27.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ಕಾಲರ ಕಾಲ ತಂದೆಯು ನಿಮಗೆ ಕಾಲದ ಮೇಲೆ ಜಯವನ್ನು ಪ್ರಾಪ್ತಿ ಮಾಡಿಸಲು ಬಂದಿದ್ದಾರೆ, ಮನ್ಮನಾಭವದ ಮಂತ್ರದಿಂದಲೇ ನೀವು ಕಾಲ (ಮೃತ್ಯು) ದ ಮೇಲೆ ಜಯ ಗಳಿಸುತ್ತೀರಿ”

ಪ್ರಶ್ನೆ:
ಆತ್ಮಿಕ ತಂದೆಯು ನೀವು ಆತ್ಮಿಕ ಯಾತ್ರಿಕರಿಗೆ ಯಾವ ಒಂದು ವಿಶೇಷ ಶಿಕ್ಷಣವನ್ನು ಕೊಡುತ್ತಾರೆ?

ಉತ್ತರ:
ಹೇ ಆತ್ಮಿಕ ಯಾತ್ರಿಕರೇ, ನೀವು ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿರಿ. ರಾವಣನು ಅರ್ಧ ಕಲ್ಪದಿಂದ ನಿಮ್ಮನ್ನು ದೇಹಾಭಿಮಾನಿಗಳನ್ನಾಗಿ ಮಾಡಿದನು, ಈಗ ಆತ್ಮಾಭಿಮಾನಿಯಾಗಿರಿ. ಈ ಆತ್ಮಿಕ ಜ್ಞಾನವನ್ನು ಪರಮ ಆತ್ಮನೇ ನಿಮಗೆ ಕೊಡುತ್ತಾರೆ, ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ.

ಗೀತೆ:
ಓಂ ನಮಃ ಶಿವಾಯ..............

ಓಂ ಶಾಂತಿ.
ಮಕ್ಕಳು ತಮ್ಮ ತಂದೆಯ ಮಹಿಮೆಯನ್ನು ಕೇಳಿದಿರಿ. ಗಾಯನ ಮಾಡಲಾಗುತ್ತದೆ – ಶ್ರೇಷ್ಠಾತಿ ಶ್ರೇಷ್ಠ ಭಗವಂತ ಎಂದು. ಅವರು ಎಲ್ಲಾ ಮಕ್ಕಳ ತಂದೆಯಾಗಿದ್ದಾರೆ. ಯಾರೆಲ್ಲರೂ ಇದ್ದಾರೆಯೋ ಎಲ್ಲರೂ ಪರಸ್ಪರ ಸಹೋದರರಾಗಿದ್ದಾರೆ ಮತ್ತು ಎಲ್ಲರ ತಂದೆಯು ಒಬ್ಬರೇ ಆಗಿದ್ದಾರೆ, ಅವರು ಶಿವ ತಂದೆಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ, ಭಕ್ತಿ ಮಾರ್ಗದಲ್ಲಿ ನಿಮಗೆ ಇಬ್ಬರು ತಂದೆಯರಿರುತ್ತಾರೆ, ಲೌಕಿಕ ತಂದೆ ಮತ್ತು ಪಾರಲೌಕಿಕ ತಂದೆ. ರಚಯಿತನಿಂದ ರಚನೆಗೆ ಆಸ್ತಿಯು ಸಿಗುತ್ತದೆ, ಅದು ಹದ್ದಿನ ಆಸ್ತಿ, ಇದು ಬೇಹದ್ದಿನ ಆಸ್ತಿಯಾಗಿದೆ. ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ, ಅವರಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಅವರು ನಿರಾಕಾರನಾಗಿದ್ದಾರೆ. ಅವರ ಹೆಸರಾಗಿದೆ - ಶಿವ. ಪರಮಪಿತ ಪರಮಾತ್ಮ ಶಿವನೆಂದು ಹೇಳುತ್ತಾರೆ. ಶಿವ ಪರಮಾತ್ಮಾಯ ನಮಃ, ಅವರು ಸರ್ವ ಶ್ರೇಷ್ಠನಾಗಿದ್ದಾರೆ. ನಿಮ್ಮ ಬುದ್ಧಿಯು ನಿರಾಕಾರತಂದೆಯ ಕಡೆ ಹೊರಟು ಹೋಗುತ್ತದೆ. ಅವರು ಪರಮಧಾಮದಲ್ಲಿರುತ್ತಾರೆ, ಎಲ್ಲಿಂದ ನೀವಾತ್ಮರು ಬರುತ್ತೀರಿ. ತಂದೆಯೂ ಸಹ ಅಲ್ಲಿಯೇ ಇರುತ್ತಾರೆ, ಅವರು ಸರ್ವರ ಸದ್ಗತಿ ಮಾಡುವವರಾಗಿದ್ದಾರೆ, ಅದರಲ್ಲಿಯೂ ಭಾರತವು ಪರಮಪಿತ ಪರಮಾತ್ಮನ ಜನ್ಮ ಸ್ಥಳವಾಗಿದೆ. ಶಿವ ಜಯಂತಿಯನ್ನೂ ಇಲ್ಲಿಯೇ ಆಚರಿಸುತ್ತಾರೆ. ಆ ಆತ್ಮಿಕ ತಂದೆಗೇ ಜ್ಞಾನ ಸಾಗರ, ಪತಿತ-ಪಾವನ, ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳಲಾಗುತ್ತದೆ, ಅವರೇ ದುಃಖಹರ್ತ-ಸುಖಕರ್ತನಾಗಿದ್ದಾರೆ - ಇದನ್ನು ಭಾರತವಾಸಿಗಳು ತಿಳಿದುಕೊಂಡಿದ್ದಾರೆ. ಇದು ದುಃಖಧಾಮವಾಗಿದೆ, ಭಾರತವೇ ಸುಖಧಾಮವಾಗಿತ್ತು. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಹೇ ಭಾರತವಾಸಿಗಳೇ, ನೀವು ವಿಶ್ವದ ಮಾಲೀಕರಾಗಿದ್ದಿರಿ, ನಿಮ್ಮದು ಆದಿ ಸನಾತನ ದೇವಿ-ದೇವತಾ ಧರ್ಮವಾಗಿತ್ತು, ದೇವಿ-ದೇವತೆಗಳು ಧರ್ಮ ಶ್ರೇಷ್ಠರು, ಕರ್ಮ ಶ್ರೇಷ್ಠರಾಗಿದ್ದರು, ಈಗ ಧರ್ಮ ಭ್ರಷ್ಠರು-ಕರ್ಮ ಭ್ರಷ್ಟರಾಗಿ ಬಿಟ್ಟಿದ್ದಾರೆ. ತಮ್ಮನ್ನು ಪಾವನ ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಕಲಿಯುಗದ ಅಂತ್ಯದವರೆಗೂ ಭಕ್ತಿ ಮಾರ್ಗವು ನಡೆಯುತ್ತದೆ. ಇದರಲ್ಲಿ ಜ್ಞಾನವಿರುವುದಿಲ್ಲ, ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಸರ್ವರ ಸದ್ಗತಿದಾತ ತಂದೆಯು ಬರುವವರೆಗೂ ಸದ್ಗತಿಯಾಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ, ಈ ಸಮಯದಲ್ಲಿ ಪತಿತ ಪ್ರಪಂಚವಾಗಿದೆ, ಯಾರೊಬ್ಬರೂ ಪಾವನರಿಲ್ಲ. ಭಲೆ ಸನ್ಯಾಸಿಗಳು ಪವಿತ್ರರಾಗುತ್ತಾರೆ ಆದರೆ ಅವರು ಪುನರ್ಜನ್ಮವನ್ನಂತೂ ಇಲ್ಲಿಯೇ ತೆಗೆದುಕೊಳ್ಳಬೇಕಾಗಿದೆ. ವಿಷದಿಂದ ಜನ್ಮ ಪಡೆಯಬೇಕಾಗುತ್ತದೆ. ಹಿಂತಿರುಗಿ ಹೋಗುವಂತಿಲ್ಲ. ಯಾವಾಗ ಚಕ್ರವು ಪೂರ್ಣವಾಗುವುದೋ ಆಗ ತಂದೆಯು ಬಂದು ಕರೆದುಕೊಂಡು ಹೋಗುತ್ತಾರೆ. ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುವುದು. ಪರಮ ಆತ್ಮನೇ ಆತ್ಮಿಕ ಜ್ಞಾನವನ್ನು ಕೊಡುತ್ತಾರೆ, ಅವರೇ ಜ್ಞಾನದ ಸಾಗರ, ಪತಿತ-ಪಾವನನಾಗಿದ್ದಾರೆ, ಬಾಕಿ ಶಾಸ್ತ್ರಗಳ ಜ್ಞಾನವಂತೂ ಭಕ್ತಿಮಾರ್ಗವಾಗಿದೆ. ತಂದೆಯು ತಿಳಿಸುತ್ತಾರೆ - ಯಜ್ಞ, ಜಪ, ತೀರ್ಥ ಯಾತ್ರೆಗಳನ್ನು ಮಾಡುತ್ತಾ ಇನ್ನೂ ಕೆಳಗಿಳಿಯುತ್ತಲೇ ಬಂದಿದ್ದೀರಿ. ನೀವು ಮೊದಲು ಸತೋಪ್ರಧಾನರಾಗಿದ್ದಿರಿ, ಭಾರತದಲ್ಲಿ ಪವಿತ್ರತೆಯಿದ್ದಾಗ ಶಾಂತಿ, ಸುಖವು ಇತ್ತು, ಆರೋಗ್ಯ-ಭಾಗ್ಯ ಎರಡೂ ಇತ್ತು. ಇಂದಿಗೆ 5000 ವರ್ಷಗಳ ಮೊದಲಿನ ಮಾತಾಗಿದೆ, ಈ ಭಾರತವೇ ಸ್ವರ್ಗವಾಗಿತ್ತು, ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ಕೇವಲ ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ಯಾವುದನ್ನು ಪರಮಪಿತ ಪರಮಾತ್ಮನು ಸ್ಥಾಪನೆ ಮಾಡಿದರು. ಸ್ವರ್ಗದ ಸ್ಥಾಪನೆಯನ್ನು ಅವರೇ ಮಾಡುತ್ತಾರೆ, ಮನುಷ್ಯರು ಮಾಡಲು ಸಾಧ್ಯವಿಲ್ಲ. ಕೃಷ್ಣನು ರಚಯಿತನೆಂದು ಹೇಳುವುದಿಲ್ಲ. ರಚಯಿತನು ಒಬ್ಬರೇ ನಿರಾಕಾರ ಶಿವನಾಗಿದ್ದಾರೆ, ಉಳಿದೆಲ್ಲವೂ ಅವರ ರಚನೆಯಾಗಿದೆ. ರಚಯಿತನಿಂದಲೇ ರಚನೆಯ ಆಸ್ತಿಯು ಸಿಗುತ್ತದೆ.

ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ಬೇಹದ್ದಿನ ತಂದೆಯಾಗಿದ್ದೇನೆ, ನಿಮಗೆ ಬೇಹದ್ದಿನ 21 ಜನ್ಮಗಳಿಗಾಗಿ ಬೇಹದ್ದಿನ ಆಸ್ತಿಯನ್ನು ಕೊಡುತ್ತೇನೆ. ಸೂರ್ಯವಂಶಿ, ಚಂದ್ರವಂಶಿ ಪವಿತ್ರ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ, ಬ್ರಾಹ್ಮಣ ಧರ್ಮವು ಶಿಖೆಗೆ ಸಮಾನವಾಗಿದೆ. ಎಲ್ಲರಿಗಿಂತ ಶ್ರೇಷ್ಠರು ಆತ್ಮಿಕ ತಂದೆಯಾಗಿದ್ದಾರೆ, ಆತ್ಮಗಳನ್ನು ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ತಂದೆಯು ಜ್ಞಾನ ಸಾಗರ, ಸುಖದ ಸಾಗರನಾಗಿದ್ದಾರೆ ಆದ್ದರಿಂದ ನಿಮ್ಮನ್ನೂ ಮಾಡುತ್ತಾರೆ. ಭಾರತವೇ ಸುಖಧಾಮವಾಗಿತ್ತು, ಈಗಂತೂ ದುಃಖಧಾಮವಾಗಿದೆ. ತಂದೆಯು ಹೇಗೆ ಬರುತ್ತಾರೆಂಬುದು ಯಾರಿಗೂ ತಿಳಿದಿಲ್ಲ. ಸತ್ಯಯುಗದ ಆದಿಯಿಂದ ಕಲಿಯುಗದ ಅಂತ್ಯದವರೆಗೆ ಇಡೀ ಚರಿತ್ರೆ-ಭೂಗೋಳವು ಭಾರತದ್ದಾಗಿದೆ. ಈ ಲಕ್ಷ್ಮೀ-ನಾರಾಯಣರು ಎಷ್ಟು ಆರೋಗ್ಯವಂತರು, ಐಶ್ವರ್ಯವಂತರು ಆಗಿದ್ದರು! ಎಂದೂ ರೋಗಿಯಾಗುತ್ತಿರಲಿಲ್ಲ, ಈಗ ಕಾಲದ ಮೇಲೆ ವಿಜಯ ಪಡೆಯುವ ಶಿಕ್ಷಣವನ್ನು ಪಡೆಯುತ್ತಿದ್ದೀರಿ. ತಂದೆಗೆ ಕಾಲರ ಕಾಲ ಮಹಾಕಾಲನೆಂದು ಹೇಳಲಾಗುತ್ತದೆ, ಅವರು ನಿಮಗೆ ಕಾಲದ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ಶಿವಾಯ ನಮಃ ಎಂದು ಹೆಸರನ್ನು ಕೇಳಿಸಿಕೊಂಡಿರಿ, ಪರಮಾತ್ಮನು ಸರ್ವವ್ಯಾಪಿಯಾಗಿದ್ದಾರೆ, ಬೆಕ್ಕು-ನಾಯಿಯಲ್ಲಿದ್ದಾರೆಂದು ನೀವು ಎಂದಿಗೂ ಹೇಳುವುದಿಲ್ಲ. ಇದಕ್ಕೆ ಧರ್ಮದ ನಿಂದನೆ ಎಂದು ಹೇಳಲಾಗುತ್ತದೆ. ತಂದೆಯ ನಿಂದನೆ ಮಾಡುತ್ತಾರೆ. ಈಗ ಇದು ಕಲ್ಪದ ಸಂಗಮದ ಸಮಯವಾಗಿದೆ. ಈ ಸಮಯದಲ್ಲಿಯೇ ವಿನಾಶ ಕಾಲೇ ವಿಪರೀತ ಬುದ್ಧಿಯವರು ಎಂದು ಹೇಳಲಾಗುತ್ತದೆ. ಈಗ ವಿನಾಶವು ಸನ್ಮುಖದಲ್ಲಿ ನಿಂತಿದೆ. ಗೀತೆಯಲ್ಲಿಯೂ ಬರೆದಿದ್ದಾರೆ - ಯಾದವರು, ಕೌರವರು, ಪಾಂಡವರು ಏನು ಮಾಡಿ ಹೋದರು.... ಸರ್ವ ಶಾಸ್ತ್ರಮಯಿ ಶಿರೋಮಣಿ ಶ್ರೀಮತ್ಭಗವದ್ಗೀತೆಯಾಗಿದೆ, ಅದರಿಂದಲೇ ಮತ್ತೆಲ್ಲಾ ಶಾಸ್ತ್ರಗಳು ರಚಿಸಲ್ಪಟ್ಟಿವೆ. ನೀವು ತಿಳಿದುಕೊಂಡಿದ್ದೀರಿ - ಗೀತೆಯು ದೇವತಾ ಧರ್ಮದ ಶಾಸ್ತ್ರವಾಗಿದೆ. ತಂದೆಯು ತಿಳಿಸುತ್ತಾರೆ - ನಾವು ನಿಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತೇವೆ, ನಂತರ ದೇವಿ-ದೇವತೆಗಳನ್ನಾಗಿ ಮಾಡುತ್ತೇನೆ. ಮತ್ತೆ ನೀವು ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ನೀವು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ಯಾರು ಮೊಟ್ಟ ಮೊದಲು ಸತ್ಯಯುಗದಲ್ಲಿ ಬರುವರೋ ಅವರೇ ಹೆಚ್ಚು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ನೀವು ಭಾರತವಾಸಿಗಳೇ ಗರಿಷ್ಠ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ಕನಿಷ್ಠ ಒಂದು ಜನ್ಮ. ಇದನ್ನೂ ಸಹ ತಂದೆಯೇ ತಿಳಿಸುತ್ತಾರೆ. ತಂದೆಯ ವಿನಃ ಮತ್ತ್ಯಾರಿಗೂ ಜ್ಞಾನ ಸಾಗರನೆಂದು ಹೇಳಲಾಗುವುದಿಲ್ಲ. ಪತಿತ-ಪಾವನ, ಜ್ಞಾನ ಸಾಗರನೆಂದು ಹೇಳಿದಾಗ ಬುದ್ಧಿಯು ಮೇಲೆ ಹೋಗುತ್ತದೆ. ತಂದೆಯೇ ಎಲ್ಲರನ್ನೂ ಮುಕ್ತ ಮಾಡಿ ವಾಪಸ್ ಕರೆದುಕೊಂಡು ಹೋಗುತ್ತಾರೆ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಮತ್ತೆ ಸರ್ವರ ದುರ್ಗತಿ ಹೇಗಾಗುತ್ತದೆ? ಯಾರು ಮಾಡುತ್ತಾರೆ? ಸತ್ಯಯುಗಕ್ಕೆ ಸದ್ಗತಿಯೆಂದು, ಕಲಿಯುಗಕ್ಕೆ ದುರ್ಗತಿಯೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಬಂದು ನೀವು ಮಕ್ಕಳಿಗೆ ಸದ್ಗತಿ ನೀಡುತ್ತೇನೆ. ನೀವು ಮಕ್ಕಳು ಇಡೀ ವಿಶ್ವದ ಚರಿತ್ರೆ, ಭೂಗೋಳವನ್ನು ಅರಿತುಕೊಂಡಿದ್ದೀರಿ. ಶಾಲೆಯಲ್ಲಂತೂ ಅರ್ಧ ಚರಿತ್ರೆ-ಭೂಗೋಳವನ್ನು ಕಲಿಸುತ್ತಾರೆ. ಸತ್ಯ-ತ್ರೇತಾ ಯುಗದಲ್ಲಿ ಯಾರು ರಾಜ್ಯ ಮಾಡುತ್ತಿದ್ದರು ಎಂದು ಯಾರಿಗೂ ತಿಳಿದಿಲ್ಲ. ಈ ಲಕ್ಷ್ಮೀ-ನಾರಾಯಣರು ರಾಜ್ಯ ಮಾಡುತ್ತಿದ್ದರು ಎಂದು ಚಿತ್ರವಂತೂ ಇದೆ. ಎಷ್ಟು ಸಮಯ ಆ ರಾಜಧಾನಿಯು ನಡೆಯಿತು ಎಂಬುದನ್ನು ನೀವು ತಿಳಿಸಬಲ್ಲಿರಿ. ಕ್ರಿಶ್ಚಿಯನ್ ರಾಜಧಾನಿಯು 2000 ವರ್ಷಗಳು ನಡೆಯಿತು, ಬೌದ್ಧರ ರಾಜ್ಯವು ಇಷ್ಟು ಸಮಯ ನಡೆಯಿತು, ಇಸ್ಲಾಮಿಗಳು.... ಅವರಿಗೂ ಮೊದಲು ಚಂದ್ರವಂಶಿಯರಿದ್ದರು, ಅವರ ರಾಜ್ಯವು 1250 ವರ್ಷ ನಡೆಯಿತು. ಸತ್ಯ-ತ್ರೇತಾಯುಗದಲ್ಲಿ ಸೂರ್ಯವಂಶಿ, ಚಂದ್ರವಂಶಿಯರೇ ಇದ್ದರು, ಮತ್ತ್ಯಾವುದೇ ಧರ್ಮವಿರಲಿಲ್ಲ. ನೀವು ಸೂರ್ಯವಂಶಿ, ಚಂದ್ರವಂಶಿಯರಾಗುತ್ತೀರಿ. ಈಗ ಪುನಃ ಬ್ರಾಹ್ಮಣ ವಂಶಿಯರಾಗಿದ್ದೀರಿ, ಇದೆಲ್ಲಾ ನಾಟಕವು ಭಾರತದ ಮೇಲೆ ಮಾಡಲ್ಪಟ್ಟಿದೆ, ಭಾರತವೇ ಸ್ವರ್ಗ ಮತ್ತು ನರಕವಾಗುತ್ತದೆ. ಅನ್ಯ ಧರ್ಮದವರಿಗಾಗಿ ಹೇಳುವುದಿಲ್ಲ, ಅವರಂತೂ ಸ್ವರ್ಗದಲ್ಲಿ ಇರುವುದೇ ಇಲ್ಲ. ಯಾರಾದರೂ ಶರೀರ ಬಿಟ್ಟರೆ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ ಆದರೆ ತಿಳಿದುಕೊಳ್ಳುವುದಿಲ್ಲ. ನರಕವಾಸಿಗಳಂತೂ ನರಕದಲ್ಲಿಯೇ ಜನ್ಮ ತೆಗೆದುಕೊಳ್ಳಬೇಕಾಗುತ್ತದೆ. ಸ್ವರ್ಗವಾಸಿಗಳು ಸ್ವರ್ಗದಲ್ಲಿಯೇ ಪುನರ್ಜನ್ಮ ತೆಗೆದುಕೊಳ್ಳುತ್ತಾರೆ. ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ- ಈ ಲಕ್ಷ್ಮೀ-ನಾರಾಯಣರು ಸ್ವರ್ಗವಾಸಿಗಳಾಗಿದ್ದರು, ಅವರು ಈ ರಾಜಧಾನಿಯನ್ನು ಹೇಗೆ ಪಡೆದರು, ಲಕ್ಷಾಂತರ ವರ್ಷಗಳ ಮಾತು ನೆನಪಿರಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಈ ಶಾಸ್ತ್ರ ಇತ್ಯಾದಿಗಳಿರುವುದಿಲ್ಲ. ಇದೆಲ್ಲವೂ ಭಕ್ತಿಯ ಸಾಮಗ್ರಿಯಾಗಿದೆ, ಏಣಿಯನ್ನು ಕೆಳಗಿಳಿಯಲೇಬೇಕಾಗಿದೆ. ಸತೋಪ್ರಧಾನರಿಂದ ಸತೋ, ರಜೋ, ತಮೋದಲ್ಲಿ, ಈ ಏಣಿಯನ್ನು ಇಳಿಯುವುದರಲ್ಲಿ 5000 ವರ್ಷಗಳು ಹಿಡಿಸುತ್ತವೆ. ಸತ್ಯಯುಗದಲ್ಲಿ 16 ಕಲಾ ಸಂಪೂರ್ಣರು, ನಂತರ ತ್ರೇತಾದಲ್ಲಿ ಎರಡು ಕಲೆಗಳು ಕಡಿಮೆಯಾಯಿತು, ಆತ್ಮದಲ್ಲಿ ಬೆಳ್ಳಿಯು ಬೆರಕೆಯಾಯಿತು. ದ್ವಾಪರ ಯುಗದಲ್ಲಿ ಬಂದಾಗ ತಾಮ್ರದ ಬೆರಕೆಯಾಯಿತು, ಈ ಸಮಯದಲ್ಲಿ ಸಂಪೂರ್ಣ ತಮೋಪ್ರಧಾನರಾಗಿದ್ದೀರಿ. ಆತ್ಮದಲ್ಲಿಯೇ ತುಕ್ಕು ಬೀಳುತ್ತದೆ. ನೀವೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಆತ್ಮಿಕ ಶಿವ ತಂದೆಯೇ ಬಂದು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ನೀವೀಗ ಆತ್ಮಾಭಿಮಾನಿಗಳಾಗಬೇಕಾಗಿದೆ. ರಾವಣನ ಪ್ರವೇಶತೆ ಆಗುವುದರಿಂದ ಎಲ್ಲರೂ ದೇಹಾಭಿಮಾನಿಗಳಾಗಿ ಬಿಡುತ್ತಾರೆ. ಈಗ ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ. ನಾವೇ 84 ಜನ್ಮಗಳನ್ನು ತೆಗೆದುಕೊಂಡು ಭಿನ್ನ-ಭಿನ್ನ ಪಾತ್ರವನ್ನು ಅಭಿನಯಿಸುತ್ತಾ ಬಂದಿದ್ದೇವೆ. ಈಗ 84 ಜನ್ಮಗಳ ಚಕ್ರವು ಪೂರ್ಣವಾಯಿತು. ಈ ಶರೀರವೂ ಸಹ ಈಗ ಜಡಜಡೀಭೂತವಾಗಿ ಬಿಟ್ಟಿದೆ. ದ್ವಾಪರದಿಂದ ರಾವಣ ರಾಜ್ಯವಾಗುತ್ತದೆ. ಸತ್ಯಯುಗದಲ್ಲಿ ರಾಮ ರಾಜ್ಯವಿರುತ್ತದೆ. ಸತ್ಯಯುಗದಲ್ಲಿ ನೀವು ಆತ್ಮಾಭಿಮಾನಿಯಾಗಿದ್ದಿರಿ, ದ್ವಾಪರ-ಕಲಿಯುಗದಲ್ಲಿ ದೇಹಾಭಿಮಾನಿಗಳಾಗಿ ಬಿಡುತ್ತೀರಿ. ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ಅರಿತುಕೊಂಡಿಲ್ಲ.

ತಂದೆಯು ತಿಳಿಸುತ್ತಾರೆ - ಆತ್ಮವು ಒಂದು ನಕ್ಷತ್ರವಾಗಿದೆ, ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರ... ಅದನ್ನು ದಿವ್ಯ ದೃಷ್ಟಿಯ ವಿನಹ ನೋಡಲು ಸಾಧ್ಯವಿಲ್ಲ, ಅದು ಬಹಳ ಸೂಕ್ಷ್ಮವಾಗಿದೆ. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ನಾವಾತ್ಮರೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ. ಪರಮಪಿತ ಪರಮಾತ್ಮನೂ ಸಹ ಬಿಂದುವಾಗಿದ್ದಾರೆ. ಅವರಿಗೇ ಜ್ಞಾನ ಸಾಗರ, ಪತಿತ-ಪಾವನ, ಜ್ಞಾನ ಪೂರ್ಣನೆಂದು ಹೇಳುತ್ತಾರೆ. ಪರಮಪಿತ ಪರಮಾತ್ಮನಲ್ಲಿ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಬೀಜರೂಪನಾಗಿರುವ ಕಾರಣ ಅವರಿಗೆ ಸತ್ಚಿತ್ ಆನಂದ ಸ್ವರೂಪನೆಂದು ಹೇಳಲಾಗುತ್ತದೆ. ತಂದೆಯಲ್ಲಿ ಯಾವ ಜ್ಞಾನವಿದೆಯೋ ಅದನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ಇದು ಆತ್ಮಿಕ ಜ್ಞಾನವಾಗಿದೆ. ಎಲ್ಲಾ ಆತ್ಮರ ತಂದೆಯು ಬಂದು ಆತ್ಮಗಳಿಗೆ ಓದಿಸುತ್ತಾರೆ. ನೀವು ಆತ್ಮಾಭಿಮಾನಿಗಳಾಗಬೇಕಾಗಿದೆ. ಶಿವ ತಂದೆಯು ನಮಗೆ ಓದಿಸುತ್ತಾರೆ, ಅವರೇ ಜ್ಞಾನಪೂರ್ಣನಾಗಿದ್ದಾರೆ. ತಂದೆಯೇ ಬಂದು ಸ್ವರ್ಗದ ರಚನೆಯನ್ನು ರಚಿಸುತ್ತಾರೆ. ನಿಮ್ಮನ್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ. ಈ ಸೃಷ್ಟಿಚಕ್ರದ ರಹಸ್ಯವನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ, ತಂದೆಯನ್ನೇ ಅರಿತುಕೊಳ್ಳದ ಕಾರಣ ಭಾರತಕ್ಕೆ ಈ ಗತಿಯುಂಟಾಗಿದೆ. ಭಾರತದಲ್ಲಿ ಪವಿತ್ರತೆಯಿದ್ದಾಗ ಸುಖ-ಶಾಂತಿಯಿತ್ತು, ಈಗಂತೂ ನರಕವಾಗಿದೆ ಅಂದಮೇಲೆ ಯಾರಾದರೂ ಸ್ವರ್ಗದಲ್ಲಿ ಹೇಗೆ ಹೋಗಲು ಸಾಧ್ಯ. ಸಂಪೂರ್ಣ ಕಲ್ಲು ಬುದ್ಧಿಯವರಾಗಿ ಬಿಟ್ಟಿದ್ದಾರೆ.

ತಂದೆಯು ತಿಳಿಸುತ್ತಾರೆ - ನಾನು ಮಕ್ಕಳಿಗಾಗಿ ಯಾವುದಾದರೂ ಉಡುಗೊರೆಯನ್ನು ತೆಗೆದುಕೊಂಡು ಬರುತ್ತೇನೆ. ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಯಾರು ಕಲ್ಪದ ಮೊದಲು ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರೇ ಈಗ ತಿಳಿದುಕೊಳ್ಳುತ್ತಾರೆ, ಮನುಷ್ಯರಿಂದ ದೇವತೆಗಳಾಗುತ್ತಾರೆ. ವಾಸ್ತವದಲ್ಲಿ ಪ್ರಜಾಪಿತ ಬ್ರಹ್ಮನಿಗೆ ಎಲ್ಲರೂ ಮಕ್ಕಳಾಗಿದ್ದಾರೆ. ಈಗ ಬ್ರಹ್ಮಾರವರ ಮೂಲಕ ಶಿವ ತಂದೆಯು ರಚನೆಯನ್ನು ರಚಿಸುತ್ತಿದ್ದಾರೆ. ಬ್ರಹ್ಮಾಕುಮಾರ-ಕುಮಾರಿಯರಾಗುತ್ತಾ ಹೋಗುತ್ತಾರೆ. ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ, ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ಎಲ್ಲಾ ವಿಕರ್ಮಗಳು ವಿನಾಶವಾಗುತ್ತವೆ. ಈ ಆತ್ಮಿಕ ಜ್ಞಾನವನ್ನು ತಂದೆಯ ಹೊರತು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಆತ್ಮಿಕ ತಂದೆಯೇ ಆತ್ಮಗಳಿಗೆ ಜ್ಞಾನವನ್ನು ಕೊಡುತ್ತಾರೆ. ನೀವು ಆತ್ಮಿಕ ಯಾತ್ರೆ ಮಾಡುತ್ತೀರಿ, ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಗಳಾಗುತ್ತೀರಿ. ಆತ್ಮವು ಅವಿನಾಶಿಯಾಗಿದೆ, ಆತ್ಮದಲ್ಲಿಯೇ ಪಾತ್ರವು ತುಂಬಿದೆ. ಆತ್ಮವು ಹೇಗೆ 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತದೆ ಎಂದು ಈಗ ಅರ್ಥವಾಗಿದೆ. ನಾವು ಸೂರ್ಯವಂಶಿಯರಾಗಿದ್ದೇವೆ ನಂತರ ಚಂದ್ರವಂಶಿಯರಾದೆವು, ಪುನಃ ನಾವೀಗ ಸೂರ್ಯವಂಶಿಯರಾಗಬೇಕಾಗಿದೆ. ಈಗ ತಂದೆಯು ಸತೋಪ್ರಧಾನರಾಗುವ ಶಿಕ್ಷಣ ಕೊಡುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿರಿ. ಭಗವಾನುವಾಚ - ಗೀತೆಯ ಭಗವಂತನು ಶಿವ ತಂದೆಯಾಗಿದ್ದಾರೆ, ಶ್ರೀಕೃಷ್ಣನಲ್ಲ. ಕೃಷ್ಣನ ಆತ್ಮವೂ ಸಹ ಈಗ ಕಲಿಯುತ್ತಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಆತ್ಮಿಕ ಯಾತ್ರೆಯನ್ನು ಮಾಡಬೇಕು ಹಾಗೂ ಮಾಡಿಸಬೆಕಾಗಿದೆ. ಸ್ವಯಂನ್ನು ಸತೋಪ್ರಧಾನ ಮಾಡಿಕೊಳ್ಳಲು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಆತ್ಮಾಭಿಮಾನಿಯಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.

2. ಕಾಲದ ಮೇಲೆ ವಿಜಯವನ್ನು ಪಡೆಯಲು ತಂದೆಯ ಶಿಕ್ಷಣವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ತನ್ನನ್ನು ಆತ್ಮನೆಂದು ತಿಳಿದು ಆತ್ಮರಿಗೆ ಜ್ಞಾನವನ್ನು ಕೊಡಬೇಕಾಗಿದೆ.

ವರದಾನ:
ಬಾಪ್ದಾದಾರವರ ಕರ್ತವ್ಯವನ್ನು ತಮ್ಮ ಗುರಿಯನ್ನಾಗಿ ಮಾಡಿಕೊಳ್ಳುವಂತಹ ಮಾಸ್ಟರ್ ಮರ್ಯಾದಾ ಪುರುಷೋತ್ತಮ ಭವ.

ತಮ್ಮ ಚಿಂತನೆಯಲ್ಲಿದ್ದರೆ ನಶೆಯೇರುತ್ತದೆ ಎಂದು ಹೇಳಲಾಗುತ್ತದೆ, ಅನ್ಯರ ಸಂಪಾದನೆಯಲ್ಲೆಂದಿಗೂ ಕಣ್ಣು ಹೋಗಬಾರದು (ಆಸೆಯುಂಟಾಗಬಾರದು). ಅನ್ಯರ ನಶೆಯನ್ನು ಗುರಿಯನ್ನಾಗಿ ಮಾಡಿಕೊಳ್ಳುವ ಬದಲು ಬಾಪ್ದಾದಾರವರ ಗುಣ ಹಾಗೂ ಕರ್ತವ್ಯವನ್ನು ಗುರಿಯನ್ನಾಗಿಸಿಕೊಳ್ಳಿರಿ. ಬಾಪ್ದಾದಾರವರ ಜೊತೆ ಅಧರ್ಮದ ವಿನಾಶ ಮತ್ತು ಸತ್ಯ ಧರ್ಮದ ಸ್ಥಾಪನೆಯ ಕರ್ತವ್ಯದಲ್ಲಿ ಸಹಯೋಗಿಯಾಗಿರಿ. ಅಧರ್ಮದ ವಿನಾಶ ಮಾಡುವವರು ಧರ್ಮದ ಕಾರ್ಯ ಅಥವಾ ದೈವೀ ಮರ್ಯಾದೆಯನ್ನು ಮುರಿಯುವ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಅವರು ಮರ್ಯಾದಾ ಪುರುಷೋತ್ತಮರಾಗಿರುತ್ತಾರೆ.

ಸ್ಲೋಗನ್:
ಜ್ಞಾನಪೂರ್ಣರಾಗಿ ವ್ಯರ್ಥ ಪ್ರಶ್ನೆಗಳನ್ನು ಸ್ವಾಹಾ ಮಾಡಿ ಬಿಡುತ್ತೀರೆಂದರೆ ಸಮಯವು ಉಳಿತಾಯವಾಗಿ ಬಿಡುತ್ತದೆ.

ಅವ್ಯಕ್ತ ಸೂಚನೆಗಳು:- ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ.

ಸಮಯ ಪ್ರಮಾಣ ಈಗ ಸದಾ ಅಚಲ ಅಡೋಲ ಸರ್ವ ಖಜಾನೆಗಳಿಂದ ಸಂಪನ್ನರಾಗಿ. ಸ್ವಲ್ಪವೂ ಸಹ ಏರು-ಪೇರು ಆಗುತ್ತೀರಿ ಎಂದರೆ ಸರ್ವ ಖಜಾನೆಗಳ ಅನುಭವ ಆಗುವುದಿಲ್ಲ. ತಂದೆಯ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸದಾ ಖಾಯಂ ಆಗಿ ಇಟ್ಟುಕೊಳ್ಳುವ ಸಾಧನ ಆಗಿದೆ ಸದಾ ಅಚಲ ಅಡೋಲರಾಗಿ ಇರುವುದು. ಅಚಲರಾಗಿರುವುದರಿಂದ ಸದಾ ಖುಷಿಯ ಅನುಭವ ಆಗುತ್ತಾ ಇರುತ್ತದೆ. ಹೇಗೆ ವಿನಾಶಿ ಧನ, ಹೆಸರು - ಮಾನ್ಯತೆ - ಆಡಂಬರ, ಪದವಿ ಇತ್ಯಾದಿಗಳು ಸಿಗುತ್ತದೆ ಎಂದರೆ ಖುಷಿಯಾಗುತ್ತದೆ ಅಲ್ಲವೇ. ಇದಂತೂ ಅವಿನಾಶಿ ಖುಷಿಯಾಗಿದೆ ಆದರೆ ಈ ಖುಷಿ ಅವರಿಗೆ ಇರುತ್ತದೆ ಯಾರು ಅಚಲ ಅಡೋಲ ಏಕ-ರಸ ಸ್ಥಿತಿಯಲ್ಲಿ ಇರುತ್ತಾರೆ.