24.05.26    Avyakt Bapdada     Kannada Murli    28.02.2010     Om Shanti     Madhuban


“ದೇಹಭಾನದ ನಾನು-ನಾನು ಎನ್ನುವುದರ ಹೋಲಿ ಸುಟ್ಟು ಪರಮಾತ್ಮನ ಸಂಗದ ರಂಗಿನ ಹೋಲಿಯನ್ನಾಚರಿಸಿ”


ಇಂದು ಹೋಲಿಯೆಸ್ಟ್ ತಂದೆಯು ತನ್ನ ಹೋಲಿ ಮಕ್ಕಳೊಂದಿಗೆ ಹೋಲಿಯನ್ನಾಚರಿಸಲು ಬಂದಿದ್ದಾರೆ. ನಾಲ್ಕೂ ಕಡೆಯ ಮಕ್ಕಳು ದೂರ ದೂರದಿಂದ ಸ್ನೇಹದ ಹೃದಯದಲ್ಲಿ ಸಮಾವೇಶವಾಗುತ್ತಿದ್ದಾರೆ. ಬಾಪ್ದಾದಾರವರು ನಾಲ್ಕೂ ಕಡೆಯ ಮಕ್ಕಳ ಮಸ್ತಕದಲ್ಲಿ ಭಾಗ್ಯದ ನಕ್ಷತ್ರ ಹೊಳೆಯುತ್ತಿರುವುದನ್ನು ನೋಡುತ್ತಿದ್ದಾರೆ. ಇಷ್ಟು ದೊಡ್ಡ ಭಾಗ್ಯವು ಇಡೀ ಕಲ್ಪದಲ್ಲಿ ಮತ್ತ್ಯಾರದೂ ಆಗುವುದಿಲ್ಲ. ಈ ಸಂಗಮ ಯುಗದ ಪ್ರಾಪ್ತಿಯ ಆಧಾರದಿಂದ ತಾವು ಮಕ್ಕಳೇ ಇಷ್ಟು ಶ್ರೇಷ್ಠ ಪವಿತ್ರರಾಗುತ್ತೀರಿ, ಭವಿಷ್ಯದಲ್ಲಿ ತಾವು ಡಬಲ್ ಪವಿತ್ರರಾಗುತ್ತೀರಿ. ಆತ್ಮವೂ ಪವಿತ್ರ ಮತ್ತು ಶರೀರವೂ ಪವಿತ್ರವಾಗಿರುತ್ತದೆ. ಇಡೀ ಕಲ್ಪದಲ್ಲಿ ಪರಿಕ್ರಮಣ ಮಾಡಿ ನೋಡಿ - ಯಾವುದೇ ಧರ್ಮಾತ್ಮರೂ ಸಹ ಡಬಲ್ ಪವಿತ್ರರಾಗಿಲ್ಲ. ತಾವು ಮಕ್ಕಳು ಡಬಲ್ ಪವಿತ್ರರೂ ಆಗುತ್ತೀರಿ ಮತ್ತು ಡಬಲ್ ಪವಿತ್ರತೆಯ ಚಿಹ್ನೆಯಾಗಿ ಡಬಲ್ ಕಿರೀಟಧಾರಿಯಾಗುತ್ತೀರಿ.

ಇಂದು ಹೋಲಿಯನ್ನು ಎಲ್ಲರೂ ಆಚರಿಸುತ್ತಾರೆ, ಆದರೆ ತಾವು ಈ ಸಮಯದಲ್ಲಿ ಯಾರು ಡಬಲ್ ಹೋಲಿ ಆಗುತ್ತೀರಿ (ಹೋಲಿ - ಪವಿತ್ರತೆ) ಅವರ ನೆನಪಾರ್ಥವಾಗಿ ಉತ್ಸವದ ರೂಪದಲ್ಲಿ ಹೋಲಿಯನ್ನಾಚರಿಸುತ್ತಾರೆ. ತಮ್ಮದೇ ಪ್ರತೀ ಹೆಜ್ಜೆ-ಹೆಜ್ಜೆಯ ಜೀವನದ ಮಹತ್ವಿಕೆಯನ್ನು ಉತ್ಸವದ ರೂಪದಲ್ಲಿ ಆಚರಿಸುತ್ತಾರೆ. ತಾವು ಈ ಸಂಗಮದ ಪ್ರತೀ ದಿನ, ಪ್ರತೀ ಹೆಜ್ಜೆಯಲ್ಲಿ ಉಮ್ಮಂಗ ಮತ್ತು ಉತ್ಸಾಹದಲ್ಲಿರುತ್ತೀರಿ ಅಂದಾಗ ತಮ್ಮ ಉಮ್ಮಂಗ-ಉತ್ಸಾಹದ ನೆನಪಾರ್ಥವಾಗಿ ಈ ಹೋಲಿಯನ್ನು ಉತ್ಸವದ ರೂಪದಲ್ಲಿ ಆಚರಿಸುತ್ತಾರೆ. ಉಮ್ಮಂಗ-ಉತ್ಸಾಹ ಏಕೆ ಇರುತ್ತದೆ? ಏಕೆಂದರೆ ತಾವು ಪರಮಾತ್ಮ ಸಂಗದ ರಂಗಿನ ಹೋಲಿಯನ್ನಾಚರಿಸುತ್ತೀರಿ. ಅಂದಾಗ ತಮ್ಮ ಪ್ರತೀ ಹೆಜ್ಜೆ ಉತ್ಸವದ ರೂಪದಲ್ಲಿ ಆಚರಿಸುತ್ತಾರೆ. ಹೋಲಿಯಲ್ಲಿ ಮೊದಲು ಸುಡುತ್ತಾರೆ ನಂತರ ಆಚರಿಸುತ್ತಾರೆ. ತಾವೂ ಸಹ ಸಂಗಮದಲ್ಲಿ ಈಗ ತಮ್ಮ ಹಳೆಯ ಸಂಸ್ಕಾರ-ಸ್ವಭಾವವನ್ನು ಯೋಗಾಗ್ನಿಯಲ್ಲಿ ಸುಡುತ್ತೀರಿ. ಏಕೆಂದರೆ ತಮ್ಮ ಹಳೆಯ ಸಂಸ್ಕಾರಗಳನ್ನು ಸುಡದೇ ಪರಮಾತ್ಮನ ಸಂಗದ ರಂಗು ಅಂಟಲು ಸಾಧ್ಯವಿಲ್ಲ, ಪರಮಾತ್ಮನ ಮಿಲನವಾಗಲು ಸಾಧ್ಯವಿಲ್ಲ. ಅಂದಾಗ ತಾವು ಯೋಗಾಗ್ನಿಯಲ್ಲಿ ಸಂಸ್ಕಾರಗಳನ್ನು ಸುಟ್ಟಿರಿ ನಂತರ ಪರಮಾತ್ಮನ ಸಂಗದ ರಂಗಿನಲ್ಲಿ ರಂಗಾದಿರಿ. ಅಂದಾಗ ಇತ್ತೀಚೆಗೆ ಸುಡುತ್ತಲೂ ಇರುತ್ತಾರೆ ಮತ್ತು ರಂಗನ್ನೂ ಹಾಕುತ್ತಾರೆ ಆದರೆ ನಿಮ್ಮ ಆಧ್ಯಾತ್ಮಿಕ ರೂಪಕ್ಕೆ ಸ್ಥೂಲ ರೂಪವನ್ನು ಕೊಟ್ಟು ಬಿಟ್ಟಿದ್ದಾರೆ. ಅವರು ಸ್ಥೂಲ ಅಗ್ನಿಯನ್ನು ಸುಡುತ್ತಾರೆ, ಸ್ಥೂಲ ರಂಗನ್ನು ಹಾಕುತ್ತಾರೆ ಏಕೆಂದರೆ ಈಗ ದೇಹಾಭಿಮಾನದ ವೃತ್ತಿಯಿದೆ. ತಾವು ಹೋಲಿ(ಪವಿತ್ರ)ಯಾಗುತ್ತೀರಿ, ಅವರು ಹೋಲಿ(ಹಬ್ಬ)ಯನ್ನಾಚರಿಸುತ್ತಾರೆ. ಇಡೀ ಕಲ್ಪದಲ್ಲಿ ಯಾರೂ ಸಹ ಆಧ್ಯಾತ್ಮಿಕ ಹೋಲಿಯನ್ನಾಚರಿಸಿ ಡಬಲ್ ಹೋಲಿ ಆಗಿಲ್ಲ. ಅಂದಮೇಲೆ ತಾವೆಲ್ಲರೂ ಎಲ್ಲಿಂದ ಬಂದಿದ್ದೀರಿ, ಪರಮಾತ್ಮನ ಸಂಗದ ಹೋಲಿಯನ್ನಾಚರಿಸಲು ಬಂದಿದ್ದೀರಿ. ತಾವು ಹೋಲಿಗಾಗಿ ಹೇಳುತ್ತೀರಿ - ಹೋಲಿ ಅರ್ಥಾತ್ ಯಾವ ಮಾತು ಕಳೆದುಹೋಗಿದೆ ಅದು ಹೋ-ಲಿ, ಅಂದಾಗ ಡ್ರಾಮಾನುಸಾರ ಯಾವುದು ಕಳೆಯಿತೋ ಅದಕ್ಕೆ ಹೇಳಲಾಗುತ್ತದೆ - ಹೋ-ಲಿ, ಕಳೆದದ್ದು ಕಳೆದು ಹೋಯಿತು. ಯಾವುದೇ ವ್ಯರ್ಥ ಮಾತುಗಳನ್ನು ಚಿತ್ತದಲ್ಲಿ ತರುವುದಿಲ್ಲ, ಕಳೆದು ಹೋಗಿದೆ ಎನ್ನುವ ರೀತಿಯಲ್ಲಿ ಹೋಲಿಯನ್ನಾಚರಿಸುತ್ತೀರಲ್ಲವೆ. ತಾವೆಲ್ಲರೂ ಹೋಲಿ ಅರ್ಥಾತ್ ಪವಿತ್ರರಾಗುವ ಪೂರ್ಣ ಪುರುಷಾರ್ಥ ಮಾಡಿ ಪವಿತ್ರತೆಯನ್ನು ಧಾರಣೆ ಮಾಡಿದ್ದೀರೆಂದರೇ ಆಗ ಭವಿಷ್ಯದಲ್ಲಿ ತಮಗೆ ಡಬಲ್ ಪವಿತ್ರತೆಯ ಚಿಹ್ನೆಯಾಗಿ ಡಬಲ್ ಕಿರೀಟವನ್ನು ತೋರಿಸುತ್ತಾರೆ.

ಅಂದಮೇಲೆ ಇಂದು ಪ್ರತಿಯೊಂದು ಮಗು ಏನನ್ನು ಸುಟ್ಟು ಹಾಕುತದೆ? ಬಾಪ್ದಾದಾರವರು ನೋಡಿದೆವು- ಜನ್ಮದಿನದಂದು ಯಾವ ಹೋಮ್ವರ್ಕ್ನ್ನು ತಂದೆಯು ಕೊಟ್ಟಿದ್ದರು - ಕ್ರೋಧವನ್ನು ಜನ್ಮ ದಿನದಂದು ಜನ್ಮ ದಿನದ ಗಿಫ್ಟ್ ಆಗಿ ಕೊಟ್ಟು ಬಿಡಿ. ಅದರ ಫಲಿತಾಂಶವು ಬಾಪ್ದಾದಾರವರ ಬಳಿ ಇಂದು ತಲುಪಿದೆ. ಬಾಪ್ದಾದಾರವರು ನೋಡಿದರು - ಕೆಲವು ಕಡೆ ಮಕ್ಕಳು ಗಮನ ಕೊಟ್ಟಿದ್ದೀರಿ. ತಾವೆಲ್ಲರೂ ಸಹ ತಮ್ಮ ಫಲಿತಾಂಶವನ್ನು ತೆಗೆದಿರಬಹುದು ಅಂದಾಗ ಯಾರೆಲ್ಲರೂ ಇಲ್ಲಿ ಕುಳಿತಿದ್ದೀರಿ, ಅವರು ತಮ್ಮ ಫಲಿತಾಂಶವನ್ನು ತೆಗೆದಿದ್ದೀರಿ, ಯಾರೆಲ್ಲರೂ ತಮ್ಮ ಫಲಿತಾಂಶದಲ್ಲಿ ನಿಯಂತ್ರಣ ಮಾಡಿದ್ದಿರಿ ಮತ್ತು ಸಫಲತೆಯ ಅನುಭವ ಮಾಡಿದಿರಿ ಅಂತಹವರು ಕೈಯನ್ನೆತ್ತಿ. ಸಫಲತೆಯ ಪ್ರಾಪ್ತಿ ಮಾಡಿಕೊಂಡಿದ್ದೀರಾ! ಉದ್ದವಾಗಿ ಕೈಯನ್ನೆತ್ತಿ. ಶಿಕ್ಷಕಿ ಸಹೋದರಿಯರು ಕೈಯನ್ನೆತ್ತಿ, ವಿದೇಶಿಯರು ಕೈಯನ್ನೆತ್ತಿ. (ಎಲ್ಲರೂ ಕೈಯೆತ್ತಿದರು) ಒಳ್ಳೆಯದು - ಶುಭಾಷಯಗಳು. ಇದರಿಂದ ತಾವೆಲ್ಲರೂ ತಮ್ಮಲ್ಲಿ ಧೈರ್ಯವನ್ನಿಟ್ಟಿರಿ ಮತ್ತು ಧೈರ್ಯದ ಫಲ ಪ್ರಾಪ್ತಿಯಾಗಲು ಸಾಧ್ಯವಿದೆ - ಈ ಅನುಭವ ಮಾಡಿದಿರಿ. ಅಂದಮೇಲೆ ಒಂದುವೇಳೆ ಈ ಅನುಭವವನ್ನು ಮುಂದೆಯೂ ಸಹ ಲಕ್ಷ್ಯವನ್ನಿಟ್ಟು ಮತ್ತೆ-ಮತ್ತೆ ಪರಿಶೀಲನೆ ಮಾಡುತ್ತಾ ಮತ್ತಷ್ಟು ಮುಂದುವರೆಯಲು ಇಷ್ಟ ಪಡುತ್ತೀರೆಂದರೆ ಮಾಡಲು ಸಂಭವವೆಂದು ತಿಳಿಯುತ್ತೀರಾ? ಸಾಧ್ಯವಿದೆಯೇ? ಮುಂದೆಯೂ ಆಗಲು ಸಾಧ್ಯವಿದೆಯೇ? ಅವರು ಕೈಯೆನ್ನೆತ್ತಿ. ಒಳ್ಳೆಯದು - ಸಾಧ್ಯವಿದೆಯೇ? ಟೀಚರ್ಸ್ಗೆ ಸಾಧ್ಯವಿದೆಯೇ? ಪಾಂಡವರಿಗೆ ಸಾಧ್ಯವಿದೆಯೇ? ಒಳ್ಳೆಯದು - ಸಂಭವವಾಗುತ್ತದೆ ಎಂದಲ್ಲ, ಆಗಲೇಬೇಕು - ಇದಕ್ಕೆ ಚಪ್ಪಾಳೆಯನ್ನು ತಟ್ಟಿ. ಒಳ್ಳೆಯದು - ಈಗಂತೂ ಬಹಳ ದಿನಗಳಾಗಿಲ್ಲ ಆದರೆ ಈಗ ಪ್ರತೀ 3 ತಿಂಗಳಿನ ನಂತರ, ಇವತ್ತಿನಿಂದ ಮೂರು ತಿಂಗಳಿನವರೆಗೆ ಕ್ರೋಧದ ಗಮನವನ್ನಿಟ್ಟು ಕ್ರೋಧದ ಟೆನ್ಶನ್ನ್ನು ಸಮಾಪ್ತಿ ಮಾಡಲು ಸಾಧ್ಯವಿದೆಯೇ? ಸಾಧ್ಯವಿದೆಯೇ? ಅಂತಹವರು ಕೈಯೆತ್ತಿರಿ. ಒಳ್ಳೆಯದು - ಈ ಖುಷಿಯ ಸಮಾಚಾರ ಬಹಳ ಚೆನ್ನಾಗಿದೆ, ಏಕೆ? ಕ್ರೋಧಕ್ಕೆ ಕಾರಣ ಏನಾಗುತ್ತದೆ? ಕ್ರೋಧದ ಬೀಜ ಏನಾಗಿರುತ್ತದೆ? ತಾವು ಸದಾಕಾಲ ತಮ್ಮ ಭವಿಷ್ಯ ಸ್ವರೂಪವನ್ನು ಮುಂದಿಟ್ಟುಕೊಳ್ಳಿ, ತಮ್ಮ ಭವಿಷ್ಯ ಸ್ವರೂಪ ಎಷ್ಟೊಂದು ಶೃಂಗಾರಿತವಾದ ಹರ್ಷಿತಮುಖವಿದೆ ಮತ್ತು ಬಾಪ್ದಾದಾರವರನ್ನು ನೋಡಿ ಅವರಲ್ಲಿಯೂ ಬ್ರಹ್ಮಾ ತಂದೆಯನ್ನು ಮುಂದೆ ತಂದುಕೊಳ್ಳಿ - ಏಕೆ? ಶಿವ ತಂದೆಯಂತೂ ನಿರಾಕಾರನೇ ಆಗಿದ್ದಾರೆ ಆದರೆ ಬ್ರಹ್ಮಾ ತಂದೆಯು ತಮ್ಮ ರೀತಿ ಸಾಕಾರ ರೂಪಧಾರಿ, ತಮ್ಮಂತೆಯೇ ಜವಾಬ್ದಾರಿಯ ಕಿರೀಟಧಾರಿಯಾಗಿದ್ದರೂ ಸಹ ಸದಾ ಮುಗುಳ್ನಗುತ್ತಾ, ಖುಷಿಯ ಚಹರೆಯಿತ್ತು ಏಕೆಂದರೆ ಈ ವಿಕಾರಗಳ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಂಡು ತಮ್ಮ ಮುಂದೆ ಶರೀರವಿದ್ದರೂ ಕಾರ್ಯವನ್ನು ಮಾಡುತ್ತಾ ಉದಾಹರಣೆಯಾಗಿದ್ದರು. ಬ್ರಹ್ಮಾ ತಂದೆಗಿಂತಲೂ ಹೆಚ್ಚು ಜವಾಬ್ದಾರಿ ತಮಗಿದೆಯೇ? ಬ್ರಹ್ಮಾ ತಂದೆಯ ಜವಾಬ್ದಾರಿಯ ಮುಂದೆ ತಮ್ಮ ಜವಾಬ್ದಾರಿಯಂತೂ ಏನೇನೂ ಇಲ್ಲ. ಮತ್ತು ಅಂತ್ಯದವರೆಗೂ ನೋಡಿದಿರಿ ಕರ್ಮಾತೀತ ಪ್ರಕಂಪನಗಳಲ್ಲಿ ಅವ್ಯಕ್ತ ಫರಿಶ್ತಾ ಆಗಿಬಿಟ್ಟರು. ಅಂದಾಗ ಈಗ ಬಾಪ್ದಾದಾರವರಿಗೆ ಕೊಟ್ಟಿರುವ ಉಡುಗೊರೆಯನ್ನು ಹಿಂತಿರುಗಿ ತೆಗೆದುಕೊಳ್ಳುವುದಿಲ್ಲವೇ! ಬಾಪ್ದಾದಾರವರು ತಿಳಿದುಕೊಳ್ಳುತ್ತೇವೆ - ವ್ಯವಹಾರದಲ್ಲಿ ಬರುತ್ತೀರಿ ಆಗ ಒಂದಲ್ಲ ಒಂದು ಅಂತಹ ಪರಿಸ್ಥಿತಿಗಳಾಗುತ್ತವೆ, ಕೆಲವರು ಫಲಿತಾಂಶದಲ್ಲಿಯೂ ಬಂದಿದ್ದಾರೆ - ಜೋರಾಗಿ ಶಬ್ಧಗಳು ಬಂದುಬಿಡುತ್ತವೆ. ಮೂಡ್ನಲ್ಲಿ ಸ್ವಲ್ಪ ಜೋರಾಗಿ ಶಬ್ಧಗಳು ಬಂದು ಬಿಡುತ್ತವೆ ಆದರೆ ಯಾವಾಗ ಅಂತಹ ಮಾತುಗಳು ಮುಂದೆ ಬರುತ್ತವೆ ಆಗಲೇ ವಿಜಯಿಗಳಾಗಲು ಅವಕಾಶವಿದೆ. ಮಾತುಗಳ ಕೆಲಸವಾಗಿದೆ - ಬರುವುದು ಆದರೆ ತಮಗೆ ಜ್ಞಾನವಿದೆ - ಮಾತುಗಳನ್ನು ಪಾರು ಮಾಡಿ ವಿಜಯಿಗಳಾಗುವುದು. ಇಷ್ಟವಿದೆಯೇ? ಕ್ರೋಧಕ್ಕೆ ವಿದಾಯಿ ಕೊಡುತ್ತೀರಾ? ಸದಾಕಾಲಕ್ಕಾಗಿಯೇ ಅಥವಾ ಮೂರು ತಿಂಗಳಿಗಾಗಿಯೇ? ಎಷ್ಟು ಸಮಯದ ಧೈರ್ಯವಿದೆ? ಸದಾಕಾಲಕ್ಕಾಗಿ ಕ್ರೋಧಜೀತರಾಗುವುದು ಕಷ್ಟವಿಲ್ಲ, ಆಗಲೇಬೇಕೆಂದು ಯಾರು ತಿಳಿಯುತ್ತೀರಿ ಅಂತಹವರು ಕೈಯೆತ್ತಿ. ಆಗಲೇಬೇಕು. ಒಳ್ಳೆಯದು - ಬಾಪ್ದಾದಾರವರು ಖುಷಿಯಾಗಿದ್ದಾರೆ, ಏಕೆ? ಅಂತಿಮ ಜನ್ಮದಲ್ಲಿಯೂ ತಮ್ಮ ಯಾವ ಮಹಿಮೆಯನ್ನು ಮಾಡುತ್ತಾರೆ? ತಮ್ಮ ದೇವತಾ ರೂಪದ ಮುಂದೆ ತಮ್ಮ ಮಹಿಮೆಯಾಗಿ ಸರ್ವ ಗುಣ ಸಂಪನ್ನ, ಸಂಪೂರ್ಣ ನಿರ್ವಿಕಾರಿ ಎಂದು ಹಾಡುತ್ತಾರೆ ಅಂದಾಗ ತಾವು ಈ ರೀತಿಯಾಗುವ ಪಾರ್ಟ್ ಈಗ ಸಂಗಮ ಯುಗದ್ದೇ ಗಾಯನವಿದೆ. ಬಾಪ್ದಾದಾರವರ ಹೃದಯದಲ್ಲಿ ವಿಶೇಷವಾಗಿರುವ ಆಸೆಯಿದೆ, ಹೇಳುವುದೇ? ಹೇಳುವುದೇ? ಕತ್ತನ್ನು ಅಲುಗಾಡಿಸಿ, ಹೇಳುವುದೇ? ಬಾಪ್ದಾದಾರವರು ಈಗಿನಿಂದ, ಈಗಿನಿಂದ ಪ್ರತಿಯೊಂದು ಮಗುವನ್ನು ಸದಾ ಅರಳಿರುವ ಗುಲಾಬಿ ಹೂವಿನಂತೆ ನೋಡಲು ಇಚ್ಛೆ ಪಡುತ್ತಾರೆ. ಖುಷ್ನುಮಃ (ಖುಷಿಯಾಗಿರುವ ಚಹರೆ), ಖುಷ್ ನಸೀಬ್ (ಖುಷಿಯ ಅದೃಷ್ಠವಂತ). ಮಾತುಗಳ ಕೆಲಸವಾಗಿದೆ - ಬರುವುದು, ಇದನ್ನೂ ತಿಳಿದುಕೊಳ್ಳಿ - ಮಾತುಗಳು ಬರುತ್ತದೆ ಆದರೆ ತಮ್ಮ ಲಕ್ಷ್ಯವನ್ನು ಲಕ್ಷಣದಲ್ಲಿ ತರಬೇಕು, ಗಾಬರಿ ಪಡಬಾರದು. ಹೇಗೆ ಈಗ ಹೇಳುತ್ತಾರೆ - ಬ್ರಹ್ಮಾಕುಮಾರಿಯರು ಪವಿತ್ರತೆಯ ಪಾಠವನ್ನು ಬಹಳ ಓದಿಸುತ್ತಾರೆ. ಈ ರೀತಿ ಪ್ರಸಿದ್ಧರಾಗಿ - ಬ್ರಹ್ಮಾಕುಮಾರಿಯರು ಕ್ರೋಧ ಮುಕ್ತರನ್ನಾಗಿ ಮಾಡುತ್ತಾರೆ ಏಕೆಂದರೆ ಕ್ರೋಧದಿಂದ ಮುಕ್ತರಾಗಲು ಎಲ್ಲರೂ ಇಷ್ಟ ಪಡುತ್ತಾರೆ. ಒತ್ತಡವಿದೆಯಲ್ಲವೆ! ಅಂದಮೇಲೆ ಒತ್ತಡವುಂಟಾಗುತ್ತದೆ ಆದ್ದರಿಂದ ಎಲ್ಲರೂ ಇಷ್ಟ ಪಡುತ್ತಾರೆ ಆದರೆ ಅವರಿಗೆ ವಿಧಿ ಬರುವುದಿಲ್ಲ. ಹೇಗೆ ಪವಿತ್ರರಾಗುವುದು ಅಸಂಭವವೆಂದು ತಿಳಿಯುತ್ತಿದ್ದರು ಆದರೆ ಈಗ ತಮ್ಮೆಲ್ಲರ ಅನುಭವದ ಆಧಾರದಿಂದ ತಿಳಿಯುತ್ತಾರೆ - ಆಗಲು ಸಾಧ್ಯವಿದೆ. ಹಾಗೆಯೇ ಈ ವರ್ಷದಲ್ಲಿ ಈ ಅಲೆಯನ್ನು ಹರಡಿಸಿ - ಕ್ರೋಧಜೀತರಾಗಲು ಸಾಧ್ಯವಿದೆ, ಯಾವುದೇ ಕಷ್ಟವಿಲ್ಲ. ಇಂತಹ ಉದಾಹರಣೆಯ ಅನುಭವವನ್ನು ಪ್ರತ್ಯಕ್ಷದಲ್ಲಿ ತನ್ನಿರಿ. ಬಾಪ್ದಾದಾರವರು ನೋಡಿದರು - ಬಹಳ ಮಕ್ಕಳು ಕಾರ್ಯವನ್ನು ಮಾಡುತ್ತಾ ಕ್ರೋಧಜೀತರಾಗಿದ್ದಾರೆ. ಈ ರೀತಿ ತಮ್ಮ ಪರಿವಾರದಲ್ಲಿ, ಬ್ರಾಹ್ಮಣ ಪರಿವಾರದಲ್ಲಿ ಉದಾಹರಣೆಯಾಗಿದ್ದಾರೆ. ಅಂದಾಗ ಈ ವರ್ಷ ಏನು ಮಾಡುತ್ತೀರಿ? ಹೋಲಿಯನ್ನಾಚರಿಸಲು ಬಂದಿದ್ದೀರಲ್ಲವೇ! ಹೋಲಿಯಲ್ಲಿ ಏನು ಮಾಡುತ್ತಾರೆ? ಸ್ವಲ್ಪ ಸುಡುತ್ತಾರಲ್ಲವೆ! ಅಂದಾಗ ಇಂದಿನ ಹೋಲಿಯಲ್ಲಿ ತಾವು ಏನು ಸುಡುತ್ತೀರಿ? ಕ್ರೋಧವನ್ನಂತು ಸುಟ್ಟು ಬಿಟ್ಟಿದ್ದೀರಿ, ಇದನ್ನು ಪಕ್ಕಾ ಮಾಡುತ್ತೀರಿ! ಆದರೆ ಬಾಪ್ದಾದಾರವರು ನೋಡಿದರು - ಒತ್ತಡದಲ್ಲಿ ಬರುವುದಕ್ಕೆ ಕಾರಣ “ನಾನು” ಎಂಬ ಶಬ್ಧವಾಗಿದೆ. ದೇಹಾಭಿಮಾನದ “ನಾನು”, ಒಂದಾಗಿದೆ - ನಾನು ಆತ್ಮನಾಗಿದ್ದೇನೆ - ಇದು ‘ನಾನು’ ಎನ್ನುವುದಾಗಿದೆ, ಆದರೆ ದೇಹಭಾನದ ನಾನು ಶಬ್ಧವು ಅಭಿಮಾನಕ್ಕೂ ಸಹ ಆಗುತ್ತದೆ, ಅಪಮಾನಕ್ಕೂ ಆಗುತ್ತದೆ ಮತ್ತು ಹೃದಯವಿಧೀರ್ಣರಾಗುವುದಕ್ಕೂ ಸಹ ನಾನು-ನಾನು ಎನ್ನುವುದು ಕೆಳಗೆ ಬೀಳಿಸುತ್ತದೆ. ಅಂದಾಗ ಇಂದು ಕ್ರೋಧಜೀತರಾಗುವುದರಲ್ಲಿ ಮುಂದೆ ಹೋಗಲು ದೇಹಾಭಿಮಾನದ ನಾನು ಎನ್ನುವುದನ್ನು ಯೋಗಾಗ್ನಿಯಲ್ಲಿ ಸುಟ್ಟು ಬಿಡಿ. ಅನೇಕ ನಾನು-ನಾನು ಎನ್ನುವುದನ್ನು ಸುಟ್ಟು ಬಿಡಿ ಮತ್ತು ಒಂದು ನಾನು ಆತ್ಮನಾಗಿದ್ದೇನೆ, ಈ “ನಾನು” ಶಬ್ಧವನ್ನು ಪಕ್ಕಾ ಮಾಡಿ ಮತ್ತು ಉಳಿದ “ನಾನು” ಎನ್ನುವುದನ್ನು ಯೋಗಾಗ್ನಿಯಲ್ಲಿ ಸುಟ್ಟು ನಂತರ ಹೋಗಿ. ಅನೇಕ ನಾನು ಎನ್ನುವುದಿದೆಯಲ್ಲವೆ. ಅಂದಾಗ ಇಂದು ಸುಡುವಂತಹ ಹೋಲಿಯನ್ನು ಆಚರಿಸುತ್ತೀರಾ! ಏಕೆಂದರೆ ಕ್ರೋಧದ ಕಾರಣ ಬಹಳ ಒತ್ತಡವಾಗುತ್ತದೆ. ಈ “ನಾನು” ಎನ್ನುವುದನ್ನು ಸಮಾಪ್ತಿ ಮಾಡಲು ಇಂದು ತಮ್ಮ ಆಂತರ್ಯದಲ್ಲಿ ಸಂಕಲ್ಪ ಮಾಡಿ. ಸುಡಬೇಕು ಏಕೆಂದರೆ ಇದೂ ಸಹ ಹೊರೆಯಲ್ಲವೆ! ಭಲೆ ಟ್ರೈನ್ನಲ್ಲಿ ಹೋಗಿ ಅಥವಾ ವಿಮಾನದಲ್ಲಿ ಹೋಗಿ, ಈ ಹೊರೆ ಇಲ್ಲಿ ಸುಟ್ಟು ನಂತರ ಹೋಗಿ. ಸುಡಲು ಸಾಧ್ಯವೇ? ಧೈರ್ಯ ಮಕ್ಕಳದು, ಸಹಯೋಗ ತಂದೆಯದಂತೂ ಇದ್ದೇ ಇದೆ ಎಂದು ಯಾರು ತಿಳಿಯುತ್ತೀರಿ ಅವರಿಗೆ ವಿಜಯವೂ ಸಹ ಜೊತೆಯಲ್ಲಿದೆ, ಯಾರು ಈ ರೀತಿ ವಿಜಯಿಯಾಗಲೇಬೇಕೆಂದು ತಿಳಿಯುತ್ತೀರಿ, ಅಂತಹವರು ಕೈಯೆತ್ತಿ. ಆಗಲೇಬೇಕು. ಒಳ್ಳೆಯದು - ಇಂದು ಯಾರು ವಿ.ಐ.ಪಿ.,ಯಾಗಿ ಬಂದಿದ್ದಾರೆ ಅವರೂ ಕೈಯೆತ್ತುತ್ತಿದ್ದಾರೆ. ಯಾರು ವಿ.ಐ.ಪಿ.,ಯಾಗಿ ಬಂದಿದ್ದೀರಿ ಅವರು ಎದ್ದೇಳಿ, ಎದ್ದುನಿಲ್ಲಿ. ಕೈಯೆನ್ನುತ್ತಿದ್ದಾರೆ. ಚಪ್ಪಾಳೆಯನ್ನಂತೂ ತಟ್ಟಿರಿ. ವಿಜಯಿಗಳಾಗುತ್ತೀರಾ? ನೋಡಿ. ಯಾರೆಲ್ಲರೂ ವಿಜಯಿಗಳಾಗುತ್ತೀರಿ, ಆ ಒಬ್ಬೊಬ್ಬರಿಗೆ ಮಾಲೆಯನ್ನು ಹಾಕುತ್ತಿದ್ದೇವೆ. ಶುಭಾಷಯಗಳು, ಶುಭಾಷಯಗಳು. ಒಳ್ಳೆಯದು - ಧೈರ್ಯವನ್ನಿಡುವ ಯಾರೆಲ್ಲಾ ವಿ.ಐ.ಪಿ.,ಗಳು ಬಂದಿದ್ದೀರಿ ಸಾಹಸವಂತರಾಗಿದ್ದೀರಿ ಆದ್ದರಿಂದ ಬಾಪ್ದಾದಾರವರು ವರದಾನ ಕೊಡುತ್ತಿದ್ದೇವೆ. ಈ ಸಮಯದಲ್ಲಿ ತಾವು ಯಾರೆಲ್ಲರೂ ವಿ.ಐ.ಪಿ.ಗಳು ಯಾವುದೇ ಕಾರ್ಯದಲ್ಲಿರಬಹುದು ಅದು ಒಂದು ಜನ್ಮಕ್ಕಾಗಿ ಇದೆ ಆದರೆ ಬಾಪ್ದಾದಾರವರು ತಾವು ಸಾಹಸವಂತ ಮಕ್ಕಳನ್ನು ಈಗ ವಿ.ಐ.ಪಿ., ಎಂದು ಹೇಳುವುದಿಲ್ಲ, ಮಕ್ಕಳು ಎಂದು ಹೇಳುತ್ತೇವೆ. ಬಾಪ್ದಾದಾರವರು ಈ ವರದಾನವನ್ನು ಕೊಡುತ್ತೇವೆ, ಗ್ಯಾರಂಟಿ ಕೊಡುತ್ತೇವೆ - ತಾವೆಲ್ಲರೂ 21 ಜನ್ಮಗಳು ವಿ.ಐ.ಪಿ.,ಗಳಾಗುತ್ತೀರಿ. ಈ ಎಲೆಕ್ಷನ್, ಸೆಲೆಕ್ಷನ್ ನಡೆಯುವುದಿಲ್ಲ. ಅಂದಮೇಲೆ ಎಲ್ಲರೂ ಕೇವಲ ಒಂದು ಮಾತನ್ನು (ಕ್ರೋಧ) ಬಿಡುವುದಲ್ಲ, ಹೇಗೆ ಈಗ ಸಂಬಂಧದಲ್ಲಿ, ಸಂಪರ್ಕದಲ್ಲಿ ಬಂದಿದ್ದೀರಿ ಹಾಗೆಯೇ ಈ ಬ್ರಾಹ್ಮಣ ಪರಿವಾರದ ಸಂಪರ್ಕವನ್ನು ಬಿಡಬಾರದು. ಎಷ್ಟು ಸಂಪರ್ಕವನ್ನಿಡುತ್ತೀರಿ ಅಷ್ಟೂ ಸಂಬಂಧ ಪಕ್ಕಾ ಆಗುತ್ತದೆ ಮತ್ತು ತಂದೆಯ ವರದಾನವನ್ನು ಪ್ರಾಪ್ತಿ ಮಾಡಿಕೊಂಡಿ0ಯೇ ಬಿಡುತ್ತೀರಿ. ಅಂದಮೇಲೆ ಒಪ್ಪಿಗೆಯೇ? ಸಂಪರ್ಕವನ್ನಿಡಲು ಒಪ್ಪಿಗೆಯೇ? ಕೈಯೆನ್ನಿತ್ತಿರಿ. ಒಳ್ಳೆಯದು - (ಬಾಪ್ದಾದಾರವರು ಹೂ ಮಾಲೆಯನ್ನು ತೆಗೆದುಕೊಂಡು ಮುಂದೆ ತೋರಿಸಿದರು) ಈ ಮಾಲೆಯನ್ನು ತಾವೆಲ್ಲರೂ ಹಾಕಿಕೊಳ್ಳಬೇಕು.

ಮತ್ತು ತಾವೆಲ್ಲರೂ ಹೊಸ ಮಕ್ಕಳು ಹಾಗೂ ರಿಯಲ್ ಗೋಲ್ಡ್ ಮಕ್ಕಳು ತಂದೆಯ ಆಜ್ಞಾಕಾರಿಗಳಲ್ಲವೆ! ಅಂದಮೇಲೆ ಇಂದು ಈ ನಾನು ಎನ್ನುವುದನ್ನು ಸುಟ್ಟು ಹಾಕಿಯೇ ಹೋಗಬೇಕು. ಯಾರು ಮೊದಲ ಬಾರಿ ಬಂದಿದ್ದೀರಿ ಅವರು ಎದ್ದೇಳಿ. ಒಳ್ಳೆಯದು - ಬಾಪ್ದಾದಾರವರು ಮೊದಲಬಾರಿ ಬರುವಂತಹ ಮಕ್ಕಳಿಗೆ ಮೊದಲ ಬಾರಿ ಬಂದಿರುವುದಕ್ಕೆ ಪದಮಾಗುಣದಷ್ಟು ಶುಭಾಷಯಗಳನ್ನು ಕೊಡುತ್ತಿದ್ದೇವೆ. ಆದರೆ ಹೇಗೆ ಈಗ ಮೊದಲ ಬಾರಿ ಬಂದಿದ್ದೀರಿ ಹಾಗೆಯೇ ಮೊದಲ ನಂಬರ್, ಫಸ್ಟ್ ಡಿವಿಜನ್, ಮೊದಲ ನಂಬರಿನಲ್ಲಂತೂ ನೊಂದಣಿಯಾಗಿದ್ದಾರೆ ಆದರೆ ಫಸ್ಟ್ ಡಿವಿಜನ್ನಲ್ಲಿ ಬರುತ್ತೇವೆ ಎನ್ನುವ ಧೈರ್ಯವಿದೆ ಎನ್ನುವವರು ಕೈಯೆತ್ತಿ, ಇದರಲ್ಲಿ ಧೈರ್ಯವಿದೆಯೇ? ನೋಡಿ, ಯೋಚಿಸಿ ಕೈಯನ್ನೆತ್ತಿರಿ. ಒಳ್ಳೆಯದು - ಅದಕ್ಕಾಗಿ ಲಕ್ಷ್ಯವನ್ನಿಡಿ - ನಾವು ಲಾಸ್ಟ್ನಲ್ಲಿ ಬಂದಿದ್ದೇವೆ ಆದರೆ ಫಾಸ್ಟ್ ಹೋಗುತ್ತೇವೆ. ಏಕೆಂದರೆ ಸಮಯದ ಯಾವುದೇ ಭರವಸೆಯಿಲ್ಲ. ಈಗ ಏನು ಮಾಡಬೇಕು ಅದನ್ನು ತೀವ್ರ ಪುರುಷಾರ್ಥಿಯಾಗಿ ಮಾಡಿ ಬಿಡಿ, ಏಕೆಂದರೆ ಬಹಳ ಸಮಯದ ಪುರುಷಾರ್ಥವನ್ನು ತಾವೆಲ್ಲರೂ ಸ್ವಲ್ಪ ಸಮಯದಲ್ಲಿಯೇ ಪೂರ್ಣ ಮಾಡಬೇಕಾಗುತ್ತದೆ. ಅಂದಾಗ ಧೈರ್ಯವಿದೆಯೇ? ಧೈರ್ಯವಿದೆಯೇ? ಕೈಯನ್ನೆತ್ತಿರಿ. ನೋಡಿ, ನಿಮ್ಮ ಭಾವಚಿತ್ರವನ್ನು ತೆಗೆಯುತ್ತಿದ್ದಾರೆ. ಈ ರೀತಿ ಧೈರ್ಯವಿರುವಂತಹವರಿಗೆ ಬಾಪ್ದಾದಾರವರು ಶುಭಾಷಯಗಳನ್ನು ಕೊಡುತ್ತೇವೆ - ಧೈರ್ಯ ಮಕ್ಕಳದು, ಸಹಯೋಗ ತಂದೆಯದು. ಆದರೆ ಧೈರ್ಯವನ್ನು ಕಳೆದುಕೊಳ್ಳಬಾರದು. ತಮ್ಮ ಭಾಗ್ಯದ ನಕ್ಷತ್ರವು ಸದಾ ಹೊಳೆಯುತ್ತಾ ಇರಲಿ ಏಕೆಂದರೆ ಈ ಜನ್ಮದ ತೀವ್ರ ಪುರುಷಾರ್ಥ, ಪುರುಷಾರ್ಥವಲ್ಲ, ತೀವ್ರ ಪುರುಷಾರ್ಥವು ಅನೇಕ ಜನ್ಮಗಳ ಭಾಗ್ಯವನ್ನು ರೂಪಿಸುವಂತದ್ದಾಗಿದೆ ಆದ್ದರಿಂದ ಧೈರ್ಯವನ್ನು ಎಂದೂ ಕಳೆದುಕೊಳ್ಳಬಾರದು. ಮಾತುಗಳು ಬರುತ್ತದೆ ಆದರೆ ಮಾತುಗಳು ಮಹಾವೀರರಲ್ಲ, ತಾವು ಸರ್ವಶಕ್ತಿವಂತನ ಮಕ್ಕಳಾಗಿದ್ದೀರಿ, ತಮ್ಮ ಮುಂದೆ ಮಾತು ದೊಡ್ಡದೇನು!! ಮಾತು ಬರುತ್ತದೆ ಮತ್ತು ಹೊರಟು ಹೋಗುತ್ತದೆ. ಯಾವುದು ಹೊರಟು ಹೋಗುವುದಿದೆ ಅದರ ಹಿಂದೆ ತಮ್ಮ ಅದೃಷ್ಠವನ್ನು ಕಳೆದುಕೊಳ್ಳಬಾರದು. ಒಳ್ಳೆಯದು - ಕುಳಿತುಕೊಳ್ಳಿ.

ಅಂದಾಗ ಎಲ್ಲರಿಗೂ ಬಾಪ್ದಾದಾರವರು ಸ್ನೇಹದಿಂದ ಶುಭಾಷಯಗಳನ್ನು ಕೊಡುತ್ತಿದ್ದಾರೆ, ಯಾವ ಮಾತಿಗಾಗಿ? ಧೈರ್ಯವನ್ನಿಟ್ಟಿದ್ದೀರಿ ಮತ್ತು ಬಾಪ್ದಾದಾರವರು ಪ್ರತಿಯೊಂದು ಮಗುವಿನ ಧೈರ್ಯದ ಸಂಕಲ್ಪವನ್ನು ಇಟ್ಟಿರುವುದಕ್ಕಾಗಿ ಖುಷಿಯಿದೆ. ಹೋಲಿಯನ್ನಾಚರಿಸಿದಿರಾ? ಸುಡುವಂತಹ ಹೋಲಿಯನ್ನಂತೂ ಆಚರಿಸಿದಿರಿ ಮತ್ತು ಪರಮಾತ್ಮ ಸಂಗದ ರಂಗಿನ ಹೋಲಿಯನ್ನೂ ಆಚರಿಸಿದಿರಿ. ಸುಟ್ಟಿರಿ, ಆಚರಿಸಿದಿರಿ.

ಈಗ ಬಾಪ್ದಾದಾರವರು ಎಲ್ಲಾ ಮಕ್ಕಳಿಗೆ ಒಂದು ಡ್ರಿಲ್ನ್ನು ಮಾಡಿಸಲು ಇಷ್ಟ ಪಡುತ್ತಾರೆ. ಆ ಡ್ರಿಲ್ ಆಗಿದೆ, ನಾಲ್ಕೂ ಕಡೆ ಪರಿಸ್ಥಿತಿಗಳಿವೆ, ಕೆಲವು ಕಡೆ ಕೆಲವು ಪರಿಸ್ಥಿತಿಗಳಿವೆ, ಕೆಲವೊಂದೆಡೆ ಕೆಲವು ಪರಿಸ್ಥಿತಿಗಳಿವೆ, ಈ ರೀತಿ ನಾಲ್ಕೂ ಕಡೆಯ ಪರಿಸ್ಥಿತಿಗಳ ನಡುವೆ ತಾವು ಒಂದು ಸೆಕೆಂಡಿನಲ್ಲಿ ಏಕಾಗ್ರರಾಗಲು ಸಾಧ್ಯವಿದೆಯೇ? ಇಂತಹ ಅಭ್ಯಾಸವನ್ನು ಸ್ವಯಂನಲ್ಲಿ ಅನುಭವ ಮಾಡುತ್ತೀರಾ? ಅಥವಾ ಈ ರೀತಿ ತಿಳಿಯಿರಿ, ಯಾವ ಸಮಯದಲ್ಲಿ ಕಾರಣ, ಅಕಾರಣವಾಗಿ ಯಾವ ಮಾತಿನ ಪ್ರತಿ ವ್ಯರ್ಥ ಸಂಕಲ್ಪದ ಬಿರುಗಾಳಿ ತಮಗೆ ಬಂದು ಬಿಟ್ಟಿದೆಯೆಂದರೆ ಅಂತಹ ಸಮಯದಲ್ಲಿ ತಾವು ತಮ್ಮ ಮನಸ್ಸು-ಬುದ್ಧಿಯನ್ನು ಏಕಾಗ್ರ ಮಾಡಲು ಸಾಧ್ಯವೇ? ಈ ಏಕಾಗ್ರತೆಯ ಶಕ್ತಿಯ ಡ್ರಿಲ್ನ್ನು ಸಮಯದಲ್ಲಿ ಮಾಡಿ ನೋಡಿದ್ದೀರಾ? ಒಂದುವೇಳೆ ಅಂತಹ ಸಮಯದಲ್ಲಿ ಒಂದು ಸೆಕೆಂಡಿನಲ್ಲಿ ಏಕಾಗ್ರತೆಯ ಶಕ್ತಿಯು ಕಾರ್ಯದಲ್ಲಿ ಬರುವುದಿಲ್ಲವೆಂದರೆ ಮುಂದೆ ಹೋದಂತೆ ಅಂತಹ ಪರಿಸ್ಥಿತಿಗಳು ಮತ್ತೆ-ಮತ್ತೆ ಬರುತ್ತವೆ ಅಂದಾಗ ಇಂದು ಬಾಪ್ದಾದಾರವರು ಸೆಕೆಂಡಿನಲ್ಲಿ ಫುಲ್ಸ್ಟಾಪ್ ಅರ್ಥಾತ್ ಏಕಾಗ್ರ ಸ್ಥಿತಿಯ ಅಭ್ಯಾಸದ ಮೇಲೆ ಗಮನ ಸೆಳೆಯಲು ಬಯಸುತ್ತಾರೆ ಏಕೆಂದರೆ ಪ್ರಕೃತಿಯು ತನ್ನ ಭಿನ್ನ-ಭಿನ್ನ ರಂಗನ್ನು ತೋರಿಸಲು ಪ್ರಾರಂಭಿಸಿ ಬಿಟ್ಟಿದೆ. ನಾಲ್ಕೂ ಕಡೆ ಏನೇನಾಗುತ್ತಿದೆ, ಅದನ್ನು ತಾವೆಲ್ಲರೂ ಬಹಳಷ್ಟು ತಿಳಿದಿದ್ದೀರಿ. ಅಂದಮೇಲೆ ಇಂತಹ ಮನಸ್ಸು-ಬುದ್ಧಿಯನ್ನು ಅಲೆದಾಡಿಸುವಂತಹ ಮಾತುಗಳು ಬರಲೇಬೇಕು ಆದ್ದರಿಂದ ಈಗ ಈ ಅಭ್ಯಾಸ ಮಾಡಿ- ಮನಸ್ಸನ್ನು, ಬುದ್ಧಿಯನ್ನು ತಾವು ಒಂದು ಸೆಕೆಂಡಿನಲ್ಲಿ ಪರಮಧಾಮದಲ್ಲಿ ಸ್ಥಿರ ಮಾಡಲು ಸಾಧ್ಯವೇ! ಈಗ ತಮ್ಮನ್ನು ಫರಿಶ್ತಾ ರೂಪದಲ್ಲಿ ಸ್ಥಿರ ಮಾಡಿ. ಈಗ ತಮ್ಮನ್ನು - ನಾನು ಬ್ರಾಹ್ಮಣ ಮಾ|| ಸರ್ವಶಕ್ತಿವಂತ ಸ್ಥಿತಿಯಲ್ಲಿದ್ದೇನೆ, ಈ ಮಾ|| ಸರ್ವಶಕ್ತಿವಂತಹ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ. (ಬಾಪ್ದಾದಾರವರು ಡ್ರಿಲ್ ಮಾಡಿಸಿದರು) ಇಂತಹ ಅಭ್ಯಾಸವನ್ನು ಇಡೀ ದಿನದಲ್ಲಿ ಯಾವಾಗಲೆಲ್ಲಾ ಸಮಯ ಸಿಗುತ್ತದೆ, ಮತ್ತೆ-ಮತ್ತೆ ಮನಸ್ಸನ್ನು ಏಕಾಗ್ರ ಮಾಡಿ ನೋಡಿ. ಎಲ್ಲಿ ಬೇಕು, ಏನು ಬೇಕು ಅಲ್ಲಿ ಮನಸ್ಸು ಏಕಾಗ್ರವಾಗಲಿ. ಪುರುಷಾರ್ಥಕ್ಕೆ ಒಂದು ನಿಮಿಷ ಹಿಡಿಸುತ್ತದೆ, ಒಂದು ಸೆಕೆಂಡಿನಲ್ಲಿ ಫುಲ್ಸ್ಟಾಪ್ ಏಕೆಂದರೆ ಇಂತಹ ಏರುಪೇರಿನ ಸಮಯವು ಈಗ ತಯಾರಿ ಮಾಡಿಕೊಳ್ಳುತ್ತಿದೆ ಆದ್ದರಿಂದ ಈಗ ಮೈಂಡ್ ಕಂಟ್ರೋಲ್ (ಮನಸ್ಸಿನ ನಿಯಂತ್ರಣತೆ) - ನನ್ನ ಮನಸ್ಸು, ನಾನು ಮನಸ್ಸಲ್ಲ, ನನ್ನ ಮನಸ್ಸಾಗಿದೆ ಅಂದಾಗ ನನ್ನದರ ಮೇಲೆ ನನ್ನ ನಿಯಂತ್ರಣವಿದೆಯೇ? ಈ ಡ್ರಿಲ್ ಬಹಳ ಅವಶ್ಯಕತೆಯಿದೆ.

ಅಂದಾಗ ಯಾರೆಲ್ಲರೂ ಬಂದಿದ್ದೀರಿ, ಬಾಪ್ದಾದಾರವರಿಗೆ ಒಂದೊಂದು ಮಗು ಪ್ರಿಯವಾಗಿದ್ದೀರಿ. ಏಕೆ? ಹೇಗಾದರೂ ಇರಬಹುದು ಆದರೆ ಬಾಪ್ದಾದಾರವರು ಪ್ರತಿಯೊಂದು ಮಗುವನ್ನು ಕೋಟಿಯಲ್ಲಿ ಕೆಲವು ಆತ್ಮ ಎಂದು ನೋಡುತ್ತಾರೆ. ಭಲೆ ಪುರುಷಾರ್ಥದಲ್ಲಿ ಬಲಹೀನರಾಗಿರಬಹುದು ಆದರೆ ತಂದೆಗೆ ಪ್ರಿಯರಾಗಿದ್ದಾರೆ. ಹೃದಯದಿಂದ ಹೇಳುತ್ತಾರೆ – ನನ್ನ ಬಾಬಾ ಆದ್ದರಿಂದ ತಂದೆಗೂ ಸಹ ಅತಿ ಪ್ರಿಯರಾಗಿದ್ದಾರೆ. ಕೇವಲ ಬಾಪ್ದಾದಾರವರು ಒಂದು ಮಾತನ್ನು ಪುನಃ ನೆನಪು ತರಿಸುತ್ತಿದ್ದಾರೆ - ತಮ್ಮ ಚಹರೆಯು ಸದಾ ಖುಷ್ನುಮಃ, ಖುಷಿಯಲ್ಲಿ ಹೊಳೆಯುತ್ತಾ ಇರಲಿ. ಮಾತುಗಳು ಹೊರಟು ಹೋಗಲಿ ಆದರೆ ಖುಷಿಯು ಹೋಗಬಾರದು. ಸಂಗಮಯುಗದಲ್ಲಿ ಖುಷಿಯು ಪರಮಾತ್ಮನ ಉಡುಗೊರೆಯಾಗಿದೆ ಅಂದಮೇಲೆ ಹೋಲಿ ಅರ್ಥಾತ್ ಯಾವುದೇ ಇಂತಹ ಮಾತುಗಳು ಬರುತ್ತವೆಯೆಂದರೆ ಆಗ ನೆನಪು ಮಾಡಬೇಕು - ಹೋಲಿಯನ್ನಾಚರಿಸಿ ಬಂದಿದ್ದೇವೆ, ಯಾವ ಹೋಲಿ (ಕಳೆದು ಹೋದ) ಮಾತುಗಳಿದೆ ಹೋ-ಲಿ, ಖುಷಿ ಹೋಗಬಾರದು. ಪರಮಾತ್ಮನ ಉಡುಗೊರೆ, ಖಜಾನೆ ಖುಷಿಯಾಗಿದೆ.

ಬಾಪ್ದಾದಾರವರು ಸದಾ ಹೇಳುತ್ತಾರೆ - ಈ ಸ್ಲೋಗನ್ ನೆನಪಿರಲಿ, ಖುಷಿಯಾಗಿ ಇರಬೇಕು ಮತ್ತು ಖುಷಿಯನ್ನು ಹಂಚಬೇಕು. ಎಷ್ಟು ಹಂಚುತ್ತೀರಿ ಅಷ್ಟು ಹೆಚ್ಚುತ್ತದೆ ಮತ್ತು ಖುಷಿಯಾಗಿರುವ ಚಹರೆಯು ನಡೆಯುತ್ತಾ-ತಿರುಗಾಡುತ್ತಾ ಸ್ವತಹವಾಗಿ ಸೇವೆ ಮಾಡುತ್ತಾ ಇರುತ್ತದೆ. ಯಾರೆಲ್ಲಾ ನೋಡುತ್ತಿದ್ದಾರೆ ಅವರು ಇದನ್ನೇ ಯೋಚಿಸುತ್ತಾರೆ - ಇವರಿಗೆ ಏನು ಸಿಕ್ಕಿದೆ!! ಅಂದಾಗ ಇಂದು ಹೋಲಿಯ ದಿಲ್ಖುಷ್ ಮಿಠಾಯಿ ಆಗಿದೆ - ಖುಷಿ. ಎಲ್ಲರೂ ತಿಂದಿರಾ? ಸದಾ ತಿನ್ನುತ್ತಾ ಇರಬೇಕು. ಇದರಿಂದ ಯಾವುದೇ ಖಾಯಿಲೆ ಆಗುವುದಿಲ್ಲ. ಒಳ್ಳೆಯದು.

ನಾಲ್ಕೂ ಕಡೆಯ ಬಾಪ್ದಾದಾರವರ ಸ್ನೇಹದ ಸಮಾವೇಶವಾಗುತ್ತಾ ನೆನಪು ಮತ್ತು ಸೇವೆಯಲ್ಲಿ ಬಹಳ ಮುಂದುವರೆಯುವ ಹಾಗೂ ಮುಂದುವರೆಸುವಂತಹ, ಅಮೃತವೇಳೆ ಎಲ್ಲದಕ್ಕಿಂತ ಒಳ್ಳೆಯ ಶಕ್ತಿಶಾಲಿಗಳನ್ನಾಗಿ ಮಾಡುವಂತಹ ಮತ್ತು ಮನಸ್ಸಾ ಸೇವೆಯ ಮೂಲಕ ದಯಾ ಹೃದಯಿ, ದಯಾಳು, ಕೃಪಾಳು ಆಗಿ ಆತ್ಮಗಳಿಗೆ ಒಂದಲ್ಲ ಒಂದು ಹನಿಯನ್ನು ಕೊಡುವಂತಹ ತಮ್ಮ ಈ ವಿಧಿಯನ್ನು ಮುಂದುವರೆಸುತ್ತಾ ಹೋಗಿ. ಬಾಪ್ದಾದಾರವರು ನೋಡುತ್ತಾರೆ - ಪ್ರತಿಯೊಂದು ಮಗು ಉಮ್ಮಂಗ-ಉತ್ಸಾಹದಲ್ಲಿರುತ್ತಾರೆ ಆದರೆ ಈಗ ಏನನ್ನು ಸೇರ್ಪಡೆ ಮಾಡಬೇಕು? ಸದಾ ಶಬ್ಧವನ್ನು ಸೇರ್ಪಡೆ ಮಾಡಬೇಕು. ಕೆಲವೊಮ್ಮೆ ಎಂಬ ಶಬ್ಧವನ್ನು ಶಬ್ಧ ಕೋಶದಿಂದ ತೆಗೆದು ಹಾಕಿ. ಅಂದಮೇಲೆ ನಾಲ್ಕೂ ಕಡೆಯ ಮಕ್ಕಳು ಹೋಲಿಯನ್ನೂ ಆಚರಿಸಿದಿರಿ, ಸುಟ್ಟಿರಿ ಮತ್ತು ಸಂಗದ ರಂಗನ್ನೂ ಹಾಕಿದಿರಿ, ಕಳೆದದ್ದು ಕಳೆದು ಹೋಯಿತು ಎಂಬ ಹೋಲಿಯನ್ನೂ ಆಚರಿಸಿದಿರಿ ಆದ್ದರಿಂದ ಬಾಪ್ದಾದಾರವರು ನಾಲ್ಕೂ ಕಡೆಯ ಮಕ್ಕಳನ್ನು ಸನ್ಮುಖದಲ್ಲಿ ಹೃದಯದಲ್ಲಿ ನೋಡುತ್ತಿದ್ದಾರೆ. ಬಾಪ್ದಾದಾರವರ ಪದಮಾಪದಮ ಗುಣದಷ್ಟು ನೆನಪು-ಪ್ರೀತಿ ಮತ್ತು ನಮಸ್ತೆ.

ವರದಾನ:
ಸದಾ ಆದೇಶದ ತಿಲಕವನ್ನು ಧರಿಸಿಕೊಂಡು ಮೊದಲ ಬಹುಮಾನವನ್ನು ತೆಗೆದುಕೊಳ್ಳುವಂತಹ ಆದೇಶ ಪಾಲಕ ಭವ.

ಯಾವ ಮಕ್ಕಳ ಮಸ್ತಕದಲ್ಲಿ ಆದೇಶ ಪಾಲಕನ ಸ್ಮೃತಿಯ ತಿಲಕವಿರುತ್ತದೆಯೋ, ಒಂದು ಸಂಕಲ್ಪವೂ ಆದೇಶವಿಲ್ಲದೆ ಮಾಡುವುದಿಲ್ಲ, ಅವರಿಗೆ ಮೊದಲ ಬಹುಮಾನವು ಪ್ರಾಪ್ತಿಯಾಗುತ್ತದೆ. ಹೇಗೆ ಗೆರೆಯೊಳಗೆ ಕುಳಿತುಕೊಳ್ಳುವ ಆದೇಶವಿತ್ತು, ಹಾಗೆಯೇ ಪ್ರತೀ ಹೆಜ್ಜೆಯನ್ನಿಡುತ್ತಾ, ಪ್ರತೀ ಸಂಕಲ್ಪವನ್ನು ಮಾಡುತ್ತಾ, ತಂದೆಯ ಆದೇಶದ ಗೆರೆಯೊಳಗೆ ಇರುತ್ತೀರೆಂದರೆ ಸದಾಕಾಲವೂ ಸುರಕ್ಷಿತವಾಗಿ ಇರುತ್ತೀರಿ. ರಾವಣನ ಯಾವುದೇ ಪ್ರಕಾರದ ಸಂಸ್ಕಾರವೂ ಯುದ್ಧ ಮಾಡುವುದಿಲ್ಲ ಹಾಗೂ ಸಮಯವೂ ವ್ಯರ್ಥವಾಗಿ ಹೋಗುವುದಿಲ್ಲ.

ಸ್ಲೋಗನ್:
ಯಾರೊಂದಿಗಾದರೂ ಸೆಳೆತವಿದ್ದರೆ, ಆ ಸೆಳೆತವು ಪುರುಷಾರ್ಥದಲ್ಲಿ ಅವಶ್ಯವಾಗಿ ಹುಡುಗಾಟಿಕೆಯಿರುವಂತೆ ಮಾಡುತ್ತದೆ.

ಅವ್ಯಕ್ತ ಸೂಚನೆಗಳು:- ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ.

ಸಮಯ ಪ್ರಮಾಣ ಈಗ ಸದಾ ಅಚಲ ಅಡೋಲ ಸರ್ವ ಖಜಾನೆಗಳಿಂದ ಸಂಪನ್ನರಾಗಿ. ಸ್ವಲ್ಪವೂ ಸಹ ಏರು-ಪೇರು ಆಗುತ್ತೀರಿ ಎಂದರೆ ಸರ್ವ ಖಜಾನೆಗಳ ಅನುಭವ ಆಗುವುದಿಲ್ಲ. ತಂದೆಯ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸದಾ ಖಾಯಂ ಆಗಿ ಇಟ್ಟುಕೊಳ್ಳುವ ಸಾಧನ ಆಗಿದೆ ಸದಾ ಅಚಲ ಅಡೋಲರಾಗಿ ಇರುವುದು. ಅಚಲರಾಗಿರುವುದರಿಂದ ಸದಾ ಖುಷಿಯ ಅನುಭವ ಆಗುತ್ತಾ ಇರುತ್ತದೆ. ಹೇಗೆ ವಿನಾಶಿ ಧನ, ಹೆಸರು - ಮಾನ್ಯತೆ - ಆಡಂಬರ, ಪದವಿ ಇತ್ಯಾದಿಗಳು ಸಿಗುತ್ತದೆ ಎಂದರೆ ಖುಷಿಯಾಗುತ್ತದೆ ಅಲ್ಲವೇ. ಇದಂತೂ ಅವಿನಾಶಿ ಖುಷಿಯಾಗಿದೆ ಆದರೆ ಈ ಖುಷಿ ಅವರಿಗೆ ಇರುತ್ತದೆ ಯಾರು ಅಚಲ ಅಡೋಲ ಏಕ-ರಸ ಸ್ಥಿತಿಯಲ್ಲಿ ಇರುತ್ತಾರೆ.