24.01.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ನಿಮಗೆ ಯಾವ ವಿದ್ಯೆಯನ್ನು ಓದಿಸುತ್ತಾರೆ ಅದನ್ನು ಬುದ್ಧಿಯಲ್ಲಿಟ್ಟುಕೊಂಡು ಎಲ್ಲರಿಗೂ ಓದಿಸಬೇಕಾಗಿದೆ, ಪ್ರತಿಯೊಬ್ಬರಿಗೆ ತಂದೆಯ ಮತ್ತು ಚಕ್ರದ ಪರಿಚಯ ಕೊಡಬೇಕಾಗಿದೆ”

ಪ್ರಶ್ನೆ:
ಆತ್ಮವು ಸತ್ಯಯುಗದಲ್ಲಿಯೂ ಪಾತ್ರವನ್ನಭಿಯಿಸುತ್ತದೆ ಮತ್ತು ಕಲಿಯುಗದಲ್ಲಿಯೂ ಅಭಿನಯಿಸುತ್ತದೆ ಆದರೆ ಅಂತರವೇನಾಗಿದೆ?

ಉತ್ತರ:
ಸತ್ಯಯುಗದಲ್ಲಿ ಆತ್ಮವು ಪಾತ್ರವನ್ನಭಿನಯಿಸಿದಾಗ ಅಲ್ಲಿ ಯಾವುದೇ ಪಾಪ ಕರ್ಮಗಳಾಗುವುದಿಲ್ಲ. ಅಲ್ಲಿ ಪ್ರತಿ ಕರ್ಮವು ಅಕರ್ಮವಾಗಿ ಬಿಡುತ್ತದೆ ಏಕೆಂದರೆ ರಾವಣನಿರುವುದಿಲ್ಲ. ಮತ್ತೆ ಕಲಿಯುಗದಲ್ಲಿ ಪಾತ್ರವನ್ನಭಿನಯಿಸಿದಾಗ ಪ್ರತಿ ಕರ್ಮ ವಿಕರ್ಮ ಅಥವಾ ಪಾಪವಾಗಿ ಬಿಡುತ್ತದೆ ಏಕೆಂದರೆ ಇಲ್ಲಿ ವಿಕಾರವಿದೆ. ನೀವೀಗ ಸಂಗಮದಲ್ಲಿದ್ದೀರಿ, ನಿಮಗೆ ಸಂಪೂರ್ಣ ಜ್ಞಾನವಿದೆ.

ಓಂ ಶಾಂತಿ.
ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ. ತಂದೆಯೂ ಸಹ ತಿಳಿದುಕೊಂಡಿದ್ದಾರೆ - ಮಕ್ಕಳು ನನ್ನ ಸನ್ಮುಖದಲ್ಲಿ ಕುಳಿತಿದ್ದಾರೆ. ಇದೂ ಸಹ ನಿಮಗೆ ತಿಳಿದಿದೆ, ತಂದೆಯು ನಮಗೆ ಶಿಕ್ಷಣ ಕೊಡುತ್ತಾರೆ. ಇದನ್ನು ಮತ್ತೆ ಅನ್ಯರಿಗೆ ಕೊಡಬೇಕಾಗಿದೆ. ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ ಏಕೆಂದರೆ ಎಲ್ಲರೂ ತಂದೆಯನ್ನು ಹಾಗೂ ತಂದೆಯ ಶಿಕ್ಷಣವನ್ನು ಮರೆತು ಬಿಟ್ಟಿದ್ದಾರೆ. ಈಗ ತಂದೆಯು ಯಾವ ವಿದ್ಯೆಯನ್ನು ಓದಿಸುತ್ತಾರೆಯೋ ಇದು ಪುನಃ 5000 ವರ್ಷಗಳ ನಂತರವೇ ಸಿಗುವುದು. ಈ ಜ್ಞಾನವು ಮತ್ತ್ಯಾರಿಗೂ ಇರುವುದಿಲ್ಲ. ಮುಖ್ಯವಾದುದು ತಂದೆಯ ಪರಿಚಯವಾಗಿದೆ ಮತ್ತೆ ಇದನ್ನೂ ಸಹ ತಿಳಿಸಬೇಕು - ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ. ಇಡೀ ಪ್ರಪಂಚದ ಆತ್ಮರೆಲ್ಲರೂ ಪರಸ್ಪರ ಸಹೋದರರಾಗಿದ್ದೀರಿ. ಎಲ್ಲರೂ ತಮಗೆ ಸಿಕ್ಕಿರುವ ಪಾತ್ರವನ್ನು ಈ ಶರೀರದ ಮೂಲಕ ಅಭಿನಯಿಸುತ್ತಾರೆ. ಈಗಂತೂ ತಂದೆಯು ಹೊಸ ಪ್ರಪಂಚದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ ಬಂದಿದ್ದಾರೆ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ಆದರೆ ನಾವೆಲ್ಲಾ ಸಹೋದರರು ಪತಿತರಾಗಿದ್ದೇವೆ, ಒಬ್ಬರೂ ಪಾವನರಿಲ್ಲ. ಎಲ್ಲಾ ಪತಿತರನ್ನು ಪಾವನ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ಇದು ಪತಿತ, ವಿಕಾರಿ, ಭ್ರಷ್ಟಾಚಾರಿ, ರಾವಣನ ಪ್ರಪಂಚವಾಗಿದೆ. ರಾವಣನ ಅರ್ಥವೇ ಆಗಿದೆ - ಸ್ತ್ರೀಯಲ್ಲಿನ ಐದು ವಿಕಾರಗಳು ಮತ್ತು ಪುರುಷನಲ್ಲಿರುವ ಐದು ವಿಕಾರಗಳು. ತಂದೆಯು ಬಹಳ ಸಹಜ ರೀತಿಯಲ್ಲಿ ತಿಳಿಸುತ್ತಾರೆ. ನೀವೂ ಸಹ ಈ ರೀತಿ ತಿಳಿಸಬಹುದು ಅಂದಾಗ ಮೊಟ್ಟ ಮೊದಲಿಗೆ ನೀವು ಇದನ್ನು ತಿಳಿಸಿ - ಅವರು ನಾವಾತ್ಮರ ತಂದೆಯಾಗಿದ್ದಾರೆ. ನಾವೆಲ್ಲರೂ ಸಹೋದರರಾಗಿದ್ದೇವೆ. ಇದು ಸರಿಯೇ? ಎಂದು ಕೇಳಿದ ಮೇಲೆ ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ ಎಂಬುದನ್ನು ಬರೆಯುವುದಕ್ಕೆ ಹೇಳಿ, ನಮ್ಮ ತಂದೆಯೂ ಒಬ್ಬರೇ ಆಗಿದ್ದಾರೆ, ಅವರು ನಮ್ಮೆಲ್ಲರ ಪರಮಾತ್ಮನಾಗಿದ್ದಾರೆ, ಅವರಿಗೆ ತಂದೆಯೆಂದು ಹೇಳಲಾಗುತ್ತದೆ. ಇದನ್ನು ಪಕ್ಕಾ-ಪಕ್ಕಾ ಬುದ್ಧಿಯಲ್ಲಿ ಕೂರಿಸಿ ಆಗ ಸರ್ವವ್ಯಾಪಿಯ ಮಾತು ಮೊದಲು ಅವರ ಬುದ್ಧಿಯಿಂದ ಹೊರಟು ಹೋಗಲಿ. ಮೊದಲು ತಂದೆಯ ಬಗ್ಗೆ ಓದಬೇಕಾಗಿದೆ. ಆದ್ದರಿಂದ ತಿಳಿಸಿ, ಇದನ್ನು ಕುಳಿತು ಚೆನ್ನಾಗಿ ಬರೆಯಿರಿ - ಮೊದಲು ಸರ್ವವ್ಯಾಪಿ ಎಂದು ಹೇಳುತ್ತಿದ್ದೆವು, ಈಗ ತಿಳಿದುಕೊಂಡಿದ್ದೇನೆ - ತಂದೆಯು ಸರ್ವವ್ಯಾಪಿಯಲ್ಲ, ನಾವೆಲ್ಲರೂ ಸಹೋದರರಾಗಿದ್ದೇವೆ. ಎಲ್ಲಾ ಆತ್ಮರೂ ಸಹ ಪರಮಪಿತ ಪರಮಾತ್ಮ ಎಂದು ಹೇಳುತ್ತಾರೆ ಅಂದಾಗ ಮೊದಲು ಈ ನಿಶ್ಚಯವನ್ನು ಕುಳ್ಳರಿಸಬೇಕು, ನಾವಾತ್ಮರಾಗಿದ್ದೇವೆ ಪರಮಾತ್ಮನಲ್ಲ. ನಮ್ಮಲ್ಲಿ ಪರಮಾತ್ಮನೂ ವ್ಯಾಪಕನಾಗಿಲ್ಲ, ಎಲ್ಲರಲ್ಲಿ ಆತ್ಮವು ವ್ಯಾಪಕವಾಗಿದೆ. ಆತ್ಮವು ಶರೀರದ ಆಧಾರದಿಂದ ಪಾತ್ರವನ್ನಭಿನಯಿಸುತ್ತದೆ. ಇದನ್ನು ಪಕ್ಕಾ ಮಾಡಿಸಿ. ಮತ್ತೆ ತಿಳಿಸಿ, ಆ ತಂದೆಯು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಈ ಸೃಷ್ಟಿಚಕ್ರದ ಆಯಸ್ಸು ಎಷ್ಟೆಂಬುದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಶಿಕ್ಷಕನ ರೂಪದಲ್ಲಿ ಕುಳಿತುಕೊಂಡು ತಿಳಿಸುತ್ತಾರೆ, ಲಕ್ಷಾಂತರ ವರ್ಷಗಳ ಮಾತಿಲ್ಲ. ಈ ಚಕ್ರವು ಅನಾದಿ, ನಿಖರವಾಗಿ ಮಾಡಿ-ಮಾಡಲ್ಪಟ್ಟಿದೆ. ಇದನ್ನು ಅರಿತುಕೊಳ್ಳಬೇಕಾಗಿದೆ. ಸತ್ಯ-ತ್ರೇತಾಯುಗವು ಕಳೆಯಿತು, ಅದಕ್ಕೆ ಸ್ವರ್ಗ ಮತ್ತು ಸೆಮಿ ಸ್ವರ್ಗವೆಂದು ಹೇಳಲಾಗುತ್ತದೆ ಎಲ್ಲಿ ದೇವಿ-ದೇವತೆಗಳ ರಾಜ್ಯ ನಡೆಯುತ್ತದೆ. ಸತ್ಯಯುಗದಲ್ಲಿ 16 ಕಲೆಗಳು, ತ್ರೇತಾದಲ್ಲಿ 14 ಕಲೆಗಳಿರುತ್ತವೆ. ನಿಧಾನ-ನಿಧಾನವಾಗಿ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಪ್ರಪಂಚವು ಅವಶ್ಯವಾಗಿ ಹಳೆಯದಾಗುತ್ತದೆಯಲ್ಲವೆ. ಸತ್ಯಯುಗದ ಪ್ರಭಾವವು ಬಹಳ ದೊಡ್ಡದಾಗಿದೆ. ಹೆಸರೇ ಆಗಿದೆ - ಸ್ವರ್ಗ, ಹೆವಿನ್, ಹೊಸ ಪ್ರಪಂಚ..... ಅದರ ಮಹಿಮೆಯನ್ನೇ ಮಾಡಬೇಕಾಗಿದೆ. ಹೊಸ ಪ್ರಪಂಚದಲ್ಲಿ ಒಂದು ಆದಿ ಸನಾತನ ದೇವಿ-ದೇವತಾ ಧರ್ಮವಿರುತ್ತದೆ. ಹೀಗೆ ಮೊದಲು ತಂದೆಯ ಪರಿಚಯ ನಂತರ ಚಕ್ರದ ಪರಿಚಯ ಕೊಡಬೇಕಾಗಿದೆ. ನಿಶ್ಚಯ ಮಾಡಿಸುವುದಕ್ಕಾಗಿ ಚಿತ್ರಗಳು ನಿಮ್ಮ ಬಳಿಯಿದೆ, ಈ ಸೃಷ್ಟಿಚಕ್ರವು ಸುತ್ತುತ್ತಿರುತ್ತದೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ತ್ರೇತಾಯುಗದಲ್ಲಿ ರಾಮ-ಸೀತೆಯರ ರಾಜ್ಯವಿತ್ತು. ಇದು ಅರ್ಧ ಕಲ್ಪವಾಯಿತು, ಎರಡು ಯುಗಗಳು ಕಳೆಯಿತು ನಂತರ ದ್ವಾಪರ-ಕಲಿಯುಗವು ಬರುತ್ತದೆ. ದ್ವಾಪರದಲ್ಲಿ ರಾವಣ ರಾಜ್ಯವಿರುತ್ತದೆ. ದೇವತೆಗಳು ವಾಮ ಮಾರ್ಗದಲ್ಲಿ ಹೋಗುತ್ತಾರೆ ಆದ್ದರಿಂದ ಆಗ ವಿಕಾರದ ಪದ್ಧತಿಯಾಗಿ ಬಿಡುತ್ತದೆ. ಸತ್ಯ-ತ್ರೇತಾಯುಗದಲ್ಲಿ ಎಲ್ಲರೂ ನಿರ್ವಿಕಾರಿಗಳಾಗಿರುತ್ತಾರೆ. ಒಂದು ಆದಿ ಸನಾತನ ದೇವಿ-ದೇವತಾ ಧರ್ಮವಿರುತ್ತದೆ. ಚಿತ್ರಗಳನ್ನೂ ತೋರಿಸಬೇಕು, ಚಿತ್ರಗಳಿಲ್ಲದೆಯೋ ತಿಳಿಸಬೇಕಾಗಿದೆ. ತಂದೆಯು ನಮಗೆ ಶಿಕ್ಷಕನಾಗಿ ಈ ರೀತಿ ಓದಿಸುತ್ತಾರೆ. ತಂದೆಯು ತಮ್ಮ ಪರಿಚಯವನ್ನು ತಾವೇ ಬಂದು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಪತಿತರನ್ನು ಪಾವನ ಮಾಡಲು ಬರುತ್ತೇನೆ ಅಂದಮೇಲೆ ನನಗೆ ಶರೀರವು ಖಂಡಿತ ಬೇಕು ಇಲ್ಲವೆಂದರೆ ಹೇಗೆ ಮಾತನಾಡಲಿ! ನಾನು ಸತ್ಯ, ಚೈತನ್ಯನಾಗಿದ್ದೇನೆ ಮತ್ತು ಅಮರನಾಗಿದ್ದೇನೆ. ಆತ್ಮವು ಸತೋ, ರಜೋ, ತಮೋದಲ್ಲಿ ಬರುತ್ತದೆ. ಆತ್ಮವೇ ಪತಿತ ಮತ್ತು ಪಾವನವಾಗುತ್ತದೆ ಆದ್ದರಿಂದ ಪತಿತ ಆತ್ಮ, ಪಾವನ ಆತ್ಮ ಎಂದು ಹೇಳಲಾಗುತ್ತದೆ. ಆತ್ಮದಲ್ಲಿಯೇ ಎಲ್ಲಾ ಸಂಸ್ಕಾರವಿದೆ. ಹಿಂದಿನ ಕರ್ಮ ಹಾಗೂ ವಿಕರ್ಮದ ಸಂಸ್ಕಾರವನ್ನು ಆತ್ಮವು ತೆಗೆದುಕೊಂಡು ಬರುತ್ತದೆ. ಸತ್ಯಯುಗದಲ್ಲಿ ವಿಕರ್ಮವಾಗುವುದೇ ಇಲ್ಲ. ಕರ್ಮ ಮಾಡುತ್ತಾರೆ, ಪಾತ್ರವನ್ನಭಿನಯಿಸುತ್ತಾರೆ ಆದರೆ ಆ ಕರ್ಮವು ಅಕರ್ಮವಾಗಿ ಬಿಡುತ್ತದೆ. ಗೀತೆಯಲ್ಲಿಯೂ ಅಕ್ಷರವಿದೆ, ನೀವೀಗ ಪ್ರತ್ಯಕ್ಷದಲ್ಲಿ ತಿಳಿದುಕೊಳ್ಳುತ್ತಿದ್ದೀರಿ. ನಿಮಗೆ ತಿಳಿದಿದೆ - ಹಳೆಯ ಪ್ರಪಂಚವನ್ನು ಪರಿವರ್ತಿಸಿ, ಹೊಸ ಪ್ರಪಂಚವನ್ನು ಸ್ಥಾಪಿಸಲು ತಂದೆಯು ಬಂದಿದ್ದಾರೆ. ಅಲ್ಲಿ ಕರ್ಮವು ಅಕರ್ಮವಾಗಿ ಬಿಡುತ್ತದೆ, ಅದಕ್ಕೇ ಸತ್ಯಯುಗವೆಂದು ಹೇಳಲಾಗುತ್ತದೆ ಮತ್ತು ಎಲ್ಲಿ ಎಲ್ಲಾ ಕರ್ಮಗಳು ವಿಕರ್ಮಗಳಾಗುವುದೋ ಅದಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ನೀವೀಗ ಸಂಗಮದಲ್ಲಿದ್ದೀರಿ, ತಂದೆಯು ಎರಡೂ ಕಡೆಯ ಮಾತುಗಳನ್ನು ತಿಳಿಸುತ್ತಾರೆ. ಸತ್ಯ-ತ್ರೇತಾಯುಗವು ಪವಿತ್ರ ಪ್ರಪಂಚವಾಗಿದೆ, ಅಲ್ಲಿ ಯಾವುದೇ ಪಾಪವಾಗುವುದಿಲ್ಲ. ಯಾವಾಗ ರಾವಣ ರಾಜ್ಯವು ಆರಂಭವಾಗುವುದೋ ಆಗಲೇ ಪಾಪಗಳಾಗುತ್ತವೆ. ಸತ್ಯಯುಗದಲ್ಲಿ ವಿಕಾರದ ಹೆಸರಿರುವುದಿಲ್ಲ. ರಾಮ ರಾಜ್ಯ ಮತ್ತು ರಾವಣ ರಾಜ್ಯದ ಚಿತ್ರಗಳು ಸನ್ಮುಖದಲ್ಲಿವೆ. ತಂದೆಯು ತಿಳಿಸುತ್ತಾರೆ - ಇದು ವಿದ್ಯೆಯಾಗಿದೆ, ತಂದೆಯ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಈ ವಿದ್ಯೆಯು ನಿಮ್ಮ ಬುದ್ಧಿಯಲ್ಲಿರಬೇಕು. ಇದರಿಂದ ತಂದೆಯ ನೆನಪೂ ಬರುತ್ತದೆ, ಚಕ್ರವೂ ಬುದ್ಧಿಯಲ್ಲಿ ಬಂದು ಬಿಡುತ್ತದೆ. ಸೆಕೆಂಡಿನಲ್ಲಿ ಎಲ್ಲವೂ ನೆನಪಿಗೆ ಬಂದು ಬಿಡುತ್ತದೆ. ವರ್ಣನೆ ಮಾಡುವುದರಲ್ಲಿ ತಡವಾಗುತ್ತದೆ. ಇದಕ್ಕೆ ಮೂರು ಕಾರಂಜಿಗಳಿವೆ - ವೃಕ್ಷವು ಈ ರೀತಿಯಿರುತ್ತದೆ, ಬೀಜ ಮತ್ತು ವೃಕ್ಷವು ಸೆಕೆಂಡಿನಲ್ಲಿ ನೆನಪಿಗೆ ಬಂದು ಬಿಡುತ್ತದೆ. ಈ ಬೀಜವು ಇಂತಹ ವೃಕ್ಷದ್ದಾಗಿದೆ, ಇದರಿಂದ ಈ ರೀತಿ ಫಲ ಬಿಡುತ್ತದೆ. ಈ ಬೇಹದ್ದಿನ ಮನುಷ್ಯ ಸೃಷ್ಟಿ ರೂಪಿ ವೃಕ್ಷವು ಹೇಗಿದೆ ಎಂಬುದರ ರಹಸ್ಯವನ್ನು ನೀವು ತಿಳಿಸುತ್ತೀರಿ. ಮಕ್ಕಳಿಗೆ ಎಲ್ಲವನ್ನೂ ತಿಳಿಸಿದ್ದಾರೆ – ಅರ್ಧ ಕಲ್ಪ ಹೇಗೆ ರಾಜ್ಯ ನಡೆಯುತ್ತದೆ ನಂತರ ರಾವಣ ರಾಜ್ಯವಾದಾಗ ಸತ್ಯ-ತ್ರೇತಾಯುಗವಾಸಿಗಳೇ ದ್ವಾಪರವಾಸಿಗಳಾಗುತ್ತಾರೆ. ವೃಕ್ಷವು ವೃದ್ಧಿ ಹೊಂದುತ್ತಿರುತ್ತದೆ. ಅರ್ಧ ಕಲ್ಪದ ನಂತರ ರಾವಣ ರಾಜ್ಯವಾಗುತ್ತದೆ, ವಿಕಾರಿಗಳಾಗಿ ಬಿಡುತ್ತಾರೆ. ತಂದೆಯಿಂದ ಯಾವ ಆಸ್ತಿಯು ಸಿಕ್ಕಿತ್ತೋ ಅದು ಅರ್ಧಕಲ್ಪ ನಡೆಯಿತು. ಜ್ಞಾನವನ್ನು ತಿಳಿಸಿ ಆಸ್ತಿಯನ್ನು ಕೊಟ್ಟರು. ಆ ಪ್ರಾಲಬ್ಧವನ್ನು ಭೋಗಿಸಿದಿರಿ ಅರ್ಥಾತ್ ಸತ್ಯ-ತ್ರೇತಾಯುಗದಲ್ಲಿ ಸುಖ ಪಡೆದಿರಿ ಅದಕ್ಕೆ ಸುಖಧಾಮ, ಸತ್ಯಯುಗವೆಂದು ಹೇಳಲಾಗುತ್ತದೆ. ಅಲ್ಲಿ ದುಃಖವಿರುವುದೇ ಇಲ್ಲ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ! ಒಬ್ಬರಿಗೆ ತಿಳಿಸುತ್ತೀರೋ ಅಥವಾ ಅನೇಕರಿಗೆ ತಿಳಿಸುತ್ತೀರೋ ಆಗ ಅವರು ತಿಳಿದುಕೊಳ್ಳುತ್ತಿದ್ದಾರೆ, ಹೌದು, ಹೌದು ಎನ್ನುತ್ತಾರೆಯೇ ಎಂಬುದರ ಮೇಲೆ ಗಮನ ಕೊಡಿ. ಬರೆದುಕೊಳ್ಳುತ್ತಾ ಹೋಗಿ, ಯಾವುದೇ ಸಂಶಯವಿದ್ದರೆ ಕೇಳಿರಿ ಎಂದು ತಿಳಿಸಿ. ಯಾವ ಮಾತನ್ನು ಯಾರೂ ತಿಳಿದುಕೊಂಡಿಲ್ಲವೋ ನಾವು ಅದನ್ನು ತಿಳಿಸುತ್ತೇವೆ. ನೀವು ಏನನ್ನೂ ತಿಳಿದುಕೊಂಡಿಲ್ಲ, ಅಂದಮೇಲೆ ಮತ್ತೇನು ಕೇಳುವಿರಿ?

ತಂದೆಯು ಈ ಬೇಹದ್ದಿನ ವೃಕ್ಷದ ರಹಸ್ಯವನ್ನು ತಿಳಿಸುತ್ತಾರೆ. ಈ ಜ್ಞಾನವನ್ನು ನೀವೀಗ ತಿಳಿದುಕೊಳ್ಳುತ್ತೀರಿ, ತಂದೆಯು ತಿಳಿಸಿದ್ದಾರೆ - ನೀವು 84 ಜನ್ಮಗಳ ಚಕ್ರದಲ್ಲಿ ಹೇಗೆ ಬರುತ್ತೀರಿ? ಇದನ್ನು ಚೆನ್ನಾಗಿ ಬರೆದಿಟ್ಟುಕೊಳ್ಳಿ ನಂತರ ಇದರ ಮೇಲೆ ವಿಚಾರ ಮಾಡಿ. ಹೇಗೆ ಶಿಕ್ಷಕರು ಪ್ರಬಂಧ ಕೊಡುತ್ತಾರೆ ಮತ್ತೆ ಮನೆಗೆ ಹೋಗಿ ವಿದ್ಯಾರ್ಥಿಗಳು ರಿವೈಜ್ ಮಾಡಿಕೊಂಡು ಬರುತ್ತಾರಲ್ಲವೆ. ನೀವೂ ಸಹ ಈ ಜ್ಞಾನವನ್ನು ಕೊಡುತ್ತೀರಿ ನಂತರ ನೋಡಿ ಏನಾಗುವುದು. ಕೇಳುತ್ತಾ ಇರಿ ಒಂದೊಂದು ಮಾತನ್ನು ಚೆನ್ನಾಗಿ ತಿಳಿಸಿ. ತಂದೆ-ಶಿಕ್ಷಕರ ಕರ್ತವ್ಯವನ್ನು ತಿಳಿಸಿ ನಂತರ ಗುರುವಿನ ಬಗ್ಗೆ ತಿಳಿಸಿ. ಬಂದು ನಾವು ಪತಿತರನ್ನು ಪಾವನ ಮಾಡಿ ಎಂದೇ ಅವರನ್ನು ಕರೆದಿರಿ. ಆತ್ಮವು ಪಾವನವಾದರೆ ಮತ್ತೆ ಪಾವನ ಶರೀರವೇ ಸಿಗುತ್ತದೆ. ಎಂತಹ ಚಿನ್ನವೋ ಅದರಂತೆಯೇ ಆಭರಣಗಳಾಗುತ್ತವೆ. 24 ಕ್ಯಾರೇಟ್ನ ಚಿನ್ನದಲ್ಲಿ ಲೋಹವನ್ನು ಬೆರಕೆ ಮಾಡದಿದ್ದರೆ ಆಭರಣಗಳೂ ಸಹ ಅದೇ ರೀತಿ ಸತೋಪ್ರಧಾನವಾಗಿರುತ್ತವೆ. ಲೋಹವನ್ನು ಬೆರೆಸುವುದರಿಂದ ತಮೋಪ್ರಧಾನವಾಗಿ ಬಿಟ್ಟಿದೆ. ಮೊಟ್ಟ ಮೊದಲು ಭಾರತವು 24 ಕ್ಯಾರೇಟ್ ಅಪ್ಪಟ ಚಿನ್ನದ ಪಕ್ಷಿಯಾಗಿತ್ತು ಅರ್ಥಾತ್ ಸತೋಪ್ರಧಾನ, ಹೊಸ ಪ್ರಪಂಚವಾಗಿತ್ತು ನಂತರ ತಮೋಪ್ರಧಾನವಾಗಿದೆ. ಇದನ್ನು ತಂದೆಯೇ ತಿಳಿಸುತ್ತಾರೆ, ಮತ್ತ್ಯಾವ ಮನುಷ್ಯ ಗುರುಗಳೂ ತಿಳಿದುಕೊಂಡಿಲ್ಲ. ಬಂದು ಪಾವನ ಮಾಡಿ ಎಂದು ಕರೆಯುತ್ತಾರೆ ಅಂದಮೇಲೆ ಗುರುವಿನದೇ ಕರ್ತವ್ಯವಾಗಿದೆ. ವಾನಪ್ರಸ್ಥ ಸ್ಥಿತಿಯಲ್ಲಿ ಮನುಷ್ಯರು ಗುರುಗಳನ್ನು ಮಾಡಿಕೊಳ್ಳುತ್ತಾರೆ. ವಾಣಿಯಿಂದ ದೂರದ ಸ್ಥಾನವಂತೂ ನಿರಾಕಾರಿ ಪ್ರಪಂಚವಾಗಿದೆ ಅಲ್ಲಿ ಆತ್ಮರಿರುತ್ತಾರೆ. ಇದು ಸಾಕಾರಿ ಪ್ರಪಂಚವಾಗಿದೆ. ಇದು ಎರಡರ ಮಿಲನವಾಗಿದೆ. ಅಲ್ಲಂತೂ ಶರೀರವಿರುವುದಿಲ್ಲ, ಅಲ್ಲಿ ಯಾವುದೇ ಕರ್ಮವಾಗುವುದಿಲ್ಲ. ತಂದೆಯಲ್ಲಿ ಸಂಪೂರ್ಣ ಜ್ಞಾನವಿದೆ. ಡ್ರಾಮಾ ಪ್ಲಾನನುಸಾರ ಅವರಿಗೇ ಜ್ಞಾನ ಪೂರ್ಣನೆಂದು ಹೇಳಲಾಗುತ್ತದೆ. ಅವರು ಚೈತನ್ಯ ಸತ್-ಚಿತ್-ಆನಂದ ಸ್ವರೂಪನಾಗಿರುವ ಕಾರಣ ಅವರಿಗೆ ಜ್ಞಾನ ಪೂರ್ಣನೆಂದು ಹೇಳಲಾಗುತ್ತದೆ. ಹೇ ಪತಿತ-ಪಾವನ ಜ್ಞಾನ ಸಾಗರ ಶಿವ ತಂದೆ ಎಂದೇ ಕರೆಯುತ್ತಾರೆ. ಅವರ ಹೆಸರು ಸದಾ ಶಿವನೆಂದೇ ಆಗಿದೆ. ಉಳಿದೆಲ್ಲಾ ಆತ್ಮರು ಪಾತ್ರವನ್ನಭಿನಯಿಸಲು ಬರುತ್ತಾರೆ ಆಗ ಭಿನ್ನ-ಭಿನ್ನ ನಾಮಗಳನ್ನು ಧಾರಣೆ ಮಾಡುತ್ತಾರೆ. ತಂದೆಯನ್ನು ಕರೆಯುತ್ತಾರೆ ಆದರೆ ಅವರಿಗೇನೂ ತಿಳುವಳಿಕೆಯಿಲ್ಲ. ಅವಶ್ಯವಾಗಿ ಭಾಗ್ಯಶಾಲಿ ರಥವೂ ಇರುವರು. ಯಾರಲ್ಲಿ ತಂದೆಯು ಪ್ರವೇಶ ಮಾಡಿ ನಿಮ್ಮನ್ನು ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗುವರು. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಯಾರು ಬಹಳ ಜನ್ಮಗಳ ಅಂತಿಮದಲ್ಲಿದ್ದಾರೆ, ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಯೋ ಅವರ ತನುವಿನಲ್ಲಿ ನಾನು ಬರುತ್ತೇನೆ. ಭಾಗ್ಯಶಾಲಿ ರಥದಲ್ಲಿ ಬರಬೇಕಾಗುತ್ತದೆ. ಮೊದಲ ನಂಬರಿನಲ್ಲಂತೂ ಶ್ರೀಕೃಷ್ಣನಿದ್ದಾನೆ. ಕೃಷ್ಣನು ಹೊಸ ಪ್ರಪಂಚದ ಮಾಲೀಕನಾಗಿದ್ದಾನೆ, ಮತ್ತೆ ಅದೇ ಶ್ರೀಕೃಷ್ಣನು ಕೆಳಗಿಳಿಯುತ್ತಾನೆ. ಸ್ವರ್ಣೀಮ ಯುಗದಿಂದ ಬೆಳ್ಳಿಯ ಯುಗ, ತಾಮ್ರದ ಯುಗ, ಕಬ್ಬಿಣದ ಯುಗದಲ್ಲಿ ಬಂದು ಬಿಡುತ್ತಾರೆ. ನೀವೀಗ ಮತ್ತೆ ಕಬ್ಬಿಣದಿಂದ ಚಿನ್ನವಾಗುತ್ತಿದ್ದೀರಿ. ತಂದೆಯು ತಿಳಿಸುತ್ತಾರೆ - ಕೇವಲ ತಂದೆಯಾದ ನನ್ನನ್ನು ನೆನಪು ಮಾಡಿ. ಯಾರಲ್ಲಿ ಪ್ರವೇಶ ಮಾಡಿದ್ದೇನೆಯೋ ಅವರ ಆತ್ಮದಲ್ಲಂತೂ ಸ್ವಲ್ಪವೂ ಜ್ಞಾನವಿರಲಿಲ್ಲ. ನಾನು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡುತ್ತೇನೆ ಆದ್ದರಿಂದ ಇವರಿಗೆ ಭಾಗ್ಯಶಾಲಿ ರಥವೆಂದು ಹೇಳಲಾಗುತ್ತದೆ. ಇಲ್ಲವಾಗಿದ್ದರೆ ಎಲ್ಲರಿಗಿಂತ ಶ್ರೇಷ್ಠರಂತೂ ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ ಅಂದಮೇಲೆ ಅವರಲ್ಲಿ ಪ್ರವೇಶ ಮಾಡಬೇಕಿತ್ತು ಆದರೆ ಇವರಲ್ಲಿ ಪರಮಾತ್ಮನು ಪ್ರವೇಶ ಮಾಡುವುದಿಲ್ಲ ಆದ್ದರಿಂದ ಅವರಿಗೆ ಭಾಗ್ಯಶಾಲಿ ರಥವೆಂದು ಹೇಳಲಾಗುವುದಿಲ್ಲ. ರಥದಲ್ಲಿ ಬಂದು ಪತಿತರನ್ನು ಪಾವನ ಮಾಡಬೇಕಾಗಿದೆ ಅಂದಮೇಲೆ ಅವಶ್ಯವಾಗಿ ಕಲಿಯುಗೀ ತಮೋಪ್ರಧಾನವಾಗಿರಬೇಕಲ್ಲವೆ. ನಾನು ಬಹಳ ಜನ್ಮಗಳ ಅಂತಿಮದಲ್ಲಿ ಬರುತ್ತೇನೆ ಎಂದು ಸ್ವಯಂ ತಂದೆಯೇ ಹೇಳುತ್ತಾರೆ. ಗೀತೆಯಲ್ಲಿಯೂ ಅಕ್ಷರವು ನಿಖರವಾಗಿದೆ. ಗೀತೆಯನ್ನು ಸರ್ವ ಶಾಸ್ತ್ರಮಯಿ ಶಿರೋಮಣಿ ಎಂದು ಹೇಳಲಾಗುತ್ತದೆ. ಈ ಸಂಗಮಯುಗದಲ್ಲಿಯೇ ತಂದೆಯು ಬಂದು ಬ್ರಾಹ್ಮಣ ಕುಲ ಮತ್ತು ದೇವತಾ ಕುಲವನ್ನು ಸ್ಥಾಪನೆ ಮಾಡುತ್ತಾರೆ. ಬಹಳ ಜನ್ಮಗಳ ಅಂತಿಮದಲ್ಲಿ ಅರ್ಥಾತ್ ಸಂಗಮದಲ್ಲಿಯೇ ತಂದೆಯು ಬರುತ್ತಾರೆ. ತಿಳಿಸುತ್ತಾರೆ - ನಾನು ಬೀಜ ರೂಪನಾಗಿದ್ದೇನೆ, ಕೃಷ್ಣನಂತೂ ಸತ್ಯಯುಗದ ನಿವಾಸಿಯಾಗಿದ್ದಾನೆ, ಕೃಷ್ಣನನ್ನು ಮತ್ತ್ಯಾವ ಜಾಗದಲ್ಲಿಯೂ ಯಾರೂ ನೋಡಲು ಸಾಧ್ಯವಿಲ್ಲ. ಪುನರ್ಜನ್ಮದಲ್ಲಂತೂ ನಾಮ-ರೂಪ, ದೇಶ-ಕಾಲ ಎಲ್ಲವೂ ಬದಲಾಗುತ್ತದೆ. ರೂಪವೇ ಬದಲಾಗಿ ಬಿಡುತ್ತದೆ. ಮೊದಲು ಚಿಕ್ಕ ಮಗು ಸುಂದರವಾಗಿರುತ್ತದೆ ನಂತರ ದೊಡ್ಡರಾಗುತ್ತಾರೆ. ಅವರು ಮತ್ತೆ ಶರೀರವನ್ನು ಬಿಟ್ಟು ಇನ್ನೊಂದು ಚಿಕ್ಕ ಶರೀರವನ್ನು ತೆಗೆದುಕೊಳ್ಳುತ್ತಾರೆ. ಈ ಮಾಡಿ-ಮಾಡಲ್ಪಟ್ಟ ಆಟವು ನಿಗಧಿಯಾಗಿದೆ. ಇನ್ನೊಂದು ಶರೀರವನ್ನು ತೆಗೆದುಕೊಂಡಾಗ ಅವರಿಗೆ ಕೃಷ್ಣನೆಂದು ಹೇಳುವುದಿಲ್ಲ ಏಕೆಂದರೆ ಇನ್ನೊಂದು ಶರೀರದ ಮೇಲೆ ಹೆಸರೂ ಇತ್ಯಾದಿಗಳೂ ಸಹ ಬದಲಾಗಿರುತ್ತದೆ. ಸಮಯ, ರೂಪ, ತಿಥಿ, ತಾರೀಖು ಇತ್ಯಾದಿಗಳೆಲ್ಲವೂ ಬದಲಾಗುತ್ತದೆ. ವಿಶ್ವದ ಇತಿಹಾಸ, ಭೂಗೋಳವು ಚಾಚೂ ತಪ್ಪದೆ ಪುನರಾವರ್ತನೆ ಆಗುತ್ತದೆಯೆಂದು ಹೇಳಲಾಗುತ್ತದೆ ಅಂದಾಗ ಈ ನಾಟಕವು ಪುನರಾವರ್ತನೆ ಆಗುತ್ತಿರುತ್ತದೆ. ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಸೃಷ್ಟಿಯ ಹೆಸರು, ಯುಗದ ಹೆಸರು ಎಲ್ಲವೂ ಬದಲಾಗುತ್ತಿರುತ್ತದೆ. ಈಗ ಇದು ಸಂಗಮಯುಗವಾಗಿದೆ. ನಾನು ಸಂಗಮದಲ್ಲಿಯೇ ಬರುತ್ತೇನೆ. ನಾನು ನಿಮಗೆ ಇಡೀ ಪ್ರಪಂಚದ ಚರಿತ್ರೆ-ಭೂಗೋಳವನ್ನು ಸತ್ಯವಾಗಿ ತಿಳಿಸುತ್ತೇನೆ. ಆದಿಯಿಂದ ಹಿಡಿದು ಅಂತ್ಯದವರೆಗೆ ಮತ್ತ್ಯಾರೂ ತಿಳಿದುಕೊಂಡಿಲ್ಲ. ಸತ್ಯಯುಗದ ಆಯಸ್ಸು ಎಷ್ಟಾಗಿತ್ತು ಎಂಬುದು ತಿಳಿಯದೇ ಇರುವ ಕಾರಣ ಅವರು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿ ಎಲ್ಲಾ ಮಾತುಗಳಿವೆ. ನೀವು ತಮ್ಮಲ್ಲಿ ಇದನ್ನು ಪಕ್ಕಾ ಮಾಡಿಕೊಳ್ಳಬೇಕು - ತಂದೆಯು ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಅವರು ಪುನಃ ಸತೋಪ್ರಧಾನರಾಗುವುದಕ್ಕಾಗಿ ಬಹಳ ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ. ಗೀತೆಯಲ್ಲಿಯೂ ಇದೆ – ದೇಹ ಸಹಿತ ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ. ಹಿಂತಿರುಗಿ ತಮ್ಮ ಮನೆಗೆ ಅವಶ್ಯವಾಗಿ ಹೋಗಬೇಕಾಗಿದೆ. ಭಕ್ತಿ ಮಾರ್ಗದಲ್ಲಿ ಭಗವಂತನ ಬಳಿ ಹೋಗುವುದಕ್ಕಾಗಿ ಎಷ್ಟೊಂದು ಪರಿಶ್ರಮ ಪಡುತ್ತಾರೆ. ಅದು ಕರ್ಮದಿಂದ ಮುಕ್ತರಾಗಿರುವ ಮುಕ್ತಿಧಾಮವಾಗಿದೆ. ನಾವು ನಿರಾಕಾರಿ ಪ್ರಪಂಚದಲ್ಲಿ ಹೋಗಿ ಕುಳಿತುಕೊಳ್ಳುತ್ತೇವೆ. ಪಾತ್ರಧಾರಿಯು ಮನೆಗೆ ಹೋದರೆಂದರೆ ಪಾತ್ರದಿಂದ ಮುಕ್ತರಾದರು. ನಾವು ಮುಕ್ತಿ ಹೊಂದಬೇಕೆಂದು ಎಲ್ಲರೂ ಬಯಸುತ್ತಾರೆ. ಮೋಕ್ಷವಂತೂ ಯಾರಿಗೂ ಸಿಗಲು ಸಾಧ್ಯವಿಲ್ಲ. ಈ ನಾಟಕವು ಅನಾದಿ-ಅವಿನಾಶಿಯಾಗಿದೆ. ಈ ಬಂದು-ಹೋಗುವ ಪಾತ್ರವು ನಮಗೆ ಇಷ್ಟವಿಲ್ಲವೆಂದು ಯಾರಾದರೂ ಹೇಳಬಹುದು ಆದರೆ ಇದರಲ್ಲಿ ಯಾರೇನೂ ಮಾಡಲು ಸಾಧ್ಯವಿಲ್ಲ. ಈ ಅನಾದಿ ನಾಟಕವು ಮಾಡಲ್ಪಟ್ಟಿದೆ. ಯಾರೊಬ್ಬರೂ ಮೋಕ್ಷವನ್ನು ಹೊಂದಲು ಸಾಧ್ಯವಿಲ್ಲ. ಅವೆಲ್ಲವೂ ಅನೇಕ ಪ್ರಕಾರದ ಮನುಷ್ಯ ಮತಗಳಾಗಿವೆ. ಇದು ಶ್ರೇಷ್ಠರನ್ನಾಗಿ ಮಾಡಲು ಶ್ರೀಮತವಾಗಿದೆ. ಮನುಷ್ಯರಿಗೆ ಶ್ರೇಷ್ಠರೆಂದು ಹೇಳುವುದಿಲ್ಲ, ದೇವತೆಗಳಿಗೆ ಹೇಳಲಾಗುತ್ತದೆ. ಅವರ ಮುಂದೆ ಎಲ್ಲರೂ ನಮನ ಮಾಡುತ್ತಾರೆ ಅಂದಮೇಲೆ ಅವರು ಶ್ರೇಷ್ಠರಾದರಲ್ಲವೆ. ಕೃಷ್ಣ ದೇವತೆಯು ವೈಕುಂಠದ ರಾಜ ಕುಮಾರನಾಗಿದ್ದಾರೆ. ಅವರು ಇಲ್ಲಿಗೆ ಹೇಗೆ ಬರುವರು! ಕೃಷ್ಣನು ಗೀತೆಯನ್ನೂ ತಿಳಿಸಲಿಲ್ಲ. ಶಿವನ ಮುಂದೆ ಹೋಗಿ ನಮಗೆ ಮುಕ್ತಿ ಕೊಡಿ ಎಂದು ಹೇಳುತ್ತಾರೆ. ಅವರು ಎಂದೂ ಜೀವನ್ಮುಕ್ತ ಅಥವಾ ಜೀವನ ಬಂಧನದಲ್ಲಿ ಬರುವುದಿಲ್ಲ ಆದ್ದರಿಂದ ನಮಗೆ ಮುಕ್ತಿ ಕೊಡಿ ಎಂದು ಅವರನ್ನೇ ಕೇಳುತ್ತಾರೆ. ಜೀವನ್ಮುಕ್ತಿಯನ್ನೂ ಅವರೇ ಕೊಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಾವೆಲ್ಲರೂ ಆತ್ಮ ರೂಪದಲ್ಲಿ ಸಹೋದರ-ಸಹೋದರರಾಗಿದ್ದೇವೆ, ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಬೇಕು ಮತ್ತು ಮಾಡಿಸಬೇಕಾಗಿದೆ. ತನ್ನ ಸಂಸ್ಕಾರಗಳನ್ನು ನೆನಪಿನಿಂದ ಸಂಪೂರ್ಣ ಪಾವನ ಮಾಡಿಕೊಳ್ಳಬೇಕಾಗಿದೆ.

2. 24 ಕ್ಯಾರೇಟ್ನ ಸತ್ಯ ಚಿನ್ನ (ಸತೋಪ್ರಧಾನ) ಆಗಲು ಕರ್ಮ-ಅಕರ್ಮ-ವಿಕರ್ಮದ ಗುಹ್ಯ ಗತಿಯನ್ನು ಬುದ್ಧಿಯಲ್ಲಿಟ್ಟುಕೊಂಡು ಈಗ ಯಾವುದೇ ವಿಕರ್ಮ ಮಾಡಬಾರದು.

ವರದಾನ:
ಗಾಬರಿಯಾಗುವ ನೃತ್ಯವನ್ನು ಬಿಟ್ಟು ಸದಾ ಖುಷಿಯ ನೃತ್ಯವನ್ನು ಮಾಡುವಂತಹ ಮಾಸ್ಟರ್ ಜ್ಞಾನ ಪೂರ್ಣ ಭವ.

ಯಾವ ಮಕ್ಕಳು ಮಾಸ್ಟರ್ ಜ್ಞಾನ ಪೂರ್ಣರಾಗಿದ್ದಾರೆ, ಅವರೆಂದಿಗೂ ಗಾಬರಿಯಾಗುವ ನೃತ್ಯವನ್ನು ಮಾಡಲು ಸಾಧ್ಯವಿಲ್ಲ. ಸೆಕೆಂಡಿನಲ್ಲಿ ಏಣಿಯನ್ನಿಳಿಯುವುದು, ಸೆಕೆಂಡಿನಲ್ಲಿ ಹತ್ತುವ ಸಂಸ್ಕಾರವನ್ನೀಗ ಪರಿವರ್ತನೆ ಮಾಡಿಕೊಳ್ಳುತ್ತೀರೆಂದರೆ ತೀವ್ರ ಗತಿಯಲ್ಲಿ ಹೋಗುವಿರಿ. ಇದಕ್ಕಾಗಿ ಕೇವಲ ಸಿಕ್ಕಿರುವ ಅಧಿಕಾರ, ಜ್ಞಾನ, ಪರಿವಾರದ ಸಹಯೋಗವನ್ನು ಉಪಯೋಗ ಮಾಡಿರಿ, ತಂದೆಯ ಕೈಯಲ್ಲಿ (ಶ್ರೀಮತ) ಕೈ ಕೊಟ್ಟು ನಡೆಯುತ್ತೀರೆಂದರೆ, ಖುಷಿಯ ನೃತ್ಯವನ್ನು ಮಾಡುತ್ತಾ ಇರುತ್ತೀರಿ. ಗಾಬರಿಯಾಗುವ ನೃತ್ಯವಾಗಲು ಸಾಧ್ಯವಿಲ್ಲ ಆದರೆ ಯಾವಾಗ ಮಾಯೆಯ ಕೈಯನ್ನು (ಮನ ಮತ, ಪರ ಮತ) ಹಿಡಿಯುವಿರೆಂದರೆ ಅದೇ (ಗಾಬರಿಯಾಗುವ) ನೃತ್ಯವಾಗುವುದು.

ಸ್ಲೋಗನ್:
ಯಾರ ಸಂಕಲ್ಪ ಮತ್ತು ಕರ್ಮವು ಮಹಾನ್ ಆಗಿದೆಯೋ ಅವರೇ ಮಾಸ್ಟರ್ ಸರ್ವಶಕ್ತಿವಂತ ಆಗಿದ್ದಾರೆ.

ಅವ್ಯಕ್ತ ಸೂಚನೆಗಳು:- ಈ ಅವ್ಯಕ್ತ ಮಾಸದಲ್ಲಿ ಬಂಧನ ಮುಕ್ತರಾಗಿ ಜೀವನ ಮುಕ್ತ ಸ್ಥಿತಿಯ ಅನುಭವ ಮಾಡಿರಿ.

ಮಾಸ್ಟರ್ ತ್ರಿಕಾಲದರ್ಶಿಯಾಗಿದ್ದು ಪ್ರತೀ ಕರ್ಮ, ಸಂಕಲ್ಪ ಮತ್ತು ವಚನ ಮಾಡಿದರೆ, ಯಾವುದೂ ವ್ಯರ್ಥ ಅಥವಾ ಅನರ್ಥವಾಗುವುದಿಲ್ಲ. ತ್ರಿಕಾಲದರ್ಶಿ ಎಂದರೆ ಸಾಕ್ಷೀ ಭಾವ. ಸಾಕ್ಷೀ ಸ್ಥಿತಿಯಲ್ಲಿ ಈ ಕರ್ಮೇಂದ್ರಿಯಗಳ ಮೂಲಕ ಕರ್ಮ ಮಾಡಿದರೆ, ಕರ್ಮದ ವಶಕ್ಕೆ ಬರುವುದಿಲ್ಲ. ಸದಾ ಕರ್ಮ ಮತ್ತು ಕರ್ಮ ಬಂಧನಗಳಿಂದ ಮುಕ್ತರಾಗಿ, ನಿಮ್ಮ ಉನ್ನತ ಸ್ಥಿತಿಯನ್ನು ಪಡೆಯುತ್ತೀರಿ.