26.07.26 Avyakt Bapdada
Kannada
Murli 02.02.2011 Om Shanti Madhuban
“ತಮ್ಮ ಭಾಗ್ಯ ಮತ್ತು
ಪ್ರಾಪ್ತಿಗಳನ್ನು ಸ್ಮೃತಿಯಲ್ಲಿ ಇಟ್ಟುಕೊಂಡು ಸದಾ ಹರ್ಷಿತ ಮತ್ತು ಸಂತುಷ್ಟರಾಗಿ, ದೃಷ್ಟಿ,
ವೃತ್ತಿ ಹಾಗೂ ಪ್ರವೃತ್ತಿಯ ಮೂಲಕ ಸಂತುಷ್ಟತೆಯ ಅನುಭವ ಮಾಡಿಸಿ”
ಈ ದಿನ ಬಾಪ್ದಾದಾ ಎಲ್ಲಾ
ಮಕ್ಕಳನ್ನು ನೋಡಿ ಖುಷಿ ಆಗುತ್ತಿದ್ದಾರೆ. ಪ್ರತಿಯೊಬ್ಬ ಮಗು ಪರಮಾತ್ಮನ ಪ್ರೀತಿಯ ಮೂಲಕ ತಲುಪಿ
ಬಿಟ್ಟಿದ್ದಾರೆ. ಅಂದಾಗ ಈ ದಿನ ಬಾಪ್ದಾದಾ ಪ್ರತಿಯೊಬ್ಬ ಮಗುವಿನ ಮಸ್ತಕದಲ್ಲಿ ಭಾಗ್ಯದ ರೇಖೆಯನ್ನು
ನೋಡುತ್ತಿದ್ದಾರೆ. ಇಂತಹ ಭಾಗ್ಯ ಮತ್ತು ಇಷ್ಟು ದೊಡ್ಡ ಭಾಗ್ಯ ಇಡೀ ಕಲ್ಪದಲ್ಲಿ ಯಾರಿಗೂ ಪ್ರಾಪ್ತಿ
ಆಗುವುದಿಲ್ಲ ಏಕೆಂದರೆ ತಮಗೆ ಭಾಗ್ಯ ಕೊಡುವವರು ಸ್ವಯಂ ಭಾಗ್ಯವಿಧಾತ ಆಗಿದ್ದಾರೆ. ಪ್ರತಿಯೊಬ್ಬರ
ಮಸ್ತಕದಲ್ಲಿ ಮೊದಲು ಹೊಳೆಯುತ್ತಿರುವ ನಕ್ಷತ್ರದ ಭಾಗ್ಯ ಹೊಳೆಯುತ್ತಿದೆ. ಮುಖದಲ್ಲಿ ಮಧುರ ವಾಣಿಯ
ರೇಖೆ ಹೊಳೆಯುತ್ತಿದೆ. ತುಟಿಯ ಮೇಲೆ ಮಧುರ ಮುಗುಳ್ನಗೆಯ ರೇಖೆ ಹೊಳೆಯುತ್ತಿದೆ. ಹೃದಯದಲ್ಲಿ
ಹೃದಯರಾಮ ತಂದೆಯ ಲವಲೀನ ರೇಖೆ ಹೊಳೆಯುತ್ತಿದೆ. ಕೈಗಳಲ್ಲಿ ಸರ್ವ ಖಜಾನೆಗಳ ಶ್ರೇಷ್ಠತೆಯ ರೇಖೆ
ಹೊಳೆಯುತ್ತಿದೆ. ಪಾದಗಳಲ್ಲಿ ಪ್ರತಿಯೊಂದು ಹೆಜ್ಜೆಯಲ್ಲಿ ಪದಮದ ರೇಖೆ ಹೊಳೆಯುತ್ತಿದೆ. ಈಗ ಯೋಚನೆ
ಮಾಡಿ ಇಂತಹ ಭಾಗ್ಯ ಯಾರಿದಾದರೂ ಇತ್ತೇನು? ಆದ್ದರಿಂದ ತಮ್ಮ ನೆನಪಾರ್ಥ ಚಿತ್ರಗಳ ಭಾಗ್ಯವೂ ಸಹ
ವರ್ಣನೆ ಆಗುತ್ತಿರುತ್ತದೆ. ಮತ್ತು ಈ ಭಾಗ್ಯವನ್ನು ಸ್ವಯಂ ಭಾಗ್ಯವಿಧಾತ ತಂದೆ ಪ್ರತಿಯೊಬ್ಬ
ಮಗುವಿನದ್ದು ಮಾಡಿದ್ದಾರೆ.
ಬಾಪ್ದಾದಾ ಪ್ರತಿಯೊಬ್ಬ
ಮಗುವಿನ ಭಾಗ್ಯವನ್ನು ನೋಡಿ ಪ್ರತಿಯೊಬ್ಬರಿಗೆ ಶುಭಾಶಯಗಳನ್ನು ನೀಡುತ್ತಿದ್ದಾರೆ - ವಾಹ್! ಮಕ್ಕಳೇ
ವಾಹ್! ಮತ್ತು ಈ ಭಾಗ್ಯ ಸಂಗಮಯುಗದಲ್ಲಿಯೇ ಸಿಗುತ್ತದೆ ಮತ್ತು ನಡೆಯುತ್ತದೆ. ಸಂಗಮ ಯುಗದ ಸುಖ
ಎಲ್ಲಾ ಯುಗಗಳಿಗಿಂತಲೂ ಶ್ರೇಷ್ಠವಾಗಿದೆ. ಸತ್ಯಯುಗದ ಭಾಗ್ಯವೂ ಸಹ ಸಂಗಮಯುಗದ ಪುರುಷಾರ್ಥದ
ಪ್ರಾಲಬ್ಧವಾಗಿದೆ, ಆದ್ದರಿಂದ ಸಂಗಮಯುಗದ ಪ್ರಾಲಬ್ಧ ಸತ್ಯಯುಗದ ಪ್ರಾಲಬ್ಧಕ್ಕಿಂತಲೂ ಹೆಚ್ಚಾಗಿದೆ.
ತಮ್ಮ ಭಾಗ್ಯದಲ್ಲಿ ಮುಳುಗಿ ಹೋಗಿ ಬಿಡಿ. ಏನೇ ಆಗುತ್ತಿರಲಿ, ತಮ್ಮ ಭಾಗ್ಯವನ್ನು ಸ್ಮೃತಿಯಲ್ಲಿ
ಬಂದಾಗ ಯಾವುದು ಬರುತ್ತದೆ? ವಾಹ್! ನನ್ನ ಭಾಗ್ಯ! ಏಕೆಂದರೆ ಸ್ವಯಂ ಭಾಗ್ಯವಿಧಾತ ತಮ್ಮ
ತಂದೆಯಾಗಿದ್ದಾರೆ ಅಂದಾಗ ಭಾಗ್ಯವಿಧಾತ ತಂದೆಯ ಮೂಲಕ ಪ್ರತಿಯೊಬ್ಬರಿಗೆ ಭಾಗ್ಯ ಸಿಕ್ಕಿದೆ. ನಾವು
ಇಷ್ಟು ಭಾಗ್ಯವಂತರಾಗಿದ್ದೇವೆ ಎಂದು ತಿಳಿದುಕೊಂಡಿದ್ದೀರಾ ಅಥವಾ ಕೆಲವೊಮ್ಮೆ ತಿಳಿದುಕೊಳ್ಳುತ್ತೀರಾ?
ಸದಾ ನಶೆ ಇರುತ್ತದೆಯೇ? ಪ್ರಪಂಚದವರಂತೂ ತಮ್ಮನ್ನು ನೋಡಿ ತಮಗೆ ಏನು ಸಿಕ್ಕಿದೆ? ಎಂದು ಕೇಳುತ್ತಾರೆ.
ಮತ್ತು ತಾವು ಯಾವ ಉತ್ತರ ಕೊಡುತ್ತೀರಿ? ಯಾವುದನ್ನು ಪಡೆಯಬೇಕು ಅದನ್ನು ಪಡೆದುಕೊಂಡು
ಬಿಟ್ಟಿದ್ದೇವೆ. ಪಡೆದುಕೊಂಡಿದ್ದೀರಾ? ಯಾರು ಪಡೆದುಕೊಂಡಿದ್ದಾರೆ ಅವರು ಕೈ ಎತ್ತಿ.
ಪಡೆದುಕೊಂಡಿದ್ದೀರಿ. ಒಳ್ಳೆಯದು. ಪಡೆದುಕೊಂಡಿದ್ದೀರಾ? ಯಾವುದೇ ಅಪ್ರಾಪ್ತಿ ವಸ್ತು ಇಲ್ಲವೇ ಇಲ್ಲ
ಎಂದು ನಶೆಯಿಂದ ಹೇಳುತ್ತೀರಿ. ನಶೆ ಇದೆಯಲ್ಲವೇ? ಮತ್ತು ನಶೆ ಹೇಗೆ ಸಿಕ್ಕಿದೆ? ಕೇವಲ ತಂದೆಯನ್ನು
ತಿಳಿದುಕೊಂಡಿದ್ದೀರಿ, ಒಪ್ಪಿಕೊಂಡಿದ್ದೀರಿ, ತಮ್ಮವರನ್ನಾಗಿ ಮಾಡಿಕೊಂಡಾಗ ಭಾಗ್ಯ ಸಿಗುತ್ತದೆ. ಈ
ಭಾಗ್ಯವನ್ನು ಎಷ್ಟು ಸ್ಮೃತಿಯಲ್ಲಿಟುಕೊಳ್ಳುತ್ತೀರಿ ಅಷ್ಟು ಹರ್ಷಿತರಾಗುತ್ತೀರಿ. ಭಾಗ್ಯವಂತರ
ಚೆಹರೆ ಸದಾ ಹರ್ಷಿತವಾಗಿರುತ್ತದೆ. ಆಗಿರುತ್ತದೆ ಅಲ್ಲ ಇರುತ್ತದೆ. ಅವರ ದೃಷ್ಟಿ, ಅವರ ವೃತ್ತಿ
ಮತ್ತು ಅವರ ಪ್ರವೃತ್ತಿ ಸದಾ ಸಂತುಷ್ಟ ಆತ್ಮರಾಗಿ ಸ್ವಯಂ ಸಹ ಸಂತುಷ್ಟವಾಗಿರುತ್ತಾರೆ ಮತ್ತು
ಅನ್ಯರನ್ನೂ ಸಹ ಸಂತುಷ್ಟರನಾಗಿ ಮಾಡುತ್ತಾರೆ ಅಂದಾಗ ತಮ್ಮೆಲ್ಲರಿಗೆ ಸಂತುಷ್ಟತೆಯ ನಶೆ ಇರುತ್ತದೆ?
ಏಕೆಂದರೆ ಸಂತುಷ್ಟತೆಯ ಆಧಾರವಾಗಿದೆ ಸರ್ವ ಪ್ರಾಪ್ತಿ. ಅಪ್ರಾಪ್ತಿ ಅಸಂತುಷ್ಟತೆಯ ಆಧಾರವಾಗಿದೆ
ಅಂದಾಗ ತಾವು ಯಾವ ಅನುಭವ ಮಾಡುತ್ತೀರಿ? ಅಪ್ರಾಪ್ತ ಯಾವುದೇ ವಸ್ತುವಿದೆಯೇ? ಅಥವಾ ಸರ್ವ
ಪ್ರಾಪ್ತಿಗಳೂ ಆಗಿದೆಯೇ? ಪ್ರಾಪ್ತಿಯ ನಶೆ ಇದೆಯೇ? ಸದಾ ಇದೆಯೇ ಅಥವಾ ಕೆಲವೊಮ್ಮೆ ಇದೆಯೇ?
ಯಾವುದನ್ನು ಪಡೆಯಬೇಕೋ ಅದನ್ನು ಪಡೆದುಕೊಂಡಿದ್ದೇವೆ ಎಂದು ಹೇಳುತ್ತೀರಿ. ಎಲ್ಲಿ ಸರ್ವ
ಪ್ರಾಪ್ತಿಗಳು ಆಗಿದೆ ಅಲ್ಲಿ ಅಸಂತುಷ್ಟತೆಯ ಹೆಸರು-ಗುರುತು ಇರುವುದಿಲ್ಲ.
ಅಂದಾಗ ಬಾಪ್ದಾದಾ ಇಂದು
ದೇಶ-ವಿದೇಶ, ಎಷ್ಟು ದೇಶಗಳಿಂದ ಬಂದು ಸೇರಿದ್ದಾರೆ ಆದರೆ ಎಲ್ಲರಿಗಿಂತ ದೂರದಿಂದ ಬರುವವರು
ಯಾರಾಗಿದ್ದಾರೆ? ಅಮೆರಿಕಾದವರು ದೂರದಿಂದ ಬಂದಿದ್ದಾರೆಯೇ? ಅಮೆರಿಕಾದವರು ದೂರದಿಂದ
ಬಂದಿದ್ದಾರಲ್ಲವೇ! ಮತ್ತೆ ತಂದೆ ಎಲ್ಲಿಂದ ಬಂದಿದ್ದಾರೆ? ಅಮೆರಿಕಾ ಅಂತೂ ಇದೇ ಲೋಕದಲ್ಲಿ ಇದೆ.
ಬಾಪ್ದಾದಾ ಎಲ್ಲಿಂದ ಬಂದಿದ್ದಾರೆ? ಪರಮಧಾಮದಿಂದ ಬಂದಿದ್ದಾರೆ. ಬ್ರಹ್ಮಾ ತಂದೆಯೂ ಸಹ
ಸೂಕ್ಷ್ಮಲೋಕದಿಂದ ಬಂದಿದ್ದಾರೆ ಅಂದಾಗ ಯಾರು ದೂರದಿಂದ ಬಂದಿದ್ದಾರೆ? ಎಲ್ಲರಿಗಿಂತ ದೂರ
ಯಾರಿದ್ದಾರೆ? ಇದು ತಂದೆ ಹಾಗೂ ಮಕ್ಕಳ ಪ್ರೀತಿಯ ದೃಷ್ಟಿ. ತಾವು ನನ್ನ ಬಾಬಾ ಎಂದು ಹೇಳಿದ್ದೀರಿ
ಮತ್ತು ತಂದೆ ನನ್ನ ಮಗು ಎಂದು ಹೇಳಿದ್ದಾರೆ. ಕೇವಲ ಒಬ್ಬರನ್ನು ತಿಳಿದುಕೊಳ್ಳುವುದರಿಂದ ಎಷ್ಟು
ಆಸ್ತಿ ಸಿಗುತ್ತದೆ. ಪ್ರಪಂಚದವರು ಸುಖಕ್ಕಾಗಿ, ಶಾಂತಿಗಾಗಿ ಎಲ್ಲಿ ಶಾಂತಿ ಸಿಗುತ್ತದೆ, ಎಲ್ಲಿ
ಸುಖ ಸಿಗುತ್ತದೆ ಎಂದು ಹುಡುಕುತ್ತಿದ್ದಾರೆ. ಮತ್ತು ತಮ್ಮ ಜೀವನವೇ ಸುಖ-ಶಾಂತಿ ಸಂಪನ್ನವಾಗಿದೆ.
ಈಗ ಬಾಪ್ದಾದಾರವರು ಹೇಳುತ್ತಾರೆ, ಕೇಳುತ್ತಾರೆ ಬಾಪ್ದಾದಾ ಏನು ಬಯಸುತ್ತಾರೆ? ಬಾಪ್ದಾದಾ
ಪ್ರತಿಯೊಬ್ಬ ಮಗುವಿನಿಂದ ಇದನ್ನೇ ಬಯಸುತ್ತಾರೆ - ಪ್ರತಿಯೊಬ್ಬ ಮಗು ಸದಾ ಸ್ವರಾಜ್ಯಾಧಿಕಾರಿ
ಆಗಿರಲಿ. ಕೆಲವೊಮ್ಮೆ ಅಲ್ಲ ಏಕೆಂದರೆ ಈಗಿನ ಸ್ವರಾಜ್ಯಾಧಿಕಾರದ ವರದಾನ ತಂದೆ ಈ ಸಂಗಮ ಯುಗಕ್ಕಾಗಿ
ಪೂರ್ತಿ ಕೊಟ್ಟು ಬಿಟ್ಟಿದ್ದಾರೆ, ಸ್ವಲ್ಪ ಅಲ್ಲ. ಕೆಲವೊಮ್ಮೆ ಆಗುವವರಲ್ಲ ಸದಾ ಆಗಬೇಕು. ಯೋಚನೆ
ಮಾಡಿ ಸದಾ ಕಾಲಕ್ಕಾಗಿ ಸ್ವರಾಜ್ಯಾಧಿಕಾರಿ ಆಗಿರುತ್ತೀರಾ? ಏಕೆಂದರೆ ಬಾಪ್ದಾದಾ ತಿಳಿಸಿದರು ಈ
ಎಲ್ಲಾ ಕರ್ಮೇಂದ್ರಿಯಗಳಿಗೆ, ಮನಸ್ಸು-ಬುದ್ಧಿ-ಸಂಸ್ಕಾರಕ್ಕೂ ಮಾಲೀಕರಾಗಿದ್ದೀರಿ. ಎಲ್ಲದಕ್ಕೆ
ನನ್ನದು ಎಂಬ ಶಬ್ದವನ್ನು ಹೇಳುತ್ತೀರಿ, ನಾನು ಎಂದು ಹೇಳುವುದಿಲ್ಲ, ನನ್ನದು ಎಂದು ಹೇಳುತ್ತೀರಿ.
ಮನಸ್ಸು-ಬುದ್ಧಿ-ಸಂಸ್ಕಾರ ನನ್ನದು ಅಂದಾಗ ನನ್ನದರ ಮೇಲೆ ಸದಾ ಅಧಿಕಾರ ಇರುತ್ತದೆ. ಈ ರೀತಿ
ಮನಸ್ಸು-ಬುದ್ಧಿ-ಸಂಸ್ಕಾರದ ಮೇಲೆ ಪೂರ್ತಿ ಅಧಿಕಾರ ಇರಬೇಕು, ಇದಕ್ಕೆ ಸ್ವರಾಜ್ಯಾಧಿಕಾರಿ ಎಂದು
ಹೇಳಲಾಗುತ್ತದೆ. ಏನು ಆರ್ಡರ್ ಮಾಡುತ್ತೀರಿ ಅದರನುಸಾರವಾಗಿ ಈ ಕಾರ್ಯವನ್ನು ಮಾಡಲು
ನಿಮಿತರಾಗಿದ್ದೀರಿ. ಆದರೆ ಇದಕ್ಕಾಗಿ ನಡೆಯುತ್ತಾ-ಓಡಾಡುತ್ತಾ ಕಾರ್ಯವನ್ನು ಮಾಡುತ್ತಾ ಮಾಲೀಕತನದ
ನಶೆ ಇರಬೇಕಾಗಿದೆ. ನಿಶ್ಚಯ ಮತ್ತು ನಶೆ ಇರಬೇಕು.
ಈಗಂತೂ ಆತ್ಮಗಳಿಗೆ ಮನಸಾ
ಮೂಲಕವೂ ಸಹ ಸೇವೆ ಕೊಡುವ ಸಮಯವಾಗಿದೆ. ಕೂಗುತ್ತಿರುತ್ತಾರೆ. ಹೇ ಪೂರ್ವಜ! ನಮಗೆ ಸ್ವಲ್ಪ
ಸುಖ-ಶಾಂತಿಯ ಕಿರಣಗಳನ್ನು ಕೊಟ್ಟು ಬಿಡಿ. ಅಂದಾಗ ಹೇ ಪೂರ್ವಜರೇ ದುಃಖಿಗಳ ಕೂಗು
ಕೇಳಿಸುತ್ತಿದೆಯಲ್ಲವೇ! ಬಾಪ್ದಾದಾರವರು ಯಾವುದೇ ಆಪತ್ತು ಅಚಾನಕ್ ಬರುತ್ತದೆ ಎಂದು ಸೂಚನೆ ಕೊಟ್ಟು
ಬಿಟ್ಟಿದ್ದಾರೆ, ಇದಕ್ಕಾಗಿ ಸೆಕೆಂಡಿನಲ್ಲಿ ಫುಲ್ಸ್ಟಾಪ್ ಮತ್ತು ಅಭ್ಯಾಸವೂ ಸಹ ಮಾಡುತ್ತಿದ್ದೀರಿ
ಏಕೆಂದರೆ ಆ ಸಮಯದಲ್ಲಿ ಪುರುಷಾರ್ಥದ ಸಮಯ ಇರುವುದಿಲ್ಲ, ಅಭ್ಯಾಸ ಮಾಡಿ ಫುಲ್ಸ್ಟಾಪ್ ಹಾಕಿದರೆ
ಆಶ್ಚರ್ಯ ಆಗುತ್ತದೆ, ಆದ್ದರಿಂದ ಈಗ ಪುರುಷಾರ್ಥದ ಸಮಯ ಸಿಕ್ಕಿದೆ. ಆ ಸಮಯ ಪ್ರಾಕ್ಟಿಕಲ್ ಮಾಡುವ
ಸಮಯವಾಗಿದೆ. ಅಂದಾಗ ಈಗಿನಿಂದ ಅಭ್ಯಾಸವಂತೂ ಮಾಡುತ್ತಿದ್ದೀರಿ. ಬಾಪ್ದಾದಾ ರಿಜಲ್ಟ್ ನೋಡುತ್ತಾರೆ,
ಅಟೆನ್ಷನಲ್ಲಿ ಇದ್ದಾರೆ. ಇಡಬೇಕಾಗಿರುವುದೂ ಸಹ ಕೇವಲ ಬಿಂದು ಅಟೆನ್ಷನ್ ಕೊಡಬೇಕು.
ಬಾಪ್ದಾದಾ ವಿಶೇಷವಾಗಿ
ಮಕ್ಕಳಿಗೆ ಕೊಡುಗೆ ಕೊಡುತ್ತಾರೆ ಮಕ್ಕಳೇ - ನಾನು ಸದಾ ನಿಮ್ಮ ಜೊತೆ ಇದ್ದೇನೆ. ತಂದೆ ಹೇಳಿದ್ದಾರೆ
ಮತ್ತು ಮಕ್ಕಳಿಗಾಗಿ ತಂದೆ ಸದಾ ಹಾಜಿರಾಗುತ್ತಾರೆ. ಹಜೂರ್ ಹಾಜಿರಾಗಿದ್ದಾರೆ ಎಂದು ಹೇಳಲಾಗುತ್ತದೆ,
ಸರ್ವವ್ಯಾಪಿ ಅಲ್ಲ ಆದರೆ ಮಕ್ಕಳ ಮುಂದೆ ಹಜೂರ್ ಹಾಜಿರಾಗುತ್ತಾರೆ ಅಂದಾಗ ಸದಾ ವಿಜಯಿ ಆಗಬೇಕು,
ಎಲ್ಲಿ ಭಗವಂತ ಜೊತೆ ಇರುತ್ತಾರೆ ಅಲ್ಲಿ ವಿಜಯಿ ಆಗುವುದು ಏಕೆ ಕಷ್ಟವಾಗುತ್ತದೆ? ವಿಜಯ ತಮ್ಮ ಜನ್ಮ
ಸಿದ್ಧ ಅಧಿಕಾರವಾಗಿದೆ. ಕೇವಲ ನನ್ನ ಬಾಬಾ ಅಂದಾಗ ವಿಜಯಿ ಆಗಿಯೇ ಆಗುತ್ತೀರಿ. ಆದ್ದರಿಂದ ಸದಾ
ವಿಜಯಿ ಆಗಬೇಕು. ಯಾರು ನೆನಪಿನಲ್ಲಿ ಇರುತ್ತಾರೆ ಅವರಿಗಾಗಿ ಅತೀ ಸಹಜ ಆಗಿದೆ. ಕಷ್ಟ ಆಗುವುದಿಲ್ಲ.
ಎಲ್ಲಿ ಭಗವಂತ ಇರುತ್ತಾರೆ ಅಲ್ಲಿ ವಿಜಯ ಖಂಡಿತ ಇದ್ದೇ ಇರುತ್ತದೆ. ಅಂದಾಗ ಈ ದಿನ ಬಾಪ್ದಾದಾ ಎಲ್ಲಾ
ಮಕ್ಕಳನ್ನು ನೋಡಿ ಖುಷಿ ಆಗುತ್ತಿದ್ದಾರೆ ಎಷ್ಟು ಸ್ನೇಹದಿಂದ ಯಾವ ಸಾಧನೆಯ ಮೂಲಕ ಬಂದಿದ್ದೀರಿ?
ಟ್ರೈನಿನಲ್ಲಿ ಬಂದಿದ್ದೀರೋ ಅಥವಾ ಪ್ಲೇನ್ನಲ್ಲಿ ಬಂದಿದ್ದೀರೋ? ಶರೀರದ ಮೂಲಕ ತಲುಪಿದ್ದೀರಿ ಆದರೆ
ಹೃದಯದ ಪ್ರೀತಿ ತಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. ಸಾಹಸ ತಮ್ಮದು ಸಹಯೋಗ ತಂದೆಯದು. ಈಗ
ಬಾಪ್ದಾದಾ ಇದನ್ನೇ ಬಯಸುತ್ತಾರೆ - ಪ್ರತಿಯೊಬ್ಬ ಮಗು ಪ್ರತಿಯೊಂದು ಕರ್ಮದಲ್ಲಿ ತಮ್ಮ ಸ್ವರಾಜ್ಯದ
ಸೀಟಿನಲ್ಲಿ ಸ್ಥಿತರಾಗಲಿ. ಒಳ್ಳೆಯದು.
ಈ ದಿನ ಮೊದಲನೇ ಬಾರಿ
ಬಂದಿದ್ದಾರೆ. ಯಾರು ಮೊದಲನೇ ಬಾರಿ ಬಂದಿದ್ದಾರೋ ಅವರು ಕೈ ಎತ್ತಿ. ಎದ್ದು ನಿಲ್ಲಿ. ಬಹಳ ಇದ್ದಾರೆ.
ಒಳ್ಳೆಯದು. ಹೇಗೆ ಮೊದಲನೇ ಬಾರಿ ಬಂದಿದ್ದೀರಿ ಅದೇ ರೀತಿ ಮೊದಲನೇ ನಂಬರಿನಲ್ಲಿ ಹೋಗಬೇಕಲ್ಲವೇ.
ಹೋಗಬೇಕಲ್ಲವೇ? ಯಾರು ಧೈರ್ಯವನ್ನು ಇಟ್ಟುಕೊಳ್ಳುತ್ತಾರೆ ಅವರಿಗೆ ಬಾಪ್ದಾದಾರವರ ಸಹಯೋಗ ಸಿಗುತ್ತದೆ.
ಮತ್ತು ಧೈರ್ಯದಿಂದ ಎಷ್ಟು ಮುಂದುವರೆಯಲು ಬಯಸುತ್ತೀರಿ ಅಷ್ಟು ಅವಕಾಶವಿದೆ ಏಕೆಂದರೆ ಟೂ ಲೇಟ್
ಬೋರ್ಡ್ ಇನ್ನೂ ಹಾಕಿಲ್ಲ. ನೆನಪಿನಲ್ಲಿ ಇರಿ ಮತ್ತು ಏನು ಪ್ರಾಪ್ತಿ ಆಗಿದೆ ಅದರಿಂದ ಅನ್ಯರ ಸೇವೆ
ಮಾಡಿ. ಎಷ್ಟು ಸೇವೆ ಮಾಡುತ್ತೀರಿ ಅಷ್ಟು ಆಶಿರ್ವಾದಗಳು ಸಿಗುತ್ತದೆ ಮತ್ತು ಆ ಆಶೀರ್ವಾದಗಳು
ತಮ್ಮನ್ನು ಮುಂದುವರೆಸುತ್ತದೆ. ಸಂದೇಶವನ್ನು ಕೊಡುತ್ತಾ ಹೋಗಿ ಬಾಕಿ ಪ್ರತಿಯೊಬ್ಬರ ಅದೃಷ್ಟ. ಆದರೆ
ತಾವು ಸಂದೇಶ ಕೊಟ್ಟು ಬಿಡಿ ತಮ್ಮ ಪುಣ್ಯವನ್ನು ಜಮಾ ಮಾಡಿಕೊಳ್ಳುತ್ತಿರಿ. ಪುಣ್ಯ ತಮ್ಮನ್ನು
ಮುಂದುವರೆಸುತ್ತಿರುತ್ತದೆ.
ಒಳ್ಳೆಯದು.
ಬಾಪ್ದಾದಾರವರು ಅಮೃತವೇಳೆ
ಎಲ್ಲಾಕಡೆ ಸುತ್ತುತ್ತಾರೆ, ಅವರಿಗೆ ಚಕ್ರವನ್ನು ಹಾಕುವುದು (ಸುತ್ತುವುದು) ಏನು ದೊಡ್ಡ ಮಾತು.
ಬಾಪ್ದಾದಾರವರು ಇದನ್ನೂ ಸಹ ಹೇಳೀದ್ದಾರೆ ನಾಲ್ಕು ಗಂಟೆಗೆ ಮಿಲನದ ವಿಶೇಷತೆ ಇದೇ ಆಗಿದೆ ನಾಲ್ಕು
ಗಂಟೆಗೆ ಬಾಪ್ದಾದಾ ಎಲ್ಲಾ ಮಕ್ಕಳಿಗೆ ಸಹಜವೇ ವರದಾನ ಕೊಡೂತ್ತಾರೆ. ವರದಾನ ದಾತನ ವಿಶೇಷ ಪಾತ್ರ
ಅಮೃತವೇಳೆಯಿರುತ್ತದೆ. ಏನೇ ವರದಾನ ಬೇಕು ಅದನ್ನು ಬಾಪ್ದಾದಾ ಕೊಟ್ಟು ಬಿಡುತ್ತಾರೆ. ಪ್ರಯತ್ನಿಸಿ
ನೋಡಿರಿ. ಆದರೆ ನೀವೆಲ್ಲರೂ ವರದಾನವನ್ನು ತೆಗೆದುಕೊಳ್ಳಲು ಅಲರ್ಟ್ ಆಗಿರಬೇಕು. ಒಂದುವೇಳೆ
ಅಲರ್ಟ್ವಿಲ್ಲವೆಂದರೆ ಬಾಪ್ದಾದಾರವರು ಚಕ್ರ ಹಾಕಿ ಹೋಗಿ ಬಿಡುವರು ಮತ್ತು ನೀವು ಯೋಚಿಸುತ್ತಿರುವಿರಿ
ಅದಕ್ಕೆ ಅಮೃತವೇಳೆಯ ಮಹತ್ವವನ್ನು ಕೊಡುತ್ತೀರಿ ಆದರೆ ಗಮನವಿರಲಿ. ಬಾಪ್ದಾದಾರವರು ನೋಡಿದ್ದಾರೆ
ಸಮಯನುಸಾರ ಸೇವೆಯು ಹೆಚ್ಚಾಗುತ್ತಿದೆ ಮತ್ತು ಸೇವೆಯ ಕಾರಣ ತಂದೆಯಿಂದ ವರದಾನ
ತೆಗೆದುಕೊಳ್ಳುವುದರಿಂದ ದೂರವಾಗಲು ಸಾಧ್ಯವಿಲ್ಲ. ಬಾಕಿ ಡಬಲ್ ವಿದೇಶದವರು ಮೆಜಾರಿಟಿ ಪುರುಷಾರ್ಥ
ಮಾಡುತ್ತಾರೆ ಆದರೆ ಅಟೆನ್ಷನ್ನ್ನು ಅಂಡರ್ಲೈನ್ ಮಾಡಬೇಕು. ಮಧುಬನದಲ್ಲಿ ಹೇಗಾದರೂ ತಲುಪುತ್ತೀರಿ,
ಅದಕ್ಕಾಗಿ ವಿಶೇಷವಾಗಿ ಎಲ್ಲಾ ಮಕ್ಕಳಿಗೆ ಶುಭಾಶಯಗಳನ್ನು ನೀಡುತ್ತಿದ್ದಾರೆ. ಬಾಪ್ದಾದಾ ಸಂಸ್ಕಾರದ
ಮೇಲೆ ಯಾವ ಸೂಚನೆ ಕೊಟ್ಟಿದ್ದಾರೆ ಅದನ್ನು ನಾವು ಮಾಡಲೇಬೇಕೆಂದು ತಿಳಿಯುತ್ತಾರೆ ಮತ್ತು ಮಾಡಲು
ಪ್ರತಿದಿನ ಅಮೃತವೇಳೆ ಹೇಗೆ ಸ್ವಮಾನ ಇಟ್ಟುಕೊಳ್ಳುತ್ತೀರಿ ಅದರ ಜೊತೆ-ಜೊತೆ ಯಾವುದಾದರು ಒಂದು
ಭಿನ್ನ-ಭಿನ್ನ ಪ್ರಕಾರವಾಗಿ ಒಂದು ಸಂಸ್ಕಾರದ ಮೇಲೆ ಅಟೆನ್ಷನ್ ಕೊಡಿ, ಈ ದಿನ ಈ ಸಂಸ್ಕಾರದ ಮೇಲೆ
ವಿಶೇಷ ಅಟೆನ್ಷನ್ ಕೊಡಬೇಕು ಮತ್ತು ರಾತ್ರಿಯಲ್ಲಿ ಯಾವಾಗ ಬಾಪ್ದಾದಾರವರಿಗೆ ತಮ್ಮ ಪೂರ್ತಿ ದಿನದ
ಚಾರ್ಟ್ ಕೊಟ್ಟಾಗ ಆ ಸಮಯದಲ್ಲಿ ಆ ಸಂಸ್ಕಾರದ ರಿಜಲ್ಟ್ ಸಹ ವಿಶೇಷವಾಗಿ ತಿಳಿಸಿದರೆ ವಿಶೇಷ
ಅಟೆನ್ಷನ್ ಆಗಿ ಬಿಡುತ್ತದೆ. ಯಾವುದಾದರೂ ಸಂಸ್ಕಾರದ ಮೇಲೆ ಅಟೆನ್ಷನ್ ಇಟ್ಟುಕೊಳ್ಳಬೇಕೆಂದರೆ, ಹೇಗೆ
ನೆನಪಿನ ಮೇಲೆ ಅಟೆನ್ಷನ್ ಕೊಡುತ್ತೀರಿ ಅದರ ಜೊತೆ-ಜೊತೆ ಆ ಸಮಯದಲ್ಲಿ ಈ ರಿಜಲ್ಟ್ ಸಹ
ಬಾಪ್ದಾದಾರವರಿಗೆ ಕೊಡಿ. ತಿಳಿದುಕೊಳ್ಳಿ ಒಂದುವೇಳೆ ತಾವು ಬಯಸುತ್ತೀರಿ ಆದರೆ ಆ ದಿನ ಯಾವುದೇ
ಸಂಸ್ಕಾರವನ್ನು ತೆಗೆಯುವ ಕಾರ್ಯ ಆಗಿಲ್ಲವೆಂದರೆ ತಮಗೆ ತಾವೇ ತಂದೆಯ ಶುಭಾಶಯಗಳನ್ನು ಕೊಡಬೇಕು
ಮತ್ತು ಪ್ರತಿದಿನ ತಂದೆಯ ಶುಭಾಶಯಗಳನ್ನು ವಿಶೇಷವಾಗಿ ಈ ಸಂಸ್ಕಾರ ಪ್ರತಿ ತೆಗೆದುಕೊಳ್ಳುತ್ತಿರಬೇಕು.
ಅಂದಾಗ ಸಂಸ್ಕಾರ ಕಾರ್ಯದಲ್ಲಿ ಬರುವುದರಲ್ಲಿ ಕಡಿಮೆ ಆಗುತ್ತಿರುತ್ತದೆ. ಹೇಗೆ ಯೋಗದ ಕುರಿತು ಚೆಕ್
ಮಾಡಿಕೊಳ್ಳುತ್ತೀರಿ ಅದೇ ರೀತಿ ಸಂಸ್ಕಾರದ ಕುರಿತು ಪ್ರತಿದಿನ ಬರುವುದಿಲ್ಲ, ಕೆಲವೊಮ್ಮೆ ಬರುತ್ತದೆ.
ಯಾರು ಪುರುಷಾರ್ಥಿ ಆಗಿದ್ದಾರೆ ಅವರಿಗೆ ಪರೀಕ್ಷೆ ಕೆಲವೊಮ್ಮೆ ಬರುತ್ತದೆ ಆದರೆ ಪ್ರತಿದಿನ
ಬರುವುದಿಲ್ಲ. ಆದರೆ ಪ್ರತಿದಿನ ಚೆಕಿಂಗ್ ಆದರೆ ಇಲ್ಲೂ ಸಹ ಅಟೆನ್ಷನ್ ಟೆನ್ಷನ್ನ್ನು ಕಡಿಮೆ
ಮಾಡುತ್ತದೆ. ಸಮಾಪ್ತಿ ಮಾಡುತ್ತಾ ಹೋಗುತ್ತದೆ. ಏಕೆಂದರೆ ಬಾಪ್ದಾದಾ ವಿದೇಶದವರಲ್ಲಿ ಕೆಲವು ಮಕ್ಕಳು
ಯಾವುದಾದರೂ ಕಾರ್ಯವನ್ನು ಪ್ರಾರಂಭಿಸಿದಾಗ ಅಟೆನ್ಷನ್ ಕೊಡುವುದನ್ನು ನೋಡಿದ್ದಾರೆ. ಅಂದಾಗ
ಅಟೆನ್ಷನ್ ಕೊಡುವವರೇ ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯ. ತಂದೆಯದೂ ವರದಾನವಿದೆ
ತಿಳಿದುಕೊಂಡಿದ್ದೀರಾ? ಈಗ ಇದರ ಹಿಂದೆ ಇರುತ್ತೀರಲ್ಲವೇ. ಪ್ರತಿದಿನ ರಿಜಲ್ಟ್ ಚೆಕಿಂಗ್
ಮಾಡಿಕೊಳ್ಳುತ್ತೀರಲ್ಲವೇ. ಸಂಸ್ಕಾರ ತಾನಾಗಿಯೇ ಸಡಿಲ ಆಗಿ ಬಿಡುತ್ತದೆ ಮತ್ತು ಸಂಸ್ಕಾರದ
ಸಬ್ಜೆಕ್ಟಿನಲ್ಲಿ ನಂಬರ್ವನ್ ಹೋಗಲಿ ಎಂದು ಬಾಪ್ದಾದಾ ಬಯಸುತ್ತಾರೆ. ಯಾವ ಸಂಸ್ಕಾರವನ್ನು
ಬಯಸುತ್ತೀರೋ ಅದೇ ಕಾರ್ಯ ರೂಪದಲ್ಲಿ ಬರಬೇಕು. ಆಗಿ ಬಿಡುತ್ತದೆ. ಅಟೆನ್ಷನ್ನಲ್ಲಿ ಬಂದಿದ್ದೀರಲ್ಲವೇ
ಅಂದಾಗ ಆಗಿ ಬಿಡುತ್ತದೆ. ಆದರೆ ಅಟೆನ್ಷನ್ ಕೊಡಬೇಕು, ಆಗಿ ಬಿಡುತ್ತದೆ ಎಂದಲ್ಲ ಆದರೆ ಅಟೆನ್ಷನ್
ಕೊಡಬೇಕು. ಸಂಘಟನೆಯಲ್ಲಿಯೇ ಈ ಸಂಸ್ಕಾರ ಏಕೆ ಬರುತ್ತದೆ? ತಮ್ಮ ಚಿತ್ರಗಳಲ್ಲಿ ಯಾರು ಪೂಜೆ
ಮಾಡುತ್ತಾರೆ ತಮ್ಮ ಸಂಸ್ಕಾರ ಎಷ್ಟು ಚೆನ್ನಾಗಿ ಹಾಡುತ್ತಾರೆ. ಈ ರೀತಿ ಆಗಿದಿರಿ ಅದರಿಂದ ವರ್ಣನೆ
ಮಾಡುತ್ತಾರೆ. ತಮ್ಮ ದೇವತಾ ಚಿತ್ರವನ್ನು ಇಮರ್ಜ್ ಮಾಡಿಕೊಳ್ಳಿ. ಯಾವ ಗಾಯನ ಮಾಡುತ್ತಾರೆ? ಈ ರೀತಿ
ದೇವತೆಯಂತೂ ಅಗಲೇಬೇಕಲ್ಲವೇ. ಒಳ್ಳೆಯದು.
ಬಾಕಿ ಎಲ್ಲಾ ಡಬಲ್
ವಿದೇಶದವರು ಪುರುಷಾರ್ಥದಲ್ಲಿ ಸಫಲತೆಯ ಅನುಭವ ಮಾಡುತ್ತಿದ್ದೀರಲ್ಲವೇ. ಮಾಡುತ್ತೀರಾ? ಯಾರು
ಸಫಲತೆಯನ್ನು ಅನುಭವ ಮಾಡುತ್ತಾರೋ ಅವರು ಕೈ ಎತ್ತಿ. ವಾಹ್! ಕೈಯಂತೂ ಚೆನ್ನಾಗಿ ಎತ್ತುತ್ತೀರಿ.
ಲಕ್ಷ್ಯ ಇಟ್ಟುಕೊಳ್ಳಬೇಕು, ಇದರ ಹಿಂದೆ ಅಟೆನ್ಷನ್ ಕೊಡಲೇಬೇಕು. ಇದರ ಹಿಂದೆ ನಂಬರ್
ತೆಗೆದುಕೊಳ್ಳಲೇಬೇಕು. ಅಂದಾಗ ತಮ್ಮನ್ನು ನೋಡಿ ಬೇರೆಯವರಿಗೂ ಸಹ ಉಮ್ಮಂಗ ಬರುತ್ತದೆ ಏಕೆಂದರೆ ತಾವು
ನಿಮಿತ್ತರಾಗಿದ್ದೀರಲ್ಲವೇ. ಮತ್ತು ನಿಮಿತ್ತ ಆಗಿರುವವರಿಗೆ ಬಾಪ್ದಾದಾರವರ ವಿಶೇಷ ಸಹಯೋಗವೂ ಸಹ
ಸಿಗುತ್ತದೆ. ಬಾಕಿ ಸೆಂಟರ್ ವೃದ್ಧಿ ಆಗುತ್ತಿರುವುದನ್ನು ನೋಡಿ ಬಾಬಾ ಖುಷಿ ಆಗಿದ್ದಾರೆ.
ಪುರುಷಾರ್ಥದ ಕಡೆ ಅಟೆನ್ಷನ್ ಇದೆ ಆದರೆ ಈಗ ಪರಿವರ್ತನೆಗೆ ನಿಮಿತ್ತ ಆಗುವವರಾಗಿ. ಅಂದಾಗ ತಮ್ಮನ್ನು
ನೋಡಿ ಬೇರೆಯವರಿಗೂ ಸಹ ಪರಿವರ್ತನೆಯ ಶಕ್ತಿಯ ಉಮ್ಮಂಗ ಬರುತ್ತದೆ. ಬಾಕಿ ಬಾಪ್ದಾದಾ
ಪುರುಷಾರ್ಥದಲ್ಲಂತೂ ಖುಷಿ ಆಗಿದ್ದಾರೆ ನಂಬಾರ್ವಾರ್ ಆಗಿಯೇ ಇರುತ್ತಾರೆ, ಇದಂತೂ ಅರ್ಥ ಆಗುತ್ತದೆ.
ಆದರೆ ಪುರುಷಾರ್ಥದ ಕಡೆ ಅಟೆನ್ಷನ್ ಇದೆ, ಇನ್ನೂ ಹೆಚ್ಚಿಸಿಕೊಳ್ಳಬೇಕು. ಬಾಕಿ ಬಾಪ್ದಾದಾರವರದಂತೂ
ನೆನಪು-ಪ್ರೀತಿಯಂತೂ ಸಿಗುತ್ತದೆ. ನೋಡಿ ಮನೆಯಲ್ಲಿ ಕುಳಿತಿದ್ದರೂ ಬಾಪ್ದಾದಾರವರ ಒಂದು ದಿನವೂ ಮಿಸ್
ಅಗುವುದಿಲ್ಲ. ಒಂದುವೇಳೆ ಪ್ರತಿದಿನ ವಿಧಿ ಪೂರ್ವಕವಾಗಿ ಮುರಳಿ ಓದಿದರೆ ಒಂದು ದಿನವೂ
ನೆನಪು-ಪ್ರೀತಿ ತಪ್ಪಿಸುವುದಿಲ್ಲ, ಸಿಗುತ್ತದೆಯಲ್ಲವೇ? ಸಿಗುತ್ತದೆಯೇ? ಪ್ರತಿದಿನ ನೆನಪು-ಪ್ರೀತಿ
ಸಿಗುತ್ತದೆಯೇ? ಎಲ್ಲರಿಗೆ ಸಿಗುತ್ತದೆಯಲ್ಲವೇ? ಇದು ಬಾಪ್ದಾದಾರವರ ಪ್ರೀತಿಯ ಚಿನ್ಹೆ ಆಗಿದೆ.
ಮುರಳಿ ತಪ್ಪಿಸಿದರೆ ನೆನಪು-ಪ್ರೀತಿಯೂ ಸಹ ತಪ್ಪಿಸುತ್ತೀರಿ. ಕೇವಲ ಮುರಳಿಯನ್ನು ತಪ್ಪಿಸಿಲ್ಲ ಆದರೆ
ಬಾಪ್ದಾದಾರವರ ನೆನಪು-ಪ್ರೀತಿ, ವರದಾನವನ್ನು ಎಲ್ಲಾ ತಪ್ಪಿಸಿದ್ದೀರಿ. ಮುರಳಿಯಂತೂ ಓದುತ್ತೀರಿ
ಆದರೆ ಬಾಪ್ದಾದಾರವರ ನೆನಪು-ಪ್ರೀತಿ ತೆಗೆದುಕೊಳ್ಳುವ ಯಾವ ಸಮಯ ನಿಯಮಿತವಾಗಿದೆ ಅದಂತೂ
ತಪ್ಪಿಸಿದ್ದೀರಲ್ಲವೇ. ಅಂದಾಗ ಉಮಂಗವಿದೆ, ಇದರಲ್ಲಿ ಬಾಪ್ದಾದಾರವರು ಖುಷಿ ಆಗಿದ್ದಾರೆ. ಒಳ್ಳೆಯದು.
ಮುರಳಿ ಮಿಸ್ ಮಾಡುವವರೇ? ಡಬಲ್ ವಿದೇಶದವರಲ್ಲಿ ಇದ್ದೀರಾ? ಯಾರಾದರೂ ಮುರಳಿ ತಪ್ಪಿಸುವವರಿದ್ದೀರಾ?
ಕಾರಣಕ್ಕಾಗಿ ತಪ್ಪಿಸುತ್ತೀರಾ? ಇಲ್ಲ. ತಪ್ಪಿಸುವುದಿಲ್ಲ. ಒಬ್ಬರು ಕೈ ಎತ್ತಿದ್ದಾರೆ. ಈಗ
ತಪ್ಪಿಸಬಾರದು, ಮುರಳಿ ತಪ್ಪಿಸಬಾರದು. ಫೋನ್ ಮೂಲಕ ಆದರೂ ಕೇಳಿ. ಓದಕ್ಕೆ ಆಗುವುದಿಲ್ಲವೆಂದರೆ
ಖಂಡಿತ ಕೇಳಿ. ತಪ್ಪದೆ ಹಾಜಿರಾಗಿ. ಒಳ್ಳೆಯದು. ಬಾಕಿ ಯಾರೆಲ್ಲಾ ಸಭೆಯಲ್ಲಿ ಬಂದಿದ್ದೀರಿ,
ಹೊಸಬರಾಗಲಿ, ಹಳಬರಾಗಲಿ ಪಕ್ಕಾ-ಪಕ್ಕಾ ನೋಟ್ ಮಾಡಿಕೊಳ್ಳಿ ಮುರಳಿ ಎಂದೂ ತಪ್ಪಿಸಬಾರದು. ಏಕೆಂದರೆ
ತಂದೆ ಪ್ರತಿದಿನ ಪರಮಧಾಮದಿಂದ ಬರುತ್ತಾರೆ. ಎಷ್ಟು ದೂರದಿಂದ ಬರುತ್ತಾರೆ, ಮಕ್ಕಳಿಗೋಸ್ಕರ
ಬರುತ್ತಾರಲ್ಲವೇ. ಹೇಗೆ ತಂದೆ ಮುರಳಿ ತಪ್ಪಿಸುವುದಿಲ್ಲ ಅದೇ ರೀತಿ ಮಕ್ಕಳೂ ಸಹ ಮುರಳಿಯನ್ನು
ತಪ್ಪಿಸಬಾರದು. ಒಳ್ಳೆಯದು.
ಈಗ ಮಧುಬನಕ್ಕೆ ಬಂದಾಗ
ಫಾರ್ಮ್ ಬರೆಯುತ್ತೀರಲ್ಲವೇ ಅದರಲ್ಲಿ ಮುರಳಿ ಪ್ರತಿದಿನ ಕೇಳಿದ್ದೇನೆಯೇ ಅಥವಾ ಎಷ್ಟು ದಿನ
ತಪ್ಪಿಸಿದ್ದೇನೆ ಎಂದು ಬರೆಯಿರಿ. ಒಪ್ಪಿಗೆ ಇದೆಯೇ? ಯಾರಿಗೆ ಒಪ್ಪಿಗೆ ಇದೆಯೋ ಅವರು ಕೈ ಎತ್ತಿ.
ಮಧುಬನದವರೂ ಕೈ ಎತ್ತಿ. ಯಾವುದೇ ಕಾರಣಕ್ಕಾಗಿ ಮುರಳಿಯನ್ನು ತಪ್ಪಿಸಬಾರದು. ಹೇಗೆ ಊಟ
ತಪ್ಪಿಸುವುದಿಲ್ಲ ಅಂದಾಗ ಇದೂ ಸಹ ಭೋಜನವಾಗಿದೆಯಲ್ಲವೇ. ಅದು ಶರೀರಕ ಭೋಜನವಾಗಿದೆ, ಇದು ಆತ್ಮಕ್ಕೆ
ಭೋಜನವಾಗಿದೆ. ಚೆನ್ನಾಗಿ ಎನಿಸುತ್ತದೆಯೇ? ಯಾರು ಹೊಸಬರು ಬಂದಿದ್ದಾರೆ, ಬರಲು ಸಾಧ್ಯ ಆಗಿದೆಯಲ್ಲವೇ.
ಅವರೂ ಸಹ ಈ ನಿಯಮವನ್ನು ಪಾಲನೆ ಮಾಡಬೇಕಾಗಿದೆ. ಹೇಗೆ ಬೇರೆ ನಿಯಮಗಳಿದೆ ಅದೇ ರೀತಿ ಈ ನಿಯಮಗಳೂ ಸಹ
ಇದೆ. ಬ್ರಾಹ್ಮಣರು ಅರ್ಥಾತ್ ಮುರಳಿಯನ್ನು ಕೇಳುವವರು, ಸೇವೆ ಮಾಡುವವರು. ಒಳ್ಳೆಯದು.
ಈಗ ಎಲ್ಲಾ ಕಡೆಯ
ಮಕ್ಕಳಿಗೆ ನೆನಪು-ಪ್ರೀತಿಯ ಜೊತೆ ಶುಭಾಶಯಗಳನ್ನು ನೀಡುತ್ತಿದ್ದಾರೆ. ಸದಾ ಉಮ್ಮಂಗ-ಉತ್ಸಾಹದಿಂದ
ಮುಂದುವರೆಯುತ್ತಿದ್ದೀರಿ ಮತ್ತು ಮುಂದುವರೆಯುತ್ತಿರಿ. ಎಂದೂ ನಿಮ್ಮ ಉಮ್ಮಂಗ-ಉತ್ಸಾಹವನ್ನು ಯಾವುದೇ
ಮಾತಿನಿಂದ ಕಡಿಮೆ ಮಾಡಿಕೊಳ್ಳಬೇಡಿ. ಮಾತು ಬರುತ್ತದೆ ಆದರೆ ಪುರುಷಾರ್ಥ ಮತ್ತು ತಂದೆಯ ಪ್ರೀತಿ
ತಮ್ಮದಾಗಿದೆ. ಎಂದೂ ತಮ್ಮ ಬುದ್ಧಿಯನ್ನು ತಂದೆಯ ವಿನಃ ಯಾವುದೇ ಮಾತಿನಲ್ಲಿ ಬಿಜಿ ಮಾಡಿಕೊಳ್ಳಬೇಡಿ.
ತಂದೆ ಮತ್ತು ತಂದೆಯ ಮುರಳಿ ಮತ್ತು ತಂದೆಯ ಮೂಲಕ ಯಾವ ಸೇವೆ ಸಿಕ್ಕಿದೆ ಆ ಸೇವೆಯನ್ನು ಮಾಡುತ್ತಿರಿ.
ಈಗ ಏನು ಹೇಳಲಿ. ಜೊತೆಯಲ್ಲಂತೂ ಇರಲೇಬೇಕು. ರಜಾ ತೆಗೆದುಕೊಳ್ಳುತ್ತೇವೆ, ಇದನ್ನೂ ಸಹ ಹೇಳಲು
ಸಾಧ್ಯವಿಲ್ಲ. ಜೊತೆಯಲ್ಲಿ ಇರುತ್ತೇವೆ, ಜೊತೆಯಲ್ಲಿಯೇ ಹೋಗುತ್ತೇವೆ ಮತ್ತು ಜೊತೆಯಲ್ಲಿಯೇ
ಬರುತ್ತೇವೆ. ಒಳ್ಳೆಯದು ಈಗ ಸಮಾಪ್ತಿ.
ವರದಾನ:
ಶಕ್ತಿ ರೂಪದ
ಸ್ಮೃತಿಯ ಮೂಲಕ ಪತಿತ ಸಂಸ್ಕಾರಗಳ ನಾಶಗೊಳಿಸುವ ಕಾಳಿ ರೂಪ ಭವ.
ಸದಾ ತಮ್ಮ ಈ ಸ್ವರೂಪವು
ಸ್ಮೃತಿಯಲ್ಲಿರಲಿ - ನಾನು ಸರ್ವ ಶಸ್ತ್ರಧಾರಿ ಶಕ್ತಿಯಾಗಿದ್ದೇನೆ, ನಾನು ಪತಿತ-ಪಾವನಿಯ ಮೇಲೆ
ಯಾವುದೇ ಪತಿತ ಆತ್ಮನ ದೃಷ್ಟಿಯ ನೆರಳೂ ಸಹ ಬೀಳಲು ಸಾಧ್ಯವಿಲ್ಲ. ಪತಿತ ಆತ್ಮನ ಪತಿತ ಸಂಕಲ್ಪವೂ
ನಡೆಯಲು ಸಾಧ್ಯವಿಲ್ಲ - ಈ ರೀತಿಯಾಗಿ ತಮ್ಮ ಬ್ರೇಕ್ ಶಕ್ತಿಶಾಲಿ ಆಗಿರಬೇಕು. ಒಂದುವೇಳೆ ಯಾವುದೇ
ಪತಿತ ಆತ್ಮನ ಪ್ರಭಾವ ಬೀರುತ್ತದೆಯೆಂದರೆ ಇದರ ಅರ್ಥವಾಗಿದೆ - ತಾವು ಪ್ರಭಾವಶಾಲಿ ಆಗಿಲ್ಲ. ಯಾರು
ಸ್ವಯಂ ಸಂಹಾರಿಣಿ ಆಗಿರುತ್ತಾರೆಯೋ ಅವರೆಂದಿಗೂ ಯಾರದೇ ಶಿಕಾರಿ ಆಗಿರುವುದಿಲ್ಲ. ಅಂದಾಗ ಇಂತಹ ಕಾಳಿ
ರೂಪವುಳ್ಳವರಾಗಿರಿ, ಅದರಿಂದ ಯಾರೇ ತಮ್ಮಮುಂದೆ ಇಂತಹ ಸಂಕಲ್ಪ ಮಾಡಿದರೂ, ಅವರ ಸಂಕಲ್ಪವೂ
ಮೂರ್ಛಿತವಾಗಿ ಬಿಡಲಿ.
ಸ್ಲೋಗನ್:
ರಾಯಲ್ ರೂಪದ
ಇಚ್ಛಾ ಸ್ವರೂಪ ಹೆಸರು, ಮಾನ್ಯತೆ ಮತ್ತು ಸ್ಥಾನವಾಗಿದೆ, ಇದರಿಂದ ನಿರ್ಲಿಪ್ತರಾಗಿರಿ.
ಅವ್ಯಕ್ತ ಸೂಚನೆ:-
ಜ್ವಾಲಾ ಸ್ವರೂಪ ಸ್ಥಿತಿಯಲ್ಲಿರುತ್ತ ಶಕ್ತಿಶಾಲಿ ನೆನಪಿನ ಅನುಭವ ಮಾಡಿ.
ಸಾರಥಿ ಎಂದರೆ ಆತ್ಮ
ಅಭಿಮಾನಿ ಏಕೆಂದರೆ ಆತ್ಮವೇ ಸಾರಥಿಯಾಗಿದೆ. ಬ್ರಹ್ಮಾ ತಂದೆಯು ಈ ವಿಧಿಯಿಂದ ನಂಬರ್ಒನ್ ಸಿದ್ಧಿ
ಪ್ರಾಪ್ತಿಯಾಗುತ್ತದೆ. ಫಾಲೋ ಫಾದರ್ ಮಾಡಿರಿ. ಹೇಗೆ ತಂದೆ ದೇಹವನ್ನು ಅಧೀನ ಮಾಡಿಕೊಂಡು ಪ್ರವೇಶ
ಮಾಡುತ್ತಾರೆ ಅರ್ಥಾತ್ ಸಾರಥಿಯಾಗುತ್ತಾರೆ, ದೇಹದ ಅಧೀನನಲ್ಲ, ಅದಕ್ಕೆ ಭಿನ್ನ ಮತ್ತು
ಪ್ರಿಯರಾಗಿದ್ದಾರೆ. ಹಾಗೆಯೇ ನೀವೆಲ್ಲಾ ಬ್ರಾಹ್ಮಣ ಆತ್ಮರು ಸಹ ತಂದೆಯ ಸಮಾನ ಸಾರಥಿಯ
ಸ್ಥಿತಿಯಲ್ಲಿರಿ. ಸಾರಥಿ ಸ್ವತಃವೇ ಸಾಕ್ಷಿಯಾಗಿ ಎಲ್ಲವನ್ನು ಮಾಡುತ್ತಾರೆ, ನೋಡುತ್ತಾರೆ,
ಕೇಳುತ್ತಾರೆ ಮತ್ತು ಎಲ್ಲವನ್ನು ಮಾಡುತ್ತ ಮಾಯೆಯ ಲೇಪ್-ಚೇಪ್ದಿಂದ ನಿರ್ಲೇಪರಾಗಿರುತ್ತಾರೆ.