25.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಮ್ಮೊಂದಿಗೆ ತಾವು ಕೇಳಿಕೊಳ್ಳಿ - ನಾನು ಕರ್ಮೇಂದ್ರಿಯಾಜೀತನಾಗಿದ್ದೇನೆಯೇ? ಯಾವುದೇ ಕರ್ಮೇಂದ್ರಿಯವು ನನಗೆ ಮೋಸ ಮಾಡುತ್ತಿಲ್ಲವೆ!”

ಪ್ರಶ್ನೆ:
ಕರ್ಮಾತೀತರಾಗಲು ನೀವು ಮಕ್ಕಳು ತಮ್ಮೊಂದಿಗೆ ತಾವು ಯಾವ ಪ್ರತಿಜ್ಞೆ ಮಾಡಿಕೊಳ್ಳಬೇಕು?

ಉತ್ತರ:
ತಮ್ಮೊಂದಿಗೆ ಪ್ರತಿಜ್ಞೆ ಮಾಡಿ - ಯಾವುದೇ ಕರ್ಮೇಂದ್ರಿಯವು ಎಂದೂ ಚಲಾಯಮಾನ ಆಗಬಾರದು, ನಾನು ನನ್ನ ಕರ್ಮೇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳಬೇಕು, ತಂದೆಯು ಯಾವುದೆಲ್ಲಾ ಆದೇಶ ನೀಡಿದ್ದಾರೆಯೋ ಅದನ್ನು ಕಾರ್ಯದಲ್ಲಿ ತರಲೇಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಕರ್ಮಾತೀತರಾಗಬೇಕೆಂದರೆ ಯಾವುದೆ ಕರ್ಮೇಂದ್ರಿಯದಿಂದ ವಿಕರ್ಮ ಮಾಡಬೇಡಿ. ಮಾಯೆಯು ಬಹಳ ಪ್ರಬಲವಾಗಿದೆ. ಕಣ್ಣುಗಳು ಮೋಸಗಾರನಾಗಿವೆ, ಆದ್ದರಿಂದ ತನ್ನ ಸಂಭಾಲನೆ ಮಾಡಿಕೊಳ್ಳಿ.

ಓಂ ಶಾಂತಿ.
ಮಕ್ಕಳು ಆತ್ಮಾಭಿಮಾನಿಯಾಗಿ ಕುಳಿತಿದ್ದೀರಾ? ತನ್ನೊಂದಿಗೆ ತಾನು ಕೇಳಿಕೊಳ್ಳಿ, ಪ್ರತಿಯೊಂದು ಮಾತನ್ನು ತಮ್ಮೊಂದಿಗೆ ಕೇಳಿಕೊಳ್ಳಬೇಕಾಗುತ್ತದೆ. ತಂದೆಯು ಯುಕ್ತಿಯನ್ನು ತಿಳಿಸುತ್ತಾರೆ, ಮಕ್ಕಳೇ ತನ್ನೊಂದಿಗೆ ಕೇಳಿಕೊಳ್ಳಿ - ಆತ್ಮಾಭಿಮಾನಿಯಾಗಿ ಕುಳಿತಿದ್ದೇನೆಯೇ? ತಂದೆಯನ್ನು ನೆನಪು ಮಾಡುತ್ತೇನೆಯೇ? ಏಕೆಂದರೆ ನಿಮ್ಮದು ಇದು ಆತ್ಮಿಕ ಸೇನೆಯಾಗಿದೆ. ಆ ಸೈನ್ಯದಲ್ಲಂತೂ ಯಾವಾಗಲೂ ಯುವಕರೇ ಹೋಗಿ ಸೇರುತ್ತಾರೆ, ಈ ಸೇನೆಯಲ್ಲಿ 14-15 ವರ್ಷದ ಯುವಕರೂ ಇದ್ದಾರೆ, 90 ವರ್ಷದ ವೃದ್ಧರೂ ಇದ್ದಾರೆ ಮತ್ತು ಚಿಕ್ಕ ಮಕ್ಕಳೂ ಇದ್ದಾರೆ. ಈ ಸೇನೆಯು ಮಾಯೆಯ ಮೇಲೆ ಜಯಗಳಿಸುವುದಕ್ಕಾಗಿ ಇದೆ. ಪ್ರತಿಯೊಬ್ಬರೂ ಮಾಯೆಯ ಮೇಲೆ ಜಯ ಗಳಿಸಿ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯಬೇಕಾಗಿದೆ ಏಕೆಂದರೆ ಮಾಯೆಯು ಬಹಳ ಪ್ರಬಲವಾಗಿದೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ – ಮಾಯೆಯು ಬಹಳ ಪ್ರಬಲವಾಗಿದೆ, ಪ್ರತಿಯೊಂದು ಕರ್ಮೇಂದ್ರಿಯವು ಬಹಳ ಮೋಸ ಮಾಡುತ್ತದೆ. ಎಲ್ಲದಕ್ಕಿಂತ ಮೊದಲು ಹೆಚ್ಚು ಮೋಸ ಮಾಡುವ ಕರ್ಮೇಂದ್ರಿಯ ಯಾವುದು? ಕಣ್ಣುಗಳೇ ಎಲ್ಲದಕ್ಕಿಂತ ಹೆಚ್ಚು ಮೋಸ ಮಾಡುತ್ತವೆ. ತನ್ನ ಸ್ತ್ರೀ ಇದ್ದರೂ ಸಹ ಅನ್ಯ ಯಾರಾದರೂ ಸುಂದರ ಸ್ತ್ರೀಯನ್ನು ನೋಡಿದರೆ ಕೂಡಲೇ ಆಕರ್ಷಣೆಯಾಗುವುದು. ಕಣ್ಣುಗಳು ಬಹಳ ಮೋಸ ಮಾಡುತ್ತವೆ. ಕೈ ಹಾಕೋಣವೆಂದು ಮನಸ್ಸಾಗುತ್ತದೆ. ಮಕ್ಕಳಿಗೆ ತಿಳಿಸಲಾಗುತ್ತದೆ - ಮಕ್ಕಳೇ, ಸದಾ ಬುದ್ಧಿಯಿಂದ ಇದನ್ನು ತಿಳಿದುಕೊಳ್ಳಿ - ನಾವು ಬ್ರಹ್ಮಾಕುಮಾರ-ಕುಮಾರಿಯರು ಸಹೋದರ -ಸಹೋದರಿಯರಾಗಿದ್ದೇವೆ. ಇದರಲ್ಲಿ ಮಾಯೆಯು ಬಹಳ ಗುಪ್ತವಾಗಿ ಮೋಸ ಮಾಡುತ್ತದೆ, ಆದ್ದರಿಂದ ಇದನ್ನು ಚಾರ್ಟ್ನಲ್ಲಿ ಬರೆಯಬೇಕು - ಇಂದು ಇಡೀ ದಿನದಲ್ಲಿ ಯಾವ-ಯಾವ ಕರ್ಮೇಂದ್ರಿಯವು ನನ್ನನ್ನು ಮೋಸ ಮಾಡಿತು? ಎಲ್ಲದಕ್ಕಿಂತ ದೊಡ್ಡ ಶತ್ರು ಈ ಕಣ್ಣುಗಳಾಗಿವೆ. ಆದ್ದರಿಂದ ಇದನ್ನೂ ಬರೆಯಬೇಕು - ಇಂತಹವರನ್ನು ನೋಡಿದೆನು, ನನ್ನ ದೃಷ್ಟಿಯು ಹೋಯಿತು..... ಸೂರದಾಸನ ಉದಾಹರಣೆಯಿದೆಯಲ್ಲವೆ. ಅವರು ತನ್ನ ಕಣ್ಣುಗಳನ್ನೇ ತೆಗೆದು ಹಾಕಿದರು. ತನ್ನನ್ನು ಪರಿಶೀಲನೆ ಮಾಡಿಕೊಂಡಾಗ ತಿಳಿಯುತ್ತದೆ - ಕಣ್ಣುಗಳೇ ಹೆಚ್ಚು ಮೋಸ ಮಾಡುತ್ತವೆ. ತನ್ನ ಸ್ತ್ರೀಯನ್ನೂ ಬಿಟ್ಟು ಯಾರಾದರೂ ಚೆನ್ನಾಗಿರುವವರನ್ನು ನೋಡಿದರೆ ಅವರಿಗೇ ಆಕರ್ಷಿತರಾಗಿ ಬಿಡುತ್ತಾರೆ. ಯಾರಾದರೂ ಹಾಡುವುದರಲ್ಲಿ ಬುದ್ಧಿವಂತರಾಗಿರುತ್ತಾರೆ, ಒಳ್ಳೆಯ ಶೃಂಗಾರವಿರುತ್ತದೆ ಎಂದರೆ ಕಣ್ಣುಗಳು ಕೂಡಲೇ ಚಂಚಲವಾಗುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಕಣ್ಣುಗಳು ಬಹಳ ಮೋಸ ಮಾಡುತ್ತವೆ. ಭಲೆ ಸೇವೆಯನ್ನೂ ಮಾಡುತ್ತಾರೆ ಆದರೆ ಕಣ್ಣುಗಳು ಬಹಳ ಮೋಸ ಮಾಡುತ್ತವೆ. ಈ ಶತ್ರುವಿನ ಮೇಲೆ ಬಹಳ ಗಮನವಿರಲಿ, ಇಲ್ಲದಿದ್ದರೆ ತಿಳಿದುಕೊಳ್ಳಿ - ನಮ್ಮ ಪದವಿಯನ್ನು ನಾವು ಭ್ರಷ್ಟ ಮಾಡಿಕೊಳ್ಳುತ್ತೇವೆ. ಬುದ್ಧಿವಂತ ಮಕ್ಕಳು ತಮ್ಮ ಡೈರಿಯಲ್ಲಿ ಬರೆದುಕೊಳ್ಳಿ - ಇಂತಹವರನ್ನು ನೋಡಿದೆನು, ನನ್ನ ದೃಷ್ಟಿಯು ಹೋಯಿತು. ಆಗ ಮತ್ತೆ ತನಗೆ ತಾನೇ ಶಿಕ್ಷೆ ಕೊಟ್ಟುಕೊಳ್ಳಿ. ಭಕ್ತಿ ಮಾರ್ಗದಲ್ಲಿಯೂ ಪೂಜೆಯ ಸಮಯದಲ್ಲಿ ಬುದ್ಧಿಯು ಅಲ್ಲಿ-ಇಲ್ಲಿ ಹೋಗುತ್ತದೆಯೆಂದರೆ ತಮ್ಮನ್ನು ಜಿಗುಟಿಕೊಳ್ಳುತ್ತಾರೆ. ಆದ್ದರಿಂದ ಯಾವಾಗ ಅಂತಹ ಒಳ್ಳೆಯ ಸ್ತ್ರೀ ಮುಂದೆ ಬರುವರೋ ಅವರಿಂದ ದೂರ ಸರಿಯಬೇಕು, ನಿಂತು ನೋಡಬಾರದು. ಕಣ್ಣುಗಳು ಬಹಳ ಮೋಸ ಮಾಡುತ್ತವೆ ಆದ್ದರಿಂದಲೇ ಸನ್ಯಾಸಿಗಳು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೆ. ಪುರುಷನನ್ನು ಮುಂದೆ, ಸ್ತ್ರೀಯನ್ನು ಹಿಂದೆ ಕೂರಿಸುತ್ತಾರೆ. ಕೆಲವರು ಇಂತಹವರೂ ಇರುತ್ತಾರೆ, ಅವರು ಸ್ತ್ರೀಯನ್ನು ನೋಡುವುದೇ ಇಲ್ಲ. ನೀವು ಮಕ್ಕಳಂತೂ ಬಹಳ ಪರಿಶ್ರಮ ಪಡಬೇಕಾಗಿದೆ. ವಿಶ್ವದ ರಾಜ್ಯಭಾಗ್ಯವನ್ನು ಪಡೆಯುವುದು ಕಡಿಮೆ ಮಾತಲ್ಲ. ಅವರಂತೂ 10-12, 20 ಸಾವಿರ ಅಥವಾ 1-2 ಲಕ್ಷ ಕೋಟಿಗಳನ್ನು ಸಂಪಾದಿಸಿ ಹೊರಟು ಹೋಗುತ್ತಾರೆ. ನೀವು ಮಕ್ಕಳಿಗೆ ಅವಿನಾಶಿ ಆಸ್ತಿಯು ಸಿಗುತ್ತದೆ. ಎಲ್ಲವೂ ಪ್ರಾಪ್ತಿಯಾಗಿ ಬಿಡುತ್ತದೆ. ಯಾವುದೇ ಪ್ರಾಪ್ತಿಗಾಗಿ ತಲೆ ಕೆಡಿಸಿಕೊಳ್ಳಲು ಅಂತಹ ಯಾವುದೇ ಅಪ್ರಾಪ್ತ ವಸ್ತುವಿರುವುದಿಲ್ಲ. ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯಲ್ಲಿ ರಾತ್ರಿ-ಹಗಲಿನ ಅಂತರವಿದೆ, ಇಲ್ಲಂತೂ ಏನೂ ಇಲ್ಲ.

ಈಗ ನಿಮ್ಮದು ಇದು ಪುರುಷೋತ್ತಮ ಸಂಗಮಯುಗವಾಗಿದೆ. ಪುರುಷೋತ್ತಮ ಶಬ್ಧವನ್ನು ಅವಶ್ಯವಾಗಿ ಬರೆಯಬೇಕಾಗಿದೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಸದ್ಗುರು..... ನೀವೀಗ ಬ್ರಾಹ್ಮಣರಾಗಿದ್ದೀರಿ. ಮನುಷ್ಯರಾದರೆ ಸಂಪೂರ್ಣ ಅಂಧಕಾರದಲ್ಲಿದ್ದಾರೆ, ಅನೇಕರಿದ್ದಾರೆ ಯಾರು ಸ್ವರ್ಗವನ್ನು ನೋಡುವುದಕ್ಕೇ ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮ್ಮ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ. ಮನುಷ್ಯರಿಗೆ ಏನೂ ತಿಳಿದಿಲ್ಲ, ಸ್ವರ್ಗವೆಂದರೇನು ಎಂಬುದನ್ನು ಭಾರತವಾಸಿಗಳೇ ಮರೆತು ಹೋಗಿದ್ದಾರೆ. ಕ್ರಿಶ್ಚಿಯನ್ನರೂ ಸಹ ಹೆವೆನ್ ಇತ್ತು ಎಂಬುದನ್ನು ಹೇಳುತ್ತಾರೆ. ಈ ಲಕ್ಷ್ಮೀ-ನಾರಾಯಣರನ್ನು ಭಗವಾನ್-ಭಗವತಿ ಎಂದು ಹೇಳುತ್ತಾರಲ್ಲವೆ ಅಂದಮೇಲೆ ಅವಶ್ಯವಾಗಿ ಭಗವಂತನೇ ಈ ರೀತಿ ಮಾಡುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳು ಬಹಳ ಪರಿಶ್ರಮ ಪಡಬೇಕಾಗಿದೆ. ನಿತ್ಯವೂ ತಮ್ಮ ಲೆಕ್ಕ ಪತ್ರವನ್ನು ನೋಡಿಕೊಳ್ಳಿ - ಯಾವ ಕರ್ಮೇಂದ್ರಿಯವು ನನಗೆ ಮೋಸ ಮಾಡಿತು? ಬಾಯಿ ಸಹ ಬಹಳ ಮೋಸ ಮಾಡುತ್ತದೆ. ಮೊದಲು ಕಛೇರಿ ಇರುತ್ತಿತ್ತು, ಎಲ್ಲರೂ ತಮ್ಮ ತಪ್ಪುಗಳನ್ನು ತಿಳಿಸುತ್ತಿದ್ದರು. ನಾನು ಇಂದು ಇಂತಹ ಪದಾರ್ಥವನ್ನು ಬಚ್ಚಿಟ್ಟುಕೊಂಡು ತಿಂದೆನು ಎಂದು. ಒಳ್ಳೊಳ್ಳೆಯ ದೊಡ್ಡ ಮನೆಯ ಮಕ್ಕಳು ತಿಳಿಸಿಬಿಡುತ್ತಾರೆ. ಮಾಯೆಯು ಹೀಗೆ ಯುದ್ಧ ಮಾಡುತ್ತದೆ. ಬಚ್ಚಿಟ್ಟುಕೊಂಡು ತಿನ್ನುವುದೂ ಸಹ ಕಳ್ಳತನವಾಗಿದೆ, ಅದರಲ್ಲಿಯೂ ಶಿವ ತಂದೆಯ ಯಜ್ಞದಿಂದ ಕಳ್ಳತನ ಮಾಡುವುದಂತೂ ಬಹಳ ಕೆಟ್ಟದ್ದಾಗಿದೆ. ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ, ಮಾಯೆಯು ಒಮ್ಮೆಲೆ ಮೂಗು ಹಿಡಿಯುತ್ತದೆ. ಈ ಹವ್ಯಾಸವು ಬಹಳ ಕೆಟ್ಟದ್ದಾಗಿದೆ. ಕೆಟ್ಟ ಹವ್ಯಾಸವಿದ್ದರೆ ನಾವು ಏನಾಗಬಹುದು! ಸ್ವರ್ಗದಲ್ಲಿ ಹೋಗುವುದೇನೂ ದೊಡ್ಡ ಮಾತಲ್ಲ ಆದರೆ ಅದರಲ್ಲಿ ಪದವಿಗಳೂ ಇವೆಯಲ್ಲವೆ. ರಾಜರೆಲ್ಲಿ, ಪ್ರಜೆಗಳೆಲ್ಲಿ! ಎಷ್ಟೊಂದು ಅಂತರವಿದೆ ಅಂದಾಗ ಕರ್ಮೇಂದ್ರಿಯಗಳು ಬಹಳ ಮೋಸಗಾರನಾಗಿವೆ. ಅವುಗಳ ಸಂಭಾಲನೆಯನ್ನೂ ಮಾಡಬೇಕು. ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ತಂದೆಯ ಆದೇಶದಂತೆ ಪೂರ್ಣ ನಡೆಯಬೇಕಾಗಿದೆ. ತಂದೆಯು ಆದೇಶ ನೀಡುತ್ತಾರೆ ಮತ್ತೆ ಮಧ್ಯದಲ್ಲಿ ಮಾಯೆಯು ಬಂದು ವಿಘ್ನ ಹಾಕುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮರೆಯಬೇಡಿ, ಇಲ್ಲವಾದರೆ ಅಂತಿಮದಲ್ಲಿ ಬಹಳ ಪಶ್ಚಾತ್ತಾಪ ಪಡುವಿರಿ. ಅನುತ್ತೀರ್ಣರಾಗುವ ಸಾಕ್ಷಾತ್ಕಾರವೂ ಆಗುವುದು. ನೀವೀಗ ಹೇಳುತ್ತೀರಿ - ನಾವು ನರನಿಂದ ನಾರಾಯಣನಾಗುತ್ತೇವೆ ಎಂದು. ಆದರೆ ತಮ್ಮೊಂದಿಗೆ ಕೇಳಿಕೊಳ್ಳಿ, ತಮ್ಮ ಲೆಕ್ಕವನ್ನು ತೆಗೆಯಿರಿ. ಅನೇಕ ಮಂದಿ ಬಹಳ ಕಷ್ಟವೆಂದು ತಿಳಿದು ಕಾರ್ಯದಲ್ಲಿ ತರುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದರಿಂದಲೇ ತಮ್ಮ ಉನ್ನತಿಯಾಗುವುದು, ಇಡೀ ದಿನದ ಲೆಕ್ಕವನ್ನು ತೆಗೆಯಬೇಕು. ಈ ಕಣ್ಣುಗಳು ಬಹಳ ಮೋಸ ಮಾಡುತ್ತದೆ. ಯಾರನ್ನಾದರೂ ನೋಡಿದರೆ ಇವರಂತೂ ಬಹಳ ಚೆನ್ನಾಗಿದ್ದಾರೆ ಎಂದು ಸಂಕಲ್ಪ ಬರುತ್ತದೆ ಮತ್ತೆ ಮಾತನಾಡುತ್ತಾರೆ, ಅವರಿಗೆ ಏನಾದರೂ ಉಡುಗೊರೆ ಕೊಡುವುದೇ, ಇದನ್ನು ತಿನ್ನಿಸುವುದೇ ಎಂದು ಮನಸ್ಸಾಗುತ್ತದೆ. ಅದೇ ಚಿಂತನೆ ನಡೆಯುತ್ತಿರುತ್ತದೆ. ಮಕ್ಕಳು ತಿಳಿದುಕೊಳ್ಳುತ್ತೀರಿ, ಇದರಲ್ಲಿ ಬಹಳ ಪರಿಶ್ರಮವಿದೆ, ಕರ್ಮೇಂದ್ರಿಯಗಳು ಬಹಳ ಮೋಸ ಮಾಡುತ್ತವೆ. ರಾವಣ ರಾಜ್ಯವಲ್ಲವೆ. ಸತ್ಯಯುಗದಲ್ಲಿ ಯಾವುದೂ ಚಿಂತೆಯ ಮಾತಿರುವುದಿಲ್ಲ ಏಕೆಂದರೆ ರಾವಣ ರಾಜ್ಯವೇ ಇರುವುದಿಲ್ಲ, ಚಿಂತೆಯ ಮಾತೇ ಇರುವುದಿಲ್ಲ. ಒಂದುವೇಳೆ ಅಲ್ಲಿಯೂ ಚಿಂತೆಯಿದ್ದರೆ ಮತ್ತೆ ಸ್ವರ್ಗ ಮತ್ತು ನರಕದಲ್ಲಿ ಅಂತರವಾದರೂ ಏನು ಉಳಿಯಿತು? ನೀವು ಮಕ್ಕಳು ಬಹಳ-ಬಹಳ ಶ್ರೇಷ್ಠ ಪದವಿಯನ್ನು ಪಡೆಯಲು ಭಗವಂತನಿಂದ ಓದುತ್ತೀರಿ. ತಂದೆಯು ತಿಳಿಸುತ್ತಾರೆ – ಮಾಯೆಯು ನಿಂದನೆ ಮಾಡಿಸುತ್ತದೆ. ನೀವು ಅಪಕಾರ ಮಾಡಿದಿರಿ, ನಾನು ಉಪಕಾರ ಮಾಡುತ್ತೇನೆ. ಮಕ್ಕಳೇ, ನೀವು ಒಂದುವೇಳೆ ಕುದೃಷ್ಟಿಯಿದ್ದರೆ ತಮಗೇ ನಷ್ಟ ಮಾಡಿಕೊಳ್ಳುತ್ತೀರಿ. ಬಹಳ ದೊಡ್ಡ ಗುರಿಯಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮ ಲೆಕ್ಕ ಪತ್ರವನ್ನು ನೋಡಿಕೊಳ್ಳಿ, ಯಾವುದೇ ವಿಕರ್ಮವನ್ನಂತು ಮಾಡಲಿಲ್ಲವೆ? ಯಾರಿಗೂ ಮೋಸ ಮಾಡಲಿಲ್ಲವೆ? ಈಗ ವಿಕರ್ಮಾಜೀತರಾಗಬೇಕಾಗಿದೆ. ವಿಕರ್ಮಾಜೀತ ಸಂವತ್ಸರದ ಬಗ್ಗೆ ನೀವು ಮಕ್ಕಳ ವಿನಃ ಯಾರಿಗೂ ತಿಳಿದಿಲ್ಲ. ತಂದೆಯು ತಿಳಿಸಿದ್ದಾರೆ - ವಿಕರ್ಮಾಜೀತ ಸಂವತ್ಸರಕ್ಕೆ 5000 ವರ್ಷಗಳಾಯಿತು. ನಂತರ ವಿಕರ್ಮ ಮಾಡುವ ಕಾರಣ ವಾಮ ಮಾರ್ಗದಲ್ಲಿ ಹೋಗುತ್ತಾರೆ. ಕರ್ಮ, ಅಕರ್ಮ, ವಿಕರ್ಮದ ಶಬ್ಧಗಳಂತೂ ಇವೆಯಲ್ಲವೆ. ಮಾಯೆಯ ರಾಜ್ಯದಲ್ಲಿ ಮನುಷ್ಯರು ಏನೆಲ್ಲಾ ಕರ್ಮವನ್ನು ಮಾಡುವರೋ ಅದು ವಿಕರ್ಮವೇ ಆಗುತ್ತದೆ. ಸತ್ಯಯುಗದಲ್ಲಿ ವಿಕಾರವಿರುವುದಿಲ್ಲ ಆದ್ದರಿಂದ ಯಾವುದೇ ವಿಕರ್ಮವೂ ಆಗುವುದಿಲ್ಲ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ ಏಕೆಂದರೆ ನಿಮಗೆ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ, ನೀವು ತ್ರಿನೇತ್ರಿಯಾಗಿದ್ದೀರಿ ಅಂದಾಗ ತ್ರಿನೇತ್ರಿ, ತ್ರಿಕಾಲದರ್ಶಿಗಳನ್ನಾಗಿ ಮಾಡುವವರು ತಂದೆಯಾಗಿದ್ದಾರೆ, ನೀವು ಆಸ್ತಿಕರಾಗಿದ್ದೀರಿ ಆದ್ದರಿಂದ ತ್ರಿಕಾಲದರ್ಶಿಗಳಾಗಿದ್ದೀರಿ. ಇಡೀ ಡ್ರಾಮಾದ ರಹಸ್ಯವು ಬುದ್ಧಿಯಲ್ಲಿದೆ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ, 84 ಜನ್ಮಗಳ ಚಕ್ರ ನಂತರ ಅನ್ಯಧರ್ಮಗಳು ವೃದ್ಧಿ ಹೊಂದುತ್ತವೆ. ಅವರ್ಯಾರೂ ಸದ್ಗತಿ ನೀಡಲು ಸಾಧ್ಯವಿಲ್ಲ. ಅವರಿಗೆ ಗುರುಗಳೆಂದೂ ಹೇಳಲು ಸಾಧ್ಯವಿಲ್ಲ. ಸರ್ವರ ಸದ್ಗತಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ, ಈಗ ಎಲ್ಲರ ಸದ್ಗತಿಯಾಗಲಿದೆ. ಅವರು ಧರ್ಮ ಸ್ಥಾಪಕರೆಂದು ಕರೆಸಿಕೊಳ್ಳುವರೇ ಹೊರತು ಗುರುಗಳೆಂದಲ್ಲ. ಧರ್ಮ ಸ್ಥಾಪಕರು ಧರ್ಮ ಸ್ಥಾಪನೆ ಮಾಡಲು ನಿಮಿತ್ತರಾಗಿದ್ದಾರೆ ಆದರೆ ಸದ್ಗತಿ ಮಾಡುವುದಿಲ್ಲ. ಅವರನ್ನು ನೆನಪು ಮಾಡುವುದರಿಂದ ಯಾರದೇ ಸದ್ಗತಿಯಾಗುವುದಿಲ್ಲ. ವಿಕರ್ಮಗಳು ವಿನಾಶವಾಗುವುದಿಲ್ಲ, ಅದೆಲ್ಲವೂ ಭಕ್ತಿಯಾಗಿದೆ. ಅಂದಾಗ ತಂದೆಯು ತಿಳಿಸುತ್ತಾರೆ – ಮಾಯೆಯು ಬಹಳ ಪ್ರಬಲವಾಗಿದೆ. ಇದರ ಮೇಲೆ ಯುದ್ಧವಾಗುತ್ತದೆ, ನೀವು ಶಿವ ಶಕ್ತಿ ಪಾಂಡವ ಸೇನೆಯಾಗಿದ್ದೀರಿ. ನೀವೆಲ್ಲರೂ ಮಾರ್ಗದರ್ಶಕರಾಗಿದ್ದೀರಿ, ಶಾಂತಿಧಾಮ-ಸುಖಧಾಮದ ಮಾರ್ಗವನ್ನು ತಿಳಿಸುತ್ತೀರಿ. ತಂದೆಯನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ ಎಂದು ಹೇಳುತ್ತೀರಿ. ಮತ್ತೆ ಇನ್ನೊಂದು ಕಡೆ ಯಾವುದೆ ಪಾಪಕರ್ಮ ಮಾಡಿದರೆ ನೂರರಷ್ಟು ಪಾಪವಾಗುವುದು. ಎಷ್ಟು ಸಾಧ್ಯವೋ ಅಷ್ಟು ಯಾವುದೇ ವಿಕರ್ಮ ಮಾಡಬಾರದು. ಕರ್ಮೇಂದ್ರಿಯಗಳು ಬಹಳ ಮೋಸ ಮಾಡುತ್ತವೆ, ತಂದೆಯು ಪ್ರತಿಯೊಬ್ಬರ ಚಲನೆಯಿಂದಲೇ ತಿಳಿದುಕೊಳ್ಳುತ್ತಾರೆ. ಮಕ್ಕಳಿಗೆ ಮಾಯೆಯ ಬಿರುಗಾಳಿಗಳು ಬರುತ್ತವೆ. ಸ್ತ್ರೀ-ಪುರುಷರೆಂದು ತಿಳಿದುಕೊಂಡಾಗಲೇ ಬಿರುಗಾಳಿಯು ಬರುತ್ತದೆ ಅಂದಮೇಲೆ ಈ ಕಣ್ಣುಗಳ ಮೇಲೆ ಎಷ್ಟೊಂದು ಅಧಿಕಾರವಿರಬೇಕು! ನಾವಂತೂ ಶಿವ ತಂದೆಯ ಮಕ್ಕಳಾಗಿದ್ದೇವೆ. ತಂದೆಯೊಂದಿಗೆ ಪ್ರತಿಜ್ಞೆ ಮಾಡಿ ಶ್ರೀ ರಕ್ಷೆಯನ್ನೂ ಕಟ್ಟಿಸಿಕೊಳ್ಳುತ್ತಾರೆ ಆದರೂ ಸಹ ಮಾಯೆಯು ಮೋಸ ಮಾಡುತ್ತದೆ. ಮತ್ತೆ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ. ಕರ್ಮೇಂದ್ರಿಯಗಳು ವಶವಾದಾಗಲೇ ಕರ್ಮಾತೀತ ಸ್ಥಿತಿಯಾಗುವುದು. ನಾವು ಲಕ್ಷ್ಮೀ-ನಾರಾಯಣರಾಗುತ್ತೇವೆಂದು ಹೇಳುವುದಂತೂ ಸಹಜವಾಗಿದೆ ಆದರೆ ತಿಳುವಳಿಕೆಯು ಬೇಕಲ್ಲವೆ. ತಂದೆಯು ತಿಳಿಸುತ್ತಾರೆ - ಆಜ್ಞೆಯಂತೆ ಕಾರ್ಯದಲ್ಲಿ ತರುತ್ತಾ ಇರಿ, ಬಾಬಾ, ಬಾಬಾ ಎನ್ನುತ್ತಾ ಇರಿ. ತಂದೆಯಿಂದ ನಾವು ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಇಂತಹ ಶಿಕ್ಷಕರು ಎಂದೂ ಎಲ್ಲಿಯೂ ಸಿಗುವುದಿಲ್ಲ. ಇವೆಲ್ಲಾ ಮಾತುಗಳನ್ನು ದೇವತೆಗಳೂ ಸಹ ತಿಳಿದುಕೊಂಡಿಲ್ಲ ಅಂದಮೇಲೆ ಅವರ ನಂತರದಲ್ಲಿ ಬಂದ ಧರ್ಮದವರು ಹೇಗೆ ತಿಳಿದುಕೊಳ್ಳಲು ಸಾಧ್ಯ! ತಂದೆಯು ತಿಳಿಸುತ್ತಾರೆ - ನಾನು ಏನನ್ನೇ ಹೇಳಿದರೂ ಸಹ ಇದನ್ನು ಶಿವ ತಂದೆಯು ಹೇಳುತ್ತಾರೆಂದು ತಿಳಿಯಿರಿ, ಈ ದಾದಾರವರೂ ಹೇಳುತ್ತಾರೆಂದು ತಿಳಿಯಬೇಡಿ. ಇವರು ನನ್ನ ರಥವಾಗಿದ್ದಾರೆ, ಇವರೇನು ಮಾಡುತ್ತಾರೆ, ನೀವು ಮಕ್ಕಳಿಗೆ ರಾಜ್ಯವನ್ನು ನಾನು ಕೊಡುತ್ತೇನೆ. ಈ ರಥವು ಕೊಡುತ್ತವೆಯೇ? ಇವರಂತೂ ಸಂಪೂರ್ಣ ಭಿಕಾರಿಯಾಗಿದ್ದಾರೆ. ಇವರೂ ಸಹ ನನ್ನಿಂದಲೇ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಹೇಗೆ ನೀವು ಪುರುಷಾರ್ಥ ಮಾಡುತ್ತೀರೋ ಹಾಗೆಯೇ ಇವರೂ ಮಾಡುತ್ತಾರೆ. ಇವರೂ ಸಹ ವಿದ್ಯಾರ್ಥಿ ಜೀವನದಲ್ಲಿದ್ದಾರೆ, ಈ ರಥವನ್ನು ನಾನು ಬಾಡಿಗೆಯಾಗಿ ಪಡೆದಿದ್ದೇನೆ, ಇದು ತಮೋಪ್ರಧಾನವಾಗಿದೆ. ನೀವು ಪೂಜ್ಯ ದೇವತೆಗಳಾಗಲು, ಮನುಷ್ಯರಿಂದ ದೇವತೆಗಳಾಗಲು ಓದುತ್ತೀರಿ. ಯಾರ ಅದೃಷ್ಟದಲ್ಲಿಲ್ಲವೋ ಅವರು ಹೇಳುತ್ತಾರೆ - ನನಗಂತೂ ಸಂಶಯವಿದೆ, ಶಿವ ತಂದೆಯು ಹೇಗೆ ಬಂದು ಓದಿಸುತ್ತಾರೆ, ನನಗಂತೂ ಅರ್ಥವಾಗುವುದಿಲ್ಲ ಎನ್ನುತ್ತಾರೆ. ತಂದೆಯ ನೆನಪಿಲ್ಲದೆ ವಿಕರ್ಮಗಳು ವಿನಾಶವಾಗಲು ಸಾಧ್ಯವಿಲ್ಲ. ಪೂರ್ಣ ಶಿಕ್ಷೆಯನ್ನು ಅನುಭವಿಸ ಬೇಕಾಗುವುದು. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ರಾಜರಿಗೂ ಎಷ್ಟೊಂದು ಮಂದಿ ದಾಸಿಯರಿರುತ್ತಾರೆ. ಈ ಬಾಬಾರವರಂತೂ ರಾಜ-ಮಹಾರಾಜರ ಸಂಬಂಧದಲ್ಲಿ ಬಂದಿದ್ದಾರೆ. ದಾಸಿಯರನ್ನು ವರದಕ್ಷಿಣೆಯಾಗಿ ಕೊಡುತ್ತಾರೆ. ಇಲ್ಲಿಯೇ ಇಷ್ಟೊಂದು ಮಂದಿ ದಾಸಿಯರಿದ್ದರೆ ಸತ್ಯಯುಗದಲ್ಲಿ ಇನ್ನೆಷ್ಟು ಮಂದಿ ಇರುವರು! ಈಗ ರಾಜಧಾನಿಯು ಸ್ಥಾಪನೆಯಾಗುತ್ತದೆ, ಯಾರು-ಯಾರು ಏನೇನು ಮಾಡುತ್ತಿದ್ದಾರೆಂದು ತಂದೆಗೆ ತಿಳಿದಿದೆ. ಪ್ರತಿಯೊಬ್ಬರ ಚಾರ್ಟಿನಿಂದಲೇ ತಂದೆಯು ತಿಳಿಸಬಲ್ಲರು - ಈ ಸಮಯದಲ್ಲಿ ಇವರು ಶರೀರ ಬಿಟ್ಟರೆ ಏನಾಗುವರು ಎಂದು. ಕರ್ಮಾತೀತ ಸ್ಥಿತಿಯನ್ನು ಅಂತಿಮದಲ್ಲಿ ಎಲ್ಲರೂ ನಂಬರ್ವಾರ್ ಪಡೆಯುತ್ತಾರೆ ಅಂದಾಗ ಇದು ಸಂಪಾದನೆಯಾಗಿದೆ. ಸಂಪಾದನೆಯಲ್ಲಿ ಮನುಷ್ಯರು ಎಷ್ಟೊಂದು ಬ್ಯುಜಿಯಾಗಿರುತ್ತಾರೆ. ಒಂದು ಕಡೆ ಊಟ ಮಾಡುತ್ತಿರುತ್ತಾರೆ, ಇನ್ನೊಂದು ಕಡೆ ಕಿವಿಯಲ್ಲಿ ದೂರವಾಣಿ ಇರುವುದು. ಇಂತಹ ವ್ಯಕ್ತಿಗಳು ಜ್ಞಾನವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಬಡವರು, ಸಾಧಾರಣರೇ ಬರುತ್ತಾರೆ. ಸಾಹುಕಾರರಂತೂ ನಮಗೆ ಬಿಡುವಿಲ್ಲವೆಂದು ಹೇಳುತ್ತಾರೆ. ಅರೆ! ಕೇವಲ ತಂದೆಯನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುವವು ಆದ್ದರಿಂದ ತಂದೆಯು ಮಧುರಾತಿ ಮಧುರ ಮಕ್ಕಳಿಗೆ ಪದೇ-ಪದೇ ತಿಳಿಸುತ್ತಾರೆ. ಪ್ರತಿಯೊಬ್ಬರಿಗೂ ಈ ಸಂದೇಶ ಕೊಡಬೇಕಾಗಿದೆ ಏಕೆಂದರೆ ಕೊನೆಯಲ್ಲಿ ನಮಗೆ ಶಿವ ತಂದೆಯು ಬಂದಿದ್ದಾರೆಂದು ಏನು ಗೊತ್ತು? ಎಂದು ಯಾರೂ ಹೇಳಬಾರದು. ಇಡೀ ದಿನ ಬಾಬಾ, ಬಾಬಾ ಎನ್ನುತ್ತಾ ಇರಿ. ಕೆಲವು ಮಕ್ಕಳು ಬಹಳ ನೆನಪು ಮಾಡುತ್ತಾರೆ. ಶಿವ ತಂದೆಯೆಂದು ಹೇಳುತ್ತಿದ್ದಂತೆಯೇ ಕೆಲವು ಮಕ್ಕಳಿಗೆ ಪ್ರೇಮದ ಕಣ್ಣೀರು ಬಂದು ಬಿಡುತ್ತದೆ ಯಾವಾಗ ಹೋಗಿ ಮಿಲನ ಮಾಡುತ್ತೇವೆ ಎಂದು. ನೋಡಿಯೇ ಇಲ್ಲ ಆದರೂ ಸಹ ಚಡಪಡಿಸುತ್ತಾ ಇರುತ್ತಾರೆ ಮತ್ತು ನೋಡಿರುವವರು ತಂದೆಯನ್ನು ಒಪ್ಪುವುದಿಲ್ಲ. ಬಂಧನದಲ್ಲಿ ಇರುವವರು ದೂರ ಕುಳಿತುಕೊಂಡೇ ಕಣ್ಣೀರು ಸುರಿಸುತ್ತಿರುತ್ತಾರೆ. ಆಶ್ಚರ್ಯವಲ್ಲವೆ. ಅನೇಕರಿಗೆ ಬ್ರಹ್ಮಾರವರ ಸಾಕ್ಷಾತ್ಕಾರವೂ ಆಗುತ್ತದೆ, ಮುಂದೆ ಹೋದಂತೆ ಅನೇಕರಿಗೆ ಸಾಕ್ಷಾತ್ಕಾರವಾಗುವುದು. ಮನುಷ್ಯರಿಗೆ ಸಾಯುವ ಸಮಯದಲ್ಲಿ ಎಲ್ಲರೂ ಬಂದು ಹೇಳುತ್ತಾರೆ - ಭಗವಂತನನ್ನು ನೆನಪು ಮಾಡಿ. ನೀವೂ ಸಹ ಶಿವ ತಂದೆಯನ್ನು ನೆನಪು ಮಾಡಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪುರುಷಾರ್ಥದಲ್ಲಿ ಮೇಕಪ್ ಮಾಡುತ್ತಾ ಇರಿ. ಸಮಯ ಸಿಕ್ಕಿದರೆ ಸಾಕು, ಪುರುಷಾರ್ಥ ಮಾಡಿ. ಎಷ್ಟು ದೊಡ್ಡ ಸಂಪಾದನೆಯಿದೆ! ಕೆಲಕೆಲವರಂತೂ ಎಷ್ಟಾದರೂ ತಿಳಿಸಲಿ ಅವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುವುದಿಲ್ಲ. ಈ ರೀತಿಯಾಗಬಾರದು, ತಮ್ಮ ಕಲ್ಯಾಣ ಮಾಡಿಕೊಳ್ಳಿ, ತಂದೆಯ ಶ್ರೀಮತದಂತೆ ನಡೆಯಿರಿ. ನಿಮ್ಮನ್ನು ತಂದೆಯು ಪುರುಷರಲ್ಲಿ ಉತ್ತಮರನ್ನಾಗಿ ಮಾಡುತ್ತಾರೆ, ಇದು ಗುರಿ-ಧ್ಯೇಯವಾಗಿದೆ. ತಂದೆಯು ಸರ್ವೀಸ್ಗಾಗಿ ಎಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ, ಎಲ್ಲರಿಗೂ ಸಂದೇಶ ಕೊಡಬೇಕಾಗಿದೆ. ಅವರಿಗೆ ಇದು ಅರ್ಥವಾಗಲಿ - ಅವಶ್ಯವಾಗಿ ಇವರು ಸತ್ಯವನ್ನು ಹೇಳುತ್ತಾರೆ. ಈ ಯುದ್ಧದಿಂದಲೇ ಭಾರತ ಹಾಗೂ ಇಡೀ ವಿಶ್ವದಲ್ಲಿ ಸುಖ-ಶಾಂತಿಯು ನೆಲೆಸುತ್ತದೆ. ಎಲ್ಲಾ ಭಾಷೆಗಳಲ್ಲಿ ಈ ರೀತಿ ಭಿತ್ತಿ ಪತ್ರಗಳನ್ನು ಮುದ್ರಿಸಬೇಕಾಗಿದೆ. ಭಾರತವು ಎಷ್ಟು ದೊಡ್ಡದಾಗಿದೆ! ಪ್ರತಿಯೊಬ್ಬರಿಗೂ ಅರ್ಥವಾಗಬೇಕು - ನಮಗೆ ತಿಳಿದಿರಲೇ ಇಲ್ಲವೆಂದು ಯಾರೂ ಹೇಳುವಂತಾಗಬಾರದು. ನೀವು ಹೇಳಬಹುದು - ವಿಮಾನದಿಂದ ಭಿತ್ತಿ ಪತ್ರಗಳನ್ನು ಹಾಕಿದೆವು, ಪತ್ರಿಕೆಗಳಲ್ಲಿ ಹಾಕಿಸಿದೆವು, ಆದರೂ ನೀವು ಜಾಗೃತವಾಗಲಿಲ್ಲ. ಇದನ್ನು ತೋರಿಸಲಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸ್ವಯಂನಲ್ಲಿ ಏನೆಲ್ಲಾ ಕೆಟ್ಟ ಹವ್ಯಾಸಗಳಿವೆಯೋ ಅದರ ಪರಿಶೀಲನೆ ಮಾಡಿ, ಅವನ್ನು ತೆಗೆಯಲು ಪರಿಶ್ರಮ ಪಡಬೇಕಾಗಿದೆ. ತಮ್ಮ ಸತ್ಯ-ಸತ್ಯವಾದ ಲೆಕ್ಕ ಪತ್ರವನ್ನು ಇಡಬೇಕಾಗಿದೆ. ತಂದೆಯ ಆದೇಶದಂತೆ ನಡೆಯಬೇಕಾಗಿದೆ.

2. ತಂದೆಯ ಹೆಸರು ಕೆಡುವಂತಹ ಯಾವುದೇ ಕರ್ಮ ಮಾಡಬಾರದು, ತನ್ನ ಉನ್ನತಿಯ ಚಿಂತನೆ ಮಾಡಬೇಕಾಗಿದೆ. ಸ್ವಲ್ಪವೂ ಕುದೃಷ್ಟಿಯಿರಬಾರದು.

ವರದಾನ:
ಸ್ಥೂಲ ಅಥವಾ ಸೂಕ್ಷ್ಮದಲ್ಲಿ ಪ್ರತಿಯೊಂದು ಆದೇಶವನ್ನು ಪಾಲನೆ ಮಾಡುವಂತಹ ಸಂಪೂರ್ಣ ಆದೇಶ ಪಾಲಕ ಭವ.

ಅಂತಹ ಮಕ್ಕಳಲ್ಲಿಯೇ ಸ್ಥೂಲ ಆದೇಶವನ್ನು ಪಾಲನೆ ಮಾಡುವ ಶಕ್ತಿಯು ಬರಲು ಸಾಧ್ಯ. ಯಾರು ಸೂಕ್ಷ್ಮ ಆದೇಶವನ್ನು ಪಾಲನೆ ಮಾಡುತ್ತಾರೆ. ಸೂಕ್ಷ್ಮ ಹಾಗೂ ಮುಖ್ಯವಾದ ಆದೇಶವಿದೆ - ನಿರಂತರ ನೆನಪಿನಲ್ಲಿರಿ ಅಥವಾ ಮನ-ವಚನ-ಕರ್ಮದಿಂದ ಪವಿತ್ರವಾಗಿರಿ. ಸಂಕಲ್ಪದಲ್ಲಿಯೂ ಅಪವಿತ್ರತೆ ಅಥವಾ ಅಶುದ್ಧತೆ ಇರಬಾರದು. ಒಂದುವೇಳೆ ಸಂಕಲ್ಪದಲ್ಲಿ ಏನಾದರೂ ಹಳೆಯ ಅಶುದ್ಧ ಸಂಸ್ಕಾರಗಳು ಟಚ್ ಮಾಡುತ್ತದೆಯೆಂದರೆ, ಸಂಪೂರ್ಣ ವೈಷ್ಣವ ಅಥವಾ ಸಂಪೂರ್ಣ ಪವಿತ್ರರೆಂದು ಹೇಳುವುದಿಲ್ಲ ಆದ್ದರಿಂದ ಯಾವುದೊಂದು ಸಂಕಲ್ಪವೂ ಸಹ ಆದೇಶವಿಲ್ಲದೆ ನಡೆಯುವಂತಿಲ್ಲ. ಹೀಗಿದ್ದಾಗ ಸಂಪೂರ್ಣ ಆದೇಶ ಪಾಲಕನೆಂದು ಹೇಳಲಾಗುವುದು.

ಸ್ಲೋಗನ್:
ತಂದೆಯನ್ನು ಅರಿತುಕೊಂಡು ಹೃದಯದಿಂದ ಬಾಬಾ ಎಂದು ಹೇಳುವುದು ಅತಿ ಶ್ರೇಷ್ಠವಾದ ವಿಶೇಷತೆಯಾಗಿದೆ.

ಅವ್ಯಕ್ತ ಸೂಚನೆಗಳು:- ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ.

ಸಮಯ ಪ್ರಮಾಣ ಈಗ ಸದಾ ಅಚಲ ಅಡೋಲ ಸರ್ವ ಖಜಾನೆಗಳಿಂದ ಸಂಪನ್ನರಾಗಿ. ಸ್ವಲ್ಪವೂ ಸಹ ಏರು-ಪೇರು ಆಗುತ್ತೀರಿ ಎಂದರೆ ಸರ್ವ ಖಜಾನೆಗಳ ಅನುಭವ ಆಗುವುದಿಲ್ಲ. ತಂದೆಯ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸದಾ ಖಾಯಂ ಆಗಿ ಇಟ್ಟುಕೊಳ್ಳುವ ಸಾಧನ ಆಗಿದೆ ಸದಾ ಅಚಲ ಅಡೋಲರಾಗಿ ಇರುವುದು. ಅಚಲರಾಗಿರುವುದರಿಂದ ಸದಾ ಖುಷಿಯ ಅನುಭವ ಆಗುತ್ತಾ ಇರುತ್ತದೆ. ಹೇಗೆ ವಿನಾಶಿ ಧನ, ಹೆಸರು - ಮಾನ್ಯತೆ - ಆಡಂಬರ, ಪದವಿ ಇತ್ಯಾದಿಗಳು ಸಿಗುತ್ತದೆ ಎಂದರೆ ಖುಷಿಯಾಗುತ್ತದೆ ಅಲ್ಲವೇ. ಇದಂತೂ ಅವಿನಾಶಿ ಖುಷಿಯಾಗಿದೆ ಆದರೆ ಈ ಖುಷಿ ಅವರಿಗೆ ಇರುತ್ತದೆ ಯಾರು ಅಚಲ ಅಡೋಲ ಏಕ-ರಸ ಸ್ಥಿತಿಯಲ್ಲಿ ಇರುತ್ತಾರೆ.