25.01.26    Avyakt Bapdada     Kannada Murli    02.01.2008     Om Shanti     Madhuban


“ಈ ವರ್ಷ ನಾಲ್ಕೂ ಸಬ್ಜೆಕ್ಟ್ಗಳಲ್ಲಿ ಅನುಭವದ ಅಥಾರಿಟಿಯಾಗಿ, ಲಕ್ಷ್ಯ ಹಾಗೂ ಲಕ್ಷಣವನ್ನು ಸಮಾನ ಮಾಡಿಕೊಳ್ಳಿ”


ಇಂದು ಬಾಪ್ದಾದಾರವರು ತಮ್ಮ ಎಲ್ಲಾ ಕಡೆಯ ಸಂತುಷ್ಟರಾಗಿರುವಂತಹ ಸಂತುಷ್ಟ ಮಣಿಗಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬರ ಮುಖದಲ್ಲೂ ಸಂತುಷ್ಟತೆಯ ಹೊಳಪು ಕಾಣುತ್ತಿದೆ. ಸಂತುಷ್ಟ ಮಣಿಗಳು ಸ್ವಯಂಗೂ ಪ್ರಿಯರಾಗಿರುತ್ತಾರೆ, ತಂದೆಗೂ ಪ್ರಿಯರಾಗಿರುತ್ತಾರೆ ಹಾಗೂ ಪರಿವಾರದವರಿಗೂ ಪ್ರಿಯರಾಗಿರುತ್ತಾರೆ ಏಕೆಂದರೆ ಸಂತುಷ್ಟತೆ ಮಹಾನ್ ಶಕ್ತಿಯಾಗಿದೆ. ಯಾವಾಗ ಎಲ್ಲಾ ಪ್ರಾಪ್ತಿಗಳು ಆಗುತ್ತದೆಯೋ ಆಗ ಸಂತುಷ್ಟತೆ ಧಾರಣೆಯಾಗುತ್ತದೆ. ಒಂದುವೇಳೆ ಪ್ರಾಪ್ತಿಗಳಲ್ಲಿ ಕಡಿಮೆಯಾದರೆ ಸಂತುಷ್ಟತೆಯು ಕಡಿಮೆಯಾಗುತ್ತದೆ. ಸಂತುಷ್ಟತೆಯು ಅನ್ಯ ಶಕ್ತಿಗಳನ್ನೂ ಸಹ ಆಹ್ವಾನ ಮಾಡುತ್ತದೆ. ಸಂತುಷ್ಟತೆಯ ವಾಯುಮಂಡಲ ಅನ್ಯರಿಗೂ ಯಥಾ ಶಕ್ತಿ ಸಂತುಷ್ಟತೆಯ ವೈಬ್ರೇಶನ್ ನೀಡುತ್ತದೆ. ಯಾರು ಸಂತುಷ್ಟರಾಗಿರುತ್ತಾರೋ ಅವರು ಸದಾ ಪ್ರಸನ್ನಚಿತ್ತರಾಗಿರುತ್ತಾರೆ, ಚೆಹರೆಯು ಸದಾ ಸ್ವತಹವಾಗಿಯೇ ಹರ್ಷಿತಮುಖವಾಗಿರುತ್ತದೆ. ಸಂತುಷ್ಟ ಆತ್ಮನ ಮುಂದೆ ಯಾವುದೇ ಪರಿಸ್ಥಿತಿ ಬಂದರೂ ಸ್ವ-ಸ್ಥಿತಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ಎಷ್ಟೇ ದೊಡ್ಡ ಪರಿಸ್ಥಿತಿಯಿದ್ದರೂ ಸಂತುಷ್ಟ ಆತ್ಮನಿಗೆ ಕಾರ್ಟೂನ್ ಶೋನ ಮನೋರಂಜನೆಯ ಅನುಭವವಾಗುತ್ತದೆ ಅಂದಾಗ ಪ್ರತಿಯೊಬ್ಬರು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿ. ಪರಿಶೀಲನೆ ಮಾಡಿಕೊಳ್ಳಲು ಬರುತ್ತದೆಯೇ! ಬರುತ್ತದೆಯೇ? ಯಾರಿಗೆ ಪರಿಶೀಲನೆ ಮಾಡಿಕೊಳ್ಳಲು ಬರುತ್ತದೆ ಅವರು ಕೈಯನ್ನೆತ್ತಿ. (ಅನ್ಯರನ್ನು ಪರಿಶೀಲಿಸುವುದಲ್ಲ) ಪರಿಶೀಲನೆ ಮಾಡಿಕೊಳ್ಳಲು ಬರುತ್ತದೆಯೇ? ಒಳ್ಳೆಯದು - ಶುಭಾಷಯಗಳು.

ಬಾಪ್ದಾದಾರವರ ವರದಾನವೂ ಸಹ ಪ್ರತಿಯೊಬ್ಬ ಮಗುವಿಗೆ ದಿನನಿತ್ಯ ಅಮೃತವೇಳೆಯಲ್ಲಿ ಭಿನ್ನ-ಭಿನ್ನ ರೂಪದಲ್ಲಿ ಖುಷಿಯಾಗಿರಿ, ಸಂಪನ್ನವಾಗಿರಿ ಎಂದೇ ಸಿಗುತ್ತದೆ. ಪ್ರತಿನಿತ್ಯದ ವರದಾನ ಎಲ್ಲರಿಗೂ ಸಿಗುತ್ತದೆ. ಬಾಪ್ದಾದಾರವರು ಎಲ್ಲರಿಗೂ ಒಂದೇರೀತಿ ಏಕಕಾಲಕ್ಕೆ ವರದಾನ ನೀಡುತ್ತಾರೆ. ಆದರೆ ಏಕೆ ವ್ಯತ್ಯಾಸವಾಗುತ್ತದೆ? ನಂಬರ್ವಾರ್ ಏಕೆ ಆಗುತ್ತಾರೆ? ದಾತ ಒಬ್ಬರೇ ಆಗಿದ್ದಾರೆ ಹಾಗೂ ಒಂದನ್ನೇ ನೀಡುತ್ತಾರೆ. ಕೆಲವರಿಗೆ ಕಡಿಮೆ ಕೆಲವರಿಗೆ ಹೆಚ್ಚು ಕೊಡುವುದಿಲ್ಲ. ವಿಶಾಲ ಹೃದಯಿಯಾಗಿ ನೀಡುತ್ತಾರೆ ಆದರೂ ವ್ಯತ್ಯಾಸ ಏಕೆ ಆಗುತ್ತದೆ? ಇದರ ಅನುಭವವು ಎಲ್ಲರಿಗೂ ಇದೆ ಏಕೆಂದರೆ ಇದುವರೆಗೂ ಸಹ ಬಾಪ್ದಾದಾರವರ ಬಳಿ ಈ ಶಬ್ದ ತಲುಪುತ್ತದೆ. ಏಕೆ ಎಂದು ತಿಳಿದಿದೆಯಲ್ಲವೇ? ಕೆಲವೊಮ್ಮೆ ಸ್ವಲ್ಪ-ಸ್ವಲ್ಪ ಈ ಶಬ್ದಗಳು ಈಗಲೂ ಸಹ ಬರುತ್ತೇವೆ. ಬಾಪ್ದಾದಾರವರು ಬ್ರಾಹ್ಮಣ ಆತ್ಮರ ಜೀವನರೂಪಿ ಶಬ್ದ ಕೋಶದಲ್ಲಿ ಈ ಎರಡು ಶಬ್ದಗಳು ಇರಬಾರದೆಂದು ತಿಳಿಸಿದ್ದೇವೆ. ತಂದೆ ಅವಿನಾಶಿಯಾಗಿದ್ದಾರೆ ಅವರ ಖಜಾನೆಗಳು ಅವಿನಾಶಿಯಾಗಿವೆ, ತಾವೆಲ್ಲರೂ ಸಹ ಅವಿನಾಶಿ ಶ್ರೇಷ್ಠ ಆತ್ಮರಾಗಿದ್ದೀರಿ. ಅಂದಾಗ ಯಾವ ಶಬ್ದ ಇರಬೇಕಾಗಿದೆ? ಕೆಲವೊಮ್ಮೆ ಅಥವಾ ಸದಾ ಎನ್ನುವ ಶಬ್ದವೋ? ಪ್ರತಿಯೊಂದು ಖಜಾನೆಯ ಮುಂದೆ ಸರ್ವಶಕ್ತಿಗಳು ಸದಾ ಇವೆಯೇ? ಎಂದು ಪರಿಶೀಲನೆ ಮಾಡಿಕೊಳ್ಳಿ. ಸರ್ವ ಗುಣಗಳು ಸದಾ ಇವೆಯೇ? ತಮ್ಮ ಭಕ್ತರು ತಮ್ಮ ಗುಣ ಗಾನ ಮಾಡುವಾಗ ಏನು ಹೇಳುತ್ತಾರೆ? ಕೆಲವೊಮ್ಮೆ ಗುಣ ದಾತ ಎಂದು ಹೇಳುತ್ತಾರೆಯೇ? ಬಾಪ್ದಾದಾರವರು ಪ್ರತಿಯೊಂದು ವರದಾನದಲ್ಲಿ ಸದಾ ಎನ್ನುವ ಶಬ್ದ ಹೇಳುತ್ತಾರೆ. ಸದಾ ಸರ್ವಶಕ್ತಿವಾನ್ ಕೆಲವೊಮ್ಮೆ ಶಕ್ತಿವಾನ್ ಕೆಲವೊಮ್ಮೆ ಸರ್ವಶಕ್ತಿವಾನ್ ಈ ರೀತಿ ಹೇಳಲಿಲ್ಲ. ಪ್ರತಿಯೊಂದು ಸಮಯದಲ್ಲಿ ಎರಡು ಶಬ್ದಗಳನ್ನು ತಾವೂ ಸಹ ಹೇಳುತ್ತೀರಿ, ತಂದೆಯು ಹೇಳುತ್ತಾರೆ. ಸಮಾನರಾಗಿ. ಸ್ವಲ್ಪ-ಸ್ವಲ್ಪ ಸಮಾನರಾಗಿ ಎಂದು ಹೇಳುವುದಿಲ್ಲ. ಸಂಪನ್ನ ಹಾಗೂ ಸಂಪೂರ್ಣ... ಅಂದಾಗ ಮಕ್ಕಳು ಕೆಲವೊಮ್ಮೆ ಏನು ಮಾಡುತ್ತಾರೆ? ಬಾಪ್ದಾದಾರವರೂ ಸಹ ಆಟವನ್ನು ನೋಡುತ್ತಿರುತ್ತಾರೆ. ಮಕ್ಕಳ ಆಟವನ್ನು ನೋಡುತ್ತಿರುತ್ತಾರೆ. ಎಲ್ಲರೂ ಅಲ್ಲ, ಕೆಲವು ಮಕ್ಕಳು ಏನು ಮಾಡುತ್ತಾರೆ. ಯಾವ ವರದಾನ ಸಿಕ್ಕಿರುತ್ತದೆಯೋ ಆ ವರದಾನವನ್ನು ವಿಚಾರ ಮಾಡಿ, ವರ್ಣನೆ ಮಾಡಿ ಕಾಪಿಯಲ್ಲಿ ನೋಟ್ ಮಾಡಿಕೊಳ್ಳುತ್ತಾರೆ, ನೆನಪನ್ನೂ ಮಾಡುತ್ತಾರೆ ಆದರೆ ವರದಾನರೂಪಿ ಬೀಜವನ್ನು ಫಲೀಭೂತ ಮಾಡುವುದಿಲ್ಲ. ಬೀಜದಿಂದ ಫಲವು ಸಿಗುವುದಿಲ್ಲ. ಕೇವಲ ವರ್ಣನೆ ಮಾಡಿ ಬಹಳ ಒಳ್ಳೆಯ ವರದಾನವೆಂದು ಖುಷಿ ಪಡುತ್ತಾರೆ. ವರದಾನವು ಬೀಜವಾಗಿದೆ ಆದರೆ ಬೀಜವನ್ನು ಎಷ್ಟು ಫಲೀಭೂತ ಮಾಡುತ್ತೇವೆಯೋ ಅಷ್ಟೇ ಅದು ವೃದ್ಧಿಯನ್ನು ಹೊಂದುತ್ತದೆ. ಫಲೀಭೂತ ಮಾಡುವುದರ ಲಕ್ಷ್ಯ ಏನಾಗಿದೆ? ಸಮಯ ಬಂದಾಗ ಕಾರ್ಯದಲ್ಲಿ ತೊಡಗಿಸುವುದು. ಕಾರ್ಯದಲ್ಲಿ ತೊಡಗಿಸುವುದನ್ನು ಮರೆತು ಹೋಗುತ್ತೀರಿ, ಕೇವಲ ಪುಸ್ತಕವನ್ನು ನೋಡಿ ವರ್ಣನೆ ಮಾಡಿ ಬಹಳ ಚೆನ್ನಾಗಿದೆ, ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ. ಬಾಪ್ದಾದಾರವರು ಬಹಳ ಒಳ್ಳೆಯ ವರದಾನವನ್ನು ನೀಡಿದ್ದಾರೆ. ಆದರೆ ಏಕೆ ನೀಡಿದ್ದಾರೆ? ಅದನ್ನು ಫಲೀಭೂತ ಮಾಡಲು ನೀಡಿದ್ದಾರೆ. ಬೀಜದಿಂದ ಫಲವು ವಿಸ್ತಾರಗೊಳ್ಳುತ್ತದೆ. ವರದಾನವನ್ನು ಸ್ಮರಣೆ ಮಾಡುತ್ತಾರೆ ಆದರೆ ವರದಾನದ ಸ್ವರೂಪರಾಗುವುದರಲ್ಲಿ ನಂಬರ್ವಾರ್ ಆಗುತ್ತಾರೆ. ಬಾಪ್ದಾದಾರವರು ಪ್ರತಿಯೊಬ್ಬರ ಭಾಗ್ಯವನ್ನು ನೋಡುತ್ತಾ ಹರ್ಷಿತರಾಗುತ್ತಾರೆ ಆದರೆ ಬಾಪ್ದಾದಾರವರ ಹೃದಯದ ಆಸೆಯನ್ನು ಮೊದಲೂ ತಿಳಿಸಿದ್ದೇವೆ. ನಾವು ಕಾರಣವನ್ನು ಸಮಾಪ್ತಿ ಮಾಡಿ ಸಮಾಧಾನ ಸ್ವರೂಪರಾಗುತ್ತೇವೆ ಎಂದು ತಾವೆಲ್ಲರೂ ಕೈ ಎತ್ತಿದ್ದಿರಿ ನೆನಪಿದೆಯೇ. ಹೋಮ್ವರ್ಕ್ ನೆನಪಿದೆಯೇ? ಅನೇಕ ಮಕ್ಕಳು ಆತ್ಮಿಕ ವಾರ್ತಲಾಪ ಮಾಡುತ್ತಾ ಅಥವಾ ಪತ್ರಗಳ ಮೂಲಕ, ಈ-ಮೇಲ್ ಮೂಲಕ ರಿಜಲ್ಟ್ ಬರೆದಿದ್ದಾರೆ. ಒಳ್ಳೆಯದು - ಗಮನವಂತೂ ಇದೆ ಆದರೆ ಬಾಪ್ದಾದಾರವರಿಗೆ ಸದಾ ಎನ್ನುವ ಶಬ್ದ ಇಷ್ಟವಾಗುತ್ತದೆ. ಅದು ಇದೆಯೇ? ತಾವೆಲ್ಲರೂ ಯಾರೆಲ್ಲಾ ಬಂದಿದ್ದೀರೋ ಕೇಳಿದ್ದೀರೋ ಅಥವಾ ಓದಿದ್ದೀರೋ ಆದರೆ ಒಂದು ತಿಂಗಳ ಹೋಂವರ್ಕ್ನಲ್ಲಿ ಆಗಿರುವುದು ಒಂದೇ ತಿಂಗಳು, ಜಾಸ್ತಿ ಅಲ್ಲ. ಅಂದಾಗ ಒಂದು ತಿಂಗಳಿನಲ್ಲಿ ಲಕ್ಷ್ಯವಂತೂ ಇಟ್ಟುಕೊಂಡಿದ್ದೀರಿ. ಒಬ್ಬಿಬ್ಬರಿಗೆ ವರ್ಣನೆಯನೂ ಮಾಡಿದ್ದೀರಿ ಆದರೆ ಈ ಒಂದು ತಿಂಗಳ ಹೋಂವರ್ಕ್ನಲ್ಲಿ ಒಳ್ಳೆಯ ಅಂಕಗಳನ್ನು ಪಡೆದಿರುವವರು ಕೈ ಎತ್ತಿ. ಯಾರು ಉತ್ತೀರ್ಣರಾಗಿದ್ದಾರೋ ಅವರು ಕೈ ಎತ್ತಿ. ಗೌರವಾನ್ವಿತವಾಗಿ ಉತ್ತೀರ್ಣ (ಪಾಸ್ವಿತ್ ಆನರ್). ಗೌರವಾನ್ವಿತವಾಗಿ ಉತ್ತೀರ್ಣ (ಪಾಸ್ ವಿತ್ ಆನರ್). ಗೌರವಾನ್ವಿತವಾಗಿ ಉತ್ತೀರ್ಣರಾಗಿರುವವರು ಎದ್ದು ನಿಲ್ಲಿ. ಇಂತಹವರ ದರ್ಶನ ಮಾಡಬೇಕು. ನಿಂತಿರುವವರಲ್ಲಿ ಮಾತೆಯರು ಇಲ್ಲ. ಅಕ್ಕಂದಿರಲ್ಲಿ ಶಿಕ್ಷಕಿಯರು ಕೈ ಎತ್ತಿಲ್ಲ. ಯಾರೂ ಇಲ್ಲ. ಮಧುಬನದವರು? ಬಹಳ ಕಡಿಮೆ ಫಲಿತಾಂಶವಿದೆ. ಒಳ್ಳೆಯದು - ಸೆಂಟರ್ನಲ್ಲಂತೂ ಇರುತ್ತಾರೆ. ಶುಭಾಶಯಗಳು. ಚಪ್ಪಾಳೆ ತಟ್ಟಿ. ತಂದೆಯೊಂದಿಗೆ ಎಷ್ಟು ಪ್ರೀತಿಯಿದೆ ಎಂದು ಬಾಪ್ದಾದಾರವರು ಎಲ್ಲರನ್ನು ಕೇಳಿದಾಗ ಬಾಪ್ದಾದಾರವರಿಗೆ ನಗುಬರುತ್ತದೆ. ಎಷ್ಟು ಪ್ರೀತಿಯಿದೆ ಎಂದು ಕೇಳಿದಾಗ ಏನು ಉತ್ತರ ನೀಡುತ್ತಾರೆ? ಬಾಬಾ, ಹೇಳುವುದಕ್ಕೆ ಆಗದೇ ಇರುವಷ್ಟು ಪ್ರೀತಿಯಿದೆ. ಬಹಳ ಒಳ್ಳೆಯ ಉತ್ತರ ನೀಡುತ್ತಾರೆ. ಬಾಪ್ದಾದಾರವರಿಗೂ ಖುಷಿಯಾಗುತ್ತದೆ ಆದರೆ ಪ್ರೀತಿಯ ಪ್ರತ್ಯಕ್ಷ ಪ್ರಮಾಣ ಏನಾಗಿದೆ? ಈಗಿನ ಕಾಲದಲ್ಲಿ ಪ್ರಪಂಚದವರು ದೇಹಾಭಿಮಾನದ ಪ್ರೀತಿಯಲ್ಲಿ ಪ್ರಾಣವನ್ನೂ ಸಹ ಕೊಡುತ್ತಾರೆ. ಪರಮಾತ್ಮನ ಪ್ರೀತಿಯಲ್ಲಿ ತಂದೆ ತಿಳಿಸುತ್ತಾರೆ ಅಂದಾಗ ಮಕ್ಕಳು ಮಾಡುವುದರಲ್ಲಿ ಕಷ್ಟವಿದೆಯೇ? ಬಹಳ ಒಳ್ಳೊಳ್ಳೆ ಗೀತೆಗಳನ್ನು ಹಾಡುತ್ತೀರಿ. ಬಾಬಾ ನಾವು ಬಲಿಹಾರಿಯಾಗುವ ಪತಂಗಗಳಾಗಿದ್ದೇವೆ. ಜ್ಯೋತಿಗೆ ಬಲಿಹಾರಿ ಆಗುವವರಾಗಿದ್ದೇವೆ ಅಂದಾಗ ಈ ‘ಕಾರಣ’ ಶಬ್ದವನ್ನು ಸ್ವಾಹಾ ಮಾಡಲು ಆಗುವುದಿಲ್ಲವೇ?

ಈಗಂತೂ ಈ ವರ್ಷದ ಕೊನೆಯ ಸರದಿ ಬಂದಿದೆ. ಇನ್ನೊಂದು ವರ್ಷ ಏನಾಗುತ್ತದೆ ಎಂದು ತಾವು ಹಾಗೂ ಬಾಪ್ದಾದಾರವರು ನೋಡುತ್ತಿದ್ದೇವೆ, ನೋಡುತ್ತೇವೆ ಆದರೆ ಈ ಒಂದು ಶಬ್ಧವನ್ನು ಸಮಯವನ್ನು ನೋಡಿ ಪರಿವರ್ತನೆ ಮಾಡಿಕೊಳ್ಳಿ. ಸಮಯದ ಕರೆಯಿದೆ ಎಂದು ತಾವೆಲ್ಲರೂ ಹೇಳುತ್ತೀರಲ್ಲವೇ. ಭಕ್ತರ ಕೂಗು, ಸಮಯದ ಕೂಗು, ದುಃಖಿ ಆತ್ಮರ ಕೂಗು, ತಮ್ಮ ಸ್ನೇಹಿ ಹಾಗೂ ಸಹಯೋಗಿ ಆತ್ಮಗಳ ಕೂಗನ್ನು ತಾವೇ ಪೂರ್ಣ ಮಾಡುತ್ತೀರಲ್ಲವೇ! ತಮ್ಮ ಬಿರುದು ಏನಾಗಿದೆ? ತಮ್ಮ ಕರ್ತವ್ಯವೇನಾಗಿದೆ? ಯಾವ ಕರ್ತವ್ಯಗೋಸ್ಕರ ಬ್ರಾಹ್ಮಣರಾಗಿದ್ದೀರಿ? ವಿಶ್ವ ಪರಿವರ್ತಕರೆಂಬ ಬಿರುದು ತಮ್ಮದಾಗಿದೆ. ವಿಶ್ವ ಪರಿವರ್ತನೆ ತಮ್ಮ ಕಾರ್ಯವಾಗಿದೆ ಹಾಗೂ ಇದರಲ್ಲಿ ಯಾರು ಜೊತೆಗಾರರಾಗಿದ್ದಾರೆ? ಬಾಪ್ದಾದಾರವರ ಜೊತೆ-ಜೊತೆಗೆ ಈ ಕಾರ್ಯದಲ್ಲಿ ತಾವು ನಿಮಿತ್ತರಾಗಿದ್ದೀರಿ ಅಂದಾಗ ಏನು ಮಾಡಬೇಕು? ಈಗಲೂ ಸಹ ಕೈಯನ್ನು ಎತ್ತಿಸುತ್ತೇವೆ. ಮಾಡುತ್ತೀರಾ ಅಂದಾಗ ಎಲ್ಲರೂ ಕೈಯನ್ನು ಎತ್ತುತ್ತಾರೆ. ಲಕ್ಷ್ಯವನ್ನಂತೂ ಇಟ್ಟುಕೊಂಡಿದ್ದಾರೆ. ಈ ವರ್ಷದ ಸೀಜನಿನಲ್ಲಿ ಎಲ್ಲರೂ ಸಂಕಲ್ಪ ಮಾಡಿದ್ದಾರೆ ಸಫಲತೆಯ ಬೀಗದ ಕೈ ಮಾಡಲೇಬೇಕು ಎಂಬ ದೃಢತೆಯಾಗಿದೆ. ಆದರೆ ಅದರ ಬದಲಾಗಿ ಕೆಲವೊಮ್ಮೆ ಮಾಡುತ್ತಿದ್ದೀರಿ. ನಡೆಯುತ್ತಾ ಇದ್ದೀರಿ. ಮಾಡುತ್ತೇವೆ ಎನ್ನುತ್ತಿದ್ದೀರಿ, ಇದನ್ನು ಬಾಪ್ದಾದಾರವರು ನೋಡುತ್ತಿದ್ದೇವೆ. ಇಂತಹ ಸಂಕಲ್ಪವು ದೃಢತೆಯನ್ನು ಸಾಧಾರಣ ಮಾಡಿಬಿಡುತ್ತದೆ. ದೃಢತೆಯ ಕಾರಣ ಇಂತಹ ಶಬ್ದಗಳು ಬರುವುದೇ ಇಲ್ಲ, ನಿವಾರಣೆಯಾಗುತ್ತದೆ. ಕಾರಣವಿದ್ದರೂ ಪರಿಶೀಲನೆಯಾಗುವುದರ ಕಾರಣ, ಕಾರಣವು ನಿವಾರಣೆಯಲ್ಲಿ ಬದಲಾವಣೆಯಾಗುತ್ತದೆ.

ಬಾಪ್ದಾದಾರವರು ಫಲಿತಾಂಶವನ್ನು ಪರಿಶೀಲಿಸಿದಾಗ ಏನು ನೋಡಿದರು? ಜ್ಞಾನಿ, ಯೋಗಿ, ಧಾರಣ ಸ್ವರೂಪ ಸೇವಾಧಾರಿ ನಾಲ್ಕೂ ವಿಷಯದಲ್ಲಿ ಪ್ರತಿಯೊಬ್ಬರು ಯಥಾಶಕ್ತಿಯನುಸಾರವಾಗಿ ಜ್ಞಾನಿಯೂ ಸಹ ಆಗಿದ್ದಾರೆ, ಯೋಗಿಯೂ ಸಹ ಆಗಿದ್ದಾರೆ, ಧಾರಣೆಯನ್ನೂ ಸಹ ಮಾಡುತ್ತಿದ್ದೀರಿ, ಸೇವೆಯೂ ಸಹ ಮಾಡುತ್ತಿದ್ದೀರಿ ಆದರೆ ನಾಲ್ಕೂ ಸಬ್ಜೆಕ್ಟ್ಗಳಲ್ಲಿ ಅನುಭವೀ ಸ್ವರೂಪ, ಅನುಭವದ ಅಥಾರಿಟಿಯಾಗುವುದರಲ್ಲಿ ಕಡಿಮೆ ಕಂಡು ಬರುತ್ತಿದೆ. ಅನುಭವಿ ಸ್ವರೂಪ, ಜ್ಞಾನ ಸ್ವರೂಪದಲ್ಲಿಯೂ ಸಹ ಅನುಭವಿ ಸ್ವರೂಪ ಅರ್ಥಾತ್ ಜ್ಞಾನಕ್ಕೆ ನಾಲೆಡ್ಜ್ ಎಂದು ಹೇಳುತ್ತಾರೆ ಅಂದಾಗ ಅನುಭವಿಮೂರ್ತಿ ಆತ್ಮನಲ್ಲಿ ನಾಲೆಡ್ಜ್ ಅರ್ಥಾತ್ ಏನು ಮಾಡಬೇಕು, ಏನು ಮಾಡಬಾರದು ಎಂಬ ತಿಳುವಳಿಕೆಯಾಗಿದೆ. ಜ್ಞಾನದ ಬೆಳಕು ಹಾಗೂ ಶಕ್ತಿಯಿರುತ್ತದೆಯೆಂದರೆ ಜ್ಞಾನಿ ಆತ್ಮನ ಪ್ರತಿಯೊಂದು ಕರ್ಮದಲ್ಲಿ ಬೆಳಕು ಹಾಗೂ ಶಕ್ತಿ ಸಹಜವಾಗಿರುವುದೇ ಅನುಭವಿ ಸ್ವರೂಪದ ಅರ್ಥವಾಗಿದೆ. ಜ್ಞಾನಿ ಅರ್ಥಾತ್ ಜ್ಞಾನ, ನಾಲೆಡ್ಜ್ನ್ನು ತಿಳಿಯುವುದು, ವರ್ಣನೆ ಮಾಡುವುದು, ಅದರ ಜೊತೆ ಜೊತೆ ಪ್ರತಿಯೊಂದು ಕರ್ಮದಲ್ಲಿ ಬೆಳಕು ಹಾಗೂ ಶಕ್ತಿ (ಲೈಟ್ ಹಾಗೂ ಮೈಟ್) ಇರುವುದು. ಅನುಭವಿ ಸ್ವರೂಪದಿಂದ ಪ್ರತಿಯೊಂದು ಕರ್ಮ ಸ್ವಾಭಾವಿಕವಾಗಿಯೇ ಶ್ರೇಷ್ಠವಾಗಿರುತ್ತದೆ ಹಾಗೂ ಸಫಲತೆ ಸಿಗುತ್ತದೆ. ಪರಿಶ್ರಮ ಪಡಬೇಕಾಗಿಲ್ಲ ಏಕೆಂದರೆ ಜ್ಞಾನದ ಅನುಭವಿ ಮೂರ್ತಿಯಾಗಿರುತ್ತಾರೆ. ಅನುಭವದ ಅಥಾರಿಟಿ ಎಲ್ಲಾ ಅಥಾರಿಟಿಗಿಂತಲೂ ಶ್ರೇಷ್ಠವಾಗಿದೆ. ಜ್ಞಾನವನ್ನು ತಿಳಿಯುವುದು ಹಾಗೂ ಜ್ಞಾನದ ಅನುಭವಿ ಸ್ವರೂಪದ ಅಥಾರಿಟಿಯಿಂದ ಪ್ರತಿಯೊಂದು ಕರ್ಮವನ್ನು ಮಾಡುವುದರಲ್ಲಿ ವ್ಯತ್ಯಾಸವಿದೆ ಅಂದಾಗ ಅನುಭವಿ ಸ್ವರೂಪರಾಗಿದ್ದೀರಾ? ನಾಲ್ಕೂ ಸಬ್ಜೆಕ್ಟ್ಗಳಲ್ಲಿ ಪರಿಶೀಲನೆ ಮಾಡಿಕೊಳ್ಳಿ. ಆತ್ಮನಾಗಿದ್ದೇನೆ ಆದರೆ ಅನುಭವಿ ಸ್ವರೂಪರಾಗಿ ಕರ್ಮ ಮಾಡುತ್ತೀರಾ? ಅನುಭವದ ಅಥಾರಿಟಿಯ ಸೀಟ್ನಲ್ಲಿ ಸೆಟ್ ಆಗಿದ್ದೇ ಆದರೆ ಶ್ರೇಷ್ಠ ಕರ್ಮ, ಸಫಲತಾ ಸ್ವರೂಪ ಕರ್ಮದ ಅಥಾರಿಟಿಯ ಮುಂದೆ ಸ್ವಾಭಾವಿಕ ಸ್ವಭಾವ ಕಂಡು ಬರುತ್ತದೆ. ಯೋಚನೆ ಮಾಡುತ್ತೀರಿ ಆದರೆ ಅನುಭವಿ ಸ್ವರೂಪರಾಗಬೇಕು, ಯೋಗಯುಕ್ತ ರಹಸ್ಯಯುಕ್ತ ಸ್ವಭಾವ ಸ್ವಾಭಾವಿಕವಾಗಬೇಕು. ಧಾರಣೆಯಲ್ಲಿ ಸರ್ವ ಗುಣಗಳು ಸ್ವತಹವಾಗಿಯೇ ಪ್ರತಿಯೊಂದು ಕರ್ಮದಲ್ಲಿ ಕಂಡು ಬರುತ್ತದೆ. ಇಂತಹ ಅನುಭವಿ ಸ್ವರೂಪದಲ್ಲಿ ಸದಾ ಇರಬೇಕು, ಅನುಭವದ ಸೀಟಿನಲ್ಲಿ ಸೆಟ್ ಆಗುವುದರ ಅಟೆನ್ಷನ್ ಇಟ್ಟುಕೊಳ್ಳುವ ಅವಶ್ಯಕತೆಯಿದೆ.

ಅಂದಾಗ ಈ ವರ್ಷದಲ್ಲಿ ಏನು ಮಾಡುತ್ತೀರಿ? ಒಂದು ವಿಷಯದಲ್ಲಿ ಹೆಚ್ಚು (ಮೆಜಾರಿಟಿ) ಉತ್ತೀರ್ಣರಾಗಿರುವುದು ಬಾಪ್ದಾದಾರವರು ನೋಡಿದ್ದೇವೆ. ಯಾವ ವಿಷಯದಲ್ಲಿ? ಸೇವೆಯ ಸಬ್ಜೆಕ್ಟ್ನಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ಎಲ್ಲಾ ಕಡೆಯಿಂದ ಬಾಪ್ದಾದಾರವರ ಬಳಿ ಬಹಳ ಒಳ್ಳೊಳ್ಳೆಯ ಸೇವೆಯ ರಿಕಾರ್ಡ್ ಬಂದಿದೆ ಹಾಗೂ ಸೇವೆಯ ಉಮ್ಮಂಗ-ಉತ್ಸಾಹವು ಈ ವರ್ಷದ ಸೇವೆಯ ಸಮಾಚಾರಗಳ ಲೆಕ್ಕವನ್ನು ಚೆನ್ನಾಗಿ ತೋರಿಸಿದ್ದೀರಿ. ಪ್ರತಿಯೊಂದು ವರ್ಗ, ಪ್ರತಿಯೊಂದು ಜೋನ್ ಭಿನ್ನ-ಭಿನ್ನ ರೂಪದಿಂದ ಸೇವೆಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಿ. ಇದಕ್ಕೆ ಬಾಪ್ದಾದಾರವರು ಪ್ರತಿಯೊಂದು ಜೋನ್, ಪ್ರತಿಯೊಂದು ವರ್ಗಕ್ಕೆ ಪದಮಪದಮಾ ಗುಣದಷ್ಟು ಶುಭಾಷಯಗಳನ್ನು ಕೊಡುತ್ತಿದ್ದೇವೆ. ಒಳ್ಳೊಳ್ಳೆಯ ಪ್ಲಾನ್ನ್ನೂ ಸಹ ಮಾಡಿದ್ದೀರಿ ಆದರೆ ಈಗ ಸಮಯ ಪ್ರಮಾಣ ಇದ್ದಕ್ಕಿದ್ದಂತೆ ಏನಾದರೂ ಆಗುವ (ಅಚಾನಕ್) ಸೀಜನ್ ಆಗಿದೆ. ಎಷ್ಟು ಜನ ಬ್ರಾಹ್ಮಣರು ಇದ್ದಕ್ಕಿದ್ದಂತೆ ಹೋದರು ಎಂದು ತಾವು ನೋಡಿರಬಹುದು ಅಥವಾ ಕೇಳಿರಬಹುದು ಅಂದಾಗ ಈಗ ಇದ್ದಕ್ಕಿದ್ದಂತೆಯ (ಅಚಾನಕ್) ಗಂಟೆಯು ತೀಕ್ಷ್ಣವಾಗುತ್ತಿದೆ. ಅದರನುಸಾರವಾಗಿ ಈಗ ಈ ವರ್ಷದಲ್ಲಿ ನಾನು ನಾಲ್ಕೂ ಸಬ್ಜೆಕ್ಟ್ನಲ್ಲಿ ಅನುಭವಿ ಸ್ವರೂಪ ಎಲ್ಲಿಯವರೆಗೆ ಆಗಿದ್ದೇನೆ? ಏಕೆಂದರೆ ನಾಲ್ಕೂ ಸಬ್ಜೆಕ್ಟ್ಗಳಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳಬೇಕಾಗಿದೆ. ಒಂದುವೇಳೆ ಒಂದು ಸಬ್ಜೆಕ್ಟ್ನಲ್ಲಿ ಪಾಸ್ ಮಾರ್ಕ್ಸ್ ಗಿಂತಲೂ ಕಡಿಮೆಯಾದರೆ ಪಾಸ್-ವಿತ್-ಆನರ್, ಮಾಲೆಯ ಮಣಿ, ಬಾಪ್ದಾದಾರವರ ಕೊರಳಿನ ಹಾರ ಹೇಗಾಗುತ್ತೀರಿ! ಯಾವುದೇ ರೂಪದಲ್ಲಿ ಸೋಲುವವರು ತಂದೆಯ ಕೊರಳಿನ ಹಾರವಾಗಲು ಸಾಧ್ಯವಿಲ್ಲ. ಇಲ್ಲಿ ಕೈ ಎತ್ತಿಸಿದ್ದಾಗ ಎಲ್ಲರು ಏನು ಹೇಳುತ್ತೀರಿ? ಲಕ್ಷ್ಮೀ-ನಾರಾಯಣ ಆಗುತ್ತೇವೆ ಎಂದು ಹೇಳುತ್ತೀರಿ. ಲಕ್ಷ್ಮೀ-ನಾರಾಯಣರಾಗಲಿ ಅಥವಾ ಲಕ್ಷ್ಮೀ-ನಾರಾಯಣರ ಪರಿವಾರದಲ್ಲಿ ಜೊತೆಗಾರರಾಗುವುದೂ ಸಹ ಶ್ರೇಷ್ಠ ಪದವಿಯಾಗಿದೆ ಆದ್ದರಿಂದ ಬಾಪ್ದಾದಾರವರು ಕೇವಲ ಒಂದು ಶಬ್ದವನ್ನು ಹೇಳುತ್ತಾರೆ, ಈಗ ತೀವ್ರ ಗತಿಯಿಂದ ಹಾರುವ ಕಲೆಯಲ್ಲಿ ಹಾರುತ್ತಿರಿ ಹಾಗೂ ತಮ್ಮ ಹಾರುವ ಕಲೆಯ ವೈಬ್ರೇಷನ್ನ ಮೂಲಕ ವಾಯುಮಂಡಲದಲ್ಲಿ ಸಹಯೋಗದ ವಾಯುಮಂಡಲವನ್ನು ಹರಡಿಸಿ. ಯಾವಾಗ ಪ್ರಕೃತಿಗೋಸ್ಕರ ತಾವೆಲ್ಲರೂ ಪ್ರಕೃತಿಯನ್ನೂ ಸಹ ಪರಿವರ್ತನೆ ಮಾಡಿಯೇ ಬಿಡುತ್ತೇವೆ ಎಂದು ಚಾಲೆಂಜ್ ಮಾಡಿದ್ದೀರಿ. ಪ್ರತಿಜ್ಞೆ ಇದೆಯಲ್ಲವೇ? ಪ್ರತಿಜ್ಞೆಯನ್ನು ಮಾಡಿದ್ದೀರಲ್ಲವೇ? ಮಾಡಿದ್ದೀರಿ. ಕತ್ತನ್ನು ಅಲುಗಾಡಿಸಿ, ಕೈಯನ್ನಲ್ಲ. ನಿಮ್ಮ ಸಹ ವರ್ಗದವರಾದ ಮನುಷ್ಯಾತ್ಮರಿಗೆ ದುಃಖ-ಅಶಾಂತಿಯಿಂದ ಪರಿವರ್ತನೆ ಮಾಡಲು ಸಾಧ್ಯವಿಲ್ಲವೇ? ಒಂದಂತೂ ತಾವು ಛಾಲೆಂಜ್ ಮಾಡಿದಿರಿ ಮತ್ತು ಇನ್ನೊಂದು ಬಾಪ್ದಾದಾರವರಿಗೂ ಪ್ರತಿಜ್ಞೆ ಮಾಡಿದಿರಿ, ನಾವೆಲ್ಲರೂ ಈಗಲೂ ಸಹ ತಮ್ಮ ಕಾರ್ಯದಲ್ಲಿ ಜೊತೆಗಾರರಾಗಿದ್ದೇವೆ, ಪರಮಧಾಮದಲ್ಲಿಯೂ ಸಹ ಜೊತೆಗಾರರಾಗಿದ್ದೇವೆ ಮತ್ತು ರಾಜ್ಯದಲ್ಲಿಯೂ ಸಹ ಬ್ರಹ್ಮಾ ತಂದೆಯ ಜೊತೆಗಾರರಾಗಿರುತ್ತೇವೆ ಎಂದು ಮೊದಲನೆಯದಾಗಿ ತಾವು ವಾಗ್ದಾನ ಮಾಡಿದಿರಿ, ಎರಡನೆಯದಾಗಿ ಬಾಪ್ದಾದಾರವರಿಗೂ ಸಹ ವಾಗ್ದಾನ ಕೊಟ್ಟಿರಿ. ಈ ವಾಗ್ದಾನವನ್ನು ಮಾಡಿದ್ದೀರಲ್ಲವೆ! ಅಂದಾಗ ಜೊತೆಯಲ್ಲಿ ಹೋಗುತ್ತೇವೆ, ಜೊತೆಯಲ್ಲಿಯೇ ಇರುತ್ತೇವೆ, ಈಗಲೂ ಸಹ ಜೊತೆಯಲ್ಲಿದ್ದೇವೆ. ತಂದೆಯ ಸೂಚನೆಗಳು ಸಮಯ ಪ್ರತಿ ಸಮಯ ಪ್ರತ್ಯಕ್ಷವಾಗಿ ನೋಡುತ್ತಿದ್ದೀರಿ. ತಕ್ಷಣ ಸದಾ ಸಿದ್ಧರಾಗುವುದು. ದಾದಿಯವರ ಬಗ್ಗೆ ಇವರು ಹೋಗುತ್ತಾರೆಂದು ವಿಚಾರವಿತ್ತೇ? ಅಚಾನಕ್ನ ಆಟವನ್ನು ನೋಡಿದಿರಲ್ಲವೆ. ಅಂದಾಗ ಈ ವರ್ಷ ಎವರೆಡಿಯಾಗಿ, ತಂದೆಯ ಹೃದಯದ ಆಸೆಗಳನ್ನು ಪೂರ್ಣ ಮಾಡುವಂತಹ ಆಶಾದೀಪಗಳಾಗಲೇಬೇಕು. ತಂದೆಯ ಆಸೆಗಳನ್ನಂತೂ ತಿಳಿದುಕೊಂಡೇ ಇದ್ದೀರಿ. ಆಗುತ್ತೀರಾ? ಅಥವಾ ಆಗುತ್ತೇವೆ, ನೋಡುತ್ತೇವೆ ಎಂದು..... ಯಾರು ಆಗಲೇಬೇಕು ಎನ್ನುವವರಿದ್ದೀರಿ ಅವರು ಕೈಯೆತ್ತಿರಿ. ಕ್ಯಾಮರಾದಲ್ಲಿ ನಿಮ್ಮ ಭಾವಚಿತ್ರ ಬರುತ್ತಿದೆ. ಬಾಪ್ದಾದಾರವರನ್ನು ಬಹಳಷ್ಟು ಸಂತೋಷ ಪಡಿಸುತ್ತೀರಿ. ಬಾಪ್ದಾದಾರವರೂ ಸಹ ಮಕ್ಕಳನ್ನು ಬಿಟ್ಟು ಒಂಟಿಯಾಗಿ ಹೋಗಲೂ ಸಾಧ್ಯವಿಲ್ಲ. ಬ್ರಹ್ಮಾ ತಂದೆಯೂ ಸಹ ತಾವು ಮಕ್ಕಳಿಗಾಗಿ ಮುಕ್ತಿಯ ಗೇಟನ್ನು ತೆರೆಯಲು ನಿರೀಕ್ಷಣೆಯಲ್ಲಿದ್ದಾರೆ. ಅಡ್ವಾನ್ಸ್ ಪಾರ್ಟಿಯವರೂ ಸಹ ನಿರೀಕ್ಷಿಸುತ್ತಿದ್ದಾರೆ. ತಾವು ನಿರೀಕ್ಷಿಸುವವರಲ್ಲ. ಸಿದ್ಧರಿರುವವರಾಗಿದ್ದೀರಿ. ಅಂದಾಗ ಈ ವರ್ಷ ಗುರಿಯನ್ನಿಟ್ಟುಕೊಳ್ಳಿ ಆದರೆ ಲಕ್ಷ್ಯ ಮತ್ತು ಲಕ್ಷಣವನ್ನು ಸಮಾನವಾಗಿಟ್ಟುಕೊಳ್ಳಬೇಕು. ಲಕ್ಷ್ಯ ಬಹಳ ಚೆನ್ನಾಗಿದೆ ಆದರೆ ಲಕ್ಷಣದಲ್ಲಿ ಬಲಹೀನರಾಗಿರುವುದು - ಈ ರೀತಿ ಇರಬಾರದು. ಲಕ್ಷ್ಯ ಮತ್ತು ಲಕ್ಷಣ ಸಮಾನವಾಗಿರಲಿ. ನಿಮ್ಮೆಲ್ಲರ ಹೃದಯದ ಆಸೆ ಸಮಾನರಾಗುವುದಾಗಿದೆ. ಅದು ಯಾವಾಗ ಪೂರ್ಣವಾಗುತ್ತದೆಯೆಂದರೆ ಲಕ್ಷ್ಯ ಮತ್ತು ಲಕ್ಷಣ ಸಮಾನವಾಗಿರಲಿ. ಲಕ್ಷ್ಯ ಮತ್ತು ಲಕ್ಷಣದಲ್ಲಿ ಈಗ ಸ್ವಲ್ಪ-ಸ್ವಲ್ಪ ಅಂತರವಾಗಿ ಬಿಡುತ್ತದೆ. ಪ್ಲಾನ್ನ್ನು ಬಹಳ ಚೆನ್ನಾಗಿ ಮಾಡುತ್ತೀರಿ, ಪರಸ್ಪರದಲ್ಲಿ ವಾರ್ತಾಲಾಪವನ್ನೂ ಸಹ ಬಹಳ ಚೆನ್ನಾಗಿ ಮಾಡುತ್ತೀರಿ. ಒಬ್ಬರಿಗೊಬ್ಬರು ಗಮನವನ್ನೂ ಸಹ ತರಿಸುತ್ತೀರಿ. ಈಗ ಧೃಡತೆಯು ನಮ್ಮ ಜನ್ಮಸಿದ್ಧ ಅಧಿಕಾರವಾಗಿದೆ. ಈ ಸಂಕಲ್ಪವನ್ನು ಅನುಭವದ ರೂಪದಲ್ಲಿ ತನ್ನಿ. ಏನು ಹೇಳುತ್ತೀರೋ ಅದರ ಅನುಭವವನ್ನೂ ಮಾಡುತ್ತೇವೆಯೇ? ಪರಿಶೀಲನೆ ಮಾಡಿಕೊಳ್ಳಿ. ಏನು ಹೇಳುತ್ತೇವೆಯೋ ಅದರ ಅನುಭವವನ್ನೂ ಮಾಡುತ್ತೇವೆಯೇ? ಮೊದಲನೆ ಶಬ್ಧವಾಗಿದೆ - ನಾನು ಆತ್ಮನಾಗಿದ್ದೇನೆ. ಇದನ್ನೇ ಪರಿಶೀಲನೆ ಮಾಡಿಕೊಳ್ಳಿ. ಈ ಆತ್ಮ ಸ್ವರೂಪದ ಅನುಭವದ ಅಥಾರಿಟಿಯಿದೆಯೇ? ಏಕೆಂದರೆ ಅನುಭವದ ಅಥಾರಿಟಿ ನಂಬರ್ವನ್ ಆಗಿದೆ. ಒಳ್ಳೆಯದು.

ಈಗ ಯಾವುದೇ ಪರಿಸ್ಥಿತಿಯಲ್ಲಿಯೂ ಸ್ವಸ್ಥಿತಿಯಲ್ಲಿ ಸ್ಥಿತರಾಗುತ್ತೀರಾ? ಮನಸ್ಸಿನ ಏಕಾಗ್ರತೆ ಚೆನ್ನಾಗಿದೆ. ಮೂರು ಬಿಂದುಗಳ ಸ್ಮೃತಿ ಸ್ವರೂಪರಾಗಲು ಸಾಧ್ಯವಿದೆಯಲ್ಲವೆ! ಬಿಂದುವನ್ನಿಡಿ. ಒಳ್ಳೆಯದು.

ಈಗ ಒಂದು ಸೆಕೆಂಡಿನಲ್ಲಿ ತಮ್ಮ ಶ್ರೇಷ್ಠ ಸ್ವಮಾನ ಬಾಪ್ದಾದಾರವರ ಹೃದಯ ಸಿಂಹಾಸನಾಧಿಕಾರಿ - ಈ ಆತ್ಮಿಕ ಸ್ವಮಾನದ ನಶೆಯಲ್ಲಿ ಸ್ಥಿತರಾಗಿ. ಹೃದಯ ಸಿಂಹಾಸನಾಧಿಕಾರಿ ಆಗಿದ್ದೇನೆಂಬ ಅನುಭವದಲ್ಲಿ ಲವಲೀನರಾಗಿ. ಒಳ್ಳೆಯದು.

ನಾಲ್ಕಾರೂ ಕಡೆಯ ಅತಿ ಲವಲಿ ಸದಾ ತಂದೆಯ ಪ್ರೀತಿಯಲ್ಲಿ ಲವಲೀನರಾಗಿರುವಂತಹ, ಸದಾ ಸ್ವಮಾನದಲ್ಲಿ, ಸ್ವರಾಜ್ಯಧಾರಿ ವಿಶೇಷ ಆತ್ಮರಿಗೆ, ನಾಲ್ಕಾರು ಕಡೆಯ ಉಮ್ಮಂಗ-ಉತ್ಸಾಹದ ರೆಕ್ಕೆಗಳಿಂದ ಹಾರುತ್ತಿರುವಂತಹ ಮತ್ತು ತಮ್ಮ ಮನಸ್ಸಿನ ವೈಬ್ರೇಷನ್ಸ್ನ ಮೂಲಕ ವಾಯುಮಂಡಲವನ್ನು ಶಾಂತ-ಶ್ರೇಷ್ಠವನ್ನಾಗಿ ಮಾಡುವಂತಹ ಎಲ್ಲರಿಗೂ ಬಾಬಾರವರ ಸಂದೇಶ ಕೊಟ್ಟು ದುಃಖದಿಂದ ಬಿಡಿಸಿ ಮುಕ್ತಿಯ ಆಸ್ತಿ ಕೊಡಿಸುವಂತಹ, ಸದಾ ಧೃಡತೆಯ ಮೂಲಕ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ, ನಾಲ್ಕಾರು ಕಡೆಯ ಹೃದಯಕ್ಕೆ ಸಮೀಪವಿರುವಂತಹ ಹಾಗೂ ಸನ್ಮುಖ ಬರುವಂತಹ ಎಲ್ಲಾ ಮಕ್ಕಳಿಗೂ ಹೃದಯದ ಪ್ರೀತಿ ಹಾಗೂ ಹೃದಯದ ಆಶೀರ್ವಾದಗಳು, ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:
ಧರ್ಮ ಮತ್ತು ಕರ್ಮ ಎರಡನ್ನೂ ಸಮಾನ ಸಮತೋಲನದಲ್ಲಿ ಇಟ್ಟುಕೊಳ್ಳುವಂತಹ ದಿವ್ಯ ಅಥವಾ ಶ್ರೇಷ್ಠ ಬುದ್ಧಿವಂತ ಭವ.

ಕರ್ಮವನ್ನು ಮಾಡುವ ಸಮಯದಲ್ಲಿ ಧರ್ಮ ಅರ್ಥಾತ್ ಧಾರಣೆಯೂ ಸಹ ಸಂಪೂರ್ಣವಾಗಿ ಇರುತ್ತದೆಯೆಂದರೆ, ಧರ್ಮ ಮತ್ತು ಕರ್ಮವೆರಡರ ಸಮತೋಲವು ಸಮಾನವಾಗಿ ಇರುವುದರಿಂದ ಪ್ರಭಾವ ಬೀರುವುದು. ಅದು ಈ ರೀತಿ ಆಗಬಾರದು - ಯಾವಾಗ ಕರ್ಮವು ಸಮಾಪ್ತಿಯಾಗುವುದೋ ಆಗ ಧಾರಣೆಯು ಸ್ಮೃತಿಗೆ ಬಂದಿತು. ಬುದ್ಧಿಯಲ್ಲಿ ಎರಡೂ ಮಾತಿನಲ್ಲಿ ಸಮಾನ ಸಮತೋಲನವಿದ್ದಾಗ ಹೇಳಲಾಗುತ್ತದೆ - ಶ್ರೇಷ್ಠ ಅಥವ ದಿವ್ಯ ಬುದ್ಧಿವಂತರು. ಇಲ್ಲದಿದ್ದರೆ ಸಾಧಾರ ಬುದ್ಧಿ, ಕರ್ಮವೂ ಸಾಧಾರಣ, ಧಾರಣೆಗಳೂ ಸಾಧಾರಣವಾಗಿ ಇರುತ್ತದೆ. ಈ ಸಾಧಾರಣತೆಯಲ್ಲಿ ಸಮಾನತೆ ತರಬಾರದು ಆದರೆ ಶ್ರೇಷ್ಠತೆಯಲ್ಲಿ ಸಮಾನತೆಯಿರಲಿ. ಶ್ರೇಷ್ಠ ಕರ್ಮದಂತೆ ಧಾರಣೆಯೂ ಶ್ರೇಷ್ಠವಾಗಿರಲಿ.

ಸ್ಲೋಗನ್:
ತಮ್ಮ ಮನಸ್ಸು-ಬುದ್ಧಿಯನ್ನು ಅನುಭವ ಆಸನದಲ್ಲಿ ಸ್ಥಿತಗೊಳಿಸುತ್ತೀರೆಂದರೆ, ಎಂದಿಗೂ ಏರುಪೇರಾಗುವುದಿಲ್ಲ.

ಅವ್ಯಕ್ತ ಸೂಚನೆಗಳು:- ಈ ಅವ್ಯಕ್ತ ಮಾಸದಲ್ಲಿ ಬಂಧನಮುಕ್ತರಾಗಿ ಜೀವನಮುಕ್ತ ಸ್ಥಿತಿಯ ಅನುಭವ ಮಾಡಿರಿ.

ಜ್ಞಾನ ಸ್ವರೂಪ, ಮಾಸ್ಟರ್ ಜ್ಞಾನ ಸ್ವರೂಪರಾಗಿ ಮತ್ತು ಮಾಸ್ಟರ್ ಸರ್ವಶಕ್ತಿವಂತನಾಗಿ ಇದ್ದರೂ, ಯುಕ್ತಿಯುಕ್ತವಲ್ಲದ ಕರ್ಮ ಮಾಡಿದರೆಇಂತಹ ಕರ್ಮದ ಬಂಧನ ಅಜ್ಞಾನ ಕಾಲದ ಕರ್ಮ ಬಂಧನಕ್ಕಿಂತ ಸಾವಿರದಶ್ಟು ಹೆಚ್ಚು. ಆದ್ದರಿಂದ ಬಂಧನಯುಕ್ತ ಆತ್ಮಕ್ಕೆ ಸ್ವತಂತ್ರತೆ ಇರುವುದಿಲ್ಲ, ಮತ್ತು ಬಯಸಿದುದನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯುಕ್ತಿ ಯುಕ್ತ ಕರ್ಮಗಳ ಮೂಲಕ ಮುಕ್ತಿಯನ್ನು ಪಡೆಯಿರಿ.