24.08.25 Avyakt Bapdada
Kannada
Murli 30.11.2006 Om Shanti Madhuban
“ಜ್ವಾಲಾಮುಖಿ ತಪಸ್ಸಿನ
ಮೂಲಕ ‘ನಾನು’ ಎಂಬ ಬಾಲವನ್ನು ಸುಟ್ಟು ಬಾಪ್ದಾದಾರವರ ಸಮಾನರಾಗಿ ಆಗ ಸಮಾಪ್ತಿಯು ಸಮೀಪ ಬರುವುದು”.
ಇಂದು ಅಕುಟ ಅವಿನಾಶಿ
ಖಜಾನೆಗಳ ಮಾಲೀಕ ಬಾಪ್ದಾದಾ ತನ್ನ ನಾಲ್ಕಾರು ಕಡೆಯ ಸಂಪನ್ನ ಮಕ್ಕಳ ಜಮಾದ ಖಾತೆಯನ್ನು
ನೋಡುತ್ತಿದ್ದಾರೆ. ಮೂರು ಪ್ರಕಾರದ ಖಾತೆಯನ್ನು ನೋಡುತ್ತಿದ್ದಾರೆ - ಒಂದನೆಯದು ತನ್ನ ಪುರುಷಾರ್ಥದ
ಮೂಲಕ ಶ್ರೇಷ್ಠ ಪ್ರಾಲಬ್ಧದ ಜಮಾದ ಖಾತೆ, ಎರಡನೆಯದು ಸದಾ ಸಂತುಷ್ಟವಾಗಿರುವುದು ಮತ್ತು ಸಂತುಷ್ಟ
ಪಡಿಸುವುದು- ಈ ಸಂತುಷ್ಟತೆಯ ಮೂಲಕ ಆಶೀರ್ವಾದದ ಖಾತೆ, ಮೂರನೆಯದು ಮನಸ್ಸಾ-ವಾಚಾ-ಕರ್ಮಣಾ
ಸಂಬಂಧ-ಸಂಪರ್ಕದ ಮೂಲಕ ಬೇಹದ್ದಿನ ನಿಸ್ವಾರ್ಥ ಸೇವೆಯ ಮೂಲಕ ಪುಣ್ಯದ ಖಾತೆ. ತಾವೆಲ್ಲರೂ ತಮ್ಮ ಈ
ಮೂರು ಖಾತೆಗಳನ್ನು ಅವಶ್ಯವಾಗಿ ಪರಿಶೀಲನೆ ಮಾಡಿಕೊಳ್ಳುತ್ತೀರಿ. ಈ ಮೂರೂ ಖಾತೆಗಳ ಜಮಾ ಎಷ್ಟಿದೆ,
ಇದೆಯೇ ಅಥವಾ ಇಲ್ಲವೆ, ಅದರ ಗುರುತಾಗಿದೆ - ಸದಾ ಸರ್ವರ ಪ್ರತಿ ಸ್ವಯಂನ ಪ್ರತಿ ಸಂತುಷ್ಟತಾ
ಸ್ವರೂಪ, ಸರ್ವರಪ್ರ ತಿ ಶುಭ ಭಾವನೆ-ಶುಭ ಕಾಮನೆ ಮತ್ತು ಸದಾ ತನ್ನನ್ನು ಪ್ರಸನ್ನಚಿತ್ತ,
ಭಾಗ್ಯಶಾಲಿ ಸ್ಥಿತಿಯಲ್ಲಿ ಅನುಭವ ಮಾಡುವುದು. ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಎರಡೂ ಖಾತೆಗಳ
ಚಿಹ್ನೆಗಳು ಸ್ವಯಂನಲ್ಲಿ ಅನುಭವವಾಗುತ್ತದೆಯೇ? ಈ ಸರ್ವ ಖಜಾನೆಗಳನ್ನು ಜಮಾ ಮಾಡಿಕೊಳ್ಳುವ ಚಾಬಿ (ಬೀಗದ
ಕೈ) ಆಗಿದೆ - ನಿಮಿತ್ತ ಭಾವ, ನಿರ್ಮಾಣ ಭಾವ, ನಿಸ್ವಾರ್ಥ ಭಾವ. ಪರಿಶೀಲನೆ ಮಾಡಿಕೊಳ್ಳುತ್ತಾ
ಹೋಗಿರಿ ಮತ್ತು ಈ ಚಾಬಿಯ ನಂಬರ್ ಗೊತ್ತಿದೆ! ಚಾಬಿಯ ನಂಬರ್ ಆಗಿದೆ – ಮೂರು ಬಿಂದು, ತ್ರಿ ಡಾಟ್.
ಒಂದು ಆತ್ಮ ಬಿಂದು, ಎರಡನೆಯದು ತಂದೆ ಬಿಂದು, ಮೂರನೆಯದು ಡ್ರಾಮಾದ ಫುಲ್ಸ್ಟಾಪ್ ಬಿಂದು.
ತಮ್ಮೆಲ್ಲರ ಬಳಿ ಚಾಬಿಯಂತೂ ಇದೆಯಲ್ಲವೆ. ಖಜಾನೆಯನ್ನು ತೆರೆದು ನೋಡುತ್ತಾ ಇರುತ್ತೀರಲ್ಲವೆ!
ಇವೆಲ್ಲಾ ಖಜಾನೆಗಳ ವೃದ್ಧಿಗೆ ವಿಧಿಯಾಗಿದೆ - ಧೃಡತೆ. ಧೃಡತೆಯಿದ್ದರೆ ಯಾವುದೇ ಕಾರ್ಯದಲ್ಲಿ ಇದು
ಆಗುವುದೋ, ಇಲ್ಲವೋ ಎಂಬುದು ಸಂಕಲ್ಪ ನಡೆಯುವುದಿಲ್ಲ. ಧೃಡತೆಯ ಸ್ಥಿತಿಯಾಗಿದೆ – ಆಗಿ ಹೋಗಿದೆ,
ಮಾಡಲ್ಪಟ್ಟಿದೆ. ಆಗುವುದೋ, ಜಮಾ ಆಗುವುದೋ ಇಲ್ಲವೋ, ಮಾಡುವುದಂತು ಮಾಡುತ್ತೇವೆ, ಆಗುವುದಂತೂ
ಆಗಬೇಕು- ಈ ಅಂತೂ, ಅಂತೂ ಇರುವುದಿಲ್ಲ. ಧೃಡತೆಯುಳ್ಳವರು ನಿಶ್ಚಯಬುದ್ಧಿ, ನಿಶ್ಚಿಂತ ಮತ್ತು
ನಿಶ್ಚಿತ ಅನುಭವ ಮಾಡುವರು.
ಬಾಪ್ದಾದಾ ಮೊದಲೂ
ತಿಳಿಸಿದ್ದೇವೆ - ಒಂದುವೇಳೆ ಹೆಚ್ಚು-ಹೆಚ್ಚು ಸರ್ವ ಖಜಾನೆಗಳ ಖಾತೆಯನ್ನು ಜಮಾ
ಮಾಡಿಕೊಳ್ಳಬೇಕೆಂದರೆ ಮನ್ಮನಾಭವದ ಮಂತ್ರವನ್ನು ಯಂತ್ರ ಮಾಡಿಕೊಳ್ಳಿ. ಇದರಿಂದ ತಂದೆಯ ಜೊತೆ ಮತ್ತು
ಬಳಿಯಿರುವ ಸ್ವತಹ ಅನುಭವವಾಗುವುದು. ಪಾಸ್ (ಹತ್ತಿರ) ಇರಲೇಬೇಕಾಗಿದೆ. ಮೂರು ರೂಪದ ಪಾಸ್ಗಳಿವೆ-
ಒಂದನೆಯದು ಪಾಸ್ (ತಂದೆಯ ಸಮೀಪ) ಇರುವುದು, ಎರಡನೆಯದು ಏನು ಕಳೆಯಿತೋ ಅದು ಪಾಸ್ ಆಯಿತು (ಕಳೆದು
ಹೋಯಿತು) ಮತ್ತು ಮೂರನೆಯದು ಪಾಸ್-ವಿತ್-ಆನರ್(ಗೌರವಾನ್ವಿತ ತೇರ್ಗಡೆ) ಆಗುವುದು. ಒಂದುವೇಳೆ ಈ
ಮೂರು ಪಾಸ್ಗಳಿದ್ದರೆ ತಮ್ಮೆಲ್ಲರಿಗೆ ರಾಜ್ಯಾಧಿಕಾರಿಗಳಾಗುವ ಫುಲ್ಪಾಸ್ ಇದೆ ಅಂದಮೇಲೆ ಫುಲ್ಪಾಸ್
ತೆಗೆದುಕೊಂಡಿದ್ದೀರೋ ಅಥವಾ ತೆಗೆದುಕೊಳ್ಳಬೇಕಾಗಿದೆಯೋ? ಯಾರು ಫುಲ್ಪಾಸ್ ತೆಗೆದುಕೊಂಡಿದ್ದೀರೋ
ಅವರು ಕೈಯೆತ್ತಿರಿ. ಫುಲ್ಪಾಸ್ ತೆಗೆದುಕೊಳ್ಳಬೇಕು ಅಲ್ಲ, ತೆಗೆದುಕೊಂಡಿದ್ದೀರಾ? ಮೊದಲ
ಸಾಲಿನಲ್ಲಿರುವವರು ಕೈಯೆತ್ತುತ್ತಿಲ್ಲ. ತಾವು ಈಗಿನ್ನೂ ತೆಗೆದುಕೊಳ್ಳಬೇಕಾಗಿದೆಯೇ? ಇನ್ನೂ ನಾವು
ಸಂಪೂರ್ಣರಾಗಿಲ್ಲ ಆದ್ದರಿಂದ ಎಂದು ಯೋಚಿಸುತ್ತೀರಾ, ಆದರೆ ನಿಶ್ಚಯಬುದ್ಧಿ ವಿಜಯಿಗಳಾಗಿ
ಬಿಟ್ಟಿದ್ದೀರೋ ಅಥವಾ ಆಗಬೇಕಾಗಿದೆಯೋ? ಈಗಂತೂ ಸಮಯದ ಕೂಗು, ಭಕ್ತರ ಕೂಗು ಏನೆಂದು ಕೇಳಿಸುತ್ತಿದೆ?
ಈಗೀಗ ಸಂಪನ್ನ ಮತ್ತು ಸಮಾನರಾಗಲೇಬೇಕಾಗಿದೆ. ಆಗುತ್ತೇವೆ, ಯೋಚಿಸುತ್ತೇವೆ, ಮಾಡುತ್ತೇವೆ.... ಎಂದು
ಆಲೋಚಿಸುತ್ತೀರಾ? ಈಗ ಸಮಯದನುಸಾರ ಪ್ರತೀಸಮಯ ಎವರೆಡಿಯ ಪಾಠವು ಪಕ್ಕಾ ಇರಲೇಬೇಕಾಗಿದೆ. ನನ್ನ ಬಾಬಾ
ಎಂದು ಹೇಳಿದಿರಿ, ಪ್ರಿಯಬಾಬಾ ಮಧುರಬಾಬಾ ಎಂದು ಒಪ್ಪಿಕೊಂಡಿರಿ ಅಂದಮೇಲೆ ಯಾರು ಪ್ರಿಯರಾಗಿರುವರೋ
ಅವರ ಸಮಾನರಾಗುವುದು ಕಷ್ಟವೆನಿಸುವುದಿಲ್ಲ.
ಬಾಪ್ದಾದಾ ನೋಡಿದ್ದೇವೆ
- ಸಮಯ ಪ್ರತಿಸಮಯ ಸಮಾನರಾಗುವುದರಲ್ಲಿ ಯಾವುದು ವಿಘ್ನವಾಗುತ್ತದೆಯೋ ಅದು ಎಲ್ಲರ ಬಳಿ ಪ್ರಸಿದ್ಧ
ಶಬ್ಧವಾಗಿದೆ, ಅದನ್ನು ಎಲ್ಲರೂ ತಿಳಿದುಕೊಂಡಿದ್ದೀರಿ, ಅನುಭವಿಗಳೂ ಆಗಿದ್ದೀರಿ. ಆ ಶಬ್ಧವಾಗಿದೆ-
“ನಾನು” ಆದ್ದರಿಂದ ಬಾಪ್ದಾದಾ ಮೊದಲೂ ಹೇಳಿದ್ದೇವೆ - ಯಾವಾಗ ನಾನು ಶಬ್ಧವನ್ನು ಹೇಳುತ್ತೀರೋ,
ಕೇವಲ ನಾನು ಎಂದು ಹೇಳಬೇಡಿ, ನಾನು ಆತ್ಮ ಎಂದು ಜೋಡಿಸಿ ಹೇಳಿರಿ ಏಕೆಂದರೆ ದೇಹಾಭಿಮಾನದ ನಾನು
ಎಂಬುದು ಕೆಲವೊಮ್ಮೆ ಅಭಿಮಾನವನ್ನು ತರುತ್ತದೆ, ಆತ್ಮಾಭಿಮಾನದ ನಾನು ಅಲ್ಲ. ಈ ದೇಹಾಭಿಮಾನದ ನಾನು
ಕೆಲವೊಮ್ಮೆ ಅಭಿಮಾನವನ್ನು ತರುತ್ತದೆ, ಕೆಲವೊಮ್ಮೆ ಅಪಮಾನವನ್ನೂ ತರುತ್ತದೆ. ಇನ್ನೂ ಕೆಲವೊಮ್ಮೆ
ಹೃದಯ ವಿಧೀರ್ಣರನ್ನಾಗಿಯೂ ಮಾಡುತ್ತದೆ ಆದ್ದರಿಂದ ಈ ದೇಹಾಭಿಮಾನದ ನಾನು ಎಂಬುದನ್ನು
ಸ್ವಪ್ನದಲ್ಲಿಯೂ ಬರಲು ಬಿಡಬೇಡಿ.
ಬಾಪ್ದಾದಾ ನೋಡಿದ್ದಾರೆ,
ಸ್ನೇಹದ ಸಬ್ಜೆಕ್ಟ್ನಲ್ಲಿ ಮೆಜಾರಿಟಿ ಪಾಸ್ ಆಗಿದ್ದಾರೆ. ತಮ್ಮೆಲ್ಲರನ್ನು ಇಲ್ಲಿಗೆ ಯಾವುದು
ಕರೆತಂದಿತು? ಎಲ್ಲರೂ ಭಲೆ ವಿಮಾನದಲ್ಲಿ ಬಂದಿರಬಹುದು, ರೈಲಿನಲ್ಲಿ, ಬಸ್ಸಿನಲ್ಲಿ ಬಂದಿರಬಹುದು,
ಆದರೆ ವಾಸ್ತವದಲ್ಲಿ ಬಾಪ್ದಾದಾರವರ ಸ್ನೇಹದ ವಿಮಾನದಲ್ಲಿ ಇಲ್ಲಿಗೆ ತಲುಪಿದ್ದೀರಿ, ಅಂದಮೇಲೆ ಹೇಗೆ
ಸ್ನೇಹದ ಸಬ್ಜೆಕ್ಟ್ನಲ್ಲಿ ಪಾಸ್ ಆಗಿದ್ದೀರಿ, ಹಾಗೆಯೇ ಈಗ ಕಮಾಲ್ ಮಾಡಿರಿ- ಸಮಾನರಾಗುವ
ಸಬ್ಜೆಕ್ಟ್ನಲ್ಲಿಯೂ ಪಾಸ್-ವಿತ್-ಆನರ್ ಆಗಿ ತೋರಿಸಿರಿ. ಇದು ಇಷ್ಟವಿದೆಯೇ? ಸಮಾನರಾಗುವುದು
ಇಷ್ಟವಿದೆಯೇ? ಇಷ್ಟವಿದೆ ಆದರೆ ಆಗುವುದರಲ್ಲಿ ಸ್ವಲ್ಪ ಕಷ್ಟವಿದೆ! ಸಮಾನರಾಗಿ ಬಿಟ್ಟರೆ ಸಮಾಪ್ತಿಯು
ಸನ್ಮುಖ ಬರುವುದು ಆದರೆ ಕೆಲಕೆಲವೊಮ್ಮೆ ಹೃದಯದಲ್ಲಿ ಆಗಲೇಬೇಕೆಂದು ಯಾವ ಪ್ರತಿಜ್ಞೆ ಮಾಡುತ್ತೀರೋ
ಆ ಪ್ರತಿಜ್ಞೆಯು ಸಡಿಲವಾಗಿ ಬಿಡುತ್ತದೆ ಮತ್ತು ಸಮಸ್ಯೆಯು ಪ್ರಬಲವಾಗಿ ಬಿಡುತ್ತದೆ. ಎಲ್ಲರೂ
ಬಯಸುತ್ತೀರಿ ಆದರೆ ಬಯಸುವುದೇ ಒಂದು, ಕರ್ಮದಲ್ಲಿ ಇನ್ನೊಂದು ಆಗಿ ಬಿಡುತ್ತದೆ ಏಕೆಂದರೆ ಧೃಡತೆಯ
ಕೊರತೆಯಾಗಿ ಬಿಡುತ್ತದೆ. ಸಮಾನತೆ ದೂರವಾಗುತ್ತದೆ, ಸಮಸ್ಯೆಯು ಪ್ರಬಲವಾಗಿ ಬಿಡುತ್ತದೆ ಅಂದಮೇಲೆ
ಈಗ ಏನು ಮಾಡುತ್ತೀರಿ?
ಬಾಪ್ದಾದಾರವರಿಗೆ ಒಂದು
ಮಾತಿನ ಮೇಲೆ ಬಹಳ ನಗುಬರುತ್ತಿದೆ- ಅದು ಯಾವ ಮಾತು? ಮಹಾವೀರರಾಗಿದ್ದಾರೆ ಆದರೆ ಹೇಗೆ
ಶಾಸ್ತ್ರಗಳಲ್ಲಿ ಹನುಮಂತನನ್ನು ಮಹಾವೀರನೆಂದೂ ಹೇಳುತ್ತಾರೆ ಆದರೆ ಬಾಲವನ್ನೂ ತೋರಿಸಿದ್ದಾರೆ. ಇದು
ನಾನು ಎಂಬ ಬಾಲವನ್ನು ತೋರಿಸಿದ್ದಾರೆ, ಎಲ್ಲಿಯವರೆಗೆ ಮಹಾವೀರರು, ಈ ಬಾಲವನ್ನು ಸುಡುವುದಿಲ್ಲವೋ
ಅಲ್ಲಿಯವರೆಗೆ ಲಂಕೆ ಅರ್ಥಾತ್ ಹಳೆಯ ಪ್ರಪಂಚವೂ ಸಮಾಪ್ತಿಯಾಗುವುದಿಲ್ಲ ಆದ್ದರಿಂದ ಈಗ `ನಾನು-ನಾನು’
ಎಂಬ ಬಾಲವನ್ನು ಸುಟ್ಟು ಹಾಕಿರಿ ಆಗ ಸಮಾಪ್ತಿಯು ಸಮೀಪ ಬರುವುದು. ಸುಡುವುದಕ್ಕಾಗಿ ಜ್ವಾಲಾಮುಖಿ
ತಪಸ್ಸು ಬೇಕಾಗಿದೆ, ಸಾಧಾರಣ ನೆನಪಲ್ಲ. ಜ್ವಾಲಾಮುಖಿ ನೆನಪಿನ ಅವಶ್ಯಕತೆಯಿದೆ ಆದ್ದರಿಂದ
ಜ್ವಾಲಾದೇವಿಯ ನೆನಪಾರ್ಥವಿದೆ. ಶಕ್ತಿಶಾಲಿ ನೆನಪಿರಲಿ. ಅಂದಾಗ ಏನು ಮಾಡಬೇಕೆಂದು ಕೇಳಿದಿರಾ? ಈಗ
ಮನಸ್ಸಿನಲ್ಲಿ ಇದೇ ಗುಂಗು ಇರಲಿ- ಸಮಾನರಾಗಲೇಬೇಕಾಗಿದೆ, ಸಮಾಪ್ತಿಯನ್ನು ಸಮೀಪ ತರಲೇಬೇಕಾಗಿದೆ.
ತಾವು ಹೇಳುತ್ತೀರಿ, ಸಂಗಮಯುಗವಂತೂ ಬಹಳ ಒಳ್ಳೆಯದಲ್ಲವೆ ಅಂದಮೇಲೆ ಏಕೆ ಸಮಾಪ್ತಿಯಾಗಬೇಕು ಎಂದು.
ಆದರೆ ತಾವು ತಂದೆಯ ಸಮಾನ ದಯಾಳು, ಕೃಪಾಳು, ದಯಾಹೃದಯಿ ಆತ್ಮರಾಗಿದ್ದೀರಿ ಆದ್ದರಿಂದ ಇಂದಿನ ದುಃಖಿ
ಆತ್ಮರು ಮತ್ತು ಭಕ್ತಾತ್ಮರ ಮೇಲೆ ಹೇ! ದಯಾಹೃದಯಿ ಆತ್ಮರೇ ದಯೆ ತೋರಿಸಿರಿ, ಮರ್ಸಿಫುಲ್ ಆಗಿರಿ.
ದುಃಖವು ಹೆಚ್ಚುತ್ತಾ ಹೋಗುತ್ತಿದೆ, ದುಃಖಿಗಳ ಮೇಲೆ ದಯೆ ತೋರಿಸಿ, ಅವರನ್ನು ಮುಕ್ತಿಧಾಮದಲ್ಲಾದರೂ
ಕಳುಹಿಸಿ. ಕೇವಲ ವಾಣಿಯ ಸೇವೆಯಲ್ಲ ಆದರೆ ಈಗ ಮನಸ್ಸಾ ಮತ್ತು ವಾಣಿ ಸೇವೆಯು ಜೊತೆ ಜೊತೆ ಇರಲಿ.
ಇದರ ಅವಶ್ಯಕತೆಯಿದೆ. ಒಂದೇ ಸಮಯದಲ್ಲಿ ಎರಡೂ ಸೇವೆಗಳು ಒಟ್ಟಿಗೆ ನಡೆಯಲಿ. ಕೇವಲ ಸೇವೆಯ ಅವಕಾಶ
ಸಿಗಲಿ ಎಂದು ಆಲೋಚಿಸಬೇಡಿ. ನಡೆಯುತ್ತಾ-ತಿರುಗಾಡುತ್ತಾ ತನ್ನ ಚಲನೆ ಮತ್ತು ಚಹರೆಯ ಮೂಲಕ ತಂದೆಯ
ಪರಿಚಯ ಕೊಡುತ್ತಾ ಹೋಗಿ. ತಮ್ಮ ಚಹರೆಯು ತಂದೆಯ ಪರಿಚಯ ನೀಡಲಿ. ತಮ್ಮ ಚಲನೆಯು ತಂದೆಯನ್ನು
ಪ್ರತ್ಯಕ್ಷ ಮಾಡುತ್ತಾ ಹೋಗಲಿ. ಈಗ ಇಂತಹ ಸದಾ ಸೇವಾಧಾರಿಗಳಾಗಿರಿ. ಒಳ್ಳೆಯದು.
ಬಾಪ್ದಾದಾರವರ ಮುಂದೆ
ಸ್ಥೂಲದಲ್ಲಂತೂ ತಾವೆಲ್ಲರೂ ಕುಳಿತಿದ್ದೀರಿ ಆದರೆ ಸೂಕ್ಷ್ಮ ಸ್ವರೂಪದಿಂದ ನಾಲ್ಕಾರು ಕಡೆಯ ಮಕ್ಕಳು
ಹೃದಯದಲ್ಲಿದ್ದಾರೆ. ನೋಡುತ್ತಿದ್ದಾರೆ, ಕೇಳುತ್ತಲೂ ಇದ್ದಾರೆ. ದೇಶ-ವಿದೇಶದ ಅನೇಕ ಮಕ್ಕಳು ಈ-ಮೇಲ್ನ
ಮೂಲಕ, ಪತ್ರಗಳ ಮೂಲಕ, ಸಂದೇಶದ ಮೂಲಕ ನೆನಪು-ಪ್ರೀತಿಯನ್ನು ಕಳುಹಿಸಿದ್ದಾರೆ. ಎಲ್ಲರ ಹೆಸರು ಸಹಿತ
ನೆನಪುಗಳು ಬಾಪ್ದಾದಾರವರಿಗೆ ತಲುಪಿದೆ ಮತ್ತು ಬಾಪ್ದಾದಾ ಎಲ್ಲಾ ಮಕ್ಕಳನ್ನು ಸನ್ಮುಖದಲ್ಲಿ
ನೋಡುತ್ತಾ ಹೃದಯದಲ್ಲಿ ಇದೇ ಗೀತೆಯನ್ನು ಹಾಡುತ್ತಿದ್ದಾರೆ - ವಾಹ್ ಮಕ್ಕಳೇ ವಾಹ್!
ಪ್ರತಿಯೊಬ್ಬರಿಗೆ ಈ ಸಮಯದಲ್ಲಿ ಇಮರ್ಜ್ ರೂಪದಲ್ಲಿ ನೆನಪಿರುತ್ತದೆ. ಎಲ್ಲರೂ ಸಂದೇಶಿಗೆ ಇಂತಹವರು
ನೆನಪು ಕಳುಹಿಸಿದ್ದಾರೆ, ಇಂತಹವರು ನೆನಪು ಕಳುಹಿಸಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳುತ್ತಾರೆ.
ಅದಕ್ಕೆ ತಂದೆಯು ತಿಳಿಸುತ್ತಾರೆ, ತಂದೆಯ ಬಳಿಯಂತೂ ಯಾವಾಗ ಸಂಕಲ್ಪ ಮಾಡುತ್ತೀರೋ, ಸಾಧನಗಳ
ಮೂಲಕವಾದರೂ ಸಂದೇಶವು ತಡವಾಗಿ ತಲುಪುತ್ತದೆ ಆದರೆ ಸ್ನೇಹದ ಸಂಕಲ್ಪವು ಸಾಧನಕ್ಕಿಂತ ಮೊದಲೇ ತಲುಪಿ
ಬಿಡುತ್ತದೆ. ಸರಿಯಲ್ಲವೆ! ಕೆಲವರಿಗೆ ನೆನಪು ಸಿಕ್ಕಿದೆಯಲ್ಲವೆ! ಒಳ್ಳೆಯದು.
ಯಾರು ಮೊದಲ ಬಾರಿ
ಬಂದಿದ್ದೀರೋ ಅವರು ಕೈಯೆತ್ತಿರಿ. ಸೇವೆಯಲ್ಲಿಯೂ ಮೊದಲ ಬಾರಿ ಬಂದಿದ್ದಾರೆ. ಒಳ್ಳೆಯದು - ಎಲ್ಲರಿಗೆ
ಬಾಪ್ದಾದಾ ಹೇಳುತ್ತೇವೆ, ಭಲೆ ಬನ್ನಿರಿ. ತಮಗೆ ಬರುವ ಅವಕಾಶವಿದೆ. ಒಳ್ಳೆಯದು - ಈಗ ಹೇಳಿರಿ.
ಇಂದೋರ್ ಜೋನ್ (ಆರತಿ
ಸಹೋದರಿ)ನ ಸೇವಾಧಾರಿಗಳು ಬಂದಿದ್ದಾರೆ:-
(ಎಲ್ಲರ ಕೈಯಲ್ಲಿ ನನ್ನ ಬಾಬಾ ಎಂದು ಹೃದಯದ ಆಕಾರದಲ್ಲಿ ಚಿಹ್ನೆಯಿದೆ) ಕೈಗಳನ್ನಂತೂ ಬಹಳ ಚೆನ್ನಾಗಿ
ಅಲುಗಾಡಿಸುತ್ತಿದ್ದೀರಿ ಆದರೆ ಹೃದಯವನ್ನೂ ಅಲುಗಾಡಿಸಿರಿ. ಕೇವಲ ಸದಾ ನೆನಪಿಟ್ಟುಕೊಳ್ಳಿ, ನನ್ನ (ನನ್ನ
ಬಾಬಾ)ವರು ಎಂಬುದನ್ನು ಮರೆಯಬೇಡಿ. ಒಳ್ಳೆಯ ಅವಕಾಶವನ್ನು ತೆಗೆದುಕೊಂಡಿದ್ದೀರಿ. ಬಾಪ್ದಾದಾ ಸದಾ
ಹೇಳುತ್ತೇವೆ, ಸಾಹಸವನ್ನಿಡುವವರಿಗೆ ಬಾಪ್ದಾದಾ ಪದುಮದಷ್ಟು ಸಹಯೋಗವನ್ನು ಕೊಡುತ್ತೇವೆ ಅಂದಾಗ
ಸಾಹಸವನ್ನಿಟ್ಟಿದ್ದೀರಲ್ಲವೆ. ಚೆನ್ನಾಗಿ ಮಾಡಿದ್ದೀರಿ. ಇಂದೋರ್ ಜೋನ್ ಆಗಿದೆ, ಚೆನ್ನಾಗಿದೆ.
ಇಂದೋರ್ ಜೋನ್ ಸಾಕಾರ ತಂದೆಯ ಕೊನೆಯ ಸ್ಮೃತಿಯ ಸ್ಥಾನವಾಗಿದೆ. ಒಳ್ಳೆಯದು - ಎಲ್ಲರೂ ಬಹಳ ಖುಷಿ
ಪಡುತ್ತಿದ್ದೀರಲ್ಲವೆ! ಗೋಲ್ಡನ್ ಲಾಟರಿ ಸಿಕ್ಕಿದೆ, ಜೋನಿನ ಸೇವೆ ಸಿಗುವುದರಿಂದ ಎಲ್ಲಾ
ಸೇವಾಧಾರಿಗಳಿಗೆ ಅವಕಾಶ ಸಿಕ್ಕಿ ಬಿಡುತ್ತದೆ ಮತ್ತು ವಾಸ್ತವದಲ್ಲಿ ಇಷ್ಟು ಮಂದಿ ಮಾತ್ರ ಬನ್ನಿರಿ
ಎಂದು ಸಂಖ್ಯೆ ಕೊಡಲಾಗುತ್ತದೆ. ಆದರೆ ಜೋನಿನ ಸೇವೆಯಲ್ಲಿ ನೋಡಿ, ಈಗ ಎಷ್ಟೊಂದು ಮಂದಿ ಬಂದಿದ್ದೀರಿ.
ಇದೂ ಸಹ ಜೋನಿಗೆ ಒಳ್ಳೆಯ ಅವಕಾಶವಿದೆಯಲ್ಲವೆ. ಎಷ್ಟು ಮಂದಿಯನ್ನಾದರೂ ಕರೆ ತನ್ನಿರಿ. ಸ್ವಲ್ಪ
ಸಮಯದಲ್ಲಿಯೇ ತಮ್ಮೆಲ್ಲರದು ಎಷ್ಟು ದೊಡ್ಡ ಪುಣ್ಯದ ಖಾತೆಯು ಜಮಾ ಆಯಿತು. ಯಜ್ಞ ಸೇವೆಯನ್ನೂ
ಹೃದಯಪೂರ್ವಕವಾಗಿ ಮಾಡುವುದು ಎಂದರೆ ತಮ್ಮ ಪುಣ್ಯದ ಖಾತೆಯನ್ನು ತೀವ್ರ ಗತಿಯಿಂದ
ಹೆಚ್ಚಿಸಿಕೊಳ್ಳುವುದು. ಏಕೆಂದರೆ ಸಮಯ, ಸಂಕಲ್ಪ ಮತ್ತು ಶರೀರ ಮೂರನ್ನೂ ಸಫಲ ಮಾಡಿಕೊಂಡಿರಿ.
ಸಂಕಲ್ಪ ನಡೆದರೂ ಸಹ ಯಜ್ಞ ಸೇವೆಯದು, ಸಮಯವೂ ಸಹ ಯಜ್ಞ ಸೇವೆಯಲ್ಲಿ ವ್ಯತೀತವಾಯಿತು ಮತ್ತು
ಶರೀರವನ್ನೂ ಸಹ ಯಜ್ಞ ಸೇವೆಯಲ್ಲಿಯೇ ಅರ್ಪಣೆ ಮಾಡಿದಿರಿ ಅಂದಮೇಲೆ ಇದು ಸೇವೆಯೋ ಅಥವಾ ಪ್ರತ್ಯಕ್ಷ
ಫಲವೋ? ಪ್ರತ್ಯಕ್ಷ ಫಲ. ಯಾರಿಗಾದರೂ ಯಜ್ಞ ಸೇವೆ ಮಾಡುತ್ತಿರಬೇಕಾದರೆ ಯಾವುದೇ ವ್ಯರ್ಥ ಸಂಕಲ್ಪ
ಬಂದಿತೇ? ಯಾರಿಗಾದರೂ ಬಂದಿತೇ? ಖುಷಿಯಾಗಿದ್ದಿರಿ ಮತ್ತು ಖುಷಿಯನ್ನು ಹಂಚಿದಿರಿ ಅಂದಮೇಲೆ ಇಲ್ಲಿ
ಯಾವ ಗೋಲ್ಡನ್ ಅನುಭವ ಮಾಡಿದಿರೋ ಈ ಅನುಭವವನ್ನು ಅಲ್ಲಿಯೂ ಇಮರ್ಜ್ ಮಾಡಿಕೊಂಡು
ಹೆಚ್ಚಿಸಿಕೊಳ್ಳುತ್ತಾ ಇರಿ. ಎಂದಾದರೂ ಯಾವುದೇ ಮಾಯೆಯ ಸಂಕಲ್ಪ ಬಂದರೆ ಮನಸ್ಸಿನ ವಿಮಾನದಿಂದ
ಶಾಂತಿವನಕ್ಕೆ ತಲುಪಿ ಬಿಡಿ. ಮನಸ್ಸಿನ ವಿಮಾನವಂತೂ ಇದೆಯಲ್ಲವೆ! ಎಲ್ಲರ ಬಳಿ ಮನಸ್ಸಿನ ವಿಮಾನವಿದೆ.
ಬಾಪ್ದಾದಾ ಪ್ರತಿಯೊಬ್ಬ ಬ್ರಾಹ್ಮಣನಿಗೆ ಜನ್ಮದಿಂದಲೇ ಶ್ರೇಷ್ಠ ಮನಸ್ಸಿನ ವಿಮಾನವನ್ನು
ಉಡುಗೊರೆಯಾಗಿ ಕೊಟ್ಟು ಬಿಟ್ಟಿದ್ದೇವೆ. ಈ ವಿಮಾನದಲ್ಲಿ ಹೆಚ್ಚು ಪರಿಶ್ರಮ ಪಡಬೇಕಾಗುವುದಿಲ್ಲ.
ಅದನ್ನು ಆರಂಭಿಸಬೇಕೆಂದರೆ ಕೇವಲ ನನ್ನ ಬಾಬಾ ಎನ್ನಿರಿ ಸಾಕು. ವಿಮಾನವನ್ನು ನಡೆಸುವುದು
ಬರುತ್ತದೆಯಲ್ಲವೆ ಆದ್ದರಿಂದ ಯಾವಾಗ ಏನೇ ಆಗಲಿ ಮಧುಬನದಲ್ಲಿ ತಲುಪಿಬಿಡಿ. ಭಕ್ತಿಮಾರ್ಗದಲ್ಲಿ
ನಾಲ್ಕು ಧಾಮಗಳನ್ನು ಸುತ್ತುವವರು ತಮ್ಮನ್ನು ಬಹಳ ಭಾಗ್ಯವಂತರೆಂದು ತಿಳಿದುಕೊಳ್ಳುತ್ತಾರೆ ಮತ್ತು
ಮಧುಬನದಲ್ಲಿಯೂ ನಾಲ್ಕು ಧಾಮಗಳಿದೆ ಅಂದಮೇಲೆ ನಾಲ್ಕು ಧಾಮಗಳನ್ನು ಸುತ್ತಿದಿರಾ? ಪಾಂಡವ ಭವನದಲ್ಲಿ
ನೋಡಿರಿ, ನಾಲ್ಕು ಧಾಮಗಳಿದೆ. ಯಾರೆಲ್ಲರೂ ಬರುತ್ತೀರೋ ಪಾಂಡವ ಭವನಕ್ಕೆ ಹೋಗುತ್ತೀರಲ್ಲವೆ.
ಒಂದನೆಯದು ಶಾಂತಿ ಸ್ಥಂಭವು ಮಹಾಧಾಮವಾಗಿದೆ, ಎರಡನೆಯದು- ಬಾಪ್ದಾದಾರವರ ಕೋಣೆ ಇದು ಸ್ನೇಹದ
ಧಾಮವಾಗಿದೆ ಮತ್ತು ಮೂರನೆಯದು- ಕುಟೀರ, ಇದು ಸ್ನೇಹಮಿಲನದ ಧಾಮವಾಗಿದೆ ಮತ್ತು ನಾಲ್ಕನೆಯದು-
ಹಿಸ್ಟ್ರಿ ಹಾಲ್. ಅಂದಾಗ ತಾವೆಲ್ಲರೂ ನಾಲ್ಕುಧಾಮಗಳನ್ನು ಸುತ್ತಿದಿರಾ ಅಂದಮೇಲೆ ಮಹಾನ್
ಭಾಗ್ಯವಂತರು ಆಗಿ ಬಿಟ್ಟಿರಿ. ಈಗ ಯಾವುದೇ ಧಾಮವನ್ನು ನೆನಪು ಮಾಡಿಕೊಳ್ಳಿರಿ. ಯಾವಾಗ
ಉದಾಸ(ಬೇಸರ)ರಾಗಿ ಬಿಡುತ್ತೀರೋ ಆಗ ಕುಟೀರದಲ್ಲಿ ವಾರ್ತಾಲಾಪ ಮಾಡಲು ಬಂದು ಬಿಡಿ.
ಶಕ್ತಿಶಾಲಿಗಳಾಗುವ ಅವಶ್ಯಕತೆಯಿದ್ದರೆ ಶಾಂತಿ ಸ್ತಂಭದ ಬಳಿ ಬಂದು ತಲುಪಿರಿ ಮತ್ತು ಯಾವಾಗ ವ್ಯರ್ಥ
ಸಂಕಲ್ಪಗಳು ಬಹಳ ತೀವ್ರ ಗತಿಯಿಂದ ಬರುವುದೋ ಆಗ ಹಿಸ್ಟ್ರಿ ಹಾಲ್ನಲ್ಲಿ ಬಂದು ತಲುಪಿರಿ.
ಸಮಾನರಾಗುವ ಧೃಡ ಸಂಕಲ್ಪ ಉತ್ಪನ್ನವಾದಾಗ ಬಾಪ್ದಾದಾರವರ ಕೋಣೆಗೆ ಬಂದು ಬಿಡಿ. ಒಳ್ಳೆಯದು - ಎಲ್ಲರೂ
ಸುವರ್ಣಾವಕಾಶ ತೆಗೆದುಕೊಂಡಿದ್ದೀರಿ ಆದರೆ ಸದಾ ಅಲ್ಲಿದ್ದರೂ ಸಹ ಸುವರ್ಣಾವಕಾಶವನ್ನು
ತೆಗೆದುಕೊಳ್ಳುತ್ತಾ ಇರಿ. ಒಳ್ಳೆಯದು - ಒಳ್ಳೆಯ ಸಾಹಸವಂತರಾಗಿದ್ದೀರಿ.
ಕ್ಯಾಡ್ ಗ್ರೂಪ್ (ಹೃದಯದವರು
ಕುಳಿತಿದ್ದಾರೆ, ಬಹಳ ಚೆನ್ನಾಗಿ ಎಲ್ಲರೂ ಸೇರಿ ಸಮ್ಮೇಳನ ಮಾಡಿದರು):- ಚೆನ್ನಾಗಿ ಮಾಡಿದ್ದೀರಿ,
ಪರಸ್ಪರ ಮೀಟಿಂಗ್ ಮಾಡಿದ್ದೀರಿ ಮತ್ತು ರಾಷ್ಟ್ರಪತಿಯವರಿಗೂ ಸಹ ಈ ಕಾರ್ಯವಾಗಬೇಕು ಎಂಬ ಇಚ್ಛೆಯಿದೆ.
ಹೇಗೆ ಅವರಿಗೂ ಇಚ್ಛೆಯಿದೆ ಅಂದಮೇಲೆ ಅವರನ್ನು ಜೊತೆ ಸೇರಿಸಿಕೊಳ್ಳುತ್ತಾ ಮುಂದುವರೆಯುತ್ತಾ ಇರಿ
ಮತ್ತು ಜೊತೆ ಜೊತೆಗೆ ಬ್ರಾಹ್ಮಣರ ಮೀಟಿಂಗ್ನಲ್ಲಿಯೂ ಸಹ ತಮ್ಮ ಕಾರ್ಯಕ್ರಮದ ಸಮಾಚಾರವನ್ನು
ತಿಳಿಸುತ್ತಾ ಸಲಹೆ ತೆಗೆದುಕೊಳ್ಳಿ ಆಗ ಸರ್ವ ಬ್ರಾಹ್ಮಣರ ಸಲಹೆಯಿಂದ ಮತ್ತಷ್ಟು ಶಕ್ತಿ ತುಂಬುತ್ತದೆ.
ಬಾಕಿ ಕಾರ್ಯವು ಚೆನ್ನಾಗಿದೆ, ಮಾಡುತ್ತಾ ಹೋಗಿ ಹರಡುತ್ತಾ ಹೋಗಿರಿ ಮತ್ತು ಭಾರತದ ವಿಶೇಷತೆಯನ್ನು
ಪ್ರಕಟ ಮಾಡುತ್ತಾ ಹೋಗಿರಿ. ಬಹಳ ಚೆನ್ನಾಗಿ ಪರಿಶ್ರಮ ಪಡುತ್ತಿದ್ದೀರಿ, ಕಾರ್ಯಕ್ರಮವನ್ನು ಬಹಳ
ಚೆನ್ನಾಗಿ ಮಾಡಿದಿರಿ ಮತ್ತು ಈ ಹೃದಯದವರು ತಮ್ಮ ದೊಡ್ಡ ಹೃದಯವನ್ನು ತೋರಿಸಿದರು, ಅದಕ್ಕಾಗಿ
ಶುಭಾಷಯಗಳು. ಒಳ್ಳೆಯದು.
ಡಬಲ್ ವಿದೇಶಿ
ಸಹೋದರ-ಸಹೋದರಿಯರು:-
ಪ್ರತೀ ಟರ್ನ್ನಲ್ಲಿ ಡಬಲ್ ವಿದೇಶಿಯರು ಬರುವುದು ಈ ಸಂಘಟನೆಗೆ ಚಂದ್ರಮನ ಬೆಳದಿಂಗಳು ತರಿಸುತ್ತದೆ.
ಡಬಲ್ ವಿದೇಶಿಯರನ್ನು ನೋಡಿ ಎಲ್ಲರಿಗೆ ಉಮ್ಮಂಗವೂ ಬರುತ್ತದೆ, ಎಲ್ಲಾ ಡಬಲ್ ವಿದೇಶಿಯರು ಡಬಲ್
ಉಮ್ಮಂಗ-ಉತ್ಸಾಹದಿಂದ ಮುಂದೆ ಹಾರುತ್ತಿದ್ದೀರಿ, ನಡೆಯುತ್ತಿಲ್ಲ ಹಾರುತ್ತಿದ್ದೀರಿ.
ಹಾರುವವರಾಗಿದ್ದೀರೋ ಅಥವಾ ನಡೆಯುವವರಾಗಿದ್ದೀರೋ? ಯಾರು ಸದಾ ಹಾರುತ್ತಾ ಇರುತ್ತೀರಿ,
ನಡೆಯುವುದಿಲ್ಲವೋ ಅವರು ಕೈಯನ್ನೆತ್ತಿರಿ. ಒಳ್ಳೆಯದು - ವಾಸ್ತವದಲ್ಲಿ ನೋಡಿ, ನೀವು ವಿಮಾನದಲ್ಲಿ
ಹಾರಿಕೊಂಡೇ ಬರಬೇಕಾಗುತ್ತದೆ ಅಂದಮೇಲೆ ತಮಗೆ ಹಾರುವುದಂತೂ ಅಭ್ಯಾಸವು ಇದ್ದೇ ಇದೆ. ಅದು ಶರೀರದಿಂದ
ಹಾರುವುದಾಗಿದೆ, ಇದು ಮನಸ್ಸಿನಿಂದ ಹಾರುವುದಾಗಿದೆ. ಬಹಳ ಒಳ್ಳೆಯ ಸಾಹಸವನ್ನಿಟ್ಟಿದ್ದೀರಿ. ನೋಡಿ,
ಬಾಪ್ದಾದಾ ಎಲ್ಲಿ ಮೂಲೆ-ಮೂಲೆಗಳಿಂದ ತನ್ನ ಮಕ್ಕಳನ್ನು ಹುಡುಕಿದರಲ್ಲವೆ. ಬಹಳ ಚೆನ್ನಾಗಿದೆ. ಡಬಲ್
ವಿದೇಶಿಯರೆಂದು ಕರೆಸಿಕೊಳ್ಳುತ್ತೀರಿ, ವಾಸ್ತವದಲ್ಲಿ ನೀವು ಭಾರತದವರೇ ಆಗಿದ್ದೀರಿ ಮತ್ತು
ರಾಜ್ಯಭಾರವನ್ನೂ ಎಲ್ಲಿ ಮಾಡಬೇಕಾಗಿದೆ? ಭಾರತದಲ್ಲಿಯೇ ಮಾಡಬೇಕಲ್ಲವೆ ಆದರೆ ಸೇವಾರ್ಥವಾಗಿ ಐದು
ಖಂಡಗಳಲ್ಲಿ ಹೋಗಿ ತಲುಪಿದ್ದೀರಿ ಮತ್ತು ಐದೂ ಖಂಡಗಳಲ್ಲಿ, ಭಿನ್ನ-ಭಿನ್ನ ಸ್ಥಾನಗಳಲ್ಲಿ ಸೇವೆಯನ್ನು
ಒಳ್ಳೆಯ ಉಮ್ಮಂಗ-ಉತ್ಸಾಹದಿಂದ ಮಾಡುತ್ತಿದ್ದೀರಿ. ವಿಘ್ನ ವಿನಾಶಕರಾಗಿದ್ದೀರಲ್ಲವೆ. ಯಾವುದೇ
ವಿಘ್ನವು ಬಂದರೆ ಗಾಬರಿಯಾಗುವವರು ಅಲ್ಲ ತಾನೆ - ಇದು ಏಕಾಗುತ್ತಿದೆ, ಇದು ಏನಾಗುತ್ತಿದೆ
ಎಂಬುದಿಲ್ಲ, ಏನಾಗುತ್ತದೆಯೋ ಅದರಲ್ಲಿ ನಮ್ಮದು ಮತ್ತಷ್ಟು ಸಾಹಸವನ್ನು ಹೆಚ್ಚಿಸುವ ಸಾಧನವಾಗಿದೆ.
ಗಾಬರಿಯಾಗಬಾರದು, ಇದು ಉಮ್ಮಂಗ-ಉತ್ಸಾಹವನ್ನು ಹೆಚ್ಚಿಸುವ ಸಾಧನವಾಗಿದೆ. ಇಷ್ಟು ಪಕ್ಕಾ
ಇದ್ದೀರಲ್ಲವೆ. ಪಕ್ಕಾ ಇದ್ದೀರಾ ಅಥವಾ ಸ್ವಲ್ಪ-ಸ್ವಲ್ಪ ಕಚ್ಚಾ ಇದ್ದೀರಾ? ಇಲ್ಲ. ಕಚ್ಚಾ (ಅಪರಿಪಕ್ವ)
ಶಬ್ಧವು ಇಷ್ಟವಾಗುವುದಿಲ್ಲ. ಪಕ್ಕಾ ಇದ್ದೀರಿ, ಪಕ್ಕಾ ಇರುತ್ತೀರಿ, ಪಕ್ಕಾ ಆಗಿ ಜೊತೆ
ನಡೆಯುತ್ತೀರಿ. ಒಳ್ಳೆಯದು.
ಜಾನಕಿ ದಾದೀಜಿಯವರು
ಆಸ್ಟ್ರೇಲಿಯಾಗೆ ಹೋಗಿ ಬಂದಿದ್ದಾರೆ. ಅಲ್ಲಿನವರು ಬಹಳ ನೆನಪು ಕೊಟ್ಟಿದ್ದಾರೆ:- ಬಾಪ್ದಾದಾರವರ ಬಳಿ
ಈ-ಮೇಲ್ನಲ್ಲಿಯೂ ಸಂದೇಶವು ಬಂದಿದೆ ಮತ್ತು ಬಾಪ್ದಾದಾ ನೋಡುತ್ತೇವೆ, ಇತ್ತೀಚೆಗೆ ದೊಡ್ಡ
ಕಾರ್ಯಕ್ರಮಗಳೂ ಸಹ ಈ ರೀತಿ ಆಗಿ ಬಿಟ್ಟಿದೆ ಹೇಗೆ ಎಲ್ಲವೂ ಮಾಡಲ್ಪಟ್ಟಿದೆ ಎಂಬಂತೆ. ಎಲ್ಲರೂ ಕಲಿತು
ಬಿಟ್ಟಿದ್ದಾರೆ. ಸೇವೆಯ ಸಾಧನಗಳನ್ನು ಕಾರ್ಯದಲ್ಲಿ ತೊಡಗಿಸುವುದು ಚೆನ್ನಾಗಿ ಅಭ್ಯಾಸವಾಗಿ
ಬಿಟ್ಟಿದೆ. ಬಾಪ್ದಾದಾರವರಿಗೆ ಆಸ್ಟ್ರೇಲಿಯಾ ನಂಬರ್ವನ್ ಆಗಿ ಕಾಣಿಸುತ್ತದೆ ಆದರೆ ಮೊದಲು ಮೊದಲು
ನಂಬರ್ವನ್ ತೆಗೆದುಕೊಂಡರು. ಆದರೆ ಈಗ ಯು.ಕೆ., ಅದಕ್ಕಿಂತಲೂ ಸ್ವಲ್ಪ ಮುಂದೆ ಹೋಗುತ್ತಿದೆ ಆದರೆ
ಆಸ್ಟ್ರೇಲಿಯಾದವರು ನಂಬರ್ವನ್ ಆಗಲೇಬೇಕಾಗಿದೆ. ಹಾಗೆಂದರೆ ಯು.ಕೆ.,ಯವರು ಎರಡನೇ ನಂಬರ್
ಆಗುವುದಿಲ್ಲ. ಅವರೂ ಸಹ ನಂಬರ್ವನ್ ಆಗುವರು. ಆಸ್ಟ್ರೇಲಿಯಾದ ಹಳೆಯ ಮಕ್ಕಳು ಬಾಪ್ದಾದಾರವರಿಗೆ
ನೆನಪಿದ್ದಾರೆ ಮತ್ತು ಬಾಪ್ದಾದಾರವರ ಮುದ್ದಿನ ನಿರ್ಮಲ ಆಶ್ರಮ್ ಅವರಿಗೆ ತಾವೆಲ್ಲರೂ ನಿರ್ಮಲಾ ದೀದಿ,
ದೀದಿ ಎಂದು ಹೇಳುತ್ತೀರಲ್ಲವೆ ಆದರೆ ಬಾಪ್ದಾದಾ ಆರಂಭದಿಂದಲೂ ಅವರಿಗೆ ನಿರ್ಮಲ ಆಶ್ರಮ್ ಎಂದು ಹೇಳಿ
ಬಿರುದು ನೀಡಿದ್ದೇವೆ. ಯಾವ ಆಶ್ರಮದಲ್ಲಿ ಅನೇಕ ಆತ್ಮರು ಆಶ್ರಯ ತೆಗೆದುಕೊಂಡರು ಮತ್ತು ತಂದೆಯ
ಮಕ್ಕಳಾದರು, ಈಗಲೂ ಆಗುತ್ತಿದ್ದಾರೆ, ಆಗುತ್ತಾ ಹೋಗುತ್ತಾರೆ ಮತ್ತು ಒಬ್ಬೊಬ್ಬ ಆಸ್ಟ್ರೇಲಿಯಾ
ನಿವಾಸಿ ಮಕ್ಕಳೂ ಸಹ ವಿಶೇಷ ನೆನಪಿದ್ದಾರೆ. ಇವರು ಸನ್ಮುಖದಲ್ಲಿ ಕುಳಿತಿರುವವರು
ಆಸ್ಟ್ರೇಲಿಯಾದವರಲ್ಲವೆ. ಆಸ್ಟ್ರೇಲಿಯಾದವರು ಎದ್ದು ನಿಲ್ಲಿರಿ. ಇವರಿಗೆ ಎಷ್ಟು ಒಳ್ಳೆಯ ಉಮ್ಮಂಗ
ಬರುತ್ತಿದೆ! ವಿಶ್ವದ ಸೇವೆಗಾಗಿ ಹೆಚ್ಚು-ಹೆಚ್ಚು ತಯಾರಿ ಮಾಡುತ್ತಿದ್ದಾರೆ. ಬಾಪ್ದಾದಾರವರ
ಸಹಯೋಗವಿದೆ ಮತ್ತು ಸಫಲತೆಯು ಇದ್ದೇ ಇದೆ.
ಒಳ್ಳೆಯದು - ಈಗ ಯಾವ
ಧೃಡ ಸಂಕಲ್ಪ ಮಾಡುತ್ತೀರಿ? ಈಗ ಇದೇ ಸಂಕಲ್ಪದಲ್ಲಿ ಕುಳಿತುಕೊಳ್ಳಿರಿ - ಸಫಲತೆಯು ನಮ್ಮ
ಜನ್ಮಸಿದ್ಧ ಅಧಿಕಾರವಾಗಿದೆ, ವಿಜಯವು ನಮ್ಮ ಕೊರಳಿನ ಹಾರವಾಗಿದೆ. ಈ ನಿಶ್ಚಯ ಮತ್ತು ಆತ್ಮಿಕ
ನಶೆಯಲ್ಲಿ ಅನುಭವೀ ಸ್ವರೂಪರಾಗಿ ಕುಳಿತುಕೊಳ್ಳಿರಿ.
ನಾಲ್ಕಾರು ಕಡೆಯ
ಚಿಂತೆಯಿಂದ ದೂರ ನಿಶ್ಚಿಂತ ಚಕ್ರವರ್ತಿಗಳಿಗೆ, ಸದಾ ನಿಶ್ಚಿಂತ ಪುರಿಯ ಚಕ್ರವರ್ತಿ ಸ್ವರೂಪದಲ್ಲಿ
ಸ್ಥಿತರಾಗಿರುವಂತಹ ಮಕ್ಕಳಿಗೆ, ಸರ್ವ ಖಜಾನೆಗಳಿಂದ ಸಂಪನ್ನ ರಿಚೆಸ್ಟ್ ಇನ್ ದಿ ವರ್ಲ್ಡ್ ಆಗಿರುವ
ಸರ್ವ ಮಕ್ಕಳಿಗೆ, ಸದಾ ಉಮ್ಮಂಗ-ಉತ್ಸಾಹದ ರೆಕ್ಕೆಗಳಿಂದ ಹಾರುತ್ತಿರುವ ಮಕ್ಕಳಿಗೆ, ಸದಾ
ಸಮಾಪ್ತಿಯನ್ನು ಸಮೀಪ ತರುವಂತಹ ಬಾಪ್ದಾದಾರವರ ಸಮಾನ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ,
ಹೃದಯದ ಆಶೀರ್ವಾದಗಳು, ವರದಾತನ ವರದಾನ ಮತ್ತು ನಮಸ್ತೆ.
ವರದಾನ:
ಸ್ವಯಂನ ಸರ್ವ
ಬಲಹೀನತೆಗಳನ್ನು ದಾನದ ವಿಧಿಯಿಂದ ಸಮಾಪ್ತಿಗೊಳಿಸುವಂತಹ ದಾತಾ, ವಿಧಾತಾ ಭವ.
ಭಕ್ತಿಯಲ್ಲಿ ಈ
ನಿಯಮವಿರುತ್ತದೆ - ಯಾವಾಗ ಯಾವುದೇ ವಸ್ತುವಿನ ಕೊರತೆಯಾಗುತ್ತದೆಯೆಂದರೆ ಹೇಳುತ್ತಾರೆ- ದಾನ ಮಾಡಿರಿ.
ದಾನ ಮಾಡುವುದರಿಂದ ಕೊಡುವುದು-ತೆಗೆದುಕೊಳ್ಳುವುದಾಗುತ್ತದೆ. ಅಂದಮೇಲೆ ಯಾವುದೇ ಬಲಹೀನತೆಯನ್ನು
ಸಮಾಪ್ತಿ ಮಾಡುವುದಕ್ಕಾಗಿ ದಾತಾ ಮತ್ತು ವಿಧಾತಾ ಆಗಿರಿ. ಒಂದುವೇಳೆ ತಾವು ಅನ್ಯರಿಗೆ ತಂದೆಯ
ಖಜಾನೆಯನ್ನು ಕೊಡಲು ನಿಮಿತ್ತ ಆಶ್ರಯವಾಗುತ್ತೀರೆಂದರೆ, ಬಲಹೀನತೆಗಳು ಸ್ವತಹವಾಗಿ ದೂರವಾಗಿ
ಬಿಡುತ್ತದೆ. ತಮ್ಮ ದಾತಾ-ವಿಧಾತನ ಶಕ್ತಿಶಾಲಿ ಸಂಸ್ಕಾರಗಳನ್ನು ಇಮರ್ಜ್ ಮಾಡಿಕೊಳ್ಳುತ್ತೀರೆಂದರೆ,
ಬಲಹೀನತೆಯ ಸಂಸ್ಕಾರವು ಸ್ವತಹವಾಗಿ ಸಮಾಪ್ತಿಯಾಗಿ ಬಿಡುತ್ತದೆ.
ಸ್ಲೋಗನ್:
ತಮ್ಮ ಶ್ರೇಷ್ಠ
ಭಾಗ್ಯದ ಗುಣ ಗಾನ ಮಾಡುತ್ತಿರಿ, ಬಲಹೀನತೆಗಳನ್ನಲ್ಲ.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಯಾರೊಂದಿಗೆ
ಪ್ರೀತಿಯಿರುತ್ತದೆ, ಅವರಿಗೆ ಏನು ಇಷ್ಟವಾಗುತ್ತದೆ ಅದನ್ನೇ ಮಾಡಲಾಗುತ್ತದೆ. ತಂದೆಗೆ ಮಕ್ಕಳು
ಅಪ್ಸೆಟ್ ಆಗುವುದು ಇಷ್ಟವಾಗುವುದಿಲ್ಲ, ಅದಕ್ಕೆ ಎಂದೂ ಈ ರೀತಿ ಹೇಳಬೇಡಿ ಏನು ಮಾಡುವುದು, ಮಾತೇ
ಹೀಗಿತ್ತು ಅದಕ್ಕೆ ಅಪ್ಸೆಟ್ ಆಗಿ ಹೋದೆ. ಒಂದುವೇಳೆ ಮಾತು ಅಪ್ಸೆಟಿನ ಬರುತ್ತದೆಯೆಂದರೂ ಸಹ ನೀವು
ಅಪ್ಸೆಟ್ ಸ್ಥಿತಿಯಲ್ಲಿ ಬರಬೇಡಿ. ಹೃದಯದಿಂದ ಬಾಬಾ ಎಂದು ಹೇಳಿ ಮತ್ತು ಅವರ ಪ್ರೀತಿಯಲ್ಲಿ
ಸಮಾವೇಶರಾಗಿ ಬಿಡಿ.