೆ ಇವರು ಲವಲೀನರಾಗಿದ್ದಾರೆ, ಪ್ರಿಯತಮೆಯರಾಗಿದ್ದಾರೆ, ಹಾಗೆಯೇ ಯಾವ ಸಮಯದಲ್ಲಿ
ಸ್ಟೇಜ್ ಮೇಲೆ ಬರುತ್ತೀರೆಂದರೆ ಎಷ್ಟು ತಮ್ಮ ಒಳಗಡೆ ತಂದೆಯ ಸ್ನೇಹ ಇಮಾರ್ಜ್ ಆಗಿರುತ್ತದೆ ಅಷ್ಟು
ಸ್ನೇಹದ ಬಾಣ ಅನ್ಯರಿಗೂ ಸಹ ಸ್ನೇಹದಲ್ಲಿ ಗಾಯ ಮಾಡಿ ಬಿಡುತ್ತದೆ.