26.05.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಸದಾ
ಇದೇ ಖುಷಿಯಲ್ಲಿರಿ, ಸ್ವಯಂ ಭಗವಂತನೇ ಶಿಕ್ಷಕನಾಗಿ ನಮಗೆ ಓದಿಸುತ್ತಾರೆ, ನಾವು ಅವರಿಂದ
ರಾಜಯೋಗವನ್ನು ಕಲಿಯುತ್ತಿದ್ದೇವೆ, ಪ್ರಜಾಯೋಗವಲ್ಲ”
ಪ್ರಶ್ನೆ:
ಈ ವಿದ್ಯೆಯ
ವಿಶೇಷತೆ ಏನಾಗಿದೆ? ನೀವು ಎಲ್ಲಿಯವರೆಗೆ ಪುರುಷಾರ್ಥ ಮಾಡಬೇಕಾಗಿದೆ?
ಉತ್ತರ:
ಈ ವಿದ್ಯೆಯನ್ನು
ಯಾರು ಬಹಳ ಸಮಯದಿಂದ ಓದುತ್ತಾ ಬರುತ್ತಿದ್ದಾರೆಯೋ ಅವರಿಗಿಂತಲೂ ಹೊಸ ಮಕ್ಕಳು ತೀಕ್ಷ್ಣವಾಗಿ ಮುಂದೆ
ಹೋಗುತ್ತಾರೆ. ಇದೂ ಸಹ ವಿಶೇಷತೆಯಾಗಿದೆ. ಮೂರು ತಿಂಗಳಿನ ತೀಕ್ಷ್ಣ ಬುದ್ಧಿಯ (ತೀವ್ರ ಪುರುಷಾರ್ಥಿ)
ಹೊಸ ಮಕ್ಕಳು ಹಳಬರಿಗಿಂತಲೂ ಮುಂದೆ ಹೋಗುತ್ತಾರೆ. ನೀವು ಪೂರ್ಣ ತೇರ್ಗಡೆಯಾಗುವವರೆಗೂ ಕರ್ಮಾತೀತ
ಸ್ಥಿತಿಯನ್ನು ಪಡೆಯುವವರೆಗೆ, ಎಲ್ಲಾ ಲೆಕ್ಕಾಚಾರಗಳನ್ನು ಮುಗಿಸುವವರೆಗೂ ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ.
ಮಕ್ಕಳು ಎಲ್ಲಿ ಕುಳಿತಿದ್ದೀರಿ? ಬೇಹದ್ದಿನ ತಂದೆಯ ಶಾಲೆಯಲ್ಲಿ. ಮಕ್ಕಳಿಗೆ ಬಹಳ ಶ್ರೇಷ್ಠ
ನಶೆಯಿರಬೇಕು. ಯಾವ ಮಕ್ಕಳಿಗೆ? ಬೇಹದ್ದಿನ ತಂದೆಯ ಮಕ್ಕಳಿಗೆ ಅಥವಾ ಆತ್ಮಿಕ ಮಕ್ಕಳಿಗೆ. ತಂದೆಯು
ಆತ್ಮರಿಗೇ ಓದಿಸುತ್ತಾರೆ. ಗುಜರಾತಿ ಅಥವಾ ಮರಾಠಿಯರಿಗೆ ಓದಿಸುವುದಿಲ್ಲ, ಅದಂತೂ ನಾಮ-ರೂಪವಾಯಿತು.
ತಂದೆಯು ಆತ್ಮರಿಗೇ ಓದಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಮ್ಮ ಬೇಹದ್ದಿನ ತಂದೆಯು ಅವರೇ
ಆಗಿದ್ದಾರೆ, ಯಾರಿಗೆ ಭಗವಂತನೆಂದು ಹೇಳಲಾಗುತ್ತದೆ. ಭಗವಾನುವಾಚವೂ ಇದೆ ಆದರೆ ಯಾರಿಗೆ ಭಗವಂತನೆಂದು
ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ,
ಪರಮಾತ್ಮನಂತೂ ಒಬ್ಬರೇ ಆಗಿದ್ದಾರೆ, ಅವರು ಸರ್ವ ಶ್ರೇಷ್ಠ ನಿರಾಕಾರನಾಗಿದ್ದಾರೆ, ನಿಮಗೆ ಕೃಷ್ಣ
ಭಗವಂತನು ಓದಿಸುವುದಿಲ್ಲ. ಮೊದಲೂ ಓದಿಸಿಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರ ತಂದೆಯು
ನಮಗೆ ಓದಿಸುತ್ತಿದ್ದಾರೆ, ಭಗವಂತನು ನಿರಾಕಾರನಾದರು. ಶಿವನ ಮಂದಿರಕ್ಕೆ ಹೋಗುತ್ತಾರೆ, ಅವರ ಪೂಜೆ
ಮಾಡುತ್ತಾರೆ ಅಂದಮೇಲೆ ಅವರು ಇರಬೇಕಲ್ಲವೆ. ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ.
ಇದನ್ನೂ ನೀವೀಗ ತಿಳಿದುಕೊಂಡಿದ್ದೀರಿ. ಇಡೀ ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ, ನೀವೀಗ
ತಿಳಿದುಕೊಳ್ಳಲು ತೊಡಗಿದ್ದೀರಿ, ಬಹಳ ಸಮಯದಿಂದ ತಿಳಿದುಕೊಳ್ಳುತ್ತಾ ಬಂದಿದ್ದೀರಿ. ಬಹಳ ಸಮಯದಿಂದ
ಬರುವವರಿಗಿಂತಲೂ ಹೊಸಬರು ಮುಂದೆ ಹೋಗಲು ಸಾಧ್ಯವಿಲ್ಲ ಎಂದಲ್ಲ, ಇದೂ ಸಹ ವಿಶೇಷತೆಯಾಗಿದೆ, ಮೂರು
ತಿಂಗಳಿನ ಹೊಸ ಮಕ್ಕಳೂ ಸಹ ಬಹಳ ಮುಂದೆ ಹೋಗಬಲ್ಲರು ಆದ್ದರಿಂದಲೇ ಬಾಬಾ, ಈ ಆತ್ಮನ ಬುದ್ಧಿಯು ಬಹಳ
ತೀಕ್ಷ್ಣವಾಗಿದೆ ಎಂದು ಹೇಳುತ್ತಾರೆ. ಹೊಸಬರು ಕೇಳುವಾಗ ಬಹಳ ಗದ್ಗಗಿತರಾಗುತ್ತಾರೆ, ಎಲ್ಲರೂ
ಈಶ್ವರೀಯ ವಿದ್ಯಾರ್ಥಿಗಳೇ ಆಗಿದ್ದಾರೆ, ನಿರಾಕಾರ ತಂದೆ ಜ್ಞಾನ ಸಾಗರನು ಓದಿಸುತ್ತಿದ್ದಾರೆ,
ಭಗವಾನುವಾಚವು ಗಾಯನವಿದೆ ಆದರೆ ಯಾವಾಗ ಎಂಬುದು ಮರೆತು ಹೋಗಿದ್ದಾರೆ.
ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಇಂತಹವರೂ ಕೆಲವರಿರುತ್ತಾರೆ, ಅವರ ತಂದೆಯು ಶಿಕ್ಷಕನಾಗಿರುತ್ತಾರೆ ಆದರೆ
ಅವರು ಕೇವಲ ಒಂದೇ ವಿಷಯದ ಬಗ್ಗೆ ಓದಿಸುತ್ತಾರೆ, ಇನ್ನೊಂದು ವಿಷಯಕ್ಕಾಗಿ ಮತ್ತೊಬ್ಬ ಶಿಕ್ಷಕರು
ಓದಿಸುತ್ತಾರೆ. ಇಲ್ಲಂತೂ ತಂದೆಯು ಎಲ್ಲಾ ಮಕ್ಕಳಿಗೆ ಶಿಕ್ಷಕನಾಗುತ್ತಾರೆ, ಇದು ವಿಚಿತ್ರವಾದ
ಮಾತಾಗಿದೆ. ಅನೇಕ ಮಕ್ಕಳಿದ್ದಾರೆ, ನಮಗೆ ಶಿವ ತಂದೆಯು ಓದಿಸುತ್ತಾರೆಂದು ನಿಶ್ಚಯವಿದೆ.
ಶ್ರೀಕೃಷ್ಣನಿಗೆ ಬಾಬಾ ಎಂದು ಹೇಳಲು ಸಾಧ್ಯವಿಲ್ಲ. ಕೃಷ್ಣನಿಗೆ ಹೀಗೆ ಶಿಕ್ಷಕ, ಗುರುವೆಂದೂ
ತಿಳಿಯುವುದಿಲ್ಲ. ಇಲ್ಲಿ ತಂದೆಯಂತೂ ಸನ್ಮುಖದಲ್ಲಿ ಓದಿಸುತ್ತಿದ್ದಾರೆ, ನೀವು ಭಿನ್ನ-ಭಿನ್ನ
ಪ್ರಕಾರದ ವಿದ್ಯಾರ್ಥಿಗಳು ಕುಳಿತಿದ್ದೀರಿ, ನೀವು ತೇರ್ಗಡೆಯಾಗುವವರೆಗೂ ತಂದೆಯು ಶಿಕ್ಷಕನಾಗಿ
ಓದಿಸುತ್ತಾರೆ. ಕರ್ಮಾತೀತ ಸ್ಥಿತಿಯನ್ನು ಪಡೆಯುವವರೆಗೂ ಪುರುಷಾರ್ಥ ಮಾಡಬೇಕಾಗಿದೆ. ಕರ್ಮಗಳ
ಲೆಕ್ಕಾಚಾರದಿಂದ ಮುಕ್ತರಾಗಬೇಕಾಗಿದೆ, ನಿಮಗೆ ಆಂತರ್ಯದಲ್ಲಿ ಬಹಳ ಖುಷಿಯಿರಬೇಕು - ತಂದೆಯು
ನಮ್ಮನ್ನು ಇಂತಹ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಾರೆ ಮತ್ತು ಈ ರೀತಿ ಮಕ್ಕಳು ಕುಳಿತಿರುವ
ಹಾಗೂ ಪರಂಧಾಮ ನಿವಾಸಿ ತಂದೆಯು ಬಂದು ಓದಿಸುತ್ತಾರೆಂದು ತಿಳಿದುಕೊಳ್ಳುವ ಶಾಲೆಯು ಮತ್ತ್ಯಾವುದೂ
ಇಲ್ಲ. ಈಗ ನೀವಿಲ್ಲಿ ಕುಳಿತಿದ್ದೀರಿ ಅಂದಾಗ ತಿಳಿದುಕೊಳ್ಳುತ್ತೀರಿ - ನಮ್ಮ ಬೇಹದ್ದಿನ ತಂದೆಯು
ನಮಗೆ ಓದಿಸುವುದಕ್ಕಾಗಿ ಬರುತ್ತಾರೆ ಅಂದಮೇಲೆ ಆಂತರ್ಯದಲ್ಲಿ ಬಹಳ ಖುಷಿಯಿರಬೇಕು. ತಂದೆಯು ನಮಗೆ
ರಾಜಯೋಗವನ್ನು ಕಲಿಸುತ್ತಿದ್ದಾರೆ. ಇದು ಪ್ರಜಾಯೋಗವಲ್ಲ, ರಾಜಯೋಗವಾಗಿದೆ. ಈ ನೆನಪಿನಿಂದಲೇ
ಮಕ್ಕಳಿಗೆ ಖುಷಿಯ ನಶೆಯೇರಬೇಕು. ಎಷ್ಟು ದೊಡ್ಡ ಪರೀಕ್ಷೆಯಾಗಿದೆ ಮತ್ತು ನೀವು ಎಷ್ಟು ಸಾಧಾರಣವಾಗಿ
ಕುಳಿತಿದ್ದೀರಿ. ಹೇಗೆ ಮುಸಲ್ಮಾನರು ಮಕ್ಕಳನ್ನು ನೆಲದ ಮೇಲೆ ಕೂರಿಸಿ ಓದಿಸುತ್ತಾರೆ. ನೀವು ಈ
ನಿಶ್ಚಯದಿಂದ ಇಲ್ಲಿಗೆ ಬರುತ್ತೀರಿ, ಈಗ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ತಂದೆಯೂ ಸಹ
ಹೇಳುತ್ತಾರೆ - ನಾನು ಜ್ಞಾನ ಸಾಗರನಾಗಿದ್ದೇನೆ, ಕಲ್ಪ-ಕಲ್ಪವೂ ಬಂದು ರಾಜಯೋಗವನ್ನು ಕಲಿಸುತ್ತೇನೆ.
ಕೃಷ್ಣನ 84 ಜನ್ಮಗಳೆಂದಾದರೂ ಹೇಳಿ ಅಥವಾ ಬ್ರಹ್ಮನ 84 ಜನ್ಮಗಳೆಂದಾದರೂ ಹೇಳಿ ಒಂದೇ ಮಾತಾಗಿದೆ.
ಬ್ರಹ್ಮನೇ ಶ್ರೀಕೃಷ್ಣನಾಗುತ್ತಾರೆ, ಇದನ್ನು ಬುದ್ಧಿಯಲ್ಲಿ ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ.
ತಂದೆಯ ಜೊತೆ ಬಹಳ ಪ್ರೀತಿಯಿರಬೇಕು. ನಾವಾತ್ಮರು ತಂದೆಯ ಮಕ್ಕಳಾಗಿದ್ದೇವೆ. ಪರಮಪಿತ ಪರಮಾತ್ಮನು
ಬಂದು ನಮಗೆ ಓದಿಸುತ್ತಾರೆ. ಕೃಷ್ಣನಂತೂ ಓದಿಸಲು ಸಾಧ್ಯವಿಲ್ಲ. ಕೃಷ್ಣನೇ ಈ ರೀತಿ ಓದಿಸಲು ಸಾಧ್ಯವೇ?
ಕಿರೀಟ ಇತ್ಯಾದಿಗಳನ್ನು ತೆಗೆದಿಟ್ಟು ಬಂದಿರುವನೇ? ಈಗ ಓದಿಸುವವರಂತೂ ಅನುಭವಿಗಳು ಬೇಕು ಆದ್ದರಿಂದ
ತಂದೆಯು ತಿಳಿಸುತ್ತಾರೆ - ನಾನು ವೃದ್ಧನ ತನುವನ್ನು ತೆಗೆದುಕೊಂಡಿದ್ದೇನೆ, ಇದು ನಿಶ್ಚಿತವಾಗಿದೆ.
ಶಿವ ತಂದೆಯು ಬ್ರಹ್ಮಾರವರ ಮೂಲಕವೇ ಓದಿಸುತ್ತಾರೆ ಆದ್ದರಿಂದಲೇ ಪರಮಪಿತ ಪರಮಾತ್ಮನು ಬ್ರಹ್ಮನ
ಮೂಲಕ ಸ್ಥಾಪನೆ ಮಾಡುತ್ತಾರೆಂದು ಹೇಳುತ್ತಾರೆ ಆದರೆ ಬ್ರಹ್ಮನು ಎಲ್ಲಿಂದ ಬಂದರೆಂದು
ತಿಳಿದುಕೊಳ್ಳುವುದಿಲ್ಲ. ತಂದೆಯು ಕುಳಿತು ಮತ್ತೆ-ಮತ್ತೆ ಮಕ್ಕಳನ್ನು ಜಾಗೃತಗೊಳಿಸುತ್ತಾರೆ.
ಮಾಯೆಯು ಮತ್ತೆ ಮಲಗಿಸಿ ಬಿಡುತ್ತದೆ. ಈಗ ನೀವು ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ
- ನಾನು ನಿಮ್ಮ ಆತ್ಮಿಕ ತಂದೆಯಾಗಿದ್ದೇನೆ, ನನ್ನನ್ನು ಅರಿತುಕೊಂಡಿದ್ದೀರಲ್ಲವೆ. ಪರಮಪಿತ
ಪರಮಾತ್ಮನು ಜ್ಞಾನ ಸಾಗರನಾಗಿದ್ದಾರೆ, ಪತಿತ-ಪಾವನ, ದುಃಖಹರ್ತ-ಸುಖಕರ್ತನೆಂದು ಹಾಡುತ್ತಾರೆ.
ಕೃಷ್ಣನಿಗೆ ಈ ರೀತಿ ಎಂದೂ ಹೇಳುವುದಿಲ್ಲ. ಎಲ್ಲರಿಗೂ ಒಟ್ಟಿಗೆ ಓದಿಸಲು ಸಾಧ್ಯವಿಲ್ಲ. ಮಧುಬನದಲ್ಲಿ
ಮುರುಳಿಯು ನಡೆಯುತ್ತದೆ, ಅದು ಮತ್ತೆ ಎಲ್ಲಾ ಸೇವಾಕೇಂದ್ರಗಳಿಗೆ ಹೋಗುತ್ತದೆ. ನೀವೀಗ
ಸನ್ಮುಖದಲ್ಲಿದ್ದೀರಿ, ನಿಮಗೆ ತಿಳಿದಿದೆ - ಕಲ್ಪದ ಮೊದಲೂ ಸಹ ತಂದೆಯು ಈ ರೀತಿ ಓದಿಸಿದ್ದರು, ಇದೇ
ಸಮಯವಾಗಿತ್ತು ಯಾವುದು ಕಳೆದುಹೋಯಿತು. ಅದು ಪುನಃ ವರ್ತಮಾನವಾಗುವುದಿದೆ. ಈಗ ಭಕ್ತಿಮಾರ್ಗದ
ಮಾತುಗಳನ್ನಂತೂ ಬಿಡಬೇಕಾಗಿದೆ. ಈಗ ನಿಮಗೆ ಜ್ಞಾನದೊಂದಿಗೆ ಮತ್ತು ಓದಿಸುವವರೊಂದಿಗೆ ಪ್ರೀತಿಯಿದೆ.
ಕೆಲಕೆಲವರು ಶಿಕ್ಷಕರಿಂದ ಓದಿದ ಮೇಲೆ ಅವರಿಗೆ ಉಡುಗೊರೆಯನ್ನು ಕೊಡುತ್ತಾರೆ. ಈ ತಂದೆಯಂತೂ ತಾವೇ
ಮಕ್ಕಳಿಗೆ ಉಡುಗೊರೆಯನ್ನು ಕೊಡುತ್ತಾರೆ. ಇಲ್ಲಿ ಬಂದು ಸಾಕಾರದಲ್ಲಿ ಇವರು ನನ್ನ ಮಕ್ಕಳಾಗಿದ್ದಾರೆ
ಎಂದು ನೋಡುತ್ತಾರೆ. ಇದೂ ಸಹ ಮಕ್ಕಳಿಗೆ ಜ್ಞಾನವಿದೆ, ಎಲ್ಲರೂ 84 ಜನ್ಮಗಳನ್ನು
ತೆಗೆದುಕೊಳ್ಳುವುದಿಲ್ಲ. ಕೆಲವರದು ಒಂದು ಜನ್ಮವಿದ್ದರೂ ಸಹ ಅದರಲ್ಲಿಯೇ ಸುಖ-ದುಃಖವನ್ನು
ಕಳೆಯುತ್ತಾರೆ. ನೀವೀಗ ಇವೆಲ್ಲಾ ಮಾತುಗಳನ್ನು ತಿಳಿದಿದ್ದೀರಿ. ಇದು ಮನುಷ್ಯ ಸೃಷ್ಟಿಯ
ವಂಶಾವಳಿಯಾಗಿದೆ, ಮೊದಲ ನಂಬರಿನಲ್ಲಿ ಬ್ರಹ್ಮಾ-ಸರಸ್ವತಿ, ಆದಿ ದೇವ-ಆದಿ ದೇವಿಯಿದ್ದಾರೆ ನಂತರ
ಅನೇಕ ಧರ್ಮಗಳಾಗುತ್ತಾ ಹೋಗುತ್ತವೆ. ಅವರು ಸರ್ವ ಆತ್ಮರ ಬೀಜವಾಗಿದ್ದಾರೆ. ಉಳಿದೆಲ್ಲರೂ
ಎಲೆಗಳಾಗಿದ್ದಾರೆ. ಪ್ರಜಾಪಿತ ಬ್ರಹ್ಮನು ಎಲ್ಲರ ತಂದೆಯಾಗಿದ್ದಾರೆ, ಈ ಸಮಯದಲ್ಲಿ ಪ್ರಜಾಪಿತನು
ಹಾಜರಿದ್ದಾರೆ. ಇವರು ಕುಳಿತು ಶೂದ್ರರಿಂದ ಬದಲಾಯಿಸಿ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಈ ರೀತಿ
ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ತಂದೆಯೇ ನಿಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಿ ಮತ್ತೆ
ದೇವತೆಗಳನ್ನಾಗಿ ಮಾಡಲು ಓದಿಸುತ್ತಿದ್ದಾರೆ. ಇದು ಸಹಜ ರಾಜಯೋಗದ ವಿದ್ಯೆಯಾಗಿದೆ, ಜನಕ ರಾಜನೂ ಸಹ
ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಪಡೆದರು ಅರ್ಥಾತ್ ಸ್ವರ್ಗವಾಸಿಯಾಗಿ ಬಿಟ್ಟರು. ಮನುಷ್ಯರು
ಹಾಡುತ್ತಾ ಇರುತ್ತಾರೆ ಆದರೆ ಯಾರಿಗೂ ತಿಳಿಸಲು ಸಾಧ್ಯವಿಲ್ಲ. ಈಗ ತಂದೆಯು ಹೇಳುತ್ತಾರೆ - ಮಕ್ಕಳೇ,
ದೇಹೀ-ಅಭಿಮಾನಿಗಳಾಗಿ. ನೀವು ಅಶರೀರಿಯಾಗಿ ಬಂದಿದ್ದಿರಿ ಮತ್ತೆ ಶರೀರವನ್ನು ತೆಗೆದುಕೊಂಡು
ಪಾತ್ರವನ್ನಭಿನಯಿಸಿದಿರಿ. ಅವಶ್ಯವಾಗಿ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ತಂದೆಯು
ಸತ್ಯವಾಗಿದ್ದಾರೆ, ಅವರು ಸತ್ಯವನ್ನೇ ತಿಳಿಸುತ್ತಾರೆ. ರಾಜಧಾನಿಯು ತಯಾರಾಗುತ್ತದೆಯಲ್ಲವೆ.
ರಾಜಯೋಗವನ್ನು ಒಬ್ಬರೇ ಕಲಿಯುವರೆ? ನೀವೆಲ್ಲರೂ ಈಗ ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ. ಮುಳ್ಳು
ಮತ್ತು ಹೂ ಎಂದು ಯಾರಿಗೆ ಹೇಳಲಾಗುತ್ತದೆ ಎಂಬುದನ್ನೂ ಸಹ ನೀವೀಗ ತಿಳಿದುಕೊಳ್ಳುತ್ತಿದ್ದೀರಿ. ಇದು
ಛೀ ಛೀ ಮುಳ್ಳುಗಳ ಪ್ರಪಂಚವಾಗಿದೆ, ನಾವು 84 ಜನ್ಮಗಳ ಚಕ್ರವನ್ನು ಸುತ್ತಿ ನರಕವಾಸಿಗಳಾಗಿದ್ದೇವೆ.
ಪುನಃ ವಿಶ್ವದ ಇತಿಹಾಸ-ಭೂಗೋಳವನ್ನು ಪುನರಾವರ್ತಿಸುತ್ತೇವೆ. ಅವಶ್ಯವಾಗಿ ಸ್ವರ್ಗವಾಸಿಗಳಾಗುತ್ತೇವೆ,
ಕಲ್ಪ-ಕಲ್ಪವೂ ನಾವೇ ಆಗುತ್ತೇವೆ. ಪದೇ-ಪದೇ ಇದನ್ನು ನೆನಪು ಮಾಡಿಕೊಳ್ಳಬೇಕು ಮತ್ತು ಜ್ಞಾನವನ್ನು
ತಿಳಿಸಬೇಕಾಗಿದೆ. ಈ ಲಕ್ಷ್ಮೀ-ನಾರಾಯಣರು ಸೂರ್ಯವಂಶಿಯರಾಗಿದ್ದಾರೆ, ಕ್ರಿಸ್ತನು ಬರುವುದಕ್ಕೆ
ಮೊದಲು ಬಹಳ ಕೆಲವರೇ ಇದ್ದರು, ರಾಜಧಾನಿಯಿರಲಿಲ್ಲ. ಈಗ ತಂದೆಯು ಬಂದು ಸತ್ಯಯುಗೀ ರಾಜಧಾನಿಯನ್ನು
ಸ್ಥಾಪನೆ ಮಾಡುತ್ತಾರೆ. ಸ್ಥಾಪನೆಯಾಗುವುದೇ ಸಂಗಮದಲ್ಲಿ. ಈಗ ನಿಮ್ಮ ಬುದ್ಧಿಯಲ್ಲಿದೆ - ಇದು
ಸತ್ಯ-ಸತ್ಯವಾದ ಕುಂಭಮೇಳವಾಗಿದೆ, ಆತ್ಮಗಳು ಅನೇಕರಿದ್ದಾರೆ, ಪರಮಾತ್ಮನು ಒಬ್ಬರೇ ಆಗಿದ್ದಾರೆ.
ಪರಮಾತ್ಮ ತಂದೆಯು ಪಾವನರನ್ನಾಗಿ ಮಾಡಲು ಮಕ್ಕಳಬಳಿ ಬರುತ್ತಾರೆ. ಇದಕ್ಕೇ ಸಂಗಮಯುಗದ ಕುಂಭಮೇಳವೆಂದು
ಹೇಳಲಾಗುತ್ತದೆ. ಈಗ ನಿಮಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ತಂದೆಯು ಬಂದು
ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಮತ್ತೆ ನರಕ, ಹಳೆಯ ಪ್ರಪಂಚದ ವಿನಾಶವು ಖಂಡಿತ ಆಗಬೇಕು.
ಕಲ್ಪ-ಕಲ್ಪವೂ ವಿನಾಶವು ಆಗಿಯೇ ಆಗುತ್ತದೆ. ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದು ಖಂಡಿತ
ಆಗುವುದು. ಹೊಸ ಪ್ರಪಂಚಕ್ಕೆ ಸ್ವರ್ಗ, ಹಳೆಯದಕ್ಕೆ ನರಕವೆಂದು ಹೇಳಲಾಗುತ್ತದೆ. ಈಗಂತೂ ಎಷ್ಟೊಂದು
ಮನುಷ್ಯರು ವೃದ್ಧಿಯಾಗುತ್ತಾ ಹೋಗುತ್ತದೆ. ಧಾನ್ಯಗಳು ಸಿಗಲಿಲ್ಲವೆಂದರೆ ನಾವು ಬಹಳಷ್ಟು
ದವಸ-ಧಾನ್ಯಗಳನ್ನು ಉತ್ಪಾದನೆ ಮಾಡುತ್ತೇವೆಂದು ತಿಳಿಯುತ್ತಾರೆ ಆದರೆ ಎಷ್ಟೊಂದು ಜನಸಂಖ್ಯೆಯು
ವೃದ್ಧಿಯಾಗುತ್ತಾ ಇರುತ್ತದೆ ಆದ್ದರಿಂದ ದವಸ-ಧಾನ್ಯಗಳನ್ನು ಎಲ್ಲಿಂದ ತರುತ್ತಾರೆ?
ಈಗ ನೀವು ಮಕ್ಕಳಿಗೆ ಇದು
ಖಾತರಿಯಾಗಿದೆ - ಈ ಇಡೀ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಮನುಷ್ಯರಿಗೆ ಈ ಜ್ಞಾನವು ಇಷ್ಟವೂ
ಆಗುತ್ತದೆ ಆದರೆ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳುವುದಿಲ್ಲ. ನಿಮ್ಮ ಬುದ್ಧಿಯಲ್ಲಿದೆ - ನರಕದ
ನಂತರ ಸ್ವರ್ಗವು ಬರುವುದು. ಸತ್ಯಯುಗದ ದೇವಿ-ದೇವತೆಗಳು ಇದ್ದು ಹೋಗಿದ್ದಾರೆ, ಈ
ಲಕ್ಷ್ಮೀ-ನಾರಾಯಣರು ಭಾರತದ ಮಾಲೀಕರಾಗಿದ್ದರು, ಚಿತ್ರಗಳೂ ಇವೆ. ಚಿತ್ರಗಳಲ್ಲಿ ಆದಿ ಸನಾತನ
ದೇವಿ-ದೇವತಾ ಧರ್ಮವಿರುತ್ತದೆ, ಈಗ ತಮ್ಮನ್ನು ದೇವತಾ ಧರ್ಮದವರೆಂದು ಕರೆಸಿಕೊಳ್ಳುವುದಿಲ್ಲ.
ಅದಕ್ಕೆ ಬದಲು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ. ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ -
ನಾವು ಈ ದೇವಿ-ದೇವತೆಗಳಾಗುತ್ತಿದ್ದೇವೆ. ತಂದೆಯು ಈ ಕರ್ಮೇಂದ್ರಿಯಗಳ ಮೂಲಕ ನಮಗೆ
ಓದಿಸುತ್ತಿದ್ದಾರೆ. ಇಲ್ಲವಾದರೆ ನಾನು ನಿಮಗೆ ಹೇಗೆ ಓದಿಸಲಿ ಎಂದು ತಂದೆಯು ಹೇಳುತ್ತಾರೆ.
ಆತ್ಮಗಳಿಗೇ ಓದಿಸುತ್ತಾರೆ ಏಕೆಂದರೆ ಆತ್ಮದಲ್ಲಿಯೇ ತುಕ್ಕು ಬೀಳುತ್ತದೆ. ನೀವೀಗ ಸತ್ಯ
ಚಿನ್ನವಾಗಬೇಕಾಗಿದೆ. ಚಿನ್ನದ ಸಮಾನ ಇದ್ದವರು ಬೆಳ್ಳಿಯ ಯುಗದಲ್ಲಿ ಬಂದಿರಿ ನಂತರ ಇನ್ನೂ
ಕೆಳಗಿಳಿಯುತ್ತೀರಿ. ಮತ್ತೆ ವೃದ್ಧಿಯೂ ಆಗುತ್ತದೆ. ಈಗ ನಿಮ್ಮ ಬುದ್ಧಿಯಲ್ಲಿದೆ- ನಾವು ಸತ್ಯ,
ತ್ರೇತಾ, ದ್ವಾಪರ, ಕಲಿಯುಗದಲ್ಲಿ 84 ಜನ್ಮಗಳ ಚಕ್ರವನ್ನು ಸುತ್ತುತ್ತಾ ಬಂದಿದ್ದೇವೆ. ಅನೇಕ ಬಾರಿ
ಈ ಪಾತ್ರವನ್ನಭಿನಯಿಸಿದ್ದೇವೆ, ಈ ಪಾತ್ರದಿಂದ ಯಾರೂ ಮುಕ್ತರಾಗಲು ಸಾಧ್ಯವಿಲ್ಲ. ನಮಗೆ ಮೋಕ್ಷ
ಬೇಕೆಂದು ಅವರು ಹೇಳುತ್ತಾರೆ ಆದರೆ ವಾಸ್ತವದಲ್ಲಿ ನಿಮಗೇ 84 ಜನ್ಮಗಳ ಚಕ್ರವನ್ನು ಸುತ್ತಿ
ಬೇಸರವಾಗಬೇಕು. ಮನುಷ್ಯರಂತೂ ತಿಳಿದುಕೊಳ್ಳುತ್ತಾರೆ - ಬರುವುದು-ಹೋಗುವುದು ಇದ್ದೇ ಇರುತ್ತದೆ,
ಇದರಿಂದ ನಾವೇಕೆ ಮುಕ್ತರಾಗಬಾರದು ಎಂದು. ಆದರೆ ಇದು ಸಾಧ್ಯವಿಲ್ಲ. ಗುರುಗಳೂ ಸಹ ಹೇಳುತ್ತಾರೆ -
ನೀವು ಮೋಕ್ಷವನ್ನು ಪಡೆಯುತ್ತೀರಿ, ಬ್ರಹ್ಮ ತತ್ವವನ್ನು ನೆನಪು ಮಾಡಿದರೆ ಅದರಲ್ಲಿ
ಲೀನವಾಗಿಬಿಡುತ್ತೀರೆಂದು. ಭಾರತದಲ್ಲಿಯೇ ಅನೇಕ ಮತ-ಮತಾಂತರಗಳಿವೆ, ಮತ್ತ್ಯಾವುದೇ ಖಂಡದಲ್ಲಿ
ಇಷ್ಟೊಂದಿಲ್ಲ. ಅನೇಕಾನೇಕ ಮತಗಳಿವೆ. ಒಂದು ಇನ್ನೊಂದಕ್ಕೆ ಹೋಲುವುದಿಲ್ಲ, ರಿದ್ಧಿ-ಸಿದ್ಧಿಯನ್ನು
ಬಹಳ ಕಲಿಯುತ್ತಾರೆ. ರಿದ್ಧಿ-ಸಿದ್ಧಿಯಿಂದ ಕೆಲವರು ಕುಂಕುಮವನ್ನು ತೆಗೆಯುತ್ತಾರೆ, ಇನ್ನೂ ಕೆಲವರು.....
ಇದರಲ್ಲಿ ಮನುಷ್ಯರು ಬಹಳ ಖುಷಿಯಾಗುತ್ತಾರೆ. ಇದಂತೂ ಆಧ್ಯಾತ್ಮಿಕ ಜ್ಞಾನವಾಗಿದೆ. ನೀವು
ತಿಳಿದುಕೊಂಡಿದ್ದೀರಿ - ಇವರು ಆತ್ಮಿಕ ತಂದೆಯಾಗಿದ್ದಾರೆ. ಆತ್ಮಿಕ ತಂದೆಯೇ ಆತ್ಮಗಳೊಂದಿಗೆ
ಮಾತನಾಡುತ್ತಾರೆ. ಸತ್ಯ ನಾರಾಯಣನ ಕಥೆಯನ್ನು ತಿಳಿಸುತ್ತಾರೆ ಮತ್ತು ಅಮರ ಕಥೆಯನ್ನೂ ತಿಳಿಸುತ್ತಾರೆ.
ಇದರಿಂದ ನಮ್ಮನ್ನು ಅಮರ ಲೋಕದ ಮಾಲೀಕರನ್ನಾಗಿ, ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ನಂತರ ನಾವು
ಕವಡೆಯಂತೆ ಆಗಿ ಬಿಡುತ್ತೇವೆ. ಈಗ ನಿಮಗೆ ವಜ್ರ ಸಮಾನ ಅಮೂಲ್ಯ ಜನ್ಮವು ಸಿಕ್ಕಿದೆ. ಅಂದಮೇಲೆ
ಕವಡೆಗಳ ಹಿಂದೆ ಏಕೆ ಕಳೆದುಕೊಳ್ಳುತ್ತೀರಿ! ಈ ಪ್ರಪಂಚವು ಇನ್ನೆಷ್ಟು ವರ್ಷಗಳಿರಬಹುದು! ಎಷ್ಟೊಂದು
ಜಗಳವಾಡುತ್ತಾ ಇರುತ್ತಾರೆ, ಎಲ್ಲರೂ ಸಮಾಪ್ತಿಯಾಗಿ ಬಿಡುತ್ತಾರೆ. ಮೃತ್ಯು ಸನ್ಮುಖದಲ್ಲಿ ನಿಂತಿದೆ,
ಮತ್ತೆ ಇಷ್ಟೊಂದು ಲಕ್ಷ-ಕೋಟಿಗಳನ್ನು ಯಾರು ತಿನ್ನುತ್ತಾರೆ? ಅಂದಮೇಲೆ ಇದನ್ನು ಏಕೆ ಸಫಲ
ಮಾಡಿಕೊಳ್ಳಬಾರದು? ಈ ಆತ್ಮಿಕ ಕಾಲೇಜನ್ನು ತೆರೆಯುವುದರಿಂದ ಮನುಷ್ಯರು ಸದಾ ಆರೋಗ್ಯವಂತರು,
ಐಶ್ವರ್ಯವಂತರಾಗಿ ಬಿಡುತ್ತಾರೆ. ಅದರಲ್ಲಿಯೂ ಇದು ಆಸ್ಪತ್ರೆ ಮತ್ತು ವಿಶ್ವ ವಿದ್ಯಾಲಯ ಕಂಬೈಂಡ್
ಆಗಿದೆ. ಇದರಿಂದ ಆರೋಗ್ಯ, ಭಾಗ್ಯ, ಸಂತೋಷ ಎಲ್ಲವೂ ಸಿಗುತ್ತದೆ. ಅವಶ್ಯವಾಗಿ ಯೋಗದಿಂದ
ಧೀರ್ಘಾಯಸ್ಸು ಸಿಗುತ್ತದೆ. ನೀವು ಎಷ್ಟೊಂದು ಆರೋಗ್ಯವಂತರಾಗುತ್ತೀರಿ! ಕುಬೇರನ ಖಜಾನೆಯು
ಸಿಗುತ್ತದೆ. ಅಲ್ಲಾ ಅವಲುದ್ಧೀನನ ನಾಟಕವನ್ನೂ ತೋರಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ -
ಅಲ್ಲಾನು ಯಾವ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುವರೋ ಅದರಲ್ಲಿ ಬಹಳ ಸುಖವಿದೆ, ಹೆಸರೇ
ಆಗಿದೆ - ಸ್ವರ್ಗ. ನೀವು ಶಾಂತಿಧಾಮದ ನಿವಾಸಿಗಳಾಗಿದ್ದಿರಿ, ನಂತರ ಮೊಟ್ಟ ಮೊದಲು ಸುಖಧಾಮದಲ್ಲಿ
ಬಂದಿರಿ. ಮತ್ತೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತಾ ಬಂದಿದ್ದೀರಿ.
ಕಲ್ಪ-ಕಲ್ಪವೂ ನಾನು ನೀವು ಮಕ್ಕಳಿಗೆ ಈ ರೀತಿ ತಿಳಿಸಿಕೊಡುತ್ತೇನೆ, ನೀವು ತಮ್ಮ ಜನ್ಮಗಳ ಬಗ್ಗೆ
ತಿಳಿದುಕೊಂಡಿಲ್ಲ, ನಾನು ನಿಮಗೆ ತಿಳಿಸುತ್ತೇನೆ. ನೀವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈ
ವಸ್ತ್ರವು ಹಳೆಯದಾಗಿದೆ. ಆತ್ಮವು ತಮೋಪ್ರಧಾನವಾಗಿ ಬಿಟ್ಟಿದೆ. ತಂದೆಯು ಸತ್ಯವನ್ನೇ ಹೇಳುತ್ತಾರೆ,
ಅವರೆಂದೂ ಸುಳ್ಳು ಹೇಳುವುದಿಲ್ಲ. ಅವರು ಸತ್ಯವಾಗಿದ್ದಾರೆ. ಸತ್ಯಯುಗವು ನಿರ್ವಿಕಾರಿ ಪ್ರಪಂಚ,
ಸತ್ಯ ಖಂಡವಾಗಿದೆ. ನಂತರ ರಾವಣನು ಅಸತ್ಯ ಖಂಡವನ್ನಾಗಿ ಮಾಡುತ್ತಾರೆ. ಇದು ಅಸತ್ಯ ಖಂಡವಾಗಿದೆ.
ಸುಳ್ಳು ಮಾಯೆ, ಸುಳ್ಳು ಸಂಸಾರ.... ಎಂದು ಹಾಡುತ್ತಾರೆ. ಯಾವ ಸಂಸಾರ? ಇದೆಲ್ಲವೂ ಹಳೆಯ ಸುಳ್ಳು
ಸಂಸಾರವಾಗಿದೆ. ಸತ್ಯಯುಗದಲ್ಲಿ ಸತ್ಯವಾದ ಸಂಸಾರವಿತ್ತು, ಪ್ರಪಂಚವು ಒಂದೇ ಆಗಿದೆ, ಎರಡು
ಪ್ರಪಂಚಗಳಿಲ್ಲ. ಹೊಸ ಪ್ರಪಂಚದಿಂದ ಮತ್ತೆ ಹಳೆಯದಾಗುತ್ತದೆ, ಹೊಸ ಮನೆ ಹಾಗೂ ಹಳೆಯ ಮನೆಯಲ್ಲಿ
ಅಂತರವಂತೂ ಇರುತ್ತದೆ. ಹೊಸದು ತಯಾರಾಗುತ್ತದೆ ಎಂದರೆ ನಾವು ಹೋಗಿ ಹೊಸ ಮನೆಯಲ್ಲಿ
ಕುಳಿತುಕೊಳ್ಳುತ್ತೇವೆಂದು ತಿಳಿದುಕೊಳ್ಳುತ್ತಾರೆ. ಇಲ್ಲಿಯೂ ಸಹ ಮಕ್ಕಳಿಗಾಗಿ ಹೊಸ ಮನೆಯನ್ನು
ಕಟ್ಟಿಸುತ್ತೇನೆ. ಅನೇಕ ಮಕ್ಕಳು ವೃದ್ಧಿಯಾಗತೊಡಗುತ್ತಾರೆ. ನೀವು ಮಕ್ಕಳಿಗಂತೂ ಬಹಳ ಖುಷಿಯಿರಬೇಕು.
ತಂದೆಯು ತಿಳಿಸುತ್ತಾರೆ - ನಾನು ಜ್ಞಾನ ಸಾಗರನು ಮಕ್ಕಳೆಲ್ಲರೂ ಕಾಮ ಚಿತೆಯ ಮೇಲೆ ಕುಳಿತು ಸುಟ್ಟು
ಕಪ್ಪಾಗಿ ಬಿಟ್ಟಿದ್ದೀರಿ, ಈಗ ಅವರನ್ನೇ ಜ್ಞಾನ ಚಿತೆಯ ಮೇಲೆ ಕೂರಿಸುತ್ತೇನೆ. ಸ್ವರ್ಗದ
ಮಾಲೀಕರನ್ನಾಗಿ ಮಾಡುತ್ತೇನೆ. ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಸಂಪೂರ್ಣ ಕಪ್ಪಾಗಿ
ಬಿಟ್ಟಿದ್ದೀರಿ. ಕೃಷ್ಣನಿಗೆ ಶ್ಯಾಮ ಸುಂದರನೆಂದು ಹೆಸರನ್ನೂ ಕೊಟ್ಟಿದ್ದಾರೆ ಆದರೆ ಅರ್ಥವೇನನ್ನೂ
ತಿಳಿದುಕೊಂಡಿಲ್ಲ. ನೀವೀಗ ಹೇಗಿದ್ದವರು ಏನಾಗುತ್ತೀರಿ! ತಂದೆಯು ಕವಡೆಯಿಂದ ವಜ್ರ ಸಮಾನರನ್ನಾಗಿ
ಮಾಡುತ್ತಾರೆ ಅಂದಮೇಲೆ ಅಷ್ಟೊಂದು ಗಮನ ಕೊಡಬೇಕಾಗಿದೆ. ತಂದೆಯನ್ನು ನೆನಪು ಮಾಡಬೇಕಾಗಿದೆ,
ನೆನಪಿನಿಂದಲೇ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ವಜ್ರ
ಸಮಾನ ಅಮೂಲ್ಯ ಜೀವನವನ್ನು ಕವಡೆಗಳ ಹಿಂದೆ ಕಳೆದುಕೊಳ್ಳಬಾರದು. ಮೃತ್ಯುವು ಸನ್ಮುಖದಲ್ಲಿ ನಿಂತಿದೆ
ಆದ್ದರಿಂದ ತಮ್ಮದೆಲ್ಲವನ್ನೂ ಆತ್ಮಿಕ ಸೇವೆಯಲ್ಲಿ ಸಫಲ ಮಾಡಿಕೊಳ್ಳಬೇಕಾಗಿದೆ.
2. ವಿದ್ಯೆ ಮತ್ತು
ಓದಿಸುವರೊಂದಿಗೆ ಸತ್ಯ ಪ್ರೀತಿಯನ್ನಿಡಬೇಕಾಗಿದೆ. ಭಗವಂತನೇ ನಮಗೆ ಓದಿಸಲು ಬರುತ್ತಾರೆ - ಈ
ಖುಷಿಯಲ್ಲಿರಬೇಕಾಗಿದೆ.
ವರದಾನ:
ಕ್ಯಾಚಿಂಗ್
ಪವರಿನ ಮೂಲಕ ತಮ್ಮ ಸತ್ಯ ಸಂಸ್ಕಾರಗಳನ್ನು ಕ್ಯಾಚ್ ಮಾಡುತ್ತಾ, ಅದರ ಸ್ವರೂಪರಾಗುವಂತಹ ಶಕ್ತಿಶಾಲಿ
ಭವ.
ಪುರುಷಾರ್ಥದ ಮುಖ್ಯ
ಆಧಾರವೇ ಕ್ಯಾಚಿಂಗ್ ಪವರ್ ಆಗಿದೆ. ಹೇಗೆ ವೈಜ್ಞಾನಿಕವಾಗಿ ಬಹಳ ಹಳೆಯ ಶಬ್ಧವನ್ನೇ ಕ್ಯಾಚ್
ಮಾಡುತ್ತಾರೆ, ಹಾಗೆಯೇ ತಾವು ಶಾಂತಿಯ ಶಕ್ತಿಯಿಂದ ತಮ್ಮ ಆದಿ ದೈವೀ ಸಂಸ್ಕಾರವನ್ನು ಕ್ಯಾಚ್ ಮಾಡಿರಿ,
ಇದಕ್ಕಾಗಿ ಸದಾ ಸ್ಮೃತಿಯಿರಲಿ - ನಾನು ಹೀಗೆಯೇ ಇದ್ದೆನು, ಪುನಃ ಹೀಗಾಗುತ್ತಿದ್ದೇನೆ. ಆ
ಸಂಸ್ಕಾರಗಳನ್ನೆಷ್ಟು ಕ್ಯಾಚ್ ಮಾಡುವಿರಿ ಅಷ್ಟು ಅದರ ಸ್ವರೂಪರಾಗುವಿರಿ. 5 ಸಾವಿರ ವರ್ಷಗಳ
ಮಾತುಗಳೆಷ್ಟು ಅನುಭವದಲ್ಲಿ ಬರುತ್ತದೆ, ಹೇಗೆಂದರೆ ನೆನ್ನೆಯ ಮಾತಾಗಿದೆ ಎಂಬಂತೆ. ತಮ್ಮ
ಸ್ಮೃತಿಯನ್ನು ಇಷ್ಟೂ ಶ್ರೇಷ್ಠ ಹಾಗೂ ಸ್ಪಷ್ಟ ಮಾಡಿಕೊಂಡಾಗಲೇ ಶಕ್ತಿಶಾಲಿ ಆಗುವಿರಿ.
ಸ್ಲೋಗನ್:
ಬ್ರಾಹ್ಮಣ
ಜೀವನದ ಶ್ವಾಸ ಖುಷಿಯಾಗಿದೆ, ಭಲೆ ಶರೀರವು ಹೋಗಲಿ ಆದರೆ ಖುಷಿಯನ್ನು ಕಳೆದುಕೊಳ್ಳಬಾರದು.
ಅವ್ಯಕ್ತ ಸೂಚನೆಗಳು:-
ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ.
ಸಮಯ ಪ್ರಮಾಣ ಈಗ ಸದಾ
ಅಚಲ ಅಡೋಲ ಸರ್ವ ಖಜಾನೆಗಳಿಂದ ಸಂಪನ್ನರಾಗಿ. ಸ್ವಲ್ಪವೂ ಸಹ ಏರು-ಪೇರು ಆಗುತ್ತೀರಿ ಎಂದರೆ ಸರ್ವ
ಖಜಾನೆಗಳ ಅನುಭವ ಆಗುವುದಿಲ್ಲ. ತಂದೆಯ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸದಾ ಖಾಯಂ ಆಗಿ
ಇಟ್ಟುಕೊಳ್ಳುವ ಸಾಧನ ಆಗಿದೆ ಸದಾ ಅಚಲ ಅಡೋಲರಾಗಿ ಇರುವುದು. ಅಚಲರಾಗಿರುವುದರಿಂದ ಸದಾ ಖುಷಿಯ
ಅನುಭವ ಆಗುತ್ತಾ ಇರುತ್ತದೆ. ಹೇಗೆ ವಿನಾಶಿ ಧನ, ಹೆಸರು - ಮಾನ್ಯತೆ - ಆಡಂಬರ, ಪದವಿ ಇತ್ಯಾದಿಗಳು
ಸಿಗುತ್ತದೆ ಎಂದರೆ ಖುಷಿಯಾಗುತ್ತದೆ ಅಲ್ಲವೇ. ಇದಂತೂ ಅವಿನಾಶಿ ಖುಷಿಯಾಗಿದೆ ಆದರೆ ಈ ಖುಷಿ ಅವರಿಗೆ
ಇರುತ್ತದೆ ಯಾರು ಅಚಲ ಅಡೋಲ ಏಕ-ರಸ ಸ್ಥಿತಿಯಲ್ಲಿ ಇರುತ್ತಾರೆ.