23.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನಿಮ್ಮನ್ನು ಜ್ಞಾನ ರತ್ನಗಳಿಂದ ಶೃಂಗಾರ ಮಾಡಿ ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗಲು ತಂದೆಯು
ಬಂದಿದ್ದಾರೆ, ನಂತರ ರಾಜಧಾನಿಯಲ್ಲಿ ಕಳುಹಿಸುತ್ತಾರೆ ಅಂದಮೇಲೆ ಅಪಾರ ಖುಷಿಯಲ್ಲಿರಿ, ಒಬ್ಬ
ತಂದೆಯನ್ನೇ ಪ್ರೀತಿ ಮಾಡಿ”.
ಪ್ರಶ್ನೆ:
ತಮ್ಮ
ಧಾರಣೆಯನ್ನು ಶಕ್ತಿಶಾಲಿ (ಪಕ್ಕಾ) ಮಾಡಿಕೊಳ್ಳುವ ಆಧಾರವೇನು?
ಉತ್ತರ:
ತಮ್ಮ
ಧಾರಣೆಯನ್ನು ಶಕ್ತಿಶಾಲಿ ಮಾಡಿಕೊಳ್ಳಲು ಸದಾ ಇದನ್ನು ಪಕ್ಕಾ ಮಾಡಿಕೊಳ್ಳಿ - ಇಂದಿನ ದಿನ ಏನು
ಕಳೆಯಿತು ಒಳ್ಳೆಯದೇ ಆಯಿತು, ಇದು ಮತ್ತೆ ಕಲ್ಪದ ನಂತರ ಆಗುವುದು. ಏನೆಲ್ಲವೂ ಆಯಿತೋ ಕಲ್ಪದ
ಹಿಂದೆಯೂ ಇದೇ ರೀತಿ ಆಗಿತ್ತು, ನತಿಂಗ್ ನ್ಯೂ (ಹೊಸದೇನಲ್ಲ) ಈ ಯುದ್ಧವೂ ಸಹ 5000 ವರ್ಷಗಳ ಮೊದಲೂ
ನಡೆದಿತ್ತು ಇದು ಮತ್ತೆ ಖಂಡಿತ ನಡೆಯುವುದು. ಈ ಬಿದುರಿನ ಕಾಡು ವಿನಾಶವಾಗಲೇಬೇಕಾಗಿದೆ...... ಹೀಗೆ
ಪ್ರತೀ ಕ್ಷಣ ಡ್ರಾಮಾದ ಸ್ಮೃತಿಯಲ್ಲಿರಿ ಆಗ ಧಾರಣೆಯು ಧೃಡವಾಗುತ್ತಾ ಹೋಗುವುದು.
ಗೀತೆ:
ದೂರ
ದೇಶದಲ್ಲಿರುವವರು................
ಓಂ ಶಾಂತಿ.
ಮಕ್ಕಳು ಮೊದಲೂ ಸಹ ದೂರ ದೇಶದಿಂದ ಪರದೇಶದಲ್ಲಿ ಬಂದಿದ್ದೀರಿ. ಈಗ ಈ ಪರದೇಶದಲ್ಲಿ
ದುಃಖಿಯಾಗಿದ್ದೀರಿ ಆದ್ದರಿಂದಲೇ ನಮ್ಮ ದೇಶ, ನಮ್ಮ ಮನೆಗೆ ಕರೆದುಕೊಂಡು ಹೋಗಿ ಎಂದು ಕರೆಯುತ್ತೀರಿ.
ನಿಮ್ಮದೇ ಕೂಗಲ್ಲವೆ. ಬಹಳ ಸಮಯದಿಂದ ನೆನಪು ಮಾಡುತ್ತಾ ಬಂದಿದ್ದೀರಿ ಆದ್ದರಿಂದ ತಂದೆಯೂ
ಖುಷಿ-ಖುಷಿಯಿಂದ ಬರುತ್ತಾರೆ. ತಂದೆಗೆ ಗೊತ್ತಿದೆ, ನಾನು ಮಕ್ಕಳ ಬಳಿ ಹೋಗುತ್ತೇನೆ. ಯಾವ ಮಕ್ಕಳು
ಕಾಮಚಿತೆಯ ಮೇಲೆ ಕುಳಿತು ಸುಟ್ಟು ಕಪ್ಪಾಗಿದ್ದಾರೆ, ಅವರನ್ನು ಪುನಃ ತಮ್ಮ ಮನೆಗೆ ಕರೆದುಕೊಂಡು
ಹೋಗುವೆನು ಮತ್ತು ರಾಜಧಾನಿಯಲ್ಲಿ ಕಳುಹಿಸುವೆನು. ಅದಕ್ಕಾಗಿ ಮಕ್ಕಳನ್ನು ಜ್ಞಾನದಿಂದ ಶೃಂಗಾರವನ್ನೂ
ಮಾಡುತ್ತೇನೆ. ಮಕ್ಕಳೂ ಸಹ ತಂದೆಗಿಂತಲೂ ಹೆಚ್ಚು ಖುಷಿ ಪಡಬೇಕು. ಯಾವಾಗ ತಂದೆಯೇ ಬಂದಿದ್ದಾರೆಂದರೆ
ಅವರಿಗೆ ಬಲಿಹಾರಿಯಾಗಿ ಬಿಡಬೇಕು. ಅವರನ್ನು ಬಹಳ ಪ್ರೀತಿಸಬೇಕು. ತಂದೆಯು ನಿತ್ಯವೂ ತಿಳಿಸುತ್ತಾರೆ.
ಆತ್ಮವೇ ಮಾತನಾಡುತ್ತದೆಯಲ್ಲವೆ. ತಂದೆಯು ಡ್ರಾಮಾನುಸಾರ 5000 ವರ್ಷಗಳ ನಂತರ ಬಂದಿದ್ದಾರೆ. ನಮಗೆ
ಬಹಳ ಖುಷಿಯ ಖಜಾನೆಯು ಸಿಗುತ್ತಿದೆ. ಬಾಬಾ, ತಾವು ನಮ್ಮ ಜೋಳಿಗೆಯನ್ನು ತುಂಬಿಸುತ್ತಿದ್ದೀರಿ.
ನಮ್ಮನ್ನು ತಮ್ಮ ಮನೆಯಾದ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೀರಿ ನಂತರ ರಾಜಧಾನಿಯಲ್ಲಿ
ಕಳುಹಿಸುತ್ತೀರಿ. ಇದು ಎಷ್ಟು ಅಪಾರ ಖುಷಿಯಿರಬೇಕು! ತಂದೆಯು ತಿಳಿಸುತ್ತಾರೆ - ನಾನಂತೂ ಈ ಪರ
ರಾಜಧಾನಿಯಲ್ಲಿಯೇ ಬರಬೇಕಾಗಿದೆ. ತಂದೆಯದು ಬಹಳ ಮಧುರ ಮತ್ತು ವಿಚಿತ್ರವಾದ ಪಾತ್ರವಾಗಿದೆ. ಯಾವಾಗ
ಸ್ವಯಂ ತಂದೆಯೇ ಈ ಪರದೇಶದಲ್ಲಿ ಬರುವರೋ ಆಗಲೇ ನೀವು ಈ ಮಾತುಗಳನ್ನು ತಿಳಿದುಕೊಳ್ಳುತ್ತೀರಿ ನಂತರ
ಈ ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ. ಅಲ್ಲಿ ಇದರ ಅವಶ್ಯಕತೆಯೇ ಇರುವುದಿಲ್ಲ. ತಂದೆಯು
ತಿಳಿಸುತ್ತಾರೆ - ನೀವು ಎಷ್ಟೊಂದು ತಿಳುವಳಿಕೆಹೀನರಾಗಿ ಬಿಟ್ಟಿದ್ದೀರಿ! ಡ್ರಾಮಾದ
ಪಾತ್ರಧಾರಿಗಳಾಗಿದ್ದರೂ ಸಹ ತಂದೆಯನ್ನೇ ಅರಿತುಕೊಂಡಿಲ್ಲ. ಆ ತಂದೆಯೇ ಮಾಡಿ-ಮಾಡಿಸುವವರಾಗಿದ್ದಾರೆ,
ಅವರು ಏನು ಮಾಡುತ್ತಾರೆ ಮತ್ತು ಮಾಡಿಸುತ್ತಾರೆ ಎಂಬುದನ್ನೇ ಮರೆತು ಹೋಗಿದ್ದೀರಿ. ಇಡೀ ಹಳೆಯ
ಪ್ರಪಂಚವನ್ನು ಸ್ವರ್ಗವನ್ನಾಗಿ ಮಾಡಲು ಬರುತ್ತಾರೆ ಮತ್ತು ಜ್ಞಾನವನ್ನು ಕೊಡುತ್ತಾರೆ. ಅವರು
ಜ್ಞಾನ ಸಾಗರನೆಂದಮೇಲೆ ಅವಶ್ಯವಾಗಿ ಜ್ಞಾನ ಕೊಡುವ ಕರ್ತವ್ಯವನ್ನೇ ಮಾಡುತ್ತಾರಲ್ಲವೆ ಮತ್ತು
ನಿಮ್ಮಿಂದಲೂ ಮಾಡಿಸುತ್ತಾರೆ - ಮಕ್ಕಳೇ, ಅನ್ಯರಿಗೂ ಈ ಸಂದೇಶವನ್ನು ಕೊಡಿ, ತಂದೆಯು ಎಲ್ಲರಿಗಾಗಿ
ತಿಳಿಸುತ್ತಾರೆ - ಈಗ ದೇಹದ ಅಭಿಮಾನವನ್ನು ಬಿಟ್ಟು ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು
ವಿನಾಶವಾಗುತ್ತವೆ. ನಾನು ಶ್ರೀಮತವನ್ನು ಕೊಡುತ್ತೇನೆ. ಪಾಪಾತ್ಮರಂತೂ ಎಲ್ಲರೂ ಆಗಿದ್ದಾರೆ, ಈ
ಸಮಯದಲ್ಲಿ ಇಡೀ ವೃಕ್ಷವೇ ತಮೋಪ್ರಧಾನ, ಜಡಜಡೀಭೂತ ಸ್ಥಿತಿಯನ್ನು ತಲುಪಿದೆ. ಹೇಗೆ ಬಿದುರಿನ ಕಾಡಿಗೆ
ಬೆಂಕಿಯು ಬಿದ್ದಿತೆಂದರೆ ಎಲ್ಲವೂ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿ ಬಿಡುತ್ತದೆ. ಆ ಬೆಂಕಿಯನ್ನು
ಆರಿಸಲು ಕಾಡಿನಲ್ಲಿ ನೀರು ಎಲ್ಲಿಂದ ಬರಬೇಕು! ಹಾಗೆಯೇ ಈ ಹಳೆಯ ಪ್ರಪಂಚಕ್ಕೂ ಸಹ ಬೆಂಕಿ ಬೀಳಲಿದೆ.
ತಂದೆಯು ತಿಳಿಸುತ್ತಾರೆ - ಇದು ಹೊಸದೇನಲ್ಲ, ತಂದೆಯು ಒಳ್ಳೊಳ್ಳೆಯ ವಿಚಾರಗಳನ್ನು
ತಿಳಿಸುತ್ತಿರುತ್ತಾರೆ. ಅವನ್ನು ನೋಟ್ ಮಾಡಿಕೊಳ್ಳಬೇಕು. ತಂದೆಯು ತಿಳಿಸಿದ್ದರು - ಅನ್ಯ ಧರ್ಮ
ಸ್ಥಾಪಕರು ಕೇವಲ ತಮ್ಮ ಧರ್ಮವನ್ನು ಸ್ಥಾಪನೆ ಮಾಡಲು ಬರುತ್ತಾರೆ, ವಾಸ್ತವದಲ್ಲಿ ಅವರಿಗೆ ಸಂದೇಶ
ಪುತ್ರರೆಂದು ಹೇಳಲಾಗುವುದಿಲ್ಲ. ಇದನ್ನೂ ಸಹ ಬಹಳ ಯುಕ್ತಿಯಿಂದ ಬರೆಯಬೇಕು. ಶಿವ ತಂದೆಯು ಮಕ್ಕಳಿಗೆ
ತಿಳಿಸುತ್ತಿದ್ದಾರೆ - ಮಕ್ಕಳೇ ಎಂದು ಅಂದಮೇಲೆ ಎಲ್ಲರೂ ಸಹೋದರರಾದಿರಿ. ಆದ್ದರಿಂದ ಪ್ರತಿಯೊಂದೂ
ಚಿತ್ರದಲ್ಲಿ ಪ್ರತಿಯೊಂದು ಬರವಣಿಗೆಯಲ್ಲಿ ಶಿವ ತಂದೆಯು ಹೀಗೆ ತಿಳಿಸುತ್ತಾರೆ ಎಂಬುದನ್ನು
ಅವಶ್ಯವಾಗಿ ಬರೆಯಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಬಂದು ಸತ್ಯಯುಗೀ ಆದಿ
ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ. ಎಲ್ಲಿ 100% ಸುಖ, ಶಾಂತಿ, ಪವಿತ್ರತೆ ಎಲ್ಲವೂ
ಇರುತ್ತದೆ. ಆದ್ದರಿಂದ ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಅಲ್ಲಿ ದುಃಖದ ಹೆಸರೂ ಇರುವುದಿಲ್ಲ
ಬಾಕಿ ಯಾವುದೆಲ್ಲಾ ಧರ್ಮಗಳಿವೆಯೋ ಅವೆಲ್ಲದರ ವಿನಾಶ ಮಾಡಿಸಲು ನಿಮಿತ್ತನಾಗುತ್ತೇನೆ.
ಸತ್ಯಯುಗದಲ್ಲಿ ಇರುವುದೇ ಒಂದು ಧರ್ಮ. ಅದು ಹೊಸ ಪ್ರಪಂಚವಾಗಿದೆ. ಹಳೆಯ ಪ್ರಪಂಚವನ್ನು ಸಮಾಪ್ತಿ
ಮಾಡಿಸುತ್ತೇನೆ. ಈ ಕಾರ್ಯವನ್ನು ಮತ್ತ್ಯಾರೂ ಮಾಡುವುದಿಲ್ಲ. ಶಂಕರನ ಮೂಲಕ ವಿನಾಶವೆಂದು
ಹೇಳಲಾಗುತ್ತದೆ. ವಿಷ್ಣುವೂ ಸಹ ಲಕ್ಷ್ಮೀ-ನಾರಾಯಣರೇ ಆಗಿದ್ದಾರೆ. ಪ್ರಜಾಪಿತ ಬ್ರಹ್ಮನೂ ಇಲ್ಲಿಯೇ
ಇದ್ದಾರೆ. ಇವರೇ ಪತಿತರಿಂದ ಪಾವನರಾಗಿ ಫರಿಶ್ತೆಯಾಗಿದ್ದಾರೆ. ಆದ್ದರಿಂದಲೇ ಬ್ರಹ್ಮ ದೇವತೆಯೆಂದು
ಹೇಳಲಾಗುತ್ತದೆ. ಇವರಿಂದ ದೇವಿ-ದೇವತಾ ಧರ್ಮವು ಸ್ಥಾಪನೆಯಾಗುತ್ತದೆ. ಈ ತಂದೆಯೂ ಸಹ ದೇವಿ-ದೇವತಾ
ಧರ್ಮದ ಮೊದಲ ರಾಜಕುಮಾರನಾಗುತ್ತಾರೆ ಅಂದಾಗ ಬ್ರಹ್ಮನ ಮೂಲಕ ಸ್ಥಾಪನೆ, ಶಂಕರನ ಮೂಲಕ ವಿನಾಶ.
ತಿಳಿಸುವುದಕ್ಕಾಗಿಯೇ ಈ ಚಿತ್ರಗಳನ್ನು ಮಾಡಿಸಲಾಗಿದೆ. ಇದರ ಅರ್ಥವು ಯಾರಿಗೂ ಗೊತ್ತಿಲ್ಲ.
ಸ್ವದರ್ಶನ ಚಕ್ರಧಾರಿಯ ಬಗ್ಗೆಯೂ ತಿಳಿಸಿದ್ದಾರೆ. ಪರಮಪಿತ ಪರಮಾತ್ಮನು ಸೃಷ್ಟಿಯ
ಆದಿ-ಮಧ್ಯ-ಅಂತ್ಯವನ್ನು ಅರಿತಿದ್ದಾರೆ. ಅವರಲ್ಲಿ ಸಂಪೂರ್ಣ ಜ್ಞಾನವಿದೆ ಅಂದಮೇಲೆ ಸ್ವದರ್ಶನ
ಚಕ್ರಧಾರಿಯಾದರಲ್ಲವೆ. ನಾನೇ ಈ ಜ್ಞಾನವನ್ನು ತಿಳಿಸುತ್ತೇನೆಂದು ತಂದೆಗೆ ಗೊತ್ತಿದೆ ಅಂದಮೇಲೆ ನಾನು
ಕಮಲ ಪುಷ್ಫ ಸಮಾನನಾಗಬೇಕಾಗಿದೆ ಎಂಬ ಮಾತನ್ನು ಶಿವ ತಂದೆಯು ಹೇಳುವುದಿಲ್ಲ. ಸತ್ಯಯುಗದಲ್ಲಿ ನೀವು
ಕಮಲಪುಷ್ಫ ಸಮಾನರಾಗಿಯೇ ಇರುತ್ತೀರಿ. ಸನ್ಯಾಸಿಗಳಿಗೆ ಈ ಮಾತುಗಳನ್ನು ಹೇಳುವುದಿಲ್ಲ, ಅವರಂತೂ
ಕಾಡಿಗೆ ಹೊರಟು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ - ಮೊದಲು ಅವರು ಪವಿತ್ರ,
ಸತೋಪ್ರಧಾನರಾಗಿರುತ್ತಾರೆ. ಭಾರತವನ್ನು ಪವಿತ್ರತೆಯ ಬಲದಿಂದ ಸ್ವಲ್ಪ ಮಟ್ಟಿಗೆ ಸುಧಾರಣೆ
ಮಾಡುತ್ತಾರೆ. ಭಾರತದಂತಹ ಪವಿತ್ರ ದೇಶವು ಮತ್ತ್ಯಾವುದೂ ಇಲ್ಲ. ಹೇಗೆ ತಂದೆಯ ಮಹಿಮೆಯಿದೆಯೋ ಹಾಗೆಯೇ
ಭಾರತದ ಮಹಿಮೆಯೂ ಇದೆ. ಭಾರತವು ಸ್ವರ್ಗವಾಗಿತ್ತು, ಈ ಲಕ್ಷ್ಮೀ-ನಾರಾಯಣರು ರಾಜ್ಯಭಾರ
ಮಾಡುತ್ತಿದ್ದರು ಮತ್ತೆ ಎಲ್ಲಿ ಹೋದರು? ಇದನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ. ಮತ್ತ್ಯಾರ
ಬುದ್ಧಿಯಲ್ಲಿಯೂ ಈ ದೇವತೆಗಳೇ 84 ಜನ್ಮಗಳನ್ನು ಪಡೆದು ನಂತರ ಪೂಜಾರಿಗಳಾಗುತ್ತಾರೆ ಎಂಬ ಮಾತು
ತಿಳಿದಿರುವುದಿಲ್ಲ. ಈಗ ನಿಮಗೆ ಸಂಪೂರ್ಣ ಜ್ಞಾನವಿದೆ. ನಾವೀಗ ಪೂಜ್ಯ ದೇವಿ-ದೇವತೆಗಳಾಗುತ್ತೇವೆ
ನಂತರ ಪೂಜಾರಿ ಮನುಷ್ಯರಾಗುತ್ತೇವೆ. ಮನುಷ್ಯರಂತೂ ಮನುಷ್ಯರೇ ಆಗುತ್ತಾರೆ. ಯಾವ ಅನೇಕ ಪ್ರಕಾರದ
ಚಿತ್ರವನ್ನು ತೋರಿಸುತ್ತಾರೆ, ಈ ರೀತಿಯಂತೂ ಮನುಷ್ಯರಿರುವುದಿಲ್ಲ, ಇವೆಲ್ಲವೂ ಭಕ್ತಿಮಾರ್ಗದ
ಚಿತ್ರಗಳಾಗಿವೆ. ನಿಮ್ಮ ಜ್ಞಾನವಂತೂ ಗುಪ್ತವಾಗಿದೆ, ಎಲ್ಲರೂ ಈ ಜ್ಞಾನವನ್ನು
ತೆಗೆದುಕೊಳ್ಳುವುದಿಲ್ಲ. ಯಾರು ಈ ದೇವಿ-ದೇವತಾ ಧರ್ಮದ ಎಲೆಗಳಾಗಿರುವರೋ ಅವರೇ
ತೆಗೆದುಕೊಳ್ಳುತ್ತಾರೆ. ಯಾರು ಅನ್ಯರನ್ನು ಒಪ್ಪುವವರಿದ್ದಾರೆಯೋ ಅವರು ಈ ಜ್ಞಾನವನ್ನು
ಕೇಳುವುದಿಲ್ಲ. ಶಿವ ಮತ್ತು ದೇವತೆಗಳ ಭಕ್ತಿಮಾಡುವವರೇ ಇಲ್ಲಿ ಬರುತ್ತಾರೆ. ಮೊಟ್ಟಮೊದಲಿಗೆ ನನ್ನ
ಪೂಜೆಯನ್ನು ಮಾಡುತ್ತಾರೆ ಮತ್ತೆ ಪೂಜಾರಿಗಳಾಗಿ ತಮ್ಮದೇ ಪೂಜೆಯನ್ನೂ ಮಾಡಿಕೊಳ್ಳುತ್ತಾರೆ. ಅಂದಾಗ
ಈಗ ನಿಮಗೆ ಖುಷಿಯಾಗುತ್ತದೆ - ನಾವು ಪೂಜ್ಯರಿಂದ ಪೂಜಾರಿಗಳಾದೆವು ಈಗ ಮತ್ತೆ ಪೂಜ್ಯರಾಗುತ್ತೇವೆ.
ಎಷ್ಟೊಂದು ಖುಷಿಯನ್ನಾಚರಿಸುತ್ತಾರೆ. ಇಲ್ಲಂತೂ ಅಲ್ಪಕಾಲಕ್ಕಾಗಿ ಖುಷಿಯನ್ನಾಚರಿಸುತ್ತಾರೆ.
ಸತ್ಯಯುಗದಲ್ಲಂತೂ ನಿಮಗೆ ಸದಾ ಖುಷಿಯಿರುತ್ತದೆ. ದೀಪಾವಳಿಯೆಂದರೆ ಲಕ್ಷ್ಮಿಯ ಆಹ್ವಾನಕ್ಕಾಗಿ
ಮಾಡುವುದಿಲ್ಲ. ಅಲ್ಲಿ ಪಟ್ಟಾಭಿಷೇಕದಂದು ದೀಪಾವಳಿಯನ್ನಾಚರಿಸುತ್ತಾರೆ ಬಾಕಿ ಈ ಸಮಯದಲ್ಲಿ ಯಾವ
ಉತ್ಸವಗಳನ್ನಾಚರಿಸುವರೋ ಅವು ಅಲ್ಲಿರುವುದಿಲ್ಲ. ಅಲ್ಲಿ ಸುಖವೇ ಸುಖವಿರುತ್ತದೆ. ಇದೊಂದೇ
ಸಮಯವಾಗಿದೆ, ಯಾವಾಗ ನೀವು ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುತ್ತೀರಿ. ಇವೆಲ್ಲಾ ಜ್ಞಾನ
ಬಿಂದುಗಳನ್ನು ಬರೆಯಿರಿ. ಸನ್ಯಾಸಿಗಳದು ಹಠಯೋಗ, ಇದು ರಾಜಯೋಗವಾಗಿದೆ. ತಂದೆಯು ತಿಳಿಸುತ್ತಾರೆ -
ಒಂದೊಂದು ಪುಟದಲ್ಲಿಯೂ ಸಹ ಶಿವ ತಂದೆಯ ಹೆಸರು ಅವಶ್ಯವಾಗಿ ಇರಲಿ. ಶಿವ ತಂದೆಯು ನಾವು ಮಕ್ಕಳಿಗೆ
ತಿಳಿಸುತ್ತಾರೆ - ನಿರಾಕಾರಿ ಆತ್ಮಗಳು ಈಗ ಸಾಕಾರದಲ್ಲಿ ಕುಳಿತಿದ್ದೀರಿ ಅಂದಮೇಲೆ ತಂದೆಯೂ
ಸಾಕಾರದಲ್ಲಿ ತಿಳಿಸುತ್ತಾರಲ್ಲವೆ. ತಂದೆಯು ಹೇಳುತ್ತಾರೆ - ಮಕ್ಕಳೇ, ತನ್ನನ್ನು ಆತ್ಮನೆಂದು
ತಿಳಿದು ನನ್ನನ್ನು ನೆನಪು ಮಾಡಿ. ಶಿವ ಭಗವಾನುವಾಚ ಮಕ್ಕಳ ಪ್ರತಿ. ಅವರೇ ಸ್ವಯಂ ಇಲ್ಲಿ
ಸನ್ಮುಖದಲ್ಲಿದ್ದಾರಲ್ಲವೆ. ಮುಖ್ಯ-ಮುಖ್ಯವಾದ ವಿಚಾರಗಳು ಪುಸ್ತಕದಲ್ಲಿ ಈ ರೀತಿ ಸ್ಪಷ್ಟವಾಗಿ
ಬರೆಯಲ್ಪಟ್ಟಿರಲಿ ಅವನ್ನು ಓದುವುದರಿಂದಲೇ ಜ್ಞಾನವು ಸಹಜವಾಗಿ ಅರ್ಥವಾಗಲಿ. ಶಿವ ಭಗವಾನುವಾಚ ಎಂದು
ಹೇಳುವುದರಿಂದ ಓದಲು ಬಹಳ ಆನಂದವಾಗುತ್ತದೆ. ಇದು ಬುದ್ಧಿಯ ಕೆಲಸವಲ್ಲವೆ. ತಂದೆಯೂ ಸಹ ಶರೀರದ
ಆಧಾರವನ್ನು ತೆಗೆದುಕೊಂಡು ತಿಳಿಸುತ್ತಾರಲ್ಲವೆ, ಇವರ ಆತ್ಮನೂ ಕೇಳಿಸಿಕೊಳ್ಳುತ್ತದೆ ಅಂದಾಗ
ಮಕ್ಕಳಿಗೆ ಬಹಳ ನಶೆಯಿರಬೇಕು, ತಂದೆಯ ಪ್ರತಿ ಬಹಳ ಪ್ರೀತಿಯಿರಬೇಕು. ಇದಂತೂ ತಂದೆಯ ರಥವಾಗಿದೆ.
ಇವರದು ಬಹಳ ಜನ್ಮಗಳ ಅಂತಿಮದ ಜನ್ಮವಾಗಿದೆ. ತಂದೆಯು ಇವರಲ್ಲಿ ಪ್ರವೇಶ ಮಾಡಿದ್ದಾರೆ. ಬ್ರಹ್ಮಾರವರ
ಮೂಲಕ ಬ್ರಾಹ್ಮಣರಾಗುತ್ತೀರಿ ನಂತರ ಮನುಷ್ಯರಿಂದ ದೇವತೆಗಳಾಗುತ್ತೀರಿ. ಚಿತ್ರವು ಎಷ್ಟು
ಸ್ಪಷ್ಟವಾಗಿದೆ! ಭಲೆ ತಮ್ಮ ಚಿತ್ರವನ್ನು ಇಟ್ಟುಕೊಳ್ಳಿ. "ಚಿತ್ರವನ್ನೂ ಇಡಿ, ಮೇಲೆ ಅಥವಾ
ಪಕ್ಕದಲ್ಲಿ ತಮ್ಮ ಚಿತ್ರವನ್ನು ತೋರಿಸಿ" ಯೋಗಬಲದಿಂದ ನಾವು ಈ ರೀತಿಯಾಗುತ್ತೇವೆ ಎಂಬುದನ್ನು
ಬರೆಯಿರಿ. ಮೇಲೆ ಶಿವ ತಂದೆ, ಅವರನ್ನು ನೆನಪು ಮಾಡುತ್ತಾ-ಮಾಡುತ್ತಾ ಮನುಷ್ಯರಿಂದ ದೇವತೆಗಳಾಗಿ
ಬಿಡುತ್ತೇವೆ. ಚಿತ್ರಗಳು ಸಂಪೂರ್ಣ ಸ್ಪಷ್ಟವಾಗಿದೆ. ಬಣ್ಣದ ಚಿತ್ರಗಳಿಂದ ಕೂಡಿದ ಪುಸ್ತಕವು ಈ
ರೀತಿಯಿರಲಿ ಅದನ್ನು ನೋಡುತ್ತಿದ್ದಂತೆಯೇ ಮನುಷ್ಯರಿಗೆ ಖುಷಿಯಾಗಿ ಬಿಡಬೇಕು. ಬಡವರಿಗಾಗಿ ಕಡಿಮೆ
ಬೆಲೆಯ ಪುಸ್ತಕವನ್ನೂ ಮುದ್ರಿಸಬಹುದು. ದೊಡ್ಡದರಿಂದ ಚಿಕ್ಕದು, ಚಿಕ್ಕದರಿಂದ ಇನ್ನೂ ಚಿಕ್ಕದನ್ನು
ಮಾಡಿಸಿ ಅದರಲ್ಲಿ ಸಂಪೂರ್ಣ ರಹಸ್ಯವು ಬಂದು ಬಿಡಬೇಕು. ಗೀತೆಯ ಭಗವಂತನ ಚಿತ್ರವು ಮುಖ್ಯವಾಗಿದೆ. ಆ
ಗೀತೆಯ ಮೇಲೆ ಕೃಷ್ಣನ ಚಿತ್ರ, ಈ ಗೀತೆಯ ಮೇಲೆ ತ್ರಿಮೂರ್ತಿಯ ಚಿತ್ರವಿದ್ದಾಗ ಮನುಷ್ಯರಿಗೆ
ತಿಳಿಸುವುದರಲ್ಲಿ ಸಹಜವಾಗುತ್ತದೆ. ಪ್ರಜಾಪಿತ ಬ್ರಹ್ಮನ ಮಕ್ಕಳು ಬ್ರಾಹ್ಮಣರು ಇಲ್ಲಿಯೇ ಇದ್ದಾರೆ.
ಪ್ರಜಾಪಿತ ಬ್ರಹ್ಮನು ಸೂಕ್ಷ್ಮವತನದಲ್ಲಂತೂ ಇರಲು ಸಾಧ್ಯವಿಲ್ಲ. ಬ್ರಹ್ಮ ದೇವತಾಯ ನಮಃ, ವಿಷ್ಣು
ದೇವತಾಯ ನಮಃ ಎಂದು ಹೇಳುತ್ತಾರೆ. ಈಗ ದೇವತೆಗಳು ಯಾರಾದರು? ದೇವತೆಗಳಂತೂ ಇಲ್ಲಿಯೇ ರಾಜ್ಯಭಾರ
ಮಾಡುತ್ತಿದ್ದರು. ದೈವೀ ರಾಜಧಾನಿಯಂತೂ ಇದೆಯಲ್ಲವೆ ಅಂದಾಗ ಇದೆಲ್ಲವನ್ನೂ ಒಳ್ಳೆಯರೀತಿಯಲ್ಲಿ
ತಿಳಿಸಬೇಕಾಗುತ್ತದೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ, ಇಬ್ಬರೂ ಇಲ್ಲಿಯೇ ಇದ್ದಾರೆ.
ಚಿತ್ರವಿದ್ದಾಗ ಇದನ್ನು ತಿಳಿಸಿಕೊಡಬಹುದು. ಮೊಟ್ಟ ಮೊದಲು ಪರಮಾತ್ಮನನ್ನು ಸಿದ್ಧ ಮಾಡಿ ಆಗ
ಮತ್ತೆಲ್ಲಾ ಮಾತುಗಳು ಸಿದ್ಧವಾಗುವವು. ಬಹಳಷ್ಟು ಜ್ಞಾನ ಬಿಂದುಗಳಿವೆ, ಮತ್ತೆಲ್ಲರೂ ಧರ್ಮ ಸ್ಥಾಪನೆ
ಮಾಡಲು ಬರುತ್ತಾರೆ. ತಂದೆಯಂತೂ ಸ್ಥಾಪನೆ ಮತ್ತು ವಿನಾಶ ಎರಡನ್ನೂ ಮಾಡಿಸುತ್ತಾರೆ. ಎಲ್ಲವೂ
ಡ್ರಾಮಾನುಸಾರವಾಗಿಯೇ ಆಗುತ್ತದೆ. ಬ್ರಹ್ಮನು ಮಾತನಾಡಬಲ್ಲರು, ವಿಷ್ಣುವು ಮಾತನಾಡುತ್ತಾರೆಯೇ?
ಸೂಕ್ಷ್ಮವತನದಲ್ಲಿ ಏನು ಮಾತನಾಡುತ್ತಾರೆ? ಇದೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಇಲ್ಲಿ ನೀವು
ತಿಳಿದುಕೊಳ್ಳಿ, ಇಲ್ಲಿಂದ ಮತ್ತೆ ಮೇಲಿನ ತರಗತಿಗೆ, ಮೇಲಿನ ಅಂತಸ್ತಿಗೆ ವರ್ಗಾಯಿತರಾಗುತ್ತೀರಿ.
ಬೇರೆ ಕೋಣೆಯೇ ಸಿಕ್ಕಿ ಬಿಡುತ್ತದೆ. ಮೂಲವತನದಲ್ಲಿ ಯಾರೂ ಕುಳಿತು ಬಿಡುವಂತಿಲ್ಲ. ಮತ್ತೆ ಅಲ್ಲಿಂದ
ನಂಬರ್ವಾರ್ ಆಗಿ ಬರಬೇಕಾಗಿದೆ. ಅಂದಾಗ ಮೊಟ್ಟ ಮೊದಲು ಮೂಲಮಾತು ಒಂದೇ ಆಗಿದೆ, ಅದರ ಮೇಲೆ
ಒತ್ತುಕೊಟ್ಟು ತಿಳಿಸಬೇಕು. ಕಲ್ಪದ ಮೊದಲೂ ಸಹ ಈ ರೀತಿಯಾಗಿತ್ತು, ಈ ಸೆಮಿನಾರ್ ಇತ್ಯಾದಿಗಳೂ ಸಹ
ಕಲ್ಪದ ಹಿಂದೆಯೂ ಆಗಿತ್ತು, ಇಂತಹ ವಿಚಾರಗಳೂ ಹೊರಬಂದಿತ್ತು. ಇಂದಿನ ದಿನ ಯಾವುದು ಕಳೆದು ಹೋಯಿತೋ
ಅದು ಒಳ್ಳೆಯದೇ ಆಯಿತು. ಮತ್ತೆ ಕಲ್ಪದ ನಂತರ ಇದೇ ರೀತಿಯಾಗುವುದು. ಹೀಗೀಗೆ ತಮ್ಮ ಧಾರಣೆ
ಮಾಡಿಕೊಳ್ಳುತ್ತಾ ಶಕ್ತಿಶಾಲಿಗಳಾಗುತ್ತಾ ಹೋಗಿ. ತಂದೆಯು ತಿಳಿಸಿದ್ದರು – ಮಾಸ ಪತ್ರಿಕೆಯಲ್ಲಿಯೂ
ಸಹ ಹಾಕಿಸಿ - ಈ ಯುದ್ದವು 5000 ವರ್ಷಗಳ ಹಿಂದೆಯೂ ಆಗಿತ್ತು, ಹೊಸದೇನಲ್ಲ. ಈ ಮಾತುಗಳನ್ನು ನೀವೇ
ತಿಳಿದುಕೊಳ್ಳುತ್ತೀರಿ, ಹೊರಗಿನವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಈ ಮಾತುಗಳು ಬಹಳ
ಅದ್ಭುತವಾಗಿವೆ, ಯಾವಾಗಲಾದರೂ ಹೋಗಿ ತಿಳಿದುಕೊಳ್ಳುತ್ತೇವೆ ಎಂದಷ್ಟೆ ಹೇಳುತ್ತಾರೆ. ಶಿವ
ಭಗವಾನುವಾಚ ಮಕ್ಕಳ ಪ್ರತಿ. ಇಂತಿಂತಹ ಶಬ್ಧಗಳಿದ್ದಾಗ ಬಂದು ಅವಶ್ಯವಾಗಿ ತಿಳಿದುಕೊಳ್ಳುವರು.
ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದು ಹೆಸರನ್ನು ಬರೆಯಲಾಗಿದೆ. ಪ್ರಜಾಪಿತ ಬ್ರಹ್ಮನಿಂದಲೇ
ಬ್ರಾಹ್ಮಣರು ರಚಿಸಲ್ಪಡುತ್ತಾರೆ. ಬ್ರಾಹ್ಮಣ ದೇವಿ-ದೇವತಾಯ ನಮಃ ಎಂದು ಹೇಳುತ್ತಾರಲ್ಲವೆ ಅಂದಾಗ
ಯಾವ ಬ್ರಾಹ್ಮಣರು? ಬ್ರಹ್ಮನ ಸಂತಾನರು ಯಾರು ಎಂಬ ಮಾತನ್ನು ಬ್ರಾಹ್ಮಣರಿಗೂ ಸಹ ಹೋಗಿ ತಿಳಿಸಿ.
ಪ್ರಜಾಪಿತ ಬ್ರಹ್ಮನಿಗೆ ಇಷ್ಟೊಂದು ಮಂದಿ ಮಕ್ಕಳಿದ್ದಾರೆಂದರೆ ಅವಶ್ಯವಾಗಿ ಇಲ್ಲಿ ದತ್ತು
ಮಾಡಿಕೊಳ್ಳಲಾಗುತ್ತದೆ. ಯಾರು ತಮ್ಮ ಕುಲದವರಾಗಿರುವರೋ ಅವರು ಚೆನ್ನಾಗಿ ತಿಳಿದುಕೊಳ್ಳುತ್ತಾರೆ.
ನೀವಂತೂ ತಂದೆಯ ಮಕ್ಕಳಾದಿರಿ, ತಂದೆಯು ಬ್ರಹ್ಮಾರವರನ್ನೂ ಸಹ ದತ್ತು ಮಾಡಿಕೊಳ್ಳುತ್ತಾರೆ
ಇಲ್ಲವಾದರೆ ಶರೀರವು ಎಲ್ಲಿಂದ ಬರುವುದು? ಬ್ರಾಹ್ಮಣರು ಈ ಮಾತುಗಳನ್ನು ತಿಳಿದುಕೊಳ್ಳುತ್ತಾರೆ,
ಸನ್ಯಾಸಿಗಳು ತಿಳಿದುಕೊಳ್ಳುವುದಿಲ್ಲ. ಅಜ್ಮೀರ್ನಲ್ಲಿ ಬ್ರಾಹ್ಮಣರಿರುತ್ತಾರೆ ಮತ್ತು
ಹರಿದ್ವಾರದಲ್ಲಿ ಕೇವಲ ಸನ್ಯಾಸಿಗಳೇ ಇರುತ್ತಾರೆ. ಬ್ರಾಹ್ಮಣರು ಮಾರ್ಗದರ್ಶಕರಾಗಿರುತ್ತಾರೆ ಆದರೆ
ಅವರಂತೂ ಬಡವರಾಗಿರುತ್ತಾರೆ. ಅಂದಾಗ ತಿಳಿಸಿ, ನೀವೀಗ ಸ್ಥೂಲ (ದೈಹಿಕ) ಮಾರ್ಗದರ್ಶಕರಾಗಿದ್ದೀರಿ.
ಈಗ ಆತ್ಮಿಕ ಮಾರ್ಗದರ್ಶಕರಾಗಿ. ನಿಮ್ಮ ಹೆಸರೂ ಕೂಡ ಮಾರ್ಗದರ್ಶಕರು ಎಂದಾಗಿದೆ. ಪಾಂಡವ ಸೈನ್ಯವನ್ನೂ
ಸಹ ತಿಳಿದುಕೊಂಡಿಲ್ಲ. ತಂದೆಯು ಪಾಂಡವರ ಅಧಿನಾಯಕನಾಗಿದ್ದಾರೆ. ಅವರು ತಿಳಿಸುತ್ತಾರೆ - ಮಕ್ಕಳೇ,
ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ ಮತ್ತು ಮನೆಗೆ ಹೊರಟು
ಹೋಗುತ್ತೀರಿ ನಂತರ ಅಮರ ಪುರಿಯ ದೊಡ್ಡ ಯಾತ್ರೆಯಾಗುವುದು. ಮೂಲವತನದ ಯಾತ್ರೆಯು ಎಷ್ಟು
ದೊಡ್ಡದಾಗಿರಬಹುದು! ಎಲ್ಲಾ ಆತ್ಮಗಳೂ ಸಹ ಹೊರಟು ಹೋಗುತ್ತಾರೆ. ಹೇಗೆ ನೊಣಗಳ ಹಿಂಡು
ಹೋಗುತ್ತದೆಯಲ್ಲವೆ. ನೊಣಗಳಿಗೂ ಸಹ ರಾಣಿ ನೊಣವು ಓಡುತ್ತದೆಯೆಂದರೆ ಅದರ ಹಿಂದೆ ಮತ್ತೆಲ್ಲವೂ ಓಡಿ
ಹೋಗುತ್ತವೆ. ಆಶ್ಚರ್ಯವಲ್ಲವೆ! ಎಲ್ಲಾ ಆತ್ಮಗಳೂ ಸಹ ಸೊಳ್ಳೆಗಳೋಪಾದಿಯಲ್ಲಿ ಹೊರಟು ಹೋಗುತ್ತವೆ.
ಶಿವನ ಮೆರವಣಿಗೆಯಿದೆಯಲ್ಲವೆ. ನೀವೆಲ್ಲರೂ ವಧುಗಳಾಗಿದ್ದೀರಿ, ವರನಾದ ನಾನು ನಿಮ್ಮೆಲ್ಲರನ್ನೂ
ಕರೆದುಕೊಂಡು ಹೋಗಲು ಬಂದಿದ್ದೇನೆ. ನೀವೀಗ ಛೀ ಛೀ ಆಗಿ ಬಿಟ್ಟಿದ್ದೀರಿ ಆದ್ದರಿಂದ ಶೃಂಗಾರ ಮಾಡಿ
ಕರೆದುಕೊಂಡು ಹೋಗುತ್ತೇನೆ. ಯಾರು ಶೃಂಗಾರ ಮಾಡಿಕೊಳ್ಳುವುದಿಲ್ಲವೋ ಅವರು ಶಿಕ್ಷೆಯನ್ನನುಭವಿಸುವರು.
ಎಲ್ಲರೂ ಹೋಗಲೇಬೇಕಾಗಿದೆ. ಕಾಶಿಯಲ್ಲಿಯೂ ಸಹ ಮನುಷ್ಯರು ಬಲಿಯಾಗುವಾಗ ಸೆಕೆಂಡಿನಲ್ಲಿ ಎಷ್ಟೊಂದು
ಶಿಕ್ಷೆಯನ್ನನುಭವಿಸುತ್ತಾರೆ. ಮನುಷ್ಯರು ಚೀರಾಡುತ್ತಿರುತ್ತಾರೆ, ಇದೂ ಸಹ ಹಾಗೆಯೇ, ನಾನು ಹೇಗೆ
ಜನ್ಮ-ಜನ್ಮಾಂತರದ ದುಃಖ, ಶಿಕ್ಷೆಯನ್ನನುಭವಿಸುತ್ತಿದ್ದೇನೆ ಎನಿಸುತ್ತದೆ, ಆ ದುಃಖದ ಅನುಭವವು ಆ
ರೀತಿ ಭಾಸವಾಗುತ್ತದೆ. ಜನ್ಮ-ಜನ್ಮಾಂತರದ ಪಾಪಗಳ ಶಿಕ್ಷೆಯೂ ಸಿಗುತ್ತದೆ. ಎಷ್ಟು
ಶಿಕ್ಷೆಗಳನ್ನನುಭವಿಸುವರೋ ಅಷ್ಟು ಪದವಿಯು ಕಡಿಮೆಯಾಗುವುದು. ಆದ್ದರಿಂದ ತಂದೆಯು ತಿಳಿಸುತ್ತಾರೆ -
ಯೋಗಬಲದಿಂದ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಿ, ನೆನಪಿನಿಂದ ಜಮಾ ಮಾಡಿಕೊಳ್ಳುತ್ತಾ ಹೋಗಿ.
ಜ್ಞಾನವಂತೂ ಬಹಳ ಸಹಜವಾಗಿದೆ. ಈಗ ಪ್ರತಿಯೊಂದು ಕರ್ಮವನ್ನು ಜ್ಞಾನಯುಕ್ತವಾಗಿ ಮಾಡಿ. ದಾನವನ್ನೂ
ಸಹ ಪಾತ್ರರಿಗೆ (ಯೋಗ್ಯರಿಗೆ) ಕೊಡಬೇಕಾಗಿದೆ. ಪಾಪಾತ್ಮರಿಗೆ ಕೊಡುವುದರಿಂದ ಮತ್ತೆ ಕೊಡುವವರ ಮೇಲೂ
ಅದರ ಪ್ರಭಾವವಾಗಿ ಬಿಡುತ್ತದೆ. ಕೊಡುವವರೂ ಪಾಪಾತ್ಮರಾಗಿ ಬಿಡುತ್ತಾರೆ. ಯಾರು ಆ ಹಣದಿಂದ ಹೋಗಿ
ಪಾಪಕರ್ಮಗಳನ್ನು ಮಾಡುವರೋ ಅಂತಹವರಿಗೆ ಎಂದೂ ದಾನ ಮಾಡಬಾರದು. ಪಾಪಾತ್ಮರಿಗೆ ಕೊಡುವವರಂತೂ
ಪ್ರಪಂಚದಲ್ಲಿ ಅನೇಕರು ಕುಳಿತಿದ್ದಾರೆ. ಈಗ ನೀವು ಇಂತಹವರಿಗೆ ಕೊಡಬೇಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈಗ
ಪ್ರತಿಯೊಂದು ಕರ್ಮವನ್ನು ಜ್ಞಾನಯುಕ್ತವಾಗಿ ಮಾಡಬೇಕಾಗಿದೆ. ಪಾತ್ರರಿಗೇ ದಾನ ಕೊಡಬೇಕಾಗಿದೆ. ಈಗ
ಪಾಪಾತ್ಮರೊಂದಿಗೆ ಯಾವುದೇ ಹಣದ ಲೇವಾದೇವಿ ಮಾಡಬಾರದು. ಯೋಗಬಲದಿಂದ ಎಲ್ಲಾ ಹಳೆಯ ಲೆಕ್ಕಾಚಾರಗಳನ್ನು
ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.
2. ಅಪಾರ ಖುಷಿಯಲ್ಲಿರಲು
ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳಿ - ಬಾಬಾ, ತಾವು ನಮಗೆ ಅಪಾರ ಖುಷಿಯ ಖಜಾನೆಯನ್ನು ನೀಡಲು
ಬಂದಿದ್ದೀರಿ. ತಾವು ನಮ್ಮ ಜೋಳಿಗೆಯನ್ನು ತುಂಬುತ್ತಿದ್ದೀರಿ. ತಮ್ಮ ಜೊತೆ ಮೊದಲು ನಾವು
ಶಾಂತಿಧಾಮಕ್ಕೆ ಹೋಗುತ್ತೇವೆ ನಂತರ ನಮ್ಮ ರಾಜಧಾನಿಯಲ್ಲಿ ಬರುತ್ತೇವೆ.
ವರದಾನ:
ಸಮಸ್ಯೆಗಳಿಗೆ
ಸಮಾಧಾನ ರೂಪದಲ್ಲಿ ಪರಿವರ್ತನೆ ಮಾಡುವಂತಹ ವಿಶ್ವ ಕಲ್ಯಾಣಕಾರಿ ಭವ.
ನಾನು ವಿಶ್ವ ಕಲ್ಯಾಣಕಾರಿ
ಯಾಗಿದ್ದೇನೆ-ಈಗ ಈ ಶ್ರೇಷ್ಠ ಭಾವನೆ, ಶ್ರೇಷ್ಠ ಕಾಮನೆಯ ಸಂಸ್ಕಾರ ಇಮರ್ಜ್ ಮಾಡಿಕೊಳ್ಳಿ. ಈ
ಶ್ರೇಷ್ಠ ಸಂಸ್ಕಾರದ ಮುಂದೆ ಹದ್ಧಿನ ಸಂಸ್ಕಾರ ಸ್ವತಃ ಸಮಾಪ್ತಿಯಾಗಿ ಬಿಡುವುದು. ಸಮಸ್ಯೆಗಳು
ಸಮಾಧಾನರೂಪದಲ್ಲಿ ಪರಿವರ್ತನೆಯಾಗಿ ಬಿಡುವುದು. ಈಗ ಯುದ್ಧದಲ್ಲಿ ಸಮಯವನ್ನು ಕಳೆಯಬೇಡಿ ಆದರೆ
ವಿಜಯೀತನದ ಸಂಸ್ಕಾರ ಇಮರ್ಜ್ ಮಾಡಿಕೊಳ್ಳಿ. ಈಗ ಎಲ್ಲವೂ ಸೇವೆಯಲ್ಲಿ ತೊಡಗಿಸಿಬಿಡಿ ಆಗ
ಪರಿಶ್ರಮದಿಂದ ಬಿಡಿಸಿಕೊಂಡು ಬಿಡುವಿರಿ. ಸಮಸ್ಯೆಗಳಲ್ಲಿ ಹೋಗುವ ಬದಲು ಧಾನ ಕೊಟ್ಟು ಬಿಡಿ, ವರದಾನ
ಕೊಡಿ ಆಗ ಸ್ವಯಂನ ಗ್ರಹಣ ಸ್ವತಃ ಸಮಾಪ್ತಿಯಾಗಿ ಬಿಡುವುದು.
ಸ್ಲೋಗನ್:
ಯಾರದೇ ಕಡಿಮೆ,
ಬಲಹೀನತೆಗಳ ವರ್ಣನೆ ಮಾಡುವ ಬದಲು ಗುಣ ಸ್ವರೂಪರಾಗಿ, ಗುಣಗಳನ್ನೇ ವರ್ಣನೆ ಮಾಡಿ.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ತಂದೆಗೆ ಮಕ್ಕಳೊಂದಿಗೆ
ಇಷ್ಟೂ ಪ್ರೀತಿಯಿದೆ ಅಮೃತವೇಳೆಯಿಂದಲೇ ಮಕ್ಕಳ ಪಾಲನೆ ಮಾಡುತ್ತಾರೆ. ದಿನದ ಆರಂಭವೇ ಎಷ್ಟು
ಶ್ರೇಷ್ಠವಾಗುತ್ತದೆ! ಸ್ವಯಂ ಭಗವಂತ ಮಿಲನ ಮಾಡಲು ಕರೆಯುತ್ತಾರೆ, ಆತ್ಮಿಕ ವಾರ್ತಾಲಾಪ ಮಾಡುತ್ತಾರೆ,
ಶಕ್ತಿ ತುಂಬುತ್ತಾರೆ! ತಂದೆಯ ಪ್ರೀತಿಯ ಗೀತೆ ನಿಮ್ಮನ್ನು ಎಬ್ಬಿಸುತ್ತದೆ. ಎಷ್ಟು ಸ್ನೇಹದಿಂದ
ಕರೆಯುತ್ತಾರೆ, ಎಬ್ಬಿಸುತ್ತಾರೆ – ಮಧುರ ಮಕ್ಕಳೇ, ಪ್ರಿಯ ಮಕ್ಕಳೇ, ಬನ್ನಿ .... ಈ ಪ್ರೀತಿಯ
ಪಾಲನೆಯ ಪ್ರಾಕ್ಟಿಕಲ್ ಸ್ವರೂಪವಾಗಿದೆ ‘ಸಹಜ ಯೋಗಿ ಜೀವನ’.