25.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಹೆಜ್ಜೆ-ಹೆಜ್ಜೆಯಲ್ಲಿ ಏನು ನಡೆಯುತ್ತದೆಯೋ ಅದು ಕಲ್ಯಾಣಕಾರಿಯಾಗಿದೆ, ಯಾರು ತಂದೆಯ
ನೆನಪಿನಲ್ಲಿರುತ್ತಾರೆಯೋ ಅವರದೇ ಈ ನಾಟಕದಲ್ಲಿ ಎಲ್ಲರಿಗಿಂತ ಅಧಿಕ ಕಲ್ಯಾಣವಾಗುತ್ತದೆ”.
ಪ್ರಶ್ನೆ:
ಡ್ರಾಮಾದ ಯಾವ
ನಿಶ್ಚಿತವನ್ನು ಅರಿತುಕೊಂಡಿರುವ ಮಕ್ಕಳು ಅಪಾರ ಖುಷಿಯಲ್ಲಿರಲು ಸಾಧ್ಯ?
ಉತ್ತರ:
ಡ್ರಾಮಾನುಸಾರ
ಈಗ ಈ ಹಳೆಯ ಪ್ರಪಂಚದ ವಿನಾಶವಾಗುವುದು, ಪ್ರಾಕೃತಿಕ ವಿಕೋಪಗಳು ಆಗುವವು. ಆದರೆ ನಮ್ಮ ರಾಜಧಾನಿಯಂತೂ
ಖಂಡಿತವಾಗಿಯೂ ಸ್ಥಾಪನೆಯಾಗುವುದು. ಇದರಲ್ಲಿ ಯಾರೇನೂ ಮಾಡಲು ಸಾಧ್ಯವಿಲ್ಲ ಎಂದು ಯಾರಿಗೆ
ತಿಳಿದಿರುವುದೋ ಅಂತಹ ಮಕ್ಕಳು ಅಪಾರ ಖುಷಿಯಲ್ಲಿರುತ್ತಾರೆ. ಭಲೆ ಸ್ಥಿತಿಯಲ್ಲಿ ಏರಿಳಿತಗಳಾಗುತ್ತಾ
ಇರುವುದು. ಕೆಲವೊಮ್ಮೆ ಉಮ್ಮಂಗ, ಇನ್ನೂ ಕೆಲವೊಮ್ಮೆ ಬಹಳ ತಣ್ಣಗಾಗಿ ಬಿಡುತ್ತಾರೆ. ಇದರಲ್ಲಿ
ವಿಚಲಿತರಾಗಬಾರದು. ಎಲ್ಲಾ ಆತ್ಮಗಳ ತಂದೆಯಾದ ಭಗವಂತನೇ ನಮಗೆ ಓದಿಸುತ್ತಿದ್ದಾರೆ ಎಂಬ
ಖುಷಿಯಲ್ಲಿರಬೇಕು.
ಗೀತೆ:
ಸಭೆಯಲ್ಲಿ
ಜ್ಯೋತಿ ಬೆಳಗಿತು................
ಓಂ ಶಾಂತಿ.
ಮಧುರಾತಿ ಮಧುರ ನಂಬರ್ವಾರ್ ಪುರುಷಾರ್ಥದನುಸಾರ ಚೈತನ್ಯ ಪತಂಗಗಳಿಗೆ ತಂದೆಯು ನೆನಪು, ಪ್ರೀತಿಯನ್ನು
ಕೊಡುತ್ತಿದ್ದೇವೆ. ನೀವೆಲ್ಲರೂ ಚೈತನ್ಯ ಪತಂಗಗಳಾಗಿದ್ದೀರಿ. ತಂದೆಗೆ ಪರಂಜ್ಯೋತಿಯೆಂತಲೂ
ಹೇಳುತ್ತಾರೆ, ಆದರೆ ಅವರನ್ನೇ ಅರಿತುಕೊಂಡಿಲ್ಲ. ಪರಂಜ್ಯೋತಿಯೆಂದರೆ ದೊಡ್ಡ ಗಾತ್ರದಲ್ಲಿಲ್ಲ, ಒಂದು
ಬಿಂದುವಾಗಿದ್ದಾರೆ. ನಾವಾತ್ಮಗಳು ಬಿಂದುಗಳಾಗಿದ್ದೇವೆ, ನಾವಾತ್ಮಗಳಲ್ಲಿ ಪಾತ್ರವೆಲ್ಲವೂ
ಅಡಕವಾಗಿದೆ ಎಂಬುದು ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಆತ್ಮ ಮತ್ತು ಪರಮಾತ್ಮನ ಜ್ಞಾನವು
ಮತ್ತ್ಯಾರಿಗೂ ಇಲ್ಲ. ತಂದೆಯು ಬಂದು ನೀವು ಮಕ್ಕಳಿಗೇ ತಿಳಿಸಿದ್ದಾರೆ, ಆತ್ಮಾನುಭೂತಿ
ಮಾಡಿಸಿದ್ದಾರೆ. ಆತ್ಮವೆಂದರೇನು, ಪರಮಾತ್ಮ ಯಾರು ಎಂಬುದು ತಿಳಿದಿರಲಿಲ್ಲ ಆದ್ದರಿಂದ ದೇಹಾಭಿಮಾನದ
ಕಾರಣ ಮಕ್ಕಳಲ್ಲಿ ಮೋಹವೂ ಇದೆ, ಬಹಳ ವಿಕಾರಗಳೂ ಇವೆ. ಭಾರತವೇ ಇಷ್ಟು ಶ್ರೇಷ್ಠವಾಗಿತ್ತು, ವಿಕಾರದ
ಹೆಸರೇ ಇರಲಿಲ್ಲ, ಅದು ನಿರ್ವಿಕಾರಿ ಭಾರತವಾಗಿತ್ತು. ಈಗ ವಿಕಾರೀ ಭಾರತವಾಗಿದೆ. ಯಾವುದೇ ಮನುಷ್ಯರು
ತಂದೆಯು ತಿಳಿಸುವ ರೀತಿಯಲ್ಲಿ ತಿಳಿಸುವುದಿಲ್ಲ. ಇಂದಿಗೆ 5000 ವರ್ಷಗಳ ಮೊದಲು ನಾನು ಭಾರತವನ್ನು
ಶಿವಾಲಯವನ್ನಾಗಿ ಮಾಡಿದ್ದೆನು, ನಾನೇ ಶಿವಾಲಯವನ್ನು ಸ್ಥಾಪನೆ ಮಾಡಿದ್ದೇನೆ. ಹೇಗೆ ಎಂಬುದನ್ನು
ನೀವು ಮಕ್ಕಳೂ ಈಗ ತಿಳಿದುಕೊಳ್ಳುತ್ತಿದ್ದೀರಿ. ನಿಮಗೆ ಗೊತ್ತಿದೆ, ಹೆಜ್ಜೆ-ಹೆಜ್ಜೆಯಲ್ಲಿ
ಏನಾಗುವುದೋ ಅದು ಕಲ್ಯಾಣಕಾರಿಯಾಗಿದೆ. ಯಾರು ತಂದೆಯನ್ನು ಬಹಳ ಚೆನ್ನಾಗಿ ನೆನಪು ಮಾಡಿ ತಮ್ಮ
ಕಲ್ಯಾಣವನ್ನೂ ಮಾಡಿಕೊಳ್ಳುತ್ತಾ ಇರುತ್ತಾರೆಯೋ ಅವರಿಗೆ ಒಂದೊಂದು ದಿನವೂ ಕಲ್ಯಾಣಕಾರಿಯಾಗಿದೆ. ಇದು
ಕಲ್ಯಾಣಕಾರಿ ಪುರುಷೋತ್ತಮರಾಗುವ ಯುಗವಾಗಿದೆ. ತಂದೆಗೆ ಎಷ್ಟೊಂದು ಮಹಿಮೆಯಿದೆ! ಈಗ ಸತ್ಯ-ಸತ್ಯವಾದ
ಭಾಗವತವು ನಡೆಯುತ್ತಿದೆ. ದ್ವಾಪರದಲ್ಲಿ ಯಾವಾಗ ಭಕ್ತಿಮಾರ್ಗವು ಆರಂಭವಾಗುವುದೋ ಆಗ ಮೊಟ್ಟ ಮೊದಲಿಗೆ
ನೀವೂ ಸಹ ವಜ್ರದಿಂದ ಲಿಂಗವನ್ನು ಮಾಡಿ, ಪೂಜೆ ಮಾಡುತ್ತೀರಿ. ಈಗ ನಿಮಗೆ ಸ್ಮೃತಿ ಬಂದಿದೆ, ನಾವು
ಪೂಜಾರಿಗಳಾಗಿದ್ದಾಗ ಮಂದಿರಗಳನ್ನು ಕಟ್ಟಿಸಿದ್ದೆವು. ಮೊದಲು ಮುತ್ತು-ಮಾಣಿಕ್ಯದಿಂದ
ತಯಾರಿಸುತ್ತಿದ್ದೆವು. ಆ ಚಿತ್ರವಂತೂ ಈಗ ಸಿಗಲು ಸಾಧ್ಯವಿಲ್ಲ. ಇಲ್ಲಂತೂ ಮನುಷ್ಯರು ಬೆಳ್ಳಿ,
ಇತ್ಯಾದಿಗಳಿಂದ ಲಿಂಗವನ್ನು ಮಾಡಿ ಪೂಜೆ ಮಾಡುತ್ತಾರೆ. ಇಂತಹ ಪೂಜಾರಿಗಳಿಗೂ ಸಹ ನೋಡಿ ಎಷ್ಟೊಂದು
ಮಾನ್ಯತೆಯಿದೆ! ಶಿವನ ಪೂಜೆಯನ್ನು ಎಲ್ಲರೂ ಮಾಡುತ್ತಾರೆ ಆದರೆ ಅವ್ಯಭಿಚಾರಿ ಪೂಜೆಯನ್ನು
ಮಾಡುವುದಿಲ್ಲ.
ಇದೂ ಸಹ ಮಕ್ಕಳಿಗೆ
ತಿಳಿದಿದೆ - ವಿನಾಶವು ಅವಶ್ಯವಾಗಿ ಆಗಲಿದೆ. ತಯಾರಿಗಳೂ ನಡೆಯುತ್ತಿವೆ. ನಾಟಕದಲ್ಲಿ ಪ್ರಾಕೃತಿಕ
ವಿಕೋಪಗಳೂ ಸಹ ನಿಶ್ಚಿತವಾಗಿದೆ. ಯಾರೆಷ್ಟಾದರೂ ತಲೆ ಕೆಡಿಸಿಕೊಳ್ಳಲಿ ನಿಮ್ಮ ರಾಜಧಾನಿಯು
ಸ್ಥಾಪನೆಯಾಗಲೇಬೇಕಾಗಿದೆ. ಇದರಲ್ಲಿ ಏನು ಮಾಡಲೂ ಯಾರಿಗೂ ಶಕ್ತಿಯಿಲ್ಲ ಉಳಿದಂತೆ ಸ್ಥಿತಿಯಲ್ಲಂತೂ
ಏರಿಳಿತವಾಗುತ್ತಿರುತ್ತದೆ. ಇದು ಬಹಳ ದೊಡ್ಡ ಸಂಪಾದನೆಯಾಗಿದೆ. ಕೆಲವೊಮ್ಮೆ ನೀವು ಬಹಳ ಖುಷಿಯಲ್ಲಿ
ಒಳ್ಳೆಯ ಆಲೋಚನೆಯಲ್ಲಿರುತ್ತೀರಿ, ಇನ್ನೂ ಕೆಲವೊಮ್ಮೆ ತಣ್ಣಗಾಗಿ ಬಿಡುತ್ತೀರಿ. ಯಾತ್ರೆಯಲ್ಲಿಯೂ
ಸಹ ಏರುಪೇರುಗಳಾಗುತ್ತವೆ. ಇದರಲ್ಲಿಯೂ ಅದೇ ರೀತಿಯಾಗುತ್ತದೆ. ಕೆಲವೊಂದು ಸಮಯದಲ್ಲಿ ಮುಂಜಾನೆಯೇ
ಎದ್ದು ತಂದೆಯನ್ನು ನೆನಪು ಮಾಡಿದಾಗ ಬಹಳ ಖುಷಿಯಾಗುತ್ತದೆ - ಓಹೋ, ತಂದೆಯು ನಮಗೆ
ಓದಿಸುತ್ತಿದ್ದಾರೆ, ಅದ್ಭುತವಾಗಿದೆ. ಎಲ್ಲಾ ಆತ್ಮಗಳ ತಂದೆಯಾದ ಭಗವಂತನು ನಮಗೆ ಓದಿಸುತ್ತಿದ್ದಾರೆ.
ಆದರೆ ಮನುಷ್ಯರು ಕೃಷ್ಣನನ್ನೇ ಭಗವಂತನು ಎಂದು ತಿಳಿದಿದ್ದಾರೆ. ಇಡೀ ಪ್ರಪಂಚದಲ್ಲಿ ಗೀತೆಗೆ ಬಹಳ
ಮಾನ್ಯತೆಯಿದೆ ಏಕೆಂದರೆ ಭಗವಾನುವಾಚವಲ್ಲವೆ ಆದರೆ ಭಗವಂತನೆಂದು ಯಾರಿಗೆ ಹೇಳಲಾಗುತ್ತದೆ ಎಂಬುದು
ಯಾರಿಗೂ ತಿಳಿದಿಲ್ಲ. ಭಲೆ ಎಷ್ಟಾದರೂ ದೊಡ್ಡ-ದೊಡ್ಡ ಪದವೀಧರರು, ವಿದ್ವಾಂಸ-ಪಂಡಿತರೂ ಸಹ
ಪರಮಾತ್ಮನನ್ನು ನೆನಪು ಮಾಡುತ್ತೇವೆಂದು ಹೇಳುತ್ತಾರೆ ಆದರೆ ಅವರು ಯಾವಾಗ ಬಂದರು? ಬಂದು ಏನು
ಮಾಡಿದರು ಎಂಬುದೆಲ್ಲವನ್ನೂ ಮರೆತು ಹೋಗಿದ್ದಾರೆ. ತಂದೆಯು ಎಲ್ಲಾ ಮಾತುಗಳನ್ನು
ತಿಳಿಸುತ್ತಿರುತ್ತಾರೆ. ನಾಟಕದಲ್ಲಿ ಇದೆಲ್ಲವೂ ನಿಗಧಿಯಾಗಿದೆ. ಭಾರತವು ಪುನಃ ರಾವಣ
ರಾಜ್ಯವಾಗುವುದು ಮತ್ತು ನಾನು ಬರಬೇಕಾಗುವುದು. ರಾವಣನೇ ನಿಮ್ಮನ್ನು ಅಜ್ಞಾನದ ಘೋರ ಅಂಧಕಾರದಲ್ಲಿ
ಮಲಗಿಸಿ ಬಿಟ್ಟಿದ್ದಾನೆ. ಜ್ಞಾನವನ್ನು ಕೇವಲ ಒಬ್ಬ ಜ್ಞಾನ ಸಾಗರನೇ ತಿಳಿಸುತ್ತಾರೆ. ತಂದೆಯ ವಿನಃ
ಬೇರೆ ಯಾರೂ ಸದ್ಗತಿ ಮಾಡಲು ಸಾಧ್ಯವಿಲ್ಲ. ಸರ್ವರ ಸದ್ಗತಿದಾತನು ಒಬ್ಬ ತಂದೆಯಾಗಿದ್ದಾರೆ, ಯಾವ
ಗೀತಾ ಜ್ಞಾನವನ್ನು ತಂದೆಯು ತಿಳಿಸಿದ್ದರೋ ಅದು ಪ್ರಾಯಲೋಪವಾಯಿತು. ಈ ಜ್ಞಾನವು ಪರಂಪರೆಯಿಂದ ನಡೆದು
ಬರುತ್ತದೆ ಎಂದಲ್ಲ. ಮತ್ತೆಲ್ಲರ ಖುರಾನ್, ಬೈಬಲ್ ಮೊದಲಾದವುಗಳು ನಡೆದು ಬರುತ್ತವೆ. ನಿಮಗಂತೂ ಈಗ
ಯಾವ ಜ್ಞಾನವನ್ನು ಕೊಡುತ್ತೇನೆಯೋ ಇದರಿಂದ ಯಾವುದೇ ಶಾಸ್ತ್ರವಾಗುವುದಿಲ್ಲ. ಅದು ಅನಾದಿಯೂ
ಆಗುವುದಿಲ್ಲ. ಇದನ್ನು ನೀವು ಬರೆಯುತ್ತೀರಿ ಮತ್ತೆ ಸಮಾಪ್ತಿ ಮಾಡಿ ಬಿಡುತ್ತೀರಿ. ಇದೆಲ್ಲವೂ
ಸುಟ್ಟು ಭಸ್ಮವಾಗಿ ಬಿಡುತ್ತದೆ. ತಂದೆಯು ಕಲ್ಪದ ಮೊದಲೂ ತಿಳಿಸಿದ್ದರು, ಈಗಲೂ ನಿಮಗೆ
ತಿಳಿಸುತ್ತಿದ್ದಾರೆ - ಈ ಜ್ಞಾನವು ನಿಮಗೇ ಸಿಗುತ್ತದೆ ನಂತರ ಇದರಿಂದ ಹೋಗಿ ಪ್ರಾಲಬ್ಧವನ್ನು
ಪಡೆಯುತ್ತೀರಿ ಮತ್ತೆ ಈ ಜ್ಞಾನದ ಅವಶ್ಯಕತೆಯಿರುವುದಿಲ್ಲ. ಭಕ್ತಿಮಾರ್ಗದಲ್ಲಿ ಎಲ್ಲಾ
ಶಾಸ್ತ್ರಗಳಿವೆ. ತಂದೆಯು ನಿಮಗೆ ಯಾವುದೇ ಗೀತೆಯನ್ನು ಓದಿ ಹೇಳುವುದಿಲ್ಲ, ಅವರು ರಾಜಯೋಗದ
ಶಿಕ್ಷಣವನ್ನು ಕೊಡುತ್ತಾರೆ ನಂತರ ಭಕ್ತಿಮಾರ್ಗದಲ್ಲಿ ಅದರ ಶಾಸ್ತ್ರಗಳನ್ನು ಮಾಡುತ್ತಾರೆ ಅದರಿಂದ
ಮೇಲೆ ಕೆಳಗೆ ಮಾಡಿ ಬಿಡುತ್ತಾರೆ ಅಂದಾಗ ನಿಮ್ಮದು ಮುಖ್ಯ ಮಾತಾಗಿದೆ – ಗೀತಾ ಜ್ಞಾನವನ್ನು ಯಾರು
ಕೊಟ್ಟರು? ಅವರ ಹೆಸರನ್ನೇ ಬದಲು ಮಾಡಿ ಬಿಟ್ಟಿದ್ದಾರೆ, ಬೇರೆ ಯಾರ ಹೆಸರೂ ಬದಲಾಗಿಲ್ಲ. ಎಲ್ಲರದೂ
ಮುಖ್ಯ ಧರ್ಮ ಶಾಸ್ತ್ರಗಳಿವೆಯಲ್ಲವೆ. ಇದರಲ್ಲಿ ಮುಖ್ಯವಾದುದು ದೇವತಾ ಧರ್ಮ, ಇಸ್ಲಾಂ ಧರ್ಮ,
ಬೌದ್ಧ ಧರ್ಮ. ಭಲೆ ಮೊದಲು ಬೌದ್ಧ ಧರ್ಮ, ಇಸ್ಲಾಂ ಧರ್ಮ ಎಂದು ಕೆಲವರು ಹೇಳುತ್ತಾರೆ ಆದರೆ ಈ
ಮಾತುಗಳೊಂದಿಗೆ ಗೀತೆಯ ಯಾವುದೇ ಸಂಬಂಧವಿಲ್ಲ. ನಮ್ಮ ಕೆಲಸವಾಗಿದೆ - ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳುವುದು. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ - ಇದು ದೊಡ್ಡ ವೃಕ್ಷವಾಗಿದೆ.
ಹೇಗೆ ಹೂ ಕುಂಡದಂತೆ ಬಹಳ ಸುಂದರವಾಗಿದೆ. ಇದರಿಂದ ನಾಲ್ಕು ಶಾಖೆಗಳು ಹೊರಡುತ್ತವೆ. ಇದು ಎಷ್ಟು
ಚೆನ್ನಾಗಿ ತಿಳುವಳಿಕೆಯಿಂದ ಮಾಡಿರುವ ವೃಕ್ಷವಾಗಿದೆ. ಇದರಲ್ಲಿ ನಾವು ಯಾವ ಧರ್ಮದವರು, ನಮ್ಮ
ಧರ್ಮವನ್ನು ಯಾರು ಸ್ಥಾಪನೆ ಮಾಡಿದರು ಎಂಬುದನ್ನು ಯಾರು ಬೇಕಾದರೂ ಬಹಳ ಬೇಗನೆ ಅರಿತುಕೊಳ್ಳುವರು.
ದಯಾನಂದ, ಅರವಿಂದ ಘೋಷ್ ಮೊದಲಾದವರಂತೂ ಬಂದು ಹೋಗಿದ್ದಾರೆ. ಅವರೂ ಸಹ ಯೋಗ ಇತ್ಯಾದಿಗಳನ್ನು ಕಲಿಸಿ
ಕೊಡುತ್ತಾರೆ. ಎಲ್ಲವೂ ಭಕ್ತಿಯಾಗಿದೆ, ಇದರಲ್ಲಿ ಜ್ಞಾನದ ಹೆಸರು, ಚಿಹ್ನೆಯೂ ಇಲ್ಲ. ಎಷ್ಟು
ದೊಡ್ಡ-ದೊಡ್ಡ ಬಿರುದುಗಳು ಸಿಗುತ್ತವೆ. ಇದೆಲ್ಲವೂ ಸಹ ನಾಟಕದಲ್ಲಿ ನಿಶ್ಚಿತವಾಗಿದೆ ಮತ್ತೆ 5000
ವರ್ಷಗಳ ನಂತರವೂ ಆಗುವುದು. ಆದಿಯಿಂದ ಹಿಡಿದು ಈ ಚಕ್ರವು ಹೇಗೆ ನಡೆದಿದೆ ಮತ್ತೆ ಹೇಗೆ
ಪುನರಾವರ್ತನೆಯಾಗುತ್ತಾ ಇರುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಈಗ ವರ್ತಮಾನವಿದೆ,
ಇದು ಕಳೆದು ಭೂತಕಾಲವಾಗಿ ಮತ್ತೆ ಭವಿಷ್ಯವಾಗುವುದು. ಭೂತ, ಭವಿಷ್ಯತ್, ವರ್ತಮಾನ - ಯಾವುದು ಭೂತ
ಕಾಲವಾಗುವುದೋ ಅದು ಮತ್ತೆ ಭವಿಷ್ಯವಾಗುವುದು. ಈ ಸಮಯದಲ್ಲಿ ನಿಮಗೆ ಜ್ಞಾನವು ಸಿಗುತ್ತದೆ. ನಂತರ
ನೀವು ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಈ ದೇವತೆಗಳ ರಾಜ್ಯವಿತ್ತಲ್ಲವೆ. ಆ ಸಮಯದಲ್ಲಿ
ಮತ್ತ್ಯಾರ ರಾಜ್ಯವೂ ಇರಲಿಲ್ಲ. ಇದೂ ಸಹ ಒಂದು ಕಥೆಯ ರೂಪದಲ್ಲಿ ತಿಳಿಸಿ, ಬಹಳ ಸುಂದರ ಕಥೆಯಾಗಿ
ಬಿಡುವುದು. ಒಂದಾನೊಂದು ಕಾಲದಲ್ಲಿ 5000 ವರ್ಷಗಳ ಮೊದಲು ಈ ಭಾರತವು ಸತ್ಯಯುಗವಾಗಿತ್ತು,
ಮತ್ತ್ಯಾವುದೇ ಧರ್ಮವಿರಲಿಲ್ಲ, ಕೇವಲ ದೇವಿ-ದೇವತೆಗಳ ರಾಜ್ಯವೇ ಇತ್ತು. ಅದಕ್ಕೆ ಸೂರ್ಯವಂಶಿಯರ
ರಾಜ್ಯವೆಂದು ಕರೆಯಲಾಗುತ್ತಿತ್ತು. ಲಕ್ಷ್ಮೀ-ನಾರಾಯಣರ ರಾಜ್ಯವು 1250 ವರ್ಷಗಳ ಕಾಲ ನಡೆಯಿತು,
ನಂತರ ಅವರು ರಾಜ್ಯವನ್ನು ತಮ್ಮ ಸಹೋದರರಾದ ಕ್ಷತ್ರಿಯರಿಗೂ ಕೊಟ್ಟರು ಮತ್ತೆ ಅವರ ರಾಜ್ಯವು ನಡೆಯಿತು.
ನೀವು ಇದನ್ನೂ ಸಹ ತಿಳಿಸಬಹುದು - ತಂದೆಯು ಬಂದು ಓದಿಸಿದ್ದರು. ಯಾರು ಆ ವಿದ್ಯೆಯನ್ನು ಚೆನ್ನಾಗಿ
ಓದಿದರೋ ಅವರು ಸೂರ್ಯವಂಶಿಯರಾದರು. ಯಾರು ಅನುತ್ತೀರ್ಣರಾದರು ಅವರಿಗೆ ಕ್ಷತ್ರಿಯರೆಂದು ಹೆಸರು
ಬಂದಿತು. ಉಳಿದಂತೆ ಯಾವುದೇ ಯುದ್ಧದ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ ನೀವು ನನ್ನನ್ನು
ನೆನಪು ಮಾಡಿ ಅದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. ನೀವೀಗ ವಿಕಾರಗಳ ಮೇಲೆ ಜಯ
ಗಳಿಸಬೇಕಾಗಿದೆ. ತಂದೆಯು ಆದೇಶ ನೀಡಿದ್ದಾರೆ, ಯಾರು ಕಾಮದ ಮೇಲೆ ಜಯ ಗಳಿಸುವರೋ ಅವರೇ
ಜಗಜ್ಜೀತರಾಗುವರು. ಮತ್ತೆ ಅರ್ಧ ಕಲ್ಪದ ನಂತರ ವಾಮ ಮಾರ್ಗದಲ್ಲಿ ಹೋಗಿ ಕೆಳಗೆ ಬೀಳುತ್ತಾರೆ. ಅವರ
ಚಿತ್ರಗಳೂ ಇವೆ. ಆದರೆ ಮುಖವನ್ನು ಮಾತ್ರ ದೇವತೆಗಳಂತೆ ಮಾಡಿದ್ದಾರೆ. ರಾಮ ರಾಜ್ಯ ಮತ್ತು ರಾವಣ
ರಾಜ್ಯ, ಇದು ಅರ್ಧ-ಅರ್ಧವಾಗಿದೆ. ಅವರ ಕಥೆಯನ್ನೂ ಸಹ ಕುಳಿತು ಬರೆಯಬೇಕು. ಮತ್ತೇನಾಯಿತು, ನಂತರ
ಏನಾಯಿತು, ಹೀಗೆ ಆಲೋಚಿಸಿ, ಇದೇ ಸತ್ಯ ನಾರಾಯಣನ ಕಥೆಯಾಗಿದೆ. ಸತ್ಯವಂತೂ ಒಬ್ಬ ತಂದೆಯೇ ಆಗಿದ್ದಾರೆ,
ಅವರು ಈ ಸಮಯದಲ್ಲಿ ಬಂದು ಇಡೀ ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ನಿಮಗೆ
ಕೊಡುತ್ತಿದ್ದಾರೆ ಯಾವುದನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಮನುಷ್ಯರಂತೂ ತಂದೆಯನ್ನೇ
ಅರಿತುಕೊಂಡಿಲ್ಲ. ಯಾವ ನಾಟಕದಲ್ಲಿ ಪಾತ್ರಧಾರಿಗಳಾಗಿದ್ದಾರೆಯೋ ಅದರ ರಚಯಿತ, ನಿರ್ದೇಶಕರನ್ನು
ತಿಳಿದುಕೊಂಡಿಲ್ಲ ಅಂದಮೇಲೆ ಇನ್ನ್ಯಾರು ತಿಳಿದುಕೊಳ್ಳುವರು! ಈಗ ನಿಮಗೆ ತಂದೆಯು ತಿಳಿಸುತ್ತಾರೆ -
ಡ್ರಾಮಾನುಸಾರ ಇದು ಪುನಃ ಇದೇ ರೀತಿಯಾಗುವುದು. ತಂದೆಯು ಬಂದು ನೀವು ಮಕ್ಕಳಿಗೆ ಪುನಃ ಓದಿಸುತ್ತಾರೆ.
ಇಲ್ಲಿಗೆ ಮತ್ತ್ಯಾರೂ ಬರಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಮಕ್ಕಳಿಗೇ
ಓದಿಸುತ್ತೇನೆ. ಹೊಸಬರನ್ನು ಇಲ್ಲಿ ಕುಳ್ಳರಿಸಲಾಗುವುದಿಲ್ಲ. ಇಂದ್ರಪ್ರಸ್ಥದ ಕಥೆಯೂ ಇದೆಯಲ್ಲವೆ.
ನೀಲಂಪರಿ, ಪುಖರಾಜ ಪರಿ ಹೆಸರುಗಳಿವೆಯಲ್ಲವೆ. ನಿಮ್ಮಲ್ಲಿಯೂ ಕೆಲವರು ವಜ್ರದಂತಹ ರತ್ನಗಳಿದ್ದಾರೆ,
ನೋಡಿ ರಮೇಶ್ ಮಗುವು ಇಂತಹ ಪ್ರದರ್ಶನಿಯನ್ನು ರಚಿಸಿದ್ದಾರೆ ಅದರ ಪ್ರತಿ ಎಲ್ಲರಿಗೂ ವಿಚಾರ ಸಾಗರ
ಮಂಥನವಾಯಿತು ಅಂದಾಗ ವಜ್ರ ಸಮಾನ ಕಾರ್ಯ ಮಾಡಿದರಲ್ಲವೆ. ಕೆಲಕೆಲವರು ಕೆಲವೊಂದು ತರಹದವರಿದ್ದಾರೆ,
ಇನ್ನೂ ಕೆಲವರಂತೂ ಏನನ್ನೂ ತಿಳಿದುಕೊಂಡಿಲ್ಲ. ನಿಮಗೆ ತಿಳಿದಿದೆ - ರಾಜಧಾನಿಯು ಸ್ಥಾಪನೆಯಾಗುತ್ತದೆ,
ಅಲ್ಲಿ ರಾಜರು, ರಾಣಿಯರು ಎಲ್ಲರೂ ಬೇಕು. ನಾವು ಬ್ರಾಹ್ಮಣರು ಶ್ರೀಮತದನುಸಾರ ನಡೆದು ವಿಶ್ವದ
ಮಾಲೀಕರಾಗುತ್ತೇವೆ ಎಂದು ನೀವು ತಿಳಿದುಕೊಳ್ಳುತ್ತೀರಿ ಅಂದಮೇಲೆ ಎಷ್ಟು ಖುಷಿಯಿರಬೇಕು! ಈಗ ಈ
ಮೃತ್ಯುಲೋಕವು ಸಮಾಪ್ತಿಯಾಗುವುದಿದೆ. ಬ್ರಹ್ಮಾ ತಂದೆಯೂ ಸಹ ನಾನು ಹೋಗಿ ಚಿಕ್ಕ ಮಗುವಾಗುತ್ತೇನೆಂದು
ಈಗಲೇ ತಿಳಿದುಕೊಳ್ಳುತ್ತಿರುತ್ತಾರೆ. ಬಾಲ್ಯದ ಆ ಮಾತುಗಳೇ ಈಗ ಸನ್ಮುಖದಲ್ಲಿ ಬರುತ್ತಿವೆ. ಆ
ಸ್ಮೃತಿಯು ಬಂದ ತಕ್ಷಣವೇ ಚಲನೆಯು ಬದಲಾಗಿ ಬಿಡುತ್ತದೆ. ಇದೇ ರೀತಿ ಸತ್ಯಯುಗದಲ್ಲಿಯೂ ಸಹ
ವಯಸ್ಸಾದಾಗ ಈಗ ನಾನು ಈ ವಾನಪ್ರಸ್ಥ ಶರೀರವನ್ನು ಬಿಟ್ಟು ಹೋಗಿ ಚಿಕ್ಕ ಮಗುವಾಗುತ್ತೇನೆಂದು
ತಿಳಿದುಕೊಳ್ಳುತ್ತಾರೆ. ಬಾಲ್ಯತನವು ಸತೋಪ್ರಧಾನ ಸ್ಥಿತಿಯಾಗಿದೆ. ಲಕ್ಷ್ಮೀ-ನಾರಾಯಣರಾದರೆ
ಯುವಕರಾಗಿದ್ದಾರೆ. ವಿವಾಹವಾಗಿರುವವರಿಗೆ ಬಾಲ್ಯಾವಸ್ಥೆಯೆಂದು ಹೇಳುವುದಿಲ್ಲ, ಯುವಾವಸ್ಥೆಗೆ ರಜೋ
ಎಂತಲೂ, ವೃದ್ಧಾವಸ್ಥೆಗೆ ತಮೋ ಎಂತಲೂ ಹೇಳುತ್ತಾರೆ ಆದ್ದರಿಂದ ಕೃಷ್ಣನ ಮೇಲೆ ಬಹಳ
ಪ್ರೀತಿಯಿರುತ್ತದೆ. ಲಕ್ಷ್ಮೀ-ನಾರಾಯಣರೂ ಅವರೇ ಆಗಿರುತ್ತಾರೆ ಆದರೆ ಮನುಷ್ಯರು ಈ ಮಾತುಗಳನ್ನು
ತಿಳಿದುಕೊಂಡಿಲ್ಲ. ಕೃಷ್ಣನನ್ನು ದ್ವಾಪರದಲ್ಲಿಯೂ, ಲಕ್ಷ್ಮೀ-ನಾರಾಯಣರನ್ನು ಸತ್ಯಯುಗದಲ್ಲಿ
ತೆಗೆದುಕೊಂಡು ಹೋಗಿದ್ದಾರೆ. ನೀವೀಗ ದೇವತೆಗಳಾಗುವ ಪುರುಷಾರ್ಥ ಮಾಡುತ್ತಿದ್ದೀರಿ.
ತಂದೆಯು ತಿಳಿಸುತ್ತಾರೆ
- ಕುಮಾರಿಯರು ಈಗ ಎದ್ದು ನಿಲ್ಲಬೇಕು. ಕುಮಾರಿ ಕನ್ಯೆ, ಅದರ್ಕುಮಾರಿಯ ಮಂದಿರವೂ ಇದೆ. ಜೈನರು ಯಾರು
ಈ ದಿಲ್ವಾಡಾ ಮಂದಿರವನ್ನು ಕಟ್ಟಿಸಿದ್ದಾರೆಯೋ ಅವರಿಗೂ ಸಹ ಈ ಹೆಸರನ್ನು ಏಕೆ ಇಟ್ಟಿದ್ದೇವೆಂದು
ತಿಳಿದಿಲ್ಲ. ನೀವೀಗ ತಿಳಿದುಕೊಳ್ಳುತ್ತೀರಿ - ಇದು ನಮ್ಮದೇ ಆಕ್ಯೂರೇಟ್ ನೆನಪಾರ್ಥವಾಗಿದೆ. ಅದು
ಜಡ, ಇದು ಚೈತನ್ಯವಾಗಿದೆ. ನಾವಿಲ್ಲಿ ಚೈತನ್ಯದಲ್ಲಿ ಕುಳಿತಿದ್ದೇವೆ. ನಾವು ಭಾರತವನ್ನು
ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ. ಸ್ವರ್ಗವು ಇಲ್ಲಿಯೇ ಆಗುವುದು, ಮೂಲವತನ, ಸೂಕ್ಷ್ಮವತನವು
ಎಲ್ಲಿದೆ ಎಂಬುದೆಲ್ಲವೂ ನಿಮಗೆ ತಿಳಿದಿದೆ. ನೀವು ಇಡೀ ನಾಟಕವನ್ನು ಅರಿತುಕೊಂಡಿದ್ದೀರಿ. ಯಾವುದು
ಕಳೆದು ಹೋಗಿದೆಯೋ ಅದು ಮತ್ತೆ ಭವಿಷ್ಯವಾಗುವುದು ಅನಂತರ ಭೂತ ಕಾಲವಾಗುವುದು. ನಿಮಗೆ ಯಾರು
ಓದಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ನಮಗೆ ಭಗವಂತನೇ ಓದಿಸುತ್ತಾರೆ. ಖುಷಿಯಲ್ಲಿ ತಂದೆಯ
ನೆನಪಿನಿಂದ ಎಲ್ಲಾ ಗೊಂದಲಗಳು ಹೊರಟು ಹೋಗುತ್ತವೆ. ಬಾಬಾ ನಮ್ಮ ತಂದೆಯೂ ಆಗಿದ್ದಾರೆ, ಓದಿಸುತ್ತಾರೆ
ಮತ್ತು ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ತನ್ನನ್ನು ಆತ್ಮನೆಂದು ತಿಳಿದು
ಪರಮಾತ್ಮ ತಂದೆಯೊಂದಿಗೆ ಹೀಗೆ ವಾರ್ತಾಲಾಪ ಮಾಡಬೇಕಾಗಿದೆ, ಬಾಬಾ ನಮಗೆ ಈಗ ಅರ್ಥವಾಗಿದೆ, ಬ್ರಹ್ಮಾ
ಮತ್ತು ವಿಷ್ಣುವಿನ ಬಗ್ಗೆಯೂ ಅರ್ಥವಾಗಿದೆ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಹೊರ ಬಂದರು ಎಂದು
ಹೇಳುತ್ತಾರೆ ಮತ್ತೆ ವಿಷ್ಣುವನ್ನು ಕ್ಷೀರ ಸಾಗರದಲ್ಲಿ ತೋರಿಸುತ್ತಾರೆ. ಬ್ರಹ್ಮನನ್ನು
ಸೂಕ್ಷ್ಮವತನದಲ್ಲಿ ತೋರಿಸುತ್ತಾರೆ. ವಾಸ್ತವದಲ್ಲಿ ಬ್ರಹ್ಮಾನು ಇಲ್ಲಿಯೇ ಇದ್ದಾರೆ. ವಿಷ್ಣುವು
ರಾಜ್ಯಭಾರ ಮಾಡುವವರಾದರು. ಒಂದುವೇಳೆ ವಿಷ್ಣುವಿನ ನಾಭಿಯಿಂದ ಬ್ರಹ್ಮಾನು ಬರುವುದಾದರೆ ಅವಶ್ಯವಾಗಿ
ರಾಜ್ಯಭಾರವನ್ನೇ ಮಾಡುವರು. ವಿಷ್ಣುವಿನ ನಾಭಿಯಿಂದ ಬಂದರೆಂದರೆ ಮಗನಾದರಲ್ಲವೆ. ಇವೆಲ್ಲಾ
ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಬ್ರಹ್ಮಾನೇ 84 ಜನ್ಮಗಳನ್ನು ಪೂರ್ಣಗೊಳಿಸಿ ಈಗ ವಿಷ್ಣು
ಪುರಿಯ ಮಾಲೀಕನಾಗುತ್ತಾರೆ. ಈ ಮಾತುಗಳನ್ನು ಕೆಲವರು ಪೂರ್ಣ ರೀತಿಯಿಂದ ತಿಳಿದುಕೊಂಡಿಲ್ಲ.
ಆದ್ದರಿಂದ ಆ ಖುಷಿಯ ನಶೆಯೇರುವುದಿಲ್ಲ. ನೀವೇ ಗೋಪ-ಗೋಪಿಕೆಯರಾಗಿದ್ದೀರಿ, ಅಲ್ಲಿ
ಸತ್ಯಯುಗದಲ್ಲಿರುವುದಿಲ್ಲ, ಅಲ್ಲಂತೂ ರಾಜಕುಮಾರ-ಕುಮಾರಿಯರಿರುತ್ತಾರೆ. ತಂದೆಯು ಗೋಪ-ಗೋಪಿಕೆಯರ
ಗೋಪಿ ವಲ್ಲಭನಲ್ಲವೆ. ಪ್ರಜಾಪಿತ ಬ್ರಹ್ಮಾನು ಎಲ್ಲರ ತಂದೆಯಾಗಿದ್ದಾರೆ ಮತ್ತು ಎಲ್ಲಾ ಆತ್ಮಗಳ
ತಂದೆಯೇ ನಿರಾಕಾರ ಶಿವನಾಗಿದ್ದಾರೆ. ನೀವು ಮುಖ ವಂಶಾವಳಿಯಾಗಿದ್ದೀರಿ. ನೀವೆಲ್ಲಾ
ಬ್ರಹ್ಮಾಕುಮಾರ-ಕುಮಾರಿಯರು ಪರಸ್ಪರ ಸಹೋದರ-ಸಹೋದರಿಯರಾದಿರಿ. ಇಲ್ಲಿ ವಿಕಾರದ ದೃಷ್ಟಿಯಿರಲು
ಸಾಧ್ಯವಿಲ್ಲ, ಇದರಲ್ಲಿಯೇ ಮಾಯೆಯು ಸೋಲಿಸುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ -
ಇಲ್ಲಿಯವರೆಗೆ ಏನೆಲ್ಲವನ್ನೂ ಓದಿದ್ದೀರೋ ಅದನ್ನು ಬುದ್ಧಿಯಿಂದ ಮರೆತು ಹೋಗಿ. ನಾನು ಏನನ್ನು
ತಿಳಿಸುತ್ತೇನೆಯೋ ಅದನ್ನೇ ಓದಿರಿ. ಏಣಿಯ ಚಿತ್ರವು ಬಹಳ ಸುಂದರವಾಗಿದೆ. ಎಲ್ಲವೂ ಒಂದು ಮಾತಿನ ಮೇಲೆ
ಆಧಾರಿತವಾಗಿದೆ, ಅದು ಯಾವುದೆಂದರೆ - ಗೀತೆಯ ಭಗವಂತ ಯಾರು? ಕೃಷ್ಣನಿಗೇ ಭಗವಂತನೆಂದು ಹೇಳಲು
ಸಾಧ್ಯವಿಲ್ಲ. ಕೃಷ್ಣನು ಸರ್ವಗುಣ ಸಂಪನ್ನ ದೇವತೆಯಾಗಿದ್ದಾನೆ, ಅವನ ಹೆಸರನ್ನು ಗೀತೆಯಲ್ಲಿ ಹಾಕಿ
ಬಿಟ್ಟಿದ್ದಾರೆ. ಕೃಷ್ಣನನ್ನೂ ಕಪ್ಪಾಗಿ ತೋರಿಸಿದ್ದಾರೆ ಮತ್ತೆ ಲಕ್ಷ್ಮೀ-ನಾರಾಯಣರನ್ನೂ ಅದೇರೀತಿ
ತೋರಿಸುತ್ತಾರೆ. ಏನನ್ನೂ ವಿಚಾರ ಮಾಡುವುದೇ ಇಲ್ಲ. ರಾಮ ಚಂದ್ರನನ್ನೂ ಸಹ ಕಪ್ಪಾಗಿ ತೋರಿಸುತ್ತಾರೆ.
ತಂದೆಯು ತಿಳಿಸುತ್ತಾರೆ – ಕಾಮ ಚಿತೆಯ ಮೇಲೆ ಕುಳಿತುಕೊಂಡಿದ್ದರಿಂದಲೇ ಕಪ್ಪಾಗಿದ್ದಾರೆ. ಒಬ್ಬರ
ಹೆಸರನ್ನೇ ತೆಗೆದುಕೊಳ್ಳಲಾಗುತ್ತದೆ. ನೀವೆಲ್ಲರೂ ಬ್ರಾಹ್ಮಣರಾಗಿದ್ದೀರಿ, ನೀವೀಗ ಜ್ಞಾನ ಚಿತೆಯ
ಮೇಲೆ ಕುಳಿತುಕೊಳ್ಳುತ್ತೀರಿ. ಶೂದ್ರರು ಕಾಮ ಚಿತೆಯ ಮೇಲೆ ಕುಳಿತಿದ್ದಾರೆ ಅಂದಾಗ ವಿಚಾರ ಸಾಗರ
ಮಂಥನ ಮಾಡಿ - ಹೇಗೆ ಎಲ್ಲರನ್ನೂ ಜಾಗೃತಗೊಳಿಸಬೇಕೆಂದು ಯುಕ್ತಿಗಳನ್ನು ರಚಿಸಿರಿ. ಡ್ರಾಮಾನುಸಾರವೇ
ಜಾಗೃತರಾಗುತ್ತಾರೆ. ಈ ನಾಟಕವು ಬಹಳ ನಿಧಾನ-ನಿಧಾನವಾಗಿ ನಡೆಯುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಇದೇ
ಸ್ಮೃತಿಯಲ್ಲಿರಿ - ನಾವು ಗೋಪಿವಲ್ಲಭನ ಗೋಪ-ಗೋಪಿಕೆಯರಾಗಿದ್ದೇವೆ. ಈ ಸ್ಮೃತಿಯಿಂದ ಸದಾ ಖುಷಿಯ
ನಶೆಯೇರಿರಲಿ.
2. ಇಲ್ಲಿಯವರೆಗೆ
ಏನೆಲ್ಲವನ್ನೂ ಓದಿದ್ದೀರೋ ಎಲ್ಲವನ್ನೂ ಬುದ್ಧಿಯಿಂದ ಮರೆತು ತಂದೆಯು ಯಾವುದನ್ನು ತಿಳಿಸುತ್ತಾರೆಯೋ
ಅದನ್ನೇ ಓದಬೇಕಾಗಿದೆ. ನಾವು ಸಹೋದರ-ಸಹೋದರಿಯರಾಗಿದ್ದೇವೆ ಎಂಬ ಸ್ಮೃತಿಯಿಂದ ವಿಕಾರಿ ದೃಷ್ಟಿಯನ್ನು
ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. ಮಾಯೆಯಿಂದ ಸೋಲಬಾರದು.
ವರದಾನ:
ಸೇವೆಯ ಮೂಲಕ
ಯೋಗಯುಕ್ತ ಸ್ಥಿತಿಯ ಅನುಭವ ಮಾಡುವಂತಹ ಆತ್ಮೀಯ ಸೇವಾಧಾರಿ ಭವ.
ಬ್ರಾಹ್ಮಣ ಜೀವನ ಸೇವೆಯ
ಜೀವನವಾಗಿದೆ. ಸೇವೆ ಮಾಯೆಯಿಂದ ಜೀವಂತವಾಗಿರಲು ಶ್ರೇಷ್ಠ ಸಾಧನೆಯಾಗಿದೆ. ಸೇವೆ ಯೋಗಯುಕ್ತರನ್ನಾಗಿ
ಮಾಡುತ್ತೆ ಆದರೆ ಕೇವಲ ಮುಖದ ಸೇವೆಯಿಂದಲ್ಲ, ಕೇಳಿರುವಂತಹ ಮಧುರ ಮಾತುಗಳ ಸ್ವರೂಪರಾಗಿ ಸೇವೆ
ಮಾಡಬೇಕು, ನಿಸ್ವಾರ್ಥ ಸೇವೆ ಮಾಡಬೇಕು, ತ್ಯಾಗ, ತಪಸ್ಯಾ ಸ್ವರೂಪರಾಗಿ ಸೇವೆ ಮಾಡಬೇಕು ಹದ್ದಿನ
ಕಾಮನೆಗಳಿಂದ ದೂರ ನಿಷ್ಕಾಮ ಸೇವೆ ಮಾಡಬೇಕು-ಇದಕ್ಕೆ ಹೇಳಲಾಗುವುದು ಈಶ್ವರೀಯ ಅಥವಾ ಆತ್ಮೀಯ ಸೇವೆ.
ಮುಖದ ಜೊತೆ ಮನಸ್ಸಿನ ಮೂಲಕ ಸೇವೆ ಮಾಡುವುದು ಅರ್ಥಾತ್ ಮನ್ಮನಾಭವ ಸ್ಥಿತಿಯಲ್ಲಿ ಸ್ಥಿತವಾಗುವುದು.
ಸ್ಲೋಗನ್:
ಆಕೃತಿಯನ್ನು
ನೋಡದೆ ನಿರಾಕಾರ ತಂದೆಯನ್ನು ನೋಡಿದ್ದೇ ಆದರೆ ಆಕರ್ಷಣಾ ಮೂರ್ತಿಗಳಾಗಿ ಬಿಡುವಿರಿ.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಬಾಪ್ದಾದಾರವರು
ಮಕ್ಕಳೊಂದಿಗೆ ಇಷ್ಟೊಂದು ಪ್ರೀತಿಯಿದೆ ಅದಕ್ಕೆ ತಿಳಿಯುತ್ತಾರೆ ಪ್ರತಿಯೊಂದು ಮಗುವು ನನಗಿಂತಲೂ
ಮುಂದೆಯಿರಲಿ. ಪ್ರಪಂಚದಲ್ಲಿಯೂ ಯಾರೊಂದಿಗೆ ಹೆಚ್ಚು ಪ್ರೀತಿಯಿರುತ್ತದೆ ಅವರನ್ನು ತಮ್ಮಂಗಿತಲೂ
ಮುಂದುವರೆಸುತ್ತಾರೆ. ಇದೇ ಪ್ರೀತಿಯ ಲಕ್ಷಣವಾಗಿದೆ. ಬಾಪ್ದಾದಾರವರೂ ಹೇಳುತ್ತಾರೆ - ನನ್ನ
ಮಕ್ಕಳಲ್ಲಿ ಈಗ ಯಾವುದೇ ಕಡಿಮೆಯಿರಬಾರದು, ಎಲ್ಲರೂ ಸಂಪೂರ್ಣ, ಸಂಪನ್ನ ಮತ್ತು ಸಮಾನರಾಗಿ ಬಿಡಲಿ.
ಇದೇ ಪರಮಾತ್ಮನ ಪ್ರೀತಿಯು ಸಹಜಯೋಗಿಯನ್ನಾಗಿ ಮಾಡಿ ಬಿಡುತ್ತದೆ.