23.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ರಾವಣನು ನಿಮ್ಮನ್ನು ಬಹಳ ಪೀಡಿತರನ್ನಾಗಿ ಮಾಡಿದ್ದಾನೆ, ಈಗ ನೀವು ಭಕ್ತರ ರಕ್ಷಕನಾದ ಭಗವಂತನು ನಿಮ್ಮ ಪೀಡೆಯನ್ನು ದೂರ ಮಾಡಲು ಬಂದಿದ್ದಾರೆ”

ಪ್ರಶ್ನೆ:
ಸುಪುತ್ರ ಮಕ್ಕಳ ಮುಖ್ಯ ಎರಡು ಲಕ್ಷಣಗಳನ್ನು ತಿಳಿಸಿ.

ಉತ್ತರ:
1. ಸುಪುತ್ರರು ಸದಾ ಮಾತಾಪಿತರನ್ನು ಫಾಲೋ ಮಾಡಿ ಸಿಂಹಾಸನಾಧೀಶರಾಗುತ್ತಾರೆ. ತೀವ್ರ ಪುರುಷಾರ್ಥದಲ್ಲಿ ತೊಡಗಿರುತ್ತಾರೆ. 2. ಅವರಿಗೆ ತಂದೆಯ ಜೊತೆ ಬಹಳ ಸತ್ಯ ಹೃದಯವಿರುತ್ತದೆ. ಸತ್ಯ ಹೃದಯದವರು ಸದಾ ಶ್ರೀ ಮತದಂತೆ ನಡೆಯುತ್ತಾರೆ. ಒಂದುವೇಳೆ ಒಳಗಡೆ ಸತ್ಯತೆಯಿಲ್ಲವೆಂದರೆ ನೆನಪಿನಲ್ಲಿರಲು ಸಾಧ್ಯವಿಲ್ಲ.

ಗೀತೆ:
ಭೋಲಾನಾಥನಿಗಿಂತ ಭಿನ್ನ............

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಈ ಭಕ್ತಿ ಮಾರ್ಗದ ಗೀತೆಯನ್ನು ಕೇಳಿದಿರಿ. ಭಕ್ತರು ಈ ಗೀತೆಯ ಅರ್ಥವನ್ನು ತಿಳಿದುಕೊಂಡಿಲ್ಲ, ನೀವು ಭಗವಂತನ ಮಕ್ಕಳಾಗಿದ್ದೀರಿ. ಭಗವಂತನು ಭಕ್ತರ ರಕ್ಷಕನಾಗಿದ್ದಾರೆ. ನೀವೂ ಸಹ ಭಕ್ತರ ರಕ್ಷಕರಾಗಿದ್ದೀರಿ, ಭಕ್ತರ ರಕ್ಷಣೆ ಮಾಡುತ್ತೀರಿ. ಯಾವ ಆಪತ್ತಿನ ಕಾರಣ ಭಕ್ತರು ರಕ್ಷಣೆಗಾಗಿ ಭಗವಂತನನ್ನು ಕರೆಯುತ್ತಾರೆ? ಭಕ್ತರಿಗೆ ರಾವಣನ ಬಹಳ ದುಃಖವಿದೆ, ರಾವಣ ಸಂಪ್ರದಾಯವು ದುಃಖದಿಂದ ಪೀಡಿತರಾಗಿದ್ದಾರೆ ಆದ್ದರಿಂದ ಭೋಲಾನಾಥನನ್ನು ನೆನಪು ಮಾಡುತ್ತಾರೆ. ಅವರು ರಾವಣ ಸಂಪ್ರದಾಯದವರು, ಇವರು ರಾಮ ಸಂಪ್ರದಾಯದವರಾಗಿದ್ದಾರೆ. ನಮ್ಮ ರಕ್ಷಕ ಯಾರೆಂಬುದು ಭಕ್ತರಿಗೇ ಗೊತ್ತಿಲ್ಲ. ಭೋಲಾನಾಥ ರಕ್ಷಕನಾಗಿದ್ದಾರೆ ಎಂದು ಭಲೆ ಹಾಡುತ್ತಾರೆ ಆದರೆ ಏನು ರಕ್ಷಣೆ ಮಾಡುತ್ತಾರೆಂದು ತಿಳಿದುಕೊಂಡಿಲ್ಲ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ - ಭೋಲಾನಾಥ ಶಿವ ತಂದೆಯು ಹಾಳಾಗಿರುವುದನು ಸುಧಾರಣೆ ಮಾಡುವವರಾಗಿದ್ದಾರೆ. ಭಗವಂತನೆಂದು ಯಾರಿಗೆ ಹೇಳಲಾಗುತ್ತದೆ ಎಂಬುದು ಪ್ರಪಂಚದವರಿಗೇ ತಿಳಿದಿಲ್ಲ. ಭಗವಂತನ ಬಗ್ಗೆ ತಿಳಿದಿದ್ದರೆ ಭಗವಂತನ ರಚನೆಯ ಆದಿ-ಮಧ್ಯ-ಅಂತ್ಯವೂ ತಿಳಿಯುತ್ತಿತ್ತು ಆದರೆ ಭಗವಂತನನ್ನಾಗಲಿ, ಅವರ ರಚನೆಯನ್ನಾಗಲಿ ತಿಳಿದುಕೊಂಡಿಲ್ಲ ಆದ್ದರಿಂದ ಇಂತಹ ಮನುಷ್ಯ ಸಂಪ್ರದಾಯಕ್ಕೆ ಅಂಧರೆಂದು ಹೇಳಲಾಗುತ್ತದೆ. ಇನ್ನೊಂದು ಕಡೆ ನೀವು ಇದ್ದೀರಿ. ನಿಮಗೆ ದಿವ್ಯ ದೃಷ್ಟಿ ಸಿಕ್ಕಿದೆ. ಈಗ ನಿಮ್ಮ ಹೆಸರೇ ಆಗಿದೆ - ಬ್ರಹ್ಮಾಕುಮಾರ-ಕುಮಾರಿಯರು. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವೆಂದು ಬೋರ್ಡಿನ ಮೇಲೆ ಹೆಸರಿದೆ. ಕೇವಲ ಬ್ರಹ್ಮಾಕುಮಾರ-ಕುಮಾರಿಯರೇ ಇರಲು ಸಾಧ್ಯವಿಲ್ಲ. ಪ್ರಜಾಪಿತ ಬ್ರಹ್ಮನೂ ಇದ್ದಾರಲ್ಲವೆ. ತಂದೆಯ ಬಳಿ ಕನ್ಯೆಯರು ಮತ್ತು ಕುಮಾರರು ಇಬ್ಬರೂ ಇರುತ್ತಾರೆ. ಪ್ರಜಾಪಿತ ಬ್ರಹ್ಮನಿಗೇ ಇಷ್ಟೊಂದು ಮಂದಿ ಮಕ್ಕಳಿರಲು ಸಾಧ್ಯ. ಅಂದಾಗ ಇವರು ಬೇಹದ್ದಿನ ಪಿತನಾಗಿದ್ದಾರೆಂದು ತಿಳಿದುಕೊಳ್ಳಬೇಕು. ಇದನ್ನೂ ತಿಳಿದುಕೊಂಡಿದ್ದೀರಿ - ಬ್ರಹ್ಮಾ, ವಿಷ್ಣು, ಶಂಕರನನ್ನು ರಚಿಸುವವರು ತಂದೆಯೇ ಆಗಿದ್ದಾರೆ, ಅವರಿಗೆ ನಿರಾಕಾರನೆಂದು ಹೇಳಲಾಗುತ್ತದೆ. ಇವರು ಬೇಹದ್ದಿನ ತಂದೆಯಾದರು, ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ರಚನೆಯನ್ನು ರಚಿಸುತ್ತಾರೆ. ಎಲ್ಲವೂ ಇವರ ರಚನೆಯಾಗಿದೆ. ಎಲ್ಲಾ ಮನುಷ್ಯ ಮಾತ್ರರು ವಾಸ್ತವದಲ್ಲಿ ಶಿವ ವಂಶಿಯರಾಗಿದ್ದಾರೆ, ನೀವೀಗ ಬಂದು ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೀರಿ, ಇದು ಹೊಸ ರಚನೆಯಾಗಿದೆ. ಪರಮಪಿತ ಪರಮಾತ್ಮನು ಬ್ರಹ್ಮಾನ ಮೂಲಕ ರಚನೆಯನ್ನು ರಚಿಸುತ್ತಾರೆ ಆದ್ದರಿಂದ ನಿಮಗೆ ಬ್ರಹ್ಮಾಕುಮಾರ-ಕುಮಾರಿಯರೆಂದು ಹೇಳಲಾಗುತ್ತದೆ. ಇಷ್ಟೊಂದು ಮಂದಿ ಬೇಹದ್ದಿನ ಮಕ್ಕಳಿದ್ದಾರೆ ಅಂದಮೇಲೆ ಅವಶ್ಯವಾಗಿ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುವರು. ಮಕ್ಕಳಿಗೆ ತಿಳಿದಿದೆ, ನಾವು ಬ್ರಹ್ಮಾಕುಮಾರ-ಕುಮಾರಿಯರನ್ನು ಶಿವ ತಂದೆಯು ದತ್ತು ಮಾಡಿಕೊಂಡಿದ್ದಾರೆ. ಶಿವ ತಂದೆಯು ತಿಳಿಸುತ್ತಾರೆ - ನೀವು ನನ್ನ ಮಕ್ಕಳಾಗಿದ್ದೀರಿ, ನೀವಾತ್ಮರೂ ನಿರಾಕಾರಿಯಾಗಿದ್ದಿರಿ ಆದರೆ ಜ್ಞಾನವಂತೂ ಸಾಕಾರದಲ್ಲಿ ಬೇಕಲ್ಲವೆ. ನೀವು ತಿಳಿದುಕೊಂಡಿದ್ದೀರಿ- ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ಬ್ರಹ್ಮಾರವರ ಮೂಲಕ ರಚನೆಯು ಇಲ್ಲಿಯೇ ಆಗುತ್ತದೆ. ಇಲ್ಲಿಯೇ ಶಿವ ಜಯಂತಿಯನ್ನೂ ಆಚರಿಸಲಾಗುತ್ತದೆ, ಇಲ್ಲಿ ಮಗಧ ದೇಶದಲ್ಲಿಯೇ ಜನ್ಮ ತೆಗೆದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ಈ ದೇಶವು ಬಹಳ ಪವಿತ್ರ ಸ್ವರ್ಗವಾಗಿತ್ತು, ಈಗ ಇದಕ್ಕೆ ನರಕ, ಮಗಧ ದೇಶವೆಂದು ಹೇಳಲಾಗುತ್ತದೆ ನಂತರ ಸ್ವರ್ಗವಾಗುವುದು. ನೀವು ಮಕ್ಕಳ ಬುದ್ಧಿಯಲ್ಲಿದೆ, ಶಿವ ತಂದೆಯು ನಮಗೆ ರಾಜಯೋಗವನ್ನು ಕಲಿಸಿ, ಪವಿತ್ರರನ್ನಾಗಿ ಮಾಡುತ್ತಾರೆ. ಪತಿತ-ಪಾವನ ಭಕ್ತರ ರಕ್ಷಕ ಭಗವಂತನೆಂದು ಹಾಡುತ್ತಾರೆ. ಭಕ್ತರೇ ಕೂಗುತ್ತಾರೆ. ಪತಿತರಾಗಿದ್ದರೂ ಸಹ ತಮ್ಮನ್ನು ಪತಿತರೆಂದು ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಪತಿತರಾಗಿದ್ದೀರಿ, ಸತ್ಯಯುಗಕ್ಕೆ ಪಾವನ ಪ್ರಪಂಚವೆಂದೂ, ಕಲಿಯುಗಕ್ಕೆ ಪತಿತ ಪ್ರಪಂಚವೆಂದೂ ಹೇಳಲಾಗುತ್ತದೆ. ತಂದೆಯು ನಿಮಗೆ ಎಲ್ಲಾ ಸತ್ಯ ಮಾತುಗಳನ್ನು ತಿಳಿಸುತ್ತಾರೆ. ಲಕ್ಷಾಂತರ ವರ್ಷಗಳ ವಸ್ತು ಯಾವುದೂ ಇರುವುದಿಲ್ಲ. ಮನುಷ್ಯರು ಘೋರ ಅಂಧಕಾರದಲ್ಲಿದ್ದಾರೆ, ಕಲಿಯುಗವು ಇನ್ನೂ ಚಿಕ್ಕ ಮಗುವಾಗಿದೆ ಎಂದು ತಿಳಿಯುತ್ತಾರೆ ಮತ್ತು ನೀವು ತಿಳಿದುಕೊಂಡಿದ್ದೀರಿ, ಮೃತ್ಯುವು ಸನ್ಮುಖದಲ್ಲಿ ನಿಂತಿದೆ. ಅಂಧಕಾರ ಮತ್ತು ಪ್ರಕಾಶತೆಯ ವರ್ಣನೆಯನ್ನು ಸಂಗಮದಲ್ಲಿಯೇ ಮಾಡಲಾಗುತ್ತದೆ. ನೀವೀಗ ಘೋರ ಪ್ರಕಾಶದಲ್ಲಿ ಬಂದಿದ್ದೀರಿ, ಸತ್ಯಯುಗದಲ್ಲಿ ನೀವು ಈ ವರ್ಣನೆ ಮಾಡಲು ಸಾಧ್ಯವಿಲ್ಲ. ಅಲ್ಲಿ ಈ ಜ್ಞಾನವೇ ಇರುವುದಿಲ್ಲ. ಈ ಸಮಯದಲ್ಲಿ ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ನೀವು ಸತ್ಯಯುಗದಲ್ಲಿ ಸೂರ್ಯವಂಶಿ ಮನೆತನದವರಾಗಿದ್ದಿರಿ ಮತ್ತೆ ಅಂತ್ಯದಲ್ಲಿ ಬಂದು ಶೂದ್ರವಂಶಿಯರಾಗಿದ್ದೀರಿ, ಈಗ ಮತ್ತೆ ಬ್ರಾಹ್ಮಣವಂಶಿಗಳಾಗಿದ್ದೀರಿ. ನೀವೀಗ ಸರ್ವೋತ್ತಮ ಬ್ರಾಹ್ಮಣ ಕುಲದವರಾಗಿದ್ದೀರಿ, ಅತ್ಯುತ್ತಮರಾಗಿದ್ದೀರಿ. ಇದು ಈಶ್ವರೀಯ ಕುಲವಲ್ಲವೆ. ತಂದೆಯ ಬಳಿ ಬರುತ್ತಾರೆ, ಆಗ ತಂದೆಯು ಯಾರ ಬಳಿ ಬಂದಿದ್ದೀರಿ ಎಂದು ಕೇಳಿದಾಗ ತಂದೆಯ ಬಳಿ ಎಂದು ಹೇಳುತ್ತಾರೆ. ಇಬ್ಬರು ತಂದೆಯರಿದ್ದಾರೆ, ಒಬ್ಬರು ಲೌಕಿಕ ಇನ್ನೊಬ್ಬರು ಪಾರಲೌಕಿಕ. ಎಲ್ಲಾ ಸಾಲಿಗ್ರಾಮಗಳ ತಂದೆ ಒಬ್ಬರೇ ಶಿವನಾಗಿದ್ದಾರೆ, ನಿಮ್ಮ ಬುದ್ಧಿಯಲ್ಲಿ ಈ ಜ್ಞಾನವು ಹನಿಯುತ್ತಿರುತ್ತದೆ. ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ನಿರಾಕಾರ ತಂದೆಯು ಆಸ್ತಿಯನ್ನು ಸಾಕಾರದ ಮೂಲಕವೇ ಕೊಡುವರಲ್ಲವೆ. ತಂದೆಯು ತಿಳಿಸುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಬಂದು ಪ್ರವೇಶ ಮಾಡುತ್ತೇನೆ. ಈಗ ತಂದೆಯು ಮಕ್ಕಳಿಗೆ ಹೇಳುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿ ಭವ, ತಮ್ಮನ್ನು ಆತ್ಮನೆಂದು ತಿಳಿಯಿರಿ. ಈ ದೇಹವು ವಿನಾಶಿ, ಆತ್ಮವು ಅವಿನಾಶಿಯಾಗಿದೆ. ಆತ್ಮವೇ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ದೇಹವಲ್ಲ. ದೇಹವಂತೂ ಬದಲಾಗುತ್ತಿರುತ್ತದೆ ಮತ್ತೆ ಅನ್ಯ ಮಿತ್ರ ಸಂಬಂಧಿಗಳು ಸಿಗುತ್ತಾರೆ. ಪರಮಪಿತ ಪರಮಾತ್ಮನ ಮೂಲಕ ಈಗ ಆತ್ಮವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನೀವೇ ಕೇಳಿದ ನಂತರ ಧಾರಣೆ ಮಾಡಿಕೊಳ್ಳುತ್ತೀರಿ. ನಿಮ್ಮ ಆತ್ಮದಲ್ಲಿ ಸಂಸ್ಕಾರವಿದೆ. ಶರೀರದ ಸಂಸ್ಕಾರವೆಂದು ಹೇಳುವುದಿಲ್ಲ. ಸಂಸ್ಕಾರವು ಆತ್ಮದಲ್ಲಿಯೇ ಇರುತ್ತದೆ. ನಿಮ್ಮ ಆತ್ಮನ ಸಂಸ್ಕಾರವು ತಮೋಪ್ರಧಾನವಾಗಿದೆ, ಅದನ್ನು ಈಗ ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ, ಕಾಯ ಕಲ್ಪತರು ಎಂದು ಹೇಳಲಾಗುತ್ತದೆ. ಕಾಯವು ಕಲ್ಪವೃಕ್ಷದ ಸಮಾನ ಆಗುತ್ತದೆ, ಧೀರ್ಘಾಯಸ್ಸು ಇರುತ್ತದೆ. ನೀವು ತಿಳಿದುಕೊಂಡಿದ್ದೀರಿ - ಇಲ್ಲಂತೂ ಆಯಸ್ಸು ಬಹಳ ಕಡಿಮೆಯಿದೆ. ಚಿಕ್ಕ ವಯಸ್ಸಿನಲ್ಲಿಯೇ ಕುಳಿತು-ಕುಳಿತಿದ್ದಂತೆಯೇ ಅಕಾಲ ಮೃತ್ಯುವಾಗಿ ಬಿಡುತ್ತದೆ. ನೀವೀಗ ಕಾಲದ ಮೇಲೆ ಜಯ ಗಳಿಸುತ್ತೀರಿ, ಅಲ್ಲಿ ಕಾಲವೆಂದೂ ಕಬಳಿಸುವುದಿಲ್ಲ, ಅಕಾಲದಲ್ಲಿ ಶರೀರ ಬಿಡುವುದಿಲ್ಲ. ಈಗ ಈ ಶರೀರಕ್ಕೆ ವಯಸ್ಸಾಯಿತು, ಇದನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳಬೇಕೆಂದು ತಿಳಿದುಕೊಂಡಿರುತ್ತೀರಿ. ಶರೀರ ಬಿಡುವ ಸಮಯದಲ್ಲಿಯೂ ಅಲ್ಲಿ ವಾದ್ಯಗಳು ಮೊಳಗುತ್ತವೆ, ಜನ್ಮ ಪಡೆಯುವ ಸಮಯದಲ್ಲಿಯೂ ಮೊಳಗುತ್ತವೆ, ಅಲ್ಲಿ ಅಳುವ ಮಾತೇ ಇರುವುದಿಲ್ಲ. ನಿಮಗೆ ಭ್ರಮರಿಯ ಉದಾಹರಣೆಯನ್ನೂ ತಿಳಿಸಲಾಗುತ್ತದೆ. ನೀವು ಬ್ರಾಹ್ಮಣ-ಬ್ರಾಹ್ಮಣಿಯರಾಗಿದ್ದೀರಿ. ಬ್ರಾಹ್ಮಣಿ ಮತ್ತು ಭ್ರಮರಿಯ ರಾಶಿಯು ಹೋಲುತ್ತದೆ. ಯಾವ ಕೆಲಸವನ್ನು ಭ್ರಮರಿ ಮಾಡುತ್ತದೆಯೋ ಅದನ್ನೇ ನೀವೂ ಮಾಡುತ್ತೀರಿ. ಅದ್ಭುತವಲ್ಲವೆ. ಭ್ರಮರಿಯ ಉದಾಹರಣ, ಸರ್ಪದ ಉದಾಹರಣ, ಆಮೆಯ ಉದಾಹರಣೆ ಎಲ್ಲವೂ ಶಾಸ್ತ್ರಗಳಲ್ಲಿವೆ. ಸನ್ಯಾಸಿಗಳೂ ಸಹ ಈ ಉದಾಹರಣೆ ತಿಳಿಸುತ್ತಾರೆ - ಈಗ ನೀವು ಮಕ್ಕಳು ತಂದೆಯ ಮೂಲಕ ಇದೆಲ್ಲವನ್ನೂ ತಿಳಿದುಕೊಳ್ಳುತ್ತಿದ್ದೀರಿ. ಅದಂತೂ ಭಕ್ತಿ ಮಾರ್ಗವಾಯಿತು, ಕಳೆದು ಹೋದುದರ ಗಾಯನ ಮಾಡುವುದು. ಇದು ಮತ್ತೆ ನಂತರದಲ್ಲಿ ಗಾಯನವಾಗುತ್ತದೆ. ಈ ಸಮಯದಲ್ಲಿಯೇ ತಂದೆಯು ಈ ತನುವಿನಲ್ಲಿ ಬರುತ್ತಾರೆ. ಈ ಬ್ರಹ್ಮಾರವರಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಅದಂತೂ ಅಂಧಶ್ರದ್ಧೆಯಾಗುತ್ತದೆ, ಇಂತಹ ಮನುಷ್ಯರೂ ಇದ್ದಾರೆ, ರಾಮನನ್ನು, ಕೃಷ್ಣನನ್ನು ಭಗವಂತನೆಂದು ತಿಳಿಯುತ್ತಾರೆ. ಕೃಷ್ಣನಿಗೂ, ರಾಮನಿಗೂ ಸರ್ವವ್ಯಾಪಿ ಹೇಳಿ ಬಿಡುತ್ತಾರೆ. ಕೆಲವರು ಕೃಷ್ಣ ಪಂಥದವರು, ಕೆಲವರು ರಾಧೆಯ ಪಂಥದವರಿರುತ್ತಾರೆ. ರಾಧೆಯ ಪಂಥದವರು ಎಲ್ಲಿ ನೋಡಿದರಲ್ಲಿ ರಾಧೆಯೇ ರಾಧೆ ಎಂದು ಹೇಳುತ್ತಾರೆ. ಕೃಷ್ಣ ಪಂಥದವರು ಎಲ್ಲಾ ಕಡೆಯೂ ಕೃಷ್ಣನೇ ಕೃಷ್ಣನಿದ್ದಾನೆಂದು, ರಾಮ ಪಂಥದವರು ರಾಮನೇ ರಾಮನೆಂದು ಹೇಳುತ್ತಾರೆ. ರಾಮನು ಕೃಷ್ಣನಿಗಿಂತ ದೊಡ್ಡವನೆಂದು ತಿಳಿಯುತ್ತಾರೆ, ಏಕೆಂದರೆ ರಾಮನನ್ನು ತ್ರೇತಾ ಯುಗದಲ್ಲಿಯೂ, ಕೃಷ್ಣನನ್ನು ದ್ವಾಪರ ಯುಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಎಷ್ಟೊಂದು ಅಜ್ಞಾನವಿದೆ, ಈಗ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಿದ್ದಾರೆ, ಎಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆಂದರೆ ಅವಶ್ಯವಾಗಿ ಬೇಹದ್ದಿನ ತಂದೆಯೂ ಇರುವರು. ನೀವು ಯಾರೊಂದಿಗಾದರೂ ಕೇಳಿರಿ, ಪ್ರಜಾಪಿತ ಬ್ರಹ್ಮನ ಹೆಸರನ್ನು ಎಂದಾದರೂ ಕೇಳಿದ್ದೀರಾ? ತಂದೆಯು ಸ್ವರ್ಗದ ಹೊಸ ರಚನೆಯನ್ನು ರಚಿಸಿದ್ದಾರೆ, ಬ್ರಹ್ಮಾರವರ ಮೂಲಕ ಬ್ರಾಹ್ಮಣರೆಂದು ಗಾಯನವಿದೆ, ಎಲ್ಲಿಯವರೆಗೆ ನೀವೆಲ್ಲಾ ಬ್ರಾಹ್ಮಣರು ಬ್ರಹ್ಮ ಮುಖವಂಶಾವಳಿ ಆಗುವುದಿಲ್ಲವೋ ಅಲ್ಲಿಯವರೆಗೆ ತಾತನಿಂದ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಬೇಹದ್ದಿನ ಮಕ್ಕಳು ಬೇಹದ್ದಿನ ಆಸ್ತಿಯನ್ನು ತಂದೆಯಿಂದಲೇ ತೆಗೆದುಕೊಳ್ಳುತ್ತೀರಿ, ಅವಶ್ಯವಾಗಿ ತೆಗೆದುಕೊಂಡಿದ್ದಿರಿ ಸ್ವರ್ಗವಾಸಿಗಳಾಗಿದ್ದಿರಿ, ಈಗ ನರಕವಾಸಿಗಳಾಗಿ ಬಿಟ್ಟಿದ್ದೀರಿ. ಈಗ ಪುನಃ ಪ್ರಜಾಪಿತ ಬ್ರಹ್ಮಾರವರ ಮೂಲಕ ಪರಮಪಿತ ಪರಮಾತ್ಮನು ವಿಷ್ಣು ಪುರಿ, ಸ್ವರ್ಗವನ್ನು ರಚಿಸುತ್ತಿದ್ದಾರೆ. ಎಷ್ಟೊಂದು ಸಹಜವಾಗಿದೆ! ಶಿವ ತಂದೆಯು ಕೇಳುತ್ತಾರೆ - ಮೊದಲು ನಿಮಗೆ ಈ ಜ್ಞಾನವಿತ್ತೆ? ಇವರ (ಬ್ರಹ್ಮಾ) ಆತ್ಮವು ಹೇಳುತ್ತದೆ, ನನ್ನಲ್ಲಿಯೂ ಈ ಜ್ಞಾನವಿರಲಿಲ್ಲ, ನಾನೂ ಸಹ ವಿಷ್ಣುವಿನ ಪೂಜಾರಿಯಾಗಿದ್ದೆನು. ನಾನು ಪೂಜ್ಯನಾಗಿದ್ದೆನು, ಈಗ ಬಂದು ಪೂಜಾರಿಯಾಗಿದ್ದೇನೆ, ಈಗ ಪುನಃ ತಂದೆಯು ಬಂದು ಪೂಜಾರಿಯಿಂದ ಪೂಜ್ಯ ದೇವತೆಯನ್ನಾಗಿ ಮಾಡುತ್ತಿದ್ದಾರೆ. ನೀವು ಮಕ್ಕಳಿಗೆ ಆಂತರ್ಯದಲ್ಲಿ ಖುಷಿಯಿರಬೇಕು. ಪರಮಪಿತ ಪರಮಾತ್ಮನು ಬಂದು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ಮನುಷ್ಯರು ಮನುಷ್ಯರನ್ನು ದತ್ತು ಮಾಡಿಕೊಳ್ಳುತ್ತಾರಲ್ಲವೆ. ಯಾರಿಗೆ ತಮ್ಮ ಮಕ್ಕಳಿರುವುದಿಲ್ಲವೋ ಅವರು ದತ್ತು ಮಾಡಿಕೊಳ್ಳುತ್ತಾರಲ್ಲವೆ. ಇಂತಹವರೂ ಅನೇಕರಿದ್ದಾರೆ. ಈಗ ತಂದೆಗೆ ತಿಳಿದಿದೆ - ನನ್ನ ಮಕ್ಕಳೆಲ್ಲರೂ ರಾವಣನಿಗೆ ವಶವಾಗಿ ಬಿಟ್ಟಿದ್ದಾರೆ, ಆದ್ದರಿಂದ ನಾನು ಬಂದು ಪುನಃ ದತ್ತು ತೆಗೆದುಕೊಳ್ಳಬೇಕಾಗುತ್ತದೆ. ಬ್ರಹ್ಮಾರವರ ಮೂಲಕ ತನ್ನ ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ಇದು ಎಷ್ಟು ಅದ್ಭುತವಾಗಿದೆ! ಶಿವ ತಂದೆಯು ನಮ್ಮನ್ನು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಂಡಿದ್ದಾರೆಂದು ನೀವೇ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಬೇಹದ್ದಿನ ಸುಖದ ಆಸ್ತಿಯನ್ನು ಕೊಡುವುದಕ್ಕಾಗಿ ನೀವು ಮಕ್ಕಳನ್ನು ದತ್ತು ಮಾಡಿಕೊಂಡಿದ್ದೇನೆ. ಈ ಬ್ರಹ್ಮಾರವರಂತೂ ಆಸ್ತಿಯನ್ನು ಕೊಡಲು ಸಾಧ್ಯವಿಲ್ಲ. ಈ ಪ್ರಜಾಪಿತ ಬ್ರಹ್ಮನೂ ಮನುಷ್ಯನಲ್ಲವೆ, ಮನುಷ್ಯರು ಈ ಜ್ಞಾನವನ್ನು ಕೊಡುವುದಿಲ್ಲ. ಜ್ಞಾನ ಸಾಗರ, ನಿರಾಕಾರ, ಪರಮಪಿತ ಪರಮಾತ್ಮನೇ ಕುಳಿತು ಈ ಜ್ಞಾನವನ್ನು ಕೊಡುತ್ತಾರೆ. ಬ್ರಹ್ಮನಿಗಾಗಲಿ, ವಿಷ್ಣುವಿಗಾಗಲಿ ಜ್ಞಾನ ಸಾಗರನೆಂದು ಹೇಳಲಾಗುವುದಿಲ್ಲ. ಈ ಮೂವರ ಮಹಿಮೆಯು ಭಿನ್ನವಾಗಿದೆ, ಜ್ಞಾನ ಸಾಗರ, ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ಇಡೀ ಪ್ರಪಂಚದ ಮನುಷ್ಯ ಮಾತ್ರರು ಅವರನ್ನು ಕರೆಯುತ್ತಾರೆ. ಇಂಗ್ಲೀಷಿನಲ್ಲಿಯೂ ಅವರು ಲಿಬರೇಟರ್ ಆಗಿದ್ದಾರೆಂದು ಹೇಳುತ್ತಾರೆ. ಯಾರಿಂದ ದುಃಖವು ಸಿಗುತ್ತದೆಯೋ ಅವರಿಂದ ಲಿಬರೇಟ್ ಮಾಡಲಾಗುತ್ತದೆ, ತಂದೆಯೂ ಸಹ ಇಲ್ಲಿ ಬಂದು ರಾವಣನಿಂದ ಲಿಬರೇಟ್ ಮಾಡುತ್ತಾರೆ. ರಾವಣ ರಾಜ್ಯವು ಇಲ್ಲಿಯೇ ಆಗಿದೆ, ಇಲ್ಲಿಯೇ ರಾವಣನನ್ನು ಸುಡುತ್ತಾರೆ, ಸುಟ್ಟು ಮತ್ತೆ ಹೇಳುತ್ತಾರೆ - ಚಿನ್ನದ ಲಂಕೆಯನ್ನು ಲೂಟಿ ಮಾಡಲು ಹೋಗುತ್ತೇವೆ. ಅವರಿಗೆ ಏನೂ ತಿಳಿದಿಲ್ಲ, ರಾವಣನೆಂದರೆ ಏನು? ಯಾವಾಗಿನಿಂದ ಶತ್ರುವಾಗಿದ್ದಾನೆ ಎಂಬುದನ್ನು ತಿಳಿದುಕೊಂಡಿಲ್ಲ. ರಾಮನ ಸೀತೆಯ ಅಪಹರಣವಾಯಿತು ಎಂದು ತಿಳಿಯುತ್ತಾರೆ, ಆದರೆ ನಾವೆಲ್ಲರೂ ಸೀತೆಯರಾಗಿದ್ದೇವೆ. ನಾವು ರಾವಣನ ಬಂಧನದಲ್ಲಿ ಸಿಲುಕಿದ್ದೇವೆಂದು ತಿಳಿದುಕೊಳ್ಳುವುದಿಲ್ಲ. ಈ ಜ್ಞಾನವು ಯಾರಲ್ಲಿಯೂ ಇಲ್ಲ. ಕುಳಿತು ಕಥೆಗಳನ್ನು ತಿಳಿಸುತ್ತಾರೆ. ಶಿವ ತಂದೆಯು ಹೇಳುತ್ತಾರೆ, ನಾನು ದೂರ ದೇಶದ ನಿವಾಸಿ ಈ ಪರದೇಶದಲ್ಲಿ ಬಂದಿದ್ದೇನೆ. ಇದು ಪತಿತ, ಹಳೆಯ ಪ್ರಪಂಚವಲ್ಲವೆ. ಇದು ರಾವಣನ ಪ್ರಪಂಚವಾಗಿದೆ. ಹೇ ತಂದೆಯೇ ಬಂದು ನಾವು ಪತಿತರಾಗಿಬಿಟ್ಟಿದ್ದೇವೆ ಎಂದು ಕರೆಯುತ್ತಾರೆ, ತಂದೆಯು ತಿಳಿಸುತ್ತಾರೆ - ನಾನು ಪಾವನರನ್ನಾಗಿ ಮಾಡಲು ಈ ಪತಿತ ಪ್ರಪಂಚದಲ್ಲಿ ಬರಬೇಕಾಗುತ್ತದೆ ಮತ್ತು ಯಾರು ಮೊಟ್ಟ ಮೊದಲ ನಂಬರಿನಲ್ಲಿ ಪಾವನರಾಗಿದ್ದರೋ, ಯಾರು ಸುಂದರನಾಗಿದ್ದರೋ ಅವರೇ ಶ್ಯಾಮನಾಗಿದ್ದಾರೆ. ಅವರ ತನುವಿನಲ್ಲಿಯೇ ಬರುತ್ತೇನೆ. ಎಷ್ಟು ಅದ್ಭುತ ಮಾತುಗಳಾಗಿವೆ. ಕೃಷ್ಣನಿಗೆ ಶ್ಯಾಮ ಸುಂದರನೆಂದು ಹೇಳುತ್ತಾರೆ, ಇದು ಯಾರಿಗೂ ತಿಳಿದಿಲ್ಲ. ಒಬ್ಬ ಕೃಷ್ಣನಿಗೇ ಸರ್ಪವು ಕಚ್ಚಿತ್ತೆ? ಸತ್ಯಯುಗದಲ್ಲಿ ಸರ್ಪ ಇತ್ಯಾದಿಗಳಿರುತ್ತವೆಯೇ? ತಂದೆಯು ತಿಳಿಸುತ್ತಾರೆ - ಈ ಅಂತಿಮ ಜನ್ಮದಲ್ಲಿ ನನ್ನ ಕಾರಣ ಪವಿತ್ರರಾಗಿ, ಆಗ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಕೇವಲ ನನ್ನನ್ನು ನೆನಪು ಮಾಡಿ ಮತ್ತು ಪವಿತ್ರರಾಗಿರಿ. ಅಲೀಫನನ್ನು ನೆನಪು ಮಾಡಿದರೆ ಬಾದಶಾಹಿಯಾಗಿ ನಿಮ್ಮದಾಗುವುದು. ಇದು ಸಹಜ ರಾಜಯೋಗ, ಸಹಜ ರಾಜ್ಯ ಭಾಗ್ಯವಾಗಿದೆ. ಮಗು ಜನ್ಮ ಪಡೆದನೆಂದರೆ ಆಸ್ತಿಗೆ ಹಕ್ಕುದಾರನಾಗಲು ಇಲ್ಲಿಯೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಸ್ವರ್ಗದ ರಾಜ್ಯಭಾಗ್ಯಕ್ಕೆ ನಾವು ಹಕ್ಕುದಾರರಾಗಿದ್ದೇವೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಸತೋಪ್ರಧಾನರಿಂದ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಈಗ ಪುನಃ ಸತೋ ಪ್ರಧಾನರಾಗಬೇಕಾಗಿದೆ. ಯೋಗ ಮತ್ತು ಜ್ಞಾನವನ್ನು ಕಲಿಸುವುದರಲ್ಲಿ ಒಂದು ಸೆಕೆಂಡ್ ಹಿಡಿಸುತ್ತದೆ, ಮಗುವಿನ ಜನ್ಮವಾಯಿತು ಎಂದರೆ ವಾರಸುಧಾರನೆಂಬ ನಿಶ್ಚಯ ಮಾಡಿಕೊಳ್ಳುವರು. ನೀವು ತಂದೆಯವರಾಗಿದ್ದೀರಿ ಎಂದಮೇಲೆ ರಾಜಧಾನಿಯು ಆಸ್ತಿಯು ನಿಮ್ಮದಾಗಿದೆ. ಆದರೆ ಎಲ್ಲರೂ ರಾಜ-ರಾಣಿಯಾಗುವುದಿಲ್ಲ, ಇದು ರಾಜಯೋಗವಾಗಿದೆ. ರಾಜ-ರಾಣಿ, ಪ್ರಜೆ, ಸಹಕಾರರು, ಬಡವರು ಎಲ್ಲರೂ ಬೇಕು ಆದ್ದರಿಂದ ರುದ್ರ ಮಾಲೆಯು ಮಾಡಲ್ಪಟ್ಟಿದೆ ಯಾವುದನ್ನು ಭಕ್ತಿ ಮಾರ್ಗದಲ್ಲಿ ಜಪಿಸುತ್ತಾರೆ. ನಾವು ರಾಜಯೋಗವನ್ನು ಕಲಿಯಲು ಬಂದಿದ್ದೇವೆ, ಮಾತಾಪಿತರನ್ನು ಫಾಲೋ ಮಾಡಿ ಮೊಟ್ಟ ಮೊದಲು ಸೂರ್ಯವಂಶಿ ನಂತರ ಚಂದ್ರವಂಶಿಯರಾಗುತ್ತೇವೆ ಎಂದು ತಿಳಿದುಕೊಂಡಿದ್ದೀರಿ. ಯಾರು ಮಾತಾಪಿತರನ್ನು ಫಾಲೋ ಮಾಡಿ ಸಿಂಹಾಸನಾಧೀಶರಾಗುವರೋ ಅವರೇ ಸುಪುತ್ರರು. ತೀವ್ರ ಪುರುಷಾರ್ಥ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿರಿ ಎಂದು. ಆದರೆ ಮಾಡುವುದೇ ಇಲ್ಲ. ಶ್ರೀಮತದಂತೆ ನಡೆಯುವುದಿಲ್ಲ. ಒಳಗೆ ಸತ್ಯತೆಯಿಲ್ಲ. ಹೃದಯವು ಸತ್ಯವಾಗಿದ್ದರೆ ಶ್ರೀಮತದಂತೆ ನಡೆಯುತ್ತಾರೆ. ತಂದೆಯನ್ನು ನೆನಪು ಮಾಡುತ್ತಾ ಇರುತ್ತಾರೆ. ಶ್ರೀಮತದನುಸಾರವೇ ನಿಮಗೆ ತಾತನಿಂದ ಆಸ್ತಿಯು ಸಿಗುತ್ತದೆ. ಬ್ರಹ್ಮನು ಸ್ವರ್ಗದ ಆಸ್ತಿಯನ್ನು ಕೊಡಲು ಸಾಧ್ಯವಿಲ್ಲ. ತಾತನ ಸಂಪಾದನೆಯ ಮೇಲೆ ಮೊಮ್ಮಕ್ಕಳ ಅಧಿಕಾರವಿರುತ್ತದೆ. ತಂದೆಯ ಸಂಪಾದನೆ ಮಕ್ಕಳು ಭಾಗೀಧಾರರಾಗುತ್ತಾರೆ. ಅಂದಾಗ ಹಕ್ಕುದಾರರಾಗಿದ್ದಾರೆ. ಇಲ್ಲಿ ನಿಮಗೆ ಶಿವ ತಂದೆಯಿಂದ ಆಸ್ತಿಯು ಸಿಗುತ್ತದೆ. ತಂದೆಯಿಂದಲೇ ಜ್ಞಾನ ರತ್ನಗಳು ಸಿಗುತ್ತವೆ.

ನೀವು ತಿಳಿದುಕೊಂಡಿದ್ದೀರಿ - ನಾವು ಬ್ರಾಹ್ಮಣರೇ ಮತ್ತೆ ದೇವಿ-ದೇವತೆಗಳಾಗುತ್ತೇವೆ. ಜಗದಂಬೆ ಯಾರಾಗಿದ್ದಾರೆ? ತಂದೆಯು ತಿಳಿಸುತ್ತಾರೆ - ಇವರು ಬ್ರಾಹ್ಮಣಿಯಾಗಿದ್ದರು, ಜ್ಞಾನ ಜ್ಞಾನೇಶ್ವರಿಯಾಗಿದ್ದರು, ಇವರೇ ನಂತರ ರಾಜ ರಾಜೇಶ್ವರಿ ಯಾಗುತ್ತಾರೆ. ನೀವೂ ಸಹ ಆ ರೀತಿ ಆಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಆತ್ಮದಲ್ಲಿರುವ ತಮೋಪ್ರಧಾನತೆಯ ಸಂಸ್ಕಾರವನ್ನು ನೆನಪಿನ ಬಲದಿಂದ ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ, ಸತೋಪ್ರಧಾನರಾಗಬೇಕಾಗಿದೆ.

2. ತಂದೆಯಿಂದ ರಾಜಧಾನಿಯ ಆಸ್ತಿಯನ್ನು ತೆಗೆದುಕೊಳ್ಳಲು ತೆಗೆದುಕೊಳ್ಳಲು ಸದಾ ಸುಪುತ್ರರಾಗಿ ಶ್ರೀ ಮತದಂತೆ ನಡೆಯಬೇಕಾಗಿದೆ. ಸತ್ಯ ತಂದೆಯೊಂದಿಗೆ ಸತ್ಯವಾಗಿರಬೇಕಾಗಿದೆ, ಮಾತಾಪಿತರನ್ನು ಪೂರ್ಣ ಫಾಲೋ ಮಾಡಬೇಕಾಗಿದೆ. ಜ್ಞಾನ ರತ್ನಗಳ ದಾನವನ್ನು ಮಾಡುತ್ತಿರಬೇಕಾಗಿದೆ.

ವರದಾನ:
ತಮ್ಮ ಪರಿವರ್ತನೆಯ ಮೂಲಕ ನಿರಂತರ ವಿಜಯದ ಅನುಭೂತಿ ಮಾಡುವಂತಹ ಸತ್ಯ ಸೇವಾಧಾರಿ ಭವ.

ಹೇಗೆ ನಿರಂತರ ಯೋಗಿಯಾಗಿದ್ದೀರಿ ಹಾಗೆಯೇ ನಿರಂತರ ವಿಜಯಿಯಾಗಿರಿ. ಇದರಿಂದ ಸತ್ಯ ಸೇವಾಧಾರಿ ಆಗಿ ಬಿಡುತ್ತೀರಿ ಏಕೆಂದರೆ ವಿಜಯಿ ಆತ್ಮನು ಯಾವಾಗ ಪ್ರತಿಯೊಂದು ಸಂಕಲ್ಪ, ಪ್ರತೀ ಹೆಜ್ಜೆಯಲ್ಲಿ ವಿಜಯದ ಅನುಭವ ಮಾಡುತ್ತಾರೆ, ಆ ಪರಿವರ್ತನೆಯನ್ನು ನೋಡುತ್ತಾ ಸ್ವತಹವಾಗಿ ಅನೇಕ ಆತ್ಮರುಗಳ ಸೇವೆಯಾಗುವುದು. ಅವರ ನಯನಗಳು ಆತ್ಮೀಯತೆಯ ಅನುಭವ ಮಾಡಿಸುತ್ತದೆ, ಚಲನೆಯು ತಂದೆಯ ಚರಿತ್ರೆಯ ಸಾಕ್ಷಾತ್ಕಾರ ಮಾಡಿಸುತ್ತದೆ, ಮಸ್ತಕದಿಂದ ಮಸ್ತಕ ಮಣಿಯ ಸಾಕ್ಷಾತ್ಕಾರವಾಗುತ್ತದೆ. ಈ ರೀತಿ ತಮ್ಮ ಅವ್ಯಕ್ತ ಚಹರೆಯಿಂದ ಸೇವೆ ಮಾಡುವಂತಹ ವಿಶೇಷ ಆತ್ಮನನ್ನೇ ಸತ್ಯ ಸೇವಾಧಾರಿ ಎಂದು ಹೇಳಲಾಗುತ್ತದೆ.

ಸ್ಲೋಗನ್:
ವಿಶೇಷತೆಗಳು ಅಥವಾ ಗುಣವು ದಾತನ ಕೊಡುಗೆಯಾಗಿದೆ, ದಾತನನ್ನು ನೋಡಿ ವ್ಯಕ್ತಿಯನ್ನಲ್ಲ.

ಅವ್ಯಕ್ತ ಸೂಚನೆಗಳು:- ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ.

ಸಮಯ ಪ್ರಮಾಣ ಈಗ ಸದಾ ಅಚಲ ಅಡೋಲ ಸರ್ವ ಖಜಾನೆಗಳಿಂದ ಸಂಪನ್ನರಾಗಿ. ಸ್ವಲ್ಪವೂ ಸಹ ಏರು-ಪೇರು ಆಗುತ್ತೀರಿ ಎಂದರೆ ಸರ್ವ ಖಜಾನೆಗಳ ಅನುಭವ ಆಗುವುದಿಲ್ಲ. ತಂದೆಯ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸದಾ ಖಾಯಂ ಆಗಿ ಇಟ್ಟುಕೊಳ್ಳುವ ಸಾಧನ ಆಗಿದೆ ಸದಾ ಅಚಲ ಅಡೋಲರಾಗಿ ಇರುವುದು. ಅಚಲರಾಗಿರುವುದರಿಂದ ಸದಾ ಖುಷಿಯ ಅನುಭವ ಆಗುತ್ತಾ ಇರುತ್ತದೆ. ಹೇಗೆ ವಿನಾಶಿ ಧನ, ಹೆಸರು - ಮಾನ್ಯತೆ - ಆಡಂಬರ, ಪದವಿ ಇತ್ಯಾದಿಗಳು ಸಿಗುತ್ತದೆ ಎಂದರೆ ಖುಷಿಯಾಗುತ್ತದೆ ಅಲ್ಲವೇ. ಇದಂತೂ ಅವಿನಾಶಿ ಖುಷಿಯಾಗಿದೆ ಆದರೆ ಈ ಖುಷಿ ಅವರಿಗೆ ಇರುತ್ತದೆ ಯಾರು ಅಚಲ ಅಡೋಲ ಏಕ-ರಸ ಸ್ಥಿತಿಯಲ್ಲಿ ಇರುತ್ತಾರೆ.