26.08.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ಜ್ಞಾನ ಸಾಗರ ತಂದೆಯು ಬಂದಿದ್ದಾರೆ, ಜ್ಞಾನದ ಮಳೆಯನ್ನು ಸುರಿಸಿ ಹಚ್ಚ ಹಸಿರನ್ನಾಗಿ ಮಾಡಲು, ಈಗ ಸ್ವರ್ಗ ಸ್ಥಾಪನೆಯಾಗುತ್ತಾ ಇದೆ, ಅದರಲ್ಲಿ ಹೋಗಲು ದೈವೀ ಸಂಪ್ರದಾಯದವರಾಗಬೇಕಾಗಿದೆ”.

ಪ್ರಶ್ನೆ:
ಸರ್ವೋತ್ತಮ ಕುಲದ ಮಕ್ಕಳ ಮುಖ್ಯ ಕರ್ತವ್ಯವೇನು?

ಉತ್ತರ:
ಸದಾ ಶ್ರೇಷ್ಠ ಆತ್ಮೀಯ ಸೇವೆಯನ್ನು ಮಾಡುವುದು. ಇಲ್ಲಿ ಕುಳಿತಿರಲಿ, ನಡೆದಾಡುತ್ತಾ-ತಿರುಗಾಡುತ್ತಾ ಭಾರತ ಮತ್ತು ಇಡೀ ವಿಶ್ವವನ್ನು ಪಾವನ ಮಾಡುವುದು, ಶ್ರೀಮತದನುಸಾರ ತಂದೆಗೆ ಸಹಯೋಗಿಗಳಾಗುವುದು - ಇದೇ ಸರ್ವೋತ್ತಮ ಬ್ರಾಹ್ಮಣರ ಕರ್ತವ್ಯವಾಗಿದೆ.

ಗೀತೆ:
ಯಾರು ಪ್ರಿಯತಮನ ಜೊತೆಯಲ್ಲಿದ್ದಾರೆಯೋ ..............

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳ ಪ್ರತಿ ಆತ್ಮೀಯ ತಂದೆ, ಯಾರು ಆತ್ಮೀಯ ತಂದೆಯ ಜೊತೆಯಲ್ಲಿದ್ದಾರೆ ಅವರಿಗೆ ತಿಳಿಸಿಕೊಡುತ್ತಿದ್ದಾರೆ ಏಕೆಂದರೆ ತಂದೆಯು ಜ್ಞಾನ ಸಾಗರನಾಗಿದ್ದಾರೆ. ಯಾವ ತಂದೆ? ಶಿವ ಬಾಬಾ. ಬ್ರಹ್ಮಾ ಬಾಬಾರಿಗೆ ಜ್ಞಾನದ ಸಾಗರನೆಂದು ಹೇಳುವುದಿಲ್ಲ. ಶಿವ ತಂದೆಗೇ ಪರಮಪಿತ ಪರಮಾತ್ಮನೆಂದು ಕರೆಯಲಾಗುತ್ತದೆ. ಒಬ್ಬರ ಲೌಕಿಕ ಶರೀರದ ತಂದೆ, ಮತ್ತೊಬ್ಬರು ಪಾರಲೌಕಿಕ ತಂದೆ. ಅವರು ಶರೀರದ ತಂದೆ, ಇವರು ಆತ್ಮದ ತಂದೆ. ಇದನ್ನು ಬಹಳ ಚೆನ್ನಾಗಿ ತಿಳಿಸಿಕೊಡುವ ಮಾತಾಗಿದೆ. ಈ ಜ್ಞಾನವನ್ನು ತಿಳಿಸಿ ಕೊಡುವವರು ಜ್ಞಾನ ಸಾಗರನಾಗಿದ್ದಾರೆ. ಹೇಗೆ ಭಗವಂತ ಸರ್ವರಿಗೂ ಒಬ್ಬರೇ ಆಗಿದ್ದಾರೆ ಹಾಗೆಯೇ ಜ್ಞಾನವನ್ನೂ ಸಹ ಒಬ್ಬರೇ ಕೊಡಲು ಸಾಧ್ಯವಿದೆ. ಯಾರು ಶಾಸ್ತ್ರ ಮುಂತಾದುವುಗಳನ್ನು ಓದುತ್ತಾರೆ, ಭಕ್ತಿಯನ್ನು ಮಾಡುತ್ತಾರೆ ಅದು ಯಾವುದೇ ಜ್ಞಾನವಲ್ಲ. ಅವರಿಗೆ ಜ್ಞಾನದ ಮಳೆಯು ಸುರಿಯುವುದಿಲ್ಲ. ಆದ್ದರಿಂದ ಭಾರತ ಖಂಡಿತವಾಗಿಯೂ ಸುಖಿ ಭಾರತವೆಂದು ಹೇಳಲಾಗುತ್ತದೆ. ಭಾರತವು ಈಗ ಕಂಗಾಲಾಗಿದೆ. ಹೇಗೆ ಆ ಮಳೆಯು ಬೀಳಲಿಲ್ಲವೆಂದರೆ ಜಮೀನು ಮುಂತಾದುವೆಲ್ಲವೂ ಒಣಗಿ ಹೋಗುತ್ತದೆ, ಅದು ಭಕ್ತಿ ಮಾರ್ಗವಾಗಿದೆ, ಜ್ಞಾನ ಮಾರ್ಗವೆಂದು ಕರೆಯುವುದಿಲ್ಲ. ಜ್ಞಾನದಿಂದ ಸ್ವರ್ಗವು ಸ್ಥಾಪನೆಯಾಗುತ್ತದೆ. ಅಲ್ಲಿ ಯಾವಾಗಲೂ ಭೂಮಿಯು ಹಚ್ಚ ಹಸಿರಿನಿಂದ ಕೂಡಿರುತ್ತದೆ, ಎಂದೂ ಒಣಗುವುದಿಲ್ಲ. ಇದು ಜ್ಞಾನದ ವಿದ್ಯೆಯಾಗಿದೆ. ಈಶ್ವರ ತಂದೆಯು ಜ್ಞಾನವನ್ನು ಕೊಟ್ಟು ದೈವೀ ಸಂಪ್ರದಾಯದವರನ್ನಾಗಿ ಮಾಡುತ್ತಾರೆ. ನಾನು ನೀವೆಲ್ಲಾ ಆತ್ಮರ ತಂದೆಯಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ ಆದರೆ ನನ್ನನ್ನು ಮತ್ತು ನನ್ನ ಕರ್ತವ್ಯವನ್ನು ತಿಳಿದುಕೊಳ್ಳದೇ ಇರುವ ಕಾರಣ ಮನುಷ್ಯರು ಇಷ್ಟೊಂದು ಪತಿತ, ದುಃಖಿ, ಅನಾಥರಾಗಿ ಬಿಟ್ಟಿದ್ದಾರೆ. ಪರಸ್ಪರದಲ್ಲಿ ಜಗಳವಾಡುತ್ತಿರುತ್ತಾರೆ. ಮನೆಯಲ್ಲಿ ತಂದೆಯಿಲ್ಲದಿದ್ದರೆ ಮಕ್ಕಳು ಹೊಡೆದಾಡುತ್ತಿದ್ದರೆ ನಿಮ್ಮ ತಂದೆಯಿಲ್ಲವೇನು? ಎಂದು ಕೇಳುತ್ತಾರಲ್ಲವೆ. ಈ ಸಮಯದಲ್ಲಿಯೂ ಸಹ ಇಡೀ ಪ್ರಪಂಚ ತಂದೆಯನ್ನು ತಿಳಿದುಕೊಂಡಿಲ್ಲ. ತಿಳಿದುಕೊಳ್ಳದೇ ಇರುವ ಕಾರಣ ಇಷ್ಟೊಂದು ದುರ್ಗತಿಯಾಗಿದೆ. ತಿಳಿದುಕೊಳ್ಳುವುದರಿಂದ ಸದ್ಗತಿಯಾಗುತ್ತದೆ. ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆ, ಅವರಿಗೆ ತಂದೆಯೆಂದು ಕರೆಯಲಾಗುತ್ತದೆ. ಅವರ ಹೆಸರು ಶಿವ ಎಂದಾಗಿದೆ. ಅವರ ಹೆಸರು ಎಂದೂ ಸಹ ಬದಲಾಗಲು ಸಾಧ್ಯವಿಲ್ಲ. ಹೇಗೆ ಸನ್ಯಾಸಿಗಳಾಗುತ್ತಾರೆಂದರೆ ಅವರ ಹೆಸರು ಬದಲಾಗುತ್ತದೆಯಲ್ಲವೆ! ವಿವಾಹದಲ್ಲಿಯೂ ಸಹ ಕುಮಾರಿಯರ ಹೆಸರನ್ನು ಬದಲಾವಣೆ ಮಾಡುತ್ತಾರೆ. ಇದೆಲ್ಲವೂ ಭಾರತದಲ್ಲಿನ ಪದ್ಧತಿಗಳಾಗಿವೆ. ಹೊರಗಡೆ ಈ ರೀತಿಯಿರುವುದಿಲ್ಲ. ಶಿವ ತಂದೆಯು ಎಲ್ಲರ ತಾಯಿ-ತಂದೆಯಾಗಿದ್ದಾರೆ. ನೀನೇ ತಾಯಿ-ತಂದೆ....... ಎಂದು ಭಾರತ ದೇಶದಲ್ಲಿಯೇ ಹಾಡುತ್ತಾರೆ. ನಿಮ್ಮ ಕೃಪೆಯಿಂದ ಅಪಾರ ಸುಖವಿದೆ ಎಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿ ಭಗವಂತ ಕೃಪೆ ಮಾಡುತ್ತಾ ಬಂದಿದ್ದಾರೆ ಎಂದು ತಿಳಿಯುತ್ತಾರೆ. ಭಕ್ತಿಮಾರ್ಗದಲ್ಲಿ ಅಪಾರ ಸುಖವಿರುವುದಿಲ್ಲ. ಸ್ವರ್ಗದಲ್ಲಿ ಬಹಳ ಸುಖವಿರುತ್ತದೆ ಎಂಬುದು ಮಕ್ಕಳಿಗೆ ತಿಳಿದಿದೆ. ಅದು ಹೊಸ ಜಗತ್ತು, ಹಳೆಯ ಪ್ರಪಂಚದಲ್ಲಿ ದುಃಖವೇ ಇರುತ್ತದೆ. ಯಾರು ಜೀವಿಸಿದ್ದಂತೆಯೇ ಸಂಪೂರ್ಣ ಸತ್ತು ಹೋಗಿರುತ್ತಾರೆಯೋ ಅವರ ಹೆಸರನ್ನು ಬದಲಾಯಿಸುತ್ತಿಲ್ಲ ಒಂದುವೇಳೆ ಮಾಯೆಯು ಜಯ ಗಳಿಸಿದರೆ ಅವರು ಬ್ರಾಹ್ಮಣರಿಗೆ ಬದಲಾಗಿ ಶೂದ್ರರಾಗಿ ಬಿಡುತ್ತಾರೆ ಆದ್ದರಿಂದ ತಂದೆಯು ಹೆಸರುಗಳನ್ನಿಡುವುದಿಲ್ಲ. ಬ್ರಾಹ್ಮಣರ ಮಾಲೆಯಂತೂ ಇರುವುದಿಲ್ಲ. ನೀವು ಮಕ್ಕಳು ಸರ್ವೋತ್ತಮ ಕುಲದವರಾಗಿದ್ದೀರಿ, ಶ್ರೇಷ್ಠ ಆತ್ಮೀಯ ಸೇವೆಯನ್ನು ಮಾಡುತ್ತಿರುತ್ತೀರಿ. ಇಲ್ಲಿ ಕುಳಿತಿರುತ್ತಾ ಅಥವಾ ನಡೆದಾಡುತ್ತಾ-ತಿರುಗಾಡುತ್ತಲೂ ಭಾರತ ಹಾಗೂ ಇಡೀ ವಿಶ್ವದ ಸೇವೆಯನ್ನು ಮಾಡುತ್ತೀರಿ. ವಿಶ್ವವನ್ನು ನೀವು ಪವಿತ್ರವನ್ನಾಗಿ ಮಾಡುತ್ತೀರಿ. ನೀವು ತಂದೆಗೆ ಸಹಯೋಗಿಗಳಾಗಿದ್ದೀರಿ. ತಂದೆಯ ಶ್ರೀಮತದಂತೆ ನಡೆದು ಸಹಾಯ ಮಾಡುತ್ತೀರಿ. ಈ ಭಾರತವೇ ಪಾವನವಾಗಲಿದೆ. ಕಲ್ಪ-ಕಲ್ಪವೂ ಈ ಭಾರತವನ್ನು ಪವಿತ್ರವನ್ನಾಗಿ ಮಾಡಿ. ಪವಿತ್ರ ಭಾರತದ ಮೇಲೆ ರಾಜ್ಯವನ್ನು ಮಾಡುತ್ತೀರಿ. ಬ್ರಾಹ್ಮಣರಿಂದ ಮತ್ತೆ ನಾವೇ ಭವಿಷ್ಯದಲ್ಲಿ ದೇವಿ-ದೇವತೆಗಳಾಗುತ್ತೇವೆ. ವಿರಾಟ ರೂಪದ ಚಿತ್ರವೂ ಸಹ ಇದೆ. ಪ್ರಜಾಪಿತ ಬ್ರಹ್ಮಾನ ಮಕ್ಕಳು ಬ್ರಾಹ್ಮಣರಾಗಿದ್ದೀರಿ. ಪ್ರಜಾಪಿತ ಬ್ರಹ್ಮಾನು ಸಮ್ಮುಖದಲ್ಲಿದ್ದಾಗಲೇ ನೀವು ಬ್ರಾಹ್ಮಣರಾಗುತ್ತೀರಿ. ನೀವು ಪ್ರತಿಯೊಬ್ಬರೂ ಪ್ರಜಾಪಿತ ಬ್ರಹ್ಮಾನ ಸಂತಾನರೆಂದು ತಮ್ಮನ್ನು ತಿಳಿದುಕೊಂಡಿದ್ದೀರಿ. ಇದು ಯುಕ್ತಿಯಾಗಿದೆ. ಸಂತಾನರೆಂದು ತಿಳಿದುಕೊಳ್ಳುವುದರಿಂದ ಸಹೋದರ-ಸಹೋದರಿಯಾಗುತ್ತೀರಿ. ಸಹೋದರ-ಸಹೋದರಿಯರಲ್ಲಿ ಎಂದೂ ಸಹ ಕುದೃಷ್ಟಿಯಿರಬಾರದು. ಈಗ ತಂದೆಯು ಆದೇಶವನ್ನು ಹೊರಡಿಸುತ್ತಾರೆ - ನೀವು 63 ಜನ್ಮಗಳು ಪತಿತರಾಗಿದ್ದೀರಿ, ಈಗ ಪಾವನ ಪ್ರಪಂಚ, ಸ್ವರ್ಗದಲ್ಲಿ ಹೋಗಲು ಬಯಸುತ್ತೀರೆಂದರೆ ಪಾವನರಾಗಿ. ಅಲ್ಲಿಗೆ ಪತಿತ ಮನುಷ್ಯರು ಹೋಗಲು ಸಾಧ್ಯವಿಲ್ಲ ಆದ್ದರಿಂದಲೇ ನೀವು ಬೇಹದ್ದಿನ ತಂದೆಯಾದ ನನ್ನನ್ನು ಕರೆಯುತ್ತೀರಿ. ಈ ಆತ್ಮವು ಶರೀರದ ಮೂಲಕ ಮಾತನಾಡುತ್ತದೆ. ಶಿವ ತಂದೆಯೂ ಸಹ ನಾನು ಈ ಶರೀರದ ಮೂಲಕ ಮಾತನಾಡುತ್ತೇನೆಂದು ಹೇಳುತ್ತಾರೆ. ಇಲ್ಲದಿದ್ದರೆ ನಾನು ಹೇಗೆ ಇಲ್ಲಿಗೆ ಬರಲಿ, ನನ್ನದು ದಿವ್ಯ ಜನ್ಮವಾಗಿದೆ. ಸತ್ಯಯುಗದಲ್ಲಿ ದೈವೀ ಗುಣವುಳ್ಳ ದೇವಿ-ದೇವತೆಗಳಿರುತ್ತಾರೆ. ಈ ಸಮಯದಲ್ಲಿ ಅಸುರೀ ಗುಣವುಳ್ಳ ಮನುಷ್ಯರಿದ್ದಾರೆ. ಇಲ್ಲಿನ ಮನುಷ್ಯರನ್ನು ದೇವತೆಗಳೆಂದು ಹೇಳುವುದಿಲ್ಲ. ಇಲ್ಲಿ ಭಲೆ ಯಾರೇ ಆಗಿರಲಿ, ಬಹಳ ದೊಡ್ಡ-ದೊಡ್ಡ ಹೆಸರುಗಳನ್ನಿಟ್ಟುಕೊಂಡಿರುತ್ತಾರೆ. ಸನ್ಯಾಸಿಗಳು ತಮ್ಮನ್ನು ಶ್ರೀ ಶ್ರೀ ಎಂದು ಹೇಳುತ್ತಿರುತ್ತಾರೆ, ಮನುಷ್ಯರಿಗೆ ಕೇವಲ ಶ್ರೀ ಎಂದು ಹೇಳುತ್ತಾರೆ ಏಕೆಂದರೆ ತಾವು ಪವಿತ್ರರಾಗಿದ್ದಾರೆಂದು ತಿಳಿದಿರುವ ಕಾರಣ ಶ್ರೀ ಶ್ರೀ ಎಂದು ಹೇಳಿಕೊಳ್ಳುತ್ತಾರೆ. ಅವರೂ ಮನುಷ್ಯರೆ, ವಿಕಾರದಲ್ಲಿ ಹೋಗುವುದಿಲ್ಲ ಆದರೆ ವಿಕಾರಿ ಪ್ರಪಂಚದಲ್ಲಿಯೇ ಇರುತ್ತಾರಲ್ಲವೆ. ನೀವು ಭವಿಷ್ಯದಲ್ಲಿ ನಿರ್ವಿಕಾರಿ, ದೈವೀ ರಾಜ್ಯದಲ್ಲಿ ರಾಜ್ಯ ಮಾಡುತ್ತೀರಿ. ಅಲ್ಲಿಯೂ ಸಹ ಮನುಷ್ಯರೇ ಇರುತ್ತಾರೆ ಆದರೆ ದೈವೀ ಗುಣವುಳ್ಳವರಿರುತ್ತಾರೆ. ಈ ಸಮಯದಲ್ಲಿ ಮನುಷ್ಯರು ಆಸುರೀ ಗುಣವುಳ್ಳ ಮನುಷ್ಯರಾಗಿರುತ್ತಾರೆ. ಗುರುನಾನಕರೂ ಸಹ ಕೊಳಕಾದ ಬಟ್ಟೆಯನ್ನು ತೊಳೆದರು........ ಎಂದು ಹೇಳಿದ್ದಾರೆ. ಗುರುನಾನಕರೂ ಸಹ ತಂದೆಯ ಮಹಿಮೆಯನ್ನು ಮಾಡುತ್ತಾರೆ.

ಈಗ ತಂದೆಯು ಸ್ಥಾಪನೆ ಮತ್ತು ವಿನಾಶವನ್ನು ಮಾಡಿಸಲು ಬಂದಿದ್ದಾರೆ. ಅನ್ಯ ಧರ್ಮ ಸ್ಥಾಪಕರುಗಳು ಕೇವಲ ಧರ್ಮ ಸ್ಥಾಪನೆಯನ್ನು ಮಾಡುತ್ತಾರೆ ಮತ್ತು ಅನೇಕ ಧರ್ಮಗಳ ವಿನಾಶವನ್ನೇನು ಮಾಡುವುದಿಲ್ಲ. ಅವರದು ವೃದ್ಧಿಯಾಗುತ್ತಾ ಹೋಗುತ್ತದೆ, ಈಗ ತಂದೆಯು ವೃದ್ಧಿಯಾಗುವುದನ್ನು ನಿಲ್ಲಿಸಿ ಬಿಡುತ್ತಾರೆ. ಒಂದು ಧರ್ಮದ ಸ್ಥಾಪನೆ ಮತ್ತು ಅನೇಕ ಧರ್ಮಗಳ ವಿನಾಶವನ್ನು ಮಾಡಿಸುತ್ತಾರೆ. ಡ್ರಾಮಾನುಸಾರ ಇದು ಆಗಲೇಬೇಕಾಗಿದೆ. ನಾನು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಮಾಡಿಸುತ್ತೇನೆ. ಅದಕ್ಕಾಗಿಯೇ ನಿಮಗೆ ಓದಿಸುತ್ತಾ ಇದ್ದೇನೆ ಎಂದು ತಂದೆಯು ಹೇಳುತ್ತಾರೆ. ಸತ್ಯಯುಗದಲ್ಲಿ ಅನೇಕ ಧರ್ಮಗಳು ಇರುವುದೇ ಇಲ್ಲ. ನಾಟಕದಲ್ಲಿ ಇವರೆಲ್ಲರೂ ಮರಳಿ ಹೋಗುವುದು ನೊಂದಣಿಯಾಗಿದೆ. ಈ ವಿನಾಶವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ವಿಶ್ವದಲ್ಲಿ ಶಾಂತಿಯು ವಿನಾಶದ ನಂತರವೇ ನೆಲೆಸುತ್ತದೆ. ಈ ಯುದ್ಧದ ನಂತರವೇ ಸ್ವರ್ಗದ ದ್ವಾರ ತೆರೆಯುತ್ತದೆ. ಈ ಮಹಾಭಾರಿ ಯುದ್ಧವು ಕಲ್ಪದ ಹಿಂದೆಯೂ ನಡೆದಿತ್ತೆಂದು ನೀವು ಬರೆಯಬಹುದಾಗಿದೆ. ನೀವು ಪ್ರದರ್ಶನದ ಉದ್ಘಾಟನೆಯನ್ನು ಮಾಡಿಸುತ್ತೀರೆಂದರೆ ಬರೆಯಿರಿ - ತಂದೆಯು ಪರಮಧಾಮದಿಂದ ಸ್ವರ್ಗದ ಉದ್ಘಾಟನೆಯನ್ನು ಮಾಡಲು ಬಂದಿದ್ದಾರೆ. ಆ ತಂದೆಯು ತಿಳಿಸುತ್ತಾರೆ - ನಾನು ಸ್ವರ್ಗದ ರಚಯಿತ ತಂದೆಯು ಸ್ವರ್ಗದ ಉದ್ಘಾಟನೆಯನ್ನು ಮಾಡಲು ಬಂದಿದ್ದೇನೆ. ಸ್ವರ್ಗವಾಸಿಗಳನ್ನಾಗಿ ಮಾಡಲು ಮಕ್ಕಳ ಸಹಾಯವನ್ನೇ ತೆಗೆದುಕೊಳ್ಳುತ್ತೇನೆ. ಇಷ್ಟೆಲ್ಲಾ ಆತ್ಮಗಳನ್ನು ಪಾವನರನ್ನಾಗಿ ಯಾರು ಮಾಡುತ್ತಾರೆ? ಅನೇಕ ಆತ್ಮಗಳಿದ್ದಾರೆ, ಮನೆ-ಮನೆಯಲ್ಲಿ ನೀವು ತಿಳಿಸಿಕೊಡಬಹುದಾಗಿದೆ. ಭಾರತವಾಸಿಗಳೇ ನೀವು ಸತೋಪ್ರಧಾನರಾಗಿದ್ದಿರಿ, ಅನೇಕ ಜನ್ಮಗಳ ನಂತರ ತಮೋಪ್ರಧಾನರಾಗಿದ್ದೀರಿ, ಈಗ ಮತ್ತೆ ಸತೋಪ್ರಧಾನರಾಗಿ. ಮನ್ಮನಾಭವ. ನಾವು ಶಾಸ್ತ್ರಗಳನ್ನು ಒಪ್ಪುವುದಿಲ್ಲವೆಂದು ಎಂದೂ ಅನ್ಯರಿಗೆ ಹೇಳಬೇಡಿ. ಶಾಸ್ತ್ರಗಳನ್ನು, ಭಕ್ತಿಮಾರ್ಗವನ್ನು ನಾವು ಒಪ್ಪುತ್ತಿದ್ದೆವು ಆದರೆ ಈಗ ಭಕ್ತಿಮಾರ್ಗದ ರಾತ್ರಿ ಪೂರ್ಣವಾಗಿದೆ ಎಂದು ಹೇಳಿ. ಜ್ಞಾನದಿಂದ ಹಗಲು ಪ್ರಾರಂಭವಾಗುತ್ತದೆ. ತಂದೆಯು ಸದ್ಗತಿಯನ್ನು ಮಾಡಲು ಬಂದಿದ್ದಾರೆ. ಇದನ್ನು ತಿಳಿಸಿಕೊಡಲು ಬಹಳ ಯುಕ್ತಿ ಬೇಕು. ಕೆಲವರು ಇದನ್ನು ಚೆನ್ನಾಗಿ ಧಾರಣೆ ಮಾಡುತ್ತಾರೆ, ಕೆಲವರು ಕಡಿಮೆ ಮಾಡುತ್ತಾರೆ. ಪ್ರದರ್ಶನದಲ್ಲಿಯೂ ಸಹ ಯಾರು ಒಳ್ಳೊಳ್ಳೆಯ ಮಕ್ಕಳು ಇದ್ದಾರೆ ಅವರು ಚೆನ್ನಾಗಿ ತಿಳಿಸಿಕೊಡುತ್ತಾರೆ. ಹೇಗೆ ತಂದೆಯು ಶಿಕ್ಷಕನಾಗಿದ್ದಾರೆಂದರೆ ಮಕ್ಕಳು ಸಹ ಶಿಕ್ಷಕರಾಗಬೇಕು. ಸದ್ಗುರುವು ಮೇಲೆತ್ತುತ್ತಾರೆಂಬ ಗಾಯನವೂ ಇದೆ. ಸತ್ಯಖಂಡವನ್ನು ಸ್ಥಾಪನೆ ಮಾಡುವವರು ಸತ್ಯ ತಂದೆಯಾಗಿದ್ದಾರೆಂದು ಹೇಳಲಾಗುತ್ತದೆ. ಅಸತ್ಯ ಪ್ರಪಂಚವನ್ನು ಸ್ಥಾಪನೆ ಮಾಡುವವನು ರಾವಣನಾಗಿದ್ದಾನೆ. ಸದ್ಗತಿಯನ್ನು ಮಾಡುವಂತಹವರು ಸಿಕ್ಕಿದ್ದಾರೆ ಅಂದಮೇಲೆ ಮತ್ತೆ ಭಕ್ತಿಯನ್ನು ಏಕೆ ಮಾಡುವುದು? ಭಕ್ತಿಯನ್ನು ಕಲಿಸುವಂತಹವರು ಅನೇಕ ಗುರುಗಳಿದ್ದಾರೆ ಆದರೆ ಸದ್ಗುರುವಂತೂ ಒಬ್ಬರೇ ಆಗಿದ್ದಾರೆ. ಸದ್ಗುರು ಅಕಾಲ್......... ಎಂದೂ ಸಹ ಹೇಳುತ್ತಾರೆ, ಆದರೂ ಅನೇಕ ಗುರುಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಸನ್ಯಾಸಿ, ಉದಾಸಿ ಅನೇಕ ಪ್ರಕಾರದ ಗುರುಜನರಿರುತ್ತಾರೆ. ಸಿಖ್ಖ್ ಜನರು ಸದ್ಗುರು ಅಕಾಲ್.... ಎಂದು ತಾವೇ ಹೇಳುತ್ತಾರೆ ಎಂದರೆ ಯಾರನ್ನು ಸಾವು ಕಬಳಿಸುವುದಿಲ್ಲ. ಮನುಷ್ಯರನ್ನು ಕಾಲ (ಮೃತ್ಯು) ಕಬಳಿಸಿ ಬಿಡುತ್ತದೆ. ತಂದೆಯು ಮನ್ಮನಾಭವ ಎಂದು ಹೇಳುತ್ತಾರೆ. ಸಾಹೇಬನನ್ನು ಜಪಿಸಿದರೆ ಸುಖ ಸಿಗುತ್ತದೆ...... ಎಂಬುದು ಮುಖ್ಯ ಎರಡು ಶಬ್ಧಗಳಾಗಿವೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ - ಸಾಹೇಬನನ್ನು ಜಪಿಸಿ. ಸಾಹೇಬನಂತೂ ಒಬ್ಬರೇ ಇದ್ದಾರೆ. ಗುರುನಾನಕರೂ ಸಹ ಅವರ ಕಡೆಯೇ ಕೈಯನ್ನು ತೋರಿಸಿ ಅವರನ್ನು ಜಪಿಸಿ ಎಂದು ಸೂಚಿಸಿದ್ದಾರೆ. ವಾಸ್ತವದಲ್ಲಿ ನೀವು ಜಪಿಸಬೇಕಾಗಿಲ್ಲ, ನೆನಪು ಮಾಡಬೇಕು. ಇದು ಅಜಪಾಜಪವಾಗಿದೆ. ಬಾಯಿಂದ ಏನನ್ನೂ ಹೇಳಬೇಡಿ. ಶಿವ-ಶಿವ ಎಂದೂ ಸಹ ಜಪಿಸುವುದೂ ಬೇಡ. ನೀವು ಶಾಂತಿಧಾಮದಲ್ಲಿ ಹೋಗಬೇಕು. ಈಗ ತಂದೆಯನ್ನು ನೆನಪು ಮಾಡಿ. ಅಜಪಾಜಪ ಒಂದೇ ಆಗಿದೆ ಅದನ್ನು ತಂದೆಯು ಕಲಿಸಿಕೊಡುತ್ತಾರೆ. ಅವರು ಎಷ್ಟೊಂದು ಗಂಟೆಗಳನ್ನು ಬಾರಿಸುತ್ತಾರೆ, ಶಬ್ಧ ಮಾಡುತ್ತಾರೆ, ಮಹಿಮೆ ಮಾಡುತ್ತಾರೆ. ಅಚ್ಯುತಂ, ಕೇಶವಂ....... ಎಂದು ಹಾಡುತ್ತಾರೆ ಆದರೆ ಒಂದು ಅಕ್ಷರವನ್ನೂ ಸಹ ತಿಳಿದುಕೊಂಡಿಲ್ಲ. ಸುಖವನ್ನು ಕೊಡುವಂತಹವರು ಒಬ್ಬರೇ ತಂದೆಯಾಗಿದ್ದಾರೆ. ವ್ಯಾಸನೆಂದೂ ಸಹ ಅವರಿಗೆ ಹೇಳಲಾಗುತ್ತದೆ. ಅವರಲ್ಲಿರುವ ಜ್ಞಾನವನ್ನು ಕೊಡುತ್ತಾರೆ, ಸುಖವನ್ನೂ ಸಹ ಅವರೇ ಕೊಡುತ್ತಾರೆ. ಈಗ ನಮ್ಮದು ಏರುವ ಕಲೆಯಾಗಿದೆ ಎಂದು ಮಕ್ಕಳು ತಿಳಿದುಕೊಂಡಿದ್ದೀರಿ. ಏಣಿಯಲ್ಲಿ ಕಲೆಯನ್ನೂ ಸಹ ತೋರಿಸಿದ್ದಾರೆ. ಈ ಸಮಯದಲ್ಲಿ ಯಾವುದೇ ಕಲೆಯಿಲ್ಲ. ನಾನು ನಿರ್ಗುಣಿ, ನನ್ನಲ್ಲಿ ಯಾವುದೇ ಕಲೆಯಿಲ್ಲ....... ಒಂದು ನಿರ್ಗುಣ ಸಂಸ್ಥೆಯೂ ಸಹ ಇದೆ. ಬಾಲಕರು ಮಹಾತ್ಮನ ಸಮಾನ ಎಂದು ಹೇಳಲಾಗುತ್ತದೆ. ಅವರಲ್ಲಿ ಯಾವುದೇ ಅವಗುಣವಿರುವುದಿಲ್ಲ. ಅವರ ಹೆಸರನ್ನು ನಿರ್ಗುಣ ಬಾಲಕನೆಂದು ಇಟ್ಟು ಬಿಡುತ್ತಾರೆ. ಒಂದುವೇಳೆ ಬಾಲಕನಲ್ಲಿ ಗುಣವಿಲ್ಲವೆಂದರೆ ತಂದೆಯಲ್ಲಿಯೂ ಸಹ ಇರುವುದಿಲ್ಲ. ಮತ್ತೊಂದು ಅವಗುಣ ವಿಷಯ ಸಾಗರದಲ್ಲಿ ಮುಳುಗುವುದು. ಅರ್ಧಕಲ್ಪ ನೀವು ಮುಳುಗುತ್ತಲೇ ಬಂದಿದ್ದೀರೆಂದು ತಂದೆಯು ಹೇಳುತ್ತಾರೆ. ಈಗ ಜ್ಞಾನ ಸಾಗರ ತಂದೆಯು ನಿಮ್ಮನ್ನು ಕ್ಷೀರ ಸಾಗರದಲ್ಲಿ ಕರೆದುಕೊಂಡು ಹೋಗುತ್ತೇನೆ. ನಾನು ಕ್ಷೀರ ಸಾಗರದಲ್ಲಿ ಹೋಗಲು ನಿಮಗೆ ಶಿಕ್ಷಣವನ್ನು ಕೊಡುತ್ತೇನೆ. ಇವರ ಆತ್ಮದ ಪಕ್ಕದಲ್ಲಿಯೇ ನಾನು ಬಂದು ಕುಳಿತುಕೊಳ್ಳುತ್ತೇನೆ. ನಾನು ಸ್ವತಂತ್ರನಾಗಿದ್ದೇನೆ. ನಾನು ಎಲ್ಲಿಗೆ ಬೇಕಾದರೂ ಹೋಗಿ ಬರಲು ಸಾಧ್ಯವಿದೆ. ನೀವು ಪಿತೃಗಳಿಗೆ ತಿನ್ನಿಸುತ್ತೀರೆಂದರೆ ಆತ್ಮನಿಗೆ ತಿನ್ನಿಸುತ್ತೀರಲ್ಲವೆ, ಶರೀರವಂತೂ ಭಸ್ಮವಾಗುತ್ತದೆ. ಅದನ್ನು ನೋಡಲೂ ಸಾಧ್ಯವಿಲ್ಲ. ಇವರ (ಆತ್ಮದ) ಶ್ರಾದ್ಧವೆಂದು ಹೇಳುತ್ತಾರೆ. ಆತ್ಮನನ್ನು ಕರೆಯಲಾಗುತ್ತದೆ - ಇದೂ ಸಹ ಡ್ರಾಮಾದಲ್ಲಿ ಪಾತ್ರವಿದೆ. ಕೆಲವೊಮ್ಮೆ ಬರುತ್ತದೆ, ಕೆಲವೊಮ್ಮೆ ಬರುವುದೇ ಇಲ್ಲ. ಕೆಲವರು ಮಾತನಾಡುತ್ತಾರೆ, ಕೇಳುತ್ತಾರೆ, ಕೆಲವರು ಏನನ್ನೂ ಹೇಳುವುದಿಲ್ಲ. ಇಲ್ಲಿಯೂ ಸಹ ಆತ್ಮನನ್ನು ಕರೆಸಲಾಗುತ್ತದೆ. ಅದು ಬಂದು ಮಾತನಾಡುತ್ತದೆ ಆದರೆ ಇಂತಹ ಜಾಗದಲ್ಲಿ ಜನ್ಮವನ್ನು ತೆಗೆದುಕೊಂಡಿದ್ದೇನೆ. ನಾವು ಬಹಳ ಸುಖಿಯಾಗಿದ್ದೇವೆ, ಒಳ್ಳೆಯ ಮನೆಯಲ್ಲಿ ಜನ್ಮವನ್ನು ತೆಗೆದುಕೊಂಡಿದ್ದೇವೆ ಎಂದು ಕೇವಲ ಇಷ್ಟನ್ನು ಹೇಳುತ್ತಾರೆ. ಒಳ್ಳೆಯ ಜ್ಞಾನವುಳ್ಳ ಮಕ್ಕಳು ಒಳ್ಳೆಯ ಮನೆಯಲ್ಲಿಯೇ ಹೋಗುತ್ತಾರೆ, ಕಡಿಮೆ ಜ್ಞಾನವುಳ್ಳ ಮಕ್ಕಳು ಕಡಿಮೆ ಪದವಿಯನ್ನು ಪಡೆಯುತ್ತಾರೆ, ಸುಖವಂತೂ ಇರುತ್ತದೆ. ರಾಜರಾಗುವುದು ಒಳ್ಳೆಯದೋ, ದಾಸಿಯಾಗುವುದು ಒಳ್ಳೆಯದೋ? ರಾಜರಾಗಬೇಕೆಂದರೆ ವಿದ್ಯೆಯನ್ನು ಓದುವುದರಲ್ಲಿ ತೊಡಗಿ. ಪ್ರಪಂಚವು ಬಹಳ ಕೊಳಕಾಗಿದೆ, ಪ್ರಪಂಚದ ಸಂಗವನ್ನು ಕೆಟ್ಟ ಸಂಗವೆಂದು ಹೇಳಲಾಗುತ್ತದೆ. ಒಂದೇ ಸತ್ಯ ಸಂಗವು ಪಾರು ಮಾಡುತ್ತದೆ, ಉಳಿದೆಲ್ಲವೂ ಮುಳುಗಿಸಿ ಬಿಡುತ್ತದೆ. ತಂದೆಯು ಎಲ್ಲರ ಜನ್ಮ ಪತ್ರಿಯನ್ನು ತಿಳಿದುಕೊಂಡಿದ್ದಾರಲ್ಲವೆ. ಇದು ಪಾಪದ ಪ್ರಪಂಚವಾಗಿದೆ, ಆದ್ದರಿಂದಲೇ ಇಲ್ಲಿಂದ ಎಲ್ಲಿಯಾದರೂ ಕರೆದುಕೊಂಡು ಹೋಗು ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನನ್ನವರಾಗಿ ಮತ್ತು ನನ್ನ ಮತದಂತೆ ನಡೆಯಿರಿ. ಇದು ಬಹಳ ಕೊಳಕು ಪ್ರಪಂಚ, ಅವ್ಯವಹಾರವಿದೆ. ಲಕ್ಷಾಂತರ-ಕೋಟ್ಯಾಂತರ ರೂಪಾಯಿಗಳ ಮೋಸವಾಗುತ್ತದೆ. ತಂದೆಯು ಮಕ್ಕಳನ್ನು ಸ್ವರ್ಗಕ್ಕೆ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ ಅಂದಾಗ ಅಪಾರವಾದ ಖುಷಿಯಾಗಬೇಕಲ್ಲವೆ. ವಾಸ್ತವದಲ್ಲಿ ಇದು ಸತ್ಯವಾದ ಗೀತೆಯಾಗಿದೆ ನಂತರ ಈ ಜ್ಞಾನವು ಪ್ರಾಯಲೋಪವಾಗುತ್ತದೆ. ಈಗ ನಿಮಗೆ ಜ್ಞಾನವಿದೆ, ಮತ್ತೊಂದು ಜನ್ಮವನ್ನು ತೆಗೆದುಕೊಂಡರೆ ಜ್ಞಾನವು ಸಮಾಪ್ತಿಯಾಗಿ ಬಿಡುತ್ತದೆ ನಂತರ ಪ್ರಾಲಬ್ಧ. ನಿಮ್ಮನ್ನು ಪುರುಷೋತ್ತಮರನ್ನಾಗಿ ಮಾಡಲು ತಂದೆಯು ಓದಿಸುತ್ತಾರೆ. ಈಗ ನೀವು ತಂದೆಯನ್ನು ತಿಳಿದುಕೊಂಡಿದ್ದೀರಿ. ಈಗ ಅಮರನಾಥದ ಯಾತ್ರೆಯಿರುತ್ತದೆ, ಅವರಿಗೆ ತಿಳಿಸಿ, ಯಾರನ್ನು ಸೂಕ್ಷ್ಮವತನದಲ್ಲಿ ತೋರಿಸುತ್ತೀರಿ ಅವರು (ಶಂಕರ) ಈ ಸ್ಥೂಲವತನದಲ್ಲಿ ಎಲ್ಲಿಂದ ಬಂದರು? ಬೆಟ್ಟಗಳೆಲ್ಲವೂ ಇಲ್ಲಿಯೇ ಇರುತ್ತದೆಯಲ್ಲವೆ. ಅಲ್ಲಿ ಪತಿತರು ಇರಲು ಹೇಗೆ ಸಾಧ್ಯ? ಯಾರು ಪಾರ್ವತಿಗೆ ಜ್ಞಾನವನ್ನು ಕೊಡುತ್ತಾರೆ. ಮಂಜುಗಡ್ಡೆಯಿಂದ ಲಿಂಗವನ್ನು ಕೈಯಿಂದಲೇ ಮಾಡುತ್ತಾರೆ. ಅದನ್ನು ಎಲ್ಲಿ ಬೇಕಾದರೂ ಮಾಡಬಹುದಾಗಿದೆ. ಮನುಷ್ಯರು ಎಷ್ಟೊಂದು ಪೆಟ್ಟು ತಿನ್ನುತ್ತಾರೆ. ಪಾವನಳಾಗಲು ಶಂಕರನ ಬಳಿ ಪಾರ್ವತಿ ಎಲ್ಲಿಂದ ಬಂದಳು ಎಂಬುದು ತಿಳಿದಿಲ್ಲ. ಶಂಕರ ಪರಮಾತ್ಮನಲ್ಲ, ಅವರು ದೇವತೆಯಾಗಿದ್ದಾರೆ. ಮನುಷ್ಯರಿಗೆ ಎಷ್ಟೊಂದು ತಿಳಿಸಿಕೊಡಲಾಗುತ್ತದೆ ಆದರೂ ಸಹ ತಿಳಿದುಕೊಳ್ಳುವುದಿಲ್ಲ. ಪಾರಸ ಬುದ್ಧಿಯುಳ್ಳವರಾಗಲು ಸಾಧ್ಯವಿಲ್ಲ. ಪ್ರದರ್ಶನಿಯಲ್ಲಿ ಎಷ್ಟು ಜನರು ಬರುತ್ತಾರೆ! ಜ್ಞಾನವು ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ. ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳುತ್ತಾರೆ. ಆಗ ನೀವು ತೆಗೆದುಕೊಳ್ಳಿರಿ ಎಂದು ಹೇಳಿದರೆ ನಮಗೆ ಸಮಯವಿಲ್ಲವೆಂದು ಹೇಳುತ್ತಾರೆ. ಪ್ರದರ್ಶನಿಯಲ್ಲಿ ಈ ಯುದ್ಧಕ್ಕೆ ಮೊದಲೇ ತಂದೆಯು ಸ್ವರ್ಗದ ಉದ್ಘಾಟನೆಯನ್ನು ಮಾಡುತ್ತಿದ್ದಾರೆ ಎಂಬುದನ್ನು ಬರೆಯಬೇಕು. ವಿನಾಶದ ನಂತರ ಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ. ತಂದೆಯು ಪ್ರತಿಯೊಂದು ಚಿತ್ರದಲ್ಲಿ - ಪಾರಲೌಕಿಕ ಪರಮಪಿತ ಪರಮಾತ್ಮ ತ್ರಿಮೂರ್ತಿ ಶಿವ ಭಗವಾನುವಾಚ ಎಂದು ಬರೆಯಿರಿ ಎಂದು ತಂದೆಯು ಈ ಮೊದಲೇ ತಿಳಿಸಿದ್ದರು. ತ್ರಿಮೂರ್ತಿ ಎಂದು ಬರೆಯದಿದ್ದರೆ ಶಿವ ನಿರಾಕಾರನಾಗಿದ್ದಾರೆ, ಅವರು ಹೇಗೆ ಜ್ಞಾನವನ್ನು ಕೊಡುತ್ತಾರೆ ಎಂದು ಕೇಳುತ್ತಾರೆ. ಇವರು ಮೊದಲು ಸುಂದರರಿದ್ದರು, ಕೃಷ್ಣನಾಗಿದ್ದರು ಮತ್ತೆ ಈಗ ಕಪ್ಪಾಗಿ ಮನುಷ್ಯನಾಗಿದ್ದಾರೆ ಎಂದು ತಿಳಿಸಿಕೊಡಲಾಗುತ್ತದೆ. ಈಗ ಮನುಷ್ಯನಿಂದ ನಿಮ್ಮನ್ನು ದೇವತೆಗಳನ್ನಾಗಿ ಮಾಡುತ್ತಾರೆ ಮತ್ತೆ ಚರಿತ್ರೆಯು ಪುನರಾವರ್ತನೆಯಾಗಲಿದೆ. ಮನುಷ್ಯನಿಂದ ದೇವತೆಯನ್ನಾಗಿ ಮಾಡಿದರು...... ಎಂಬ ಗಾಯನವೂ ಸಹ ಇದೆ, ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ಯುಗೇ-ಯುಗೇ ಎಂದು ಹೇಳುವುದು ತಪ್ಪಾಗಿದೆ. ನಾನು ಸಂಗಮದಲ್ಲಿಯೇ ಬಂದು ನಿಮ್ಮನ್ನು ಪುಣ್ಯಾತ್ಮನನ್ನಾಗಿ ಮಾಡುತ್ತೇನೆ ಮತ್ತೆ ರಾವಣನು ನಿಮ್ಮನ್ನು ಪಾಪಾತ್ಮರನ್ನಾಗಿ ಮಾಡುತ್ತಾನೆ. ತಂದೆಯೇ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡುತ್ತಾರೆ. ಇದು ತಿಳಿದುಕೊಳ್ಳುವ ಮಾತಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಸಮಾನ ಶಿಕ್ಷಕರಾಗಬೇಕು, ಬಹಳ ಯುಕ್ತಿಯಿಂದ ಎಲ್ಲರಿಗೂ ಈ ಅಸತ್ಯ ಜಗತ್ತಿನಿಂದ ಹೊರ ತೆಗೆದು ಸತ್ಯ ಖಂಡದಲ್ಲಿ ಹೋಗಲು ಯೋಗ್ಯರನ್ನಾಗಿ ಮಾಡಬೇಕು.

2. ಪ್ರಪಂಚದ ಸಂಗವು ಕೆಟ್ಟ ಸಂಗವಾಗಿದೆ, ಆದ್ದರಿಂದ ಕುಸ್ಸಂಗದಿಂದ ಹೊರ ಬಂದು ಒಂದೇ ಸತ್ಯ ಸಂಗವನ್ನೇ ಮಾಡಬೇಕು. ಶ್ರೇಷ್ಠ ಪದವಿಗಾಗಿ ಈ ವಿದ್ಯೆಯಲ್ಲಿ ತೊಡಗಬೇಕು. ಒಬ್ಬ ತಂದೆಯ ಮತದಂತೆಯೇ ನಡೆಯಬೇಕಾಗಿದೆ.

ವರದಾನ:
ತಮ್ಮದೆಲ್ಲವನ್ನೂ ಸೇವೆಯಲ್ಲಿ ಅರ್ಪಿತ ಮಾಡುವಂತಹ ಗುಪ್ತದಾನಿ ಪುಣ್ಯ ಆತ್ಮ ಭವ.

ಏನೆಲ್ಲಾ ಸೇವೆ ಮಾಡುವಿರಿ ಅದನ್ನು ವಿಶ್ವ ಕಲ್ಯಾಣದ ಕಾರ್ಯಕ್ಕಾಗಿ ಅರ್ಪಣೆ ಮಾಡುತ್ತಾ ಹೋಗಿ. ಹೇಗೆ ಭಕ್ತಿಯಲ್ಲಿ ಗುಪ್ತ ದಾನಿ ಪುಣ್ಯ ಆತ್ಮರಿರುತ್ತಾರೆ ಅವರು ಇದೇ ಸಂಕಲ್ಪ ಮಾಡುತ್ತಾರೆ ಎಲ್ಲರ ಪ್ರತಿ ಒಳ್ಳೆಯದಾಗಲಿ ಎಂದು. ಆ ರೀತಿ ತಮ್ಮ ಪ್ರತಿ ಸಂಕಲ್ಪ ಸೇವೆಯಲ್ಲಿ ಅರ್ಪಿತವಾಗಿರಬೇಕು. ಎಂದೂ ನನ್ನತನದ ಕಾಮನೆ ಇಡಬೇಡಿ. ಎಲ್ಲರ ಪ್ರತಿ ಸೇವೆ ಮಾಡಿ. ಯಾವ ಸೇವೆ ವಿಘ್ನರೂಪವಾಗುತ್ತೆ ಅದನ್ನು ಸತ್ಯವಾದ ಸೇವೆ ಎಂದು ಹೇಳಲಾಗುವುದಿಲ್ಲ ಆದ್ದರಿಂದ ನನ್ನತನವನ್ನು ಬಿಟ್ಟು ಗುಪ್ತ ಮತ್ತು ಸತ್ಯ ಸೇವಾಧಾರಿಯಾಗಿ ಸೇವೆಯಿಂದ ವಿಶ್ವ ಕಲ್ಯಾಣ ಮಾಡುತ್ತಾ ಹೋಗಿ.

ಸ್ಲೋಗನ್:
ಪ್ರತಿ ಮಾತನ್ನೂ ಪ್ರಭು ಅರ್ಪಣೆ ಮಾಡಿಬಿಡಿ ಆಗ ಬರುವಂತಹ ಕಷ್ಟಗಳು ಸಹಜ ಅನುಭವವಾಗುವುದು.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ಆದಿ ಕಾಲ, ಅಮೃತವೇಳೆ ತಮ್ಮ ಹೃದಯದಿಂದ ಪರಮಾತ್ಮನ ಪ್ರೀತಿಯನ್ನು ಸಂಪೂರ್ಣ ರೂಪದಿಂದ ಧಾರಣೆ ಮಾಡಿಕೊಳ್ಳಿ. ಒಂದುವೇಳೆ ಹೃದಯದಲ್ಲಿ ಪರಮಾತ್ಮನ ಪ್ರೀತಿ, ಪರಮಾತ್ಮನ ಶಕ್ತಿಗಳು, ಪರಮಾತ್ಮನ ಜ್ಞಾನ ಪೂರ್ಣವಿದ್ದಾಗ ಎಂದೂ ಮತ್ತು ಯಾರದ್ದೇ ಕಡೆ ಆಕರ್ಷಣೆ ಅಥವಾ ಸ್ನೇಹವಿರಲು ಸಾಧ್ಯವಿಲ್ಲ. ತಂದೆಯಿಂದ ಸತ್ಯ ಪ್ರೀತಿಯಿದೆ ಎಂದಾಗ ಪ್ರೀತಿಯ ಲಕ್ಷಣವಾಗಿದೆ - ಸಮಾನ, ಕರ್ಮಾತೀತ. ಮಾಡಿಸುವವರಾಗಿ ಕರ್ಮ ಮಾಡಿ, ಮಾಡಿಸಿರಿ. ಎಂದೂ ಮನಸ್ಸು-ಬುದ್ಧಿ ಅಥವಾ ಸಂಸ್ಕಾರಗಳ ವಶರಾಗಿ ಯಾವುದೇ ಕರ್ಮವನ್ನು ಮಾಡಬೇಡಿರಿ.