24.07.25         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಈ ವಿದ್ಯೆಯಿಂದ ತಮ್ಮ ಶಾಂತಿಧಾಮದ ಮೂಲಕ ಸುಖಧಾಮಕ್ಕೆ ಹೋಗುತ್ತೀರಿ, ಇದೇ ನಿಮ್ಮ ಗುರಿ-ಧ್ಯೇಯವಾಗಿದೆ, ಇದನ್ನೆಂದೂ ಮರೆಯಬಾರದು.

ಪ್ರಶ್ನೆ:
ನೀವು ಮಕ್ಕಳೇ ಸಾಕ್ಷಿಯಾಗಿ ಈ ಸಮಯದ ನಾಟಕದ ಯಾವ ದೃಶ್ಯವನ್ನು ನೋಡುತ್ತಿದ್ದೀರಿ?

ಉತ್ತರ:
ಈ ಸಮಯದ ನಾಟಕದಲ್ಲಿ ಸಂಪೂರ್ಣ ದುಃಖದ ದೃಶ್ಯವಿದೆ. ಒಂದುವೇಳೆ ಯಾರಿಗಾದರೂ ಸುಖವಿದ್ದರೂ ಸಹ ಅದು ಅಲ್ಪಕಾಲದ ಕಾಗವಿಷ್ಟ ಸಮಾನ. ಉಳಿದೆಲ್ಲವೂ ದುಃಖವೇ ದುಃಖವಿದೆ. ನೀವು ಮಕ್ಕಳು ಈಗ ಪ್ರಕಾಶದಲ್ಲಿ ಬಂದಿದ್ದೀರಿ. ನಿಮಗೆ ತಿಳಿದಿದೆ- ಕ್ಷಣ-ಪ್ರತಿಕ್ಷಣ ಬೇಹದ್ದಿನ ಸೃಷ್ಟಿಚಕ್ರವು ಸುತ್ತುತ್ತಾ ಇರುತ್ತದೆ, ಒಂದು ದಿನವು ಇನ್ನೊಂದು ದಿನಕ್ಕೆ ಹೋಲುವುದಿಲ್ಲ. ಇಡೀ ಪ್ರಪಂಚದ ಚಟುವಟಿಕೆಗಳು ಬದಲಾಗುತ್ತಿರುತ್ತವೆ. ಹೊಸ ದೃಶ್ಯವು ಬರುತ್ತಿರುತ್ತದೆ.

ಡಬಲ್ ಓಂ ಶಾಂತಿ.
ಒಂದನೆಯದಾಗಿ ತಂದೆಯು ಸ್ವಧರ್ಮದಲ್ಲಿ ಸ್ಥಿತರಾಗುತ್ತಾರೆ, ಎರಡನೆಯದು ಮಕ್ಕಳಿಗೂ ಸಹ ಸ್ವಧರ್ಮದಲ್ಲಿ ಸ್ಥಿತರಾಗಿ ಮತ್ತು ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಸ್ವಧರ್ಮದಲ್ಲಿ ಸ್ಥಿತರಾಗಿ ಎಂದು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ನಿಶ್ಚಯವಿದೆ, ನಿಶ್ಚಯ ಬುದ್ಧಿ ವಿಜಯಂತಿ. ಅವರೇ ವಿಜಯವನ್ನು ಹೊಂದುತ್ತಾರೆ. ವಿಜಯವೆಲ್ಲಿಯದು? ತಂದೆಯ ಆಸ್ತಿಯು ವಿಜಯ. ಸ್ವರ್ಗದಲ್ಲಿ ಹೋಗುವುದು ತಂದೆಯ ಆಸ್ತಿಯ ಮೇಲೆ ವಿಜಯವನ್ನು ಪಡೆಯುವುದಾಗಿದೆ ಆದರೆ ಪದವಿಗಾಗಿ ಪುರುಷಾರ್ಥ ಮಾಡಬೇಕಾಗಿದೆ. ಸ್ವರ್ಗದಲ್ಲಿ ಹೋಗುವುದಂತೂ ಅವಶ್ಯಕ. ಮಕ್ಕಳಿಗೆ ತಿಳಿದಿದೆ - ಇದು ಛೀ ಛೀ ಪ್ರಪಂಚವಾಗಿದೆ, ಇನ್ನೂ ಬಹಳಷ್ಟು ದುಃಖವು ಬರುವುದಿದೆ. ನಾಟಕದ ಚಕ್ರವನ್ನೂ ಸಹ ನೀವು ಅರಿತಿದ್ದೀರಿ. ಪಾವನರನ್ನಾಗಿ ಮಾಡಿ ಎಲ್ಲಾ ಆತ್ಮಗಳನ್ನು ಸೊಳ್ಳೆಗಳೋಪಾದಿಯಲ್ಲಿ ಕರೆದುಕೊಂಡು ಹೋಗಲು ಅನೇಕ ಬಾರಿ ತಂದೆಯು ಬಂದಿದ್ದಾರೆ. ನಂತರ ತಾನೂ ಸಹ ನಿರ್ವಾಣಧಾಮದಲ್ಲಿ ಹೋಗಿ ನಿವಾಸ ಮಾಡುತ್ತಾರೆ. ಮಕ್ಕಳು ಹೋಗುತ್ತೀರಾ! ನೀವು ಮಕ್ಕಳಿಗೆ ಈ ಖುಷಿಯಿರಬೇಕು - ಈ ವಿದ್ಯೆಯಿಂದ ನಾವು ಶಾಂತಿಧಾಮದ ಮೂಲಕ ನಮ್ಮ ಸುಖಧಾಮಕ್ಕೆ ಹೋಗುತ್ತೇವೆ. ಇದು ನಿಮ್ಮ ಗುರಿ-ಧ್ಯೇಯವಾಗಿದೆ. ಇದನ್ನು ಮರೆಯಬಾರದು. ಪ್ರತಿನಿತ್ಯವೂ ಕೇಳುತ್ತೀರಿ- ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಲು ತಂದೆಯು ಓದಿಸುತ್ತಾರೆಂದು ತಿಳಿಯುತ್ತೀರಿ. ಪಾವನರಾಗಲು ತಂದೆಯು ನೆನಪಿನ ಸಹಜ ಉಪಾಯವನ್ನು ತಿಳಿಸುತ್ತಾರೆ. ಇದೂ ಸಹ ಹೊಸ ಮಾತಲ್ಲ. ಭಗವಂತನು ರಾಜಯೋಗವನ್ನು ಕಲಿಸಿದರೆಂದು ಬರೆಯಲ್ಪಟ್ಟಿದೆ. ಕೇವಲ ಕೃಷ್ಣನ ಹೆಸರನ್ನು ಹಾಕಿ ತಪ್ಪು ಮಾಡಿದ್ದಾರೆ. ಮಕ್ಕಳಿಗೆ ಸಿಗುತ್ತಿರುವ ಜ್ಞಾನವು ಗೀತೆಯಲ್ಲದೆ ಮತ್ತ್ಯಾವುದೋ ಶಾಸ್ತ್ರದಲ್ಲಿರುವುದು ಎಂದಲ್ಲ. ಮಕ್ಕಳಿಗೆ ತಿಳಿದಿದೆ- ತಂದೆಯ ಮಹಿಮೆಯಂತೂ ಮತ್ತ್ಯಾವ ಮನುಷ್ಯರಿಗೂ ಇಲ್ಲ. ತಂದೆಯು ಬರದೇ ಇದ್ದಿದ್ದರೆ ಸೃಷ್ಟಿಚಕ್ರವೇ ತಿರುಗುತ್ತಿರಲಿಲ್ಲ. ದುಃಖಧಾಮದಿಂದ ಸುಖಧಾಮ ಹೇಗಾಗುವುದು? ಸೃಷ್ಟಿಚಕ್ರವಂತೂ ತಿರುಗಲೇಬೇಕಾಗಿದೆ. ತಂದೆಯೂ ಸಹ ಅವಶ್ಯವಾಗಿ ಬರಲೇಬೇಕಾಗಿದೆ. ತಂದೆಯು ಎಲ್ಲರನ್ನು ಕರೆದುಕೊಂಡು ಹೋಗಲು ಬರುತ್ತಾರೆ ಮತ್ತೆ ಚಕ್ರವು ಸುತ್ತುತ್ತದೆ. ತಂದೆಯು ಬರದಿದ್ದರೆ ಕಲಿಯುಗದಿಂದ ಹೇಗೆ ಸತ್ಯಯುಗವಾಗುವುದು? ಇವೆಲ್ಲಾ ಮಾತುಗಳು ಯಾವುದೇ ಶಾಸ್ತ್ರಗಳಲಿಲ್ಲ. ರಾಜಯೋಗವಿರುವುದೇ ಗೀತೆಯಲ್ಲಿ. ಒಂದುವೇಳೆ ಮಧುಬನದಲ್ಲಿ ಭಗವಂತನು ಬಂದಿದ್ದಾರೆಂದು ಅರ್ಥವಾಗಿ ಬಿಟ್ಟರೆ ಎಲ್ಲರೂ ಮಿಲನ ಮಾಡುವುದಕ್ಕಾಗಿ ಒಮ್ಮೆಲೇ ಓಡಿ ಬರುವರು. ಭಗವಂತನೊಂದಿಗೆ ಮಿಲನ ಮಾಡಬೇಕೆಂದು ಸನ್ಯಾಸಿಗಳೂ ಸಹ ಇಚ್ಛಿಸುತ್ತಾರೆ. ಹಿಂತಿರುಗಿ ಹೋಗಲು ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತಾರೆ. ಈಗ ನೀವು ಮಕ್ಕಳು ಪದಮಾಪದಮ ಭಾಗ್ಯಶಾಲಿಗಳಾಗಿದ್ದೀರಿ. ಅಲ್ಲಿ ಅಪಾರ ಸುಖವಿರುತ್ತದೆ. ಹೊಸ ಪ್ರಪಂಚದಲ್ಲಿ ಯಾವ ದೇವಿ-ದೇವತಾ ಧರ್ಮವಿತ್ತೋ ಅದು ಈಗಿಲ್ಲ. ತಂದೆಯು ಬ್ರಹ್ಮಾರವರ ಮೂಲಕವೇ ದೈವೀ ರಾಜ್ಯದ ಸ್ಥಾಪನೆ ಮಾಡುತ್ತಾರೆ. ಇದಂತೂ ಸ್ಪಷ್ಟವಾಗಿದೆ, ನಿಮ್ಮ ಗುರಿ-ಧ್ಯೇಯವೂ ಇದೇ ಆಗಿದೆ. ಇದರಲ್ಲಿ ಸಂಶಯದ ಮಾತೇ ಇಲ್ಲ. ಮುಂದೆ ಹೋದಂತೆ ಎಲ್ಲರಿಗೂ ಅರ್ಥವಾಗುತ್ತದೆ, ರಾಜಧಾನಿಯು ಅವಶ್ಯವಾಗಿ ಸ್ಥಾಪನೆಯಾಗುತ್ತಿದೆ. ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಯಾವಾಗ ನೀವು ಸ್ವರ್ಗದಲ್ಲಿರುತ್ತೀರಿ ಆಗ ಇದರ ಹೆಸರೇ ಭಾರತ ಎಂದಾಗಿರುತ್ತದೆ ನಂತರ ನೀವು ನರಕದಲ್ಲಿ ಬಂದಾಗ ಹಿಂದೂಸ್ತಾನವೆಂಬ ಹೆಸರು ಬರುತ್ತದೆ. ಇಲ್ಲಿ ಎಷ್ಟೊಂದು ದುಃಖವೇ ದುಃಖವಿದೆ. ಈಗ ಈ ಸೃಷ್ಟಿಯು ಬದಲಾಗುತ್ತದೆ ನಂತರ ಸ್ವರ್ಗದಲ್ಲಿ ಸುಖಧಾಮವಿರುತ್ತದೆ. ಈ ಜ್ಞಾನವು ನೀವು ಮಕ್ಕಳಿಗೇ ಇದೆ. ಪ್ರಪಂಚದಲ್ಲಿ ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಸ್ವಯಂ ತಂದೆಯೇ ಹೇಳುತ್ತಾರೆ- ಈಗ ಅಂಧಕಾರ ರಾತ್ರಿಯಾಗಿದೆ. ರಾತಿಯಲ್ಲಿ ಮನುಷ್ಯರು ಹುಡುಕಾಡುತ್ತಿರುತ್ತಾರೆ. ನೀವು ಮಕ್ಕಳು ಬೆಳಕಿನಲ್ಲಿದ್ದೀರಿ. ಇದನ್ನೂ ಸಹ ಸಾಕ್ಷಿಯಾಗಿ ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಕ್ಷಣ-ಪ್ರತಿಕ್ಷಣ ಬೇಹದ್ದಿನ ಸೃಷ್ಟಿಚಕ್ರವು ಸುತ್ತುತ್ತಿರುತ್ತದೆ. ಒಂದು ದಿನವು ಇನ್ನೊಂದು ದಿನಕ್ಕೆ ಹೋಲುವುದಿಲ್ಲ. ಇಡೀ ಪ್ರಪಂಚದ ಪಾತ್ರವು ಬದಲಾಗುತ್ತಿರುತ್ತದೆ. ಹೊಸ ದೃಶ್ಯವು ಬರುತ್ತಿರುತ್ತದೆ. ಈ ಸಮಯದಲ್ಲಿರುವುದೇ ಸಂಪೂರ್ಣ ದುಃಖದ ದೃಶ್ಯ. ಒಂದುವೇಳೆ ಸುಖವಿದ್ದರೂ ಸಹ ಅದು ಕಾಗವಿಷ್ಟ ಸಮಾನ. ಉಳಿದಂತೆ ದುಃಖವೇ ದುಃಖವಿದೆ. ಈ ಜನ್ಮದಲ್ಲಿ ಸ್ವಲ್ಪ ಸುಖವಿದ್ದರೂ ಸಹ ಇನ್ನೊಂದು ಜನ್ಮದಲ್ಲಿ ದುಃಖ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ- ನಾವೀಗ ಮನೆಗೆ ಹೋಗುತ್ತೇವೆ. ಇದರಲ್ಲಿ ಪಾವನರಾಗುವ ಪರಿಶ್ರಮ ಪಡಬೇಕಾಗಿದೆ. ಶ್ರೀ ಶ್ರೀ ತಂದೆಯು ಶ್ರೀ ಲಕ್ಷ್ಮೀ-ನಾರಾಯಣರಾಗುವ ಶ್ರೀಮತವನ್ನು ಕೊಟ್ಟಿದ್ದಾರೆ. ಹೇಗೆ ಬ್ಯಾರಿಸ್ಟರ್, ಬ್ಯಾರಿಸ್ಟರ್ ಆಗಿ ಎಂದು ಮತ ಕೊಡುತ್ತಾರೆ. ಈಗ ತಂದೆಯೂ ಸಹ ಹೇಳುತ್ತಾರೆ- ಶ್ರೀಮತದಿಂದ ನೀವು ಈ ದೇವತೆಗಳಾಗಿ. ತಮ್ಮೊಂದಿಗೆ ತಾವು ಕೇಳಿಕೊಳ್ಳಿ- ನನ್ನಲ್ಲಿ ಯಾವುದೇ ಅವಗುಣವು ಇಲ್ಲವೇ? ಈ ಸಮಯದಲ್ಲಿ ಹಾಡುತ್ತಾರೆ- ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲ, ತಾವೇ ದಯೆ ತೋರಿಸಿ ಎಂದು. ದಯೆ ಅರ್ಥಾತ್ ಅನುಕಂಪ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಾನಂತೂ ಯಾರ ಮೇಲೂ ದಯೆ ತೋರಿಸುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಮೇಲೆ ತಾವು ದಯೆ ತೋರಿಸಿಕೊಳ್ಳಬೇಕಾಗಿದೆ. ಈ ನಾಟಕವು ಮಾಡಲ್ಪಟ್ಟಿದೆ. ನಿರ್ಧಯಿಯಾದ ರಾವಣನು ನಿಮ್ಮನ್ನು ದುಃಖದಲ್ಲಿ ಕರೆದುಕೊಂಡು ಹೋಗುತ್ತಾನೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಗಿದೆ. ಇದರಲ್ಲಿ ರಾವಣನದೂ ಸಹ ದೋಷವಿಲ್ಲ. ತಂದೆಯು ಬಂದು ಕೇವಲ ಸಲಹೆ ಕೊಡುತ್ತಾರೆ. ಇದೇ ಅವರ ದಯೆಯಾಗಿದೆ ಬಾಕಿ ಈ ರಾವಣ ರಾಜ್ಯವಂತೂ ಕಲ್ಪದ ನಂತರವೂ ನಡೆಯುವುದು. ನಾಟಕವು ಅನಾದಿಯಾಗಿದೆ. ಇದರಲ್ಲಿ ರಾವಣನದೂ ದೋಷವಿಲ್ಲ. ಮನುಷ್ಯರದೂ ದೋಷವಿಲ್ಲ. ಚಕ್ರವು ಸುತ್ತಲೇಬೇಕಾಗಿದೆ. ರಾವಣನಿಂದ ಬಿಡಿಸಿಕೊಳ್ಳುವುದಕ್ಕಾಗಿ ತಂದೆಯು ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ. ರಾವಣನ ಮತದಂತೆ ನೀವು ಎಷ್ಟೊಂದು ಪಾಪಾತ್ಮರಾಗಿದ್ದೀರಿ. ಈಗ ಹಳೆಯ ಪ್ರಪಂಚವಿದೆ ನಂತರ ಅವಶ್ಯವಾಗಿ ಹೊಸ ಪ್ರಪಂಚವು ಬರುವುದು. ಚಕ್ರವಂತೂ ತಿರುಗುವುದಲ್ಲವೆ. ಸತ್ಯಯುಗವು ಪುನಃ ಅವಶ್ಯವಾಗಿ ಬರಬೇಕಾಗಿದೆ. ಈಗ ಸಂಗಮಯುಗವಿದೆ. ಮಹಾಭಾರತ ಯುದ್ಧವೂ ಸಹ ಈ ಸಮಯದ್ದಾಗಿದೆ. ವಿನಾಶಕಾಲೇ ವಿಪರೀತಬುದ್ಧಿ ವಿನಃಶ್ಯಂತಿ. ಇದು ಆಗಲಿದೆ. ನಾವು ವಿಜಯಿಗಳಾಗಿ ಸ್ವರ್ಗದ ಮಾಲೀಕರಾಗುತ್ತೇವೆ. ಉಳಿದೆಲ್ಲರೂ ಆಗುವುದಿಲ್ಲ. ಇದನ್ನೂ ಸಹ ತಿಳಿದುಕೊಂಡಿದ್ದೀರಿ- ಪವಿತ್ರರಾಗದೇ ದೇವತೆಗಳಾಗುವುದು ಪರಿಶ್ರಮವಾಗುವುದು. ಈಗ ತಂದೆಯಿಂದ ಶ್ರೇಷ್ಠ ದೇವತೆಗಳಾಗುವ ಶ್ರೀಮತವು ಸಿಗುತ್ತದೆ. ಇಂತಹ ಮತವು ಮತ್ತೆಂದೂ ಸಿಗುವುದಿಲ್ಲ. ತಂದೆಯ ಶ್ರೀಮತವನ್ನು ಕೊಡುವ ಪಾತ್ರವೂ ಸಹ ಸಂಗಮಯುಗದಲ್ಲಿಯೇ ಇದೆ, ಮತ್ತೆಲ್ಲಿಯೂ ಇಲ್ಲ. ಭಕ್ತಿಯೆಂದರೆ ಭಕ್ತಿ, ಅದಕ್ಕೆ ಜ್ಞಾನವೆಂದು ಹೇಳುವುದಿಲ್ಲ. ಆತ್ಮಿಕ ಜ್ಞಾನವನ್ನು ಜ್ಞಾನಸಾಗರ ಪರಮ ಆತ್ಮನೇ ಕೊಡುತ್ತಾರೆ. ಅವರ ಮಹಿಮೆಯೇ ಜ್ಞಾನಸಾಗರ, ಸುಖದ ಸಾಗರ ಎಂದಾಗಿದೆ. ತಂದೆಯು ಪುರುಷಾರ್ಥದ ಯುಕ್ತಿಗಳನ್ನೂ ತಿಳಿಸುತ್ತಾರೆ. ಈ ಗಮನ ಕೊಡಬೇಕು, ಈಗ ಅನುತ್ತೀರ್ಣರಾದರೆ ಕಲ್ಪ-ಕಲ್ಪವೂ ಅನುತ್ತೀರ್ಣರಾಗುತ್ತೀರಿ. ಬಹಳ ದೊಡ್ಡ ಪೆಟ್ಟು ಬೀಳುವುದು. ಶ್ರೀಮತದಂತೆ ನಡೆಯದಿದ್ದರೆ ಪೆಟ್ಟು ಬೀಳುವುದು. ಬ್ರಾಹ್ಮಣರ ವೃಕ್ಷವು ಅವಶ್ಯವಾಗಿ ವೃದ್ಧಿಯಾಗಬೇಕಾಗಿದೆ. ಎಷ್ಟು ದೇವತೆಗಳ ವೃಕ್ಷವಿದೆಯೋ ಅಷ್ಟೇ ವೃದ್ಧ್ದಿಯಾಗುವುದು. ನೀವು ಪುರುಷಾರ್ಥ ಮಾಡಬೇಕು ಮತ್ತು ಮಾಡಿಸಬೇಕಾಗಿದೆ. ಈ ದೈವೀ ವೃಕ್ಷದ ಸಸಿಯು ನಾಟಿಯಾಗುತ್ತಾ ಇರುವುದು. ವೃಕ್ಷವು ದೊಡ್ಡದಾಗಿ ಬಿಡುವುದು. ನೀವು ಮಕ್ಕಳಿಗೆ ತಿಳಿದಿದೆ- ಈಗ ನಮ್ಮ ಕಲ್ಯಾಣವಾಗುತ್ತದೆ. ಪತಿತ ಪ್ರಪಂಚದಿಂದ ಪಾವನ ಪ್ರಪಂಚದಲ್ಲಿ ಹೋಗುವ ಕಲ್ಯಾಣವಾಗುತ್ತದೆ. ನೀವು ಮಕ್ಕಳ ಬುದ್ಧಿಯ ಬೀಗವು ಈಗ ತೆರೆದಿದೆ. ತಂದೆಯು ಬುದ್ಧಿವಂತರಿಗೂ ಬುದ್ಧಿವಂತನಲ್ಲವೆ. ನೀವೀಗ ತಿಳಿದುಕೊಳ್ಳುತ್ತೀರಿ- ಮತ್ತೆ ಮುಂದೆ ಹೋದಂತೆ ಯಾರ್ಯಾರ ಬೀಗವು ತೆರೆಯುತ್ತದೆಯೋ ನೋಡುತ್ತೀರಿ. ಇದೂ ಸಹ ನಾಟಕದಲ್ಲಿ ನಡೆಯುತ್ತಿರುತ್ತದೆ. ನಂತರ ಸತ್ಯಯುಗದಿಂದ ಪುನರಾವರ್ತನೆಯಾಗುವುದು. ಯಾವಾಗ ಲಕ್ಷ್ಮೀ-ನಾರಾಯಣರು ಸಿಂಹಾಸನದ ಮೇಲೆ ಕುಳಿತುಕೊಳ್ಳುವರೋ ಆಗ ಸಂವತ್ಸರವು ಪ್ರಾರಂಭವಾಗುವುದು. ನೀವೂ ಸಹ ಬರೆಯುತ್ತೀರಿ- ಒಂದರಿಂದ 1250 ವರ್ಷಗಳವರೆಗೆ ಸ್ವರ್ಗವಿರುವುದು, ಎಷ್ಟು ಸ್ಪಷ್ಟವಾಗಿದೆ. ಸತ್ಯನಾರಾಯಣನ ಕಥೆಯಾಗಿದೆ. ಇದು ಅಮರನಾಥನ ಕಥೆಯಲ್ಲವೆ. ನೀವೀಗ ಸತ್ಯ-ಸತ್ಯವಾದ ಅಮರನಾಥನ ಕಥೆಯನ್ನು ಕೇಳುತ್ತೀರಿ ನಂತರ ಅದರ ಗಾಯನವೂ ನಡೆಯುತ್ತದೆ. ಹಬ್ಬಗಳೆಲ್ಲವೂ ಈ ಸಮಯದ್ದಾಗಿದೆ. ನಂಬರ್ವನ್ ಹಬ್ಬವು ಶಿವ ತಂದೆಯದ್ದಾಗಿದೆ. ಕಲಿಯುಗದ ನಂತರ ಪ್ರಪಂಚವನ್ನು ಪರಿವರ್ತನೆ ಮಾಡಲು ತಂದೆಯು ಖಂಡಿತ ಬರಬೇಕಾಗುವುದು. ಯಾರಾದರೂ ಚಿತ್ರಗಳನ್ನು ಸ್ಪಷ್ಟವಾಗಿ ನೋಡಿದ್ದೇ ಆದರೆ ಲೆಕ್ಕವು ಎಷ್ಟು ಸ್ಪಷ್ಟವಾಗಿ ಮಾಡಲ್ಪಟ್ಟಿದೆ. ಇದು ನಿಮಗಾಗಿಯೇ ಇದೆ. ಕಲ್ಪದ ಹಿಂದೆ ಎಷ್ಟು ಪುರುಷಾರ್ಥ ಮಾಡಿದ್ದರೋ ಅಷ್ಟನ್ನೇ ಅವಶ್ಯವಾಗಿ ಮಾಡುತ್ತಾರೆ. ಇವರು (ಬ್ರಹ್ಮಾ) ಸಾಕ್ಷಿಯಾಗಿ ಅನ್ಯರ ಪುರುಷಾರ್ಥವನ್ನು ನೋಡುತ್ತಾರೆ. ತಮ್ಮ ಪುರುಷಾರ್ಥವನ್ನೂ ತಿಳಿದುಕೊಂಡಿದ್ದಾರೆ. ನೀವೂ ಸಹ ತಿಳಿದುಕೊಳ್ಳುತ್ತೀರಿ- ವಿದ್ಯಾರ್ಥಿಗಳು ತಮ್ಮ ವಿಧ್ಯಾಭ್ಯಾಸವು ಹೇಗಿದೆ ಎಂಬುದನ್ನು ತಿಳಿದುಕೊಂಡಿರುವುದಿಲ್ಲವೇ? ನಾವು ಇಂತಹ ಸಬ್ಜೆಕ್ಟ್ನಲ್ಲಿ ಬಹಳ ಹಿಂದುಳಿದಿದ್ದೇವೆ ಎಂದು ಖಂಡಿತವಾಗಿ ಮನಸ್ಸು ತಿನ್ನುವುದು ಮತ್ತೆ ಅನುತ್ತೀರ್ಣರಾಗಿ ಬಿಡುತ್ತಾರೆ. ಪರೀಕ್ಷೆಯ ಸಮಯದಲ್ಲಿ ಕಚ್ಚಾ ಆಗಿರುವವರ ಹೃದಯವು ಬಡಿದುಕೊಳ್ಳುತ್ತಿರುವುದು. ನೀವು ಮಕ್ಕಳೂ ಸಹ ಸಾಕ್ಷಾತ್ಕಾರ ಮಾಡುತ್ತೀರಿ ಆದರೆ ಅನುತೀರ್ಣರಾದ ನಂತರ ಏನು ತಾನೆ ಮಾಡಲು ಸಾಧ್ಯ! ಶಾಲೆಯಲ್ಲಿಯೂ ಅನುತ್ತೀರ್ಣರಾದರೆ ಸಂಬಂಧಿಗಳೂ ಬೇಸರ ಪಡುತ್ತಾರೆ, ಶಿಕ್ಷಕರೂ ಬೇಸರವಾಗುತ್ತಾರೆ. ನಮ್ಮ ಶಾಲೆಯಿಂದ ಕಡಿಮೆ ಮಂದಿ ತೇರ್ಗಡೆಯಾದರೆಂದರೆ ಶಿಕ್ಷಕರು ಅಷ್ಟು ಒಳ್ಳೆಯವರಲ್ಲ, ಚೆನ್ನಾಗಿ ಓದಿಸಿಲ್ಲ ಆದ್ದರಿಂದ ಕಡಿಮೆ ತೇರ್ಗಡೆಯಾದರೆಂದು ಹೇಳುತ್ತಾರೆ. ಅದೇರೀತಿ ತಂದೆಗೂ ಸಹ ತಿಳಿದಿದೆ- ಸೇವಾಕೇಂದ್ರಗಳಲ್ಲಿ ಯಾರ್ಯಾರು ಒಳ್ಳೆಯ ಟೀಚರ್ ಆಗಿದ್ದಾರೆ, ಚೆನ್ನಾಗಿ ಓದಿಸುತ್ತಾರೆ. ಯಾರು ಯಾರು ಚೆನ್ನಾಗಿ ಓದಿಸಿ ಕರೆ ತರುತ್ತಾರೆಂದು ಎಲ್ಲವೂ ತಂದೆಗೆ ಗೊತ್ತಾಗುತ್ತದೆ. ತಂದೆಯು ತಿಳಿಸುತ್ತಾರೆ- ಮೋಡಗಳನ್ನು ಕರೆತನ್ನಿ. ಚಿಕ್ಕ ಮಕ್ಕಳನ್ನು ಕರೆತರುತ್ತೀರೆಂದರೆ ಅದರಲ್ಲಿ ಮೋಹವಿರುವುದು. ಒಂಟಿಯಾಗಿ ಹೊರಬರಬೇಕೆಂದರೆ ಬುದ್ಧಿಯು ಬಹಳ ಚೆನ್ನಾಗಿ ತಂದೆಯೊಂದಿಗೆ ತೊಡಗಿರುವವರಾಗಿರಲಿ ಏಕೆಂದರೆ ಮಕ್ಕಳನ್ನಂತೂ ಅಲ್ಲಿಯೂ ನೋಡುತ್ತಿರುತ್ತೀರಿ.

ತಂದೆಯು ತಿಳಿಸುತ್ತಾರೆ - ಈ ಹಳೆಯ ಪ್ರಪಂಚವಂತೂ ಸ್ಮಶಾನವಾಗಲಿದೆ. ಹೊಸ ಮನೆಯು ಕಟ್ಟುವಾಗ ನಮ್ಮ ಹೊಸ ಮನೆಯು ತಯಾರಾಗುತ್ತಿದೆ ಎಂದು ಬುದ್ಧಿಯಲ್ಲಿರುತ್ತದೆ. ಉದ್ಯೋಗ-ವ್ಯವಹಾರಗಳನ್ನಂತೂ ಮಾಡುತ್ತಿರುತ್ತಾರೆ ಆದರೆ ಬುದ್ಧಿಯು ಹೊಸ ಮನೆಯ ಕಡೆ ಇರುತ್ತದೆ. ಸುಮ್ಮನೆ ಕುಳಿತು ಬಿಡುವುದಿಲ್ಲ. ಅದು ಹದ್ದಿನ ಮಾತು, ಇದು ಬೇಹದ್ದಿನ ಮಾತಾಗಿದೆ. ಪ್ರತೀ ಕಾರ್ಯ ಮಾಡುತ್ತಾ ಸ್ಮೃತಿಯಿರಲಿ - ನಾವೀಗ ಮನೆಗೆ ಹೋಗಿ ನಂತರ ನಮ್ಮ ರಾಜಧಾನಿಯಲ್ಲಿ ಬರುತ್ತೇವೆ ಆಗ ಅಪಾರ ಖುಷಿಯಿರುವುದು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮ್ಮ ಮಕ್ಕಳು ಮೊದಲಾದವರ ಸಂಭಾಲನೆಯನ್ನು ಮಾಡಬೇಕಾಗಿದೆ ಆದರೆ ಬುದ್ಧಿಯು ತಂದೆಯ ಕಡೆ ತೊಡಗಿರಲಿ. ನೆನಪು ಮಾಡದಿದ್ದರೆ ಪವಿತ್ರರಾಗಲೂ ಸಾಧ್ಯವಿಲ್ಲ. ನೆನಪಿನಿಂದ ಪವಿತ್ರ, ಜ್ಞಾನದಿಂದ ಸಂಪಾದನೆ. ಇಲ್ಲಂತೂ ಎಲ್ಲರೂ ಪತಿತರಿದ್ದಾರೆ, ಎರಡು ತೀರಗಳಿವೆ. ತಂದೆಗೆ ಅಂಬಿಗನೆಂದು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ನಿಮಗೆ ತಿಳಿದಿದೆ- ತಂದೆಯು ಆ ತೀರಕ್ಕೆ ಕರೆದುಕೊಂಡು ಹೋಗುತ್ತಾರೆ. ಆತ್ಮಕ್ಕೆ ತಿಳಿದಿದೆ - ನಾವೀಗ ತಂದೆಯನ್ನು ನೆನಪು ಮಾಡಿ ಬಹಳ ಸಮೀಪಕ್ಕೆ ಹೋಗುತ್ತಿದ್ದೇವೆ. ಅಂಬಿಗ ಎಂಬ ಹೆಸರನ್ನೂ ಸಹ ಅರ್ಥ ಸಹಿತವಾಗಿ ಇಟ್ಟಿದ್ದೀರಲ್ಲವೆ. ಅಂಬಿಗನೇ ನನ್ನ ದೋಣಿಯನ್ನು ಪಾರು ಮಾಡು ಎಂದು ಹೀಗೆ ಮಹಿಮೆ ಮಾಡುತ್ತಾರೆ. ಸತ್ಯಯುಗದಲ್ಲಿ ಈ ರೀತಿ ಹೇಳುತ್ತಾರೆಯೇ? ಕಲಿಯುಗದಲ್ಲಿ ಕೂಗುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಬುದ್ಧಿಹೀನರಂತೂ ಇಲ್ಲಿ ಬರಬಾರದಾಗಿದೆ. ತಂದೆಯು ಇದನ್ನು ನಿಷೇಧಿಸಿದ್ದಾರೆ. ನಿಶ್ಚಯವಿಲ್ಲದವರನ್ನು ಎಂದೂ ಕರೆತರಬಾರದು. ಅಂತಹವರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಮೊದಲು ಅವರಿಗೆ ಏಳುದಿನಗಳ ಕೋರ್ಸನ್ನು ಕೊಡಿ. ಕೆಲವರಿಗಂತೂ ಎರಡು ದಿನಗಳಲ್ಲಿಯೇ ಬಾಣವು ನಾಟುತ್ತದೆ. ಅವರಿಗೆ ಇಷ್ಟವಾಗಿ ಬಿಟ್ಟರೆ ಮತ್ತೆ ಇದನ್ನು ಬಿಡುವುದಿಲ್ಲ. ನಾವು ಇನ್ನೂ ಏಳು ದಿನಗಳ ಕಾಲ ಕಲಿಯುತ್ತೇವೆಂದು ಹೇಳುತ್ತಾರೆ. ಇವರು ಈ ಕುಲದವರೆಂದು ನಿಮಗೆ ಅರ್ಥವಾಗಿ ಬಿಡುತ್ತದೆ. ತೀಕ್ಷ್ಣ ಬುದ್ಧಿಯವರಾಗಿದ್ದರೆ ಅವರು ಯಾವುದೇ ಮಾತಿನ ಚಿಂತೆ ಮಾಡುವುದಿಲ್ಲ. ಒಂದು ನೌಕರಿಯು ಬಿಟ್ಟು ಹೋದರೆ ಇನ್ನೊಂದು ಸಿಗುವುದು. ಯಾರು ಬಹಳ ಪ್ರಿಯ ಮಕ್ಕಳಿದ್ದಾರೆಯೋ ಅವರ ನೌಕರಿಯು ಎಂದೂ ಬಿಟ್ಟು ಹೋಗುವುದಿಲ್ಲ. ತಾವೇ ಆಶ್ಚರ್ಯಚಕಿತರಾಗುತ್ತಾರೆ. ಬಾಬಾ! ನಮ್ಮ ಪತ್ನಿಯ ಬುದ್ಧಿಯ ಬೀಗವನ್ನು ತೆರೆಯಿರಿ ಎಂದು ಕೆಲವರು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ- ನನಗೆ ಇದನ್ನು ಹೇಳಬೇಡಿ, ನೀವು ಯೋಗಬಲದಲ್ಲಿದ್ದು ಕುಳಿತು ಅವರಿಗೆ ಜ್ಞಾನವನ್ನು ತಿಳಿಸಿ. ತಂದೆಯು ಬುದ್ಧಿಯನ್ನು ತೆರೆಯುವರೇ! ಹಾಗೆ ಮಾಡಿದ್ದಾದರೆ ಎಲ್ಲರೂ ಇದೇ ಕೆಲಸ ಮಾಡುತ್ತಿರುತ್ತಾರೆ. ಯಾವುದಾದರೂ ಒಂದು ಮಾತು ಲಾಭವಾಗಿದ್ದನ್ನು ಕೇಳಿದರೆ ಸಾಕು ಅವರ ಹಿಂದೆ ಬೀಳುತ್ತಾರೆ. ಹೊಸ ಆತ್ಮವು ಬಂದಾಗ ಅವರ ಮಹಿಮೆಯು ಅವಶ್ಯವಾಗಿ ಹೊರಬರುವುದಿಲ್ಲವೇ? ನಂತರ ಅನೇಕರು ಅವರಿಗೆ ಅನುಯಾಯಿಗಳಾಗುತ್ತಾರೆ ಆದ್ದರಿಂದ ಇವೆಲ್ಲಾ ಮಾತುಗಳನ್ನು ನೋಡಲೇಬಾರದು. ನೋಡಿಕೊಳ್ಳುವುದಾದರೆ ನಾನು ಎಷ್ಟು ಓದುತ್ತಿದ್ದೇನೆಂದು ತಮ್ಮನ್ನು ತಾವು ನೋಡಿಕೊಳ್ಳಬೇಕಾಗಿದೆ. ಈ ತಂದೆಯೂ ಸಹ ತನ್ನೊಂದಿಗೆ ತಾನೇ ಚರ್ಚೆ ನಡೆಸುತ್ತಾರೆ. ತಂದೆಯನ್ನು ನೆನಪು ಮಾಡಿ ಎಂದು ಕೇವಲ ಹೇಳುವುದಾದರೆ ಇದನ್ನು ಮನೆಯಲ್ಲಿದ್ದು ಮಾಡಿಕೊಳ್ಳಬಹುದು ಆದರೆ ತಂದೆಯು ಜ್ಞಾನಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಜ್ಞಾನವನ್ನು ಕೊಡುವವರಲ್ಲವೆ. ಇದು ಮುಖ್ಯ ಮಾತಾಗಿದೆ - ಮನ್ಮನಾಭವ. ಜೊತೆಯಲ್ಲಿ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಚಿತ್ರಗಳೂ ಸಹ ಈ ಸಮಯದಲ್ಲಿ ಬಹಳ ಒಳ್ಳೊಳ್ಳೆಯ ಚಿತ್ರಗಳು ಬಂದಿವೆ. ಅದರ ಅರ್ಥವನ್ನೂ ತಂದೆಯು ತಿಳಿಸುತ್ತಾರೆ. ವಿಷ್ಣುವಿನ ನಾಭಿಯಿಂದ ಬ್ರಹ್ಮಾನನ್ನು ತೋರಿಸಿರುವುದೇಕೆ? ಇದು ಸರಿಯೇ, ತಪ್ಪೇ ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಮನೋಹರ ಚಿತ್ರಗಳನ್ನೂ ಸಹ ಬಹಳಷ್ಟು ರಚಿಸುತ್ತಾರಲ್ಲವೆ. ಕೆಲಕೆಲವು ಶಾಸ್ತ್ರಗಳಲ್ಲಿ ಚಕ್ರವನ್ನೂ ತೋರಿಸಿದ್ದಾರೆ ಆದರೆ ಇದರ ಕಾಲಾವಧಿಯನ್ನು ಕೆಲಕೆಲವರು ಕೆಲವೊಂದು ರೀತಿಯಲ್ಲಿ ಬರೆದಿದ್ದಾರೆ, ಅನೇಕ ಮತಗಳಿವೆಯಲ್ಲವೆ. ಶಾಸ್ತ್ರಗಳಲ್ಲಿ ಹದ್ದಿನ ಮಾತುಗಳನ್ನು ಬರೆದಿದ್ದಾರೆ. ತಂದೆಯು ಬೇಹದ್ದಿನ ಮಾತನ್ನು ತಿಳಿಸುತ್ತಾರೆ- ಇಡೀ ಪ್ರಪಂಚದಲ್ಲಿ ರಾವಣರಾಜ್ಯವಿತ್ತು, ನಾವು ಹೇಗೆ ಪತಿತರಾದೆವು ನಂತರ ಹೇಗೆ ಪಾವನರಾಗುತ್ತೇವೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ. ನಂತರ ಕೊನೆಯಲ್ಲಿ ಅನ್ಯ ಧರ್ಮದವರು ಬರುತ್ತಾರೆ. ಬಹಳ ವಿಭಿನ್ನತೆಯಿದೆ. ಒಬ್ಬರು ಇನ್ನೊಬ್ಬರಿಗೆ ಹೋಲುವುದಿಲ್ಲ. ಒಂದೇ ರೂಪದವರು ಇಬ್ಬರಿರಲು ಸಾಧ್ಯವಿಲ್ಲ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದು ಪುನರಾವರ್ತನೆಯಾಗುತ್ತಿರುತ್ತದೆ. ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ- ಸಮಯವು ಇನ್ನೂ ಕಡಿಮೆಯಾಗುತ್ತಾ ಹೋಗುತ್ತದೆ ಅಂದಾಗ ತಮ್ಮ ಪರಿಶೀಲನೆ ಮಾಡಿಕೊಳ್ಳಿ. ನಾವು ಎಷ್ಟು ಖುಷಿಯಲ್ಲಿರುತ್ತೇವೆ? ನಾವು ಯಾವುದೇ ವಿಕರ್ಮವನ್ನು ಮಾಡಬಾರದು. ಬಿರುಗಾಳಿಗಳಂತೂ ಬರುತ್ತವೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಅಂತರ್ಮುಖಿಯಾಗಿ ತಮ್ಮ ಚಾರ್ಟನ್ನು ಇಟ್ಟುಕೊಳ್ಳಿ ಆಗ ನಿಮ್ಮಿಂದಾಗುವ ತಪ್ಪುಗಳನ್ನು ತಿದ್ದುಕೊಳ್ಳಲು ಸಾಧ್ಯ. ಹೀಗೆ ಮಾಡುವುದು ಯೋಗಬಲದಿಂದ ತಮ್ಮನ್ನು ಕ್ಷಮೆ ಮಾಡಿಕೊಂಡ ಹಾಗೆ. ತಂದೆಯು ಕ್ಷಮಿಸುವುದಿಲ್ಲ. ನಾಟಕದಲ್ಲಿ ಕ್ಷಮೆಯ ಶಬ್ಧವೇ ಇಲ್ಲ. ನೀವು ನೆನಪಿನ ಪರಿಶ್ರಮ ಪಡಬೇಕು. ಮನುಷ್ಯರು ಪಾಪಗಳ ಶಿಕ್ಷೆಯನ್ನು ತಾವೇ ಭೋಗಿಸುತ್ತಾರೆ. ಕ್ಷಮೆಯ ಮಾತೇ ಇಲ್ಲ. ತಂದೆಯು ತಿಳಿಸುತ್ತಾರೆ- ಪ್ರತಿಯೊಂದು ಮಾತಿನಲ್ಲಿ ಪರಿಶ್ರಮ ಪಡಿ. ತಂದೆಯು ಆತ್ಮರಿಗೆ ಯುಕ್ತಿಯನ್ನು ತಿಳಿಸುತ್ತಾರೆ. ತಂದೆಯನ್ನು ಹಳೆಯ ರಾವಣನ ದೇಶದಲ್ಲಿ ಬನ್ನಿ, ನಾವು ಪತಿತರನ್ನು ಪಾವನ ಮಾಡಿ ಎಂದು ಕರೆಯುತ್ತಾರೆ ಆದರೆ ಮನುಷ್ಯರು ತಿಳಿದುಕೊಂಡಿಲ್ಲ. ಅವರದು ಆಸುರೀ ಸಂಪ್ರದಾಯವಾಗಿದೆ. ನೀವು ಬ್ರಾಹ್ಮಣ ಸಂಪ್ರದಾಯ, ದೈವೀ ಸಂಪ್ರದಾಯದವರಾಗುತ್ತಿದ್ದೀರಿ. ಮಕ್ಕಳು ಪುರುಷಾರ್ಥವನ್ನೂ ಸಹ ನಂಬರ್ವಾರ್ ಮಾಡುತ್ತಿದ್ದೀರಿ. ಪುರುಷಾರ್ಥದಲ್ಲಿಯೂ ಮಕ್ಕಳು ನಂಬರ್ವಾರ್ ಮಾಡುತ್ತಾರೆ. ಇವರ ಅದೃಷ್ಟದಲ್ಲಿ ಇಷ್ಟೇ ಇದೆ ಎಂದು ಹೇಳಲಾಗುತ್ತದೆ. ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಾರೆ. ಅಂತಹವರು ಜನ್ಮ-ಜನ್ಮಾಂತರ, ಕಲ್ಪ-ಕಲ್ಪಾಂತರ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ತಮಗೆ ತಾವೇ ನಷ್ಟವನ್ನುಂಟು ಮಾಡಿಕೊಳ್ಳಬಾರದು. ಏಕೆಂದರೆ ಈ ಸಮಯದಲ್ಲಿಯೇ ನಿಮ್ಮದು ಜಮಾ ಆಗುತ್ತದೆ ನಂತರ ನಷ್ಟದಲ್ಲಿ ಹೊರಟು ಹೋಗುತ್ತೀರಿ. ರಾವಣ ರಾಜ್ಯದಲ್ಲಿ ಎಷ್ಟೊಂದು ನಷ್ಟವಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅಂತರ್ಮುಖಿಯಾಗಿ ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು, ಏನೆಲ್ಲಾ ತಪ್ಪುಗಳಾಗುತ್ತವೆಯೋ ಅದನ್ನು ಹೃದಯಪೂರ್ವಕವಾಗಿ ಅರ್ಥ ಮಾಡಿಕೊಂಡು ಯೋಗಬಲದಿಂದ ಕ್ಷಮೆ ಮಾಡಿಕೊಳ್ಳಬೇಕಾಗಿದೆ. ತಮ್ಮ ಪರಿಶ್ರಮ ಪಡಬೇಕಾಗಿದೆ.

2. ತಂದೆಯ ಯಾವ ಸಲಹೆ ಸಿಗುತ್ತದೆಯೋ ಅದರಂತೆಯೇ ಪೂರ್ಣ ನಡೆದು ತಮ್ಮ ಮೇಲೆ ತಾವೇ ದಯೆ ತೋರಿಸಿಕೊಳ್ಳಬೇಕಾಗಿದೆ. ಸಾಕ್ಷಿಯಾಗಿ ತನ್ನ ಮತ್ತು ಅನ್ಯರ ಪುರುಷಾರ್ಥವನ್ನು ನೋಡಬೇಕಾಗಿದೆ. ಎಂದೂ ತಮಗೆ ತಾವು ನಷ್ಟ ಮಾಡಿಕೊಳ್ಳಬಾರದು.

ವರದಾನ:
ವಿಶ್ವ ಕಲ್ಯಾಣದ ಭಾವನೆಯ ಮೂಲಕ ಪ್ರತಿಯೊಂದು ಆತ್ಮನ ಸುರಕ್ಷತೆಯ ಯೋಜನೆಯನ್ನು ಮಾಡುವಂತಹ ಸತ್ಯ ದಯಾಹೃದಯಿ ಭವ.

ವರ್ತಮಾನ ಸಮಯದಲ್ಲಿ ಕೆಲವು ಆತ್ಮರು ತಮಗೆ ತಾವೇ ಸ್ವಯಂನ ಅಕಲ್ಯಾಣಕ್ಕೆ ನಿಮಿತ್ತರಾಗಿದ್ದಾರೆ, ಅವರಿಗಾಗಿ ದಯಾಹೃದಯಿಗಳಾಗಿ ಏನಾದರೂ ಯೋಜನೆ ಮಾಡಿರಿ. ಯಾವುದೇ ಆತ್ಮನ ಪಾತ್ರವನ್ನು ನೋಡುತ್ತಾ ಸ್ವಯಂ ತಾವು ಏರುಪೇರಿನಲ್ಲಿ ಬರಬಾರದು ಆದರೆ ಅವರ ಸುರಕ್ಷತೆಯ ಸಾಧನವನ್ನು ಯೋಚಿಸಿರಿ, ಈ ರೀತಿಯಲ್ಲ, ಇದಂತು ಆಗುತ್ತಿರುತ್ತದೆ, ವೃಕ್ಷವಂತು ಬಿದ್ದು ಹೋಗಲೇಬೇಕು. ಅಲ್ಲ. ಬಂದಿರುವ ವಿಘ್ನಗಳನ್ನು ಸಮಾಪ್ತಿ ಮಾಡಿರಿ. ವಿಶ್ವ ಕಲ್ಯಾಣಕಾರಿ ಅಥವಾ ವಿಘ್ನ ವಿನಾಶಕನ ಟೈಟಲ್ ಏನಿದೆ- ಅದರನುಸಾರವಾಗಿ ಸಂಕಲ್ಪ, ವಾಣಿ ಮತ್ತು ಕರ್ಮದಲ್ಲಿ ದಯಾಹೃದಯಿಯಾಗಿ ವಾಯುಮಂಡಲವನ್ನು ಪರಿವರ್ತನೆ ಮಾಡುವುದರಲ್ಲಿ ಸಹಯೋಗಿಯಾಗಿರಿ.

ಸ್ಲೋಗನ್:
ಅವರೇ ಕರ್ಮಯೋಗಿಯಾಗಲು ಸಾಧ್ಯ, ಯಾರ ಬುದ್ಧಿಯ ಮೇಲೆ ಗಮನದ ಭದ್ರತೆಯನ್ನಿಡುತ್ತಾರೆ.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ.

ಅಂತ್ಯದಲ್ಲಿ ಫೈನಲ್ ಪೇಪರ್ನ ಕ್ವೆಶ್ಚನ್ ಆಗಿರುವುದು - ಸೆಕೆಂಡ್ನಲ್ಲಿ ಫುಲ್ ಸ್ಟಾಪ್, ಇದರಲ್ಲಿಯೇ ನಂಬರ್ ಸಿಗುವುದು. ಸೆಕೆಂಡ್ ಗಿಂತ ಜಾಸ್ತಿ ಆಯ್ತು ಎಂದರೆ ಫೇಲ್ ಆಗಿ ಬಿಡುವಿರಿ."ಒಬ್ಬ ತಂದೆ ಹಾಗೂ ನಾನು" ಮೂರನೆಯವರ ಯಾವುದೇ ಮಾತು ಬರಬಾರದು. ಹೀಗಲ್ಲ ಇದನ್ನು ಮಾಡಿ ಮುಗಿಸುತ್ತೇನೆ, ಇದನ್ನು ನೋಡುತ್ತೇನೆ.. ಹೀಗಾಯ್ತು, ಇದು ಆಗಲಿಲ್ಲ, ಹೀಗೆ ಏಕೆ ಆಯಿತು, ಇದು ಏನು ಆಯಿತು- ಇಂತಹ ಯಾವುದೇ ಸಂಕಲ್ಪ ಬಂದಿತು ಎಂದರೆ ಅಂತಿಮ ಪೇಪರ್ನಲ್ಲಿ ಪಾಸ್ ಆಗಲು ಸಾಧ್ಯವಿಲ್ಲ.